Tag: france

  • ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಅದ್ಧೂರಿ ಚಾಲನೆ – ಬೋಟ್‌ಗಳಲ್ಲಿ ಕ್ರೀಡಾಪಟುಗಳ ಪಥಸಂಚಲನ

    ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಅದ್ಧೂರಿ ಚಾಲನೆ – ಬೋಟ್‌ಗಳಲ್ಲಿ ಕ್ರೀಡಾಪಟುಗಳ ಪಥಸಂಚಲನ

    – ಇದೇ ಮೊದಲ ಬಾರಿಗೆ ಕ್ರೀಡಾಂಗಣದ ಹೊರಗೆ ಕಾರ್ಯಕ್ರಮ
    – ಬೋಟ್‌ನಲ್ಲಿ 6 ಕಿ.ಮೀ ಪಥಸಂಚಲನ

    ಪ್ಯಾರಿಸ್‌: 33ನೇ ಒಲಿಂಪಿಕ್ಸ್‌ ಕ್ರೀಡಾಕೂಟಕ್ಕೆ (Olympics Games) ಅದ್ಧೂರಿಯಾಗಿ ಫ್ರಾನ್ಸ್‌ನ ಪ್ಯಾರಿಸ್‌ನಲ್ಲಿ ಆರಂಭಗೊಂಡಿದೆ. ಸೆನ್ ನದಿಯ (River Seine) ಮೇಲೆ ಭಾರತೀಯ ಕಾಲಮಾನ ಶುಕ್ರವಾರ ರಾತ್ರಿ 11 ಗಂಟೆಗೆ ಉದ್ಘಾಟನಾ ಕಾರ್ಯಕ್ರಮಕ್ಕೆ ಚಾಲನೆ ಸಿಕ್ಕಿತು.

     

    ಇದೇ ಮೊದಲ ಬಾರಿಗೆ ಕ್ರೀಡಾಂಗಣದ ಹೊರಗೆ ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ ಬೋಟ್‌ ಮೂಲಕ ಸ್ಪರ್ಧಿಗಳ ಪಥ ಸಂಚಲನ ಕಾರ್ಯಕ್ರಮ ನಡೆಯಿತು. ಮೊದಲಿಗೆ ಗ್ರೀಸ್ ತಂಡ ಆಗಮಿಸಿತು. ಬಳಿಕ ಫ್ರೆಂಚ್ ಅಕ್ಷರಮಾಲೆಯ ಪ್ರಕಾರ ದೇಶದ ಸ್ಪರ್ಧಿಗಳು ಆಗಮಿಸಿದರು.

     

    ಕೆಲ ತಂಡಗಳಿಗೆ ಪ್ರತ್ಯೇಕ ಬೋಟ್ ಸಿಕ್ಕರೆ, 3-4 ತಂಡಗಳನ್ನು ಒಟ್ಟಿಗೆ ಸೇರಿಸಿ ಬೋಟ್‌ನಲ್ಲಿ ಪಥ ಸಂಚಲನ ನಡೆಸಿದರು. ಪಥ ಸಂಚಲನದ ವೇಳೆ ತುಂತುರು ಮಳೆ ಬಂದರೂ ಸ್ಪರ್ಧಿಗಳು ಉತ್ಸಾಹದಿಂದ ಅಭಿಮಾನಿಗಳತ್ತ ಕೈ ಬೀಸುತ್ತಿದ್ದರು. ಸೀನ್‌ ನದಿಯ ಆಸ್ಟರ್‌ಲಿಟ್ಜ್‌ ಬ್ರಿಡ್ಜ್‌ನ ಬಳಿ ಆರಂಭಗೊಂಡ ಪಥ ಸಂಚಲನ 6 ಕಿ.ಮೀ ದೂರದಲ್ಲಿರುವ ಐಫಲ್‌ ಟವರ್‌ ಬಳಿ ಮುಕ್ತಾಯಗೊಂಡಿತು.

     

     

    ಭಾರತ (India) 14ನೇ ತಂಡವಾಗಿ ಆಗಮಿಸಿತು. ಭಾರತದ ಬೋಟ್‌ನಲ್ಲಿ ಇಂಡೋನೇಷ್ಯಾ ಹಾಗೂ ಇರಾನ್ ತಂಡದ ಸ್ಪರ್ಧಿಗಳು ಇದ್ದರು. ಅತಿಥ್ಯ ವಹಿಸಿರುವ ಫ್ರಾನ್ಸ್‌ (France) ಕೊನೆಯ ತಂಡವಾಗಿ ಆಗಮಿಸಿದರೆ 2028ರ ಒಲಿಂಪಿಕ್ಸ್‌ಗೆ ಆತಿಥ್ಯ ನೀಡಲಿರುವ ಅಮೆರಿಕ (USA) ಕೊನೆಯಿಂದ ಎರಡನೇ ತಂಡವಾಗಿ ಪ್ರವೇಶಿಸಿತು. ಬೋಟ್‌ ಮೂಲಕ ಆಗಮಿಸಿದ ಎಲ್ಲಾ ತಂಡಗಳಿಗೆ ಕಾರಂಜಿ ಮೂಲಕ ವಾಟರ್‌ ಸೆಲ್ಯೂಟ್‌ ನೀಡಲಾಯಿತು.

    ಉದ್ಘಾಟನಾ ಸಮಾರಂಭದ ಪಥಸಂಚಲನದಲ್ಲಿ ಭಾರತದ ಒಟ್ಟು 78 ಮಂದಿ ಕ್ರೀಡಾಪಟುಗಳು ಭಾಗಿಯಾಗಿದ್ದರು. ಎರಡು ಒಲಿಂಪಿಕ್ಸ್‌ ಪದಕ ಗೆದ್ದ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು (PV Sindhu) ಮತ್ತು ಟೇಬಲ್ ಟೆನಿಸ್ ಪಟು ಶರತ್‌ ಕಮಾಲ್‌ ಅವರು ಭಾರತದ ಧ್ವಜಧಾರಿಗಳಾಗಿ ಪಥಸಂಚಲನವನ್ನು ಮುನ್ನಡೆಸಿದರು.

     

    ಈ ಕಾರ್ಯಕ್ರಮದಲ್ಲಿ ಫ್ರಾನ್ಸ್‌ನಲ್ಲಿ ನಡೆದ ಕ್ರಾಂತಿಕಾರಿ ಬೆಳವಣಿಗೆಗಳು, ಮಿಲಿಟರಿ ಕ್ಷೇತ್ರದಲ್ಲಿ ಸಾಧನೆಯನ್ನು ತೋರಿಸಲಾಯಿತು. ಫ್ರೆಂಚ್ ಸಿನಿಮಾದ 10 ದಿಗ್ಗಜ ನಾಯಕಿಯರ ಪ್ರತಿಮೆಗಳನ್ನು ಪ್ರದರ್ಶಿಸಿ ಗೌರವಿಸಲಾಯಿತು. ಪ್ಯಾರಿಸ್ ‘ಫ್ಯಾಷನ್ ನಗರಿ’ ಎಂದೇ ಕರೆಸಿಕೊಳ್ಳುವ ಕಾರಣ, ಫ್ಯಾಷನ್ ಶೋ ಸಹ ಆಯೋಜಿಸಲಾಗಿತ್ತು.

    ವಿಶ್ವ ಪ್ರಸಿದ್ಧ ಗಾಯಕಿ, ಅಮೆರಿಕದ ಲೇಡಿ ಗಾಗಾ (Lady Gaga) ಮೊದಲಿಗೆ ತಮ್ಮ ಅಮೋಘ ಕ್ಯಾಬೆ ನೃತ್ಯದ ಮಾಡಿ ಪ್ರೇಕ್ಷಕರನ್ನು ರಂಜಿಸಿದರು. ಕೋವಿಡ್ ನಂತರದಲ್ಲಿ ನಡೆಯುತ್ತಿರುವ ಮೊದಲ ಒಲಿಂಪಿಕ್ಸ್ ಕೂಟ ಆಗಸ್ಟ್ 11 ರವರೆಗೆ ನಡೆಯಲಿದ್ದು 206 ದೇಶಗಳ 10 ಸಾವಿರಕ್ಕೂ ಹೆಚ್ಚು ಕ್ರೀಡಾಪಟುಗಳು ಪಾಲ್ಗೊಂಡಿದ್ದಾರೆ.

  • Paris Olympics | ಜಿಯೋ ಸಿನಿಮಾದಲ್ಲಿ ಉಚಿತವಾಗಿ ವೀಕ್ಷಿಸಿ

    Paris Olympics | ಜಿಯೋ ಸಿನಿಮಾದಲ್ಲಿ ಉಚಿತವಾಗಿ ವೀಕ್ಷಿಸಿ

    ಮುಂಬೈ: ಫ್ರಾನ್ಸಿನ (France) ಪ್ಯಾರಿಸ್‌ನಲ್ಲಿ ನಡೆಯಲಿರುವ ಒಲಿಂಪಿಕ್ಸ್‌ (Paris Olympics) ನೇರ ಪ್ರಸಾರವನ್ನು ಭಾರತದ ವೀಕ್ಷಕರು ಜಿಯೋ ಸಿನಿಮಾದಲ್ಲಿ (Jio Cinema) ಉಚಿತವಾಗಿ ವೀಕ್ಷಿಸಬಹುದು.

    ಭಾರತದಲ್ಲಿ ಮೊದಲ ಬಾರಿಗೆ ಜಿಯೋ ಸಿನಿಮಾ ಒಲಿಂಪಿಕ್ಸ್‌ಗಾಗಿ 20 ಏಕಕಾಲಿಕ ಫೀಡ್‌ಗಳನ್ನು ಉಚಿತವಾಗಿ ನೀಡಲಿದೆ. ಎಲ್ಲವೂ 4K ವಿಡಿಯೋ ಆಗಿದ್ದು, ಇಂಗ್ಲಿಷ್, ಹಿಂದಿ, ತಮಿಳು ಮತ್ತು ತೆಲುಗಿನಲ್ಲಿ ಪ್ರಸಾರವಾಗಲಿದೆ. Sports18 ಸ್ಯಾಟಲೈಟ್‌ ವಾಹಿನಿಯ ಮೂಲಕ ಟಿವಿಯಲ್ಲೂ ಒಲಿಂಪಿಕ್ಸ್‌ ವೀಕ್ಷಣೆ ಮಾಡಬಹುದು. ಇದನ್ನೂ ಓದಿ: ಭಾರತ-ಲಂಕಾ ದ್ವಿಪಕ್ಷೀಯ ಸರಣಿ ವೇಳಾಪಟ್ಟಿ ಪ್ರಕಟ – ಕೋಚ್‌ ಆಗಿ ʻಗಂಭೀರ್‌ ಹೊಸ ಅಧ್ಯಾಯʼ ಶುರು!

    ಒಲಿಂಪಿಕ್ಸ್‌ ಕುಸ್ತಿಯಲ್ಲಿ ಚಿನ್ನದ ಪದಕ ಗೆದ ಸಾಕ್ಷಿ ಮಲಿಕ್, ಬಾಕ್ಸರ್ ವಿಜೇಂದರ್ ಸಿಂಗ್, ಖ್ಯಾತ ಟೆನ್ನಿಸ್‌ ಆಟಗಾರ್ತಿ ಸಾನಿಯಾ ಮಿರ್ಜಾ ಸೇರಿದಂತೆ ಹಲವು ಕ್ರೀಡಾಪಟುಗಳು ತಜ್ಞರ ಕ್ರೀಡಾ ಪ್ಯಾನಲ್‌ನಲ್ಲಿದ್ದಾರೆ.

    ಜುಲೈ 26 ರಿಂದ ಪ್ಯಾರಿಸ್‌ ಒಲಿಂಪಿಕ್ಸ್ ಆರಂಭಗೊಳ್ಳಲಿದ್ದು, ಆಗಸ್ಟ್‌ 11 ರಂದು ಮುಕ್ತಾಯವಾಗಲಿದೆ.

  • 2030ರ ವೇಳೆಗೆ 30,000 ಭಾರತೀಯ ವಿದ್ಯಾರ್ಥಿಗಳನ್ನು ಫ್ರಾನ್ಸ್ ಸ್ವಾಗತಿಸಲಿದೆ: ಮ್ಯಾಕ್ರನ್

    2030ರ ವೇಳೆಗೆ 30,000 ಭಾರತೀಯ ವಿದ್ಯಾರ್ಥಿಗಳನ್ನು ಫ್ರಾನ್ಸ್ ಸ್ವಾಗತಿಸಲಿದೆ: ಮ್ಯಾಕ್ರನ್

    ನವದೆಹಲಿ: 2030ರ ವೇಳೆಗೆ 30,000 ಭಾರತೀಯ ವಿದ್ಯಾರ್ಥಿಗಳನ್ನು ಫ್ರಾನ್ಸ್ ಸ್ವಾಗತಿಸಲಿದೆ ಎಂದು ಫ್ರಾನ್ಸ್‌ ಅಧ್ಯಕ್ಷ ಮ್ಯಾಕ್ರನ್‌ (Emmanuel Macron) ಘೋಷಿಸಿದ್ದಾರೆ.

    75ನೇ ಗಣರಾಜ್ಯೋತ್ಸವ ಆಚರಣೆಯ (Republic Day) ಮುಖ್ಯ ಅತಿಥಿಯಾಗಿ ಮ್ಯಾಕ್ರನ್ ಭಾರತಕ್ಕೆ ಆಗಮಿಸಿದ್ದಾರೆ. ಗಣರಾಜ್ಯೋತ್ಸವ ಆಚರಣೆಗೂ ಮುನ್ನ ಶುಕ್ರವಾರ ಬೆಳಗ್ಗೆ ತಮ್ಮ ಎಕ್ಸ್‌ ಖಾತೆಯಲ್ಲಿ ಮ್ಯಾಕ್ರನ್‌ ಈ ರೀತಿಯಾಗಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: Republic Day: ಯುದ್ಧ ಸ್ಮಾರಕಕ್ಕೆ ತೆರಳಿ ಹುತಾತ್ಮ ಯೋಧರಿಗೆ ಪ್ರಧಾನಿ ಮೋದಿ ಗೌರವ

    ಎಕ್ಸ್‌ನಲ್ಲೇನಿದೆ..?: 2030ರ ವೇಳೆಗೆ ಸುಮಾರು 30,000 ಭಾರತೀಯ ವಿದ್ಯಾರ್ಥಿಗಳನ್ನು ಫ್ರಾನ್ಸ್‌ನಲ್ಲಿ ಅಧ್ಯಯನ ಮಾಡಲು ಆಹ್ವಾನಿಸುವುದಾಗಿ ನಿರ್ಧರಿಸಿದ್ದೇನೆ. ಇದು ಬಹಳ ಮಹತ್ವಾಕಾಂಕ್ಷೆಯ ಗುರಿಯಾಗಿದೆ, ಆದರೆ ನಾನು ಅದನ್ನು ಮಾಡಲು ತೀರ್ಮಾನಿಸಿರುವುದಾಗಿ ಮ್ಯಾಕ್ರನ್‌ ತಿಳಿಸಿದ್ದಾರೆ.

    ಗುರುವಾರ ಭಾರತಕ್ಕೆ ಆಗಮಿಸಿರುವ ಮ್ಯಾಕ್ರನ್‌ ಅವರು ಜೈಪುರಕ್ಕೆ ಆಗಮಿಸಿದ್ದು ಈ ವೇಳೆ ಅವರನ್ನು ನರೇಂದ್ರ ಮೋದಿ (Narendra Modi) ಅವರು ಸ್ವಾಗತಿಸಿದ್ದರು. ಬಳಿಕ ಪ್ರಧಾನಿ ಜೊತೆ ಜೈಪುರದಲ್ಲಿ ಭರ್ಜರಿ ರೋಡ್ ಶೋ ನಲ್ಲಿ ಭಾಗಿಯಾಗಿದ್ದರು. ಗಣರಾಜ್ಯೋತ್ಸವದ ಬಳಿಕ ಅವರು ಫ್ರಾನ್ಸ್‌ ರಾಯಭಾರ ಕಚೇರಿಗೆ ಭೇಟಿ ನೀಡಲಿರುವ ಅವರು, ಅಲ್ಲಿನ ಸಿಬ್ಬಂದಿ ಜೊತೆ ಮಾತುಕತೆ ನಡೆಸಲಿದ್ದಾರೆ. ಸಂಜೆ 7.10ಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಿ ಬಳಿಕ  ರಾಷ್ಟ್ರಪತಿ ಭವನದಲ್ಲಿ ರಾತ್ರಿ ನಡೆಯುವ ಭೋಜನ ಕೂಟದಲ್ಲಿ  ಭಾಗಿಯಾಗಲಿದ್ದಾರೆ.

  • ಫ್ರಾನ್ಸ್‌ ಅಧ್ಯಕ್ಷ ಮ್ಯಾಕ್ರಾನ್‌ ಇಂದು ಭಾರತಕ್ಕೆ ಭೇಟಿ

    ಫ್ರಾನ್ಸ್‌ ಅಧ್ಯಕ್ಷ ಮ್ಯಾಕ್ರಾನ್‌ ಇಂದು ಭಾರತಕ್ಕೆ ಭೇಟಿ

    ಪ್ಯಾರೀಸ್/ನವದೆಹಲಿ:‌ ಫ್ರಾನ್ಸ್‌ ಅಧ್ಯಕ್ಷ ಇಮ್ಯಾನುಯೆಲ್‌ ಮ್ಯಾಕ್ರಾನ್ (Emmanuel Macron) ಅವರು ಇಂದು ಭಾರತಕ್ಕೆ ಭೇಟಿ ನೀಡಲಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಸಂಜೆ 5.30ಕ್ಕೆ ಮ್ಯಾಕ್ರಾನ್ ಅವರನ್ನು ಸ್ವಾಗತಿಸಲಿದ್ದಾರೆ. ನಂತರ ಉಭಯ ದೇಶಗಳ ನಾಯಕರು ನಗರದಲ್ಲಿರುವ ಐತಿಹಾಸಿಕ, ಸಾಂಸ್ಕೃತಿಕ ಪ್ರಾಮುಖ್ಯತೆ ಪಡೆದಿರುವ ಸ್ಥಳಗಳಿಗೆ ಭೇಟಿ ನೀಡಲಿದ್ದಾರೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಕಾರ್ಯಾಲಯದಿಂದ ಹೇಳಿಕೆ ಬಿಡುಗಡೆ ಮಾಡಿದೆ.

    ಮ್ಯಾಕ್ರಾನ್‌ ವೇಳಾಪಟ್ಟಿ: ಮಧ್ಯಾಹ್ನ 2:30: ಜೈಪುರ ವಿಮಾನ ನಿಲ್ದಾಣಕ್ಕೆ ಆಗಮಿಸಲಿರುವ ಮ್ಯಾಕ್ರಾನ್‌ ಅವರು 3:15 ಕ್ಕೆ  ಅಮೇರ್ ಕೋಟೆಗೆ ಭೇಟಿ ನೀಡಲಿದ್ದಾರೆ. ಸಂಜೆ 5:30ಕ್ಕೆ ಜಂತರ್ ಮಂತರ್ ಭೇಟಿ ಕೊಡಲಿದ್ದಾರೆ. ಸಂಜೆ 6 ಗಂಟೆಗೆ ರೋಡ್ ಶೋನಲ್ಲಿ ಭಾಗಿಯಾಗಲಿದ್ದಾರೆ. ನಂತರ ಸಂಜೆ 6:15ಕ್ಕೆ ಹವಾ ಮಹಲ್‌ಗೆ ಭೇಟಿ ಕೊಟ್ಟು 7:15 ಕ್ಕೆ ಪ್ರಧಾನಿಯವರೊಂದಿಗೆ ಸಭೆ  ನಡೆಸಲಿದ್ದಾರೆ. ರಾತ್ರಿ 8:50ಕ್ಕೆ ವಿಮಾನದ ಮೂಲಕ ದೆಹಲಿಗೆ ತೆರಳಲಿದ್ದಾರೆ.

    ಜನವರಿ 26 ರಂದು ದೆಹಲಿಯ ಕರ್ತವ್ಯ ಪಥದಲ್ಲಿ ನಡೆಯುವ 75ನೇ ಗಣರಾಜ್ಯೋತ್ಸವ ನಡೆಯುತ್ತದೆ. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗಿಯಾಗಲೆಂದು ಭಾರತಕ್ಕೆ ಭೇಟಿ ಕೊಡುತ್ತಿದ್ದಾರೆ. ಇದನ್ನೂ ಓದಿ: ತೆಲಂಗಾಣ ಅಧಿಕಾರಿಯ ಮನೆ, ಕಚೇರಿಗಳಿಗೆ ACB ದಾಳಿ- 100 ಕೋಟಿಗೂ ಅಧಿಕ ಆಸ್ತಿ ಪತ್ತೆ

    ಇಂದಿನಿಂದ ಎರಡು ದಿನಗಳ ಕಾಲ ಭಾರತದಲ್ಲಿರುವ ಅವರು, ಜೈಪುರದ ಅಂಬರ್ ಕೋಟೆ, ಹವಾ ಮಹಲ್ ಮತ್ತು ಜಂತರ್ ಮಂತರ್‌ ನ ಖಗೋಳ ವೀಕ್ಷಣಾಲಯಕ್ಕೆ ಭೇಟಿ ನೀಡಲಿದ್ದಾರೆ.

  • ವಿಶ್ವದೆಲ್ಲೆಡೆ ರಾಮ ನಾಮ ಸ್ಮರಣೆ – ಜಗತ್ತಿನ 60 ಕ್ಕೂ ಹೆಚ್ಚು ದೇಶಗಳಲ್ಲಿ ರಾಮೋತ್ಸವ

    ವಿಶ್ವದೆಲ್ಲೆಡೆ ರಾಮ ನಾಮ ಸ್ಮರಣೆ – ಜಗತ್ತಿನ 60 ಕ್ಕೂ ಹೆಚ್ಚು ದೇಶಗಳಲ್ಲಿ ರಾಮೋತ್ಸವ

    – ಎಲ್ಲೆಲ್ಲಿ ಹೇಗಿತ್ತು ಆಚರಣೆ?

    ನ್ಯೂಯಾರ್ಕ್: ಜಗತ್ತಿನ 60 ಕ್ಕೂ ಹೆಚ್ಚು ದೇಶಗಳಲ್ಲಿ, ಶ್ರೀರಾಮ ಸ್ಮರಣೆ, ರಾಮೋತ್ಸವ (Ayodhya Ram Mandir Consecration) ಸಂಭ್ರಮ-ಸಡಗರ ಕಂಡು ಬಂತು. ವಿಶ್ವದೆಲ್ಲೆಡೆ ಮಂದಿರ ಲೋಕಾರ್ಪಣೆ ಕಾರ್ಯಕ್ರಮವನ್ನು ಲೈವ್ ಆಗಿ ಬಿತ್ತರಿಸಲಾಗಿದೆ. ಎಲ್ಲೆಲ್ಲಿ ಹೇಗಿತ್ತು ರಾಮೋತ್ಸವ ವೈಭವ ಎಂಬುದನ್ನು ಇಲ್ಲಿ ವಿವರಿಸಲಾಗಿದೆ.

    ಟೈಮ್ಸ್ ಸ್ಕ್ವೇರ್‌, ನ್ಯೂಯಾರ್ಕ್: ಟೈಮ್ಸ್ ಸ್ಕ್ವೇರ್‌ನ ದೊಡ್ಡ ಬಿಲ್‌ಬೋರ್ಡ್‌ನಲ್ಲಿ ಶ್ರೀರಾಮ ರಾರಾಜಿಸಿದ್ದಾನೆ. ಸಾಂಪ್ರದಾಯಿಕ ಧಿರಿಸು ಧರಿಸಿ ಅನಿವಾಸಿ ಭಾರತೀಯರು ರಾಮಧ್ವಜ ಹಿಡಿದು ಹಬ್ಬ ಮಾಡಿದರು. ಇದನ್ನೂ ಓದಿ: ಅಯೋಧ್ಯೆ ರಾಮಮಂದಿರಕ್ಕೆ 2.51 ಕೋಟಿ ರೂ. ದೇಣಿಗೆ ನೀಡಿದ ಮುಕೇಶ್ ಅಂಬಾನಿ

    ಕ್ಯಾಲಿಫೋರ್ನಿಯಾ, ಅಮೆರಿಕ: ಕ್ಯಾಲಿಫೋರ್ನಿಯಾದಲ್ಲಂತೂ ಹಿಂದೂ ಧರ್ಮೀಯರ ಸಂಭ್ರಮಕ್ಕೆ ಎಣೆಯೇ ಇರಲಿಲ್ಲ. ನೂರಾರು ಮಂದಿ ಒಂದೆಡೆ ಸೇರಿ ರಾಮಮಂತ್ರ ಜಪಿಸುತ್ತಾ ನೃತ್ಯ ಮಾಡುತ್ತಾ ಸಂಭ್ರಮಿಸಿದರು. ಧಾರವಾಡ ಜಿಲ್ಲೆ ಅಣ್ಣಿಗೇರಿ ತಾಲೂಕಿನ ಮಣಕವಾಡದ ನಿವಾಸಿಗಳಾಗಿರುವ ಶಶಿಧರ್ ಚಾಕಲಬ್ಬಿ, ಸಾನ್ವಿ ದಂಪತಿ ಅಮೆರಿದ ಸನ್‌ಡಿಯಾನ್‌ನಲ್ಲಿ ರಾಮೋತ್ಸವ ಮಾಡಿದ್ದಾರೆ. ಅನಿವಾಸಿ ಭಾರತೀಯರಿಗೆ ಅನ್ನಪ್ರಸಾದ ವಿತರಿಸಿದ್ದಾರೆ.

    ಐಫೆಲ್ ಟವರ್, ಪ್ಯಾರಿಸ್: ಪ್ಯಾರಿಸ್‌ನ ಐಫೆಲ್ ಟವರ್ ಬಳಿ ಜಮಾಯಿಸಿದ ನೂರಾರು ರಾಮಭಕ್ತರು ಭಾರತದ ಧ್ವಜ, ರಾಮಧ್ವಜ ಪ್ರದರ್ಶಿಸುತ್ತಾ ರಾಮನ ಜಪ ಮಾಡಿದರು. ಇದನ್ನೂ ಓದಿ: ಬಾಲ`ರಾಮ’ನ ಪಾದ ಸೇರಿತು `ಕಮಲ’..!

    ಖೊರೆಟರೋ, ಮೆಕ್ಸಿಕೋ: ಬಾಲರಾಮನ ಪ್ರಾಣಪ್ರತಿಷ್ಠಾಪನೆ ಸಂದರ್ಭದಲ್ಲೇ ಮೆಕ್ಸಿಕೋ ದೇಶದ ಖೊರೆಟರೋ ನಗರದಲ್ಲಿ ಮೊದಲ ರಾಮಮಂದಿರ ಶಾಸ್ತ್ರೋಕ್ತವಾಗಿ ಲೋಕಾರ್ಪಣೆಗೊಂಡಿದೆ.

    ನೈರೂಬಿ, ಕೀನ್ಯಾ: ಕೀನ್ಯಾದ ನೈರೂಬಿಯಲ್ಲಿ ನೆಲೆಸಿರುವ ಭಾರತೀಯರು ನಗರದ ತುಂಬಾ ರಾಮ ಮೆರವಣಿಗೆ ನಡೆಸಿದರು. ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆದವು. ಇದನ್ನೂ ಓದಿ: ಅಯೋಧ್ಯೆಯಲ್ಲಿ ಶ್ರೀರಾಮನ ದರ್ಶನ ಪಡೆಯುವ ಸಮಯ ಗೊತ್ತಾ..?

    ಬ್ಯಾಂಕಾಕ್, ಥೈಲ್ಯಾಂಡ್: ಬ್ಯಾಂಕಾಕ್‌ನಲ್ಲಿರುವ ಭಾರತೀಯ ಹಿಂದೂಗಳು ಮಧ್ಯರಾತ್ರಿಯೇ ರಸ್ತೆಗೆ ಇಳಿದು ಕೇಸರಿ ಧ್ವಜ ಹಾರಿಸಿ, ಜೈ ಶ್ರೀರಾಮ್ ಎನ್ನುತ್ತಾ ಸಂಭ್ರಮಿಸಿದರು.

    ಮಾರಿಷಸ್: ಹಿಂದೂ ಧರ್ಮ ಮೂಲಗಳು ಇರುವ ಮಾರಿಷಸ್‌ನಲ್ಲಿ ರಾಮಭಕ್ತರು ಬೃಹತ್ ಕಾರ್ ರ‍್ಯಾಲಿ ನಡೆಸಿದರು. ಇದನ್ನೂ ಓದಿ: 35 ನಿಮಿಷದ ಭಾಷಣದಲ್ಲಿ 114 ಬಾರಿ ರಾಮ ನಾಮ ಸ್ಮರಿಸಿದ ಮೋದಿ!

  • ವಿದೇಶಗಳಲ್ಲಿಯೂ ರಾಮೋತ್ಸವಕ್ಕೆ ಭರದ ಸಿದ್ಧತೆ

    ವಿದೇಶಗಳಲ್ಲಿಯೂ ರಾಮೋತ್ಸವಕ್ಕೆ ಭರದ ಸಿದ್ಧತೆ

    ವಾಷಿಂಗ್ಟನ್: ಜಗತ್ತಿನಾದ್ಯಂತ ಹಲವು ದೇಶಗಳಲ್ಲಿ ರಾಮೋತ್ಸವ(Ayodhya Ram Mandir) ಆಚರಣೆಗೆ ಸಿದ್ಧತೆಗಳು ನಡೆದಿವೆ. ಅಮೆರಿಕ ಒಂದರಲ್ಲೇ 20ಕ್ಕೂ ಹೆಚ್ಚು ಕಡೆ ರಾಮೋತ್ಸವ ನಡೆಯಲಿದೆ.

    ಈಗಾಗಲೇ ವಾಷಿಂಗ್ಟನ್ (Washington) ಡಿಸಿ ಸೇರಿ ವಿವಿಧೆಡೆ ಕಾರ್ ರ್‍ಯಾಲಿಗಳನ್ನು ನಿರ್ವಹಿಸಲಾಗಿದೆ. ಜನವರಿ 22ರಂದು ನ್ಯೂಯಾರ್ಕ್‍ನ ಟೈಮ್ಸ್ ಸ್ಕ್ವೇರ್ ನಲ್ಲಿ ರಾಮೋತ್ಸವ ವೈಭವ ಕಂಡುಬರಲಿದೆ. ಫ್ರಾನ್ಸ್ ರಾಜಧಾನಿ ಪ್ಯಾರೀಸ್‍ನಲ್ಲಿ ರಾಮರಥ ಯಾತ್ರೆ ನಿರ್ವಹಿಸಲಾಗುತ್ತದೆ. ಐಫೆಲ್ ಟವರ್ ಬಳಿ ಸಾಂಸ್ಕೃತಿಕ ಕಾರ್ಯಕ್ರಮ, ಭಕ್ತಿಗೀತೆಗಳ ಗಾಯ, ಪ್ರಸಾದ ವಿತರಣೆಗೆ ತಯಾರಿ ನಡೆದಿವೆ.

    ಆಸ್ಟ್ರೇಲಿಯಾದ ಮೆಲ್ಬೋರ್ನ್, ಸಿಡ್ನಿಯಲ್ಲಿಯೂ ದೊಡ್ಡಮಟ್ಟದಲ್ಲೇ ಕಾರ್ಯಕ್ರಮ ನಿರ್ವಹಿಸಲು ಹಿಂದೂ ಸಮುದಾಯ ಸಜ್ಜಾಗಿದೆ. ಆಫ್ರಿಕಾದ ಕೀನ್ಯಾ, ಉಗಾಂಡ, ಟಾಂಜೇನಿಯಾ, ಘಾನ, ನೈಜೀರಿಯಾ, ಮೊಜಾಂಬಿಕ್ ಮತ್ತಿತರ ದೇಶಗಳಲ್ಲಿಯೂ ರಾಮೋತ್ಸವ ನಡೆಯಲಿದೆ. ಆದರೆ ಪಾಕಿಸ್ತಾನದ ಸೋಷಿಯಲ್ ಮೀಡಿಯಾಗಳಲ್ಲಿ ಮಾತ್ರ ರಾಮಮಂದಿರ ವಿರೋಧಿ ಪೋಸ್ಟ್ ಗಳು ಕಂಡುಬರುತ್ತಿವೆ. ಇದನ್ನೂ ಓದಿ: ಮುಖ್ಯಮಂತ್ರಿಗಳೇ ಹೀಗೆಲ್ಲ ಆಗ್ತಿರುತ್ತೆ- ಸಿಎಂಗೆ ಟಾಂಗ್‌ ಕೊಟ್ಟ ಮೋದಿ ವೀಡಿಯೋ ವೈರಲ್‌

    ಇದೇ ಹೊತ್ತಲ್ಲಿ ಪಾಕ್ ಮಾಜಿ ಕ್ರಿಕೆಟಿಗ, ಹಿಂದೂ ಧರ್ಮೀಯ ದಾನೇಶ್ ಕನ್ಹೇರಿಯಾ ರಾಮ ಮಂದಿರ ಬೆಂಬಲಿಸಿ ಸರಣಿ ಟ್ವೀಟ್ ಮಾಡುತ್ತಿದ್ದಾರೆ. ಜೈ ಶ್ರೀರಾಮ್ ಎಂದು ಎದೆ ತಟ್ಟಿ ಹೇಳುತ್ತಿದ್ದಾರೆ.

  • ಮುಂಬೈನಲ್ಲಿ ಲ್ಯಾಂಡ್‌ ಆಯ್ತು ಫ್ರಾನ್ಸ್‌ ವಶದಲ್ಲಿದ್ದ 303 ಭಾರತೀಯರಿದ್ದ ವಿಮಾನ

    ಮುಂಬೈನಲ್ಲಿ ಲ್ಯಾಂಡ್‌ ಆಯ್ತು ಫ್ರಾನ್ಸ್‌ ವಶದಲ್ಲಿದ್ದ 303 ಭಾರತೀಯರಿದ್ದ ವಿಮಾನ

    ಮುಂಬೈ: ಶಂಕಿತ ಮಾನವ ಕಳ್ಳಸಾಗಣೆ ಆರೋಪದ ಮೇಲೆ ಫ್ರಾನ್ಸ್‌ (France) ವಶದಲ್ಲಿದ್ದ 303 ಭಾರತೀಯ ಪ್ರಯಾಣಿಕರಿದ್ದ A-340 ವಿಮಾನವು ಮಂಗಳವಾರ ಮುಂಜಾನೆ ಮುಂಬೈಗೆ ಬಂದಿಳಿಯಿತು.

    ವಿಮಾನವು ದುಬೈನಿಂದ ನಿಕರಾಗುವಾಗೆ ಹೋಗುತ್ತಿತ್ತು. ಆದರೆ ಕಳೆದ ವಾರ ಫ್ರಾನ್ಸ್‌ನ ವ್ಯಾಟ್ರಿ ವಿಮಾನ ನಿಲ್ದಾಣದಲ್ಲಿ ಅಧಿಕಾರಿಗಳು ವಶಕ್ಕೆ ಪಡೆದಿದ್ದರು. ಇದನ್ನೂ ಓದಿ: ಮಾನವ ಕಳ್ಳಸಾಗಾಣಿಕೆ ಶಂಕೆ – ಫ್ರಾನ್ಸ್‌ನಲ್ಲಿ 300 ಕ್ಕೂ ಹೆಚ್ಚು ಭಾರತೀಯರಿದ್ದ ವಿಮಾನ ವಶಕ್ಕೆ

    ಫ್ರಾನ್ಸ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು, ಭಾರತೀಯ ಪ್ರಯಾಣಿಕರಿಗೆ ನೀಡಿದ ಆತಿಥ್ಯ ಮತ್ತು ಯಾವುದೇ ತೊಂದರೆಯಾಗದಂತೆ ಮನೆಗೆ ಹಿಂತಿರುಗಲು ಅವಕಾಶ ಮಾಡಿಕೊಟ್ಟಿದ್ದಕ್ಕಾಗಿ ಫ್ರೆಂಚ್ ಸರ್ಕಾರ ಮತ್ತು ವಾಟ್ರಿ ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ಧನ್ಯವಾದ ತಿಳಿಸಿದೆ.

    ರಾಯಭಾರ ಕಚೇರಿ ತಂಡದೊಂದಿಗೆ ನಿಕಟವಾಗಿ ಕೆಲಸ ಮಾಡಿದ್ದು ಮತ್ತು ನಾಗರಿಕರ ಸುರಕ್ಷಿತ ವಾಪಸ್‌ ಆಗಲು ಫ್ರೆಂಚ್ ಅಧಿಕಾರಿಗಳು ನೀಡಿದ ಸಹಕಾರವನ್ನು ರಾಯಭಾರ ಕಚೇರಿ ಶ್ಲಾಘಿಸಿದೆ. ಇದನ್ನೂ ಓದಿ: ಪಾಕ್‍ನಲ್ಲಿ 2024ರ ಸಾರ್ವತ್ರಿಕ ಚುನಾವಣೆಗೆ ನಾಮಪತ್ರ ಸಲ್ಲಿಸಿದ ಮೊದಲ ಹಿಂದೂ ಯುವತಿ

    ಭಾರತೀಯ ಪ್ರಯಾಣಿಕರು ವಾಪಸ್‌ ಆಗಲು ಉತ್ತಮ ಆತಿಥ್ಯದೊಂದಿಗೆ ಸಹಕರಿಸಿದ ಫ್ರೆಂಚ್‌ ಸರ್ಕಾರ ಮತ್ತು ವಾಟ್ರಿ ವಿಮಾನ ನಿಲ್ದಾಣಕ್ಕೆ ಧನ್ಯವಾದಗಳು. ರಾಯಭಾರ ತಂಡದೊಂದಿಗೆ ನಿಕಟವಾಗಿ ಕೆಲಸ ಮಾಡಿದ್ದಕ್ಕಾಗಿ, ಪ್ರಯಾಣಿಕರ ಯೋಗಕ್ಷೇಮ ನೋಡಿಕೊಂಡಿದ್ದಕ್ಕಾಗಿ ಕೃತಜ್ಞತೆಗಳು ಎಂದು ಫ್ರಾನ್ಸ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಎಕ್ಸ್‌ನಲ್ಲಿ ಪೋಸ್ಟ್‌ ಹಾಕಿದೆ.

    ಮಾನವ ಕಳ್ಳಸಾಗಣೆ ಶಂಕೆಯಲ್ಲಿ ನಿಕರಾಗುವಾಗೆ ತೆರಳುತ್ತಿದ್ದ ವಿಮಾನವನ್ನು ಫ್ರಾನ್ಸ್‌ ಅಧಿಕಾರಿಗಳು ವಶಕ್ಕೆ ಪಡೆದಿದ್ದರು. ನಂತರ ವಿಮಾನ ಪ್ರಯಾಣವನ್ನು ಪುನರಾರಂಭಿಸಲು ಅನುಮತಿ ನೀಡಿದ್ದರು.

  • ಮಾನವ ಕಳ್ಳಸಾಗಾಣಿಕೆ ಶಂಕೆ – ಫ್ರಾನ್ಸ್‌ನಲ್ಲಿ 300 ಕ್ಕೂ ಹೆಚ್ಚು ಭಾರತೀಯರಿದ್ದ ವಿಮಾನ ವಶಕ್ಕೆ

    ಮಾನವ ಕಳ್ಳಸಾಗಾಣಿಕೆ ಶಂಕೆ – ಫ್ರಾನ್ಸ್‌ನಲ್ಲಿ 300 ಕ್ಕೂ ಹೆಚ್ಚು ಭಾರತೀಯರಿದ್ದ ವಿಮಾನ ವಶಕ್ಕೆ

    ಪ್ಯಾರಿಸ್: 300 ಕ್ಕೂ ಹೆಚ್ಚು ಭಾರತೀಯ (Indians) ಪ್ರಯಾಣಿಕರನ್ನು ಹೊತ್ತು ನಿಕರಾಗುವಾಗೆ ಹೊರಟಿದ್ದ ವಿಮಾನವನ್ನು ಫ್ರಾನ್ಸ್‌ನಲ್ಲಿ (France) ಶಂಕಿತ ಮಾನವ ಕಳ್ಳಸಾಗಣೆಯ ಆರೋಪದ ಮೇಲೆ ವಶಕ್ಕೆ ಪಡೆಯಲಾಗಿದೆ.

    ಮಾನವ ಕಳ್ಳಸಾಗಣೆಯ (Human Trafficking) ಬಗ್ಗೆ ಅಪರಿಚಿತರಿಂದ ಸುಳಿವು ಸಿಕ್ಕ ಬಳಿಕ ವಿಮಾನವನ್ನು (Plane) ವಶಕ್ಕೆ ತೆಗೆದುಕೊಳ್ಳಲಾಗಿದೆ. ಅದರಲ್ಲಿ 303 ಭಾರತೀಯ ಪ್ರಯಾಣಿಕರು ಇದ್ದರು. ವಿಮಾನವು ಯುನೈಟೆಡ್ ಅರಬ್ ಎಮಿರೇಟ್ಸ್‌ನಿಂದ (United Arab Emirates) ಟೇಕಾಫ್ ಆಗಿದೆ. ಮಾನವ ಕಳ್ಳಸಾಗಾಣಿಕೆ ಅಥವಾ ಪ್ರವಾಸದ ಉದ್ದೇಶವೇ ಎಂಬುದನ್ನು ಖಚಿತ ಪಡಿಸಿಕೊಳ್ಳಲು ನ್ಯಾಯಾಂಗ ತನಿಖೆ ಪ್ರಾರಂಭಿಸಲಾಗಿದೆ ಎಂದು ಪ್ಯಾರಿಸ್‍ನ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಸಂಸತ್‌ನಲ್ಲಿ ಸ್ಮೋಕ್‌ ಬಾಂಬ್‌ ದಾಳಿಯ ಮಾಸ್ಟರ್‌ ಮೈಂಡ್‌ ಮೈಸೂರಿಗ ಮನೋರಂಜನ್‌: ದೆಹಲಿ ಪೊಲೀಸರು

    ಕೆಲವು ಪ್ರಯಾಣಿಕರನ್ನು ಅಕ್ರಮ ವಲಸಿಗರು ಎಂದು ನಂಬಲಾಗಿದೆ. ಪ್ರಯಾಣಿಕರು ಯುನೈಟೆಡ್ ಸ್ಟೇಟ್ಸ್ ಅಥವಾ ಕೆನಡಾಕ್ಕೆ ಅಕ್ರಮ ಪ್ರವೇಶಕ್ಕಾಗಿ ಪ್ರಯತ್ನಿಸುವ ಸಲುವಾಗಿ ಮಧ್ಯ ಅಮೆರಿಕಕ್ಕೆ ಪ್ರಯಾಣಿಸಲು ಯೋಜಿಸಿದ್ದಾರೆ ಎಂದು ಆರೋಪಿಸಲಾಗಿದೆ. ಇದನ್ನೂ ಓದಿ: 41,000 ರೂ.ಗೆ ವಾಟರ್‌ ಡಿಸ್ಪೆನ್ಸರ್‌ ಮಾರಾಟಕ್ಕೆ ಬೆಂಗ್ಳೂರು ಮಹಿಳೆ ಯತ್ನ – ರೇಟ್‌ ನೋಡಿ ನೆಟ್ಟಿಗರು ಶಾಕ್‌!

  • ಫ್ರೆಂಚ್ ಸಿನಿಮಾದ ಶೂಟಿಂಗ್ ನಲ್ಲಿ ಭಾಗಿಯಾದ ರಾಧಿಕಾ

    ಫ್ರೆಂಚ್ ಸಿನಿಮಾದ ಶೂಟಿಂಗ್ ನಲ್ಲಿ ಭಾಗಿಯಾದ ರಾಧಿಕಾ

    ಕ್ಷಿಣದ ಹೆಸರಾಂತ ನಟಿ ರಾಧಿಕಾ ಶರತ್ ಕುಮಾರ್ (Radhika Sarath Kumar) ಇದೀಗ ಫ್ರೆಂಚ್ (French) ಸಿನಿಮಾವೊಂದನ್ನು ಒಪ್ಪಿಕೊಂಡಿದ್ದಾರೆ. ಕನ್ನಡ, ತಮಿಳು, ತೆಲುಗು, ಮಲಯಾಳಂ ಸೇರಿದಂತೆ ಭಾರತೀಯ ಅನೇಕ ಭಾಷೆಗಳಲ್ಲಿ ನಟಿಸಿರುವ ಅವರು, ಇದೇ ಮೊದಲ ಬಾರಿಗೆ ಫ್ರೆಂ‍ಚ್ ಭಾಷೆಯ ಚಿತ್ರದಲ್ಲಿ ನಟಿಸಲು ಅವಕಾಶ ಪಡೆದುಕೊಂಡಿದ್ದಾರೆ.

    ಈ ಕುರಿತು ಮಾಹಿತಿಯನ್ನು ಹಂಚಿಕೊಂಡಿರುವ ರಾಧಿಕಾ, ಈಗಾಗಲೇ ಚಿತ್ರೀಕರಣಕ್ಕಾಗಿ ಅವರು ವಿದೇಶಕ್ಕೂ ಹಾರಿದ್ದಾರಂತೆ. ಫ್ರೆಂಚ್ ಸಿನಿಮಾದ ಚಿತ್ರೀಕರಣ ಫ್ರಾನ್ಸ್ (France) ನಲ್ಲಿ ನಡೆದಿದ್ದು, ಚಿತ್ರೀಕರಣದಲ್ಲಿ ಭಾಗಿ ಆಗಿರುವ ಫೋಟೋವನ್ನು ಅವರು ಶೇರ್ ಮಾಡಿದ್ದಾರೆ. ಮೊದಲ ದಿನದ ಶೂಟಿಂಗ್ ಅನುಭವವನ್ನೂ ಅವರು ಹೇಳಿಕೊಂಡಿದ್ದಾರೆ.

    ಹೆಸರಾಂತ ನಟ ಶರತ್ ಕುಮಾರ್ ಅವರ ಪತ್ನಿಯೂ ಆಗಿರುವ ರಾಧಿಕಾ, ದಕ್ಷಿಣ ಭಾರತದ ಫೇಮಸ್ ನಟಿ. ನಾಯಕಿಯಾಗಿ ಚಿತ್ರೋದ್ಯಮಕ್ಕೆ ಕಾಲಿಟ್ಟವರು, ನಂತರ ಸಹ ಕಲಾವಿದೆಯಾಗಿ ಗುರುತಿಸಿಕೊಂಡವರು. ರಿಯಾಲಿಟಿ ಶೋಗಳಲ್ಲೂ ನಿರ್ಣಾಯಕರ ಸ್ಥಾನವನ್ನು ತುಂಬಿದವರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಫ್ರಾನ್ಸ್‌ನ ಶಾಲೆಗಳಲ್ಲಿ ಶೀಘ್ರವೇ ಅಬಯಾ ಬ್ಯಾನ್

    ಫ್ರಾನ್ಸ್‌ನ ಶಾಲೆಗಳಲ್ಲಿ ಶೀಘ್ರವೇ ಅಬಯಾ ಬ್ಯಾನ್

    ಪ್ಯಾರಿಸ್: ಮುಸ್ಲಿಂ ಮಹಿಳೆಯರು (Muslim Women) ಧರಿಸುವ ಅಬಯಾ (Abaya) ಉಡುಪನ್ನು ಶಾಲೆಗಳಲ್ಲಿ ಧರಿಸುವುದನ್ನು ಫ್ರೆಂಚ್ (French) ಅಧಿಕಾರಿಗಳು ನಿಷೇಧಿಸಲಿದ್ದಾರೆ ಎಂದು ಅಲ್ಲಿನ ಶಿಕ್ಷಣ ಸಚಿವರು ಭಾನುವಾರ ತಿಳಿಸಿದ್ದಾರೆ.

    ಅಬಯಾ ಉಡುಪು ಫ್ರಾನ್ಸ್‌ (France) ಶಿಕ್ಷಣದಲ್ಲಿ ಕಟ್ಟುನಿಟ್ಟಾದ ಜಾತ್ಯತೀತ ಕಾನೂನನ್ನು ಉಲ್ಲಂಘಿಸಿದೆ ಎಂದು ವಾದಿಸಿದ ಅವರು, ಇನ್ನು ಮುಂದೆ ಶಾಲೆಗಳಲ್ಲಿ ಅಬಯಾ ಧರಿಸಲು ಅವಕಾಶವಿರುವುದಿಲ್ಲ. ಸೆಪ್ಟೆಂಬರ್ 4 ರಂದು ರಾಷ್ಟ್ರವ್ಯಾಪಿ ವಿದ್ಯಾರ್ಥಿಗಳು ಶಾಲೆಗೆ ಹಿಂದಿರುಗುವುದಕ್ಕೂ ಮೊದಲು ರಾಷ್ಟ್ರೀಯ ಮಟ್ಟದಲ್ಲಿ ಈ ಬಗ್ಗೆ ಸ್ಪಷ್ಟವಾದ ನಿಯಮಗಳನ್ನು ತರುವುದಾಗಿ ಹೇಳಿದ್ದಾರೆ.

    ಮುಸ್ಲಿಂ ಮಹಿಳೆಯರು ಹಿಜಬ್ ಧರಿಸುವುದನ್ನು ದೀರ್ಘಕಾಲದಿಂದ ನಿಷೇಧಿಸಿರುವ ಫ್ರೆಂಚ್ ಶಾಲೆಗಳಲ್ಲಿ ಅಬಯಾಗಳನ್ನು ಧರಿಸುವ ಕುರಿತು ಹಲವು ತಿಂಗಳಿನಿಂದ ಚರ್ಚೆ ನಡೆದಿದೆ. ಬಲಪಂಥೀಯರು ಅಬಯಾ ನಿಷೇಧಕ್ಕೆ ಒತ್ತಾಯಿಸಿದರೆ, ಎಡಪಂಥೀಯರು ಇದು ನಾಗರಿಕ ಸ್ವಾತಂತ್ರ್ಯವನ್ನು ಕಸಿದುಕೊಳ್ಳುತ್ತದೆ ಎಂದು ವಾದಿಸಿದ್ದಾರೆ. ಇದನ್ನೂ ಓದಿ: ಮುಸ್ಲಿಂ ಕುಟುಂಬದ ಯಜಮಾನನ ಕನಸಲ್ಲಿ ದೇವಿ- ದರ್ಗಾ ಪಕ್ಕದಲ್ಲೇ ದೇಗುಲ ನಿರ್ಮಿಸಿ, ಪೂಜೆ

    ಈ ವಿಚಾರವಾಗಿ ಶಿಕ್ಷಕರು ಮತ್ತು ಪೋಷಕರ ನಡುವೆ ಶಾಲೆಗಳಲ್ಲಿ ಉದ್ವಿಗ್ನತೆ ಉಂಟಾಗಿರುವ ಬಗ್ಗೆ ವರದಿಯಾಗಿದೆ. ವಿದ್ಯಾರ್ಥಿಗಳು ತರಗತಿಗೆ ಪ್ರವೇಶಿಸಿದಾಗ ಅವರ ಉಡುಪುಗಳಿಂದಾಗಿ ಧರ್ಮವನ್ನು ಗುರುತಿಸಲು ಸಾಧ್ಯವಾಗಬಾರದು. ಈ ಹಿನ್ನೆಲೆ 2004ರ ಮಾರ್ಚ್‌ನಲ್ಲಿ ಕಾನೂನು ಶಾಲೆಗಳಲ್ಲಿ ವಿದ್ಯಾರ್ಥಿಗಳು ಧಾರ್ಮಿಕ ಸಂಬಂಧಿತ ಚಿಹ್ನೆಗಳನ್ನು ತೋರ್ಪಡಿಸುವ ಬಟ್ಟೆಗಳನ್ನು ಧರಿಸುವುದನ್ನು ನಿಷೇಧಿಸಿತು. ಇದನ್ನೂ ಓದಿ: World Athletics Championships- ಚಿನ್ನದ ಪದಕಕ್ಕೆ ಮುತ್ತಿಟ್ಟು ಹೊಸ ದಾಖಲೆ ಬರೆದ ನೀರಜ್ ಚೋಪ್ರಾ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]