Tag: former vice president

  • ಹಳೆ ದ್ವೇಷ – ಗ್ರಾ.ಪಂ ಮಾಜಿ ಉಪಾಧ್ಯಕ್ಷನ ಕತ್ತು ಕಡಿದು ಹತ್ಯೆ

    ಹಳೆ ದ್ವೇಷ – ಗ್ರಾ.ಪಂ ಮಾಜಿ ಉಪಾಧ್ಯಕ್ಷನ ಕತ್ತು ಕಡಿದು ಹತ್ಯೆ

    ರಾಮನಗರ: ಬೈಕ್‍ನಲ್ಲಿ ತೆರಳುತ್ತಿದ್ದ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷನ ಬೈಕಿಗೆ ಕಾರಿನಿಂದ ಡಿಕ್ಕಿ ಹೊಡೆದು, ಬಳಿಕ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ರಾಮನಗರ ತಾಲೂಕಿನ ಜಾಲಮಂಗಲ ಸಮೀಪದ ನಾಗರಕಲ್ಲುದೊಡ್ಡಿ ಗ್ರಾಮದ ಬಳಿ ನಡೆದಿದೆ.

    ರಾಮನಗರ ತಾಲೂಕಿನ ಜಾಲಮಂಗಲ ಗ್ರಾಮದ ನಿವಾಸಿ ಮಾಜಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಶ್ರೀಧರ್ (37) ಕೊಲೆಯಾದ ದುರ್ದೈವಿ. ಕೊಲೆಯಾದ ಶ್ರೀಧರ್ ತನ್ನ ಸ್ನೇಹಿತ ಮಧು ಜೊತೆ ಬೈಕ್‍ನಲ್ಲಿ ರಾಮನಗರಕ್ಕೆ ತೆರಳುತ್ತಿದ್ದ ಈ ವೇಳೆ ಹಿಂಬದಿಯಿಂದ ಬಂದ ಇಂಡಿಕಾ ಕಾರ್ ಡಿಕ್ಕಿ ಹೊಡೆದಿದೆ. ಬೈಕ್‍ನಿಂದ ಕೆಳಗೆ ಬಿದ್ದ ಶ್ರೀಧರ್ ಅನ್ನು ಇಂಡಿಕಾ ಕಾರಿನಲ್ಲಿದ್ದ ನಾಲ್ಕೈದು ಜನ ದುಷ್ಕರ್ಮಿಗಳು ಅಟ್ಟಾಡಿಸಿಕೊಂಡು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಶ್ರೀಧರ್ ನ ಜೊತೆಗಿದ್ದ ಮಧು ಎಂಬಾತ ದುಷ್ಕರ್ಮಿಗಳಿಂದ ಪರಾರಿಯಾಗಿ ಗಾಯಗೊಂಡಿದ್ದಾನೆ.

    ಜೆಡಿಎಸ್ ಪಕ್ಷದಲ್ಲಿದ್ದ ಶ್ರೀಧರ್ ಕಳೆದ 2016 ರಲ್ಲಿ ಜಾಲಮಂಗಲ ಗ್ರಾಮ ಪಂಚಾಯಿತಿಯ ಸದಸ್ಯನಾಗಿದ್ದ. ಜೊತೆಗೆ ಕಾಂಗ್ರೆಸ್‍ನ ದತ್ತಾತ್ರೇಯ ಎಂಬಾತನನ್ನು ತನ್ನ ಸಂಗಡಿಗರ ಜೊತೆ ಸೇರಿ ಕೊಲೆ ಮಾಡಿದ್ದ. ಈ ಸಂಬಂಧ ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಜೈಲಿಗೆ ಹೋಗಿ 3 ತಿಂಗಳ ಹಿಂದೆ ಜೈಲಿನಿಂದ ಹೊರಗೆ ಬಂದಿದ್ದ.

    ಗ್ರಾಮ ಪಂಚಾಯತ್‍ನ ಉಪಾಧ್ಯಕ್ಷನಾದ ಬಳಿಕ ಮಾಜಿ ಶಾಸಕ ಎಚ್‍ಸಿ ಬಾಲಕೃಷ್ಣ ಜೊತೆಗೆ ಜೆಡಿಎಸ್ ತೊರೆದು ಕಾಂಗ್ರೆಸ್‍ಗೆ ಸೇರ್ಪಡೆಯಾಗಿದ್ದ. ಗ್ರಾಮ ಪಂಚಾಯತ್‍ನ ಅನುದಾನಗಳನ್ನು ಬಳಸಿಕೊಂಡು ಪಂಚಾಯಿತಿ ವ್ಯಾಪ್ತಿಯಲ್ಲಿ ಅನೇಕ ನರೇಗಾ ಕಾಮಗಾರಿಗಳನ್ನು ಮಾಡಿಸುತ್ತಿದ್ದ. ದತ್ತಾತ್ರೇಯ ಕೊಲೆಯ ಹಳೆಯ ದ್ವೇಷ ಹಾಗೂ ರಾಜಕೀಯ ವೈಷಮ್ಯದಿಂದಲೇ ಶ್ರೀಧರ್ ನನ್ನ ಕೊಲೆ ಮಾಡಲಾಗಿದೆ ಎನ್ನಲಾಗಿದೆ.

    ಅಲ್ಲದೇ ಘಟನೆ ನಡೆದ ವೇಳೆ ಶ್ರೀಧರ್ ನ ಜೊತೆಗಿದ್ದ ಮಧು ಸಹ ಕೊಲೆಯಲ್ಲಿ ಭಾಗಿಯಾಗಿದ್ದು, ಶ್ರೀಧರ್‍ನ ಚಲನವಲನಗಳನ್ನ ದುಷ್ಕರ್ಮಿಗಳಿಗೆ ನೀಡಿದ್ದಾನೆ. ಕೊಲೆಗೆ ಸ್ಕೆಚ್ ಹಾಕಿರುವುದು ಎರಡು ದಿನಗಳ ಹಿಂದೆಯೇ ತಿಳಿದಿತ್ತು, ಆದರೆ ಶ್ರೀಧರ್ ಗೆ ತಿಳಿಸುವ ವೇಳೆಗೆ ಆತನನ್ನ ಕೊಲೆ ಮಾಡಲಾಗಿದೆ ಎಂದು ಶ್ರೀಧರ್ ನ ಸೋದರ ರಾಜು ಆರೋಪಿಸಿದ್ದಾರೆ.

    ಈ ಸಂಬಂಧ ರಾಮನಗರ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದು, ಕೊಲೆಗಾರರಿಗಾಗಿ ಬಲೆ ಬೀಸಿದ್ದಾರೆ.

  • ಭಾರತದಲ್ಲಿ ಮಾಲ್ಡೀವ್ಸ್ ಮಾಜಿ ಉಪಾಧ್ಯಕ್ಷ ಅರೆಸ್ಟ್

    ಭಾರತದಲ್ಲಿ ಮಾಲ್ಡೀವ್ಸ್ ಮಾಜಿ ಉಪಾಧ್ಯಕ್ಷ ಅರೆಸ್ಟ್

    ಚೆನ್ನೈ: ಮಾಲ್ಡೀವ್ಸ್‍ನ ಮಾಜಿ ಉಪಾಧ್ಯಕ್ಷ ಅಹ್ಮದ್ ಆದೀಬ್ ಅಬ್ದುಲ್ ಗಫೂರ್ ಅವರನ್ನು ಅಕ್ರಮವಾಗಿ ದೇಶವನ್ನು ಪ್ರವೇಶಿಸಲು ಯತ್ನಿಸಿದ ಆರೋಪದ ಮೇಲೆ ಭಾರತೀಯ ಗುಪ್ತಚರ ಇಲಾಖೆ (ಐಬಿ) ಅಧಿಕಾರಿಗಳು ಇಂದು ತಮಿಳುನಾಡಿನ ತೂತುಕುಡಿಯಲ್ಲಿ ಬಂಧಿಸಿದ್ದಾರೆ.

    ಅಹ್ಮದ್ ಆದೀಬ್ ಅಬ್ದುಲ್ ಗಫೂರ್ ಅವರು ಒಂದು ಬೋಟಿನಲ್ಲಿ ಅ ಬೋಟಿನ ಸಿಬ್ಬಂದಿಯಂತೆ ನಟಿಸಿ ಭಾರತಕ್ಕೆ ಅಕ್ರಮವಾಗಿ ಪ್ರವೇಶ ಮಾಡಲು ಯತ್ನಿಸಿದಾಗ ಅವರನ್ನು ಗುಪ್ತಚಾರ ಇಲಾಖೆಯ ಅಧಿಕಾರಿಗಳು ಬಂಧಿಸಿದ್ದಾರೆ.

    ಈ ವಿಚಾರವಾಗಿ ಮಾತನಾಡಿರುವ ಗುಪ್ತಚರ ಇಲಾಖೆ ಅಧಿಕಾರಿಗಳು ಅವರು ಬಳಿ ಯಾವುದೇ ಪಾಸ್ ಪೋರ್ಟ್ ಇರಲಿಲ್ಲ ಮತ್ತು ಅವರು ಮಾಲ್ಡೀವ್ಸ್ ನ ರಾಜಕಾರಣಿಯಾಗಿ ಏಕೆ ಭಾರತಕ್ಕೆ ಅನಧಿಕೃತವಾಗಿ ಪ್ರವೇಶ ಮಾಡಲು ಪ್ರಯತ್ನ ಮಾಡುತ್ತಿದ್ದಾರೆ ಎಂದು ನಾವು ತನಿಖೆ ಮಾಡುತ್ತಿದ್ದೇವೆ. ಮಾಲ್ಡೀವ್ಸ್ ನ ಮಾಜಿ ಉಪಾಧ್ಯಕ್ಷರಾಗಿರುವ ಕಾರಣ ಅವರನ್ನು ಬಂಧಿಸಿರುವ ಮಾಹಿತಿಯನ್ನು ಭಾರತೀಯ ವಿದೇಶಾಂಗ ಸಚಿವಾಲಯಕ್ಕೆ ವರದಿ ನೀಡಿದ್ದೇವೆ ಎಂದು ತಿಳಿಸಿದ್ದಾರೆ.

    ಈ ಕುರಿತು ಮಾತನಾಡಿದ ವಿದೇಶಾಂಗ ಇಲಾಖೆಯ ವಕ್ತಾರ ರವೀಶ್ ಕುಮಾರ್, ನಾವು ನಮಗೆ ಸಿಕ್ಕಿರುವ ವರದಿಗಳ ಸತ್ಯಾಸತ್ಯತೆಯನ್ನು ಕಂಡುಹಿಡಿಯಲು ಪ್ರಯತ್ನಿಸುತ್ತಿದ್ದೇವೆ. ಇದರ ಜೊತೆಗೆ ನಾವು ಮಾಲ್ಡೀವ್ಸ್ ಸರ್ಕಾರವನ್ನು ಸಂಪರ್ಕಿಸಿ ಈ ವರದಿಗಳು ನಿಜವೇ ಎಂದು ತಿಳಿಯಲು ಪ್ರಯತ್ನ ಮಾಡುತ್ತೇವೆ ಎಂದು ಹೇಳಿದ್ದಾರೆ.

    ಅಹ್ಮದ್ ಆದೀಬ್ ಅಬ್ದುಲ್ ಗಫೂರ್ ವಿರುದ್ಧ ಮಾಲ್ಡೀವ್ಸ್ ನ್ಯಾಯಾಲಯಗಳಲ್ಲಿ ಹಲವಾರು ಪ್ರಕರಣಗಳು ಇದ್ದು, ಅಲ್ಲಿನ ಸರ್ಕಾರ ಅವರ ಪಾಸ್ ಪೋರ್ಟ್ ರದ್ದು ಮಾಡಿದೆ. ಹೀಗಾಗಿ ದೇಶ ಬಿಟ್ಟು ಭಾರತಕ್ಕೆ ಬೋಟ್ ಮೂಲಕ ಅನಧಿಕೃತವಾಗಿ ಪ್ರವೇಶ ಮಾಡಲು ಯತ್ನಿಸಿದ್ದರು ಎಂದು ವರದಿಯಾಗಿದೆ.

    ಅಬ್ದುಲ್ ಗಫೂರ್ ಮಾಲ್ಡೀವ್ಸ್ ಮಾರ್ಕೆಟಿಂಗ್ ಮತ್ತು ಪಬ್ಲಿಕ್ ರಿಲೇಶನ್ಸ್ ಕಾರ್ಪೊರೇಷನ್ (ಎಮ್‍.ಎಂ.ಪಿ.ಆರ್‍.ಸಿ) ಗೆ ಸಂಬಂಧಿಸಿದ ಪ್ರಕರಣವೂ ಸೇರಿದಂತೆ ಅನೇಕ ಕ್ರಿಮಿನಲ್ ಪ್ರಕರಣ ದಾಖಲಾಗಿತ್ತು. ಈ ಎಲ್ಲಾ ಪ್ರಕರಣಗಳಿಗೆ ಸಂಬಂಧಿಸಿದಂತೆ ಗಫೂರ್ ಅವರನ್ನು ಮಾಲ್ಡೀವ್ಸ್ ನ ಭ್ರಷ್ಟಾಚಾರ ನಿಗ್ರಹ ದಳ (ಎಸಿಸಿ) ಬುಧವಾರ ವಿಚಾರಣೆಗೆ ಕರೆದಿತ್ತು. ಆದರೆ ಅವರು ತಪ್ಪಿಸಿಕೊಂಡು ಭಾರತಕ್ಕೆ ಬಂದಿದ್ದಾರೆ.

  • ಮಾಜಿ ಉಪರಾಷ್ಟ್ರಪತಿಯವರ ಕುಟುಂಬಕ್ಕೆ ಪೊಲೀಸರಿಂದ ಕಿರುಕುಳ?

    ಮಾಜಿ ಉಪರಾಷ್ಟ್ರಪತಿಯವರ ಕುಟುಂಬಕ್ಕೆ ಪೊಲೀಸರಿಂದ ಕಿರುಕುಳ?

    ಬೆಂಗಳೂರು: ನಗರದ ವೈಟ್ ಫೀಲ್ಡ್ ಪೊಲೀಸರು ಮಾಜಿ ಉಪರಾಷ್ಟ್ರಪತಿಯವರ ಕುಟುಂಬಕ್ಕೆ ಕಿರುಕುಳ ನೀಡುತ್ತಿದ್ದಾರೆ ಎಂಬ ಆರೋಪವೊಂದು ಕೇಳಿಬಂದಿದೆ.

    ಎಸಿಪಿ ಸುಧಾಮ ನಾಯಕ್, ಸಬ್ ಇನ್ಸಪೆಕ್ಟರ್ ಸೋಮಶೇಖರ್ ವಿರುದ್ಧ ಈ ಆರೋಪ ವ್ಯಕ್ತವಾಗಿದ್ದು, ಈ ಕುರಿತು ಮಾಜಿ ಉಪರಾಷ್ಟ್ರಪತಿ ಬಿ.ಡಿ ಜತ್ತಿ ಸೊಸೆ ಲಕ್ಷ್ಮೀ ಜತ್ತಿ ಈಗಾಗಲೇ ಹೆಚ್ಚುವರಿ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್‍ಗೆ ಮಾಹಿತಿ ನೀಡಿದ್ದಾರೆ.

    ಮಾಜಿ ಉಪರಾಷ್ಟ್ರಪತಿ ಬಿ.ಡಿ ಜತ್ತಿ ಸೊಸೆ ಲಕ್ಷ್ಮೀ ಜತ್ತಿ ಅವರಿಗೆ ವಿಲ್ಲಾ ಮಾಲೀಕರು ಕಿರುಕುಳ ನೀಡುತ್ತಿದ್ದು, ಈ ಕುರಿತು ಲಕ್ಷ್ಮಿ ಅವರು ಪೊಲೀಸರಿಗೆ ದೂರು ನಿಡಿದ್ದಾರೆ. ಆದ್ರೆ ಪೊಲೀಸರು ವಿಲ್ಲಾ ಓನರ್ ಗಳ ವಿರುದ್ಧ ಎಫ್‍ಐಆರ್ ದಾಖಲಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಮಾತ್ರವಲ್ಲದೇ ಎಫ್‍ಐಆರ್ ದಾಖಲಿಸಿಕೊಳ್ಳಬೇಕಾದ್ರೆ ಹಣ ನೀಡಬೇಕು ಅಂತ ವೈಟ್‍ಫೀಲ್ಡ್ ಪೊಲೀಸ್ ಠಾಣೆಯ ಎಸಿಪಿ, ಎಸ್‍ಐ ಬೇಡಿಕೆಯಿಟ್ಟಿದ್ದಾರೆ ಅಂತ ಅವರು ಆರೋಪಿಸಿದ್ದಾರೆ.

    ಈಗಾಗಲೇ ಎಸಿಪಿ ಮೂರನೇ ವ್ಯಕ್ತಿಯಿಂದ 5 ಲಕ್ಷ ಹಾಗೂ ಸಬ್ ಇನ್ಸಪೆಕ್ಟರ್ ಗೆ 2 ಲಕ್ಷ ನೀಡಿದರೂ ಮತ್ತೆ ದುಡ್ಡಿಗಾಗಿ ಕಿರುಕುಳ ನೀಡುತ್ತಿದ್ದಾರೆ. ವೈಟ್ ಫೀಲ್ಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ವಿಲ್ಲಾ ವಿಚಾರವಾಗಿ ಜತ್ತಿ ಕುಟುಂಬಕ್ಕೆ ಮತ್ತು ವಿಲ್ಲಾ ಓನರ್ ಗಳ ನಡುವೆ ಜಗಳ ನಡೆಯುತ್ತಿತ್ತು. ಇದೇ ವಿಚಾರದ ಜಗಳ ಕೂಡ ಕೋರ್ಟ್ ಮೆಟ್ಟಿಲಲ್ಲೂ ಇದೆ. ವಿಲ್ಲಾ ಓನರ್ ಗಳು ದೂರು ನೀಡಿದರೆ ಎಫ್‍ಐಆರ್ ದಾಖಲಿಸಿ ನಮ್ಮನ್ನ ತನಿಖೆ ಮಾಡ್ತಾರೆ. ನಾವು ದೂರು ನೀಡಿದರೆ ಎನ್ ಸಿ ಆರ್ ಹಾಕಿ ಕಳಿಸುತ್ತಾರೆ. ಆದರೂ ವಿಲ್ಲಾ ಓನರ್ ಗಳಿಂದಾಗುವ ಕಿರುಕುಳದ ವಿರುದ್ಧ ಪೊಲೀಸರು ಎಫ್ ಐ ಆರ್ ದಾಖಲಿಸಲು ಹಿಂದೇಟು ಹಾಕುತ್ತಿದ್ದಾರೆ. ಅವರ ವಿರುದ್ಧ ಎಫ್‍ಐಆರ್ ದಾಖಲಿಸಿಕೊಳ್ಳಬೇಕಾದ್ರೆ ಹಣ ನೀಡಬೇಕು. ಅಷ್ಟೇ ಅಲ್ಲದೇ ತಮ್ಮ ವಿಲ್ಲಾ ಗಳಲ್ಲಿ ಒಂದು ವಿಲ್ಲಾ ತನಗೆ ನೀಡಬೇಕು ಅಂತ . ಎಸಿಪಿ ಸುಧಾಮನಾಯಕ ಬೇಡಿಕೆ ಇಟ್ಟಿರುವುದಾಗಿ ಲಕ್ಷ್ಮೀ ಜತ್ತಿ ಅವರು ಬೆಂಗಳೂರು ನಗರ ಹೆಚ್ಚುವರಿ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಅವರಿಗೆ ದೂರು ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv