Tag: Formers

  • ಕೋಲಾರ| ನಿರಂತರ ಮಳೆ- ಲಾಭದ ನಿರೀಕ್ಷೆಯಲ್ಲಿದ್ದ ಹೂವಿನ ಬೆಳೆಗಾರರು ಕಂಗಾಲು

    ಕೋಲಾರ| ನಿರಂತರ ಮಳೆ- ಲಾಭದ ನಿರೀಕ್ಷೆಯಲ್ಲಿದ್ದ ಹೂವಿನ ಬೆಳೆಗಾರರು ಕಂಗಾಲು

    ಕೋಲಾರ: ಜಿಲ್ಲೆಯಲ್ಲಿ ಕಳೆದ ನಾಲ್ಕು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಜಡಿ ಮಳೆಯ (Rain) ಪರಿಣಾಮ ಸಾಕಷ್ಟು ಅನಾಹುತಗಳು ಸೃಷ್ಟಿಯಾಗಿವೆ. ಅದರಲ್ಲೂ ರೈತರು ಬೆಳೆದ ಬೆಳೆಗಳು ಮಳೆಯ ಹೊಡೆತಕ್ಕೆ ಕೊಚ್ಚಿ ಸಾಕಷ್ಟು ನಷ್ಟ ಅನುಭವಿಸುವಂತಾಗಿದೆ.

    ಕೋಲಾರ (Kolara) ತಾಲೂಕು ಹೊದಲವಾಡಿ ಗ್ರಾಮದಲ್ಲಿ ಹೂ ತೋಟಕ್ಕೆ ನಿರಂತರ ಮಳೆಯಿಂದ ನೀರಿನಲ್ಲಿ ನೆನೆದು ಹೂವಿನ ತೋಟ ಕೊಳೆಯಲು ಆರಂಭಿಸಿದೆ. ಪರಿಣಾಮ ದೀಪಾವಳಿವರೆಗೂ ಹೂವಿನ ಬೆಳೆ ಇರುತ್ತದೆ ಎಂದು ಭರ್ಜರಿ ಲಾಭದ ನಿರೀಕ್ಷೆಯಲ್ಲಿದ್ದ ರೈತರಿಗೆ ಜಡಿ ಮಳೆ ತಣ್ಣೀರೆರಚಿದೆ. ಇದನ್ನೂ ಓದಿ: ಬಾಗಲಕೋಟೆ| ಮಳೆ ಅವಾಂತರಕ್ಕೆ ಕೊಳೆತು ಹೋಗುತ್ತಿದೆ ಈರುಳ್ಳಿ – ರೈತರ ಕಣ್ಣೀರು

    ಸುಮಾರು ಮೂರು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಚೆಂಡು ಹೂವು ತೋಟದಲ್ಲಿ ನೀರು ನಿಂತಿದ್ದು ಹೂವು ಬೆಳೆಗಾರರು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಅದರಲ್ಲೂ ದೀಪಾವಳಿ ಹಬ್ಬದ ಹಿನ್ನೆಲೆ ಹೂವಿಗೆ ಒಳ್ಳೆಯ ಬೆಲೆ ಬರುತ್ತದೆ. ಹಬ್ಬಕ್ಕಾಗಿಯೇ ತೋಟಕ್ಕೆ ಗೊಬ್ಬರ ನೀರು ಹಾಕಿ ಔಷಧ ಹಾಕಿ ಚೆನ್ನಾಗಿ ತೋಟವನ್ನು ಬೆಳೆಸಿ, ಹಬ್ಬದ ಸಮಯಕ್ಕೆ ಒಂದಷ್ಟು ಆದಾಯ ಮಾಡಿಕೊಳ್ಳಬಹುದು ಎಂದುಕೊಂಡಿದ್ದ ಹೂವು ಬೆಳೆಗಾರ ವೇಣು ಅವರಿಗೆ ನಿರಾಸೆಯಾಗಿದೆ. ಇದನ್ನೂ ಓದಿ: ಸ್ನೇಹಿತನ ವಿರುದ್ಧ ಸೇಡು ತೀರಿಸಿಕೊಳ್ಳಲು 4 ವಿಮಾನಗಳಿಗೆ ಬಾಂಬ್ ಬೆದರಿಕೆ – ಮುಂಬೈನಲ್ಲಿ ಅಪ್ರಾಪ್ತ ಅರೆಸ್ಟ್‌

    ಕಳೆದ ನವರಾತ್ರಿ ಹಬ್ಬದಲ್ಲಿ ಒಂದಷ್ಟು ಆದಾಯ ಬಂದಿದೆ. ಆದರೆ ದೀಪಾವಳಿ ಹಬ್ಬಕ್ಕೆ ಒಳ್ಳೆಯ ಬೆಲೆ ಬರುತ್ತದೆ ಆಗ ಹಾಕಿದ ಬಂಡವಾಳಕ್ಕೆ ಒಂದಷ್ಟು ಲಾಭ ಬರುತ್ತದೆ ಅನ್ನೋ ನಿರೀಕ್ಷೆಯಲ್ಲಿದ್ದ ವೇಣು ಅವರಿಗೆ ನಿರಂತರ ಸೈಕ್ಲೋನ್ ಮಳೆ ನಿರಾಸೆ ಉಂಟು ಮಾಡಿದೆ. ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ಮಳೆಗೆ ಹೂವಿನ ಗಿಡಗಳು ಕೊಳೆಯಲು ಆರಂಭಿಸಿದೆ. ಅಲ್ಲದೆ ಮೊಗ್ಗಿಗೆ ರೋಗ ಬಾಧೆ ಶುರುವಾಗಿದೆ. ಇನ್ನೆರಡು ದಿನ ಇದೇ ರೀತಿ ಮಳೆ ಬಂದರೆ ಬೆಳೆ ಸಂಪೂರ್ಣ ಹಾಳಾಗುತ್ತದೆ ಅನ್ನೋದು ರೈತರ ಮಾತು. ಇದನ್ನೂ ಓದಿ: ಬೆಂಗಳೂರು, ದೆಹಲಿಗೆ ಹೊರಟಿದ್ದ 2 ವಿಮಾನಗಳಿಗೆ ಬಾಂಬ್‌ ಬೆದರಿಕೆ – 3 ದಿನಗಳಲ್ಲಿ 12 ಕೇಸ್‌

  • ಕಲಬುರಗಿಯಲ್ಲಿ ಬಿತ್ತನೆ ಬೀಜಕ್ಕಾಗಿ ಮುಗಿಬಿದ್ದ ರೈತರು

    ಕಲಬುರಗಿಯಲ್ಲಿ ಬಿತ್ತನೆ ಬೀಜಕ್ಕಾಗಿ ಮುಗಿಬಿದ್ದ ರೈತರು

    ಕಲಬುರಗಿ: ಶೇಂಗಾ ಬಿತ್ತನೆ ಬೀಜದ ಕೊರತೆ ಹಿನ್ನೆಲೆಯಲ್ಲಿ ಬೀಜ ಖರೀದಿಗಾಗಿ ರೈತರು ನೂಕುನುಗ್ಗಲು ನಡೆಸಿರುವ ಘಟನೆ ಜಿಲ್ಲೆಯ ಚಿತ್ತಾಪುರ ತಾಲೂಕಿನಲ್ಲಿ ನಡೆದಿದೆ.

    ತಾಲೂಕಿನ ನಾಲವಾರದಲ್ಲಿ ರೈತ ಸಂಪರ್ಕ ಕೇಂದ್ರದ ಮುಂದೆ ರೈತರು ಬೀಜ ಖರೀದಿಗಾಗಿ ಮುಗಿಬಿದ್ದರು. ಅಲ್ಲದೆ ಅಧಿಕಾರಿಗಳಿಗೆ ಜಮೀನಿನ ದಾಖಲೆ ನೀಡಿ ಬೀಜ ಖರೀದಿಗೆ ಮುಂದಾದ ಪ್ರಸಂಗ ನಡೆದಿದೆ. ಹಿಂಗಾರಿನ ಬೆಳೆಯಾದ ಶೇಂಗಾಕ್ಕೆ, ಬಿತ್ತನೆ ಬೀಜ ಕೊರತೆಯಾಗಿದೆ. ಈ ಹಿನ್ನೆಲೆಯಲ್ಲಿ ಈ ನೂಕು ನುಗ್ಗಲು ನಡೆದಿದೆ. ಇನ್ನು ಜಿಲ್ಲೆಗೆ ಬೇಕಾದ ಬಿತ್ತನೆ ಬೀಜದಲ್ಲಿ ಕೇವಲ ಅರ್ಧದಷ್ಟು ಬೀಜ ಮಾತ್ರ ಸರ್ಕಾರ ಪೂರೈಕೆ ಮಾಡಿದೆ. ಹೀಗಾಗಿ ರೈತರಿಗೆ ಸಮರ್ಪಕವಾಗಿ ಬೀಜ ಸಿಗದಂತಾಗಿದೆ. ಇದನ್ನೂ ಓದಿ: ಟೀಚರ್ ಆದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ

    ಮುಂಗಾರು ಕೈ ಕೊಟ್ಟ ರೈತರಿಗೆ ಹಿಂಗಾರು ಬೀಜದ ಕೊರತೆಯುಂಟಾಗಿದೆ. ಸದ್ಯ ಕಲಬುರಗಿ ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ವಿಪರಿತ ಮಳೆಯ ಹಿನ್ನೆಲೆ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ಹೀಗಾಗಿ ಹಿಂಗಾರು ಬೆಳೆಯಲ್ಲದರೂ ಒಂದಿಷ್ಟು ಹಣ ಸಂಪದಾನೆ ಮಾಡಲು ಅನ್ನದಾತರು ಪರದಾಡುತ್ತಿದ್ದಾರೆ. ಆದರೆ ಸೂಕ್ತ ಸಮಯದಲ್ಲಿ ಬೀಜ ಸಿಗದ ಹಿನ್ನೆಲೆ ರೈತರಿಗೆ ಒಂದರ ಮೇಲೆ ಒಂದು ಹೊಡೆತ ಬಿದ್ದಂತಾಗಿದೆ. ಹಿಂಗಾರು ಬಿತ್ತನೆಗೆ ಸಿದ್ಧಗೊಂಡಿದ್ದ ರೈತರು ಸದ್ಯ ಬೀಜಕ್ಕಾಗಿ ರೈತ ಸಂಪರ್ಕ ಕೇಂದ್ರದ ಮುಂದೆ ಕಾಯುವಂತಾಗಿದೆ. ಇದನ್ನೂ ಓದಿ: ದತ್ತಪೀಠಕ್ಕೆ ಮೌಲ್ವಿ ನೇಮಕ ರದ್ದು

  • ಸೋಯಾ ಬೀಜ ಸಿಗದಿದ್ದಕ್ಕೆ ಕೃಷಿ ಅಧಿಕಾರಿಯನ್ನು ಗೇಟಿಗೆ ಕಟ್ಟಿ ಹಾಕಿದ ರೈತರು

    ಸೋಯಾ ಬೀಜ ಸಿಗದಿದ್ದಕ್ಕೆ ಕೃಷಿ ಅಧಿಕಾರಿಯನ್ನು ಗೇಟಿಗೆ ಕಟ್ಟಿ ಹಾಕಿದ ರೈತರು

    ಬೀದರ್: ಸಚಿವ ಪ್ರಭು ಚವ್ಹಾಣ್ ಉಸ್ತುವಾರಿ ವಹಿಸಿಕೊಂಡಿರುವ ಬೀದರ್ ಜಿಲ್ಲೆಯಲ್ಲಿ ರೈತರು, ನಾಟಿ ಮಾಡಲು ಸೋಯಾ ಬೀಜ ಸಿಗದಿದ್ದಕ್ಕೆ ನೊಂದು ಕೃಷಿ ಅಧಿಕಾರಿಯನ್ನು ರೈತ ಸಂಪರ್ಕ ಕೇಂದ್ರದ ಗೇಟಿಗೆ ಕಟ್ಟಿ ಹಾಕಿ ಆಕ್ರೋಶ ಹೊರಹಾಕಿದ್ದಾರೆ.

    ಬೀದರ್‍ನ ರೈತರು ನಾಟಿ ಮಾಡಲು ಬೀಜ ಸಿಗದೆ ನೊಂದು ಹೋಗಿದ್ದಾರೆ. ಕಳೆದ ಒಂದು ವಾರದಿಂದ ಔರಾದ್ ತಾಲೂಕಿನ ರೈತ ಸಂಪರ್ಕ ಕೇಂದ್ರಕ್ಕೆ ಬಿತ್ತನೆ ಬೀಜಕ್ಕಾಗಿ ಕುಗ್ರಾಮಗಳ ಹಾಗೂ ತಾಂಡಾದ ರೈತರು ಅಲೆದು ಅಲೆದು ಸುಸ್ತಾಗಿ ಹೋಗಿದ್ದಾರೆ. ಇದರಿಂದ ಆಕ್ರೋಶಗೊಂಡು ಇಂದು ಬೀಜ ಸಿಗದಿದಕ್ಕೆ ರೈತರು ಅಧಿಕಾರಿಯನ್ನು ಗೇಟಿಗೆ ಕಟ್ಟಿ ಹಾಕಿ ಪ್ರತಿಭಟನೆ ನಡೆಸಿದ್ದಾರೆ. ಇದನ್ನೂ ಓದಿ: ಬೀದರ್‌ನಲ್ಲಿ ಅಪರೂಪದ ನೀಲ್‍ಗಾಯ್ ಪ್ರತ್ಯಕ್ಷ- ರೈತರಲ್ಲಿ ಆತಂಕ

    ರೈತ ಸಂಪರ್ಕ ಕೇಂದ್ರ ಕೃಷಿ ಅಧಿಕಾರಿ ಭೀಮರಾವ್ ಶಿಂಧೆಯನ್ನು ಗೇಟಿಗೆ ಕಟ್ಟಿ ಹಾಕಿ ರೈತರು ಬೀತ್ತನೆ ಬೀಜಕ್ಕಾಗಿ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದ್ದಾರೆ. ಮೊದಲೇ ಕೋವಿಡ್ ನಿಂದ ಸಂಕಷ್ಟ ಅನುಭವಿಸುತ್ತಿರುವ ರೈತರು, ಕೃಷಿ ಅಧಿಕಾರಿಗಳ ಮಹಾ ನಿರ್ಲಕ್ಷ್ಯಕ್ಕೆ ಬೇಸತ್ತು ಹೋಗಿ ಅಧಿಕಾರಿಗಳ ವಿರುದ್ಧವೇ ತಿರುಗಿ ಬಿದ್ದಿದ್ದಾರೆ.

  • ಬರುತ್ತಿದೆ ರಹಸ್ಯ ಬಿತ್ತನೆ ಬೀಜಗಳು – ರೈತರೇ ಚೀನಾದ ಕುತಂತ್ರಕ್ಕೆ ಬಲಿಯಾಗಬೇಡಿ

    ಬರುತ್ತಿದೆ ರಹಸ್ಯ ಬಿತ್ತನೆ ಬೀಜಗಳು – ರೈತರೇ ಚೀನಾದ ಕುತಂತ್ರಕ್ಕೆ ಬಲಿಯಾಗಬೇಡಿ

    ಯಾದಗಿರಿ: ಚೀನಾ ಅನೇಕ ದೇಶಗಳಿಗೆ ರಹಸ್ಯವಾಗಿ ಬಿತ್ತನೆ ಬೀಜಗಳನ್ನು ಕಳುಹಿಸುತ್ತಿದೆ, ಬಿತ್ತನೆ ಬೀಜ ಹೊರತು ಪಡಿಸಿ ರೋಗ ಹರಡುವ ವೈರಾಣುಗಳು ಅಥವಾ ಇನ್ನಿತರೆ ಮಾರಕ ಪದಾರ್ಥಗಳು ಕಳುಹಿಸಲಾಗುತ್ತಿದೆ ಎಂದು ಶಂಕಿಸಲಾಗಿದೆ ಎಂದು ಯಾದಗಿರಿ ಜಂಟಿ ಕೃಷಿ ಇಲಾಖೆ ನಿರ್ದೇಶಕಿ ದೇವಿಕಾ ಆರ್ ಕಳವಳ ವ್ಯಕ್ತಪಡಿಸಿದ್ದಾರೆ.

    ಈ ಕುರಿತು ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ದೇವಿಕಾ ಅವರು, ನಮಗೆ ನಮ್ಮ ಹಿರಿಯ ಅಧಿಕಾರಿಗಳು ತಿಳಿಸಿರುವಂತೆ ಈಗಾಗಲೇ ರಾಜ್ಯದಲ್ಲಿ ಮುಂಗಾರು ಪ್ರಾರಂಭವಾಗಿದೆ. ಇದೀಗ ದೇಶಕ್ಕೆ ಚೀನಾದಿಂದ ಅನುಮಾನಸ್ಪದವಾದ ಬಿತ್ತನೆ ಬೀಜಗಳು ಬರಲು ಆರಂಭವಾಗಿದೆ. ಈ ಬೀಜಗಳ ಬಗ್ಗೆ ರೈತರಿಗೆ ಸರಿಯಾದ ಮಾಹಿತಿ ಕೃಷಿ ಇಲಾಖೆಯಿಂದ ನೀಡಬೇಕೆಂದು ಸೂಚನೆ ಬಂದಿದೆ ಎಂದರು. ಇದನ್ನೂ ಓದಿ:ಹೆರಿಗೆ ವೇಳೆ ಸಾವನ್ನಪ್ಪಿದ ಪತ್ನಿಯನ್ನು ನೆನೆದು ವೇದಿಕೆಯಲ್ಲೇ ಅಪರ ಜಿಲ್ಲಾಧಿಕಾರಿ ಕಣ್ಣೀರು

    ಅನಾಮಧೇಯ ಬಿತ್ತನೆ ಬೀಜದ ಪೊಟ್ಟಣಗಳನ್ನು ರೈತರ ಮನೆ ಬಾಗಿಲಿಗೆ ತಲುಪಿಸುವಂತಹ ಕೆಲ ಕುತಂತ್ರಗಳು ನಡೆಯುತ್ತಿದೆ. ಬಿತ್ತನೆ ಬೀಜಗಳ ಪೊಟ್ಟಣಗಳಲ್ಲಿ ಯಾವುದೇ ಹೆಸರು ಹಾಗೂ ಮಾಹಿತಿ ಇಲ್ಲದ ಬೀಜಗಳನ್ನು ರೈತರು ಖರೀದಿಸಬಾರದು. ಈ ಬೀಜಗಳು ವಿಷಕಾರಿಯಾಗಿದ್ದು, ಭೂಮಿಯ ಫಲವತ್ತತೆಯನ್ನು ನಾಶ ಮಾಡುವ ಅಂಶಗಳು ಇದರಲ್ಲಿ ಇದೆ. ಹಾಗಾಗಿ ತಮ್ಮ ಮನೆ ಬಾಗಿಲಿಗೆ ಇಂತಹ ಬೀಜಗಳು ಬಂದಲ್ಲಿ ಅದನ್ನು ಜಿಲ್ಲೆಯ ರೈತರು ಸ್ವೀಕರಿಸದೆ ವಾಪಾಸ್ ಕಳುಹಿಸಬೇಕು ಮತ್ತು ತಕ್ಷಣವೇ ಸಮೀಪದ ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳಿಗೆ ಅಥವಾ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಮನವಿ ಮಾಡಿದ್ದಾರೆ.