Tag: former minister

  • ಮಾಜಿ ಸಚಿವ ಮಲ್ಲಾರಿಗೌಡ ಪಾಟೀಲ್ ವಿಧಿವಶ

    ಮಾಜಿ ಸಚಿವ ಮಲ್ಲಾರಿಗೌಡ ಪಾಟೀಲ್ ವಿಧಿವಶ

    ಚಿಕ್ಕೋಡಿ(ಬೆಳಗಾವಿ): ಮಾಜಿ ಸಚಿವ ಮಲ್ಲಾರಿಗೌಡ ಶಂಕರ್ ಪಾಟೀಲ್ ವಿಧಿವಶರಾಗಿದ್ದಾರೆ.

    ಸಂಕೇಶ್ವರ ವಿಧಾನಸಭಾ ಮತ ಕ್ಷೇತ್ರದಿಂದ ನಾಲ್ಕು ಬಾರಿ ಆಯ್ಕೆಯಾಗಿದ್ದ ಮಲ್ಲಾರಿಗೌಡ ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದರು. ಅವರ ಸ್ವಂತ ಊರು ಬೆಳಗಾವಿ ಜಿಲ್ಲೆಯ ಸಂಕೇಶ್ವರ ಪಟ್ಟಣದ ಮನೆಯಲ್ಲಿ ಮಲ್ಲಾರಿಗೌಡ ಪಾಟೀಲ್ ಕೊನೆಯುಸಿರು ಎಳೆದಿದ್ದಾರೆ.

    ಕಾಂಗ್ರೇಸ್ ಪಕ್ಷದ ಶಾಸಕರಾಗಿ ಒಂದು ಬಾರಿ ಬೃಹತ್ ನೀರಾವರಿ ಇಲಾಖೆಯ ಸಚಿವರಾಗಿ ಮಲ್ಲಾರಿಗೌಡ ಪಾಟೀಲ್ ಕಾರ್ಯ ನಿರ್ವಹಿಸಿದ್ದರು. ಸಂಕೇಶ್ವರ ಪಟ್ಟಣದ ಸ್ವಂತ ಜಮೀನಿನಲ್ಲಿ ಮೃತರ ಅಂತ್ಯಸಂಸ್ಕಾರ ಜರುಗಿದೆ.

    ಹುಕ್ಕೇರಿ ತಾಲೂಕಿಗೆ ವಿವಿಧ ನೀರಾವರಿ ಯೋಜನೆಗಳನ್ನ ಜಾರಿ ಮಾಡಿ ಈ ಭಾಗದ ನೀರಾವರಿ ಹರಿಕಾರ ಎಂದು ಮಲ್ಲಾರಿಗೌಡ ಪಾಟೀಲ್ ಗುರುತಿಸಿಕೊಳ್ಳುತ್ತಿದ್ದರು. ಹಿಡಕಲ್ ಜಲಾಶಯದಿಂದ ಅನೇಕ ಕುಡಿಯುವ ನೀರಿನ ಯೋಜನೆಗಳನ್ನ ಮಲ್ಲಾರಿಗೌಡ ಜಾರಿಗೆ ತಂದಿದ್ದರು.

  • ಸಿಎಂ ಮನೆಯ ವಾಚ್ ಮ್ಯಾನ್- ಜಮೀರ್ ಫೋಟೋ ವೈರಲ್

    ಸಿಎಂ ಮನೆಯ ವಾಚ್ ಮ್ಯಾನ್- ಜಮೀರ್ ಫೋಟೋ ವೈರಲ್

    ಬೆಂಗಳೂರು: ಉಪಚುನಾವಣೆ ಫಲಿತಾಂಶ ಹೊರ ಬಿದ್ದಿದ್ದು, ಬಿ.ಎಸ್ ಯಡಿಯೂರಪ್ಪ ಅವರ ಸರ್ಕಾರ ಮೂರೂವರೆ ವರ್ಷ ಆರಾಮಾಗಿ ಸರ್ಕಾರ ನಡೆಯುತ್ತೆ. ಇದೀಗ ಸಮ್ಮಿಶ್ರ ಸರ್ಕಾರ ಆಳ್ವಿಕೆಯಲ್ಲಿದ್ದಾಗ ಸಚಿವರೊಬ್ಬರು ಹೇಳಿದ ಮಾತು ಈಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

    ಯಡಿಯೂರಪ್ಪ ಮುಖ್ಯಮಂತ್ರಿ ಆದರೆ ನಾನು ಅವರ ಮನೆ ಮುಂದೆ 24 ಗಂಟೆ ವಾಚ್ ಮ್ಯಾನ್ ಕೆಲಸ ಮಾಡುತ್ತೇನೆ. ಅದೂ ವಾಚ್ ಮ್ಯಾನ್ ಡ್ರೆಸ್ ಹಾಕಿಕೊಂಡು ಎಂದು ಮಾಜಿ ಸಚಿವ ಜಮೀರ್ ಅಹ್ಮದ್ ಅವರು ಹುರುಪಿನಿಂದ ಹೇಳಿದ್ದರು. ಇದೀಗ ಸರ್ಕಾರ ಫುಲ್ ಸೇವ್ ಆಗಿದ್ದು, ಜಮೀರ್ ಅಹ್ಮದ್ ಅವರಿಗೆ ಮೂರು ವರ್ಷ ಕೆಲಸ ಸಿಕ್ಕಿದೆ ಎಂದು ನಾನೊಬ್ಬ ಬಿಜೆಪಿಯ ಹೆಮ್ಮೆಯ ಕಾರ್ಯಕರ್ತ ಎನ್ನುವ ಫೇಸ್‍ಬುಕ್ ಪೇಜ್ ನಿಂದ ಪೋಸ್ಟ್ ಮಾಡಲಾಗಿದೆ. ಜೊತೆಗೆ ಜಮೀರ್ ಅಹ್ಮದ್ ಫೋಟೋ ಕೂಡ ಹಾಕಲಾಗಿದೆ.

    ಜಮೀರ್ ಅಹ್ಮದ್ ಅವರಿಗೆ ವಾಚ್ ಮ್ಯಾನ್ ಡ್ರೆಸ್ ಹಾಕಿ ಬಿಎಸ್‍ವೈ ನಿವಾಸ ಧವಳಗಿರಿ ಮುಂದೆ ನಿಂತಿರುವ ಹಾಗೆ ಫೋಟೋವನ್ನು ಎಡಿಟ್ ಮಾಡಲಾಗಿದೆ. ವಿಶೇಷವೆನೆಂದರೆ ಈ ಪೋಸ್ಟ್ ಅನ್ನು ಈಗಾಗಲೇ 2900 ಜನ ಶೇರ್ ಮಾಡಿದ್ದು, ಸಿಕ್ಕಾಪಟ್ಟೆ ವೈರಲ್ ಆಗಿದೆ.

  • ಚುನಾವಣೆ ಪ್ರಕ್ರಿಯೆಯಿಂದ ಗೃಹ ಸಚಿವರನ್ನು ದೂರ ಇಡಬೇಕು: ಹೆಚ್‍ಕೆ ಪಾಟೀಲ್ ಆಗ್ರಹ

    ಚುನಾವಣೆ ಪ್ರಕ್ರಿಯೆಯಿಂದ ಗೃಹ ಸಚಿವರನ್ನು ದೂರ ಇಡಬೇಕು: ಹೆಚ್‍ಕೆ ಪಾಟೀಲ್ ಆಗ್ರಹ

    ಕಾರವಾರ: ಗೃಹ ಸಚಿವ ಬಸವರಾಜ್ ಬೊಮ್ಮಾಯಿ ರಾಜೀನಾಮೆಗೆ ಮಾಜಿ ಸಚಿವ ಎಚ್‍ಕೆ ಪಾಟೀಲ್ ಆಗ್ರಹಿಸಿದ್ದಾರೆ.

    ಇಂದು ಶಿರಸಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಚುನಾವಣೆ ನಡೆಯುವವರೆಗೂ ಬೊಮ್ಮಾಯಿ ಚುನಾವಣೆ ಪ್ರಕ್ರಿಯೆಯಿಂದ ದೂರ ಇಡಬೇಕು. ನವೆಂಬರ್ 20 ರಂದು ಮಂಡ್ಯ ಜಿಲ್ಲೆಯ ಕೆ.ಆರ್ ಪೇಟೆ ಯಲ್ಲಿ ಗೃಹ ಸಚಿವರ ಕಾರು ತಪಾಸಣೆ ಮಾಡದೇ ಹಾಗೇ ಬಿಡಲಾಗಿತ್ತು. ಈ ಬಗ್ಗೆ ಚೆಕ್‍ಪೋಸ್ಟ್ ನಲ್ಲಿದ್ದ ಪೊಲೀಸರು ಬೆಂಗಾವಲು ವಾಹನದ ಚಾಲಕನನ್ನು ಅಮಾನತು ಮಾಡಲಾಗಿದೆ. ಅಮಾನತು ಮಾಡಿರುವುದು ನೋಡಿದರೆ ಗೃಹ ಸಚಿವರೇ ಅಕ್ರಮ ನಡೆಸಿದಂತೆ ಕಾಣುತ್ತಿದೆ. ಈ ಹಿನ್ನಲೆಯಲ್ಲಿ ರಾಜೀನಾಮೆ ನೀಡುವಂತೆ ಆಗ್ರಹಿಸಿದರು.

    ಬಿಜೆಪಿಯವರು ಮಾಡಿದ ಕುತಂತ್ರಕ್ಕೆ ಜನರು ಚುನಾವಣೆಯಲ್ಲಿ ಉತ್ತರ ಕೊಡಲಿದ್ದಾರೆ. ರಾಜಕೀಯ ಅನೈತಿಕತೆಯನ್ನೇ ಬಿಜೆಪಿಗರು ಅಸ್ತ್ರವನ್ನಾಗಿ ಮಾಡಿಕೊಳ್ಳುತ್ತಿದ್ದಾರೆ. ಮಹಾರಾಷ್ಟ್ರ, ಬೆಂಗಾಲ್‍ನಲ್ಲಿ ಆದ ಮುಖಭಂಗದಿಂದಾದರೂ ಬಿಜೆಪಿ ಪಾಠ ಕಲಿಯಬೇಕು ಎಂದರು.

    ಸಿ.ಎಂ ಯಡಿಯೂರಪ್ಪ, ಸಿದ್ದರಾಮಯ್ಯ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕುತ್ತೇನೆ ಎಂದಿದ್ದಾರೆ. ಅವರ ವಿರುದ್ಧ ಮಾನನಷ್ಟ ಮೊಕದಮ್ಮೆ ಹಾಕಲಿ. ಈಗ ಸಾರ್ವಜನಿಕರ ಮುಂದೆ ಹೇಳುವುದನ್ನೇ ನ್ಯಾಯಾಲಯದಲ್ಲಿ ಹೇಳುತ್ತೇವೆ. ಯಡಿಯೂರಪ್ಪ ಹುಬ್ಬಳ್ಳಿಯಲ್ಲಿ ಅಮಿತ್ ಶಾ ಒಪ್ಪಿಗೆ ಪಡೆದು ರಾಜೀನಾಮೆ ಕೊಡಿಸಿದ್ದೇವೆ ಎಂದು ಹೇಳಿದ್ದಾರೆ. ಇದರ ವಿಡಿಯೋ ಸಹ ಅವರ ಕಾರ್ಯಕರ್ತರೇ ಹೊರ ಬಿಟ್ಟಿದ್ದಾರೆ ಎಂದು ಹೇಳಿದರು.

    ಭೀಮಣ್ಣ ಗೆಲ್ತಾರೆ: ಯಲ್ಲಾಪುರದ ಕ್ಷೇತ್ರದಲ್ಲಿ ಅನರ್ಹ ಶಾಸಕ ಶಿವರಾಮ್ ಹೆಬ್ಬಾರ್ ವಿರುದ್ಧ ಅಕ್ರೋಶದ ಅಲೆ ಇದೆ. ಇದರಿಂದ ಭೀಮಣ್ಣ ನಾಯ್ಕ ಗೆಲ್ಲುತ್ತಾರೆ. ಹೆಬ್ಬಾರ್ ಪಕ್ಷಕ್ಕೆ ದ್ರೋಹವೆಸಗಿ ಹೋಗಿದ್ದಾರೆ ಇದರಿಂದ ಕ್ಷೇತ್ರದಲ್ಲಿ ಅವರ ವಿರುದ್ಧ ಅಲೆ ಹೆಚ್ಚಾಗಿದೆ. ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ನಾಯ್ಕ ಪರ ಅನುಕಂಪವಿದೆ. ಈ ಕಾರಣದಿಂದ ಗೆಲ್ಲುತ್ತಾರೆ ಎಂದು ತಮ್ಮ ಅಭ್ಯರ್ಥಿ ಗೆಲುವಿನ ಕುರಿತು ಪಾಟೀಲ್ ಹೇಳಿದರು.

  • ಡಿಕೆಶಿ ಸಜ್ಜನರ ಸಹವಾಸ ಮಾಡಲಿ: ರಾಜಗುರು ದ್ವಾರಕಾನಾಥ್

    ಡಿಕೆಶಿ ಸಜ್ಜನರ ಸಹವಾಸ ಮಾಡಲಿ: ರಾಜಗುರು ದ್ವಾರಕಾನಾಥ್

    – ಅಹರ್ನ ಶಾಸಕರಿಗೆ ಶಿಕ್ಷೆ ಫಿಕ್ಸ್

    ಹಾಸನ: ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಸಜ್ಜನರ ಸಹವಾಸ ಮಾಡಲಿ ಎಂದು ರಾಜಗುರು ದ್ವಾರಕಾನಾಥ್ ಸಲಹೆ ನೀಡಿದ್ದಾರೆ.

    ಹುಟ್ಟೂರು ರಾಮನಗರ ಜಿಲ್ಲೆಯ ಚನ್ನರಾಯಪಟ್ಟಣದ ಅಣತಿ ಗ್ರಾಮದಲ್ಲಿ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್ ಅವರಿಗೆ ನಮ್ಮ ಮನೆ ಬಾಗಿಲು ತೆರೆದಿದೆ. ಅವರಿಗೆ ಈಗ ಎದುರಾಗಿರುವುದು ಕಂಟಂಕ ಅಲ್ಲ. ರಾಮ ವನವಾಸ ಮುಗಿಸಿದ ಮೇಲೆ ಅಯೋಧ್ಯೆಗೆ ಬಂದು ಕೂರಲಿಲ್ಲವೆ? ಅಂತೆ ಡಿ.ಕೆ.ಶಿವಕುಮಾರ್ ಅವರು ಹೊರ ಬಂದಿದ್ದಾರೆ. ಇನ್ನು ಮುಂದೆ ಸಜ್ಜನರ ಸಹವಾಸ ಮಾಡಲಿ ಎಂದು ತಿಳಿಸಿದ್ದಾರೆ.

    ಡಿ.ಕೆ.ಶಿವಕುಮಾರ್ ಅವರು ಇಲ್ಲಿವರೆಗೂ ನನ್ನ ಬಳಿ ಬಂದಿಲ್ಲ. ಅವರು ಅಲ್ಲೆಲ್ಲೋ ಹೋಗಿದ್ದಾರೆ ಎನ್ನುತ್ತಾರೆ. ನಾನು ಅವರನ್ನ ಸಂಪರ್ಕಿಸಿಲ್ಲ. ಅವರೊಂದಿಗೆ ಯಾರೂ ಇಲ್ಲದಿದ್ದಾಗ ನಾನಿದ್ದೆ. ಅವರ ಜೀವನದಲ್ಲಿ ಮೊದಲು ಬಂದವನು ನಾನು. ಬಂಗಾರಪ್ಪ ಮಂತ್ರಿಮಂಡಲದಲ್ಲಿ ಡಿ.ಕೆ.ಶಿವಕುಮಾರ್ ಅವರನ್ನು ಸಚಿವರಾಗಿ ಮಾಡಿದ್ದೆ. ಮಾಜಿ ಸಚಿವರ ಜೀವನದಲ್ಲಿ ನನ್ನ ಪಾತ್ರ ಬಹಳ ಇದೆ. ನಮ್ಮ ಮನೆಗೆ ಬರುವರೆಲ್ಲಾ ದೇವರೆ. ಡಿ.ಕೆ.ಶಿವಕುಮಾರ್ ಗಂಧದ ಜೊತೆಗೆ ಗುದ್ದಾಡಲಿ. ಉತ್ತಮರೊಂದಿಗೆ ಹೋರಾಡಲಿ ಎಂದು ಹೇಳಿದರು.

    ಉಪ ಚುನಾವಣೆಯಲ್ಲಿ ಪಕ್ಷಾಂತರಿಗಳಿಗೆ ಆಘಾತ ಕಾದಿದೆ. ಅನರ್ಹ ಶಾಸಕರಿಗೆ ದೇವರೇ ಶಿಕ್ಷೆ ಕೊಡುತ್ತಾನೆ. ತಂದೆ-ತಾಯಿ ಬೈದರೆಂದು ಮನೆ ಬಿಟ್ಟು ಹೋಗಲು ಸಾಧ್ಯವೆ? ಪಕ್ಷ ತಾಯಿ ಸಮಾನ. ಸರಿ ಹೊಂದದೆ ಇದ್ದರೆ ಗೆದ್ದ ಪಕ್ಷದಿಂದ ಐದು ವರ್ಷ ಪೂರೈಸಿ ಬಿಡಬೇಕು. ಹೀಗೆ ಮಧ್ಯದಲ್ಲಿ ಪಕ್ಷ ಬಿಟ್ಟು ಹೋದರೆ ಸಾರ್ವಜನಿಕರ ಸಮಯ, ಹಣ ವ್ಯರ್ಥವಾಗುತ್ತದೆ ಎಂದು ಅನರ್ಹ ಶಾಸಕರ ವಿಚಾರದಲ್ಲಿ ಮಾರ್ಮಿಕವಾಗಿ ಭವಿಷ್ಯ ನುಡಿದರು.

    ನವೆಂಬರ್ 4ರಂದು ಗುರು ಮುಂದೆ ಚಲಿಸಿದ್ದಾನೆ. ಹೀಗಾಗಿ ರಾಜ್ಯ ಬಿಜೆಪಿ ಸರ್ಕಾರಕ್ಕೆ ಮಾರ್ಚ್ ವರೆಗೆ ಆಘಾತಗಳಿವೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಹುಷಾರಾಗಿ ಸರ್ಕಾರ ನಡೆಸಬೇಕು ಎಂದು ತಿಳಿಸಿದರು.

  • ಪಾಲಿಕೆ ಚುನಾವಣೆಯ ಅಭ್ಯರ್ಥಿಗಳ ವಿರುದ್ಧ ಮುನಿಸಿಕೊಂಡ್ರಾ ಮಾಜಿ ಸಚಿವ?

    ಪಾಲಿಕೆ ಚುನಾವಣೆಯ ಅಭ್ಯರ್ಥಿಗಳ ವಿರುದ್ಧ ಮುನಿಸಿಕೊಂಡ್ರಾ ಮಾಜಿ ಸಚಿವ?

    ದಾವಣಗೆರೆ: ಪಾಲಿಕೆ ಚುನಾವಣೆಯ ಅಭ್ಯರ್ಥಿಗಳ ವಿರುದ್ಧ ಮುನಿಸಿಕೊಂಡಿದ್ದಾರಾ ಕಾಂಗ್ರೆಸ್ ಮಾಜಿ ಸಚಿವರು ಎನ್ನುವಂತಹ ಪ್ರಶ್ನೆ ಇಲ್ಲಿ ಉದ್ಭವಿಸಿದೆ. ದಾವಣಗೆರೆ ಮಹಾನಗರ ಪಾಲಿಕೆ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ಮಾಜಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಪ್ರಚಾರಕ್ಕೂ ಸಹ ಬರಲಿಲ್ಲ.

    ಇದೇ ತಿಂಗಳ 12ರಂದು ದಾವಣಗೆರೆ ಮಹಾನಗರ ಪಾಲಿಕೆ ಚುನಾವಣೆ ನಡೆಯಲಿದೆ. ಪಾಲಿಕೆ ಚುನಾವಣೆಯ ಬಹಿರಂಗ ಪ್ರಚಾರ ಮುಗಿದು, ಮನೆ ಮನೆ ಪ್ರಚಾರ ಮುಗಿಯುತ್ತಾ ಬಂದರು ಸಹ ಮಲ್ಲಿಕಾರ್ಜುನ್ ಮಾತ್ರ ಪ್ರಚಾರದಲ್ಲಿ ಕಾಣಿಸಿಕೊಂಡಿಲ್ಲ. ಅಲ್ಲದೆ ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ಒಂದು ದಿನ ಕೂಡ ಪ್ರಚಾರಕ್ಕೆ ಬರಲಿಲ್ಲ. ಇದರಿಂದ ಪಾಲಿಕೆ ಅಭ್ಯರ್ಥಿಗಳ ವಿರುದ್ಧ ಮುನಿಸಿಕೊಂಡಿದ್ದಾರಾ ಎನ್ನುವ ಪ್ರಶ್ನೆ ಮೂಡಿದೆ.

    ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮಲ್ಲಿಕಾರ್ಜುನ್ ಸೋಲಿಗೆ ಪಾಲಿಕೆ ಸದಸ್ಯರೇ ಕಾರಣ ಎಂದು ಬಹಿರಂಗವಾಗಿ ಎಸ್‍ಎಸ್‍ಎಂ ಅಭಿಮಾನಿಗಳು ಕಿಡಿಕಾರಿದರು. ಅಲ್ಲದೆ ಸ್ವತಃ ಮಲ್ಲಿಕಾರ್ಜುನ್ ಕೂಡ ಜೊತೆಯಲ್ಲಿ ಇದ್ದ ನಮ್ಮ ಮುಖಂಡರೇ ನಮ್ಮನ್ನು ಸೋಲಿಸಿದ್ದು ಎಂದ ಹಲವು ವೇದಿಕೆ ಕಾರ್ಯಕ್ರಮಗಳಲ್ಲಿ ನೋವನ್ನು ಹೊರಹಾಕಿದ್ದರು. ಎಷ್ಟೇ ಅಭಿವೃದ್ಧಿ ಕೆಲಸ ಮಾಡಿದರೂ ನನ್ನ ಮುಖಂಡರೇ ನಮ್ಮನ್ನು ಸೋಲಿಸಿದರು ಎನ್ನುವ ನೋವಿನಿಂದ ಎಸ್‍ಎಸ್ ಮಲ್ಲಿಕಾರ್ಜುನ್ ಹೊರ ಬರುತ್ತಿಲ್ಲ ಎನ್ನುವ ಅನುಮಾನಗಳು ಹುಟ್ಟಿಕೊಂಡಿವೆ.

  • ಡಿಕೆಶಿ ಸ್ಟೈಲಿಶ್ ಗಡ್ಡಕ್ಕೆ ಅಭಿಮಾನಿಗಳು ಫಿದಾ

    ಡಿಕೆಶಿ ಸ್ಟೈಲಿಶ್ ಗಡ್ಡಕ್ಕೆ ಅಭಿಮಾನಿಗಳು ಫಿದಾ

    ಬೆಂಗಳೂರು: ಅಕ್ರಮ ಹಣ ವರ್ಗಾವಣೆಯ ಆರೋಪದಿಂದ ಜೈಲು ಸೇರಿದ್ದ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಅವರು ಬುಧವಾರ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ಈ ನಡುವೆ ಡಿಕೆಶಿಯ ಸ್ಟೈಲಿಶ್ ಗಡ್ಡಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ.

    ಒಂದು ತಿಂಗಳಿಗೂ ಅಧಿಕ ಕಾಲ ಜಾರಿ ನಿರ್ದೇಶನಾಲಯ (ಇಡಿ) ಬಂಧನದ ಬಳಿಕ ತಿಹಾರ್ ಜೈಲುವಾಸದಲ್ಲಿದ್ದ ಡಿಕೆ ಜೈಲಿನಿಂದ ಹೊರ ಬಂದಿದ್ದು, ಅವರ ಮುಖಚಹರೆಯಲ್ಲಿ ಬದಲಾವಣೆ ಕಂಡು ಬಂದಿದೆ. ಜೈಲುವಾಸದ ನಂತರ ಡಿ.ಕೆ ಶಿವಕುಮಾರ್ ಅವರು ಗಡ್ಡ ಬಿಟ್ಟಿದ್ದು, ಈ ಟೈಗರ್ ಲುಕ್‍ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

    ಡಿ.ಕೆ ಶಿವಕುಮಾರ್ ಅವರು ಇದೇ ಮೊದಲ ಬಾರಿಗೆ ಈ ರೀತಿಯಲ್ಲಿ ಗಡ್ಡ ಬಿಟ್ಟಿದ್ದಾರೆ. ಸದಾ ಶೇವ್ ಮಾಡಿಕೊಂಡು ಇರುತ್ತಿದ್ದ ಡಿಕೆಶಿ ಅವರನ್ನು ಈ ಹೊಸ ಲುಕ್‍ನಲ್ಲಿ ನೋಡಿದ ಅವರ ಅಭಿಮಾನಿಗಳು ಅಣ್ಣ ನಿಮಗೆ ಗಡ್ಡ ಚೆನ್ನಾಗಿ ಕಾಣುತ್ತದೆ, ಗಡ್ಡ ತೆಗೆಯಬೇಡಿ ಎಂದು ಮನವಿ ಮಾಡಿದ್ದಾರೆ ಎನ್ನಲಾಗಿದೆ.

    ಈ ಮಧ್ಯೆ ಡಿ.ಕೆ ಶಿವಕುಮಾರ್ ಅವರು ದೈವಭಕ್ತರಾಗಿದ್ದು, ತಮ್ಮ ಮನೆ ದೇವರು ಕಬ್ಬಾಳಮ್ಮನ ದರ್ಶನದ ನಂತರ ಗಡ್ಡ ತೆಗೆಯಲು ಹಾಗೇ ಬಿಟ್ಟಿದ್ದಾರೆ ಎಂದು ಹೇಳಲಾಗಿದೆ. ಇನ್ನೂ ಕೆಲ ಅವರ ಅಭಿಮಾನಿಗಳು ನೊಣವಿನಕೆರೆ ಅಜ್ಜಯ್ಯ ಅವರ ಮಹಾನ್ ಭಕ್ತರಾಗಿರುವ ಡಿಕೆ ಶಿವಕುಮಾರ್ ಅವರು ಅಜ್ಜಯ್ಯನವರ ದರ್ಶನ ಮಾಡಿ ನಂತರ ಗಡ್ಡ ತೆಗೆಯಬೇಕು ಎಂದು ಹರಕೆ ಮಾಡಿಕೊಂಡಿರಬಹುದು ಎಂದು ಮಾತನಾಡಿಕೊಳ್ಳುತ್ತಿದ್ದಾರೆ.

    ಇದರ ಜೊತೆಗೆ ಡಿ.ಕೆ ಶಿವಕುಮಾರ್ ಪ್ರತೀಕಾರ ತೀರಿಸಿಕೊಳ್ಳಲು ಗಡ್ಡ ಬಿಟ್ಟಿದ್ದಾರೆ. ಸಿಂಪಥಿ ಗಿಟ್ಟಿಸಿಕೊಳ್ಳೋಕೆ ಈ ರೀತಿಯ ಪ್ಲಾನ್ ಮಾಡಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ಸುದ್ದಿಯಾಗುತ್ತಿದೆ. ಇನ್ನೂ ಕೆಲ ಅಭಿಮಾನಿಗಳು ಜೈಲಿಂದ ಹೊರ ಬಂದ ಬಳಿಕ ಡಿಕೆ ಶಿವಕುಮಾರ್ 2.0 ಆಗಿ ಬದಲಾಗಿದ್ದಾರೆ ಎಂದು ಟ್ರೋಲ್ ಮಾಡುತ್ತಿದ್ದಾರೆ.

  • ಐಎಂಎ ಕೇಸಲ್ಲಿ ಜೈಲು ಸೇರಿದ್ದವನ ಜೊತೆ ಜಮೀರ್ ಅಹ್ಮದ್ ಪಾರ್ಟಿ

    ಐಎಂಎ ಕೇಸಲ್ಲಿ ಜೈಲು ಸೇರಿದ್ದವನ ಜೊತೆ ಜಮೀರ್ ಅಹ್ಮದ್ ಪಾರ್ಟಿ

    ಬೆಂಗಳೂರು: ಐಎಂಎ ಬಹು ಕೋಟಿ ವಂಚನೆ ಪ್ರಕರಣದಲ್ಲಿ ಜೈಲು ಸೇರಿದ್ದ ಆರೋಪಿಯ ಜೊತೆಗೆ ಮಾಜಿ ಸಚಿವ ಜಮೀರ್ ಅಹ್ಮದ್  ಹಾಗೂ ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ ಪಾರ್ಟಿ ಮಾಡಿದ್ದಾರೆ.

    ಐಎಂಎ ಪ್ರಕರಣದಲ್ಲಿ ಜೈಲು ಸೇರಿದ್ದ ಮುಜಾಹಿದ್ದೀನ್ ಅಕ್ಟೋಬರ್ 13ರಂದು ಜಾಮೀನಿನ ಆಧಾರದ ಮೇಲೆ ಹೊರ ಬಂದಿದ್ದ. ಅಂದು ರಾತ್ರಿ ಮಾಜಿ ಸಚಿವ ಜಮೀರ್ ಅಹ್ಮದ್ ಅವರು ಮುಜಾಹಿದ್ದೀನ್ ಜೊತೆಗೆ ಪಾರ್ಟಿ ಮಾಡಿದ್ದಾರೆ. ಕಾಂಗ್ರೆಸ್ ನಾಯಕರ ಈ ನಡೆಯ ಬಗ್ಗೆ ಭಾರೀ ಚರ್ಚೆಯಾಗುತ್ತಿದೆ.

    ಐಎಂಎ ಪ್ರಕರಣದಲ್ಲಿ ಮುಖ್ಯ ಆರೋಪಿ ಆಗಿರುವ ಐಎಂಎ ಜ್ಯುವೆಲ್ಸ್ ಮಾಲೀಕ ಮನ್ಸೂರ್ ಖಾನ್ ಪರಾರಿಯಾಗಲು ಮುಜಾಹಿದ್ದೀನ್ ಸಹಾಯ ಮಾಡಿದ್ದ. ಈ ಹಿನ್ನೆಲೆಯಲ್ಲಿ ಮುಜಾಹಿದ್ದೀನ್ ಮೇಲೆ ಎಸ್‍ಐಟಿ ರೇಡ್ ಮಾಡಿ ಅರೆಸ್ಟ್ ಮಾಡಿತ್ತು. ಆದರೆ ಅಕ್ಟೋಬರ್ 11ರಂದು ಮುಜಾಹಿದ್ದೀನ್‍ಗೆ ಹೈಕೋರ್ಟ್ ಏಕಸದಸ್ಯ ಪೀಠವು ಜಾಮೀನು ನೀಡಿತ್ತು. ಅಕ್ಟೋಬರ್ 13ರಂದು ಮುಜಾಹಿದ್ದೀನ್ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ. ಜೈಲಿನ ಹೊರಗೆ ನಿಂತಿದ್ದ ಬೆಂಬಲಿಗರು ಪಟಾಕಿ ಸಿಡಿಸಿ, ಹಾರ ಹಾಕಿ ಸ್ವಾಗತಿಸಿದ್ದರು.

    ಗ್ರಾಹಕರಿಗೆ ವಂಚಿಸಿದ್ದು ಹೇಗೆ?
    ಐಎಂಎ ಜ್ಯುವೆಲ್ಸ್ ಚಿನ್ನ ಖರೀದಿಸುವ ಗ್ರಾಹಕರಿಗೆ ಮೇಕಿಂಗ್ ಹಾಗೂ ವೇಸ್ಟೇಜ್ ಶುಲ್ಕ ವಿಧಿಸುತ್ತಿರಲಿಲ್ಲ. ಈ ಪ್ರಕಟಣೆ ನೋಡಿ ಜನ ಚಿನ್ನ ಖರೀದಿ ಮಾಡುತ್ತಿದ್ದರು. ಖರೀದಿಗೆ ಬಂದ ಗ್ರಾಹಕರಿಗೆ ಕಂಪನಿಯಲ್ಲಿ ಹಣ ಹೂಡುವಂತೆ ಸಿಬ್ಬಂದಿ ಪುಸಲಾಯಿಸುತ್ತಿದ್ದರು. ಜ್ಯುವೆಲ್ಸ್ ಸಿಬ್ಬಂದಿಯ ಮಾತಿಗೆ ಮರುಳಾದ ಜನ ತಮ್ಮಲ್ಲಿದ್ದ ಹಣವನ್ನು ಹೂಡಿಕೆ ಮಾಡುತ್ತಿದ್ದರು. 1 ಲಕ್ಷ ರೂ. 3 ಸಾವಿರ ರೂ. ನಂತೆ ಕಂಪನಿ ಬಡ್ಡಿ ನೀಡುತಿತ್ತು. ಕಂಪನಿ ಸರಿಯಾದ ಸಮಯದಲ್ಲಿ ಲಾಭಾಂಶ ನೀಡುತ್ತಿದ್ದ ಕಾರಣ ವಿಶ್ವಾಸಾರ್ಹತೆ ಗಳಿಸಿಕೊಂಡಿತ್ತು.

    ಲಾಭಾಂಶ ಪಡೆದ ಗ್ರಾಹಕರು ಸ್ನೇಹಿತರಿಗೆ ಹೇಳುತ್ತಿದ್ದ ಕಾರಣ ಅವರು ಹೂಡಿಕೆ ಮಾಡತೊಡಗಿದರು. ಭಾರೀ ಪ್ರಚಾರ ಸಿಕ್ಕಿದ ಪರಿಣಾಮ ಹೂಡಿಕೆ ಹೆಚ್ಚಾಯಿತು. ಆದರೆ ಕಳೆದ 2-3 ತಿಂಗಳಿನಿಂದ ಸಂಸ್ಥೆ ಬಡ್ಡಿ ನೀಡಿರಲಿಲ್ಲ. ಈ ನಡುವೆ ಜೂನ್ 10 ರಂದು ಸಂಪೂರ್ಣ ಹಣ ನೀಡುವುದಾಗಿ ಭರವಸೆ ನೀಡಿತ್ತು. ಆದರೆ ಜೂ.9 ರಂದು ಮಾಲೀಕ ಮನ್ಸೂರ್ ಅಲಿ ಖಾನ್ ಆತ್ಮಹತ್ಯೆಯ ವಿಡಿಯೋ ವೈರಲ್ ಆದ ಬಳಿಕ ಮಳಿಗೆಯ ಮುಂದೆ ಜನರು ಜಮಾಯಿಸಿ ಹೂಡಿದ್ದ ಹಣವನ್ನು ಕೇಳಲು ಆರಂಭಿಸಿದ್ದರು.

  • ಸರ್ಕಾರ ಬಿದ್ರೂ ಮನೆ ಖಾಲಿ ಮಾಡದ ಮಾಜಿ ಸಚಿವರು

    ಸರ್ಕಾರ ಬಿದ್ರೂ ಮನೆ ಖಾಲಿ ಮಾಡದ ಮಾಜಿ ಸಚಿವರು

    ಬೆಂಗಳೂರು: ಸರ್ಕಾರ ಹೋದ ಮೇಲೂ ಮಾಜಿ ಸಚಿವರು ಸರ್ಕಾರಿ ಬಂಗಲೆಯಲ್ಲೇ ಠಿಕಾಣಿ ಹೂಡಿದ್ದಾರೆ.

    ಸಮ್ಮಿಶ್ರ ಸರ್ಕಾರ ಬಿದ್ದು ಹೋದ ಮೇಲೆ ಅರ್ಧಕ್ಕರ್ಧ ಮಾಜಿ ಮಂತ್ರಿಗಳು ಇನ್ನು ಸರ್ಕಾರಿ ಬಂಗಲೆ ಖಾಲಿ ಮಾಡಿಲ್ಲ. ಅಲ್ಲದೆ ಲಕ್ಷಾಂತರ ರೂ. ಖರ್ಚು ಮಾಡಿ ವಾಸ್ತು ಪ್ರಕಾರ ರೆಡಿ ಮಾಡಿದ ಬಂಗಲೆ ಬಿಡುವುದಕ್ಕೆ ಕಷ್ಟ ಆಗುತ್ತಿದೆ ಎಂದು ಹೇಳುತ್ತಿದ್ದಾರೆ ಎನ್ನಲಾಗಿದೆ.

    ಸದ್ಯ ಹೊಸ ಸಚಿವರಿಗೆ ಬಂಗಲೆ ಕೊಡುವುದಕ್ಕೆ ಅಧಿಕಾರಿಗಳು ಕಷ್ಟಪಡುತ್ತಿದ್ದಾರೆ. ಬಂಗಲೆ ಖಾಲಿ ಮಾಡಲು ಸೂಚಿಸಿದರು ಮಾಜಿ ಸಚಿವರು ಇನ್ನು ಬಂಗಲೆ ಖಾಲಿ ಮಾಡಿಲ್ಲ. ಮಾಜಿ ಮಂತ್ರಿಗಳು ಸರ್ಕಾರಿ ಬಂಗಲೆಯಲ್ಲಿ ಇರುವುದರಿಂದ ಹಾಲಿ ಮಂತ್ರಿಗಳು ಬಂಗಲೆ ಇಲ್ಲದೆ ಪರದಾಡುತ್ತಿದ್ದಾರೆ.

    ಸದ್ಯ ಅಧಿಕಾರಿಗಳು ಇದುವರೆಗೂ 3-4 ಸಚಿವರಿಗೆ ಮಾತ್ರ ಬಂಗಲೆ ನೀಡಿದ್ದಾರೆ. ಅಧಿಕಾರಿಗಳು ಬಂಗಲೆ ಬಿಟ್ಟು ಹೋಗ್ರಿ ಎಂದರು ಸಹ ಮಾಜಿ ಸಚಿವರು ಸರ್ಕಾರಿ ಬಂಗಲೆಯನ್ನು ಖಾಲಿ ಮಾಡಿ ಹೋಗುತ್ತಿಲ್ಲ. ಇದನ್ನೂ ಓದಿ: ನಾವು ಮನೆ ಖಾಲಿ ಮಾಡಲ್ಲ – ಎಚ್ಚರಿಕೆಗೆ ಡೋಂಟ್‍ಕೇರ್ ಎಂದ 80 ಮಾಜಿ ಸಂಸದರು

    ಬಂಗಲೆ ಖಾಲಿ ಮಾಡದ ಮಾಜಿ ಸಚಿವರು:
    * ಸಿದ್ದರಾಮಯ್ಯ- ಮಾಜಿ ಸಿಎಂ, ಕಾವೇರಿ ಬಂಗಲೆ.
    * ಪರಮೇಶ್ವರ್ – ಮಾಜಿ ಡಿಸಿಎಂ, ಸದಾಶಿವನಗರ ಬಂಗಲೆ.
    * ಎಚ್.ಡಿ.ರೇವಣ್ಣ- ಸೂಪರ್ ಸಿಎಂ, ಕುಮಾರಕೃಪ ಬಂಗಲೆ.
    * ಡಿಕೆ ಶಿವಕುಮಾರ್- ಕ್ರಸೆಂಟ್ ರೋಡ್ ಬಂಗಲೆ.
    * ಆರ್.ವಿ.ದೇಶಪಾಂಡೆ- ರೇಸ್ ಕೋರ್ಸ್ ಬಂಗಲೆ.
    * ಮನಗುಳಿ – ಸೆವೆನ್ ಮಿನಿಸ್ಟರ್ ಕ್ವಾಟ್ರಸ್.
    * ಬಂಡೆಪ್ಪ ಕಾಶಂಪೂರ್- ಸೆವೆನ್ ಮಿನಿಸ್ಟರ್ ಕ್ವಾಟ್ರಸ್.
    * ರಮೇಶ್ ಜಾರಕಿಹೋಳಿ- ಸೆವೆನ್ ಮಿನಿಸ್ಟರ್ ಕ್ವಾಟ್ರಸ್.

  • ನಳಿನ್ ಕುಮಾರ್‌ಗೆ ರಾಜಕೀಯ ಪರಿಪಕ್ವತೆಯೇ ಇಲ್ಲ: ಎಸ್.ಆರ್.ಪಾಟೀಲ್

    ನಳಿನ್ ಕುಮಾರ್‌ಗೆ ರಾಜಕೀಯ ಪರಿಪಕ್ವತೆಯೇ ಇಲ್ಲ: ಎಸ್.ಆರ್.ಪಾಟೀಲ್

    ಬಾಗಲಕೋಟೆ: ಬಿಜೆಪಿ ನೂತನ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಗೆ ರಾಜಕೀಯ ಪರಿಪಕ್ವತೆಯೇ ಇಲ್ಲ ಎಂದು ಮಾಜಿ ಸಚಿವ ಎಸ್.ಆರ್.ಪಾಟೀಲ್ ಗುಡುಗಿದ್ದಾರೆ.

    ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಬಂಧನದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯನವರ ಕೈವಾಡವಿದೆ ಎಂಬ ನಳಿನ್ ಕುಮಾರ್ ಕಟೀಲ್ ಹೇಳಿಕೆಗೆ ಎಸ್‍ಆರ್ ಪಾಟೀಲ್ ತಿರುಗೇಟು ನೀಡಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಗೆ ಕನಿಷ್ಠ ಜ್ಞಾನವಿಲ್ಲ. ಜಾರಿ ನಿರ್ದೇಶನಾಲಯ (ಇಡಿ) ಮತ್ತು ಆದಾಯ, ತೆರಿಗೆ ಸಂಸ್ಥೆಗಳು ಕೇಂದ್ರ ಸರ್ಕಾರದ ಅಡಿಯಲ್ಲಿ ಕೆಲಸ ಮಾಡುತ್ತವೆ. ಕಟೀಲ್ ಅವರು ಅಪ್ರಬುದ್ಧ ಹೇಳಿಕೆ ನೀಡಿದ್ದಾರೆ. ಇಂತವರಿಂದ ರಾಜ್ಯದ ಹಾಗೂ ದೇಶದ ಜನರು ಏನು ನಿರೀಕ್ಷೆ ಮಾಡಲು ಸಾಧ್ಯ ಎಂದು ವ್ಯಂಗ್ಯವಾಗಡಿದ್ದಾರೆ.

    ನಳಿನ್ ಕುಮಾರ್ ಕಟೀಲ್ ಅಷ್ಟು ಅಪ್ರಬುದ್ಧ ಇದಾರೆ ಅಂತ ನಾನು ಭಾವಿಸಿರಲಿಲ್ಲ. ಅವರಿಗೆ ಯಾವ ಸಂಸ್ಥೆಗಳು ಎಲ್ಲಿ ಕೆಲಸ ಮಾಡುತ್ತವೆ ಎನ್ನುವುದು ಗೊತ್ತಿಲ್ಲ. ಇದು ಬಿಜೆಪಿ ರಾಜ್ಯ ಘಟಕದ ದುರ್ದೈವ ಎಂದು ವಾಗ್ದಾಳಿ ನಡೆಸಿದರು.

    ಸಂವಿಧಾನಿಕ ಸಂಸ್ಥೆಗಳನ್ನು ಬಳಸಿಕೊಂಡು ಕಾಂಗ್ರೆಸ್ ನಾಯಕರ ನೈತಿಕ ಸ್ಥೈರ್ಯ ಕುಗ್ಗಿಸುತ್ತೇವೆ ಎಂಬುದು ಸಾಧ್ಯವಿಲ್ಲ. ಕಾಂಗ್ರೆಸ್ ನಾಯಕರ ನೈತಿಕ ಸ್ಥೈರ್ಯ ಯಾವುದೇ ಕಾರಣಕ್ಕೂ ಕುಗ್ಗುವುದಿಲ್ಲ. ಕಾಂಗ್ರೆಸ್ ಮುಕ್ತ ಭಾರತ ಮಾಡುತ್ತೇವೆಂಬ ಬಿಜೆಪಿ ನಾಯಕರ ವರ್ತನೆ ತಿರುಕನ ಕನಸು ಲೇವಡಿ ಮಾಡಿದರು.

    ನೂತನ ಮೋಟರ್ ಕಾಯ್ದೆ ಅಡಿ ಭಾರೀ ದಂಡ ವಸೂಲಿ ಮಾಡುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಮಾಜಿ ಸಚಿವರು, ಕರ್ನಾಟಕ ಸಹ ದೇಶದ ಒಕ್ಕೂಟ ವ್ಯವಸ್ಥೆಯ ಒಂದು ರಾಜ್ಯ. ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಗುಜರಾತ್‍ನವರೇ ಆಗಿದ್ದರೂ ಅಲ್ಲಿ ದಂಡವನ್ನು ಶೇ.50 ರಷ್ಟು ಇಳಿಸಿದ್ದಾರೆ. ಅದು ನಮ್ಮ ರಾಜ್ಯಕ್ಕೂ ಅನ್ವಯವಾಗಬೇಕು. ದಂಡ ಹೆಚ್ಚು ಹಾಕುವುದರಿಂದ ಸಾರ್ವಜನಿಕರ ಜೇಬಿಗೆ ಕತ್ತರಿ ಬಿದ್ದಿದೆ. ಇದು ಅಧಿಕಾರಿಗಳಿಗೆ ಹೆಚ್ಚು ಅನುಕೂಲವಾಗಿದೆ ಎಂದು ಹೇಳಿದರು.

  • ಇಂದು ಡಿಕೆಶಿ ಭವಿಷ್ಯ ನಿರ್ಧಾರ

    ಇಂದು ಡಿಕೆಶಿ ಭವಿಷ್ಯ ನಿರ್ಧಾರ

    ಬೆಂಗಳೂರು: ಮಾಜಿ ಸಚಿವ ಡಿ.ಕೆ ಶಿವಕುಮಾರ್ ಭವಿಷ್ಯ ಇಂದು ನಿರ್ಧಾರವಾಗಲಿದೆ.

    ದೆಹಲಿಯ ನಿವಾಸಗಳ ಮೇಲಿನ ಐಟಿ ದಾಳಿ ಪ್ರಕರಣ ಸಂಬಂಧ ಇಡಿ(ಜಾರಿ ನಿರ್ದೇಶನಾಲಯ) ಸಮನ್ಸ್ ರದ್ದು ಕೋರಿ ಡಿಕೆಶಿ ಸಲ್ಲಿಸಿದ್ದ ಅರ್ಜಿ ಸಂಬಂಧ ಈಗಾಗಲೇ ವಾದ ಪ್ರತಿವಾದ ಮುಕ್ತಾಯವಾಗಿದೆ. ಇಂದು ಈ ಬಗ್ಗೆ ತೀರ್ಪು ಪ್ರಕಟಗೊಳ್ಳಲಿದೆ.

    ಹೀಗಾಗಿ ಡಿಕೆಶಿ ಫುಲ್ ಟೆನ್ಶನ್ ಆಗಿದ್ದಾರೆ. ದೆಹಲಿಯ ಡಿಕೆಶಿ ಹಾಗೂ ಆಪ್ತರ ನಿವಾಸಗಳ ಮೇಲೆ ಐಟಿ ದಾಳಿ ವೇಳೆ ಐಟಿ ಅಧಿಕಾರಿಗಳು 8.59 ಕೋಟಿ ಹಣ ಜಪ್ತಿ ಮಾಡಿದ್ದರು. ಹಣ ಮೂಲದ ಬಗ್ಗೆ ವಿವರಣೆ ನೀಡುವಂತೆ ಡಿಕೆಶಿ ಮತ್ತು ಆಪ್ತರಿಗೆ ಇಡಿ ಸಮನ್ಸ್ ನೀಡಿತ್ತು. ಇಡಿ ನೋಟಿಸ್ ಪ್ರಶ್ನಿಸಿ ಡಿಕೆಶಿ ಹಾಗೂ ಅವರ ತಂಡ ಹೈಕೋರ್ಟ್ ಮೇಟ್ಟಿಲೇರಿತ್ತು.

    ದೆಹಲಿಯ 4 ಫ್ಲಾಟ್‍ಗಳ ಮೇಲೆ ಐಟಿ ಇಲಾಖೆ ದಾಳಿ ವೇಳೆ ಫ್ಲಾಟ್‍ಗಳಲ್ಲಿ 8.59 ಕೋಟಿ ರೂ. ಹಣ ಪತ್ತೆಯಾಗಿದ್ದ ಸಂದರ್ಭದಲ್ಲಿ ಸಿಕ್ಕ 41 ಲಕ್ಷ ರೂ. ನನ್ನದೆಂದು ಡಿಕೆಶಿ ಒಪ್ಪಿಕೊಂಡಿದ್ದರು. ಹೀಗಾಗಿ ಉಳಿದ 8.18 ಕೋಟಿ ರೂಪಾಯಿ ಮೂಲದ ಬಗ್ಗೆ ಐಟಿ ತನಿಖೆ ನಡೆಸುತ್ತಿತ್ತು.