Tag: fortis hospital

  • ಅಪಘಾತದಲ್ಲಿ ತಲೆಗೆ ತೀವ್ರ ಪೆಟ್ಟಾಗಿದ್ದ ಯುವಕನಿಗೆ ಫೋರ್ಟಿಸ್ ಆಸ್ಪತ್ರೆಯಲ್ಲಿ ಯಶಸ್ವಿ ಚಿಕಿತ್ಸೆ

    ಅಪಘಾತದಲ್ಲಿ ತಲೆಗೆ ತೀವ್ರ ಪೆಟ್ಟಾಗಿದ್ದ ಯುವಕನಿಗೆ ಫೋರ್ಟಿಸ್ ಆಸ್ಪತ್ರೆಯಲ್ಲಿ ಯಶಸ್ವಿ ಚಿಕಿತ್ಸೆ

    ಬೆಂಗಳೂರು: ರಸ್ತೆ ಅಪಘಾತದಲ್ಲಿ (Road Accident) ತಲೆಗೆ ತೀವ್ರ ಪೆಟ್ಟಾಗಿ ಮೆದುಳಿನ ಕೋಶಗಳ ನಡುವೆ ರಕ್ತಸ್ರಾವದಿಂದ ಜೀವನ್ಮರಣದ ನಡುವೆ ಹೋರಾಡುತ್ತಿದ್ದ 19 ವರ್ಷದ ಕಾಲೇಜು ಯುವಕನಿಗೆ ಫೋರ್ಟಿಸ್ ಆಸ್ಪತ್ರೆ (Fortis Hospital) ವೈದ್ಯರ ತಂಡ ಯಶಸ್ವಿ ಚಿಕಿತ್ಸೆ ನೀಡಿದೆ.

    ಈ ಕುರಿತು ಮಾತನಾಡಿರುವ ಆಸ್ಪತ್ರೆಯ ನರಶಸ್ತ್ರಚಿಕಿತ್ಸಾ ವಿಭಾಗದ ಹೆಚ್ಚುವರಿ ನಿರ್ದೇಶಕ ರಘುರಾಮ್ ಜಿ, ರಾಜ್ ಎಂಬುವವರು ಹುಳಿಮಾವು ರಸ್ತೆಯಲ್ಲಿ ತೆರಳುತ್ತಿದ್ದ ವೇಳೆ ಫುಟ್‍ಪಾತ್‍ಗೆ ಕಾರು ಡಿಕ್ಕಿಯಾದ ಪರಿಣಾಮ ಹಿಂಬದಿ ಕುಳಿತಿದ್ದ ಇವರ ತಲೆ, ಕೈಗೆ ತೀವ್ರವಾಗಿ ಪೆಟ್ಟಾಗಿತ್ತು. ಅಪಘಾತದ ತೀವ್ರತೆಯಿಂದಾಗಿ ಇವರ ಬಲಗೈ ಮೂಳೆ ಮುರಿದು, ತಲೆಗೆ ತೀವ್ರವಾಗಿ ಗಾಯವಾಗಿ ಕಿವಿಯಿಂದ ರಕ್ತಸ್ತ್ರಾವವಾಗಿತ್ತು. ಇದರಿಂದ ಅವರು ಪ್ರಜ್ಞೆ ಕಳೆದುಕೊಂಡಿದ್ದರು. ಕೂಡಲೇ ಅವರನ್ನು ಫೋರ್ಟಿಸ್ ಆಸ್ಪತ್ರೆಯ ತುರ್ತು ನಿಗಾ ಘಟಕಕ್ಕೆ ಕರೆತರಲಾಯಿತು. ಕೂಡಲೇ ನಮ್ಮ ವೈದ್ಯರ ತಂಡ ಅವರನ್ನು ಎಂಆರ್‍ಐಗೆ ಒಳಪಡಿಸಿ, ಅವರಿಗೆ ಮೆದುಳಿನ ಕೋಶಗಳ ನಡುವೆ ಸಂಪರ್ಕ ಕಲ್ಪಿಸುವ ನರಗಳಲ್ಲಿ ರಕ್ತಸ್ರಾವ ಆಗಿರುವುದನ್ನು ಪತ್ತೆಮಾಡಿತ್ತು ಎಂದು ತಿಳಿಸಿದ್ದಾರೆ.

    ಈ ರೀತಿ ರಕ್ತಸ್ರಾವವನ್ನು ಆಕ್ಸಾನಲ್ ಗಾಯ ಎನ್ನಲಾಗುತ್ತದೆ. ಈ ಗಾಯದಿಂದ ಅವರು ಮಾತನಾಡುವ ಹಾಗೂ ಚಲಿಸುವ ಸಾಮಥ್ರ್ಯವನ್ನು ಕಳೆದುಕೊಳ್ಳುವ ಸಂಭವವಿರುತ್ತದೆ. ಹೀಗಾಗಿ ಅವರಿಗೆ ಕೂಡಲೇ ತುರ್ತು ಚಿಕಿತ್ಸೆಯನ್ನು ನೀಡಲಾಯಿತು. ನ್ಯೂರೋ ತಂಡವು ಅವರ ಮಾತಿನ ತೊಂದರೆ, ಮೆಮೊರಿ ಸಮಸ್ಯೆಯನ್ನು ಸರಿಪಡಿಸುವ ನಿಟ್ಟಿನಲ್ಲಿ ಚಿಕಿತ್ಸೆ ನೀಡಿದರು. ಆರಂಭಿಕ ಚಿಕಿತ್ಸೆಯ ನಂತರ, ಫಿಸಿಯೋಥೆರಪಿ ಮತ್ತು ಸ್ಪೀಚ್ ಥೆರಪಿ ನೀಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

    ನಗರದ ಬನ್ನೇರುಘಟ್ಟ ರಸ್ತೆಯಲ್ಲಿರುವ ಫೋರ್ಟಿಸ್ ಆಸ್ಪತ್ರೆಯ ಮೂಳೆಚಿಕಿತ್ಸಾ ವಿಭಾಗದ ನಿರ್ದೇಶಕ ಡಾ. ನಾರಾಯಣ್ ಹುಲ್ಸೆ, ಅಪಘಾತದಿಂದ ರಾಜ್ ಅವರ ಬಲಗೈ ಮೇಲ್ಭಾಗದ ಮೂಳೆ ಮುರಿದ ಕಾರಣಾದವರಿಗೆ ತೆಳವಾದ ತಂತಿಯನ್ನು ಬಳಸಿಕೊಂಡು, ಪ್ಲೇಟ್ ಹಾಗೂ ಸ್ಕ್ರೂಗಳನ್ನು ಬಲಗೊಳಿಸಲಾಗಿದೆ. ಜೊತೆಗೆ, ಮೊಣಕೈ ಕೀಲಿನ ಒಂದು ಭಾಗವನ್ನು ತೆಗೆದುಹಾಕಲಾಗಿದ್ದು, ರೋಗಿಯು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

  • ಯಕೃತ್‌ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ತಾಯಿಗೆ ಮಗನಿಂದ ಯಕೃತ್‌ ದಾನ – ಯಶಸ್ವಿ ಯಕೃತ್‌ ಕಸಿ ಶಸ್ತ್ರಚಿಕಿತ್ಸೆ

    ಯಕೃತ್‌ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ತಾಯಿಗೆ ಮಗನಿಂದ ಯಕೃತ್‌ ದಾನ – ಯಶಸ್ವಿ ಯಕೃತ್‌ ಕಸಿ ಶಸ್ತ್ರಚಿಕಿತ್ಸೆ

    ಬೆಂಗಳೂರು: ಯಕೃತ್‌ ಕ್ಯಾನ್ಸರ್‌ಗೆ ಒಳಗಾಗಿದ್ದ 52 ವರ್ಷದ ತನ್ನ ತಾಯಿಗೆ ಸ್ವತಃ ಮಗನೇ ಯಕೃತ್‌ ಭಾಗವನ್ನು ದಾನ ಮಾಡುವ ಮೂಲಕ ಮಹಿಳೆಗೆ ಯಶಸ್ವಿಯಾಗಿ ಯಕೃತ್‌ ಕಸಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ.

    ಬನ್ನೇರುಘಟ್ಟ ಫೋರ್ಟಿಸ್‌ ಆಸ್ಪತ್ರೆಯ ಯಕೃತ್ತಿನ ಕಸಿ ಶಸ್ತ್ರಚಿಕಿತ್ಸಕರಾದ ಡಾ.ಕಿಶೋರ್ ಜಿ.ಎಸ್‌.ಬಿ. ಮತ್ತು ಡಾ.ಪಿಯೂಷ್ ಸಿನ್ಹಾ ಹಾಗೂ ಗ್ಯಾಸ್ಟ್ರೋಎಂಟರಾಲಜಿಸ್ಟ್ ಡಾ.ಬಿ.ಎಸ್ ರವೀಂದ್ರ ಅವರ ತಂಡ ಯಶಸ್ವಿಯಾಗಿ ಈ ಸಂಕೀರ್ಣ ಶಸ್ತ್ರಚಿಕಿತ್ಸೆ ನಡೆಸಿದೆ. ಇದನ್ನೂ ಓದಿ: ಮಳೆಗೆ ಮುಳುಗಿದ ಕರುನಾಡು – ಹಾವೇರಿ, ಕೊಡಗು ಸೇರಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಶಾಲಾ, ಕಾಲೇಜುಗಳಿಗೆ ರಜೆ

    ಈ ಕುರಿತು ಮಾತನಾಡಿದ ಫೋರ್ಟಿಸ್‌ ಆಸ್ಪತ್ರೆಯ ಲಿವರ್‌ ಟ್ರಾನ್ಸ್‌ಪ್ಲಾಂಟ್‌ ಸರ್ಜನ್‌ ಡಾ. ಕಿಶೋರ್ ಜಿಎಸ್‌ಬಿ, ಮತ್ತು ಡಾ. ಪಿಯೂಷ್ ಸಿನ್ಹಾ, 2021 ರಲ್ಲಿ 52 ವರ್ಷದ ಲೀಲಾ ಎಂಬುವವರು ಕಾಮಾಲೆ ಕಾಯಿಲೆಗೆ ತುತ್ತಾದರು. ಇದರ ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಾದ ಬಳಿಕ ಅವರಿಗೆ ಲಿವರ್ ಸಿರೋಸಿಸ್ ಇರುವುದು ಪತ್ತೆಯಾಯಿತು. ಬಳಿಕ ಅವರು ಫೋರ್ಟಿಸ್‌ ಆಸ್ಪತ್ರೆಗೆ ದಾಖಲಾದರು. ದೀರ್ಘಕಾಲದಿಂದ ಯಕೃತ್‌ನ ಕಾಯಿಲೆ ಇರುವ ಕಾರಣ ಅವರ ಯಕೃತ್‌ನಲ್ಲಿ ದ್ರವದ ಶೇಖರಣೆಯಾಗಿ ಯಕೃತ್‌ ಸರಿಯಾಗಿ ಕಾರ್ಯ ನಿರ್ವಹಿಸುತ್ತಿರಲಿಲ್ಲ. ಇದರಿಂದ ಅವರ ಜೀವನ ಶೈಲಿಯ ಮೇಲೆ ತೀವ್ರ ಪರಿಣಾಮ ಉಂಟು ಮಾಡುತ್ತಿತ್ತು. ಅವರನ್ನು ಮತ್ತಷ್ಟು ತಪಾಸಣೆಗೆ ಒಳಪಡಿಸಿದ ಬಳಿಕ ಪಿತ್ತರಸ ನಾಳದಲ್ಲಿ ಕಲ್ಲು ಇರುವುದು ಪತ್ತೆಯಾಯಿತು. ಗ್ಯಾಸ್ಟ್ರೋ ತಂಡವು ಈ ಕಲ್ಲು ತೆಗೆಯುವ ಶಸ್ತ್ರಚಿಕಿತ್ಸೆ ವೇಳೆ ಆಕೆಗೆ ಯಕೃತ್‌ನ ಕ್ಯಾನ್ಸರ್‌ ಪ್ರಾರಂಭಿಕ ಹಂತದಲ್ಲಿರುವುದು ಸಹ ತಿಳಿದುಬಂತು. ಹೀಗಾಗಿ ಆಕೆಗೆ ಲಿವರ್ ಸಿರೋಸಿಸ್ ಮತ್ತು ಯಕೃತ್ತಿನ ಕ್ಯಾನ್ಸರ್‌ಗೆ ಕೂಡಲೇ ಯಕೃತ್‌ ಕಸಿ ಅಗತ್ಯತೆ ಬಿತ್ತು. ಸ್ವತಃ 31 ವರ್ಷದ ಮಗನೇ ತನ್ನ ಯಕೃತ್‌ನ ಭಾಗವನ್ನು ದಾನ ಮಾಡಲು ಮುಂದಾದರು. ಸಕಾಲದಲ್ಲಿ ಯಕೃತ್‌ ಸಿಕ್ಕ ಪರಿಣಾಮ ಅವರಿಗೆ ಯಶಸ್ವಿಯಾಗಿ ಕಸಿ ಮಾಡಲಾಯಿತು ಎಂದು ವಿವರಿಸಿದರು.

    ದಾನಿಯ ಯಕೃತ್ತಿನ ಉಳಿದ ಭಾಗವು ತಕ್ಷಣವೇ ಪುನರುತ್ಪಾದಿಸಲು ಪ್ರಾರಂಭಿಸುತ್ತದೆ. 6 ರಿಂದ 8 ವಾರಗಳಲ್ಲಿ ಅದರ ಸಾಮಾನ್ಯ ಗಾತ್ರಕ್ಕೆ ಯಕೃತ್‌ ಬೆಳೆಯುತ್ತದೆ. ಹೆಚ್ಚಿನ ಯಕೃತ್‌ ದಾನಿಗಳು ಶಸ್ತ್ರಚಿಕಿತ್ಸೆಯ ಒಂದು ವಾರದ ನಂತರ ಸಾಮಾನ್ಯ ಜೀವನಕ್ಕೆ ಮರಳಬಹುದು ಎಂದರು. ಇದನ್ನೂ ಓದಿ: 2 ವರ್ಷಗಳ ಬಳಿಕ ಭಾರೀ ವಾಹನಗಳ ಸಂಚಾರಕ್ಕೆ ಪೀಣ್ಯ ಫ್ಲೈಓವರ್‌ ಮುಕ್ತ – ಈ ಷರತ್ತು ಅನ್ವಯ

    ಗ್ಯಾಸ್ಟ್ರೋಎಂಟರಾಲಜಿ ಮತ್ತು ಹೆಪಟಾಲಜಿ ವಿಭಾಗದ ನಿರ್ದೇಶಕ ಡಾ.ಬಿ.ಎಸ್ ರವೀಂದ್ರ ಮಾತನಾಡಿ, ಯಕೃತ್ತಿನ ಕ್ಯಾನ್ಸರ್ ಅನ್ನು CT ಸ್ಕ್ಯಾನ್ ಸ್ಕ್ರೀನಿಂಗ್‌ನಲ್ಲಿ ಪತ್ತೆ ಹಚ್ಚಲಾಯಿತು. ಕೊಲಾಂಜೈಟಿಸ್‌ನೊಂದಿಗೆ ಸಿರೋಟಿಕ್ ರೋಗಿಗೆ ಚಿಕಿತ್ಸೆ ನೀಡುವುದು ಸವಾಲಿನ ಸಂಗತಿ, ಜೊತೆಗೆ ಸಾಮಾನ್ಯ ಪಿತ್ತರಸ ನಾಳದಿಂದ ಕಲ್ಲುಗಳನ್ನು ಯಶಸ್ವಿಯಾಗಿ ಹೊರತೆಗೆದು ಸ್ಟೆಂಟ್‌ಗಳನ್ನು ಇರಿಸಲು ಸಾಧ್ಯವಾಯಿತು ಎಂದು ವಿವರಿಸಿದರು. ಇದನ್ನೂ ಓದಿ: ಮೋದಿಯನ್ನು ಭೇಟಿಯಾದ ಹೆಚ್‌ಡಿಡಿ, ಹೆಚ್‌ಡಿಕೆ – ಮಹತ್ವದ ವಿಚಾರಗಳ ಕುರಿತು ಚರ್ಚೆ

  • 111 ಕೆಜಿ ತೂಕವಿದ್ದ 15 ವರ್ಷದ ಬಾಲಕನಿಗೆ ಸಂಭಾವ್ಯ ಪಾರ್ಶ್ವವಾಯು ತಪ್ಪಿಸಿದ ʻಬೆನ್ನೆಲುಬಿನ ಡಿಸ್ಕ್ʼ ಯಶಸ್ವಿ ಶಸ್ತ್ರಚಿಕಿತ್ಸೆ!

    111 ಕೆಜಿ ತೂಕವಿದ್ದ 15 ವರ್ಷದ ಬಾಲಕನಿಗೆ ಸಂಭಾವ್ಯ ಪಾರ್ಶ್ವವಾಯು ತಪ್ಪಿಸಿದ ʻಬೆನ್ನೆಲುಬಿನ ಡಿಸ್ಕ್ʼ ಯಶಸ್ವಿ ಶಸ್ತ್ರಚಿಕಿತ್ಸೆ!

    ಬೆಂಗಳೂರು: ಬೆನ್ನುಮೂಳೆಯ ಡಿಸ್ಕ್‌ಲೊಕೇಟ್ (ಬೆನ್ನು ಮೂಳೆ ಪಲ್ಲಟಗೊಳ್ಳುವುದು) ಆಗಿದ್ದ ಪರಿಣಾಮ, ಪಾರ್ಶ್ವವಾಯುಗೆ ಒಳಗಾಗಬೇಕಿದ್ದ 111 ಕೆ.ಜಿ. ತೂಕದ 15 ವರ್ಷದ ಬಾಲಕನಿಗೆ, ʻಮೈಕ್ರೋ-ಲುಂಬಾರ್ ಡಿಸ್ಸೆಕ್ಟಮಿʼ (Micro Lumbar Discectomy) ಎಂಬ ಕಾಲು ಉಳಿಸುವ ಬೆನ್ನುಮೂಳೆಯ ಶಸ್ತ್ರಚಿಕಿತ್ಸೆಯನ್ನು ಬನ್ನೇರುಘಟ್ಟ ಫೋರ್ಟಿಸ್‌ ಆಸ್ಪತ್ರೆ (Fortis Hospital) ವೈದ್ಯರ ತಂಡ ಯಶಸ್ವಿಯಾಗಿ ಮಾಡಿದೆ.

    ಫೋರ್ಟಿಸ್‌ ಆಸ್ಪತ್ರೆಯ ನರಶಸ್ತ್ರಚಿಕಿತ್ಸಕ ಸಲಹೆಗಾರ ಡಾ.ವಿ ಗಣೇಶ್ ನೇತೃತ್ವದ ತಂಡ ಒಂದು ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ (Surgery) ನಡೆಸಿದೆ. ಇದನ್ನೂ ಓದಿ: NEET: ಪರೀಕ್ಷಾ ಮಂಡಳಿ ಟ್ರಂಕ್‌ನಿಂದ ಪ್ರಶ್ನೆಪತ್ರಿಕೆ ಕದ್ದಿದ್ದ ಎಂಜಿನಿಯರ್‌ ಬಂಧನ

    ಈ ಕುರಿತು ಮಾತನಾಡಿದ ವೈದ್ಯರು, 111 ಕೆ.ಜಿ. ತೂಕವಿದ್ದ 15 ವರ್ಷದ ಸೈಯದ್ ಸಲಾಹುದೀನ್ ಕ್ವಾದ್ರಿ ಎಂಬ ಬಾಲಕನಿಗೆ ಕಾರಣಾಂತರಗಳಿಂದ ಬೆನ್ನಿನ ಮೂಳೆಯ ಡಿಸ್‌ಲೊಕೇಟ್‌ ನಿಂದ (Back Bone Dislocated) ಅಸಾಧ್ಯ ನೋವು ಕಾಣಿಸಿಕೊಂಡಿತ್ತು. ಈ ನೋವು ಕ್ರಮೇಣ ಬೆನ್ನಿನಿಂದ ಕಣಕಾಲುವರೆಗೂ ಹಬ್ಬಿತ್ತು. 4 ತಿಂಗಳ ಕಾಲ ಈ ನೋವನ್ನು ಹಾಗೆಯೇ ನಿರ್ಲಕ್ಷಿಸಿದ್ದರು. ಇದರಿಂದಾಗಿ ಬಾಲಕ ನಡೆಯಲು ಹಾಗೂ ಕೂರಲು ಸಹ ಆಗದಷ್ಟು ಅಗಾಧ ನೋವಿಗೆ ಒಳಗಾಗಿದ್ದ. ಇದನ್ನೂ ಓದಿ: ವಿವಾದಿತ ಭೋಜಶಾಲಾ ಮಸೀದಿಯಲ್ಲಿ ಮಂದಿರದ ಕುರುಹು – ಪುರಾತತ್ವ ಇಲಾಖೆಯ 2,000 ಪುಟಗಳ ವರದಿಯಲ್ಲಿ ಏನಿದೆ?

    ಫೋರ್ಟಿಸ್‌ ಆಸ್ಪತ್ರೆಗೆ ದಾಖಲಾದ ಬಳಿಕ ಅವರಿಗೆ MRI ಸ್ಕ್ಯಾನ್‌ ಮಾಡುವ ಮೂಲಕ ಅವರ ಬೆನ್ನುಮೂಳೆಯ L3-L4 ಮಟ್ಟದಲ್ಲಿ ತೀವ್ರವಾದ ಪೋಸ್ಟರೊಸೆಂಟ್ರಲ್ ಡಿಸ್ಕ್ ಎಕ್ಸ್‌ಟ್ರಶನ್ ಆಗಿರುವುದು ಬಹಿರಂಗವಾಯಿತು. ಹೀಗಾಗಿ ಬಾಲಕನ ಕಣಕಾಲಿನವರೆಗೂ ಡಿಸ್‌ಲೊಕೇಟ್‌ನ ಪರಿಣಾಮ ಸಂಭವಿಸಿತ್ತು. ಬಾಲಕ ಈ ನೋವನ್ನು ಹೀಗೆಯೇ ನಿರ್ಲಕ್ಷ್ಯ ಮಾಡಿದ್ದರೇ ಮುಂದೊಂದುದಿನ ಆ ಕಾಲು ಪಾರ್ಶ್ವವಾಯುವಿಗೆ ಒಳಗಾಗುವ ಸಾಧ್ಯತೆ ಹೆಚ್ಚಾಗಿಯೇ ಇತ್ತು. ಇದನ್ನೂ ಓದಿ: Jammu Terrorist Attack: ಜಮ್ಮುವಿನಲ್ಲಿ ದಿಢೀರ್‌ ಭಯೋತ್ಪಾದಕ ದಾಳಿ ಹೆಚ್ಚಾಗುತ್ತಿರುವುದು ಏಕೆ?

    ಬಾಲಕನ ಆರೋಗ್ಯದ ಗಂಭೀರತೆ ಪರಿಗಣಿಸಿ ಆತನಿಗೆ ಮೈಕ್ರೊ-ಲುಂಬರ್ ಡಿಸೆಕ್ಟಮಿ ಶಸ್ತ್ರಚಿಕಿತ್ಸೆಯನ್ನು ಶಿಫಾರಸು ಮಾಡಿದೆವು. ಇದು ನರಗಳ ಮೇಲಿನ ಒತ್ತಡ ನಿವಾರಿಸಲು ಡಿಸ್‌ಲೊಕೇಟ್‌ ಆಗಿರುವ ಡಿಸ್ಕ್ ಅನ್ನು ತೆಗೆದುಹಾಕುವ ಶಸ್ತ್ರಚಿಕಿತ್ಸಾ ವಿಧಾನವಾಗಿದೆ. ಬಾಲಕನ ತೂಕ ಅಧಿಕವಾಗಿದ್ದರಿಂದ ಈ ಶಸ್ತ್ರಚಿಕಿತ್ಸೆ ಸಾಕಷ್ಟು ಸವಾಲಾಗಿತ್ತು, ಆದರೂ ನಮ್ಮ ತಂಡ ಕಾರ್ಯಕ್ರಮತೆಯಿಂದ ಸುರಕ್ಷತೆಯಾಗಿ ಈ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿದ್ದೇವೆ. ಈ ಶಸ್ತ್ರಚಿಕಿತ್ಸೆಯ ನಂತರ ಬಾಲಕನ ನೋವು ಸಂಪೂರ್ಣ ನಿವಾರಣೆಯಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ವೈದ್ಯರು ಹರ್ಷವ್ಯಕ್ತಪಡಿಸಿದ್ದಾರೆ.

  • ಎರಡು ಕಿವಿಗಳಲ್ಲೂ ಶ್ರವಣದೋಷ ಇದ್ದ ನೈಜೀರಿಯನ್ ಯುವತಿಗೆ ಫೋರ್ಟಿಸ್‌ ವೈದ್ಯರಿಂದ ಯಶಸ್ವಿ ‘ಡ್ಯುಯಲ್ ಕಾಕ್ಲಿಯರ್ ಇಂಪ್ಲಾಂಟ್ ಸರ್ಜರಿ’

    ಎರಡು ಕಿವಿಗಳಲ್ಲೂ ಶ್ರವಣದೋಷ ಇದ್ದ ನೈಜೀರಿಯನ್ ಯುವತಿಗೆ ಫೋರ್ಟಿಸ್‌ ವೈದ್ಯರಿಂದ ಯಶಸ್ವಿ ‘ಡ್ಯುಯಲ್ ಕಾಕ್ಲಿಯರ್ ಇಂಪ್ಲಾಂಟ್ ಸರ್ಜರಿ’

    ಬೆಂಗಳೂರು: ವೈರಲ್‌ ಜ್ವರದ ಬಳಿಕ ಎರಡೂ ಕಿವಿಗಳು ಶ್ರವಣದೋಷಕ್ಕೆ ಒಳಗಾಗಿದ್ದ ನೈಜೀರಿಯಾ (Nigerian Patient) ಮೂಲದ 23 ವರ್ಷದ ಯುವತಿಗೆ ಏಕಕಾಲದಲ್ಲೇ ‘ಡ್ಯುಯಲ್ ಕಾಕ್ಲಿಯರ್ ಇಂಪ್ಲಾಂಟ್ ಸರ್ಜರಿ’ (Dual Cochlear Implant Surgery) ಮೂಲಕ ಯುವತಿಗೆ ಎರಡು ಶ್ರವಣ ಸಾಧನಗಳನ್ನು ಫೋರ್ಟಿಸ್‌ ಆಸ್ಪತ್ರೆ ವೈದ್ಯರು ಯಶಸ್ವಿಯಾಗಿ ಅಳವಡಿಸಿದ್ದಾರೆ.

    ಫೋರ್ಟಿಸ್‌ ಆಸ್ಪತ್ರೆಯ (Fortis Hospital) ಇಎನ್‌ಟಿ, ಕಾಕ್ಲಿಯರ್ ಇಂಪ್ಲಾಂಟ್ ಮತ್ತು ಸ್ಕಲ್ ಬೇಸ್ ಸರ್ಜನ್ ಹಿರಿಯ ಸಲಹೆಗಾರ ಡಾ. ಹೆಚ್.ಕೆ.ಸುಶೀನ್ ದತ್ ಹಾಗೂ ತಜ್ಞರ ಆರೈಕೆಯಲ್ಲಿ ಈ ಸಂಕೀರ್ಣ ಕಾರ್ಯವಿಧಾನವನ್ನು 9 ಗಂಟೆಗಳಲ್ಲಿ ಪೂರ್ಣಗೊಳಿಸಲಾಯಿತು. ಇದನ್ನೂ ಓದಿ: SDMFನಿಂದ 100 ಕೋಟಿ ಬಿಡುಗಡೆ – ಮೊದಲ ಹಂತದಲ್ಲಿ 93 ಕೆರೆಗಳ ಸಂಗ್ರಹಣಾ ಸಾಮರ್ಥ್ಯ ವೃದ್ಧಿ: ಸಚಿವ ಎನ್‌.ಎಸ್‌.ಬೋಸರಾಜು

    ಈ ಕುರಿತು ಮಾತನಾಡಿದ ಡಾ. ಹೆಚ್.ಕೆ.ಸುಶೀನ್ ದತ್, 23 ವರ್ಷದ ನೈಜೀರಿಯಾ ಮೂಲದ ಲೀನಾ (ಹೆಸರು ಬದಲಿಸಲಾಗಿದೆ)ಗೆ ಮೂರು ವರ್ಷಗಳ ಹಿಂದೆ ಅತಿಯಾದ ವೈರಲ್‌ ಜ್ವರ ಕಾಣಿಸಿಕೊಂಡಿದೆ. ಈ ಜ್ವರದ ತೀವ್ರತೆಯಿಂದ ಕ್ರಮೇಣ ಅವರು ಮೊದಲು ಬಲಕಿವಿಯ ಕೇಳುವ ಶಕ್ತಿ ಕಳೆದುಕೊಂಡರು. ನಂತರ ಎಡ ಕಿವಿಯು ಶ್ರವಣವೂ ಹೋಯಿತು. ದೊಡ್ಡ ಶಬ್ಧವನ್ನೂ ಸಹ ಅವರು ಕೇಳಲು ಸಾಧ್ಯವಾಗದ ಸ್ಥಿತಿಗೆ ತಲುಪಿದರು. ನಂತರ ಫೋರ್ಟಿಸ್‌ ಆಸ್ಪತ್ರೆಗೆ ದಾಖಲಾದ ಬಳಿಕ ಅವರ ಕಿವುಡುತನದ ತೀವ್ರತೆ ಅರಿವಾಯಿತು.

    ಇವರಿಗೆ ಕಾಕ್ಲಿಯರ್ ಇಂಪ್ಲಾಂಟ್ ಸರ್ಜರಿ ಮಾಡಲು ನಿರ್ಧರಿಸಿದೆವು. ಆದರೆ ಇವರಿಗೆ ಎರಡೂ ಕಿವಿಗಳಿಗೂ ಈ ಸರ್ಜರಿ ಅವಶ್ಯಕತೆ ಇತ್ತು. ಸಾಮಾನ್ಯವಾಗಿ ಈ ಸರ್ಜರಿಯನ್ನು ಒಮ್ಮೆಲೆ ಒಂದು ಕಿವಿಗೆ ಮಾತ್ರ ಮಾಡಲು ಸಾಧ್ಯ. ಆದರೆ, ನಮ್ಮ ತಂಡ ಏಕಕಾಲದಲ್ಲೇ ಎರಡೂ ಕಿವಿಗಳಿಗೂ ಕಾಕ್ಲಿಯರ್ ಇಂಪ್ಲಾಂಟ್ ಸರ್ಜರಿ ಮಾಡಲು ನಿರ್ಧರಿಸಿದೆವು. ಇದಕ್ಕೆ ಸೂಕ್ತ ತಂತ್ರಜ್ಞಾನಗಳ ಬಳಕೆಯಿಂದ 9 ಗಂಟೆಗಳ ನಿರಂತರ ಶಸ್ತ್ರಚಿಕಿತ್ಸೆಯ ಬಳಿಕ ಅವರಿಗೆ ಶ್ರವಣ ಸಾಧನಗಳನ್ನು ಅಳಡಿಸಲಾಗಿದೆ. ಶಸ್ತ್ರಚಿಕಿತ್ಸೆಯ 5 ದಿನಗಳ ನಂತರ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಪ್ರಸ್ತುತ ಅವರು ನೈಜೀರಿಯಾದಲ್ಲಿ ಶ್ರವಣೇಂದ್ರಿಯ ಮೌಖಿಕ ತರಬೇತಿಯನ್ನು ಪಡೆಯುತ್ತಿದ್ದು, ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ ಎಂದರು. ಇದನ್ನೂ ಓದಿ: ಅಧಿಕಾರ ಸ್ವೀಕರಿಸಿದ ರಾಜ್ಯದ ನಾಲ್ವರು ಕೇಂದ್ರ ಸಚಿವರು

  • ಹಿಂದಿನಂತೆ 5 ರೂಪಾಯಿ ಚಿಕಿತ್ಸೆ ಮುಂದುವರಿಸುತ್ತೇನೆ – ಸಂಪೂರ್ಣ ಚೇತರಿಕೆ ಕಂಡ ಡಾ.ಶಂಕರೇಗೌಡ

    ಹಿಂದಿನಂತೆ 5 ರೂಪಾಯಿ ಚಿಕಿತ್ಸೆ ಮುಂದುವರಿಸುತ್ತೇನೆ – ಸಂಪೂರ್ಣ ಚೇತರಿಕೆ ಕಂಡ ಡಾ.ಶಂಕರೇಗೌಡ

    ಬೆಂಗಳೂರು: ಹೃದಯಾಘಾತಕ್ಕೆ ಒಳಗಾಗಿ ಫೋರ್ಟಿಸ್ ಆಸ್ಪತ್ರೆಗೆ ದಾಖಲಾಗಿದ್ದ ಮಂಡ್ಯದ 5 ರೂಪಾಯಿ ವೈದ್ಯರೆಂದು ಖ್ಯಾತಿ ಹೊಂದಿರುವ ಡಾ. ಶಂಕರೇಗೌಡ ಅವರು ಸಂಪೂರ್ಣ ಚೇತರಿಸಿಕೊಂಡಿದ್ದಾರೆ.

    ಫೋರ್ಟಿಸ್ ಅಸ್ಪತ್ರೆಯಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಾ. ಶಂಕರೇಗೌಡ, ಒಂದು ತಿಂಗಳ ಹಿಂದೆ ಹೃದಯದಲ್ಲಿ ರಕ್ತದ ನಾಳಗಳು ಬ್ಲಾಕ್ ಆಗಿದ್ದ ಕಾರಣ ಹೃದಯಾಘಾತ ಸಂಭವಿಸಿತ್ತು. ಕೂಡಲೇ ಮೈಸೂರಿನಲ್ಲಿರುವ ಆಸ್ಪತ್ರೆಗೆ ದಾಖಲಾದೆ. ಆದರೆ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಗೆ ವರ್ಗವಾಣೆ ಮಾಡಿದರು. ಇಲ್ಲಿನ ಚಿಕಿತ್ಸಾ ವಿಧಾನದಿಂದ ನನ್ನ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ಡಾ. ವಿವೇಕ್ ಜವಳಿ ಅವರ ತಂಡ ವಿಶೇಷ ಕಾಳಜಿ ವಹಿಸಿ ನನಗೆ ಚಿಕಿತ್ಸೆ ನೀಡಿದರು. ನನ್ನ ಆರೋಗ್ಯದ ಬಗ್ಗೆ ಕಾಳಜಿ ವಹಿಸಿದ ಇಲ್ಲಿನ ವೈದ್ಯರಿಗೆ ಧನ್ಯವಾದಗಳು. ಪ್ರತಿಯೊಬ್ಬರು ಹೆಚ್ಚಿನ ಕಾಳಜಿಯಿಂದ ಚಿಕಿತ್ಸೆ ನೀಡಿದ್ದಾರೆ. ಜೊತೆಗೆ ನನ್ನ ಆರೋಗ್ಯದ ಸುಧಾರಣೆಗೆ ಕಾಳಜಿ ವಹಿಸಿದ ಪ್ರತಿಯೊಬ್ಬರಿಗೂ ನಾನು ಋಣಿ. ಸದ್ಯ ನಾನು ಸಂಪೂರ್ಣವಾಗಿ ಗುಣವಾಗಿದ್ದು, ವೈದ್ಯರ ಸಲಹೆ ಮೇರೆಗೆ 6 ವಾರಗಳು ವಿಶ್ರಾಂತಿ ಪಡೆದು ಬಳಿಕ, ಹಿಂದಿನಂತೆ 5 ರೂಪಾಯಿ ಚಿಕಿತ್ಸೆ ಮುಂದುವರಿಸುತ್ತೇನೆ ಎಂದರು. ಇದನ್ನೂ ಓದಿ: 5ರೂ. ಡಾಕ್ಟರ್ ಎಂದೇ ಫೇಮಸ್ ಆಗಿದ್ದ ಶಂಕರೇಗೌಡಗೆ ಹೃದಯಾಘಾತ

    42 ವರ್ಷದಿಂದ ಸೇವೆ:
    ಕಳೆದ 42 ವರ್ಷದಿಂದ ಮಂಡ್ಯದಲ್ಲಿ ಉಚಿತವಾಗಿ ಚಿಕಿತ್ಸೆ ನೀಡುತ್ತಾ ಬಂದಿದ್ದು ನನಗೆ ಆತ್ಮತೃಪ್ತಿ ನೀಡಿದೆ. ಮುಂದೆಯೂ ಕೂಡ ಈ ವೃತ್ತಿ ಮುಂದುವರಿಸಿಕೊಂಡು ಹೋಗಲಿದ್ದೇನೆ. ಕೇವಲ ವೈದ್ಯನಲ್ಲದೇ ಕೃಷಿಕನಾಗಿಯೂ ನಾನು ದುಡಿದ್ದೇನೆ. 2010ರಲ್ಲಿ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದೆ. ರಾಜಕೀಯಕ್ಕೆ ಕಾಲಿಟ್ಟ ಮೇಲೂ ಜನರಿಗೆ ಉಚಿತವಾಗಿ ಚಿಕಿತ್ಸೆ ನೀಡುವ ಕಸುಬು ಬಿಡಲಿಲ್ಲ ಎಂದು ನುಡಿದರು. ಇದನ್ನೂ ಓದಿ: ಪ್ರಭಾವಿ ವ್ಯಕ್ತಿಗಳನ್ನ ಫೇಸ್‍ಬುಕ್‍ನಲ್ಲಿ ಪರಿಚಯ ಮಾಡ್ಕೊಂಡು ಹಣಕ್ಕೆ ಬ್ಲಾಕ್‍ಮೇಲ್ ಮಾಡ್ತಿರೋ ಖರ್ತನಾಕ್ ಲೇಡಿ

    ಹೃದಯ ತಜ್ಞ ಡಾ. ವಿವೇಕ್ ಜವಳಿ ಮಾತನಾಡಿ, 67 ವರ್ಷ ವಯಸ್ಸಿನ ಡಾ. ಶಂಕರೇಗೌಡ ಅವರು ಮಂಡ್ಯದಲ್ಲಿ ತೀವ್ರ ಹೃದಯಾಘಾತಕ್ಕೆ ಒಳಗಾಗಿದ್ದರು, ಇದರಿಂದ ಅವರ ಹೃದಯವು ಹೆಚ್ಚಿನ ಹಾನಿಗೆ ಒಳಗಾಗಿತ್ತು. ಪ್ರಾರಂಭದಲ್ಲಿ ಮೈಸೂರು ಆಸ್ಪತ್ರೆಗೆ ದಾಖಲಿಸಿತ್ತಾದರೂ ಎದೆನೋವು ಹೆಚ್ಚಳವಾದ್ದರಿಂದ ಅವರನ್ನು ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಹಲವು ಪರೀಕ್ಷೆಗಳ ನಂತರ ಅವರಿಗೆ ಪರಿಧಮನಿಯ ಸಿಂಡ್ರೋಮ್ ಮತ್ತು ಮಯೋಕಾರ್ಡಿಯಲ್ ಇನ್‍ಫೆಕ್ಷನ್ ಆಗಿರುವುದು ಕಂಡು ಬಂತು. ಜೊತೆಗೆ, ಟ್ರಿಪಲ್ ವೆಸೆಲ್ ಪರಿಧಮನಿಯ ಕಾಯಿಲೆಯಿಂದಲೂ ಸಹ ಬಳಲುತ್ತಿದ್ದು, ಉಸಿರಾಟದ ತೊಂದರೆಯನ್ನು ಹೊಂದಿದ್ದರು.

    ಅದೃಷ್ಟವಶಾತ್ ಅವರಿಗೆ ಸೂಕ್ತ ಸಮಯದಲ್ಲಿ ಸೂಕ್ತ ಚಿಕಿತ್ಸೆ ನೀಡುವ ಮೂಲಕ ಅವರನ್ನು ಪ್ರಾಣಾಪಾಯದಿಂದ ರಕ್ಷಿಸಲಾಗಿದೆ. ಮೇ ಮಧ್ಯದಲ್ಲಿ ಒಂದು ವಾರದವರೆಗೆ ಆಸ್ಪತ್ರೆಯಲ್ಲಿ ದಾಖಲಿಸಿಕೊಂಡು ನಂತರ ಅವರ ವಿಶ್ರಾಂತಿಗಾಗಿ ಮಂಡ್ಯಕ್ಕೆ ವಾಪಾಸ್ ಕಳುಹಿಸಲಾಗಿತ್ತು. ಅವರು ವಿಶ್ರಾಂತಿ ಪಡೆದು ಅವರ ಆರೋಗ್ಯ ಸ್ಥಿರವಾದ ಬಳಿಕ ಅವರಿಗೆ ಪರಿಧಮನಿಯ ಆಂಜಿಯೋಪ್ಲ್ಯಾಸ್ಟಿಗೆ ಒಳಗಾಗಲು ಮತ್ತೊಮ್ಮೆ ಆಸ್ಪತ್ರೆಗೆ ದಾಖಲಿಸಿಕೊಂಡಿದ್ದೇವೆ. ಇದೀಗ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆದಿದ್ದು, ಶಂಕರೇಗೌಡ ಅವರು ಚೇತರಿಸಿಕೊಂಡಿದ್ದಾರೆ. 6 ವಾರಗಳ ವಿಶ್ರಾಂತಿ ಅವಶ್ಯಕತೆ ಇದೆ ಎಂದು ಸ್ಪಷ್ಟಪಡಿಸಿದರು.

    Live Tv

  • 117 ಕೆ.ಜಿ ತೂಕ ಹೊಂದಿದ್ದ ಮಹಿಳೆಗೆ ಎರಡನೇ ಬಾರಿ ಯಶಸ್ವಿ ಬೇರಿಯಾಟ್ರಿಕ್ ಶಸ್ತ್ರಚಿಕಿತ್ಸೆ

    117 ಕೆ.ಜಿ ತೂಕ ಹೊಂದಿದ್ದ ಮಹಿಳೆಗೆ ಎರಡನೇ ಬಾರಿ ಯಶಸ್ವಿ ಬೇರಿಯಾಟ್ರಿಕ್ ಶಸ್ತ್ರಚಿಕಿತ್ಸೆ

    ಬೆಂಗಳೂರು: 117 ಕೆಜಿ ತೂಕ ಹೊಂದಿದ್ದ 50 ವರ್ಷದ ಮಹಿಳೆಗೆ ಫೊರ್ಟಿಸ್ ಆಸ್ಪತ್ರೆಯ ವೈದ್ಯರು ಯಶಸ್ವಿಯಾಗಿ ಬೊಜ್ಜು ಕರಗಿಸುವ ‘ಮರು ಬೇರಿಯಾಟ್ರಿಕ್’ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ.

    ಲ್ಯಾಪ್ರೋಸ್ಕೋಪಿ ಹಿರಿಯ ಸಲಹೆಗಾರ, ಬ್ಯಾರಿಯಾಟ್ರಿಕ್ ಸರ್ಜನ್ ಡಾ. ಗಣೇಶ್ ಶೆಣೈ ಅವರ ತಂಡವು 117 ತೂಕ ಹೊಂದಿದ್ದ ಮಹಿಳೆಗೆ ಮರು ಬೇರಿಯಾಟ್ರಿಕ್ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ.

    50 ವರ್ಷದ ಮಹಿಳೆಯು 8 ವರ್ಷಗಳ ಹಿಂದೆಯೇ ಖಾಸಗಿ ಆಸ್ಪತ್ರೆಯೊಂದರಲ್ಲಿ ಬೇರಿಯಾಟ್ರಿಕ್ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದರು. ಆ ಸಂದರ್ಭದಲ್ಲಿ ಅವರು 114 ಕೆ.ಜಿ. ತೂಕ ಹೊಂದಿದ್ದರು. ಶಸ್ತ್ರಚಿಕಿತ್ಸೆ ಬಳಿಕ ಅವರು ಬರೋಬ್ಬರಿ 25 ಕೆ.ಜಿ. ತೂಕ ಹೊಂದಿದ್ದರು. ಆದರೆ ಒಂದು ವರ್ಷದೊಳಗಾಗಿ ಗ್ಯಾಸ್ಟ್ರಿಕ್ ಸ್ಲೀವ್ ಹಿಗ್ಗುವಿಕೆಯಿಂದಾಗಿ 117 ಕೆ.ಜಿ. ತೂಕಕ್ಕೆ ಬಂದು ನಿಂತರು. ಇದು ಅತ್ಯಂತ ಅಪಾಯಕಾರಿ ಎಂದು ಡಾ. ಗಣೇಶ್ ಶೆಣೈ ಹೇಳುತ್ತಾರೆ. ಇದನ್ನೂ ಓದಿ: ಪಾಸಿಟಿವಿಟಿ ರೇಟ್ ನೋಡಿಕೊಂಡು ಶಾಲೆ ನಡೆಸುವ ಬಗ್ಗೆ ತೀರ್ಮಾನ: ಬಿ ಸಿ ನಾಗೇಶ್

    ಈ ಮಹಿಳೆಯರು ಮೊದಲು ಮಾಡಿಸಿಕೊಂಡಿದ್ದ ಬೇರಿಯಾಟ್ರಿಕ್ ಶಸ್ತ್ರಚಿಕಿತ್ಸೆ ಸಂದರ್ಭದಲ್ಲಿ ತೆರೆದ ಅಪೆಂಡೆಕ್ಟಮಿ ಸೇರಿದಂತೆ ಹಲವು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಜೊತೆಗೆ ನ್ಯೂರೋ ಎಂಡೋಕ್ರೈನ್ ಟ್ಯೂಮರ್ ಸಹ ಹೊಂದಿದ್ದರು, ಈ ಎಲ್ಲದರ ಪರಿಣಾಮ ಅವರ ಗ್ಯಾಸ್ಟ್ರಿಕ್ ಸ್ಲೀವ್ ಹಿಗ್ಗುತ್ತಾ ಹೋಯಿತು. ಅವರು ಎಷ್ಟೇ ಡಯೆಟ್ ಹಾಗೂ ವ್ಯಾಯಾಮ ಮಾಡಿದರೂ ಅವರ ಬೊಜ್ಜು ಬೆಳೆಯುತ್ತಾ ಒಂದು ವರ್ಷದೊಳಗೆ 117 ಕೆ.ಜಿ.ಗೆ ಬಂದು ನಿಂತರು.

    ನಮ್ಮ ತಂಡವು ಅವರ ಅಷ್ಟೂ ಸಮಸ್ಯೆಗಳನ್ನು ಸೂಕ್ಷ್ಮವಾಗಿ ಗ್ರಹಿಸಿ ಅವರಿಗೆ ಲ್ಯಾಪರೋಸ್ಕೋಪಿಕ್ ಮರು ಸ್ಲೀವ್ ಶಸ್ತ್ರಚಿಕಿತ್ಸೆಯನ್ನು ನಡೆಸಿದೆವು. ಈ ಎಲ್ಲದರ ಪ್ರಯತ್ನದಿಂದಾಗಿ ಮತ್ತೊಮ್ಮೆ ಮಹಿಳೆಗೆ ಬೇರಿಯಾಟ್ರೀಕ್ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಈ ಬಾರಿ ಸೂಕ್ತ ರೀತಿಯಲ್ಲಿ ಶಸ್ತ್ರಚಿಕಿತ್ಸೆಯಾಗಿರುವುದರಿಂದ ಅವರ ತೂಕ ಕ್ರಮೇಣ ಕಡಿಮೆಯಾಗಲಿದೆ ಎಂದು ಹೇಳಿದರು. ಇದನ್ನೂ ಓದಿ: ಪಾದಯಾತ್ರೆಗೆ ಹೈಕೋರ್ಟ್ ಕೆಂಡಾಮಂಡಲ – ಕೈ ಮುಗಿದು ಮುಖದ ಮೇಲೆ ಕೈಯಿಟ್ಟ ಡಿಕೆಶಿ

  • ಹೃದಯ ಪರೀಕ್ಷೆ ನಡೆಸಲು ನಿಮ್ಮ ಮನೆ ಬಾಗಿಲಿಗೇ ಬರಲಿದೆ ಮೊಬೈಲ್ ವಾಹನ

    ಹೃದಯ ಪರೀಕ್ಷೆ ನಡೆಸಲು ನಿಮ್ಮ ಮನೆ ಬಾಗಿಲಿಗೇ ಬರಲಿದೆ ಮೊಬೈಲ್ ವಾಹನ

    ಬೆಂಗಳೂರು: ಫೋರ್ಟಿಸ್ ಆಸ್ಪತ್ರೆಯು ವಿಶ್ವ ಹೃದಯ ದಿನದ ಅಂಗವಾಗಿ “ರೂಟ್‍ನಂ-15” ಎಂಬ ಶೀರ್ಷಿಕೆಯಡಿಯಲ್ಲಿ, ಹಾರ್ಟ್ ಚೆಕಪ್ ಮೊಬೈಲ್ ವ್ಯಾನ್‍ನನ್ನು ರಸ್ತೆಗಿಳಿಸಿದೆ. ಈ ವಾಹವನ್ನು ಬುಧವಾರ ಕಾರ್ಡಿಯಾಕ್ ಸೈಸನ್ ವಿಭಾಗದ ಮುಖ್ಯಸ್ಥರಾದ ಡಾ.ವಿವೇಕ್ ಜವಳಿ ಅವರು ಇಂದು ಉದ್ಘಾಟಿಸಿದರು.

    ನಂತರ ಮಾತನಾಡಿದ ಅವರು, ಪ್ರತಿ ವರ್ಷ ವಿಶ್ವದಲ್ಲಿ 2 ಕೋಟಿಗೂ ಅಧಿಕ ಮಂದಿ ಹೃದಯಾಘಾತದಿಂದ ಸಾವನ್ನಪ್ಪುತ್ತಿದ್ದಾರೆ. ಇದರಲ್ಲಿ ಭಾರತದಲ್ಲಿಯೇ ಶೇ.60 ರಷ್ಟು ಪ್ರಮಾಣ ಇರುವುದು ಆತಂಕಕಾರಿ ವಿಷಯ. ಬಹುತೇಕರಿಗೆ ಹೃದಯಾಘಾತದ ಬಗ್ಗೆ ಅರಿವಿನ ಕೊರತೆಯಿಂದ ಹೃದಯ ಪರೀಕ್ಷೆ ಮಾಡಿಸಿಕೊಳ್ಳುವ ಗೋಜಿಗೇ ಹೋಗುವುದಿಲ್ಲ. ಇದರಿಂದ ಹೃದಯಾಘಾತದ ಪ್ರಮಾಣ ಹೆಚ್ಚಳವಾಗುತ್ತಿದೆ. ಜೊತೆಗೆ ಬದಲಾದ ಜೀವನ ಶೈಲಿ ಹಾಗೂ ಆಹಾರ ಕ್ರಮದಿಂದಲೂ ಹೃದಯಾಘಾತದ ಪ್ರಮಾಣ ಹೆಚ್ಚಳವಾಗಿದೆ. ಅದರಲ್ಲೂ ಶೇ.25 ರಷ್ಟು ಹೃದಯಾಘಾತ ಮಹಿಳೆಯರಲ್ಲಿ ಹೆಚ್ಚಳವಾಗುತ್ತಿದೆ. ಹೀಗಾಗಿ ನಮ್ಮ ಆಸ್ಪತ್ರೆ ವತಿಯಿಂದ ಹೃದಯದ ಸಮಸ್ಯೆ ಇರುವರಿಗೆ ಅವರ ಮನೆ ಬಾಗಿಲಲ್ಲೇ ಪರೀಕ್ಷೆ ನಡೆಸಿ ಸೂಕ್ತ ಚಿಕಿತ್ಸೆ ನೀಡುವ ಉದ್ದೇಶದಿಂದ ಮೊಬೈಲ್ ವಾಹನವನ್ನು ರಸ್ತೆಗಿಳಿಸಿದ್ದೇವೆ ಎಂದರು. ಇದನ್ನೂ ಓದಿ: 70 ವರ್ಷದಿಂದ ದೇಶ ಅಭಿವೃದ್ಧಿಯಾಗಿಲ್ಲ ಎಂದು ಹೇಳಿಲ್ಲ, ಒಂದೇ ಕುಟುಂಬಕ್ಕೆ ಅಭಿವೃದ್ಧಿ ಸಮರ್ಪಣೆ ತಪ್ಪು: ಸಿಂಹ

    ಇಂದಿನಿಂದ ಈ ವಾಹನ ಸಂಚರಿಸಲಿದೆ. ವಾರದ ಎಲ್ಲಾ ದಿನ ಈ ವಾಹನ ನಗರದ ಅಪಾರ್ಟ್‍ಮೆಂಟ್, ಎಲ್ಲಾ ರೆಸಿಡೆನ್ಸಿಯಲ್ ಪ್ರದೇಶದಲ್ಲಿ ಓಡಾಡಲಿದೆ. ಪರೀಕ್ಷೆಗೆ ಆಸ್ಪತ್ರೆಗೆ ಬರಲು ಭಯವಾದರೆ ನಿಮ್ಮ ಮನೆ ಬಾಗಿಲಿಗೆ ಮೊಬೈಲ್ ವಾಹನ ಬರಲಿದೆ. ನೀವು ಅಲ್ಲೆ ಚೆಕಪ್ ಮಾಡಿಸಿಕೊಳ್ಳಿ ಎಂದರು. ಇದನ್ನೂ ಓದಿ: ರೌಡಿಗಳಿಗೆ ಕಾನೂನಿನ ಭಯವಿಲ್ಲದೆ ಅಟ್ಟಹಾಸ ತೋರಿಸುತ್ತಿದ್ದಾರೆ: ಯು.ಟಿ.ಖಾದರ್

    ವಾಹನದಲ್ಲಿ ಏನಿದೆ?
    ಈ ವಾಹನದಲ್ಲಿಯೇ ಎಕೋಕಾರ್ಡಿಯೋಗ್ರಫಿ ಹಾಗೂ ಇಸಿಜಿ ಯಂತ್ರವನ್ನು ಅಳವಡಿಸಲಾಗಿದೆ. ಹೀಗಾಗಿ ಹೃದಯದ ಸಂಪೂರ್ಣ ಪರೀಕ್ಷೆ ವಾಹನದಲ್ಲಿಯೇ ಮಾಡುವ ವ್ಯವಸ್ಥೆ ಮಾಡಲಾಗಿದೆ. ಪ್ರಸ್ತುತ ಈ ವಾಹನದಲ್ಲಿ 1500 ತಪಾಸಣೆ ಮಾಡುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.