Tag: Former Minister CD Case

  • ಸಿಡಿ ಕೇಸ್ – ಮಗಳನ್ನು ಹುಡುಕಿ ಕೊಡಿ ಎಂದು ತಂದೆ ಸಲ್ಲಿಸಿದ್ದ ಅರ್ಜಿ ಇತ್ಯರ್ಥ

    ಸಿಡಿ ಕೇಸ್ – ಮಗಳನ್ನು ಹುಡುಕಿ ಕೊಡಿ ಎಂದು ತಂದೆ ಸಲ್ಲಿಸಿದ್ದ ಅರ್ಜಿ ಇತ್ಯರ್ಥ

    ಧಾರವಾಡ: ಮಾಜಿ ಸಚಿವರ ವಿರುದ್ಧ ಸಿಡಿ ಕೇಸ್ ವಿಚಾರವಾಗಿ ಯುವತಿ ತಂದೆ ದಾಖಲಿಸಿದ್ದ ಹೆಬಿಯಸ್ ಕಾರ್ಪಸ್ ಅರ್ಜಿ ಇತ್ಯರ್ಥಗೊಳಿಸಿ ಧಾರವಾಡ ಹೈಕೋರ್ಟ್ ವಿಭಾಗೀಯ ಪೀಠ ಆದೇಶಿಸಿದೆ.

    ಮೇ 27 ರಂದು ಸಿಡಿಯಲ್ಲಿದ್ದ ಯುವತಿ ತಂದೆ ಧಾರವಾಡ ಹೈಕೋರ್ಟ್ ನಲ್ಲಿ ನನ್ನ ಮಗಳನ್ನ ಹುಡುಕಿಕೊಡಿ ಎಂದು ಹೆಬಿಯಸ್ ಕಾರ್ಪಸ್ ಅರ್ಜಿಯನ್ನ ಸಲ್ಲಿಸಿದ್ದರು. ಇಂದು ನಡೆದ ವೀಡಿಯೋ ವಿಚಾರಣೆ ವೇಳೆ, ನಾನು ಸುರಕ್ಷಿತವಾಗಿದ್ದೇನೆಂದು ಯುವತಿ ಹೇಳಿಕೆ ನೀಡಿದ್ದಾಳೆ.

    “ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ನಾನು ಬೆಂಗಳೂರು ವಿಳಾಸದಲ್ಲಿ ಪ್ರಸ್ತುತ ವಾಸವಾಗಿರುತ್ತೇನೆ. ನಾನು ಸ್ವಂತ ಇಚ್ಛೆ ಇಂದ ವಾಸವಾಗಿದ್ದು, ನನಗೆ ಇಲ್ಲಿ ಇರುವುದಕ್ಕೆ ಯಾರದೇ ಒತ್ತಡ ಇರುವುದಿಲ್ಲ ಮತ್ತು ನನ್ನ ರಕ್ಷಣೆಗಾಗಿ ಬೆಂಗಳೂರು ನಗರದ ಪೋಲೀಸರು ಭದ್ರತೆಯನ್ನು ಒದಗಿಸುತ್ತಾರೆ ಹಾಗೂ ನಾನು ಸುರಕ್ಷಿತವಾಗಿ ಇರುತ್ತೇನೆ. ನಾನು ಪ್ರಾಪ್ತ ವಯಸ್ಕಳಿದ್ದು ನಾನು ಸದ್ಯ ನಮ್ಮ ತಂದೆ ತಾಯಿ ಬಳಿ ಹೋಗಲು ಇಚ್ಛಿಸುವುದಿಲ್ಲ. ಈ ಪ್ರಕರಣಗಳು ಮುಗಿದ ನಂತರ ನಾನು ಅವರನ್ನು ಭೇಟಿ ಆಗುತ್ತೇನೆ.”

    ಎಂದು ಯುವತಿ ಹೈಕೋರ್ಟ್ ನ್ಯಾಯಮೂರ್ತಿಗಳ ಎದುರು ವಿಡಿಯೋ ಸಂವಾದದಲ್ಲಿ ಹೇಳಿದ್ದಾಳೆ. ಯುವತಿಯ ಹೇಳಿಕೆ ಆಧಾರದ ಮೇಲೆ ತಂದೆ ಹಾಕಿದ ಅರ್ಜಿಯನ್ನ ಇತ್ಯರ್ಥ ಮಾಡಿ ಹೈಕೋರ್ಟ್ ಆದೇಶ ಮಾಡಿದೆ.

  • ಎಸ್‍ಐಟಿ ಮುಂದೆ ಸಿಡಿ ಯುವತಿ ಪೋಷಕರ ಸ್ಫೋಟಕ ಹೇಳಿಕೆ

    ಎಸ್‍ಐಟಿ ಮುಂದೆ ಸಿಡಿ ಯುವತಿ ಪೋಷಕರ ಸ್ಫೋಟಕ ಹೇಳಿಕೆ

    ಬೆಂಗಳೂರು: ಮಾಜಿ ಸಚಿವರ ಸಿಡಿ ಪ್ರಕರಣದಲ್ಲಿ ಕಾಣಿಸಿಕೊಂಡ ಎನ್ನಲಾದ ಯುವತಿಯ ಪೋಷಕರನ್ನ ಎಸ್‍ಐಟಿ ಪತ್ತೆ ಮಾಡಿದೆ. ಸೋಮವಾರ ಯುವತಿ ಪೋಷಕರನ್ನ ಪತ್ತೆ ಎಸ್‍ಐಟಿ ಅವರ ಹೇಳಿಕೆಯನ್ನ ದಾಖಲಿಸಿಕೊಂಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಬೆಳಗಾವಿಯಲ್ಲಿ ದೂರು ದಾಖಲಿಸಿದ ಬಳಿಕ ವೀಡಿಯೋ ಹೇಳಿಕೆ ಬಿಡುಗಡೆಗೊಳಿಸಿ ಅಜ್ಞಾತ ಸ್ಥಳದಲ್ಲಿದ್ದರು.

    ಪೋಷಕರು ಹೇಳಿದ್ದೇನು?: ನಮ್ಮ ಮಗಳು ಅಪಾಯದಲ್ಲಿದ್ದು, ಬಲವಂತವಾಗಿ ವೀಡಿಯೋ ಮಾಡಿಸಲಾಗಿದೆ. ಸದ್ಯ ಆಕೆ ಎಲ್ಲಿದ್ದಾಳೆ ಅನ್ನೋದು ನಮಗೂ ಗೊತ್ತಿಲ್ಲ. ಮಾರ್ಚ್ 5ರಿಂದ ಮಗಳು ನಮ್ಮ ಮಗಳು ಸಂಪರ್ಕದಲ್ಲಿಲ್ಲ. ಅಪಾಯದಲ್ಲಿರುವ ಮಗಳನ್ನ ಪತ್ತೆ ಮಾಡಿ ಎಂದು ಪೋಷಕರು ಹೇಳಿದ್ದಾರೆ ಎನ್ನಲಾಗಿದೆ.

    ವಿಚಾರಣೆಗೆ ಹಾಜರಾಗದ ಹಿನ್ನೆಲೆ ಯುವತಿಗೆ ಎಸ್‍ಐಟಿ ಐದನೇ ಬಾರಿ ನೋಟಿಸ್ ನೀಡಿದೆ. ಯುವತಿಯ ವಾಟ್ಸಪ್, ಇಮೇಲ್ ಮೂಲಕ ಸಹ ನೋಟಿಸ್ ನೀಡಲಾಗಿದೆ. ಆದ್ರೆ ಯುವತಿ ಯಾವುದೇ ನೋಟಿಸ್ ಗೆ ಪ್ರತಿಕ್ರಿಯಿಸಿಲ್ಲ ಎಂದು ತಿಳಿದು ಬಂದಿದೆ. ಸಿಡಿ ಪ್ರಕರಣದಲ್ಲಿ ಕೇಳಿ ಬಂದ ಇನ್ನುಳಿದವರು ಸಹ ಎಸ್‍ಐಟಿ ವಿಚಾರಣೆಗೆ ಹಾಜರಾಗಿಲ್ಲ. ಸಿಡಿ ಗ್ಯಾಂಗ್ ಸದಸ್ಯರು ಒಂದೊಂದು ದಿನ ಒಂದು ಸ್ಥಳದಲ್ಲಿ ವಾಸ್ತವ್ಯ ಮಾಡುತ್ತಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

  • ನಾವ್ಯಾರೂ ಜಿಪ್ ತೆಗೀರಿ, ಶರ್ಟ್ ಬಿಚ್ಚಿ ಅಂತ ಹೇಳಿಲ್ಲ: ಡಿ.ಕೆ.ಶಿವಕುಮಾರ್

    ನಾವ್ಯಾರೂ ಜಿಪ್ ತೆಗೀರಿ, ಶರ್ಟ್ ಬಿಚ್ಚಿ ಅಂತ ಹೇಳಿಲ್ಲ: ಡಿ.ಕೆ.ಶಿವಕುಮಾರ್

    – ಮಂಚದಲ್ಲಿ ರಾಜಕಾರಣ ಕೆಲಸ ಮಾಡಬಾರದು?
    – ಹನಿ ತಿಂದವರೇ ಟ್ರ್ಯಾಪ್ ಆಗೋದು ಅಲ್ವಾ?
    – ಸೆಷನ್ ನಲ್ಲಿ ಸಿಡಿ ಸದ್ದು

    ಬೆಂಗಳೂರು: ಇಂದು ಸದನದಲ್ಲಿ ಸಿಡಿ ಪ್ರಕರಣ ಹೆಚ್ಚು ಸದ್ದು ಮಾಡಿತು. ಈ ವಿಷಯವಾಗಿ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್, ಮಂಚದಲ್ಲಿ ಮಂಚದ ಕೆಲಸ ಮಾಡಬೇಕೇ ಹೊರತು ರಾಜಕಾರಣ ಮಾಡಬಾರದು. ನಾವ್ಯಾರೂ ಅವರಿಗೆ ಜಿಪ್ ತೆಗೀರಿ, ಶರ್ಟ್ ಬಿಚ್ಚಿ ಅಂತ ಹೇಳಿಲ್ಲ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೆಸರು ಹೇಳದೇ ವಾಗ್ದಾಳಿ ನಡೆಸಿದರು.

    ಹನಿ ಟ್ರ್ಯಾಪ್ ಅಂತೆ, ಹನಿ ತಿಂದವರು ಯಾರು? ಹನಿ ತಿಂದ್ರೆ ತಾನೇ ಟ್ರ್ಯಾಪ್ ಆಗೋದು ಎಂದು ಡಿ.ಕೆ.ಶಿವಕುಮಾರ್ ವ್ಯಂಗ್ಯ ಮಾಡಿದರು. ಈ ವೇಳೆ ಮಧ್ಯ ಪ್ರವೇಶಿಸಿದ ಸಚಿವ ಎಸ್.ಟಿ.ಸೋಮಶೇಖರ್, ಯಾರೂ ನಿರ್ಮಾಪಕರು, ಯಾರು ನಿರ್ದೇಶಕರು, ಯಾರು ಫೈನಾನ್ಸಿಯರ್, ಯಾವ ಲೋಕೇಶನ್ ಅನ್ನೋದು ಚರ್ಚೆ ಆಗ್ತಿದೆ ಎಂದರು. ಸಿಡಿ ಮಾಡುವ ದರಿದ್ರ ಕೆಲಸ ಕಾಂಗ್ರೆಸ್ ನವರದ್ದು ಎಂದು ಸೋಮಶೇಖರ್ ಹೇಳುತ್ತಾರೆ ಎಂದ ಕೂಡಲೇ ನಾನು ಹಾಗೆ ಹೇಳಿಲ್ಲ, ಬೇಕಾದ್ರೆ ಒಂದು ಕಾಪಿ ಕಳಿಸ್ತೀನಿ ನೋಡಿಕೊಳ್ಳಿ, ಎಲ್ಲರಿಗೂ ಕಳಿಸ್ತೀನಿ ಎಂದ ಸೋಮಶೇಖರ್ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದರು.

    ಮಂಚದಲ್ಲಿ ರಾಜಕಾರಣ ಮಾಡೋದಲ್ಲ: ನಾವ್ಯಾರೂ ಜಿಪ್ ತೆಗಿ ಅಂತಾ ಹೇಳಿಲ್ಲ, ಶರ್ಟ್ ಬಿಚ್ಚಿ ಅಂತಾ ಹೇಳಿಲ್ಲ. ಸಿಎಂ ಭ್ರಷ್ಟ ಅಂತಾ ನಾವು ಹೇಳಿಲ್ಲ, ಪ್ರಹ್ಲಾದ್ ಜೋಷಿ ಸಿಎಂ ಮಾಡ್ತೀನಿ ಅಂತಾ ನಾವ್ಯಾರೂ ಹೇಳಿಲ್ಲ. ಸಿದ್ದರಾಮಯ್ಯ ಜೊತೆ ಎರಡು ಸಲ ಮಾತಾಡ್ತಾರಂತೆ. ಕನ್ನಡಿಗರ ಬಗ್ಗೆ ಮಾತಾಡ್ತಾರಂತೆ. ಮಂಚದಲ್ಲಿ ಮಂಚದ ಕೆಲಸ ಮಾಡಬೇಕು ಹೊರತು, ಮಂಚದಲ್ಲಿ ರಾಜಕಾರಣ ಮಾಡೋದಲ್ಲ ಎಂದು ಮಾಜಿ ಸಚಿವರ ಸಿಡಿ ಪ್ರಕರಣದ ಬಗ್ಗೆ ಡಿ.ಕೆ.ಶಿವಕುಮಾರ್ ಹೇಳಿದರು.

    ರಾಜಕಾರಣಕ್ಕೆ ಕಪ್ಪು ಚುಕ್ಕೆ: ರಾಜಕಾರಣಿಗಳಿಗೆ ಮನೆಗೆ ಕರೆದು ಊಟ ಹಾಕುವ ಕಾಲ ಇಲ್ಲ. ಸಿಡಿ ಪ್ರಕರಣ ಇಡೀ ರಾಜಕಾರಣದ ಕುಟುಂಬಕ್ಕೆ ಕಪ್ಪು ಚುಕ್ಕೆಯಾಗಿದೆ. ಈ ಘಟನೆ ಬಹಳ ಹಿಂದಿನಿಂದಲೂ ಬಹಳ ಸ್ಟಿಂಗ್ ಆಪರೇಷನ್, ಫೋನ್ ಟ್ಯಾಪಿಂಗ್ ನಡೆದಿವೆ. ನಾಲ್ಕು ತಿಂಗಳ ಹಿಂದೆಯೇ ನನ್ನ ಸಿಡಿ ಗ್ಯಾಂಗ್ ಬ್ಲ್ಯಾಕ್ ಮೇಲ್ ಮಾಡಿತ್ತು ಎಂದು ರಮೇಶ್ ಜಾರಕಿಹೊಳಿ ಹೇಳಿ, ಇನ್ನೊಂದು ಕಡೆ ಫೇಕ್ ಸಿಡಿ ಅಂತಾರೆ. ಮಾಜಿ ಸಿಎಂಗಳಾದ ಹೆಚ್.ಡಿ.ಕುಮಾರಸ್ವಾಮಿ 5 ಕೋಟಿ ವ್ಯವಹಾರ ಎಂದು ಹೇಳುತ್ತಾರೆ.

    ಒನ್ ಸೈಡ್ ತನಿಖೆ ನಡೆಯಬಾರದು: ಈ ವಿಡಿಯೋ ನಕಲಿನಾ ಅಥವಾ ಮಾರ್ಫಿಂಗ್ ಆಗಿದೆಯೋ ಇಲ್ಲವೋ ಅನ್ನೋ ಮಾಹಿತಿಯನ್ನ ಗೃಹ ಸಚಿವರಾದ ಬೊಮ್ಮಾಯಿ ಅವರು ಪಡೆದುಕೊಳ್ಳಬೇಕು. ದೇಶದಲ್ಲಿ ಕರ್ನಾಟಕ ರಾಜ್ಯದ ಪೊಲೀಸರಿಗೆ ದೊಡ್ಡ ಗೌರವ ಇದೆ, ಆ ಗೌರವ ಸಣ್ಣ ವಿಷಯಕ್ಕೆ ಕಳೆದುಕೊಳ್ಳುವುದು ಬೇಡ. ಹೆಣ್ಣು ಮಗಳಿಗೆ ನ್ಯಾಯ ಕೊಡಿಸಬೇಕು, ಒನ್ ಸೈಡ್ ತನಿಖೆ ನಡೆಯಬಾರದು. ಶಾಸಕ ಕುಮಟಳ್ಳಿ ಅವರು ಮಚ್ಚೆ ಬಗ್ಗೆ ಹೇಳುತ್ತಾರೆ. ಎಸ್‍ಐಟಿ ತನಿಖೆಗೆ ಫ್ರೀ ಹ್ಯಾಂಡ್ ನೀಡಿ ಬೊಮ್ಮಾಯಿ ಅವರು ಅಧಿಕೃತ ಆದೇಶ ಮಾಡಬೇಕೆಂದು ಡಿ.ಕೆ.ಶಿವಕುಮಾರ್ ಮನವಿ ಮಾಡಿಕೊಂಡರು.

    ಸಿಬಿಐ ತನಿಖೆ ಯಾಕಿಲ್ಲ?: ಸಿಡಿ ಪ್ರಕರಣದಲ್ಲಿ 5 ಕೋಟಿ ವ್ಯವಹಾರ, ಎರಡು ಫ್ಲ್ಯಾಟ್ ನೀಡಲಾಗಿದೆ ಅಂತ ಹೇಳಿದ್ದರಿಂದ ಈ ಬಗ್ಗೆ ಇಡಿ ತನಿಖೆ ನಡೆಯಬೇಕು. 400 ಸಿಡಿಗಳು ಇವೆಯಂತೆ ಎಂದು ಶಾಸಕ ಯತ್ನಾಳ್ ಅವರೇ ಹೇಳಿದ್ದಾರೆ. ಕಾಂಗ್ರೆಸ್ ನ, ಬಿಜೆಪಿಯ ಇಬ್ಬರು ಮಹಾನ್ ನಾಯಕರ ಬಳಿ ಸಿಡಿ ರೆಡಿಯಾಗ್ತಿದೆ. ಮುಂಬೈನಲ್ಲಿದ್ದ ಶಾಸಕರಿಗೆ ಸಚಿವ ಯೋಗೇಶ್ವರ್ 9 ಕೋಟಿ ಖರ್ಚು ಮಾಡಿದ್ದಾರೆ ಅಂತಾ ರಮೇಶ್ ಜಾರಕಿಹೊಳಿ ಹೇಳಿದ್ದಾರೆ. ಆದ್ರೆ ಇಷ್ಟೆಲ್ಲ ಹೇಳಿಕೆ ನೀಡುತ್ತಿದ್ದರು ಸಿಬಿಐ ಯಾಕೆ ಕೇಸ್ ತೆಗೆದುಕೊಂಡಿಲ್ಲ. ಸಿಡಿ ಇಟ್ಕೊಂಡು ಕಾಂಗ್ರೆಸ್ ಶಾಸಕರು ಬ್ಲ್ಯಾಕ್‍ಮೇಲ್ ಮಾಡ್ತಾರೆ ಅಂತ ಯತ್ನಾಳ್ ಹೇಳ್ತಾರೆ. ನಮ್ಮ ಮುಖ್ಯಮಂತ್ರಿಗಳನ್ನ ಬ್ಲ್ಯಾಕ್ ಮೇಲ್ ಮಾಡುತ್ತಿರೋದು ಎಂದು ಗುಡುಗಿದರು.

  • ಸಿಡಿ ಕೇಸ್‍ನಲ್ಲಿ ನನ್ನ ಹೆಸ್ರು ಪಸ್ತಾಪ ಆಗಿದ್ದಕ್ಕೆ ಆಘಾತ ಆಗಿದೆ: ಭವಿತ್

    ಸಿಡಿ ಕೇಸ್‍ನಲ್ಲಿ ನನ್ನ ಹೆಸ್ರು ಪಸ್ತಾಪ ಆಗಿದ್ದಕ್ಕೆ ಆಘಾತ ಆಗಿದೆ: ಭವಿತ್

    – ಪ್ರಕರಣದ ಸೂತ್ರಧಾರನೂ ಅಲ್ಲ, ಪಾತ್ರದಾರನೂ ಅಲ್ಲ

    ಬೆಂಗಳೂರು: ಮಾಜಿ ಸಚಿವರ ರಾಸಲೀಲೆ ಸಿಡಿ ಪ್ರಕರಣಕ್ಕೊಂದು ಕ್ಷಣಕ್ಕೊಂದು ರೋಚಕ ತಿರುವು ಪಡೆದುಕೊಳ್ಳುತ್ತಿದೆ. ಪ್ರಕರಣದಲ್ಲಿ ಹೆಸರು ಕೇಳಿ ಬಂದಿದ್ದ ಭವಿತ್ ಅಜ್ಞಾತ ಸ್ಥಳದಿಂದ ವೀಡಿಯೋ ಹೇಳಿಕೆ ನೀಡಿದ್ದು, ನನ್ನ ಹೆಸರು ಪ್ರಸ್ತಾಪ ಆಗಿದ್ದಕ್ಕೆ ಆಘಾತ ಆಗಿದೆ. ನಾನು ಪ್ರಕರಣದ ಸೂತ್ರಧಾರನೂ ಅಲ್ಲ, ಭಾಗಿಯೂ ಆಗಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

    ನನ್ನ ಬಗ್ಗೆ ಹರಿದಾಡುತ್ತಿರುವ ಸುದ್ದಿಗಳು ಸುಳ್ಳು. ಎಸ್‍ಐಟಿ ಅಧಿಕಾರಿಗಳು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದು, ಹೋಗುತ್ತಿದ್ದೇನೆ. ಪೊಲೀಸ್ ತನಿಖೆಯಲ್ಲಿ ಸತ್ಯ ಹೊರ ಬರಲಿದೆ. ಪ್ರಕರಣದಲ್ಲಿ ನನ್ನ ಹೆಸರು ಕೇಳಿ ಬಂದಿದ್ದರಿಂದ ತೇಜೋವಧೆ ಆಗುತ್ತಿರೋದರಿಂದ ಮನಸ್ಸಿಗೆ ನೋವು ಆಗುತ್ತಿದೆ.

    ನನಗೊಂದು ಕುಟುಂಬ ಇದೆ. ತಾಯಿ ಹಾರ್ಟ್ ಪೇಶೆಂಟ್. ನನ್ನ ಮನೆಗೆ ಹೋಗಿ ನೋಡಿ, ನನ್ನ ಪರಿಸ್ಥಿತಿ ನಿಮಗೆ ಅರ್ಥವಾಗುತ್ತದೆ. ಕುಟುಂಬದ ಗೌರವ ಹಾಳು ಮಾಡೋದು ಎಷ್ಟು ಸರಿ? ಪ್ರಕರಣದಲ್ಲಿ ನನ್ನ ಪಾತ್ರ ಇದ್ದಿದ್ರೆ ಒಪ್ಪಿಕೊಳ್ಳುತ್ತಿದ್ದೆ. ತಪ್ಪು ಮಾಡದೇ ಇರೋದರಿಂದ ಸುಳ್ಳು ಆರೋಪಗಳನ್ನ ಹೇಗೆ ಒಪ್ಪಿಕೊಳ್ಳಲು ಸಾಧ್ಯ. ತಪ್ಪಿತಸ್ಥ ಆಗಿದ್ರೆ ನಾಪತ್ತೆ ಆಗ್ತಿದ್ದೆ, ಆದ್ರೆ ನಾನೂ ಎಲ್ಲಿಯೂ ಹೋಗಿಲ್ಲ. ಮೊಬೈಲ್ ಸಹ ಆಫ್ ಮಾಡಿಲ್ಲ. ಎಸ್‍ಐಟಿ ಕರೆದಾಗ ತಡಮಾಡದೇ ಬಂದು ನನ್ನ ಹೇಳಿಕೆ ದಾಖಲಿಸಿದ್ದೇನೆ ಎಂದು ಭವಿತ್ ಹೇಳಿದ್ದಾರೆ. ಇದನ್ನೂ ಓದಿ:  ಸಿಡಿ ಗ್ಯಾಂಗ್‌ಗೆ ಲಕ್ಷ ಲಕ್ಷ ಹಣ – ಶಿವಕುಮಾರ್ ಬೆನ್ನು ಬಿದ್ದ ಎಸ್‍ಐಟಿ

    ಇದಕ್ಕೂ ಮೊದಲು ಸಿಡಿ ಪ್ರಕರಣದ ಕಿಂಗ್‍ಪಿನ್ ಎನ್ನಲಾಗುತ್ತಿರುವ ಶಿರಾ ಮೂಲದ ಮಾಜಿ ಪತ್ರಕರ್ತ ನರೇಶ್ ಗೌಡ ಸಹ ತಮ್ಮ ಹೇಳಿಕೆ ಬಿಡುಗಡೆಗೊಳಿಸಿದ್ದರು. ನಾನು ಎಸ್‍ಐಟಿ ತನಿಖಾಧಿಕಾರಿಗಳ ಮುಂದೆ ಬಂದರೆ ನನ್ನನ್ನು ಈ ಪ್ರಕರಣದಲ್ಲಿ ಸಿಕ್ಕಿಸಿ ಹಾಕಿಸಲು ಎಲ್ಲ ಪ್ರಯತ್ನಗಳು ನಡೆದಿರುವುದು ತಿಳಿದಿದೆ. ಈ ಕಾರಣಕ್ಕೆ ನಾನು ಈಗ ಬಂದಿಲ್ಲ. ಐದು ಅಥವಾ ಎಂಟು ದಿನಗಳ ಒಳಗಡೆ ನಾನೇ ತನಿಖಾಧಿಕಾರಿಗಳ ಮುಂದೆ ಹಾಜರಾಗುತ್ತೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ನಾಮಕರಣಕ್ಕೆ ಮೂರು ಪಕ್ಷದ ನಾಯಕರು ಬಂದಿದ್ರು, ಸಿಡಿ ಪ್ರಕರಣದಲ್ಲಿ ನನ್ನ ಪಾತ್ರವಿಲ್ಲ, ಯಾವುದೇ ದುಡ್ಡು ತೆಗೆದುಕೊಂಡಿಲ್ಲ – ನರೇಶ್‌ ಗೌಡ

  • ರಾತ್ರಿ ಮನೆಗೆ ಬಂದು ಪತಿಯ ಮಾಹಿತಿ ಕೇಳಿದ್ರು: ನಾಪತ್ತೆಯಾಗಿರುವ ವ್ಯಕ್ತಿಯ ಪತ್ನಿ

    ರಾತ್ರಿ ಮನೆಗೆ ಬಂದು ಪತಿಯ ಮಾಹಿತಿ ಕೇಳಿದ್ರು: ನಾಪತ್ತೆಯಾಗಿರುವ ವ್ಯಕ್ತಿಯ ಪತ್ನಿ

    – ಎಸ್‍ಐಟಿ ವಿರುದ್ಧ ಹೈಕೋರ್ಟಿಗೆ ಅರ್ಜಿ ಸಲ್ಲಿಕೆಗೆ ನಿರ್ಧಾರ

    ತುಮಕೂರು: ರಾತ್ರಿ 3.45ಕ್ಕೆ ಮನೆಗೆ ಬಂದ ಎಸ್‍ಐಟಿ ಅಧಿಕಾರಿಗಳು ಮನೆಯನ್ನ ಶೋಧಿಸಿ ನನ್ನ ಮೊಬೈಲ್ ಚೆಕ್ ಮಾಡಿದ್ದಾರೆ. ಅಧಿಕಾರಿಗಳ ತಂಡದಲ್ಲಿ ಮಹಿಳಾ ಸಿಬ್ಬಂದಿ ಇರಲಿಲ್ಲ. ದಿಢೀರ್ ಅಂತ ದಾಳಿ ನಡೆಸಿದ್ದರಿಂದ ವಕೀಲರ ಜೊತೆ ಚರ್ಚಿಸಿ, ಹೈಕೋರ್ಟಿಗೆ ಅರ್ಜಿ ಸಲ್ಲಿಸುತ್ತೇನೆ ಎಂದು ಮಾಜಿ ಸಚಿವರ ರಾಸಲೀಲೆ ಪ್ರಕರಣದ ಕಿಂಗ್‍ಪಿನ್ ಎನ್ನಲಾದ ವ್ಯಕ್ತಿಯ ಪತ್ನಿ ಹೇಳಿದ್ದಾರೆ.

    ತಮ್ಮ ನಿವಾಸದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಮಹಿಳೆ, ರಾತ್ರಿ 3.45ಕ್ಕೆ ಮನೆಯ ಬಾಗಿಲು ಬಡಿದ ಸದ್ದು ಆಯ್ತು. ಬಾಗಿಲು ತೆಗೆದಾಗ ಎಸ್‍ಐಟಿ ಅಧಿಕಾರಿಗಳು ಬಂದಿದ್ದರು. ಮನೆಯೆಲ್ಲಾ ಸರ್ಚ್ ಮಾಡಿದ್ರು, ಮತ್ತೆ ಫೋನ್ ತೆಗೆದುಕೊಂಡು ಕಾಲ್ ಡಿಟೈಲ್ಸ್ ಚೆಕ್ ಮಾಡಿ, ಕರೆ ಬಂದ್ರೆ ನಮಗೆ ಮಾಹಿತಿ ನೀಡಿ ಎಂದು ಹೇಳಿದರು. ಆರು ದಿನಗಳಿಂದ ಪತಿ ನನಗೆ ಸಂಪರ್ಕಕ್ಕೆ ಸಿಕ್ಕಿಲ್ಲ. ಸದ್ಯ ಪತಿ ಎಲ್ಲಿದ್ದಾರೆ ಅನ್ನೋ ವಿಷಯ ಸಹ ನನಗೆ ಗೊತ್ತಿಲ್ಲ. ಭಾನುವಾರ ಕೊನೆಯ ಬಾರಿ ಬಂದಿದ್ದರು ಎಂದು ಹೇಳಿದ್ದರು.

    ಮನೆಯಲ್ಲಿ ನಾನು, ಅತ್ತೆ ಮತ್ತು ಮಗು ಮೂವರೇ ಇದ್ದೀದಿವಿ. ಹೆಣ್ಣು ಮಕ್ಕಳಿರೋ ಮನೆಗೆ ಆ ಸಮಯದಲ್ಲಿ ಬರುವ ಅವಸರ ಏನಿತ್ತು? ಅಧಿಕಾರಿಗಳ ತಂಡದಲ್ಲಿ ಮಹಿಳಾ ಸಿಬ್ಬಂದಿ ಇರಲಿಲ್ಲ. ಹಾಗಾಗಿ ನಮ್ಮ ವಕೀಲರನ್ನ ಸಂಪರ್ಕಿಸಿ ಎಸ್‍ಐಟಿ ವಿರುದ್ಧ ಹೈಕೋರ್ಟಿಗೆ ಅರ್ಜಿ ಸಲ್ಲಿಸುತ್ತೇನೆ. ಮಗಳ ನಾಮಕಾರಣಕ್ಕೆ ಹಲವು ರಾಜಕಾರಣಿಗಳು ಆಗಮಿಸಿದ್ದರು. ನಾಮಕರಣಕ್ಕೆ ರಾಜಕಾರಣಿಗಳು ಬಂದ್ರೆ ಏನು ತಪ್ಪು? ನಾಮಕರಣದ ಫೋಟೋ ಅಲ್ಬಂ ಕೇಳಿದರು. ನಾವು ಅಲ್ಬಂ ಮಾಡಿಸಿಲ್ಲ ಎಂದು ಹೇಳಿದೆ. ಸುಮಾರು 4.30ಕ್ಕೆ ಅಧಿಕಾರಿಗಳು ಮನೆಯಿಂದ ಹಿಂದಿರುಗಿದರು ಎಂದರು.

    ಪತಿ ತಮ್ಮ ಕೆಲಸದ ಬಗ್ಗೆ ಹೇಳುತ್ತಿರಲಿಲ್ಲ. ಪತಿಯ ವಿರುದ್ಧ ಕೆಲ ಆರೋಪಗಳು ಕೇಳಿ ಬಂದಿವೆ. ಆದ್ರೆ ಪತಿ ಆರೋಪಗಳಿಂದ ಮುಕ್ತರಾಗಿ ಬರುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

  • ಒಬ್ಬರಿಗೆ ಕ್ಲೀನ್‍ಚಿಟ್ ನೀಡೋದಕ್ಕೆ ಎಸ್‍ಐಟಿ ರಚನೆ: ಡಿ.ಕೆ.ಸುರೇಶ್

    ಒಬ್ಬರಿಗೆ ಕ್ಲೀನ್‍ಚಿಟ್ ನೀಡೋದಕ್ಕೆ ಎಸ್‍ಐಟಿ ರಚನೆ: ಡಿ.ಕೆ.ಸುರೇಶ್

    ಬೆಂಗಳೂರು: ರಾಸಲೀಲೆ ಪ್ರಕರಣದಲ್ಲಿ ಒಬ್ಬರಿಗೆ ಕ್ಲೀನ್‍ಚಿಟ್ ನೀಡುವ ಉದ್ದೇಶದಿಂದ ತನಿಖೆಯನ್ನ ಸರ್ಕಾರ ಎಸ್‍ಐಟಿಗೆ ನೀಡಿದೆ ಎಂದು ಸಂಸದ ಡಿ.ಕೆ.ಸುರೇಶ್ ಆರೋಪಿಸಿದ್ದಾರೆ.

    ಎಫ್‍ಐಆರ್ ಇಲ್ಲದೇ ಎಸ್‍ಐಟಿ ತನಿಖೆ ನಡೆಸುತ್ತಿದೆ. ರಾಸಲೀಲೆ ಪ್ರಕರಣವನ್ನ ಮುಚ್ಚಿ ಹಾಕೋಕೆ ಪ್ರಯತ್ನಿಸ್ತಿರೋದು ಮೇಲ್ನೋಟಕ್ಕೆ ಕಾಣಿಸುತ್ತಿದೆ. ಎಸ್‍ಐಟಿ ತನಿಖೆಯಿಂದ ಏನು ಆಗಲಾರದು. ಇದೊಂದು ಕಣ್ಣೊರೆಸುವ ತಂತ್ರವಾಗಿದ್ದು, ಒಬ್ಬರಿಗೆ ಕ್ಲೀನ್‍ಚಿಟ್ ಕೊಡಬೇಕಿದೆ. ಆ ಕ್ಲೀನ್‍ಚಿಟ್ ನೀಡುವದಕ್ಕಾಗಿ ಸರ್ಕಾರ ಸಮಿತಿಯನ್ನ ರಚಿಸಿದೆ ಎಂದು ಡಿ.ಕೆ.ಸುರೇಶ್ ಹೇಳಿದರು.

    ಪ್ರಕರಣ ಮುಚ್ಚಿ ಹಾಕಲು ಸರ್ಕಾರ ಸಮಿತಿಯನ್ನ ನೇಮಕ ಮಾಡಿದಂತಿದೆ. ಸಿಡಿ ಮಾಡಿದ್ದು ಯಾರು? ಮಾಜಿ ಸಚಿವರು ಹೇಗೆ ಈ ಪ್ರಕರಣದಲ್ಲಿ ಸಿಲುಕಿದ್ರು? ಎಲ್ಲಿ ಆಯ್ತು? ಸಿಡಿ ಹಿಂದಿರುವ ವ್ಯಕ್ತಿಗಳು ಯಾರು ಅನ್ನೋದು ತನಿಖೆ ಆಗಬೇಕಾದ್ರೆ ಒಂದು ಎಫ್‍ಐಆರ್ ದಾಖಲಾಗಬೇಕು. ಆದ್ರೆ ತನಿಖೆ ಆರಂಭಗೊಂಡಿದ್ದರೂ ಎಫ್‍ಐಆರ್ ಏಕೆ ದಾಖಲಾಗಿಲ್ಲ ಎಂದು ಸಂಸದ ಡಿ.ಕೆ.ಸುರೇಶ್ ಪ್ರಶ್ನೆ ಮಾಡಿದ್ದಾರೆ.

    ಗುರುವಾರ ಮಾಧ್ಯಮಗಳ ಜೊತೆ ಮಾತನಾಡಿದ್ದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಎಸ್‍ಐಟಿ ತನಿಖೆ ತಿಪ್ಪೆ ಸಾರಿಸುವ ಕೆಲಸ ಅಷ್ಟೇ. ಇದರಿಂದ ಯಾವುದೇ ಪ್ರಯೋಜನವಿಲ್ಲ. ತನಿಖಾ ವರದಿಯಲ್ಲಿ ಯಾರು ಇದುವರೆಗೂ ಜೈಲಿಗೆ ಹೋಗಿಲ್ಲ. ರಾಜಕಾರಣದಲ್ಲಿ ನೇರವಾಗಿ ಯುದ್ಧ ಮಾಡೋಣ. ಪ್ರತಿ ದಿನ ಜನರ ಮುಂದೆ ಬರುವವರು, ಜನರಿಗೆ ಏನು ಸಂದೇಶ ಕೊಡುತ್ತೀರಾ ಎಂದು ಸರ್ಕಾರವನ್ನ ಪ್ರಶ್ನಿಸಿದ್ದರು.

     

  • ರಾಸಲೀಲೆ ಪ್ರಕರಣಕ್ಕೂ ನನಗೂ ಸಂಬಂಧ ಇಲ್ಲ: ದಿನೇಶ್ ಕಲ್ಲಳ್ಳಿ

    ರಾಸಲೀಲೆ ಪ್ರಕರಣಕ್ಕೂ ನನಗೂ ಸಂಬಂಧ ಇಲ್ಲ: ದಿನೇಶ್ ಕಲ್ಲಳ್ಳಿ

    – ಎಸ್‍ಐಟಿ ವಶಕ್ಕೆ ಪಡೆದವರು ನನಗೆ ಸಿಡಿ ಕೊಟ್ಟಿಲ್ಲ

    ಬೆಂಗಳೂರು: ಮಾಜಿ ಸಚಿವರ ರಾಸಲೀಲೆ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಸಾಮಾಜಿಕ ಹೋರಾಟಗಾರ ದಿನೇಶ್ ಕಲ್ಲಹಳ್ಳಿ ಪಬ್ಲಿಕ್ ಟಿವಿಗೆ ಹೇಳಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿರುವ ದಿನೇಶ್ ಕಲ್ಲಹಳ್ಳಿ, ನಿನ್ನೆ ವಿಚಾರಣೆ ನಡೆಸಿದವರಲ್ಲಿ ಓರ್ವ ಮಾತ್ರ ಪರಿಚಯ. ಆದ್ರೆ ಅವನು ನನಗೆ ಸಿಡಿ ತಂದು ಕೊಟ್ಟಿಲ್ಲ. ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ನೀಡಿದ ದೂರು ಹಿಂಪಡೆದುಕೊಂಡಿದ್ದೇನೆ. ಸದ್ಯಕ್ಕೆ ಪ್ರಕರಣಕ್ಕೂ ನಗಗೂ ಸಂಬಂಧ ಇಲ್ಲ. ಎಸ್‍ಐಟಿ ಈವರೆಗೆ ವಿಚಾರಣೆ ಹಾಜರಾಗುವಂತೆ ನೋಟಿಸ್ ನೀಡಿಲ್ಲ. ಒಂದು ವೇಳೆ ನೋಟಿಸ್ ನೀಡಿದ್ರೆ ವಿಚಾರಣೆಗೆ ಹಾಜರಾಗುತ್ತೇನೆ ಎಂದು ಹೇಳಿದರು.

    ಮಾಜಿ ಸಚಿವರ ರಾಸಲೀಲೆ ಪ್ರಕರಣದ ಕುರಿತು ತನಿಖೆಗೆ ಒತ್ತಾಯಿಸಿ ದಿನೇಶ್ ಕಲ್ಲಹಳ್ಳಿ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇತ್ತ ಅದೇ ದಿನ ಸೋಶಿಯಲ್ ಮೀಡಿಯಾದಲ್ಲಿ ಮಾಜಿ ಮಂತ್ರಿಗಳ ವೀಡಿಯೋ ವೈರಲ್ ಆಗಿತ್ತು. ಆದ್ರೆ ದಿನೇಶ್ ಕಲ್ಲಹಳ್ಳಿ ದಿಢೀರ್ ಅಂತ ತಾವು ಸಲ್ಲಿಸಿದ ದೂರು ಹಿಂಪಡೆದುಕೊಳ್ಳುವ ಮೂಲಕ ಯೂ ಟರ್ನ್ ತೆಗೆದುಕೊಂಡಿದ್ದು ಹಲವು ಅನುಮಾನಗಳಿಗೆ ಕಾರಣವಾಗಿದೆ.

    ಸೌಮೆಂದು ಮುಖರ್ಜಿ ನೇತೃತ್ವದಲ್ಲಿ ಮಧ್ಯಾಹ್ನ 2ಕ್ಕೆ ಎಸ್‍ಐಟಿ ರಚನೆ ಮಾಡಲಾಗಿತ್ತು. ಎಸ್‍ಐಟಿ ರಚನೆಯಾದ ಎರಡು ಗಂಟೆಯಲ್ಲಿ ಇಬ್ಬರು ಸಿಡಿಗೇಡಿಗಳು ವಶಕ್ಕೆ ಪಡೆಯಲಾಯ್ತು. ಬೆಂಗಳೂರಿನಲ್ಲಿ ಎರಡು ಕಡೆ ಪ್ರತ್ಯೇಕ ದಾಳಿ ನಡೆಸಿದ ಅಧಿಕಾರಿಗಳು ಇಬ್ಬರನ್ನ ವಶಕ್ಕೆ ಪಡೆದುಕೊಂಡಿದ್ದರು. ವಶಕ್ಕೆ ಪಡೆದ ಇಬ್ಬರನ್ನ ನಾಲ್ಕು ಗಂಟೆಗಳ ಕಾಲು ಆರು ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ.

    ಎಸ್‍ಐಟಿ ತೀವ್ರ ವಿಚಾರಣೆಗೆ ಇಬ್ಬರು ತಮ್ಮ ಜೊತೆಯಲ್ಲಿದ್ದ ಮೂವರ ಮಾಹಿತಿಯನ್ನ ನೀಡಿದ್ದಾರೆ. ಇಬ್ಬರ ಮಾಹಿತಿ ಆಧರಿಸಿ ಮತ್ತೆ ಮೂವರಿಗೆ 3 ರಾಜ್ಯಗಳಲ್ಲಿ ಎಸ್‍ಐಟಿ ಬಲೆ ಬೀಸಿತ್ತು. ಹೈದರಾಬಾದ್, ಚೆನ್ನೈ ಮತ್ತು ಮಂಗಳೂರಲ್ಲಿ ತಲಾ ಒಬ್ಬರನ್ನ ವಶಕ್ಕೆ ಪಡೆಯಲಾಗಿದೆ. ಕೇವಲ ಆರು ಗಂಟೆಗಳಲ್ಲಿ ಐವರ ಆಪರೇಷನ್ ಮುಗಿಸಿದೆ. ಸದ್ಯ ಐವರು ಸಿಡಿಗೇಡಿಗಳ ಪೈಕಿ ನಾಲ್ವರಷ್ಟೇ ಎಸ್‍ಐಟಿ ವಶದಲ್ಲಿದ್ದು, ಒಬ್ಬರನ್ನು ವಿಚಾರಣೆ ಮಾಡಿ ಷರತ್ತಿನ ಮೇರೆಗೆ ಕಳುಹಿಸಿದ್ದಾರೆ ಎಂದು ತಿಳಿದು ಬಂದಿದೆ.

     

  • ಒಂದು ಸಿಡಿ, ಮೂರು ರಾಜ್ಯ, ಐವರು ಸಿಡಿಗೇಡಿಗಳು – SIT ಕಾರ್ಯಾಚರಣೆಯ ರಣರೋಚಕ ಮಾಹಿತಿ

    ಒಂದು ಸಿಡಿ, ಮೂರು ರಾಜ್ಯ, ಐವರು ಸಿಡಿಗೇಡಿಗಳು – SIT ಕಾರ್ಯಾಚರಣೆಯ ರಣರೋಚಕ ಮಾಹಿತಿ

    ಬೆಂಗಳೂರು: ಮಾಜಿ ಸಚಿವರ ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಯನ್ನ ನಡೆಸುತ್ತಿರುವ ಎಸ್‍ಐಟಿ, ಐವರು ಸಿಡಿಗೇಡಿಗಳನ್ನ ಖೆಡ್ಡಾಗೆ ಬೀಳಿಸಿದೆ. ಎಸ್‍ಐಟಿ ತಂಡ ರಚನೆಯಾದ ಎರಡೇ ಗಂಟೆಯಲ್ಲಿ ಐವರನ್ನ ಅಧಿಕಾರಿಗಳು ಪತ್ತೆ ಮಾಡಿರುವ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಎಸ್‍ಐಟಿ ಆಪರೇಷನ್‍ನ ಕಂಪ್ಲೀಟ್ ಡಿಟೇಲ್ಸ್: ಸೌಮೆಂದು ಮುಖರ್ಜಿ ನೇತೃತ್ವದಲ್ಲಿ ಮಧ್ಯಾಹ್ನ 2ಕ್ಕೆ ಎಸ್‍ಐಟಿ ರಚನೆ ಮಾಡಲಾಗಿತ್ತು. ಎಸ್‍ಐಟಿ ರಚನೆಯಾದ ಎರಡು ಗಂಟೆಯಲ್ಲಿ ಇಬ್ಬರು ಸಿಡಿಗೇಡಿಗಳು ವಶಕ್ಕೆ ಪಡೆಯಲಾಯ್ತು. ಬೆಂಗಳೂರಿನಲ್ಲಿ ಎರಡು ಕಡೆ ಪ್ರತ್ಯೇಕ ದಾಳಿ ನಡೆಸಿದ ಅಧಿಕಾರಿಗಳು ಇಬ್ಬರನ್ನ ವಶಕ್ಕೆ ಪಡೆದುಕೊಂಡಿದ್ದರು. ವಶಕ್ಕೆ ಪಡೆದ ಇಬ್ಬರನ್ನ ನಾಲ್ಕು ಗಂಟೆಗಳ ಕಾಲು ಆರು ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ.

    ಎಸ್‍ಐಟಿ ತೀವ್ರ ವಿಚಾರಣೆಗೆ ಇಬ್ಬರು ತಮ್ಮ ಜೊತೆಯಲ್ಲಿದ್ದ ಮೂವರ ಮಾಹಿತಿಯನ್ನ ನೀಡಿದ್ದಾರೆ. ಇಬ್ಬರ ಮಾಹಿತಿ ಆಧರಿಸಿ ಮತ್ತೆ ಮೂವರಿಗೆ 3 ರಾಜ್ಯಗಳಲ್ಲಿ ಎಸ್‍ಐಟಿ ಬಲೆ ಬೀಸಿತ್ತು. ಹೈದರಾಬಾದ್, ಚೆನ್ನೈ ಮತ್ತು ಮಂಗಳೂರಲ್ಲಿ ತಲಾ ಒಬ್ಬರನ್ನ ವಶಕ್ಕೆ ಪಡೆಯಲಾಗಿದೆ. ಕೇವಲ ಆರು ಗಂಟೆಗಳಲ್ಲಿ ಐವರ ಆಪರೇಷನ್ ಮುಗಿಸಿದೆ. ಸದ್ಯ ಐವರು ಸಿಡಿಗೇಡಿಗಳ ಪೈಕಿ ನಾಲ್ವರಷ್ಟೇ ಎಸ್‍ಐಟಿ ವಶದಲ್ಲಿದ್ದು, ಒಬ್ಬರನ್ನು ವಿಚಾರಣೆ ಮಾಡಿ ಷರತ್ತಿನ ಮೇರೆಗೆ ಕಳುಹಿಸಿದ್ದಾರೆ ಎಂದು ತಿಳಿದು ಬಂದಿದೆ.

  • ನೂರಕ್ಕೆ ನೂರರಷ್ಟು ಮನೆ ಹಾಳು ಕೆಲಸ ಮಾಡಿದ್ದು ಕಾಂಗ್ರೆಸ್: ಎಸ್.ಟಿ.ಸೋಮಶೇಖರ್ ಆರೋಪ

    ನೂರಕ್ಕೆ ನೂರರಷ್ಟು ಮನೆ ಹಾಳು ಕೆಲಸ ಮಾಡಿದ್ದು ಕಾಂಗ್ರೆಸ್: ಎಸ್.ಟಿ.ಸೋಮಶೇಖರ್ ಆರೋಪ

    – ಮಾಜಿ ಸಚಿವರ ರಾಸಲೀಲೆ ವೀಡಿಯೋ ಪ್ರಕರಣ
    – ಮುಂಬೈ ಟೀಂನ ಸಚಿವರನ್ನ ಟಾರ್ಗೆಟ್ ಮಾಡಲಾಗ್ತಿದೆ
    – ರಕ್ಷಣೆ ಕೇಳಿ ನ್ಯಾಯಾಲಯಕ್ಕೆ ಹೋಗಿದ್ದು ತಪ್ಪಾ?

    ಬೆಂಗಳೂರು: ಸಿಡಿ ಬಿಡುಗಡೆ ಮಾಡುವ ಮನೆ ಹಾಳು ಕೆಲಸವನ್ನ ಮಾಡಿದ್ದು ನೂರಕ್ಕೆ ನೂರರಷ್ಟು ಕಾಂಗ್ರೆಸ್ ಎಂದು ಸಚಿವ ಎಸ್.ಟಿ.ಸೋಮಶೇಖರ್ ಗಂಭೀರ ಆರೋಪ ಮಾಡಿದ್ದಾರೆ.

    ನಮ್ಮನ್ನ ಟಾರ್ಗೆಟ್ ಮಾಡಲಾಗ್ತಿದೆ: ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಎಸ್.ಟಿ.ಸೋಮಶೇಖರ್, ಮಾಜಿ ಸಚಿವರ ರಾಸಲೀಲೆ ವಿರುದ್ಧ ದಾಖಲಾದ ದೂರು ವಾಪಸ್ ಪಡೆದರು. ಆದ್ರೆ ಹೋದ ಗೌರವ ಮತ್ತೆ ಹಿಂದಿರುಗುತ್ತಾ? ಇಡೀ ರಾಜ್ಯದ ಜನತೆಯ ಮೊಬೈಲ್ ನಲ್ಲಿ ವೀಡಿಯೋ ಹರಿದಾಡಿತು. ದೆಹಲಿ ಮಟ್ಟದ ಎಷ್ಟೋ ಜನರು ಸಹ ಬೇಲ್ ಮೇಲೆ ಹೊರಗಿದ್ದಾರೆ. ಅವರೆಲ್ಲ ತಪ್ಪು ಮಾಡಿದ್ದಾರೆ ಎಂದರ್ಥ ಅಲ್ಲ. ಉದ್ದೇಶಪೂರ್ವಕವಾಗಿ ನಮ್ಮನ್ನ ಗುರಿಯಾಗಿಸಿ ತೇಜೋವಧೆಗೆ ಮುಂದಾಗುವ ಮಾಹಿತಿ ಲಭ್ಯವಾಗಿದ್ದರಿಂದ ಕೋರ್ಟ್ ಮೊರೆ ಹೋಗಿದ್ದೇವೆ. ನ್ಯಾಯಾಂಗ ವ್ಯವಸ್ಥೆಯಲ್ಲಿರುವ ಅವಕಾಶ ಬಳಸಿಕೊಂಡಿದ್ದೇವೆ. ಬೇರೆ ರೀತಿ ರಾಜಕೀಯ ದ್ವೇಷ ಸಾಧಿಸಿದ್ರೂ ಅದನ್ನೆಲ್ಲ ನಾವು ಎದುರಿಸಲು ಸಿದ್ಧವಿದ್ದೇವೆ.

    ಕೋರ್ಟಿಗೆ ಹೋಗಿದ್ದು ತಪ್ಪಾ?: ನಮ್ಮನ್ನು ಕೇಳುವ ನೈತಿಕತೆ ಅವರಿಗಿಲ್ಲ. ಅವರ ತಟ್ಟೆಯಲ್ಲಿಯೇ ಹೆಗ್ಗಣ ಬಿದ್ದಿದೆ. ಸಮ್ಮಿಶ್ರ ಸರ್ಕಾರ ಆಗಿದ್ದೆ ನಾಯಕರು ಅನೈತಿಕ ಒಪ್ಪಂದದಿಂದ ಆಗಿದ್ದೆರಿಂದ ಮೈತ್ರಿ ಮುರಿದು ಬಿತ್ತು. ಮುಂಬೈಗೆ ಹೋಗಿದ್ದವರನ್ನ ಟಾರ್ಗೆಟ್ ಮಾಡಲಾಗ್ತಿದೆ ಅನ್ನೋ ವಿಷಯ ತಿಳಿದಾಗ ನ್ಯಾಯಾಲಯದ ಮೊರೆ ಹೋಗಿದ್ದೇವೆ. ಆದ್ರೆ ಮಾಧ್ಯಮಗಳಲ್ಲಿ ಈ ವಿಷಯವೇ ಬೇರೆ ರೂಪ ಪಡೆದುಕೊಂಡಿತು. ನ್ಯಾಯಾಲಯಕ್ಕೆ ಹೋಗಿದ್ದು ತಪ್ಪಾ ಎಂದು ಎಸ್‍ಟಿಎಸ್ ಪ್ರಶ್ನೆ ಮಾಡಿದರು. ಇದನ್ನೂ ಓದಿ: ಕೋರ್ಟ್ ಮೊರೆ ಹೋದ 6 ಮಂದಿ ಸಚಿವರು – ಲಿಂಬಾವಳಿಯಿಂದ ನಡ್ಡಾ ಮಾಹಿತಿ ಸಂಗ್ರಹ

    ಕಾಂಗ್ರೆಸ್‍ನವರಿಂದ ಸಿಡಿ ಕೆಲಸ: ನಮ್ಮ ಜೊತೆ ಹಲವರು ಕೋರ್ಟಿಗೆ ಬರಲು ಸಿದ್ಧರಿದ್ರು. ಆದ್ರೆ ಮಾಧ್ಯಮಗಳಲ್ಲಿ ಸುದ್ದಿ ನೋಡಿ ಹಿಂದೆ ಸರಿದ್ರು. ನಾನು 20 ವರ್ಷ ಕಾಂಗ್ರೆಸ್ ನಲ್ಲಿದ್ದು ಬಂದಿದ್ದೇನೆ. ಇವರ ಅನೈತಿಕತೆ ಏನು ಅನ್ನೋದು ರಾಜ್ಯಕ್ಕೂ ಮತ್ತು ನನಗೂ ಗೊತ್ತು. ಅಸೆಂಬ್ಲಿಯಲ್ಲಿ ನಮ್ಮ ವಿರುದ್ಧ ಎಷ್ಟು ಮಾತನಾಡಿದ್ರೂ ಗೊತ್ತಿಲ್ವಾ? ಆದ್ರೆ ಅನೈತಿಕ ರಾಜಕಾರಣಕ್ಕೆ ಮುಂದಾಗಿದ್ದಕ್ಕೆ ಕೋರ್ಟ್ ರಕ್ಷಣೆ ಪಡೆದಿದ್ದೇವೆ. ನೂರಕ್ಕೆ ನೂರರಷ್ಟು ಈ ಮನೆಹಾಳು ಕೆಲಸವನ್ನ ಕಾಂಗ್ರೆಸ್‍ನವರೇ ಮಾಡಿದ್ದಾರೆ. ಇದನ್ನೂ ಓದಿ: ಕುಂಬಳ ಕಾಯಿ ಕಳ್ಳ ಅಂದ್ರೆ ಯಾಕೆ ಹೆಗಲು ಮುಟ್ಟಿಕೊಳ್ಳಬೇಕು: ಕೆಪಿಸಿಸಿ ವಕ್ತಾರ ಏಣಗಿ

    ಈಗಾಗಲೇ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಕಿಹೊಳಿ ಅವರು ಸ್ಪಷ್ಟನೆ ನೀಡಿದ್ದಾರೆ. ಸಿಬಿಐ ತನಿಖೆ ಆಗಲಿ ಅನ್ನೋದು ಬೇಡಿಕೆ. ಇಂದು ಸಂಜೆಯೊಳಗೆ ತನಿಖೆ ಕುರಿತಾಗಿ ಆದೇಶ ಪ್ರಕಟವಾಗಲಿದೆ. ತನಿಖೆ ಆದ್ರೆ ಯಾರೆಲ್ಲ ಮಿಕ್ಸ್ ಮಾಡಿದ್ದಾರೆ? ಯಾರು ಇದ್ದಾರೆ ಅನ್ನೋದು ತಿಳಿಯಲಿದೆ ಎಂದರು. ಇದನ್ನೂ ಓದಿ: ಕಷ್ಟಪಟ್ಟು ಮೇಲೆ ಬಂದವರ ವಿರುದ್ಧ ಷಡ್ಯಂತ್ರ ಅಂದ್ರು ಬಿ.ಸಿ.ಪಾಟೀಲ್