Tag: Formula

  • ಬೊಮ್ಮಾಯಿ ಸಂಪುಟ ರಚನೆಗೆ 60:20:20 ಸೂತ್ರ

    ಬೊಮ್ಮಾಯಿ ಸಂಪುಟ ರಚನೆಗೆ 60:20:20 ಸೂತ್ರ

    ಬೆಂಗಳೂರು/ನವದೆಹಲಿ: ರಾಜ್ಯ ಸಚಿವ ಸಂಪುಟ ರಚನೆ ಕ್ಲೈಮ್ಯಾಕ್ಸ್ ಹಂತದಲ್ಲಿದೆ, ಇವತ್ತು ಸಂಜೆ ಸಂಪುಟ ರಚನೆ ಆಗಬಹುದು ಎನ್ನಲಾಗಿತ್ತಾದ್ರೂ ಹೈಕಮಾಂಡ್ ನಡೆಯಿಂದ ಎಲ್ಲವೂ ಬದಲಾಗಿದೆ.

    ಹೈಕಮಾಂಡ್ ತುರ್ತು ಕರೆ ಹಿನ್ನೆಲೆಯಲ್ಲಿ ಭಾನುವಾರ ಸಂಜೆ ದೆಹಲಿಗೆ ದೌಡಾಯಿಸಿದ್ದ ಸಿಎಂ ಬಸವರಾಜ ಬೊಮ್ಮಾಯಿ, ರಾತ್ರಿಯೇ ಪಕ್ಷಾಧ್ಯಕ್ಷ ನಡ್ಡಾರನ್ನು ಭೇಟಿ ಮಾಡಿ, ಸಂಪುಟ ಪಟ್ಟಿ ಫೈನಲ್ ಮಾಡ್ತಾರೆ ಎನ್ನಲಾಗಿತ್ತು. ಆದ್ರೆ, ಕೊನೆ ಕ್ಷಣದಲ್ಲಿ ಸಿಎಂಗೆ ನಡ್ಡಾ ಭೇಟಿ ಸಾಧ್ಯವಾಗಲಿಲ್ಲ. ಆದ್ರೆ ಕೇಂದ್ರ ಮಂತ್ರಿ ಪ್ರಹ್ಲಾದ್ ಜೋಷಿ ನಿವಾಸದಿಂದ ಖಾಸಗಿ ಕಾರ್‍ನಲ್ಲಿ ರಹಸ್ಯ ಸ್ಥಳಕ್ಕೆ ಹೋಗಿದ್ದ ಬೊಮ್ಮಾಯಿ, ಮಧ್ಯರಾತ್ರಿ ಕರ್ನಾಟಕ ಭವನಕ್ಕೆ ಹಿಂತಿರುಗಿದರು.

    ಇಂದು ಬೆಳಗ್ಗೆ ನಡ್ಡಾರನ್ನು ಸಿಎಂ ಬೊಮ್ಮಾಯಿ ಭೇಟಿ ಮಾಡಲಿದ್ದಾರೆ ಎನ್ನಲಾಗಿತ್ತು. ಆದರೆ ಸಂಜೆಯವರೆಗೂ ನಡ್ಡಾ ಭೇಟಿ ಸಾಧ್ಯವಾಗಲಿಲ್ಲ. ಈ ನಡುವೆ ಪಕ್ಷದ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್‍ ಅವರನ್ನು ಸಿಎಂ ಭೇಟಿಯಾದರು. ಸಂಸತ್‍ಗೆ ತೆರಳಿ ಗೃಹ ಮಂತ್ರಿ ಅಮಿತ್ ಷಾ ಭೇಟಿ ಮಾಡಿದ್ರು. ಸಿಎಂ ಮಾತ್ರ ಇವತ್ತು ಸಂಜೆ ಎಲ್ಲಾ ಫೈನಲ್ ಆಗಲಿದೆ. ಬುಧವಾರ ನೂತನ ಸಂಪುಟ ಅಸ್ತಿತ್ವಕ್ಕೆ ಬರುವ ಸುಳಿವನ್ನು ನೀಡಿದರು.

    ಈ ಬಾರಿ ಅಳೆದೂತೂಗಿ ಸಂಪುಟ ಪಟ್ಟಿ ಫೈನಲ್ ಮಾಡಲು ಹೈಕಮಾಂಡ್ ಮುಂದಾಗಿದೆ ಎನ್ನಲಾಗಿದೆ. ಇನ್ನೂ 3 ಕೋಟಾದಡಿ ಸಂಪುಟ ರಚನೆಗೆ ಹೈಕಮಾಂಡ್ ಪ್ಲ್ಯಾನ್ ಮಾಡಿದೆ ಅಂತ ತಿಳಿದುಬಂದಿದೆ. ಇದನ್ನೂ ಓದಿ : ಯಡಿಯೂರಪ್ಪ ಮೊಮ್ಮಕ್ಕಳನ್ನು ಆಡಿಸುತ್ತಾ ಮನೆಯಲ್ಲಿರಲಿ: ಯತ್ನಾಳ್ 

    60:20:20 ಫಾರ್ಮುಲಾ:
    – ಆರ್‌ಎಸ್‌ಎಸ್‌+ಹೈಕಮಾಂಡ್ ಕೋಟಾ – 60%
    – ಯಡಿಯೂರಪ್ಪ ಕೋಟಾ – 20%
    – ಸಿಎಂ ಬೊಮ್ಮಾಯಿ ಕೋಟಾ – 20%

  • ಸಚಿವ ಸ್ಥಾನ ಸಿಗದವರ ಸಿಟ್ಟು ಶಮನಕ್ಕೆ ಕಾಂಗ್ರೆಸ್‍ನಿಂದ 2, 3 ಫಾರ್ಮುಲಾ!

    ಸಚಿವ ಸ್ಥಾನ ಸಿಗದವರ ಸಿಟ್ಟು ಶಮನಕ್ಕೆ ಕಾಂಗ್ರೆಸ್‍ನಿಂದ 2, 3 ಫಾರ್ಮುಲಾ!

    ಬೆಂಗಳೂರು: ಸಚಿವ ಸಂಪುಟ ರಚನೆಮಾಡಬೇಕಾದರೆ ಎಐಸಿಸಿ ಕೆಲವು ಸೂತ್ರಗಳನ್ನು ರಚನೆ ಮಾಡಿದೆ ಎಂದು ಪಕ್ಷದ ಕಾರ್ಯಾಧ್ಯಕ್ಷರಾದ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

    ಸೂತ್ರಗಳ ಪ್ರಕಾರ ಅತಿ ಶೀಘ್ರದಲ್ಲಿ ಉಳಿದ 6 ಸ್ಥಾನಗಳ ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸುತ್ತಾರೆ. ಮೊದಲ ಬಾರಿಗೆ ಸಚಿವ ಸಂಪುಟ ಸೇರ್ಪಡೆಯಾಗುವವರಿಗೆ 2 ವರ್ಷಗಳ ಕಾಲಾವಕಾಶವಿರುತ್ತದೆ. ಈ ಬಾರಿಯ ಸಚಿವ ಸ್ಥಾನ ವಂಚಿತರಿಗೆ 2 ವರ್ಷದ ಬಳಿಕ ಸಚಿವ ಸ್ಥಾನ ಕಲ್ಪಿಸಲಾಗುತ್ತದೆ. ಇವರುಗಳ ಕಾಲಾವಧಿ ಉಳಿದ 3 ವರ್ಷವಾಗಿರುತ್ತದೆ ಎಂದು ತಿಳಿಸಿದರು.

    ಇನ್ನೊಂದು ಸೂತ್ರದ ಪ್ರಕಾರ 6 ತಿಂಗಳಿಗೊಮ್ಮೆ ಸಚಿವರ ಕಾರ್ಯವನ್ನು ಪರಿಶೀಲನೆ ಮಾಡಲಾಗುತ್ತದೆ. ಸಚಿವರು ಸರಿಯಾಗಿ ಕಾರ್ಯ ನಿರ್ವಹಣೆ ಮಾಡದಿದ್ದಲ್ಲಿ ಬದಲಾವಣೆ ಮಾಡಲಾಗುತ್ತದೆ. ಕಾಂಗ್ರೆಸ್ ನಲ್ಲಿ 2, 3, 4 ಬಾರಿ ಗೆದ್ದಿರುವ ಹಿರಿಯರಿದ್ದಾರೆ. ಹಾಗಾಗಿ ಎಲ್ಲರಿಗೂ ಅವಕಾಶವನ್ನು ಕಲ್ಪಿಸಿಕೊಡುವುದಕ್ಕಾಗಿ ಈ ರೊಟೇಶನ್ ಸೂತ್ರಗಳನ್ನು ಹೈಕಮಾಂಡ್ ನೀಡಿದೆ ಎಂದು ತಿಳಿಸಿದರು.

    ಕುಮಾರಸ್ವಾಮಿ ಮತ್ತು ಪರಮೇಶ್ವರ್ ಅವರು ಮುಖ್ಯಮಂತ್ರಿ ಉಪಮುಖ್ಯಮಂತ್ರಿಯಾಗಿ ಮೇ 23 ರಂದು ಪ್ರಮಾಣವಚನ ಸ್ವೀಕರಿಸಿದ್ದರು. ಇದಾದ ಬಳಿಕ ಜೂನ್ 6 ರಂದು 25 ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದರೂ ಖಾತೆ ಹಂಚಿಕೆಯಾಗಿಲ್ಲ.