Tag: Fraud Cases

  • PUBLiC TV Impact | ಮನ್ ಕಿ ಬಾತ್‌ನಲ್ಲಿ ವಿಜಯಪುರದ ಯುವಕನ ಪ್ರಕರಣ ಪ್ರಸ್ತಾಪಿಸಿದ ಪ್ರಧಾನಿ

    PUBLiC TV Impact | ಮನ್ ಕಿ ಬಾತ್‌ನಲ್ಲಿ ವಿಜಯಪುರದ ಯುವಕನ ಪ್ರಕರಣ ಪ್ರಸ್ತಾಪಿಸಿದ ಪ್ರಧಾನಿ

    ವಿಜಯಪುರ: ಜಿಲ್ಲೆಯ ಸಂತೋಷ್ ಎಂಬುವವರಿಗೆ ಮುಂಬೈನಿಂದ ಕರೆ ಮಾಡಿ ಬ್ಲ್ಯಾಕ್‌ಮೇಲ್‌ ಮಾಡಿ, ಹೆದರಿಸಿರುವ ಸುದ್ದಿಯನ್ನು ನಿಮ್ಮ `ಪಬ್ಲಿಕ್ ಟಿವಿ’ (PUBLiC TV) ಬಿತ್ತರಿಸಿತ್ತು. ಇದರ ಬೆನ್ನಲ್ಲೇ ಈ ಸುದ್ದಿ ಪ್ರಧಾನಿ ಮೋದಿಯವರಿಗೆ ತಲುಪಿದ್ದು, ಇದಕ್ಕೆ ಸಂಬಂಧಿಸಿದಂತೆ ಪ್ರಧಾನಿ ಮೋದಿ (PM Narendra Modi) ಇಂದು (ಅ.27) ಮನ್ ಕಿ ಬಾತ್‌ನಲ್ಲಿ (Maan Ki Baat) ಮಾತನಾಡಿದರು.

    ಪ್ರಧಾನಿ ಮೋದಿ ಇಂದು ಮನ್ ಕಿ ಬಾತ್‌ನ 115ನೇ ಸಂಚಿಕೆಯಲ್ಲಿ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದರು. ದೇಶದಲ್ಲಿ ಹೆಚ್ಚುತ್ತಿರುವ ಸೈಬರ್ ಕ್ರೈಂ (Cyber Crime) ಪ್ರಕರಣ ಹಿನ್ನೆಲೆ ದೇಶದ ಜನರಿಗೆ ಜಾಗೃತ ಮೂಡಿಸಿದರು.ಇದನ್ನೂ ಓದಿ: ನಿಮ್ಮ ಪಾದಗಳಿಗೆ ಶಿರಸಾವಹಿಸಿ ಬೇಡಿಕೊಳ್ತೀನಿ, ಒಂದೇ ಒಂದು ಅವಕಾಶ ಕೊಡಿ: ನಿಖಿಲ್

    ವಿಜಯಪುರದ (Vijayapura) ನಿವಾಸಿ ಸಂತೋಷ್ ಎಂಬುವವರಿಗೆ ಮುಂಬೈನಿಂದ ಕರೆ ಮಾಡಿ, ನಾವು ಮುಂಬೈ ಕ್ರೈಂ ಬ್ರ್ಯಾಂಚ್‌ ಪೊಲೀಸರು ಎಂದು ಹೇಳಿ ಬ್ಲ್ಯಾಕ್‌ಮೇಲ್‌ ಮಾಡಿ, ಹೆದರಿಸಿದ್ದರು. ಇದರ ಸಂಪೂರ್ಣ ದೃಶ್ಯವನ್ನು ಸಂತೋಷ್ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದರು. ಈ ಕುರಿತು ವಿಸ್ತೃತ ವರದಿಯನ್ನು ಪಬ್ಲಿಕ್ ಟಿವಿ ಬಿತ್ತರಿಸಿತ್ತು. ಈ ಸುದ್ದಿ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿದ್ದು, ಪ್ರಧಾನಿ ಮೋದಿಯವರೆಗೆ ತಲುಪಿದೆ. ಇಂದು ಪ್ರಧಾನಿ ಮೋದಿ ಈ ಪ್ರಕರಣವನ್ನು ಉಲ್ಲೇಖಿಸಿ ಮಾತನಾಡಿದರು.

    11 ಗಂಟೆಗೆ ಮೋದಿ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಸಂತೋಷ್ ಅವರ ಪ್ರಕರಣವನ್ನು ಉಲ್ಲೇಖಿಸಿ ಮಾತನಾಡಿದರು. ಸಂತೋಷ್ ಸೆರೆ ಹಿಡಿದಿದ್ದ ಸಂಪೂರ್ಣ ವಿಡಿಯೋವನ್ನು ಕಾರ್ಯಕ್ರಮದಲ್ಲಿ ಪ್ರಸಾರ ಮಾಡಲಾಯಿತು. ಮೋದಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಸ್ತಾಪಿಸಿದರು. ಇದರಿಂದ ಖುಷಿಯನ್ನು ವ್ಯಕ್ತಪಡಿಸಿದ ಸಂತೋಷ, ಇದೆಲ್ಲ ಸಾಧ್ಯವಾಗಿದ್ದು ಪಬ್ಲಿಕ್ ಟಿವಿಯಿಂದ ಎಂದು ಅಭಿನಂದನೆ ಸಲ್ಲಿಸಿದ್ದಾರೆ.ಇದನ್ನೂ ಓದಿ: ಕಿಚ್ಚನ ಅನುಪಸ್ಥಿತಿಯಲ್ಲಿ ನಡೆಯಿತು ಎಲಿಮಿನೇಷನ್ ಪ್ರಕ್ರಿಯೆ- ಮಾನಸಾ ಔಟ್?

  • ಜೈಲಿನಿಂದ ಬಿಡುಗಡೆಯಾಗ್ತಿದ್ದಂತೆ ಎನ್‍ಕೌಂಟರ್ ಬೆದರಿಕೆ ಹಾಕಲಾಗ್ತಿದೆ ಅಂತ ಅಜಂ ಖಾನ್ ಆರೋಪ

    ಜೈಲಿನಿಂದ ಬಿಡುಗಡೆಯಾಗ್ತಿದ್ದಂತೆ ಎನ್‍ಕೌಂಟರ್ ಬೆದರಿಕೆ ಹಾಕಲಾಗ್ತಿದೆ ಅಂತ ಅಜಂ ಖಾನ್ ಆರೋಪ

    ಲಕ್ನೋ: ನನಗೆ ಎನ್‍ಕೌಂಟರ್ ಮಾಡುವುದಾಗಿ ಬೆದರಿಕೆ ಹಾಕಲಾಗಿದೆ ಎಂದು ಸೀತಾಪುರ ಜೈಲಿನಿಂದ ಹೊರಬಂದ ನಂತರ ಎಸ್‍ಪಿ ನಾಯಕ ಅಜಂ ಖಾನ್ ಆರೋಪಿಸಿದ್ದಾರೆ.

    ಈ ಕುರಿತು ರಾಂಪುರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಆತ್ಮೀಯರು ಸಾಕಷ್ಟು ಬಾರಿ ನನ್ನನ್ನು ಹತ್ಯೆಗೈಯಲು ಪ್ರಯತ್ನಪಟ್ಟಿದ್ದಾರೆ. ಆದರೂ ನಾನು ಬದುಕುಳಿದಿದ್ದೇನೆ. ನನಗೆ ಎನ್‍ಕೌಂಟರ್ ಮಾಡುವುದಾಗಿ ಬೆದರಿಕೆ ಹಾಕಲಾಗಿದೆ. ನಾನು ಯಾವಾಗಲೂ ನನ್ನ ನಂಬಿಕೆಯನ್ನು ಸಾಬೀತುಪಡಿಸಲು ಪ್ರಯತ್ನಿಸಿದೆ. ಆದರೆ ಯಾರು ಅದಕ್ಕೆ ಸಾಥ್ ನೀಡಲಿಲ್ಲ. ಸುಪ್ರೀಂ ಕೋರ್ಟ್‍ನಿಂದ ನನಗೆ ನ್ಯಾಯ ಸಿಕ್ಕಿದೆ. ನನ್ನ ವಿನಾಶಗಳಲ್ಲಿ ನನ್ನದೇ ಕೈ ಇದೆ. ನನ್ನದೇ ಜನರ ಕೊಡುಗೆ ದೊಡ್ಡದು ಎಂದು ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ಮದುವೆ ಮನೆಯಲ್ಲಿ ಕರಿಮಣಿ ಪೋಣಿಸಿದ ಶಾಸಕ ರೇಣುಕಾಚಾರ್ಯ

    ಜ್ಞಾನವಾಪಿ ವಿವಾದದ ಕುರಿತು ಪ್ರತಿಕ್ರಿಯಿಸಿದ ಅವರು, ಈ ವಿಷಯವು ಬಾಬರಿ ಮಸೀದಿಗಿಂತ ಸ್ವಲ್ಪ ಭಿನ್ನವಾಗಿದೆ. ಏಕೆಂದರೆ ಅದರ ವಿಚಾರಣೆಯು 2-3 ವಾರಗಳಲ್ಲಿ ಮುಗಿದಿದೆ. ಬಾಬರಿ ಮಸೀದಿ ಪ್ರಕರಣವು ಮುಗಿದು ವರ್ಷಗಳೇ ಕಳೆದಿವೆ. ಈ ಬಗ್ಗೆ ಈಗ ನಾನೀಗ ಮಾತನಾಡುವುದು ತಪ್ಪು. ?ಕೆಲವರು ದೇಶದ ವಾತಾವರಣ ಹಾಳು ಮಾಡುವ ಕೆಲಸ ಮಾಡುತ್ತಾರೆ ಎಂದು ಹೇಳಿದರು.

    ಮತ್ತೊಂದೆಡೆ, ವಿರೋಧ ಪಕ್ಷದ ನಾಯಕ ಎಂದು ಏಕೆ ನಿಮ್ಮನ್ನ ಹೆಸರಿಸಲಿಲ್ಲ ಎಂಬ ಪ್ರಶ್ನೆಗೆ ಮಾತನಾಡಿ, ಯಾಕೆಂದರೆ ನಾನು ಅವರಿಗಿಂತ ದೊಡ್ಡ ನಾಯಕ ಎಂದು ಉತ್ತರಿಸಿದರು. ಇನ್ನೂ ಮುಂಬರುವ ಉಪಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ತಿಳಿಸಿದರು.

    ಅನೇಕ ಪ್ರಕರಣಗಳಲ್ಲಿ ಅಜಂ ಖಾನ್ ಅವರು ಕಳೆದ ಕನಿಷ್ಠ 27 ತಿಂಗಳಿನಿಂದ ಜೈಲು ವಾಸ ಅನುಭವಿಸುತ್ತಿದ್ದರು. ಇದರಲ್ಲಿ ಭೂ ಕಬಳಿಕೆ, ವಂಚನೆ ಪ್ರಕರಣಗಳು ಸೇರಿವೆ. ರಾಂಪುರ ವಿಧಾನಸಭೆ ಕ್ಷೇತ್ರದ ಶಾಸಕರಾಗಿರುವ ಅಜಂ ಖಾನ್ ಅವರ ವಿರುದ್ಧದ 89ನೇ ಪ್ರಕರಣದಲ್ಲಿ ಮಧ್ಯಂತರ ಜಾಮೀನು ಸಿಕ್ಕಿದೆ. ಇದನ್ನೂ ಓದಿ: ಹೊರಗುತ್ತಿಗೆ ನೇಮಕಾತಿಯಲ್ಲಿ ಇನ್ಮುಂದೆ 33% ಮಹಿಳೆಯರಿಗೆ ಮೀಸಲು

    ಉತ್ತರ ಪ್ರದೇಶದ ಸೀತಾಪುರ ಜೈಲಿನಲ್ಲಿ 27 ತಿಂಗಳುಗಳನ್ನು ಕಳೆದ ನಂತರ ಅಜಂ ಖಾನ್ ಶುಕ್ರವಾರ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ಸೀತಾಪುರ ಜೈಲಿನಿಂದ ಅವರನ್ನು ಕರೆದೊಯ್ಯಲು ಇಬ್ಬರು ಪುತ್ರರು, ಶಿವಪಾಲ್ ಯಾದವ್ ಮತ್ತು ಎಲ್ಲಾ ಬೆಂಬಲಿಗರು ಸ್ಥಳದಲ್ಲಿ ಹಾಜರಿದ್ದರು. ಸೀತಾಪುರದಲ್ಲಿರುವ ಎಸ್‍ಪಿಯ ಮಾಜಿ ಶಾಸಕ ಅನೂಪ್ ಗುಪ್ತಾ ಅವರ ಮನೆಯಲ್ಲಿ ಉಪಹಾರ ಸೇವಿಸಿದ ನಂತರ ಅವರು ರಾಂಪುರದಲ್ಲಿರುವ ತಮ್ಮ ಮನೆಗೆ ತೆರಳಿದರು.

    ಅವರ ಬಿಡುಗಡೆಯ ಸಂದರ್ಭದಲ್ಲಿ ಅವರ ಪಕ್ಷದ ಎಸ್‍ಪಿಯ ಯಾವ ದೊಡ್ಡ ನಾಯಕರೂ ಇರಲಿಲ್ಲ. ಆದರೆ ಎಸ್‍ಪಿ ಅಧ್ಯಕ್ಷ ಅಖಿಲೇಶ್ ಟ್ವೀಟ್ ಮಾಡುವ ಮೂಲಕ ಅಜಂ ಬಿಡುಗಡೆಯನ್ನು ಸ್ವಾಗತಿಸಿದ್ದಾರೆ. ಅಲ್ಲದೆ ಎಸ್‍ಪಿಯ ಹಿರಿಯ ನಾಯಕ ಜಾಮೀನಿನ ಮೇಲೆ ಬಿಡುಗಡೆಯಾದ ಆಜಂ ಖಾನ್ ಜೀ ಅವರಿಗೆ ಹೃತ್ಪೂರ್ವಕ ಸ್ವಾಗತ. ಜಾಮೀನಿನ ಈ ನಿರ್ಧಾರದಿಂದ ಸುಪ್ರೀಂ ಕೋರ್ಟ್ ನ್ಯಾಯಕ್ಕೆ ಹೊಸ ಮಾನದಂಡಗಳನ್ನು ನೀಡಿದೆ. ಉಳಿದೆಲ್ಲ ಸುಳ್ಳು ಪ್ರಕರಣಗಳು ಮತ್ತು ಪ್ರಕರಣಗಳಲ್ಲಿ ಅವರು ಖುಲಾಸೆಯಾಗುತ್ತಾರೆ ಎಂಬ ಭರವಸೆ ಇದೆ. ಸುಳ್ಳಿಗೆ ಕ್ಷಣಗಳಿವೆ, ಶತಮಾನಗಳಲ್ಲ ಎಂದು ಹೇಳಿದರು.