Tag: fox

  • ಬಣ್ಣ ಬಣ್ಣದ 100 ಶೂ, ಚಪ್ಪಲಿಗಳನ್ನು ಕದ್ದ ನರಿ

    ಬಣ್ಣ ಬಣ್ಣದ 100 ಶೂ, ಚಪ್ಪಲಿಗಳನ್ನು ಕದ್ದ ನರಿ

    -ಫೋಟೋ ವೈರಲ್

    ಬರ್ಲಿನ್: ನರಿಯೊಂದು ಬಣ್ಣ ಬಣ್ಣದ ಶೂ, ಚಪ್ಪಲಿಗಳನ್ನ ಕದ್ದಿರುವ ವಿಚಿತ್ರ ಘಟನೆ ಜರ್ಮನಿಯ ಬರ್ಲಿನ್ ನ ಜಹ್ಲೆಂಡೋರ್ಫ್ ನಲ್ಲಿ ನಡೆದಿದೆ. ನರಿ ಶೂ ತೆಗೆದುಕೊಂಡು ಹೋಗುತ್ತಿರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

    ಜಹ್ಲೆಂಡೋರ್ಫ್ ನಿವಾಸಿಗಳ ಶೂ, ಚಪ್ಪಲಿ, ಸ್ಯಾಂಡಲ್ ಗಳ ಕಳ್ಳತನವಾಗುತ್ತಿದ್ದವು. ಆದ್ರೆ ಯಾರಿಗೂ ಕಳ್ಳ ಸಿಕ್ಕಿರಲಿಲ್ಲ. ಇದೀಗ ಶೂ ಕದಿಯುತ್ತಿರೋದು ನರಿ ಎಂಬ ವಿಚಾರ ಬೆಳಕಿಗೆ ಬಂದಿದೆ. ಕಳೆದ ಎರಡು ವಾರಗಳಿಂದ ಶೂಗಳು ಕಳ್ಳತನವಾಗಿದ್ದು, ನರಿ ಸಂಗ್ರಹಿಸಿಟ್ಟಿದ್ದ ಸ್ಥಳವನ್ನು ಸಹ ನಿವಾಸಿಗಳು ಪತ್ತೆ ಮಾಡಿದ್ದಾರೆ.

    ಜಹ್ಲೆಂಡೋರ್ಫ್ ನಿವಾಸಿ ಕ್ರಿಶ್ಚಿಯನ್ ಮೇಯರ್ ತನ್ನ ಹೊಸ ಶೂ ಕಳೆದುಕೊಂಡಿದ್ದರ ಬಗ್ಗೆ ಬೇಸರ ವ್ಯಕ್ತಪಡಿಸಿ ಫೇಸ್‍ಬುಕ್ ನಲ್ಲಿ ಬರೆದುಕೊಂಡಿದ್ದರು. ಇದೀಗ ಶೂ ಕಳ್ಳ ಸಿಕ್ಕಿರುವ ಬಗ್ಗೆ ಫೆಲಿಕ್ಸ್ ಎಂಬವರು ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ. ಆದ್ರೆ ಮೇಯರ್ ಕಳೆದುಕೊಂಡಿದ್ದ ಹೊಸ ಬ್ರ್ಯಾಂಡೆಡ್ ಜಿಮ್ ಶೂ ಸಿಕ್ಕಿಲ್ಲ.

  • ನರಿಯನ್ನ ಅಟ್ಟಾಡಿಸಿಕೊಂಡು ಬಂದು ಸಿಕ್ಕಿಬಿತ್ತು ಬೃಹತ್ ಹೆಬ್ಬಾವು

    ನರಿಯನ್ನ ಅಟ್ಟಾಡಿಸಿಕೊಂಡು ಬಂದು ಸಿಕ್ಕಿಬಿತ್ತು ಬೃಹತ್ ಹೆಬ್ಬಾವು

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಕಡಬದಲ್ಲಿ ನರಿಯನ್ನು ಕಾಡಿನಿಂದ ಅಟ್ಟಿಸಿಕೊಂಡು ಬಂದ ಬೃಹತ್ ಗಾತ್ರದ ಹೆಬ್ಬಾವು ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದಿದೆ.

    ಕಡಬದ ಹಳೆ ಸ್ಟೇಷನ್ ಬಳಿಯ ಬೆದ್ರಾಳದ ಕುಟ್ಟ ಎಂಬವರ ಮನೆ ಸಮೀಪದಲ್ಲಿ ಹೆಬ್ಬಾವು ಸಿಕ್ಕಿಬಿದ್ದಿದೆ. ಹೆಬ್ಬಾವು ಹಾಗೂ ನರಿ ನಡುವೆ ಕಾಳಗ ನಡೆದು ಬಳಿಕ ಹೆಬ್ಬಾವು ನರಿಯನ್ನು ನುಂಗಲು ಯತ್ನಿಸಿದೆ. ಹೀಗಾಗಿ ನರಿಯನ್ನು ಓಡಿಸಿಕೊಂಡು ಬಂದ ಹೆಬ್ಬಾವು ಕಡಬದ ಬಳಿ ಬಂದಿದೆ. ಇದನ್ನು ಗಮನಿಸಿದ ಗ್ರಾಮಸ್ಥರು ತಕ್ಷಣ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದಾರೆ.

    ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಹೆಬ್ಬಾವನ್ನು ಹಿಡಿದು ಬಳಿಕ ದೂರದ ಕಾಡಿಗೆ ಬಿಟ್ಟಿದ್ದಾರೆ. ಆದರೆ ನರಿ ಮಾತ್ರ ಹೆಬ್ಬಾವಿನ ಬಂಧನದಿಂದ ತಪ್ಪಿಸಿಕೊಳ್ಳಲು ಆಗದೆ ಸಾವನ್ನಪ್ಪಿದೆ. ಭಾರೀ ಗಾತ್ರದ ಈ ಹೆಬ್ಬಾವು ನೋಡಲು ಗ್ರಾಮಸ್ಥರೆಲ್ಲ ನೆರೆದಿದ್ದರು. ಅಷ್ಟೇ ಅಲ್ಲದೇ ಸೆರೆ ಸಿಕ್ಕ 15 ಅಡಿ ಉದ್ದದ ಹೆಬ್ಬಾವನ್ನು ಹಿಡಿದು ಸ್ಥಳೀಯರು ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಅದೃಷ್ಟಕ್ಕೆ ನರಿ ಫೋಟೋ ಇಟ್ಕೊಳ್ಳೋ ಬದಲು ಜೀವಂತ ನರಿ ಸಾಕಿಕೊಂಡಿದ್ಳು!

    ಅದೃಷ್ಟಕ್ಕೆ ನರಿ ಫೋಟೋ ಇಟ್ಕೊಳ್ಳೋ ಬದಲು ಜೀವಂತ ನರಿ ಸಾಕಿಕೊಂಡಿದ್ಳು!

    ಬೆಂಗಳೂರು: ಬೆಳಗ್ಗೆ ಎದ್ದು ನರಿ ಮುಖ ನೋಡಿದ್ದರೆ ಒಳ್ಳೆಯದಾಗುತ್ತದೆ ಎಂದು ಮಹಿಳೆಯೊಬ್ಬಳು ನರಿ ಫೋಟೋ ಇಟ್ಟುಕೊಳ್ಳುವ ಬದಲು ಜೀವಂತ ನರಿಯನ್ನು ಸಾಕಿಕೊಂಡಿದ್ದ ವಿಚಾರ ಬೆಳಕಿಗೆ ಬಂದಿದೆ.

    ನೆಲಮಂಗಲದ ಮರ್ಸೂರಿನ ಮನೆಯೊಂದರಲ್ಲಿ ಮಹಿಳೆಯೊಬ್ಬಳು ಪ್ರತಿನಿತ್ಯ ನರಿ ಮುಖ ನೋಡೋಕೆ ಅಂತ ಜೀವಂತ ನರಿಯನ್ನು ಸಾಕಿಕೊಂಡಿದ್ದಳು. ಖಚಿತ ಮಾಹಿತಿ ಮೇರೆಗೆ ಸಿಐಡಿ ಅರಣ್ಯ ಘಟಕದ ಸಿಬ್ಬಂದಿ ದಾಳಿ ನಡೆಸಿ ನರಿಯನ್ನು ರಕ್ಷಿಸಿ ನಂತರ ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್ ಗೆ ಕೊಂಡೊಯ್ದಿದ್ದಾರೆ.

    ನರಿ ಸಾಕುವುದು ವನ್ಯಜೀವಿ ಸಂರಕ್ಷಣೆ ಕಾಯ್ದೆಯಡಿ ಶಿಕ್ಷಾರ್ಹ ಅಪರಾಧವಾಗಿದ್ದು, ಅರಣ್ಯಾಧಿಕಾರಿಗಳ ಮುಂದೆ ಮಹಿಳೆ ತಪ್ಪೊಪ್ಪಿಕೊಂಡಿದ್ದಾಳೆ. ಇದು ಅರಣ್ಯವಾಸಿಗಳಿಂದ ನನಗೆ ಸಿಕ್ಕಿತು ಎಂದು ಮಹಿಳೆ ಮಾಹಿತಿ ನೀಡಿದ್ದಾಳೆ.

    ನರಿಯನ್ನು ಸಾಕಿಕೊಂಡರೆ ಅದೃಷ್ಟ ಖುಲಾಯಿಸಬಹುದು ಎನ್ನುವ ಕಾರಣಕ್ಕೆ ಜೀವಂತ ನರಿಯನ್ನು ಸಾಕಿಕೊಂಡಿದ್ದೆ ಎಂದು ಮಹಿಳೆ ತಿಳಿಸಿದ್ದಾಳೆ.

  • ಹಾಲು ಕುಡಿಯುತ್ತೆ, ಜನರೊಂದಿಗೆ ಆಟವಾಡುತ್ತೆ- ಕಾಡು ಬಿಟ್ಟು ಆಂಜನೇಯ ದೇವಸ್ಥಾನದಲ್ಲೇ ವಾಸವಾದ ನರಿ!

    ಹಾಲು ಕುಡಿಯುತ್ತೆ, ಜನರೊಂದಿಗೆ ಆಟವಾಡುತ್ತೆ- ಕಾಡು ಬಿಟ್ಟು ಆಂಜನೇಯ ದೇವಸ್ಥಾನದಲ್ಲೇ ವಾಸವಾದ ನರಿ!

    ಚಿಕ್ಕಮಗಳೂರು: ಅದೊಂದು ಕ್ರೂರ ಪ್ರಾಣಿ. ಏಕಾಏಕಿ ದಾಳಿ ಮಾಡೋದು ಅದರ ಚಾಳಿ. ರಾತ್ರಿಯಲ್ಲಷ್ಟೆ ಸಂಚರಿಸೋ ಅದು ಸಾಮಾನ್ಯವಾಗಿ ಹಗಲಲ್ಲಿ ಯಾರ ಕಣ್ಣಿಗೂ ಹೆಚ್ಚಾಗಿ ಕಾಣಲ್ಲ. ಆದ್ರೆ ಅಂತಹ ಪ್ರಾಣಿ ಇಲ್ಲಿ ಆಂಜನೇಯನ ಪರಮಭಕ್ತನಾಗಿದೆ. ಮೂರ್ ಹೊತ್ತು ಊಟ ಮಾಡ್ಕೊಂಡ್ ಅಲ್ಲೇ ವಾಸವಿದೆ. ಶನಿವಾರ ಬಂತೆಂದ್ರೆ ಆಂಜನೇಯನನ್ನ ಬಿಟ್ಟು ಕದಲೋದಿಲ್ಲ.

    ಹೀಗೆ ನಿಂತಲ್ಲಿ ನಿಲ್ಲದೆ, ಕಾಲಿಗೆ ಚಕ್ರ ಕಟ್ಕೊಂಡಂತೆ ಓಡಾಡ್ತಿರೋ ಇದನ್ನ ನೋಡಿ. ಹ್ಹೇ….ನಾಯಿ ಅನ್ಕೋಬೇಡಿ, ಇದು ನರಿ. ತುಂಬಾನೇ ಸೂಕ್ಷ್ಮ ಹಾಗೂ ಡೆಂಜರಸ್ ಪ್ರಾಣಿ. ಕೇವಲ ಅರಣ್ಯದಲ್ಲಷ್ಟೇ ಇರುತ್ತೆ. ಆದ್ರೆ ದಾರಿ ತಪ್ಪಿ ಅಮ್ಮನಿಂದ ಬೇರಾದ ಈ ನರಿಮರಿ, ನಾಡಲ್ಲೇ ಸೆಟ್ಲ್ ಆಗಿದೆ.

    ಇದು ಸೆಟ್ಲ್ ಆಗಿರೊದು ಚಿಕ್ಕಮಗಳೂರು ಜಿಲ್ಲೆ ಕಡೂರಿನ ಮಲ್ಲೇಶ್ವರ ಗ್ರಾಮದಲ್ಲಿ. ಇಲ್ಲಿನ ಆಂಜನೇಯ ದೇವಾಲಯದ ಆವರಣವನ್ನ ಬಿಟ್ಟು ಎಲ್ಲೂ ಹೋಗದ ನರಿಮರಿ, ಚಿಕ್ಕ ನಾಯಿಗಳು ಬಂದ್ರೆ ಹೆದರಿ ಓಡಿಸುತ್ತೆ, ದೊಡ್ಡವು ಬಂದ್ರೆ ಓಡಿಹೋಗುತ್ತೆ. ಸ್ಥಳೀಯರು ಕೊಡೋ ಹಾಲು, ಬಿಸ್ಕೆಟ್, ತೆಂಗಿನಕಾಯಿಯನ್ನ ತಿನ್ಕೊಂಡು ಕಳೆದ ಎರಡು ತಿಂಗಳಿನಿಂದ ಇಲ್ಲೇ ಇದೆ. ನರಿಯ ಈ ಜೀವನಶೈಲಿಯನ್ನ ಕಂಡ ಸ್ಥಳೀಯರು ನರಿ ಹೀಗೆಲ್ಲಾ ಇರೋ ಪ್ರಾಣಿಯಲ್ಲ, ಕಲಿಗಾಲ ಏನ್ ಬೇಕಾದ್ರು ಆಗ್ಬೋದು ಅಂತಿದ್ದಾರೆ.

    ದೇಗುಲದ ಹಿಂದಿನ ಕಲ್ಲಿನ ಗುಡ್ಡದಲ್ಲಿ ನರಿಮರಿ ವಾಸ ಮಾಡುತ್ತೆ. ಪ್ರತಿ ದಿನ ಬೆಳಗ್ಗೆ ಹಾಗೂ ಸಂಜೆ ಹಾಲು ಕರೆಯೋ ವೇಳೆಗೆ ಪಕ್ಕದಲ್ಲೇ ಇರೋ ಮನೆಗೆ ಬರುತ್ತೆ. ಹಾಲು ಕುಡಿದು ಮತ್ತೆ ದೇವಾಲಯದ ಆವರಣಕ್ಕೆ ಹೋಗುತ್ತೆ. ದೇವಾಲಯಕ್ಕೆ ಬರೋ ಭಕ್ತರ ಕೈ ನೆಕ್ಕುತ್ತಾ, ಕಾಲು ಮೂಸೂತ್ತಾ ಆಟವಾಡುತ್ತೆ.

    ನರಿಯನ್ನು ಅದೃಷ್ಟದ ಪ್ರಾಣಿ ಅಂತಾ ಭಾವಿಸಲಾಗಿದೆ. ಬೆಳಗೆದ್ದು ನರಿ ಮುಖ ನೋಡಿದ್ರೆ ಅದೃಷ್ಟ ಖುಲಾಯಿಸುತ್ತೆ ಅಂತಾರೆ. ಅದಕ್ಕೆ ಏನೋ, ನರಿ ನೋಡಲು ದೇಗುಲಕ್ಕೆ ಜನ ಸಾಗರವೇ ಬರ್ತಿದೆ.

  • ತೋಳಗಳ ದಾಳಿಯಿಂದ 21 ಮಂದಿಗೆ ಗಾಯ- ಓರ್ವ ಅಜ್ಜಿ ಸೇರಿ 6 ಜನರ ಸ್ಥಿತಿ ಗಂಭೀರ

    ತೋಳಗಳ ದಾಳಿಯಿಂದ 21 ಮಂದಿಗೆ ಗಾಯ- ಓರ್ವ ಅಜ್ಜಿ ಸೇರಿ 6 ಜನರ ಸ್ಥಿತಿ ಗಂಭೀರ

    ಗದಗ: ನಾಲ್ಕು ಗ್ರಾಮಗಳ ಜನರ ಮೇಲೆ ತೋಳಗಳು ದಾಳಿ ನಡೆಸಿರೋ ಘಟನೆಯೊಂದು ಬೆಳಕಿಗೆ ಬಂದಿದೆ.

    ಗದಗ ತಾಲೂಕು ಹಾಗೂ ರೋಣ ತಾಲೂಕಿನ ಹುಯಿಲಗೋಳ, ಕುರುಡಗಿ, ಗುಜಮಾಗಡಿ, ಯರೇಬೇಲೆರಿ ಗ್ರಾಮಗಳಿಗೆ ಶನಿವಾರ ತಡರಾತ್ರಿ ತೋಳಗಳು ನುಗ್ಗಿದ್ದು, ಗ್ರಾಮದ ಜನರ ಮೇಲೆ ದಾಳಿ ನಡೆಸಿವೆ. 21 ಜನ್ರಿಗೆ ಗಾಯಗಳಾಗಿದ್ದು, ಇದರಲ್ಲಿ ಓರ್ವ ಅಜ್ಜಿ ಸೇರಿ 6 ಜನರ ಸ್ಥಿತಿ ಗಂಭೀರವಾಗಿದೆ.

    ಗದಗ ತಾಲೂಕಿನ ಹುಯಿಲಗೋಳದಲ್ಲಿ 3, ರೋಣ ತಾಲೂಕಿನ ಗುಜಮಾಗಡಿಯಲ್ಲಿ 9, ಯರೇಬೇಲೆರಿಯಲ್ಲಿ 8 ಹಾಗೂ ಕುರುಡಗಿಯಲ್ಲಿ 5 ಜನರ ಮೇಲೆ ತೋಳಗಳು ದಾಳಿ ನಡೆಸಿವೆ. ಸದ್ಯ ಗಾಯಾಳುಗಳಿಗೆ ಗದಗ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

    ಘಟನೆಯ ಬಳಿಕ ಆಕ್ರೋಶ ವ್ಯಕ್ತಪಡಿಸಿದ ಸ್ಥಳೀಯರು ತೋಳ ಹಿಡಿಯುವಂತೆ ಅರಣ್ಯ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.