Tag: Foxconn

  • ಬೆಂಗ್ಳೂರು ಬಳಿ ಟಾಟಾ ಐಫೋನ್ ಉತ್ಪಾದನಾ ಘಟಕ – 60 ಸಾವಿರ ಮಂದಿಗೆ ಉದ್ಯೋಗ

    ಬೆಂಗ್ಳೂರು ಬಳಿ ಟಾಟಾ ಐಫೋನ್ ಉತ್ಪಾದನಾ ಘಟಕ – 60 ಸಾವಿರ ಮಂದಿಗೆ ಉದ್ಯೋಗ

    ನವದೆಹಲಿ: ಆಪಲ್ ಐಫೋನ್ (Apple iPhone) ಅತಿದೊಡ್ಡ ಉತ್ಪಾದನಾ ಘಟಕ ಬೆಂಗಳೂರಿನ (Bengaluru) ಹೊಸೂರಿನಲ್ಲೇ ಸ್ಥಾಪನೆಯಾಗಲಿದೆ ಎಂದು ಕೇಂದ್ರ ಟೆಲಿಕಾಂ ಸಚಿವ ಅಶ್ವಿನಿ ವೈಷ್ಣವ್ (Ashwini Vaishnaw) ಹೇಳಿದ್ದಾರೆ.

    ಮುಂದಿನ ಎರಡು ವರ್ಷದ ಒಳಗಡೆ ಘಟಕ ಕಾರ್ಯಾರಂಭಿಸಲಿದ್ದು, ಈ ಘಟಕವು 60 ಸಾವಿರ ಜನರಿಗೆ ಉದ್ಯೋಗ (Job) ನೀಡಲಿದೆ. ಅದರಲ್ಲಿ ಮೊದಲ 6 ಸಾವಿರ ಉದ್ಯೋಗಿಗಳು ರಾಂಚಿ ಹಾಗೂ ಹತ್ತಿರದ ಬುಡಕಟ್ಟು ಜನರು ಇರಲಿದ್ದಾರೆ. ಬುಡಕಟ್ಟು ಮಹಿಳೆಯರಿಗೆ ಈಗಾಗಲೇ ಐಫೋನ್ ತಯಾರಿಸಲು ತರಬೇತಿ ನೀಡಲಾಗುತ್ತಿದೆ ಎಂದು ಸಚಿವರು ಹೇಳಿದ್ದಾರೆ. ಇದನ್ನೂ ಓದಿ: ಕೇಸರಿ ರಾಜಕೀಯ ಬಣ್ಣವಾಗೋದು ಬೇಡ – ಸರ್ಕಾರಕ್ಕೆ ಶ್ರೀನಿವಾಸ್ ಪ್ರಸಾದ್ ಸಲಹೆ

    ಟಾಟಾ ಎಲೆಕ್ಟ್ರಾನಿಕ್ಸ್‌ (Tata Electronics) ಕಂಪನಿಯ ಹೊಸೂರು ಘಟಕದಲ್ಲಿ ಐಫೋನ್ ತಯಾರಿಸಲು ಆಪಲ್ ಕಂಪನಿ ಗುತ್ತಿಗೆ ನೀಡಿದೆ. ಈಗ ಭಾರತದಲ್ಲಿ ಐಫೋನ್‌ಗಳನ್ನು ತೈವಾನ್ ಮೂಲದ ಫಾಕ್ಸ್ಕಾನ್ ಮತ್ತು ಪೆಗಟ್ರಾನ್ ಕಂಪೆನಿ ತಯಾರಿಸುತ್ತದೆ. ಇದನ್ನೂ ಓದಿ: `ಕಾಂತಾರ’ ದೈವದ ಗೆಟಪ್‌ನಲ್ಲಿ ಬಂದ ತಹಶೀಲ್ದಾರ್: ಡಿಸಿ ಶಾಕ್

    ಈಗಾಗಲೇ ಫಾಕ್ಸ್‌ಕಾನ್‌ ಚೆನ್ನೈನಲ್ಲಿ ಘಟಕ ತೆರೆದಿದ್ದರೆ ವಿಸ್ಟ್ರಾನ್ ಕಂಪನಿ ಬೆಂಗಳೂರಿನ ಬಿಡದಿ ಮತ್ತು ಕೋಲಾರದ ನರಸಪುರದಲ್ಲಿ ಘಟಕ ತೆರೆದಿದೆ. 2008ರಲ್ಲಿ ಐಫೋನ್ ಬಿಡುಗಡೆಯಾದಾಗ ಭಾರತದಲ್ಲಿ 50 ಸಾವಿರ ಫೋನುಗಳು ಮಾರಾಟವಾಗಿತ್ತು. 2021ರಲ್ಲಿ 50 ಲಕ್ಷ ಐಫೋನ್ ಮಾರಾಟವಾಗಿದ್ದರೆ 2022ರಲ್ಲಿ 70 ಲಕ್ಷಕ್ಕೂ ಅಧಿಕ ಫೋನ್ ಮಾರಾಟವಾಗಿದೆ. ಮಾರಾಟ ಹೆಚ್ಚಾಗುತ್ತಿದ್ದಂತೆ ಆಪಲ್ ಭಾರತದಲ್ಲೇ ಹೆಚ್ಚು ಐಫೋನ್ ಉತ್ಪಾದನೆಗೆ ಮುಂದಾಗಿದೆ.
    ಇದನ್ನೂ ಓದಿ: ಟಾಟಾ ಕಂಪನಿಯಿಂದ ಮೇಡ್‌ ಇನ್‌ ಇಂಡಿಯಾ ಐಫೋನ್‌ ಉತ್ಪಾದನೆ

    ಕೋವಿಡ್ ಬಳಿಕ ಆಪಲ್ ಕಂಪನಿ ಚೀನಾದ ಹೊರಗಡೆ ಐಫೋನ್ ಉತ್ಪಾದನೆ ಹೆಚ್ಚು ಮಾಡಲು ಮುಂದಾಗಿದೆ. ಕೋವಿಡ್ ನಿಯಮದಿಂದಾಗಿ ಐಫೋನ್ ಉತ್ಪಾದನಾ ಘಟಕಗಳು ಬಂದ್ ಆಗಿದ್ದರಿಂದ ಪೂರೈಕೆಯಲ್ಲಿ ಸಮಸ್ಯೆಯಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಕರ್ನಾಟಕವನ್ನು ಹಿಂದಿಕ್ಕಿ 1.54 ಲಕ್ಷ ಕೋಟಿ ಹೂಡಿಕೆಯ ಸೆಮಿಕಂಡಕ್ಟರ್‌ ಘಟಕ ತನ್ನದಾಗಿಸಿಕೊಂಡ ಗುಜರಾತ್‌

    ಕರ್ನಾಟಕವನ್ನು ಹಿಂದಿಕ್ಕಿ 1.54 ಲಕ್ಷ ಕೋಟಿ ಹೂಡಿಕೆಯ ಸೆಮಿಕಂಡಕ್ಟರ್‌ ಘಟಕ ತನ್ನದಾಗಿಸಿಕೊಂಡ ಗುಜರಾತ್‌

    ನವದೆಹಲಿ: ಸೆಮಿಕಂಡಕ್ಟರ್‌ ಘಟಕ ಸ್ಥಾಪನೆಯ ಪೈಪೋಟಿಯಲ್ಲಿ ಕರ್ನಾಟಕಕ್ಕೆ(Karnataka) ಸೋಲಾಗಿದೆ. ಮೂರು ರಾಜ್ಯಗಳನ್ನು ಹಿಂದಿಕ್ಕಿ 1.54 ಲಕ್ಷ ಕೋಟಿ ರೂ. ಹೂಡಿಕೆ ಘಟಕವನ್ನು ತನ್ನದಾಗಿಸಿಕೊಳ್ಳುವಲ್ಲಿ ಗುಜರಾತ್‌(Gujarat) ಯಶಸ್ವಿಯಾಗಿದೆ.

    ವೇದಾಂತ ಲಿಮಿಟೆಡ್‌ (Vedanta Ltd.) ಮತ್ತು ತೈವಾನ್‌ನ ಫಾಕ್ಸ್‌ಕಾನ್‌ (Foxconn) ಕಂಪನಿಯ ಸೆಮಿಕಂಡಕ್ಟರ್‌ ಘಟಕಕ್ಕೆ ಸ್ಥಾಪನೆಗೆ ಜಾಗ ನೀಡಲು ಕರ್ನಾಟಕ, ಮಹರಾಷ್ಟ್ರ, ತೆಲಂಗಾಣ, ಗುಜರಾತ್‌ ಮುಂದಾಗಿದ್ದವು.

    ರಾಜ್ಯಗಳು ಪೈಪೋಟಿಗೆ ಇಳಿದ ಹಿನ್ನೆಲೆಯಲ್ಲಿ ಕಂಪನಿ ಭಾರೀ ರಿಯಾಯಿಯಿತಿಯನ್ನು ಬಯಸಿತ್ತು. ಮುಖ್ಯವಾಗಿ 1000 ಎಕ್ರೆ ಭೂಮಿಯನ್ನು ಯಾವುದೇ ಶುಲ್ಕವಿಲ್ಲದೇ 99 ವರ್ಷಗಳ ಅವಧಿಗೆ ಗುತ್ತಿಗೆ (Lease) ನೀಡಬೇಕು. ಇದರ ಜೊತೆ 20 ವರ್ಷಗಳ ಅವಧಿಗೆ ನೀರು ಮತ್ತು ವಿದ್ಯುತ್‌ ಅನ್ನು ರಿಯಾಯಿತಿ ದರದಲ್ಲಿ ಒದಗಿಸಬೇಕು ಎಂದು ಬೇಡಿಕೆ ಇಟ್ಟಿತ್ತು.

    ಈ ಬೇಡಿಕೆಗೆ ಗುಜರಾತ್‌ ಸರ್ಕಾರ ಒಪ್ಪಿಗೆ ನೀಡಿದ ಹಿನ್ನೆಲೆಯಲ್ಲಿ ಅಹಮದಾಬಾದ್‌ನಲ್ಲಿ ಹೊಸ ಸೆಮಿಕಂಡಕ್ಟರ್‌ ಮತ್ತು ಡಿಸ್‌ಪ್ಲೇ ಉತ್ಪಾದನಾ ಘಟಕ ಆರಂಭವಾಗಲಿದೆ. ಇದನ್ನೂ ಓದಿ: ಟಾಟಾ ಕಂಪನಿಯಿಂದ ಮೇಡ್‌ ಇನ್‌ ಇಂಡಿಯಾ ಐಫೋನ್‌ ಉತ್ಪಾದನೆ?

    ವೇದಾಂತ ಕಂಪನಿಯ ಮುಖ್ಯಸ್ಥ ಅನಿಲ್‌ ಅಗರ್‌ವಾಲ್‌ ಈ ಬಗ್ಗೆ ಟ್ವೀಟ್‌ ಮಾಡಿ, ಇತಿಹಾಸ ನಿರ್ಮಾಣವಾಗುತ್ತದೆ! ಹೊಸ ವೇದಾಂತ-ಫಾಕ್ಸ್‌ಕಾನ್ ಸೆಮಿಕಂಡಕ್ಟರ್ ಸ್ಥಾವರವನ್ನು ಗುಜರಾತ್‌ನಲ್ಲಿ ಸ್ಥಾಪಿಸಲಾಗುವುದು ಎಂದು ಘೋಷಿಸಲು ಸಂತೋಷವಾಗುತ್ತಿದೆ. ವೇದಾಂತದ 1.54 ಲಕ್ಷ ಕೋಟಿಗಳ ರೂ. ಹೂಡಿಕೆಯು ಭಾರತದ ಆತ್ಮನಿರ್ಭರ್ ಸಿಲಿಕಾನ್ ವ್ಯಾಲಿಯ ಕನಸನ್ನು ನನಸು ಮಾಡಲಿದೆ ಎಂದಿದ್ದಾರೆ.

    ಇದು ನಮ್ಮ ಎಲೆಕ್ಟ್ರಾನಿಕ್ಸ್ ಆಮದುಗಳನ್ನು ಕಡಿಮೆ ಮಾಡುತ್ತದೆ ಮತ್ತು ನಮ್ಮ ಜನರಿಗೆ 1 ಲಕ್ಷ ನೇರ ಕೌಶಲ್ಯದ ಉದ್ಯೋಗಗಳನ್ನು ಒದಗಿಸುತ್ತದೆ . ಗುಜರಾತ್ ಸರ್ಕಾರ ಮತ್ತು ಕೇಂದ್ರ ಐಟಿ ಸಚಿವರಿಗೆ ನನ್ನ ಧನ್ಯವಾದಗಳು. ಹೊಸ ಎಲೆಕ್ಟ್ರಾನಿಕ್ಸ್ ಉತ್ಪಾದನಾ ಕೇಂದ್ರಗಳ ಮೂಲಕ ಪ್ರತಿ ರಾಜ್ಯವೂ ಪ್ರಯೋಜನ ಪಡೆಯುವುದರೊಂದಿಗೆ ಭಾರತದ ಟೆಕ್ ಪರಿಸರ ವ್ಯವಸ್ಥೆಯು ಅಭಿವೃದ್ಧಿ ಹೊಂದುತ್ತದೆ. ಭಾರತ ಸಿಲಿಕಾನ್‌ ವ್ಯಾಲಿಯಾಗುವ ಹೆಜ್ಜೆ ಹತ್ತಿರವಾಗಿದೆ. ಚಿಪ್ ಟೇಕರ್‌ನಿಂದ ಚಿಪ್ ಮೇಕರ್‌ನತ್ತ ಪ್ರಯಾಣ ಅಧಿಕೃತವಾಗಿ ಪ್ರಾರಂಭವಾಗಿದೆ. ಜೈ ಹಿಂದ್ ಎಂದು ಬರೆದುಕೊಂಡಿದ್ದಾರೆ.

    ಆಪಲ್‌ ಕಂಪನಿಯ ಐಫೋನ್‌ ಸೇರಿದಂತೆ ಹಲವು ಉತ್ಪನ್ನಗಳನ್ನು ಫಾಕ್ಸ್‌ಕಾನ್‌ ತಯಾರಿಸುತ್ತಿವೆ. ಈಗಾಗಲೇ ಫಾಕ್ಸ್‌ಕಾನ್‌ ತಮಿಳುನಾಡಿನಲ್ಲಿ ತನ್ನ ಘಟಕವನ್ನು ತೆರೆದಿದೆ.

    ಪ್ರಸ್ತುತ ವಿಶ್ವದ ಚಿಪ್‌ ಮಾರುಕಟ್ಟೆಯಲ್ಲಿ ಚೀನಾ ಮತ್ತು ತೈವಾನ್‌ ಕಂಪನಿಗಳೇ ಹೆಚ್ಚು ಪ್ರಾಬಲ್ಯವನ್ನು ಹೊಂದಿದೆ. ಭಾರತವನ್ನು ಚಿಪ್‌, ಮೊಬೈಲ್‌ ಉತ್ಪಾದನಾ ಹಬ್‌ ದೇಶವನ್ನಾಗಿ ಪರಿವರ್ತಿಸಲು ಕೇಂದ್ರ ಸರ್ಕಾರ ಪ್ರೊಡಕ್ಷನ್-ಲಿಂಕ್ಡ್ ಇನ್ಸೆಂಟಿವ್ಸ್ (ಪಿಎಲ್ಐ) ಯೋಜನೆಯನ್ನು ಆರಂಭಿಸಿದೆ. ಉದ್ಯೋಗ ಸೃಷ್ಟಿಗಾಗಿ ಆರಂಭಿಸಲಾದ ಈ ಯೋಜನೆ ಅಡಿ ಮುಂದಿನ 5 ವರ್ಷದಲ್ಲಿ 1.5 ಲಕ್ಷ ಕೋಟಿ ಮೌಲ್ಯದ ಮೊಬೈಲ್ ಫೋನ್ ಹಾಗೂ ಬಿಡಿಭಾಗಗಳನ್ನು ಉತ್ಪಾದಿಸುವ ಗುರಿಯನ್ನು ಹಾಕಿಕೊಳ್ಳಲಾಗಿದೆ. ಪಿಎಲ್‌ಐ ಯೋಜನೆ ಅಡಿ ಲಾಭ ಪಡೆದುಕೊಳ್ಳಲು ದೇಶದ ಹಲವು ಕಂಪನಿಗಳು ಆಯ್ಕೆಯಾಗಿವೆ.

    ಭಾರತದ ಸರ್ಕಾರದ ಪಿಎಲ್ಐ ಅಡಿ ಐಎಸ್‌ಎಂಸಿ ಡಿಜಿಟಲ್‌ ಫ್ಯಾಬ್‌ ಅಲ್ಲದೇ ವೇದಾಂತ-ಫಾಕ್ಸ್‌ಕಾನ್‌ ಮತ್ತು ಸಿಂಗಾಪೂರ ಮೂಲದ ಐಜಿಎಸ್‌ಎಸ್‌ ಆಯ್ಕೆಯಾಗಿವೆ. ಚಿಪ್‌ ತಯಾರಿಕಾ ಘಟಕ ಸ್ಥಾಪನೆ ಸಂಬಂಧ ರಾಜ್ಯ ರಾಜ್ಯಗಳ ಮಧ್ಯೆ ಆರೋಗ್ಯಕರ ಸ್ಪರ್ಧೆ ಇದೆ ಎಂದು ಮಾಹಿತಿ ತಂತ್ರಜ್ಞಾನ ಮತ್ತು ಎಲೆಕ್ಟ್ರಾನಿಕ್ಸ್‌ ಸಚಿವಾಲಯದ ಸೆಮಿಕಂಡಕ್ಟರ್‌ ಸಲಹಾ ಸಮಿತಿಯ ಸದಸ್ಯರು ಈ ಹಿಂದೆ ತಿಳಿಸಿದ್ದರು.

    2020ರ ವೇಳೆಗೆ ಕೇವಲ 1.12 ಲಕ್ಷ ಕೋಟಿ ರೂ. ನಷ್ಟಿದ್ದ ಭಾರತದ ಸೆಮಿಕಂಡಕ್ಟರ್‌ ವಲಯ 2026ರ ವೇಳೆಗೆ 5 ಲಕ್ಷ ಕೋಟಿ ರೂ. ಗೆ ತಲುಪುವ ನಿರೀಕ್ಷೆ ಇದೆ.

    Live Tv
    [brid partner=56869869 player=32851 video=960834 autoplay=true]

  • ಚೀನಾ ವಿರುದ್ಧ ಹಾರ್ಡ್‌ವೇರ್‌ ಸ್ಟ್ರೈಕ್‌ – ಐಫೋನ್‌ ತಯಾರಿಸಲು ಭಾರತದಲ್ಲಿ 1 ಶತಕೋಟಿ ಡಾಲರ್‌‌ ಹೂಡಿಕೆ

    ಚೀನಾ ವಿರುದ್ಧ ಹಾರ್ಡ್‌ವೇರ್‌ ಸ್ಟ್ರೈಕ್‌ – ಐಫೋನ್‌ ತಯಾರಿಸಲು ಭಾರತದಲ್ಲಿ 1 ಶತಕೋಟಿ ಡಾಲರ್‌‌ ಹೂಡಿಕೆ

    ಕ್ಯಾಲಿಫೋರ್ನಿಯಾ: ಗಲ್ವಾನ್‌ ಘರ್ಷಣೆಯ ಬಳಿಕ ಭಾರತ ಸರ್ಕಾರ ಚೀನಾದ 59 ಅಪ್ಲಿಕೇಶನ್‌‌ಗಳನ್ನು ನಿಷೇಧಿಸಿ ‘ಡಿಜಿಟಲ್‌ ಸ್ಟ್ರೈಕ್‌’ ಮಾಡುವ ಮೂಲಕ ಶಾಕ್‌ ನೀಡಿತ್ತು. ಈಗ ಕೊರೊನಾ ವಿಚಾರಕ್ಕೆ ಸಂಬಂಧಪಟ್ಟಂತೆ ಮಾಹಿತಿಗಳನ್ನು ಸರಿಯಾಗಿ ಹಂಚಿಕೊಳ್ಳದ್ದಕ್ಕೆ ವಿಶ್ವದ ಕೆಂಗಣ್ಣಿಗೆ ಗುರಿಯಾದ ಹಿನ್ನೆಲೆಯಲ್ಲಿ ಅಮೆರಿಕದ ಕಂಪನಿಗಳು ಚೀನಾ ಮೇಲೆ ‘ಹಾರ್ಡ್‌ವೇರ್‍ ಸ್ಟ್ರೈಕ್‌’ ಮಾಡಲು ಆರಂಭಿಸಿವೆ.

    ಅಮೆರಿಕದ ಟ್ರಂಪ್‌ ಸರ್ಕಾರ ಮೊದಲಿನಿಂದಲೂ ವ್ಯಾಪಾರ ವಿಚಾರದಲ್ಲಿ ಚೀನಾ ವಿರುದ್ಧ ಕಿಡಿ ಕಾರುತ್ತಲೇ ಬಂದಿದೆ. ಈಗ ಕೊರೊನಾ ವೈರಸ್‌‌ ಸೃಷ್ಟಿಯಾದ ಬಳಿಕ ಗಲಾಟೆ ಮತ್ತಷ್ಟು ಜೋರಾಗಿದೆ. ಇದರ ಜೊತೆ ಯುರೋಪಿಯನ್‌ ಒಕ್ಕೂಟಗಳು ಸಹಾ ಚೀನಾ ವಿರುದ್ಧ ಬಹಿರಂಗವಾಗಿಯೇ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿವೆ. ಈ ಹಿನ್ನೆಲೆಯಲ್ಲಿ ಹಲವು ಬಹುರಾಷ್ಟ್ರೀಯ ಕಂಪನಿಗಳು ಚೀನಾದಲ್ಲಿ ಹೂಡಿಕೆ ಮಾಡುವ ಬದಲು ಬೇರೆ ದೇಶಗಳಲ್ಲಿ ಹೂಡಿಕೆ ಮಾಡಲು ಮುಂದಾಗುತ್ತಿವೆ.

    ಈ ನಿಟ್ಟಿನಲ್ಲಿ ಮೊದಲು ಎನ್ನುವಂತೆ ಆಪಲ್‌ ಐಫೋನ್‌ ತಯಾರಿಸುವ ಫಾಕ್ಸ್‌ಕಾನ್‌ ಕಂಪನಿ ತಮಿಳುನಾಡಿನಲ್ಲಿ 1 ಶತಕೋಟಿ ಡಾಲರ್‌ ಹೂಡಿಕೆ ಮಾಡಲು ಮುಂದಾಗುತ್ತಿದೆ ಎಂದು ವರದಿಯಾಗಿದೆ.

    ಫಾಕ್ಸ್‌ಕಾನ್‌‌ ತೈವಾನ್‌ ಮೂಲದ ಕಂಪನಿಯಾಗಿದ್ದರೂ ಚೀನಾದ ಘಟಕದಲ್ಲಿ ಐಫೋನ್‌ಗಳನ್ನು ತಯಾರಿಸುತ್ತಿತ್ತು. ಈಗ ಚೀನಾ ಬಿಟ್ಟು ಹೊರ ದೇಶದಲ್ಲಿ ಘಟಕ ಸ್ಥಾಪನೆಗೆ ಹೂಡಿಕೆ ಮಾಡುತ್ತಿರುವುದಾಗಿ ತಿಳಿಸಿದೆ.

    ಈ ಸಂಬಂಧ ಮಾಧ್ಯಮಕ್ಕೆ ಫಾಕ್ಸ್‌‌‌ಕಂಪನಿಯ ಮೂಲವೊಂದು ಪ್ರತಿಕ್ರಿಯಿಸಿ, ಆಪಲ್‌ ಕಂಪನಿಯ ಬಲವಾದ ಬೇಡಿಕೆ ಹಿನ್ನೆಲೆಯಲ್ಲಿ ಚೀನಾದ ಬದಲು ಬೇರೆ ಕಡೆ ಐಫೋನ್‌ ಭಾಗಗಳ ಉತ್ಪಾದನೆಗೆ ಮುಂದಾಗುತ್ತಿದ್ದೇವೆ ಎಂದು ತಿಳಿಸಿದೆ.

    ಈ ವಿಚಾರದ ಬಗ್ಗೆ ಆಪಲ್‌, ಫಾಕ್ಸ್‌ಕಾನ್‌ ಕಂಪನಿಗಳು ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಮೂಲಗಳ ಪ್ರಕಾರ ಫಾಕ್ಸ್‌ಕಾನ್‌ ಕಂಪನಿ ಪ್ರಸ್ತುತ ಐಫೋನ್‌ ಎಕ್ಸ್‌ಆರ್‌ ಫೋನ್ ತಯಾರಿಸುತ್ತಿರುವ ಶ್ರೀಪೆರುಂಬುದೂರ್ ಪಟ್ಟಣದಲ್ಲಿರುವ ಘಟಕವನ್ನು ವಿಸ್ತರಣೆ ಮಾಡುವ ಸಂಬಂಧ ಹೂಡಿಕೆ ಮಾಡುತ್ತಿದೆ. ಅಷ್ಟೇ ಅಲ್ಲದೇ ಆಂಧ್ರಪ್ರದೇಶದಲ್ಲಿ ಘಟಕ ತೆರೆಯಲು ಫಾಕ್ಸ್‌ಕಾನ್‌ ಮುಂದಾಗಿದೆ. ಒಟ್ಟು 6 ಸಾವಿರ ಮಂದಿಗೆ ಇದರಿಂದ ಉದ್ಯೋಗ ಸಿಗುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: ಡಿಜಿಟಲ್‌ ಸ್ಟ್ರೈಕ್ ಬಳಿಕ‌ ಮತ್ತೊಂದು ಭಾರೀ ಹೊಡೆತ ನೀಡಲು ಭಾರತ ಸಿದ್ಧತೆ

    ಕಳೆದ ತಿಂಗಳು ತೈವಾನ್ ಮೂಲದ ಫಾಕ್ಸ್‌ಕಾನ್‌ ಕಂಪನಿಯ ಮುಖ್ಯಸ್ಥ ಲಿಯು ಯುಂಗ್‌ ಯಾವುದೇ ಮಾಹಿತಿ ನೀಡದೇ ಭಾರತದಲ್ಲಿ ಭಾರೀ ಪ್ರಮಾಣದಲ್ಲಿ ಹೂಡಿಕೆ ಮಾಡಲಾಗುವುದು ಎಂದು ತಿಳಿಸಿದ್ದರು.

    ವಿಶ್ವದ ಎರಡನೇ ಅತಿ ದೊಡ್ಡ ಸ್ಮಾರ್ಟ್‌ಫೋನ್ ಮಾರುಕಟ್ಟೆಯಾಗಿರುವ ಭಾರತದಲ್ಲಿ ಆಪಲ್‌ ಶೇ.1ರಷ್ಟು ಪಾಲನ್ನು ಹೊಂದಿದೆ. ಆಪಲ್ ಉತ್ಪನ್ನಗಳು ವಿದೇಶದಿಂದ  ಆಮದು ಆಗುತ್ತಿದ್ದು, ಆಮದು ಸುಂಕ ಜಾಸ್ತಿ ಇರುವ ಹಿನ್ನೆಲೆಯಲ್ಲಿ ಭಾರತದಲ್ಲಿ ಐಫೋನ್ ಸೇರಿದಂತೆ ಇತರ ಉತ್ಪನ್ನಗಳ ಬೆಲೆ ಜಾಸ್ತಿಯಿದೆ. ಭಾರತದಲ್ಲಿ ಉತ್ಪಾದಿಸಿದರೆ ಆಮದು ಸುಂಕವೇ ಇರದ ಕಾರಣ ಐಫೋನ್  ಬೆಲೆ ಕಡಿಮೆಯಾಗಿ ಮಾರುಕಟ್ಟೆ ವಿಸ್ತರಣೆಯಾಗಬಹುದು ಎಂಬ ಲೆಕ್ಕಾಚಾರವನ್ನು ಆಪಲ್‌ ಹಾಕಿಕೊಂಡಿದೆ.

    ಈಗಾಗಲೇ ಆಪಲ್‌ ಕಂಪನಿ ತೈವಾನ್‌‌ ಮೂಲದ ವಿಸ್ಟ್ರಾನ್ ಕಂಪನಿಯ ಮೂಲಕ ಬೆಂಗಳೂರಿನಲ್ಲಿ ಘಟಕವನ್ನು ಸ್ಥಾಪಿಸಿದೆ. 2017ರಲ್ಲಿ ಆರಂಭಗೊಂಡ ಈ ಘಟಕದಲ್ಲಿ ಐಫೋನ್‌ 6ಎಸ್‌, 7 ಫೋನ್‌‌ಗಳ ಜೋಡಣೆಯಾಗುತ್ತಿದೆ. ಅಷ್ಟೇ ಅಲ್ಲದೇ ಐಫೋನ್ ಒಳಗಡೆ ಇರುವ ಪ್ರಿಂಟೆಡ್‌ ಸರ್ಕ್ಯೂಟ್ ಬೋರ್ಡ್ಸ್‌ಗಳನ್ನು ಜೋಡಣೆ ಮಾಡಲು ಮುಂದಾಗುತ್ತಿದೆ.