Tag: Fort

  • ತೆಲಂಗಾಣ ಜನರ ಆಶೀರ್ವಾದವಿದ್ದರೆ ನಾನು ಏನೂ ಮಾಡಲು ಸಿದ್ಧ: CM ಕೆಸಿಆರ್

    ತೆಲಂಗಾಣ ಜನರ ಆಶೀರ್ವಾದವಿದ್ದರೆ ನಾನು ಏನೂ ಮಾಡಲು ಸಿದ್ಧ: CM ಕೆಸಿಆರ್

    ಹೈದರಾಬಾದ್: ಕೇಂದ್ರ ಬಿಜೆಪಿ ಸರ್ಕಾರದ ಯಾವ ಪಿತೂರಿ, ತಂತ್ರಗಾರಿಕೆಗೂ ನಮ್ಮ ತೆಲಂಗಾಣ ಸರ್ಕಾರ ಬಲಿಯಾಗುವುದಿಲ್ಲ. ಆ ಸರ್ಕಾರವನ್ನೇ ಕಿತ್ತೊಗೆಯುತ್ತೇವೆ. ಕೇಂದ್ರ ಬಿಜೆಪಿ ಸರ್ಕಾರದ ಯಾವ ಬೆದರಿಕೆಗಳಿಗೂ ಬಗ್ಗುವುದಿಲ್ಲ, ಎಂದು ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ವಾಗ್ಧಾಳಿ ಮಾಡಿದ್ದಾರೆ.

    ಜನಗಾಂವ್‍ನಲ್ಲಿ ತೆಲಂಗಾಣ ರಾಷ್ಟ್ರೀಯ ಸಮಿತಿ ಪಕ್ಷದ ಕಚೇರಿ ಉದ್ಘಾಟಿಸಿ ಮಾತನಾಡಿದ ಅವರು, ನಾನು ರಾಷ್ಟ್ರಮಟ್ಟದಲ್ಲಿ  ಹೋರಾಡಿ ಗುಣಾತ್ಮಕ ಬದಲಾವಣೆಗಳನ್ನು ತರುತ್ತೇನೆ. ನಮ್ಮ ರಾಜ್ಯದ ಸಮಸ್ಯೆಗಳನ್ನು ಪರಿಹರಿಸಲು ಪ್ರಧಾನಿ ಮೋದಿ ಸರ್ಕಾರ ಮುಂದಾಗದೆ ಇದ್ದರೆ, ನಾವೂ ಸುಮ್ಮನೆ ಇರುವುದಿಲ್ಲ. ಯಾವುದೇ ತಾರತಮ್ಯ ಮಾಡದೆ ಎಲ್ಲರನ್ನೂ ಒಂದೇ ತರ ನೋಡಿ, ಸಮಸ್ಯೆಗಳನ್ನು ಬಗೆಹರಿಸುವ ಇನ್ನೊಬ್ಬ ನಾಯಕನನ್ನು ಆಯ್ಕೆ ಮಾಡುತ್ತೇವೆ ಎಂದು ಬಿಜೆಪಿ ಸರ್ಕಾರದ ವಿರುದ್ಧವಾಗಿ ಕಿಡಿಕಾರಿದ್ಧಾರೆ.

    ತೆಲಂಗಾಣ ಜನರ ಆಶೀರ್ವಾದವಿದ್ದರೆ ನಾನು ಏನೂ ಮಾಡಲು ಸಿದ್ಧವಾಗಿದ್ದೆನೆ. ರಾಷ್ಟ್ರಮಟ್ಟದ ರಾಜಕೀಯದಲ್ಲಿ ಹೋರಾಡುತ್ತೇನೆ. ಜನರು ನನ್ನ ಬೆನ್ನ ಹಿಂದೆ ಇದ್ದು, ಬೆಂಬಲ ನೀಡಿದರೆ ಆ ದೆಹಲಿ ಕೋಟೆಯನ್ನೂ ನಾನು ಬೇಧಿಸಬಲ್ಲೆ ಎಂದು ಹೇಳಿದ ಕೆ.ಚಂದ್ರಶೇಖರ್ ರಾವ್, ಕೃಷಿ ಸುಧಾರಣೆ ಹೆಸರಲ್ಲಿ ಮೋದಿ ಸರ್ಕಾರ ಕೃಷಿ ಪಂಪ್‍ಸೆಟ್‍ಗಳಿಗೂ ವಿದ್ಯುತ್ ಮೀಟರ್ ಅಳವಡಿಸಲು ಯತ್ನಿಸುತ್ತಿದೆ. ಆದರೆ ನೀವು ನನ್ನನ್ನು ಕೊಂದರೂ ನಾನು ವಿದ್ಯುತ್ ಮೀಟರ್ ಅಳವಡಿಸುವುದಿಲ್ಲ ಎಂದು ಹೇಳಿದರು. ಇದನ್ನೂ ಓದಿ: ರಾಜಧಾನಿಗೂ ಕಾಲಿಟ್ಟ ಹಿಜಬ್ ವಿವಾದ – ಹಿಜಬ್ ತೆಗೆಯುವಂತೆ ಮಕ್ಕಳಿಗೆ ಶಿಕ್ಷಕರಿಂದ ಒತ್ತಾಯ

    ಈ ರಾಜ್ಯದ ಜನರಿಗೆ ಕುಡಿಯಲು ಮತ್ತು ನೀರಾವರಿಗೆ ಸಾಕಷ್ಟು ನೀರು ಒದಗಿಸುವ ಮೂಲಕ ಸಮಸ್ಯೆಗಳನ್ನು ಬಗೆಹರಿಸಿದ್ದೆನೆ. ತೆಲಂಗಾಣ ಅಭಿವೃದ್ಧಿಯಲ್ಲಿ ಯಾವುದೇ ರೀತಿಯಲ್ಲೂ ರಾಜಿಯಾಗುವುದಿಲ್ಲ ಎಂದಿದ್ದಾರೆ.

  • ಪುರಾತತ್ವ ಇಲಾಖೆಯಿಂದ ಪ್ರವಾಸಿ ತಾಣಗಳು ಬಂದ್- ಚಿತ್ರದುರ್ಗದ ಕೋಟೆ ಖಾಲಿ ಖಾಲಿ

    ಪುರಾತತ್ವ ಇಲಾಖೆಯಿಂದ ಪ್ರವಾಸಿ ತಾಣಗಳು ಬಂದ್- ಚಿತ್ರದುರ್ಗದ ಕೋಟೆ ಖಾಲಿ ಖಾಲಿ

    ಚಿತ್ರದುರ್ಗ: ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಸರ್ಕಾರ ವಿವಿಧ ವಲಯಗಳಿಗೆ ನಿರ್ಬಂಧ ಹೇರಿದ್ದು, ಕೇಂದ್ರ ಪುರಾತತ್ವ ಇಲಾಖೆಯಿಂದ ಪ್ರವಾಸಿ ತಾಣಗಳನ್ನೂ ಬಂದ್ ಮಾಡಲಾಗಿದೆ. ಹೀಗಾಗಿ ಏಳು ಸುತ್ತಿನ ಕೋಟೆ ಪ್ರವಾಸಿಗರಿಲ್ಲದೆ ಬಿಕೋ ಎನ್ನುತ್ತಿದೆ.

    ಕೋಟೆನಾಡು ಚಿತ್ರದುರ್ಗದ ಏಳು ಸುತ್ತಿನ ಕೋಟೆಗೆ ಬರುವ ಪ್ರವಾಸಿಗರಿಗೆ ಮೇ 15 ರವೆರೆಗೆ ನಿರ್ಬಂಧ ಹೇರಲಾಗಿದೆ. ಇದರಿಂದಾಗಿ ದೂರದ ಊರುಗಳಿಂದ ಐತಿಹಾಸಿಕ ಹಿನ್ನೆಲೆಯ ಕೋಟೆಯ ಸೊಬಗು ಸವಿಯಲು ಇಂದು ಚಿತ್ರದುರ್ಗಕ್ಕೆ ಆಗಮಿಸಿದ್ದ ಪ್ರವಾಸಿಗರಲ್ಲಿ ಭಾರೀ ನಿರಾಸೆ ಮೂಡಿಸಿದೆ. ಅಲ್ಲದೆ ಪ್ರತಿ ಶುಕ್ರವಾರ ಕೋಟೆಯಲ್ಲಿರುವ ಏಕನಾಥೇಶ್ವರಿ ದೇವತೆಗೆ ವಿಶೇಷ ಪೂಜೆ ನೆರೆವೇರಿಸಲು ಆಗಮಿಸುತಿದ್ದ ಭಕ್ತರಿಗೂ ಕೂಡ ಕೋಟೆಯೊಳಗೆ ಬಿಡದೇ ಅಧಿಕಾರಿಗಳು ನಿಷೇಧ ಹೇರಿದ್ದಾರೆ.

    ಇದರಿಂದಾಗಿ ಕೋಟೆಯನ್ನು ವೀಕ್ಷಿಸಲು ಬಂದಿದ್ದ ಪ್ರವಾಸಿಗರು ಹಾಗೂ ಭಕ್ತರಲ್ಲಿ ಭಾರೀ ಬೇಸರ ಮೂಡಿದೆ. ಕೋವಿಡ್ ನಿಯಮಾವಳಿಗಳ ಪಾಲನೆಯೊಂದಿಗೆ ಕೋಟೆ ಪ್ರವೇಶಕ್ಕೆ ಅನುಮತಿ ನೀಡಿದ್ದರೆ ಅನುಕೂಲವಾಗುತ್ತದೆ ಎಂಬ ಅಭಿಪ್ರಾಯವನ್ನು ಪ್ರವಾಸಿಗರು ವ್ಯಕ್ತಪಡಿಸಿದ್ದಾರೆ.

    ಕೇವಲ ಏಳು ಸುತ್ತಿನ ಕೋಟೆ ಮಾತ್ರವಲ್ಲ ಮೊಳಕಾಲ್ಮೂರು ತಾಲೂಕಿನ ಅಶೋಕನ ಶಿಲಾಶಾಸನವಿರುವ ಅಶೋಕ ಸಿದ್ದಾಪುರಕ್ಕೂ ನಿರ್ಬಂಧ ವಿಧಿಸಲಾಗಿದೆ. ಗುಹಾಂತರ ದೇವಾಲಯ, ಚಂದ್ರವಳ್ಳಿ ಪ್ರದೇಶಕ್ಕೂ ನಿಷೇಧ ಹೇರಲಾಗಿದ್ದು, ಇಂದಿನಿಂದಲೇ ಪ್ರವಾಸಿ ಧಾಮಗಳು ಬಂದ್ ಆಗಿವೆ ಎಂದು ಚಿತ್ರದುರ್ಗ ಪುರಾತತ್ವ ಇಲಾಖೆ ಅಧಿಕಾರಿ ಕಿಶೋರ್ ರೆಡ್ಡಿ ಮಾಹಿತಿ ನೀಡಿದ್ದಾರೆ.

  • ಲಾಕ್‍ಡೌನ್- ಬೆಟ್ಟದ ಮೇಲೆ ಕೋಟೆ ಭಾಗದಲ್ಲಿ ಜೂಜಾಟ

    ಲಾಕ್‍ಡೌನ್- ಬೆಟ್ಟದ ಮೇಲೆ ಕೋಟೆ ಭಾಗದಲ್ಲಿ ಜೂಜಾಟ

    ಗದಗ: ಕೊರೊನಾ ವೈರಸ್ ನಿಯಂತ್ರಿಸಲು ಇಡೀ ದೇಶವನ್ನೇ ಲಾಕ್‍ಡೌನ್ ಮಾಡಲಾಗಿದ್ದು, ಮನೆಯಲ್ಲೇ ಇರುವಂತೆ ಹೇಳಿದರೂ ಕೆಲ ಯುವಕರು ಪುಂಡಾಟ ಮೆರೆಯುತ್ತಿದ್ದಾರೆ. ಬೆಟ್ಟದಂತಹ ಪ್ರದೇಶದಲ್ಲಿ ಗುಂಪು ಸೇರಿ ಜೂಜಾಟ ಆಡುತ್ತಿದ್ದಾರೆ.

    ಜಿಲ್ಲೆಯ ಗಜೇಂದ್ರಗಡ ಪಟ್ಟಣದಲ್ಲಿ ಯುವಕರು ಜೂಜಾಟ ಆಡಲು ಬೆಟ್ಟದ ಬಳಿ ತೆರಳುತ್ತಿದ್ದು, ಬೆಟ್ಟದ ಮೇಲಿರುವ ಐತಿಹಾಸಿಕ ಕೋಟೆ ಭಾಗದಲ್ಲಿ ಯುವಕರ ದಂಡು ಜೂಜಾಟ ಆಡುತ್ತಿದೆ. ಶಾಲಾ-ಕಾಲೇಜು ವಿದ್ಯಾರ್ಥಿಗಳು ಸಹ ಈ ಜೂಜಾಟದಲ್ಲಿ ತೊಡಗಿಕೊಂಡಿದ್ದಾರೆ. ಗಜೇಂಡ್ರಗಡ ನಗರದ ಸುತ್ತಮುತ್ತ ಅನೇಕ ಕಡೆಗಳಲ್ಲಿ ಅವ್ಯಾಹತವಾಗಿ ಈ ದಂಧೆ ನಡೆಯುತ್ತಿದ್ದರೂ ಪೊಲೀಸರು ಕಣ್ಮುಚ್ಚಿ ಕುಳಿತಿದ್ದಾರೆ.

    ಈ ಕುರಿತು ಸ್ಥಳಿಯರು ಆಕ್ರೋಶ ವ್ಯಕ್ತಪಡಿಸಿದ್ದು, ಬೆಟ್ಟದ ಮೇಲಿನ ಐತಿಹಾಸಿಕ ಕೋಟೆ ಭಾಗದ ಮಂಟಪ, ದ್ವಾರಬಾಗಿಲು, ಸಿಂಹಹೊಂಡ, ಮದ್ದಿನ ಕೋಣೆ, ಸರಸ್ವತಿ ಕೊಳ್ಳ ಸೇರಿದಂತೆ ಅನೇಕ ಕಡೆಗಳಲ್ಲಿ ಜೂಜಾಟವಾಡುತ್ತಿದ್ದಾರೆ. ಯಾರಾದರೂ ಬಂದರೆ ಎಸ್ಕೇಪ್ ಆಗಲು ಸರಳ ಮಾರ್ಗಕ್ಕೊಸ್ಕರ ಬೆಟ್ಟದ ಮೇಲೆ ಜೂಜಾಟವಾಡಲು ಹೊಗುತ್ತಿದ್ದಾರೆ ಎನ್ನಲಾಗುತ್ತಿದೆ. ಇದರಿಂದ ಅನೇಕ ಕುಟುಂಬಗಳು ಹಾಳಾಗುತ್ತಿದ್ದು, ಯುವಕರು ದುಷ್ಟಚಟಗಳಿಗೆ ಬಲಿಯಾಗುತ್ತಿದ್ದಾರೆ.

  • ಏಳು ಸುತ್ತಿನ ಕೋಟೆಯಲ್ಲಿ ವಾಮಾಚಾರ, ನಿಧಿಗಾಗಿ ಶೋಧ- ಪ್ರವಾಸಿಗರಲ್ಲಿ ಆತಂಕ

    ಏಳು ಸುತ್ತಿನ ಕೋಟೆಯಲ್ಲಿ ವಾಮಾಚಾರ, ನಿಧಿಗಾಗಿ ಶೋಧ- ಪ್ರವಾಸಿಗರಲ್ಲಿ ಆತಂಕ

    ಚಿತ್ರದುರ್ಗ: ಓಬವ್ವ ಎಂದಾಕ್ಷಣ ಎಲ್ಲಿರಿಗೂ ನೆನಪಾಗೋದು ಐತಿಹಾಸಿಕ ಹಿನ್ನಲೆಯ ಐತಿಹಾಸಿಕ ಏಳು ಸುತ್ತಿನ ಕೋಟೆ. ಆದರೆ ಇತ್ತೀಚೆಗೆ ಇಲ್ಲಿ ನಿಧಿಗಳ್ಳರ ಹಾವಳಿ ಹೆಚ್ಚಾಗಿದ್ದು, ವಾಮಾಚಾರ ಕೂಡ ಮಾಡಲಾಗಿದೆ. ಹೀಗಾಗಿ ನಾಗರೀಕರು ಮತ್ತು ಪ್ರವಾಸಿಗರು ಕೋಟೆಗೆ ಬರಲು ಹಿಂದೇಟು ಹಾಕುತ್ತಿದ್ದಾರೆ.

    ಚಿತ್ರದುರ್ಗದ ಕೋಟೆಯನ್ನು ಪಾಳೆಗಾರರು ಕಟ್ಟಿಸಿದ್ದು, ಶತ್ರುಪಾಳಯವಾದ ಹೈದರಾಲಿ ಸೈನ್ಯವು ಯುದ್ಧಕ್ಕೆ ಬಂದಾಗ ಅವರಿಂದ ಬೆಲೆಬಾಳುವ ಬಂಗಾರ, ಮುತ್ತುರತ್ನ ಹಾಗೂ ಹಣವನ್ನು ಸಂರಕ್ಷಿಸಲು ಕೋಟೆಯಲ್ಲಿ ಎಲ್ಲೆಂದರಲ್ಲಿ ನೆಲದೊಳಗೆ ಬಚ್ಚಿಟ್ಟಿದ್ದಾರೆ ಎಂಬ ಮಾತಿನ ಮೇರೆಗೆ ಕಿಡಿಗೇಡಿ ಇಂತಹ ಕೃತ್ಯಕ್ಕೆ ಮುಂದಾಗಿದ್ದಾರೆ. ಕೋಟೆಯ ಮೇಳೆ ಕಣ್ಣಿಟ್ಟಿರುವ ಕಿಡಿಗೇಡಿಗಳು, ನಿಧಿಗಳ್ಳರು ಅಕ್ರಮವಾಗಿ ಕೋಟೆಯಲ್ಲಿ ವಾಮಾಚಾರ ನಡೆಸಿ ನಿಧಿಗಾಗಿ ಶೋಧ ನಡೆಸುತ್ತಿದ್ದಾರೆ.

    ಕೋಟೆಯೊಳಗಿನ ಅರಮನೆ ಮೈದಾನದಲ್ಲಿ ಹಾಗೂ ಸಂಪಿಗೆ ಸಿದ್ದೇಶ್ವರ ಸ್ವಾಮಿ ದೇಗುಲದ ಹಿಂಭಾಗದಲ್ಲಿ ಕಳೆದ ಒಂದು ವಾರದಿಂದ ನಿಧಿಗಳ್ಳರು ನಿಧಿ ಶೋಧ ನಡೆಸುತ್ತಿದ್ದಾರೆ. ಇಂತಹ ಕೃತ್ಯಗಳಿಗೆ ಬ್ರೇಕ್ ಹಾಕಬೇಕಾದ ಪುರಾತತ್ವ ಇಲಾಖೆ ಅಧಿಕಾರಿಗಳು ಮಾತ್ರ ಕಣ್ಮುಚ್ಚಿ ಕುಳಿತ್ತಿದ್ದು, ನಾಗರೀಕರಿಕರು ಹಿಡಿಶಾಪ ಹಾಕುತ್ತಿದ್ದಾರೆ.

    ಐತಿಹಾಸಿಕ ಕೋಟೆಯಲ್ಲಿ ಹಲವು ಬಾರಿ ಪ್ರವಾಸಿಗರ ಮೇಲೆ ಹಲ್ಲೆ ಹಾಗೂ ದೌರ್ಜನ್ಯ ಪ್ರಕರಣಗಳು ಸಹ ನಡೆದಿದೆ. ಇಂತಹ ಪ್ರಕರಣಗಳು ಸ್ಥಳೀಯ ನಾಗರೀಕರ ನೇತೃತ್ವದಲ್ಲಿ ಸುಖಾಂತ್ಯಗೊಂಡಿವೆ. ಆದರೆ ಪುರಾತತ್ವ ಇಲಾಖೆ ಅಧೀನದಲ್ಲಿರುವ ಕೋಟೆಯಲ್ಲಿ ನಿಧಿಗಳ್ಳರ ಹಾವಳಿ ವಿಪರೀತವಾಗಿದೆ. ಆದರೂ ಪುರಾತತ್ವ ಇಲಾಖೆ ಅಧಿಕಾರಿಗಳು ಮಾತ್ರ ಯಾವುದೇ ಕ್ರಮಕೈಗೊಳ್ಳುತ್ತಿಲ್ಲ. ಕೋಟೆಯಲ್ಲಿ ಸಿಸಿಟಿವಿ ಅಳವಡಿಸುವ ಮೂಲಕ ಈ ನಿಧಿಗಳ್ಳರ ಹಾವಳಿಗೆ ಬ್ರೇಕ್ ಹಾಕುವ ಮೂಲಕ ಸಾರ್ವಜನಿಕ ಹಿತ ಕಾಪಾಡಬೇಕೆಂಬುದು ನಾಗರೀಕರ ಆಶಯವಾಗಿದೆ.

  • 3 ಸುತ್ತಿನ ಕೋಟೆಯ ಸುತ್ತಲಿನ ಮಣ್ಣಿನ ಗುಡ್ಡ ನೆಲಸಮ

    3 ಸುತ್ತಿನ ಕೋಟೆಯ ಸುತ್ತಲಿನ ಮಣ್ಣಿನ ಗುಡ್ಡ ನೆಲಸಮ

    ಮಂಡ್ಯ: ಜಿಲ್ಲೆಯ ಶ್ರೀರಂಗಪಟ್ಟಣದ ಮೂರು ಸುತ್ತಿನ ಕೋಟೆಯ ಸುತ್ತ ನಿಯಮ ಬಾಹಿರವಾಗಿ ಮಣ್ಣಿನ ಗುಡ್ಡವನ್ನು ಸಮ ಮಾಡುತ್ತಿದ್ದು ಅಧಿಕಾರಿಗಳು ಕಣ್ಮುಚ್ಚಿ ಕುಳಿತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ.

    ಖಾಸಗಿ ವ್ಯಕ್ತಿಯೊಬ್ಬರು ಮನೆ ನಿರ್ಮಾಣಕ್ಕಾಗಿ ಜೆಸಿಬಿ ಮೂಲಕ ದಿಬ್ಬ ನೆಲಸಮ ಮಾಡುತ್ತಿದ್ದಾರೆ. ಸುಮಾರು 450 ವರ್ಷಗಳ ಹಿಂದೆ ತಿಮ್ಮಣ್ಣ ನಾಯಕ ಎಂಬವರಿಂದ ಕೋಟೆ ನಿರ್ಮಾಣ ಕೆಲಸ ಆರಂಭವಾಗಿತ್ತು. ನಂತರ ವಿಜಯನಗರ ಅರಸರು, ಯದುವಂಶದ ಅರಸರು, ಹೈದರಾಲಿ, ಟಿಪ್ಪು ಕಾಲದಲ್ಲಿ ಹಂತ ಹಂತವಾಗಿ ಕೋಟೆ ಅಭಿವೃದ್ಧಿಗೊಂಡಿತ್ತು. ಶತೃಗಳ ದಾಳಿ ತಪ್ಪಿಸಲು ಕೋಟೆ ಸುತ್ತ ಕಂದಕ ಹಾಗೂ ಅಗತ್ಯವಿರುವೆಡೆ ದಿಬ್ಬ ನಿರ್ಮಿಸಲಾಗಿತ್ತು. ಕೋಟೆಯನ್ನ ಐತಿಹಾಸಿಕ ಸ್ಮಾರಕ ಎಂದು ಘೋಷಿಸಿರುವ ಪ್ರಾಚ್ಯವಸ್ತು ಸಂಗ್ರಹಾಲಯ ಹಾಗೂ ಪುರಾತತ್ವ ಇಲಾಖೆ, ಸ್ಮಾರಕದ ಸುತ್ತ 100 ಮೀಟರ್ ವ್ಯಾಪ್ತಿ ಸಂರಕ್ಷಿತ ಪ್ರದೇಶವೆಂದು ಸೂಚಿಸಿತ್ತು.

    ಕೋಟೆಯ 100 ಮೀಟರ್ ವ್ಯಾಪ್ತಿಯಲ್ಲಿ ಮಣ್ಣು ತೋಡುವುದು, ಕಟ್ಟಡ ನಿರ್ಮಾಣ ಸೇರಿದಂತೆ ಯಾವುದೇ ಅಭಿವೃದ್ಧಿ ಕಾರ್ಯ ಕೈಗೊಳ್ಳುವಂತಿಲ್ಲ. 100 ಮೀಟರ್ ವ್ಯಾಪ್ತಿಯಲ್ಲಿ ಖಾಸಗಿ ವ್ಯಕ್ತಿಗಳ ಆಸ್ತಿ ಇದ್ದರೂ ಯಥಾಸ್ಥಿಯಲ್ಲಿ ಅನುಭವಿಸಬೇಕೇ ಹೊರತು ಯಾವುದೇ ಅಭಿವೃದ್ಧಿ ಕೈಗೊಳ್ಳುವಂತಿಲ್ಲ. ಆದರೆ ಇದೀಗ ಕೋಟೆಯ ಸಮೀಪದಲ್ಲೇ ಇರುವ ದಿಬ್ಬ ನೆಲಸಮವಾಗುತ್ತಿದ್ದು ಪುರಾತತ್ವ ಇಲಾಖೆ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • “ಪ್ರತಿಕೃತಿಯನ್ನು ದಹಿಸೋದು ಮಾತ್ರವಲ್ಲ, ನೇಣು ಹಾಕ್ತೀವಿ” ಎಂಬ ಬರಹದ ಪಕ್ಕ ವ್ಯಕ್ತಿಯ ಶವ ಪತ್ತೆ

    “ಪ್ರತಿಕೃತಿಯನ್ನು ದಹಿಸೋದು ಮಾತ್ರವಲ್ಲ, ನೇಣು ಹಾಕ್ತೀವಿ” ಎಂಬ ಬರಹದ ಪಕ್ಕ ವ್ಯಕ್ತಿಯ ಶವ ಪತ್ತೆ

    ಜೈಪುರ: ಬಾಲಿವುಡ್‍ನ ಪದ್ಮಾವತಿ ಚಿತ್ರದ ವಿರುದ್ಧ ನಡೆಯುತ್ತಿರುವ ಪ್ರತಿಭಟನೆ ಹಿಂಸಾತ್ಮಕ ರೂಪ ಪಡೆದಿದ್ಯಾ ಎಂಬ ಅನುಮಾನ ಮೂಡಿಸುವಂತಹ ಘಟನೆಯೊಂದು ನಡೆದಿದೆ.

    ಜೈಪುರದ ನಹಾರ್ ಘರ್ ಕೋಟೆಯ ಬಳಿ ಇಂದು ನೇಣು ಬಿಗಿದ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆಯಾಗಿದೆ. ಶವದ ಬಳಿ ಇರುವ ಕಲ್ಲುಗಳ ಮೇಲೆ ನಾವು ಪ್ರತಿಕೃತಿಯನ್ನು ದಹಿಸುವುದು ಮಾತ್ರವಲ್ಲ, ನೇಣು ಹಾಕ್ತೀವಿ” ಎಂದು ಬರೆಯಲಾಗಿದೆ. ಮತ್ತೊಂದು ಕಲ್ಲಿನ ಮೇಲೆ “ಪದ್ಮಾವತಿಗೆ ವಿರೋಧ” ಎಂದು ಬರೆದಿರುವುದು ಪತ್ತೆಯಾಗಿದೆ.

    ವರದಿಯ ಪ್ರಕಾರ ಮೃತ ವ್ಯಕ್ತಿಯನ್ನು 40 ವರ್ಷದ ಚೇತನ್ ಕುಮಾರ್ ಸೈನಿ ಎಂದು ಗುರುತಿಸಲಾಗಿದೆ. ಇದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬ ಬಗ್ಗೆ ಸದ್ಯಕ್ಕೆ ಸ್ಪಷ್ಟವಾಗಿಲ್ಲ. ರಾಜಸ್ಥಾನ ಪೊಲೀಸರು ಇದನ್ನ ಕೊಲೆ ಎಂದು ಪರಿಗಣಿಸಿದ್ದಾರಾದ್ರೂ, ಪದ್ಮಾವತಿ ಚಿತ್ರಕ್ಕೂ ಇದಕ್ಕೂ ಸಂಬಂಧವಿದ್ಯಾ ಎಂಬ ಬಗ್ಗೆ ಹೇಳಿಲ್ಲ.

    ಪದ್ಮಾವತಿ ಚಿತ್ರದ ವಿರುದ್ಧ ಪ್ರತಿಭಟನೆ ನಡೆಸುತ್ತಿರೋ ಶ್ರೀ ರಜಪೂತ್ ಕಾರ್ಣಿ ಸೇನಾ, ಈ ಘಟನೆಯಲ್ಲಿ ನಾವು ಭಾಗಿಯಾಗಿಲ್ಲ ಎಂದು ಸ್ಪಷ್ಟಪಡಿಸಿದೆ. ಇದೇ ತಿಂಗಳ ಆರಂಭದಲ್ಲಿ ಕರ್ಣಿ ಸೇನಾ ಕಾರ್ಯಕರ್ತರು ರಾಜಸ್ಥಾನದ ಕೋಟಾದಲ್ಲಿ ಪದ್ಮಾವತಿ ಚಿತ್ರದ ಟ್ರೇಲರ್ ಪ್ರದರ್ಶಿಸುತ್ತಿದೆ ಎಂಬ ವರದಿಯ ಮೇಲೆ ಚಿತ್ರಮಂದಿರವನ್ನ ಧ್ವಂಸಗೊಳಿಸಿದ್ದರು.

    ಇಂದು ಕೂಡ ದೆಹಲಿಯ ಆಜಾದ್‍ಪುರ್ ಮೆಟ್ರೋ ನಿಲ್ದಾಣದ ಬಳಿ ಜನರ ಗುಂಪು ಚಿತ್ರದ ವಿರುದ್ಧ ಪ್ರತಿಭಟನೆ ನಡೆಸಿದೆ. ರಾಷ್ಟ್ರೀಯ ಚೇತನ ಮಂಚ್ ಎಂಬ ಸಂಘಟನೆಯವರು ನಿರ್ದೇಶಕ ಸಂಜಯ್ ಲೀಲಾ ಭನ್ಸಾಲಿಯ ಪ್ರತಿಕೃತಿ ದಹಿಸಿದ್ದಾರೆ.

    ಡಿಸೆಂಬರ್ 1ಕ್ಕೆ ಪದ್ಮಾವತಿ ಚಿತ್ರ ಬಿಡುಗಡೆಯಾಗಬೇಕಿತ್ತು. ಆದ್ರೆ ಸದ್ಯ ಬಿಡುಗಡೆ ದಿನಾಂಕವನ್ನ ಮುಂದೂಡಲಾಗಿದೆ.

    ಏನಿದು ವಿವಾದ?: ಪದ್ಮಾವತಿ ಸಿನಿಮಾ ಸೆಟ್ಟೇರಿದಾಗಿನಿಂದಲೂ ವಿವಾದವು ಹುಟ್ಟಿಕೊಂಡಿದೆ. ಸಿನಿಮಾದಲ್ಲಿ ಅಲ್ಲಾವುದ್ದೀನ್ ಖಿಲ್ಜಿ ಮಾತ್ರ ಪದ್ಮಾವತಿ ನಡುವೆ ರೊಮ್ಯಾಂಟಿಕ್ ಸೀನ್ ಗಳಿವೆ. ಇನ್ನೂ ಸಿನಿಮಾದಲ್ಲಿ ಇತಿಹಾಸವನ್ನು ತಿರುಚಲಾಗಿದೆ ಎಂದು ಹಿಂದೂ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸುತ್ತಿವೆ. ರಾಣಿ ಪದ್ಮಾವತಿ ಕುರಿತಾಗಿ ಸಿನಿಮಾ ಮಾಡಲಿದ್ದೇನೆಂದು ಬನ್ಸಾಲಿ ಹೇಳಿಕೊಂಡಾಗ ಹಲವು ಟೀಕೆಗಳು ವ್ಯಕ್ತವಾಗಿದ್ದವು. ಆರಂಭದಲ್ಲಿ ಚಿತ್ರೀಕರಣದ ವೇಳೆ ರಜಪೂತ್ ಕರ್ಣಿ ಸೇನಾದ ಸದಸ್ಯನೋರ್ವ ಬನ್ಸಾಲಿ ಅವರ ಕಪಾಳಕ್ಕೆ ಹೊಡೆದಿದ್ದನು. ಇನ್ನೂ ಮಹಾರಾಷ್ಟ್ರದ ಕೋಲಾಪುರದಲ್ಲಿ ಚಿತ್ರೀಕರಣದ ಸೆಟ್ ಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದರು. ಈ ಘಟನೆ ವೇಳೆ ಯಾರಿಗೂ ಯಾವುದೇ ಅಪಾಯವಾಗಿರಲಿಲ್ಲ.

    ಸಿನಿಮಾದಲ್ಲಿ ಅಲ್ಲಾವುದ್ದೀನ್ ಖಿಲ್ಜಿ ಮತ್ತು ಪದ್ಮಾವತಿ ನಡುವೆ ಯಾವುದೇ ರೊಮ್ಯಾಂಟಿಕ್ ಸೀನ್ ಗಳಿಲ್ಲ ಎಂದು ಚಿತ್ರದ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಸ್ಪಷ್ಟನೆ ನೀಡಿದ್ದಾರೆ. ಸಿನಿಮಾದಲ್ಲಿ ಪದ್ಮಾವತಿಯಾಗಿ ದೀಪಿಕಾ ಪಡುಕೋಣೆ. ಅಲ್ಲಾವುದ್ದೀನ್ ಖಿಲ್ಜಿ ಪಾತ್ರದಲ್ಲಿ ರಣ್‍ವೀರ್ ಸಿಂಗ್ ಮತ್ತು ರಾವಲ್ ರತನ್ ಸಿಂಗ್ ಪಾತ್ರದಲ್ಲಿ ಶಾಹಿದ್ ಕಪೂರ್ ನಟಿಸಿದ್ದಾರೆ.

  • ವೀರವನಿತೆ ಒನಕೆ ಓಬವ್ವಳ ಸ್ಮಾರಕ, ಜಯಂತಿಗೆ ಸರ್ಕಾರಕ್ಕೆ ಆಗ್ರಹ

    ವೀರವನಿತೆ ಒನಕೆ ಓಬವ್ವಳ ಸ್ಮಾರಕ, ಜಯಂತಿಗೆ ಸರ್ಕಾರಕ್ಕೆ ಆಗ್ರಹ

    ಚಿತ್ರದುರ್ಗ: ಕೋಟೆನಾಡು ಚಿತ್ರದುರ್ಗ ಎಂದ ಕ್ಷಣ ವೀರವನಿತೆ ಒನಕೆ ಓಬವ್ವಳ ಸಾಹಸ ಕಣ್ಮುಂದೆ ಬರುತ್ತೆ. ಆಕೆ ಹೈದರಾಲಿ ಸೈನಿಕರ ವಿರುದ್ಧ ಒನಕೆ ಹಿಡಿದು ವೀರಾವೇಶದಿಂದ ಹೋರಾಡಿ ಕೋಟೆಯನ್ನು ರಕ್ಷಿಸಿದ ಸಾಹಸವನ್ನು ದುರ್ಗದ ಜನರು ಎಂದಿಗೂ ಮರೆಯಲು ಸಾಧ್ಯವಿಲ್ಲ. ಆದರೆ ಚಿತ್ರದುರ್ಗ ಜಿಲ್ಲಾಡಳಿತಕ್ಕೆ ಮಾತ್ರ ಆ ಓಬವ್ವಳ ನೆನಪೇ ಇಲ್ಲದಂತಾಗಿದೆ.

    ರಾಜ್ಯ ಸರ್ಕಾರ ಪ್ರತಿಷ್ಠೆಯ ಪ್ರಶ್ನೆಯಾಗಿ ಟಿಪ್ಪು ಜಯಂತಿಯನ್ನು ಹಠ ಹಿಡಿದು ಮಾಡುತ್ತಿದೆ. ಆದರೆ ಅದೇ ಟಿಪ್ಪುವಿನ ತಂದೆ ಹೈದರಾಲಿಯ ಸೈನ್ಯವನ್ನು ದುರ್ಗಾದ ಏಳುಸುತ್ತಿನ ಕೋಟೆಯಿಂದ ಹಿಮ್ಮೆಟ್ಟಿಸಿದ ವೀರ ವನಿತೆ ಒನಕೆ ಓಬವ್ವಳನ್ನು ಮರೆತೇ ಬಿಟ್ಟಿದೆ. ಚಿತ್ರದುರ್ಗ ಜಿಲ್ಲಾಡಳಿತ 2012 ಮತ್ತು 2015ರಲ್ಲಿ ಒನಕೆ ಓಬವ್ವಳ ಜಯಂತಿ ಆಯೋಜಿಸುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ.

    ಸರ್ಕಾರದ ನಿರ್ಲಕ್ಷ್ಯವನ್ನು ಖಂಡಿಸಿ ಛಲವಾದಿ ಗುರುಪೀಠದ ಬಸವನಾಗಿದೇವ ಶರಣರು ಓಬವ್ವನ ವಿಗ್ರಹಕ್ಕೆ ಹೂಮಾಲೆ ಹಾಕಿ ಪೂಜೆ ಸಲ್ಲಿಸಿ ಸಾಂಕೇತಿಕವಾಗಿ ಒನಕ ಓಬವ್ವಳ ಸ್ಮರಣೆ ಮಾಡಿದರು. ಒನಕೆ ಓಬವ್ವ ಸ್ಮಾರಕ ಮತ್ತು ಜಯಂತಿ ಶೀಘ್ರದಲ್ಲೇ ಜಾರಿ ಮಾಡುವಂತೆ ಆಗ್ರಹಿಸಿದ್ದಾರೆ.

    ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಎಚ್. ಆಂಜನೇಯ ಅವರನ್ನು ಕೇಳಿದರೆ ಈ ಬಗ್ಗೆ ಚರ್ಚಿಸಲು ಶೀಘ್ರದಲ್ಲಿ ಸಭೆ ಕರಿತೀವಿ. ಸ್ಮಾರಕ ನಿರ್ಮಾಣ ಜಯಂತಿ ಮಾಡಲು ಕ್ರಮ ಕೈಗೊಳ್ತೇವೆ ಎಂದು ಭರವಸೆ ನೀಡಿದ್ದಾರೆ.

    ಜೀವದ ಹಂಗು ತೊರೆದು ಹೋರಾಡಿದ್ದ ಒನಕೆ ಓಬವ್ವಳನ್ನು ಸ್ಮರಿಸಬೇಕಾಗಿರುವುದು ಸರ್ಕಾರದ ಕರ್ತವ್ಯ. ಇನ್ನಾದರು ಸರ್ಕಾರ ಈ ಕಡೆ ಗಮನ ಹರಸಲಿ ಎನ್ನುವುದು ಕೋಟೆ ನಾಡಿನ ಜನರ ಆಗ್ರಹವಾಗಿದೆ.

  • ಭಾರೀ ಮಳೆಯಿಂದಾಗಿ ಐತಿಹಾಸಿಕ ವಡ್ನಾಳ್ ಕೋಟೆ ಕುಸಿತ- ಸ್ಥಳೀಯ ನಿವಾಸಿಗಳಲ್ಲಿ ಆತಂಕ

    ಭಾರೀ ಮಳೆಯಿಂದಾಗಿ ಐತಿಹಾಸಿಕ ವಡ್ನಾಳ್ ಕೋಟೆ ಕುಸಿತ- ಸ್ಥಳೀಯ ನಿವಾಸಿಗಳಲ್ಲಿ ಆತಂಕ

    ದಾವಣಗೆರೆ: ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಐತಿಹಾಸಿಕ ಕೋಟೆಯ ಒಂದು ಭಾಗ ಕುಸಿದು ಬಿದ್ದಿರುವ ಘಟನೆ ನಡೆದಿದೆ.

    ಚನ್ನಗಿರಿ ತಾಲೂಕಿನ ವಡ್ನಾಳ್ ಗ್ರಾಮದ ಊರ ಮಧ್ಯಭಾಗದಲ್ಲಿರುವ ಐತಿಹಾಸಿಕ ವಡ್ನಾಳ್ ಕೋಟೆಯ ಗೋಡೆಯ ಒಂದು ಬದಿ ಮಳೆಗೆ ಕುಸಿದು ಬಿದ್ದ ಪರಿಣಾಮ ಕೋಟೆ ಇದೀಗ ಅಪಾಯದ ಅಂಚಿನಲ್ಲಿದೆ.

    ಕೋಟೆ ಪಕ್ಕದಲ್ಲಿಯೇ ಮನೆಗಳಿದ್ದು ಯಾವುದೇ ತೊಂದರೆ ಸಂಭವಿಸಿಲ್ಲ. ಕೋಟೆ ಗೋಡೆ ಕುಸಿದು ಬಂಡೆಗಳು ರಸ್ತೆಯ ಮೇಲೆ ಬಿದ್ದಿದ್ದರಿಂದ ಶಾಲೆಗೆ ಹೋಗುವ ಮಕ್ಕಳು ಮತ್ತು ಜನರು ಬಂಡೆ ಮೇಲೆ ಹತ್ತಿ ಹೋಗುತ್ತಿದ್ದಾರೆ. ಇನ್ನು ಹೆಚ್ಚು ಮಳೆಯಾದರೆ ಕೋಟೆ ಸಂಪೂರ್ಣವಾಗಿ ಕುಸಿದು ಬೀಳುವ ಸಾಧ್ಯತೆ ಹೆಚ್ಚಾಗಿದ್ದು, ಅಕ್ಕ ಪಕ್ಕದ ಮನೆಯವರು ಆತಂಕಕ್ಕೊಳಗಾಗಿದ್ದಾರೆ.

    ಹಾಲಿ ಶಾಸಕ ವಡ್ನಾಳ್ ರಾಜಣ್ಣ ನವರ ಸ್ವಗ್ರಾಮ ಇದಾಗಿದ್ದು, ಕೋಟೆ ಗೋಡೆ ಬಿದ್ದು ಐದಾರು ದಿನಗಳಾದರು ಸ್ಥಳಕ್ಕೆ ಅಧಿಕಾರಿಗಳು ಆಗಮಿಸಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.