Tag: former Mp

  • ಮಾಜಿ ಸಂಸದೆಯ ಸೋಷಿಯಲ್ ಮೀಡಿಯಾ ಮುಖ್ಯಸ್ಥೆ ಹುದ್ದೆಗೆ ಕತ್ತರಿ?

    ಮಾಜಿ ಸಂಸದೆಯ ಸೋಷಿಯಲ್ ಮೀಡಿಯಾ ಮುಖ್ಯಸ್ಥೆ ಹುದ್ದೆಗೆ ಕತ್ತರಿ?

    ನವದೆಹಲಿ: ಮಾಜಿ ಸಂಸದೆ ಹಾಗೂ ಚಿತ್ರನಟಿ ರಮ್ಯಾರವರ ಎಐಸಿಸಿ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥೆ ಸ್ಥಾನಕ್ಕೆ ಕತ್ತರಿ ಬಿದ್ದಿದೆ ಎಂದು ಮಾಧ್ಯಮವೊಂದು ವರದಿ ಪ್ರಕಟಿಸಿದೆ.

    ಸಂಸದೆ ರಮ್ಯಾರವರು ಅಧಿಕೃತವಾಗಿ ಪಕ್ಷದ ಸಾಮಾಜಿಕ ಜಾಲತಾಣದ ಮುಖ್ಯಸ್ಥೆಯಾಗಿದ್ದರೂ ಅನಗತ್ಯವಾಗಿ ಟ್ವೀಟ್ ಮಾಡುವುದಕ್ಕೆ ನಿರ್ಬಂಧ ಹೇರಲಾಗಿದೆ. ಅಲ್ಲದೇ ರಾಹುಲ್ ಗಾಂಧಿಯವರ ಟ್ವೀಟ್ ಹಾಗೂ ಸಾರ್ವಜನಿಕ ಭಾಷಣಗಳ ಉಸ್ತುವಾರಿಗಳಿಂದಲೂ ಕೋಕ್ ನೀಡಲಾಗಿದೆ. ಅವರ ಜಾಗಕ್ಕೆ ಕೇಂದ್ರದ ಮಾಜಿ ಸಚಿವೆ ಮಾರ್ಗರೇಟ್ ಆಳ್ವಾ ಪುತ್ರ ನಿಖಿಲ್ ಆಳ್ವಾಗೆ ಜವಾಬ್ದಾರಿಯನ್ನು ನೀಡಲಾಗಿದೆ ಎಂದು‌ ವರದಿಯಾಗಿದೆ.

    ಸದ್ಯ ರಮ್ಯಾರವರು ರಾಹುಲ್ ಗಾಂಧಿಯವರ ಟ್ವೀಟ್‍ಗಳನ್ನು ರೀ ಟ್ವೀಟ್ ಮಾಡುವ ಮೂಲಕ ಸೋಷಿಯಲ್ ಮೀಡಿಯಾ ಘಟಕವನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ ಎಂದು ಹೇಳಲಾಗಿದೆ.

    ಕತ್ತರಿಗೆ ಕಾರಣಗಳೇನು?
    ರಮ್ಯಾರವರು ಪ್ರಧಾನಿ ಮೋದಿ ವಿರುದ್ಧ ಟ್ವೀಟ್ ಮಾಡುವ ಭರದಲ್ಲಿ ಪಕ್ಷಕ್ಕೆ ಭಾರೀ ಮುಜುಗರಕ್ಕೀಡು ಮಾಡುವಂತೆ ಮಾಡಿದ್ದರು. ಅಲ್ಲದೇ ಯುವ ಕಾಂಗ್ರೆಸ್ ಕಾರ್ಯಕರ್ತರಿಗೆ ತರಬೇತಿ ನೀಡುವ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಖಾತೆ ತೆರೆಯುವಂತೆ ಸಲಹೆ ನೀಡಿದ್ದು, ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು.

    ಈ ಹಿನ್ನೆಲೆಯಲ್ಲಿ ಕರ್ನಾಟಕ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಹೆಸರಿದ್ದರೂ ಕೂಡ ರಮ್ಯಾರವನ್ನು ದೂರ ಇಡಲಾಗಿತ್ತು. ಒಂದು ವೇಳೆ ಅವರನ್ನು ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡರೇ ಪಕ್ಷಕ್ಕೆ ನಷ್ಟ ಹೆಚ್ಚಾಗುವ ಸಾಧ್ಯತೆಯಿದೆ ಎಂದು ರಾಜ್ಯ ನಾಯಕರು ಪ್ರಚಾರದಿಂದ ದೂರ ಇಟ್ಟಿದ್ದರು ಎನ್ನಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಠಾಣೆಗೆ ಸಹಚರರೊಂದಿಗೆ ನುಗ್ಗಿ ಪೊಲೀಸರನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿದ ಬಿಜೆಪಿ ಮಾಜಿ ಸಂಸದ

    ಠಾಣೆಗೆ ಸಹಚರರೊಂದಿಗೆ ನುಗ್ಗಿ ಪೊಲೀಸರನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿದ ಬಿಜೆಪಿ ಮಾಜಿ ಸಂಸದ

    ಲಕ್ನೋ: ಉತ್ತರ ಪ್ರದೇಶದ ಮಿರ್ಜಾಪುರ ಠಾಣೆಗೆ ಬಿಜೆಪಿ ಮಾಜಿ ಸಂಸದರೊಬ್ಬರು ಸಹಚರರೊಂದಿಗೆ ನುಗ್ಗಿ ಕರ್ತವ್ಯನಿರತ ಪೊಲೀಸರಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

    ರಾಮ ಸಕಲ ಪೊಲೀಸರನ್ನು ನಿಂದಿಸಿದ ಬಿಜೆಪಿ ಮಾಜಿ ಸಂಸದ. ಶುಕ್ರವಾರ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬನನ್ನು ಕರೆಸಿ ವಿಚಾರಣೆ ನಡೆಸುತ್ತಿದ್ದರು. ವ್ಯಕ್ತಿ ಬಿಜೆಪಿ ಮೂಲದವನು ಆಗಿದ್ದರಿಂದ ಮಾಜಿ ಸಂಸದರು ನೇರವಾಗಿ ತಮ್ಮ ಬೆಂಬಲಿಗರೊಂದಿಗೆ ಠಾಣೆಗೆ ನುಗ್ಗಿದ್ದಾರೆ.

    ಈ ವೇಳೆ ರಾಮ್ ಸಕಲ ಕರ್ತವ್ಯದಲ್ಲಿದ್ದ ಎಲ್ಲ ಸಿಬ್ಬಂದಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸುವ ಮೂಲಕ ಬೆದರಿಕೆ ಹಾಕಿದ್ದಾರೆ. ರಾಜ್ಯ ಹಾಗು ಕೇಂದ್ರದಲ್ಲಿ ನಮ್ಮ ಸರ್ಕಾರವಿದೆ ಎಚ್ಚರಿಕೆ ಅಂತಾ ಪೊಲೀಸ್ ಸಿಬ್ಬಂದಿಯೊಂದಿಗೆ ವಾಗ್ವಾದಕ್ಕೆ ಇಳಿದಿದ್ರು.

    ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಹಿರಿಯ ಪೊಲೀಸರು ಮಧ್ಯಸ್ಥಿಕೆ ಮಾಡಿ ಗಲಾಟೆಗೆ ಪೂರ್ಣ ವಿರಾಮ ಹಾಕಿದ್ದಾರೆ. ಆದ್ರೆ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ರಾಮ ಸಕಲ ವಿರುದ್ಧ ದೂರು ದಾಖಲಾಗಿದೆ.

    https://youtu.be/16Zmk_xtyYo

  • ಖಾಸಗಿ ಸಂದರ್ಶನದಲ್ಲಿ ರಮ್ಯಾ ರಾಜಕೀಯ ರಹಸ್ಯ ಬಯಲು!

    ಖಾಸಗಿ ಸಂದರ್ಶನದಲ್ಲಿ ರಮ್ಯಾ ರಾಜಕೀಯ ರಹಸ್ಯ ಬಯಲು!

    ಬೆಂಗಳೂರು: ಸದ್ಯಕ್ಕೆ ನಾನು ರಾಜಕೀಯಕ್ಕೆ ಬರುವ ಉದ್ದೇಶವನ್ನು ಹೊಂದಿಲ್ಲ ಎಂದು ಮಾಜಿ ಸಂಸದೆ ರಮ್ಯಾ ಹೇಳಿದ್ದಾರೆ.

    ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ನೀವು ಸ್ಪರ್ಧಿಸುತ್ತೀರಾ? ರಾಜ್ಯ ರಾಜಕಾರಣಕ್ಕೆ ಬರೋ ಆಸೆ ಇಟ್ಟುಕೊಂಡಿದ್ದೀರಾ? ಮಂಡ್ಯದಿಂದ ಏನಾದರೂ ಕಣಕ್ಕಿಳಿಯುವ ಆಸೆ ಇಟ್ಟುಕೊಂಡಿದ್ದೀರಾ? ಎಂದು ಆಂಗ್ಲ ಪತ್ರಿಕೆಯೊಂದು ರಮ್ಯಾ ಅವರನ್ನು ಪ್ರಶ್ನಿಸಿತ್ತು.

    ಸಂದರ್ಶನದಲ್ಲಿ ರಮ್ಯಾ, ಸದ್ಯಕ್ಕೆ ನಾನು ರಾಜಕೀಯಕ್ಕೆ ಬರುವ ಉದ್ದೇಶವಿಲ್ಲ. ಸಕ್ರಿಯ ರಾಜಕಾರಣವೇ ನನಗೆ ಮುಖ್ಯವಲ್ಲ. ಸದ್ಯಕ್ಕೆ ಸೋಷಿಯಲ್ ಮೀಡಿಯಾ ಕೆಲಸ ನನಗೆ ಖುಷಿ ತಂದಿದೆ. ಪಕ್ಷದ ತತ್ವ-ಸಿದ್ಧಾಂತದ ಪ್ರಚಾರದಲ್ಲಿ ತೊಡಗಿದ್ದೇನೆ. ಕರ್ನಾಟಕ ಚುನಾವಣೆಯಲ್ಲೂ ಪಕ್ಷದ ತತ್ವ-ಸಿದ್ಧಾಂತದಲ್ಲಿ ತೊಡಗಿದ್ದೇನೆ ಎಂದು ಉತ್ತರಿಸಿದರು.

  • ಫೇಕ್ ಅಕೌಂಟ್ ಪಾಠದ ವಿಡಿಯೋ ಕುರಿತು ರಮ್ಯಾ ಪರ ನಿಂತ ಎಚ್ ಆಂಜನೇಯ

    ಫೇಕ್ ಅಕೌಂಟ್ ಪಾಠದ ವಿಡಿಯೋ ಕುರಿತು ರಮ್ಯಾ ಪರ ನಿಂತ ಎಚ್ ಆಂಜನೇಯ

    ಬೆಂಗಳೂರು: ನಕಲಿ ಫೇಸ್ ಬುಕ್ ಖಾತೆಯ ವಿಚಾರಕ್ಕೆ ಸಂಬಂಧಿಸಿದಂತೆ ಸಮಾಜ ಕಲ್ಯಾಣ ಸಚಿವ ಎಚ್ ಆಂಜನೇಯ ಅವರು ಎಐಸಿಸಿ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥೆ ಹಾಗೂ ಮಾಜಿ ಸಂಸದೆ ರಮ್ಯಾ ಪರ ನಿಂತಿದ್ದಾರೆ.

    ಮೋಹಕ ತಾರೆ ರಮ್ಯಾ ಕಾಂಗ್ರೆಸ್‍ನಲ್ಲಿ ಒಳ್ಳೆಯ ಕೆಲಸ ಮಾಡಿದ್ದಾರೆ. ಸಂಸದರಾಗಲು ಒಳ್ಳೆಯ ಕೆಲಸ ಮಾಡಿದ್ದಾರೆ. ಇದೆಲ್ಲ ಸೃಷ್ಟಿ, ಆ ವಿಡಿಯೋನೇ ಸುಳ್ಳು ಅಂತ ಆಂಜನೇಯ ಹೇಳಿದ್ದಾರೆ. ಇದನ್ನೂ ಓದಿ: ಫೇಕ್ ಖಾತೆ ಹೊಂದಿದ್ರೆ ತಪ್ಪಲ್ಲ : ರಮ್ಯಾ ಮೇಡಂ ಪಾಠದ ವಿಡಿಯೋ ಫುಲ್ ವೈರಲ್

    ಇದೇ ವಿಚಾರಕ್ಕೆ ಸಂಬಂಧಿಸಿದಂತೆ ನಟ ಜಗ್ಗೇಶ್ ಅವಹೇಳನಕಾರಿ ಟ್ವೀಟ್ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಬಿಜೆಪಿ ನಾಯಕರ ವಿರುದ್ಧ ಮಾತಾಡಿ ಸಾಕಾಗಿದೆ. ಬಿಜೆಪಿ ನಡೆಯೇ ಹಾಗೇ. ನನ್ನ ಬಾಯಲ್ಲಿ ಆ ರೀತಿ ಮಾತು ಬರಲ್ಲ. ರಮ್ಯಾ ಬೆಳವಣಿಗೆ ಸಹಿಸದೇ ಈ ಷಡ್ಯಂತ್ರ ರೂಪಿಸಿದ್ದಾರೆ. ಅವರು ನಮ್ಮ ಸಾಮಾಜಿಕ ಜಾಲತಾಣ ಬಲಪಡಿಸಲಿ ಅಂತ ಕಿಡಿಕಾರಿದ್ದಾರೆ. ಇದನ್ನೂ ಓದಿ: ಫೇಕ್ ಅಕೌಂಟ್ ಪಾಠದ ವಿಡಿಯೋ ಬಗ್ಗೆ ರಮ್ಯಾ ಮೇಡಂ ಹೀಗಂದ್ರು

    ಏನದು ಫೇಕ್ ಅಕೌಂಟ್ ಪಾಠ?: ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ರಮ್ಯಾ ಕಳೆದ ವಾರ ನಕಲಿ ಖಾತೆಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾಂಗ್ರೆಸ್ ಕಾರ್ಯಕರ್ತರಿಗೆ ಪಾಠ ಮಾಡಿದ್ದರು. ಈ ಸಂದರ್ಭದಲ್ಲಿ ಕಾರ್ಯಕರ್ತರೊಬ್ಬರು ಫೇಸ್‍ಬುಕ್ ಫೇಕ್ ಅಕೌಂಟ್ ಬಗ್ಗೆ ಕೇಳಿದ ಪ್ರಶ್ನೆಗೆ ರಮ್ಯಾ, ಒಬ್ಬರಿಗೆ ಮೂರು ನಾಲ್ಕು ಅಕೌಂಟ್ ಗಳಿದ್ದರೆ ತಪ್ಪೇನಿಲ್ಲ. ಆದರೆ ಫೇಕ್ ಅಕೌಂಟ್ ಅಂದ್ರೆ ರೋಬಾಟ್ಸ್ ಅದು ಮಷೀನ್, ಮನುಷ್ಯ ಅಲ್ಲ. ಆದ್ರೆ ಒಬ್ಬರಿಗೆ ಹಲವು ಅಕೌಂಟ್ ಇದ್ರೆ ತಪ್ಪಿಲ್ಲ ಎಂದು ಉತ್ತರಿಸಿದ್ದರು. ಇದನ್ನೂ ಓದಿ: ಮುಗಿಯದ ರಮ್ಯಾ-ಜಗ್ಗೇಶ್ ಟ್ವೀಟ್ ಜಗಳ – ಫೇಕ್ ಪಾಠ ಹಿಡಿದು ಜಗ್ಗಾಡಿದ ನಟ

    ಈ ಪಾಠದ ವಿಡಿಯೋ ವೈರಲ್ ಆಗಿದ್ದೆ ತಡ ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿ ಅಭಿಮಾನಿಗಳು ನಕಲಿ ಖಾತೆಗಳಿಗೆ ರಮ್ಯಾ ಕುಮ್ಮಕ್ಕು ಎಂದು ಹೇಳಿ ಸಾಮಾಜಿಕ ಜಾಲತಾಣಗಳಲ್ಲಿ ಕ್ಯಾಂಪೇನ್ ಆರಂಭಿಸಿದ್ದಾರೆ.

    https://www.youtube.com/watch?v=FPbeaJ04p7o

  • ಕಾಡುಪಾಪ ಜಗ್ಗೇಶ್, ನರಸತ್ತ ಜಗ್ಗೇಶ್- ಮಂಡ್ಯದಲ್ಲಿ ರಮ್ಯಾ ಅಭಿಮಾನಿಗಳಿಂದ ನಟನ ವಿರುದ್ಧ ಆಕ್ರೋಶ

    ಕಾಡುಪಾಪ ಜಗ್ಗೇಶ್, ನರಸತ್ತ ಜಗ್ಗೇಶ್- ಮಂಡ್ಯದಲ್ಲಿ ರಮ್ಯಾ ಅಭಿಮಾನಿಗಳಿಂದ ನಟನ ವಿರುದ್ಧ ಆಕ್ರೋಶ

    ಮಂಡ್ಯ: ಬೆಂಗಳೂರು-ಮೈಸೂರು ಹೆದ್ದಾರಿ ತಡೆದು ನಟ ಜಗ್ಗೇಶ್ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸುವ ಮೂಲಕ ನಟಿ ಹಾಗೂ ಮಾಜಿ ಸಂಸದೆ ರಮ್ಯಾ ಅಭಿಮಾನಿಗಳು ಇಂದು ತಮ್ಮ ಆಕ್ರೋಶ ಹೊರಹಾಕಿದ್ದಾರೆ.

    ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆ ಎದುರು ಈ ಪ್ರತಿಭಟನೆ ನಡೆದಿದ್ದು, ನಿನ್ನೆಯಿಂದ ರಮ್ಯಾ ಪರ ಮತ್ತು ವಿರೋಧವಾಗಿ ಮಂಡ್ಯದಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ. ನಿನ್ನೆ ಇದೇ ಜಾಗದಲ್ಲಿ ರಮ್ಯಾ ವಿರುದ್ಧ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ರು. ತಂಪು ಪಾನೀಯವನ್ನು ರಮ್ ರೀತಿ ಕುಡಿದು ಪ್ರತಿಭಟಿಸಿದ್ರು.

    ಇಂದು ಮತ್ತೆ ಅದೇ ಜಾಗದಲ್ಲಿ ಅಭಿಮಾನಿಗಳಿಂದ ರಮ್ಯಾ ಪರವಾಗಿ ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಕಾಡುಪಾಪ ಜಗ್ಗೇಶ್, ನರಸತ್ತ ಜಗ್ಗೇಶ್ ಎಂದು ನಟ ಜಗ್ಗೆಶ್ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಯಾಕೆ ಈ ಪ್ರತಿಭಟನೆ?: ನಗರದ ಅರಮನೆ ಮೈದಾನದಲ್ಲಿ ನಡೆದ ಬಿಜೆಪಿ ಪರಿವರ್ತನಾ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಭಾಷಣ ಮಾಡಿದ ಬಳಿಕ ಟಿಟ್ವರ್‍ನಲ್ಲಿ ಕಾಂಗ್ರೆಸ್-ಬಿಜೆಪಿ ನಡುವಿನ ವಾರ್ ತೀವ್ರಗೊಂಡಿತ್ತು. ಭಾಷಣದಲ್ಲಿ ರೈತರು ತಮ್ಮ ಟಾಪ್ ಆದ್ಯತೆ ಎಂದು ಮೋದಿ ಹೇಳಿದ್ದರು. ಟಾಪ್ ಎಂದರೆ ಟೊಮೆಟೋ, ಈರುಳ್ಳಿ, ಪೊಟಾಟೋ ಎಂದು ವಾಖ್ಯಾನಿಸಿದ್ದರು. ಇದನ್ನೇ ಉಲ್ಲೇಖಿಸಿದ ರಮ್ಯಾ ಟಾಪ್ ನನ್ನು ಉಲ್ಟಾ ಬರೆದು ಪಾಟ್ ಮಾಡಿದ್ದರು. ಪಾಟ್ ಎಂದರೆ ಮಾದಕ ದ್ರವ್ಯ. ಮರಿಜುನಾ ಮಾದಕ ದ್ರವ್ಯ ಗಿಡಕ್ಕೆ ಪಾಟ್ ಎನ್ನುವ ಹೆಸರೂ ಇದೆ.

    ಪದಪುಂಜ ಬಿಡಿಸೋದು ಬಿಟ್ಟರೆ ಪ್ರಧಾನಿ ರೈತರ ಬಗ್ಗೆ ಏನೂ ಮಾಡಿಲ್ಲ. ಕರ್ನಾಟಕದಲ್ಲಿ 3,500 ರೈತರು ಸಾವನ್ನಪ್ಪಿದ್ದರೂ ಗುಜರಾತ್, ಆಂಧ್ರ, ರಾಜಸ್ಥಾನ, ತಮಿಳುನಾಡಿಗೆ ಹೆಚ್ಚು ಪರಿಹಾರ ಕೊಟ್ಟಿರೋ ಮೋದಿ ಸರ್ಕಾರ ಕರ್ನಾಟಕಕ್ಕೆ ಅತ್ಯಂತ ಕಡಿಮೆ ಬರ ಪರಿಹಾರ ಕೊಟ್ಟಿದೆ. ಸಿದ್ದರಾಮಯ್ಯ 1,165 ಕೋಟಿ ರೂಪಾಯಿ ಸಾಲ ಮನ್ನಾ ಮಾಡಿದರೆ, ಮೋದಿ ಸರ್ಕಾರ ಮಾಡಿರೋ ಸಾಲ ಮನ್ನಾ ಸೊನ್ನೆ ಎಂದು ರಮ್ಯಾ ತಿರುಗೇಟು ನೀಡಿದ್ದರು.

    ರಮ್ಯಾ ಟ್ವೀಟ್‍ಗೆ ನವರಸನಾಯಕ ಜಗ್ಗೇಶ್ ಪ್ರತಿಕ್ರಿಯಿಸಿ, ದೊಡ್ಡವರ ಬಗ್ಗೆ ಮಾತನಾಡಬೇಕಾದರೆ ಮಾತಾಡುವ ಮಂದಿಗೆ ವಯಸ್ಸು, ಅನುಭವ, ಸಾಧನೆ ಮಾಡಿ ಪಕ್ವವಾದಾಗ ಅಪಭ್ರಂಷ ಇಲ್ಲದೆ ಚರ್ಚೆ ಮಾಡಿದರೆ ಅದನ್ನ ತರ್ಕ ಎಂದು ಒಪ್ಪಿ ವಿಮರ್ಷೆ ನಿರ್ಣಯಸುತ್ತಾರೆ ಜನ. ವಿಶ್ವದ ಬಲಿಷ್ಟ ರಾಷ್ಟ್ರದ ನಾಯಕರೇ ಮೋದಿ ಅವರನ್ನ ಒಪ್ಪಿ ಮೆಚ್ಚದ್ದಾರೆ. ಈಕೆ ಯಾರು? ಸಾಧನೆ ಏನು? ನೆಟ್ಟಗೆ ಕನ್ನಡ ಮಾತಾಡಲು ಬರದ ಕಾಡುಪಾಪದಂತೆ ಈಕೆ ಎಂದು ಜಗ್ಗೇಶ್ ಟ್ವೀಟ್ ಮಾಡಿ ರಮ್ಯಾ ಹೇಳಿಕೆಗೆ ಕಿಡಿಕಾರಿದ್ದರು. ಈ ಹಿನ್ನೆಲೆಯಲ್ಲಿ ಇಂದು ರಮ್ಯಾ ಅಭಿಮಾನಿಗಳು ಜಗ್ಗೇಶ್ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ.

  • ಮಂಡ್ಯದಲ್ಲಿ ರಮ್ಯಾ ಮನೆ ಖರೀದಿ ವಿಚಾರ- ಮನೆ ಮಾಲೀಕ ಹೇಳಿದ್ದು ಹೀಗೆ

    ಮಂಡ್ಯದಲ್ಲಿ ರಮ್ಯಾ ಮನೆ ಖರೀದಿ ವಿಚಾರ- ಮನೆ ಮಾಲೀಕ ಹೇಳಿದ್ದು ಹೀಗೆ

    ಮಂಡ್ಯ: ಮಾಜಿ ಸಂಸದೆ ರಮ್ಯಾ ಮಂಡ್ಯದಲ್ಲಿ ಮನೆ ಖರೀದಿ ಮಾಡಿದ್ದಾರೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಮನೆ ಮಾಲೀಕ ಪಬ್ಲಿಕ್ ಟಿವಿಗೆ ಸ್ಪಷ್ಟನೆ ನೀಡಿದ್ದಾರೆ.

    ಮಾಲೀಕ ಸಾದತ್ ಆಲಿಖಾನ್ ಪಬ್ಲಿಕ್ ಟಿವಿಗೆ ಕರೆ ಮಾಡಿ, ಮನೆ ಮಾರಿಲ್ಲವೆಂದು ಹೇಳಿದ್ದಾರೆ. ರಮ್ಯಾ ಅವರು ಕೆಆರ್ ರೋಡ್ ವಿದ್ಯಾನಗರದಲ್ಲಿರುವ ಮನೆಯನ್ನು ಬಾಡಿಗೆಗೆ ಪಡೆದಿದ್ದರು. ಆದ್ರೆ ಬಾಡಿಗೆ ಇದ್ದ ಮನೆಯನ್ನೇ ರಮ್ಯಾ ಖರೀದಿಸಿದ್ದಾರೆ ಎಂಬ ಗಾಸಿಪ್ ಹಬ್ಬಿತ್ತು. ಈ ಹಿನ್ನೆಲೆಯಲ್ಲಿ ಸಾದತ್ ಸ್ಪಷ್ಟನೆ ನೀಡಿದ್ದಾರೆ.

    ಅದು ನನ್ನ ತಂದೆಯವರು ಇದ್ದ ಮನೆಯಾಗಿದ್ದು, ರಮ್ಯಾ ಅವರಿಗೆ ಬಾಡಿಗೆ ನೀಡಿದ್ದೇನೆ ಅಷ್ಟೇ. ಅದನ್ನು ನಾನು ಮಾರಿಲ್ಲ, ಮಾರುವುದೂ ಇಲ್ಲ. ನನ್ನ ತಂದೆಯವರು ಇದ್ದ ಮನೆಯ ಮೇಲೆ ನನಗೆ ಭಾವನಾತ್ಮಕ ಸಂಬಂಧವಿದೆ ಅಂತ ಅವರು ತಿಳಿಸಿದ್ದಾರೆ.

    ಇದನ್ನೂ ಓದಿ: ಮಂಡ್ಯದಲ್ಲಿ ಮತ್ತೆ ಪದ್ಮಾವತಿ ಪರ್ವ? ಸುದ್ದಿ ಬೆನ್ನಲ್ಲೇ ಅಂಬಿ-ಮಾದೇಗೌಡ ಗೌಪ್ಯ ಚರ್ಚೆ

    https://www.youtube.com/watch?v=oWj_YSV3mjw

  • ಉಪ ಚುನಾವಣೆ ಗೆಲುವಿನ ಬಳಿಕ ಸಿಎಂ ಮನುಷ್ಯರ ರೀತಿ ವರ್ತಿಸುತ್ತಿಲ್ಲ: ಮಾಜಿ ಸಂಸದ ವಿಶ್ವನಾಥ್ ಟೀಕೆ

    ಉಪ ಚುನಾವಣೆ ಗೆಲುವಿನ ಬಳಿಕ ಸಿಎಂ ಮನುಷ್ಯರ ರೀತಿ ವರ್ತಿಸುತ್ತಿಲ್ಲ: ಮಾಜಿ ಸಂಸದ ವಿಶ್ವನಾಥ್ ಟೀಕೆ

    ಮೈಸೂರು: ನಾನು ರಾಜ್ಯ ಕಾಂಗ್ರೆಸ್ ನಾಯಕರ ನೆರವಿಲ್ಲದೆ ಕಾಂಗ್ರೆಸ್ ಸೇರಿದ್ದೆ ಎಂಬ ಸಿಎಂ ಸಿದ್ದರಾಮಯ್ಯ ಅವರ ಮಾತಿಗೆ ತಿರುಗೇಟು ನೀಡಿದ ಮಾಜಿ ಸಂಸದ ಎಚ್. ವಿಶ್ವನಾಥ್, ಉಪ ಚುನಾವಣೆ ಗೆಲುವಿನ ನಂತರ ಅವರು ಮನುಷ್ಯರ ರೀತಿ ವರ್ತಿಸುತ್ತಿಲ್ಲ. ನಾನು ಎಂಬ ಅಹಂಕಾರ ಅವರನ್ನು ತುಂಬಿದೆ ಅಂತಾ ಹೇಳಿದ್ದಾರೆ.

    ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಇಂತಹ ಸುಳ್ಳು ಹೇಳುವ ಮೂಲಕ ರಾಜ್ಯದ ಜನರಿಗೆ ತಾನೊಬ್ಬ ದೊಡ್ಡಸುಳ್ಳುಗಾರ ಅನ್ನೋದನ್ನು ಸ್ಪಷ್ಟಪಡಿಸಿದ್ದಾರೆ. ರಾಜ್ಯ ನಾಯಕರ ಸಮ್ಮತಿ ಇಲ್ಲದೆ ಯಾರು ಪಕ್ಷ ಸೇರುವುದಕ್ಕೆ ಸಾಧ್ಯವಿಲ್ಲ ಅನ್ನೋದು ಕಾಮನ್‍ಸೆನ್ಸ್. ಸಿಎಂಗೆ ಕಾಮನ್‍ಸೆನ್ಸ್ ಕೂಡ ಇಲ್ವಾ ಎಂದು ಟೀಕಿಸಿದರು. ಕೃತಜ್ಞತೆ ಅನ್ನೋದನ್ನೆ ಸಿದ್ದರಾಮಯ್ಯ ಮರೆತಿದ್ದಾರೆ ಅಂತಾ ತಿರುಗೇಟು ನೀಡಿದರು.

    ನಾನು ಸಿದ್ದರಾಮಯ್ಯ ಅವರಿಗಿಂತಾ ರಾಜಕೀಯದಲ್ಲಿ ಹಿರಿಯ. 1978 ರಲ್ಲಿ ನಾನು ಶಾಸಕನಾದೆ. ಆ ವೇಳೆ ಸಿದ್ದರಾಮಯ್ಯನವರು ತಾಲೂಕು ಬೋರ್ಡ್ ಮೆಂಬರ್ ಆಗಿದ್ದರು. ಬಹುತೇಕ ವರ್ಷ ನಾವಿಬ್ಬರು ಪರಸ್ಪರ ವಿರುದ್ಧ ದಿಕ್ಕಿನಲ್ಲಿ ರಾಜಕೀಯ ಮಾಡಿದವರು. ನಂತರ, ಅವರು ಕಾಂಗ್ರೆಸ್ ಸೇರಿ ಪರಸ್ಪರ ಜೊತೆಯಾದೆವು. ರಾಜ್ಯದ ಕಾಂಗ್ರೆಸ್ ನಾಯಕರ ಶಿಫಾರಸ್ಸಿನ ಮೇಲೆ ಸಿದ್ದರಾಮಯ್ಯ ಕಾಂಗ್ರೆಸ್ ಸೇರಿದ್ದು. ಇದು ಕಾಮನ್ ಸೆನ್ಸ್, ನಿಮಗೆ ಕಾಮನ್ ಸೆನ್ಸ್ ಇದೆಯಾ ಇಲ್ಲ ನನಗೆ ಗೊತ್ತಿಲ್ಲ ಎಂದರು.

    ಆಪರೇಷನ್ ಕಮಲದಲ್ಲಿ ಸಿದ್ದರಾಮಯ್ಯ ಪಾತ್ರ ಏನೂ, ಸಿದ್ದರಾಮಯ್ಯ ಮತ್ತು ಯಡಿಯೂರಪ್ಪ ಒಂದು ಬಾರಿ ಹೆಲಿಕಾಪ್ಟರ್ ನಲ್ಲಿ ಜೊತೆಯಾಗಿ ಸುತ್ತೂರಿಗೆ ಬರುವಾಗ ಏನೇನೂ ಮಾತಾಡಿದ್ದರು ಅನ್ನೋದು ಗೊತ್ತಿದೆ. ಮುಂದಿನ ದಿನದಲ್ಲಿ ಅದು ಬಹಿರಂಗವಾಗುತ್ತೆ ಅಂತಾ ಕೂಡ ಹೊಸ ಬಾಂಬ್ ಸಿಡಿಸಿದರು.

    ಇದನ್ನೂ ಓದಿ: ಬೈ ಎಲೆಕ್ಷನ್ ಬಳಿಕ ನೀವು ಫುಲ್ ಆಕ್ಟೀವ್ ಆಗಿದ್ದೀರಿ ಎಂದು ಕೇಳಿದ್ದಕ್ಕೆ ಸಿಎಂ ಉತ್ತರಿಸಿದ್ದು ಹೀಗೆ

  • ವೀಡಿಯೋ: ರಸ್ತೆಗಾಗಿ ಬೇಡಿಕೆ ಇಟ್ಟ ಮಹಿಳೆಗೆ ಮೂಡಬಿದ್ರೆ ಶಾಸಕ ಅಭಯ್‍ಚಂದ್ರ ಜೈನ್ ನಿಂದನೆ

    ವೀಡಿಯೋ: ರಸ್ತೆಗಾಗಿ ಬೇಡಿಕೆ ಇಟ್ಟ ಮಹಿಳೆಗೆ ಮೂಡಬಿದ್ರೆ ಶಾಸಕ ಅಭಯ್‍ಚಂದ್ರ ಜೈನ್ ನಿಂದನೆ

    – ಕಾಂಗ್ರೆಸ್ ಶಾಸಕನ ಧಮ್ಕಿ ಈಗ ಫುಲ್ ವೈರಲ್

    ಮಂಗಳೂರು: ರಸ್ತೆ ನಿರ್ಮಾಣದ ಬಗ್ಗೆ ಮನವಿ ಮಾಡಿದ ಮಹಿಳೆಯೋರ್ವರನ್ನು ಮೂಡಬಿದ್ರೆ ಶಾಸಕ ಅಭಯಚಂದ್ರ ಜೈನ್ ಏಕವಚನದಲ್ಲಿ ನಿಂದಿಸಿ ಅವಮಾನಿಸಿದ ಘಟನೆ ನಡೆದಿದ್ದು, ಇದರ ವೀಡಿಯೋ ಈಗ ವೈರಲ್ ಆಗಿದೆ.

    ಮೂಡಬಿದ್ರೆಯ ಧರೆಗುಡ್ಡೆ ಗ್ರಾಮಪಂಚಾಯತ್ ವ್ಯಾಪ್ತಿಯ ಪಣಪಿಲ ಎಂಬಲ್ಲಿ ರಸ್ತೆ ನಿರ್ಮಾಣದ ಬಗ್ಗೆ ಪರಿಶೀಲನೆಗೆ ಬಂದಿದ್ದ ಶಾಸಕ ಅಭಯ್‍ಚಂದ್ರ ಜೈನ್ ಅವರಲ್ಲಿ ಸ್ಥಳೀಯ ನಿವಾಸಿ ವಸಂತಿ ಪೂಜಾರ್ತಿ ತಮ್ಮ ಅಳಲನ್ನು ತೋಡಿಕೊಂಡಿದ್ದರು. ಇಲ್ಲಿನ ಶಾಲೆಯೊಂದಕ್ಕೆ ಹೋಗುವ ರಸ್ತೆಗೆ ಇಂದಿಗೂ ಡಾಂಬರೀಕರಣ ಆಗಿಲ್ಲ. ಆ ರಸ್ತೆಯನ್ನು ಪರಿಶೀಲಿಸಿ ಎಂದಿದ್ದೇ ತಡ ಶಾಸಕ ಜೈನ್ ಸಿಡಿಮಿಡಿಗೊಂಡು ಮಹಿಳೆಗೆ ತುಳು ಭಾಷೆಯಲ್ಲಿ ಏಕವಚನದಲ್ಲಿ ಬೈದಿದ್ದಾರೆ.

    `ನಮ್ಮಲ್ಲಿ ಶಾಲೆಗೆ ಹೋಗುವ ಮಕ್ಕಳಿದ್ದಾರೆ. ನಮಗೆ ಶಾಲೆ ಮುಖ್ಯ. ಹೀಗಾಗಿ ರಸ್ತೆಗೆ ಡಾಂಬರೀಕರಣ ಮಾಡಿಕೊಡಿ ಎಂದು ಮಹಿಳೆ ಕೇಳಿಕೊಂಡಾಗ ಅಭಯ್ ಚಂದ್ರ ಜೈನ್, `ಮಾಡಿ ಕೊಡಲ್ಲ ಅಂದ್ರೆ ಮಾಡಿಕೊಡಲ್ಲ ಏನ್ ಮಾಡ್ತಿ ನೀನು’ ಅಂತಾ ಕಿಡಿಕಾರಿದ್ದಾರೆ. ಈ ವೇಳೆ ಜೈನ್ ಮಾತಿಗೆ ಜೊತೆಯಿದ್ದವರೂ ದನಿಗೂಡಿಸಿದ್ದಾರೆ.

    ಇದನ್ನು ಅಲ್ಲೇ ಇದ್ದ ವ್ಯಕ್ತಿಯೋರ್ವರು ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದಾರೆ. ಮೊಬೈಲ್ ಚಿತ್ರೀಕರಣ ಆಗುತ್ತದೆ ಎಂದು ಗಮನಿಸಿದ ಧರೆಗುಡ್ಡೆ ಪಂಚಾಯತ್ ಸದಸ್ಯ ಸುಭಾಶ್ಚಂದ್ರ ಜೈನ್ ತಕ್ಷಣ ಮೊಬೈಲ್‍ಗೆ `ಕೈ’ ಅಡ್ಡ ಇಟ್ಟಿದ್ದಾರೆ. ಇದೀಗ ಈ ದೃಶ್ಯ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದ್ದು ಶಾಸಕರ ವರ್ತನೆಯ ಬಗ್ಗೆ ಚರ್ಚೆಗಳು ನಡೆಯುತ್ತಿವೆ.

    https://www.youtube.com/watch?v=8tZC4zCUQ7s&feature=youtu.be