Tag: former PM< devegowda

  • ಎಚ್‍ಡಿಡಿಗೆ ಗಂಗೆ ಶಾಪವಿದ್ದು, ತುಮಕೂರಿನಿಂದ ಸ್ಪರ್ಧೆ ಮಾಡಿದ್ರೆ ಸೋಲು ಗ್ಯಾರಂಟಿ: ಮಾಜಿ ಶಾಸಕ

    ಎಚ್‍ಡಿಡಿಗೆ ಗಂಗೆ ಶಾಪವಿದ್ದು, ತುಮಕೂರಿನಿಂದ ಸ್ಪರ್ಧೆ ಮಾಡಿದ್ರೆ ಸೋಲು ಗ್ಯಾರಂಟಿ: ಮಾಜಿ ಶಾಸಕ

    ತುಮಕೂರು: ಮಾಜಿ ಪ್ರಧಾನಿ ದೇವೇಗೌಡರಿಗೆ ಗಂಗೆ ಶಾಪ ಇದ್ದು ತುಮಕೂರಿನಿಂದ ಅವರು ಸ್ಪರ್ಧೆ ಮಾಡಿದರೆ ಅವರ ಸೋಲು ಗ್ಯಾರಂಟಿ ಎಂದು ತುಮಕೂರು ಬಿಜೆಪಿ ಸಂಭಾವ್ಯ ಅಭ್ಯರ್ಥಿ ಮಾಜಿ ಶಾಸಕ ಸುರೇಶ್ ಗೌಡ ಭವಿಷ್ಯ ನುಡಿದಿದ್ದಾರೆ.

    ತುಮಕೂರಿನಲ್ಲಿ ಮಾತನಾಡಿದ ಸುರೇಶ್ ಗೌಡರು, ದೇವೇಗೌಡರಿಗೆ ಗಂಗೆ ಶಾಪ ಇರೋದಾಗಿ ಈಗಾಗಲೇ ಜ್ಯೋತಿಷಿಗಳು ಹೇಳಿದ್ದಾರೆ. ಈ ವಿಚಾರ ಸ್ವತಃ ದೇವೇಗೌಡರಿಗೆ ಗೊತ್ತು. ಈ ಶಾಪ ಹೊತ್ತುಕೊಂಡು ದೇವೇಗೌಡರು ತುಮಕೂರಿನಿಂದ ಸ್ಪರ್ಧೆ ಮಾಡಿದರೆ ಅವರ ಸೋಲು ಕಟ್ಟಿಟ್ಟ ಬುತ್ತಿ ಎಂದು ಸುರೇಶ್ ಗೌಡ ಪ್ರತಿಕ್ರಿಯಿಸಿದ್ದಾರೆ.

    ತುಮಕೂರು ಜಿಲ್ಲೆಗೆ ಹೇಮಾವತಿ ನೀರು ನೀಡದೆ ದೇವೇಗೌಡರು ವಂಚಿಸಿದ್ದಾರೆ. ಲಕ್ಷಾಂತರ ರೈತರ ಕಣ್ಣೀರ ಶಾಪದಿಂದಾಗಿ ಮಾತೆ ಗಂಗೆ ದೇವೇಗೌಡರ ಮೇಲೆ ಶಾಪ ಕೊಟ್ಟಿದ್ದಾಳೆ. ಹಾಗಾಗಿ ತೂಮಕೂರಿನಿಂದ ಸ್ಪರ್ಧೆ ಮಾಡಿದರೆ ಶಾಪದಿಂದಾಗಿ ಅವರ ಸೋಲು ಗ್ಯಾರಂಟಿ ಎಂದು ಸುರೇಶ್ ಗೌಡ ಹೇಳಿದ್ದಾರೆ.

    ಅಲ್ಲದೆ ತುಮಕೂರು ಕ್ಷೇತ್ರದ ಬಿಜೆಪಿ ಟಿಕೆಟ್ ಸಂಭಾವ್ಯ ಅಭ್ಯರ್ಥಿ ಪಟ್ಟಿಯ ನನ್ನ ಹೆಸರೂ ಇದೆ. ಸಾಮಾಜಿಕ ಜಾಲತಾಣದಲ್ಲಿ ನಡೆದ ಸರ್ವೆಯಲ್ಲಿ ನನ್ನ ಪರ ಒಲವು ತೋರಿದ್ದಾರೆ. ಅದರ ಜೊತೆಗೆ ನಾನು ಯಡಿಯೂರಪ್ಪ ನವರ ಶಿಷ್ಯ ಎನ್ನುವುದು ಜನರಿಗೆ ಗೊತ್ತು. ಹಾಗಾಗಿ ಟಿಕೆಟ್ ತಮಗೇ ಅಂತಿಮವಾಗುತ್ತೆ ಎಂದು ಸುರೇಶ್ ಗೌಡ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮಾಜಿ ಪ್ರಧಾನಿ ನಿವಾಸಕ್ಕೆ ಡಿಸಿಎಂ ಭೇಟಿ: ರಾಜಕೀಯ ಚರ್ಚೆ ನಡೆಸಿದ್ರಾ ಪರಂ?

    ಮಾಜಿ ಪ್ರಧಾನಿ ನಿವಾಸಕ್ಕೆ ಡಿಸಿಎಂ ಭೇಟಿ: ರಾಜಕೀಯ ಚರ್ಚೆ ನಡೆಸಿದ್ರಾ ಪರಂ?

    ಬೆಂಗಳೂರು: ಪದ್ಮನಾಭನಗರದ ಮಾಜಿ ಪ್ರಧಾನಿ ದೇವೇಗೌಡರ ನಿವಾಸಕ್ಕೆ ಡಿಸಿಎಂ ಜಿ.ಪರಮೇಶ್ವರ್ ಭೇಟಿ ನೀಡಿ, ಗೌರಿ-ಗಣೇಶ ಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ.

    ಭೇಟಿ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಮಾಜಿ ಪ್ರಧಾನಿ ದೇವೇಗೌಡರಿಗೆ ಗಣೇಶ ಹಬ್ಬದ ಶುಭಾಶಯ ಕೋರಲು ಬಂದಿದ್ದೆ. ನೀವು ಅಂದುಕೊಂಡ ಹಾಗೇ ಯಾವುದೇ ವಿಚಾರದ ಬಗ್ಗೆ ಚರ್ಚೆ ಮಾಡಿಲ್ಲ. ಇಂದು ಯಾವುದೇ ರಾಜಕೀಯ ಚರ್ಚೆ ಮಾಡಿಲ್ಲ. ಕಾಂಗ್ರೆಸ್ ಜೆಡಿಎಸ್ ನೇತೃತ್ವದ ಮೈತ್ರಿ ಸರ್ಕಾರ ಸುಭದ್ರವಾಗಿದೆ. ಇತರೆ ಯಾವುದೇ ಬೆಳವಣಿಗೆ ಆಗಿಲ್ಲ. ಬಿಬಿಎಂಪಿ ಹಾಗೂ ರಾಜಕೀಯ ವಿದ್ಯಮಾನಗಳ ಬಗ್ಗೆಯೂ ಸಹ ಮಾತನಾಡಿಲ್ಲ. ಅಲ್ಲದೇ ಅವರು ಒಂದು ಗಂಟೆಗಳ ಕಾಲ ತಮ್ಮ ರಾಜಕೀಯ ಅನುಭವವನ್ನು ನನ್ನೊಂದಿಗೆ ಹಂಚಿಕೊಂಡರು ಎಂದು ಹೇಳಿದರು.

    ಈ ವೇಳೆ ಸುದ್ದಿಗಾರರು ಡಿಕೆ ಶಿವಕುಮಾರ್‍ರವರ ಹಸ್ತಕ್ಷೇಪದ ವಿಚಾರ ಪ್ರಸ್ತಾಪಿಸಿದಾಗ, ಬೆಳಗಾವಿಯಲ್ಲಿ ಪಕ್ಷದ ಕಚೇರಿ ಕಟ್ಟಲು ಡಿಕೆಶಿಯವರಿಗೆ ಜವಾಬ್ದಾರಿ ನೀಡಿದ್ದೆವು. ಹೀಗಾಗಿ ಅವರು ಅಲ್ಲಿಗೆ ಹೋಗಿ ಬಂದು ಮಾಡುತ್ತಿದ್ದರು. ಅಲ್ಲದೇ ಪಕ್ಷದ ಬೆಳವಣಿಗೆ ಹಾಗೂ ಇಲಾಖೆಯಲ್ಲಿನ ಕೆಲಸಗಳ ಕಡೆ ಗಮನಹರಿಸಿದ್ದರು ಅಷ್ಟೇ. ಬೆಳಗಾವಿ ವಿಚಾರದಲ್ಲಿ ಯಾವುದೇ ಸಮಸ್ಯೆ ಇಲ್ಲ. ಅಂತಹ ಸಮಸ್ಯೆ ಇದ್ದರೆ ನಾವೇ ಅದನ್ನು ಸರಿಪಡಿಸುತ್ತೇವೆ. ಇದೆಲ್ಲ ಪಕ್ಷದ ಆಂತರಿಕ ವಿಚಾರ. ಹೀಗಾಗಿ ಎಲ್ಲವನ್ನು ಪರಿಹಾರ ಮಾಡುತ್ತೇವೆ. ಒಂದು ವೇಳೆ ಸಮಸ್ಯೆಯಿದ್ದರೆ ಅದನ್ನು ಪಕ್ಷದ ವೇದಿಕೆಯಲ್ಲೇ ಸರಿಪಡಿಸುತ್ತೇವೆ. ಅಲ್ಲದೇ ಕೆಲವು ಶಾಸಕರ ಕ್ಷೇತ್ರಕ್ಕೆ ಅನುದಾನ ತಡ ಆಗಿರಬಹುದು. ಅದನ್ನು ಶೀಘ್ರವೇ ಸರಿಪಡಿಸುತ್ತೇವೆ ಎಂದು ತಿಳಿಸಿದರು.

    ಈಗಾಗಲೇ ಸಚಿವ ರಮೇಶ್ ಜಾರಕಿಹೊಳಿಯವರನ್ನು ಕರೆದು ಮಾತನಾಡಿದ್ದೇನೆ. ಕ್ಷೇತ್ರದ ಕೆಲವು ಬೆಳವಣಿಗೆಗಳ ಬಗ್ಗೆ ಅವರು ಬೇಸರವಾಗಿದ್ದಾರೆ. ನೀವು ಅಂದುಕೊಂಡ ಹಾಗೆ ಯಾವುದೇ ಬೆಳವಣಿಗೆಗಳು ಇಲ್ಲ. ಯಾವೆಲ್ಲ ಶಾಸಕರು ಪಕ್ಷ ಬಿಟ್ಟು ಹೋಗುತ್ತಾರೆ ಎಂದು ಸುದ್ದಿಯಾಗಿತ್ತು. ಅವರೆಲ್ಲರ ಬಳಿಯೂ ಮಾತನಾಡಿದ್ದೇನೆ. ಯಾರೂ ಸಹ ಪಕ್ಷ ಬಿಡವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ರಮೇಶ್ ಜಾರಕಿಹೊಳಿ ಆಪ್ತ ಶಾಸಕರ ಸಭೆಗಳಿಗೆ ಕಡಿವಾಣ ಹಾಕುತ್ತೇವೆ. ಇಂತಹ ಸಮಸ್ಯೆಗಳನ್ನು ಪಕ್ಷ ಬಹಳ ವರ್ಷಗಳಿಂದ ನೋಡಿಕೊಂಡು ಬಂದಿದೆ. ಜಾರಕಿಹೊಳಿ ಸಹೋದರರಿಗೆ ಅಸಮಾಧಾನ ಇದ್ದರೆ ನೇರವಾಗಿ ನಮ್ಮ ಮುಂದೆಯೇ ಹೇಳಿಕೊಳ್ಳಬಹುದಿತ್ತು. ಅಲ್ಲದೇ ನಾವು ಸರ್ಕಾರ ಅಸ್ಥಿರಗೊಳಿಸುವುದಿಲ್ಲವೆಂದು ನನ್ನ ಬಳಿ ಹೇಳಿದ್ದಾರೆ. ಹೀಗಾಗಿ ಯಾವುದೇ ಸಮಸ್ಯೆ ಇಲ್ಲ ಎಂದು ಹೇಳಿ ಹೊರಟರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ರಾಜರಾಜೇಶ್ವರಿ, ಜಯನಗರದಲ್ಲಿ ಗೆಲ್ಲುವುದೇ ನಮ್ಮ ಮೊದಲ ಆದ್ಯತೆ- ಎಚ್‍ಡಿಕೆ

    ರಾಜರಾಜೇಶ್ವರಿ, ಜಯನಗರದಲ್ಲಿ ಗೆಲ್ಲುವುದೇ ನಮ್ಮ ಮೊದಲ ಆದ್ಯತೆ- ಎಚ್‍ಡಿಕೆ

    ಬೆಂಗಳೂರು: ರಾಜರಾಜೇಶ್ವರಿ ನಗರ ಹಾಗೂ ಜಯನಗರದಲ್ಲಿ ಗೆಲ್ಲುವುದೇ ನಮ್ಮ ಮೊದಲ ಆದ್ಯತೆ ಹಾಗೂ ಅನಿವಾರ್ಯ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್‍ಡಿ ಕುಮಾರಸ್ವಾಮಿ ಹೇಳಿದ್ದಾರೆ.

    ಪದ್ಮನಾಭ ನಗರದಲ್ಲಿರೋ ಮಾಜಿ ಪ್ರಧಾನಿ ದೇವೇಗೌಡ ಅವರ ನಿವಾಸಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದು ಮಾತುಕತೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕೀಯ ಪ್ರಕ್ರಿಯೆಗಳು ಯಾವ ರೀತಿ ಹೋಗಬೇಕೆಂಬುದರ ಬಗ್ಗೆ ಚರ್ಚೆ ನಡೆಸಿದ್ದೇವೆ. ಸೋನಿಯಾ ಗಾಂಧಿಯವರನ್ನು ಭೇಟಿ ಮಾಡಿ ಸಚಿವ ಸಂಪುಟದ ಬಗ್ಗೆ ಚರ್ಚೆಸಿದ ಬಳಿಕ ಅಂತಿಮವಾಗುತ್ತದೆ. ಯಾಕಂದ್ರೆ ಅವರು ನಮಗೆ ಮೇಜರ್ ಪಾರ್ಟನರ್ ಅಂತ ತಿಳಿಸಿದ್ರು.

    ರಾಜರಾಜೇಶ್ವರಿನಗರ ಹಾಗೂ ಜಯನಗರ ವಿಚಾರದಲ್ಲಿ ಈ ಕ್ಷಣದವರೆಗೂ ಯಾವುದೇ ಚರ್ಚೆಯಾಗಿಲ್ಲ. ಈ ಎರಡೂ ಕ್ಷೇತ್ರದ ಚುನಾವಣೆಯಲ್ಲಿಯೂ ನಾವು ಗೆಲ್ಲುವುದೇ ನಮ್ಮ ಮೊದಲ ಆದ್ಯತೆಯಾಗಿದೆ. ರಾಜರಾಜೇಶ್ವರಿನನಗರ ಕ್ಷೇತ್ರದಲ್ಲಿ ಜೆಡಿಎಸ್, ಜಯನಗರ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎಂಬುದು ಬೋಗಸ್ ನ್ಯೂಸ್. ಇದ್ಯಾವುದು ಸತ್ಯವಲ್ಲ. ಇವೆಲ್ಲ ಊಹಾಪೋಹದ ಸುದ್ದಿಗಳು. ಇದ್ಯಾವುದನ್ನು ಇನ್ನೂ ಚರ್ಚೆ ಮಾಡಿಲ್ಲ. ಈ ಎರಡೂ ಕ್ಷೇತ್ರಗಳನ್ನೂ ನಾವು ಗೆಲ್ಲಲೇಬೇಕು. ಅದು ಅನಿವಾರ್ಯ ಕೂಡ. ಆ ದೃಷ್ಟಿಯಿಂದ ಆಯಾ ಕ್ಷೇತ್ರದ ಮುಖಂಡರುಗಳು ಮತ್ತು ಕಾಂಗ್ರೆಸ್ ನ ಮುಖಂಡರುಗಳು ನಾವು ಸೇರಿ ಚರ್ಚೆ ಮಾಡಿ ಎರಡೂ ಕೇತ್ರದಲ್ಲಿ ಗೆಲ್ಲುವ ತೀರ್ಮಾನ ಮಾಡಬೇಕು. ಹೀಗಾಗಿ ಈ ಕ್ಷಣದವರೆಗೂ ನಾವೊಂದು ಕ್ಷೇತ್ರ, ಅವರೊಂದು ಕ್ಷೇತ್ರ ಅನ್ನೋ ತೀರ್ಮಾನಗಳಾಗಿಲ್ಲ. ಈ ಬಗ್ಗೆ ಯಾರೂ ಗೊಂದಲ ಮಾಡಿಕೊಳ್ಳುವುದು ಬೇಡ ಎಂದು ಅವರು ಸ್ಪಷ್ಟಪಡಿಸಿದ್ರು.

    ಬಿಜೆಪಿಯವರು ಎಷ್ಟೇ ಕುದುರೆ ವ್ಯಾಪಾರ ಮಾಡಿ, ಕೆಲವು ಶಾಸಕರನ್ನು ಹೆದರಿಸಿ, ಇಡಿ, ಐಟಿ ಇಲಾಖೆಳ ಮೂಲಕ ತೊಂದರೆ ಕೊಟ್ಟು ಯಾವುದಾದ್ರೂ ಶಾಸಕರನ್ನು ಗೆಲ್ತೀವಿ ಅಂತ ತಿಳಿದುಕೊಂಡಿದ್ದರೆ ಅದು ಸಾಧ್ಯವಿಲ್ಲ. ಇಂದು ಎಲ್ಲಾ ಶಾಸಕರು ತಮ್ಮ ತಮ್ಮ ಕ್ಷೇತ್ರಕ್ಕೆ ತೆರಳಿ ಮತದಾರರಿಗೆ ಅಭಿನಂದನೆ ಸಲ್ಲಿಸುವುದು ಅನಿವಾರ್ಯವಾಗಿದೆ. ಆದ್ದರಿಂದ ಯಾರೆಲ್ಲ ಹೋಟೆಲಿನಲ್ಲಿ ಇದ್ದಾರೆ ಎನ್ನುವುದು ನನಗೆ ತಿಳಿದಿಲ್ಲ ಅಂದ್ರು.