Tag: Former US President

  • ಪೋರ್ನ್ ಸ್ಟಾರ್‌ಗೆ ಹಣ – ಟ್ರಂಪ್ ವಿರುದ್ಧ ದೋಷಾರೋಪಣೆ

    ಪೋರ್ನ್ ಸ್ಟಾರ್‌ಗೆ ಹಣ – ಟ್ರಂಪ್ ವಿರುದ್ಧ ದೋಷಾರೋಪಣೆ

    – ಬಂಧನದ ಭೀತಿ
    – ಕ್ರಿಮಿನಲ್ ಆರೋಪ ಹೊತ್ತಿರೋ ಮೊದಲ ಅಮೆರಿಕ ಮಾಜಿ ಅಧ್ಯಕ್ಷ

    ವಾಷಿಂಗ್ಟನ್: 2016ರ ಚುನಾವಣಾ ಪ್ರಚಾರದ ವೇಳೆ ನೀಲಿಚಿತ್ರ ತಾರೆಗೆ (Porn Star) ಡೊನಾಲ್ಡ್‌ ಟ್ರಂಪ್‌ (Donald Trump) ಹಣ ನೀಡಿರುವ ಕುರಿತು ನ್ಯೂಯಾರ್ಕ್ ಗ್ರ್ಯಾಂಡ್ ಜ್ಯೂರಿ ಗುರುವಾರ ದೋಷಾರೋಪಣೆ ಮಾಡಿದೆ. ಇದೀಗ ಟ್ರಂಪ್ ಕ್ರಿಮಿನಲ್ ಆರೋಪಗಳನ್ನು ಎದುರಿಸುತ್ತಿರುವ ಮೊದಲ ಅಮೆರಿಕದ ಮಾಜಿ ಅಧ್ಯಕ್ಷ (Former US President) ಎಂಬ ಅಪಖ್ಯಾತಿಗೆ ಒಳಗಾಗಿದ್ದಾರೆ.

    ತಮ್ಮ ವಿರುದ್ಧದ ಆರೋಪಗಳನ್ನು ತಿರಸ್ಕರಿಸಿರುವ ಡೊನಾಲ್ಡ್ ಟ್ರಂಪ್, ನ್ಯೂಯಾರ್ಕ್ ಗ್ರ್ಯಾಂಡ್ ಜ್ಯೂರಿಯ ತೀರ್ಪನ್ನು ತಮ್ಮ ಅಧ್ಯಕ್ಷೀಯ ಚುನಾವಣಾ ಪ್ರಚಾರದ ತಂತ್ರದ ಭಾಗವಾಗಿ ಬಳಸುತ್ತಿದೆ. ಅಲ್ಲದೇ ಈಗಿನ ಅಧ್ಯಕ್ಷ ಜೋ ಬೈಡನ್ ಈ ತಪ್ಪಿಗಾಗಿ ಭಾರೀ ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

    ಏನಿದು ಪ್ರಕರಣ?
    ವರದಿಗಳ ಪ್ರಕಾರ ಟ್ರಂಪ್ ಅವರು ಈ ಹಿಂದೆ ಪೋರ್ನ್ ಸ್ಟಾರ್ ಸ್ಟಾರ್ಮಿ ಡೇನಿಯಲ್ (ನಿಜವಾದ ಹೆಸರು ಸ್ಟೆಫನಿ ಕ್ಲಿಫರ್ಡ್) ಅವರೊಂದಿಗೆ ಸಂಬಂಧ ಹೊಂದಿದ್ದರು ಎನ್ನಲಾಗಿದೆ. 2016ರ ಚುನಾವಣೆ ವೇಳೆ ಈ ಸಂಬಂಧ ಬಹಿರಂಗಪಡಿಸುವುದನ್ನು ತಡೆಯಲು ಟ್ರಂಪ್ ಆಕೆಗೆ 1,30,000 ಡಾಲರ್ (ಸುಮಾರು 1,07,00,000 ರೂ.) ನೀಡಿದ್ದರು ಎಂಬುದು ತಿಳಿದುಬಂದಿದೆ. ಇದನ್ನೂ ಓದಿ: ಪಾಕಿಸ್ತಾನದಲ್ಲಿ ಹಿಂದೂ ವೈದ್ಯನ ಗುಂಡಿಕ್ಕಿ ಹತ್ಯೆ – ತಿಂಗಳಲ್ಲಿ 2ನೇ ಘಟನೆ

    ಬಂಧನದ ಬಗ್ಗೆ ಭಾರೀ ಚರ್ಚೆ:
    ಇದೀಗ ಟ್ರಂಪ್ ಮುಂಬರುವ ಮಂಗಳವಾರ ಶರಣಾಗುವ ಸಾಧ್ಯತೆಯಿದೆ. ಆದರೆ ಅವರ ಬಂಧನ ಬಗೆಗಿನ ಚರ್ಚೆಯೇ ಹೆಚ್ಚು ಸದ್ದು ಮಾಡುತ್ತಿದೆ. ಏಕೆಂದರೆ ಕ್ರಿಮಿನಲ್ ಆರೋಪಗಳನ್ನು ಎದುರಿಸುತ್ತಿರುವ ಅಮೆರಿಕದ ಮೊದಲ ಮಾಜಿ ಅಧ್ಯಕ್ಷ ಇವರಾಗಿದ್ದಾರೆ. ಅಪರಾಧ ಪ್ರಕರಣಗಳ ಬಂಧನ ಪ್ರಕ್ರಿಯೆಯೇ ಟ್ರಂಪ್ ಅವರಿಗೂ ಅನ್ವಯಿಸಲಿದೆಯೇ ಎಂಬುದು ಈಗ ಭಾರೀ ಚರ್ಚೆಗೆ ಗ್ರಾಸವಾಗಿದೆ.

    ಒಂದುವೇಳೆ ಟ್ರಂಪ್ ಬಂಧನವಾದರೆ ಪೊಲೀಸರು ಅವರಿಗೆ ಮೊದಲು ಕೈಕೊಳ ತೊಡಿಸಲಿದ್ದಾರೆ. ನಂತರ ಅವರ ಬೆರಳಚ್ಚು ಪಡೆದು ಸಾಮಾನ್ಯ ಅಪರಾಧಿಯಂತೆಯೇ ಛಾಯಾಚಿತ್ರವನ್ನೂ ತೆಗೆಯಲಿದ್ದಾರೆ. ಅಪರಾಧ ಆರೋಪದ ಮೇಲೆ ಬಂಧಿತರಾಗುವವರಿಗೆ ಕೈಕೊಳ ಹಾಕುವುದು ಮಾನದಂಡ. ಮಾಜಿ ಅಧ್ಯಕ್ಷರಿಗೆ ಇದರ ವಿನಾಯಿತಿ ನೀಡಲಾಗುತ್ತದೆಯೇ ಎಂಬುದು ಅಸ್ಪಷ್ಟವಾಗಿದೆ. ಇದನ್ನೂ ಓದಿ: ಇಂದೋರ್ ದೇವಾಲಯ ದುರಂತ – ಸಾವಿನ ಸಂಖ್ಯೆ 35ಕ್ಕೆ ಏರಿಕೆ

  • ಅಮೇರಿಕಾದ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಆಸ್ಪತ್ರೆಗೆ ದಾಖಲು

    ಅಮೇರಿಕಾದ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಆಸ್ಪತ್ರೆಗೆ ದಾಖಲು

    ವಾಷಿಂಗ್ಟನ್: ಅಮೆರಿಕದ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್(75) ಅವರನ್ನು ರಕ್ತ ಸೋಂಕಿನ ಕಾರಣದಿಂದ ಕ್ಯಾಲಿಫೋರ್ನಿಯಾದ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

     Bill Clinton

    ಕ್ಯಾಲಿಫೋರ್ನಿಯಾದ ಇರ್ವಿನ್ ಮೆಡಿಕಲ್ ಸೆಂಟರ್‌ನಲ್ಲಿ ಬಿಲ್ ಕ್ಲಿಂಟನ್ ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಹೇಳುವ ಪ್ರಕಾರ, ಕ್ಲಿಂಟನ್ ಅವರನ್ನು ತೀವ್ರ ನಿಗಾ ಘಟಕದಲ್ಲಿಟ್ಟಿದ್ದು, ಪರ್ಸನಲ್ ಆಗಿ ಪ್ರಾಥಮಿಕ ಚಿಕಿತ್ಸೆ ನೀಡಲಾಗುತ್ತಿದ್ದು, ಯಾವುದೇ ಉಸಿರಾಟದ ಸಮಸ್ಯೆಗಳಿಲ್ಲ ಎಂದು ತಿಳಿಸಿದ್ದಾರೆ. ಅಲ್ಲದೇ ಬಿಲ್ ಕ್ಲಿಂಟನ್ ಅವರನ್ನು ಕೋವಿಡ್-19 ಹೊರತಾದ ಆರೋಗ್ಯ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಇದನ್ನೂ ಓದಿ: 85 ವರ್ಷದ ಅಜ್ಜಿಗೆ ಒಲಿದುಬಂತು ಪಂಚಾಯತ್ ಅಧ್ಯಕ್ಷೆ ಸ್ಥಾನ

    ಈ ಕುರಿತಂತೆ ಕ್ಲಿಂಟನ್ ವಕ್ತಾರ ಏಂಜೆಲ್ ಯುರೇನಾ ಟ್ವಿಟ್ಟರ್‌ನಲ್ಲಿ, ಕ್ಲಿಂಟನ್ ಅವರ ಮನಸ್ಥಿತಿ ಉತ್ತಮವಾಗಿದೆ. ಅವರಿ ಆರೈಕೆ ಅತ್ಯುತ್ತಮವಾಗಿ ಆರೈಕೆ ಮಾಡುತ್ತಿರುವ ವೈದ್ಯರು, ನರ್ಸ್ ಹಾಗೂ ಸಿಬ್ಬಂದಿಗೆ ಧನ್ಯವಾದ ತಿಳಿಸಿದ್ದಾರೆ. ಇದನ್ನೂ ಓದಿ: ಸೋನಿಯಾ ಗಾಂಧಿ ನಾಯಕತ್ವದಲ್ಲಿ ಸಂಪೂರ್ಣ ನಂಬಿಕೆ ಇದೆ: ಸಿಧು

    ಆಸ್ಪತ್ರೆಯ ವೈದ್ಯಾಧಿಕಾರಿಗಳಾದ ಡಾ.ಅಲ್ಪೇಶ್ ಅಮೀನ್ ಮತ್ತು ಡಾ. ಲಿಸಾ ಬಾರ್ಡಾಕ್ ಅವರು, ಕ್ಲಿಂಟನ್ ಅವರನ್ನು “ಆರೋಗ್ಯ ಮೇಲ್ವಿಚಾರಣೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಮತ್ತು ಆರೋಗ್ಯವಾಗಿದ್ದಾರೆ. “ಎರಡು ದಿನಗಳ ಚಿಕಿತ್ಸೆಯ ನಂತರ, ಅವರ ಬಿಳಿ ರಕ್ತ ಕಣಗಳ ಎಣಿಕೆ ಕಡಿಮೆಯಾಗುತ್ತಿದೆ ಮತ್ತು ಅವರು ಚಿಕಿತ್ಸೆಗೆ ಉತ್ತಮವಾಗಿ ಪ್ರತಿಕ್ರಿಯಿಸುತ್ತಿದ್ದಾರೆ.” ಆದಷ್ಟು ಬೇಗ ಅವರು ಗುಣಮುಖರಾಗಿ ಮನೆಗೆ ಹಿಂದಿರುಗುತ್ತಾರೆ ಎಂದು ನಾವು ಭಾವಿಸುತ್ತೇನೆ ಎಂದು ಹೇಳಿದ್ದಾರೆ.