Tag: former police officer

  • ಡ್ರೈವಿಂಗ್ ಕಲಿಯುತ್ತಿದ್ದಾಗ ವ್ಯಕ್ತಿಯ ಮೇಲೆ ಗಾಡಿಯನ್ನು ಹರಿಸಿದ ಮಾಜಿ ಪೊಲೀಸ್

    ಡ್ರೈವಿಂಗ್ ಕಲಿಯುತ್ತಿದ್ದಾಗ ವ್ಯಕ್ತಿಯ ಮೇಲೆ ಗಾಡಿಯನ್ನು ಹರಿಸಿದ ಮಾಜಿ ಪೊಲೀಸ್

    ಕೋಲ್ಕತ್ತಾ: ಡ್ರೈವಿಂಗ್ ಕಲಿಯುತ್ತಿದ್ದ ಮಾಜಿ ಪೊಲೀಸ್ ಅಧಿಕಾರಿಯೊಬ್ಬ ಚಾಲನೆಯ ಸಮಯದಲ್ಲಿ ವ್ಯಕ್ತಿಯೊಬ್ಬರ ಮೇಲೆ ಗಾಡಿಯನ್ನು ಹರಿಸಿದ್ದು, ಪರಿಣಾಮ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

    ಘಟನೆ ಸೋಮವಾರ ಕೋಲ್ಕತ್ತಾದ ಗರಿಯಾ ಸಹಕಾರಿ ರಸ್ತೆಯಲ್ಲಿ ಬೆಳಗ್ಗೆ 9 ಗಂಟೆಯ ಹೊತ್ತಿಗೆ ನಡೆದಿದೆ. ಮೃತ ದುರ್ದೈವಿ ಪ್ರೊಫೆಸರ್ ಸುನಿಲ್ ಕುಮಾರ್ ಗರೈ ಮಾರುಕಟ್ಟೆಯಿಂದ ತರಕಾರಿಯನ್ನು ತರಲು ಹೋಗಿದ್ದು, ಮರಳುವಾಗ ದುರ್ಘಟನೆ ನಡೆದಿದೆ.

    ವರದಿಗಳ ಪ್ರಕಾರ ಗರೈ ತಮ್ಮ ಬೈಕಿನಲ್ಲಿ ಮನೆಗೆ ತೆರಳುತ್ತಿದಾಗ ಹಿಂದಿನಿಂದ ಬಂದ ಕಾರು, ಬೈಕ್‌ಗೆ ಡಿಕ್ಕಿ ಹೊಡೆದಿದೆ. ರಸ್ತೆಯ ಮೇಲೆ ಬಿದ್ದ ಮೇಲೆ ಕಾರು ಅವರ ಮೇಲೆಯೇ ಹರಿದುಕೊಂಡು ಹೋಗಿದೆ. ಇದನ್ನೂ ಓದಿ: ಕುಡಿದ ಮತ್ತಿನಲ್ಲಿ ಬಿಗ್‍ಬಾಸ್ ಸ್ಪರ್ಧಿ ದಿವ್ಯ ಸುರೇಶ್ ರಂಪಾಟ

    ಪ್ರತ್ಯಕ್ಷದರ್ಶಿಗಳ ಪ್ರಕಾರ ಗರೈ ಅವರ ತಲೆ ಎಂಜಿನ್ ಮತ್ತು ಮಡ್‌ಗಾರ್ಡ್ ನಡುವೆ ಸಿಲುಕಿಕೊಂಡಿತ್ತು. ಸ್ಥಳದಲ್ಲಿ ನೆರೆದಿದ್ದ ಜನರು ಅವರನ್ನು ಅದರಿಂದ ಬಿಡಿಸಿ ಸ್ಥಳೀಯ ಆಸ್ಪತ್ರೆಗೆ ಸಾಗಿಸಿದರು. ಆದರೆ ತೀವ್ರ ರಕ್ತಸ್ರಾವದಿಂದ ಗರೈ ಸಾವನ್ನಪ್ಪಿದ್ದಾರೆ.

    ಗರೈಗೆ ಡಿಕ್ಕಿ ಹೊಡೆದ ಕಾರು ಮಧ್ಯಮ ಹಂತದ ಮಾಜಿ ಪೊಲೀಸ್ ಅಧಿಕಾರಿ ಓಡಿಸುತ್ತಿದ್ದು, ಅಪಘಾತದ ಸಮಯದಲ್ಲಿ ಕಾರು ಚಾಲನೆಯನ್ನು ಕಲಿಯುತ್ತಿದ್ದರು ಎನ್ನಲಾಗಿದೆ. ಗರೈ ಅವರ ಬೈಕ್ ಎದುರುಗಡೆ ಇದ್ದುದನ್ನು ಕಂಡು ಗಾಬರಿಗೊಳಗಾದ ಆರೋಪಿ ಗೊಂದಲದಲ್ಲಿ ಬ್ರೇಕ್ ಹಾಕುವ ಬದಲು ಆಕ್ಸಿಲೆಟರ್ ಒತ್ತಿದ್ದು, ಅಪಘಾತಕ್ಕೆ ಕಾರಣ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಪ್ರಧಾನಿ ಭದ್ರತೆಗಾಗಿ 12 ಕೋಟಿಯ ದುಬಾರಿ ಕಾರು- ವಿಶೇಷತೆ ಏನು..?

    ಸದ್ಯ ಅತಿವೇಗ ಹಾಗೂ ನಿರ್ಲಕ್ಷ್ಯದ ಚಾಲನೆಯಿಂದ ಸಾವು ಸಂಭವಿಸಿದ್ದಾಗಿ ಪ್ರಕರಣವನ್ನು ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಲಾಗಿದೆ.

  • ಲುಧಿಯಾನ ಕೋರ್ಟ್ ಸ್ಫೋಟ – ಡ್ರಗ್ ಕೇಸ್‌ನಲ್ಲಿ ವಜಾಗೊಂಡಿದ್ದ ಪೊಲೀಸ್ ಅಧಿಕಾರಿಯೇ ಬಾಂಬರ್

    ಚಂಡೀಗಢ: ಲುಧಿಯಾನ ಕೋರ್ಟ್ನಲ್ಲಿ ಈಚೆಗೆ ಸಂಭವಿಸಿದ ಸ್ಫೋಟದಲ್ಲಿ ಬಾಂಬ್ ಇಟ್ಟಿದ್ದ ಆರೋಪಿ ಒಬ್ಬ ಮಾಜಿ ಪೊಲೀಸ್ ಅಧಿಕಾರಿ ಎಂಬುದು ತನಿಖೆಯಿಂದ ತಿಳಿದುಬಂದಿದೆ.

    ಡಿಸೆಂಬರ್ 23 ಗುರುವಾರ ಲುಧಿಯಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ಶೌಚಾಲಯದಲ್ಲಿ ಸ್ಫೋಟ ಸಂಭವಿಸಿತ್ತು. ಘಟನೆಯಲ್ಲಿ ಬಾಂಬ್ ಇಟ್ಟಿದ್ದ ವ್ಯಕ್ತಿಯೇ ಮೃತಪಟ್ಟಿದ್ದು, ಐವರು ಗಾಯಗೊಂಡಿದ್ದರು.

    ಸ್ಫೋಟದಲ್ಲಿ ಮೃತನಾಗಿದ್ದ ವ್ಯಕ್ತಿ ಮಾಜಿ ಪೊಲೀಸ್ ಅಧಿಕಾರಿ ಗಗನ್‌ದೀಪ್ ಎಂದು ಗುರುತಿಸಲಾಗಿದೆ. ಈತ 2019ರಲ್ಲಿ ಡ್ರಗ್ಸ್ ಕೇಸ್‌ನಲ್ಲಿ ಅಧಿಕಾರದಿಂದ ವಜಾಗೊಂಡಿದ್ದ. ಇದನ್ನೂ ಓದಿ: ಪಂಜಾಬ್‍ನ ಲೂಧಿಯಾನ ನ್ಯಾಯಾಲಯದಲ್ಲಿ ಸ್ಫೋಟ – 2 ಸಾವು, 4 ಮಂದಿಗೆ ಗಾಯ

    Ludhiana

    ಗಗನ್‌ದೀಪ್ ನ್ಯಾಯಾಲಯದ ಆವರಣದಲ್ಲಿ ಸ್ಫೋಟಕ ಇಟ್ಟಿದ್ದ. ಈ ಘಟನೆಯ ಹಿಂದೆ ಪಾಕಿಸ್ತಾನ ಬೆಂಬಲಿತ ಖಲಿಸ್ತಾನ್ ಪರ ಸಂಘಟನೆಯ ಬಬ್ಬರ್ ಖಲ್ಸಾ ಕೈವಾಡವಿದೆ ಎಂದು ಪೊಲೀಸ್ ಮೂಲಗಳು ಶಂಕೆ ವ್ಯಕ್ತಪಡಿಸಿವೆ.

    ಗಗನ್‌ದೀಪ್, ಡಾಂಗಲ್ ಮೂಲಕ ಮೊಬೈಲಿನಲ್ಲಿ ಇಂಟರ್‌ನೆಟ್ ಬಳಸುತ್ತಿದ್ದ. ಆತನಿಗೆ ಬಾಂಬ್ ಸಕ್ರಿಯಗೊಳಿಸುವ ಬಗ್ಗೆ ಆನ್‌ಲೈನ್‌ನಲ್ಲಿ ಯಾರೋ ಮಾಹಿತಿ ನೀಡುತ್ತಿದ್ದರು. ಈ ವೇಳೆ ಸ್ಫೋಟ ಸಂಭವಿಸಿದ್ದು, ಮೊಬೈಲ್ ಅದರೊಂದಿಗೆ ಪುಡಿಯಾಗಿದೆ ಎಂದು ಪಂಜಾಬ್ ಪೊಲೀಸರು ಶಂಕಿಸಿದ್ದಾರೆ. ಇದನ್ನೂ ಓದಿ: ಪೊಲೀಸ್ ಅಧಿಕಾರಿ, ನಾಗರಿಕ ಹತ್ಯೆ ಪ್ರಕರಣ- ಭದ್ರತಾ ಪಡೆ ಕಾರ್ಯಾಚರಣೆಯಲ್ಲಿ 2 ಉಗ್ರರ ಹತ್ಯೆ, ಇನ್ನಿಬ್ಬರ ಬಂಧನ

    ಇಂಟರ್‌ನೆಟ್ ಪಡೆಯುತ್ತಿದ್ದ ಡಾಂಗಲ್‌ನ ಸಿಮ್ ಆಧಾರದ ಮೇಲೆ ಗಗನ್‌ದೀಪ್‌ನನ್ನು ಗುರುತಿಸಲಾಗಿದೆ. ನಂತರ ಆತನ ತೋಳಿನಲ್ಲಿದ್ದ ಹಚ್ಚೆ ನೋಡಿದ ಕುಟುಂಬದವರು ಮೃತದೇಹವನ್ನು ಗುರುತಿಸಿದ್ದಾರೆ.

    ಸ್ಫೋಟಕದಲ್ಲಿ ಕನಿಷ್ಟ 2 ಕೆಜಿ ಆರ್‌ಡಿಎಕ್ಸ್ ಬಳಸಲಾಗಿದೆ ಎಂದು ವಿಧಿವಿಜ್ಞಾನ ವರದಿ ಬಹಿರಂಗ ಪಡಿಸಿದೆ. ಸ್ಫೋಟದ ಸಮಯದಲ್ಲಿ ನೀರಿನ ಪೈಪ್ ಒಡೆದು ಹೋಗಿದ್ದರಿಂದ ಸ್ಫೋಟಕಗಳು ಕೊಚ್ಚಿ ಹೋಗಿವೆ.