Tag: former corporator

  • ಜೆಡಿಎಸ್‍ನ ಮಾಜಿ ಕಾರ್ಪೋರೇಟರ್ ಅರೆಸ್ಟ್

    ಜೆಡಿಎಸ್‍ನ ಮಾಜಿ ಕಾರ್ಪೋರೇಟರ್ ಅರೆಸ್ಟ್

    ಬೆಂಗಳೂರು: 176ನೇ ವಾರ್ಡ್‍ನ ಜೆಡಿಎಸ್ ಮಾಜಿ ಕಾರ್ಪೋರೇಟರ್ ದೇವದಾಸ್‍ರನ್ನು ಮದನಪಲ್ಲಿ ಪೊಲೀಸರಿಂದ ಬಂಧಿಸಲಾಗಿದೆ.

    ದೇವದಾಸ್ ಅವರು 2015 ರಿಂದ 20 ರವರೆಗೆ 176 ವಾರ್ಡ್‍ನಲ್ಲಿ ಕಾರ್ಪೋರೇಟರ್ ಆಗಿದ್ದರು. ವಂಚನೆ ಪ್ರಕರಣ ಆರೋಪದ ಹಿನ್ನೆಲೆ ಅವರನ್ನು ಇಂದು ಬಂಧಿಸಲಾಗಿದೆ. ಅವರು 1 ಕೋಟಿ ವಂಚಿಸಿದ್ದಾರೆಂದು ಮದಪಲ್ಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಇದನ್ನೂ ಓದಿ: ಬಿಜೆಪಿ ಶಾಸಕನಿಂದ 25 ವರ್ಷದ ಯುವತಿ ಕಿಡ್ನಾಪ್ – ಕೇಸ್ ದಾಖಲು

    ಮದನಪಲ್ಲಿ ಶಾಸಕ ಮಹಮ್ಮದ್ ನವಾಝ್ ಪಾಷಾ ಎಂಬವರಿಗೆ ಬಿಟಿಎಂ ಲೇಔಟ್‍ನಲ್ಲಿ ಜಾಗ ಕೊಡಿಸುವುದಾಗಿ ವಂಚಿಸಿದ್ದಾರೆ ಎಂಬ ಆರೋಪ ವ್ಯಕ್ತವಾಗಿದೆ. ಇದನ್ನೂ ಓದಿ: ಹಿಜಬ್ ಗಲಾಟೆ ಬೆನ್ನಲ್ಲೇ ರಾಜೀನಾಮೆ ನೀಡಿದ ಬೆಂಗಳೂರು ಶಿಕ್ಷಕಿ

    ಎಮ್‍ಎಲ್‍ಎಯು 75 ಲಕ್ಷ ರೂ. ನಗದು ಮತ್ತು 25 ಲಕ್ಷ ರೂ. ಬ್ಯಾಂಕ್ ವಿನಿಮಯ ಮಾಡಿದ್ದು, 2 ವರ್ಷದ ಹಿಂದೆಯೇ ಮದನಪಲ್ಲಿ ಶಾಸಕರಿಗೆ ಹಣ ನೀಡಿದ್ದರು. ಸದ್ಯ ಮಾಜಿ ಪಾಲಿಕೆ ಸದಸ್ಯ ದೇವದಾಸ್ ಬಿಜೆಪಿಯಲ್ಲಿದ್ದಾರೆ.

  • ರೇಖಾ ಕದಿರೇಶ್ ಹತ್ಯೆ ಹಿಂದೆ ನಾದಿನಿ ಕೈವಾಡ? – ನಾದಿನಿ ಮಾಲಾ, ಮಗ ಅರುಳ್ ಅರೆಸ್ಟ್

    ರೇಖಾ ಕದಿರೇಶ್ ಹತ್ಯೆ ಹಿಂದೆ ನಾದಿನಿ ಕೈವಾಡ? – ನಾದಿನಿ ಮಾಲಾ, ಮಗ ಅರುಳ್ ಅರೆಸ್ಟ್

    ಬೆಂಗಳೂರು: ಮಾಜಿ ಕಾರ್ಪೋರೇಟರ್ ರೇಖಾ ಕದಿರೇಶ್ ಕೊಲೆ ಪ್ರಕರಣಕ್ಕೆ ಮತ್ತೊಂದು ಮೇಜರ್ ಟ್ವಿಸ್ಟ್ ಸಿಕ್ಕಿದೆ. ರೇಖಾ ಕೊಲೆಯಾದ ದಿನ ಕಣ್ಣೀರು ಹಾಕ್ತಿದ್ದ ನಾದಿನಿ ಮಾಲ ಮತ್ತು ಮಗ ಅರುಳನೇ ಕೊಲೆ ಹಿಂದಿನ ಮಾಸ್ಟರ್ ಮೈಂಡ್ ಗಳು ಅನ್ನೋ ಶಾಕಿಂಗ್ ವಿಚಾರ ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ

    ವರಸೆಯಲ್ಲಿ ರೇಖಾ ಕದಿರೇಶ್‍ಗೆ ನಾದಿಯಾಗಬೇಕು. ರೇಖಾ ಕೊಲೆಯಾದ ದಿನ ಮಾಲಾ ಓವರ್ ಆಕ್ಟಿಂಗ್ ಮಾಡಿ ಕಣ್ಣೀರು ಹಾಕುವಾಗಲೇ ಪೊಲೀಸರಿಗೆ ಡೌಟ್ ಶುರುವಾಗಿತ್ತು. ತಕ್ಷಣ ಅಲರ್ಟ್ ಆದ ಪೊಲೀಸರು ಮಾಲಾ ಮೇಲೆ ಒಂದು ಕಣ್ಣಿಟ್ಟಿದ್ದರು. ಮೊದಲಿಗೆ ಕೊಲೆ ಮಾಡಿದ ಆರೋಪಿಗಳ ಬೆನ್ನು ಬಿದ್ದು ಪ್ರಮುಖ ಆರೋಪಿ ಪೀಟರ್ ಮತ್ತು ಸೂರ್ಯನಿಗೆ ಗುಂಟೇಟು ಹೊಡೆದು, ಮತ್ತೆ ಮೂವರು ಸೇರಿದಂತೆ ಒಟ್ಟು ಐವರನ್ನು ಬಂಧಿಸಿದ್ದರು. ಈ ಐವರ ವಿಚಾರಣೆ ವೇಳೆ ರೇಖಾ ಕದಿರೇಶ್ ಕೊಲೆಯ ಹಿಂದಿನ ಮಾಸ್ಟರ್ ಮೈಂಡ್‍ಗಳು ಮಾಲ ಮತ್ತು ಮಾಲನ ಮಗ ಅರುಳ್ ಕೈವಾಡದ ಬಗ್ಗೆ ಬಾಯಿ ಬಿಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಛಲವಾದಿಪಾಳ್ಯದಲ್ಲಿ ಕದಿರೇಶ್ ಕಾರ್ಪೋರೇಟರ್ ಆಗಿದ್ದ ವೇಳೆ ಈಗ ಅರೆಸ್ಟ್ ಆಗಿರುವ ಪೀಟರ್, ಅರುಣ್, ಸೂರ್ಯ, ಸ್ಟೀಫನ್, ಪುರುಷೋತ್ತಮ ಸೇರಿದಂತೆ ಎಲ್ಲರು ಕೂಡ ಕದಿರೇಶ್ ಗೆ ತುಂಬಾ ಆಪ್ತರಾಗಿದ್ದರು. ಕದಿರೇಶ್ ಕೂಡ ಇವರನ್ನೆಲ್ಲಾ ಚೆನ್ನಾಗಿ ನೋಡಿಕೊಳ್ಳುತ್ತಿದ್ದ. ಅಕ್ಕ ಮಾಲಾ ಕೂಡ ಏರಿಯಾದಲ್ಲಿ ಹವಾ ಮೆಂಟೈನ್ ಮಾಡ್ಕೊಂಡಿದ್ಳು. ಆದರೆ ಕದಿರೇಶ್ ಕೊಲೆಯಾಗಿ, ರೇಖಾ ಕಾರ್ಪೋರೇಟರ್ ಆದಾಗ ಇವರೆಲ್ಲರನ್ನೂ ದೂರ ಇಟ್ಟಿದ್ದರು. ಇದರಿಂದ ಆಕ್ರೋಶಗೊಂಡಿದ್ದ ಮಾಲಾ ಮತ್ತು ಮಗ ಅರುಳ್‍ಗೆ ಪೀಟರ್ ಸಾಥ್ ನೀಡಿದ್ದ. ರೇಖಾ ಬದುಕಿರೋ ತನಕ ನಮಗೆ ಉಳಿಗಾಲವಿಲ್ಲ. ಅವಳನ್ನ ಮುಗಿಸೋಕೆ ಪ್ಲಾನ್ ಮಾಡಿ, ಕೇಸು, ಜಾಮೀನು, ನಾವ್ ನೋಡ್ಕೋತಿವಿ ಅಂತಾ ಮಾಲ ಮತ್ತು ಮಗ ಆರುಳ್ ಹತ್ಯೆ ಗೆ ಡೀಲ್ ನೀಡಿದ್ದರು ಅಂತ ತನಿಖೆಯಲ್ಲಿ ಗೊತ್ತಾಗಿದೆ. ಇದನ್ನೂ ಓದಿ: ಸ್ವಂತ ಮಗುವನ್ನೇ ಕೊಂದು ಹೂತುಹಾಕಿದ ಪೋಷಕರು – ಮೃತದೇಹ ಹೊರತೆಗೆದು ಪರಿಶೀಲನೆ

    ತಮ್ಮನ ಹೆಂಡತಿಗೆ ಸ್ಕೆಚ್ ಹಾಕಿ ಕೊಲೆ ಮಾಡಿಸಿದ್ದು ನಾದಿನಿ ಮಾಲ ಅಂತಾ ತಿಳಿದ ಸ್ಥಳೀಯರು ಶಾಕ್ ಆಗಿದ್ದಾರೆ. ಸದ್ಯ ರೇಖಾ ಕದಿರೇಶ್ ಹತ್ಯೆ ಪ್ರಕರಣ ದಲ್ಲಿ ಏಳು ಜನರ ಬಂಧನವಾಗಿದ್ದು, ಇನ್ನೂ ಯಾರ್ಯಾರು ಈ ಕೊಲೆಯ ಹಿಂದಿದ್ದಾರೆ ಅನ್ನೋದು ಪೊಲೀಸರ ತನಿಖೆಯಿಂದ ಬಹಿರಂಗವಾಗಬೇಕಿದೆ. ಇದನ್ನೂ ಓದಿ: ರೇಖಾ ಕದಿರೇಶ್ ಕೊಲೆ ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್ – ಬಯಲಾಯ್ತು ಮರ್ಡರ್ ರಹಸ್ಯ

  • ರೇಖಾ ಕದಿರೇಶ್ ಕೊಲೆ ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್ – ಬಯಲಾಯ್ತು ಮರ್ಡರ್ ರಹಸ್ಯ

    ರೇಖಾ ಕದಿರೇಶ್ ಕೊಲೆ ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್ – ಬಯಲಾಯ್ತು ಮರ್ಡರ್ ರಹಸ್ಯ

    ಬೆಂಗಳೂರು: ಬಿಜೆಪಿಯ ಮಾಜಿ ಕಾರ್ಪೊರೇಟರ್ ರೇಖಾ ಕದಿರೇಶ್ ಕೊಲೆ ಪ್ರಕರಣ ಇದೀಗ ಸ್ಫೋಟಕ ತಿರುವುದು ಪಡೆದುಕೊಂಡಿದ್ದು, ಹತ್ಯೆಯ ರಹಸ್ಯ ಬಯಲಾಗುತ್ತಿದೆ.

    ಪ್ರಕರಣ ಸಂಬಂಧ ಪೊಲೀಸರು ರೇಖಾ ಕದಿರೇಶ್ ಅತ್ತಿಗೆ ಮಾಲಾ, ಮಾಲಾ ಪುತ್ರ ಅರುಳ್ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಆರೋಪಿ ಪೀಟರ್, ರೇಖಾ ಕದಿರೇಶ್ ಹತ್ಯೆಗೆ 4 ತಿಂಗಳ ಟಾರ್ಗೆಟ್ ನೀಡಲಾಗಿತ್ತು. ಕೊಲೆಗೆ 4 ತಿಂಗಳಿಂದಲೇ ಹತ್ಯೆ ಮಾಡಲು ಪಾತಕಿಗಳು ತಯಾರಿ ಮಾಡಲಾಗಿತ್ತು. ಕೊಲೆ ಬಳಿಕ ತಪ್ಪಿಸಿಕೊಳ್ಳಲು ಗ್ಯಾಂಗ್ 20 ಲಕ್ಷ ರೂಪಾಯಿ ಕೇಳಿತ್ತು ಎಂದು ಪೊಲೀಸರ ಮುಂದೆ ಪಾತಕಿ ಪೀಟರ್ ಹೇಳಿದ್ದಾನೆ.

    ಮತ್ತೆ ಮೂವರ ಬಂಧನ:
    ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮತ್ತೆ ಮೂವರನ್ನು ಬಂಧಿಸಿದ್ದಾರೆ. ಬಂಧಿತರನ್ನು ಸ್ಟೀಫನ್, ಅಜಯ್, ಪುರುಷೋತ್ತಮ್ ಎಂದು ಗುರುತಿಸಲಾಗಿದೆ. ಇವರು ಕೊಲೆ ನಡೆದಾಗ ಸ್ಥಳದಲ್ಲೇ ಇದ್ದ ಜನ ಅಡ್ಡಬರದಂತೆ ತಡೆದಿದ್ದರು. ಪೀಟರ್ ಹಾಗೂ ಸೂರ್ಯ ಚಾಕುವಿನಿಂದ ಇರಿಯುವ ವೇಳೆ ಈ ಮೂವರು ಅಲ್ಲೇ ಇದ್ದರು. ಅಲ್ಲದೆ ಪುರುಷೋತ್ತಮ್ ಸಿಸಿಟಿವಿಗಳನ್ನು ತಿರುಗಿಸಿ ಕೃತ್ಯಕ್ಕೆ ಸಹಕರಿಸಿದ್ದ.

    ಕೊಲೆಯ ಬಳಿಕ ಆಟೋ ಚಾಲಕ ಡಿಸೋಜಾ, ಹುಸ್ಕೂರಿಗೆ ಬಿಟ್ಟು ಬಂದಿದ್ದ. ಹೀಗಾಗಿ ಸದ್ಯ ಪೀಟರ್, ಸೂರ್ಯ ಎಸ್ಕೇಪ್‍ಗೆ ಸಹಕರಿಸಿದ್ದ ಆಟೋ ಚಾಲಕನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಇದನ್ನೂ ಓದಿ: 67ನೇ ವಯಸ್ಸಿನಲ್ಲಿ ಪಿಹೆಚ್‍ಡಿ ಪಡೆದ ವೃದ್ಧೆ

    ಚಪ್ಪಲಿ ಏಟು ತಿಂದಿದ್ದ ಪೀಟರ್:
    ಈ ಹಿಂದೆ ಆರೋಪಿ ಪೀಟರ್, ರೇಖಾ ಕದಿರೇಶ್ ಕೈಯಲ್ಲಿ ಚಪ್ಪಲಿ ಏಟು ತಿಂದಿದ್ದ. ರೇಖಾ ವೈಯಕ್ತಿಕ ಜೀವನದ ಬಗ್ಗೆ ಪೀಟರ್ ವದಂತಿ ಹಬ್ಬಿಸಿದ್ದ. ಇದೇ ಸಿಟ್ಟಲ್ಲಿ ಪೀಟರ್‍ಗೆ ಚಪ್ಪಲಿಯಿಂದ ರೇಖಾ ಬಾರಿಸಿದ್ದರು. ಆ ಬಳಿಕದಿಂದ ರೇಖಾಗೆ ಗೊತ್ತಾಗದಂತೆ ಏರಿಯಾದಲ್ಲಿ ವ್ಯವಹಾರಗಳಲ್ಲಿ ತಲೆಹಾಕ್ತಿದ್ದ. ಹೀಗಾಗಿ ಪೀಟರ್‍ನನ್ನು ರೇಖಾ ಕದಿರೇಶ್ ದೂರ ಇಟ್ಟಿದ್ದರು. ಗಾಂಜಾ ಕೇಸ್, ಗಲಾಟೆ ಕೇಸ್‍ನಲ್ಲಿ ರೇಖಾ, ಪೀಟರ್‍ಗೆ ಸಹಾಯ ಮಾಡುತ್ತಿರಲಿಲ್ಲ. ಇದೇ ಸಿಟ್ಟಲ್ಲಿ ಒಂದೂವರೆ ವರ್ಷದ ಹಿಂದೆ ಇಬ್ಬರ ಮಧ್ಯೆ ದ್ವೇಷ ಶುರುವಾಗಿತ್ತು.

    ಕಣ್ಣೀರಾಕಿದ್ದ ನಾದಿನಿ ವಶಕ್ಕೆ:
    ರೇಖಾ ಕದಿರೇಶ್ ಹತ್ಯೆಯ ದಿನ ಕಣ್ಣೀರು ಹಾಕಿದ್ದ ನಾದಿನಿಯನ್ನು ಇದೀಗ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಅಲ್ಲದೆ ಕದಿರೇಶ್ ನಾದಿನಿ ಮಾಲಾ, ಪುತ್ರ ಅರುಳ್ ನನ್ನು ಕೂಡ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇವರಿಬ್ಬರ ಮೇಲೆ ರೇಖಾ ಕದಿರೇಶ್ ಹತ್ಯೆಗೆ ಪಿತೂರಿ ನಡೆದಿರುವ ಆರೋಪ ಕೇಳಿಬಂದಿದೆ. ಇದನ್ನೂ ಓದಿ: ಸ್ವಂತ ಮಗುವನ್ನೇ ಕೊಂದು ಹೂತುಹಾಕಿದ ಪೋಷಕರು – ಮೃತದೇಹ ಹೊರತೆಗೆದು ಪರಿಶೀಲನೆ

    ರಾಜಕೀಯಕ್ಕಾಗಿ ಮಾಲಾ ಕುಟುಂಬ ನಾದಿನಿಗೆ ಸ್ಕೆಚ್ ಹಾಕಿತ್ತು. ಕಾರ್ಪೋರೇಟರ್ ಚುನಾವಣೆಯಲ್ಲಿ ನಿಲ್ಲಲು ಲೆಕ್ಕಾಚಾರ ಹಾಕಿದ್ದರು. ಆದರೆ ಸಹೋದರನ ಪತ್ನಿ ರೇಖಾ ಕದಿರೇಶ್ ಅಡ್ಡಿ ಎಂಬ ಲೆಕ್ಕಾಚಾರ ಇತ್ತು. ಹೀಗಾಗಿ ರೇಖಾ ಕದಿರೇಶ್ ಮುಗಿಸಿಬಿಟ್ಟರೆ ಸುಲಭ ಆಗುತ್ತೆ ಎಂಬ ದುರಾಸೆ ಅವರಲ್ಲಿತ್ತು. ಹೀಗಾಗಿ ಪೀಟರ್ ಮೂಲಕ ರೇಖಾ ಕದಿರೇಶ್ ಹತ್ಯೆಗೆ ಪಿತೂರಿ ನಡೆದಿತ್ತು ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಹತ್ಯೆಯ ದೃಶ್ಯ ಮೊಬೈಲ್ ನಲ್ಲಿ ಸೆರೆ:
    ರೇಖಾ ಕದಿರೇಶ್ ಹತ್ಯೆಯ ದೃಶ್ಯಾವಳಿ ಮೊಬೈಲ್‍ನಲ್ಲಿ ಸೆರೆಯಾಗಿದೆ. ಕಾರ್ಪೋರೇಟರ್ ಕಚೇರಿ ಪಕ್ಕದಲ್ಲೇ ನೆಲಕ್ಕುರುಳಿಸಿ ಕೊಲೆ ಮಾಡಲಾಗಿದೆ. ಆರೋಪಿಗಳಾದ ಪೀಟರ್ ಹಾಗೂ ಸೂರ್ಯ ರೇಖಾಗೆ ಚಾಕು, ಡ್ರ್ಯಾಗರ್‍ನಿಂದ ಇರಿದಿದ್ದರು. ಇತ್ತ ಕೊಲೆಗೆ ಅಡ್ಡಿ ಆಗದಂತೆ ಸ್ಟೀಫನ್ ಹಾಗೂ ಅಜಯ್ ರಕ್ಷಣೆಗೆ ನಿಂತಿದ್ದು, ಸದ್ಥಳಕ್ಕೆ ಬಂದವರ ಮೇಲೆ ಕುರ್ಚಿಯನ್ನು ಎಸೆದಿದ್ದರು. ಕೊಲೆಗೂ ಮೊದಲು ಆರೋಪಿ ಪುರುಷೋತ್ತಮ ಸಿಸಿಟಿವಿ ತಿರುಗಿಸಿದ್ದ.

  • ಮಾಜಿ ಕಾರ್ಪೊರೇಟರ್ ಹತ್ಯೆ ಪ್ರಕರಣದ ಸಂಪೂರ್ಣ ತನಿಖೆ ನಡೆಸುವಂತೆ ಸೂಚನೆ: ಬೊಮ್ಮಾಯಿ

    ಮಾಜಿ ಕಾರ್ಪೊರೇಟರ್ ಹತ್ಯೆ ಪ್ರಕರಣದ ಸಂಪೂರ್ಣ ತನಿಖೆ ನಡೆಸುವಂತೆ ಸೂಚನೆ: ಬೊಮ್ಮಾಯಿ

    ಹಾವೇರಿ: ಬೆಂಗಳೂರಿನಲ್ಲಿ ನಡೆದ ಮಾಜಿ ಕಾರ್ಪೊರೇಟರ್ ರೇಖಾ ಕದಿರೇಶ್ ಹತ್ಯೆ ಪ್ರಕರಣದ ಸಂಪೂರ್ಣ ತನಿಖೆ ನಡೆಸುವಂತೆ ಬೆಂಗಳೂರು ಪೊಲೀಸ್ ಆಯುಕ್ತರಿಗೆ ಸೂಚನೆ ನೀಡಿದ್ದೇನೆ ಎಂದು ಗೃಹ ಮತ್ತು ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.

    ಹಾವೇರಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಹತ್ಯೆ ಪ್ರಕರಣದ ಬಗ್ಗೆ ಮಾಹಿತಿ ಕಲೆ ಹಾಕ್ತಿದ್ದಾರೆ. ಹತ್ಯೆ ಯಾರು ಮಾಡಿದ್ದಾರೆ ಅವರು ಶೀಘ್ರದಲ್ಲಿ ಬಂಧನ ಆಗುತ್ತಾರೆ ಎಂಬ ವಿಶ್ವಾಸವಿದೆ ಎಂದರು.

    ಇದೇ ವೇಳೆ ಮಾಜಿ ಸಚಿವ ಜಮೀರ್ ಅಹಮ್ಮದ್ ಮೇಲಿನ ಆರೋಪದ ಬಗ್ಗೆ ಗೊತ್ತಿಲ್ಲ. ಸಂಪೂರ್ಣ ತನಿಖೆ ನಡೆಯುತ್ತಿದೆ. ಹತ್ಯೆ ಮಾಡಿದ ಆರೋಪಿಯನ್ನ ಶೀಘ್ರದಲ್ಲಿ ಬಂಧನ ಆಗುತ್ತಾರೆ ಎಂದು ತಿಳಿಸಿದರು.

    ಬಿಬಿಎಂಪಿ ಮಾಜಿ ಪಾಲಿಕೆ ಸದಸ್ಯೆ ರೇಖಾ ಕದಿರೇಶ್ ಅವರನ್ನು ಹತ್ಯೆ ಮಾಡಲಾಗಿದೆ. ಛಲವಾದಿಪಾಳ್ಯ ಕಾರ್ಪೊರೇಟ್ ಆಗಿದ್ದ ರೇಖಾ ಕದಿರೇಶ್ ಅವರನ್ನು ಸಹಚರರೇ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿತ್ತು. ರೇಖಾ ಕದಿರೇಶ್ ಮನೆ ಮುಂದೆಯೇ ಇಂದು ಹಲ್ಲೆ ನಡೆದಿತ್ತು. ಮನೆಯ ಒಳಗಡೆ ಇದ್ದ ರೇಖಾ ಅವರನ್ನು ಹೊರಗೆ ಕರೆದು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಲಾಗಿದೆ. ಸ್ಥಳಕ್ಕೆ ಚಿಕ್ಕಪೇಟೆ ಎಸಿಪಿ ಮತ್ತು ಕಾಟನ್ ಪೇಟೆ ಪೊಲೀಸರು ಭೇಟಿ ನಿಡಿ ಪರಿಶೀಲನೆ ನಡೆಸಿದ್ದಾರೆ.

    ಛಲವಾದಿ ಪಾಳ್ಯದ ಬಿಜೆಪಿ ಪಾಲಿಕೆ ಸದಸ್ಯರಾಗಿದ್ದ ರೇಖಾ ಅವರ ಪತಿ ಕದಿರೇಶ್ ಅವರನ್ನು 2018ರಲ್ಲಿ ಹಾಡಹಗಲೇ ಕಾಟನ್‍ಪೇಟೆಯ ಅಂಜಿನಪ್ಪ ಗಾರ್ಡನ್ ನಲ್ಲಿ ಕೊಲೆ ಮಾಡಲಾಗಿತ್ತು.

  • ಮಾಜಿ ಕಾರ್ಪೋರೇಟರ್ ಪತ್ನಿ ನೇಣು ಬಿಗಿದುಕೊಂಡು ಆತ್ಮಹತ್ಯೆ

    ಮಾಜಿ ಕಾರ್ಪೋರೇಟರ್ ಪತ್ನಿ ನೇಣು ಬಿಗಿದುಕೊಂಡು ಆತ್ಮಹತ್ಯೆ

    ಬೆಂಗಳೂರು: ನಗರದ ಬಸವನಪುರ ವಾರ್ಡ್ ಮಾಜಿ ಕಾರ್ಪೋರೇಟರ್ ಜಯಪ್ರಕಾಶ್ ಅವರ ಪತ್ನಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

    ಇಂದು ಬೆಳಗ್ಗೆ 9 ಗಂಟೆ ಸುಮಾರಿಗೆ ಮನೆಯ ಕೊಣೆಯಲ್ಲಿ ನೇಣು ಹಾಕಿಕೊಂಡು ಕೆಆರ್ ಪುರ ವಿ. ಕ್ಷೇತ್ರದ ಬಸವನಪುರ ವಾರ್ಡ್‍ನ ಮಾಜಿ ಕಾರ್ಪೋರೇಟರ್ ಜಯಪ್ರಕಾಶ್ ಪತ್ನಿ ವಿನೋದಾ ಆತ್ಮಹತ್ಯೆಗೆ ಶರಣರಾಗಿದ್ದು, ಸ್ಥಳಕ್ಕೆ ಕೆ.ಆರ್.ಪುರ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.

    ಆತ್ಮಹತ್ಯೆಗೆ ಯತ್ನಿಸಿ ಅಸ್ವಸ್ಥರಾಗಿದ್ದ ವಿನೋದಾ ಅವರನ್ನು ಕೂಡಲೇ ಕುಟುಂಬಸ್ಥರು ಭಟ್ಟರಹಳ್ಳಿಯ ಸತ್ಯಸಾಯಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಆತ್ಮಹತ್ಯೆಗೆ ಯಾವುದೇ ನಿಖರ ತಿಳಿದು ಬಂದಿಲ್ಲ. ಇತ್ತೀಚೆಗಷ್ಟೇ ವಿನೋದಾ ಅಪೆಂಡಿಕ್ಸ್ ಆಪರೇಷನ್‍ಗೆ ಒಳಗಾಗಿದ್ದರು ಎನ್ನಲಾಗಿದೆ. ದಂಪತಿಗೆ ಮೂರು ವರ್ಷದ ಮಗುವಿದ್ದು, ಕೆ.ಆರ್.ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಮಾಜಿ ಕಾರ್ಪೋರೇಟರ್ ಆಗಿರುವ ಜಯಪ್ರಕಾಶ್ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಅವರ ಆಪ್ತರಾಗಿದ್ದಾರೆ.

  • ಆಸ್ಪತ್ರೆ ವಾಶ್‍ರೂಮಿನಲ್ಲೇ ಮಾಜಿ ಕಾರ್ಪೊರೇಟರ್ ಮಗ ಆತ್ಮಹತ್ಯೆ

    ಆಸ್ಪತ್ರೆ ವಾಶ್‍ರೂಮಿನಲ್ಲೇ ಮಾಜಿ ಕಾರ್ಪೊರೇಟರ್ ಮಗ ಆತ್ಮಹತ್ಯೆ

    ಮುಂಬೈ: 25 ವರ್ಷದ ಮಾಜಿ ಕಾರ್ಪೊರೇಟರ್ ಮಗ ಜುಹುವಿನ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯ ವಾಶ್‍ರೂಮಿನೊಳಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದಲ್ಲಿ ನಡೆದಿದೆ.

    ಅಂಕಿತ್ ರೈ ಆತ್ಮಹತ್ಯೆಗೆ ಶರಣಾದ ಯುವಕ. ಅಂಕಿತ್ ಮೃತದೇಹವನ್ನು ಕುಟುಂಬದವರು ಮತ್ತು ಆಸ್ಪತ್ರೆಯ ಸಿಬ್ಬಂದಿ ಆತನಿದ್ದ ವಾರ್ಡಿನ ವಾಶ್‍ರೂಮಿನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ನೋಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಮೃತ ಅಂಕಿತ್ ಮಾಜಿ ಕಾರ್ಪೊರೇಟರ್ ಮನೋಜ್ ರೈ ಅವರ ಪುತ್ರನಾಗಿದ್ದು, ಈತ ಖಿನ್ನತೆಗೆ ಒಳಗಾಗಿದ್ದನು. ಇದರಿಂದ ಅಂಕಿತ್ ಆರೋಗ್ಯ ಸ್ಥಿತಿ ಹದಗೆಟ್ಟಿತ್ತು. ಆತ ಎಲ್ಲರ ರೀತಿ ವರ್ತಿಸುತ್ತಿರಲಿಲ್ಲ. ಹೀಗಾಗಿ ಆತನನ್ನು ನಾಲ್ಕು ದಿನಗಳ ಹಿಂದೆಯೇ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಅಂಕಿತ್ ವಾಶ್‍ರೂಮಿನಲ್ಲಿ ತನ್ನ ಪ್ಯಾಂಟ್ ನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

    ಬುಧವಾರ ಕುಟುಂಬದವರು ಆಸ್ಪತ್ರೆಗೆ ಬಂದಿದ್ದಾರೆ. ಆಗ ಸುಮಾರು 7.30ಕ್ಕೆ ಆಸ್ಪತ್ರೆಯ ಸಿಬ್ಬಂದಿ ಜೊತೆ ಕುಟುಂಬದವರು ಅಂಕಿತ್ ವಾರ್ಡಿಗೆ ಹೋಗಿದ್ದಾರೆ. ಆದರೆ ಆತ ಅಲ್ಲಿ ಕಾಣಿಸಲಿಲ್ಲ. ನಂತರ ವಾಶ್‍ರೂಮಿನಲ್ಲಿ ನೋಡಿದಾಗ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ತಕ್ಷಣ ಕುಟುಂಬದವರು ಫೋನ್ ಮಾಡಿ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ಜುಹು ಪೊಲೀಸರು ಆಸ್ಪತ್ರೆಗೆ ಹೋಗಿ ಪರಿಶೀಲನೆ ನಡೆಸಿದ್ದಾರೆ. ಕುಟುಂಬ ಮತ್ತು ಆಸ್ಪತ್ರೆ ಸಿಬ್ಬಂದಿಯ ಜೊತೆ ವಿಚಾರಣೆ ಮಾಡಿದ್ದಾರೆ. ನಂತರ ಅಂಕಿತ್ ಮೃತದೇಹವನ್ನು ಕೂಪರ್ ಆಸ್ಪತ್ರೆಗೆ ರವಾನಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಸದ್ಯಕ್ಕೆ ಅಂಕಿತ್ ಆತ್ಮಹತ್ಯೆ ಮಾಡಿಕೊಂಡಿದ್ದ ಸ್ಥಳದಲ್ಲಿ ಯಾವುದೇ ಡೆತ್‍ನೋಟ್ ಪತ್ತೆಯಾಗಿಲ್ಲ. ಹೀಗಾಗಿ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸದ್ಯಕ್ಕೆ ಈ ಪ್ರಕರಣವನ್ನು ಜುಹು ಪೊಲೀಸರು ಆಕಸ್ಮಿಕ ಸಾವು ಎಂದು ದಾಖಲಿಸಿಕೊಂಡಿದ್ದು, ಹೆಚ್ಚಿನ ತನಿಖೆಯನ್ನು ಮುಂದುವರಿಸಿದ್ದಾರೆ.

  • ಶುದ್ಧೀಕರಣ ಘಟಕ ನಿರ್ಮಾಣ ವಿರೋಧಿಸಿ ಮಾಜಿ ಕಾರ್ಪೋರೇಟರ್ ಸೇರಿ ಗ್ರಾಮಸ್ಥರು ವಿಷ ಸೇವನೆಗೆ ಯತ್ನ

    ಶುದ್ಧೀಕರಣ ಘಟಕ ನಿರ್ಮಾಣ ವಿರೋಧಿಸಿ ಮಾಜಿ ಕಾರ್ಪೋರೇಟರ್ ಸೇರಿ ಗ್ರಾಮಸ್ಥರು ವಿಷ ಸೇವನೆಗೆ ಯತ್ನ

    ಶಿವಮೊಗ್ಗ: ನೀರು ಶುದ್ಧೀಕರಣ ಘಟಕ ನಿರ್ಮಾಣ ವಿರೋಧಿಸಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಹಾನಗರ ಪಾಲಿಕೆ ಮಾಜಿ ಸದಸ್ಯ ಮೋಹನ್ ರೆಡ್ಡಿ ಜೊತೆ ಸ್ಥಳೀಯ ಗ್ರಾಮಸ್ಥರು ಸೇರಿ ವಿಷಯ ಕುಡಿಯಲು ಮುಂದಾದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

    ಪಾಲಿಕೆ ವ್ಯಾಪ್ತಿಯ 5ನೇ ವಾರ್ಡ್ ನಲ್ಲಿರುವ ಪುರಲೆ ಬಡಾವಣೆಯಲ್ಲಿ ಶುದ್ಧೀಕರಣ ಘಟಕ ನಿರ್ಮಾಣಕ್ಕೆ ಗುಜರಾತ್ ಮೂಲದ ಸಂಸ್ಥೆ ಮುಂದಾಗಿದೆ. ಇದೂವರೆಗೂ ಈ ಕಾಮಗಾರಿ ಆರಂಭಕ್ಕೆ ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು.

    ಆದರೆ ಇಂದು ನೂರಾರು ಪೊಲೀಸರ ಬಿಗಿ ಭದ್ರತೆಯಲ್ಲಿ ಕಾಮಗಾರಿ ಆರಂಭಗೊಂಡಿತ್ತು. ಇದನ್ನು ತಪ್ಪಿಸಲು ಬೆಳಗ್ಗೆಯಿಂದಲೇ ಕಾಮಗಾರಿ ವಿರೋಧಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಮಾಜಿ ಕಾರ್ಪೋರೇಟರ್ ಮೋಹನ್ ರೆಡ್ಡಿ ಮತ್ತು ಸ್ಥಳೀಯ ಗ್ರಾಮಸ್ಥರು ಸೇರಿ ವಿಷ ಕುಡಿಯಲು ನಡೆಸಿದ ಯತ್ನವನ್ನು ಪೊಲೀಸರು ವಿಫಲಗೊಳಿಸಿದ್ದಾರೆ.

    ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುವ ಈ ಘಟಕವನ್ನು ಇಲ್ಲಿಂದ ಸ್ಥಳಾಂತರ ಮಾಡಿ ಎಂದು ಸ್ಥಳೀಯರು ಆಗ್ರಹಿಸಿ ಕಾಮಗಾರಿ ಸ್ಥಳದಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದರು. ಪ್ರತಿಭಟನಾ ನಿರತರನ್ನು ಭೇಟಿ ಮಾಡಿದ ಜಿಲ್ಲಾಧಿಕಾರಿ, ಈ ಕಾಮಗಾರಿ ಸರ್ಕಾರ ಮಟ್ಟದಲ್ಲಿ ನಿರ್ಣಯ ಆಗಿದ್ದು, ಇದನ್ನು ತಡೆಯಲು ನನಗೆ ಅಧಿಕಾರ ಇಲ್ಲ ಎಂದು ಹೇಳಿದರು.

    ಈ ಸಂಬಂಧ ಅಧಿಕಾರಿಗಳು ಮತ್ತು ಪ್ರತಿಭಟನ ನಿರತರ ನಡುವೇ ಮಾತುಕತೆ ನಡೆದು ನಂತರ ಪ್ರತಿಭಟನಾಕಾರರು ಕಾನೂನು ಹೋರಾಟ ಕೈಗೊಳ್ಳಲು ನಿರ್ಧರಿಸಿ, ಪ್ರತಿಭಟನೆ ಹಿಂಪಡೆದಿದ್ದಾರೆ.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ಗೌರಿ ಹತ್ಯೆ ಪ್ರಕರಣ: ಮಾಜಿ ಕಾರ್ಪೊರೇಟರ್ ಎಸ್‍ಐಟಿ ವಶಕ್ಕೆ

    ಗೌರಿ ಹತ್ಯೆ ಪ್ರಕರಣ: ಮಾಜಿ ಕಾರ್ಪೊರೇಟರ್ ಎಸ್‍ಐಟಿ ವಶಕ್ಕೆ

    ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‍ಐಟಿ ಮಹಾರಾಷ್ಟ್ರದ ಜಲ್ನಾ ಜಿಲ್ಲೆಯ ಮಾಜಿ ಕಾರ್ಪೋರೇಟರ್ ನ್ನು ವಶಕ್ಕೆ ಪಡೆದು ಬೆಂಗಳೂರಿಗೆ ಕರೆತಂದಿದ್ದಾರೆ.

    ಶ್ರೀಕಾಂತ್ ಪನ್ಗಾರ್ಕರ್ ಎಂಬಾತನೇ ಬಂಧಿತ ಶಿವಸೇನೆ ಪಕ್ಷದ ಮಾಜಿ ಕಾರ್ಪೋರೇಟರ್. ವಿಚಾರವಾದಿಗಳು ಮತ್ತು ಚಿಂತಕರ ಹತ್ಯೆಗೆ ಶ್ರೀಕಾಂತ್ ಹಣಕಾಸು ಸಹಾಯ ಮಾಡುತ್ತಿದ್ದನು ಎಂಬ ಆರೋಪಗಳಿವೆ. ಹೀಗಾಗಿ ಶ್ರೀಕಾಂತ್ ನನ್ನು ಪುಣೆಯ ಎಸ್‍ಐಟಿ ಪೊಲೀಸರು ಬಂಧಿಸಿ ಮುಂಬೈ ಜೈಲಿನಲ್ಲಿ ಇರಿಸಿದ್ದರು.

    ಮುಂಬೈ ಜೈಲಿನಲ್ಲಿದ್ದ ಶ್ರೀಕಾಂತ್ ನನ್ನು ಬಾಡಿ ವಾರೆಂಟ್ ಮೂಲಕ ಬೆಂಗಳೂರಿಗೆ ಕರೆತಂದಿರುವ ಎಸ್‍ಐಟಿ ಇಂದು ಕೋರ್ಟ್ ಗೆ ಹಾಜರುಪಡಿಸಲಿದೆ. ನ್ಯಾಯಾಲಯಕ್ಕೆ ಹಾಜುರುಪಡಿಸಿ ಆರೋಪಿ ಶ್ರೀಕಾಂತ್‍ನ್ನು ಎಸ್‍ಐಟಿ ತಮ್ಮ ವಶಕ್ಕೆ ಪಡೆಯಲಿದೆ ಎಂಬ ಮಾಹಿತಿಗಳು ಲಭ್ಯವಾಗಿವೆ.

    ಇತ್ತ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿದ್ದ ಹುಬ್ಬಳ್ಳಿಯ ಅಮಿತ್ ಬದ್ದಿ ಮತ್ತು ಗಣೇಶ್ ಮಿಸ್ಕಿನ್ ಇಬ್ಬರನ್ನು ಸಿಐಡಿ ತನ್ನ ವಶಕ್ಕೆ ಪಡೆದುಕೊಂಡಿದೆ. ವಿಚಾರವಾದಿ ಎಂ.ಎಂ.ಕಲ್ಬುರ್ಗಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ತಮ್ಮ ವಶಕ್ಕೆ ನೀಡಬೇಕೆಂದು ಸಿಐಡಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿತ್ತು. ಅರ್ಜಿ ವಿಚಾರಣೆ ನಡೆಸಿದ ಧಾರವಾಡದ 3 ನೇ ಹೆಚ್ಚುವರಿ ದಿವಾನಿ ನ್ಯಾಯಾಲಯ ಆರೋಪಿಗಳನ್ನು ಸೆಪ್ಟೆಂಬರ್ 28ರವರೆಗೆ ಸಿಐಡಿ ವಶಕ್ಕೆ ನೀಡುವಂತೆ ಆದೇಶಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಬೆಂಗ್ಳೂರಿನ ಪುರಾತನ ದೇಗುಲದ ಮೇಲೆ ಕೈ ನಾಯಕನ ಕಣ್ಣು- ದೇವಾಲಯದ ಗೇಟನ್ನೇ ಒಡೆಸಿದ ಮಾಜಿ ಕಾರ್ಪೊರೇಟರ್

    ಬೆಂಗ್ಳೂರಿನ ಪುರಾತನ ದೇಗುಲದ ಮೇಲೆ ಕೈ ನಾಯಕನ ಕಣ್ಣು- ದೇವಾಲಯದ ಗೇಟನ್ನೇ ಒಡೆಸಿದ ಮಾಜಿ ಕಾರ್ಪೊರೇಟರ್

    ಬೆಂಗಳೂರು: ರಾಜ್ಯದಲ್ಲಿ `ಕೈ’ ಗೂಂಡಾಗಿರಿ ಕಾರುಬಾರು ಶುರುವಾಗಿದ್ದು, ದೇಗುಲದ ಗೇಟನ್ನೇ ಒಡೆಸಿ ದೇವಸ್ಥಾನವನ್ನೇ ಕಬಳಿಕೆ ಮಾಡಲು ಮಾಜಿ ಕಾರ್ಪೊರೇಟರ್ ಮುಂದಾಗಿದ್ದಾನೆ.

    ವಾರ್ಡ್ ನಂಬರ್ 90 ಹಲಸೂರಿನ ಮಾಜಿ ಕಾರ್ಪೊರೇಟರ್ ಉದಯ್ ಕುಮಾರ್ ಈ ರೀತಿಯ ಗೂಂಡಾ ವರ್ತನೆ ಮಾಡಿದ್ದು, ದೇಗುಲದ ಭಕ್ತರ ಮುಂದೆಯೇ ಅನ್ಯಧರ್ಮದವರನ್ನು ಬಿಟ್ಟು ದೇಗುಲದ ಗೇಟ್ ಬೀಗವನ್ನು ಒಡೆಸಿದ್ದಾನೆ. ಈತ ಬೆಂಗಳೂರಿನ ಪುರಾತನ ದೇಗುಲದ ಮೇಲೆ ಕಣ್ಣು ಹಾಕಿದ್ದು, ಮುಸ್ಲಿಮರನ್ನು ಕರೆಸಿ ಹಾರೆ, ರಾಡ್ ತೆಗೆದುಕೊಂಡು ಬಂದು ಹಿಂದೂ ದೇಗುಲದ ಕಿಟಕಿ, ಗೇಟ್ ಪುಡಿ ಪುಡಿ ಮಾಡಿಸಿದ್ದಾನೆ.

    ಹಳೇ ಮದ್ರಾಸ್ ರಸ್ತೆಯಲ್ಲಿರುವ ಮೌನನಂದ ಮಠದ ಜಾಗಕ್ಕೆ ಉದಯ್ ಕುಮಾರ್ ಅತಿಕ್ರಮ ಪ್ರವೇಶ ಮಾಡಿದ್ದು, ದೇಗುಲದ ಜಾಗ ತನ್ನ ಪರಿಚಿತರಿಗೆ ಸೇರಿದ್ದು. ನಂಗೆ ಇದನ್ನು ಡೆಮಾಲಿಷನ್ ಮಾಡೋಕೆ ಕಂಟ್ರಾಕ್ಟ್ ಕೊಟ್ಟಿದ್ದಾರೆ ಎಂದು ಹೇಳಿದ್ದಾನೆ. ಕಾರ್ಪೊರೇಟರ್ ವರ್ತನೆಗೆ ರೊಚ್ಚಿಗೆದ್ದ ಭಕ್ತರು, ನಿಮ್ಮ ವಂಶ ನಿರ್ವಂಶ ಆಗುತ್ತೆ. ಈ ದೇವಸ್ಥಾನ ಅಷ್ಟೊಂದು ಪವರ್ ಫುಲ್ ಎಂದು ಆಕ್ರೋಶದಿಂದ ಹೇಳಿದ್ದಾರೆ.

    ಆದರೆ ಅಷ್ಟಕ್ಕೆ ಸುಮ್ಮನಾಗದೇ ಅಯ್ಯೋ ಅದೇನ್ ಆಗುತ್ತೋ ನಾನು ನೋಡುತ್ತೀನಿ. ಅದೆಲ್ಲ ನಾನ್ ನಂಬಲ್ಲ ಎಂದು ಮುಸ್ಲಿಮರನ್ನು ಬಿಟ್ಟು ಗೇಟ್ ಬೀಗ ಒಡೆಸಿದ್ದಾನೆ. ಕೊನೆಗೆ ಭಕ್ತರ ಆಕ್ರೋಶ ಹೆಚ್ಚಾದಾಗ ಪೊಲೀಸರು ಮಧ್ಯಪ್ರವೇಶ ಮಾಡಿದ್ದಾರೆ. ಜನರ ಆಕ್ರೋಶಕ್ಕೆ ಕಾರ್ಪೊರೇಟರ್ ಸ್ಥಳದಿಂದ ಕಾಲ್ಕಿತ್ತಿದ್ದಾನೆ.

    ಮಠದವರು ಮಾಜಿ ಕಾರ್ಪೊರೇಟರ್ ಗೂಂಡಾ ವರ್ತನೆಯ ವಿರುದ್ಧ ಹಳೇ ಮದ್ರಾಸ್ ರಸ್ತೆ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

  • ರೌಡಿ ನಾಗನ ಪತ್ತೆಗೆ ಭಿಕ್ಷುಕರ ವೇಷ ತೊಟ್ಟ ಪೊಲೀಸರು!

    ರೌಡಿ ನಾಗನ ಪತ್ತೆಗೆ ಭಿಕ್ಷುಕರ ವೇಷ ತೊಟ್ಟ ಪೊಲೀಸರು!

    ಬೆಂಗಳೂರು: ಶ್ರೀರಾಂಪುರದ ಮಾಜಿ ಕಾರ್ಪೋರೇಟರ್, ರೌಡಿಶೀಟರ್ ನಾಗನಿಗಾಗಿ ಯಾವ ರೀತಿ ಹುಡುಕಾಟ ನಡೆಸಿದ್ರೂ ಪ್ರಯೋಜನವಾಗಿಲ್ಲ. ಹೀಗಾಗಿ ಪೊಲೀಸರು ಭಿಕ್ಷುಕರ ವೇಷ ತೊಟ್ಟು ನಾಗನ ಪತ್ತೆಗೆ ಬಲೆ ಬಿಸಿದ್ದಾರೆ.

    ರೌಡಿ ನಾಗನ ಮನೆಯ ಮೇಲೆ ದಾಳಿ ನಡೆಸಿದ ಪೊಲೀಸ್ರು ಕೋಟಿ ಕೋಟಿ ಹಣ ಜಪ್ತಿ ಮಾಡಿದ್ರು. ಪೊಲೀಸರು ನಾಗನನ್ನು ಪತ್ತೆ ಮಾಡುವ ಮುನ್ನವೇ ಸಿಡಿ ಬಾಂಬ್ ಸಿಡಿಸಿಬಿಟ್ಟಿದ್ದ. ಇದ್ರಿಂದ ಎಚ್ಚೆತ್ತ ಪೊಲೀಸರು ಈಗ ನಾಗನ ಹುಡುಕಾಟಕ್ಕಾಗಿ ಭಿಕ್ಷುಕರ ವೇಷ ಧರಿಸಿದ್ದಾರೆ.

    ಆದ್ರೆ ಪೊಲೀಸರು ಯಾವ ವೇಷ ಧರಿಸಿದ್ರೂ ರೌಡಿ ನಾಗ ಮಾತ್ರ ಬಲೆಗೆ ಬೀಳಲೇ ಇಲ್ಲ. ಹೀಗಾಗಿ ಬೇರೆ ದಾರಿಯಿಲ್ಲದೆ ನಾಗನ ಸಂಬಂಧಿಕರ ಮನೆಯಲ್ಲೇ ಠಿಕಾಣಿ ಹೂಡಿದ್ದಾರೆ. ಮತ್ತೊಂದೆಡೆ ಕಾನೂನು ಸಮರ ಸಾರಿರೋ ನಾಗ ನ್ಯಾಯಾಲಯದ ಮೊರೆ ಹೋಗಿದ್ದಾನೆ. ಗುರುವಾರ ನಾಗನ ಜಾಮೀನು ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಮೇ 4ಕ್ಕೆ ವಿಚಾರಣೆಯನ್ನು ಮುಂದೂಡಿದೆ.