Tag: former Prime Minister

  • ಕುಡಿಯಲು ನೀರು ಕೊಟ್ಟಿದ್ದಾರೆ ಎಂದು ಸಂಭ್ರಮಿಸಲು ಸಾಧ್ಯವಿಲ್ಲ: ಎಚ್‍ಡಿಡಿ

    ಕುಡಿಯಲು ನೀರು ಕೊಟ್ಟಿದ್ದಾರೆ ಎಂದು ಸಂಭ್ರಮಿಸಲು ಸಾಧ್ಯವಿಲ್ಲ: ಎಚ್‍ಡಿಡಿ

    ನವದೆಹಲಿ: ಕುಡಿಯಲು ನೀರು ಕೊಟ್ಟಿದ್ದಾರೆ ಎಂದು ಸಂಭ್ರಮಿಸಲು ಸಾಧ್ಯವಿಲ್ಲ, ನಮ್ಮ ಪಾಲಿನ ನೀರಿನ ಮೇಲೆ ನಮಗೆ ಸಂಪೂರ್ಣವಾದ ಹಕ್ಕು ಇದೆ ಎಂದು ಮಾಜಿ ಪ್ರಧಾನಿ ದೇವೇಗೌಡ ಹೇಳಿಕೆ ನೀಡಿದ್ದಾರೆ.

    ಮಹದಾಯಿ ನ್ಯಾಯಾಧಿಕರಣದ ಐತೀರ್ಪು ಕುರಿತು ಮಾತನಾಡಿದ ಅವರು, ತೀರ್ಪನ್ನು ನಾನು ಅಧ್ಯಯನ ಮಾಡಲು ಸಾಧ್ಯವಾಗಿಲ್ಲ. ಬೆಂಗಳೂರಿಗೆ ತೆರಳಿದ ಮೇಲೆ ಸಂಕೀಪ್ತವಾಗಿ ಅಧ್ಯಯನ ಮಾಡುತ್ತೇನೆ. ಈಗ ಸದ್ಯ ಕುಡಿಯುವ ನೀರು ಕೊಟ್ಟಿದ್ದಾರೆಂದು ಸಂಭ್ರಮಿಸಲು ಸಾಧ್ಯವಿಲ್ಲ, ನಮ್ಮ ಪಾಲಿನ ನೀರಿನ ಮೇಲೆ ಸಂಪೂರ್ಣವಾಗಿ ಹಕ್ಕು ಚಲಾಯಿಸುವ ಅಧಿಕಾರವನ್ನು ನಾವು ಹೊಂದಿದ್ದೇವೆ ಎಂದು ತಿಳಿಸಿದರು.

    ಅಲ್ಲದೇ ಗೋವಾ ಸುಪ್ರೀಂ ಕೋರ್ಟ್ ಗೆ ಹೋಗುವ ಸಾಧ್ಯತೆ ಇದ್ದು, ನಾವು ಕೂಡ ಮುಂದಿನ ಕಾನೂನು ಹೋರಾಟ ಮಾಡಬೇಕಾಗುತ್ತದೆ. ಈ ಮೊದಲು ಕಾವೇರಿ ವಿಷಯದಲ್ಲೂ ತೀರ್ಪನ್ನು ಓದಿ ಹಿರಿಯ ವಕೀಲ ನಾರೀಮನ್ ಜೊತೆ ಚರ್ಚಿಸಿದ್ದೆ. ತೀರ್ಪಿನ ಅಧ್ಯಯನ ಮಾಡಿದ ನಂತರ ಮುಂದೆ ಯಾವ ಕ್ರಮ ಕೈಗೊಳ್ಳಬೇಕೆಂದು ನಿರ್ಧಾರ ಮಾಡುತ್ತೇನೆ ಎಂದು ಹೇಳಿದರು.

    ಈ ವೇಳೆ ಏರ್ ಶೋ ಸ್ಥಳಾಂತರ ಕುರಿತು ಪ್ರತಿಕ್ರಿಯಿಸಿ, ಬೆಂಗಳೂರಿನಲ್ಲಿ ಏರ್ ಶೋ ಚೆನ್ನಾಗಿ ನಡೆಯುತ್ತಿದ್ದು, ಏರ್ ಶೋ ವಿಶ್ವ ಮಟ್ಟದಲ್ಲಿಯೂ ಹೆಸರುಗಳಿಸಿದೆ. ಕೇಂದ್ರ ಸರ್ಕಾರ ಸರಿಯಾದ ಕಾರಣವನ್ನು ನೀಡದೆ ಸ್ಥಳ ಬದಲಾವಣೆ ಮಾಡುವುದು ಸರಿಯಲ್ಲ. ಈ ಕುರಿತು ಖುದ್ದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಗೆ ಪತ್ರ ಬರೆಯುತ್ತೇನೆ. ಅಲ್ಲದೇ ಕೇಂದ್ರದಲ್ಲಿ ಅನಂತಕುಮಾರ್ ಅವರಂಥ ಹಿರಿಯ ಸಚಿವರಿದ್ದರೂ ಹೀಗಾಗುತ್ತಿದೆ. ಈ ಬಗ್ಗೆ ಇನ್ನೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದನಿಸುತ್ತಿದೆ. ಬೆಂಗಳೂರಿನಲ್ಲಿರುವ ಸೌಲಭ್ಯ ಬೇರೆಕಡೆ ಸಿಗಲು ಸಾಧ್ಯವಿಲ್ಲ. ಹೀಗಾಗಿ ಅಷ್ಟು ಸುಲಭವಾಗಿ ಏರ್ ಶೋ ಸ್ಥಳಾಂತರ ಮಾಡಲು ಸಾಧ್ಯವಿಲ್ಲ ಎಂದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=jzou-8fgwlc

  • ಹುಟ್ಟು ಹಬ್ಬದಂದೇ ನೇತ್ರದಾನ ಪತ್ರಕ್ಕೆ ಸಹಿ ಹಾಕಿದ ಪ್ರಜ್ವಲ್ ರೇವಣ್ಣ

    ಹುಟ್ಟು ಹಬ್ಬದಂದೇ ನೇತ್ರದಾನ ಪತ್ರಕ್ಕೆ ಸಹಿ ಹಾಕಿದ ಪ್ರಜ್ವಲ್ ರೇವಣ್ಣ

    ಹಾಸನ: 28 ನೇ ವರ್ಷದ ಹುಟ್ಟುಹಬ್ಬ ಅಚರಿಸಿಕೊಳ್ಳುತ್ತಿರುವ ಜೆಡಿಎಸ್ ಪಕ್ಷದ ಯುವ ಮುಖಂಡ ಹಾಗೂ ಸಚಿವ ಎಚ್‍ಡಿ ರೇವಣ್ಣ ಪುತ್ರ ತಮ್ಮ ಜನ್ಮದಿನದ ವಿಶೇಷವಾಗಿ ನೇತ್ರದಾನ ಮಾಡಿ ಪತ್ರಕ್ಕೆ ಸಹಿ ಹಾಕಿದ್ದಾರೆ.

    ಜಿಲ್ಲೆ ಹೊಳೆನರಸೀಪುರದಲ್ಲಿ ತಮ್ಮ ನಿವಾಸಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡದ ಪ್ರಜ್ವಲ್ ರೇವಣ್ಣ, ಕುಟುಂಬಸ್ಥರು ಹಾಗೂ ಅಭಿಮಾನಿಗಳೊಂದಿಗೆ ಸಂತಸ ಹಂಚಿಕೊಂಡರು. ಇದೇ ವಿಶೇಷವಾಗಿ ತಮ್ಮ ನೇತ್ರದಾನ ಮಾಡುವ ಪತ್ರಕ್ಕೆ ಸಹಿ ಹಾಕಿದ ಪ್ರಜ್ವಲ್ ಹಲವರಿಗೆ ಆದರ್ಶವಾದರು. ಕಾರ್ಯಕ್ರಮದ ವೇಳೆ ಪುತ್ರನಿಗೆ ಸಚಿವ ರೇವಣ್ಣ ಹಾಗು ಭವಾನಿ ರೇವಣ್ಣ ಶುಭಹಾರೈಸಿದರು.

    ಪ್ರಜ್ವಲ್ ನೇತ್ರದಾನಕ್ಕೆ ಸಹಿ ಹಾಕಿದ ಹಿನ್ನೆಲೆಯಲ್ಲಿ ನೂರಾರು ಅಭಿಮಾನಿಗಳು ಕೂಡ ನೇತ್ರದಾನ ಪತ್ರಕ್ಕೆ ಸಹಿ ಹಾಕಿದರು. ಬಳಿಕ ನಡೆದ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಪ್ರಜ್ವಲ್ ಅಭಿಮಾನಿಗಳು ಹಾಗೂ ಬೆಂಬಲಿಗರೊಂದಿಗೆ ಕೇಕ್ ಕತ್ತರಿಸಿದರು. ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದ ಪಕ್ಷದ ಕಾರ್ಯಕರ್ತರು ತಮ್ಮ ನೆಚ್ಚಿನ ನಾಯಕನಿಗೆ ಶುಭಹಾರೈಸಿದರು.

    ಈ ವೇಳೆ ಮಾತನಾಡಿದ ಪ್ರಜ್ವಲ್ ರೇವಣ್ಣ, ಜನರ ಮಧ್ಯೆ ಇರಲು ನನಗೆ ತುಂಬಾ ಸಂತೋಷವಾಗುತ್ತದೆ. ನನ್ನ ಹುಟ್ಟುಹಬ್ಬಕ್ಕೆ ಶುಭಹಾರೈಕೆ ಮಾಡುತ್ತಿರುವುದಕ್ಕೆ ತುಂಬಾ ಸಂತೋಷವಾಗುತ್ತಿದೆ. ತಮ್ಮ ರಾಜಕೀಯ ಜೀವನ ಕುರಿತು ಪಕ್ಷದ ವರಿಷ್ಠರು ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ಧವಾಗಿರುತ್ತೆನೆ. ಪಕ್ಷ ಸಂಘಟನೆಗಾಗಿ ಹೊಸ ಸಂಕಲ್ಪ ಮಾಡಿಕೊಂಡಿದ್ದೇನೆ. ಪಕ್ಷಕ್ಕಾಗಿ ದುಡಿದಿರುವ ಕಾರ್ಯಕರ್ತರ ಕುಂದು ಕೊರತೆ ವಿಚಾರಿಸುವ ಒಂದು ಅಂಶ ನನ್ನ ಮನಸ್ಸಿನಲ್ಲಿದೆ ಎಂದು ಹೇಳಿದ್ದರು.

    ಇದೇ ವೇಳೆ ಲೋಕಸಭೆಗೆ ಸ್ಪರ್ಧೆ ಕುರಿತು ಮಾತನಾಡಿ, ಈ ಕುರಿತು ಇದುವರೆಗೂ ನಾನು ಯಾರೊಂದಿಗೂ ಮಾತನಾಡಿಲ್ಲ. ಈ ವಿಚಾರದಲ್ಲಿ ಚರ್ಚಿಸಲು ದೇವೇಗೌಡರೊಂದಿಗೂ ಚರ್ಚಿಸುವ ಅವಕಾಶವೂ ಸಿಕ್ಕಿಲ್ಲ. ಯಾವುದೇ ಮಾತುಕತೆ ನಡೆದಿಲ್ಲ. ಮೊದಲು ಪಕ್ಷ ಸಂಘಟನೆಗೆ ನಾನು ತೊಡಗಿಸಿಕೊಂಡಿದ್ದೇನೆ. ನಾನು ಚುನಾವಣೆಗೆ ಹೋಗುವ ಮುನ್ನ ಪಕ್ಷದಲ್ಲಿ ಕೆಳಮಟ್ಟದ ಸಂಘಟನೆ ಅವಶ್ಯಕತೆ ಇದೆ. ಸದ್ಯ ನಾನು ಪಕ್ಷ ಸಂಘಟನೆ ಕುರಿತು ಗಮನಹರಿಸುತ್ತೇನೆ. ಚುನಾವಣೆ ಸ್ಪರ್ಧೆಯ ವಿಚಾರ ದೊಡ್ಡವರಿಗೆ ಬಿಟ್ಟಿದ್ದು. ನನ್ನ ಅವರು ಯಾವುದಕ್ಕೆ ಬಳಸಿಕೊಳ್ಳುತ್ತಾರೆ ಅದಕ್ಕೆ ನಾನು ಸಿದ್ಧವಾಗಿರುತ್ತೇನೆ ಎಂದು ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews

  • ಸ್ಥಳೀಯ ಸಮರಕ್ಕೆ ದೊಡ್ಡಗೌಡರಿಂದ ಮಾಸ್ಟರ್ ಪ್ಲಾನ್

    ಸ್ಥಳೀಯ ಸಮರಕ್ಕೆ ದೊಡ್ಡಗೌಡರಿಂದ ಮಾಸ್ಟರ್ ಪ್ಲಾನ್

    – ಚುನಾವಣೆ ಬಳಿಕ ಅಗತ್ಯ ಬಿದ್ದರೆ ಮೈತ್ರಿ

    ಬೆಂಗಳೂರು: ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿಯನ್ನ ಅಧಿಕಾರದಿಂದ ದೂರ ಇಡಲು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ದೇವೇಗೌಡ ಅವರು ಮಾಸ್ಟರ್ ಪ್ಲಾನ್ ಮಾಡುತ್ತಿದ್ದಾರೆಂದು ಪಕ್ಷದ ಮೂಲಗಳಿಂದ ಪಬ್ಲಿಕ್ ಟಿವಿಗೆ ಮಾಹಿತಿ ಲಭಿಸಿದೆ.

    ಚುನಾವಣೆ ನಂತರ ಸ್ಥಳೀಯ ಸಂಸ್ಥೆಯಲ್ಲಿ ದೋಸ್ತಿಗೆ ದೇವೇಗೌಡರು ಚಿಂತನೆ ನಡೆಸಿದ್ದಾರೆ. ಈ ಮೂಲಕ ಪಕ್ಷ ಉಳಿಸೋದರ ಜೊತೆಗೆ ಬಿಜೆಪಿ ದೂರ ಇಡುವುದಕ್ಕೆ ಭರ್ಜರಿ ಯೋಜನೆ ಹಾಕಿದ್ದಾರಂತೆ. ಮೈಸೂರು ಭಾಗ ಸೇರಿ ಹಲವೆಡೆ ಕಾಂಗ್ರೆಸ್-ಜೆಡಿಎಸ್ ನಡುವೆಯೇ ಫೈಟ್ ಮಾಡಲಿದ್ದು, ಮೈತ್ರಿ ಮಾಡಿಕೊಂಡರೆ ಜೆಡಿಎಸ್ ಭದ್ರಕೋಟೆ ಒಡೆದು ಹೋಗುವ ಆತಂಕ ಎದುರಾಗಿದೆಯಂತೆ.

    ಕಾರ್ಯಕರ್ತರು ಪಕ್ಷ ಬಿಟ್ಟು ಬಿಜೆಪಿ ಕಡೆ ಮುಖ ಮಾಡಬಹುದು ಎಂಬ ಭೀತಿಯಿಂದ ಚುನಾವಣೋತ್ತರ ಮೈತ್ರಿಗೆ ಜೆಡಿಎಸ್ ವರಿಷ್ಠ ಎಚ್‍ಡಿಡಿ ಪ್ಲಾನ್ ಮಾಡಿದ್ದಾರೆ. ಪ್ರತ್ಯೇಕವಾಗಿಯೇ ಚುನಾವಣೆ ಎದರಿಸೋಣ. ಬಳಿಕ ಅಗತ್ಯ ಬಿದ್ದರೆ ಮೈತ್ರಿ ಮಾಡೋಣ. ಇದರಿಂದ ಸರ್ಕಾರಕ್ಕೂ ಡ್ಯಾಮೇಜ್ ಆಗಲ್ಲ. ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಬಹುದು. ಚುನಾವಣೆ ನಂತರ ಮೈತ್ರಿ ಬಗ್ಗೆ ಎಚ್‍ಡಿ ದೇವೇಗೌಡರ ಮಾತಿಗೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಕೂಡ ಸಮ್ಮತಿ ಸೂಚಿಸಿದ್ದಾರೆ ಎನ್ನಲಾಗಿದೆ.

    ಇದೇ ಸ್ಥಳೀಯ ಸಂಸ್ಥೆ, ಲೋಕಸಭೆ ಚುನಾವಣೆ ಮೈತ್ರಿ ವಿಚಾರವಾಗಿ ಇಂದು ಜೆಡಿಎಸ್ ಮಹತ್ವದ ಸಭೆ ನಡೆಸುತ್ತಿದೆ. ಜೆಡಿಎಸ್ ವರಿಷ್ಠ ದೇವೇಗೌಡರ ನೇತೃತ್ವದಲ್ಲಿ ಶಾಸಕರು, ಸಚಿವರ ಸಭೆ ನಡೆಯಲಿದೆ. ಪ್ರಮುಖವಾಗಿ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಹೊಂದಾಣಿಕೆ ಬಗ್ಗೆ ಅಂತಿಮ ನಿರ್ಧಾರವನ್ನ ತೆಗದುಕೊಳ್ಳುವ ಸಾಧ್ಯತೆ ಇದೆ. ಇದಲ್ಲದೆ ಲೋಕಸಭೆ ಚುನಾವಣೆಯಲ್ಲಿ ದೋಸ್ತಿಗೆ ಈಗಾಗಲೇ ಓಕೆ ಅಂದಿರುವ ಜೆಡಿಎಸ್, ಯಾವ ಕ್ಷೇತ್ರದಲ್ಲಿ ಅಭ್ಯರ್ಥಿಗಳನ್ನ ಇಳಿಸಬೇಕು. ಎಷ್ಟು ಸ್ಥಾನವನ್ನು ತಮ್ಮ ಬಳಿ ಇರಿಸಿಕೊಳ್ಳಬೇಕು ಅಂತ ನಿರ್ಧರಿಸಲಿದೆ. ಇದರ ಜೊತೆಗೆ ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನವನ್ನ ಬೇರೆಯವರಿಗೆ ವಹಿಸುವ ಕುರಿತು ಶಾಸಕರು, ಸಚಿವರ ಅಭಿಪ್ರಾಯ ಸಂಗ್ರಹಿಸುವ ಸಾಧ್ಯತೆ ಇದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಮಾಜಿ ಪ್ರಧಾನಿ ದೇವೇಗೌಡರ ಎದುರೇ ಹಾಸನ ಸೀಟಿಗೆ ಪ್ರಜ್ವಲ್ ಪಟ್ಟು!

    ಮಾಜಿ ಪ್ರಧಾನಿ ದೇವೇಗೌಡರ ಎದುರೇ ಹಾಸನ ಸೀಟಿಗೆ ಪ್ರಜ್ವಲ್ ಪಟ್ಟು!

    ಬೆಂಗಳೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಾಜಿ ಪ್ರಧಾನಿ ದೇವೇಗೌಡರ ಎದುರೇ ಹಾಸನ ಸೀಟಿಗಾಗಿ ಪ್ರಜ್ವಲ್ ರೇವಣ್ಣ ಅವರು ಪಟ್ಟು ಹಿಡಿದಿದ್ದಾರೆ ಎಂಬ ಮಾಹಿತಿಯೊಂದು ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಚುನಾವಣೆಗೆ ನಿಲ್ಲಲು ತಾತನ ಎದುರೇ ಬಿಗಿಪಟ್ಟು ಹಿಡಿದು ಕುಳಿತಿರುವ ಮೊಮ್ಮಗನ ಹಠಕ್ಕೆ ಮಾಜಿ ಪ್ರಧಾನಿ ದೇವೇಗೌಡರು ಮಣಿಯದೇ, ಹಾಸನ ಲೋಕಸಭಾ ಕ್ಷೇತ್ರದಿಂದಲೇ ಸ್ಪರ್ಧಿಸಲು ಮಾಜಿ ಪ್ರಧಾನಿ ದೇವೇಗೌಡ ಅವರು ಪ್ಲಾನ್ ಮಾಡಿದ್ದಾರೆ ಎನ್ನಲಾಗಿದೆ.

    ಈ ಹಿನ್ನೆಲೆಯಲ್ಲಿ ಪ್ರಜ್ವಲ್‍ಗೆ ದೇವೇಗೌಡರು ಮಂಡ್ಯ ಲೋಕಸಭಾ ಕ್ಷೇತ್ರವನ್ನು ತೋರಿಸಿದ್ದಾರಾ ಎಂಬ ಪ್ರಶ್ನೆಯೊಂದು ಎದ್ದಿದೆ. ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಹೋಗಲು ಹೆಚ್.ಡಿ.ದೇವೇಗೌಡರು ಸ್ಪಷ್ಟವಾಗಿ ನಿರಾಕರಿಸಿದ್ದಾರೆ. ಆದ್ರೆ ಇತ್ತ ಹಾಸನ ಲೋಕಸಭಾ ಕ್ಷೇತ್ರದಲ್ಲೇ ನಾನು ಸ್ಪರ್ಧೆ ಮಾಡುವುದಾಗಿ ಪ್ರಜ್ವಲ್ ಪಟ್ಟು ಹಿಡಿದಿದ್ದಾರೆ. ಈ ಹಿನ್ನೆಲೆಯಲ್ಲಿ ಹಾಸನ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಲು ತಾತ, ಮೊಮ್ಮಗನ ನಡುಯೇ ಮಾತುಕತೆ ನಡೆಯುತ್ತಿದೆ.

    ಹಾಗಾದ್ರೆ ಮಾಜಿ ಪ್ರಧಾನಿ ಹಾಸನ ಲೋಕಸಭಾ ಕ್ಷೇತ್ರದಿಂದಲೇ ಸ್ಪರ್ಧೆ ಮಾಡ್ತಾರಾ? ಮಂಡ್ಯದಲ್ಲಿ ದೇವೇಗೌಡರ ಕುಟುಂಬದವರಿಂದ್ಲೇ ಸ್ಪರ್ಧೆನಾ? ಅಥವಾ ಮಂಡ್ಯದವರಿಗೆ ಅವಕಾಶನಾ? ಎನ್ನುವ ಹಲವಾರು ಪ್ರಶ್ನೆಗಳು ಇದೀಗ ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತದೆ. ಒಟ್ಟಿನಲ್ಲಿ ಜೆಡಿಎಸ್‍ನಲ್ಲಿ ತಾತ, ಮೊಮ್ಮಗನ ಸ್ಪರ್ಧೆಯ ಲೆಕ್ಕಚಾರದ ಬಗ್ಗೆ ಚರ್ಚೆ ಜೋರಾಗಿದೆ.

  • ಮಮತಾ ಬ್ಯಾನರ್ಜಿ ಹೋರಾಟಕ್ಕೆ ಎಚ್‍ಡಿಡಿ ಬೆಂಬಲ

    ಮಮತಾ ಬ್ಯಾನರ್ಜಿ ಹೋರಾಟಕ್ಕೆ ಎಚ್‍ಡಿಡಿ ಬೆಂಬಲ

    ನವದೆಹಲಿ: ತೃತೀಯ ರಂಗದ ಸಾರಥ್ಯ ಹೊತ್ತಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಮಾಜಿ ಪ್ರಧಾನಿ ದೇವಗೌಡರನ್ನು ಇಲ್ಲಿನ ಕರ್ನಾಟಕ ಭವನದಲ್ಲಿ ಭೇಟಿಮಾಡಿದ್ದಾರೆ.

    ಮಾಜಿ ಪ್ರಧಾನಿ ದೇವೇಗೌಡರನ್ನು ಇಂದು 4.30 ರಲ್ಲಿ ಮಮತಾ ಬ್ಯಾನರ್ಜಿಯವರು ಕರ್ನಾಟಕ ಭವನದಲ್ಲಿ ಭೇಟಿಯಾಗಿ ಒಂದು ಗಂಟೆಗೂ ಅಧಿಕ ಕಾಲ ಮಾತುಕತೆ ನಡೆಸಿದ್ದಾರೆ. ಅಸ್ಸಾಂ ಸರ್ಕಾರದ ಎನ್‌ಆರ್‌ಸಿ ಕರಡು ವಿರೋಧಿಸುತ್ತಿರುವ ಮಮತಾ ಬೆಂಬಲ ನೀಡುವಂತೆ ಮನವಿ ಮಾಡಿಕೊಂಡಿದ್ದು, ಮಮತಾ ಬ್ಯಾನರ್ಜಿಯವರ ಮನವಿಗೆ ಒಪ್ಪಿಕೊಂಡ ದೇವೇಗೌಡರು ಬೆಂಬಲ ಸೂಚಿಸಿದ್ದಾರೆ.

    ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರದ ನೂತನವಾಗಿ ಆಯ್ಕೆಗೊಂಡ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಪ್ರಮಾಣ ವಚನ ಕಾರ್ಯಕ್ರಮದ ಬಳಿಕ ಮೊದಲ ಬಾರಿ ದೇವೇಗೌಡರನ್ನು ಭೇಟಿ ಮಾಡಿದ ಅವರು, ತೃತೀಯ ರಂಗ ಬಲ ಪಡಿಸುವ ಕುರಿತು ಮಹತ್ವದ ಚರ್ಚೆ ನಡೆಸಿದ್ದಾರೆ.

    ಕೇಂದ್ರದಲ್ಲಿರುವ ಎನ್‍ಡಿಎ ಸರ್ಕಾರದ ವಿರುದ್ದ ಹೋರಾಟ ನಡೆಸುವ ಕುರಿತು ಉಭಯ ನಾಯಕರು ಚರ್ಚೆ ನಡೆಸಿದ್ದು, ಪ್ರಮುಖವಾಗಿ ರಾಹುಲ್ ಗಾಂಧಿ ಪ್ರಧಾನಿ ಅಭ್ಯರ್ಥಿ ಎನ್ನುವ ವಿಚಾರವಾಗಿ ಮಹತ್ವದ ಚರ್ಚೆ ನಡೆದಿದೆ ಎನ್ನಲಾಗಿದೆ. ಇತರೆ ಪ್ರಾದೇಶಿಕ ಪಕ್ಷಗಳ ಒಗ್ಗೂಡಿಸುವಿಕೆಯಲ್ಲಿ ಸಹಾಯ ಮಾಡುವಂತೆ ಮಮತಾ ಬ್ಯಾನರ್ಜಿ ಮನವಿ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ರಾಷ್ಟ್ರೀಯ ನಾಗರಿಕ ನೋಂದಣಿ ಮಾಡಿಸಲು 40 ಲಕ್ಷ ಮಂದಿ ವಿಫಲ: ಏನಿದು ಎನ್‌ಆರ್‌ಸಿ? ಅಸ್ಸಾಂನಲ್ಲೇ ಮಾತ್ರ ಏಕೆ?

    ಭೇಟಿ ಬಳಿಕ ಮಾತನಾಡಿದ ಮಮತಾ ಬ್ಯಾನರ್ಜಿ ದೇವೇಗೌಡರು ಪ್ರಧಾನಿಯಾಗಿದ್ದಾಗ ನಾನು ಸಂಸದೆಯಾಗಿದ್ದೆ ಅವರ ಮೇಲೆ ಅಪಾರ ಗೌರವಿದ್ದು ಸೌಜನ್ಯಕ್ಕಾಗಿ ಭೇಟಿಯಾಗಿದ್ದೇನೆ. ಭೇಟಿ ವೇಳೆ ಕೆಲವು ರಾಜಕೀಯ ವಿಷಯಗಳ ಬಗ್ಗೆ ಚರ್ಚೆಯಾಗಿದ್ದು, ಪಕ್ಷಗಳ ಒಗ್ಗೂಡಿಸುವಿಕೆ ಹಾಗೂ ಎನ್‌ಆರ್‌ಸಿ  ವಿರೋಧಕ್ಕೆ ಬೆಂಬಲಿಸುವಂತೆ ಮನವಿ ಮಾಡಿದ್ದು, ಅದಕ್ಕೆ ದೇವೇಗೌಡರು ಒಪ್ಪಿಕೊಂಡಿದ್ದಾರೆ ಎಂದು ಹೇಳಿದರು.

  • ಮಾಜಿ ಸಿಎಂ ತಂತ್ರಕ್ಕೆ ಎಚ್‍ಡಿಡಿ ಸಲಹೆಯಂತೆ ಎಚ್‍ಡಿಕೆಯಿಂದ ಹೊಸ ಬಾಣ!

    ಮಾಜಿ ಸಿಎಂ ತಂತ್ರಕ್ಕೆ ಎಚ್‍ಡಿಡಿ ಸಲಹೆಯಂತೆ ಎಚ್‍ಡಿಕೆಯಿಂದ ಹೊಸ ಬಾಣ!

    ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತಂತ್ರಕ್ಕೆ ಪ್ರತಿಯಾಗಿ ಮಾಜಿ ಪ್ರಧಾನಿ ದೇವೇಗೌಡರ ಸಲಹೆಯಂತೆ ಹೊಸ ಬಾಣ ಬಿಡಲು ಕುಮಾರಸ್ವಾಮಿ ಪ್ಲಾನ್ ಮಾಡಿದ್ದಾರೆ.

    ಸಿದ್ದರಾಮಯ್ಯಗೆ ಕ್ಯಾಬಿನೆಟ್ ಸ್ಥಾನಮಾನ ನೀಡುವ ಕುರಿತ ಆದೇಶ ಮುಂದೆ ಹೋಗಿದೆ. ಸೋಮವಾರವೇ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯಗೆ ಕ್ಯಾಬಿನೆಟ್ ಸ್ಥಾನಮಾನ ನೀಡಿ ಸರ್ಕಾರ ಆದೇಶ ಹೊರಡಿಸಬೇಕಿತ್ತು. ಆದ್ರೆ ಇವತ್ತಿನ ತನಕ ಆ ಫೈಲ್ ಮೂವ್ ಆಗದೇ ಪೆಂಡಿಂಗ್ ಉಳಿದಿದೆ. ಹೀಗಾಗಿ ಸಿದ್ದರಾಮಯ್ಯಗೆ ಕ್ಯಾಬಿನೆಟ್ ದರ್ಜೆ ಸ್ಥಾನಮಾನ ಸಿಗುತ್ತಾ? ಇಲ್ವಾ? ಅನ್ನೋ ಚರ್ಚೆ ರಾಜ್ಯ ರಾಜಕಾರಣದಲ್ಲಿ ಜೋರಾಗಿದೆ. ಇದನ್ನೂ ಓದಿ: ಸರ್ಕಾರದ ವಿರುದ್ಧ ಮಾತಾಡಿರೋ ಸಿದ್ದರಾಮಯ್ಯರಿಗೆ ಎದುರಾಯ್ತು ಕಂಟಕ!

    ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳದ ಪ್ರಕೃತಿ ಚಿಕಿತ್ಸಾ ಕೇಂದ್ರ ಶಾಂತಿವನದಲ್ಲಿದ್ದುಕೊಂಡು ದೋಸ್ತಿ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ಬಾಂಬ್ ಸಿಡಿಸ್ತಿದ್ದು, ಇದರಿಂದ ಸಿಎಂ ಕುಮಾರಸ್ವಾಮಿ ಮತ್ತು ಡಿಸಿಎಂ ಪರಮೇಶ್ವರ್ ತತ್ತರಿಸಿದಂತೆ ಕಂಡು ಬಂದಿದೆ. ಹೀಗಾಗಿ ಈ ಇಬ್ಬರಿಗೂ ಟೆನ್ಶನ್ ಮೇಲೆ ಟೆನ್ಶನ್ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಕಟ್ಟಿಹಾಕಲು ದೇವೇಗೌಡರು ಸಿಎಂ ಎಚ್ ಡಿಕೆಗೆ ಸಲಹೆ ನೀಡಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ಆಪ್ತ ಅಧಿಕಾರಿಗಳ ವರ್ಗಾವಣೆ ಮಾಡಿದ ಸರ್ಕಾರ

  • ಡಿಕೆಶಿ ವಿಚಾರವಾಗಿ ಹೇಗೆ ನಡೆದುಕೊಳ್ಳಬೇಕು – ಎಚ್‍ಡಿಕೆ, ರೇವಣ್ಣಗೆ ದೇವೇಗೌಡರ ಕ್ಲಾಸ್!

    ಡಿಕೆಶಿ ವಿಚಾರವಾಗಿ ಹೇಗೆ ನಡೆದುಕೊಳ್ಳಬೇಕು – ಎಚ್‍ಡಿಕೆ, ರೇವಣ್ಣಗೆ ದೇವೇಗೌಡರ ಕ್ಲಾಸ್!

    ಸಾಂದರ್ಭಿಕ ಚಿತ್ರ

    ಬೆಂಗಳೂರು: ಹವಾಲ ವ್ಯವಹಾರದಲ್ಲಿ ಜಲಸಂಪ್ಮೂಲ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಿಕೆ ಶಿವಕುಮಾರ್ ಅವರ ಹೆಸರು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ, ಈ ಕುರಿತು ಹೇಗೆ ನಡೆದುಕೊಳ್ಳಬೇಕು ಎಂದು ಸಿಎಂ ಕುಮಾರಸ್ವಾಮಿ ಹಾಗೂ ಸಚಿವ ಎಚ್‍ಡಿ ರೇವಣ್ಣ ಅವರಿಗೆ ಮಾಜಿ ಪ್ರಧಾನಿ ಎಚ್‍ಡಿ ದೇವೇಗೌಡ ಅವರು ಎಚ್ಚರಿಕೆ ಹೆಜ್ಜೆ ಇಡುವಂತೆ ಸಲಹೆ ನೀಡಿದ್ದಾರೆ.

    ಸದ್ಯ ಐಟಿ ದಾಳಿ ವಿಚಾರ ಅತ್ಯಂತ ಸೂಕ್ಷ್ಮ ಹಾಗೂ ಕಾನೂನಾತ್ಮಕ ವಿಚಾರವಾಗಿದ್ದು, ಈ ವಿಚಾರದಲ್ಲಿ ಎಚ್ಚರಿಕೆಯಿಂದ ನಡೆದುಕೊಳ್ಳಬೇಕು. ಸದ್ಯದ ಸನ್ನಿವೇಶದಲ್ಲಿ ಡಿಕೆಶಿ ಅವರಿಗೆ ನೈತಿಕ ಬೆಂಬಲ ನೀಡಿ ಎಂದು ಎಚ್‍ಡಿ ದೇವೇಗೌಡ ಅವರು ಹೇಳಿದ್ದಾಗಿ ಮೂಲಗಳಿಂದ ಪಬ್ಲಿಕ್ ಟಿವಿಗೆ ಮಾಹಿತಿ ಲಭಿಸಿದೆ. ಇದನ್ನು ಓದಿ: ಐಟಿ ಅಧಿಕಾರಿಗಳ ನಿಜ ಬಣ್ಣ ಕೆಲವೇ ದಿನಗಳಲ್ಲಿ ಗೊತ್ತಾಗುತ್ತೆ: ಡಿ.ಕೆ.ಸುರೇಶ್

    ರಾಜ್ಯದಲ್ಲಿರುವ ಮೈತ್ರಿ ಸರ್ಕಾರದಲ್ಲಿ ಹೆಚ್ಚಿನ ಗೊಂದಲ ಉಂಟಾಗದಂತೆ ನೋಡಿಕೊಳ್ಳಲು ಹಾಗೂ ಜನತೆಗೆ ತಮ್ಮ ಸಮುದಾಯದ ವಿರುದ್ಧ ಮೆಚ್ಚುಗೆ ಉಂಟಾಗುವಂತೆ ಮಾಡಲು ಡಿಕೆಶಿ ಅವರ ವಿಚಾರವಾಗಿ ಹೆಚ್ಚು ಮಾತನಾಡದಿರಲು ಸಲಹೆ ನೀಡಿದ್ದಾರೆ. ಅಲ್ಲದೇ ಸಂಪೂರ್ಣವಾಗಿ ಸುಮ್ಮನಿರಲು ಸೂಚಿಸಿರುವ ಅವರು, ಕಾನೂನು ಹೋರಾಟ ಮಾಡಿಕೊಳ್ಳುತ್ತಾರೆ. ಆದರೆ ಸರ್ಕಾರದ ಬೆಂಬಲ ಡಿಕೆಶಿ ಅವರಿಗೆ ಇರುತ್ತದೆ ಎಂದು ಹೇಳಲು ಸಲಹೆ ನೀಡಿದ್ದಾರೆ. ಇದನ್ನು ಓದಿ: ಹವಾಲ ವ್ಯವಹಾರದಲ್ಲಿ ಡಿಕೆ ಶಿವಕುಮಾರ್ ಭಾಗಿ? 

    ದೇವೇಗೌಡ ಸಲಹೆ ಪಡೆದು ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಕುಮಾರಸ್ವಾಮಿ ಅವರು, ಡಿಕೆ ಶಿವಕುಮಾರ್ ನಮ್ಮ ಸಂಪುಟದಲ್ಲಿ ಸಚಿವರು. ಅವರಿಗೆ ಕಾನೂನಾತ್ಮಕ ಹೋರಾಟಕ್ಕೆ ಬೆಂಬಲ ನೀಡುತ್ತೇವೆ. ಬಿಜೆಪಿ ಹೇಳಿದರೆ ರಾಜೀನಾಮೆ ನೀಡಬೇಕಾ? ಏಕೆ ರಾಜೀನಾಮೆ ನೀಡಬೇಕು? ಇಲ್ಲಿ ರಾಜೀನಾಮೆಯ ಅವಶ್ಯಕತೆ ಇಲ್ಲ. ಬಿಜೆಪಿ ನಾಯಕರ ಮೇಲೆ ಎಷ್ಟು ಆರೋಪಗಳಿವೆ, ಅವರ ವಿರುದ್ಧ ಆರೋಪ ಕೇಳಿಬಂದ ವೇಳೆ ರಾಜೀನಾಮೆ ನೀಡಿದ್ದರಾ ಎಂದು ಸಚಿವ ಡಿಕೆಶಿ ಪರವಾಗಿ ಎಚ್‍ಡಿಕೆ ಬ್ಯಾಟ್ ಬೀಸಿದ್ದಾರೆ. ಇದನ್ನು ಓದಿ: ರಾಜೀನಾಮೆ ನೀಡುವ ಅಗತ್ಯವಿಲ್ಲ: ಡಿಕೆಶಿ ಪರ ಸಿಎಂ ಎಚ್‍ಡಿಕೆ ಬ್ಯಾಟಿಂಗ್

  • ವಾಜಪೇಯಿ ಹೆಸರನ್ನು ಮತದಾನ ಪಟ್ಟಿಯಿಂದ ತೆಗೆದ ಲಕ್ನೋ ಕಾರ್ಪೋರೇಷನ್

    ವಾಜಪೇಯಿ ಹೆಸರನ್ನು ಮತದಾನ ಪಟ್ಟಿಯಿಂದ ತೆಗೆದ ಲಕ್ನೋ ಕಾರ್ಪೋರೇಷನ್

    ಲಕ್ನೋ: ಮಾಜಿ ಪ್ರಧಾನಿ ಹಾಗೂ ಭಾರತೀಯ ಜನತಾ ಪಾರ್ಟಿಯ ಹಿರಿಯ ನಾಯಕ ಅಟಲ್ ಬಿಹಾರಿ ವಾಜಪೇಯಿ ದೇಶ ಕಂಡ ಮೇರು ನಾಯಕ. ಬಿಜೆಪಿಯ ಮೊದಲ ಪ್ರಧಾನಿ ಎಂಬ ಹೆಗ್ಗಳಿಕೆಯೂ ಕೂಡ ವಾಜಪೇಯಿ ಅವರಿಗೆ ಇದೆ. ಆದರೆ ಲಕ್ನೋದ ಮಹಾನಗರ ಪಾಲಿಕೆ ಮಾತ್ರ ಅವರ ಹೆಸರನ್ನು ಮತದಾನದ ಪಟ್ಟಿಯಿಂದ ತೆಗೆಯಲಾಗಿದೆ.

    ಹೌದು. ಉತ್ತರ ಪ್ರದೇಶದ ಲಕ್ನೋ ಕಾರ್ಪೋರೇಷನ್ ವಾಜಪೇಯಿ ಅವರ ಮತದಾನದ ಪಟ್ಟಿಯಿಂದ ತೆಗೆದಿದೆ. ಈ ಬಗ್ಗೆ ಮಾತನಾಡಿದ ಕ್ಷೇತ್ರ ಚುನಾವಣೆ ಅಧಿಕಾರಿ, ದೇಶ ಕಂಡ ಅತ್ಯಂತ ಮೇರು ನಾಯಕ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ವಾಜಪೇಯಿ ಅವರು ಕಳೆದ ವಿಧಾನ ಸಭಾ ಹಾಗೂ ಲೋಕಸಭಾ ಸೇರಿದಂತೆ ಕಾರ್ಪೋರೇಷನ್ ಚುನಾವಣೆಗೆ ಮತದಾನ ಮಾಡಿಲ್ಲದ ಕಾರಣ ಮತದಾರರ ಪಟ್ಟಿಯಿಂದ ಅವರ ಹೆಸರು ತೆಗೆಯಲಾಗಿದೆ ಎಂದು ಹೇಳಿದ್ದಾರೆ.

    ಅಲ್ಲದೇ 10 ವರ್ಷಗಳಿಂದ ಲಕ್ನೋದಲ್ಲಿ ಅವರು ವಾಸ ಮಾಡುತ್ತಿಲ್ಲ. ಹೀಗಾಗಿ ಕಾನೂನಾತ್ಮಕವಾಗಿ ಕ್ರಮ ತೆಗೆದುಕೊಂಡಿದ್ದೇವೆ. 1054 ಮತದಾನದ ಸಂಖ್ಯೆಯು ಲಕ್ನೋದ ಬಾಬು ಬನ್ಸಾರಿ ದಾಸ್ ವಾರ್ಡ್‍ಬಲ್ಲಿ ವಾಸಿಸುತ್ತಿರುವಾಗಲೇ ಮಾಡಿಸಿದ್ದು. ಅವರು ಸದ್ಯ ದೆಹಲಿ 6-ಎ ಲುಟೆನ್ಸ್ ನಲ್ಲಿರುವ ನಿವಾಸದಲ್ಲಿ ವಾಸ ಮಾಡುತ್ತಿದ್ದು, ಕಳೆದ 2000ರಲ್ಲಿ ಮತದಾನ ಮಾಡಿದ್ದರು. ಇದಾದ ಬಳಿಕ ಯಾವುದೇ ಚುನಾವಣೆಯಲ್ಲಿ ಮತ ಚಲಾಯಿಸಿಲ್ಲ. 2006ರಲ್ಲಿ ಉತ್ತರ ಪ್ರದೇಶದ ಉಪ ಮುಖ್ಯಮಂತ್ರಿ ಸ್ಥಾನಕ್ಕೆ ದಿನೇಶ್ ಶರ್ಮಾ ಅವರ ಪರವಾಗಿ ಪ್ರಚಾರ ನಡೆಸಿದ್ದರು.

    ಸದ್ಯ ಲಕ್ನೋದಲ್ಲಿರುವ ವಾಜಪೇಯಿ 92/98-1 ಬಸ್ಮಂಡಿಯಲ್ಲಿರುವ ನಿವಾಸವು ಕಿಸಾನ್ ಸಂಘ ಕಚೇರಿಯನ್ನಾಗಿ ಬಳಸಿಕೊಳ್ಳಲಾಗುತ್ತಿದೆ. 10 ವರ್ಷವಾದರೂ ಲಕ್ನೋದಲ್ಲಿನ ನಿವಾಸಕ್ಕೆ ಭೇಟಿ ನೀಡಿಲ್ಲ. ಹೀಗಾಗಿ ಅವರ ಹೆಸರು ಮತದಾನದ ಪಟ್ಟಿಯಿಂದ ತೆಗೆಯಲಾಗಿದೆ ಎಂದು ಕ್ಷೇತ್ರ ಚುನಾವಣಾ ಅಧಿಕಾರಿ ಸ್ಪಷ್ಟನೆ ನೀಡಿದ್ದಾರೆ.