Tag: Former Lover

  • ಎರಡನೇ ವಿವಾಹಕ್ಕೆ ನಿರಾಕರಿಸಿದ ಮಾಜಿ ಪ್ರೇಯಸಿಗೆ ಚಾಕು ಇರಿದ!

    ಎರಡನೇ ವಿವಾಹಕ್ಕೆ ನಿರಾಕರಿಸಿದ ಮಾಜಿ ಪ್ರೇಯಸಿಗೆ ಚಾಕು ಇರಿದ!

    ಬೆಂಗಳೂರು: ಎರಡನೇ ವಿವಾಹಕ್ಕೆ ನಿರಾಕರಿಸಿದ ಮಾಜಿ ಪ್ರೇಯಸಿಗೆ ವ್ಯಕ್ತಿಯೊಬ್ಬ ಚಾಕು ಇರಿದ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.

    ಚಾಕು ಇರಿತಕ್ಕೊಳಗಾದವಳನ್ನು ಅಮುದಾ (Amuda) ಎಂದು ಗುರುತಿಸಲಾಗಿದ್ದು, ಈಕೆ ಇಂದಿರಾನಗರ ನಿವಾಸಿಯಾಗಿದ್ದಾಳೆ. ಆಟೋ ಚಾಲಕ ನವಾಝ್ ಚಾಕು ಇರಿದ ಆರೋಪಿ.

    ಕೆಲ ವರ್ಷಗಳ ಹಿಂದೆ ಅಮುದಾ ಹಾಗೂ ನಯಾಝ್ ಪ್ರೀತಿಸುತ್ತಿದ್ದರು. ಈ ನಡುವೆ ನವಾಝ್ ಬೇರೆಯವರ ಜೊತೆ ಮದುವೆಯಾಗಿದ್ದ. ಇತ್ತ ಅಮುದಾ ಏಳುಮಲೈ ಎಂಬಾತನ ಜೊತೆ ಮದುವೆಯಾಗಿದ್ದಳು. ನಂತರ ಮತ್ತೆ ಪರಸ್ಪರ ಸಂಪರ್ಕಕ್ಕೆ ಬಂದಿದ್ದ ಮಾಜಿ ಪ್ರೇಮಿಗಳು. ಈ ವೇಳೆ ನವಾಝ್, ನಿನ್ನ ಪತಿ ಸರಿ ಇಲ್ಲ ಎರಡನೇ ಮದ್ವೆಯಾಗು (2nd Marriage) ಎಂದಿದ್ದ. ಆದರೆ ಇದಕ್ಕೆ ಅಮುದಾ ನಿರಾಕರಿಸಿದ್ದಳು.

    ಈ ವಿಚಾರವಾಗಿ ಏಳು ಮಲೈ ಬೇಸತ್ತು ಹೋಗಿದ್ದ. ಅಲ್ಲದೆ ನಂತರ ಪತ್ನಿ ಮಕ್ಕಳಿಂದ ದೂರವಾಗಿದ್ದ. ಗಂಡ ಬಿಟ್ಟ ಹಿನ್ನೆಲೆ ಇಂದಿರಾನಗರದಲ್ಲಿ ಬಂದು ನೆಲೆಸಿದ್ದ. ಪ್ರತಿಸಲ ಪೀಡಿಸುತ್ತಿದ್ದ ನವಾಝ್ ಕೊನೆಗೆ ಅಮುದಾಗೆ ಚಾಕು ಇರಿದಿದ್ದ, ಬಳಿಕ ಪರಾರಿಯಾಗಿದ್ದ.

    ಇಂದಿರಾನಗರ ಪೊಲೀಸ್ ಠಾಣೆ (Indiranagar Police Station) ಯಲ್ಲಿ ದೂರು ದಾಖಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ತನ್ನ ಪ್ರೀತಿ ಸಾಬೀತುಪಡಿಸಲು ಮಾಜಿ ಗೆಳತಿಯ ಕೊಂದ- ಪೊದೆಯಲ್ಲಿ ಅವಿತುಕೊಂಡ್ರೂ ಬಿಡ್ಲಿಲ್ಲ

    ತನ್ನ ಪ್ರೀತಿ ಸಾಬೀತುಪಡಿಸಲು ಮಾಜಿ ಗೆಳತಿಯ ಕೊಂದ- ಪೊದೆಯಲ್ಲಿ ಅವಿತುಕೊಂಡ್ರೂ ಬಿಡ್ಲಿಲ್ಲ

    – ಸ್ನೇಹಿತನಿಗೆ ಫೋನ್ ಮಾಡಿ ಸಹಾಯಕ್ಕಾಗಿ ಅಂಗಲಾಚಿದ್ಳು
    – ಕುಡಿದ ಮತ್ತಿನಲ್ಲಿ ತಮಾಷೆ ಮಾಡಿದ್ದಾಳೆ ಅಂದ್ಕೊಂಡ

    ಮಾಸ್ಕೋ: ಯುವಕನೊಬ್ಬ ಪ್ರಿಯತಮೆಗೆ ತನ್ನ ಪ್ರೀತಿಯನ್ನು ಸಾಬೀತುಪಡಿಸುವ ಸಲುವಾಗಿ ಮಾಜಿ ಗೆಳತಿಯನ್ನು ಕ್ರೂರವಾಗಿ ಕೊಲೆ ಮಾಡಿರುವ ಘಟನೆ ರಷ್ಯಾದಲ್ಲಿ ನಡೆದಿದೆ.

    ನೋವೊಸಿಬಿರ್ಸ್ಕ್ ಪ್ರದೇಶದ ಸುಜುನ್ ಗ್ರಾಮದ ಬಳಿ ಈ ಹತ್ಯೆ ನಡೆದಿದೆ. ಅನಸ್ತಾಸಿಯಾ ಪೊಸ್ಪೆಲೋವಾ ಕೊಲೆಯಾದ ಮಾಜಿ ಗೆಳತಿ. ಆರೋಪಿ ಅಲೆಕ್ಸೆ ಪೆಟ್ರೋವ್ (20) ತನ್ನ ಪ್ರೀತಿಯನ್ನು ಪ್ರಿಯತಮೆಯ ಮುಂದೆ ಸಾಬೀತು ಪಡಿಸಲು ಕಾಡಿನಲ್ಲಿ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

    ಏನಿದು ಪ್ರಕರಣ?
    ಆರೋಪಿ ಪೆಟ್ರೋವ್ ಮತ್ತು ಮೃತ ಅನಸ್ತಾಸಿಯಾ ಪರಸ್ಪರ ಪ್ರೀತಿಸುತ್ತಿದ್ದರು. ನಂತರ ಇಬ್ಬರು ಬ್ರೇಕಪ್ ಮಾಡಿಕೊಂಡಿದ್ದರು. ಇದಾದ ಬಳಿಕ ಆರೋಪಿ ಕಾರ್ಪೋವಾಳನ್ನು ಪ್ರೀತಿಸುತ್ತಿದ್ದನು. ಜೂನ್ 14 ರಂದು ಈ ಜೋಡಿ ಅನಸ್ತಾಸಿಯಾಳನ್ನು ಪಾರ್ಟಿಗೆ ಬರುವಂತೆ ಕರೆದಿದ್ದಾರೆ. ಅದಕ್ಕೆ ಅನಸ್ತಾಸಿಯಾ ಕೂಡ ಒಪ್ಪಿದ್ದು, ಆಕೆಯನ್ನು ಕಾಡಿಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಎಲ್ಲರೂ ಮದ್ಯಪಾನ ಮಾಡಲು ಪ್ರಾರಂಭಿಸಿದರು.

    ಇದೇ ವೇಳೆ ಆರೋಪಿ ಪೆಟ್ರೋವ್ ತನ್ನ ಜೇಬಿನಿಂದ ಚಾಕುವನ್ನು ತೆಗೆದು ಅನಸ್ತಾಸಿಯಾಳ ಕುತ್ತಿಗೆಗೆ ಹಲವಾರು ಬಾರಿ ಇರಿದಿದ್ದಾನೆ. ಇದರಿಂದ ಭಯಭೀತಳಾದ ಅನಸ್ತಾಸಿಯಾ ಆರೋಪಿ ಪೆಟ್ರೋವ್‍ನನ್ನು ತಳ್ಳಿ ಅಲ್ಲಿಂದ ತಪ್ಪಿಸಿಕೊಂಡಿದ್ದಾಳೆ. ಆದರೆ ಚಾಕುವಿನಿಂದ ಇರಿದಿದ್ದರಿಂದ ಗಾಯಗಳಾಗಿ ರಕ್ತಸ್ರಾವವಾಗುತ್ತಿತ್ತು. ಹೀಗಾಗಿ ಆಕೆ ಕಾಡಿನಲ್ಲಿ ತಪ್ಪಿಸಿಕೊಳ್ಳಲು ಸಾಧ್ಯವಾಗಿಲ್ಲ. ಆಗ ಅನಸ್ತಾಸಿಯಾ ಸಹಾಯಕ್ಕಾಗಿ ತನ್ನ ಸ್ನೇಹಿತನಿಗೆ ಫೋನ್ ಮಾಡಿದ್ದು, ನನಗೆ ಸಹಾಯ ಮಾಡು, ನಾನು ಕಾಡಿನಲ್ಲಿದ್ದೇನೆ. ನನ್ನ ಕುತ್ತಿಗೆಗೆ ಚಾಕುವಿನಿಂದ ಇರಿದಿದ್ದಾರೆ. ಇವರು ನನ್ನನ್ನು ಕೊಲೆ ಮಾಡುತ್ತಾರೆ. ದಯವಿಟ್ಟು ನನಗೆ ಸಹಾಯ ಮಾಡು ಎಂದು ಅಂಗಲಾಚಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

    ಕುಡಿದ ಮತ್ತಿನಲ್ಲಿ ತಮಾಷೆ ಮಾಡುತ್ತಿದ್ದಾಳೆ ಎಂದು ಸ್ನೇಹಿತ ನಂಬಲಿಲ್ಲ. ಕೊನೆಗೆ ಅನಸ್ತಾಸಿಯಾ ಕಾಡಿನಲ್ಲಿ ಪೊದೆಯೊಳಗೆ ಅಡಗಿಕೊಂಡಳು. ಆದರೆ ಆರೋಪಿ ಪೆಟ್ರೋವ್ ಆಕೆಯನ್ನ ಪತ್ತೆ ಮಾಡಿ ಅವಳ ಕುತ್ತಿಗೆಯ ಮೇಲೆ ಕಾಲಿಟ್ಟು, ಚಾಕುವಿನಿಂದ ಎದೆಗೆ ಚುಚ್ಚಿ, ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ನಂತರ ಆರೋಪಿ ಮತ್ತು ಆಕೆಯ ಗೆಳತಿ ಕಾರ್ಪೋವಾ ಶವವನ್ನು ಪೊದೆಗಳಲ್ಲಿ ಅಡಗಿಸಿ ವಾಪಸ್ ಆಗಿದ್ದಾರೆ. ನಂತರ ಅವರೇ ಅನಸ್ತಾಸಿಯಾ ಕಾಣೆಯಾಗಿದ್ದಾಳೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ

    ತಮ್ಮ ಮೇಲೆ ಅನುಮಾನ ಬರಬಾರದೆಂದು ಪೊಲೀಸರ ಜೊತೆ ಅನಸ್ತಾಸಿಯಾಗಾಗಿ ಹುಡುಕಾಡಿದ್ದಾರೆ. ಇತ್ತೀಚೆಗೆ ನಂತರ ಗಾಯಗೊಂಡ ಮೃತಪಟ್ಟಿರುವ ಯುವತಿಯ ಶವ ಕಾಡಿನ ಪೊದೆಯಲ್ಲಿ ಪತ್ತೆಯಾಗಿದೆ. ಪೊಲೀಸರು ಅನುಮಾನದ ಮೇರೆಗೆ ಇಬ್ಬರನ್ನು ವಶಪಡಿಸಿಕೊಂಡು ವಿಚಾರಣೆ ಮಾಡಿದ್ದಾರೆ. ಆಗ ಇಬ್ಬರು ಈ ಕೊಲೆಯನ್ನು ತಾವೇ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ.

    ಆರೋಪಿ ಕಾರ್ಪೋವಾ, ಅನಸ್ತಾಸಿಯಾ ಮತ್ತು ಪೆಟ್ರೋವ್ ಸಂಬಂಧದ ಬಗ್ಗೆ ಅಸೂಯೆ ಪಟ್ಟಿದ್ದಳು. ಇದೇ ವಿಚಾರಕ್ಕೆ ಪೆಟ್ರೋವ್ ಜೊತೆ ಜಗಳ ಮಾಡುತ್ತಿದ್ದಳು. ಅಲ್ಲದೇ ಪೆಟ್ರೋವ್‍ಗೆ ತನ್ನ ಪ್ರೀತಿಯನ್ನು ಸಾಬೀತುಪಡಿಸಲು ಮತ್ತು ಈ ಜಗಳವನ್ನು ನಿಲ್ಲಿಸಲು ಅನಸ್ತಾಸಿಯಾಳನ್ನು ಕೊಲೆ ಮಾಡಬೇಕು ಎಂದು ಹೇಳಿದ್ದಾಳೆ. ಆಗ ಆರೋಪಿ ತನ್ನ ಪ್ರೀತಿಯನ್ನು ಸಾಬೀತು ಮಾಡಲು ಮಾಜಿ ಗೆಳತಿಯನ್ನು ಕೊಲೆ ಮಾಡಿದ್ದಾನೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಸದ್ಯಕ್ಕೆ ಆರೋಪಿ ಪೆಟ್ರೋವ್ ಮತ್ತು ಕಾರ್ಪೋವಾ ವಿರುದ್ಧ ಕ್ರಿಮಿನಲ್ ಕ್ರೇಸ್ ದಾಖಲಿಸಿದ್ದು, ಇಬ್ಬರನ್ನು ಬಂಧಿಸಲಾಗಿದೆ.

  • ಮಗಳನ್ನು ಹಿಂಬಾಲಿಸಿದ ಮಾಜಿ ಪ್ರೇಮಿಯನ್ನು ಕೊಂದು ಹೂತು ಹಾಕಿದ ತಾಯಿ

    ಮಗಳನ್ನು ಹಿಂಬಾಲಿಸಿದ ಮಾಜಿ ಪ್ರೇಮಿಯನ್ನು ಕೊಂದು ಹೂತು ಹಾಕಿದ ತಾಯಿ

    ಲಕ್ನೋ: ಮಗಳನ್ನು ಹಿಂಬಾಲಿಸುತ್ತಿದ್ದ ಆಕೆಯ ಮಾಜಿ ಪ್ರೇಮಿಯನ್ನು ತಾಯಿಯೊಬ್ಬಳು ಮಗನ ಸಹಾಯದಿಂದ ಕತ್ತು ಹಿಸುಕಿ ಕೊಂದು ಹೂತು ಹಾಕಿರುವ ಘಟನೆ ಉತ್ತರ ಪ್ರದೇಶದ ಬರೇಲಿ ಜಿಲ್ಲೆಯಲ್ಲಿ ನಡೆದಿದೆ.

    ಕೊಲೆಯಾದ ವ್ಯಕ್ತಿಯನ್ನು ಆಶಿಶ್ ಶರ್ಮಾ (45) ಎಂದು ಗುರುತಿಸಲಾಗಿದೆ. ತನ್ನನ್ನು ಬಿಟ್ಟು ಹೋಗಿ ಬೇರೆಯವರನ್ನು ಮದುವೆಯಾದರು ತನ್ನ ಮಾಜಿ ಪ್ರಿಯತಮೆಯನ್ನು ಮರೆಯದ ಆಶಿಶ್ ಅವಳ ಹಿಂದೆ ಸುತ್ತುತ್ತಿದ್ದ. ಇದರಿಂದ ಕೋಪಗೊಂಡ ಪ್ರಿಯತಮೆ ತಾಯಿ ಆತನನ್ನು ಕೊಂದು ತಮ್ಮ ಮನೆಯ ಹಿತ್ತಲಿನಲ್ಲಿ ಹೂತು ಹಾಕಿದ್ದಾಳೆ.

    ಆಶಿಶ್ ಫೆಬ್ರವರಿ 29 ರಂದು ಕಾಣೆಯಾಗಿದ್ದನು. ಆತನ ಶವ ಬರೇಲಿ ಜಿಲ್ಲೆಯ ನಕಾಟಿಯಾ ಎಂಬ ಪ್ರದೇಶದಲ್ಲಿರುವ ಒಂದು ಮನೆಯ ಹಿತ್ತಲಿನಲ್ಲಿ ಹೂತು ಹಾಕಲಾಗಿತ್ತು. ಈ ಪ್ರಕರಣವನ್ನು ಭೇದಿಸಲು ಹೊರಟ ಪೊಲೀಸರಿಗೆ, ಆತನ ಮಾಜಿ ಪ್ರಿಯತಮೆಯ ಅಮ್ಮ ಮತ್ತು ಸಹೋದರ ಸೇರಿ ಕತ್ತು ಹಿಸುಕಿ ಕೊಂದು ನಂತರ ಅವರ ಮನೆಯ ಹಿತ್ತಲಿನಲ್ಲೇ ಹೂತು ಹಾಕಿದ್ದಾರೆ ಎಂದು ತಿಳಿದು ಬಂದಿದೆ.

    ಪ್ರಿಯತಮೆಯ ನಂಬರ್ ಗಾಗಿ ಪ್ರಾಣ ಬಿಟ್ಟ
    ಆಶಿಶ್ ಯುವತಿಯನ್ನು ಪ್ರೀತಿಸುತ್ತಿದ್ದ. ಆದರೆ ಅವರ ಮಧ್ಯೆ ಜಗಳವಾಗಿ ಆಕೆ ಆಶಿಶ್ ಅನ್ನು ಬಿಟ್ಟು ಬೇರೆಯವರನ್ನು ಮದುವೆಯಾಗಿದ್ದಳು. ಆದರೂ ಆಕೆಯ ಮೇಲೆ ಮೋಹವನ್ನು ಬಿಡದ ಆಶಿಶ್ ಯಾವಾಗಲೂ ಆಕೆಯ ಹಿಂದೆ ಹೋಗುತ್ತಿದ್ದ. ಆಶಿಶ್‍ನ ಕಾಟ ಸಹಿಸಲಾರದೆ ಪ್ರಿಯತಮೆಯ ಕುಟುಂಬದವರು ಮನೆಯನ್ನು ಬದಲಿಸಿದ್ದರೂ ಆ ಮನೆಯನ್ನು ಕಂಡುಹಿಡಿದ ಆಶಿಶ್ ಮತ್ತೆ ಹಿಂದೆ ಬಿದ್ದಿದ್ದ.

    ಈ ನಡುವೆ ಫೆಬ್ರವರಿ 29 ರಂದು ಯುವತಿಯ ಬಳಿ ಬಂದ ಆಶಿಶ್ ನೀನು ಹೊಸ ಫೋನ್ ನಂಬರ್ ಬಳಸುತ್ತಿರುವುದು ನನಗೆ ಗೊತ್ತು. ಆ ನಂಬರ್ ಅನ್ನು ನನಗೆ ಕೊಡು ಎಂದು ಪೀಡಿಸುತ್ತಿದ್ದ. ಈ ವೇಳೆ ಅಲ್ಲಿಗೆ ಯುವತಿಯ ಅಮ್ಮ ಮತ್ತು ಸಹೋದರ ಬಂದಿದ್ದಾರೆ. ಆಗ ಆಶಿಶ್ ಮತ್ತು ಆಕೆಯ ತಾಯಿ ಜಗಳಕ್ಕೆ ಬಿದ್ದಿದ್ದಾರೆ. ಈ ಗಲಾಟೆಯಲ್ಲಿ ಆಶಿಶ್ ಪ್ರಿಯತಮೆಯ ತಾಯಿಗೆ ಹೊಡೆದಿದ್ದಾನೆ. ಇದರಿಂದ ಕೋಪಗೊಂಡ ಆಕೆಯ ತಾಯಿ ಮತ್ತು ಸಹೋದರ ಆತನ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ. ಮೃತದೇಹವನ್ನು ತಮ್ಮ ಮನೆಯ ಹಿತ್ತಲಿನಲ್ಲಿ ಹೂತು ಹಾಕಿದ್ದಾರೆ.

    ಪೊಲೀಸರು ಈಗ ಆರೋಪಿಗಳಾದ ತಾಯಿ ಮತ್ತು ಸಹೋದರನನ್ನು ಅರೆಸ್ಟ್ ಮಾಡಿದ್ದಾರೆ. ಆದರೆ ಅವರು ನಾವು ಬೇಕು ಎಂದು ಕೊಲೆ ಮಾಡಲಿಲ್ಲ. ಆತ ನಮ್ಮನ್ನು ಕೊಲ್ಲಲು ಬಂದ ಹಾಗಾಗಿ ನಮ್ಮ ಪ್ರಾಣವನ್ನು ಉಳಿಸಿಕೊಳ್ಳಲು ಆತನನ್ನು ಕೊಲೆ ಮಾಡಬೇಕಾಗಿ ಬಂತು ಎಂದು ಹೇಳಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಬರೇಲಿ ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ.

  • ಯುವತಿಯ ಬಟ್ಟೆ ಬಿಚ್ಚಿ ಖಾರದ ಪುಡಿ ಹಾಕಿದ ಮೂವರು ಮಹಿಳೆಯರು

    ಯುವತಿಯ ಬಟ್ಟೆ ಬಿಚ್ಚಿ ಖಾರದ ಪುಡಿ ಹಾಕಿದ ಮೂವರು ಮಹಿಳೆಯರು

    – ನೋವಿನಿಂದ ಅಳ್ತಿದ್ದಾಗ ವಿಡಿಯೋ ಮಾಡಿದ್ರು
    – ಮಾಜಿ ಪ್ರಿಯಕರನ ಜೊತೆ ಮತ್ತೆ ಮಾತಾಡಿದ್ದೆ ತಪ್ಪಾಯ್ತು

    ಗಾಂಧಿನಗರ: ಮೂವರು ಮಹಿಳೆಯರು ಯುವತಿಯೊಬ್ಬಳ ಖಾಸಗಿ ಭಾಗಕ್ಕೆ ಮೆಣಸಿನ ಪುಡಿ ಹಾಕಿ ಚಿತ್ರಹಿಂಸೆ ನೀಡಿರುವ ಅಮಾನವೀಯ ಘಟನೆ ಗುಜರಾತ್‍ನ ಅಹಮದಾಬಾದ್‍ನಲ್ಲಿ ನಡೆದಿದೆ.

    ಅಹಮದಾಬಾದ್‍ನ ವಡಾಜ್ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, 22 ವರ್ಷದ ಸಂತ್ರಸ್ತೆ ಈ ಕುರಿತು ಪೊಲೀಸರಿಗೆ ದೂರು ನೀಡಿದ್ದಾಳೆ. ಮೂವರು ಮಹಿಳೆಯರು ತನ್ನ ಮೇಲೆ ಕ್ರೂರವಾಗಿ ಹಲ್ಲೆ ಮಾಡಿದ್ದಾರೆ. ಆರೋಪಿಗಳಲ್ಲಿ ಒಬ್ಬರು ನನ್ನ ಮಾಜಿ ಪ್ರಿಯತಮನ ಪತ್ನಿ ಸೇರಿದ್ದಾರೆ ಎಂದು ಸಂತ್ರಸ್ತೆ ಆರೋಪಿಸಿದ್ದಾಳೆ. ಪೊಲೀಸರು ಈ ಕುರಿತು ಎಫ್‍ಐಆರ್ ದಾಖಲಿಸಿಕೊಂಡು ಮೂವರನ್ನು ಬಂಧಿಸಿದ್ದಾರೆ.

    ಏನಿದು ಪ್ರಕರಣ?
    ಸಂತ್ರಸ್ತೆ ಸುಮಾರು ನಾಲ್ಕು ವರ್ಷಗಳ ಹಿಂದೆ ಆರೋಪಿಗಳಲ್ಲಿ ಮಹಿಳೆಯೊಬ್ಬಳ ಪತಿಯೊಂದಿಗೆ ಸಂಬಂಧ ಹೊಂದಿದ್ದಳು. ಜಾನು ಗೋಸ್ವಾಮಿಯ ಪತಿ ಗಿರೀಶ್ ಗೋಸ್ವಾಮಿಯ ಅಂಗಡಿಯಲ್ಲಿ ಸಂತ್ರಸ್ತೆ ಕೆಲಸ ಮಾಡುತ್ತಿದ್ದಳು. ಈ ವೇಳೆ ಯುವತಿ ಮತ್ತು ಗೋಸ್ವಾಮಿ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಎರಡು ವರ್ಷಗಳು ಕಾಲ ಸಂಬಂಧದಲ್ಲಿದ್ದರು. ನಂತರ ಯುವತಿ ಕೆಲಸ ಬಿಟ್ಟು ವಸ್ತ್ರಪುರದ ಮತ್ತೊಂದು ಗಾರ್ಮೆಂಟ್ ಅಂಗಡಿಯಲ್ಲಿ ಕೆಲಸಕ್ಕೆ ಸೇರಿದ್ದಳು.

    ಈ ಮಧ್ಯೆ ಗಿರೀಶ್‍ಗೆ ಜಾನು ಜೊತೆ ಮದುವೆಯಾಗಿತ್ತು. ಗಿರೀಶ್ ಎರಡು ತಿಂಗಳ ಹಿಂದೆ ಯುವತಿಯನ್ನು ಮತ್ತೆ ಸಂಪರ್ಕಿಸಿ ಇಬ್ಬರು ಮಾತನಾಡಲು ಶುರು ಮಾಡಿದ್ದರು. ಇದರ ಬಗ್ಗೆ ಗಿರೀಶ್ ಪತ್ನಿ ಜಾನುಗೆ ಗೊತ್ತಾಗಿದೆ. ಆಗ ಯುವತಿಗೆ ಪತಿಯ ಜೊತೆ ಮಾತನಾಡಬಾರದು ಎಂದು ಬೆದರಿಕೆ ಹಾಕಲು ಪ್ರಾರಂಭಿಸಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

    ನಾನು ವಡಾಜ್ ನಿವಾಸದಿಂದ ಪ್ರಗತಿನಗರಕ್ಕೆ ಹೋಗುತ್ತಿದ್ದೆ. ಆಗ ಸ್ಕೂಟಿಯಲ್ಲಿ ಜಾನು ಮತ್ತು ಆಕೆಯ ಸ್ನೇಹಿತೆ ನನ್ನನ್ನು ತಡೆದರು. ನಂತರ ನನ್ನನ್ನು ಅವರ ಜೊತೆ ಬಲವಂತವಾಗಿ ಇನ್ನೊಬ್ಬ ಮಹಿಳೆಯ ಮನೆಗೆ ಕರೆದುಕೊಂಡು ಹೋದರು. ಅಲ್ಲಿ ನನ್ನನ್ನು ಒಂದು ರೂಮಿನಲ್ಲಿ ಕೂಡಿ ಹಾಕಿ ನನ್ನ ಬಟ್ಟೆಗಳನ್ನು ಬಿಚ್ಚಿ ಮೆಣಸಿನ ಪುಡಿಯನ್ನು ನನ್ನ ಖಾಸಗಿ ಭಾಗಕ್ಕೆ ಹಾಕಿದರು. ನಾನು ನೋವಿನಿಂದ ಅಳುತ್ತಿದ್ದಾಗ ಮೂವರು ಕೃತ್ಯದ ವಿಡಿಯೋವನ್ನು ಚಿತ್ರೀಕರಿಸಿದ್ದಾರೆ ಎಂದು ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾಳೆ.

    ಅಷ್ಟೇ ಅಲ್ಲದೇ ಗಿರೀಶ್‍ನನ್ನು ಮತ್ತೆ ಭೇಟಿಯಾದರೆ ಮುಖಕ್ಕೆ ಆಸಿಡ್ ಹಾಕುವುದಾಗಿ ಆರೋಪಿಗಳು ಬೆದರಿಕೆ ಹಾಕಿದ್ದಾರೆ ಎಂದು ಸಂತ್ರಸ್ತೆ ಹೇಳಿದ್ದಾಳೆ. ಸದ್ಯಕ್ಕೆ ಪೊಲೀಸರು ಆರೋಪಿಗಳ ವಿರುದ್ಧ ಅಪಹರಣ, ಹಲ್ಲೆ ಮತ್ತು ಕ್ರಿಮಿನಲ್ ಬೆದರಿಕೆ ಆರೋಪದಡಿ ಪ್ರಕರಣ ದಾಖಲಿಸಿಕೊಂಡಿದ್ದು, ಮೂವರನ್ನು ಪೊಲೀಸರು ಬಂಧಿಸಿದ್ದಾರೆ.