ನವದೆಹಲಿ: ಆಪರೇಷನ್ ಸಿಂಧೂರದ(Operation Sindoor) ಯಶಸ್ವಿಗೆ ಕಾರಣಕರ್ತರಾದ ಪ್ರಧಾನಿ ನರೇಂದ್ರ ಮೋದಿ(Narendra Modi) ಹಾಗೂ ರಕ್ಷಣಾ ತಂಡಗಳ ಕುರಿತು ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್(Sachin Tendulkar) ಪ್ರಶಂಸೆಯ ಬರಹವನ್ನು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
Operation Sindoor had a team of over 1.4 billion rising in unison. Strong resolve and measured restraint, Team India!
Remarkable teamwork across all levels led by tireless efforts of Hon. PM @narendramodi ji and his team and the three defence forces.
ಪೋಸ್ಟ್‌ನಲ್ಲಿ ಏನಿದೆ?
ಆಪರೇಷನ್ ಸಿಂಧೂರದ ಕಾರ್ಯಚರಣೆಯಲ್ಲಿ 1.6 ಬಿಲಿಯನ್‌ಗಿಂತಲೂ ಹೆಚ್ಚು ಜನರು ಒಗ್ಗಟ್ಟಿನಿಂದ ಹೋರಾಡಿದ್ದಾರೆ. ಭಾರತೀಯ ಸೇನೆ ಬಲವಾದ ದೃಢನಿಶ್ಚಯ ಮತ್ತು ಸಂಯಮದ ಹೋರಾಡಿದೆ. ಇದನ್ನೂ ಓದಿ: ಮೋದಿ ಭಾಷಣದ ಬೆನ್ನಲ್ಲೇ ಮತ್ತೆ ಪಾಕ್ ಡ್ರೋನ್ ದಾಳಿ
ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿಯವರ ಹಾಗೂ ಮೂರು ರಕ್ಷಣಾ ತಂಡಗಳ ಅವಿಶ್ರಾಂತ ಪರಿಶ್ರಮವು ಗಮನಾರ್ಹವಾಗಿದೆ. ಅಲ್ಲದೇ ನಮ್ಮ ಧೈರ್ಯಶಾಲಿ ಸೈನಿಕರು ಹಾಗೂ ಗಡಿ ಪ್ರದೇಶದಲ್ಲಿ ವಾಸಿಸುತ್ತಿರುವ ನಾಗರಿಕರ ಬಗ್ಗೆ ಇಲ್ಲಿ ನಾನು ವಿಶೇಷವಾಗಿ ಉಲ್ಲೇಖಿಸುತ್ತಿದ್ದೇನೆ. ಜೈ ಹಿಂದ್ ಎಂದು ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಬಾಲಿವುಡ್ ತಾರೆ ಸನ್ನಿ ಡಿಯೋಲ್ ಪ್ರತಿನಿಧಿಸುವ ಪಂಜಾಬ್‌ನ ಹೈ ಪ್ರೊಫೈಲ್ ಕ್ಷೇತ್ರ ಗುರುದಾಸ್‌ಪುರದಿಂದ ಸ್ಪರ್ಧಿಸುವ ವಿಚಾರವನ್ನು ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ (Yuvraj Singh) ಅವರು ತಳ್ಳಿಹಾಕಿದ್ದಾರೆ.
Contrary to media reports, I'm not contesting elections from Gurdaspur. My passion lies in supporting and helping people in various capacities, and I will continue to do so through my foundation @YOUWECAN. Let's continue making a difference together to the best of our abilities❤️
ಈ ಸಂಬಂಧ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಸಿಂಗ್, ನಾನು ಗುರುದಾಸ್‌ಪುರದಿಂದ ಚುನಾವಣೆಗೆ ಸ್ಪರ್ಧಿಸುವುದಿಲ್ಲ. ನನ್ನ ಮುಖ್ಯ ಉದ್ದೇಶ ಜನರಿಗೆ ಸಹಾಯ ಮಾಡುವುದಾಗಿದೆ. ನನ್ನ ಫೌಂಡೇಶನ್ ಮೂಲಕ ನಾನು ಅದನ್ನು ಮುಂದುವರಿಸುತ್ತೇನೆ. ಹೀಗಾಗಿ ನಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ನಾವು ಒಟ್ಟಿಗೆ ಕೆಲಸ ಮುಂದುವರಿಸೋಣ ಎಂದಿದ್ದಾರೆ.
ಬಿಜೆಪಿಯು ಲೋಕಸಭೆ ಚುನಾವಣೆಗೆ (Lokabha Election) ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಗುರುದಾಸ್‌ಪುರದಿಂದ ಬಿಜೆಪಿ ಟಿಕೆಟ್‌ನಲ್ಲಿ ಯುವರಾಜ್ ಸಿಂಗ್ ಸ್ಪರ್ಧಿಸಬಹುದು ಎಂಬುದು ವರದಿಯಾಗಿತ್ತು. ಈ ಬೆನ್ನಲ್ಲೇ ಮಾಜಿ ಕ್ರಿಕೆಟಿಗ ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ಹಾಲಿ 100 ಬಿಜೆಪಿ ಸಂಸದರಿಗೆ ಸಿಗಲ್ಲ ಟಿಕೆಟ್
ಗುರುದಾಸ್‌ಪುರವು ಪ್ರಸಿದ್ಧ ಸಂಸದರ ಇತಿಹಾಸವನ್ನು ಹೊಂದಿದೆ. ಸನ್ನಿ ಡಿಯೋಲ್ (Sunny Deol) ಅವರಿಗಿಂತ ಮೊದಲು , ಈ ಕ್ಷೇತ್ರವನ್ನು ದಿವಂಗತ ನಟ ವಿನೋದ್ ಖನ್ನಾ ಅವರು 1998, 1999, 2004 ಮತ್ತು 2014 ಹೀಗೆ ನಾಲ್ಕು ಬಾರಿ ಗೆದ್ದಿದ್ದಾರೆ. ಡಿಯೋಲ್ 2019 ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸುನಿಲ್ ಜಾಖರ್ ಅವರನ್ನು ಸೋಲಿಸಿ ಬಿಜೆಪಿ ಟಿಕೆಟ್‌ನಲ್ಲಿ ಗೆದ್ದರು. ಜಾಖರ್ ನಂತರ ಮೇ 2022 ರಲ್ಲಿ ಬಿಜೆಪಿ ಸೇರಿದರು.
ಕೋಲ್ಕತ್ತಾ: ಭಾರತದ ಮಾಜಿ ಕ್ರಿಕೆಟಿಗ ಅರುಣ್ ಲಾಲ್ ನಿನ್ನೆ ತನಗಿಂತ 28 ವರ್ಷ ಚಿಕ್ಕವಳಾಗಿರುವ ಶಿಕ್ಷಕಿ ಬುಲ್ ಬುಲ್ ಸಹಾಳನ್ನು ವರಿಸಿದ್ದಾರೆ.
ಸೋಮವಾರ ಕೋಲ್ಕತ್ತಾದಲ್ಲಿ ಬುಲ್ ಬುಲ್ ಶಾ ಅವರನ್ನು ಅರುಣ್ ಲಾಲ್ ಕೈಹಿಡಿದಿದ್ದಾರೆ. ಬಳಿಕ ನವದಂಪತಿ ಕೇಕ್ ಕಟ್ ಮಾಡಿದ್ದಾರೆ. ಇತ್ತ ಬುಲ್ ಬುಲ್ ಅವರು ಕೈಗೆ ಮೆಹಂದಿ ಹಾಕಿ ಫೋಟೋ ತೆಗೆಸಿಕೊಂಡಿದ್ದಾರೆ. ಇದೀಗ ಈ ಎರಡು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿವೆ. ಅಲ್ಲದೆ ಕುಟುಂಬದವರಿಗೆ ಹಾಗೂ ಗೆಳೆಯರಿಗೆ ನವದಂಪತಿ ಸೋಶಿಯಲ್ ಮೀಡಿಯಾ ಮೂಲಕ ಧನ್ಯವಾದಗಳನ್ನು ತಿಳಿಸಿದ್ದಾರೆ.
66 ವರ್ಷದ ಅರುಣ್ ಲಾಲ್ ಪ್ರಸ್ತುತ ಪಶ್ಚಿಮ ಬಂಗಾಳದ ಮುಖ್ಯ ಕೋಚ್ ಆಗಿದ್ದಾರೆ. ವರದಿಗಳ ಪ್ರಕಾರ, ಲಾಲ್ ಮತ್ತು ಸಹಾ ಬಹುಕಾಲದಿಂದ ಸಂಬಂಧ ಹೊಂದಿದ್ದರು. ಲಾಲ್ ಅವರ ಮೊದಲ ಪತ್ನಿ ರೀನಾ ಅವರಿಂದ ಒಪ್ಪಿಗೆ ಪಡೆದ ನಂತರವೇ ಅವರು ಈ 2ನೇ ಮದುವೆ ಪ್ಲ್ಯಾನ್ ಮಾಡಿದ್ದಾರೆ. ಇದನ್ನೂ ಓದಿ: ಬಂಧನದಲ್ಲಿರುವ ರಾಣಾ ದಂಪತಿ ನಿವಾಸದಲ್ಲಿ ಅಕ್ರಮ ಕಟ್ಟಡ – ಬಿಎಂಸಿ ನೋಟೀಸ್
ಈಗಾಗಲೇ ಅವರು ತಮ್ಮ ಮೊದಲ ಪತ್ನಿಯೊಂದಿಗೆ ವಿಚ್ಛೇದನ ಪಡೆದಿದ್ದಾರೆ. ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಮೊದಲ ಪತ್ನಿಯೊಂದಿಗೆ ಸದ್ಯಕ್ಕೆ ಲಾಲ್ ವಾಸಿಸುತ್ತಿದ್ದಾರೆ. ಲಾಲ್ ಅವರ ಮುದುವೆಯ ಆಮಂತ್ರಣ ಪತ್ರಿಕೆಯ ಚಿತ್ರವೂ ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವ ಭಾರೀ ಸುದ್ದಿಯಾಗಿತ್ತು.
ಅರುಣ್ ಲಾಲ್ ಅವರು ಭಾರತಕ್ಕಾಗಿ ಒಟ್ಟು 29 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದು, 850 ರನ್‍ಗಳನ್ನು ಗಳಿಸಿದ್ದಾರೆ ಮತ್ತು 7 ವಿಕೆಟ್‍ಗಳನ್ನು ಕಬಳಿಸಿದ್ದಾರೆ. ನಂತರ ಅವರು 2016ರಲ್ಲಿ ದವಡೆಯ ಕ್ಯಾನ್ಸರ್ ಗೆ ಒಳಗಾಗಿದ್ದರು. ಮೊದಲು ಬಹುಪಾಲು ದೇಶೀಯ ಮತ್ತು ಅಂತರಾಷ್ಟ್ರೀಯ ಪಂದ್ಯಗಳಿಗೆ ಕಾಮೆಂಟರಿ ಬಾಕ್ಸ್ ನಲ್ಲಿ ಪ್ರಮುಖ ಮುಖವಾಗಿದ್ದವರು.
ಬೆಂಗಳೂರು: ಮಾಜಿ ಕ್ರಿಕೆಟಿಗ ಬಿ. ವಿಜಯಕೃಷ್ಣ(71) ಇಂದು ಮುಂಜಾನೆ ನಗರದ ವಿಕ್ರಂ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ವಿಜಯಕೃಷ್ಣ ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣ್ ಸಂತಾಪ ಸೂಚಿಸಿದ್ದಾರೆ.
ಬಹುಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ವಿಜಯಕೃಷ್ಣ ಅವರು ಕಳೆದ ಎರಡು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇಂದು ಮುಂಜಾನೆ 5.50ರ ಸುಮಾರಿಗೆ ಹೃದಯಾಘಾತಕ್ಕೀಡಾಗಿ ಕೊನೆಯುಸಿರೆಳೆದಿದ್ದಾರೆ.
ಮಾಜಿ ಕ್ರಿಕೆಟಿಗ ಬಿ.ವಿಜಯಕೃಷ್ಣ ಅವರ ನಿಧನಕ್ಕೆ ಮುಖ್ಯಮಂತ್ರಿ @BSYBJP ರವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ 2 ಬಾರಿ ರಣಜಿ ಟ್ರೋಫಿ ಗೆಲ್ಲುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು. ಅವರ ನಿಧನದಿಂದ ನಾಡು ಒಬ್ಬ ಅತ್ಯುತ್ತಮ ಕ್ರಿಕೆಟ್ ಆಟಗಾರನನ್ನು ಕಳೆದುಕೊಂಡಂತಾಗಿದೆ. (1/2)
ಕರ್ನಾಟಕದ ಪರ ಆಡುತ್ತಿದ್ದ ಕೆ. ನಾಗಭೂಷಣ್ ಅವರ ಪ್ರೋತ್ಸಾಹದಿಂದ ಮೈದಾನಕಿಳಿದಿದ್ದ ವಿಜಯಕೃಷ್ಣ ಅತ್ಯುತ್ತಮ ಆಲ್ ರೌಂಡರ್ ಆಗಿ ಪ್ರದರ್ಶನ ನೀಡಿದ್ದರು. ಕಾರ್ ಶೆಡ್‍ನಲ್ಲಿ ಟೆನ್ನಿಸ್ ಬಾಲ್ ಮೂಲಕ ಬೌಲಿಂಗ್ ಅಭ್ಯಾಸ ಮಾಡಿಕೊಂಡ ವಿಜಯಕೃಷ್ಣ 1968-69ನೇ ಸಾಲಿನಲ್ಲಿ ಆಡಿದ ಮೊದಲ ರಣಜಿ ಪಂದ್ಯದಲ್ಲಿ ಹೈದರಾಬಾದ್ ವಿರುದ್ಧ ಮೂರು ವಿಕೆಟ್ ಪಡೆದಿದ್ದರು. ಅಲ್ಲದೇ ಬಳಿಕ ಮದ್ರಾಸ್ ವಿರುದ್ಧದ ಪಂದ್ಯದಲ್ಲಿ ಆರು ವಿಕೆಟ್ ಪಡೆದು ಸೈ ಎನ್ನಿಸಿಕೊಂಡಿದ್ದರು. ಇದನ್ನೂ ಓದಿ: ರೂಲ್ಸ್ ಬ್ರೇಕ್ – 100 ‘ಕೈ’ ಕಾರ್ಯಕರ್ತರ ಮೇಲೆ ಕೇಸ್
ಭಗವಂತ ಅವರ ಆತ್ಮಕ್ಕೆ ಶಾಂತಿ ನೀಡಲಿ, ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿಯನ್ನು ಕರುಣಿಸಲಿ ಎಂದು ಮುಖ್ಯಮಂತ್ರಿಗಳು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ. (2/2)
ಸದ್ಯ ವಿಜಯಕೃಷ್ಣ ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಸಂತಾಪ ಸೂಚಿಸಿದ್ದಾರೆ. ಮಾಜಿ ಕ್ರಿಕೆಟಿಗ ಬಿ.ವಿಜಯಕೃಷ್ಣ ಅವರ ನಿಧನಕ್ಕೆ ಮುಖ್ಯಮಂತ್ರಿಗಳು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಕರ್ನಾಟಕ 2 ಬಾರಿ ರಣಜಿ ಟ್ರೋಫಿ ಗೆಲ್ಲುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು. ಅವರ ನಿಧನದಿಂದ ನಾಡು ಒಬ್ಬ ಅತ್ಯುತ್ತಮ ಕ್ರಿಕೆಟ್ ಆಟಗಾರನನ್ನು ಕಳೆದುಕೊಂಡಂತಾಗಿದೆ. ಭಗವಂತ ಅವರ ಆತ್ಮಕ್ಕೆ ಶಾಂತಿ ನೀಡಲಿ, ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿಯನ್ನು ಕರುಣಿಸಲಿ ಎಂದು ಮುಖ್ಯಮಂತ್ರಿಗಳು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.
ಮಾಜಿ ಕ್ರಿಕೆಟಿಗ ಬಿ. ವಿಜಯಕೃಷ್ಣ ಅವರ ನಿಧನದ ಸುದ್ದಿ ಕೇಳಿ ಮನಸ್ಸಿಗೆ ಆಘಾತವಾಯಿತು.
ಅವರ ಅತ್ಯುತ್ತಮ ಪ್ರದರ್ಶನದಿಂದ ಕರ್ನಾಟಕ 2 ಬಾರಿ ರಣಜಿ ಟ್ರೋಫಿ ಗೆಲ್ಲಲು ಸಾಧ್ಯವಾಗಿತ್ತು.
ಅವರ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಕುಟುಂಬ ಹಾಗೂ ಅಭಿಮಾನಿಗಳಿಗೆ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ. ಓಂ ಶಾಂತಿ.
— Dr. C.N. Ashwath Narayan (@drashwathcn) June 17, 2021
ಇತ್ತ ಉಪಮುಖ್ಯಮಂತ್ರಿ ಡಾ. ಸಿ. ಎನ್ ಅಶ್ವಥ್ ನಾರಾಯಣ್ ಕೂಡ ಟ್ವೀಟ್ ಮಾಡಿ, ಮಾಜಿ ಕ್ರಿಕೆಟಿಗ ಬಿ. ವಿಜಯಕೃಷ್ಣ ಅವರ ನಿಧನದ ಸುದ್ದಿ ಕೇಳಿ ಮನಸ್ಸಿಗೆ ಆಘಾತವಾಯಿತು. ಅವರ ಅತ್ಯುತ್ತಮ ಪ್ರದರ್ಶನದಿಂದ ಕರ್ನಾಟಕ 2 ಬಾರಿ ರಣಜಿ ಟ್ರೋಫಿ ಗೆಲ್ಲಲು ಸಾಧ್ಯವಾಗಿತ್ತು. ಅವರ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಕುಟುಂಬ ಹಾಗೂ ಅಭಿಮಾನಿಗಳಿಗೆ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ. ಓಂ ಶಾಂತಿ ಎಂದು ಬರೆದುಕೊಂಡಿದ್ದಾರೆ.
ಮುಂಬೈ: ಮೃತ ನಟ ಸುಶಾಂತ್ ಸಿಂಗ್ ರಜಪೂತ್ ಅವರನ್ನು ಭೇಟಿಯಾದಾಗ ಮಾತನಾಡಿಸದೇ ಹೋಗಿದ್ದಕ್ಕೆ ನನಗೆ ವಿಷಾದವಿದೆ ಎಂದು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯೆಬ್ ಅಖ್ತರ್ ಅವರು ಹೇಳಿದ್ದಾರೆ.
ಕಳೆದ ಜೂನ್ 14ರಂದು ತಮ್ಮ ನಿವಾಸದಲ್ಲೇ ಸುಶಾಂತ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಆಗ ತಾನೇ ಬಾಲಿವುಡ್‍ನಲ್ಲಿ ಅಭಿಮಾನಿಗಳನ್ನು ಸಂಪಾದಿಸುತ್ತಿದ್ದ ಸುಶಾಂತ್ ತಮ್ಮ 34ನೇ ವಯಸ್ಸಿಗೆ ಬಾರದ ಲೋಕಕ್ಕೆ ತೆರಳಿದ್ದಾರೆ. ಯುವ ನಟನ ಸಾವಿಗೆ ಇಡೀ ಭಾರತ ಚಿತ್ರರಂಗವೇ ಮರುಗಿತ್ತು. ಹಲವಾರು ಕ್ರಿಕೆಟಿಗರು ಕೂಡ ಸುಶಾಂತ್ ಸಾವಿಗೆ ಸಂತಾಪ ಸೂಚಿಸಿದ್ದರು.
ಈಗ ಸುಶಾಂತ್ ಅವರ ವಿಚಾರವಾಗಿ ತನ್ನ ಯುಟ್ಯೂಬ್ ಚಾನೆಲ್‍ನಲ್ಲಿ ಮಾತನಾಡಿರುವ ಅಖ್ತರ್, 2016ರಲ್ಲಿ ನಾನು ಭಾರತಕ್ಕೆ ಹೋಗಿದ್ದಾಗ ಮುಂಬೈನ ಆಲಿವ್ ಹೋಟೆಲ್ ಅಲ್ಲಿ ಆತನನ್ನು ನೋಡಿದ್ದೆ. ಆಗ ಆತ ಯಾವುದೋ ಬೇಜಾರಿನಲ್ಲಿ ಇದ್ದ ಎನಿಸುತ್ತದೆ. ಆತನನಲ್ಲಿ ಅಂದು ಹೆಚ್ಚಿನ ಆತ್ಮವಿಶ್ವಾಸ ನನಗೆ ಕಾಣಿಸಿಲಿಲ್ಲ. ಎಂಎಸ್ ಧೋನಿ ಅವರ ಬಯೋಪಿಕ್ ಅಲ್ಲಿ ಈತನೇ ನಟಿಸುತ್ತಿರುವುದು ಎಂದು ನನ್ನ ಸ್ನೇಹಿತ ನನಗೆ ಹೇಳಿದ ಎಂದು ಅಖ್ತರ್ ತಿಳಿಸಿದ್ದಾರೆ.
ಅಂದು ನನಗೆ ಆತನ ಬಗ್ಗೆ ಏನೂ ಅನಿಸಲಿಲ್ಲ. ಆದರೆ ಈಗ ಆತನ ನಟನೆಯನ್ನು ನೋಡಿದ್ದೇನೆ. ಯಾವುದೇ ಸಿನಿಮಾ ಹಿನ್ನೆಲೆ ಇಲ್ಲದೇ ಬಾಲಿವುಡ್‍ಗೆ ಬಂದು ಒಳ್ಳೆಯ ಸಿನಿಮಾಗಳನ್ನು ಆತ ಮಾಡಿದ್ದಾನೆ. ಅವನ ಸಿನಿಮಾಗಳು ಸಕ್ಸಸ್ ಆಗುತ್ತಿರುವ ಸಮಯದಲ್ಲಿ ಆತ ಹೀಗೆ ಮಾಡಿಕೊಳ್ಳಬಾರದಿತ್ತು. ಅಂದು ನಾನು ಆತನನ್ನು ಮಾತನಾಡಿಸಬೇಕಿತ್ತು. ಅಂದು ಆತನನ್ನು ಮಾತನಾಡಿಸದಕ್ಕೆ ಇಂದು ನನಗೆ ವಿಷಾದವಿದೆ ಎಂದು ಶೋಯೆಬ್ ವಿಡಿಯೋದಲ್ಲಿ ಹೇಳಿದ್ದಾರೆ.
ಎಲ್ಲ ಸಮಸ್ಯೆಗಳಿಗೂ ಸಾಯುವುದೊಂದೆ ಪರಿಹಾರವಲ್ಲ. ನಿಮಗೆ ಆ ಮಟ್ಟದ ಸಮಸ್ಯೆ ಏನಾದರೂ ಬಂದರೆ ನಿಮ್ಮವರ ಜೊತೆ ಮತ್ತು ಕುಟುಂಬದವರ ಜೊತೆ ಕುಳಿತು ಚರ್ಚಿಸಬೇಕು. ಅದನ್ನು ಬಿಟ್ಟು ಪ್ರಾಣ ಕಳೆದುಕೊಳ್ಳಬಾರದು. ಹಾಗೇ ನೋಡಿದರೆ ನಟಿ ದೀಪಿಕಾ ಪಡುಕೋಣೆ ಕೂಡ ಸ್ವಲ್ಪ ದಿನ ಖಿನ್ನತೆಗೆ ಒಳಗಾಗಿದ್ದರು. ಆದರೆ ಅವರು ಅದನ್ನು ಕೆಲವರ ಸಹಾಯ ಪಡೆದು ಬಗೆಹರಿಸಿಕೊಂಡರು. ಹಾಗೇ ಸುಶಾಂತ್‍ಗೆ ಕೂಡ ಯಾರದರೂ ಸಹಾಯ ಮಾಡಬೇಕಿತ್ತು ಎಂದು ಶೋಯಬ್ ಅಭಿಪ್ರಾಯ ಪಟ್ಟಿದ್ದಾರೆ.
ಜೂನ್ 14ರಂದು ಫ್ಯಾನಿಗೆ ನೇಣು ಹಾಕಿಕೊಂಡು ಸುಶಾಂತ್ ಸಿಂಗ್ ಆತ್ಮಹತ್ಯೆಗೆ ಶರಣಾಗಿದ್ದರು. ಜೂನ್ 15ರ ಸಂಜೆ ಮುಂಬೈನ ವಿಲೆ ಪಾರ್ಲೆ ಸೇವಾ ಸಮಾಜದಲ್ಲಿ ಸುಶಾಂತ್ ಅಂತ್ಯಕ್ರಿಯೆ ನಡೆದಿತ್ತು. ಶ್ರದ್ಧಾ ಕಪೂರ್, ಕೃತಿ ಸನನ್, ರಿಯಾ ಚಕ್ರವರ್ತಿ, ವಿವೇಕ್ ಒಬೇರಾಯ್, ರಾಜಕುಮಾರ್ ಹಿರಾಣಿ ಹಾಗೂ ಸುಶಾಂತ್ ಕುಟುಂಬದವರು ಮಾತ್ರ ಅಂತಿಮ ವಿಧಿವಿಧಾನಗಳಲ್ಲಿ ಭಾಗಿಯಾಗಿದ್ದರು.
ನವದೆಹಲಿ: ಟೀಂ ಇಂಡಿಯಾ ಮಾಜಿ ಆಟಗಾರ ವೀರೆಂದ್ರ ಸೆಹ್ವಾಗ್, ಸಚಿನ್ ತೆಂಡೂಲ್ಕರ್ ಸೇರಿದಂತೆ ಅನೇಕ ಕ್ರಿಕೆಟಿಗರು ವಿಶ್ವ ಯೋಗ ದಿನದ ನಿಮಿತ್ತ ವಿಡಿಯೋ, ಫೋಟೋಗಳನ್ನು ಟ್ವಿಟ್ ಮಾಡಿದ್ದಾರೆ.
ವೀರು ವಿಡಿಯೋವನ್ನು ಮಾಡಿದ್ದು ಇದರಲ್ಲಿ ಅವರು ಯೋಗ ಮಾಡುವುದನ್ನು ಕಾಣಬಹುದು. “ಇದು ಸ್ವಲ್ಪ ಸಮಯ ತೆಗೆದುಕೊಳ್ಳಬಹುದು. ಆದರೆ ಅದು ಯೋಗದಿಂದ ಸಾಧ್ಯವಾಗುತ್ತದೆ” ಎಂದು ಹೇಳಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ವೀರೆಂದ್ರ ಸೆಹ್ವಾಗ್ ಅವರು ಅಭಿಮಾನಿಗಳೊಂದಿಗೆ ವಿಶೇಷ ವಿಡಿಯೋ, ಫೋಟೋಗಳನ್ನು ಹಂಚಿಕೊಳ್ಳುತ್ತಾರೆ. ವೀರು ವಿಶಿಷ್ಟ ಶೈಲಿಯೊಂದಿಗೆ ಅಭಿಮಾನಿಗಳನ್ನು ರಂಜಿಸುತ್ತಾರೆ. ಈ ಬಾರಿ ಅವರು ಹ್ಯಾಂಡಲ್ ಮತ್ತು ಬ್ರೇಕ್ ಇಲ್ಲದೆ ಬೈಸಿಕಲ್ ಸವಾರಿ ಮಾಡುತ್ತಿರುವ ವ್ಯಕ್ತಿಯ ವಿಡಿಯೋವನ್ನು ವೀರು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಮಾಡಿದ್ದಾರೆ.
ವಿಡಿಯೋವನ್ನು ಹಂಚಿಕೊಂಡ ಸೆಹ್ವಾಗ್, “ರೋಹ್ಟಕ್‍ನಲ್ಲಿ ಹನುಮಾನ್ ಭಕ್ತ, ಹ್ಯಾಂಡಲ್ ಮತ್ತು ಬ್ರೇಕ್ ಇಲ್ಲದೆ ಸೈಕ್ಲಿಂಗ್ ಮಾಡುತ್ತಿದ್ದಾರೆ. ಯಾರೂ ಇದನ್ನು ಪ್ರಯತ್ನಿಸಲು ಮುಂದಾಗಬೇಡಿ” ಎಂದು ಕೇಳಿಕೊಂಡಿದ್ದಾರೆ.
ನವದೆಹಲಿ: ಲಾಕ್‍ಡೌನ್‍ನಿಂದಾಗಿ ಮನೆಯಲ್ಲೇ ಕಾಲ ಕಳೆಯುತ್ತಿರುವ ಟೀಂ ಇಂಡಿಯಾ ಮಾಜಿ ಹಾಗೂ ಹಾಲಿ ಆಟಗಾರರು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದಾರೆ. ಅನೇಕರು ತಮ್ಮ ನೆಚ್ಚಿನ ನಾಯಕ ಯಾರು ಎಂದು ರಿವೀಲ್ ಮಾಡುತ್ತಿದ್ದಾರೆ. ಇತ್ತೀಚೆಗೆ ಮಾಜಿ ಆಲ್‍ರೌಂಡರ್ ಯುವರಾಜ್ ಸಿಂಗ್ ಅವರು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿಯನ್ನು ಬಣ್ಣಿಸಿದರೆ, ಸುರೇಶ್ ರೈನಾ ಅವರು ಮಹೇಂದ್ರ ಸಿಂಗ್ ಧೋನಿ ಅವರನ್ನು ತಮ್ಮ ನೆಚ್ಚಿನ ನಾಯಕ ಎಂದು ಹೊಗಳಿದ್ದರು. ಈಗ ಮಾಜಿ ಕ್ರಿಕೆಟಿಗ, ಸಂಸದ ಗೌತಮ್ ಗಂಭೀರ್ ಅವರು ಅನಿಲ್ ಕುಂಬ್ಳೆ ಅವರನ್ನು ಭಾರತದ ಅತ್ಯುತ್ತಮ ನಾಯಕ ಎಂದು ಬಣ್ಣಿಸಿದ್ದಾರೆ.
ಮಾಧ್ಯಮ ಸಂದರ್ಶನವೊಂದರಲ್ಲಿ ಮಾತನಾಡಿದ ಗಂಭೀರ್, ”ದಾಖಲೆಗಳ ವಿಷಯದಲ್ಲಿ ಎಂ.ಎಸ್.ಧೋನಿ ಅಗ್ರಸ್ಥಾನದಲ್ಲಿದ್ದಾರೆ. ಆದರೆ ನನ್ನ ಪ್ರಕಾರ ಕನ್ನಡಿಗ ಅನಿಲ್ ಕುಂಬ್ಳೆ ಒಬ್ಬ ಮಹಾನ್ ನಾಯಕ” ಎಂದು ಹೊಗಳಿದ್ದಾರೆ.
”ಅನಿಲ್ ಕುಂಬ್ಳೆ ಅವರು ದೀರ್ಘಕಾಲ ನಾಯಕತ್ವ ವಹಿಸಿದ್ದರೆ ಎಲ್ಲಾ ದಾಖಲೆಗಳನ್ನು ಮುರಿಯಬಹುದಿತ್ತು. ಸೌರವ್ ಗಂಗೂಲಿ ಅವರು ನಿಜವಾಗಿಯೂ ಉತ್ತಮ ನಾಯಕತ್ವ ವಹಿಸಿದ್ದರು. ಆದರೆ ಕುಂಬ್ಳೆ ಅವರು ದೀರ್ಘಕಾಲದವರೆಗೆ ನಾಯಕನಾಗಿರಬೇಕಿತ್ತು. ಕುಂಬ್ಳೆ ನಾಯಕತ್ವದಲ್ಲಿ ನಾನು 6 ಟೆಸ್ಟ್ ಪಂದ್ಯ ಆಡಿದ್ದೇನೆ. ನನ್ನ ವೃತ್ತಿಜೀವನದಲ್ಲಿ ಸಾಕಷ್ಟು ನಾಯಕರ ಅಡಿಯಲ್ಲಿ ಆಡಿದ್ದೇನೆ. ಅವರಲ್ಲಿ ಕುಂಬ್ಳೆ ಅತ್ಯಂತ ನಿಸ್ವಾರ್ಥ ಮತ್ತು ಪ್ರಾಮಾಣಿಕ ವ್ಯಕ್ತಿ. ಅವರಿಂದ ಬಹಳಷ್ಟು ಕಲಿತಿದ್ದೇನೆ” ಎಂದು ಹೇಳಿದರು.
ರಾಹುಲ್ ದ್ರಾವಿಡ್ ನಾಯಕತ್ವವನ್ನು ತ್ಯಜಿಸಿದ ಬಳಿಕ ಅನಿಲ್ ಕುಂಬ್ಳೆ 2007ರ ನವೆಂಬರ್ ನಲ್ಲಿ ಭಾರತೀಯ ತಂಡದ ಕ್ಯಾಪ್ಟನ್ ಜವಾಬ್ದಾರಿ ವಹಿಸಿಕೊಂಡರು. ಆಗ ಕುಂಬ್ಳೆ ಕ್ರಿಕೆಟಿಂಗ್ ವೃತ್ತಿಜೀವನದ 17ನೇ ವರ್ಷದಲ್ಲಿದ್ದರು. ಅದೇ ಸಮಯದಲ್ಲಿ, ಗಂಭೀರ್ ಐಪಿಎಲ್‍ನ ಯಶಸ್ವಿ ನಾಯಕರಲ್ಲಿ ಒಬ್ಬರಾಗಿದ್ದರು. ಅವರ ನಾಯಕತ್ವದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ಎರಡು ಬಾರಿ ಐಪಿಎಲ್ ಚಾಂಪಿಯನ್ ಆಗಿತ್ತು. ಅನಿಲ್ ಕುಂಬ್ಳೆ ಅವರು 132 ಟೆಸ್ಟ್ ಪಂದ್ಯಗಳಲ್ಲಿ 619 ವಿಕೆಟ್ ಮತ್ತು 271 ಏಕದಿನ ಪಂದ್ಯಗಳಲ್ಲಿ 337 ವಿಕೆಟ್ ಪಡೆದಿದ್ದಾರೆ.
ಗಂಭೀರ್ ಗಂಗೂಲಿ ನಾಯಕತ್ವದಲ್ಲಿ 2004ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಮುಂಬೈನಲ್ಲಿ ಟೆಸ್ಟ್ ಪಂದ್ಯಕ್ಕೆ ಪಾದಾರ್ಪಣೆ ಮಾಡಿದರು. ಆನಂತರ ಗಂಭೀರ್ ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ ಮತ್ತು ಧೋನಿ ನಾಯಕತ್ವದಲ್ಲಿ ಪಂದ್ಯಗಳನ್ನು ಆಡಿದ್ದಾರೆ. ಗಂಭೀರ್ 2007ರ ಟಿ20 ವಿಶ್ವಕಪ್ ಮತ್ತು 2011ರ ಏಕದಿನ ವಿಶ್ವಕಪ್ ವಿಜೇತ ತಂಡಗಳ ಸದಸ್ಯರಾಗಿದ್ದಾರೆ. 2011ರ ವಿಶ್ವಕಪ್ ಫೈನಲ್‍ನಲ್ಲಿ ಅವರು ಶ್ರೀಲಂಕಾ ವಿರುದ್ಧ 97 ರನ್ ಚಚ್ಚುವ ಮೂಲಕ ತಂಡದ ಗೆಲುವಿಗೆ ಕೊಡುಗೆ ನೀಡಿದರು. ಎಂ.ಎಸ್.ಧೋನಿ ನಾಯಕತ್ವದಲ್ಲಿ ಭಾರತವು ಟಿ20 ಹಾಗೂ ಏಕದಿನ ವಿಶ್ವಕಪ್‍ಗಳನ್ನು ಗೆದ್ದುಕೊಂಡಿತ್ತು.
ಗೌತಮ್ ಗಂಭೀರ್ 58 ಟೆಸ್ಟ್ ಪಂದ್ಯಗಳಲ್ಲಿ 4,154 ರನ್, 147 ಏಕದಿನ ಪಂದ್ಯಗಳಲ್ಲಿ 5,238 ರನ್ ಮತ್ತು 37 ಟಿ20 ಪಂದ್ಯಗಳಲ್ಲಿ 932 ರನ್ ಗಳಿಸಿದ್ದಾರೆ. ಈ ಹಿಂದೆ ಟ್ವೀಟ್ ಮಾಡಿದ್ದ ಗಂಭೀರ್, `ಕೇವಲ ಒಂದು ಜ್ಞಾಪನೆ: ವಿಶ್ವಕಪ್ 2011 ಅನ್ನು ಇಡೀ ಭಾರತ, ಇಡೀ ಭಾರತೀಯ ತಂಡ ಮತ್ತು ಬೆಂಬಲ ನೀಡಿದ ಎಲ್ಲಾ ಸಿಬ್ಬಂದಿ ಗೆದ್ದಿದ್ದಾರೆ. ನಿಮ್ಮ ಗೀಳಿಗಾಗಿ ಅನೇಕ ಬಾರಿ ಸಿಕ್ಸ್ ಸಿಡಿಸಿದ್ದೀರಿ’ ಎಂದು ಖಾರವಾಗಿ ಬರೆದುಕೊಂಡಿದ್ದರು.
ನವದೆಹಲಿ: ಟೀಂ ಇಂಡಿಯಾ ಮಾಜಿ ಆರಂಭಿಕ ಬ್ಯಾಟ್ಸ್‌ಮನ್ ವಾಸಿಮ್ ಜಾಫರ್ ತಂಡವೊಂದನ್ನು ರಚಿಸಿದ್ದು, ಅದರಲ್ಲಿ ಎಂ.ಎಸ್.ಧೋನಿ ಅವರೇ ನಾಯಕ, ವಿಕೆಟ್ ಕೀಪರ್ ಆಗಿದ್ದಾರೆ.
ಹೌದು. ವಾಸಿಮ್ ಜಾಫರ್ ತಮ್ಮ ಸಾರ್ವಕಾಲಿಕ ಏಕದಿನ ತಂಡವನ್ನು ಶನಿವಾರ ಆಯ್ಕೆ ಮಾಡಿದ್ದಾರೆ. ಅದರಲ್ಲಿ ಮಹೇಂದ್ರ ಸಿಂಗ್ ಧೋನಿ ಅವರಿಗೆ ನಾಯಕ ಸ್ಥಾನ ನೀಡಿದ್ದಾರೆ. ಜೊತೆಗೆ ಸಚಿನ್ ತೆಂಡೂಲ್ಕರ್ ಮತ್ತು ರೋಹಿತ್ ಶರ್ಮಾ ಅವರನ್ನು ತಂಡದಲ್ಲಿ ಓಪನರ್ ಆಗಿದ್ದಾರೆ. ಉಳಿದಂತೆ ವಿರಾಟ್ ಕೊಹ್ಲಿ ಅವರನ್ನು ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್‍ನಲ್ಲಿ ಇರಿಸಲಾಗಿದೆ. ಆಶ್ಚರ್ಯಕರ ಸಂಗತಿಯೆಂದರೆ, ಆಸ್ಟ್ರೇಲಿಯಾಕ್ಕೆ 2003 ಹಾಗೂ 2007ರಲ್ಲಿ ಏಕದಿನ ವಿಶ್ವಕಪ್ ತಂದುಕೊಟ್ಟ ರಿಕಿ ಪಾಂಟಿಂಗ್ ಅವರಿಗೆ ಜಾಫರ್ ತಮ್ಮ ತಂಡದಲ್ಲಿ 12ನೇ ಸ್ಥಾನ ನೀಡಿದ್ದಾರೆ.
ವೆಸ್ಟ್ ಇಂಡೀಸ್ ದಂತಕಥೆ ವಿವಿಯನ್ ರಿಚಡ್ರ್ಸ್ ಜಾಫರ್ ತಂಡದ ಮೂರನೇ ಕ್ರಮಾಂಕದ ಬ್ಯಾಟ್ಸ್‌ಮನ್ ಆಗಿದ್ದಾರೆ. ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಎಬಿ ಡಿವಿಲಿಯರ್ಸ್ 5ನೇ ಸ್ಥಾನದಲ್ಲಿದ್ದರೆ ಮತ್ತು ಇಂಗ್ಲೆಂಡ್ ಆಲೌರೌಂಡರ್ ಬೆನ್ ಸ್ಟೋಕ್ಸ್ ಆರನೇ ಸ್ಥಾನದಲ್ಲಿದ್ದಾರೆ.
ಒಬ್ಬ ಭಾರತೀಯ ಬೌಲರ್‌ಗೂ ಜಾಫರ್ ತಮ್ಮ ತಂಡದಲ್ಲಿ ಸ್ಥಾನ ನೀಡಿಲ್ಲ. ಅವರು ಪಾಕಿಸ್ತಾನದ ಸಕ್ಲೇನ್ ಮುಷ್ತಾಕ್ ಮತ್ತು ಆಸ್ಟ್ರೇಲಿಯಾದ ಶೇನ್ ವಾರ್ನ್ ಅವರನ್ನು ಸ್ಪಿನ್ನರ್ ಆಗಿ ಆಯ್ಕೆ ಮಾಡಿಕೊಂಡಿದ್ದಾರೆ. ವೇಗದ ಬೌಲರ್‌ಗಳಲ್ಲಿ ವಿಂಡೀಸ್‍ನ ಜೊವಾನ್ನೆ ಗಾರ್ನರ್, ಪಾಕಿಸ್ತಾನದ ದಂತಕಥೆ ವಾಸಿಮ್ ಅಕ್ರಮ್ ಮತ್ತು ಆಸ್ಟ್ರೇಲಿಯಾದ ಗ್ಲೆನ್ ಮೆಕ್‍ಗ್ರಾತ್ ಸೇರಿದ್ದಾರೆ.
ಧೋನಿ ನಾಯಕತ್ವ ಯಾಕೆ?:
ಟೀಂ ಇಂಡಿಯಾ ಮಾಜಿ ನಾಯಕ ಎಂ.ಎಸ್.ಧೋನಿ ಸದ್ಯ ಭಾರತ ತಂಡದಿಂದ ಹೊರಗುಳಿದಿದ್ದಾರೆ. ಜುಲೈನಲ್ಲಿ ನಡೆದ ಏಕದಿನ ವಿಶ್ವಕಪ್‍ನಲ್ಲಿ ಅವರು ಕೊನೆಯ ಬಾರಿಗೆ ನ್ಯೂಜಿಲೆಂಡ್ ವಿರುದ್ಧ ಸೆಮಿಫೈನಲ್ ಪಂದ್ಯದಲ್ಲಿ ಆಡಿದ್ದರು. ಧೋನಿ ಭಾರತದ ಪರ 90 ಟೆಸ್ಟ್, 350 ಏಕದಿನ ಮತ್ತು 98 ಟಿ20 ಪಂದ್ಯಗಳನ್ನು ಆಡಿದ್ದಾರೆ. ಅವರ ನಾಯಕತ್ವದಲ್ಲಿಯೇ ಭಾರತ ತಂಡವು 2007ರಲ್ಲಿ ಟಿ20 ಮತ್ತು 2011ರಲ್ಲಿ ಏಕದಿನ ವಿಶ್ವಕಪ್ ಗೆದ್ದಿತ್ತು. ಇದೇ ಕಾರಣಕ್ಕೆ ಧೋನಿ ಅವರನ್ನೇ ವಾಸಿಮ್ ಜಾಫರ್ ನಾಯಕನನ್ನಾಗಿ ಆಯ್ಕೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.
ದೇಶೀಯ ಕ್ರಿಕೆಟ್‍ನಲ್ಲಿ ಜಾಫರ್ ರನ್ ಮಳೆ:
ವಾಸಿಮ್ ಜಾಫರ್ ರಣಜಿ ಟ್ರೋಫಿ, ಇರಾನಿ ಟ್ರೋಫಿ ಮತ್ತು ದುಲೀಪ್ ಟ್ರೋಫಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ. ರಣಜಿಯಲ್ಲಿ 12,038 ರನ್, ಇರಾನಿ ಟ್ರೋಫಿಯಲ್ಲಿ 1,294 ರನ್ ಮತ್ತು ದುಲೀಪ್ ಟ್ರೋಫಿಯಲ್ಲಿ 2,545 ರನ್ ಗಳಿಸಿದ್ದಾರೆ. ಅವರು ಅತಿ ಹೆಚ್ಚು 156 ರಣಜಿ ಪಂದ್ಯಗಳನ್ನು ಆಡಿದ ಆಟಗಾರರಾಗಿದ್ದಾರೆ. ಜಾಫರ್ ಮುಂಬೈ ತಂಡಕ್ಕೆ ಎರಡು ಬಾರಿ ರಣಜಿ ಚಾಂಪಿಯನ್ ಪಟ್ಟ ತಂದುಕೊಟ್ಟಿದ್ದಾರೆ. ಜೊತೆಗೆ ಎರಡು ಬಾರಿ ರಣಜಿ ಪ್ರಶಸ್ತಿಯನ್ನು ಗೆದ್ದ ವಿದರ್ಭ ತಂಡದ ಸದಸ್ಯರಾಗಿದ್ದರು. ವಿಶೇಷವೆಂದರೆ ರಣಜಿಯಲ್ಲಿ 12 ಸಾವಿರಕ್ಕೂ ಹೆಚ್ಚು ರನ್ ಗಳಿಸಿದ ಏಕೈಕ ಆಟಗಾರ ಎಂಬ ಹೆಗ್ಗಳಿಕೆಯನ್ನು ಜಾಫರ್ ಪಡೆದುಕೊಂಡಿದ್ದಾರೆ.
ಕೋಲ್ಕತಾ: ಕೊರೊನಾ ವೈರಸ್ ವಿರುದ್ಧ ಹೋರಾಡಲು ರಾಜ್ಯ ಸರ್ಕಾರಕ್ಕೆ ನೆರವಾಗುವ ನಿಟ್ಟಿನಲ್ಲಿ ಪಶ್ಚಿಮ ಬಂಗಾಳದ ಕ್ರೀಡಾ ಸಚಿವ ಹಾಗೂ ಮಾಜಿ ಕ್ರಿಕೆಟಿಗ ಲಕ್ಷ್ಮಿ ರತನ್ ಶುಕ್ಲಾ ಅವರು ತಮ್ಮ ಮೂರು ತಿಂಗಳ ಸಂಬಳ ಮತ್ತು ಬಿಸಿಸಿಐ ಪಿಂಚಣಿಯನ್ನು ದಾನ ಮಾಡಿದ್ದಾರೆ.
ಲಕ್ಷ್ಮಿ ರತನ್ ಶುಕ್ಲಾ ಅವರು ಭಾರತದ ಮಾಜಿ ಆಟಗಾನಾಗಿದ್ದು, ಈಗ ಪ್ರಸ್ತುತ ಪಶ್ಚಿಮ ಬಂಗಾಳದ ಕ್ರೀಡಾ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದರ ಜೊತೆಗೆ ಐಪಿಎಲ್‍ನಲ್ಲಿ ಕೋಲ್ಕತಾ ನೈಟ್ ರೈಡರ್ಸ್ ಪರವಾಗಿ ಆಟವಾಡಿದ್ದಾರೆ. ಹಾಗಾಗಿ ಈಗ ರಾಜ್ಯ ಕೊರೊನಾ ವೈರಸ್ ಭೀತಿಯನ್ನು ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಅವರು ಧನಸಹಾಯ ಮಾಡುವ ನಿರ್ಧಾರ ಮಾಡಿದ್ದಾರೆ.
ಈ ವಿಚಾರವಾಗಿ ಮಾತನಾಡಿರುವ ಅವರು, ನಾವೆಲ್ಲರೂ ನಮ್ಮ ಸಾಮಥ್ರ್ಯಕ್ಕೆ ಅನುಗುಣವಾಗಿ ನಮ್ಮ ಕೊಡುಗೆ ನೀಡುವ ಸಮಯ ಬಂದಿದೆ. ನಾನು ಈಗಾಗಲೇ ನನ್ನ ಶಾಸಕ ಸ್ಥಾನದ ಮೂರು ತಿಂಗಳ ಸಂಬಳವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಿದ್ದೇನೆ. ಅಲ್ಲದೆ ನನಗೆ ಬಿಸಿಸಿಐನಿಂದ ಪಿಂಚಣಿ ಬರುತ್ತದೆ. ನಾನು ಬಿಸಿಸಿಐ ಪಿಂಚಣಿಯ ಮೂಲಕ ಬರುವ ಮೂರು ತಿಂಗಳ ಹಣವನ್ನು ಸಹ ದೇಣಿಗೆ ನೀಡಿದ್ದೇನೆ ಎಂದು ತಿಳಿಸಿದ್ದಾರೆ.
ಶುಕ್ಲಾ ಅವರು 1999ರಲ್ಲಿ ಭಾರತಕ್ಕಾಗಿ ಮೂರು ಏಕದಿನ ಪಂದ್ಯಗಳನ್ನು ಆಡಿದ್ದರು. ಆದರೆ ನಂತರ ಪಾದದ ಗಾಯದಿಂದಾಗಿ ಅವರ ವೃತ್ತಿಜೀವನವನ್ನು ಮೊಟಕುಗೊಳಿಸಬೇಕಾಯಿತು. ಆದರೆ ಅವರು ದೇಶೀಯ ಕ್ರಿಕೆಟ್‍ನಲ್ಲಿ ಗೌರವಾನ್ವಿತ ಆಲ್‍ರೌಂಡರ್ ಆಗಿದ್ದರು. 100ಕ್ಕೂ ಹೆಚ್ಚು ಪ್ರಥಮ ದರ್ಜೆ ಪಂದ್ಯಗಳಲ್ಲಿ ಬಂಗಾಳ ಮತ್ತು ಪೂರ್ವ ವಲಯವನ್ನು ಪ್ರತಿನಿಧಿಸಿದ್ದರು. ಇದರ ಜೊತೆಗೆ ಐಪಿಎಲ್ ವಿಜೇತ ಕೋಲ್ಕತಾ ನೈಟ್ ರೈಡರ್ಸ್ ತಂಡದಲ್ಲಿ ಆಡಿದ್ದರು.
ಕೊರೊನಾ ವೈರಸ್ ದೇಶದಲ್ಲಿ ಭಯದ ವಾತಾವರಣವನ್ನು ಸೃಷ್ಟಿ ಮಾಡಿದೆ. ಭಾರತದಲ್ಲಿ ಇಲ್ಲಿಯವರೆಗೆ ಸುಮಾರು 851 ಜನರು ಕೊರೊನಾ ವೈರಸ್ ಸೋಂಕಿಗೆ ತುತ್ತಾಗಿದ್ದಾರೆ. ಜೊತೆಗೆ 20 ಜನ ಸಾವನ್ನಪ್ಪಿದ್ದಾರೆ. ಹಾಗೇಯೆ ಪಶ್ಚಿಮ ಬಂಗಾಳದಲ್ಲಿ 10 ಕೊರೊನಾ ಪಾಸಿಟಿವ್ ಪ್ರಕರಣಗಳು ಕಂಡು ಬಂದರೆ, ಓರ್ವ ಇದರಿಂದ ಸಾವನ್ನಪ್ಪಿದ್ದಾನೆ. ವಿಶ್ವದಲ್ಲಿ 5 ಲಕ್ಷಕ್ಕೂ ಹೆಚ್ಚು ಕೊರೊನಾ ವೈರಸ್ ಸೋಂಕಿತರಿದ್ದು, ಸಾವನ್ನಪ್ಪಿದ್ದವರ ಸಂಖ್ಯೆ 24 ಸಾವಿರ ದಾಟಿದೆ.
– ತೆಂಡೂಲ್ಕರ್ ಯುವಕರಿಗೆ ಆಟದ ಸೂಕ್ಷ್ಮ ವ್ಯತ್ಯಾಸಗಳನ್ನು ಕಲಿಸಲಿಲ್ಲ
ಇಸ್ಲಾಮಾಬಾದ್: ಟೀಂ ಇಂಡಿಯಾ ಮಾಜಿ ಕ್ರಿಕೆಟರ್ ಸಚಿನ್ ತೆಂಡೂಲ್ಕರ್ ಶ್ರೇಷ್ಠ ಬ್ಯಾಟ್ಸ್‌ಮನ್. ಅಷ್ಟೇ ಅಲ್ಲದೆ ಅಪಾಯಕಾರಿ ಬೌಲರ್ ಕೂಡ ಹೌದು ಎಂದು ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಇಂಜಮಾಮ್-ಉಲ್-ಹಕ್ ಹೇಳಿದ್ದಾರೆ.
ಇಂಜಮಾಮ್ ತಮ್ಮ ಯೂಟ್ಯೂಬ್ ಚಾನೆಲ್‍ನಲ್ಲಿ ಸಚಿನ್ ತೆಂಡೂಲ್ಕರ್ ಅವರ ಬಗ್ಗೆ ಪೂರ್ಣ ಸಂಚಿಕೆ ಅಪ್ಲೋಡ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಸಚಿನ್ ಅವರನ್ನು ಹೊಗಳಿದ್ದಾರೆ. ಜೊತೆಗೆ ಸಚಿನ್ ಅವರು ಯುವಕರಿಗೆ ಆಟದ ಸೂಕ್ಷ್ಮ ವ್ಯತ್ಯಾಸಗಳನ್ನು ಕಲಿಸಲಿಲ್ಲ ಎಂದು ದೂರಿದ್ದಾರೆ.
ನಾನು ವಿಶ್ವದ ಎಲ್ಲಾ ಲೆಗ್ ಸ್ಪಿನ್ನರ್‌ಗಳನ್ನು ಎದುರಿಸಿದ್ದೇನೆ. ಯಾರೇ ಗೂಗ್ಲಿ ಎಸೆದರೂ ನನಗೆ ಯಾವುದೇ ಸಮಸ್ಯೆ ಆಗುತ್ತಿರಲಿಲ್ಲ. ಆದರೆ ಸಚಿನ್ ಅವರ ಗೂಗ್ಲಿ ಎಸೆತಗಳನ್ನು ಎದುರಿಸುವಲ್ಲಿ ಪರದಾಡುತ್ತಿದ್ದೆ. ಇದೇ ಕಾರಣಕ್ಕೆ ಸಚಿನ್ ಅನೇಕ ಬಾರಿ ನನ್ನ ವಿಕೆಟ್ ಕಿತ್ತು, ಪೆವಿಲಿಯನ್‍ಗೆ ಅಟ್ಟಿದ್ದರು ಎಂದು ಇಂಜಮಾಮ್ ಹೇಳಿದ್ದಾರೆ.
ಅತ್ಯಂತ ಶ್ರೇಷ್ಠ ಪದವಿ ಇದ್ದರೆ, ಅದನ್ನು ಸಚಿನ್ ಅವರಿಗೆ ನೀಡಲು ಬಯಸುತ್ತೇನೆ. 16ನೇ ವಯಸ್ಸಿನಲ್ಲಿ ಅವರು ಇಮ್ರಾನ್ ಖಾನ್, ವಾಕರ್ ಯೂನಿಸ್ ಮತ್ತು ವಾಸಿಮ್ ಅಕ್ರಮ್ ಅವರಂತಹ ಬೌಲರ್‍ಗಳನ್ನು ಎದುರಿಸಿದ್ದರು. ಸಚಿನ್ ಚೊಚ್ಚಲ ಸರಣಿಯ ಪಂದ್ಯವೊಂದರಲ್ಲಿ ಪೇಶಾವರದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದರು. ಅವರು ಮುಷ್ತಾಕ್ ಅಹ್ಮದ್ ಅವರ ಎಸೆತದಲ್ಲಿ ಸಿಕ್ಸರ್ ಸಿಡಿಸಿದರು. ನಂತರ ವಿಶ್ವದ ಶ್ರೇಷ್ಠ ಲೆಗ್ ಸ್ಪಿನ್ನರ್ ಗಳಲ್ಲಿ ಒಬ್ಬರಾದ ಅಬ್ದುಲ್ ಖಾದಿರ್ ಅವರನ್ನು ಎದುರಿಸಿದ್ದರು. ಪಂದ್ಯದ ವೇಳೆ ಖಾದಿರ್ ಅವರು, ಸಚಿನ್ ಅವರನ್ನು ಕೆಣಕಿದ್ದರು. ಆಗ ಪ್ರತ್ಯುತ್ತರವಾಗಿ ಸಚಿನ್ ಕದೀರ್ ಅವರು ಎಸೆದ ಓವರಿನಲ್ಲಿ ನಾಲ್ಕು ಸಿಕ್ಸರ್ ಸಿಡಿಸಿದ್ದರು ಎಂದು ಇಂಜಮಾಮ್ ನೆನೆದಿದ್ದಾರೆ.
ಸಚಿನ್ ಯುಗವನ್ನು ಬದಲಾಯಿಸಿದ್ರು:
‘ಯಾವುದೇ ಶ್ರೇಷ್ಠ ಬ್ಯಾಟ್ಸ್‍ಮನ್‍ಗಳು 8 ಸಾವಿರಕ್ಕೂ ಹೆಚ್ಚು ರನ್ ಗಳಿಸಲು ಸಾಧ್ಯವಾಗದ ಅವಧಿಯಲ್ಲಿ ಸಚಿನ್ ಆಡಿದ್ದರು. ಈ ವೇಳೆ ಭಾರತದ ಮಾಜಿ ಕ್ರಿಕೆಟರ್ ಸುನಿಲ್ ಗವಾಸ್ಕರ್ ಅವರು 10 ಸಾವಿರ ರನ್ ಗಳಿಸಿದ್ದರು. ಆದರೆ ಸಚಿನ್ ಅವರಿಂದ ಸ್ಫೂರ್ತಿ ಪಡೆದು 35 ಸಾವಿರ ರನ್ ಗಳಿಸಿದ್ದಾರೆ. ಅವರ ದಾಖಲೆಯನ್ನು ಯಾರು ಮುರಿಯುತ್ತಾರೆ ಎಂಬುದನ್ನು ಈಗ ನೋಡಬೇಕಿದೆ. ಜಗತ್ತಿನಲ್ಲಿ ಸಚಿನ್ ಅವಗಿರುವಷ್ಟು ಯಾವ ಕ್ರಿಕಟ್ ಆಟಗಾರರಿಗೂ ಅಭಿಮಾನಿಗಳಿಲ್ಲ. ಸಚಿನ್ ಬೌಲರ್ ಆಗಿರಲಿಲ್ಲ. ಆದರೆ ಅವರು ಮಧ್ಯಮ ವೇಗಿ ಹಾಗೂ ಲೆಗ್ ಸ್ಪಿನ್ನರ್ ಆಗಿ ಮಿಂಚಿದ್ದಾರೆ’ ಎಂದು ಹೇಳಿದರು.
ಕೊನೆಗೆ ಇಂಜಮಾಮ್ ಸಚಿನ್‍ಗೆ ಒಂದು ಸಂದೇಶ ನೀಡಿದರು. ‘ಈ ಮಹಾನ್ ಆಟಗಾರನಿಂದ ನನಗೆ ದೂರು ಇದೆ. ತಾವು ಹೊಂದಿದ್ದ ಸಾಮರ್ಥ್ಯ ಮತ್ತು ಪ್ರತಿಭೆಯನ್ನು ಯುವ ಆಟಗಾರರೊಂದಿಗೆ ಹಂಚಿಕೊಳ್ಳಲಿಲ್ಲ. ಅವರು ತಮ್ಮ ಅನುಭವವನ್ನು ಬೇರೆಯವರೊಂದಿಗೆ, ವಿಶೇಷವಾಗಿ ಯುವಕರೊಂದಿಗೆ ಹಂಚಿಕೊಳ್ಳದೆ ಕ್ರಿಕೆಟ್‍ನಿಂದ ದೂರವಿರುವುದು ಸರಿಯಲ್ಲ. ಸಚಿನ್ ಇದರ ಬಗ್ಗೆ ಯೋಚಿಸಬೇಕು ಎಂದು ನಾನು ಭಾವಿಸುತ್ತೇನೆ ಎಂದು ಕೇಳಿಕೊಂಡಿದರು.