Tag: Free Bus Travel

  • ಬರ್ತ್ ಸರ್ಟಿಫಿಕೇಟ್ ಇಲ್ಲದೇ ಸಿಗದ ಆಧಾರ್ ಕಾರ್ಡ್ – ನಿತ್ಯ 30 ರೂ. ಬಸ್ ಚಾರ್ಜ್ ಕೊಟ್ಟು ಸೋಲಿಗ ಬಾಲಕಿ ಶಾಲೆಗೆ ಓಡಾಟ

    ಬರ್ತ್ ಸರ್ಟಿಫಿಕೇಟ್ ಇಲ್ಲದೇ ಸಿಗದ ಆಧಾರ್ ಕಾರ್ಡ್ – ನಿತ್ಯ 30 ರೂ. ಬಸ್ ಚಾರ್ಜ್ ಕೊಟ್ಟು ಸೋಲಿಗ ಬಾಲಕಿ ಶಾಲೆಗೆ ಓಡಾಟ

    ಚಾಮರಾಜನಗರ: ಬರ್ತ್‌ ಸರ್ಟಿಫಿಕೇಟ್‌ ಇಲ್ಲದೇ ಆಧಾರ್‌ ಕಾರ್ಡ್‌ ಸಿಗದ ಕಾರಣ, ಶಕ್ತಿ ಯೋಜನೆಯಡಿ ಬಸ್‌ನಲ್ಲಿ ಉಚಿತ ಪ್ರಯಾಣದಿಂದ ಸೋಲಿಗ ಬಾಲಕಿಯೊಬ್ಬಳು ವಂಚಿತಳಾಗಿದ್ದಾಳೆ. ಆಕೆ ನಿತ್ಯ 30 ರೂ. ಬಸ್‌ ಚಾರ್ಜ್‌ ಕೊಟ್ಟು ಓಡಾಡುವಂತಹ ದುಸ್ಥಿತಿ ಎದುರಾಗಿದೆ.

    ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಕೌಳೇಹಳ್ಳ ಡ್ಯಾಂ ನಿವಾಸಿ ಎಸ್.ಚೈತ್ರಾ ಎಂಬಾಕೆಯ ದುಸ್ಥಿತಿಯಾಗಿದೆ. ಬಾಲಕಿ ಚೈತ್ರಾ ಲೊಕ್ಕನಹಳ್ಳಿಯ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಏಳನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ. ನಿತ್ಯವೂ ಕೂಡ ಶಾಲೆಗೆ ಕೌಳೇಹಳ್ಳದಿಂದ ಲೊಕ್ಕನಹಳ್ಳಿಗೆ ಸಂಚರಿಸಬೇಕಿದೆ. ಇದಕ್ಕಾಗಿ ನಿತ್ಯ 30 ರೂ. ಖರ್ಚು ಮಾಡುವ ಪರಿಸ್ಥಿತಿ ಇದೆ. ಪುಟ್ಟ ಹೆಣ್ಣು ಮಗುವಿನಿಂದ ಹಿಡಿದು ಎಲ್ಲಾ ವಯಸ್ಸಿನ ಮಹಿಳೆಯರಿಗೂ ಶಕ್ತಿ ಯೋಜನೆಯಡಿ ಕೆ‌ಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಉಚಿತ ಪ್ರಯಾಣ ಸೌಲಭ್ಯ ಇದೆ. ಆದರೆ, ಈ ಸೋಲಿಗ ಬಾಲಕಿಗೆ ಮಾತ್ರ ಉಚಿತ ಪ್ರಯಾಣದ ಭಾಗ್ಯವಿಲ್ಲ. ಪ್ರತಿ ದಿನ 30 ರೂಪಾಯಿ ಬಸ್ ಚಾರ್ಜ್ ತೆತ್ತು ಶಾಲೆಗೆ ಹೋಗಿ ಬರುವ ಪರಿಸ್ಥಿತಿ ಇದೆ. ಮೊದಲೇ ಬಡ ವಿದ್ಯಾರ್ಥಿ, ಉಚಿತ ಸೌಲಭ್ಯದಿಂದ ವಂಚಿತವಾಗಿದ್ದೇನೆ ಅಂತಾ ಅಳಲು ತೋಡಿಕೊಳ್ಳುತ್ತಿದ್ದಾರೆ.

    ಜಾತಿ ಹಾಗೂ ಆದಾಯ ಪ್ರಮಾಣ ಪತ್ರ, ಪಡಿತರ ಚೀಟಿ, ಬ್ಯಾಂಕ್ ಖಾತೆ, ಬಸ್ ಪ್ರಯಾಣ ಎಲ್ಲದಕ್ಕೂ ಆಧಾರ್ ಕಾರ್ಡ್ ಬೇಕೇಬೇಕು. ಆದರೆ, ಆಧಾರ್ ಕಾರ್ಡ್ ಇಲ್ಲದೆ ಎಲ್ಲ ಸೌಲಭ್ಯಗಳಿಂದ ವಂಚಿತಳಾಗಿದ್ದಾಳೆ. ಮನೆಯಲ್ಲೇ ಜನಿಸಿದ್ದರಿಂದ ಬರ್ತ್ ಸರ್ಟಿಫಿಕೇಟ್ ಸಿಕ್ಕಿಲ್ಲ. ಬರ್ತ್ ಸರ್ಟಿಫಿಕೇಟ್ ಇಲ್ಲದೆ ಆಧಾರ್ ಕಾರ್ಡ್ ಕೊಡ್ತಿಲ್ಲ. ತಂದೆ ಇಲ್ಲ, ತಾಯಿ ಮಹದೇವಮ್ಮ ಕೂಲಿ ಕೆಲಸ ಮಾಡ್ತಿದ್ದಾಳೆ. ನಿತ್ಯ ಕೂಲಿ ಮಾಡಿ ಮಗಳಿಗೆ ಬಸ್ ಚಾರ್ಜ್ ಕೊಟ್ಟು ಕಳಿಸಬೇಕಾಗಿದೆ. ಕೂಡಲೇ ಆಧಾರ್ ಕಾರ್ಡ್ ಸೌಲಭ್ಯ ಕಲ್ಪಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.

  • ರಾಜ್ಯದಲ್ಲಿ ಗಂಡಸರಿಗೂ ಫ್ರೀ ಬಸ್‌ ಪ್ರಯಾಣ ಭಾಗ್ಯ? – ಸುಳಿವು ಕೊಟ್ಟ ಡಿಕೆಶಿ

    ರಾಜ್ಯದಲ್ಲಿ ಗಂಡಸರಿಗೂ ಫ್ರೀ ಬಸ್‌ ಪ್ರಯಾಣ ಭಾಗ್ಯ? – ಸುಳಿವು ಕೊಟ್ಟ ಡಿಕೆಶಿ

    – ಡಿ.ಕೆ.ಶಿವಕುಮಾರ್‌ ಹೇಳಿಕೆಗೆ ಸಾರಿಗೆ ಸಚಿವರ ಪ್ರತಿಕ್ರಿಯೆ ಏನು?

    ಬೆಂಗಳೂರು/ಹುಬ್ಬಳ್ಳಿ: ಶಕ್ತಿ ಯೋಜನೆಯಡಿ (Shakti Scheme) ವಯೋಮಿತಿಗೊಳಪಡಿಸಿ ಗಂಡಸರಿಗೂ ಉಚಿತ ಬಸ್‌ ಪ್ರಯಾಣಕ್ಕೆ ಅವಕಾಶ ಕಲ್ಪಿಸುವ ಬಗ್ಗೆ ಸರ್ಕಾರದಲ್ಲಿ ಚರ್ಚಿಸಿ ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ (D.K.Shivakumar) ತಿಳಿಸಿದ್ದಾರೆ. ಆ ಮೂಲಕ ಗಂಡಸರಿಗೂ ಫ್ರೀ ಬಸ್‌ ಪ್ರಯಾಣ ಸೌಲಭ್ಯ ಸಿಗುವ ಸಾಧ್ಯತೆ ಇದೆ.

    ದೇಶದ ಪ್ರಥಮ ಪ್ರಧಾನಿ ಜವಾಹರಲಾಲ್‌ ನೆಹರೂ ಅವರ 135ನೇ ಜಯಂತಿ ಹಾಗೂ ಮಕ್ಕಳ ದಿನಾಚರಣೆ ಅಂಗವಾಗಿ ವಿಧಾನಸೌಧದಲ್ಲಿ ಗುರುವಾರ ನಡೆದ ಸಂವಾದದಲ್ಲಿ ಡಿಕೆಶಿ ಈ ಹೇಳಿಕೆ ನೀಡಿದ್ದರು. ಇದನ್ನೂ ಓದಿ: MUDA Scam; ಇ.ಡಿ ವಿಚಾರಣೆ ಬೆನ್ನಲ್ಲೇ ಪಾಲಿಕೆ ನೌಕರ ವಜಾ

    ಶಕ್ತಿ ಯೋಜನೆ ಬಗ್ಗೆ ವಿದ್ಯಾರ್ಥಿಗಳಿಂದ ಕೇಳಿಬಂದ ಪ್ರಶ್ನೆಗೆ ಉತ್ತರಿಸಿದ ಡಿಕೆಶಿ, ಶಕ್ತಿ ಯೋಜನೆಯಡಿ ಒಂದು ವಯೋಮಾನದ ವರೆಗಿನ ಗಂಡುಮಕ್ಕಳಿಗೂ ಉಚಿತ ಬಸ್‌ ಪ್ರಯಾಣಕ್ಕೆ ಅವಕಾಶ ಕಲ್ಪಿಸುವ ಬಗ್ಗೆ ಸರ್ಕಾರದಲ್ಲಿ ಚರ್ಚಿಸಿ ಯೋಚಿಸಿ ಕ್ರಮ ವಹಿಸಲಾಗುವುದು ಎಂದು ತಿಳಿಸಿದ್ದರು.

    ಡಿಕೆಶಿ ಹೇಳಿಕೆಗೆ ಹುಬ್ಬಳ್ಳಿಯಲ್ಲಿ ಪ್ರತಿಕ್ರಿಯೆ ನೀಡಿರುವ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ಡಿಸಿಎಂ ಶಿವಕುಮಾರ್ ಮಕ್ಕಳ ಜೊತೆಗೆ ಮಾತನಾಡಿದ್ದಾರೆ. ಆ ಬಗ್ಗೆ ನನಗೆ ಏನು ಮಾಹಿತಿ ಇಲ್ಲ. ಅವರ ಜೊತೆಗೆ ಮಾತನಾಡಿ ಹೇಳುವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಬೀದರ್ | ಬರೋಬ್ಬರಿ 13,295 ಎಕರೆ ಆಸ್ತಿ ವಕ್ಫ್ ಪಾಲು!

  • ಅಜ್ಜಿ, ಮೊಮ್ಮಗಳಿಗೆ ಫ್ರೀ ಟಿಕೆಟ್‌ – 4 ಲವ್‌ ಬರ್ಡ್ಸ್‌ಗಳಿಗೆ 444 ರೂ. ಟಿಕೆಟ್‌!

    ಅಜ್ಜಿ, ಮೊಮ್ಮಗಳಿಗೆ ಫ್ರೀ ಟಿಕೆಟ್‌ – 4 ಲವ್‌ ಬರ್ಡ್ಸ್‌ಗಳಿಗೆ 444 ರೂ. ಟಿಕೆಟ್‌!

    ಬೆಂಗಳೂರು: ಬೆಂಗಳೂರಿನಿಂದ ಮೈಸೂರಿಗೆ ಹೊರಟಿದ್ದ ಅಜ್ಜಿ ಮತ್ತು ಮೊಮ್ಮಗಳಿಗೆ ‘ಶಕ್ತಿ ಯೋಜನೆ’ಯಡಿ (Shakti Scheme) ಫ್ರೀ ಬಸ್‌ ಪ್ರಯಾಣ ಟಿಕೆಟ್‌ ಸಿಕ್ಕಿತು. ಆದರೆ ಅವರು ಜೊತೆಯಲ್ಲಿ ತಂದಿದ್ದ ಲವ್‌ ಬರ್ಡ್ಸ್‌ಗಳಿಗೆ ಪ್ರಯಾಣ ಶುಲ್ಕ ಬರೋಬ್ಬರಿ 444 ರೂ. ಬಿದ್ದಿದೆ.

    ಅಜ್ಜಿ ಮತ್ತು ಮೊಮ್ಮಗಳು ಮೈಸೂರು ಕಡೆಗೆ ಬಸ್‌ನಲ್ಲಿ ಉಚಿತ ಪ್ರಯಾಣ ಬೆಳೆಸಿದ್ದರು. ತಮ್ಮ ಜೊತೆ ಪಂಜರದಲ್ಲಿ ಲವ್‌ ಬರ್ಡ್ಸ್‌ಗಳನ್ನು ತೆಗೆದುಕೊಂಡು ಹೋಗುತ್ತಿದ್ದರು. ಅಜ್ಜಿ-ಮೊಮ್ಮಗಳಿಗೆ ಕಂಡಕ್ಟರ್‌ ಫ್ರೀ ಟಿಕೆಟ್‌ ಕೊಟ್ಟರು. ಆದರೆ ಲವ್‌ ಬರ್ಡ್ಸ್‌ಗಳಿಗೆ ಪ್ರಯಾಣ ಶುಲ್ಕ ಹಾಕಿದ್ದಾರೆ. ಇದನ್ನೂ ಓದಿ: ಸುಮಲತಾ ಅಂಬರೀಶ್‌ ಜೊತೆ ಮಾತುಕತೆಗೆ ನಾವು ಸಿದ್ಧ – ನಿಖಿಲ್

    ಮೊಮ್ಮಗಳ ಜೊತೆ ನಾಲ್ಕು ಲವ್ ಬರ್ಡ್ಸ್ ಹಕ್ಕಿಗಳನ್ನು ಅಜ್ಜಿಯೊಬ್ಬರು ತೆಗೆದುಕೊಂಡು ಮೈಸೂರಿಗೆ ಹೊರಟಿದ್ದರು. ಕೆಎಸ್‌ಆರ್‌ಟಿಸಿ ಕಂಡಕ್ಟರ್‌, ಅಜ್ಜಿ-ಮೊಮ್ಮಗಳಿಗೆ ಫ್ರೀ ಟಿಕೆಟ್‌ ಕೊಟ್ಟಿದ್ದಾರೆ. ಆದರೆ ಲವ್‌ ಬರ್ಡ್ಸ್‌ಗಳಿಗೆ ಟಿಕೆಟ್‌ ನೀಡಿದ್ದಾರೆ. ನಾಲ್ಕು ಮಕ್ಕಳು ಎಂದು ಟಿಕೆಟ್‌ನಲ್ಲಿ ನಮೂದು ಮಾಡಿದ್ದಾರೆ.

    ಒಂದು ಬರ್ಡ್‌ ಪ್ರಯಾಣ ವೆಚ್ಚವಾಗಿ 111 ರೂ. ಬಿದ್ದಿದೆ. ಒಟ್ಟು ನಾಲ್ಕು ಹಕ್ಕಿಗಳಿಗೆ 444 ರೂಪಾಯಿ ಟಿಕೆಟ್ ನೀಡಲಾಗಿದೆ. ಇಂದು ಬೆಳಗ್ಗೆ ಸ್ಯಾಟಲೈಟ್ ಬಸ್ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಇದನ್ನೂ ಓದಿ: ಮಂತ್ರಿಯೇ ಆಗಲಿಲ್ಲ ರಾಜ – ಒಡೆಯರ್ ಕನಸು ಅವರ ಜೊತೆಯೆ ಮಣ್ಣಾಯಿತು

  • ಬೆಂಗ್ಳೂರು ಬಂದ್‌ಗೆ ಕರೆ; ಸರ್ಕಾರಿ ಶಾಲಾ-ಕಾಲೇಜುಗಳಿಗೆ ರಜೆ ಇಲ್ಲ: ಶಿಕ್ಷಣ ಇಲಾಖೆ

    ಬೆಂಗ್ಳೂರು ಬಂದ್‌ಗೆ ಕರೆ; ಸರ್ಕಾರಿ ಶಾಲಾ-ಕಾಲೇಜುಗಳಿಗೆ ರಜೆ ಇಲ್ಲ: ಶಿಕ್ಷಣ ಇಲಾಖೆ

    ಬೆಂಗಳೂರು: ಖಾಸಗಿ ಸಾರಿಗೆ ಒಕ್ಕೂಟ ಸೋಮವಾರ (ಸೆ.11) ಬೆಂಗಳೂರು ಬಂದ್‌ಗೆ (Bengaluru Bandh) ಕರೆ ನೀಡಿವೆ. ಆದರೆ ಸರ್ಕಾರಿ ಶಾಲಾ-ಕಾಲೇಜುಗಳಿಗೆ ರಜೆ ಇಲ್ಲ ಎಂದು ಶಿಕ್ಷಣ ಇಲಾಖೆ ತಿಳಿಸಿದೆ.

    ಪರಿಸ್ಥಿತಿಗೆ ಅನುಗುಣವಾಗಿ ರಜೆ ಘೋಷಣೆ ಮಾಡುವ ಅಧಿಕಾರವನ್ನು ಡಿಸಿಗಳಿಗೆ ಸರ್ಕಾರ ನೀಡಿದೆ. ವಿದ್ಯಾರ್ಥಿಗಳಿಗೆ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲು ಡಿಸಿಗಳಿಗೆ ಸೂಚನೆ ನೀಡಿದೆ. ಇದನ್ನೂ ಓದಿ: ನಾಳೆ ಬೆಂಗಳೂರು ಬಂದ್; 500 ಹೆಚ್ಚುವರಿ ಬಸ್ ರಸ್ತೆಗಿಳಿಸಲು ಬಿಎಂಟಿಸಿ ನಿರ್ಧಾರ

    ನಾಳೆ ಸಾರಿಗೆ ಒಕ್ಕೂಟಗಳು ಕರೆ ನೀಡಿರುವ ಬೆಂಗಳೂರು ಬಂದ್‌ಗೆ ಖಾಸಗಿ ಶಾಲೆಗಳು ನೈತಿಕ ಬೆಂಬಲ ವ್ಯಕ್ತಪಡಿಸಿವೆ. ಬಂದ್‌ಗೆ ಬೆಂಬಲ ಸೂಚಿಸಿ ಕೆಲವು ಶಾಲೆಗಳು ರಜೆ ಘೋಷಣೆ ಮಾಡಿವೆ. ಈಗಾಗಲೇ ಹೆಬ್ಬಾಳದ ವಿದ್ಯಾನಿಕೇತನ ಶಾಲೆ, ಆರ್ಕಿಡ್ ಆಡಳಿತ ಮಂಡಳಿಯವರು ರಜೆ ಘೋಷಿಸಿದ್ದಾರೆ.

    ಆದರೆ ಖಾಸಗಿ ಶಾಲೆಗಳಿಗೆ ರಜೆ ಘೋಷಣೆ ಇಲ್ಲ. ಕ್ಯಾಮ್ಸ್, ಕುಸ್ಮಾ ಸೇರಿ ಹಲವು ಸಂಘಟನೆಗಳಿಂದ ರಜೆ ಘೋಷಣೆ ಮಾಡಿಲ್ಲ. ರಜೆ ಕೊಡುವ ಬಗ್ಗೆ ಆಯಾ ಶಾಲಾ ಆಡಳಿತ ಮಂಡಳಿಗಳು ನಿರ್ಧಾರ ಮಾಡಬಹುದು. ಆದರೆ ಯಾವುದೇ ಸಂಘಟನೆಯಿಂದ ಅಧಿಕೃತ ರಜೆ ಕೊಡೋದಿಲ್ಲ ಎಂದು ಕ್ಯಾಮ್ಸ್, ಕುಸ್ಮಾ ಸಂಘಟನೆಗಳು ಮಾಹಿತಿ ನೀಡಿವೆ. ಇದನ್ನೂ ಓದಿ: ಹುಡ್ಗಿ ಚೆನ್ನಾಗಿದ್ದರೆ ಎಲ್ಲರೂ ಇಷ್ಟಪಡ್ತಾರೆ, ಹಾಗೇ ಬಿಜೆಪಿ ಕೂಡ ಬರ್ತಾ ಇದೆ: ಸಿ.ಎಂ ಇಬ್ರಾಹಿಂ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಶಕ್ತಿ ಯೋಜನೆಯಿಂದ ಆಟೋದವರಿಗೆ ಸಮಸ್ಯೆಯಾದ್ರೆ ಸರ್ಕಾರ ಪರಿಹಾರ ನೀಡಲಿದೆ – ರಾಮಲಿಂಗಾರೆಡ್ಡಿ

    ಶಕ್ತಿ ಯೋಜನೆಯಿಂದ ಆಟೋದವರಿಗೆ ಸಮಸ್ಯೆಯಾದ್ರೆ ಸರ್ಕಾರ ಪರಿಹಾರ ನೀಡಲಿದೆ – ರಾಮಲಿಂಗಾರೆಡ್ಡಿ

    ಬೆಂಗಳೂರು: ಶಕ್ತಿ ಯೋಜನೆಯಿಂದ (Shakti Scheme) ಆಟೋ ಚಾಲಕರಿಗೆ (Auto Drivers) ಸಮಸ್ಯೆಯಾದರೆ, ಸರ್ಕಾರ ಅವರ ನೆರವಿಗೆ ಧಾವಿಸೋ ಬಗ್ಗೆ ಸರ್ಕಾರ ನಿರ್ಧಾರ ಮಾಡಲಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ (Ramalinga Reddy) ತಿಳಿಸಿದರು.

    ವಿಧಾನ ಪರಿಷತ್ ಪ್ರಶ್ನೋತ್ತರ ಅವಧಿಯಲ್ಲಿ ಜೆಡಿಎಸ್‌ನ ಭೋಜೇಗೌಡ ಪ್ರಶ್ನೆ ಕೇಳಿದರು. ಶಕ್ತಿ ಯೋಜನೆ ಪರಿಣಾಮ ಆಟೋ ರಿಕ್ಷಾಗಳ ಮೇಲೆ ಬಿದ್ದಿದೆ. ಉಚಿತ ಬಸ್ ಪ್ರಯಾಣದಿಂದ ಆಟೋದವರು ಜೀವನ ಮಾಡಲು ಆಗುತ್ತಿಲ್ಲ. ರಾಜ್ಯದಲ್ಲಿ ಸುಮಾರು 5 ಲಕ್ಷ ಆಟೋ ಚಾಲಕರು ಇದ್ದಾರೆ. ಅವರಿಗೆ ಜೀವನ ಮಾಡಲು ಆಗುತ್ತಿಲ್ಲ. ಇವರ ನೆರವಿಗೆ ಸರ್ಕಾರ ಬರಬೇಕು ಎಂದು ಒತ್ತಾಯಿಸಿದರು. ಇದನ್ನೂ ಓದಿ: ಲೋಕಸಭೆಯಲ್ಲಿ ಸ್ಪರ್ಧಿಸಲು ಪಕ್ಷ ಸೂಚನೆ ನೀಡಿದ್ರೆ ಆದೇಶ ಪಾಲಿಸಲು ಸಿದ್ಧ: ಯತೀಂದ್ರ ಸಿದ್ದರಾಮಯ್ಯ

    ಇದಕ್ಕೆ ಉತ್ತರ ನೀಡಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಜೂನ್ 11ಕ್ಕೆ ಶಕ್ತಿ ಯೋಜನೆ ಪ್ರಾರಂಭ ಆಯ್ತು. ಉತ್ತಮವಾಗಿ ಯೋಜನೆ ನಡೆಯುತ್ತಿದೆ. ಯೋಜನೆ ಜಾರಿ ಆಗಿ ಒಂದು ತಿಂಗಳು ಆಗಲಿ. ಆಟೋದವರಿಗೆ ಏನ್ ಸಮಸ್ಯೆ ಆಗಿದೆ ಅಂತ ನೋಡೋಣ ಎಂದು ಹೇಳಿದರು.

    ಈವರೆಗೂ ಯಾವ ಆಟೋ ಚಾಲಕರ ಸಂಘದವರು ನನ್ನ ಬಳಿ ಬಂದು ಕಷ್ಟ ಅಂತ ಹೇಳಿಲ್ಲ. ಯಾವುದೇ ಆಟೋ ಚಾಲಕರು ನನಗೆ ಮನವಿ ಮಾಡಿಲ್ಲ. ಒಂದು ತಿಂಗಳು ಆಗಲಿ, ಬಳಿಕ ಪರಿಶೀಲನೆ ಮಾಡಿ ಆಟೋದವರಿಗೆ ಸಮಸ್ಯೆಯಾದರೆ ಸರ್ಕಾರ ಪರಿಹಾರ ಕೊಡಲಿದೆ ಎಂದು ಭರವಸೆ ನೀಡಿದರು. ಇದನ್ನೂ ಓದಿ: 40% ಕಮಿಷನ್ ಸೇರಿ ಎಲ್ಲದರ ತನಿಖೆಯಾಗ್ಲಿ- ಸಿದ್ದರಾಮಯ್ಯಗೆ ಬೊಮ್ಮಾಯಿ ಸವಾಲ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • 2ನೇ ವೀಕೆಂಡ್‌ನಲ್ಲೂ ಮಹಿಳೆಯರ ‘ಶಕ್ತಿ’ ಪ್ರದರ್ಶನ – ಯಾವ ಬಸ್‌ನಲ್ಲಿ ಎಷ್ಟು ಮಂದಿ ಪ್ರಯಾಣ?

    2ನೇ ವೀಕೆಂಡ್‌ನಲ್ಲೂ ಮಹಿಳೆಯರ ‘ಶಕ್ತಿ’ ಪ್ರದರ್ಶನ – ಯಾವ ಬಸ್‌ನಲ್ಲಿ ಎಷ್ಟು ಮಂದಿ ಪ್ರಯಾಣ?

    ಬೆಂಗಳೂರು: ಕಾಂಗ್ರೆಸ್‌ (Congress) ಸರ್ಕಾರದ ಶಕ್ತಿ ಯೋಜನೆ (Shakti Scheme) ಜಾರಿಯಾದ ಎರಡನೇ ವಿಕೇಂಡ್‌ನಲ್ಲೂ ಮಹಿಳೆಯರ ಪ್ರಯಾಣ ಮತ್ತಷ್ಟು ಹೆಚ್ಚಾಗಿದೆ. ವೀಕೆಂಡ್‌ ಸಂದರ್ಭದಲ್ಲಿ ಮಹಿಳೆಯರು ಧಾರ್ಮಿಕ ಹಾಗೂ ಪ್ರವಾಸಿ ತಾಣಗಳಿಗೆ ಹೆಚ್ಚೆಚ್ಚು ಪ್ರಯಾಣ ಮಾಡುತ್ತಿದ್ದಾರೆ.

    ಶನಿವಾರ ಕೂಡ 58,14,524 ಮಹಿಳೆಯರು ಸರ್ಕಾರಿ ಬಸ್‌ಗಳಲ್ಲಿ ಪ್ರಯಾಣ ಮಾಡಿದ್ದರು. ಕಳೆದ ವಾರಕ್ಕೆ ಹೋಲಿಕೆ ಮಾಡಿದರೆ, ಈ ವಾರ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗಿದೆ. ಕಳೆದ ಶನಿವಾರ 54,30,150 ಮಹಿಳೆಯರು ಪ್ರಯಾಣ ಮಾಡಿದ್ದರು. ಇದನ್ನೂ ಓದಿ: ವೋಲ್ವೋ ಬಸ್‌ಗಳಿಗೆ ‘ಶಕ್ತಿ’ ತುಂಬಿದ ಪುರುಷರು

    ನಿನ್ನೆ ಮಹಿಳಾ ಪ್ರಯಾಣಿಕರ ಸಂಖ್ಯೆ 58 ಲಕ್ಷ ದಾಟಿದೆ. ಯಾವ ಬಸ್‌ಗಳಲ್ಲಿ ಎಷ್ಟು ಮಹಿಳೆಯರು ಪ್ರಯಾಣ ಮಾಡಿದ್ದಾರೆ ಎಂಬ ಬಗ್ಗೆ ವಿವರ ಇಲ್ಲಿದೆ.

    KSRTC ಬಸ್‌ಗಳಲ್ಲಿ ಒಟ್ಟು 17,29,314 ಮಹಿಳೆಯರು ಪ್ರಯಾಣ ಮಾಡಿದ್ದಾರೆ. ಪ್ರಯಾಣಿಕರ ಟಿಕೆಟ್‌ ಮೌಲ್ಯ 4,92,92,066 ರೂ. ಆಗಿದೆ. ಹಾಗೆಯೇ BMTC ಬಸ್‌ಗಳಲ್ಲಿ 18,95,144 ಮಹಿಳೆಯರು ಪ್ರಯಾಣಿಸಿದ್ದಾರೆ. ಇವರ ಪ್ರಯಾಣದ ಟಿಕೆಟ್‌ ಮೌಲ್ಯ 2,41,94,354 ರೂ. ಆಗಿದೆ. ಇದನ್ನೂ ಓದಿ: 2ನೇ ವೀಕೆಂಡ್ – ಮೆಜೆಸ್ಟಿಕ್‌, ಸ್ಯಾಟಲೈಟ್ ಬಸ್ ನಿಲ್ದಾಣ ಖಾಲಿ, ಖಾಲಿ

    NWRTC ಬಸ್‌ಗಳಲ್ಲಿ 14,01,910 ಮಹಿಳೆಯರು ಪ್ರಯಾಣ ಮಾಡಿದ್ದಾರೆ. ಈ ಪ್ರಯಾಣಿಕರ ಟಿಕೆಟ್‌ ಮೌಲ್ಯ 3,50,40,233 ರೂ. ಆಗಿದೆ. ಅಂತೆಯೇ KKRTC ಬಸ್‌ಗಳಲ್ಲಿ ಒಟ್ಟು 7,88,156 ಮಹಿಳೆಯರು ಪ್ರಯಾಣ ಮಾಡಿದ್ದು, ಟಿಕೆಟ್‌ ಮೌಲ್ಯ 2,55,94,985 ಆಗಿದೆ.

    ಶಕ್ತಿ ಯೋಜನೆ ಜಾರಿಯಾದಾಗಿನಿಂದ ಅಂದರೆ, ಜೂನ್ 11 ರಿಂದ ಜೂನ್ 24 ರವರೆಗೆ ನಾಲ್ಕು ನಿಗಮದ ಬಸ್‌ಗಳಲ್ಲಿ ಓಡಾಟ ನಡೆಸಿದ ಮಹಿಳೆಯರ ಸಂಖ್ಯೆ 7,15,58,775 ಮಹಿಳೆಯರು ಪ್ರಯಾಣ ಬೆಳೆಸಿದ್ದಾರೆ. ಈ ಮಹಿಳಾ ಪ್ರಯಾಣಿಕರ ಟಿಕೆಟ್‌ ಮೌಲ್ಯ 166,09,27,526 ರೂ. ತಲುಪಿದೆ. ಇದನ್ನೂ ಓದಿ: ಗೃಹಲಕ್ಷ್ಮಿಯನ್ನ ನಾನೇ ಹೋಲ್ಡ್ ಮಾಡಿಸಿದ್ದೇನೆ – ಡಿಸಿಎಂ ಡಿಕೆಶಿ

  • ಭರ್ಜರಿ ‘ಶಕ್ತಿ’ ಪ್ರದರ್ಶನ – 126 ಕೋಟಿ ರೂ. ದಾಟಿತು ಟಿಕೆಟ್ ಮೌಲ್ಯ

    ಭರ್ಜರಿ ‘ಶಕ್ತಿ’ ಪ್ರದರ್ಶನ – 126 ಕೋಟಿ ರೂ. ದಾಟಿತು ಟಿಕೆಟ್ ಮೌಲ್ಯ

    ಬೆಂಗಳೂರು: ಕಾಂಗ್ರೆಸ್ (Congress) ಸರ್ಕಾರ ನೀಡಿರುವ ಐದು ಭರವಸೆಗಳಲ್ಲಿ ಶಕ್ತಿ ಯೋಜನೆ (Shakti Scheme) ಜಾರಿಗೆ ಬಂದಿದ್ದು, ಸರ್ಕಾರಿ ಬಸ್‌ಗಳಲ್ಲಿ ಮಹಿಳಾ (Women) ಪ್ರಯಾಣಿಕರ ಸಂಖ್ಯೆ ದಾಖಲೆ ಬರೆದಿದೆ.

    ಚುನಾವಣೆಗೂ ಮುನ್ನ ಕಾಂಗ್ರೆಸ್ ಪಕ್ಷ ಐದು ಗ್ಯಾರಂಟಿಗಳನ್ನು ಜಾರಿ ಮಾಡುವುದಾಗಿ ಘೋಷಿಸಿತ್ತು. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಮಹಿಳಾ ಮಣಿಗಳಿಗಾಗಿ ಉಚಿತ ಬಸ್ ಪ್ರಯಾಣವನ್ನು ಜಾರಿ ಮಾಡಿದ್ದು, ರಾಜ್ಯದ ಎಲ್ಲಾ ಮಹಿಳೆಯರು ನಾ ಮುಂದು ತಾ ಮುಂದು ಎಂದು ಸರ್ಕಾರಿ ಬಸ್ಸಿನತ್ತ ಮುನ್ನುಗುತ್ತಿದ್ದಾರೆ. ಮಹಿಳೆಯರು ಉಚಿತವಾಗಿ ಸರ್ಕಾರಿ ಬಸ್ಸಿನಲ್ಲಿ ಪ್ರಯಾಣ ಬೆಳೆಸುತ್ತಿರುವ ಹಿನ್ನೆಲೆ ಸರ್ಕಾರಿ ಬಸ್‌ನಲ್ಲಿ ಮಹಿಳಾ ಪ್ರಯಾಣಿಕರ ಟಿಕೆಟ್‌ ಮೌಲ್ಯ  100 ಕೋಟಿ ದಾಟಿತು. ಇದನ್ನೂ ಓದಿ: ನಾವು ದರ ಏರಿಸುತ್ತೇವೆ – ರಾಜ್ಯ ಸರ್ಕಾರಕ್ಕೆ ಹೋಟೆಲ್‌ ಮಾಲೀಕರ ಸಂಘ ಎಚ್ಚರಿಕೆ

    ಶಕ್ತಿ ಯೋಜನೆಯಡಿಯಲ್ಲಿ 10 ದಿನಕ್ಕೆ 5 ಕೋಟಿಗೂ ಅಧಿಕ ಮಹಿಳೆಯರು ಸರ್ಕಾರಿ ಬಸ್ಸಿನಲ್ಲಿ ಉಚಿತ ಪ್ರಯಾಣ ಮಾಡುತ್ತಿದ್ದು, ಮಹಿಳಾ ಪ್ರಯಾಣಿಕರ ಟಿಕೆಟ್ ಮೌಲ್ಯ ಒಟ್ಟು 126 ಕೋಟಿ ರೂ. ದಾಟಿದೆ. ಅದರಲ್ಲೂ ಬಿಎಂಟಿಸಿ (BMTC) ಬಸ್‌ನಲ್ಲಿ ಅತಿ ಹೆಚ್ಚು ಮಹಿಳೆಯರು ಪ್ರಯಾಣಿಸುತ್ತಿದ್ದು, ಬಿಎಂಟಿಸಿ ಮತ್ತು ಕೆಎಸ್‌ಆರ್‌ಟಿಸಿ (KSRTC) ಬಸ್‌ಗಳಲ್ಲಿ ತಲಾ ಒಂದೂವರೆ ಕೋಟಿ ಮಹಿಳೆಯರು ಉಚಿತವಾಗಿ ಪ್ರಯಾಣಿಸುತ್ತಿದ್ದಾರೆ. ಇದನ್ನೂ ಓದಿ: 10 ಕೆಜಿ ಅಕ್ಕಿಗೆ ದೇವರ ಮೇಲೆ ಭಾರ ಹಾಕಿದ ಮುನಿಯಪ್ಪ

    ಕಳೆದ 10 ದಿನದಲ್ಲಿ ಯಾವ ನಿಗಮದಿಂದ ಎಷ್ಟು ಮಹಿಳೆಯರ ಉಚಿತ ಸಂಚಾರ?
    ಕೆಎಸ್‌ಆರ್‌ಟಿಸಿ – 1,57,48,205
    ಬಿಎಂಟಿಸಿ – 1,80,81,216
    ವಾಕರಸಾ – 1,30,97,057
    ಕಕರಸಾ – 70,80,646

  • ಬಸ್ ಸೀಟಿಗಾಗಿ ಕೈಕೈ ಮಿಲಾಯಿಸಿದ ಮೈಸೂರು ಮಹಿಳೆಯರು – ನಾರಿ ʻಶಕ್ತಿʼ ಪ್ರದರ್ಶನ

    ಬಸ್ ಸೀಟಿಗಾಗಿ ಕೈಕೈ ಮಿಲಾಯಿಸಿದ ಮೈಸೂರು ಮಹಿಳೆಯರು – ನಾರಿ ʻಶಕ್ತಿʼ ಪ್ರದರ್ಶನ

    ಮೈಸೂರು: ಸರ್ಕಾರದ ಪ್ರಮುಖ ಗ್ಯಾರಂಟಿಯಾದ ಶಕ್ತಿ ಯೋಜನೆ ಜಾರಿಯಾದ ದಿನದಿಂದಲೇ ಮಹಿಳೆಯರು ನಾ ಮುಂದು ತಾ ಮುಂದು ಅಂತಾ ಬಸ್ ಗಳಲ್ಲಿ ನುಗ್ಗುತ್ತಿದ್ದಾರೆ. ಬಸ್ ನ ಕಿಟಿಕಿಗಳು,ಬಾಗಿಲುಗಳು ಸಹ ಪೀಸ್ ಪೀಸ್ ಆಗ್ತಿವೆ. ದೇವಸ್ಥಾನಗಳಂತೂ ಪುಲ್ ರೇಶ್ ಆಗುತ್ತಿದ್ದು, ಅವಾಂತರಗಳು ಮುಂದುವರಿದಿವೆ.

    ಮೈಸೂರಿನಲ್ಲಿ ಚಾಮುಂಡಿಬೆಟ್ಟಕ್ಕೆ ತೆರಳುವ ನಗರ ಸಾರಿಗೆ ಬಸ್‌ನಲ್ಲಿ ಮಹಿಳೆಯರ ಗಲಾಟೆ ಮಾಡಿ ಕೊಂಡಿರುವ ದೃಶ್ಯ ಕಂಡುಬಂದಿದೆ. ಮಹಿಳೆಯರು ಸೀಟಿಗಾಗಿ ಕೈಕೈ ಮಿಲಾಯಿಸಿದ್ದಾರೆ. ಬಸ್‌ನೊಳಗೆ ಕಿತ್ತಾಡಿಕೊಂಡ ವೀಡಿಯೋ ಸದ್ಯ ಜಾಲತಾಣದಲ್ಲಿ ಸದ್ದು ಮಾಡ್ತಿದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಜಿಟಿಜಿಟಿ ಮಳೆ- ಬೆಳ್ಳಂಬೆಳಗ್ಗೆ ಕೊಡೆ ಹಿಡಿದ ಜನ

    ಒಂದೆರಡು ದಿನಗಳಲ್ಲೇ ಮಾರ್ಗಸೂಚಿ:
    ಉಚಿತ ಪ್ರಯಾಣ ಹಿನ್ನೆಲೆಯಲ್ಲಿ ಸಾಗರೋಪಾದಿಯಲ್ಲಿ ಹರಿದು ಬರುತ್ತಿರುವ ಮಹಿಳೆಯರ ದಂಡನ್ನು ಕಂಟ್ರೋಲ್ ಮಾಡೋಕೆ ಸಾರಿಗೆ ಇಲಾಖೆ ಮುಂದಾಗ್ತಿದೆ. ಈ ಬಗ್ಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಸಾರಿಗೆ ಇಲಾಖೆಯ ಅಧಿಕಾರಿಗಳ ಜೊತೆ ನಿನ್ನೆ ಸಭೆ ನಡೆಸಿದ್ದಾರೆ. ಕಿಟಕಿ ಹೊಡೆಯೋದು, ಡೋರ್ ಒಡೆಯೋದು ಆದ್ರೇ ಕಷ್ಟ. ಶಿಸ್ತಿನಲ್ಲಿ ಬರಬೇಕು. ಸಪರೇಟ್ ಗೈಡ್ ಲೈನ್ಸ್ ತನ್ನಿ ಅಂತಾ ಸೂಚನೆ ನೀಡಿದ್ದಾರೆ. ಇದನ್ನೂ ಓದಿ: ಮಹಿಳೆಯರ `ಶಕ್ತಿ’ಗೆ ಶೀಘ್ರವೇ ಹೊಸ ಮಾರ್ಗಸೂಚಿ – ವಾರಕ್ಕೆ ಮುಂಚೆ ಬುಕ್ಕಿಂಗ್ ಕಡ್ಡಾಯ ಸಾಧ್ಯತೆ

    ಈ ಬಗ್ಗೆ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ್ದ ಸಚಿವ ರಾಮಲಿಂಗ ರೆಡ್ಡಿ, ಉಚಿತ ಪ್ರಯಾಣ ನಿಭಾಯಿಸೋದು ಕಷ್ಟವಾಗೋದ್ರಿಂದ ಈಗ ನಾವು ಹೊಸ ಮಾರ್ಗಸೂಚಿ ಅನಿವಾರ್ಯ. ಬುಕ್ಕಿಂಗ್‌ ಮೂಲಕವೇ ಪ್ರಯಾಣಕ್ಕೆ ಅಧಿಕಾರಿಗಳಿಗೆ ತಿಳಿಸಿದ್ದೇನೆ. ಇನ್ನೆರಡು ದಿನಗಳಲ್ಲಿ ನಿರ್ಧಾರ ಮಾರ್ಗಸೂಚಿ ಹೊರಡಿಸುತ್ತೇವೆ ಎಂದಿದ್ದಾರೆ. ಇದನ್ನೂ ಓದಿ: ಹೆಂಡತಿ ನನ್ನ ಮಾತು ಕೇಳುತ್ತಿಲ್ಲ, ದಯಮಾಡಿ ಪರಿಹರಿಸಿ- ಶಾಸಕರಿಗೆ ವ್ಯಕ್ತಿ ದೂರು

    ಈ ವೀಕೆಂಡ್ ನಿಂದ ಮಹಿಳಾ ಪ್ರಯಾಣಿಕರ ಪ್ರಯಾಣದ ರೂಲ್ಸ್ ಬದಲಾಗುವ ಸಾಧ್ಯತೆಯಿದೆ. ಸಿಕ್ಕ ಸಿಕ್ಕ ಬಸ್ ಹತ್ತುವಂತಿಲ್ಲ, ಪ್ರಯಾಣ ಮಾಡಬೇಕಾದ್ರೇ ಮುಂಗಡ ಬುಕ್ಕಿಂಗ್ ಕಡ್ಡಾಯವಾಗಿ ಮಾಡಿಕೊಂಡಿರಬೇಕಾಗುತ್ತದೆ. ಒಟ್ಟಿನಲ್ಲಿ ಸಾರಿಗೆ ಇಲಾಖೆ ಏನು ನಿರ್ಧಾರ ಕೈಗೊಳ್ಳುತ್ತದೆ ಎಂಬುದನ್ನ ಕಾದು ನೋಡಬೇಕಿದೆ.

  • ಗಂಡ ಜೊತೆಗೆ ಬಾರದೇ ನಮಗೆ ಭದ್ರತೆ ಇಲ್ಲ; ಫ್ರೀ ಬಸ್ ಪ್ರಯಾಣ ಯೋಜನೆಗೆ ಮಹಿಳೆ ವಿರೋಧ

    ಗಂಡ ಜೊತೆಗೆ ಬಾರದೇ ನಮಗೆ ಭದ್ರತೆ ಇಲ್ಲ; ಫ್ರೀ ಬಸ್ ಪ್ರಯಾಣ ಯೋಜನೆಗೆ ಮಹಿಳೆ ವಿರೋಧ

    – ಅವರಿಲ್ಲದೇ ಮಕ್ಕಳು ಬಂದ್ರಾ? ಗಂಡನೂ ಜೊತೆಯೇ ಇರಬೇಕು ಎಂದ ಮಹಿಳೆ

    ಚಿಕ್ಕಮಗಳೂರು: ಸರ್ಕಾರದ ಫ್ರೀ ಬಸ್ (Free Bus Travel) ಪ್ರಯಾಣದ ಶಕ್ತಿ ಯೋಜನೆ ಸರಿ ಇಲ್ಲ. ಗಂಡ ಜೊತೆಗೆ ಬಾರದೇ ನಮ್ಮ ಭದ್ರತೆ ಇಲ್ಲದಂತಾಗಿದೆ ಎಂದು ಕಾಂಗ್ರೆಸ್ ಸರ್ಕಾರದ ಶಕ್ತಿ ಯೋಜನೆ (Shakti Scheme) ವಿರುದ್ಧ ಮಹಿಳೆಯೊಬ್ಬರು ಅಸಮಾಧಾನ ಹೊರಹಾಕಿದ್ದಾರೆ.

    ಮತ ಹಾಕುವಾಗ ಮಹಿಳೆಯರು ಮಾತ್ರ ಹಾಕಿ ಎಂದಿದ್ರಾ? ನಾವ್ ಇಲ್ದೆ ನೀವ್ ಬಂದ್ರಾ ಅಂತಿದ್ದಾರೆ ಯಜಮಾನರು. ಅವರಿಲ್ಲದೆ ಮಕ್ಕಳು ಬಂದ್ರಾ? ಗಂಡ ಬೇಕು. ಗಂಡನ ಜೊತೆಯೇ ಇರಬೇಕು. ಈ ಕಾನೂನು ಬೇಡ ಎಂದು ಮಹಿಳೆಯರಿಗೆ ಬಸ್ ಉಚಿತ ಪ್ರಯಾಣಕ್ಕೆ ಪಿರಿಯಾಪಟ್ಟಣದ ಮಮತಾ ಎಂಬವರು ವಿರೋಧ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಅವರಿಗೆ ಸಚಿವರಾಗಿ ಕೆಲಸ ಮಾಡೋದಕ್ಕಿಂತ ಬೇರೆಯದ್ದರ ಬಗ್ಗೆಯೇ ಆಸಕ್ತಿ ಜಾಸ್ತಿ: ಮಹದೇವಪ್ಪಗೆ ಸುರೇಶ್ ಟಾಂಗ್

    ದುಡ್ಡು ಕೊಟ್ಟು ಬಂದರೂ ಈ ರೀತಿ ನೂಕು ನುಗ್ಗಲು ಇರುವಂತೆ ಮಾಡಬೇಡಿ. ಹೊರನಾಡಿನಿಂದ ಮಂಗಳೂರಿಗೆ ಹೋಗುವವರನ್ನು ಮಾತ್ರ ಬಸ್ಸಿಗೆ ಹತ್ತಿಸಿದ್ದಾರೆ. ಮಧ್ಯ ಇಳಿಯುವವರನ್ನ ಖಾಸಗಿ ಬಸ್ಸಿನಲ್ಲಿ ಹತ್ತಿಸುತ್ತಿಲ್ಲ. ದೊಡ್ಡವರು, ಚಿಕ್ಕವರು ಬರುತ್ತಾರೆ, ಕೈಮುಗಿದು ಕೇಳಿಕೊಳ್ಳುತ್ತೇವೆ. ಎದ್ದು ಬಿದ್ದು ಬರುವಂತೆ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ.

    ಸರ್ಕಾರದ ಯೋಜನೆ ಕಾಲು ಭಾಗ ಖುಷಿ ನೀಡಿದೆ. ಗಂಡ-ಮಕ್ಕಳು, ಅತ್ತೆ-ಮಾವ ಎಲ್ಲ ಮನೆಯಲ್ಲೇ ಇದ್ದಾರೆ. ಹೆಂಡ್ತಿ ಮಾತ್ರ ಎಲ್ಲಾ ಕಡೆ ಓಡಾಡಿಕೊಂಡು ಇರೋದಕ್ಕೆ ಆಗುವುದಿಲ್ಲ. ಒಂದು ಬಸ್ಸಿಗೆ ಇಷ್ಟೇ ಮಹಿಳೆಯರು ಎಂಬ ಕಾನೂನು ಬಲವಾಗಬೇಕು. ಈ ನೂಕು ನುಗ್ಗಲಿನ ಬಸ್ಸಿನಲ್ಲಿ ಮಹಿಳೆಯರು ಹತ್ತುವುದು ಅಸಾಧ್ಯ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಅಕ್ಕಿ ವಿತರಣೆ ರಾಜ್ಯ ಸರ್ಕಾರದ ಜವಾಬ್ದಾರಿ, ಎಲ್ಲಿಯಾದ್ರೂ ಖರೀದಿ ಮಾಡಿ ಕೊಡಲಿ: ಯಡಿಯೂರಪ್ಪ

    ಗಂಡನನ್ನ ಮನೆಯಲ್ಲಿ ಬಿಟ್ಟು ಬಂದಿದ್ದೇವೆ. ನಮಗೆ ಸೂಕ್ತ ಭದ್ರತೆ ಇಲ್ಲ. ವಿದ್ಯೆ ಹಾಗೂ ಆಸ್ಪತ್ರೆ ಕಡೆಯೂ ಸ್ವಲ್ಪ ಗಮನಹರಿಸಿ ಎಂದು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.