Tag: Former Prime Minister Atal Bihari Vajpayee

  • ವಿಜಯಪುರ, ಬೆಳಗಾವಿ ಉಡುಪಿಯಲ್ಲಿ ಅಟಲ್ ಚಿತಾಭಸ್ಮ ವಿಸರ್ಜನೆ

    ವಿಜಯಪುರ, ಬೆಳಗಾವಿ ಉಡುಪಿಯಲ್ಲಿ ಅಟಲ್ ಚಿತಾಭಸ್ಮ ವಿಸರ್ಜನೆ

    ವಿಜಯಪುರ/ ಬೆಳಗಾವಿ/ಉಡುಪಿ: ಅಜಾತಶತ್ರು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಚಿತಾಭಸ್ಮಕ್ಕೆ ಉಡುಪಿ, ವಿಜಯಪುರ, ಬೆಳಗಾವಿಯಲ್ಲಿ ಪಕ್ಷದ ಕಾರ್ಯಕರ್ತರು ಪುಷ್ಪಾರ್ಚನೆ ಸಲ್ಲಿಸಿ ಬಳಿಕ ಪವಿತ್ರ ನದಿಗಳಲ್ಲಿ ವಿಸರ್ಜನೆ ಮಾಡಿದರು.

    ಕುಂದಾಪುರದಿಂದ ಹೂವಿನಿಂದ ಅಲಂಕೃತ ರಥದಲ್ಲಿ ಉಡುಪಿಗೆ ಬಂದ ರಥಯಾತ್ರೆಯನ್ನು ರಾಜಕೀಯ ಮುಖಂಡರು, ಗಣ್ಯರು ಉಡುಪಿ ನಗರದ ಚಿತ್ತರಂಜನ್ ವೃತ್ತದ ಬಳಿ ಸ್ವಾಗತಿಸಿದರು. ಸಂಸದೆ ಶೋಭಾ ಕರಂದ್ಲಾಜೆ, ಶಾಸಕರಾದ ಸುನಿಲ್ ಕುಮಾರ್, ರಘುಪತಿ ಭಟ್, ಎಂಎಲ್‍ಸಿ ಕೋಟಾ ಶ್ರೀನಿವಾಸ ಪೂಜಾರಿ, ವಾಜಪೇಯಿ ಆಪ್ತರಾದ ಬಿಜೆಪಿ ಹಿರಿಯ ಮುಖಂಡ ಸೋಮಶೇಖರ್ ಭಟ್ ಸೇರಿದಂತೆ ಹಲವು ಗಣ್ಯರು ಹಾಗೂ ಸಾರ್ವಜನಿಕರು ಚಿತಾಭಸ್ಮಕ್ಕೆ ಪುಷ್ಪನಮನ ಸಲ್ಲಿಸಿದರು.

    ಈ ವೇಳೆ ಮಾತನಾಡಿದ ಸಂಸದೆ ಶೋಭಾ ಕರಂದ್ಲಾಜೆ, ಅಜಾತಶತ್ರು ಅಟಲ್ ಬಿಹಾರಿ ವಾಜಪೇಯಿಯವರ ಚಿತಾಭಸ್ಮವನ್ನು ಉಡುಪಿಯಲ್ಲಿ ಸ್ವಾಗತಿಸಿ ನಮನ ಸಲ್ಲಿಸಿದ್ದೇವೆ. ಈ ಚಿತಾಭಸ್ಮವನ್ನು ರಾಜ್ಯದ 8 ಕಡೆಯ ಪವಿತ್ರ ನದಿಗಳಲ್ಲಿ ವಿಸರ್ಜನೆ ಮಾಡಲಾಗುತ್ತದೆ ಎಂದು ತಿಳಿಸಿದರು.

    ಉಡುಪಿಯಲ್ಲಿ ಸ್ವಾಗತಿಸಿದ ಚಿತಾಭಸ್ಮವನ್ನು ಮಂಗಳೂರು ಮೂಲಕ ದಕ್ಷಿಣದ ಗಯಾ ಎಂದೇ ಕರೆಯಲ್ಪಡುವ ಉಪ್ಪಿನಂಗಡಿಯಲ್ಲಿ ವಿಸರ್ಜನೆ ಮಾಡುತ್ತಿದ್ದೇವೆ. ಉಪ್ಪಿನಂಗಡಿಯ ಗಯಾ ಪ್ರದೇಶ ಕುಮಾರಧಾರ ಹಾಗೂ ನೇತ್ರಾವತಿಯ ಸಂಗಮ ಸ್ಥಾನವಾಗಿರುವುದರಿಂದ ಅಲ್ಲಿ ವಿಸರ್ಜನೆ ನಡೆಯುವ ಮೂಲಕ ವಾಜಪೇಯಿವರಿಗೆ ಮೋಕ್ಷ ಪ್ರಾಪ್ತಿಯಾಗಲಿ ಎಂದು ಪ್ರಾರ್ಥಿಸಲಾಗುವುದು. ಇನ್ನು ಈ ಚಿತಾಭಸ್ಮ ವಿಸರ್ಜನೆಯಲ್ಲೂ ರಾಜಕೀಯ ನೋಡಬಾರದು, ಇಲ್ಲೂ ರಾಜಕಾರಣ ಮಾಡಿದರೆ ಅವರ ಸಣ್ಣತನ ಹಾಗೂ ಕ್ಷುಲ್ಲಕತನವನ್ನು ತೋರಿಸುತ್ತದೆ ಎಂದು ಶೋಭಾ ಕರಂದ್ಲಾಜೆ ಕಿಡಿ ಕಾರಿದರು.

    ಇನ್ನು ವಾಜಪೇಯಿ ಅವರ ಚಿತಾಭಸ್ಮವನ್ನು ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಗಲಗಲಿ ಗ್ರಾಮದ ಕೃಷ್ಣಾ ನದಿಯಲ್ಲಿ ಸಮರ್ಪಣೆ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ವಿಜಯಪುರ, ಬಾಗಲಕೋಟ ಜಿಲ್ಲೆಗಳ ಬಿಜೆಪಿ ಸಂಸದರು, ಶಾಸಕರು, ಅಟಲ್ ಅಭಿಮಾನಿಗಳು ಭಾಗಿಯಾಗಿದ್ದರು. ಬಳ್ಳಾರಿಯ ಬಿಜೆಪಿ ಕಚೇರಿಯಲ್ಲಿ ಅಟಲ್ ಚಿತಾಭಸ್ಮವನ್ನು ಸಾರ್ವಜನಿಕರ ದರ್ಶನದ ಬಳಿಕ ಹಂಪಿ ಬಳಿಯ ತುಂಗಭದ್ರೆಯಲ್ಲಿ ಚಿತಾಭಸ್ಮ ವಿಸರ್ಜಿಸಲಾಯಿತು. ಕಾರ್ಯಕ್ರಮದಲ್ಲಿ ಶಾಸಕ ಕೆ.ಎಸ್. ಈಶ್ವರಪ್ಪ, ಬಿ. ಶ್ರೀರಾಮುಲು, ಕೊಪ್ಪಳ ಸಂಸದ ಕರಡಿ ಸಂಗಣ್ಣ, ಬಳ್ಳಾರಿ ಶಾಸಕ ಜಿ.ಸೋಮಶೇಖರ್ ರೆಡ್ಡಿ, ಮಾಜಿ ಶಾಸಕ ಟಿಎಚ್ ಸುರೇಶ್ ಬಾಬು, ವಿಧಾನ ಪರಿಷತ್ ಮಾಜಿ ಸದಸ್ಯ ಮೃತ್ಯುಂಜಯ ಜಿನಗಾ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಅಜಾತ ಶತ್ರು ನಿಧನಕ್ಕೆ ಸಂತಾಪ ಕೋರಿದ ಕ್ರೀಡಾ ದಿಗ್ಗಜರು

    ಅಜಾತ ಶತ್ರು ನಿಧನಕ್ಕೆ ಸಂತಾಪ ಕೋರಿದ ಕ್ರೀಡಾ ದಿಗ್ಗಜರು

    ನವದೆಹಲಿ: ಮಾಜಿ ಪ್ರಧಾನಿ ಅಟಲ್ ಮರಣದ ಬಳಿಕ ಕ್ರೀಡಾ ಲೋಕದಲ್ಲಿ ದುಃಖದ ಅಲೆ ಕಂಡು ಬಂದಿದ್ದು, ಹಲವು ಸ್ಟಾರ್ ಕ್ರೀಡಾ ಪಡುಗಳು ಅಟಲ್ ಅವರ ಸಾವಿಗೆ ಸಂತಾಪ ಸೂಚಿಸಿದ್ದಾರೆ.

    ದೇಶದಕ್ಕೆ ತುಂಬಲಾರದ ನಷ್ಟವಾಗಿದ್ದು, ಇಡೀ ದೇಶಕ್ಕೆ ಅಟಲ್ ಬಿಹಾರಿ ವಾಜಪೇಯಿ ಅವರು ನೀಡಿದ ಕೊಡುಗೆಗಳು ಅಪಾರ. ಅವರ ಪ್ರೀತಿ ಪಾತ್ರರಿಗೆ ನನ್ನ ಸಂತ್ವಾನ ಎಂದು ಟೀಂ ಇಂಡಿಯಾ ಮಾಜಿ ನಾಯಕ ಸಚಿನ್ ತೆಂಡೂಲ್ಕರ್ ತಿಳಿಸಿದ್ದಾರೆ.

    ಘನತೆ ಹಾಗೂ ಗಾಂಭೀರ್ಯದ ವ್ಯಕ್ತಿಯಾದ ಅಟಲ್ ಬಿಹಾರಿ ವಾಜಪೇಯಿಗೆ ಎಲ್ಲಕ್ಕಿಂತ ಭಾರತವೇ ಮೊದಲಾಗಿತ್ತು ಎಂದು ಕ್ರಿಕೆಟ್ ವಿಕ್ಷಣೆಗಾರ ಹರ್ಷ ಭೋಗ್ಲೆ ಹೇಳಿದ್ದಾರೆ.

    ಭಾರತದಲ್ಲಿ ಹೆಚ್ಚು ಜನ ಪ್ರೀತಿಸಲ್ಪಟ್ಟ ಪ್ರಧಾನಿ, ಕವಿಯನ್ನು ಕಳೆದುಕೊಂಡಿದ್ದೇವೆ. ಅವರ ಪ್ರೀತಿ ಪಾತ್ರರಿಗೆ ಹಾಗೂ ಅಭಿಮಾನಿಗಳಿಗೆ ನನ್ನ ಸಂತ್ವಾನ ಎಂದು ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ಹೇಳಿದ್ದಾರೆ.

    ಪೋಖ್ರಾನ್ ಸಂಭಾವ್ಯ ನಾಯಕರಾಗಿದ್ದ ಧೈರ್ಯಶಾಲಿ ಅಟಲ್‍ಜೀ, ಸಿದ್ಧಾಂತದ ರಾಜಕಾರಣಿ, ಸ್ಫೂರ್ತಿದಾಯಕ ಕವಿ, ಪಕ್ಷದ ಉದ್ದಕ್ಕೂ ಮೆಚ್ಚುಗೆ ಪಡೆದ ನಾಯಕರ ಮರಣ ಸರಿಪಡಿಸಲಾಗಷ್ಟು ನಷ್ಟ ತಂದಿದ್ದು, ಒಂದು ಯುಗಾಂತ್ಯವನ್ನು ಗುರುತಿಸಿದೆ ಎಂದು ಕೇಂದ್ರ ಕ್ರೀಡಾ ಸಚಿವ ರಾಜವರ್ಧನ್ ಸಿಂಗ್ ರಾಥೋಡ್ ತಿಳಿಸಿದ್ದಾರೆ.

    ದೇಶದ ಕಂಡ ಅತ್ಯುತ್ತಮ ಪ್ರಧಾನಿ, ದಾರ್ಶನಿಕ, ಕವಿ, ರಾಜಕಾರಣಿ, ಕೋಟ್ಯಾಂತರ ವ್ಯಕ್ತಿಗಳ ಮನಗೆದ್ದ ವ್ಯಕ್ತಿ. ಗೌರವವನ್ನು ಬಿಟ್ಟು ಏನು ಸಂಪಾದಿಸದ ನಾಯಕರು ಅಟಲ್ ಎಂದು ಬಾಕ್ಸರ್ ವಿಜೇಂದರ್ ಸಿಂಗ್ ಬರೆದುಕೊಂಡಿದ್ದಾರೆ.

    ಇಂದು ಅಟಲ್ ಜೀ ಅವರ ಅಂತಯ ಸಂಸ್ಕಾರ ನಡೆಯಲಿದ್ದು, ಯುಮುನಾ ನದಿ ದಂಡೆಯಲ್ಲಿರುವ ರಾಷ್ಟ್ರೀಯ ಸ್ಮೃತಿ ಸ್ಥಳದವರೆಗೆ ಅಂತಿಮ ಯಾತ್ರೆ ನಡೆಯುತ್ತಿದೆ. ಅಂತಿಮ ಯಾತ್ರೆ ಬಳಿಕ ಬ್ರಾಹ್ಮಣ ಸಂಪ್ರದಾಯದಂತೆ ಇಂದು ಸಂಜೆ ಅಂತ್ಯ ಸಂಸ್ಕಾರ ನಡೆಯಲಿದೆ. ಲಾಲ್ ಬಹದ್ದೂರ್ ಶಾಸ್ತ್ರಿಯವರ ಸ್ಮಾರಕವಿರುವ ವಿಜಯ್‍ಘಾಟ್ ಮತ್ತು ಶಾಂತಿವನದ ಪಕ್ಕದಲ್ಲೇ ಅಟಲ್ ಸ್ಮಾರಕ ನಿರ್ಮಾಣಕ್ಕೆ ನಗರಾಭಿವೃದ್ಧಿ ಇಲಾಖೆ 1.5 ಎಕರೆ ಜಮೀನು ಮೀಸಲಿರಿಸಿದೆ. ಒಟ್ಟಿನಲ್ಲಿ ಅಜಾತ ಶತ್ರುವಿನ ನಿಧನಕ್ಕೆ ಇಡೀ ದೇಶವೇ ಕಣ್ಣೀರು ಹಾಕುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಪಾಕಿಸ್ತಾನಿಯರ ಹೃದಯ ಗೆಲ್ಲಿ-ಗಂಗೂಲಿ ಪಡೆಗೆ ಕಿವಿಮಾತು ಹೇಳಿದ್ದ ಅಟಲ್‍ಜೀ

    ಪಾಕಿಸ್ತಾನಿಯರ ಹೃದಯ ಗೆಲ್ಲಿ-ಗಂಗೂಲಿ ಪಡೆಗೆ ಕಿವಿಮಾತು ಹೇಳಿದ್ದ ಅಟಲ್‍ಜೀ

    ನವದೆಹಲಿ: ಪಾಕಿಸ್ತಾನ ಹಾಗೂ ಭಾರತ ನಡುವೆ ಕ್ರೀಡೆ ಮೂಲಕ ಸ್ನೇಹ ಸಂಬಂಧ ಉತ್ತಮ ಪಡಸಿಲು ಪ್ರಯತ್ನಿಸಿದ್ದ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಟೀಂ ಇಂಡಿಯಾ ತಂಡ ಪ್ರವಾಸ ಕೈಗೊಳ್ಳುವ ಮುನ್ನ ತಂಡಕ್ಕೆ ಪಾಕ್ ಪ್ರಜೆಗಳ ಹೃದಯ ಗೆಲ್ಲಲು ಹೇಳಿ ಕಳುಹಿಸಿದ್ದರು.

    2004 ರಲ್ಲಿ 19 ವರ್ಷಗಳ ಬಳಿಕ ಅಟಲ್ ಸೌರವ್ ಗಂಗೂಲಿ ನಾಯಕತ್ವದಲ್ಲಿ ಟೀಂ ಇಂಡಿಯಾ ಪಾಕಿಸ್ತಾನ ಪ್ರವಾಸ ಕೈಗೊಂಡಿತ್ತು. ಈ ವೇಳೆ ಪ್ರಧಾನಿಯಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಅವರನ್ನು ಪಾಕ್ ಪ್ರವಾಸಕ್ಕೆ ತೆರಳುವ ಮುನ್ನ ತಂಡದ ಆಟಗಾರರು ಭೇಟಿ ಮಾಡಿದ್ದರು. ಈ ವೇಳೆ ಅಟಲ್ ಅವರು ಟೀಂ ಇಂಡಿಯಾಗೆ ಗೆಲುವು ಒಂದೇ ನಮ್ಮ ಉದ್ದೇಶವಲ್ಲ, ಹೃದಯ ಗೆಲ್ಲುವುದು ಕೂಡ ನಮ್ಮ ಉದ್ದೇಶ ಎಂದು ಹೇಳಿದ್ದರು. ಅಲ್ಲದೇ ನಾಯಕ ಸೌರವ್ ಗಂಗೂಲಿ ಅವರಿಗೆ ವಿಶೇಷ ಬ್ಯಾಟ್ ಸಹ ಗಿಫ್ಟ್ ನೀಡಿದ್ದರು.

    ಈ ವೇಳೆ ಪಾಕಿಸ್ತಾನದಲ್ಲಿ ಪಂದ್ಯಗಳನ್ನು ವೀಕ್ಷಿಸಲು ಸುಮಾರು 20 ಸಾವಿರ ವೀಸಾಗಳನ್ನು ಸರ್ಕಾರ ನೀಡಿತ್ತು. ಅಂದು ತಂಡದಲ್ಲಿ ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ, ಯುವರಾಜ್ ಸಿಂಗ್, ಕೈಫ್, ಜಹೀರ್ ಖಾನ್ ರಂತಹ ಸ್ಟಾರ್ ಆಟಗಾರು ಸ್ಥಾನ ಪಡೆದಿದ್ದರು. ಈ ಸರಣಿಯಲ್ಲಿ ಭಾರತ ಏಕದಿನ ಹಾಗೂ ಟೆಸ್ಟ್ ಟೂರ್ನಿಯನ್ನು ಕ್ರಮವಾಗಿ 3-2, 2-1 ಅಂತರದಿಂದ ಗೆದ್ದಿತ್ತು.

    ಪಾಕಿಸ್ತಾನದೊಂದಿಗೆ ಸ್ನೇಹ ಸಂಬಂಧ ಸುಧಾರಿಸಲು ಎಲ್ಲಾ ಮಾರ್ಗಗಳಲ್ಲೂ ಪ್ರಯತ್ನಿಸಿದ್ದ ಮಾಜಿ ಪ್ರಧಾನಿ, ಅಜಾತಶತ್ರು ಮತ್ತು ಭಾರತರತ್ನ ಪುರಸ್ಕೃತ ಅಟಲ್ ಬಿಹಾರಿ ವಾಜಪೇಯಿ ಅವರ ಅಗಲಿಕೆಯಿಂದ ದೇಶದಾದ್ಯಂತ ಶೋಕಾಚರಣೆ ಆಚರಿಸಲಾಗುತ್ತಿದ್ದು, ಗಣ್ಯಾತಿ ಗಣ್ಯರು ಅವರ ಅಂತಿಮ ದರ್ಶನ ಪಡೆದು ನಮನ ಸಲ್ಲಿಸುತ್ತಿದ್ದಾರೆ.

    ದೆಹಲಿಯ 6ಎ ಕೃಷ್ಣಮೆನನ್ ಮಾರ್ಗ್ ನಲ್ಲಿರುವ ವಾಜಪೇಯಿ ನಿವಾಸದಲ್ಲಿಯೇ ಅಂತಿಮ ದರ್ಶನಕ್ಕೆ ಇಡಲಾಗಿದ್ದು, ಈ ವೇಳೆ ಬಂಧು ಮಿತ್ರರು ಮತ್ತು ಗಣ್ಯರಿಗೆ ದರ್ಶನ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್, ಬಿಜೆಪಿ ಮುಖಂಡ ಹಾಗೂ ವಾಜಪೇಯಿ ಅವರ ಆಪ್ತ ಎಲ್ ಕೆ ಅಡ್ವಾಣಿ, ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ, ಮಾಜಿ ಪ್ರಧಾನಿ ಮನ ಮೋಹನ್ ಸಿಂಗ್ ಸೇರಿದಂತೆ ಇತರ ರಾಜ್ಯಗಳ ಮುಖ್ಯಮಂತ್ರಿಗಳು, ರಾಜಕೀಯ ಮುಖಂಡರು ಅಂತಿಮ ದರ್ಶನ ಪಡೆದಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

     

  • ಶಾಲಾ ಕಾಲೇಜುಗಳಿಗೆ ಶುಕ್ರವಾರ ರಜೆ- 7 ದಿನ ಸರ್ಕಾರಿ ಶೋಕಾಚರಣೆ

    ಶಾಲಾ ಕಾಲೇಜುಗಳಿಗೆ ಶುಕ್ರವಾರ ರಜೆ- 7 ದಿನ ಸರ್ಕಾರಿ ಶೋಕಾಚರಣೆ

    ಬೆಂಗಳೂರು: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ನಿಧನಕ್ಕೆ ಶೋಕ ವ್ಯಕ್ತಪಡಿಸಿರುವ ಕರ್ನಾಟಕ ಸರ್ಕಾರ ಶುಕ್ರವಾರ ಶಾಲಾ- ಕಾಲೇಜುಗಳಿಗೆ ರಜೆ ಘೋಷಿಸಿದೆ. ಜೊತೆಗೆ ಆಗಸ್ಟ್ 16 ರಿಂದ 22ರವರೆಗೆ ರಾಜ್ಯದಾದ್ಯಂತ 7 ದಿನಗಳ ಕಾಲ ಶೋಕಾಚರಣೆ ಕೈಗೊಳ್ಳಬೇಕು ಎಂದು ಆದೇಶ ಹೊರಡಿಸಿದೆ.

    ಗುರುವಾರದಿಂದ 7 ದಿನಗಳ ಅವಧಿಯಲ್ಲಿ ಯಾವುದೇ ಸರ್ಕಾರಿ ಮನರಂಜನಾ ಕಾರ್ಯಕ್ರಮಗಳು ಇರುವುದಿಲ್ಲ. ನಿಯತವಾಗಿ ಹಾರಿಸಲ್ಪಡುವ ಕಟ್ಟಡಗಳ ಮೇಲೆ ರಾಷ್ಟ್ರಧ್ವಜವನ್ನು ಅರ್ಧ ಮಟ್ಟದಲ್ಲಿ ಹಾರಿಸಬೇಕು ಎಂದು ಸರ್ಕಾರ ಪ್ರಕಟಿಸಿದೆ.

    ರಾಜ್ಯದ ಹಲವೆಡೆ ಪ್ರವಾಹ ಎದುರಾಗಿದ್ದು, ತುರ್ತು ಪರಿಸ್ಥಿತಿ ನಿಭಾಯಿಸುವ ಹಾಗೂ ಪರಿಹಾರ ಒದಗಿಸುವ ಕಾರ್ಯಾಚರಣೆಯಲ್ಲಿ ತೊಡಗಿರುವ ಅಧಿಕಾರಿಗಳಿಗೆ ಹೊರತು ಪಡಿಸಿ, ಉಳಿದವರಿಗೆ ಅನ್ವಯಿಸುವಂತೆ ಶಾಲಾ ಕಾಲೇಜು ಹಾಗೂ ಸರ್ಕಾರಿ ಕಚೇರಿಗಳಿಗೆ ಆಗಸ್ಟ್ 17ರಂದು ಒಂದು ದಿನ ರಜೆ ಘೋಷಿಸಲಾಗಿದೆ.

    ಕೌನ್ಸೆಲಿಂಗ್ ಮುಂದೂಡಿಕೆ:
    ಆ.17 ರಂದು ನಡೆಯಬೇಕಿದ್ದ ಬೆಂಗಳೂರು ವಿಶ್ವವಿದ್ಯಾಲಯ ವಿಜ್ಞಾನ ನಿಕಾಯದ ಕೌನ್ಸೆಲಿಂಗ್ ಮುಂದೂಡಲಾಗಿದೆ. ಮುಂದೂಡಿದ ದಿನಾಂಕವನ್ನು ಶೀಘ್ರದಲ್ಲೇ ತಿಳಿಸಲಾಗುವುದು ಎಂದು ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೋ.ಕೆ.ಆರ್.ವೇಣುಗೋಪಾಲ್ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv