Tag: Free

  • ರೈತರಿಗೆ ಉಚಿತ ಟ್ರ್ಯಾಕ್ಟರ್ ಘೋಷಿಸಿದ ನಟ

    ರೈತರಿಗೆ ಉಚಿತ ಟ್ರ್ಯಾಕ್ಟರ್ ಘೋಷಿಸಿದ ನಟ

    ಗಾಗಲೇ ಸಾಕಷ್ಟು ಬಾರಿ ಅಶಕ್ತರ ನೆರವಿಗೆ ನಿಂತಿರುವ ನಟ, ನಿರ್ಮಾಪಕ, ನಿರ್ದೇಶಕ ರಾಘವ್ ಲಾರೆನ್ಸ್ (Raghav Lawrence), ಈಗ ರೈತರ ಸಹಾಯಕ್ಕೆ ಹಸ್ತ ಚಾಚಿದ್ದಾರೆ. ಮೇ 1ರಂದು ಕಾರ್ಮಿಕ ದಿನಾಚರಣೆಯ ದಿನದಂದು ರೈತರಿಗೆ ಟ್ರ್ಯಾಕ್ಟರ್ (Tractor) ಅನ್ನು ಉಚಿತ ಕೊಡುವುದಾಗಿ ಅವರು ಘೋಷಣೆ ಮಾಡಿದ್ದಾರೆ.

    ಸೋಷಿಯಲ್ ಮೀಡಿಯಾದಲ್ಲಿ ಈ ಕುರಿತಂತೆ ಪೋಸ್ಟ್ ಮಾಡಿರುವ ರಾಘವ್ ಲಾರೆನ್ಸ್, ರೈತರಿಗೆ ಉಚಿತವಾಗಿ 10 ಟ್ರ್ಯಾಕ್ಟರ್ ಗಳನ್ನು ಕೊಡಲು ಮುಂದಾಗಿರುವೆ. ಇದಕ್ಕೆ ನಿಮ್ಮೆಲ್ಲರ ಸಹಕಾರ ಬೇಕು. ರೈತರ ಕಣ್ಣಲ್ಲಿ ನಾನು ಆನಂದವನ್ನು ಕಾಣಲು ಬಯಸಿದ್ದೇನೆ ಎಂದು ಅವರು ಹೇಳಿಕೊಂಡಿದ್ದಾರೆ.

     

    ರೈತರಿಗೆ ಟ್ರ್ಯಾಕ್ಟರ್ ಘೋಷಣೆ ಮಾಡಿರುವ ರಾಘವ್ ಬಗ್ಗೆ ಸಾಕಷ್ಟು ಮೆಚ್ಚುಗೆಯ ಮಾತುಗಳು ಕೇಳಿ ಬಂದಿವೆ. ನಿಮ್ಮೊಂದಿಗೆ ಸದಾ ನಾವಿರುತ್ತೇವೆ. ಈ ಸೇವೆ ನಿರಂತರವಾಗಿರಲಿ ಎಂದು ಅವರ ಅಭಿಮಾನಿಗಳು ಹಾರೈಸಿದ್ದಾರೆ.  ಅಲ್ಲದೇ, ರೈತರ ನೆರವಿಗೆ ಹೀಗೆ ಎಲ್ಲರೂ ಬರಲಿ ಎಂದು ಮನವಿ ಮಾಡಿಕೊಂಡಿದ್ದಾರೆ.

  • ಆಲ್ ಓಕೆ ಅಲೋಕ್ ಜೊತೆ ಕೈ ಜೋಡಿಸಿದ ಕ್ರೇಜಿಸ್ಟಾರ್ ರವಿಚಂದ್ರನ್

    ಆಲ್ ಓಕೆ ಅಲೋಕ್ ಜೊತೆ ಕೈ ಜೋಡಿಸಿದ ಕ್ರೇಜಿಸ್ಟಾರ್ ರವಿಚಂದ್ರನ್

    ವಿಶಿಷ್ಟ ಹಾಡುಗಳ ಮೂಲಕ ಕನ್ನಡಿಗರನ್ನು ಮೋಡಿ ಮಾಡಿರುವ ಗಾಯಕ ಆಲ್ ಓಕೆ ಅಲೋಕ್ (All OK Alok), ಇದೀಗ ಮತ್ತೊಂದು ಆಲ್ಬಂ ಮಾಡಲು ತಯಾರಿ ಮಾಡಿಕೊಂಡಿದ್ದಾರೆ. ಈಗಾಗಲೇ ಸಿಂಗಪೂರ್ ದ ಯೂನಿರ್ವಸಲ್ ಸ್ಟುಡಿಯೋದಲ್ಲಿ ತಮ್ಮ ಹಾಡುಗಳನ್ನು ಶೂಟ್ ಮಾಡಿದ್ದು, ಅದರಲ್ಲಿ ರವಿಚಂದ್ರನ್ ಕೂಡ ಇರಲಿದ್ದಾರೆ. ಈ ಹಾಡಿನಲ್ಲಿ ಕ್ರೇಜಿಸ್ಟಾರ್ (Ravichandran) ವಿಶೇಷ ಸಾಲುಗಳಲ್ಲಿ ಬಂದು ಹೋಗುತ್ತಾರೆ.

    ಈ ಆಲ್ಬಂಗೆ ‘ಫ್ರಿ’ (Free) ಎಂದು ಹೆಸರಿಟ್ಟಿದ್ದು ಮೈಂಡ್ ಫ್ರಿ ಮಾಡಿಕೊಳ್ಳಿ ಎನ್ನುವ ಅರ್ಥದಲ್ಲಿ ಈ ಆಲ್ಬಂ ಸಿದ್ದವಾಗುತ್ತಿದೆಯಂತೆ. ನಿತ್ಯದ ಜಂಜಡಗಳನ್ನು ಮರೆತು, ಮೈಂಡ್ ಫ್ರಿಯಾಗಿ ಇಟ್ಟುಕೊಳ್ಳುವಂತಹ ಸಂದೇಶವನ್ನು ಈ ಆಲ್ಬಂ (Album) ಸಾರಲಿದೆ. ಅದಕ್ಕೆ ಹೊಂದುವಂತಹ ಸಾಹಿತ್ಯವನ್ನು ಆ ಹಾಡಿಗಾಗಿ ಬಳಸಿದ್ದಾರಂತೆ ಆಲೋಕ್. ಇದನ್ನೂ ಓದಿ:ಎರಡೇ ಎರಡು ದಿನ ವೇಟ್ ಮಾಡಿ ಪ್ಲೀಸ್: ನಟ ಅನಿರುದ್ಧ ಮನವಿ

    ಈ ಹಾಡಿನಲ್ಲಿ ‘ಏಕಾಂಗಿ ಬಾಳೆ ಬೆಸ್ಟು ಹಾಯಾಗಿರು’ ಎನ್ನುವ ಸಾಲುಗಳು ಬರುತ್ತವೆಯಂತೆ. ಈ ಸಾಲುಗಳನ್ನು ಕ್ರೇಜಿಸ್ಟಾರ್ ರವಿಚಂದ್ರನ್ ಹೇಳಲಿದ್ದಾರೆ ಎನ್ನುವುದು ಅಲೋಕ್ ಮಾತು. ಈ ಮಾತನ್ನು ಅವರಿಂದ ಹೇಳಿಸಿದರೆ ಹೆಚ್ಚು ಜನರಿಗೆ ತಲುಪಿಸಲು ಸಾಧ್ಯ ಎನ್ನುವ ಕಾರಣಕ್ಕಾಗಿ ರವಿಚಂದ್ರನ್ ಅವರನ್ನು ಕೇಳಿದ್ದರಂತೆ ಅಲೋಕ್. ರವಿಮಾಮ ಕೂಡ ಓಕೆ ಅಂದಿರುವುದು ವಿಶೇಷ.

     

    ಈ ಆಲ್ಬಂನ ಮತ್ತೊಂದು ವಿಶೇಷ ಅಂದರೆ, ಸಿಂಗಪೂರ್ ದ ಯೂನಿರ್ವಸಲ್ ಸ್ಟುಡಿಯೋದಲ್ಲಿ ತಯಾರಾದ ಕನ್ನಡದ ಮೊದಲ ಆಲ್ಬಂ ಇದಾಗಿದೆ. ಈ ಹಾಡಿಗೆ ಅದೇ ಲೋಕೇಷನ್ ಬೇಕಾಗಿದ್ದರಿಂದ ಅಲ್ಲಿಗೆ ಹೋಗಿ ಚಿತ್ರೀಕರಿಸಲಾಗಿದೆ ಎನ್ನುವುದು ತಂಡದ ಅಭಿಪ್ರಾಯ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬಾಡಿಗೆದಾರರೇ ನಿಮಗೆ ಉಚಿತ ವಿದ್ಯುತ್‌ ಬೇಕೇ – ಷರತ್ತುಗಳನ್ನು ಪೂರ್ಣಗೊಳಿಸಿದ್ರೆ ಮಾತ್ರ ಫ್ರೀ

    ಬಾಡಿಗೆದಾರರೇ ನಿಮಗೆ ಉಚಿತ ವಿದ್ಯುತ್‌ ಬೇಕೇ – ಷರತ್ತುಗಳನ್ನು ಪೂರ್ಣಗೊಳಿಸಿದ್ರೆ ಮಾತ್ರ ಫ್ರೀ

    ಬೆಂಗಳೂರು: 200 ಯೂನಿಟ್‌ ಉಚಿತ ವಿದ್ಯುತ್‌ (Free Power) ನೀಡುವ ಗೃಹಜ್ಯೋತಿ (Grihajyothi) ಯೋಜನೆಯಲ್ಲಿ ಹಲವು ಗೊಂದಲಗಳು ಸೃಷ್ಟಿಯಾದ ಹಿನ್ನೆಲೆಯಲ್ಲಿ ಕಾಂಗ್ರೆಸ್‌ (Congress) ಈಗ ಅದನ್ನು ಸರಿಪಡಿಸಲು ಮುಂದಾಗಿದೆ.

    ಸ್ವಂತ ಮನೆಯವರಿಗೆ ಹೇಗೆ?
    ಆರ್.ಆರ್. ನಂಬರ್‌ನೊಂದಿಗೆ ಆಧಾರ್ (Aadhar) ಲಿಂಕ್ ಮಾಡಬೇಕು. ಒಂದಕ್ಕಿಂತ ಹೆಚ್ಚು ಮನೆಯಿದ್ದರೆ ಒಂದು ಮನೆಗೆ ಮಾತ್ರ ಅವಕಾಶ. ಎರಡು ಮೀಟರ್ ಹೊಂದಿದ್ದರೆ ಯಾವುದಾದರೂ ಒಂದಕ್ಕೆ ಮಾತ್ರ ಉಚಿತ ವಿದ್ಯುತ್‌ ಸಿಗಲಿದೆ.  ಇದನ್ನೂ ಓದಿ: Aadhaar Card: ಉಚಿತವಾಗಿ ನಿಮ್ಮ ಆಧಾರ್‌ ವಿವರ ಅಪ್ಡೇಟ್‌ ಮಾಡಿಸಲು ಇನ್ನು 8 ದಿನವಷ್ಟೇ ಬಾಕಿ

    ಬಾಡಿಗೆದಾರರಿಗೆ ಹೇಗೆ?
    ವಾಸವಿರುವ ಮನೆಯ ಆರ್‌.ಆರ್‌. ಸಂಖ್ಯೆಯೊಂದಿಗೆ ತಮ್ಮ ಆಧಾರ್ ಲಿಂಕ್ ಮಾಡಬೇಕು. ಇದಕ್ಕೆ ಬಾಡಿಗೆ ಮನೆಯ ಕರಾರು ಪತ್ರವನ್ನು ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಬೇಕು. ಈ ಒಂದು ದಾಖಲೆಯನ್ನು ಒಂದು ಮೀಟರ್‌ನೊಂದಿಗೆ ಮಾತ್ರ ಲಿಂಕ್ ಮಾಡಲು ಅವಕಾಶ. ಮನೆ ಬದಲಾಯಿಸಿದರೆ, ಹಿಂದಿನ ಮನೆಯ ಮೀಟರ್‌ನೊಂದಿಗಿನ ಲಿಂಕ್ ತಗೆಯಬೇಕು. ಹೊಸ ಬಾಡಿಗೆ ಮನೆಯ ಆರ್.ಆರ್. ನಂಬರ್ ಮತ್ತು ಆಧಾರ್ ಕಾರ್ಡ್ ಪುನಃ ಲಿಂಕ್ ಮಾಡಬೇಕು.

    ಉಚಿತ ವಿದ್ಯುತ್‌ ಹೇಗೆ?
    ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದಂತೆ 200 ಯೂನಿಟ್‌‌ ಉಚಿತ ವಿದ್ಯುತ್‌ ಅನ್ನು ಪೂರ್ಣವಾಗಿ ಜಾರಿ ಮಾಡುತ್ತಿಲ್ಲ. ದುರ್ಬಳಕೆ ತಡೆಯಲು ಒಂದು ವರ್ಷದ ಸರಾಸರಿ ಬಳಕೆ ಲೆಕ್ಕ ಹಾಕಲಾಗುತ್ತದೆ. ಸರಾಸರಿ ವಿದ್ಯುತ್ ಬಳಕೆಯ 10% ರಷ್ಟು ಹೆಚ್ಚು ಬಳಸಲು ಅವಕಾಶವಿದೆ. ಜುಲೈ ತಿಂಗಳಿನಿಂದ ಈ ಯೋಜನೆ ಜಾರಿಯಾಗಲಿದ್ದು, ಆಗಸ್ಟ್ ತಿಂಗಳಿನಿಂದ ವಿದ್ಯುತ್‌ ಬಿಲ್‌ ಪಾವತಿಸುವ ಅಗತ್ಯವಿಲ್ಲ. ಎಪಿಎಲ್, ಬಿಪಿಎಲ್ ಎಂಬ ಬೇಧಭಾವ ಇಲ್ಲ. ಆದರೆ ಗೃಹ ಬಳಕೆಗೆ ಮಾತ್ರ ಈ ಯೋಜನೆ ಅನ್ವಯವಾಗುತ್ತದೆ.


    ಹೆಚ್ಚು ವಿದ್ಯುತ್ ಬಳಸಿದ್ರೆ ಬಿಲ್‌ ಪಾವತಿಸಬೇಕು
    12 ತಿಂಗಳ ವಿದ್ಯುತ್ ಬಿಲ್‍ನ ಸರಾಸರಿ ಪರಿಗಣಿಸಿ ಹೆಚ್ಚುವರಿಯಾಗಿ 10% ರಷ್ಟು ಬಳಸಲು ಅವಕಾಶವಿದೆ. ಉದಾಹರಣೆಗೆ ಸರಾಸರಿ 100 ಯೂನಿಟ್ ಬಳಸಿದ್ದಲ್ಲಿ ಅಂದಾಜು 110 ಯೂನಿಟ್‍ವರೆಗೆ ಬಳಸಬಹುದು. 110 ಯೂನಿಟ್‍ಗಿಂತ ಜಾಸ್ತಿ ಬಳಸಿದ್ರೆ ಬಿಲ್ ಕಟ್ಟಬೇಕಾಗುತ್ತದೆ.

  • 12 ವರ್ಷದೊಳಗಿನ ಮಕ್ಕಳಿಗೆ ಉಚಿತ ಬಸ್ ಪ್ರಯಾಣ: TSRTC ಸಾರಿಗೆ ಸಂಸ್ಥೆ

    12 ವರ್ಷದೊಳಗಿನ ಮಕ್ಕಳಿಗೆ ಉಚಿತ ಬಸ್ ಪ್ರಯಾಣ: TSRTC ಸಾರಿಗೆ ಸಂಸ್ಥೆ

    ಹೈದರಾಬಾದ್: 12 ವರ್ಷದೊಳಗಿನ ಮಕ್ಕಳಿಗೆ ಉಚಿತ ಬಸ್‌ ಪ್ರಯಾಣ ಸೌಲಭ್ಯ ನೀಡಲಾಗುವುದೆಂದು ತೆಲಂಗಾಣ ಸಾರಿಗೆ ಇಲಾಖೆ ಘೋಷಿಸಿದೆ.

    ಟಿಎಸ್‍ಆರ್‌ಟಿಸಿ(Telangana State Road Transport Corporation) ಕೇಂದ್ರ ಕಚೇರಿಯ ಬಸ್ ಭವನದಲ್ಲಿ ನಡೆದ ಹೊಸ ವರ್ಷಾಚರಣೆ ಕಾರ್ಯಕ್ರಮದಲ್ಲಿ ಟಿಎಸ್‍ಆರ್‌ಟಿಸಿ(TSRTC) ಅಧ್ಯಕ್ಷ ಬಾಜಿರೆಡ್ಡಿ ನೂತನ ಸವಲತ್ತನ್ನು ಘೋಷಿಸಿದರು. ತಮ್ಮ ಪೋಷಕರೊಂದಿಗೆ ಪ್ರಯಾಣಿಸುವ ಮಕ್ಕಳಿಗೆ ಈ ಅವಕಾಶವನ್ನು ನೀಡಲಾಗುತ್ತಿದೆ. 12 ವರ್ಷದ ಒಳಗಿನ ಮಕ್ಕಳು ಉಚಿತವಾಗಿ ಬಸ್‍ನಲ್ಲಿ ಪ್ರಯಾಣಿಸಬಹುದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ:  ಮೊದಲ ಮಗುವಿನ ನಿರೀಕ್ಷೆಯಲ್ಲಿ ಸಂಜನಾ ಗಲ್ರಾನಿ

    ಹಂತ ಹಂತವಾಗಿ ಟಿಎಸ್‍ಆರ್‌ಟಿಸಿ ಆದಾಯ ಹೆಚ್ಚಿಸಿಕೊಳ್ಳುವತ್ತ ತಾವು ಗಮನಹರಿಸಿಸಲಾಗುತ್ತದೆ. ಸಂಕ್ರಾಂತಿ, ಹಬ್ಬದ ವಿಶೇಷ ಬಸ್‍ಗಳಲ್ಲಿ ಸಾಮಾನ್ಯ ದರವನ್ನು ಮಾತ್ರ ವಿಧಿಸಲು ನಿರ್ಧರಿಸಲಾಗಿದೆ. ಇದರೊಂದಿಗೆ, ನಿರೀಕ್ಷಿತ ಮಟ್ಟದಲ್ಲಿ ಆದಾಯವನ್ನು ಹೆಚ್ಚಿಸಲು ಸಾಧ್ಯವಿದೆ ಎಂದು ಅವರು ಹೇಳಿದರು. ಇದನ್ನೂ ಓದಿ: ಕುಟುಂಬಕ್ಕೆ ಹೊಸ ಅತಿಥಿಯ ಆಗಮನದ ನೀರಿಕ್ಷೆಯಲ್ಲಿದ್ದಾರೆ ಕಾಜಲ್ ಅಗರ್ವಾಲ್

  • ವಿಶ್ವ ಹಾಲು ದಿನಾಚರಣೆ- ನಂದಿನಿ ಹಾಲು ಉಚಿತ

    ವಿಶ್ವ ಹಾಲು ದಿನಾಚರಣೆ- ನಂದಿನಿ ಹಾಲು ಉಚಿತ

    ಹಾವೇರಿ: ಹೆಚ್ಚು ಹಾಲು ಕುಡಿಯಿರಿ ಅಭಿಯಾನದೊಂದಿಗೆ ಜೂನ್ 1ರಂದು ರಂದು ವಿಶ್ವ ಹಾಲು ದಿನಾಚರಣೆಯ ಕಾರ್ಯಕ್ರಮದೊಂದಿಗೆ ಹಾಲನ್ನು ಉಚಿತವಾಗಿ ಗ್ರಾಹಕರಿಗೆ ಪೂರೈಸಲಿದೆ ಎಂದು ಉತ್ತರ ಕನ್ನಡ ಜಿಲ್ಲಾ ಸಹಕಾರಿ ಹಾಲು ಒಕ್ಕೂಟದ ಅಧ್ಯಕ್ಷ ಬಸವರಾಜ ಅರಬಗೊಂಡ ತಿಳಿಸಿದ್ದಾರೆ.

    ಲಾಕ್‍ಡೌನ್ ಅವಧಿಯಲ್ಲಿ ಸಾರ್ವಜನಿಕರ ಆರೋಗ್ಯ ವೃದ್ಧಿಸಲು ಮತ್ತು ವೈದ್ಯರ ಸಲಹೆಯಂತೆ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಹೆಚ್ಚು ಹಾಲು ಕುಡಿಯಿರಿ ಅಭಿಯಾನದೊಂದಿಗೆ ಉಚಿತ ಹಾಲನ್ನು ನೀಡಲಾಗುತ್ತಿದೆ. ಜೂನ್ 1 ರಂದು ರಂದು ವಿಶ್ವ ಹಾಲು ದಿನಾಚರಣೆಯ ಕಾರ್ಯಕ್ರಮದೊಂದಿಗೆ ಜೂನ್ 2021ರ ಸಂಪೂರ್ಣ ಮಾಹೆಯಲ್ಲಿ ಎಲ್ಲಾ ಮಾದರಿಯ ನಂದಿನ 500 ಮಿಲಿ ಮತ್ತು 1000 ಮಿಲಿ ಪ್ಯಾಕಗಳಲ್ಲಿ ತಲಾ 20 ಹಾಗೂ 40 ಮಿಲಿ ಹೆಚ್ಚುವರಿ ಹಾಲನ್ನು ಉಚಿತವಾಗಿ ಗ್ರಾಹಕರಿಗೆ ಪೂರೈಸುವ ಯೋಜನೆಯನ್ನು ಜಾರಿಗೊಳಿಲಾಗಿದೆ ಎಂದು ಧಾರವಾಡ, ಹಾವೇರಿ, ಗದಗ ಮತ್ತು ಉತ್ತರ ಕನ್ನಡ ಜಿಲ್ಲಾ ಸಹಕಾರಿ ಹಾಲು ಒಕ್ಕೂಟದ ಅಧ್ಯಕ್ಷ ಬಸವರಾಜ ಅರಬಗೊಂಡ ಅವರು ತಿಳಿಸಿದ್ದಾರೆ.

    ಲಾಕ್‍ಡೌನ್ ಅವಧಿಯಲ್ಲಿ ನಂದಿನಿ, 500 ಮಿಲಿ ಮತ್ತು 1000 ಮಿಲಿ ಪ್ಯಾಕಗಳಲ್ಲಿ ತಲಾ 20 ಹಾಗೂ 40 ಮಿಲಿ ಹೆಚ್ಚುವರಿ ಹಾಲನ್ನು ಉಚಿತವಾಗಿ ಗ್ರಾಹಕರಿಗೆ ಪೂರೈಸುವ ಯೋಜನೆಯ ಸದುಪಯೋಗವನ್ನು ಗ್ರಾಹಕರು ಸದ್ಬಳಕೆಮಾಡಿಕೊಳ್ಳಲು ಕೋರಲಾಗಿದೆ. ಇದನ್ನೂ ಓದಿ: 5ಜಿ ನೆಟ್‍ವರ್ಕ್ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ಜೂಹಿ ಚಾವ್ಲಾ

    ಧಾರವಾಡ ಹಾಲು ಒಕ್ಕೂಟವು ಧಾರವಾಡ, ಹಾವೇರಿ, ಗದಗ, ಮತ್ತು ಉತ್ತರಕನ್ನಡ ಜಿಲ್ಲಾ ವ್ಯಾಪ್ತಿಯಲ್ಲಿ ವಿಸ್ತರಿಸಿದ್ದು, ಅಲ್ಲಿಯ ಹಾಲು ಉತ್ಪಾದಕರಿಂದ ಸಂಗ್ರಹಿಸಿದ ಹಾಲನ್ನು ಅತ್ಯಾಧುನಿಕ ಯಂತ್ರಗಳಿಂದ ಸಂಸ್ಕರಿಸಿ ಕರ್ನಾಟಕ ರಾಜ್ಯಾದಂತ ಮನೆ ಮಾತಾಗಿರುವ ನಂದಿನಿ ಬ್ರಾಂಡಿನ ಅಡಿಯಲ್ಲಿ ಹಾಲು ಹಾಗೂ ಹಾಲಿನ ಉತ್ಪನ್ನಗಳನ್ನು ಗ್ರಾಹಕರಿಗೆ ನಿರಂತರವಾಗಿ ಪೂರೈಸಲಾಗುತ್ತಿದೆ. ಇದನ್ನೂ ಓದಿ: ಪ್ರಣೀತಾ ಮದುವೆಗೆ ವಿಶ್ ಮಾಡಿದ ರಮ್ಯಾಗೆ ಅಭಿಮಾನಿಗಳ ಪ್ರಶ್ನೆ ನಿಮ್ದು ಯಾವಾಗ..?

    ಪ್ರಸ್ತುತ ಒಕ್ಕೂಟದ ವ್ಯಾಪ್ತಿಯಲ್ಲಿ 998 ಕಾರ್ಯನಿರತ ಹಾಲು ಉತ್ಪಾದಕರ ಸಹಕಾರಿ ಸಂಘಗಳು ಕಾರ್ಯನಿರ್ವಹಣೆಯಲ್ಲಿದ್ದು, ದಿನವಹಿ ಸರಾಸರಿ 25 ಲಕ್ಷ ಲೀಟರ್ ಹಾಲು ಶೇಖರಣೆಯೊಂದಿಗೆ ದಿನವಹಿ ಸರಾಸರಿ 1.05 ಲಕ್ಷ ಲೀಟರ್ ಹಾಲು, 10 ಸಾವಿರ ಕೇಜಿ ಮೊಸರು, ಮಜ್ಜಿಗೆ, ಲಸ್ಸಿ ಮತ್ತು ನಂದಿನಿಯ 85 ಕ್ಕಿಂತ ಹೆಚ್ಚಿನ ಸಂಖ್ಯೆಯ ವಿವಿಧ ನಮೂನೆಯ ಹಾಲಿನ ಉತ್ಪನ್ನಗಳನ್ನು ಗ್ರಾಹಕರಿಗೆ ಪೂರೈಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

  • ಕೊರೊನಾದಿಂದ ಅನಾಥರಾದ 50 ಮಕ್ಕಳಿಗೆ ಫ್ರೀ ಎಜುಕೇಶನ್ – ಗುರುಕುಲ ರೆಸಿಡೆನ್ಸಿಯಲ್

    ಕೊರೊನಾದಿಂದ ಅನಾಥರಾದ 50 ಮಕ್ಕಳಿಗೆ ಫ್ರೀ ಎಜುಕೇಶನ್ – ಗುರುಕುಲ ರೆಸಿಡೆನ್ಸಿಯಲ್

    ದಾವಣಗೆರೆ: ಕೊರೊನಾ ಬಂದು ತಂದೆ-ತಾಯಿಯನ್ನು ಕಳೆದುಕೊಂಡ ಮಕ್ಕಳ ಪಾಡು ಹೇಳತೀರದು. ಅಂತಹ ಮಕ್ಕಳಿಗೆ ಉಚಿತವಾಗಿ ಶಿಕ್ಷಣವನ್ನು ನೀಡಲು ದಾವಣಗೆರೆಯಲ್ಲಿ ನಿಜಲಿಂಗಪ್ಪ ಬಡಾವಣೆಯಲ್ಲಿರುವ ಗುರುಕುಲ ರೆಸಿಡೆನ್ಸಿಯಲ್ ಶಾಲೆ ಮುಂದಾಗಿದೆ.

    ರಾಜ್ಯದಲ್ಲಿ ಕೋವಿಡ್ ಸೋಂಕಿನಿಂದ ತಂದೆ-ತಾಯಿಯನ್ನು ಕಳೆದುಕೊಂಡ ಸಾಕಷ್ಟು ಮಕ್ಕಳಿದ್ದಾರೆ. ಮಕ್ಕಳ ಮುಂದಿನ ಭವಿಷ್ಯದ ದೃಷ್ಟಿಯಿಂದ ಶಾಲಾ ಅಡಳಿತ ಮಂಡಳಿಯವರಾದ ನಸ್ರಿನ್ ಖಾನ್ ಹಾಗೂ ಅಬ್ದುಲ್ ಎನ್ನುವರು ಈ ನಿರ್ಧಾರ ಮಾಡಿದ್ದು, ಕೋವಿಡ್ ನಿಂದ ತಂದೆ ತಾಯಿ ಕಳೆದುಕೊಂಡ ಮಕ್ಕಳಿಗೆ ಉಚಿತ ಶಿಕ್ಷಣ ನೀಡಲಾಗುತ್ತದೆ.

    ಕೇವಲ ಯೂನಿಫಾರ್ಮ್, ಹಾಗೂ ಪುಸ್ತಕಗಳನ್ನು ಮಾತ್ರ ಕೊಂಡುಕೊಳ್ಳಲಿ ಉಳಿದ ಎಲ್ಲಾ ಶುಲ್ಕವನ್ನು ಶಾಲೆಯೇ ಭರಿಸುತ್ತಿದರ ಎಂದು ಶಾಲಾ ಅಡಳಿತ ಮಂಡಳಿ ಸ್ಪಷ್ಟಪಡಿಸಿದೆ. ಪ್ರತಿಯೊಂದು ಶಾಲೆಯಲ್ಲಿ ಈ ರೀತಿ ನಿರ್ಧಾರ ಕೈಗೊಂಡರೆ ಕೋವಿಡ್ ನಿಂದ ಹೆತ್ತವರನ್ನು ಕಳೆದುಕೊಂಡ ಮಕ್ಕಳ ಭವಿಷ್ಯ ಉಜ್ವಲವಾಗಲಿದ್ದು, ಗುರುಕುಲ ಶಾಲಾಯ ನಿರ್ಧಾರ ಸರ್ಕಾರವನ್ನೇ ನಾಚಿಸುವಂತಹ ನಿರ್ಧಾರ ಕೈಗೊಂಡಿದ್ದಾರೆ. ಅಲ್ಲದೆ ಗುರುಕುಲ ಶಾಲೆಯ ನಿರ್ಧಾರಕ್ಕೆ ಸಾರ್ವಜನಿಕ ವಲಯದಲ್ಲಿ ಶ್ಲಾಘನೆ ವ್ಯಕ್ತವಾಗಿದೆ.

  • ಉದ್ಯಮಿಯಿಂದ ಕೇವಲ 1 ರೂಪಾಯಿಗೆ ಆಕ್ಸಿಜನ್ ಸಿಲಿಂಡರ್

    ಉದ್ಯಮಿಯಿಂದ ಕೇವಲ 1 ರೂಪಾಯಿಗೆ ಆಕ್ಸಿಜನ್ ಸಿಲಿಂಡರ್

    ಲಕ್ನೋ: ಕೊರೊನಾ ದಿಂದ ಬಳಲುತ್ತಿರುವ ಸೋಂಕಿತರು ಆಕ್ಸಿಜನ್ ಇಲ್ಲದೆ ಪ್ರಾಣವನ್ನು ಬಿಡುತ್ತಿದ್ದಾರೆ. ಆದರೆ ಉದ್ಯಮಿಯೊಬ್ಬರು ಆಕ್ಸಿಜನ್  ಸಿಲಿಂಡರ್‌ಗಳನ್ನು ಕೇವಲ 1 ರೂಪಾಯಿಗೆ ನೀಡುವ ಮೂಲಕವಾಗಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

    ಉತ್ತರ ಪ್ರದೇಶದ ಹಮಿರ್​ಪುರ್​​  ಜಿಲ್ಲೆಯ ಉದ್ಯಮಿ ಮನೋಜ್ ಗುಪ್ತಾ ಕೇವಲ 1 ರೂ.ಗೆ ಸಿಲಿಂಡರ್ ರೀಫಿಲ್ ಮಾಡಿಕೊಡುವ ಮೂಲಕ ಸೋಂಕಿತರ ಸಂಕಷ್ಟಕ್ಕೆ ನೆರವಾಗುತ್ತಿದ್ದಾರೆ. ಮನೋಜ್ ಗುಪ್ತಾರ ಮಾನವೀಯತೆಯಿಂದ ನಿತ್ಯ ಅದೆಷ್ಟೋ ಸೋಂಕಿತರು ಸಾವಿನ ದವಡೆಯಿಂದ ಪಾರಾಗುತ್ತಿದ್ದಾರೆ.

    ದೇಶದಲ್ಲಿ ಕೊರೊನಾ 2ನೇ ಅಲೆಯ ಭೀಕರತೆ ತಾಂಡವವಾಡುತ್ತಿದೆ. ಆಕ್ಸಿಜನ್ ಕೊರತೆಯಿಂದ ಸೋಂಕಿತರು ಉಸಿರು ಚೆಲ್ಲುತ್ತಿದ್ದಾರೆ. ಆಕ್ಸಿಜನ್ ಪೂರೈಕೆ ಸಮಸ್ಯೆಯನ್ನು ನೀಗಿಸಲು ಸರ್ಕಾರಗಳು ಹರಸಾಹಸಪಡುತ್ತಿವೆ. ಇಂಥ ಸಂಕಷ್ಟದ ಸಮಯದಲ್ಲಿ ಮನೋಜ್ ಅವರು ಮಾಡುತ್ತಿರು ಈ ಸಹಾಯ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.


    1 ರೂಪಾಯಿಗೆ ಆಕ್ಸಿಜನ್ ತುಂಬಿಸಿಕೊಡುವ ಗುಪ್ತಾರ ನಿರ್ಧಾರ ಹಿಂದೆಯೂ ಒಂದು ಮನಕಲಕುವ ಘಟನೆಯಿದೆ. ಕಳೆದ ವರ್ಷ ಮನೋಜ್ ಗುಪ್ತಾ ಅವರು ಕೊರೋನಾ ಸೋಂಕಿಗೆ ತುತ್ತಾಗಿದ್ದರು. ನಾನು ಅನುಭವಿಸಿದ ಯಾತನೆ ಮತ್ತೊಬ್ಬರು ಅನುಭವಿಸಬಾರದು ಎಂಬ ಉದ್ದೇಶದಿಂದಲೇ ಈ ಕೆಲಸಕ್ಕೆ ಮುಂದಾದೆ ಎಂದು ಗುಪ್ತಾ ಅವರು ತಮ್ಮ ಕಥೆಯನ್ನು ಬಿಚ್ಚಿಟ್ಟಿದ್ದಾರೆ. ತನ್ನ ಕಾರ್ಖಾನೆಯಲ್ಲಿ ನಿತ್ಯ 1 ಸಾವಿರ  ಸಿಲಿಂಡರ್‌ಗಳಿಗೆ ಆಕ್ಸಿಜನ್ ತುಂಬಬಹುದು. ಸೋಂಕಿತರ RTPCR ರಿಪೋರ್ಟ್​ ನೋಡಿ ಆಕ್ಸಿಜನ್​ ಸಿಲಿಂಡರ್​ ರಿಫೀಲ್​ ಮಾಡಿಕೊಡಲಾಗುತ್ತಿದೆ. ಕೇವಲ 1 ರೂಪಾಯಿ ಪಡೆದು ನಾನು ನಿತ್ಯ 1 ಸಾವಿರ ಸಿಲಿಂಡರ್‌ಗಳಿಗೆ  ಆಕ್ಸಿಜನ್ ತುಂಬಿ ಕೊಡುವ ಕೆಲಸ ಮಾಡುತ್ತಿದ್ದೇನೆ ಎಂದು ಗುಪ್ತಾ ಅವರು ಹೆಮ್ಮೆಯಿಂದ ಹೇಳಿದ್ದಾರೆ.

    ಹಣ ಕೊಡಲು ಸಾಧ್ಯವಾಗದ ಬಡವರು ದೂರದೂರುಗಳಿಂದ ಇಲ್ಲಿಗೆ ಆಗಮಿಸಿ ಆಕ್ಸಿಜನ್ ಸಿಲಿಂಡರ್ ಪಡೆಯುತ್ತಿದ್ದಾರೆ. ಸಂಕಷ್ಟದಿಂದ ಬಂದ ಯಾರನ್ನೂ ಗುಪ್ತಾ ನಿರಾಸೆಗೊಳಿಸದೆ  ಸಾಮರ್ಥ್ಯ ಇರುವಷ್ಟು ಆಕ್ಸಿಜನನ್ನು ರೀಫಿಲ್ ಮಾಡಿ ಕೊಡುತ್ತಿದ್ದಾರೆ. ಆಕ್ಸಿಜನ್ ಕೊರತೆಯಿಂದ ಸಾವಿನ ಹಂಚಿನಲ್ಲಿದ್ದ ಅದೆಷ್ಟೋ ಸೋಂಕಿತರು ಇವರಿಂದ ಪಾರಾಗುತ್ತಿದ್ದಾರೆ.

  • ಲಕ್ಷಾಂತರ ಮೌಲ್ಯದ ತರಕಾರಿಯನ್ನ ಉಚಿತವಾಗಿ ಹಂಚಿದ ರೈತ

    ಲಕ್ಷಾಂತರ ಮೌಲ್ಯದ ತರಕಾರಿಯನ್ನ ಉಚಿತವಾಗಿ ಹಂಚಿದ ರೈತ

    – ಶಾಸಕರಿಂದ 4,300 ಕುಟುಂಬಕ್ಕೆ ಆಹಾರ ಕಿಟ್ ವಿತರಣೆ

    ಚಾಮರಾಜನಗರ: ಕೊರೊನಾ ಲಾಕ್‍ಡೌನ್ ಪರಿಣಾಮದಿಂದಾಗಿ ಗಡಿ ಜಿಲ್ಲೆಯ ಜನರು ಪರದಾಡುತ್ತಿದ್ದಾರೆ. ರೈತರು ಕೂಡ ತಾವು ಬೆಳೆದ ಬೆಳೆಗಳನ್ನು ಮಾರಾಟ ಮಾಡಲಾಗದೇ ಆರ್ಥಿಕ ನಷ್ಟ ಅನುಭವಿಸುತ್ತಿದ್ದಾರೆ. ಆದರೆ ಇಲ್ಲೊಬ್ಬ ರೈತ ಲಕ್ಷಾಂತರ ರೂಪಾಯಿ ಮೌಲ್ಯದ ತರಕಾರಿಯನ್ನು ಕಾಡಂಚಿನ ಜನರಿಗೆ ಹಂಚುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

    ಜಿಲ್ಲೆಯ ಹನೂರು ತಾಲೂಕಿನ ಪಿ.ಜಿ.ಪಾಳ್ಯ ಬಸವನಗುಡಿ ಗ್ರಾಮದ ಬೆಳ್ಳುಳ್ಳಿ ಮಾದೇಶ ತಮ್ಮ ಐದು ಎಕರೆ ಜಮೀನಿನಲ್ಲಿ, ಎಲೆಕೋಸು, ಮೆಣಸಿನಕಾಯಿ, ಬದನೆಕಾಯಿ, ಕರಿಬೇವಿನಸೊಪ್ಪು ಬೆಳೆದಿದ್ದರು. ಆದರೆ ಈ ತರಕಾರಿಗಳನ್ನು ತೆಗೆದುಕೊಂಡು ಹೋಗಿ ಮಾರಾಟ ಮಾಡಲು ಸಾಧ್ಯವಾಗಲಿಲ್ಲ. ಹೀಗಾಗಿ ತರಕಾರಿ ಹೊಲದಲ್ಲೇ ಹಾಳಾಗುವ ಬದಲು ಸಂಕಷ್ಟದಲ್ಲಿರುವ ಕುಟುಂಬಗಳಿಗಾದರೂ ಅನುಕೂಲವಾಗಿಲಿ ಎಂದು ಉಚಿತವಾಗಿ ವಿತರಣೆ ಮಾಡಿದ್ದಾರೆ.

    ಮಾದೇಶ್ ತಾವು ಬೆಳೆದ ತರಕಾರಿಯ ಜೊತೆ ಬೇರೆ ರೈತರಿಂದ ಈರುಳ್ಳಿ, ಟೊಮೆಟೊ, ಬೆಳ್ಳುಳ್ಳಿಯನ್ನು ಖರೀದಿಸಿದ್ದು, ಅವುಗಳನ್ನು ಪ್ಯಾಕ್ ಮಾಡಿದ್ದಾರೆ. ನಂತರ ಪಾಳ್ಯ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಬರುವ ಹಾವಿನಮೂಲೆ, ಯರಗಬಾಳು, ನಲ್ಲಿಕತ್ರಿ, ಉದ್ದಟ್ಟಿ, ಜೀರಿಗೆಗದ್ದೆ, ಮಾವತ್ತೂರು ಮೊದಲಾದ ಗ್ರಾಮಗಳಿಗೆ ಹೋಗಿ, ಮನೆಮನೆಗೆ ಉಚಿತವಾಗಿ ವಿತರಿಸಿದ್ದಾರೆ.

    ಜೊತೆಗೆ ಲಾಕ್‍ಡೌನ್ ಸಂದರ್ಭದಲ್ಲಿ ಹಗಲಿರುಳು ಕರ್ತವ್ಯ ನಿರ್ವಹಿಸುತ್ತಿರುವ ಹನೂರು ಠಾಣೆಯ ಪೊಲೀಸ್ ಕುಟುಂಬಗಳಿಗೂ ತರಕಾರಿ ವಿತರಿಸಿದ್ದು, ಜನರ ರಕ್ಷಣೆಗೆ ಶ್ರಮಿಸುತ್ತಿರುವ ಪೊಲೀಸರಿಗೆ ತಮ್ಮ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.

    ಆಹಾರ ಕಿಟ್ ವಿತರಣೆ:
    ಶಾಸಕ ನರೇಂದ್ರ ಗಿರಿ ಜನರಿಗೆ ಆಹಾರ ಕಿಟ್ ವಿತರಿಸುವ ಮೂಲಕ ಜನರ ಕಷ್ಟಕ್ಕೆ ಸ್ಪಂದಿಸುವ ಕೆಲಸ ಮಾಡಿದ್ದಾರೆ. ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ರಾಮಾಪುರ ವ್ಯಾಪ್ತಿಯಲ್ಲಿ ಆಹಾರ ಕಿಟ್ ವಿತರಿಸಿದ್ದಾರೆ.

    ಮೀಣ್ಯಂ, ಜಲ್ಲಿಪಾಳ್ಯ ಸೇರಿದಂತೆ 40ಕ್ಕೂ ಹೆಚ್ಚು ಗ್ರಾಮದ ಗಿರಿಜನ ಕುಟುಂಬಕ್ಕೆ ಅಕ್ಕಿ, ಬೆಳೆ, ಎಣ್ಣೆ, ಕಾಳುಗಳನ್ನು ಒಳಗೊಂಡ ಆಹಾರ ಕಿಟ್ ವಿತರಿಸಿದ್ದಾರೆ. ಸುಮಾರು 4,300ಕ್ಕೂ ಹೆಚ್ಚು ಗಿರಿಜನ ಕುಟುಂಬಕ್ಕೆ ಆಹಾರ ಕಿಟ್ ವಿತರಿಸಿದ್ದು, ಶಾಸಕರ ಕಾರ್ಯಕ್ಕೆ ಗಿರಿ ಜನರಿಂದ ಮೆಚ್ಚುಗೆ ವ್ಯಕ್ತವಾಗಿದೆ.

  • ರೈತರಿಂದ 2 ಟನ್ ತರಕಾರಿ ಖರೀದಿ ಮಾಡಿದ ಕೃಷ್ಣಬೈರೇಗೌಡ

    ರೈತರಿಂದ 2 ಟನ್ ತರಕಾರಿ ಖರೀದಿ ಮಾಡಿದ ಕೃಷ್ಣಬೈರೇಗೌಡ

    – ತಮ್ಮ ಕ್ಷೇತ್ರದ ಬಡವರಿಗೆ ಉಚಿತವಾಗಿ ವಿತರಣೆ

    ಚಿಕ್ಕಬಳ್ಳಾಪುರ: ಕೊರೊನಾದಿಂದ ರೈತರು ತಾವು ಬೆಳೆದ ಬೆಳೆಯನ್ನು ಮಾರಾಟ ಮಾಡಲು ಸಾಧ್ಯವಾಗದೆ ಪರದಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಮಾಜಿ ಸಚಿವ ಕೃಷ್ಣಬೈರೇಗೌಡ ರೈತರಿಂದ ಒಂದು ಟನ್ ಟೊಮೊಟೊ ಹಾಗೂ ಒಂದು ಟನ್ ತೊಂಡೆಕಾಯಿ ಖರೀದಿ ಮಾಡಿದ್ದಾರೆ. ತಮ್ಮ ಕ್ಷೇತ್ರದ ಬಡವರಿಗೆ ಆ ತರಕಾರಿಗಳನ್ನ ಉಚಿತವಾಗಿ ವಿತರಿಸಿದ್ದಾರೆ.

    ಇಂದು ಕೃಷ್ಣಬೈರೇಗೌಡ ಅವರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಕುಂದಾಣ ಹೋಬಳಿಯ ಇಲತೊರೆ ಗ್ರಾಮದ ರೈತ ನಾಗೇಶ್ ಹಾಗೂ ರಾಜಣ್ಣರ ತೋಟಕ್ಕೆ ಭೇಟಿ ನೀಡಿದ್ದಾರೆ. ಅವರು ಬೆಳೆದಿದ್ದ ಒಂದು ಟನ್ ಟೊಮೆಟೊ ಹಾಗೂ 1 ಟನ್ ತೊಂಡೆಕಾಯಿ ಖರೀದಿಸಿದ್ದಾರೆ. ಆ ತರಕಾರಿಯನ್ನು ತಮ್ಮ ಕ್ಷೇತ್ರದ ಬಡವರಿಗೆ ಉಚಿತವಾಗಿ ವಿತರಿಸಿದ್ದಾರೆ.

    ಈಗಾಗಲೇ ಕೊರೊನಾ ಎಫೆಕ್ಟ್ ಹಿನ್ನೆಲೆಯಲ್ಲಿ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ಸರ್ಕಾರ ಮಾತ್ರ ಹೇಳಿಕೆಗಳನ್ನ ಕೊಡುತ್ತಾ ರೈತರಿಗೆ ಎಲ್ಲವನ್ನೂ ಮಾಡಿದ್ದೀವಿ ಅಂತ ಹೇಳುತ್ತಾ ಪ್ರಚಾರ ಪಡೆದುಕೊಳ್ಳುತ್ತಿದೆ. ಆದರೆ ನಿಜವಾಗಿಯೂ ರೈತನ ಕಷ್ಟ ಪರಿಸಹರಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಹೇಳಿದರು.

    ತಮ್ಮ ಪಕ್ಷದ ಮುಖಂಡರು ಸಹ ರೈತರಿಂದ ಸಾಧ್ಯವಾದಷ್ಟು ತರಕಾರಿ ಖರೀದಿ ಮಾಡಿ ತಮ್ಮ ತಮ್ಮ ಕ್ಷೇತ್ರದ ಬಡ ಜನರಿಗೆ ಈ ಸಮಯದಲ್ಲಿ ಉಚಿತವಾಗಿ ಕೊಡಬೇಕು ಅಂತ ಮನವಿ ಮಾಡಿಕೊಂಡರು.

  • ವೈದ್ಯರು, ನರ್ಸ್, ಪೊಲೀಸರ ವಾಹನಕ್ಕೆ ತಲಾ 1 ಲೀಟರ್ ಉಚಿತ ಪೆಟ್ರೋಲ್

    ವೈದ್ಯರು, ನರ್ಸ್, ಪೊಲೀಸರ ವಾಹನಕ್ಕೆ ತಲಾ 1 ಲೀಟರ್ ಉಚಿತ ಪೆಟ್ರೋಲ್

    ಶಿವಮೊಗ್ಗ: ಕೊರೊನಾ ವೈರಸ್ ವಿರುದ್ಧ ವೈದ್ಯರು, ನರ್ಸ್ ಮತ್ತು ಪೊಲೀಸರು ಹಗಲಿರುಳು ಎನ್ನದೇ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಹೀಗಾಗಿ ಅಗತ್ಯ ಸೇವೆ ಸಲ್ಲಿಸುತ್ತಿರುವವರಿಗೆ ಜಿಲ್ಲೆಯಲ್ಲಿ ಉಚಿತವಾಗಿ ಪೆಟ್ರೋಲ್ ವಿತರಣೆ ಮಾಡಲಾಗುತ್ತಿದೆ.

    ಶಿವಮೊಗ್ಗದ ಬಾಲರಾಜ್ ಅರಸು ರಸ್ತೆಯಲ್ಲಿರುವ ಸಹ್ಯಾದ್ರಿ ಪೆಟ್ರೋಲ್ ಬಂಕ್‍ನ ಮಾಲೀಕರು ಕೊರೊನಾ ಸಮಯದಲ್ಲಿ ತಮ್ಮ ಪ್ರಾಣದ ಹಂಗು ತೊರೆದು ಕರ್ತವ್ಯ ಸಲ್ಲಿಸುತ್ತಿರುವ ವೈದ್ಯರು, ನರ್ಸ್, ಆಸ್ಪತ್ರೆ ಸಿಬ್ಬಂದಿ ಸೇರಿದಂತೆ ಪೊಲೀಸರಿಗೆ ಉಚಿತ ಪೆಟ್ರೋಲ್ ವಿತರಣೆ ಮಾಡುತ್ತಿದ್ದಾರೆ.

    ಪ್ರತಿಯೊಬ್ಬರ ದ್ವಿ-ಚಕ್ರ ವಾಹನಕ್ಕೆ ಅವರವರ ಇಲಾಖೆಯ ಗುರುತಿನ ಚೀಟಿ ನೋಡಿ ತಲಾ 1 ಲೀಟರ್ ಪೆಟ್ರೋಲ್‍ಅನ್ನು ಉಚಿತವಾಗಿ ವಿತರಿಸುತ್ತಿದ್ದಾರೆ. ಈ ಮೂಲಕ ಪೆಟ್ರೋಲ್ ಬಂಕ್‍ನ ಮಾಲೀಕರು ಅಗತ್ಯ ಸೇವೆ ಸಲ್ಲಿಸುತ್ತಿರುವ ವೈದ್ಯರು, ನರ್ಸ್ ಹಾಗೂ ಪೊಲೀಸರಿಗೆ ಕೃತಜ್ಞತೆ ಸಲ್ಲಿಸುತ್ತಿದ್ದಾರೆ.

    ಅಲ್ಲದೇ ಮುಂದಿನ ದಿನಗಳಲ್ಲಿ ಪೌರ ಕಾರ್ಮಿಕರು, ಸೆಕ್ಯೂರಿಟಿ ಸಿಬ್ಬಂದಿ ಮತ್ತು ಹೋಂಗಾರ್ಡ್ ಗಳಿಗೆ ಉಚಿತ ಪೆಟ್ರೋಲ್ ವಿತರಣೆ ಮಾಡುವುದಾಗಿ ತಿಳಿಸಿದ್ದಾರೆ. ಅಲ್ಲದೇ ರಾಜ್ಯದ ಇತರೆ ಪೆಟ್ರೋಲ್ ಬಂಕ್ ಮಾಲೀಕರು ಸಹ ಇದೇ ರೀತಿ ಉಚಿತ ವಿತರಣೆ ಮಾಡಲು ಮುಂದಾಗಿ, ಸಂಕಷ್ಟದ ಪರಿಸ್ಥಿತಿಯಲ್ಲಿ ತಮ್ಮ ಕೈಲಾದ ಸೇವೆ ಮಾಡಿ ಎಂದು ಪೆಟ್ರೋಲ್ ಬಂಕ್ ಮಾಲೀಕರಾದ ಸುಹಾಸ್ ಮನವಿ ಮಾಡಿದ್ದಾರೆ.