Tag: Free bus

  • ಕರ್ನಾಟಕದಂತೆ ಆಂಧ್ರದಲ್ಲೂ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ

    ಕರ್ನಾಟಕದಂತೆ ಆಂಧ್ರದಲ್ಲೂ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ

    – ರಾಜ್ಯಾದ್ಯಂತ ಆ.15ರಿಂದ ಜಾರಿ

    ಅಮರಾವತಿ: ಕರ್ನಾಟಕದ (Karnataka)`ಶಕ್ತಿ ಯೋಜನೆ’ಯಂತೆ ಆಂಧ್ರಪ್ರದೇಶದಲ್ಲಿಯೂ (Andhra Pradesh) ಮಹಿಳೆಯರಿಗಾಗಿ ಉಚಿತ ಬಸ್ ಪ್ರಯಾಣ (Free Bus Scheme) ಯೋಜನೆಯನ್ನು ಜಾರಿಗೊಳಿಸಲು ಚಂದ್ರಬಾಬು ನಾಯ್ಡು ಸರ್ಕಾರ ನಿರ್ಧರಿಸಿದೆ.

    2024ರ ಚುನಾವಣಾ ಪೂರ್ವದಲ್ಲಿ ನೀಡಿದ್ದ ಭರವಸೆಯಂತೆ ಚಂದ್ರಬಾಬು ನಾಯ್ಡು (Chandrababu Naidu Govt) ಸರ್ಕಾರ ಇದೇ ಆ.15ರಿಂದ `ಸ್ತ್ರೀ ಶಕ್ತಿ’ ಯೋಜನೆ ಆರಂಭಿಸಲಿದೆ. ಈ ಯೋಜನೆಯಡಿ ಎಲ್ಲ ಬಾಲಕಿಯರು, ಮಂಗಳಮುಖಿಯರು ಉಚಿತ ಬಸ್ ಪ್ರಯಾಣ ಮಾಡಬಹುದು. ಆಂಧ್ರದಲ್ಲಿ ವಾಸಿಸುವ ಪ್ರಮಾಣೀಕೃತ ದಾಖಲೆ ತೋರಿಸಿ ಆಂಧ್ರ ರಾಜ್ಯ ರಸ್ತೆ ಸಾರಿಗೆ ನಿಗಮದ (APSRTC) ಬಸ್‌ಗಳಲ್ಲಿ ಉಚಿತವಾಗಿ ಸಂಚರಿಸಬಹುದು.ಇದನ್ನೂ ಓದಿ: ನಿಲ್ದಾಣದಲ್ಲಿ ನಿಂತಿದ್ದ ಫ್ಲೈಟ್‌ಗೆ ಡಿಕ್ಕಿ ಹೊಡೆದು ವಿಮಾನ ಪತನ

    ಈ ಕುರಿತು ರಾಜ್ಯ ಸಾರಿಗೆ, ರಸ್ತೆಗಳು ಮತ್ತು ಕಟ್ಟಡಗಳು ಇಲಾಖೆಯ ಪ್ರಧಾನ ಕಾರ್ಯದರ್ಶಿ ಕಾಂತಿಲಾಲ್ ದಂಡೆ ಸೋಮವಾರ (ಆ.11) ತಿಳಿಸಿದ್ದಾರೆ. ಈ ಯೋಜನೆ ರಾಜ್ಯಾದ್ಯಂತ ಆ.15ರಂದು ಜಾರಿಯಾಗಲಿದ್ದು, ಎಪಿಎಸ್‌ಆರ್‌ಟಿಸಿಯ ಸಾಮಾನ್ಯ ಬಸ್‌ಗಳಿಗೆ ಮಾತ್ರ ಅನ್ವಯವಾಗುತ್ತದೆ. ಎಸಿ ಸೇರಿ ವಿವಿಧ ಐಷಾರಾಮಿ ಬಸ್ಸುಗಳಿಗೆ ಅನ್ವಯ ಆಗುವುದಿಲ್ಲ ಎಂದಿದ್ದಾರೆ.

    ಇನ್ನೂ ಪ್ರಯಾಣಿಕರ ಸುರಕ್ಷತೆಗಾಗಿ ಎಲ್ಲಾ ಬಸ್‌ಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲು ನಿರ್ಧರಿಸಿದೆ. ಜೊತೆಗೆ ಬಸ್ ಸಿಬ್ಬಂದಿಯು ತಮ್ಮ ಬಟ್ಟೆಯ ಮೇಲೆ ಹಾಕಿಕೊಳ್ಳಬಹುದಾದಂತಹ ಕ್ಯಾಮೆರಾವನ್ನು ಅಳವಡಿಸಲು ಯೋಚಿಸಿದೆ. ಅದಲ್ಲದೇ ಬಸ್ ನಿಲ್ದಾಣಗಳಲ್ಲಿ ಫ್ಯಾನ್, ಕುರ್ಚಿ, ಕುಡಿಯುವ ನೀರು ಮತ್ತು ಶೌಚಾಲಯಗಳ ಸೌಲಭ್ಯ ದೊರೆಯಲಿದೆ.

    ಈ ಯೋಜನೆಗೆ ವಾರ್ಷಿಕವಾಗಿ 1,942 ಕೋಟಿ ರೂ. ಹಾಗೂ ತಿಂಗಳಿಗೆ ಸುಮಾರು 162 ಕೋಟಿ ರೂ. ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ಈ ಮೂಲಕ ಶಿಕ್ಷಣ, ಉದ್ಯೋಗ ಮತ್ತು ಮಹಿಳೆಯರನ್ನು ಸಬಲೀಕರಣಗೊಳಿಸುವ ಗುರಿಯನ್ನು ಸರ್ಕಾರ ಹೊಂದಿದೆ.ಇದನ್ನೂ ಓದಿ: 354ನೇ ಆರಾಧನಾ ಮಹೋತ್ಸವದ ಕೊನೆಯ ಘಟ್ಟ – ಮಂತ್ರಾಲಯ ರಾಜಬೀದಿಯಲ್ಲಿಂದು ಮಹಾರಥೋತ್ಸವ

  • ಫ್ರೀ ಬಸ್ ಎಫೆಕ್ಟ್ – ಉಸಿರುಗಟ್ಟಿ ಕಾಪಾಡಿ ಎಂದು ಕೂಗಿಕೊಂಡ ಮಹಿಳೆ

    ಫ್ರೀ ಬಸ್ ಎಫೆಕ್ಟ್ – ಉಸಿರುಗಟ್ಟಿ ಕಾಪಾಡಿ ಎಂದು ಕೂಗಿಕೊಂಡ ಮಹಿಳೆ

    ತುಮಕೂರು: ಮಹಿಳಾ ಪ್ರಯಾಣಿಕರಿಗಾಗಿ ಸರ್ಕಾರ ನೀಡಿರುವ ಫ್ರೀ ಬಸ್ ಯೋಜನೆ (Shakti Scheme) ಹಲವು ಫಜೀತಿ ಸೃಷ್ಟಿ ಮಾಡುತ್ತಿದೆ. ಮೈಸೂರಿನಿಂದ ತುಮಕೂರಿಗೆ (Tumakuru) ಸಂಚರಿಸುತ್ತಿದ್ದ ಬಸ್‌ನಲ್ಲಿ ಮಹಿಳೆಯೊಬ್ಬರು ಉಸಿರುಗಟ್ಟಿ ಕಿರುಚಾಡಿದ ಘಟನೆ ತುಮಕೂರು ಜಿಲ್ಲೆ ಕುಣಿಗಲ್ (Kunigal) ಪಟ್ಟಣದಲ್ಲಿ ನಡೆದಿದೆ.

    ಅತಿಯಾದ ಜನಸಂದಣಿಯಲ್ಲಿ ಬಸ್‌ನೊಳಗೆ ಉಂಟಾದ ತೀವ್ರ ನೂಕಾಟ-ತಳ್ಳಾಟದಿಂದ ಮಹಿಳೆಯೊಬ್ಬರಿಗೆ ಉಸಿರಾಡಲು ತೀವ್ರ ತೊಂದರೆ ಉಂಟಾಗಿದೆ. ನನ್ನನ್ನು ಕಾಪಾಡಿ, ಬಸ್ಸಿನಿಂದ ಕೆಳಗಿಳಿಸಿ ಎಂದು ಜೋರಾಗಿ ಮಹಿಳಾ ಪ್ರಯಾಣಿಕರೊಬ್ಬರು ಕೂಗಿಕೊಂಡಿದ್ದಾರೆ. ತಕ್ಷಣವೇ ಬಸ್ಸು ನಿಲ್ಲಿಸಿದ ನಿರ್ವಾಹಕರು ಮಹಿಳೆಯನ್ನು ಕೆಳಗಿಳಿಸಿದ್ದಾರೆ. ಇದನ್ನೂ ಓದಿ: ಹಳೆ ಬೇರು ಹೊಸ ಚಿಗುರು ರೀತಿ ವಿಜಯೇಂದ್ರ ಎಲ್ಲರನ್ನೂ ಒಟ್ಟಾಗಿ ಕರೆದೊಯ್ಯುತ್ತಿದ್ದಾರೆ: ರೇಣುಕಾಚಾರ್ಯ

    ಈ ಬಸ್ ಮೈಸೂರು ತುಮಕೂರು ಮಾರ್ಗದಲ್ಲಿ ಸಂಚರಿಸುತ್ತಿತ್ತು. ಗೌಡಗೆರೆ ಚಾಮುಂಡೇಶ್ವರಿ ದೇವಾಲಯಕ್ಕೆ ಹೋಗಿದ್ದ ಮಹಿಳಾ ತಂಡ ಈ ಬಸ್ಸಿನಲ್ಲಿ ಹೋಗುತ್ತಿದ್ದ ವೇಳೆ ಘಟನೆ ನಡೆದಿದೆ.  ಇದನ್ನೂ ಓದಿ: ಕಾಡಾನೆ ದಾಳಿ – ಮನೆ ಮೇಲೆ ತೆಂಗಿನ ಮರ ಬಿದ್ದು ಲಕ್ಷಾಂತರ ರೂ. ನಷ್ಟ

  • ಅಂಧರಿಗೆ ಸರ್ಕಾರದಿಂದ ಗುಡ್‌ನ್ಯೂಸ್ – ಒಂದೇ ಪಾಸ್‌ನಲ್ಲಿ 4 ನಿಗಮಗಳ ಬಸ್‌ನಲ್ಲಿ ಒಡಾಟಕ್ಕೆ ಅವಕಾಶ

    ಅಂಧರಿಗೆ ಸರ್ಕಾರದಿಂದ ಗುಡ್‌ನ್ಯೂಸ್ – ಒಂದೇ ಪಾಸ್‌ನಲ್ಲಿ 4 ನಿಗಮಗಳ ಬಸ್‌ನಲ್ಲಿ ಒಡಾಟಕ್ಕೆ ಅವಕಾಶ

    ಬೆಂಗಳೂರು: ಮಹಿಳೆಯರಿಗೆ ಫ್ರೀ ಬಸ್ (Free Bus) ನೀಡಿದ್ದ ಸರ್ಕಾರ ಈಗ ಅಂಧತ್ವ ಹೊಂದಿರೋ ವಿಶೇಷ ಚೇತನರಿಗಾಗಿ ಗುಡ್ ನ್ಯೂಸ್ ನೀಡಿದ್ದು, ಈ ಮೂಲಕ ರಾಜ್ಯ ಸಾರಿಗೆ 4 ನಿಗಮಗಳಲ್ಲಿ ಉಚಿತವಾಗಿ ಓಡಾಡಲು ಅವಕಾಶ ಮಾಡಿಕೊಟ್ಟಿದೆ.

    ಶಕ್ತಿ ಯೋಜನೆ (Shakthi Scheme ಸರ್ಕಾರದ ಮಹತ್ವದ ಗ್ಯಾರಂಟಿಯು ಸರ್ಕಾರಕ್ಕೆ ಅತಿ ಹೆಚ್ಚು ಹೆಸರು ತಂದ ಯೋಜನೆ ಕೂಡ. ಮಹಿಳೆಯರಿಗೆ ಯೋಜನೆ ಫ್ರೀ ಮಾಡಿದ್ದ ಸರ್ಕಾರ, ಈಗ ಅಂಧತ್ವ ಹೊಂದಿರೋ ವಿಶೇಷ ಚೇತನರಿಗಾಗಿ (Blind People) ಮಹತ್ವದ ಆದೇಶ ಹೊರಡಿಸಿದ್ದು, ಈ ಮೂಲಕ ಅಂಧರು ರಾಜ್ಯವ್ಯಾಪಿ ಉಚಿತವಾಗಿ ಪ್ರಯಾಣ ಮಾಡಲು ಅವಕಾಶ ನೀಡಿದೆ. ಇದನ್ನೂ ಓದಿ: ಕಸಬ್ ಗಲ್ಲಿಗೇರಲು ಕಾರಣರಾಗಿದ್ದ ವಕೀಲ ಉಜ್ವಲ್ ನಿಕಮ್‌, ಸದಾನಂದನ್ ಮಾಸ್ಟರ್ ಸೇರಿದಂತೆ ನಾಲ್ವರು ರಾಜ್ಯಸಭೆಗೆ ನಾಮನಿರ್ದೇಶನ

    ಹೌದು, ಈ ಹಿಂದೆ 4 ನಿಗಮಗಳ ಪೈಕಿ ಯಾವ ನಿಗಮದ ಬಸ್‌ಪಾಸ್ ಇತ್ತೋ ಆ ಬಸ್‌ನಲ್ಲಿ ಮಾತ್ರ ಅಂಧತ್ವ ಇದ್ದವರು ಓಡಾಡಲು ಅವಕಾಶ ಇತ್ತು. ಇದು ಅನೇಕರಿಗೆ ಸಮಸ್ಯೆ ಕೂಡ ಆಗುತ್ತಿತ್ತು. ಅದರಲ್ಲೂ ಬೆಂಗಳೂರಿನಲ್ಲಿರೋ ಹಲವರು ಬಿಎಂಟಿಸಿ ಬಸ್‌ನಲ್ಲಿ ಓಡಾಡಲು ಅವಕಾಶ ಇದ್ದವರು ಕೆಎಸ್‌ಆರ್‌ಟಿಸಿಯಲ್ಲಿ ಓಡಾಡಬೇಕಾದ್ರೆ ಹಣ ಪಾವತಿ ಮಾಡಿಯೇ ಓಡಾಡಬೇಕಿತ್ತು. ಇದನ್ನೂ ಓದಿ: ಬೀದಿ ನಾಯಿಗಳಿಗೆ ವಿಶೇಷವಾಗಿ ತಯಾರಿಸಿದ ಭಕ್ಷ್ಯ ನೀಡುತ್ತಿಲ್ಲ: ಬಿಬಿಎಂಪಿ ಸ್ಪಷ್ಟನೆ

    ಆದರೆ ಈಗ ಅಂಧರ ಅನೂಕೂಲಕ್ಕಾಗಿ ಸರ್ಕಾರ ಹೊಸ ಆದೇಶ ಮಾಡಿದೆ. ಆ ಪ್ರಕಾರ ಯಾವುದಾದರೂ 1 ನಿಗಮದ ಪಾಸ್ ಇದ್ದರೆ, 4 ನಿಗಮಗಳ ಬಸ್‌ಗಳಲ್ಲಿ ಉಚಿತವಾಗಿ ಸಂಚಾರ ಮಾಡಬಹುದು. ಸದ್ಯ ಈ ಬಗ್ಗೆ ಖುದ್ದು ಸಾರಿಗೆ ಸಚಿವರೇ ನಿಗಮಗಳಿಗೆ ಸೂಚಿಸಿದ್ದು, ಶೀಘ್ರ ಈ ಕ್ರಮಕ್ಕೆ ಆದೇಶಿಸಿದ್ದಾರೆ. ಇದನ್ನೂ ಓದಿ: ರಾಯಚೂರಿನಲ್ಲೊಂದು ‘ರುದ್ರಪ್ರಯಾಗ’ದ ಥ್ರಿಲ್ಲರ್ ಸ್ಟೋರಿ – ಒಂದೂವರೆ ತಿಂಗಳ ಬಳಿಕ ಚಿರತೆ ಸೆರೆ, ನಿಟ್ಟುಸಿರು ಬಿಟ್ಟ ಜನ

    ಇನ್ನೂ ಬೆಂಗಳೂರು ಒಂದರಲ್ಲೇ ಸುಮಾರು 20 ಸಾವಿರಕ್ಕೂ ಹೆಚ್ಚು ಅಂಧರಿದ್ದಾರೆ. ರಾಜ್ಯವ್ಯಾಪಿ ಲಕ್ಷದಷ್ಟು ಅಂಧ ವಿಶೇಷ ಚೇತನರಿದ್ದು, ಎಲ್ಲರಿಗೂ ಸರ್ಕಾರ ಉಚಿತ ಪಾಸ್ ನೀಡುತ್ತಿದೆ. ಆದರೆ ಸದ್ಯ ರಾಜ್ಯ ಸರ್ಕಾರವು ಹೊಸದಾಗಿ ಕೈಗೊಳ್ಳಲು ಹೊರಟಿರುವ ಈ ನಿರ್ಧಾರ ಎಲ್ಲಾ ಅಂಧ ವಿಶೇಷ ಚೇತನರಿಗೆ ಅನೂಕೂಲ ಆಗಲಿದೆ.

  • ಸರ್ಕಾರಿ ಶಾಲಾ ಮಕ್ಕಳಿಗೆ ಬಸ್‌ ಫ್ರೀ – ರಾಜ್ಯ ಸರ್ಕಾರದಿಂದ ಮಹತ್ವದ ಘೋಷಣೆ

    ಸರ್ಕಾರಿ ಶಾಲಾ ಮಕ್ಕಳಿಗೆ ಬಸ್‌ ಫ್ರೀ – ರಾಜ್ಯ ಸರ್ಕಾರದಿಂದ ಮಹತ್ವದ ಘೋಷಣೆ

    ಬೆಂಗಳೂರು: ಕಾಂಗ್ರೆಸ್‌ ನೇತೃತ್ವದ ರಾಜ್ಯ ಸರ್ಕಾರ ಸರ್ಕಾರಿ ಶಾಲಾ ಮಕ್ಕಳ (School Children) ಭವಿಷ್ಯ ಉಜ್ವಲಕ್ಕೆ ಮಹತ್ವದ ಘೋಷಣೆಯೊಂದನ್ನು ಹೊರಡಿಸಿದೆ.

    ರಾಜ್ಯಾದ್ಯಂತ ಕರ್ನಾಟಕ ಪಬ್ಲಿಕ್ ಶಾಲೆಗಳಲ್ಲಿ (Karnataka Public School) LKG ಯಿಂದ ಪಿಯುಸಿ ತನಕ ಓದುವ ವಿದ್ಯಾರ್ಥಿಗಳಿಗೆ ಉಚಿತ ಬಸ್ ವ್ಯವಸ್ಥೆ ಆರಂಭಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಈ ಮೂಲಕ ಸರ್ಕಾರಿ ಶಾಲೆಗಳ ಬಲವರ್ಧನೆಗೆ ಪ್ರಮುಖ ಒತ್ತು ನೀಡಲಾಗುತ್ತಿದೆ. ಈ ಕುರಿತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ (DK Shivakumar) ತಮ್ಮ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ವಿಶ್ವದ ಪ್ರತಿಷ್ಠಿತ ಕಾರು ಸಂಸ್ಥೆ ರೋಲ್ಸ್ ರಾಯ್ಸ್‌ನಲ್ಲಿ ಕೆಲಸ ಗಿಟ್ಟಿಸಿಕೊಂಡ ಕನ್ನಡತಿ

    ಸರ್ಕಾರಿ ಶಾಲೆಯ ಮಕ್ಕಳ ಹಾಜರಾತಿ, ಗುಣಮಟ್ಟ ಹೆಚ್ಚಿಸಲು ಸರ್ಕಾರದಿಂದ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಅದಕ್ಕಾಗಿ ಕರ್ನಾಟಕ ಪಬ್ಲಿಕ್‌ ಶಾಲೆಗಳಲ್ಲಿ ಓದುವ ಮಕ್ಕಳಿಗೆ ಅನುಕೂಲ ಕಲ್ಪಿಸಲು ಉಚಿತ ಬಸ್‌ ವ್ಯವಸ್ಥೆಯನ್ನ ಸರ್ಕಾರ ನೀಡಲಿದೆ ಎಂದಿದ್ದಾರೆ. ಇದನ್ನೂ ಓದಿ: 3ನೇ ಆಷಾಢ ಸಂಭ್ರಮ; ಗಜ ಲಕ್ಷ್ಮಿ, ನಾಗಲಕ್ಷ್ಮಿ ಅಲಂಕಾರದಲ್ಲಿ ಕಂಗೊಳಿಸಿದ ಚಾಮುಂಡಿ ತಾಯಿ

    ಎಲ್‌ಕೆಜಿಯಿಂದ ಪಿಯುಸಿ ತನಕ ಓದುವ ವಿದ್ಯಾರ್ಥಿಗಳಿಗೆ ಉಚಿತ ಬಸ್ ವ್ಯವಸ್ಥೆ ಕಲ್ಪಿಸಲು ಸರ್ಕಾರ ಸರ್ಕಾರ ತೀರ್ಮಾನಿಸಿದೆ. ವಿದ್ಯಾಭ್ಯಾಸ ಮಾಡುವ ಮಕ್ಕಳು ಇದರ ಸದುಪಯೋಗ ಪಡೆದುಕೊಳ್ಳಬೇಕು. ಬಡವರ ಮಕ್ಕಳಿಗೆ ಶೈಕ್ಷಣಿಕವಾಗಿ, ಆರ್ಥಿಕವಾಗಿ ಬಲ ನೀಡಲು ಸರ್ಕಾರದ ಈ ಕ್ರಮ ಮಹತ್ವದ್ದಾಗಿದೆ. ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ ಸರ್ಕಾರದ ದಿಟ್ಟ ಹೆಜ್ಜೆಯೂ ಇದಾಗಿದೆ ಎಂದು ಎಕ್ಸ್‌ಪೋಸ್ಟ್‌ನಲ್ಲಿ ಕಂಚಿಕೊಂಡಿದ್ದಾರೆ. ಇದನ್ನೂ ಓದಿ: ಕೌಟುಂಬಿಕ ಸಮಸ್ಯೆ ಬಗೆಹರಿಸಿಕೊಡೋದಾಗಿ ಮೌಲ್ವಿಯಿಂದ ಮಹಿಳೆಗೆ ಲೈಂಗಿಕ ಕಿರುಕುಳ – ಕೇಸ್‌ ದಾಖಲು

  • ನಾನು ಒಂದು ಧರ್ಮದ ಪರ ಅಲ್ಲ: ಸಿದ್ದರಾಮಯ್ಯ

    ನಾನು ಒಂದು ಧರ್ಮದ ಪರ ಅಲ್ಲ: ಸಿದ್ದರಾಮಯ್ಯ

    ಚಾಮರಾಜನಗರ: ನಾನು ಸಿಎಂ ಆಗಿರುವವರೆಗೆ ಎಲ್ಲಾ ವರ್ಗದ ಜನರ ಪರವಾಗಿ ಇರುತ್ತೇನೆ. ನಾನು ಒಂದು ಧರ್ಮದ ಪರವಾಗಿ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಸ್ಪಷ್ಟನೆ ನೀಡಿದರು.

    ಕನಕಭವನದ ಗುದ್ದಲಿ ಪೂಜೆ ನೆರವೇರಿಸಿ, ವೇದಿಕೆಯಲ್ಲಿ ಮಾತನಾಡಿದ ಅವರು, ಇಂದು ಜಾತಿಗೆ ಅಂಟಿಕೊಂಡಿಲ್ಲ. ನಮ್ಮ ಜನರನ್ನು ಮರೆಯುವುದಿಲ್ಲ. ಸಮಾಜದಲ್ಲಿ ಒಂದು ಧರ್ಮ, ಜಾತಿಯಿಂದ ನ್ಯಾಯ ಕೊಡಲು ಸಾಧ್ಯವಿಲ್ಲ. ಎಲ್ಲರ ಬೆಂಬಲ ಹಾಗೂ ಸಹಕಾರ ಮುಖ್ಯವಾಗಿದೆ. ಇಡೀ ರಾಜ್ಯದಲ್ಲಿ ಅಹಿಂದ ವರ್ಗದ ಜನರು ಹಾಗೂ ಬಡವರು ಸಹಾಯ ಮಾಡಿದ್ದಾರೆ. ಸಿಎಂ ಆಗುವುದು ಅಷ್ಟು ಸುಲಭದ ಕೆಲಸವಲ್ಲ ಎಂದರು. ಇದನ್ನೂ ಓದಿ: ಕಾವೇರಿ ಆರತಿ ಅಧ್ಯಯನ ಸಮಿತಿ ಶಿಫಾರಸು ಜಾರಿಗೆ ಸಮಿತಿ ರಚನೆ

    ಚಾಮರಾಜನಗರವು (Chamarajanagara) ಬಹಳ ಹಿಂದುಳಿದ ಜಿಲ್ಲೆಯಾಗಿದೆ. ಈ ಜಿಲ್ಲೆಯಲ್ಲಿ ಶಿಕ್ಷಣ ಕಡಿಮೆ. ಶಿಕ್ಷಣಕ್ಕೆ ಆದ್ಯತೆ ಕೊಡಬೇಕಾಗಿದೆ. ಸಮುದಾಯ ಭವನದಲ್ಲಿ ಹಾಸ್ಟೆಲ್ ಮತ್ತು ಶಿಕ್ಷಣ ಭವನವನ್ನು ಮಾಡಬೇಕು. ಅಲ್ಲದೇ ಚಾಮರಾಜನಗರದ ಎಲ್ಲಾ ಅಹಿಂದ ವರ್ಗದ ಜನರು ಮುಖ್ಯ ವಾಹಿನಿಗೆ ಬರಬೇಕು. ಇದಕ್ಕೆ ಸರ್ಕಾರ ಅನೇಕ ಕಾರ್ಯಕ್ರಮ ಮಾಡಿದೆ ಎಂದು ಹೇಳಿದರು. ಇದನ್ನೂ ಓದಿ: ಪಹಲ್ಗಾಮ್‌ಗೆ ರಾಹುಲ್ ಗಾಂಧಿ ಭೇಟಿ – ಉಗ್ರರ ದಾಳಿ ವೇಳೆ ಗಾಯಗೊಂಡವರ ಆರೋಗ್ಯ ವಿಚಾರಣೆ

    ಶಕ್ತಿ ಯೋಜನೆಯಡಿ ಎಲ್ಲಾ ಜಾತಿಯ ಹೆಣ್ಣು ಮಕ್ಕಳು ಬಸ್‌ನಲ್ಲಿ ಉಚಿತವಾಗಿ ಓಡಾಡಬಹುದು. ಅದಕ್ಕೆ ಬಡತನ ಶ್ರೀಮಂತಿಕೆ ಇಲ್ಲ. ಎಲ್ಲಾ ಪಾರ್ಟಿ, ಧರ್ಮದ ಮಹಿಳೆಯರು ಬಸ್‌ನಲ್ಲಿ ಉಚಿತ ಪ್ರಯಾಣ ಮಾಡಬಹುದು ಎಂದರು.

  • ಡಯಾಲಿಸಿಸ್ ಒಳಗಾಗಿರುವ ಪುರುಷರಿಗೂ ಫ್ರೀ ಬಸ್ ವ್ಯವಸ್ಥೆ?

    ಡಯಾಲಿಸಿಸ್ ಒಳಗಾಗಿರುವ ಪುರುಷರಿಗೂ ಫ್ರೀ ಬಸ್ ವ್ಯವಸ್ಥೆ?

    – ಸಿಎಂಗೆ ಪತ್ರದ ಮೂಲಕ ಯು.ಟಿ.ಖಾದರ್ ಮನವಿ

    ಬೆಂಗಳೂರು: ರಾಜ್ಯದ ಶಕ್ತಿ ಯೋಜನೆಯನ್ನ ಡಯಾಲಿಸ್ (Dialysis) ಒಳಗಾಗಿರುವ ಗಂಡಸರಿಗೂ ವಿಸ್ತರಿಸುವಂತೆ ಕೂಗು ಕೇಳಿ ಬಂದಿದ್ದು, ಈ ಬಗ್ಗೆ ಪರಿಶೀಲನೆ ನಡೆಸುವಂತೆ ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ (U T Khader) ಸಿಎಂಗೆ ಪತ್ರ ಬರೆದಿದ್ದಾರೆ.

    ಮಹಿಳೆಯರಿಗೆ ಮಾತ್ರ ಸೀಮಿತವಾಗಿದ್ದ ಶಕ್ತಿ ಯೋಜನೆ, ಗಂಡಸರಿಗೂ ವಿಸ್ತರಿಸುವಂತೆ ಬೇಡಿಕೆಯೊಂದು ಬಂದಿದೆ. ಅದರಂತೆ ಸಿಎಂ ಸಿದ್ದರಾಮಯ್ಯ ಅವರಿಗೆ ಖುದ್ದು ಯು.ಟಿ.ಖಾದರ್ ಅವರೇ ಪತ್ರ ಬರೆದು ಸಾಧ್ಯತೆ ಬಗ್ಗೆ ಪರಿಶೀಲನೆ ನಡೆಸುವಂತೆ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಡ್ರೈವಿಂಗ್ ಬಗ್ಗೆ ಚಾಲಕರಿಗೆ ಸರಿಯಾಗಿ ತರಬೇತಿ ಕೊಡಿ – ಸಾರ್ವಜನಿಕರಿಂದ ಬಿಎಂಟಿಸಿಗೆ ದೂರು

    ರಾಜ್ಯದಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ನಿತ್ಯ ಪುರುಷರು ಸಾರಿಗೆ ಬಸ್ ಬಳಕೆ ಮಾಡುತ್ತಾರೆ. ಇದರಲ್ಲಿ ಅನೇಕ ಖಾಯಿಲೆ ಇರುವ ಪುರುಷ ಪ್ರಯಾಣಿಕರು ಕೂಡ ಸಂಚಾರ ಮಾಡುತ್ತಾರೆ. ಆ ಪೈಕಿ ಡಯಾಲಿಸಿಸ್‌ಗೆ ಒಳಗಾಗಿರೋ ಪುರುಷ ಪ್ರಯಾಣಿಕರನ್ನು ಶಕ್ತಿ ಯೋಜನೆಗೆ ತರುವಂತೆ ಮನವಿ ಮಾಡಲಾಗಿದೆ. ಇದನ್ನೂ ಓದಿ: ಚಿಕ್ಕಮಗಳೂರು | ಕಾಡ್ಗಿಚ್ಚಿಗೆ ಹತ್ತಾರು ಎಕರೆ ಅರಣ್ಯ ಬೆಂಕಿಗಾಹುತಿ

    ವಾರಕ್ಕೆ 2-3 ಬಾರಿ ಡಯಾಲಿಸಿಸ್‌ಗಾಗಿ ಪುರುಷ ರೋಗಿಗಳು ಸಂಚಾರ ಮಾಡುವುದರಿಂದ ಹೆಚ್ಚು ಖರ್ಚಾಗುತ್ತದೆ. ಹೀಗಾಗಿ ಅಂತವರಿಗೆ ಅನೂಕೂಲ ಆಗುವ ನಿಟ್ಟಿನಲ್ಲಿ, ಶಕ್ತಿ ಯೋಜನೆ ವ್ಯಾಪ್ತಿಗೆ ತರಬೇಕೆಂದು ಆರ್‌ಟಿಐ ಕಾರ್ಯಕರ್ತ ಸೈಯದ್ ರೆಹಮಾನ್ ಸಮೀನ್, ಸ್ಪೀಕರ್ ಯು.ಟಿ.ಖಾದರ್‌ಗೆ ಪತ್ರ ಬರೆದಿದ್ದರು. ಇದನ್ನೂ ಓದಿ: ರಾಮನಗರ | ಹೊಸ ಹುಲ್ಲು ಚಿಗುರಲಿ ಎಂದು ಅರಣ್ಯ ಪ್ರದೇಶಕ್ಕೆ ಬೆಂಕಿ – 30 ಎಕರೆ ಸುಟ್ಟು ಭಸ್ಮ

    ಆರ್‌ಟಿಐ ಕಾರ್ಯಕರ್ತರ ಮನವಿ ಬಳಿಕ ಇದನ್ನ ಪರಿಶೀಲನೆ ನಡೆಸುವಂತೆ ಸಿಎಂಗೆ ಸ್ಪೀಕರ್ ಪತ್ರ ಬರೆದು, ಮನವಿ ಮಾಡಿದ್ದಾರೆ. ಕಿಡ್ನಿ ಸಮಸ್ಯೆ ಇರುವ ಪ್ರಯಾಣಿಕರ ಅನುಕೂಲಕ್ಕಾಗಿ ಕೆಎಸ್‌ಆರ್‌ಟಿಸಿ ಹಾಗೂ ಬಿಎಂಟಿಸಿ ಬಸ್ ಗಳಲ್ಲಿ ಉಚಿತವಾಗಿ ಸಂಚಾರ ಮಾಡಲು ಬೇಕಾದ ವ್ಯವಸ್ಥೆ ಮಾಡಲು ನಿರ್ದೇಶನ ಮಾಡುವಂತೆ ಸಿಎಂಗೆ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಮೊನಾಲಿಸಾ ಸಿನಿಮಾ ವಿವಾದ – ಐವರ ವಿರುದ್ಧ ಬಿತ್ತು ಕೇಸ್‌

  • ಸಾಹಿತ್ಯ ಸಮ್ಮೇಳನಕ್ಕೆ ಬರುವ ಮಂಡ್ಯದ ಜನರಿಗೆ ಫ್ರೀ ಬಸ್

    ಸಾಹಿತ್ಯ ಸಮ್ಮೇಳನಕ್ಕೆ ಬರುವ ಮಂಡ್ಯದ ಜನರಿಗೆ ಫ್ರೀ ಬಸ್

    – ಮೈಸೂರು, ಬೆಂಗ್ಳೂರಿಂದ ಪ್ರತಿ 30 ನಿಮಿಷಕ್ಕೊಮ್ಮೆ ವಿಶೇಷ ಬಸ್ ಸೌಲಭ್ಯ

    ಮಂಡ್ಯ: ಜಿಲ್ಲೆಯ ನಾನಾ ಭಾಗಗಳಿಂದ ಸಾಹಿತ್ಯ ಸಮ್ಮೇಳನಕ್ಕೆ ಆಗಮಿಸುವವರಿಗೆ ಉಚಿತ ಸಾರಿಗೆ ವ್ಯವಸ್ಥೆ ಮಾಡಲಾಗಿದೆ ಎಂದು ಸಚಿವ ಚಲುವರಾಯಸ್ವಾಮಿ (ChaluvarayaSwamy) ತಿಳಿಸಿದರು.

    ಮಂಡ್ಯದಲ್ಲಿ ಮಾತನಾಡಿದ ಅವರು, 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ (87th Kannada Sahitya Sammelana) ಆಗಮಿಸುವ ಸಾಹಿತ್ಯಾಸಕ್ತರು ಹಾಗೂ ಸಾರ್ವಜನಿಕರಿಗೆ ಸಾಕಷ್ಟು ಸಂಖ್ಯೆಯಲ್ಲಿ ಕೆಎಸ್‌ಆರ್‌ಟಿಸಿ ವತಿಯಿಂದ ಬಸ್ ವ್ಯವಸ್ಥೆ ಮಾಡಲಾಗಿದೆ. ಮೂರು ದಿನ 7 ತಾಲೂಕು ಕೇಂದ್ರಗಳಿಂದ ಸಮ್ಮೇಳನ ನಡೆಯುವ ಸ್ಥಳಕ್ಕೆ ಬಸ್‌ ಸೌಲಭ್ಯ ಒಳಗೊಂಡಂತೆ 105 ವಿಶೇಷ ವಾಹನಗಳ ವ್ಯವಸ್ಥೆ ಮಾಡಲಾಗಿದೆ. ಮೈಸೂರು ಮತ್ತು ಬೆಂಗಳೂರಿನಿಂದ (Bengaluru) ಪ್ರತಿ 30 ನಿಮಿಷಕ್ಕೆ ಒಂದರಂತೆ ವಿಶೇಷ ಬಸ್ ಸೌಲಭ್ಯ ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದರು.

    ಮಂಡ್ಯ ನಗರದ ವಿವಿಧ ಸ್ಥಳಗಳಿಂದ ಸಮ್ಮೇಳನದ ಸ್ಥಳಕ್ಕೆ ಜನರನ್ನು ಕರೆತರಲು 15 ಬಸ್‌ಗಳ ಸೌಲಭ್ಯವನ್ನು ಉಚಿತವಾಗಿ ಕಲ್ಪಿಸಲಾಗಿದೆ ಎಂದರು. ಇದನ್ನೂ ಓದಿ: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಕ್ಕರೆ ನಾಡು ಸಿದ್ಧ – ʻನುಡಿ ಜಾತ್ರೆಯ ಸ್ವರ ಯಾತ್ರೆʼ

    ಸಮ್ಮೇಳನಕ್ಕೆ ಬಸ್‌ ತಲುಪುವ ಮಾರ್ಗ:
    ಮಾರ್ಗ-1:
    ಮಂಡ್ಯ ಬಸ್ ನಿಲ್ದಾಣದಿಂದ ರೈಲ್ವೆ ನಿಲ್ದಾಣ, ನಂದಾ ಸರ್ಕಲ್, ಫ್ಯಾಕ್ಟರಿ ಸರ್ಕಲ್, ಸ್ವರ್ಣಸಂದ್ರ, ಮಾಂಡವ್ಯ ಕಾಲೇಜ್, ಉಮ್ಮಡಹಳ್ಳಿ ಗೇಟ್, ಹೊಸಬೂದನೂರು ಮಾರ್ಗವಾಗಿ ಸಮ್ಮೇಳನದ ಸ್ಥಳ ತಲುಪಲಿದೆ. ಇದನ್ನೂ ಓದಿ: ಜಮ್ಮು ಕಾಶ್ಮೀರದ ಕಥುವಾದಲ್ಲಿ ಮನೆಗೆ ಬೆಂಕಿ – ಮಾಜಿ ಡಿಎಸ್‌ಪಿ ಸೇರಿ 6 ಮಂದಿ ಸಾವು

    ಮಾರ್ಗ-2:
    ಮಂಡ್ಯ ಬಸ್ ನಿಲ್ದಾಣದಿಂದ ಕೋರ್ಟ್ ನಿಲ್ದಾಣ, ವಿಶ್ವವಿದ್ಯಾಲಯ, ಕಲ್ಲಹಳ್ಳಿ, ವಿ.ವಿ ನಗರ, ಶನೇಶ್ವರ ದೇವಸ್ಥಾನ, ಚಾಮುಂಡೇಶ್ವರಿ ದೇವಸ್ಥಾನ, ಕನ್ನಿಕಾ ಪರಮೇಶ್ವರಿ ದೇವಸ್ಥಾನ, ಕರ್ನಾಟಕ ಬಾರ್ ಸರ್ಕಲ್, ಹೊಸಹಳ್ಳಿ ಸರ್ಕಲ್, ಬೆ.ರಾಮಣ್ಣ ಸರ್ಕಲ್, ಎಂವಿಜಿ ಬೇಕರಿ, ನಂದಾ ಸರ್ಕಲ್, ಫ್ಯಾಕ್ಟರಿ ಸರ್ಕಲ್, ಸ್ವರ್ಣಸಂದ್ರ, ಮಾಂಡವ್ಯ ಕಾಲೇಜ್, ಉಮ್ಮಡಹಳ್ಳಿ ಗೇಟ್, ಹೊಸಬೂದನೂರು ಮಾರ್ಗವಾಗಿ ಸಮ್ಮೇಳನದ ಸ್ಥಳ ತಲುಪಲಿದೆ.

    ಮಾರ್ಗ-3:
    ಹುಣಸೇಮರ, ಕಾಳಿಕಾಂಬ ದೇವಸ್ಥಾನ, ನಂದಾ ಸರ್ಕಲ್, ಫ್ಯಾಕ್ಟರಿ ಸರ್ಕಲ್, ಗುತ್ತಲು ಕಾಲೋನಿ, ಜಯಲಕ್ಷ್ಮಿ ಟಾಕೀಸ್, ಅರಕೇಶ್ವರ ದೇವಸ್ಥಾನ, ಉಮ್ಮಡಹಳ್ಳಿ ಗೇಟ್, ಹೊಸಬೂದನೂರು ಮಾರ್ಗವಾಗಿ ಸಮ್ಮೇಳನದ ಸ್ಥಳ ತಲುಪಲಿದೆ.

    ಮಾರ್ಗ-4:
    ಸತ್ವ ಪಾರ್ಕಿಂಗ್ ಸ್ಥಳದಿಂದ ಉಮ್ಮಡಹಳ್ಳಿ ಗೇಟ್, ಹೊಸಬೂದನೂರು ಮಾರ್ಗವಾಗಿ ಸಮ್ಮೇಳನದ ಸ್ಥಳ ತಲುಪಲಿದೆ. ಜೊತೆಗೆ ಅದೇ ಮಾರ್ಗದಲ್ಲಿ ಬಸ್‌ ವಾಪಸ್ ಆಗಲಿದೆ ಎಂದು ಸಚಿವರು ವಿವರಿಸಿದರು.

  • ಫ್ರೀ ಬಸ್‌ ಹತ್ತಿ 33 ಗಂಟೆ ಸುತ್ತಾಟ – ಹಿಡಿದು ಪೋಷಕರಿಗೊಪ್ಪಿಸಿದ ಪೊಲೀಸರು!

    ಫ್ರೀ ಬಸ್‌ ಹತ್ತಿ 33 ಗಂಟೆ ಸುತ್ತಾಟ – ಹಿಡಿದು ಪೋಷಕರಿಗೊಪ್ಪಿಸಿದ ಪೊಲೀಸರು!

    ಹೈದರಾಬಾದ್‌: ಹಾಸ್ಟೆಲ್‌ಗೆ (Hostel) ಹೋಗುವುದನ್ನು ತಪ್ಪಿಸಿಕೊಳ್ಳುವುದಕ್ಕಾಗಿ 12 ವರ್ಷದ ಬಾಲಕಿಯೊಬ್ಬಳು ಉಚಿತ ಬಸ್ ಸೇವೆ ಬಳಸಿಕೊಂಡು 33 ಗಂಟೆಗಳ ಕಾಲ ಪ್ರಯಾಣ ಮಾಡಿದ ಘಟನೆ ತೆಲಂಗಾಣದಲ್ಲಿ (Telangana) ನಡೆದಿದೆ.

    ಬಾಲಕಿ ತಪ್ಪಿಸಿಕೊಂಡಿರುವುದಾಗಿ ನೀಡಲಾದ ದೂರನ್ನು ಆಧರಿಸಿ ತನಿಖೆ ಆರಂಭಿಸಿದ್ದ ಪೊಲೀಸರು (Police) ಬಾಲಕಿಯನ್ನು ಹೈದರಾಬಾದ್‌ನ (Hyderabad) ಜ್ಯೂಬಿಲಿ ಬಸ್ ನಿಲ್ದಾಣದಲ್ಲಿ ಪತ್ತೆ ಹಚ್ಚಿ ಪೋಷಕರಿಗೆ ಒಪ್ಪಿಸಿದ್ದಾರೆ. ಇದನ್ನೂ ಓದಿ: ಕುಡಿದು ನೃತ್ಯ ಮಾಡುವ ವೇದಿಕೆಯಲ್ಲಿ ಭಗವಂತ ಶಿವನ ಚಿತ್ರ ಬಳಸಿ ಅಪಮಾನ – ಕಾಂಗ್ರೆಸ್‌ನಿಂದ ದೂರು

    ಅಷ್ಟಕ್ಕೂ ನಡೆದಿದ್ದೇನು?
    ವಿದ್ಯಾರಣ್ಯಪುರಿಯ ನಿವಾಸಿಯಾದ ಬಾಲಕಿ ಖಾಸಗಿ ಶಾಲೆಯೊಂದರ ಹಾಸ್ಟೆಲ್ ನಲ್ಲಿದ್ದುಕೊಂಡು 8ನೇ ತರಗತಿಯಲ್ಲಿ ಓದುತ್ತಿದ್ದಾಳೆ. ಕ್ರಿಸ್ಮಸ್ ರಜೆಗಾಗಿ ಪೆದ್ದಪಳ್ಳಿಯಲ್ಲಿರುವ ತಾತನ ಮನೆಗೆ ತೆರಳಿದ್ದಳು. ರಜೆ ಮುಗಿದ ಬಳಿಕ ತಾತನ ಮನೆಯಿಂದ ಹೊರಟ ಬಾಲಕಿ ಹಾಸ್ಟೆಲ್‌ಗೆ ಹೋಗಲು ಇಷ್ಟವಿಲ್ಲದೇ ಒಂದಾದ ಮೇಲೋಂದು ಬಸ್ ಬದಲಾಯಿಸುತ್ತಾ ಸುಮಾರು 33 ಗಂಟೆ ಪ್ರಯಾಣ ಮಾಡಿದ್ದಾಳೆ.

    ಬಸ್ ಹತ್ತಿಸಿದ ಬಳಿಕ ಬಾಲಕಿ ಊರು ತಲುಪಿಲ್ಲ, ಹಾಸ್ಟೆಲ್‌ಗೂ ಸೇರಿಲ್ಲ ಎಂಬುದನ್ನ ತಿಳದು ಆತಂಕಗೊಂಡ ಆಕೆಯ ತಾತ ಪೊಲೀಸರಿಗೆ ದೂರು ನೀಡಿದ್ದಾರೆ. ಬಳಿಕ ಸತತ ಕಾರ್ಯಾಚರಣೆ ನಡೆಸಿದ ಪೊಲೀಸರು ಬಾಲಕಿಯನ್ನು ಪತ್ತೆ ಮಾಡಿ ಪೋಷಕರಿಗೆ ಒಪ್ಪಿಸಿದ್ದಾರೆ. ಇದನ್ನೂ ಓದಿ: ಪ್ರಧಾನಿ ಕಚೇರಿಗೆ ಹೋಗದಂತೆ ತಡೆ; ಕರ್ತವ್ಯ ಪಥದಲ್ಲೇ ಖೇಲ್‌ ರತ್ನ, ಅರ್ಜುನ ಪ್ರಶಸ್ತಿ ಬಿಟ್ಟು ಹೋದ ಕುಸ್ತಿಪಟು

  • ʻಶಕ್ತಿʼ ಪ್ರದರ್ಶನ; ಮತ್ತೊಬ್ಬನ ಮೇಲೇರಿ ಕಿಟಕಿಯಿಂದ ನುಗ್ಗಿ, ಬಸ್‌ನಲ್ಲಿ ಸೀಟು ಗಿಟ್ಟಿಸಿಕೊಂಡ ಮಹಿಳೆ

    ʻಶಕ್ತಿʼ ಪ್ರದರ್ಶನ; ಮತ್ತೊಬ್ಬನ ಮೇಲೇರಿ ಕಿಟಕಿಯಿಂದ ನುಗ್ಗಿ, ಬಸ್‌ನಲ್ಲಿ ಸೀಟು ಗಿಟ್ಟಿಸಿಕೊಂಡ ಮಹಿಳೆ

    ರಾಯಚೂರು: ಇಡೀ ರಾಷ್ಟ್ರದ ಗಮನ ಸೆಳೆದಿದ್ದ ಕಾಂಗ್ರೆಸ್‍ನ ಗ್ಯಾರಂಟಿಗಳಲ್ಲಿ (Congress Guarantee) ಒಂದಾದ ಶಕ್ತಿ ಯೋಜನೆಗೆ (Shakthi Scheme) ಈಗಲೂ ಮಹಿಳಾ ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

    ಕಳೆದ ಆ.29ರ ವರೆಗೆ 48.50 ಕೋಟಿ ಮಹಿಳೆಯರು ಉಚಿತ ಪ್ರಯಾಣ ಮಾಡಿ, ಪ್ರಯೋಜನ ಪಡೆದಿದ್ದಾರೆ. ಆದ್ರೆ ಬಸ್ಸಿನಲ್ಲಿ ಸೀಟಿಗಾಗಿ ಮಹಿಳೆಯರು ಕಿತ್ತಾಡೋದನ್ನ ಮಾತ್ರ ಬಿಟ್ಟಿಲ್ಲ. ರಾಯಚೂರು ಜಿಲ್ಲೆಯ ಲಿಂಗಸುಗೂರು ಬಸ್‌ ನಿಲ್ದಾಣದಲ್ಲಿ ಮಹಿಳೆಯೊಬ್ಬಳು ಸೀಟಿಗಾಗಿ ಹರಸಾಹಸ ನಡೆಸಿದ್ದಾಳೆ.‌ ಕೊನೆಗೆ ಮತ್ತೊಬ್ಬ ವ್ಯಕ್ತಿಯ ಬೆನ್ನಿನ ಮೇಲೆ ಹತ್ತಿ, ಕಿಟಕಿ ಮೂಲಕ ಬಸ್‌ ಏರಿ ಸೀಟು ಗಿಟ್ಟಿಸಿಕೊಂಡಿದ್ದಾಳೆ. ಇದನ್ನೂ ಓದಿ: ಸಂಸದ ಸ್ಥಾನದಿಂದ ಪುತ್ರ ಅನರ್ಹತೆ ಬೆನ್ನಲ್ಲೇ ಶಾಸಕ ಹೆಚ್‌.ಡಿ.ರೇವಣ್ಣಗೆ ಹೈಕೋರ್ಟ್‌ ಸಮನ್ಸ್‌

    ರಾಯಚೂರು-ಬಾಗಲಕೋಟೆ ಮಾರ್ಗದ ಬಸ್ ಹತ್ತಲು ಬಂದಿದ್ದ ಮಹಿಳೆ ಮುಂಭಾಗದ ಡೋರ್‌ನಲ್ಲಿ ರಶ್‌ ಆಗಿದ್ದನ್ನ ಕಂಡಿದ್ದಾಳೆ. ಹಾಗಾಗಿ ಕಿಟಕಿ ಮೂಲಕ ಬ್ಯಾಗನ್ನು ಒಳಗೆ ತೂರಿಸಿ ಸೀಟು ಹಿಡಿಯಲು ಮುಂದಾಗಿದ್ದಾಳೆ. ಮತ್ತೊಬ್ಬ ವ್ಯಕ್ತಿಯ ಬೆನ್ನಿನ ಮೇಲೆ ನಿಂತು ಕಿಟಕಿ ಮೂಲಕ ನುಗ್ಗಿದ್ದಾಳೆ. ಈ ವೇಳೆ ಕೆಲ ಕಾಲ ಕಿಟಕಿಯಲ್ಲೇ ಸಿಕ್ಕಿಕೊಂಡು ಪರದಾಟ ಸಹ ನಡೆಸಿದ್ದಾಳೆ. ಈ ಹಾಸ್ಯಾಸ್ಪದ ದೃಶ್ಯ ಇದೀಗ ಜಾಲತಾಣದಲ್ಲಿ ಸಖತ್‌ ಸದ್ದು ಮಾಡ್ತಿದೆ. ಇದನ್ನೂ ಓದಿ: ʻಗೃಹಲಕ್ಷ್ಮಿʼ ಯೋಜನೆಗೆ ಅದ್ಧೂರಿ ಚಾಲನೆ – ನುಡಿದಂತೆ ನಡೆದಿದ್ದೇವೆ, ಕರ್ನಾಟಕ ದಿವಾಳಿಯಾಗಿಲ್ಲ ಮೋದಿಯವರೇ: ಸಿಎಂ

    Web Stories

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮಹಿಳಾ ಶಕ್ತಿಗೆ ಜಗ್ಗಲಿಲ್ಲ- ಫ್ರೀ ಬಸ್‍ನಲ್ಲಿ ಪುರುಷ ಪ್ರಯಾಣಿಕರ ಸಂಖ್ಯೆ 13 ಲಕ್ಷಕ್ಕೆ ಏರಿಕೆ

    ಮಹಿಳಾ ಶಕ್ತಿಗೆ ಜಗ್ಗಲಿಲ್ಲ- ಫ್ರೀ ಬಸ್‍ನಲ್ಲಿ ಪುರುಷ ಪ್ರಯಾಣಿಕರ ಸಂಖ್ಯೆ 13 ಲಕ್ಷಕ್ಕೆ ಏರಿಕೆ

    ಬೆಂಗಳೂರು: ಶಕ್ತಿ ಯೋಜನೆ (Shakthi Scheme) ಜಾರಿಯಾಗಿ ಇಂದಿಗೆ 22 ದಿನ. ಇಲ್ಲಿಯವರೆಗೂ ಉಚಿತವಾಗಿ 10 ಕೋಟಿಗೂ ಅಧಿಕ ಮಹಿಳೆಯರು ಉಚಿತ ಓಡಾಟ ಮಾಡಿದ್ದಾರೆ. ಈ ನಡುವೆ ಮಹಿಳೆಯರಿಗೆ ಉಚಿತ ನೀಡಿದ ಕಾರಣ ಪುರಷ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಬಹುದು ಅನ್ನೋ ಮಾತುಗಳಿದ್ದವು. ಆದರೆ ದೈನಂದಿನ ಓಡಾಟ ಮಾಡುತ್ತಿದ್ದ ಪುರುಷರ ಸಂಖ್ಯೆಗಿಂತಲೂ ಹೆಚ್ಚು ಪುರುಷರು ಪ್ರಯಾಣ ಮಾಡ್ತಿದ್ದಾರೆ. ಇಷ್ಟೇ ಅಲ್ಲದೆ ಸಾರಿಗೆ ಬಸ್ ನಲ್ಲಿ ಪುರುಷರ ಓಡಾಟದಿಂದ ಬರ್ತಿರುವ ಆದಾಯವೂ ಡಬಲ್ ಆಗಿರೋದು ಮತ್ತೊಂದು ವಿಶೇಷ.

    ಶಕ್ತಿಯೋಜನೆ ಜಾರಿಗೂ ಮುನ್ನ ನಿತ್ಯ 42 ಲಕ್ಷ ಪುರುಷರು ಸಾರಿಗೆ ಬಸ್‍ನಲ್ಲಿ (Male Passengers In Govt Bus) ಸಂಚರಿಸುತ್ತಿದ್ದರು. ಆದರೆ ಶಕ್ತಿ ಯೋಜನೆ ಜಾರಿ ಬಳಿಕ ನಿತ್ಯ ಸರಾಸರಿ 55 ಲಕ್ಷ ಪುರುಷರ ಓಡಾಟ ಜಾಸ್ತಿಯಾಗಿದೆ. ಅಂದರೆ ದಿನಕ್ಕೆ ಸರಾಸರಿ 13 ಲಕ್ಷ ಹೆಚ್ಚಳವಾಗಿದ್ದು, ಗಮನಾರ್ಹ ಬೆಳವಣಿಕೆ. ಇದಕ್ಕೆ ಕಾರಣ ಕುಟುಂಬದವರು ಒಟ್ಟಾಗಿ ಪ್ರಯಾಣ ಮಾಡುವಾಗ ಮಹಿಳೆಯರಿಗೆ ಹೇಗೂ ಉಚಿತ ಅಂತ ಸಾರಿಗೆ ಬಸ್‍ನಲ್ಲಿ ಹೋಗ್ತಿದ್ದಾರೆ. ರಶ್ ಆದ್ರೂ ಏನು ಮಾಡೋಕೆ ಆಗದೇ ಅಡ್ಜೆಸ್ಟ್ ಮಾಡಿಕೊಂಡು ಅದೇ ಬಸ್ ನಲ್ಲಿ ಓಡಾಟ ಮಾಡ್ತಿದ್ದಾರೆ. ಇನ್ನೂ ಕೆಲವರು ಕಷ್ಟವಾದ್ರು ಸಾಮಾನ್ಯವಾಗಿ ದಿನನಿತ್ಯದಂತೆ ಸರ್ಕಾರಿ ಬಸ್‍ಗಳನ್ನೆ ಬಳಕೆ ಮಾಡುವವರು ಅದನ್ನೆ ಮುಂದುವರಿಸಿದ್ದಾರೆ. ಈ ಎಲ್ಲಾ ಕಾರಣಕ್ಕೆ ಸದ್ಯ ಪುರುಷ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತಿದೆ.

    ಪುರುಷ ಪ್ರಯಾಣಿಕರ ಓಡಾಟ ಸಂಖ್ಯೆ ಹೆಚ್ಚಾದಂತೆ ಆದಾಯ ಕೂಡ ಹೆಚ್ಚಾಗಿದೆ. ಸಾರಿಗೆ ಸಂಸ್ಥೆಗೆ ಕಳೆದ 19 ದಿನದಲ್ಲಿ ಪುರುಷರ ಪ್ರಯಾಣದಿಂದ 302 ಕೋಟಿ ಆದಾಯ ಹರಿದು ಬಂದಿದೆ. ಶಕ್ತಿ ಯೋಜನೆ ಜಾರಿಗೂ ಮುನ್ನ ನಿತ್ಯ 24.48 ಕೋಟಿ ಆದಾಯ ಬರುತ್ತಿತ್ತು. ಆಗ ಪುರುಷರ ಓಡಾಟದಿಂದ ಸಾರಿಗೆ ಸಂಸ್ಥೆಗೆ 12 ಕೋಟಿ ಆದಾಯ ಬರುತ್ತಿತ್ತು. ಈಗ 16.87 ಕೋಟಿ ಗೆ ಗಂಡಸರ ಸಂಚಾರದ ಆದಾಯ ಹೆಚ್ಚಾಗಿದೆ. ಒಟ್ಟಾರೆ ಒತ್ತಡ, ರಶ್, ಗಲಾಟೆ ಗದ್ದಲ ನಡುವೆಯೂ ಹೆಚ್ಚಿನ ಪುರುಷರು ಸಾರಿಗೆ ಬಸ್ ನಲ್ಲಿ ಓಡಾಡಿ, ನಿಗಮಗಳಿಗೆ ಇನ್ನಷ್ಟು ಲಾಭ ಹೆಚ್ಚಿಸಿರೋದು ನಿಜಕ್ಕೂ ವಿಶೇಷವೇ ಸರಿ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]