Tag: Franchisee

  • 5 ಮಂದಿ ವಿದೇಶಿ ಆಟಗಾರರನ್ನು ಆಡಿಸಲು ಅವಕಾಶ ಕೊಡಿ – ಐಪಿಎಲ್ ಫ್ರಾಂಚೈಸಿಗಳ ಒತ್ತಾಯ

    5 ಮಂದಿ ವಿದೇಶಿ ಆಟಗಾರರನ್ನು ಆಡಿಸಲು ಅವಕಾಶ ಕೊಡಿ – ಐಪಿಎಲ್ ಫ್ರಾಂಚೈಸಿಗಳ ಒತ್ತಾಯ

    ಮುಂಬೈ: ಐಪಿಎಲ್-2021ರಲ್ಲಿ ಆಡುವ 11ರ ಬಳಗದಲ್ಲಿ ಐದು ಮಂದಿ ವಿದೇಶಿ ಆಟಗಾರರನ್ನು ಆಡಿಸಲು ಅವಕಾಶ ಕೊಡಿ ಎಂದು ಫ್ರಾಂಚೈಸಿಗಳು ಬಿಸಿಸಿಐಗೆ ಒತ್ತಾಯ ಮಾಡುತ್ತಿವೆ ಎಂಬ ಮಾಹಿತಿ ಬಿಸಿಸಿಐ ಮೂಲಗಳಿಂದ ತಿಳಿದು ಬಂದಿದೆ.

    ಸದ್ಯ ಬಿಸಿಸಿಐ ಮಾಡಿರುವ ಐಪಿಎಲ್ ನಿಯಮದ ಪ್ರಕಾರ, ಒಂದು ತಂಡದ ಆಡುವ 11ರ ಬಳಗದಲ್ಲಿ ನಾಲ್ಕು ಮಂದಿ ವಿದೇಶಿ ಆಟಗಾರರು ಮತ್ತು ಉಳಿದ ಏಳು ಮಂದಿ ಭಾರತೀಯ ಆಟಗಾರರು ಇರಬೇಕು. ಆದರೆ ಈ ನಿಯಮವನ್ನು ಬದಲಿಸಿ ಆಡುವ 11ರ ಬಳಗದಲ್ಲಿ ಐದು ವಿದೇಶಿ ಆಟಗಾರರನ್ನು ಆಡಿಸುವ ಅವಕಾಶ ನೀಡಬೇಕು ಎಂದು ಫ್ರಾಂಚೈಸಿಗಳು ಒತ್ತಾಯ ಮಾಡುತ್ತೀವೆ ಎನ್ನಲಾಗಿದೆ.

    ಕೊರೊನಾ ನಡುವೆಯೂ ಯುಎಇಯಲ್ಲಿ ಐಪಿಎಲ್ ಆಯೋಜನೆ ಮಾಡಿ ಗೆದ್ದು ಬೀಗಿರುವ ಬಿಸಿಸಿಐ, ಮುಂದಿನ ವರ್ಷದ ಐಪಿಎಲ್ ಮೇಲೆ ಕಣ್ಣಿಟ್ಟಿದೆ. ಐಪಿಎಲ್-2021ಗೆ ಇನ್ನೂ ಕೇವಲ ಐದು ತಿಂಗಳು ಬಾಕಿ ಇದ್ದು, ಒಂದು ಅಥವಾ ಎರಡು ಹೊಸ ಫ್ರಾಂಚೈಸಿಯನ್ನು ಪರಿಚಿಸುತ್ತಿದೆ. ಈಗ ಇದರ ಜೊತೆಯೇ ಈ ನಿಯಮವನ್ನು ಬದಲಾವಣೆ ಮಾಡಿ ಐದು ಜನ ವಿದೇಶಿ ಆಟಗಾರರು ಪ್ಲೇಯಿಂಗ್ ಇಲೆವೆನ್‍ನಲ್ಲಿ ಆಡಲು ಅನುಮತಿ ನೀಡಬೇಕು ಎಂದು ಫ್ರಾಂಚೈಸಿಗಳು ಮನವಿ ಮಾಡಿವೆ.

    ಈ ವಿಚಾದ ಬಗ್ಗೆ ಮಾತನಾಡಿರುವ ಬಿಸಿಸಿಐ ಅಧಿಕಾರಿಯೊಬ್ಬರು, ಈ ವಿಚಾರದ ಬಗ್ಗೆ ನಾವು ಗಂಭೀರವಾದ ಚರ್ಚೆ ಮಾಡಿಲ್ಲ. ಕೆಲ ಫ್ರಾಂಚೈಸಿಗಳು ಈ ವಿಚಾರವನ್ನು ಬಿಸಿಸಿಐ ಗಮನಕ್ಕೆ ತಂದಿವೆ. ಇದರ ಬಗ್ಗೆ ಸಭೆ ನಡೆಸಿ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ. ತಂಡದಲ್ಲಿ ಕೋಟಿ ಕೋಟಿ ಪಡೆದ ವಿದೇಶಿ ಆಟಗಾರರನ್ನು ಬೇಂಚ್ ಕಾಯುತ್ತಿದ್ದಾರೆ. ಹೀಗಾಗಿ ನಿಯಮವನ್ನು ಬದಲಾವಣೆ ಮಾಡಿ ಎಂದು ಫ್ರಾಂಚೈಸಿಗಳು ಒತ್ತಾಯಿಸುತ್ತಿದ್ದರೆ, ಆಡುವ 11ರ ಬಳಗದಲ್ಲಿ ಐದು ವಿದೇಶಿ ಆಟಗಾರಿಗೆ ಅವಕಾಶ ನೀಡಿದರೆ, ಭಾರತದ ಸ್ಥಳೀಯ ಆಟಗಾರಿಗೆ ಅನ್ಯಾಯವಾಗುತ್ತದೆ ಎಂಬುದು ಕೆಲವರ ವಾದವಾಗಿದೆ.

    ಈ ವರ್ಷ ಮಾರ್ಚ್‍ನಲ್ಲೇ ಆರಂಭವಾಗಬೇಕಿದ್ದ ಐಪಿಎಲ್-2020 ಆರು ತಿಂಗಳು ತಡವಾಗಿ ಸೆಪ್ಟೆಂಬರ್ ತಿಂಗಳಲ್ಲಿ ಆರಂಭವಾಗಿತ್ತು. ಕೊರೊನಾ ನಡುವೆಯೂ ಯಾವುದೇ ಅಡತಡೆಗಳಿಲ್ಲದೇ ಐಪಿಎಲ್ ಭರ್ಜರಿಯಾಗಿ ಯಶಸ್ವಿಯಾಗಿತ್ತು. ನವೆಂಬರ್ 10ರಂದು ನಡೆದ ಫೈನಲ್‍ನಲ್ಲಿ ಮುಂಬೈ ಇಂಡಿಯನ್ಸ್ ತಂಡ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮಣಿಸುವ ಮೂಲಕ ಐದನೇ ಬಾರಿ ಐಪಿಎಲ್ ಟ್ರೋಫಿಯನ್ನು ಎತ್ತಿಹಿಡಿದಿದೆ.

  • ಶಾರುಖ್, ಶಿಲ್ಪಾ, ಪ್ರೀತಿ ನಂತ್ರ ಮತ್ತೊಬ್ಬ ಸೂಪರ್ ಸ್ಟಾರ್ ಐಪಿಎಲ್‍ಗೆ ಎಂಟ್ರಿ?

    ಶಾರುಖ್, ಶಿಲ್ಪಾ, ಪ್ರೀತಿ ನಂತ್ರ ಮತ್ತೊಬ್ಬ ಸೂಪರ್ ಸ್ಟಾರ್ ಐಪಿಎಲ್‍ಗೆ ಎಂಟ್ರಿ?

    ಮುಂಬೈ: ಮಾಲಿಯಾಳಂ ಸೂಪರ್ ಸ್ಟಾರ್ ಮೋಹನ್‍ಲಾಲ್ ಅವರು ಹೊಸ ಐಪಿಎಲ್ ತಂಡವನ್ನು ಖರೀದಿ ಮಾಡಲಿದ್ದಾರೆ ಎಂಬ ಹೊಸ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ.

    ಈಗಾಗಲೇ ಬಾಲಿವುಡ್ ಸೂಪರ್ ಸ್ಟಾರ್ ಶಾರೂಖ್‍ಖಾನ್, ನಟಿಯರಾದ ಶಿಲ್ಪಾ ಶೆಟ್ಟಿ ಮತ್ತು ಪ್ರೀತಿ ಜಿಂಟಾ ಅವರು ಐಪಿಎಲ್‍ನಲ್ಲಿ ಫ್ರಾಂಚೈಸಿಗಳನ್ನು ಖರೀದಿ ಮಾಡಿ ಯಶಸ್ವಿಯಾಗಿ ನಡೆಸಿಕೊಂಡು ಹೋಗುತ್ತಿದ್ದಾರೆ. ಈ ನಡುವೆ ಸೌತ್‍ಇಂಡಿಯನ್ ಸೂಪರ್ ಸ್ಟಾರ್ ಮೋಹನ್‍ಲಾಲ್ ಅವರು ಕೂಡ ಐಪಿಎಲ್ ತಂಡವೊಂದನ್ನು ಖರೀದಿ ಮಾಡಲಿದ್ದಾರೆ ಎಂದು ಹೇಳಲಾಗಿದೆ.

    ಹೀಗೆ ಸುದ್ದಿಯೊಂದು ಓಡಾಡಲು ಕಾರಣವೂ ಇದೇ, ಕಳೆದ ಐಪಿಎಲ್-2020 ಫೈನಲ್ ನೋಡಲು ಮೋಹನ್‍ಲಾಲ್ ಅವರು ದುಬೈಗೆ ಹೋಗಿದ್ದರು. ಅವರು ಐಪಿಎಲ್ ವೀಕ್ಷಣೆ ಮಾಡುತ್ತೀರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದವು. ಈ ಸಮಯದಲ್ಲೇ ಬಿಸಿಸಿಐ ಹೊಸ ತಂಡಗಳನ್ನು ಐಪಿಎಲ್‍ಗೆ ಸೇರ್ಪಡೆ ಮಾಡುವುದಾಗಿ ಘೋಷಣೆ ಮಾಡಿತ್ತು. ಈ ಕಾರಣದಿಂದ ಮೋಹನ್‍ಲಾಲ್ ಅವರು ಹೊಸ ತಂಡ ಖರೀದಿ ಮಾಡುತ್ತಾರೆ ಎಂದು ಹೇಳಲಾಗಿದೆ. ಆದರೆ ನಟನ ಕಡೆಯಿಂದ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ.

    ಮೋಹನ್‍ಲಾಲ್‍ಗೂ ಮುನ್ನವೇ ಸಲ್ಮಾನ್ ಖಾನ್ ಅವರು ಸಹೋದರು ಐಪಿಎಲ್ ತಂಡವನ್ನು ಖರೀದಿ ಮಾಡುವ ಇಂಗಿತವನ್ನು ವ್ಯಕ್ತಪಡಿಸಿದ್ದರು. ಈಗ ಬಿಸಿಸಿಐ ಮತ್ತೆ ಹೊಸ ತಂಡಗಳ ಸೇರ್ಪಡೆಯ ಮಾತುಗಳನ್ನು ಆಡಿರುವುದರಿಂದ ಯಾವ ನಟ ಮೊದಲಿಗೆ ತಂಡ ಖರೀದಿ ಮಾಡಲಿದ್ದಾರೆ ಕಾದು ನೋಡಬೇಕಿದೆ. ಸದ್ಯ ಶಾರುಖ್‍ಖಾನ್ ಅವರು ಕೋಲ್ಕತ್ತಾ ನೈಟ್ ರೈಡರ್ಸ್, ಪ್ರೀತಿ ಜಿಂಟಾ ಅವರ ಕಿಂಗ್ಸ್ ಇಲೆವೆನ್ ಪಂಜಾಬ್, ಶಿಲ್ಪಾ ಶೆಟ್ಟಿ ಒಡೆತನದ ರಾಜಸ್ಥಾನ್ ರಾಯಲ್ಸ್ ತಂಡ ಐಪಿಎಲ್‍ನಲ್ಲಿ ಸಕ್ರಿಯವಾಗಿವೆ.