Tag: former Prime Minister Manmohan Singh

  • ಮೋದಿ ವಿದೇಶ ಪ್ರವಾಸದ ಲೆಕ್ಕ

    ಮೋದಿ ವಿದೇಶ ಪ್ರವಾಸದ ಲೆಕ್ಕ

    ನವದೆಹಲಿ: ನರೇಂದ್ರಮೋದಿ ಅವರು ಪ್ರಧಾನಿ ಹುದ್ದೆಯನ್ನು ಅಲಂಕರಿಸಿದ ಬಳಿಕ ಹಲವು ವಿದೇಶ ಪ್ರವಾಸಗಳನ್ನು ಕೈಗೊಂಡಿದ್ದು, ತಮ್ಮ ಆಡಳಿತ ಅವಧಿಯ ಅಂತಿಮ ಪ್ರವಾಸವನ್ನು ಈ ತಿಂಗಳಿನಲ್ಲಿ ಕೈಗೊಳ್ಳುವ ನಿರೀಕ್ಷೆ ಇದೆ.

    ಕಳೆದ ಐದು ವರ್ಷಗಳಲ್ಲಿ ಮೋದಿ ಅವರು ಏರ್ ಇಂಡಿಯಾ ಸಂಸ್ಥೆಯ ಮೂಲಕ ವಿದೇಶಿ ಪ್ರವಾಸಗೊಂಡ ಪರಿಣಾಮ ಸಂಸ್ಥೆ ಒಟ್ಟು 443.4 ಕೋಟಿ ರೂ. ಮೊತ್ತದ ಬಿಲ್ ನೀಡಿದೆ. ಪ್ರಧಾನಿ ಮಂತ್ರಿಗಳ ಅಧಿಕೃತ ಕಚೇರಿ ಈ ಮಾಹಿತಿಯನ್ನು ನೀಡಿದೆ.

    ಮೋದಿ ಅವರಿಗೂ ಮುನ್ನ 2ನೇ ಅವಧಿಗೆ ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ಅವರು, 2009-14ರ ಅವಧಿಯಲ್ಲಿ 38 ವಿದೇಶಿ ಪ್ರವಾಸಗಳನ್ನು ಕೈಗೊಂಡಿದ್ದರು. ಆ ವೇಳೆ ಕೇಂದ್ರ ಸರ್ಕಾರ 493.22 ಕೋಟಿಗಳನ್ನು ಏರ್ ಇಂಡಿಯಾಗೆ ಪಾವತಿ ಮಾಡಿತ್ತು.

    ವಿದೇಶಿ ಪ್ರವಾಸದ ವಿಚಾರವಾಗಿ ಪ್ರಧಾನಿ ಮೋದಿ ಅವರು ವಿಪಕ್ಷಗಳಿಂದ ಭಾರೀ ಟೀಕೆಗೆ ಗುರಿಯಾಗಿದ್ದರು. ಆದರೆ ಮೋದಿ ಅವರು ಪ್ರಧಾನಿ ಆಗುವ ಮುನ್ನ 2ನೇ ಅವಧಿಗೆ ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ಅವರಿಗಿಂತಲೂ 50 ಕೋಟಿ ರೂ. ವೆಚ್ಚ ಕಡಿಮೆ ಇದೆ. ಆದರೆ ಪಿಎಂಒ ನೀಡಿರುವ ಮಾಹಿತಿ ಅನ್ವಯ ಈ ಬಿಲ್ ನಲ್ಲಿ ಇನ್ನು 5 ಪ್ರವಾಸಗಳ ಖರ್ಚಿನ ಪ್ರಮಾಣವನ್ನು ಸೇರಿಸಬೇಕಿದೆ.

    ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಯುಎಇ ಸರ್ಕಾರ ಅತ್ಯುನ್ನತ ನಾಗರಿಕ ಪುರಸ್ಕಾರ ‘ಝೂಯೆದ್ ಮೆಡಲ್’ ಗೌರವನ್ನು ನೀಡಿ ಗೌರವಿಸಿತ್ತು. ಈ ಹಿನ್ನೆಲೆಯಲ್ಲಿ ಮೋದಿ ಅವರು ತಿಂಗಳ ಅಂತ್ಯದ ವೇಳೆಗೆ ಯುಎಇಗೆ ಭೇಟಿ ನೀಡಿರುವ ಸಾಧ್ಯತೆಗಳಿವೆ.

    ಪ್ರಧಾನಿ ಮೋದಿ ಅವರ ವಿದೇಶಿ ಪ್ರವಾಸಗಳ ಪರಿಣಾಮ ವಿಶ್ವಮಟ್ಟದಲ್ಲಿ ಭಾರತದ ಮೇಲಿನ ಗೌರವ ಹಾಗೂ ದೇಶದ ವರ್ಚಸ್ಸು ಹೆಚ್ಚಾಗಿದ್ದು, ನ್ಯೂಕ್ಲಿಯರ್ ಪವರ್, ಪ್ರಮುಖ ಆರ್ಥಿಖ ಒಪ್ಪಂದಗಳು ಹಾಗೂ ಪ್ರಪಂಚದ ಇತರೇ ದೇಶಗಳೊಂದಿಗೆ ಉತ್ತಮ ಸಂಪರ್ಕವನ್ನು ರೂಪಿಸಿದೆ. ಪ್ರಮುಖವಾಗಿ ಮೋದಿ ಹೆಚ್ಚು ದೇಶಗಳಿಗೆ ಭೇಟಿ ನೀಡಿದ್ದರು ಕೂಡ ಅವರ ಪ್ರಯಾಣ ವೆಚ್ಚ ಕಡಿಮೆ ಆಗಲು ಕಾರಣವಿದ್ದು, ಒಮ್ಮೆ ಒಂದು ದೇಶಕ್ಕ ಪ್ರವಾಸ ಕೈಗೊಳ್ಳುವ ಬದಲು ಹೆಚ್ಚಿನ ದೇಶಗಳನ್ನು ಭೇಟಿ ನೀಡಿದ್ದೇ ಕಾರಣ ಎನ್ನಲಾಗಿದೆ.

    2015 ರಲ್ಲಿ ಮಾಧ್ಯಮವೊಂದರ ಸಂದರ್ಶನದ ವೇಳೆಯೂ ಈ ಬಗ್ಗೆ ಪ್ರಸ್ತಾಪ ಮಾಡಿದ್ದ ಮೋದಿ, ‘ಸಿಂಗಲ್ ಟಿಕೆಟ್, ಡಬಲ್ ಜರ್ನಿ’ ಎಂದು ತಿಳಿಸಿದ್ದರು. ಒಮ್ಮೆಗೆ ಮೋದಿ 6 ದೇಶಗಳನ್ನು ಭೇಟಿ ನೀಡಿದ್ದು ಇಲ್ಲಿ ನೆನಪಿಸಿಕೊಳ್ಳಬಹುದಾಗಿದೆ. ಈ ವೇಳೆ ಮೋದಿ ಅವರು ಉಜ್ಜೇಕಿಸ್ತಾನ್, ಖಜಕಿಸ್ತಾನ್, ರಷ್ಯಾ, ತಜಕಿಸ್ತಾನ್, ಕಿರ್ಗೀಸ್ ರಾಷ್ಟ್ರಗಳಿಗೆ ಭೇಟಿ ನೀಡಿದ್ದರು. ಅಲ್ಲದೇ ತಮ್ಮ ಕೆಲ ದೇಶಗಳಿಗ ಪ್ರವಾಸ ಕೈಗೊಳ್ಳುವ ವೇಳೆ ಬಿಸಿನೆಸ್ ಕ್ಲಸ್ ನಲ್ಲಿ ಪ್ರಯಾಣಿಸಿದ್ದರು. ನೇಪಾಳ, ಬಾಂಗ್ಲಾದೇಶ, ಇರಾನ್, ಸಿಂಗಾಪೂರ್ ಭೇಟಿಗೆ ವಿವಿಐಪಿ ಸೇವೆ ಬದಲು ಬೋಯಿಂಗ್ 727 ಬಿಸಿನಿಎಸ್ ಜೆಟ್ ವಿಮಾನದಲ್ಲಿ ಪ್ರಯಾಣಿಸಿದ್ದರು.

  • ಮೋದಿ ದೇಶದಲ್ಲಿ `ಮೌನಿ ಬಾಬಾ’, ವಿದೇಶದಲ್ಲಿ ಮಾತ್ರ ಮಾತಾಡ್ತಾರೆ : ಶಿವಸೇನೆ

    ಮೋದಿ ದೇಶದಲ್ಲಿ `ಮೌನಿ ಬಾಬಾ’, ವಿದೇಶದಲ್ಲಿ ಮಾತ್ರ ಮಾತಾಡ್ತಾರೆ : ಶಿವಸೇನೆ

    ಮುಂಬೈ: ಬಿಜೆಪಿ ಪಕ್ಷದ ಬಹುಕಾಲದ ಮಿತ್ರ ಪಕ್ಷವಾಗಿದ್ದ ಶಿವಸೇನೆ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಮೋದಿ ದೇಶದ ಸ್ಥಳೀಯ ವಿಷಯಗಳನ್ನು ವಿದೇಶಿದಲ್ಲಿ ನಿಂತು ಮಾತನಾಡುತ್ತಾರೆ. ಪ್ರಧಾನಿಗಳ ಈ ನಡೆ ಸೂಕ್ತವಲ್ಲ ಎಂದು ಕಿಡಿಕಾರಿದೆ.

    ಪ್ರಧಾನಿ ನರೇಂದ್ರ ಮೋದಿ ಅವರ ಇಂಗ್ಲೆಂಡ್ ಪ್ರವಾಸವನ್ನು ಟೀಕಿಸಿರುವ ಶಿವಸೇನೆ, ಬಹುಕೋಟಿ ಸಾಲ ಮಾಡಿ ಇಂಗ್ಲೆಂಡ್ ಗೆ ಪರಾರಿಯಾಗಿರುವ ವಿಜಯ್ ಮಲ್ಯ ಅಲ್ಲೇ ಇದ್ದರೂ ಪ್ರಧಾನಿಗಳು ಬರಿಗೈ ನಲ್ಲಿ ಭಾರತಕ್ಕೆ ವಾಪಸ್ ಆಗುತ್ತಿದ್ದಾರೆ ಅಂತಾ ವ್ಯಂಗ್ಯ ಮಾಡಿದೆ.

    ತನಗೆ ಕಾಂಗ್ರೆಸ್ ಅಥವಾ ಗಾಂಧಿ ಹೆಸರಿನ ಕುಟುಂಬದ ವಿರುದ್ಧ ಅಸಮಾಧಾನವಿದ್ದು, ಆದರೆ ದೇಶದ ವಿಷಯಗಳ ಕುರಿತು ವಿದೇಶದಲ್ಲಿ ಮಾತನಾಡುವುದು ಯಾರಿಗೂ ಲಾಭ ತಂದು ಕೊಡುವುದಿಲ್ಲ ಎಂದು ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಹೇಳಿದೆ.

    ಇದೇ ವೇಳೆ ಪ್ರಧಾನಿ ಮೋದಿ ಅವರು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಸಲಹೆಯನ್ನು ಅನುಸರಿಸಬೇಕು ಎಂದು ತಿಳಿಸಿದೆ. ಕೆಲ ದಿನಗಳ ಹಿಂದೆ ಪ್ರಧಾನಿ ಮೋದಿ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದ ಮನಮೋಹನ್ ಸಿಂಗ್ ತಮ್ಮ ಆಡಳಿತ ಅವಧಿಯಲ್ಲಿ ಹೇಗೆ ತಮ್ಮನ್ನು ಮೌನಿ ಎಂದು ಟೀಕಿಸುತ್ತಿದ್ದು ಇಂದು ತಮಗೂ ಆನ್ವಯವಾಗುತ್ತದೆ ಎಂದು ಹೇಳಿದ್ದರು. ಈ ಹೇಳಿಕೆಯನ್ನು ಶೀವಸೇನೆ ತನ್ನ ಮುಖವಾಣಿ ಸಾಮ್ನಾ ಪತ್ರಿಕೆ ಸಂಪಾದಕೀಯದಲ್ಲಿ ಬರೆದುಕೊಂಡಿದೆ.

    ಇಂಗ್ಲೆಂಡ್ ಪ್ರವಾಸದ ವೇಳೆ ಪ್ರಧಾನಿ ಮೋದಿ ದೇಶದಲ್ಲಿ ನಡೆಯುತ್ತಿರುವ ಅತ್ಯಾಚಾರ ಪ್ರಕರಣಗಳ ಕುರಿತು ಲಂಡನ್ ಸಭೆಯಲ್ಲಿ ಮಾತನಾಡುತ್ತಿದ್ದ ವೇಳೆ ಭಾವುಕರಾಗಿದ್ದರು. ಅಲ್ಲದೇ ಕಳೆದ ಬಾರಿ ಜಪಾನ್ ಪ್ರವಾಸದ ವೇಳೆ ಸಭೆಯೊಂದರಲ್ಲಿ ಭ್ರಷ್ಟಾಚಾರದ ಕುರಿತು ಹೇಳಿಕೆ ನೀಡಿದ್ದರು. ಈ ಎರಡು ಘಟನೆಗಳನ್ನು ತನ್ನ ಸಂಪಾದಕೀಯದಲ್ಲಿ ಉಲ್ಲೇಖಿಸಿರುವ ಶಿವಶೇನೆ ವಿದೇಶದಲ್ಲಿ ಭಾರತ ಸಮಸ್ಯೆಗಳ ಕುರಿತು ಪ್ರಸ್ತಾಪಿಸಿ ದೇಶದ ಹೆಸರಿಗೆ ಕೆಟ್ಟ ಅಭಿಪ್ರಾಯ ನಿರ್ಮಾಣ ಮಾಡಲಾಗುತ್ತಿದೆ ಎಂದು ಆರೋಪಿಸಿದೆ.  ಇದನ್ನೂ ಓದಿ : ದೇಶದ ಮಹಿಳೆಯರ ಸುರಕ್ಷತೆ ಬಗ್ಗೆ ಮೋದಿ ಗಮನ ಹರಿಸಬೇಕು- ಐಎಂಎಫ್ ಮುಖ್ಯಸ್ಥೆ

    ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಸದ್ಯ ಮಾತನಾಡಲು ಆರಂಭಿಸಿದ್ದಾರೆ. ಆದರೆ ಪ್ರಧಾನಿಗಳು ಮೌನಿಯಾಗಿದ್ದಾರೆ. ರಾಹುಲ್ ಗಾಂಧಿ ಮೋದಿ ಅವರನ್ನು ಮೌನವಾಗಿ ಮಾಡಲು 15 ನಿಮಿಷ ಸಮಯಾವಕಾಶ ಕೇಳಿರುವುದು ಪ್ರಧಾನಿ ಮೌನಿಯಾಗಿದ್ದರೆ ಎಂಬುವುದಕ್ಕೆ ಸೂಕ್ತ ಸಾಕ್ಷಿ ಎಂದು ಹೇಳಿದೆ.  ಇದನ್ನೂ ಓದಿ: ನಮಗೆ ದೇಶಭಕ್ತಿ ಬಗ್ಗೆ ಬೋಧನೆ ಮಾಡಬೇಡಿ ಎಂದು ಬಿಜೆಪಿ ವಿರುದ್ಧ ಹರಿಹಾಯ್ದ ಉದ್ಧವ್ ಠಾಕ್ರೆ