ಹಾಸನ: ಕಾಶ್ಮೀರ ಸಮಸ್ಯೆ ಉಲ್ಭಣಿಸಲು ಬಿಜೆಪಿಯ ಸರ್ಕಾರದ ವೈಫಲ್ಯವೇ ಕಾರಣ ಎಂದು ಮಾಜಿ ಪ್ರಧಾನಿ ದೇವೇಗೌಡರು ಆರೋಪಿಸಿದ್ದಾರೆ.
ನಗರದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾನೂ ಕೂಡ ದೇಶಕ್ಕೆ ಪ್ರಧಾನಿಯಾಗಿದ್ದೆ. ಆಗ ಕಾಶ್ಮೀರದ ಸಮಸ್ಯೆಗಳನ್ನು ನಿವಾರಣೆಗೆ ಬೇಕಾದ ಕ್ರಮಗಳನ್ನು ಸಾಕಷ್ಟು ಕೈಗೊಂಡಿದ್ದೆ. ಈಗಿನ ಸರ್ಕಾರಕ್ಕೆ ಹಿಂದೆಂದಿಗಿಂತಲೂ ಭಾರೀ ಬಹುಮತವನ್ನು ಈ ದೇಶದ ಜನತೆ ನೀಡಿದ್ದಾರೆ. ಯಾವ ಪ್ರಧಾನಿಗೂ ಈ ರೀತಿಯ ಬಲವನ್ನು ನೀಡಿರಲಿಲ್ಲ. ಆದರೆ ಅಧಿಕಾರಕ್ಕೆ ಬಂದ ಮೋದಿಯವರು ಕೇವಲ ವಿರೋಧ ಪಕ್ಷದವರನ್ನು ಟೀಕಿಸುವುದರಲ್ಲಿಯೇ ಕಳೆದರು ಎಂದರು.
ಪ್ರಧಾನಿ ಮೋದಿ ಅವರು ಪ್ರಮುಖವಾಗಿ ಕಾಂಗ್ರೆಸ್ ಮತ್ತು ನೆಹರು ಅವರನ್ನು ಟೀಕಿಸುವುದಷ್ಟೆ ಮಾಡುತ್ತಿದ್ದಾರೆ. ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಕಾಶ್ಮೀರದಲ್ಲಿ ಮೂರು ಸರ್ಕಾರಗಳನ್ನ ಬದಲಾಯಿಸಲಾಗಿದೆ. ಕೊನೆಗೆ ಸರ್ಜಿಕಲ್ ಸ್ಟ್ರೈಕ್ ಮಾಡಿದ್ದು, ಅನಂತರ ರಾಷ್ಟ್ರಪತಿ ಆಡಳಿತ ಹೇರಿದ್ದಾರೆ. ಅಲ್ಲಿಯ ಯುವಕರೆಲ್ಲ ಉದ್ಯೋಗ ಇಲ್ಲದೆ ಬೀದಿಗೆ ಇಳಿಯುವಂತೆ ಮಾಡಿದ್ದಾರೆ. ದೇಶದ ಇಂತಹ ಪರಿಸ್ಥಿತಿಯಲ್ಲಿ ಇರುವ ವೇಳೆ ಪ್ರಧಾನಿಯವರೆ ಇದು ವಿರೋಧ ಪಕ್ಷದವರನ್ನು ಟೀಕಿಸುವ ರೀತಿ ಉತ್ತಮ ಅಲ್ಲ ಎಂದರು.
ನವದೆಹಲಿ: ಲೋಕಸಭೆ ಅಧಿವೇಶದಲ್ಲಿ ಇದು ನನ್ನ ಕೊನೆಯ ಭಾಷಣ ಆಗಬಹುದು ಎನ್ನುವ ಮೂಲಕ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ರಾಜಕೀಯ ನಿವೃತ್ತಿಯ ಸುಳಿವು ಬಿಟ್ಟುಕೊಟ್ಟಿದ್ದಾರೆ.
ಲೋಕಸಭೆ ಅಧಿವೇಶನದ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ನನ್ನ ಮನಸ್ಸಿನಲ್ಲಿ ತುಂಬಾ ನೋವಿದೆ. ರೈತನ ಮಗನಾಗಿ ಹುಟ್ಟಿದ್ದೇನೆ. ರೈತನಾಗಿ ಸಾಯುತ್ತೇನೆ ಎಂದ ಅವರು, ಬಜೆಟ್ ಮೇಲೆ ಮಾತನಾಡಲು ಸ್ಪೀಕರ್ ಸುಮಿತ್ರಾ ಮಹಾಜನ್ ಅವರಿಗೆ ಅವಕಾಶ ಕೇಳಿದ್ದೆ. ಏಕೆಂದರೆ ಇದು ನನ್ನ ಕೊನೆ ಭಾಷಣವೂ ಆಗಬಹುದು ಎಂದು ಹೇಳುವ ಮೂಲಕ ಲೋಕಸಭಾ ಚುನಾವಣೆ ಸ್ಪರ್ಧೆಯಿಂದ ದೂರ ಉಳಿಯುವ ನಿರ್ಧಾರವನ್ನು ಬಹಿರಂಗಪಡಿಸಿದ್ದಾರೆ.
ಇಷ್ಟು ದಿನ ನನಗೆ ಅವಮಾನ ಆಗಿದೆ. ಚಿಂತೆ ಇಲ್ಲ. ಭಾಷಣಕ್ಕೆ ಅವಕಾಶ ನೀಡುವುದಕ್ಕೆ ಸ್ಪಂದಿಸಿದ್ದ ಸ್ಪೀಕರ್, ಪ್ರಧಾನಿ ಮೋದಿ ಭಾಷಣ ಸಂಜೆ 5 ಗಂಟೆಗೆ ಆರಂಭವಾಗುತ್ತದೆ. ಹೀಗಾಗಿ ನಿಮಗೆ ನಾಲ್ಕು ಗಂಟೆಗೆ ಅವಕಾಶ ಕೊಡುತ್ತೇವೆ ಎಂದು ನಿನ್ನೆ ಹೇಳಿದ್ದರು. ಆದರೆ ಹೆಚ್ಚು ಮಾತನಾಡಲು ಅವಕಾಶ ನೀಡಲಿಲ್ಲ. ನಾನು ಯಾರನ್ನೂ ನಿಂದಿಸುವ ಕುರಿತು ಭಾಷಣ ಮಾಡಬೇಕಿರಲಿಲ್ಲ. ನಾನು 325 ದಿನ ದೇಶವನ್ನು ಮುನ್ನಡೆಸಿರುವೆ. ಆಗ ಯಾವ ಅಭಿವೃದ್ಧಿ ಕಾರ್ಯಗಳಾಗಿವೆ. ನನ್ನ ಕೊಡುಗೆ ಏನು ಎನ್ನುವುದು ರಾಷ್ಟ್ರದ ಜನತೆಗೆ ಗೊತ್ತಿಲ್ಲ. ಅವರಿಗೆ ಈ ಕುರಿತು ಮನವರಿಕೆ ಮಾಡುವುದಕ್ಕಾಗಿ ನಾನು ಭಾಷಣ ಮಾಡಬೇಕಿತ್ತು ಎಂದು ಅಸಮಾಧಾನ ಹೊರಹಾಕಿದರು.
ನಾನು ನಿನ್ನೆ ಭಾಷಣ ಆರಂಭಿಸಿ 5 ನಿಮಿಷ ಕಳೆದಿತ್ತು. ಆಗ ಭಾಷಣ ನಿಲ್ಲಿಸುವಂತೆ ಸ್ಪೀಕರ್ ಸೂಚನೆ ಕೊಟ್ಟರು. ಆದರೂ ನಾನು ಮುಂದುವರಿದು ಕೆಲವು ವಿಷಯಗಳ ಕುರಿತು ಮಾತನಾಡಿದೆ. ಅದು ನನಗೆ ಸಮಾಧಾನವಿಲ್ಲ. ಪ್ರಧಾನಿ ಮೋದಿ ಅವರು ಅಧಿವೇಶನಕ್ಕೆ 6 ಗಂಟೆಗೆ ಆಗಮಿಸಿದರು. ಈ ಮಧ್ಯೆ ಅನೇಕ ಸಂಸದರು ಮಾತನಾಡಿದರು. ಇದು ಸ್ವಲ್ಪ ನೋವು ತಂದಿತ್ತು ಎಂದರು.
ಜನರು ನನ್ನನ್ನ ಮಣ್ಣಿನ ಮಗ ಅಂತ ಕರೆದಿದ್ದಾರೆ. ನಾನು ಯಾವತ್ತೂ ನನ್ನ ಹೀಗೆ ಕರೆಯಬೇಕು ಅಂತ ಯಾರಿಗೂ ಕೇಳಿಲ್ಲ, ಹೇಳಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು, ಅಲ್ಲಿ ಜನರಿಂದ ಮಣ್ಣಿನ ಮಗ ಅಂತ ಕರೆಸಿಕೊಳ್ಳುವ ದೇವೇಗೌಡರು ಕುಳಿತಿದ್ದಾರೆ ಅಂತ ನಿನ್ನೆ ಹೇಳಿದರು. ಅವರ ಮಾತುಗಳು ನನಗೆ ಬೇಸರ ತಂದಿದೆ ಎಂದು ಪ್ರಧಾನಿ ವಿರುದ್ಧ ಅಸಮಾಧಾನ ಹೊರಹಾಕಿದರು.
ಮೈತ್ರಿ ಸರ್ಕಾರದಲ್ಲಿ ಜೆಡಿಎಸ್ ಸಂಖ್ಯೆ ಕಡಿಮೆ ಇದೆ. ಹಾಗಿದ್ದರೂ ಹಿಂದಿನ ಸರ್ಕಾರದ ಕೆಲಸಗಳ ಜೊತೆ ಸಾಲಮನ್ನಾ ಮಾಡಲಾಗಿದೆ. ಈ ಕುರಿತು ಸಂಸತ್ತಿನಲ್ಲಿ ನಾನು ಹೇಳಬೇಕಿತ್ತು. ಕಲಾಪವು ಇಂದು ಗದ್ದಲದಿಂದ ಕೂಡಿತ್ತು. ಯಾವ ವಿಚಾರಗಳನ್ನು ಹೇಳಲು ಸಾಧ್ಯವಾಗಲಿಲ್ಲ. ಮುಂದೆ ಬಜೆಟ್ ಬಗ್ಗೆ ಮಾತನಾಡುವಾಗ ಮಾತನಾಡುತ್ತೇನೆ. ಏಕೆಂದರೆ ನನ್ನ ಸರ್ಕಾರದ ಸಾಧನೆಗಳನ್ನು ಸಂಸತ್ತಿನಲ್ಲಿ ಹೇಳಬೇಕಿದೆ ಎಂದರು.
ಕರ್ನಾಟಕದಲ್ಲಿ ಮೈತ್ರಿ ಸರ್ಕಾರ ಕೈಗೊಂಡ ರೈತರ ಸಾಲಮನ್ನಾ ಕುರಿತು ಪ್ರಧಾನಿ ನರೇಂದ್ರ ಮೋದಿ ಮಾತನಾಡಿದ್ದು ಬೇಸರ ತಂದಿದೆ. ಅಧಿವೇಶನಲ್ಲಿ ಮಾತನಾಡಲು ಅವಕಾಶ ನೀಡುವಂತೆ ಮತ್ತೆ ಕೇಳಿಕೊಂಡಿದ್ದೇನೆ. ಸ್ಪೀಕರ್ ಸುಮಿತ್ರಾ ಮಹಾಜನ್ ಅವರು ಸೋಮವಾರ ಅವಕಾಶ ನೀಡುವ ಭರವಸೆ ನೀಡಿದ್ದಾರೆ ಎಂದು ಹೇಳಿದರು.
ಸಿಎಂ ಕುಮಾರಸ್ವಾಮಿ ಅವರು ಆಪರೇಷನ್ ಕಮಲದ ಆಡಿಯೋ ರಿಲೀಸ್ ಮಾಡಿದ್ದಾರೆ. ಆಪರೇಷನ್ ಕಮಲ ನಡೆಯುತ್ತಿದೆಯೇ ಎಂದು ಮಾಧ್ಯಮಗಳು ಪ್ರಶ್ನಿಸುತ್ತಿದ್ದಂತೆ, ನಾನು ಕರ್ನಾಟಕದಲ್ಲಿರುವ ಮೈತ್ರಿ ಸರ್ಕಾರದ ಕುರಿತು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ದೇವೇಗೌಡರು ತಿಳಿಸಿದರು.
ರಾಮನಗರ: ನಾನೊಬ್ಬ ಹಠವಾದಿ, ಅಂತ್ಯದಲ್ಲಿ ನೆಮ್ಮದಿಯ ಸಾವನ್ನು ಬಯಸುತ್ತೇನೆ ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹೇಳಿದ್ದಾರೆ.
ಉಪಚುನಾವಣೆ ಹಿನ್ನೆಲೆ ಜೆಡಿಎಸ್ ಅಭ್ಯರ್ಥಿ ಹಾಗೂ ಸೊಸೆ ಅನಿತಾ ಕುಮಾರಸ್ವಾಮಿ ಪರ ಹಳ್ಳಿಮಾಳ ಗ್ರಾಮದಲ್ಲಿ ದೇವೇಗೌಡರು ಬಹಿರಂಗ ಪ್ರಚಾರ ನಡೆಸಿದ್ದರು. ಇದೇ ವೇಳೆ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ನಮಗೆ 38 ಸ್ಥಾನ ಮಾತ್ರ ಬಂದಿದ್ದರೂ ಸರ್ಕಾರ ಮಾಡಿದ್ದೇವೆ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಬೇಕು ಎಂದು ಕಾಂಗ್ರೆಸ್‍ನವರು ಕೇಳಿದ್ದರು. ಎಚ್‍ಡಿಕೆ ಸಿಎಂ ಆಗೋದು ಅನಿವಾರ್ಯ ಆಗಿರಲಿಲ್ಲ. ಆದರೆ ದೇಶದ ಹಲವು ಪಕ್ಷಗಳು ಒಗ್ಗಟು ಪ್ರದರ್ಶನಕ್ಕಾಗಿ ನಾನು ಅನುಮತಿ ಕೊಟ್ಟೆ ಎಂದರು.
ನಂಜನಗೂಡು ಉಪಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಸೋತಿದ್ದರೂ, ಕಾಂಗ್ರೆಸ್ ಗೆಲ್ಲಲ್ಲು ಅಭ್ಯರ್ಥಿ ಹಾಕದಂತೆ ಎಚ್‍ಡಿಕೆಗೆ ಈ ಹಿಂದೆಯೇ ತಿಳಿಸಿದ್ದೆ. ನಾನೊಬ್ಬ ಹಠವಾದಿ, ಅಂತ್ಯದಲ್ಲಿ ನೆಮ್ಮದಿಯ ಸಾವನ್ನು ಬಯಸುತ್ತೇನೆ. ಮಾಡಬೇಕಾದ ಕೆಲಸ ತುಂಬಾ ಇದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಹೊಂದಾಣಿಕೆ ಆಗಿದೆ. ನಾವು ಅಧಿಕಾರಕ್ಕೆ ಬಂದಿದ್ದು ದೇವರ ಇಚ್ಛೆ. ನಮ್ಮ ನಡುವಿನ ವೈರತ್ವವನ್ನು ಮರೆಯೋದು ಹೇಗೆ ಎಂದು ಎಲ್ಲರೂ ಅಂದುಕೊಳ್ಳಬಹುದು, ಆದರೆ ನಾವು ಮರೆಯಬೇಕಿರುವುದು ನಮ್ಮ ಹಗೆತನವನ್ನು ಹಾಗೂ ಹೋರಾಟವನ್ನ, ಈ ಮೊದಲು ಹಳ್ಳಿಗಳಲ್ಲಿ ಎರಡೂ ಪಕ್ಷಗಳ ಕಾರ್ಯಕರ್ತರು ಹೊಡೆದಾಡಿಕೊಂಡಿದ್ದರು. ಆದರೆ ಈಗ ಎಲ್ಲವನ್ನೂ ಮರೆಯಬೇಕು. ಅದನ್ನು ಬಿಟ್ಟರೇ, ಬೇರೆ ದಾರಿಯಿಲ್ಲ. ನಾನು ಉದ್ವೇಗದ ಭಾಷಣ, ವ್ಯಕ್ತಿ ನಿಂದನೆ ಮಾಡಲು ಬಂದಿಲ್ಲ. ಕೇವಲ ದೋಸ್ತಿ ಸರ್ಕಾರದ ಬಗ್ಗೆ ಮಾತನಾಡಲು ಬಂದಿದ್ದೇನೆ ಎಂದು ಹೇಳಿದ್ರು.
ಅನಿತಾ ಕುಮಾರಸ್ವಾಮಿ ಮತ ಕೇಳಲು ಬಂದಾಗ ಕೆಲವು ಗ್ರಾಮಗಳಲ್ಲಿ ವಿರೋಧ ವ್ಯಕ್ತ ಆಗಿದ್ದನ್ನು, ನಾನು ಸಹ ಗಮನಿಸಿದ್ದೇನೆ. ಅದು ಸಹಜ, ಎರಡೂ ಕ್ಷೇತ್ರಗಳ ಬೆಳವಣಿಗೆಗೆ ಶ್ರಮಿಸೋಣ. ರಾಮನಗರ ಮತ್ತು ಚನ್ನಪಟ್ಟಣ ಎರಡೂ ಸಿಎಂ ಕುಮಾರಸ್ವಾಮಿ ಕಣ್ಣುಗಳಂತೆ. ಎರಡೂ ಕ್ಷೇತ್ರಗಳು ಬೆಳೆಯಬೇಕು. ಅಲ್ಲದೇ ಗ್ರಾಮಸ್ಥರು ಆರೋಪವನ್ನು ನಾನು ಸ್ವಾಗತಿಸುತ್ತೇನೆ. ರೇಷ್ಮೆ ಸೇರಿದಂತೆ ಕೆಲವು ಬೆಳೆಗಳಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಏರುಪೇರಾಗಿದೆ. ಸರ್ಕಾರ ಈ ಬಗ್ಗೆ ಸೂಕ್ತ ಕ್ರಮತೆಗೆದುಕೊಳ್ಳುತ್ತದೆ. ಸಿಎಂ ಎಚ್‍ಡಿಕೆ ಯಾವುದೇ ಕಾರಣಕ್ಕೂ, ತಮ್ಮ ಕ್ಷೇತ್ರಗಳನ್ನು ಕೈ ಬಿಡುವುದಿಲ್ಲ. ಯಾರು ಏನೇ ಆರೋಪ ಮಾಡಿದರೂ, ನೀವು ತಲೆ ಕೆಡಿಸಿಕೊಳ್ಳಬೇಡಿ ಎಂದು ತಿಳಿಸಿದ್ರು.
ರಾಜ್ಯದಲ್ಲಿ ನಡೆಯುತ್ತಿರುವ ಉಪಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವ ಜವಾಬ್ದಾರಿಯನ್ನು ಸಿಎಂ ಕುಮಾರಸ್ವಾಮಿಯವರ ಮೇಲಿದೆ. ಅವರೂ ಸಹ ತಮ್ಮ ಜವಾಬ್ದಾರಿಯನ್ನು ಎಲ್ಲಾ ನಾಯಕರ ಹೆಗಲಿಗೆ ಹಾಕಿದ್ದಾರೆ. ಕೋಮುವಾದಿ ಪಕ್ಷ ಅಧಿಕಾರದಲ್ಲಿ ಇರಬಾರದು. ಈ ಉಪಚುನಾವಣೆಯಲ್ಲಿ ಮೈತ್ರಿ ಪಕ್ಷಗಳಿಗೆ ನೀವು ಬೆಂಬಲ ನೀಡಬೇಕು. ಬಿಜೆಪಿಯವರು ತಮ್ಮ 225 ಸ್ಥಾನಗಳಲ್ಲಿ ಒಬ್ಬ ಮುಸ್ಲಿಂ ಅಭ್ಯರ್ಥಿಗೂ ಟಿಕೆಟ್ ಕೊಟ್ಟಿಲ್ಲ. ಅವರ ಉದ್ದೇಶ ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡಬೇಕು ಎನ್ನುವುದು. ಹಾಗಾದರೆ ಮುಸ್ಲಿಂ ಬಾಂಧವರು ಎಲ್ಲಿ ಹೋಗಬೇಕು. ಹಿಂದೂ-ಮುಸ್ಲಿಂ ಒಗ್ಗಟ್ಟಾಗಿ ಇರಬೇಕು. ಹೀಗಾಗಿ ಬಿಜೆಪಿ ವಿರುದ್ಧ ಹೋರಾಡಲು ನಾವೆಲ್ಲಾ ಒಂದಾಗಿದ್ದೇವೆ.
ಬಿಬಿಎಂಪಿ ಚುನಾವಣೆಯಲ್ಲಿ ನಾವು ಗೆದ್ದಿದ್ದು 14 ಸ್ಥಾನ ಮಾತ್ರ. ಆಗ ಮೇಯರ್ ಸ್ಥಾನವನ್ನು ನಿಮಗೆ ಕೊಡುತ್ತೀವಿ ಎಂದು ಬಿಜೆಪಿಯವರು ಬಂದಿದ್ದರು. ಬಿಜೆಪಿಯವರ ಪ್ರಸ್ತಾಪವನ್ನು ನಾನು ಒಪ್ಪಲಿಲ್ಲ. ನನಗೂ ಬದ್ಧತೆ ಇದೆ. ಇದೇ ತಿಂಗಳ 31 ಇಲ್ಲ, ನವೆಂಬರ್ 1 ರಂದು ದೊಡ್ಡ ಮಟ್ಟದ ಬಹಿರಂಗ ಸಭೆ ಮಾಡುವ ಆಸೆಯು ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬೆಂಗಳೂರು: ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರಿಗೆ ವಾಲ್ಮೀಕಿ ಪ್ರಶಸ್ತಿ ಪ್ರಧಾನಕ್ಕೆ ಆಯ್ಕೆಯಾಗಿದ್ದು, ಈ ಮೂಲಕ ಸ್ವತಃ ಪುತ್ರ ಸಿಎಂ ಕುಮಾರಸ್ವಾಮಿಯವರಿಂದ ಅವರು ಪ್ರಶಸ್ತಿ ಸ್ವೀಕರಿಸಲಿದ್ದಾರೆ.
ಹೌದು, ನ್ಯಾಯಮೂರ್ತಿ ನಾಗಮೋಹನ್ ದಾಸ್ ನೇತೃತ್ವದ ಸಮಿತಿಯು ದೇವೇಗೌಡರಿಗೆ ವಾಲ್ಮೀಕಿ ಪ್ರಶಸ್ತಿ ಪ್ರಧಾನ ಮಾಡಲು ಶಿಫಾರಸ್ಸು ಮಾಡಿತ್ತು. ಹೀಗಾಗಿ ಸಮಿತಿ ಶಿಫಾರಸ್ಸಿನಂತೆ ರಾಜ್ಯ ಸರ್ಕಾರ ಮಾಜಿ ಪ್ರಧಾನಿಯವರ ಹೆಸರನ್ನು ಅಂತಿಮಗೊಳಿಸಿತ್ತು.
ಬುಧವಾರ ವಿಧಾನಸೌಧದಲ್ಲಿ ನಡೆಯಲಿರುವ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರಧಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ವಾಲ್ಮೀಕಿ ಪ್ರಶಸ್ತಿಗೆ ಆಯ್ಕೆಯಾಗಿರುವ ಎಲ್ಲಾ ಸಾಧಕರಿಗೂ ಖುದ್ದು ಸಿಎಂ ಕುಮಾರಸ್ವಾಮಿ ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ. ಮಾಜಿ ಪ್ರಧಾನಿಗಳಾದ ದೇವೇಗೌಡರು ತಮ್ಮ ಪುತ್ರ ಸಿಎಂ ಕುಮಾರಸ್ವಾಮಿಯವರಿಂದ ಪ್ರಶಸ್ತಿ ಹಾಗೂ ಗೌರವ ಪಡೆದುಕೊಳ್ಳಲಿದ್ದಾರೆ.
ಸಾಮಾನ್ಯವಾಗಿ ತಂದೆಯಿಂದ ಪುತ್ರನಿಗೆ ಪ್ರಶಸ್ತಿ ಸ್ವೀಕರಿಸುವುದನ್ನು ಕಾಣುತ್ತೇವೆ. ಆದರೆ ಬುಧವಾರ ನಡೆಯಲಿರುವ ಸಮಾರಂಭದಲ್ಲಿ ಪುತ್ರನ ಕೈಯಿಂದ ತಂದೆಯೊಬ್ಬರು ಪ್ರಶಸ್ತಿ ಸ್ವೀಕರಿಸುವ ಮೂಲಕ ವಿಶೇಷ ಹಾಗೂ ಅಪರೂಪದ ಸನ್ನಿವೇಶಕ್ಕೆ ವಿಧಾನಸೌದ ಸಜ್ಜಾಗಿದೆ.
ನವದೆಹಲಿ: ಕೇಂದ್ರ ಸರ್ಕಾರ ಪೆಟ್ರೋಲ್ ಹಾಗೂ ಡಿಸೇಲ್ ಮೇಲಿನ ದರವನ್ನು ಕಡಿತಗೊಳಿಸಲು ಮೂಲಕ ರಾಜ್ಯ ಸರ್ಕಾರ ಜಾರಿ ಮಾಡಿದ್ದ ನೀತಿಯನ್ನೇ ಕಾಪಿ ಹೊಡೆದಿದೆ ಎಂದು ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದ್ದಾರೆ.
ಕೇಂದ್ರ ಸರ್ಕಾರ ಪೆಟ್ರೋಲ್ ಡಿಸೇಲ್ ಮೇಲಿನ ಅಬಕಾರಿ ಸುಂಕವನ್ನು ಕಡಿತಗೊಳಿಸಿದ್ದಕ್ಕೆ ಪ್ರತಿಕ್ರಿಯಿಸಿದ ಅವರು, ಕರ್ನಾಟಕವನ್ನು ನೋಡಿಕೊಂಡು ಪೆಟ್ರೋಲ್ ಡೀಸೆಲ್ ದರವನ್ನು ಕಡಿಮೆ ಮಾಡುವ ಮೂಲಕ ಕೇಂದ್ರ ಸರ್ಕಾರ ರಾಜ್ಯ ಸರ್ಕಾರವನ್ನು ಕಾಪಿ ಹೊಡೆದಿದೆ. ಅಲ್ಲದೇ ಹಣಕಾಸು ಸಚಿವರು ರಾಜ್ಯ ಸರ್ಕಾರಗಳು ದರ ಇಳಿಕೆ ಮಾಡುವಂತೆ ಹೇಳಿದ್ದಾರೆ. ಆದರೆ ಈಗಾಗಲೇ ಕರ್ನಾಟಕ ಸರ್ಕಾರ ಬೆಲೆ ಇಳಿಕೆ ಮಾಡಿದ್ದು, ಇನ್ನೂ ಇಳಿಕೆ ಸಾಧ್ಯವೇ ಇಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ ಇಲ್ಲ: ಎಚ್‍ಡಿಕೆ
ಕರ್ನಾಟಕ ಸರ್ಕಾರ ಸಾಲಮನ್ನಾ ಸೇರಿದಂತೆ ಸಾಕಷ್ಟು ಪ್ರಗತಿಪರ ಯೋಜನೆಗಳನ್ನು ಹಾಕಿಕೊಂಡಿದೆ. ಸಾಲಮನ್ನಾ ಕುರಿತ ಸುಗ್ರಿವಾಜ್ಞೆಯನ್ನು ರಾಷ್ಟ್ರಪತಿ ಅಂಗೀಕಾರಕ್ಕೆ ಕಳುಹಿಸಲಾಗಿದೆ. ಶುಕ್ರವಾರ ಸಿಎಂ ಕುಮಾರಸ್ವಾಮಿ ಕೂಡಾ ದೆಹಲಿಯ ಬರಲಿದ್ದು, ಈ ಸಂಬಂಧ ಕೇಂದ್ರದ ಹಲವು ಸಚಿವರನ್ನು ಭೇಟಿಯಾಗಲಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ಪೆಟ್ರೋಲ್, ಡೀಸೆಲ್ ದರ 2.50 ರೂ. ಇಳಿಕೆ
ಇದಕ್ಕೂ ಮುನ್ನ ರಾಜ್ಯ ಸಚಿವ ಸಂಪುಟ ವಿಸ್ತರಣೆ ಹಾಗೂ ನಿಗಮ ಮಂಡಳಿಗೆ ಅಧ್ಯಕ್ಷರ ಆಯ್ಕೆ ಸಂಬಂಧ ದೇವೇಗೌಡರನ್ನು ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರು ದೆಹಲಿಯ ಕರ್ನಾಟಕ ಭವನದಲ್ಲಿ ಭೇಟಿಯಾಗಿದ್ದರು. ಇವರಿಬ್ಬರು ಸುಮಾರು ಒಂದೂವರೆ ಗಂಟೆ ದೀರ್ಘಕಾಲ ಚರ್ಚೆ ನಡೆಸಿದ್ದರು. ಸಚಿವ ಸಂಪುಟಕ್ಕೆ ಒಟ್ಟು ಆರು ಖಾತೆಗಳನ್ನು ಭರ್ತಿ ಮಾಡಬೇಕಿದ್ದು, ರಾಜ್ಯ ಸರ್ಕಾರಕ್ಕೆ ಸಂಕಷ್ಟ ಎದುರಾಗಿದೆ. ಈಗಾಗಲೇ ರಾಜ್ಯ ಕಾಂಗ್ರೆಸ್ ನಲ್ಲಿ ಬಂಡಾಯದ ಬಿಸಿ ಬೂದಿ ಮುಚ್ಚಿದ ಕೆಂಡದಂತಿದ್ದು ಎಲ್ಲರಿಗೂ ಸಮಧಾನ ಪಡಿಸುವ ಕುರಿತು ಮಹತ್ವದ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಬಜೆಟ್ ನಂತ್ರ ಪೆಟ್ರೋಲ್, ಡೀಸೆಲ್ ಆದಾಯ ಭಾರೀ ಕುಸಿತ!
ಕಾಂಗ್ರೆಸ್ ನಾಯಕರ ಜೊತೆ ಚರ್ಚಿಸಿ ಖಾತೆ ಹಂಚಿಕೆ ಮಾಡಿ, ಬಂಡಾಯ ಏಳುವ ಶಾಕಸರಿಗೆ ನಿಗಮ ಮಂಡಳಿ ಅಧ್ಯಕ್ಷರಾಗಿ ಆಯ್ಕೆ ಮಾಡುವಂತೆ ವೇಣುಗೋಪಾಲ್ ಅವರಿಗೆ ದೇವೇಗೌಡರು ಸಲಹೆ ನೀಡಿದ್ದಾರೆ. ಇದೇ ವೇಳೆ ಲೋಕಸಭೆ ಸಂಬಂಧಿತ ಚರ್ಚೆ ನಡೆದಿದ್ದು, ರಾಜಸ್ಥಾನ ಹಾಗೂ ಮಧ್ಯ ಪ್ರದೇಶ ಚುನಾವಣೆಗಳಲ್ಲಿ ಬಿಎಸ್‍ಪಿ ನಾಯಕಿ ಮಾಯಾವತಿ ಕಾಂಗ್ರೆಸ್ ಗೆ ಬೆಂಬಲ ನೀಡದಿರುವ ಬಗ್ಗೆಯೂ ಚರ್ಚೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಭಾರತದಲ್ಲಿ ಅತಿ ಹೆಚ್ಚು, ಅತಿ ಕಡಿಮೆ ಬೆಲೆಯಲ್ಲಿ ಪೆಟ್ರೋಲ್ ಸಿಗೋ ನಗರಗಳು
ಭೇಟಿಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಸಚಿವ ಸಂಪುಟ ವಿಸ್ತರಣೆ ಕುರಿತು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‍ರೊಂದಿಗೆ ಮಾತನಾಡಿದ್ದೇನೆ. ನಮ್ಮ ಭೇಟಿ ಕೇವಲ ಸೌಜನ್ಯಯುತವಾದದ್ದು. ವೇಣುಗೋಪಾಲ್‍ರವರು ಈ ಬಗ್ಗೆ ಸಿದ್ದರಾಮಯ್ಯ ಹಾಗೂ ಪ್ರಮುಖ ನಾಯಕರ ಜೊತೆ ಮಾತನಾಡಿ ತೀರ್ಮಾನ ಮಾಡುವ ಭರವಸೆ ನೀಡಿದ್ದಾರೆ ಎಂದು ಹೇಳಿದರು.
ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಎಸ್‍ಪಿ ರಾಜ್ಯದಲ್ಲಿ ಒಂದಾಗಿವೆ. ಸರ್ಕಾರದಲ್ಲಿ ಪ್ರಮುಖ ಖಾತೆಯೊಂದನ್ನ ಬಿಎಸ್‍ಪಿಗೆ ನೀಡಿದೆ. ಇದಕ್ಕೆ ಕಾಂಗ್ರೆಸ್ ಕೂಡಾ ಯಾವುದೇ ವಿರೋಧ ವ್ಯಕ್ತಪಡಿಸಿಲ್ಲ. ಮಾಯಾವತಿಯವರ ಹೇಳಿಕೆ ಆಧರಿಸಿ ಮಹಾಮೈತ್ರಿಗೆ ಹಿನ್ನೆಡೆ ಎಂದು ಭಾವಿಸುವುದು ತಪ್ಪು. ರಾಜಕೀಯದಲ್ಲಿ ಯಾವುದು ಅಂತಿಮವಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ನೂರರ ಗಡಿಯತ್ತ ತೈಲ ಬೆಲೆ: ಪೆಟ್ರೋಲ್‍ನಲ್ಲಿ ಕೇಂದ್ರ, ರಾಜ್ಯ ಸರ್ಕಾರದ ಪಾಲು ಎಷ್ಟು? ಕೇಂದ್ರ ಹೇಳೋದು ಏನು?
ನವದೆಹಲಿ: ಭೂತಾನ್ ಮಾಜಿ ಪ್ರಧಾನಿ ತಮ್ಮ ಪತ್ನಿ ಟಾಶಿ ಡೋಮ ಅವರನ್ನು ಕೂಸುಮರಿ ಮಾಡಿ ಬೆನ್ನಮೇಲೆ ಹೊತ್ತು ನಡೆದಿರುವ ಫೋಟೋ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಪ್ರಶಂಸೆಗೆ ಕಾರಣವಾಗಿದೆ.
ಅಂದಹಾಗೇ ಮಾಜಿ ಪ್ರಧಾನಿ ಶೆರಿಂಗ್ ಟೋಬ್ಗೆ ತಮ್ಮ ಪತ್ನಿ ಜೊತೆ ಭೂತಾನ್ ಪ್ರದೇಶವೊಂದಕ್ಕೆ ಭೇಟಿ ನೀಡಿದ್ದ ವೇಳೆ ಘಟನೆ ನಡೆದ್ದು, ಈ ವೇಳೆ ಬೆಟ್ಟವೊಂದರ ರಸ್ತೆಯಲ್ಲಿ ಕೆಸರು ತುಂಬಿದ್ದರಿಂದ ಪತ್ನಿಯ ಕಾಲು ಕೊಳಕಾಗದಿರಲಿ ಎಂಬ ಉದ್ದೇಶದಿಂದ ಪತ್ನಿಯನ್ನು ಹೊತ್ತು ಸಾಗಿದ್ದಾರೆ.
Not as dashing as Sir Walter Raleigh, but a man’s gotta do what a man’s gotta do to keep his lady’s feet clean. 💕 pic.twitter.com/cSJWoMQm07
ಈ ಫೋಟೋವನ್ನು ಅವರೇ ತಮ್ಮ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಸ್ತ್ರೀ ನಿಷ್ಠ ಸೇವೆಗಾಗಿ ಜಗತ್ ಪ್ರಸಿದ್ಧಿಯಾದ ಇಂಗ್ಲೆಂಡ್ ಸರ್ ವಾಲ್ಟರ್ ರ‍್ಯಾಲೆ ಮಾಡಿದಂತಹ ತ್ಯಾಗವನ್ನೇನೂ ನಾನು ಮಾಡಿಲ್ಲ. ಅದರೂ, ಒಬ್ಬ ಪುರುಷ ತನ್ನ ಸಂಗಾತಿಗಾಗಿ ಏನನ್ನು ಮಾಡಬಹುದೋ ಅದನ್ನೇ ಮಾಡಿದ್ದೇನೆ ಎಂದು ಬರೆದುಕೊಂಡಿದ್ದಾರೆ.
ಟೋಬ್ಗೆ ಟ್ವೀಟ್‍ಗೆ ಪ್ರತಿಕ್ರಿಯೆ ನೀಡಿರುವ ನೆಟ್ಟಿಗರು, ಬಾಹುಬಲಿ ಚಿತ್ರದಲ್ಲಿ ನಟ ಪ್ರಭಾಸ್ ಸ್ಕ್ರೀನ್ ಮೇಲೆ ಪತ್ನಿ ದೇವಸೇನಾ ಅನುಷ್ಕಾರ ತಮ್ಮ ಭುಜದ ಮೇಲೆ ನಡೆಸಿದ ಘಟನೆಯನ್ನು ನೆನಪು ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನೂ ಕೆಲವರು ಇಲ್ಲಿ ಗಂಡನನ್ನ ಗುರಿ ಮಾಡಲಾಗಿದೆ ಎಂದು ಟ್ವೀಟ್ ಮಾಡಿ ವ್ಯಂಗ್ಯ ಮಾಡಿದ್ದರೆ ಕೆಲವರು ಪುರುಷನ ನಮ್ರತೆ ಎಂದು ಬರೆದು ಕೊಂಡಾಡಿದ್ದಾರೆ.
ಅಜಾತ ಶತ್ರ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಅವರು ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದು, ವಿದೇಶಿ ನಾಯಕರುಗಳ ಭೇಟಿ, ಉದ್ಘಾಟನಾ ಸಮಾರಂಭ ಹಾಗೂ ಇನ್ನೂ ಅನೇಕ ಅಪರೂಪದ ಫೋಟೋಗಳನ್ನು ನೋಡಿ.
2003ರ ಮೇ 21ರಂದು ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರಿಂದ ಲಕ್ನೋದ ಕೊರಿಯಾ ಘಾಟ್ ಪ್ರದೇಶದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಶಂಕು ಸ್ಥಾಪನೆ.2003ರ ಮೇ 24ರಂದು ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರು ನವದೆಹಲಿಯಲ್ಲಿ ನಡೆದ ನೂತನ ಸಚಿವರ ಪ್ರಮಾಣವಚನ ಸಮಾರಂಭದಲ್ಲಿ, ರಾಷ್ಟ್ರಪತಿ ಡಾ.ಎ.ಪಿ.ಜೆ. ಅಬ್ದುಲ್ ಕಲಾಂ, ಉಪ ರಾಷ್ಟ್ರಪತಿ ಶ್ರೀ ಭೈರೋನ್ ಸಿಂಗ್ ಶೇಕಾವತ್‍ರೊಂದಿಗೆ.2003ರ ಜನವರಿ 3ರಂದು ಬೆಂಗಳೂರಿನಲ್ಲಿ ನಡೆದ 90ನೇ ಭಾರತೀಯ ವಿಜ್ಞಾನ ಸಮಾವೇಶ ಸಮಾರಂಭದಲ್ಲಿ ಪಾಲ್ಗೊಂಡಿದ್ದಾಗ.2003ರ ಮೇ 3ರಂದು ಅಲ್ಪಸಂಖ್ಯಾತರ ಶಿಕ್ಷಣ ಮತ್ತು ಆರ್ಥಿಕ ಅಭಿವೃದ್ಧಿಯ ರಾಷ್ಟ್ರೀಯ ಸಮಾವೇಶ ಉದ್ಘಾಟನಾ ಕಾರ್ಯಕ್ರಮದಲ್ಲಿ ಪ್ರಧಾನಿ ಅಟಲ್ ಜೀ.2003 ಮೇ 4ರಂದು ಬೆಂಗಳೂರಿನ ಎಚ್.ಎ.ಎಲ್ ನಡೆದ ವಿಜ್ಞಾನಿಗಳೊಂದಿಗೆ ಕಾರ್ಯಕ್ರಮದಲ್ಲಿ ಸಿಬ್ಬಂದಿಗಳೊಂದಿಗೆ ವಾಜಪೇಯಿ.2003ರ ಜನವರಿ 6ರಂದು ಮುಂಬೈನಲ್ಲಿ ನಡೆದ 14ನೇ ವರ್ಷದ ಶ್ರೀ ಹಸುಅಡ್ವಾನಿ ಮೆಮೋರಿಯಲ್ ನ ವಿವೇಕಾನಂದ ಶಿಕ್ಷಣ ಸಂಸ್ಥೆಯನ್ನು ದೀಪ ಹಚ್ಚುವ ಮೂಲಕ ಉದ್ಘಾಟಿಸಿದ ಪ್ರಧಾನಿ.2003ರ ಮೇ 7ರಂದು ನವದೆಹಲಿಯಲ್ಲಿ ಬೊಸ್ನಿಯಾ ಮತ್ತು ಹರ್ಜೆಗೋವಿನಾ ವಿದೇಶಾಂಗ ಸಚಿವ ಡಾ. ಮೆಲೇಡೆನ್ ಐವೊಯಿಕ್ ರವರ ಜೊತೆ ಮಾತುಕತೆ.2003ರ ಮೇ 7ರಂದು ನವದೆಹಲಿಯಲ್ಲಿ ಲಾವೋಸ್ ನ ಉಪಪ್ರಧಾನಿ ಶ್ರೀ ಸೋಮಸಾವತ್ ಲೆಂಗ್ಸಾವ್ದ್ ಅವರೊಂದಿಗೆ.2003ರ ಮೇ 11 ರಂದು ನವದೆಹಲಿಯಲ್ಲಿ ನಡೆದ ಡಿ.ಆರ್.ಡಿ.ಓ ಕಾರ್ಯಕ್ರಮದಲ್ಲಿ ಪ್ರಶಸ್ತಿ ವಿತರಿಸುತ್ತಿರುವ ಪ್ರಧಾನಿ ವಾಜಪೇಯಿ.2003ರ ಮೇ 12ರಂದು ನವದೆಹಲಿಯ ಸಮಾರಂಭಕ್ಕೆ ಆಗಮಿಸಿದ್ದ ಮೊಜಾಂಬಿಕ್ ಗಣರಾಜ್ಯದ ಅಧ್ಯಕ್ಷ ಜೋಕ್ವಿಮ್ ಅಲ್ಬೆರ್ಟೊ ಚಿಸ್ಸಾನೋರವರನ್ನು ರಾಷ್ಟ್ರಪತಿ ಡಾ.ಎ.ಪಿ.ಜೆ ಅಬ್ದುಲ್ ಕಲಾಂರೊಂದಿಗೆ ಸ್ವಾಗತಿಸುತ್ತಿರುವುದು.ಮೇ 15, 2003 ರಂದು ಮನಾಲಿಯಲ್ಲಿನ ಪ್ರನಿ ಗ್ರಾಮದ ಸ್ಥಳೀಯ ಕಲಾವಿದರೊಂದಿಗೆ.2003ರ ಮೇ 18ರಂದು ನವದೆಹಲಿಗೆ ತೆರಳುವ ಮೊದಲು ಮನಾಲಿ ವಿಮಾನ ನಿಲ್ದಾಣದ ಮಧ್ಯಮದವರಿಗೆ ಪ್ರತಿಕ್ರಿಯಿಸುತ್ತಿರುವ ಪ್ರಧಾನಿ.2003ರ ಮೇ 24ರಂದು ನವದೆಹಲಿಯಲ್ಲಿ ಕೆ. ಕಸ್ತೂರಿರಂಗನ್ ಅವರ ನೇತೃತ್ವದ ವಿಜ್ಞಾನಿಗಳ ತಂಡದಿಂದ ಜಿ.ಎಸ್.ಎಲ್.ವಿ-3 ಮಾದರಿಯನ್ನು ಪ್ರಸ್ತುತಪಡಿಸುತ್ತಿರುವುದು.2003ರ ಮೇ 27 ನವದೆಹಲಿಯಿಂದ ಜರ್ಮನಿ, ರಷ್ಯಾ ಮತ್ತು ಸ್ವಿಜ್ಜರ್ಲೆಂಡ್ ಹಾಗೂ ಫ್ರಾನ್ಸ್ ಪ್ರವಾಸಕ್ಕೆ ತೆರಳುವ ಮೊದಲು ಅಡ್ವಾಣಿಗೆ ಹಸ್ತಲಾಘವ.2003 ಮೇ 28ರಂದು ಜರ್ಮನಿ ಪ್ರವಾಸದ ವೇಳೆ ವಾಜಪೇಯಿಯವರಿಗೆ ಜರ್ಮನಿಯ ಚಾನ್ಸೆಲರ್ ಮಿ. ಗೆರ್ಹಾರ್ಡ್ ಶ್ರೋಡರ್ ರವರು ಸ್ವಾಗತಿಸುತ್ತಿರುವುದು.2003ರ ಮೇ 31 ರಂದು ರಷ್ಯಾದ ಸೇಂಟ್ ಪೀಟರ್ಸ್ ಬರ್ಗ್ ನಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ರೊಂದಿಗೆ ಮಾತುಕತೆ.2003ರ ಮೇ 31ರಂದು ಸೇಂಟ್ ಪೀಟರ್ಸ್ ಬರ್ಗ್ ನಲ್ಲಿ ನಡೆದ ನೆವಾ ನದಿ ಉತ್ಸವದಲ್ಲಿ ಪಾಲ್ಗೊಂಡಿದ್ದ ಅಟಲ್ ಜೀ.ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ.2000ದ ಜನವರಿ 2ರಂದು ಮಹಾರಾಷ್ಟ್ರದ ಪುಣೆಯಲ್ಲಿ ನಡೆದ ಸಂತ ಬ್ಯಾನೇಶ್ವರ ಮಹಾರಾಜ ಸಭೆಯಲ್ಲಿ ಕೇಂದ್ರ ಸಂಸ್ಕೃತಿ ಸಚಿವರಾಗಿದ್ದ ಅನಂತ ಕುಮಾರ್ ಹಾಗೂ ಮುಖ್ಯಮಂತ್ರಿ ವಿಲಾಸ್ ರಾವ್ ದೇಶಮುಖ್ ರೊಂದಿಗೆ ಪಾಲ್ಗೊಂಡಿದ್ದಾಗ.2003ರ ಮೇ 2ರಂದು ಒಡಿಸ್ಸಾ ಮುಖ್ಯಮಂತ್ರಿ ನವೀನ್ ಪಾಟ್ನಾಯಕ್ ಅಟಲ್ ಜೀಯವರನ್ನು ನವದೆಹಲಿಯಲ್ಲಿ ಭೇಟಿಯಾದ ವೇಳೆ.2003ರ ಮೇ 20ರಂದು ನವದೆಹಲಿಯಲ್ಲಿ ನಡೆದ ಮೊದಲ ಬಾರಿ ಮೌಂಟ್ ಎವರೆಸ್ಟ್ ಏರಿದ ಸರ್ ಎಡ್ಮಂಡ್ ಹಿಲರಿಯವರನ್ನು ಸನ್ಮಾನಿಸುತ್ತಿರುವುದು.2003ರ ಮೇ 21ರಂದು ಲಕ್ನೋದ ವಿಮಾನ ನಿಲ್ದಾಣದಿಂದ ಲಕ್ನೋ-ಜೆಡ್ಡಾ ಗೆ ವಿಮಾನಯಾನಕ್ಕೆ ಚಾಲನೆ ನೀಡಿದ ಅಟಲ್ ಜೀ.2003ರ ಮೇ 22ರಂದು ನವದೆಹಲಿಯಲ್ಲಿ ಬಾಂಗ್ಲಾದೇಶದ ಹಣಕಾಸು ಸಚಿವ ಎಂ. ಸೈಫೂರ್ ರೆಹಮಾನ್ ರವರೊಂದಿಗೆ ಮಾತುಕತೆ.
ನವದೆಹಲಿ: ಅಟಲ್ ಬಿಹಾರಿ ಕೇವಲ ರಾಜಕಾರಣಿಯಲ್ಲ. ಕವಿ, ಪತ್ರಕರ್ತರಾಗಿದ್ದ ಅವರು ಸಿನಿಮಾ ನೋಡುವ ಹವ್ಯಾಸವನ್ನು ಬೆಳೆಸಿಕೊಂಡಿದ್ದರು.
ಸಾಹಿತ್ಯ, ಸಂಗೀತವನ್ನು ಅಪಾರವಾಗಿ ಪ್ರೀತಿಸುತ್ತಿದ್ದ ವಾಜಪೇಯಿ ಅವರು, ಹೇಮಾಮಾಲಿನಿ ಅವರ ಮೇಲೆ ಬಹಳ ಅಭಿಮಾನವಿತ್ತು. ಅದರಲ್ಲೂ ಕನಸಿನ ಕನ್ಯೆ ದ್ವಿಪಾತ್ರದಲ್ಲಿ ಅಭಿನಯಿಸಿದ್ದ ‘ಸೀತಾ ಔರ್ ಗೀತಾ’ ಚಲನಚಿತ್ರವನ್ನು ಅವರು ಬರೋಬ್ಬರಿ 25 ಬಾರಿ ವೀಕ್ಷಿಸಿದ್ದರು.
ಹೇಮಾಮಾಲಿನಿ ವಾಹಿನಿಯೊಂದರಲ್ಲಿ ನೀಡಿದ ಸಂದರ್ಶನದಲ್ಲಿ, ನಾನು ವಾಜಪೇಯಿ ಅವರನ್ನು ಭೇಟಿಯಾಗಿರಲಿಲ್ಲ. ಹೀಗಾಗಿ ಒಮ್ಮೆ ಅವರನ್ನು ಭೇಟಿಯಾಗಬೇಕು ಎಂದು ಅಧಿಕಾರಿಗಳನ್ನು ಕೇಳಿಕೊಂಡಿದ್ದೆ. ಅವರನ್ನು ನೋಡಲು ನಾನು ಹೋದಾಗ ಬಹಳ ಮುಜುಗರದಿಂದಲೇ ಮಾತನಾಡಿದ್ದರು ಎಂದು ಆ ಕ್ಷಣವನ್ನು ಹಂಚಿಕೊಂಡಿದ್ದರು.
1972 ರಲ್ಲಿ ನಾನು ಅಭಿನಯಿಸಿದ ಸೀತಾ ಔರ್ ಗೀತಾ ಸಿನಿಮಾವನ್ನು ಅವರು 25 ಬಾರಿ ವೀಕ್ಷಿಸಿದ್ದರು. ನನ್ನ ಅಭಿಮಾನಿಯಾಗಿದ್ದ ಕಾರಣಕ್ಕೆ ಅವರು ಮುಜುಗರಂದಿಂದಲೇ ಮಾತನಾಡಿರಬಹುದು ಎಂದು ಹೇಮಾಮಲಿನಿ ತಿಳಿಸಿದ್ದರು.
A very sad day for India – we have lost a towering leader, a great human being who was admired by the whole nation. A wonderful patriot, a perfect politician, his appeal went beyond parties & petty politics. Yes! Sadly, Atal Behari Vajpayee ji is no more pic.twitter.com/Vg1geEGF8b
ಅಟಲ್ ನಿಧನಕ್ಕೆ ಕಂಬನಿ ಮಿಡಿದ ಹೇಮಾಮಾಲಿನಿ, ವಿನೋದ್ ಖನ್ನಾ ಅವರಿಂದ ನನಗೆ ಅಟಲ್ ಬಿಹಾರಿ ವಾಜಪೆಯಿ ಅವರ ಪರಿಚಯವಾಯಿತು. ನಾನು ಬಿಜೆಪಿಗೆ ಸೇರಲು ಅಟಲ್ ಕಾರಣ ಎನ್ನುವುದನ್ನು ಹೆಮ್ಮೆಯಿಂದ ಹೇಳುತ್ತೇನೆ ಎಂದು ಬರೆದುಕೊಂಡಿದ್ದಾರೆ.
2003 ರಿಂದ 2009 ರವರೆಗೆ ಬಿಜೆಪಿಯ ರಾಜ್ಯಸಭಾ ಸದಸ್ಯರಾಗಿದ್ದ ಅವರು 2014ರಲ್ಲಿ ಉತ್ತರ ಪ್ರದೇಶದ ಮಥುರಾ ಲೋಕಸಭೆಯಿಂದ ಸ್ಪರ್ಧಿಸಿ ಗೆದ್ದಿದ್ದರು.
My assocn with Atalji began whn Vinod Khanna introduced me to him.He ws so easy to talk to & his goodness shone in his eyes. Later, I was told tht he was v fond of movies & had even seen Seeta aur Geeta 25 times! I can proudly say tht I joined BJP bec I was drawn to ths great man pic.twitter.com/Pdnzf0cHJ5
ನವದೆಹಲಿ: ಮಾಜಿ ಪ್ರಧಾನಿ, ಅಜಾತಶತ್ರು ಮತ್ತು ಭಾರತ ರತ್ನ ಪುರಸ್ಕೃತ ಅಟಲ್ ಬಿಹಾರಿ ವಾಜಪೇಯಿ ಅವರ ಅಗಲಿಕೆಯಿಂದ ದೇಶದಾದ್ಯಂತ ಶೋಕಾಚರಣೆ ಆಚರಿಸಲಾಗುತ್ತಿದ್ದು, ಗಣ್ಯಾತಿ ಗಣ್ಯರು ಅವರ ಅಂತಿ ದರ್ಶನ ಪಡೆದು ನಮನ ಸಲ್ಲಿಸುತ್ತಿದ್ದಾರೆ.
ದೆಹಲಿಯ 6ಎ ಕೃಷ್ಣಮೆನನ್ ಮಾರ್ಗ್ ನಲ್ಲಿರುವ ವಾಜಪೇಯಿ ನಿವಾಸದಲ್ಲಿಯೇ ಅಂತಿಮ ದರ್ಶನಕ್ಕೆ ಇಡಲಾಗಿದೆ. ಈ ವೇಳೆ ಬಂಧು ಮಿತ್ರರು ಮತ್ತು ಗಣ್ಯರಿಗೆ ದರ್ಶನ ಪಡೆಯಲು ಅವಕಾಶ ಕಲ್ಪಿಸಲಾಗಿತ್ತು. ಪ್ರಧಾನ ಮಂತ್ರಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್, ಬಿಜೆಪಿ ಮುಖಂಡ ಹಾಗೂ ವಾಜಪೇಯಿ ಅವರ ಆಪ್ತ ಎಲ್ ಕೆ ಅಡ್ವಾಣಿ, ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ, ಮಾಜಿ ಪ್ರಧಾನಿ ಮನ ಮೋಹನ್ ಸಿಂಗ್ ಸೇರಿದಂತೆ ಇತರ ರಾಜ್ಯಗಳ ಮುಖ್ಯಮಂತ್ರಿಗಳು, ರಾಜಕೀಯ ಮುಖಂಡರು ಅಂತಿಮ ದರ್ಶನ ಪಡೆದಿದ್ದಾರೆ.
ಅಷ್ಟೇ ಅಲ್ಲದೇ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ಬಿಜೆಪಿ ಅಧ್ಯಕ್ಷ ಅಮಿತ್ ಶಾ, ರಾಜನಾಥ್ ಸಿಂಗ್, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯ ನಾಥ್, ಯೋಗ ಗುರು ಬಾಬಾ ರಾಮ್ ದೇವ್ ಸೇರಿದಂತೆ ಇನ್ನು ಅನೇಕ ಗಣ್ಯರು ಅಟಲ್ ಬಿಹಾರಿ ವಾಜಪೇಯಿಗೆ ಮಾಲಾರ್ಪಣೆ ಸಮರ್ಪಿಸಿ ಅಂತಿಮ ನಮನವನ್ನು ಸಲ್ಲಿಸಿದ್ದಾರೆ.
ಯುಮುನಾ ನದಿ ದಂಡೆಯಲ್ಲಿರುವ ರಾಷ್ಟ್ರೀಯ ಸ್ಮೃತಿ ಸ್ಥಳದವರೆಗೆ ಅಂತಿಮ ಯಾತ್ರೆ ನಡೆಯಲಿದ್ದು, ಬಳಿಕ ಬ್ರಾಹ್ಮಣ ಸಂಪ್ರದಾಯದಂತೆ ಅಂತ್ಯ ಸಂಸ್ಕಾರ ನಡೆಯಲಿದೆ. ಲಾಲ್ ಬಹದ್ದೂರ್ ಶಾಸ್ತ್ರಿಯವರ ಸ್ಮಾರಕವಿರುವ ವಿಜಯ್‍ಘಾಟ್ ಮತ್ತು ಶಾಂತಿವನದ ಪಕ್ಕದಲ್ಲೇ ಅಟಲ್ ಸ್ಮಾರಕ ನಿರ್ಮಾಣಕ್ಕೆ ನಗರಾಭಿವೃದ್ಧಿ ಇಲಾಖೆ 1.5 ಎಕರೆ ಜಮೀನು ಮೀಸಲಿರಿಸಿದೆ. ಅಜಾತ ಶತ್ರುವಿನ ನಿಧನಕ್ಕೆ ಇಡೀ ದೇಶವೇ ಕಣ್ಣೀರು ಹಾಕುತ್ತಿದೆ.
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ(93) ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು, ಚಿಕಿತ್ಸೆ ಫಲಕಾರಿಯಾಗದೇ ದೆಹಲಿಯಲ್ಲಿರುವ ಏಮ್ಸ್ ಆಸ್ಪತ್ರೆಯಲ್ಲಿ ಗುರುವಾರ ಸಂಜೆ ವಿಧಿವಶರಾಗಿದ್ದಾರೆ. ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ವಾಜಪೇಯಿ ಕೆಲ ವರ್ಷಗಳಿಂದ ಸಾರ್ವಜನಿಕ ಜೀವನದಲ್ಲಿ ಕಾಣಿಸಿಕೊಳ್ಳುತ್ತಿರಲಿಲ್ಲ. ಕೆಲ ತಿಂಗಳ ಹಿಂದೆ ಏಮ್ಸ್ ಆಸ್ಪತ್ರೆಗೆ ದಾಖಲಾಗಿ ಬಳಿಕ ಡಿಸ್ಚಾರ್ಜ್ ಆಗಿದ್ದರು. ಆದರೆ ನಂತರ ಅವರ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗೆ ಮತ್ತೆ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಒಟ್ಟಿನಲ್ಲಿ 9 ವಾರ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದ ಅಟಲ್ ಜಿ ನಿನ್ನೆ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದಿದ್ದರು.
ಮುಂಬೈ: ಮಾಜಿ ಪ್ರಧಾನಿ, ಅಜಾತಶತ್ರು ಅಟಲ್ ಬಿಹಾರಿ ವಾಜಪೇಯಿಯವರ ಅಗಲಿಕೆಯಿಂದ ನನ್ನ ತಂದೆಯನ್ನೇ ಕಳೆದುಕೊಂಡಂತಾಗಿದೆ ಎಂದು ಖ್ಯಾತ ಹಿನ್ನೆಲೆ ಗಾಯಕಿ ಹಾಗೂ ಭಾರತದ ನೈಟಿಂಗೇಲ್ ಎಂದೇ ಹೆಸರು ಪಡೆದಿರುವ ಲತಾ ಮಂಗೇಶ್ಕರ್ ತಿಳಿಸಿದ್ದಾರೆ.
ಅಟಲ್ ಜಿಯವರ ಅಗಲಿಕೆಗೆ ಕಂಬನಿ ಮಿಡಿದ ಅವರು, ಅವರೊಂದಿಗಿನ ತಮ್ಮ ಒಡನಾಟವನ್ನು ಹಂಚಿಕೊಂಡಿದ್ದಾರೆ. ಅಟಲ್ ಜೀಯವರು ನನ್ನನ್ನು ಯಾವಾಗಲೂ ಭೇಟಿ ಎಂದೇ ಕರೆಯುತ್ತಿದ್ದರು. ನಾನೂ ಕೂಡ ಅವರನ್ನು ದಾದಾ ಎಂದೇ ಕರೆಯುತ್ತಿದ್ದೆ. ಅವರ ಅಗಲಿಕೆಯಿಂದ ನನ್ನ ತಂದೆಯನ್ನೇ ಮತ್ತೊಮ್ಮೆ ಕಳೆದುಕೊಂಡ ರೀತಿ ನನಗೆ ನೋವುಂಟಾಗಿದೆ ಎಂದು ಭಾವುಕರಾದ್ರು.
ನಮ್ಮ ತಂದೆ ಪಂಡಿತ್ ದಿನನಾಥ್ ಮಂಗೇಶ್ಕರ್ ರೊಂದಿಗೆ ಅವರು ಹೆಚ್ಚಿನ ಒಡನಾಟವನ್ನು ಹೊಂದಿದ್ದರು. ಅಟಲ್ ಜಿ ನಮ್ಮ ಮನೆಗೆ ಹಲವು ಬಾರಿ ಬಂದಿದ್ದರು. ಆವಾಗಿನಿಂದಲೂ ನಾನು ಅವರಿಗೆ ಹೆಚ್ಚು ಹತ್ತಿರದಲ್ಲಿದ್ದೆನೆ. ಪೂಣೆಯಲ್ಲಿ ದಿನನಾತ್ ಮಂಗೇಶ್ವರ್ ಹೆಸರಿನಲ್ಲಿ ನಿರ್ಮಿಸಿದ್ದ ಆಸ್ಪತ್ರೆಯನ್ನು ಉದ್ಘಾಟನೆಗೆ ಕರೆದಾಗ ಅವರು ಆತ್ಮೀಯವಾಗಿ ಬಂದು ಉದ್ಘಾಟನೆಯನ್ನು ನೆರವೇರಿಸಿದ್ದರು.
2014 ರಲ್ಲಿ ಅವರು ಬರೆದ ಎಲ್ಲಾ ಕವಿತೆಗಳನ್ನು ಅಂತರ್ನಾದ್ ಎಂಬ ಶೀರ್ಷಿಕೆಯಲ್ಲಿ ಸಂಗೀತದ ಆಲ್ಬಂ ಆಗಿ ಸಿದ್ಧಪಡಿಸಿದ್ದೆವು. ಅದನ್ನು ನವದೆಹಲಿಯಲ್ಲಿರುವ ಅವರ ಮನೆಯಲ್ಲಿ ಬಿಡುಗಡೆ ಮಾಡಿದ್ದೆವು. ಅದಕ್ಕೆ ಅವರು ಅಪಾರ ಸಂತೋಷವನ್ನು ವ್ಯಕ್ತಪಡಿಸಿದ್ದರು ಎಂದು ಅಟಲ್‍ಜಿ ಯವರ ಒಡನಾಟವನ್ನು ನೆನಪಿಸಿಕೊಂಡರು.
ದೇಶ ಭಾರತ ರತ್ನಕ್ಕಿಂತಲೂ ಹೆಚ್ಚಿರುವ ಮಹಾನ್ ವ್ಯಕ್ತಿಯನ್ನು ಕಳೆದುಕೊಂಡು ದುಃಖ ಸಾಗರದಲ್ಲಿ ಮುಳುಗಿದೆ ಎಂದು ತಮ್ಮ ನೋವನ್ನು ವ್ಯಕ್ತಪಡಿಸಿದರು.