Tag: france

  • ಭಾರತದ ವಾಯುನೆಲೆಯಲ್ಲಿ ಫ್ರಾನ್ಸ್ ರಫೇಲ್‌ ಲ್ಯಾಂಡಿಂಗ್‌

    ಭಾರತದ ವಾಯುನೆಲೆಯಲ್ಲಿ ಫ್ರಾನ್ಸ್ ರಫೇಲ್‌ ಲ್ಯಾಂಡಿಂಗ್‌

    ನವದೆಹಲಿ: ಫ್ರಾನ್ಸಿನ ಮೂರು ರಫೇಲ್‌ ಯುದ್ಧ ವಿಮಾನಗಳು ತಮಿಳುನಾಡಿನ ಸೂಲೂರ್‌ನಲ್ಲಿರುವ ವಾಯುನೆಯಲ್ಲಿ ನಿಲುಗಡೆಯಾಗಿತ್ತು.

    ಮೂರು ರಫೇಲ್ ಜೆಟ್‌ ಒಳಗೊಂಡಂತೆ ಫ್ರೆಂಚ್ ವಾಯು ಪಡೆ ತಂಡವು ಪೆಸಿಫಿಕ್ ಸಾಗರದಲ್ಲಿ ನಡೆಸುತ್ತಿರುವ ಮೆಗಾ ಮಿಲಿಟರಿ ಕಾರ್ಯಾಚರಣೆಯ ಭಾಗವಾಗಿ ಸೂಲೂರಿನಲ್ಲಿ ಲ್ಯಾಂಡ್‌ ಆಗಿತ್ತು.

    ಮಿಲಿಟರಿ ಸಹಕಾರವನ್ನು ಹೆಚ್ಚಿಸಲು ಫ್ರಾನ್ಸ್ ಮತ್ತು ಭಾರತವು 2018 ರಲ್ಲಿ ಪರಸ್ಪರ ಲಾಜಿಸ್ಟಿಕ್ಸ್ ಬೆಂಬಲ ನೀಡಲು ಸಹಿ ಹಾಕಿತ್ತು. ಈ ಒಪ್ಪಂದಂತೆ ಫ್ರಾನ್ಸ್‌ ವಿಮಾನಗಳು ಭಾರತದಲ್ಲಿ ಲ್ಯಾಂಡ್‌ ಆಗಿವೆ.

    ಫ್ರೆಂಚ್ ವಾಯು ಮತ್ತು ಬಾಹ್ಯಾಕಾಶ ಪಡೆ ಇಂಡೋ-ಪೆಸಿಫಿಕ್‌ನಲ್ಲಿ ʼಪೆಗೇಸ್ 22ʼ ಹೆಸರಿನಲ್ಲಿ ಆಗಸ್ಟ್ 10 ರಿಂದ ಸೆಪ್ಟೆಂಬರ್ 18 ರವರೆಗೆ ಕಾರ್ಯಾಚರಣೆಯನ್ನು ನಡೆಸುತ್ತಿದೆ.

    72 ಗಂಟೆಯ ಒಳಗಡೆ( ಆಗಸ್ಟ್‌10 -12ರ ಒಳಗಡೆ) ಫ್ರಾನ್ಸ್‌ ಸೇನೆಯನ್ನು ಮೆಟ್ರೋಪಾಲಿಟನ್‌ ಫ್ರಾನ್ಸ್‌ನಿಂದ ನ್ಯೂ ಕ್ಯಾಲೆಡೋನಿಯಾಗೆ ನಿಯೋಜಿಸುವುದು ಈ ಕಾರ್ಯಾಚರಣೆಯ ಮೊದಲ ಹಂತವಾಗಿತ್ತು. ಫ್ರಾನ್ಸ್‌ ವಸಾಹತು ಆಗಿರುವ ನ್ಯೂ ಕ್ಯಾಲೆಡೋನಿಯಾ ಆಸ್ಟ್ರೇಲಿಯಾದ ಸಿಡ್ನಿಯಿಂದ 2 ಸಾವಿರ ಕಿ.ಮೀ ದೂರದಲ್ಲಿದೆ. ಇದನ್ನೂ ಓದಿ: ಈಗ ಚುನಾವಣೆ ನಡೆದರೆ ಎನ್‌ಡಿಎಗೆ 286, ಕರ್ನಾಟಕದಲ್ಲಿ ಬಿಜೆಪಿಗೆ 13 ಸ್ಥಾನ

    16,600 ಕಿಮೀ. ದೂರವನ್ನು ಕ್ರಮಿಸಲು ಫ್ರಾನ್ಸ್‌ ವಾಯುಪಡೆಯ ತಾಂತ್ರಿಕ ನಿಲುಗಡೆ ಮಾಡಿತ್ತು. ಆಗಸ್ಟ್ 10 ರ ಸಂಜೆ ಸೂಲೂರಿನಲ್ಲಿ ಲ್ಯಾಂಡಿಂಗ್ ಆದ ವಿಮಾನಗಳು ಆಗಸ್ಟ್ 11 ರ ಮುಂಜಾನೆ ಇಂಧನ ತುಂಬಿದ ಬಳಿಕ ಕ್ಯಾಲೆಡೋನಿಯಾಕ್ಕೆ ತೆರಳಿದೆ.

    ಫ್ರೆಂಚ್ ವಾಯುಪಡೆ ʼಪೆಗೇಸ್ 22ʼ ಬಳಿಕ ಆಗಸ್ಟ್ 17 ರಿಂದ ಸೆಪ್ಟೆಂಬರ್ 10 ರವರೆಗೆ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ʼಪಿಚ್ ಬ್ಲ್ಯಾಕ್ʼ ಸಮರಾಭ್ಯಾಸದಲ್ಲಿ ಭಾಗಿಯಾಗಲಿದೆ. ಭಾರತ ಸೇರಿದಂತೆ ಆಸ್ಟ್ರೇಲಿಯಾ, ಜಪಾನ್, ಅಮೆರಿಕ, ಜರ್ಮನಿ, ಇಂಡೋನೇಷ್ಯಾ, ಸಿಂಗಾಪುರ, ಇಂಗ್ಲೆಂಡ್‌, ದಕ್ಷಿಣ ಕೊರಿಯಾ ದೇಶಗಳು ಈ ಡ್ರಿಲ್‌ನಲ್ಲಿ ಭಾಗವಹಿಸಲಿವೆ.

    Live Tv
    [brid partner=56869869 player=32851 video=960834 autoplay=true]

  • ಶೂಟಿಂಗ್‍ನಲ್ಲಿ ವಿಶ್ವದಾಖಲೆ- ಚಿನ್ನ ಗೆದ್ದ ಅವನಿ ಲೇಖರ

    ಶೂಟಿಂಗ್‍ನಲ್ಲಿ ವಿಶ್ವದಾಖಲೆ- ಚಿನ್ನ ಗೆದ್ದ ಅವನಿ ಲೇಖರ

    ಪ್ಯಾರೀಸ್‌: ಟೋಕಿಯೋ ಪ್ಯಾರಾಲಿಂಪಿಕ್ಸ್ ಚಾಂಪಿಯನ್ ಅವನಿ ಲೇಖರಾ ಪ್ಯಾರಾ ಶೂಟಿಂಗ್ ವಿಶ್ವಕಪ್‍ನಲ್ಲಿ ಚಿನ್ನದ ಪದಕವನ್ನು ತನ್ನದಾಗಿಸಿಕೊಳ್ಳುವ ಮೂಲಕ ತನ್ನ ದಾಖಲೆಯನ್ನೇ ಮುರಿದು ನೂತನ ವಿಶ್ವ ದಾಖಲೆಯನ್ನು ಸೃಷ್ಟಿಸಿದ್ದಾರೆ.

    ಫ್ರಾನ್ಸ್‌ನಲ್ಲಿ ನಡೆಯುತ್ತಿರುವ ವಿಶ್ವಕಪ್ ಪ್ಯಾರಾ ಶೂಟಿಂಗ್‍ನ ಮಹಿಳೆಯರ 10 ಮೀ. ಏರ್‌ರೈಫಲ್‍ನಲ್ಲಿ ಸ್ಪರ್ಧಿಸಿದ್ದ ಅವನಿ ಲೇಖರಾ 250.6 ಅಂಕಗಳಿಸಿ ಚಿನ್ನವನ್ನು ತನ್ನದಾಗಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಈ ಮೂಲಕ ತಾನೇ ಟೋಕಿಯೋದಲ್ಲಿ ನಿರ್ಮಿಸಿದ್ದ 249.6 ಅಂಕಗಳ ವಿಶ್ವ ದಾಖಲೆಯನ್ನು ಮುರಿದಿದ್ದಾರೆ. ಇದರ ಜೊತೆಗೆ 2024 ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆಯನ್ನು ಗಿಟ್ಟಿಸಿಕೊಂಡರು.

    ಟೂರ್ನಿಯಲ್ಲಿ 247.6 ಸ್ಕೋರ್ ಮಾಡಿದ ಪೋಲೆಂಡ್‍ನ ಎಮಿಲಿಯಾ ಬಬ್‍ಸ್ಕಾ ಬೆಳ್ಳಿ ತನ್ನದಾಗಿಸಿಕೊಂಡಿದ್ದು, ಸ್ವೀಡನ್‍ನ ಅನ್ನಾ ನಾರ್ಮನ್ (225.6) ಕಂಚು ಗೆದ್ದಿದ್ದಾರೆ. ಇದನ್ನೂ ಓದಿ: ಶತಕ ಸಿಡಿಸಿ ಸಚಿನ್, ಕೊಹ್ಲಿ, ಸ್ಮಿತ್ ಜೊತೆ ಸ್ಥಾನ ಪಡೆದ ರೂಟ್

    ಫ್ರಾನ್ಸ್‌ನಲ್ಲಿ ನಡೆಯುತ್ತಿರುವ ವಿಶ್ವಪ್‍ನಲ್ಲಿ ಅವನಿಯ ಕೋಚ್‍ಗೆ ವೀಸಾ ನಿರಾಕರಿಸಲಾಗಿತ್ತು. ಇದರಿಂದಾಗಿ ಅವರು ಈ ಟೂರ್ನಿಯಲ್ಲಿ ಪಾಲ್ಗೊಳ್ಳುವ ಅವಕಾಶವನ್ನು ಕಳೆದುಕೊಳ್ಳುತ್ತಿದ್ದರು. ಆದರೆ ಭಾರತ ಕ್ರೀಡಾ ಪ್ರಾಧಿಕಾರ ಮತ್ತು ಕ್ರೀಡಾ ಸಚಿವಾಲಯ ಮಧ್ಯಪ್ರವೇಶಿಸಿ, ಗೊಂದಲ ಬಗೆಹರಿಸಿತ್ತು. ಇದನ್ನೂ ಓದಿ: ಧೋನಿಯಿಂದ ತಾನು ಕಲಿತದ್ದನ್ನು ರಿವೀಲ್ ಮಾಡಿದ ಆಫ್ರಿಕಾದ ವೇಗಿ ಡ್ವೈನ್ ಪ್ರಿಟೋರಿಯಸ್

    ಕಳೆದ ಆಗಸ್ಟ್‌ನಲ್ಲಿ ನಡೆದಿದ್ದ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನ ಮತ್ತು ಕಂಚು ಗೆದ್ದಿದ್ದ ಅವರು ಪ್ಯಾರಾಲಿಂಪಿಕ್ಸ್‌ನಲ್ಲಿ 2 ಪದಕ ಗೆದ್ದ ಮೊದಲ ಭಾರತೀಯ ಮಹಿಳೆ ಎಂಬ ಗೌರವ ಇವರಿಗೆ ಒಲಿದಿತ್ತು.

  • ಫ್ರಾನ್ಸ್‌ನಲ್ಲಿ ಸಾಧನೆ ಮಾಡಿ ಬಂದ ಧಾರವಾಡದ ಆಟಗಾರ್ತಿ

    ಫ್ರಾನ್ಸ್‌ನಲ್ಲಿ ಸಾಧನೆ ಮಾಡಿ ಬಂದ ಧಾರವಾಡದ ಆಟಗಾರ್ತಿ

    ಧಾರವಾಡ: ಧಾರವಾಡದ ಯುವತಿ ಒಬ್ಬಳು ಇಡೀ ಭಾರತವೇ ಹೆಮ್ಮೆ ಪಡುವಂತೆ ತನ್ನ ಆಟ ಪ್ರದರ್ಶಿಸಿ ಭಾರತಕ್ಕೆ ಪದಕ ತಂದುಕೊಡುವಲ್ಲಿ ಯಶಸ್ವಿಯಾಗಿದ್ದಾಳೆ.

    ಧಾರವಾಡದ ಮುಗಳಿ ಗ್ರಾಮದ ಪ್ರಿಯಾಂಕ ಒಲೆಕಾರ್, ಫ್ರಾನ್ಸ್‌ನಲ್ಲಿ ನಡೆದ ರಿಲೇ ಓಟದಲ್ಲಿ ಕಂಚಿನ ಪದಕಕ್ಕೆ ಮತ್ತಿಟ್ಟಿದ್ದಾಳೆ. ಓಟದಲ್ಲೇ ಸದಾ ಮುಂದಿದ್ದ ಪ್ರಿಯಾಂಕ ಹಾಸ್ಟೆಲ್‍ನಲ್ಲಿಯೇ ಇದ್ದು, ವಿದ್ಯಾಭ್ಯಾಸದ ಜೊತೆಗೆ ಆಟದಲ್ಲೂ ಸಹ ಮುಂದಾಗಿದ್ದಳು. ಹೀಗಾಗಿ ಭುವನೇಶ್ವರದಲ್ಲಿ ನಡೆದ ಸೆಲೆಕ್ಷನ್‍ನಲ್ಲಿ ಭಾಗಿಯಾಗಿ ಫ್ರಾನ್ಸ್ ಟಿಕೆಟ್‍ನ್ನು ಖಚಿತಪಡಿಸಿಕೊಂಡಿದ್ದಳು. ಇದನ್ನೂ ಓದಿ: ಮೊದಲ ಮಹಾಯುದ್ಧದಲ್ಲಿ ತಯಾರಿಸಿದ್ದ ಸಜೀವ ಬಾಂಬ್ ಪತ್ತೆ – ಮುಂದೇನಾಯ್ತು?

    ಪ್ರಾನ್ಸ್‌ನ ರ್ಮಡಿಯಲ್ಲಿ ನಡೆದ ರಿಲೇ ಸ್ಪರ್ಧೇಯಲ್ಲಿ ಭಾರತವನ್ನು ಪ್ರತಿನಿಧಿಸಿ ಕಂಚಿನ ಪದಕ ಗೆದ್ದು ಸಾಧನೆ ಮಾಡಿದ್ದಾಳೆ. ಈಕೆಯ ಸಾಧನೆಗೆ ಬೆನ್ನು ತಟ್ಟಿ ಹಿಂದೆ ನಿಂತಿದ್ದು ಈಕೆಯ ಕೋಚ್ ಶ್ಯಾಮಲಾ ಪಾಟೀಲ್. ಭಾರತದ ಟೀಮ್‍ನ ಕೋಚ್ ಆಗಿದ್ದ ಶ್ಯಾಮಲಾ ಫ್ರಾನ್ಸ್‌ನಲ್ಲಿ ಎಲ್ಲ ರೀತಿಯ ಬೆಂಬಲ ನೀಡುವ ಮೂಲಕ ಪ್ರಿಯಾಂಕ ಸಾಧನೆಗೆ ಕೈ ಜೋಡಿಸಿದರು. ಮೂಲತಃ ಸಾರಿಗೆ ನೌಕರನ ಮಗಳಾಗಿರುವ ಪ್ರಿಯಾಂಕ ಇಷ್ಟೊಂದು ಸಾಧನೆ ಮಾಡಿರುವುದು ಇಡೀ ಧಾರವಾಡಕ್ಕೆ ಹೆಮ್ಮೆ ತಂದಿದೆ.

    64 ದೇಶಗಳ ಎದುರಿಗೆ ಸಮಬಲ ಹೋರಾಟದ ಮೂಲಕ ಎಲ್ಲರನ್ನು ಹಿಂದಿಕ್ಕಿ 3ನೇಯ ಸ್ಥಾನ ಪಡೆದಿದ್ದು ಧಾರವಾಡಕ್ಕೆ ಖುಷಿಯ ಸಂಗತಿ. ಕರ್ನಾಟಕದ ಇಬ್ಬರು ಹಾಗೂ ತಮಿಳುನಾಡಿನ ಇಬ್ಬರು ಯುವತಿಯರು ಪ್ರಿಯಾಂಕಗೆ ಕೈ ಜೋಡಿಸಿದ್ದು, 300 ಮೀಟರ್ ರಿಲೇಯಲ್ಲಿ ಕಂಚಿನ ಪದಕವನ್ನು ಗೆದ್ದು ಬೀಗಿದ್ದಾರೆ. ಅದರಲ್ಲಿ ಫ್ರಾನ್ಸ್ ಮೊದಲ ಸ್ಥಾನ ಪಡೆದರೆ, ಚೀನಾ ಎರಡನೇ ಸ್ಥಾನ ಹಾಗೂ ಭಾರತಕ್ಕೆ 3ನೇಯ ಸ್ಥಾನ ದಕ್ಕಿದೆ. ಇದನ್ನೂ ಓದಿ: ನಿರ್ಮಾಣ ಹಂತದಲ್ಲಿರುವ ಶೋರೂಂನಲ್ಲಿ ನವವಿವಾಹಿತೆ ಶವ ಪತ್ತೆ

    ಒಟ್ಟಾರೆ ಎರಡು ವರ್ಷಗಳಿಂದ ಕೋವಿಡ್ ನೆಪವನ್ನು ಹೇಳುತ್ತಲೇ ಸರ್ಕಾರ ಯಾವುದೇ ಸಹಾಯವನ್ನು ಈ ಯುವ ಅಥ್ಲೆಟಿಕ್ಸ್‌ಗಳಿಗೆ ನೀಡಿಲ್ಲ. ಆದರೂ ಸಹ ಜನರ ಸಹಾಯದಿಂದ ಹಾಗೂ ಸಾಲಸೋಲ ಮಾಡಿಕೊಂಡು ಸಾಧನೆ ಮಾಡಿದ್ದು ನಿಜಕ್ಕೂ ಯುವತಿಯ ಸಾಧನೆಗೆ ನಮ್ಮದೊಂದು ಸಲಾಂ.

  • ಇಂದಿನಿಂದ ಕಾನ್ ಚಿತ್ರೋತ್ಸವ : ರಂಗಾಗಿದೆ ರೆಟ್ ಕಾರ್ಪೆಟ್

    ಇಂದಿನಿಂದ ಕಾನ್ ಚಿತ್ರೋತ್ಸವ : ರಂಗಾಗಿದೆ ರೆಟ್ ಕಾರ್ಪೆಟ್

    ಇಂದಿನಿಂದ ವಿಶ್ವದ ಪ್ರತಿಷ್ಠಿತ ಸಿನಿಮೋತ್ಸವಗಳಲ್ಲಿ ಒಂದಾದ ಕಾನ್ ಫಿಲ್ಮ್ ಫೆಸ್ಟಿವೆಲ್ ಶುರುವಾಗಲಿದೆ. ಇಂದು ಸಂಜೆ 7 ಗಂಟೆಯಿಂದ ಶುರುವಾಗುವ ಕ್ಯಾನ್ ಚಿತ್ರೋತ್ಸವದಲ್ಲಿ ರೆಡ್ ಕಾರ್ಪೆಟ್ ಮೇಲೆ ಭಾರತೀಯ ಸಿನಿಮಾ ರಂಗದ ಖ್ಯಾತ ತಾರೆಯರು ಹೆಜ್ಜೆ ಹಾಕಲಿದ್ದು, ಈಗಾಗಲೇ ಫ್ರಾನ್ಸ್ ನ ಕಾನ್ ನಗರದ ಫ್ರೆಂಚ್ ರಿವೇರಿಯಾಗೆ ಈ ತಾರೆಯರು ಬಂದಿಳಿದಿದ್ದಾರೆ.

    ಮೇ 17 ರಿಂದ ಮೇ 28ರವರೆಗೆ ನಡೆಯಲಿರುವ ಕಾನ್ ಸಿನಿಮೋತ್ಸವವು ವಿಶ್ವದ ನಾನಾ ಸಿನಿಮಾ ರಂಗವನ್ನು ಒಟ್ಟಾಗಿಸುವುದು ಫೆಸ್ಟಿವೆಲ್ ನ ವಿಶೇಷ. ಒಟ್ಟು 12 ದಿನಗಳ ಕಾಲ ನಡೆಯುವ ಚಿತ್ರೋತ್ಸವದಲ್ಲಿ ಸಿನಿ ಜಗತ್ತಿನ ಅನೇ ಗಣ್ಯರು ಭಾಗಿಯಾಗಲಿದ್ದು, ಬೇರೆ ಬೇರೆ ಕಾರ್ಯಕ್ರಮಗಳಲ್ಲಿ ಅವರು ಉಪಸ್ಥಿತರಿರಲಿದ್ದಾರೆ. ಇದನ್ನೂ ಓದಿ:  ಫ್ಯಾಟ್‌ ಸರ್ಜರಿ ಎಫೆಕ್ಟ್‌ – ಕಿರುತೆರೆ ನಟಿ ಚೇತನಾ ರಾಜ್‌ ಸಾವು

    ಕಳೆದ ಎರಡು ವರ್ಷಗಳಿಂದ ಕೊರೋನಾ ಕರಿನೆರಳಿನಿಂದಾಗಿ ಚಿತ್ರೋತ್ಸವ ಅಷ್ಟೇನೂ ಅದ್ಧೂರಿಯಾಗಿ ನಡೆದಿರಲಿಲ್ಲ. 2020ರಲ್ಲಿ ಚಿತ್ರೋತ್ಸವವನ್ನೇ ರದ್ದುಗೊಳಿಸಿದ್ದರೆ, 2021ರಲ್ಲಿ ಸೀಮಿತ ಮಾದರಿಯಲ್ಲಿ ಮಾತ್ರ ಚಿತ್ರೋತ್ಸವ ನಡೆಸಿದ್ದರು. ಈ ವರ್ಷ ಪ್ರತಿ ಸಲದಂತೆ ರಂಗುರಂಗಾಗಿ ಆಯೋಜಿಸಲಾಗಿದೆ. ರೆಡ್ ಕಾರ್ಪೆಟ್ ಸೇರಿದಂತೆ ಸಿನಿಮಾ ಪ್ರದರ್ಶನ, ಸೆಮಿನಾರ್ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

    ಸಾಕಷ್ಟು ಸಲ ಕೇವಲ ಬಾಲಿವುಡ್ ಸಿಲೆಬ್ರಿಟಿಗಳಿಗೆ ಮಾತ್ರ ಕಾನ್ ನಲ್ಲಿ ಅವಕಾಶ ಸಿಗುತ್ತಿತ್ತು. ಈ ಬಾರಿ ದಕ್ಷಿಣದ ಅನೇಕ ತಾರೆಯರು ಈ ಚಿತ್ರೋತ್ಸವದಲ್ಲಿ ಭಾಗಿ ಆಗುತ್ತಿರುವುದು ವಿಶೇಷ. ಪೂಜಾ ಹೆಗ್ಡೆ, ನಯನತಾರಾ, ತಮನ್ನಾ ಭಾಟಿಯಾ, ಮಾಧವನ್, ಸಂಗೀತ ಮಾಂತ್ರಿಕ ಎ.ಆರ್. ರೆಹಮಾನ್, ನವಾಜುದ್ದೀನ್ ಸಿದ್ಧಿಖಿ, ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ಹೀಗೆ ಅನೇಕ ಕಲಾವಿದರು ಭಾಗಿಯಾಗಲು ಈಗಾಗಲೇ ಫ್ರಾನ್ಸ್ ಗೆ ಹೋಗಿದ್ದಾರೆ. ಇದನ್ನೂ ಓದಿ: ರಾಖಿ ಸಾವಂತ್ ಹೊಸ ಬಾಯ್‌ಫ್ರೆಂಡ್‌ ಮೈಸೂರಿನವನು : ಗೆಳೆಯ ಕೊಟ್ಟ ದುಬಾರಿ ಉಡುಗೊರೆ

    ಅದರಲ್ಲೂ ಈ ಬಾರಿಯ ಕಾನ್ಸ್ ಫೆಸ್ಟಿವೆಲ್ ನಲ್ಲಿ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಕಾನ್ ಚಿತ್ರೋತ್ಸವದ ಜ್ಯೂರಿಯಾಗಿ ಆಯ್ಕೆಯಾಗಿದ್ದಾರೆ. ತಮಿಳು, ಹಿಂದಿ ಸೇರಿದಂತೆ ಹಲವು ಭಾಷೆಯ ಚಿತ್ರಗಳು ಈ ಬಾರಿ ಫೆಸ್ಟಿವೆಲ್ ನಲ್ಲಿ ಪ್ರದರ್ಶನಗೊಳ್ಳಲಿವೆ.

  • ಸಾರ್ವಜನಿಕ ಸ್ಥಳಗಳಲ್ಲಿ ಮುಸ್ಲಿಂ ಮಹಿಳೆಯರು ಹಿಜಬ್‌ ಧರಿಸಿದ್ರೆ ದಂಡ: ಫ್ರೆಂಚ್‌ ಅಧ್ಯಕ್ಷೀಯ ಅಭ್ಯರ್ಥಿ

    ಸಾರ್ವಜನಿಕ ಸ್ಥಳಗಳಲ್ಲಿ ಮುಸ್ಲಿಂ ಮಹಿಳೆಯರು ಹಿಜಬ್‌ ಧರಿಸಿದ್ರೆ ದಂಡ: ಫ್ರೆಂಚ್‌ ಅಧ್ಯಕ್ಷೀಯ ಅಭ್ಯರ್ಥಿ

    ಪ್ಯಾರಿಸ್: ಸಾರ್ವಜನಿಕ ಸ್ಥಳಗಳಲ್ಲಿ ಮುಸ್ಲಿಂ ಮಹಿಳೆಯರು ಶಿರವಸ್ತ್ರ ಧರಿಸಿದರೆ (ಹಿಜಬ್)‌ ದಂಡ ಹಾಕಲಾಗುವುದು ಎಂದು ಫ್ರೆಂಚ್‌ ಬಲಪಂಥೀಯ ಅಧ್ಯಕ್ಷೀಯ ಅಭ್ಯರ್ಥಿ ಮರೀನ್ ಲೆ ಪೆನ್ ಪ್ರತಿಜ್ಞೆ ಮಾಡಿದ್ದಾರೆ.

    ಅಧ್ಯಕ್ಷೀಯ ಚುನಾವಣೆಗೆ ಇನ್ನು ಮೂರು ದಿನಗಳು ಬಾಕಿ ಇರುವ ಹೊತ್ತಿನಲ್ಲೇ ಪೆನ್‌ ಈ ಹೇಳಿಕೆ ನೀಡಿದ್ದಾರೆ. ಮತ ಬೇಟೆಗಾಗಿ ಅಭ್ಯರ್ಥಿಗಳು ಕೊನೆ ಹಂತದ ಪ್ರಚಾರದಲ್ಲಿ ಭಾರಿ ಸದ್ದು ಮಾಡುತ್ತಿದ್ದಾರೆ. ಇದನ್ನೂ ಓದಿ: ಮಂಡ್ಯದ ಮುಸ್ಕಾನ್ ಖಾನ್‍ನನ್ನು ಹೊಗಳಿದ ಮೋಸ್ಟ್ ವಾಂಟೆಡ್ ಅಲ್ ಖೈದಾ ಉಗ್ರ

    ಫ್ರಾನ್ಸ್‌ ಅಧ್ಯಕ್ಷ ಇಮ್ಯಾನುಯೆಲ್‌ ಮ್ಯಾಕ್ರನ್‌ ಅವರು ಈ ಬಾರಿಯೂ ಗೆಲ್ಲುವ ಸಾಧ್ಯತೆಯಿದ್ದರೂ, ಅಂತಿಮ ಹಂತದಲ್ಲಿ ಲೆ ಪೆನ್‌ ಭಾರೀ ಪೈಪೋಟಿ ನೀಡುವ ಸಾಧ್ಯತೆ ಇದೆ. ಫ್ರಾನ್ಸ್‌ನ ಬಲ ಮತ್ತು ಎಡಪಂಥೀಯ ಪಕ್ಷಗಳು ಚುನಾವಣೆ ಸಮರವನ್ನು ಎದುರಿಸುತ್ತಿವೆ. ಎಡಪಂಥೀಯ ಅಭ್ಯರ್ಥಿ ಜೀನ್-ಲುಕ್ ಮೆಲೆನ್‌ಚೋನ್ ಮೂರನೇ ಸ್ಥಾನಕ್ಕೆ ಬರಲಿದ್ದಾರೆ ಎನ್ನಲಾಗಿದೆ.

    ಶಿರವಸ್ತ್ರ ಕುರಿತು ಆರ್‌ಟಿಎಲ್ ರೇಡಿಯೊಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಲೆ ಪೆನ್, ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲಿ ಶಿರವಸ್ತ್ರವನ್ನು ನಿಷೇಧಿಸುವ ತನ್ನ ಪ್ರತಿಜ್ಞೆಯನ್ನು ಹೇಗೆ ಕಾರ್ಯಗತಗೊಳಿಸಲಾಗುವುದು ಎಂದು ವಿವರಿಸಿದ್ದಾರೆ. ಕಾರ್‌ಗಳಲ್ಲಿ ಸೀಟ್‌ಬೆಲ್ಟ್ ಧರಿಸುವ ರೀತಿಯಲ್ಲಿಯೇ, ಶಿರವಸ್ತ್ರ ಧರಿಸುವ ನಿಯಮವನ್ನು ಪೊಲೀಸರು ಜಾರಿಗೊಳಿಸುತ್ತಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಪಾಕ್‍ನಲ್ಲಿ ತಿಕ್ಕಾಟ – ಭಾರತದ ಸಹಾಯ ಕೇಳಿದ ಪಿಒಕೆ ಪ್ರಜೆ

    ತಾರತಮ್ಯ ಮತ್ತು ವೈಯಕ್ತಿಕ ಸ್ವಾತಂತ್ರ್ಯಗಳ ಉಲ್ಲಂಘನೆಯ ಆಧಾರದ ಮೇಲೆ ತನ್ನ ಹಲವು ಪ್ರಸ್ತಾವಿತ ಕಾನೂನುಗಳಿಗೆ ಸಾಂವಿಧಾನಿಕ ಸವಾಲುಗಳನ್ನು ತಪ್ಪಿಸಲು ಜನಮತಗಣನೆಗಳನ್ನು ಬಳಸುವುದಾಗಿ ಲೆ ಪೆನ್‌ ಹೇಳಿದ್ದಾರೆ.

    ಶಾಲೆಗಳಲ್ಲಿ ಧಾರ್ಮಿಕ ಚಿಹ್ನೆಗಳು ಅಥವಾ ಸಾರ್ವಜನಿಕವಾಗಿ ಪೂರ್ತಿ ಮುಖವನ್ನು ಮುಚ್ಚಿಕೊಳ್ಳುವ ಹೊದಿಕೆಗಳನ್ನು ನಿಷೇಧಿಸುವ ಕ್ರಮಗಳನ್ನು ಫ್ರಾನ್ಸ್‌ನ ಹಿಂದಿನ ಶಾಸನಗಳಲ್ಲಿ ಸೂಚಿಸಲಾಗಿದೆ. ಇದನ್ನೂ ಓದಿ: ಲವ್ ಜಿಹಾದ್ ಕೇಸ್‍ಗೆ ಟ್ವಿಸ್ಟ್ – ನನ್ನನ್ನು ಯಾರು ಒತ್ತಾಯ ಪೂರ್ವಕವಾಗಿ ಕರೆದುಕೊಂಡು ಬಂದಿಲ್ಲ ಅಂದ ಯುವತಿ

    ಕರ್ನಾಟಕ ರಾಜ್ಯದಲ್ಲಿ ಆರಂಭವಾದ ಹಿಜಬ್‌ ವಿವಾದ ಈಗ ಇಡೀ ವಿಶ್ವದಲ್ಲಿ ಸದ್ದು ಮಾಡುತ್ತಿದೆ. ಇದೇ ಹೊತ್ತಿನಲ್ಲಿ ಫ್ರಾನ್ಸ್‌ನಲ್ಲೂ ಚುನಾವಣೆಗೆ ಹಿಜಬ್‌ ಅನ್ನು ರಾಜಕೀಯ ಅಸ್ತ್ರವಾಗಿ ಬಳಸಿಕೊಳ್ಳಲಾಗುತ್ತಿದೆ. ಫ್ರಾನ್ಸ್‌ನ ಎಡ ಹಾಗೂ ಬಲಪಂಥೀಯ ಪಕ್ಷಗಳು ಮತ ಬೇಟೆಗಾಗಿ ಹಿಜಬ್‌ ಅಸ್ತ್ರ ಪ್ರಯೋಗಿಸುತ್ತಿವೆ.

  • ನಿಮ್ಮೊಂದಿಗೆ ನಾವಿದ್ದೇವೆ: ಐಫೆಲ್‌ ಟವರ್‌ನಲ್ಲಿ ಉಕ್ರೇನ್‌ ರಾಷ್ಟ್ರೀಯ ವರ್ಣ ಬೆಳಗಿಸಿ ಫ್ರಾನ್ಸ್‌ ಅಭಯ

    ನಿಮ್ಮೊಂದಿಗೆ ನಾವಿದ್ದೇವೆ: ಐಫೆಲ್‌ ಟವರ್‌ನಲ್ಲಿ ಉಕ್ರೇನ್‌ ರಾಷ್ಟ್ರೀಯ ವರ್ಣ ಬೆಳಗಿಸಿ ಫ್ರಾನ್ಸ್‌ ಅಭಯ

    ಪ್ಯಾರಿಸ್: ಉಕ್ರೇನ್‌ ಮೇಲೆ ಆಕ್ರಮಣ ನಡೆಸುತ್ತಿರುವ ರಷ್ಯಾ ನಡೆಗೆ ಅಮೆರಿಕ ಸೇರಿದಂತೆ ಅನೇಕ ಪಾಶ್ಚಾತ್ಯ ರಾಷ್ಟ್ರಗಳು ವಿರೋಧ ವ್ಯಕ್ತಪಡಿಸಿವೆ. ಪ್ಯಾರಿಸ್‌ನಲ್ಲಿರುವ ಐಫೆಲ್‌ ಟವರ್‌ನಲ್ಲಿ ಉಕ್ರೇನ್‌ ರಾಷ್ಟ್ರೀಯ ವರ್ಣವನ್ನು ವಿದ್ಯುತ್‌ ದೀಪಾಲಂಕಾರದಿಂದ ಬೆಳಗಿಸುವ ಮೂಲಕ ರಷ್ಯಾ ಯುದ್ಧವನ್ನು ಫ್ರಾನ್ಸ್‌ ವಿರೋಧಿಸಿದೆ.

    ಪ್ಯಾರಿಸ್‌ ಮೇಯರ್‌ ಆನ್ನೆ ಹಿಡಾಲ್ಗೊ ಅವರ ಕೋರಿಕೆಯ ಮೇರೆಗೆ ಐಫೆಲ್‌ ಟವರ್‌ ಶುಕ್ರವಾರ ಉಕ್ರೇನ್‌ನ ರಾಷ್ಟ್ರೀಯ ನೀಲಿ ಮತ್ತು ಹಳದಿ ಬಣ್ಣಗಳಲ್ಲಿ ಬೆಳಗಿತು. ರಷ್ಯಾದ ದಾಳಿಯ ಹಿನ್ನೆಲೆಯಲ್ಲಿ ಉಕ್ರೇನ್‌ ಜನರೊಂದಿಗೆ ಒಗ್ಗಟ್ಟನ್ನು ಸೂಚಿಸುವ ಸಂಕೇತ ಇದು ಎಂದು ಮೇಯರ್‌ ತಿಳಿಸಿದ್ದಾರೆ. ಇದನ್ನೂ ಓದಿ: ಪೋಷಕರನ್ನು ಕಳೆದುಕೊಂಡು ನಡುಬೀದಿಯಲ್ಲೇ ಬಾಲಕನ ಆಕ್ರಂದನ

    ರಷ್ಯಾ ಸೇನಾ ಪಡೆ ಈಗಾಗಲೇ ಉಕ್ರೇನ್‌ ರಾಜಧಾನಿ ಕೀವ್‌ ಪ್ರವೇಶಿಸಿದ್ದು, ಗಗನಚುಂಬಿ ಕಟ್ಟಡಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದೆ. ಕ್ಷಿಪಣಿ ದಾಳಿಯಿಂದಾಗಿ ದೇಶದ ಜನತೆ ತತ್ತರಿಸಿ ಹೋಗಿದ್ದಾರೆ. ಎಲ್ಲರೂ ಸುರಕ್ಷಿತ ಸ್ಥಳಗಳಿಗೆ ವಲಸೆ ಹೋಗುತ್ತಿದ್ದಾರೆ.

    ಉಕ್ರೇನ್‌ ಮಿಲಿಟರಿ ಮೇಲೆ ನಿಯಂತ್ರಣ ಸಾಧಿಸಲು ಈ ಯುದ್ಧ ನಡೆಸಲಾಗುತ್ತಿದೆ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ತಿಳಿಸಿದ್ದಾರೆ. ಆದರೆ ಪುಟಿನ್‌ ನಿರ್ಧಾರಕ್ಕೆ ಅಮೆರಿಕ ಸೇರಿ ಅನೇಕ ರಾಷ್ಟ್ರಗಳು ವಿರೋಧ ವ್ಯಕ್ತಪಡಿಸಿವೆ. ಇದನ್ನೂ ಓದಿ: ಯುದ್ಧ ಬೇಡ: ತನ್ನ ದೇಶಕ್ಕೆ ರಷ್ಯಾ ಟೆನಿಸ್‌ ತಾರೆ ಮನವಿ

    ಉಕ್ರೇನ್‌ ಬಿಕ್ಕಟ್ಟು ಮತ್ತಷ್ಟು ಉಲ್ಬಣಗೊಳ್ಳುತ್ತಿರುವ ಸಂದರ್ಭದಲ್ಲಿ ಫ್ರೆಂಚ್‌ ಅಧ್ಯಕ್ಷ ಇಮ್ಯಾನುಯೆಲ್‌ ಮ್ಯಾಕ್ರನ್‌, ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಮತ್ತು ರಷ್ಯಾ ಅಧ್ಯಕ್ಷ ಪುಟಿನ್‌ ಇಬ್ಬರೊಂದಿಗೂ ಮಾತುಕತೆ ನಡೆಸಿದ್ದಾರೆ.

  • ರಫೆಲ್ ಯುದ್ಧ ವಿಮಾನ ಖರೀದಿ – ಸುಸೇನ್ ಗುಪ್ತಾ  ಮೇಲೆ ಲಂಚ ಸ್ವೀಕಾರ ಆರೋಪ

    ರಫೆಲ್ ಯುದ್ಧ ವಿಮಾನ ಖರೀದಿ – ಸುಸೇನ್ ಗುಪ್ತಾ ಮೇಲೆ ಲಂಚ ಸ್ವೀಕಾರ ಆರೋಪ

    ನವದೆಹಲಿ: ಬಹುಕೋಟಿ ರಫೆಲ್ ಯುದ್ಧ ವಿಮಾನ ಖರೀದಿಗಾಗಿ ಮಧ್ಯವರ್ತಿ ಸುಸೇನ್ ಗುಪ್ತಾಗೆ ಫ್ರಾನ್ಸ್ ನ ಡಸಾಲ್ಟ್ ಏವಿಯೇಷನ್ 64 ಕೋಟಿ ರೂಪಾಯಿ ಲಂಚ ನೀಡಿತ್ತು ಎಂಬ ಸ್ಫೋಟಕ ವರದಿಯನ್ನು ಫ್ರಾನ್ಸ್ ನ ಮೀಡಿಯಾಪಾರ್ಟ್ ಸಂಸ್ಥೆ ಬಿಚ್ಚಿಟ್ಟಿದೆ.

    ಈ ಲಂಚ ಸಂದಾಯದ ಬಗ್ಗೆ ಮಾರಿಷಸ್‍ನ ಅಟಾರ್ನಿ ಜನರಲ್ ಅವರೇ ಖುದ್ದು ಪತ್ರ ಬರೆದಿದ್ದರೂ ಸಿಬಿಐ ಮತ್ತು ಜಾರಿ ನಿರ್ದೇಶನಾಲಯ ತನಿಖೆ ನಡೆಸಲಿಲ್ಲ ಎಂಬ ಅಂಶ ವರದಿಯಲ್ಲಿ ಉಲ್ಲೇಖವಾಗಿದೆ. 36 ರಫೆಲ್ ಯುದ್ಧ ವಿಮಾನಗಳ ಡೀಲ್ ಕುದುರಿಸುವ ಸಲುವಾಗಿ 2009ರಿಂದ 2012ರ ಅವಧಿಯಲ್ಲಿ ಮಾರಿಷಸ್‍ನಲ್ಲಿರುವ ಗುಪ್ತಾಗೆ ಸೇರಿದ ಕಂಪನಿ ಇಂಟರ್‍ಸ್ಟೆಲರ್ ಮೂಲಕ ಕಮಿಷನ್ ಪಾವತಿ ಮಾಡಲಾಗಿತ್ತು ಎಂಬ ಗಂಭೀರ ಆರೋಪ ಕೇಳಿ ಬಂದಿದೆ. ಇದನ್ನೂ ಓದಿ: 60 ಸಾವಿರ ಕೋಟಿ ರಫೇಲ್ ಡೀಲ್‍ನಲ್ಲಿ ಕೋಟಿ ಕೋಟಿ ಗಿಫ್ಟ್ ಸಿಕ್ಕಿದ್ಯಾರಿಗೆ – ಕಾಂಗ್ರೆಸ್ ಪ್ರಶ್ನೆ

    ಬೋಗಸ್ ಬಿಲ್‍ಗಳ ಮೂಲಕ ಈ ಹಣ ವರ್ಗಾವಣೆ ಮಾಡಲಾಗಿತ್ತು. ರಫೆಲ್ ಡೀಲ್ ಮೇಲೆ ಪ್ರಭಾವ ಬೀರುವ ಸಲುವಾಗಿ ಫ್ರಾನ್ಸ್ ಥೇಲ್ಸ್ ಕಂಪನಿ ಕೂಡಾ ಗುಪ್ತಾಗೆ ಕಮಿಷನ್ ಸಂದಾಯ ಮಾಡಿತ್ತು. 2018ರಲ್ಲೇ ಈ ಅಕ್ರಮದ ಬಗ್ಗೆ ದಾಖಲೆಗಳಿದ್ದರೂ ಸಿಬಿಐ ಮತ್ತು ಇಡಿ ತನಿಖೆ ನಡೆಸಲಿಲ್ಲ ಎಂದು ಮೀಡಿಯಾ ಪಾರ್ಟ್ ವರದಿಯಲ್ಲಿ ಉಲ್ಲೇಖೆಸಿದೆ. ಇದನ್ನೂ ಓದಿ: ರಫೇಲ್ ಡೀಲ್‍ನಲ್ಲಿ ನಿಮಗೆ ಎಷ್ಟು ಕಮೀಷನ್ ಸಿಕ್ಕಿದೆ: ಮೋದಿಗೆ ಸಿದ್ದರಾಮಯ್ಯ ಪ್ರಶ್ನೆ

    ಈ ಹಿಂದೆ ಕೂಡ  ಮೀಡಿಯಾಪಾರ್ಟ್ ವರದಿ ಮಾಡಿರುವ ಪ್ರಕಾರ, 2016ರಲ್ಲಿ ಭಾರತ ಮತ್ತು ಫ್ರಾನ್ಸ್ ನಡುವೆ ಯುದ್ಧ ವಿಮಾನ ಖರೀದಿ ವ್ಯವಹಾರ ನಡೆದಿತ್ತು. ಆ ವೇಳೆ ಫ್ರಾನ್ಸಿನ ಡಸಾಲ್ಟ್ ಏವಿಯೇಷನ್ ಭಾರತದ ಓರ್ವ ಮಧ್ಯವರ್ತಿಗೆ 1.1 ಮಿಲಿಯನ್ ಯುರೋ ಗಿಫ್ಟ್ ರೂಪದಲ್ಲಿ ನೀಡಿದೆ. 2017ರ ಡಸಾಲ್ಟ್ ಸಮೂಹದ ಲೆಕ್ಕ ಪತ್ರಗಳನ್ನ ಪರಿಶೀಲಿಸಿದಾಗ ಮಧ್ಯವರ್ತಿ ಗ್ರಾಹಕರಿಗೆ ಗಿಫ್ಟ್ ರೂಪದಲ್ಲಿ 1.1 ಮಿಲಿಯನ್ ವರ್ಗಾವಣೆ ಆಗಿರೋದು ಬೆಳಕಿಗೆ ಬಂದಿದೆ ಎಂದು ತಿಳಿಸಿತ್ತು. ಇದನ್ನೂ ಓದಿ: ಕೈ ಅವರದು, ಕಾಲು ಅವರದು, ಎಲ್ಲಾದರೂ ಇಟ್ಟುಕೊಳ್ಳಲಿ: ಹ್ಯಾರಿಸ್

  • ಭಾರತದ ಐತಿಹಾಸಿಕ ಸಾಧನೆ- ಯಾವ ದೇಶದಲ್ಲಿ ಎಷ್ಟು ಪ್ರಮಾಣದಲ್ಲಿ ಲಸಿಕೆ ವಿತರಿಸಲಾಗಿದೆ?

    ಭಾರತದ ಐತಿಹಾಸಿಕ ಸಾಧನೆ- ಯಾವ ದೇಶದಲ್ಲಿ ಎಷ್ಟು ಪ್ರಮಾಣದಲ್ಲಿ ಲಸಿಕೆ ವಿತರಿಸಲಾಗಿದೆ?

    ನವದೆಹಲಿ: ಕೊರೊನಾ ಲಸಿಕೆ ವಿತರಣೆಯಲ್ಲಿ ಭಾರತ ಐತಿಹಾಸಿಕಾ ಸಾಧನೆ ಮಾಡಿದ್ದು ಒಟ್ಟು 100 ಕೋಟಿ ಲಸಿಕೆಯನ್ನು ವಿತರಿಸಿದೆ.

    ಈ ಪೈಕಿ ಶೇ.22.55 ರಷ್ಟು ಜನ ಪೂರ್ಣ ಪ್ರಮಾಣದಲ್ಲಿ ಲಸಿಕೆ ಅಂದರೆ ಎರಡು ಡೋಸ್ ಪಡೆದುಕೊಂಡಿದ್ದಾರೆ. 138 ಕೋಟಿ ಜನಸಂಖ್ಯೆ ಇರುವ ದೇಶದಲ್ಲಿ ಆರಂಭದಲ್ಲಿ ಲಸಿಕೆ ಅಭಾವ ಆದರೂ ಕೇಂದ್ರ ಸರ್ಕಾರದ ಬೇಡಿಕೆಗೆ ತಕ್ಕಂತೆ ಪುಣೆ ಸೀರಂ ಮತ್ತು ಹೈದರಾಬಾದಿನ ಭಾರತ್ ಬಯೋಟೆಕ್ ಕಂಪನಿ ಕೋವಿಶೀಲ್ಡ್ ಮತ್ತು ಕೊವ್ಯಾಕ್ಸಿನ್ ಲಸಿಕೆ ವಿತರಿಸಿದ್ದರಿಂದ ಈ ಸಾಧನೆ ನಿರ್ಮಾಣವಾಗಿದೆ.

    ಕೇಂದ್ರ ಸರ್ಕಾರ ಈ ವರ್ಷದ ಅಂತ್ಯದ ಒಳಗಡೆ ದೇಶದ 94 ಕೋಟಿ ವಯಸ್ಕರಿಗೆ ಲಸಿಕೆ ನೀಡಬೇಕೆಂಬ ಗುರಿಯನ್ನು ಹಾಕಿಕೊಂಡಿದೆ. ಇದನ್ನೂ ಓದಿ: ಅಭಿನಂದನೆಗಳು ಇಂಡಿಯಾ – 100 ಕೋಟಿ ಲಸಿಕೆ ವಿತರಿಸಿ ಮೈಲಿಗಲ್ಲು

    ಯಾವ ದೇಶದಲ್ಲಿ ಎಷ್ಟು?
    ವಿಶ್ವದಲ್ಲಿ ಅತೀ ಹೆಚ್ಚು ಜನ ಸಂಖ್ಯೆಯನ್ನು ಹೊಂದಿರುವ ದೇಶ ಚೀನಾ. ಒಟ್ಟು 140 ಕೋಟಿ ಜನಸಂಖ್ಯೆ ಹೊಂದಿರುವ ಚೀನಾ ಈ ವರೆಗೆ 223.2 ಕೋಟಿ ಡೋಸ್ ಲಸಿಕೆ ನೀಡಿದ್ದು ಈ ಮೂಲಕ ಶೇ.74.97 ಜನರಿಗೆ ಎರಡೂ ಲಸಿಕೆಯನ್ನು ವಿತರಣೆ ಮಾಡಿದೆ. ಚೀನಾದ ಬಳಿಕ ಜನಸಂಖ್ಯೆಯಲ್ಲಿ ಎರಡನೇ ಸ್ಥಾನದಲ್ಲಿರುವ ಭಾರತ ಇಂದು 100 ಕೋಟಿ ಡೋಸ್ ಲಸಿಕೆ ವಿತರಿಸುವ ಮೂಲಕ ಮಹತ್ವದ ಮೈಲಿಗಲ್ಲು ಸೃಷ್ಟಿಸಿದೆ.

    ಅಮೆರಿಕದಲ್ಲಿ ಒಟ್ಟು 32.95 ಕೋಟಿ ಜನಸಂಖ್ಯೆ ಇದ್ದು, ಇದರಲ್ಲಿ 40.8 ಕೋಟಿ ಡೋಸ್ ಲಸಿಕೆ ವಿತರಿಸಲಾಗಿದ್ದು ಈವರೆಗೆ ಶೇ.57.62 ಜನ ಎರಡು ಡೋಸ್ ಪಡೆದುಕೊಂಡಿದ್ದಾರೆ. ಇಂಗ್ಲೆಂಡ್‍ನಲ್ಲಿ 6.7 ಕೋಟಿ ಜನಸಂಖ್ಯೆ ಇದೆ. ಒಟ್ಟು 9.5 ಕೋಟಿ ಲಸಿಕೆ ವಿತರಣೆಯಾಗಿದ್ದು, ಶೇ.67.08 ಜನ ಪೂರ್ಣ ಪ್ರಮಾಣದಲ್ಲಿ ಲಸಿಕೆ ಪಡೆದುಕೊಂಡಿದ್ದಾರೆ. ಇದನ್ನೂ ಓದಿ: ಕೊರೊನಾ ಹೋರಾಟದಲ್ಲಿ ಭಾರತದ ಮೈಲಿಗಲ್ಲು – 100 ಕೋಟಿ ಲಸಿಕೆ ವಿತರಣೆ

    ಜರ್ಮನಿಯಲ್ಲಿ 8.3 ಕೋಟಿ ಜನಸಂಖ್ಯೆ ಇದ್ದು, 10.9 ಕೋಟಿ ಡೋಸ್ ಲಸಿಕೆ ವಿತರಣೆ ಮಾಡಿ ಶೇ.65.75 ಜನರಿಗೆ ಲಸಿಕೆ ಕೊಟ್ಟಿದೆ. 6.74 ಕೋಟಿ ಜನಸಂಖ್ಯೆ ಹೊಂದಿರುವ ಫ್ರಾನ್ಸ್‍ನಲ್ಲಿ 10.1 ಕೋಟಿ ಡೋಸ್ ವಿತರಣೆ ಮಾಡಿ ಶೇ.67.56 ಜನ ಲಸಿಕೆ ಸ್ವೀಕರಿಸಿದ್ದಾರೆ.

    ಇಸ್ರೇಲ್‍ನಲ್ಲಿ ಒಟ್ಟು 94 ಲಕ್ಷ ಜನಸಂಖ್ಯೆ ಇದ್ದು ಅದರಲ್ಲಿ 1.5 ಕೋಟಿ ಡೋಸ್ ಲಸಿಕೆ ಪಡೆದರೆ ಶೇ. 62.97 ಜನರು ಪೂರ್ಣವಾಗಿ ಲಸಿಕೆ ಪಡೆದಿದ್ದಾರೆ. ಇಟಲಿಯಲ್ಲಿ 5.96 ಕೋಟಿ ಜನಸಂಖ್ಯೆಗೆ 8.7 ಕೋಟಿ ಡೋಸ್ ಲಸಿಕೆ ವಿತರಿಸಲಾಗಿದ್ದು, ಶೇ. 70.08 ಜನ ಎರಡು ಲಸಿಕೆಯನ್ನು ಪಡೆದುಕೊಂಡಿದ್ದಾರೆ. ಇದನ್ನೂ ಓದಿ: ಲಸಿಕೆ ನೀಡಲು ಬಂದ ಸಿಬ್ಬಂದಿಗೆ ಹಾವು ತೋರಿಸಿ ಬೆದರಿಕೆ ಹಾಕಿದ ಮಹಿಳೆ

    8.43 ಕೋಟಿ ಜನಸಂಖ್ಯೆ ಇರುವ ಟರ್ಕಿಯಲ್ಲಿ ಈಗಾಗಲೇ 11.3 ಕೋಟಿ ಡೋಸ್ ಲಸಿಕೆ ವಿತರಿಸಲಾಗಿದೆ. ಇದರೊಂದಿಗೆ ಇಲ್ಲಿ ಶೇ. 56.70 ಜನ ಪೂರ್ಣವಾಗಿ ಲಸಿಕೆ ಪಡೆದಿದ್ದಾರೆ.

  • ಫ್ರಾನ್ಸ್ ಅಧ್ಯಕ್ಷರೊಂದಿಗೆ ಪ್ರಧಾನಿ ಮೋದಿ ದೂರವಾಣಿ ಮಾತುಕತೆ

    ಫ್ರಾನ್ಸ್ ಅಧ್ಯಕ್ಷರೊಂದಿಗೆ ಪ್ರಧಾನಿ ಮೋದಿ ದೂರವಾಣಿ ಮಾತುಕತೆ

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಇಂದು ಫ್ರಾನ್ಸ್ ಗಣರಾಜ್ಯದ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರಾನ್ ಅವರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದರು.

    ಅಫ್ಘಾನಿಸ್ತಾನದ ಇತ್ತೀಚಿನ ಬೆಳವಣಿಗೆಗಳು ಸೇರಿದಂತೆ ಪ್ರಾದೇಶಿಕ ವಿಷಯಗಳ ಬಗ್ಗೆ ಉಭಯ ನಾಯಕರು ಚರ್ಚಿಸಿದರು. ಈ ನಿಟ್ಟಿನಲ್ಲಿ ಭಯೋತ್ಪಾದನೆ, ಮಾದಕ ದ್ರವ್ಯಗಳು, ಅಕ್ರಮ ಶಸ್ತ್ರಾಸ್ತ್ರಗಳು ಮತ್ತು ಮಾನವ ಕಳ್ಳಸಾಗಾಣಿಕೆ ಬಗ್ಗೆ ಉಭಯ ನಾಯಕರೂ ಪರಸ್ಪರ ಕಳವಳ ವ್ಯಕ್ತಪಡಿಸಿದರು. ಜೊತೆಗೆ ಮಾನವ ಹಕ್ಕುಗಳು, ಮಹಿಳೆಯರು ಮತ್ತು ಅಲ್ಪಸಂಖ್ಯಾತರ ಹಕ್ಕುಗಳನ್ನು ರಕ್ಷಿಸಬೇಕಾದ ಅಗತ್ಯದ ಬಗ್ಗೆ ಸಹ ಚರ್ಚೆ ನಡೆಸಿದರು. ಇದನ್ನೂ ಓದಿ: ಮೈಸೂರು ಅರಮನೆಗೆ ಸೇರಿದ 4 ಆನೆಗಳು ಗುಜರಾತಿಗೆ ಶಿಫ್ಟ್

    ಇಂಡೋ-ಪೆಸಿಫಿಕ್ ವಲಯದಲ್ಲಿ ದ್ವಿಪಕ್ಷೀಯ ಸಹಯೋಗ ಹೆಚ್ಚುತ್ತಿದೆ. ಈ ಪ್ರದೇಶದಲ್ಲಿ ಸ್ಥಿರತೆ ಮತ್ತು ಭದ್ರತೆಯನ್ನು ಉತ್ತೇಜಿಸುವಲ್ಲಿ ಭಾರತ-ಫ್ರಾನ್ಸ್ ಪಾಲುದಾರಿಕೆ ವಹಿಸುವ ಪ್ರಮುಖ ಪಾತ್ರವನ್ನು ಉಭಯ ನಾಯಕರು ಪರಿಶೀಲಿಸಿದರು.

    ಉಭಯ ದೇಶಗಳು ಆಳವಾಗಿ ಆದರಿಸುವ ಭಾರತ-ಫ್ರಾನ್ಸ್ ವ್ಯೂಹಾತ್ಮಕ ಪಾಲುದಾರಿಕೆಯ ಸ್ಫೂರ್ತಿಯೊಂದಿಗೆ ನಿಕಟ ಮತ್ತು ನಿಯಮಿತ ಸಮಾಲೋಚನೆಗಳನ್ನು ಮುಂದುವರಿಸಲು ನಾಯಕರು ಪರಸ್ಪರ ಸಮ್ಮತಿಸಿದರು.

  • ಫ್ರಾನ್ಸ್ ನಲ್ಲಿ ರಫೇಲ್ ಡೀಲ್ ತನಿಖೆ – ಕಳ್ಳನ ದಾಡಿ ಅಂದ್ರು ರಾಹುಲ್ ಗಾಂಧಿ

    ಫ್ರಾನ್ಸ್ ನಲ್ಲಿ ರಫೇಲ್ ಡೀಲ್ ತನಿಖೆ – ಕಳ್ಳನ ದಾಡಿ ಅಂದ್ರು ರಾಹುಲ್ ಗಾಂಧಿ

    ನವದೆಹಲಿ: ರಫೇಲ್ ಫೈಟರ್ ಪ್ಲೇನ್ ವಿಚಾರ ಮತ್ತೆ ಮುನ್ನಲೆಗೆ ಬಂದಿದೆ. ರಫೇಲ್ ಡೀಲ್ ಸಂಬಂಧ ಫ್ರಾನ್ಸ್ ನಲ್ಲಿ ತನಿಖೆಗೆ ಆದೇಶಿಸಲಾಗಿದೆ. ಈ ಬೆನ್ನಲ್ಲೇ ದೇಶದಲ್ಲಿ ರಾಜಕೀಯದಲ್ಲಿ ಹಲ್-ಚಲ್ ಉಂಟಾಗಿದೆ.

    ಫ್ರಾನ್ಸ್ ನಲ್ಲಿ ತನಿಖೆಗೆ ಆದೇಶವಾಗುತ್ತಲೇ, ಭಾರತದಲ್ಲಿಯೂ ರಫೇಲ್ ಡೀಲ್ ಕುರಿತು ಜಂಟಿ ಸಂಸದೀಯ ಸಮಿತಿ ರಚಿಸಿ ತನಿಖೆ ಮಾಡಿಸಬೇಕೆಂದು ಕಾಂಗ್ರೆಸ್ ಒತ್ತಾಯಿಸಿದೆ. ಇತ್ತ ಕಾಂಗ್ರೆಸ್ ಮಾಜಿ ಅಧ್ಯಕ್ಷ, ಸಂಸದ ರಾಹುಲ್ ಗಾಂಧಿ, ಕಳ್ಳನ ದಾಡಿ ಎಂದು ಬರೆದು ಟ್ವೀಟ್ ಮಾಡಿದ್ದಾರೆ.

    ಇನ್ನು ಈ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್ ವಕ್ತಾರ ರಣ್‍ದೀಪ್ ಸುರ್ಜೇವಾಲಾ, ಫ್ರಾನ್ಸ್ ನಲ್ಲಿ ರಫೇಲ್ ಡೀಲ್ ಬಗ್ಗೆ ನ್ಯಾಯಾಂಗ ತನಿಖೆಗೆ ಆದೇಶ ನೀಡಿರೋದನ್ನು ಗಮನಿಸಿದ್ರೆ ರಾಹುಲ್ ಗಾಂಧಿ ಆರೋಪಗಳು ಸತ್ಯ ಅನ್ನೋದು ಗೊತ್ತಾಗುತ್ತೆ. ಫ್ರಾನ್ಸ್ ಸರ್ಕಾರ ದ ಹಾಗೆ ನಮ್ಮಲ್ಲಿಯ ಜಂಟಿ ಸಂಸದೀಯ ಸಮಿತಿ ನೇತೃತ್ವದಲ್ಲಿ ರಫೇಲ್ ಡೀಲ್ ಬಗ್ಗೆ ತನಿಖೆ ನಡೆಸಬೇಕಿದೆ ಎಂದು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

    ರಫೇಲ್ ಹಗರಣದ ಭೀಕರ ಸತ್ಯ:
    ಇದೊಂದು ದೊಡ್ಡ ಭ್ರಷ್ಟಾಚಾರ, ದೇಶದ್ರೋಹ ಮತ್ತು ದೇಶದ ಬೊಕ್ಕಸದ ನಷ್ಟ ರಫೇಲ್ ಹಗರಣದಲ್ಲಿ ಅಡಗಿದೆ. ರಫೇಲ್ ಹಗರಣದ ಭೀಕರ ಸತ್ಯ ಕೊನೆಗೂ ಅನಾವರಣಗೊಂಡಿದೆ. ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿ ಸರಿ ಎಂಬುವುದು ಸಾಬೀತಾಗಿದೆ ಎಂದು ಬಿಜೆಪಿ ಸರ್ಕಾರದ ವಿರುದ್ಧ ಸುರ್ಜೇವಾಲಾ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಭಾರತದ ಸೈನ್ಯ ಸೇರಿದ 5ನೇ ಬ್ಯಾಚ್ ರಫೇಲ್ ಯುದ್ಧ ವಿಮಾನ

    ಕಾಂಗ್ರೆಸ್ ಆರೋಪಕ್ಕೆ ಬಿಜೆಪಿ ಉತ್ತರ:
    ಕಾಂಗ್ರೆಸ್ ಆರೋಪಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ, ಕಾಂಗ್ರೆಸ್ ಸುಳ್ಳು ಕಥೆಗಳಿಗೆ ಪರ್ಯಾಯ ಪದ. ಇಂದು ಮತ್ತೊಮ್ಮೆ ರಫೇಲ್ ಖರೀದಿ ವಿಚಾರದಲ್ಲಿ ಸುಳ್ಳು ಹೇಳುತ್ತಿದೆ. ಒಂದು ದೇಶದ ಎನ್‍ಜಿಓ ಯಾವುದೇ ವಿಷಯದ ಬಗ್ಗೆ ಆರೋಪಿಸಿದ್ದು, ಅಲ್ಲಿ ತನಿಖೆಗೆ ಆದೇಶ ನೀಡಲಾಗಿದೆ. ಆದ್ರೆ ಇದನ್ನು ಭ್ರಷ್ಟಾಚಾರ ರೂಪದಲ್ಲಿ ನೋಡಬಾರದು ಎಂದು ಹೇಳಿದ್ದಾರೆ. ಇದನ್ನೂ ಓದಿ: 60 ಸಾವಿರ ಕೋಟಿ ರಫೇಲ್ ಡೀಲ್‍ನಲ್ಲಿ ಕೋಟಿ ಕೋಟಿ ಗಿಫ್ಟ್ ಸಿಕ್ಕಿದ್ಯಾರಿಗೆ – ಕಾಂಗ್ರೆಸ್ ಪ್ರಶ್ನೆ