Tag: former Mp

  • ಮಾಜಿ ಸಂಸದ ಮುದ್ದಹನುಮೇಗೌಡರ ಆಪ್ತನ ಮನೆ ಮೇಲೆ ಐಟಿ ದಾಳಿ

    ಮಾಜಿ ಸಂಸದ ಮುದ್ದಹನುಮೇಗೌಡರ ಆಪ್ತನ ಮನೆ ಮೇಲೆ ಐಟಿ ದಾಳಿ

    ತುಮಕೂರು: ಮಾಜಿ ಸಂಸದ ಮುದ್ದಹನುಮೇಗೌಡರ ಆಪ್ತ ಹಾಗೂ ಕ್ಲಾಸ್ ಒನ್ ಗುತ್ತಿಗೆದಾರರೂ ಆದ ರಾಯಸಂದ್ರ ರವಿಕುಮಾರ್ ಮನೆ ಮೇಲೆ ಐಟಿ ದಾಳಿ ನಡೆದಿದೆ.

    ಸೋಮವಾರ ಸಂಜೆಯಿಂದ ತಡರಾತ್ರಿ 12 ಗಂಟೆವರೆಗೂ ತುಮಕೂರು ನಗರದ ಎಸ್‍ಐಟಿಯಲ್ಲಿರುವ ರವಿಕುಮಾರ್ ಬಾಡಿಗೆ ಮನೆಯಲ್ಲಿ ಶೋಧ ಕಾರ್ಯ ನಡೆಸಿ ಕೆಲ ದಾಖಲೆಗಳನ್ನು ವಶಪಡಿಸಿಕೊಂಡು ವಾಪಸ್ ಆಗಿದ್ದಾರೆ.

    ತುಮಕೂರು ನಗರದ ಎಸ್‍ಐಟಿಯಲ್ಲಿರುವ ಬಾಡಿಗೆ ಮನೆ, ತುರುವೇಕೆರೆ ತಾಲೂಕಿನ ರಾಯಸಂದ್ರದ ಮನೆ ಹಾಗೂ ರವಿಕುಮಾರ್ ಅವರ ಸಹೋದರಿ ಮನೆ ಮೇಲೆ ಏಕಕಾಲಕ್ಕೆ ಸುಮಾರು 15 ಜನ ಅಧಿಕಾರಿಗಳಿಂದ ದಾಳಿ ನಡೆದಿದೆ.

    ರಾಯಸಂದ್ರ ರವಿ ಕಳೆದ ಬಾರಿ ತುಮಕೂರು ಗ್ರಾಮಾಂತರ ಕ್ಷೇತ್ರದಿಂದ ಕಾಂಗ್ರೆಸ್‍ನಿಂದ ಸ್ಪರ್ಧಿಸಿ ಪರಾಭವಗೊಂಡಿದ್ದರು. ಕ್ಲಾಸ್ ಒನ್ ಗುತ್ತಿಗೆದಾರರಾಗಿರುವ ರವಿಕುಮಾರ್ ಹಲವು ವ್ಯವಹಾರಗಳನ್ನು ಹೊಂದಿದ್ದಾರೆ. ದಾಳಿ ನಡೆಸಿದ ಅಧಿಕಾರಿಗಳು ಹಲವು ದಾಖಲೆಗಳನ್ನು, ಬ್ಯಾಂಕ್ ವ್ಯವಹಾರಗಳನ್ನು ಪರಿಶೀಲನೆ ನಡೆಸಿದ್ದಾರೆ.

    ಇಂದು ಬೆಳಗ್ಗೆ 11 ಗಂಟೆಗೆ ತುಮಕೂರು ಐಟಿ ಕಚೇರಿಗೆ ಬರುವಂತೆ ನೋಟಿಸ್ ನೀಡಿದ್ದಾರೆ. ವೃತ್ತಿ ವೈಷಮ್ಯದ ಹಿನ್ನೆಲೆಯಲ್ಲಿ ಅನಾಮಧೇಯ ದೂರು ಐಟಿ ಇಲಾಖೆಗೆ ತಲುಪಿರುವ ಹಿನ್ನೆಲೆಯಲ್ಲಿ ದಾಳಿ ನಡೆದಿದೆ ಎನ್ನಲಾಗಿದೆ.

  • ವಿಜಯಶಂಕರ್ ಸೇರ್ಪಡೆಯಿಂದ ಮೈಸೂರು ಭಾಗದಲ್ಲಿ ಪಕ್ಷಕ್ಕೆ ಮತ್ತಷ್ಟು ಶಕ್ತಿ ಬಂದಿದೆ: ಬಿಎಸ್‌ವೈ

    ವಿಜಯಶಂಕರ್ ಸೇರ್ಪಡೆಯಿಂದ ಮೈಸೂರು ಭಾಗದಲ್ಲಿ ಪಕ್ಷಕ್ಕೆ ಮತ್ತಷ್ಟು ಶಕ್ತಿ ಬಂದಿದೆ: ಬಿಎಸ್‌ವೈ

    – ಪಕ್ಷ ಬಿಟ್ಟಿದ್ದಕ್ಕೆ ಬಹಿರಂಗವಾಗಿ ಕ್ಷಮೆ ಕೋರಿದ ವಿಜಯಶಂಕರ್
    – ಬಿಜೆಪಿ ಬಿಟ್ಟಿದ್ದು ನನ್ನದೇ ತಪ್ಪುಗಳಿಂದ

    ಬೆಂಗಳೂರು: ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಆಪ್ತ, ಮಾಜಿ ಸಂಸದ ಸಿ.ಎಚ್.ವಿಜಯಶಂಕರ್ ಇಂದು ಬಿಜೆಪಿಗೆ ಮರುಸೇರ್ಪಡೆಯಾಗಿದ್ದಾರೆ.

    ನಗರದ ಬಿಜೆಪಿ ಕಚೇರಿಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಸಮ್ಮುಖದಲ್ಲಿ ವಿಜಯಶಂಕರ್ ಬಿಜೆಪಿ ಸೇರ್ಪಡೆಗೊಂಡರು. ಈ ವೇಳೆ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್, ಬಿ.ಜೆ.ಪುಟ್ಟಸ್ವಾಮಿ ಸೇರಿದಂತೆ ಮೈಸೂರು ಬಿಜೆಪಿ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

    ಈ ವೇಳೆ ಮಾತನಾಡಿದ ಸಿಎಂ, ವಿಶೇಷ ಕಾರಣಕ್ಕೆ ವಿಜಯಶಂಕರ್ ಅವರು ಪಕ್ಷ ಬಿಟ್ಟಿದ್ದರು. ಆದರೆ ಬಹಳ ದಿನಗಳಿಂದಲೂ ಬಿಜೆಪಿ ಸೇರಲು ಮುಂದಾಗಿದ್ದರು. ಸದ್ಯ ಅವರು ಮತ್ತೆ ಬಿಜೆಪಿಗೆ ಸೇರಿರುವುದರಿಂದ ಮೈಸೂರು ಭಾಗದಲ್ಲಿ ಪಕ್ಷಕ್ಕೆ ಮತ್ತಷ್ಟು ಶಕ್ತಿ ಬಂದಿದೆ. ಕಾಂಗ್ರೆಸ್ ಪಕ್ಷ ಮುಳುಗುತ್ತದೆ. ಇಡೀ ದೇಶದಲ್ಲಿ ಉಳಿಯುವ ಪಕ್ಷ ಬಿಜೆಪಿ ಮಾತ್ರ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿಯು ಒಳ್ಳೆಯ ಕೆಲಸ ಮಾಡುತ್ತಿದೆ ಎಂದು ಹೇಳಿದರು.

    ಇದೇ ವೇಳೆ ಮಾಜಿ ಸಂಸದ ವಿಜಯಶಂಕರ್ ಅವರು ಮಾತನಾಡಿ, ಬಿಜೆಪಿ ಪಕ್ಷ ಬಿಟ್ಟು ಹೋಗಿದ್ದಕ್ಕೆ ಬಹಿರಂಗವಾಗಿ ಕ್ಷಮೆ ಕೋರಿದರು. ನಾನು ಬಿಜೆಪಿ ಬಿಟ್ಟಿದ್ದು ನನ್ನದೇ ತಪ್ಪುಗಳಿಂದ. ಮಾನಸಿಕ ಸ್ಥಿಮಿತ ನಿರ್ವಹಿಸಲಾಗಿರಲಿಲ್ಲ. ಹಾಗಾಗಿ ಪಕ್ಷ ಬಿಟ್ಟು ಹೋದೆ. ನಾನು ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿದ್ದು ತಪ್ಪು ಎಂದರು.

    ನಾನು ಬಿಜೆಪಿ ಬಿಟ್ಟು ಹೋಗಿದ್ದು ನನ್ನ ರಾಜಕೀಯ ಜೀವನದ ಕಪ್ಪು ಚುಕ್ಕೆ. ತಪ್ಪಿನ ಅರಿವು ನನಗಾಗಿದೆ. ನನ್ನಂತೆ ಬೇರೆಯವರು ಇದೇ ರೀತಿ ತಪ್ಪು ಮಾಡಲು ಹೋಗಬೇಡಿ. ನಾನು ಇವತ್ತು ಯಾವುದೇ ಷರತ್ತು ಹಾಕದೇ ಪಕ್ಷಕ್ಕೆ ಮರು ಸೇರ್ಪಡೆಗೊಂಡಿದ್ದೇನೆ. ಬದುಕಿರುವವರೆಗೂ ಬಿಜೆಪಿ ಬಿಟ್ಟು ಹೋಗಲ್ಲ ಎಂದು ಕ್ಷಮೆ ಕೋರಿ ಪಕ್ಷಕ್ಕೆ ಸೇರ್ಪಡೆಯಾದರು.

    ವಿಜಯಶಂಕರ್ ಅವರು 2019ರ ಲೋಕಸಭೆ ಚುನಾವಣೆ ವೇಳೆ ಕಾಂಗ್ರೆಸ್ ಸೇರಿದ್ದರು. ಆದರೆ ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ ವಿರುದ್ಧ ಸೋತಿದ್ದರು. ಈಗ ಮತ್ತೆ ಬಿಜೆಪಿ ಸೇರ್ಪಡೆಗೊಂಡಿದ್ದಾರೆ. ವಿಜಯಶಂಕರ್ ಅವರು ಹುಣಸೂರು ಕ್ಷೇತ್ರದ ಉಪಚುನಾವಣೆಗೆ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.

  • ಅಧಿಕಾರಿಗಳಿಗೆ ಮಾಜಿ ಸಂಸದ ಉಗ್ರಪ್ಪ ಆವಾಜ್

    ಅಧಿಕಾರಿಗಳಿಗೆ ಮಾಜಿ ಸಂಸದ ಉಗ್ರಪ್ಪ ಆವಾಜ್

    ಬಳ್ಳಾರಿ: ಮಾಜಿ ಸಂಸದರಾದ ವಿ.ಎಸ್ ಉಗ್ರಪ್ಪ ಅಧಿಕಾರಿಗಳಿಗೆ ನಾನ್ ಸೆನ್ಸ್ ಎಂದು ಹೇಳುವ ಮೂಲಕ ಆವಾಜ್ ಹಾಕಿದ್ದಾರೆ

    ಇಂದು ನಗರಾಭಿವೃದ್ಧಿ ಸಚಿವ ಯು.ಟಿ ಖಾದರ್ ಜೊತೆ ಅಲ್ಲಿಪುರ ಕೆರೆ ವೀಕ್ಷಣೆ ಅಗಮಿಸಿದ ಮಾಜಿ ಸಂಸದ ವಿ.ಎಸ್ ಉಗ್ರಪ್ಪ ಪಾಲಿಕೆ ಮುಖ್ಯ ಎಂಜಿನಿಯರ್ ದಿನೇಶ್ ಅವರಿಗೆ ಕ್ಲಾಸ್ ತೆಗೆದುಕೊಂಡರು.

    ಅಲ್ಲದೇ ಅಧಿಕಾರಿಗಳ ಮೇಲೆ ನಾನ್‍ಸೆನ್ಸ್ ಎನ್ನುವ ಪದ ಬಳಕೆ ಮಾಡಿದ್ದಾರೆ. ತುಂಗಾಭದ್ರಾ ನದಿಯ ನೀರನ್ನು ಬಳ್ಳಾರಿ ನಗರಕ್ಕೆ ಕುಡಿಯಲು ಬಳಸುವುದಕ್ಕೆ ನೀಡುವ ಉದ್ದೇಶದಿಂದ ನೀರನ್ನು ಕೆರೆಗೆ ಡಂಪ್ ಮಾಡಲಾಗುತ್ತಿದೆ. ಈ ಯೋಜನೆಯನ್ನು ವೀಕ್ಷಿಸಲು ಆಗಮಿಸಿದಾಗ ಸರಿಯಾಗಿ ಕೆಲಸ ಮಾಡಿ, ಏನ್ ಮಾತಾಡ್ತಿರಾ ನಾನ್‍ಸೆನ್ಸ್ ಎನ್ನುವ ಮೂಲಕ ಅಧಿಕಾರಿಗಳನ್ನು ಜಾಡಿಸಿದ್ದಾರೆ.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ಪಕ್ಷದ ಕಾರ್ಯಕರ್ತರ ಸಿಟ್ಟಿಗೆ ಕಾರಣವಾದ ಮಾಜಿ ಸಂಸದ!

    ಪಕ್ಷದ ಕಾರ್ಯಕರ್ತರ ಸಿಟ್ಟಿಗೆ ಕಾರಣವಾದ ಮಾಜಿ ಸಂಸದ!

    ಬಳ್ಳಾರಿ: ರಾಜಕಾರಣದಲ್ಲಿ ಸೋಲು ಗೆಲುವು ಸಹಜ. ಆದರೆ ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಹೀನಾಯವಾಗಿ ಸೋಲುಂಡ ಮಾಜಿ ಸಂಸದ ಉಗ್ರಪ್ಪ ಸೋಲಿನ ನಂತರ ಆಡಬಾರದ ಮಾತು ಆಡಿ ನಾಲಿಗೆ ಹರಿಬಿಟ್ಟಿದ್ದಾರೆ. ಇದು ವಿವಾದಕ್ಕೆ ಕಾರಣವಾಗಿದೆ.

    ಹೌದು. ಉನ್ನತ ಹುದ್ದೆಯಲ್ಲಿದ್ದಾರೆ ಅಂದರೆ ಆ ಸ್ಥಾನಕ್ಕೊಂದು ಗೌರವ ಇರುತ್ತದೆ. ಆದರೆ ಇತ್ತೀಚೆಗೆ ಕೆಲ ರಾಜಕಾರಣಿಗಳು ತಮಗೆ ಬೇಕಾದಂತೆ ನಾಲಿಗೆ ಹರಿಬಿಡುತ್ತಿದ್ದಾರೆ. ಅಂಥವರಲ್ಲಿ ಇದೀಗ ವಿ.ಎಸ್ ಉಗ್ರಪ್ಪ ಕೂಡ ಒಬ್ಬರು.

    ಮೊನ್ನೆ ಮೊನ್ನೆಯಷ್ಟೇ ನಡೆದಿದ್ದ ಲೋಕಸಭಾ ಚುನಾವಣೆಯಲ್ಲಿ ಮತದಾರರಿಗೆ ಹಂಚಲು ಹಣವನ್ನು ತಂದಿದ್ದರು. ಆದರೆ ಕಾಂಗ್ರೆಸ್ ಮುಖಂಡರು ಆ ದುಡ್ಡನ್ನ ಹಂಚಲೇ ಇಲ್ಲ. ಇದರಿಂದ ಸಿಟ್ಟಿಗೆದ್ದ ಉಗ್ರಪ್ಪ ಅತ್ಯುಗ್ರವಾಗಿ ಬೈಯಲು ಹೋಗಿ ವಿವಾದಕ್ಕೀಡಾಗಿದ್ದಾರೆ. ಹಣ ಹಂಚದ ಮುಖಂಡನಿಗೆ ನಾನು ದುಡ್ಡು ಕೊಡ್ತೀನಿ. ಅವನ ಹೆಂಡತಿ ತಂದು ಮಲಗಿಸಲಿ ಎಂದು ನಾಲಿಗೆ ಹರಿಬಿಟ್ಟಿದ್ದಾರಂತೆ.

    ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಉಗ್ರಪ್ಪ ಕೂಡ್ಲಿಗಿಯ ಗುಂಡುಮುಣುಗು ಹೋಬಳಿಯ ಮತದಾರರಿಗೆ ಹಂಚೋಕೆ ಎಂದು 27 ಲಕ್ಷ ರೂಪಾಯಿ ತಂದು ಕೊಟ್ಟಿದ್ದರಂತೆ. ಆದರೆ ಆ ಹಣದಲ್ಲಿ 7 ಲಕ್ಷ ರೂಪಾಯಿ ಹಣವನ್ನ ಖಾನಾಹೊಸಹಳ್ಳಿ ಪೊಲೀಸರು ಜಪ್ತಿ ಮಾಡಿದರು. ಇದಕ್ಕೆ ಗುಂಡುಮುಣಗು ಜಿಲ್ಲಾ ಪಂಚಾಯತ್ ಸದಸ್ಯೆ ಪತಿ ತಿಪ್ಪೇಸ್ವಾಮಿಯೇ ಕಾರಣ ಅನ್ನೋದು ಉಗ್ರಪ್ಪ ಅನ್ನೋದು ಉಗ್ರಪ್ಪ ವಾದವಾಗಿದೆ. ಹೀಗಾಗಿ ಉಗ್ರಪ್ಪ ಅವರು ಕಂಡ ಕಂಡಲ್ಲಿ ಅವಾಚ್ಯವಾಗಿ ಕಿಡಿ ಕಾರುತ್ತಿದ್ದಾರೆ. ಅಲ್ಲದೆ ಯಾಕ್ ಸಾರ್ ಹಿಂಗಾಡ್ತೀರಾ ಎಂದು ಕೇಳಿದಕ್ಕೆ ಇಬ್ಬರು ಕಾರ್ಯಕರ್ತರನ್ನೂ ಅರೆಸ್ಟ್ ಮಾಡಿಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

    ಒಂದ್ಕಡೆ ಸೋಲಿನ ಹತಾಶೆ, ಮತ್ತೊಂದ್ಕಡೆ ಹಣ ಹಂಚಿಕೆ ಆಗಲಿಲ್ವಲ್ಲ ಅನ್ನೋ ಸಿಟ್ಟು ಉಗ್ರಪ್ಪರನ್ನು ಕಾಡುತ್ತಿದೆಯೋ ಏನೂ, ಒಟ್ಟಿನಲ್ಲಿ ಉಗ್ರಪ್ಪ ಅವರದ್ದೇ ಪಕ್ಷದ ಮುಖಂಡರ ಮನೆಯವರ ಬಗ್ಗೆ ಮಾತಾಡ್ತಿರೋದು ಕಾರ್ಯಕರ್ತರ ಸಿಟ್ಟಿಗೆ ಕಾರಣವಾಗಿದೆ.

  • ಪ್ರಚಾರದ ವೇಳೆ ಹೃದಯಾಘಾತ: ನಟ, ಮಾಜಿ ಸಂಸದ ಜೆ.ಕೆ.ರಿತೇಶ್ ವಿಧಿವಶ

    ಪ್ರಚಾರದ ವೇಳೆ ಹೃದಯಾಘಾತ: ನಟ, ಮಾಜಿ ಸಂಸದ ಜೆ.ಕೆ.ರಿತೇಶ್ ವಿಧಿವಶ

    ಚೆನ್ನೈ: ತಮಿಳು ಭಾಷಾ ಸಿನಿಮಾ ನಟ, ಮಾಜಿ ಸಂಸದ, ಎಐಎಡಿಎಂಕೆ ನಾಯಕ ಜೆ.ಕೆ.ರಿತೇಶ್ (46) ಅವರು ಇಂದು ಹೃದಯಾಘಾತದಿಂದ ವಿಧಿವಶರಾಗಿದ್ದಾರೆ.

    ಜೆ.ಕೆ.ರಿತೇಶ್ ಅವರು ಗುರುವಾರ ತಮಿಳುನಾಡಿನ ರಾಮನಾಥಪುರಂನಲ್ಲಿ ಎಐಎಡಿಎಂಕೆ ಮೈತ್ರಿ ಪಕ್ಷ ಬಿಜೆಪಿ ಅಭ್ಯರ್ಥಿ ಪರ ಪ್ರಚಾರದಲ್ಲಿ ಭಾಗವಹಿಸಿದ್ದರು. ಆಗ ಹೃದಯಾಘಾತವಾಗಿದ್ದು, ತಕ್ಷಣವೇ ಅವರನ್ನು ಪಕ್ಷದ ನಾಯಕರು ಸಮೀಪದ ಆಸ್ಪತ್ರೆಗೆ ಸಾಗಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಮೃತಪಟ್ಟಿದ್ದಾರೆ.

    ಜೆ.ಕೆ.ರಿತೇಶ್ ಅವರು ಡಿಎಂಕೆ ಮೂಲಕ ರಾಜಕೀಯ ಪ್ರವೇಶ ಮಾಡಿದ್ದರು. 2009ರ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು. ಆಗ ಅವರು ಜಲಸಂಪನ್ಮೂಲ ಸಮಿತಿಯ ಸದಸ್ಯರಾಗಿದ್ದರು. ಆದರೆ 2014ರ ಏಪ್ರಿಲ್‍ನಲ್ಲಿ ಡಿಎಂಕೆ ಬಿಟ್ಟು ಎಐಎಡಿಎಂಕೆಗೆ ಸೇರ್ಪಡೆಯಾಗಿದ್ದರು.

    ಹಾಸ್ಯನಟ ಚಿನ್ನಿ ಜಯಂತ್ ನಿರ್ದೇಶನದ ‘ಕಾನಾಲ್ ನೀರ್’ ಸಿನಿಮಾದ ಮೂಲಕ ಜೆ.ಕೆ.ರಿತೇಶ್ ಅವರು 2007ರಲ್ಲಿ ಕಾಲಿವುಡ್ ಪ್ರವೇಶಿಸಿದ್ದರು. 2008ರಲ್ಲಿ ‘ನಾಯಗನ್’, 2010ರಲ್ಲಿ ‘ಪೆನ್ ಸಿಂಗಮ್’ ಸಿನಿಮಾಗಳಲ್ಲಿ ನಟಿಸಿದ್ದರು. ಕೊನೆಯದಾಗಿ ‘ಎಲ್‍ಕೆಜಿ’ ಯಲ್ಲಿ ಕಾಣಿಸಿಕೊಂಡಿದ್ದರು.

  • ರಮ್ಯಾಗೆ ಟಿಕೆಟ್ ಕೈ ತಪ್ಪಿದ್ದಕ್ಕೆ ತಾಯಿ ರಂಜಿತಾ ಕಣ್ಣೀರು!

    ರಮ್ಯಾಗೆ ಟಿಕೆಟ್ ಕೈ ತಪ್ಪಿದ್ದಕ್ಕೆ ತಾಯಿ ರಂಜಿತಾ ಕಣ್ಣೀರು!

    ಮಂಡ್ಯ: ನಟಿ, ಮಾಜಿ ಸಂಸದೆ ರಮ್ಯಾಗೆ ಮಂಡ್ಯ ಟಿಕೆಟ್ ಕೈ ತಪ್ಪಿದ್ದಕ್ಕೆ ತಾಯಿ ರಂಜಿತಾ ಕಣ್ಣೀರು ಹಾಕಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಉಪಚುನಾವಣೆಯಲ್ಲಿ ರಮ್ಯಾ 5 ಲಕ್ಷ ಮತಗಳನ್ನ ಪಡೆದು ಗೆದ್ದಿದ್ದರು. ಅಂಬರೀಶ್ ಕಾಂಗ್ರೆಸ್‍ಗೆ ದ್ರೋಹ ಮಾಡಿ ಜೆಡಿಎಸ್‍ನ್ನ ಗೆಲ್ಲಿಸಿದ್ರು. ಮಂಡ್ಯ ಋಣ ತೀರಿಸಲು ಕೆಲವರಿಗೆ ಅವಕಾಶವಿತ್ತು, ಋಣನೂ ತೀರಿಸಲಿಲ್ಲ, ಕೆಲಸನೂ ಮಾಡಿಲ್ಲ. ನಾವು ಕಾಂಗ್ರೆಸ್‍ನಲ್ಲಿದ್ದೇವೆ, ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರ ಪ್ರಚಾರ ಮಾಡುತ್ತೇವೆ ಎಂದು ಹೇಳಿದ್ರು.

    ರಮ್ಯಾ ಅಥವಾ ನಾನು ಇಲ್ಲಿ ಸೋಲಿಸೋಕೆ ಏನೂ ಇಲ್ಲ. ನಮ್ಮ ಮಂಡ್ಯ ಮತದಾರರು ತುಂಬಾ ಬುದ್ಧಿವಂತರಿದ್ದಾರೆ. ಮಂಡ್ಯ ಜಿಲ್ಲೆಗೆ ಮಾತ್ರವಲ್ಲ ಇಡೀ ದೇಶಕ್ಕೆ ರಮ್ಯಾ ಸೋತಿದ್ದಕ್ಕೆ ಕಾರಣ ಯಾರು, ಸೋಲಿಸಿದವರು ಯಾರು ಎಂದು ಗೊತ್ತಿದೆ. ಮಂಡ್ಯ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಯಾರಿಂದ ಸರ್ವನಾಶ ಆಗಿದೆ. 7 ಶಾಸಕರು ಯಾರಿಂದ ಸೋತಿದ್ದರು. ಮಂಡ್ಯದಲ್ಲಿ ನಮ್ಮ 5 ಲಕ್ಷ ಮತದಾರರು ಯಾರಿಂದ ಅನಾಥರಾಗಿದ್ದಾರೆ. ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಅಸ್ತಿತ್ವ ಇಲ್ಲದಂತೆ ಮಾಡಿದ್ದು ಯಾರು ಎಂದು ಮಂಡ್ಯ ಜನತೆಗೆ ಗೊತ್ತಾಗಿದೆ. ಹೀಗಾಗಿ ನಾವೇನೂ ಹೇಳಕ್ಕಾಗಲ್ಲ. ಅವರೇ ನಿರ್ಧಾರ ಮಾಡುತ್ತಾರೆ ಎಂದು ತಿಳಿಸಿದ್ರು.

    ನಾನು ಮಣ್ಣಿನ ನಿಜವಾದ ಮಗಳು. ಈ ಭೂಮಿಗೋಸ್ಕರ ನಾವು ಈ ಜನಕ್ಕೆ ಕೆಲಸ ಮಾಡಬೇಕು ಎಂದು ಆಸೆ ಇಟ್ಟುಕೊಂಡು ಬಂದಿದ್ದವರು. ನಮಗೆ ಬೇಕಾದಂತೆ ಬದುಕಬಹುದಿತ್ತು. ಯಾಕಂದ್ರೆ ವೈಭವ, ದುಡ್ಡು ಎಲ್ಲವೂ ಇತ್ತು. ಇವುಗಳನ್ನೆಲ್ಲಾ ಬಿಟ್ಟು ಮಂಡ್ಯ ಜಿಲ್ಲೆಗೆ ಸೇವೆ ಮಾಡಬೇಕು ಎಂದು ಬಂದೆವು. ಹಾಗೆಯೇ ಒಂದು ಅವಕಾಶನೂ ಕೊಟ್ಟರು. ಯಾರ್ಯಾರು ಎಷ್ಟೆಷ್ಟೋ ಗೆದ್ದಿದ್ದರೂ ಬೇಕಾದಷ್ಟು ಸಮಯವಿತ್ತು. ಕೆಲವರಿಗೆ ಋಣ ತೀರಿಸಲು, ಕೆಲಸ ಮಾಡಲು ಸಮಯವಿತ್ತು. ಆದ್ರೆ ಯಾರೂ ಏನೂ ಮಾಡಿಲ್ಲ ಎಂದು ಭಾವುಕರಾದ್ರು.

    ಮಂಡ್ಯ ಜನತೆ ದಡ್ಡರಲ್ಲ. ತುಂಬಾ ಬುದ್ಧಿವಂತರಾಗಿದ್ದು, ಯೋಚನೆ ಮಾಡುವ ಶಕ್ತಿ ಇದೆ. ಇಂದು ರಮ್ಯಾ ಅವರಿಗೆ ಯಾಕೆ ಅವಕಾಶ ಸಿಕ್ಕಿಲ್ಲ ಎಂದು ಜಿಲ್ಲೆಯ ಜನತೆಗೆ ಗೊತ್ತಿದೆ. ರಮ್ಯಾರನ್ನು ಯಾರು ಸೋಲಿಸಿದ್ರು, ಯಾರು ನಮ್ಮ ಕೈ ಬಿಟ್ಟರು ಇವೆಲ್ಲ ಜನತೆಗೆ ಗೊತ್ತಿದೆ. ಜಿಲ್ಲೆಯ ಜನರಿಗೆ ಇನ್ನೂ ನಮ್ಮ ಮೇಲೆ ಪ್ರೀತಿ, ಕರುಣೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ರು.

    ರಾಜ್ಯದಲ್ಲಿ ಮೈತ್ರಿ ಸರ್ಕಾರ ಇರುವುದರಿಂದ ಮೈತ್ರಿ ಧರ್ಮ ಪಾಲಿಸುವುದು ನಮ್ಮ ಧರ್ಮವಾಗಿದೆ. ಹೀಗಾಗಿ ಜೆಡಿಎಸ್ ಅಭ್ಯರ್ಥಿಯನ್ನು ನಮ್ಮದೇ ಅಭ್ಯರ್ಥಿ ಎಂದು ತಿಳಿದುಕೊಂಡು, ಮಂಡ್ಯದಲ್ಲಿ ಅವರನ್ನು ಗೆಲ್ಲಿಸುವುದಕ್ಕೆ ಬೆಂಬಲಿಸುತ್ತೇವೆ. ಸದ್ಯ ಮಂಡ್ಯದಲ್ಲಿ ನಿಖಿಲ್ ಪರ ಪ್ರಚಾರ ಮಾಡೋದಿಕ್ಕೆ ಬಂದಿದ್ದೇನೆ ಅಂದ್ರು.

  • ಸುಮಲತಾ ಸೋಲಿಗೆ ರಮ್ಯಾ ಸ್ಕೆಚ್!

    ಸುಮಲತಾ ಸೋಲಿಗೆ ರಮ್ಯಾ ಸ್ಕೆಚ್!

    ಬೆಂಗಳೂರು: ಮಾಜಿ ಸಂಸದೆ ರಮ್ಯಾ ಅವರ ಸೋಲಿನ ನೋವು ನನ್ನ ಮನಸ್ಸಿನಲ್ಲಿ ಇನ್ನೂ ಇದೆ. ಮರೆಯೋದಕ್ಕೆ ಆಗ್ತಿಲ್ಲ ಎಂಬ ವಿಷಯ ಅವರ ಅಭಿಮಾನಿಗಳ ಮನಸ್ಸಿನಲ್ಲಿ ಇದೆ. ಸದ್ಯ ಈಗ ಮಂಡ್ಯ ಅಖಾಡದಲ್ಲಿ ಸುಮಲತಾ ವಿರುದ್ಧ ರಮ್ಯಾ ಆಪ್ತ ವಲಯ ಮಸಲತ್ತು ನಡೆಯುತ್ತಿದೆ.

    ದೆಹಲಿಯಲ್ಲೇ ಕುಳಿತು ರಮ್ಯಾ ಮುಯ್ಯಿಗೆ ಮುಯ್ಯಿ ರಾಜಕಾರಣ ಶುರು ಮಾಡಿದ್ದಾರಾ ಎಂಬ ಪ್ರಶ್ನೆ ಈಗ ಶುರುವಾಗಿದೆ. 2014ರ ಲೋಕಸಭಾ ಚುನಾವಣೆಯಲ್ಲಿ ರಮ್ಯಾ ಮಂಡ್ಯ ಕಣದಿಂದ ಸೋತಿದ್ದರು. ಆಗ ಅಂಬರೀಶ್ ಬೆಂಬಲಿಗರು ಕಾಟ ಕೊಟ್ಟಿದ್ರು ಎಂದು ಆರೋಪ ಮಾಡಲಾಗಿತ್ತು.

    ಇಂದು ಅಂಬರೀಶ್ ಪತ್ನಿ ಸುಮಲತಾ ಮಂಡ್ಯ ಅಖಾಡಕ್ಕೆ ಎಂಟ್ರಿಯಾಗಿದ್ದಾರೆ. ಇದನ್ನೇ ರಾಜಕೀಯ ಟಾಂಗ್‍ಗೆ ರಮ್ಯಾ ಬಳಸಿಕೊಳ್ಳಲು ಯತ್ನಿಸುತ್ತಿದ್ದಾರಾ ಎಂಬ ಪ್ರಶ್ನೆ ಕಾಡುತ್ತಿದೆ. ಯಾಕಂದ್ರೆ ಮಂಡ್ಯದಲ್ಲಿರುವ ರಮ್ಯಾ ಆಪ್ತರಿಂದಲೇ ಅಖಾಡದಲ್ಲಿ ಒಳಗುದ್ದು ಶುರುವಾಗಿದೆ.

    ಈ ವಿಚಾರ ತಿಳೀಯುತ್ತಿದ್ದಂತೆಯೇ ಅಂಬರೀಶ್ ಅಭಿಮಾನಿಗಳು ಮಾಜಿ ಸಂಸದೆ ವಿರುದ್ಧ ಗರಂ ಆಗಿದ್ದಾರೆ. 2013ರಲ್ಲಿ ರಮ್ಯಾ ಮಂಡ್ಯ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಆಗ ರಮ್ಯಾ ಜೊತೆ ಮಂಡ್ಯದಲ್ಲಿ ಭರ್ಜರಿ ಕ್ಯಾಂಪೇನ್ ಮಾಡಿದ್ದು ಮರೆತ್ರಾ ಎಂದು ಕಿಡಿಕಾರುತ್ತಿದ್ದಾರೆ ಎಂಬ ಮಾಹಿತಿ ಲಭಿಸಿದೆ.

  • `ಅಪ್ನಾ ಟೈಂ ಆಯೇಗಾ’ ಅಂದ್ರು ಮಾಜಿ ಸಂಸದೆ ರಮ್ಯಾ..!

    `ಅಪ್ನಾ ಟೈಂ ಆಯೇಗಾ’ ಅಂದ್ರು ಮಾಜಿ ಸಂಸದೆ ರಮ್ಯಾ..!

    ಬೆಂಗಳೂರು: ಇನ್ನೇನು ಕೆಲ ದಿನಗಳಲ್ಲಿ ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು, ರಾಜ್ಯ ರಾಜಕಾರಣದಲ್ಲಿ ದಿನದಿಂದ ದಿನಕ್ಕೆ ಭಾರೀ ಬೆಳವಣಿಗೆಗಳು ಆಗುತ್ತಿವೆ. ಈ ಮಧ್ಯೆ ಮಾಜಿ ಸಂಸದೆ, ಕಾಂಗ್ರೆಸ್ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆ ರಮ್ಯಾ ಅವರು `ಅಪ್ನಾ ಟೈಂ ಆಯೇಗಾ’ ಎಂದು ಹೇಳಿದ್ದಾರೆ.

    ಹೌದು. ರಮ್ಯಾ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ರಾಹುಲ್ ಗಾಂಧಿ ಅವರು ನಗುನಗುತ್ತಾ ಕೈ ಮುಗಿಯುತ್ತಿರುವ ಫೋಟೋವೊಂದನ್ನು ಫೋಸ್ಟ್ ಮಾಡಿ, ನಮ್ಮ ಸಮಯ ಬರುತ್ತಾ ಇದೆ ಎಂದು ಬರೆದುಕೊಂಡಿದ್ದಾರೆ.

    ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬೀಳಿಸುವ ಕೊನೆಯ ಅಸ್ತ್ರವನ್ನು ಪ್ರಯೋಗ ಮಾಡುತ್ತಿದ್ದು, ಆಪರೇಷನ್ ಲೋಟಸ್ ಯಶಸ್ಸಿಗೆ ನಗರದ ಬಿಇಎಲ್ ವೃತ್ತದ ಬಳಿಯ ಗಣಪತಿ ದೇವಸ್ಥಾನದಲ್ಲಿ ಗರುಡಚಯನ ಯಾಗ ನಡೆಸುತ್ತಿದೆ. ಭಾನುವಾರವಷ್ಟೇ ಈ ಬಾರಿ ಎಚ್ ಡಿ ಕುಮಾರಸ್ವಾಮಿ ಸರ್ಕಾರ ಬಜೆಟ್ ಮಂಡನೆ ಮಾಡುವುದು ಡೌಟ್ ಎಂದು ಮಾಜಿ ಡಿಸಿಎಂ ಆರ್ ಅಶೋಕ್ ಹೆಳಿಕೆ ನೀಡಿದ್ದು, ಇದೀಗ ಭಾರೀ ಚರ್ಚೆಗೀಡಾಗಿದೆ.

    ಸರ್ಕಾರ ಬೀಳಿಸಲು ಬಿಜೆಪಿ ಪ್ರಯತ್ನಿಸುತ್ತಿರುವ ಕುರಿತು ಇಂದು ರಾಜರಾಜೇಶ್ವರಿ ಶಾಸಕ ಮುನಿರತ್ನ ಅವರು ಪ್ರತಿಕ್ರಿಯೆ ನೀಡಿ, ಮುಖ್ಯಮಂತ್ರಿ ಎಚ್‍ಡಿ ಕುಮಾರಸ್ವಾಮಿ ಅವರು ಬಜೆಟ್ ಮಂಡನೆ ಮಾಡಿಯೇ ಮಾಡುತ್ತಾರೆ. ಒಂದು ವೇಳೆ ಅವರು ಬಜೆಟ್ ಮಂಡನೆ ಮಾಡದಿದ್ದರೆ ದರ್ಶನ್ ಅಭಿನಯದ ಕುರುಕ್ಷೇತ್ರ ಸಿನಿಮಾವನ್ನು 5 ಕೋಟಿಗೆ ಬಿಜೆಪಿಯವರಿಗೆ ಬಿಟ್ಟುಕೊಡುವುದಾಗಿ ಸವಾಲೆಸೆದಿದ್ದಾರೆ.

    ಪ್ರಕೃತಿ ವಿಕೋಪದಂತಹ ದುರಂತಗಳು ಸಂಭವಿಸದಂತೆ, ಮಳೆ-ಬೆಳೆಗಾಗಿ ಹೋಮ-ಹವನಗಳನ್ನು ಮಾಡಿ. ಅಧಿಕಾರದ ಆಸೆಗೆ ಹೋಮಗಳನ್ನು ಮಾಡಬೇಡಿ. ಇದನ್ನು ದೇವರು ಮೆಚ್ಚಲ್ಲ ಎಂದು ಬಿಜೆಪಿ ವಿರುದ್ಧ ಗರಂ ಆಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಆರ್‌ಜೆಡಿ ಮಾಜಿ ಸಂಸದನ ಸಂಬಂಧಿಯ ಕೊಲೆ

    ಆರ್‌ಜೆಡಿ ಮಾಜಿ ಸಂಸದನ ಸಂಬಂಧಿಯ ಕೊಲೆ

    ಪಾಟ್ನಾ: ರಾಷ್ಟ್ರೀಯ ಜನತಾದಳ (ಆರ್‌ಜೆಡಿ ) ಮಾಜಿ ಸಂಸದ ಮೊಹಮ್ಮದ್ ಶಾಹಾಬುದ್ದಿನ್ ಸಹಚರ ಮತ್ತು ಸಂಬಂಧಿಯಾಗಿದ್ದ ಗ್ಯಾಂಗ್‍ಸ್ಟರ್ ನನ್ನು ಶುಕ್ರವಾರ ರಾತ್ರಿ ಗುಂಡಿಕ್ಕಿ ಕೊಲೆ ಮಾಡಲಾಗಿದೆ.

    ಮೊಹಮ್ಮದ್ ಯೂಸಫ್ (40) ಹತ್ಯೆಯಾದ ಆರ್‌ಜೆಡಿ ಮಾಜಿ ಸಂಸದ ಮೊಹಮ್ಮದ್ ಶಾಹಾಬುದ್ದಿನ್ ಸಹಚರ. ಮೊಹಮ್ಮದ್ ಯೂಸಫ್ ಸಿವಾನ್ ಜಿಲ್ಲೆಯ ಪ್ರತಾಪುರ್ ಗ್ರಾಮದ ಬಳಿ ದುಷ್ಕರ್ಮಿಗಳ ಗುಂಡಿನ ದಾಳಿಗೆ ಮೃತಪಟ್ಟಿದ್ದಾನೆ. ಯೂಸಫ್ ಹತ್ಯೆಯನ್ನು ಖಂಡಿಸಿ ನಗರದಲ್ಲಿ ಅನೇಕರು ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದಾರೆ.

    ಘಟನಾ ಸ್ಥಳದಿಂದ ಯೂಸಫ್ ನನ್ನು ಆಸ್ಪತ್ರೆಗೆ ಸಾಗಿಲಾಗಿತ್ತು. ಆದರೆ ಅಷ್ಟೋತ್ತಿಗಾಗಲೇ ಆತ ಮೃತಪಟ್ಟಿದ್ದ. ಯೂಸಫ್‍ನನ್ನು ಹತ್ಯೆ ಮಾಡಿದ ಜಾಗದಲ್ಲಿ ಒಂದು ಖಾಲಿ ಗನ್ ಹಾಗೂ ಮೂರು ಗುಂಡುಗಳು ಪತ್ತೆಯಾಗಿವೆ. ಜೊತೆಗೆ ಸುತ್ತಮುತ್ತಲಿನ ಪ್ರದೇಶದಲ್ಲಿ ದುಷ್ಕರ್ಮಿಗಳ ಸುಳಿವಿಗಾಗಿ ಹುಡುಕಾಟ ನಡೆಸಿದ್ದೇವೆ. ಕೊಲೆಗೆ ನಿಖರವಾದ ಮಾಹಿತಿ ಸಿಕ್ಕಿಲ್ಲ ಎಂದು ಸಿವಾನ್ ಪೊಲೀಸ್ ಅಧಿಕಾರಿ ನವೀನ್ ಚಂದ್ರ ಜ್ಹಾ ಹೇಳಿದ್ದಾರೆ.

    ಯೂಸಫ್ ಕೊಲೆಯನ್ನು ಖಂಡಿಸಿ ಮೊಹಮ್ಮದ್ ಶಾಹಾಬುದ್ದಿನ್ ಅವರ ನೂರಾರು ಬೆಂಬಲಿಗರು ಪ್ರತಿಭಟನೆ ನಡೆಸಿ, ಆರೋಪಿಗಳನ್ನು ಬಂಧಿಸಬೇಕು ಎಂದು ಒತ್ತಾಯಿಸಿದ್ದಾರೆ. ಪ್ರತಿಭಟನೆ ಹಿನ್ನಲೆಯಲ್ಲಿ ರಸ್ತೆ ತಡೆ ನಡೆಸಿದ ಪರಿಣಾಮ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು.

    ಮೊಹಮ್ಮದ್ ಶಾಹಾಬುದ್ದಿನ್ ಅವರು ಸಿವಾನ್ ಕ್ಷೇತ್ರದಿಂದ ಒಟ್ಟು ನಾಲ್ಕು ಬಾರಿ ಸಂಸದರಾಗಿ ಆಯ್ಕೆಯಾಗಿದ್ದಾರೆ. ಪ್ರತಕರ್ತ ರಾಜೀವ್ ರೋಷನ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊಹಮ್ಮದ್ ಶಾಹಾಬುದ್ದಿನ್ 11 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದರು. ಜೊತೆ ಮತ್ತೊಂದು ಕೊಲೆ ಪ್ರಕರಣದಲ್ಲಿ ಸಿಕ್ಕುಬಿದ್ದು ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಒಂದು ತಿಂಗಳ ಹಿಂದೆ ಅನಾರೋಗ್ಯಕ್ಕೆ ಗುರಿಯಾಗಿದ್ದ ರಮ್ಯಾ ವಿದೇಶಿ ಪ್ರವಾಸ!

    ಒಂದು ತಿಂಗಳ ಹಿಂದೆ ಅನಾರೋಗ್ಯಕ್ಕೆ ಗುರಿಯಾಗಿದ್ದ ರಮ್ಯಾ ವಿದೇಶಿ ಪ್ರವಾಸ!

    – ದುಬೈ ಪ್ರವಾಸ ಫೋಟೋ ವೈರಲ್

    ಬೆಂಗಳೂರು: ರೆಬಲ್ ಸ್ಟಾರ್ ಅಂಬರೀಶ್ ಅಂತ್ಯಕ್ರಿಯೆಗೆ ಆಗಮಿಸದೇ ಭಾರೀ ಚರ್ಚೆಗೆ ಕಾರಣವಾಗಿದ್ದ ಮಂಡ್ಯದ ಮಾಜಿ ಸಂಸದೆ ರಮ್ಯಾ ಅನಾರೋಗ್ಯದ ನೆಪ ಹೇಳಿ ಅನುಕಂಪ ಗಿಟ್ಟಿಸಿಕೊಂಡಿದ್ದರು. ಆದರೆ ಈಗ ದಿಢೀರ್ ಆಗಿ ದುಬೈನಲ್ಲಿ ಕಾಣಿಸಿಕೊಂಡಿದ್ದಾರೆ.

    ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಎರಡು ದಿನಗಳ ಕಾರ್ಯಕ್ರಮದ ನಿಮಿತ್ತ ಇಂದು ಮಧ್ಯಾಹ್ನ ದುಬೈಗೆ ಭೇಟಿ ನೀಡಿದ್ದಾರೆ. ಹೀಗಾಗಿ ಒಂದು ದಿನ ಮೊದಲೇ ದುಬೈಗೆ ಬಂದಿರುವ ರಮ್ಯಾ, ರಾಹುಲ್ ಗಾಂಧಿ ಅವರನ್ನು ಅದ್ಧೂರಿಯಾಗಿ ಸ್ವಾಗತಿಸಿಕೊಂಡಿದ್ದಾರೆ. ಕೆಲ ಹೊತ್ತು ದುಬೈನ ಬೀಚ್‍ನಲ್ಲಿ ತಿರುಗಾಡಿ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿವೆ. ಇದನ್ನು ಓದಿ: ರಮ್ಯಾಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ ಮಂಡ್ಯ ಜನತೆ

    ನಟಿ ರಮ್ಯಾ ದುಬೈನಲ್ಲಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ. ಅಂಬರೀಷ್ ಅಂತ್ಯಕ್ರಿಯೆಗೆ ಬಾರದೆ ಅನಾರೋಗ್ಯದ ನೆಪ ಹೇಳಿ ರಮ್ಯಾ ವಿದೇಶದಲ್ಲಿ ಮಜಾ ಮಾಡುತ್ತಿದ್ದಾರೆ. ಒಂದು ತಿಂಗಳಿನಲ್ಲೇ ಮಾರಕ ಕಾಯಿಲೆ ಗುಣಮುಖವಾಗಿದೆಯೇ ಎಂದೆಲ್ಲ ಪ್ರಶ್ನಿಸಿ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.  ಇದನ್ನು ಓದಿ: ಮಂಡ್ಯ ಮನೆಯನ್ನು ರಾತ್ರೋರಾತ್ರಿ ಖಾಲಿ ಮಾಡಿದ್ದಕ್ಕೆ ಕಾರಣ ತಿಳಿಸಿದ ರಮ್ಯಾ

    ನಾನು ಆಸ್ಟಿಯೋಕ್ಲ್ಯಾಟೋಮಾ (Osteoclastoma) ಎಂಬ ಕಾಯಿಲೆಯಿಂದ ಬಳಲುತ್ತಿದ್ದೇನೆ. ಆಸ್ಟಿಯೋಕ್ಲ್ಯಾಟೋಮಾ ಎನ್ನುವುದು ಮೂಳೆಗಳಿಗೆ ಸಂಬಂಧಿಸಿದ ರೋಗವಾಗಿದೆ. ನನ್ನ ಕಾಲಿನ ಎಲುಬುಗಳ ನಡುವೆ ಉಂಟಾಗಿರುವ ಸಮಸ್ಯೆ ಇದಾಗಿದ್ದು, ಕೊಂಚ ನಿರ್ಲಕ್ಷ್ಯ ವಹಿಸಿದ್ರು ಮಾರಕ ಕಾಯಿಲೆ ಕ್ಯಾನ್ಸರ್ ಗೆ ತುತ್ತಾಗುತ್ತಿದ್ದೆ. ಹೀಗಾಗಿ ಚಿಕಿತ್ಸೆ ಪಡೆದು ಅಕ್ಟೊಬರ್ ನಿಂದ ವಿಶ್ರಾಂತಿ ಪಡೆಯುತ್ತಿದ್ದೇನೆ ಎಂದು ರಮ್ಯಾ ತಿಳಿಸಿದ್ದರು. ಇದನ್ನು ಓದಿ: ಸ್ಯಾಂಡಲ್‍ವುಡ್ ಕ್ವೀನ್‍ಗೆ ಫುಲ್‍ಕ್ಲಾಸ್- ರಮ್ಯಾ ಬರ್ತ್ ಡೇ ನಮ್ಗೆ ಕರಾಳ ದಿನವೆಂದ್ರು ಅಭಿಮಾನಿ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv