Tag: Four brothers

  • ತಂದೆ, ತಾಯಿಯನ್ನು ಹೊತ್ತು ಕನ್ವರ್ ಯಾತ್ರೆ ಕೈಗೊಂಡ ನಾಲ್ವರು ಸಹೋದರರು

    ತಂದೆ, ತಾಯಿಯನ್ನು ಹೊತ್ತು ಕನ್ವರ್ ಯಾತ್ರೆ ಕೈಗೊಂಡ ನಾಲ್ವರು ಸಹೋದರರು

    ಚಂಡೀಗಢ್: ಹರ್ಯಾಣ ಮೂಲದ ನಾಲ್ವರು ಸಹೋದರರು ಹೆತ್ತವರನ್ನು ಹೊತ್ತುಕೊಂಡು ಕನ್ವರ್ ಯಾತ್ರೆ ಕೈಗೊಂಡಿದ್ದಾರೆ. ಅವರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಹರ್ಯಾಣದ ಪಾಣಿಪತ್‍ನಿಂದ ಪ್ರಯಾಣ ಆರಂಭಿಸಿರುವ ಸಹೋದರು ಈಗಾಗಲೇ ಉತ್ತರ ಪ್ರದೇಶದ ಶಾಮ್ಲಿ ತಲುಪಿದ್ದಾರೆ. ಅಲ್ಲಲ್ಲಿ ಕೆಲ ಹೊತ್ತು ವಿಶ್ರಾಂತಿ, ಆಹಾರ ಸೇವನೆ ಮಾಡಿ ಸಹೋದರರು ಯಾತ್ರೆ ಮುಂದುವರಿಸಿದ್ದಾರೆ.

    ಪಾಣಿಪತ್‍ನಿಂದ ಉತ್ತರಾಖಂಡದ ಹರಿದ್ವಾರವೂ ಸುಮಾರು 175 ಕಿ.ಮೀ. ಇದೆ. ಕಳೆದ ವರ್ಷ ಇಬ್ಬರು ಸಹೋದರು ಮಾತ್ರ ತಂದೆ, ತಾಯಿಯನ್ನು ಹೊತ್ತು ಯಾತ್ರೆ ಮಾಡಿದ್ದರು. ಈ ಬಾರಿ ಮತ್ತಿಬ್ಬರು ಸಹೋದದರು ಅವರಿಗೆ ಸಾಥ್ ನೀಡಿದ್ದಾರೆ. ಬಾಸ್ಕೇಟ್ ರೀತಿ ಆಸನದಲ್ಲಿ ತಂದೆ ಹಾಗೂ ತಾಯಿಯನ್ನು ಕೂರಿಸಿ, ಬಿದಿರಿನ ಕೋಲಿನ ಸಹಾಯದಿಂದ ಇಬ್ಬರು ಯುವಕರು ಹೊತ್ತು ಸಾಗುತ್ತಿದ್ದಾರೆ. ಸ್ವಲ್ಪ ದೂರ ಇಬ್ಬರು ಹೆತ್ತವರನ್ನು ಹೊತ್ತು ಸಾಗುತ್ತಾರೆ. ಅವರಿಗೆ ಆಯಾಸವಾಗುತ್ತಿದ್ದಂತೆ ಮತ್ತಿಬ್ಬರು ಹೆಗಲು ನೀಡುತ್ತಿದ್ದಾರೆ.