Tag: Free Milk

  • ಬಾಪೂಜಿ ನಗರದಲ್ಲಿ ಹೆಸರಿಗೆ ಮಾತ್ರ ಸೀಲ್‍ಡೌನ್-ಉಚಿತ ಹಾಲಿಗಾಗಿ ಗುಂಪು ಸೇರಿದ ಜನ

    ಬಾಪೂಜಿ ನಗರದಲ್ಲಿ ಹೆಸರಿಗೆ ಮಾತ್ರ ಸೀಲ್‍ಡೌನ್-ಉಚಿತ ಹಾಲಿಗಾಗಿ ಗುಂಪು ಸೇರಿದ ಜನ

    ಬೆಂಗಳೂರು: ರಾಜಧಾನಿಯ ಪಾದರಾಯನಪುರ ಮತ್ತು ಬಾಪೂಜಿ ನಗರದಲ್ಲಿ ಸೀಲ್‍ಡೌನ್ ಮಾಡಲಾಗಿದೆ. ಆದ್ರೆ ಈ ಎರಡೂ ಪ್ರದೇಶದಲ್ಲಿ ಹೆಸರಿಗೆ ಮಾತ್ರ ಸೀಲ್ ಆಯ್ತಾ ಪ್ರಶ್ನೆ ಹುಟ್ಟಿಕೊಂಡಿದೆ. ಸೀಲ್‍ಡೌನ್ ಆಗಿದ್ದರೂ ಜನರು ಮಾತ್ರ ಎಂದಿನಂತೆ ಕುಂಟು ನೆಪಗಳನ್ನು ಹೇಳುತ್ತಾ ಬಡವಾಣೆಗಳಲ್ಲಿ ತಿರುಗಾಡುತ್ತಿದ್ದರೆ, ಕೆಲವರು ಉಚಿತ ಹಾಲು ಪಡೆಯಲು ಮುಗಿಬೀಳುತ್ತಿದ್ದಾರೆ.

    ಪಾದರಾಯನಪುರದ ವಾರ್ಡ್ ನಂಬರ್ 134, 135, 136 ಜನರು ಎಂದಿನಂತೆ ಮನೆಯಿಂದ ಹೊರ ಬರುತ್ತಿದ್ದಾರೆ. ಸೀಲ್‍ಡೌನ್ ಆಗಿದ್ರೂ ಜನರು ಮಾತ್ರ ಹೊರಗೆ ಓಡಾಡುವುದನ್ನು ಕಡಿಮೆ ಮಾಡಿಲ್ಲ. ವಾಹನಗಳಲ್ಲಿ ಜನ ಹೊರಗೆ ಬಂದು ಬೆಂಗಳೂರಿನ ಬೇರೆ ಏರಿಯಾಗಳತ್ತ ಹೊರಟ್ಟಿದ್ದಾರೆ. ಇನ್ನು ಖಾಸಗಿ ವಾಹನಗಳು ಮತ್ತು ಆಟೋ ಚಾಲಕರು ಲಾಕ್‍ಡೌನ್ ಲಾಭ ಪಡೆಯಲು ಮುಂದಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ತುಂಬಿಕೊಂಡು ಹೋಗುತ್ತಿದ್ದಾರೆ.

    ಇನ್ನು ಬಾಪೂಜಿ ನಗರದಲ್ಲಿ ಜನರು ಉಚಿತ ಹಾಲು ಪಡೆಯಲು ಬಂದು ಕ್ಯೂ ನಿಂತಿರುವ ದೃಶ್ಯಗಳು ಇಂದು ಬೆಳಗ್ಗೆ ಕಂಡುಬಂದವು. ಹಾಲು ಪಡೆಯಬೇಕೆಂದು ಸಾಮಾಜಿಕ ಅಂತರವನ್ನು ಜನರು ಕಾಯ್ದುಕೊಳ್ಳುತ್ತಿಲ್ಲ. ಬಾಪೂಜಿ ನಗರದ ಬಹುತೇಕರಿಗೆ ಉಚಿತ ಹಾಲು ಸಿಗದ ಹಿನ್ನೆಲೆಯಲ್ಲಿ ಸಾರ್ವಜನಿಕರು ಸ್ಥಳೀಯ ಕಾರ್ಪೋರೇಟರ್ ಅಜ್ಮಲ್ ಬೇಗ್ ವಿರುದ್ಧ ಆಕ್ರೋಶ ಹೊರ ಹಾಕಿದರು.

    ಉಚಿತ ಹಾಲು ಕೊಡದೇ ಪ್ರತಿನಿತ್ಯ ಕಾರ್ಪೋರೇಟರ್ ಮೋಸ ಮಾಡುತ್ತಿದ್ದಾರೆ. ಉಚಿತ ಹಾಲು ಕಾರ್ಪೋರೇಟರ್ ಬೆಂಬಲಿಗರ ಪಾಲಾಗುತ್ತಿದೆ. ನಿನ್ನೆಯೂ ಇದೇ ರೀತಿ ಹಾಲು ನೀಡಲಿಲ್ಲ. ಇವತ್ತು ಇಷ್ಟು ಸಮಯ ಸರತಿಯಲ್ಲಿ ನಿಂತ್ರೂ ಹಾಲು ಸಿಗಲಿಲ್ಲ ಎಂದು ಸಾರ್ವಜನಿಕರು ಕಿಡಿಕಾರಿದರು.

  • ಹಾಲಿಗಾಗಿ ಕಿಲೋ ಮೀಟರ್‌ಗಟ್ಟಲೇ ಕ್ಯೂ – ಮುಗಿಬಿದ್ದ 2 ಸಾವಿರಕ್ಕೂ ಹೆಚ್ಚು ಜನ

    ಹಾಲಿಗಾಗಿ ಕಿಲೋ ಮೀಟರ್‌ಗಟ್ಟಲೇ ಕ್ಯೂ – ಮುಗಿಬಿದ್ದ 2 ಸಾವಿರಕ್ಕೂ ಹೆಚ್ಚು ಜನ

    ಬೆಂಗಳೂರು: ಒಂದು ಕಡೆ ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಆದರೆ ಇತ್ತ ಜನರು ಉಚಿತ ಹಾಲಿಗಾಗಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೇ ಸುಮಾರು 2 ಕಿಲೋ ಮೀಟರ್‌ವರೆಗೂ ಕ್ಯೂ ನಿಂತಿರುವುದನ್ನು ಬೆಂಗಳೂರಿನ ಲಗ್ಗರೆಯಲ್ಲಿ ಕಾಣಬಹುದಾಗಿದೆ.

    ಸರ್ಕಾರದ ವತಿಯಿಂದ ಉಚಿತವಾಗಿ ಹಾಲು ವಿತರಣೆ ಮಾಡಲಾಗುತ್ತಿದೆ. ಆದರೆ ಉಚಿತ ಹಾಲಿಗಾಗಿ ಇಂದು ಮುಂಜಾನೆ 5 ಗಂಟೆಯಿಂದ ಸಾವಿರಾರು ಜನರು ಕಾತು ನಿಂತಿದ್ದಾರೆ. ಆದರೆ ಜನರು ಸಾಮಾಜಿಕ ಅಂತರವನ್ನು ಮರೆತು ಸಾಲುಗಟ್ಟಿ ನಿಂತಿದ್ದು, ಸುಮಾರು 2000 ಜನ ಹಾಲಿಗಾಗಿ ಕ್ಯೂ ನಿಂತಿದ್ದಾರೆ.

    ತಕ್ಷಣ ಪೊಲೀಸ್ ಸ್ಥಳಕ್ಕೆ ಬಂದು ಅವರನ್ನು ಮನೆಗೆ ಕಳುಹಿಸುವ ಪ್ರಯತ್ನ ಮಾಡಿದ್ದಾರೆ. ಅರ್ಧ ಲೀಟರ್ ಹಾಲಿಗಾಗಿ ಕೊರೊನಾ ವೈರಸ್ ಮನೆಗೆ ಕರೆದುಕೊಂಡು ಹೋಗಬೇಡಿ. ಇಲ್ಲಿ ಉಚಿತವಾಗಿ ಹಾಲು ನೀಡುತ್ತಿಲ್ಲ. ಮೊದಲು ಮನೆಗಳಗೆ ಹೋಗಿ, ಯಾಕೆ ಹೀಗೆ ರೋಡಿಗೆ ಬರುತ್ತೀರ ಎಂದು ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಮಾತು ಕೇಳದ ಜನರಿಗೆ ಪೊಲೀಸರು ಲಾಠಿ ಚಾರ್ಚ್ ಮಾಡಿದ್ದಾರೆ.

    ರಾಜಕಾರಣಿಗಳು ಉಚಿತವಾಗಿ ಹಾಲು ಕೊಡುತ್ತಾರೆ ಎಂದು ಜನ ಸೇರುತ್ತಾರೆ. ಜನರನ್ನು ಓಡಿಸುವುದಕ್ಕೆ ಪೊಲೀಸರು ಲಾಠಿ ಚಾರ್ಚ್ ಮಾಡುತ್ತಾರೆ. ಪ್ರಚಾರಕ್ಕಾಗಿ ರಾಜಕೀಯ ನಾಯಕರು ಉಚಿತ ಹಾಲು ನೀಡೋದಾಗಿ ಹೇಳಿಕೊಳ್ಳುತ್ತಾರೆ. ಅಗತ್ಯ ಇರುವವರು ಬಿಟ್ಟು ಉಚಿತವಾಗಿ ಎಂದ ಕೂಡಲೇ ಮನೆ ಮಂದಿಯೆಲ್ಲಾ ಬರುತ್ತಾರೆ. ಒಂದು ಮನೆಯಿಂದ ಒಬ್ಬರು ಬಂದು ಹಾಲು ಪಡೆದರೆ ಇಷ್ಟು ಜನ ಸೇರುತ್ತಿರಲಿಲ್ಲ. ಅತಿಯಾಸೆಗೆ ಮನೆಯವರೆಲ್ಲ ಬಂದು ಕ್ಯೂ ನಿಂತಿದ್ದಾರೆ. ಒಬ್ಬರಿಗೆ ಅರ್ಧ ಲೀಟರ್ ಹಾಲು ನೀಡುತ್ತಾರೆ ಎಂದು ಗಂಡ, ಹೆಂಡತಿ, ಮಕ್ಕಳು ಸಹ ಕ್ಯೂನಲ್ಲಿ ನಿಂತಿದ್ದಾರೆ. ಅಲ್ಲದೇ ಸಾಮಾಜಿಕ ಅಂತರವಿಲ್ಲ, ಮಾಸ್ಕ್ ಇಲ್ಲ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.