Tag: Fountain

  • G20 Summit: ಅಲಂಕಾರಕ್ಕೆ ಶಿವಲಿಂಗ ಆಕಾರದ ಕಾರಂಜಿ ಬಳಕೆ – ಆಪ್ ವಿರೋಧ

    G20 Summit: ಅಲಂಕಾರಕ್ಕೆ ಶಿವಲಿಂಗ ಆಕಾರದ ಕಾರಂಜಿ ಬಳಕೆ – ಆಪ್ ವಿರೋಧ

    ನವದೆಹಲಿ: ಸನಾತನ ಧರ್ಮದಂಗಲ್ ನಡುವೆ ಶಿವಲಿಂಗ (Shivaling) ಫೈಟ್ ಕೂಡಾ ಶುರುವಾಗಿದೆ. ದೆಹಲಿಯಲ್ಲಿ ಜಿ20 ಶೃಂಗಸಭೆ (G20 Summit) ಪ್ರಯುಕ್ತ ಅಲಂಕಾರದ ಭಾಗವಾಗಿ ಶಿವಲಿಂಗ ಆಕಾರದ ಕಾರಂಜಿಗಳನ್ನು (Fountain) ದೆಹಲಿಯ 21ಕ್ಕೂ ಹೆಚ್ಚು ಕಡೆ ಸ್ಥಾಪನೆ ಮಾಡಲಾಗಿದೆ. ಇದಕ್ಕೆ ದೆಹಲಿ ಆಡಳಿತ ಪಕ್ಷ ಆಮ್ ಆದ್ಮಿ ಪಾರ್ಟಿ (AAP) ತಕರಾರು ತೆಗೆದಿದೆ.

    ಶಿವಲಿಂಗವನ್ನು ಅಲಂಕಾರದ ವಸ್ತುವಾಗಿ ಬಳಕೆ ಮಾಡಿಕೊಳ್ಳುತ್ತಿರುವುದಕ್ಕೆ ಆಪ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೆನಾ ವಿರುದ್ಧ ದೂರು ನೀಡಿದೆ. ಇದು ಶಿವಲಿಂಗಕ್ಕೆ ಮಾಡಿದ ಅವಮಾನ, ಈ ಮೂಲಕ ಕೋಟ್ಯಂತರ ಹಿಂದೂಗಳ ಭಾವನೆಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿದೆ.

    ಆದರೆ ಈ ಆರೋಪಗಳನ್ನು ಬಿಜೆಪಿ (BJP) ತಳ್ಳಿಹಾಕಿದೆ. ಪ್ರತಿಯೊಂದು ವಿಚಾರವನ್ನು ರಾಜಕೀಯ ಮಾಡಲಾಗುತ್ತಿದೆ ಎಂದು ತಿರುಗೇಟು ನೀಡಿದೆ. ಇದನ್ನೂ ಓದಿ: ಇಂಡಿಯಾ ಹೆಸರಿನ ಮೇಲೆ ಪಾಕಿಸ್ತಾನ ಹಕ್ಕು ಸಾಧಿಸುತ್ತಾ?

    ಶಿವಲಿಂಗದ ಬಳಿ ಕೈ ತೊಳೆದ ಸಚಿವ:
    ಈ ನಡುವೆ ದೇಗುಲವೊಂದರಲ್ಲಿ ಶಿವಲಿಂಗದ ಪಕ್ಕದಲ್ಲೇ ಉತ್ತರ ಪ್ರದೇಶದ ಸಚಿವ ಸತೀಶ್ ಶರ್ಮಾ ಕೈತೊಳೆಯತ್ತಿರುವ ವೀಡಿಯೋ ಹಂಚಿಕೊಂಡ ರಾಜ್ಯ ಕಾಂಗ್ರೆಸ್ ಆಕ್ರೋಶ ಹೊರಹಾಕಿದೆ. ದೇವಾಲಯವನ್ನು, ದೇವರ ಸನ್ನಿಧಾನವನ್ನು ಬಿಜೆಪಿಗರು ಬಚ್ಚಲು ಮಾಡಿಕೊಂಡಿದ್ದಾರೆಯೇ ಎಂದು ಪ್ರಶ್ನಿಸಿದೆ. ಇಂದು ಕೈತೊಳೆದವರು, ಮುಂದೆ ದೇವರ ಗುಡಿಯಲ್ಲಿ ಸ್ನಾನ ಮಾಡಿದರೂ ಅಚ್ಚರಿ ಇಲ್ಲ. ಇದು ಬಿಜೆಪಿಗರ ಅಸಲಿ ಧರ್ಮ ಎಂದು ಕಿಡಿಕಾರಿದೆ. ಇದನ್ನೂ ಓದಿ: ಧಾರ್ಮಿಕ ಮತಾಂತರಗಳನ್ನು ತಡೆಯಲು ಕೇಂದ್ರಕ್ಕೆ ನಿರ್ದೇಶನ ನೀಡಿ – ಪಿಐಎಲ್‌ ವಜಾ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮಳೆಯೇ ಇಲ್ಲದ ನಾಡಿನಲ್ಲಿ ಜಲದೇವಿಯ ನೃತ್ಯ: ವಿಡಿಯೋ

    ಮಳೆಯೇ ಇಲ್ಲದ ನಾಡಿನಲ್ಲಿ ಜಲದೇವಿಯ ನೃತ್ಯ: ವಿಡಿಯೋ

    ಚಿತ್ರದುರ್ಗ: ಮಳೆಯೇ ಇಲ್ಲದ ನಾಡಿನಲ್ಲಿ ಮುರುಘಾಮಠದಲ್ಲಿ ಜಲದೇವಿ ನೃತ್ಯ ಮಾಡುತ್ತಿರುವ ದೃಶ್ಯ ಕಂಡುಬಂದಿದೆ. ಮುರುಘಾಮಠ ಕೋಟೆನಾಡು ಚಿತ್ರದುರ್ಗದ ಹೊರವಲಯದಲ್ಲಿದ್ದು, ಈ ಮುರುಘಾಮಠದ ಆವರಣದಲ್ಲಿನ ಮುರುಘಾವನ ಈಗಾಗಲೇ ನಾಡಿನಾದ್ಯಂತ ಚಿರಪರಿಚಿತವಾಗಿದೆ.

    ಆದಿ ಮಾನವನಿಂದ ಹಿಡಿದು ಇಂದಿನ ಆಧುನಿಕ ಮಾನವನ ಸ್ಥಿತಿಗತಿಗಳ ಚಿತ್ರಣಗಳು ಇಲ್ಲಿ ಅನಾವರಣಗೊಂಡಿದೆ. ಇತ್ತೀಚೆಗೆ ಮುರುಘಾವನದಲ್ಲಿ ಸಂಗೀತ ಕಾರಂಜಿ ಹಾಗು ಬೋಟ್ ವ್ಯವಸ್ಥೆ ಮಾಡಲಾಗಿದೆ. ಹೀಗಾಗಿ ವೀಕೆಂಡ್ ಕಳೆಯಲು ವಿವಿಧೆಡೆ ಪ್ರವಾಸ ಹೋಗುತ್ತಿದ್ದ ಜನರು ಈಗ ಸುಮಧುರ ಹಾಡುಗಳ ಜೊತೆಗೆ ನರ್ತಿಸುವ ನೀರಿನ ಆಕರ್ಷಣೀಯ ನೃತ್ಯ ನೋಡುತ್ತಾ ಮೈ ಮರೆಯುತಿದ್ದು, ಅಪರೂಪದ ಸಂಗೀತ ಕಾರಂಜಿಯ ಝಲಕ್ ಎಲ್ಲರ ಕಣ್ಮನ ಸೆಳೆಯುತ್ತಿದೆ.

    ಸಂಗೀತ ಕಾರಂಜಿ ಈಗ ಮುರುಘಾವನದ ಸೆಂಟರ್ ಆಫ್ ಅಟ್ರ್ಯಾಕ್ಷನ್ ಆಗಿದ್ದು, ನಿತ್ಯ ಸಾವಿರಾರು ಜನ ಸಂಗೀತ ಕಾರಂಜಿ ವೀಕ್ಷಿಸಲು ಆಗಮಿಸುತ್ತಿದ್ದಾರೆ. ಸಂಜೆ 7 ಗಂಟೆಯಿಂದ ರಂಗು ರಂಗಿನ ಸಂಗೀತ ಕಾರಂಜಿ ಆರಂಭವಾಗುತ್ತದೆ. ಹೀಗಾಗಿ ಈ ಸುಂದರ ಸೊಬಗಿನ ಕಣ್ಮನ ತುಂಬಿಸಿಕೊಳ್ಳಲು ಜನ ಕಾತುರರಾಗಿ ಕಾಯುತ್ತಾರೆ. ಅಲ್ಲದೇ ಫೋಟೋ ಕ್ಲಿಕ್ಕಿಸಿಕೊಂಡು ಸಂಭ್ರಮಿಸುತ್ತಿದ್ದಾರೆ.

    ಒಂದೆಡೆ ಸಿಗುವ ಇತಿಹಾಸ ಮಾಹಿತಿ, ಸಂಗೀತ ಮನರಂಜನೆ ಹಾಗೂ ಬೋಟಿಂಗ್ ರೋಮಾಂಚನದಲ್ಲಿ ಸಮಯದ ಅರಿವಿಲ್ಲದಂತೆ ಎಂಜಾಯ್ ಮಾಡುವ ಸ್ಪಾಟ್ ಈ ಮುರುಘಾ ಮಠವೆನಿಸಿದೆ. ಒಟ್ಟಾರೆಯಾಗಿ ಕೋಟೆನಾಡಿನ ಮುರುಘಾಮಠದಲ್ಲೀಗ ಸಂಗೀತ ಕಾರಂಜಿ ಜನರ ಮನ ತಣಿಸುತ್ತಿದೆ. ಜನರನ್ನು ತನ್ನತ್ತ ಕೈಬೀಸಿ ಕರೆಯುತ್ತಿದೆ. ಹೀಗಾಗಿ ನಿತ್ಯ ಜನಸಾಗರವೇ ಮುರುಘಾವನದ ಸಂಗೀತ ಕಾರಂಜಿಯತ್ತ ಹೆಜ್ಜೆ ಹಾಕುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv