Tag: former CM Yeddyurappa

  • ಅಲ್ಪಸಂಖ್ಯಾತರ ಓಲೈಕೆಗಾಗಿ ಕೈ, ದಳ ನಾಯಕರು RSS ಕುರಿತು ಟೀಕೆ ಮಾಡ್ತಿದ್ದಾರೆ: ಬಿ.ವೈ.ವಿಜಯೇಂದ್ರ

    ಅಲ್ಪಸಂಖ್ಯಾತರ ಓಲೈಕೆಗಾಗಿ ಕೈ, ದಳ ನಾಯಕರು RSS ಕುರಿತು ಟೀಕೆ ಮಾಡ್ತಿದ್ದಾರೆ: ಬಿ.ವೈ.ವಿಜಯೇಂದ್ರ

    ಕೊಪ್ಪಳ: ಅಲ್ಪಸಂಖ್ಯಾತರ ಓಲೈಕೆಗಾಗಿ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಆರ್‌ಎಸ್‌ಎಸ್ ಕುರಿತು ಟೀಕೆ ಮಾಡ್ತಿದ್ದಾರೆ. ಆರ್‌ಎಸ್‌ಎಸ್ ಬಗ್ಗೆ ಮಾತನಾಡೋ ಯೋಗ್ಯತೆ ಇವರಲ್ಲಿ ಯಾರಿಗೂ ಇಲ್ಲ ಎಂದು ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಕಿಡಿಕಾರಿದ್ದಾರೆ.

    ಸಿಂದಗಿ ಉಪಚುಣಾವಣೆ ಹಿನ್ನೆಲೆ ಮಾರ್ಗ ಮಧ್ಯ ಕೊಪ್ಪಳದ ಗವಿಶ್ರೀ ಮಠಕ್ಕೆ ಭೇಟಿ ನೀಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಹಾಗೂ ಜೆಡಿಎಸ್ ವಿರುದ್ಧ ಹರಿಹಾಯ್ದಿದ್ದಾರೆ. ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರಿಗೆ ಆರ್‌ಎಸ್‌ಎಸ್ ಬಗ್ಗೆ ಮಾತನಾಡೋಕೆ ಯೋಗ್ಯತೆ ಇಲ್ಲ. ಅಲ್ಪಸಂಖ್ಯಾತರ ಓಲೈಕೆ ಮಾಡುವುದಕ್ಕಾಗಿ ಹಲವು ದಶಕಗಳಿಂದ ಆರ್‍ಎಸ್‍ಎಸ್ ಸಮಾಜಸೇವೆ ಎಲ್ಲರಿಗೂ ಗೊತ್ತಿದೆ ಎಂದು ತಿರುಗೇಟು ಕೊಟ್ಟರು. ಇದನ್ನೂ ಓದಿ: ಅಲ್ಪಸಂಖ್ಯಾತರ ಬಗ್ಗೆ ಬಿಜೆಪಿ ದ್ವಂದ್ವ ನೀತಿ: ಹೆಚ್‍ಡಿಕೆ ತರಾಟೆ

    ಚುನಾವಣೆಯಲ್ಲಿ ಇಂತಹ ಹೇಳಿಕೆಯಿಂದ ಅಲ್ಪಸಂಖ್ಯಾತರ ಓಲೈಕೆ ಮಾಡ್ತಿದ್ದಾರೆ. ಈ ತರಹದ ಹೇಳಿಕೆ ಇಂದ ಅವರು ದೊಡ್ಡ ಮನುಷ್ಯರಾಗುತ್ತಾರೆ. ಆದರೆ ಅದು ಅವರ ಮೂರ್ಖತನದ ಪರಮಾವಧಿ. ಕಾಂಗ್ರೆಸ್ ನಾಯಕರು ಹತಾಶೆ ಇಂದ ಹೀಗೆ ಮಾತನಾಡುತ್ತಿದ್ದಾರೆ ಎಂದು ಟಾಂಗ್ ನೀಡಿದರು.

    ಪ್ರಧಾನಿ ಮೋದಿ, ಮಾಜಿ ಸಿಎಂ ಯಡಿಯೂರಪ್ಪ ಮತ್ತು ಸಿಎಂ ಬೊಮ್ಮಾಯಿ ಕೊಟ್ಟ ಕಾರ್ಯಕ್ರಮಗಳ ಆಧಾರದ ಮೇಲೆ ನಾವು ಮತ ಕೇಳುತ್ತೇವೆ. ಕಾಂಗ್ರೆಸ್ ಇಡೀ ದೇಶದಲ್ಲಿ ಕರ್ನಾಟಕದಲ್ಲಿ ಆಸ್ತಿತ್ವ ಕಳೆದಿಕೊಂಡಿದೆ. ಹೀಗಾಗಿ ಹತಾಶರಾಗಿ ಬಿಜೆಪಿ ವಿರುದ್ಧ ಮಾತನಾಡುತ್ತಿದ್ದಾರೆ. ಜನರ ಮುಂದೆ ಹೇಳೋ ಯಾವುದೇ ಕಾರ್ಯಕ್ರಮ ಕಾಂಗ್ರೆಸ್ ಕೊಟ್ಟಿಲ್ಲ. ಹೀಗಾಗಿ ಬಿಜೆಪಿ ವಿರುದ್ಧ ಟೀಕೆ ಮಾಡಿತ್ತಿದ್ದಾರೆ. ಇದು ಅವರಿಗೆ ಶೋಭೆ ತರೋದಿಲ್ಲ ಎಂದು ಕಾಂಗ್ರೆಸ್ ಹಾಗೂ ಜೆಡಿಎಸ್ ವಿರುದ್ಧ ವಾಗ್ದಾಳಿ ಮಾಡಿದರು. ಇದನ್ನೂ ಓದಿ: ಭಾರೀ ಮಳೆಯಿಂದ ಭೂಕುಸಿತ – 88ಕ್ಕೆ ಏರಿದ ಸಾವಿನ ಪ್ರಮಾಣ

  • ಬಿಜೆಪಿಗರನ್ನು ಕಾಂಗ್ರೆಸ್ ಸಂಪರ್ಕಿಸುತ್ತಿರುವುದು ನಿಜ: ಯಡಿಯೂರಪ್ಪ

    ಬಿಜೆಪಿಗರನ್ನು ಕಾಂಗ್ರೆಸ್ ಸಂಪರ್ಕಿಸುತ್ತಿರುವುದು ನಿಜ: ಯಡಿಯೂರಪ್ಪ

    ದಾವಣಗೆರೆ: ಕಾಂಗ್ರೆಸ್ ನನ್ನ ಹಗುರವಾಗಿ ತೆಗೆದುಕೊಳ್ಳಬೇಡಿ ಎಂದು ಮಾಜಿ ಸಿಎಂ ಯಡಿಯೂರಪ್ಪ ಶಾಕಿಂಗ್ ಹೇಳಿಕೆ ನೀಡಿದ್ದಾರೆ.

    ದಾವಣಗೆರೆಯಲ್ಲಿ ಕಾಂಗ್ರೆಸ್ ಕುರಿತು ಮಾತನಾಡಿದ ಅವರು, ಬಿಜೆಪಿಗರನ್ನು ಕಾಂಗ್ರೆಸ್ ಸಂಪರ್ಕಿಸುತ್ತಿರುವುದು ನಿಜ. ಆದರೆ ಯಾರು ಬಿಜೆಪಿ ಬಿಟ್ಟು ಕಾಂಗ್ರೆಸ್‍ಗೆ ಹೋಗುವ ಪ್ರಶ್ನೆ ಇಲ್ಲ. ಅನೇಕ ಕಾಂಗ್ರೆಸ್ ಸದಸ್ಯರು ಬಿಜೆಪಿಗೆ ಬರುತ್ತಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನಮ್ಮವರನ್ನು ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಅದರಲ್ಲಿ ಡಿಕೆಶಿ ಅವರಿಗೆ ಸಫಲತೆ ಕಾಣೋದಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಜಯಮೃತ್ಯುಂಜಯ ಸ್ವಾಮೀಜಿ ಶಾಪದಿಂದಲೇ ಯಡಿಯೂರಪ್ಪ ಅಧಿಕಾರ ಹೋಗಿದೆ: ವಿಜಯಾನಂದ ಕಾಶಪ್ಪನವರ್

    ಸಿಂದಗಿ, ಹಾನಗಲ್ ಬಿಗಿಯಾದ ಚುನಾವಣೆ, ಹಗುರವಾಗಿ ತೆಗೆದುಕೊಳ್ಳಬಾರದು. ವಿಧಾನಸಭಾ ಚುನಾವಣೆ ಬಂದಾಗ ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ಸೇರಿ ನಾವೆಲ್ಲರೂ ವಿಶೇಷ ಪ್ರಯತ್ನ ಮಾಡಬೇಕು. ನಮ್ಮ ವಿಶೇಷ ಪ್ರಯತ್ನದಿಂದ 130-140 ಸೀಟು ಗೆಲ್ಲಬೇಕಿದೆ. ಈ ಹಿನ್ನೆಲೆ ಕಾಂಗ್ರೆಸ್ ನನ್ನ ಹಗುರವಾಗಿ ತೆಗೆದುಕೊಳ್ಳಬೇಡಿ ಎಂದಿದ್ದೇನೆ ಎಂದು ತಿಳಿಸಿದರು.

    ನಾವು ಅಧಿಕಾರದಲ್ಲಿ ಇದ್ದಾಗ ದಾವಣಗೆರೆಯಲ್ಲಿ ಬೃಹತ್ ಸಮಾವೇಶವನ್ನು ಮಾಡಿದ್ದೆವು. ಮೊದಲೆಲ್ಲ ಐವತ್ತು ಅರವತ್ತು ಸಾವಿರ ಜನರು ಸೇರುತ್ತಿದ್ದರು. ಅವರೇ ಗಾಡಿಗಳನ್ನು ಮಾಡಿಕೊಂಡು ಬರುತ್ತ ಇದ್ದರು. ಒಂದು ತಿಂಗಳ ಕಾಲ ನಿರಂತರ ಪ್ರವಾಸ ಮಾಡಿ ಪಕ್ಷ ಸಂಘಟನೆ ಮಾಡಬೇಕಾಗಿದೆ. ಯಾರು ಸಹ ಪ್ರತಿಪಕ್ಷಗಳನ್ನು ಹಗುರವಾದ ತೆಗೆದುಕೊಳ್ಳಬೇಡಿ. ಅವರಿಗೆ ಆದಂತಹ ಶಕ್ತಿ, ತಂತ್ರಗಾರಿಕೆ ಇರುತ್ತೆ ಎಂದು ಹೇಳಿದರು. ಇದನ್ನೂ ಓದಿ: ಭಕ್ತರಿಗೆ ಘಾಸಿಯಾಗಿದೆ, ಸರಿದೂಗಿಸುವ ಪ್ರಯತ್ನ ಮಾಡುತ್ತೇನೆ: ಬೊಮ್ಮಾಯಿ

    ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುವಲ್ಲಿ ಯಶಸ್ವಿಯಗಬೇಕು. ಎಸ್‍ಸಿ, ಎಸ್‍ಟಿ ಹಿಂದುಳಿದ ಸಮುದಾಯದ ಜನರನ್ನು ಪಕ್ಷಕ್ಕೆ ಸೇರಿಸಬೇಕು. ಆಗ ಮತ್ತಷ್ಟು ಪಕ್ಷಕ್ಕೆ ಬಲವಾಗುತ್ತೆ ಎಂದಿದ್ದಾರೆ.

    ಪ್ರವಾಸ ಬಗ್ಗೆ ಮಾತನಾಡಿದ ಅವರು, ಯಡಿಯೂರಪ್ಪ ಒಬ್ಬರೇ ಹೋಗುವ ಪ್ರಸಂಗ ಬಂದಿಲ್ಲ. ನಾನು ಹೋಗುವಾಗ ಶಾಸಕರು, ಸಚಿವರು ಕಾರ್ಯಕರ್ತರು ಇರ್ತಾರೆ. ಒಂದು ತಿಂಗಳ ಕಾಲ ನಿರಂತರ ಪ್ರವಾಸ ಮಾಡಿ ಪಕ್ಷ ಸಂಘಟನೆ ಮಾಡಬೇಕಾಗಿದೆ. ನಾಲ್ಕು ತಂಡಗಳನ್ನು ಮಾಡಿ ರಾಜ್ಯ ಪ್ರವಾಸದ ಕೆಲಸ ಮಾಡಬೇಕಿದೆ. ಪ್ರತಿಯೊಂದು ಬೂತ್ ಗಳಲ್ಲಿ ಪಕ್ಷ ಸಂಘಟನೆಯಾಗಬೇಕು. ಮನೆಮನೆಗೆ ಕಾರ್ಯಕ್ರಮವನ್ನು ತಲುಪಿಸಬೇಕು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ನೈಸ್ ರಸ್ತೆಯಲ್ಲಿ ಕಾರು ಪಲ್ಟಿ – ಪಾರ್ಟಿಯಿಂದ ಬರುವಾಗ ಅಪಘಾತ?

    ಇದು ರಾಜ್ಯ ಸರ್ಕಾರ ಪ್ರಧಾನಿ ಮೋದಿ ಅವರ ಕೆಲಸ ಎಂದು ಜನರಿಗೆ ತಿಳಿಯುವಂತೆ ತಲುಪಿಸಬೇಕು. ಅಟಲ್ ಬಿಹಾರಿ ವಾಜಪೇಯಿ ಅವರು ಕೂಡ ಸಾಕಷ್ಟು ಉತ್ತಮ ಅಡಳಿತ ನಡೆಸಿದ್ರು. ಆದರೆ ಅದು ಜನರಿಗೆ ತಲುಪಿಸುವಲ್ಲಿ ಕಾರ್ಯಕರ್ತರು ವಿಫಲವಾದರು. ಸಾಕಷ್ಟು ವಿಚಾರಗಳು ಚರ್ಚೆಯಾಗುತ್ತಿವೆ ಎಂದಿದ್ದಾರೆ.

    ದೇಗುಲಗಳ ತೆರವು ಬಗ್ಗೆ ಚರ್ಚೆಯಾಗುತ್ತಿದೆ. ಯಾವುದೇ ಕಾರಣಕ್ಕೂ ದೇಗುಲಗಳ ತೆರವು ಮಾಡುವುದಿಲ್ಲ. ಬೇಕಾದ್ರೆ ಸುಪ್ರೀಂ ಕೋರ್ಟ್ ತೀರ್ಪು ಬಂದರೆ ಮೇಲ್ಮನವಿಯನ್ನು ಸಲ್ಲಿಸುತ್ತೇವೆ. ದೇವಸ್ಥಾನಗಳನ್ನು ಕೆಡವುದನ್ನು ನಿಲ್ಲಿಸಲು ಕಠಿಣ ನಿರ್ಧಾರ ತೆಗೆದುಕೊಂಡಿದೆ. ಒಂದೆರಡು ಘಟನೆಗಳಿಂದ ಯಾರು ಕೂಡ ನೋವು ಮಾಡಿಕೊಳ್ಳಬಾರದು. ಮೋದಿಅವರ ಹೆಸರು ಹೇಳಿಕೊಂಡು ಗೆಲುವು ಸಾಧಿಸದೇ ನಮ್ಮ ಕೆಲಸದಿಂದ ಗೆಲುವು ಸಾಧಿಸೋಣ ಎಂದು ತಿಳಿಸಿದರು. ಇದನ್ನೂ ಓದಿ: ನೈಸ್ ರಸ್ತೆಯಲ್ಲಿ ಕಾರು ಪಲ್ಟಿ – ಪಾರ್ಟಿಯಿಂದ ಬರುವಾಗ ಅಪಘಾತ?

  • ಉತ್ತರ ಕರ್ನಾಟಕಕ್ಕೆ ಸ್ವಲ್ಪ ನ್ಯಾಯ ಸಿಕ್ಕಿದೆ: ಎಂಬಿ ಪಾಟೀಲ್

    ಉತ್ತರ ಕರ್ನಾಟಕಕ್ಕೆ ಸ್ವಲ್ಪ ನ್ಯಾಯ ಸಿಕ್ಕಿದೆ: ಎಂಬಿ ಪಾಟೀಲ್

    -ನಾನು ಸೆಕೆಂಡ್ ಕ್ಲಾಸ್ ಸಿಟಿಜನ್ ಅಲ್ಲ ಅಂದಿದ್ದ ಪಾಟೀಲ್ರು ಸಚಿವರಾಗ್ತಾರಾ?

    ಬೆಂಗಳೂರು: ಸಮ್ಮಿಶ್ರ ಸರ್ಕಾರದಲ್ಲಿ ನಾನು ಮೊದಲೇ ಮಂತ್ರಿಯಾಗಬೇಕಿತ್ತು. ಮಂತ್ರಿಯಾಗುವ ಎಲ್ಲ ಅರ್ಹತೆಗಳು ನಾನು ಹೊಂದಿದ್ದೇನೆ. ಈಗ ಉತ್ತರ ಕರ್ನಾಟಕಕ್ಕೆ 5 ಸಚಿವ ಸ್ಥಾನ ನೀಡಿದ್ದರಿಂದ ಸ್ವಲ್ಪ ನ್ಯಾಯ ಸಿಕ್ಕಿದೆ ಎಂದು ಸಂಭಾವ್ಯ ಸಚಿವ ಎಂಬಿ ಪಾಟೀಲ್ ಹೇಳಿದ್ದಾರೆ.

    ಸಂಪುಟ ವಿಸ್ತರಣೆ ಕುರಿತು ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಎಂಬಿ ಪಾಟೀಲ್, ಯಾವುದೋ ಒಂದು ಕಾರಣಕ್ಕಾಗಿ ನನ್ನ ಹೆಸರು ಸಂಪುಟ ರಚನೆಯಲ್ಲಿ ಬಿಟ್ಟುಹೋಗಿತ್ತು. ಆದ್ದರಿಂದ ನನಗೆ ಆಗ ಅಸಮಾಧಾನವಿತ್ತು. ಆದರೆ ನಾನು ಮಂತ್ರಿಯಾಗುವ ಎಲ್ಲ ಅರ್ಹತೆಗಳನ್ನು ಹೊಂದಿರುವ ಕಾರಣ ಮತ್ತೆ ಆ ಸ್ಥಾನ ನೀಡಿದ್ದಾರೆ ಎಂದು ತಿಳಿಸಿದರು.

    ಪಕ್ಷದ ಹೈಕಮಾಂಡ್ ಈಗ ಸಚಿವರಾಗಿ ಮಾಡಿದೆ. ಆದರೆ ಸಚಿವ ಸ್ಥಾನ ಸಿಗದಿದ್ದಾಗಲೂ ನಾನು ಕುಗ್ಗಿಲ್ಲ, ಏಕೆಂದರೆ 5 ವರ್ಷ ನೀರಾವರಿ ಸಚಿವನಾಗಿ ಪ್ರಮುಖ ಕಾರ್ಯವನ್ನು ಮಾಡಿದ್ದೆ. ರಾಜ್ಯದ ಜನರು ಈಗಲೂ ಆ ಕಾರ್ಯವನ್ನು ಮೆಚ್ಚುತ್ತಾರೆ. ಆದರೆ ಸಚಿವ ಸ್ಥಾನ ನೀಡಿದ ಬಗ್ಗೆ ಸದ್ಯ ನಾನು ಮಾತನಾಡಲು ಹೋಗಲ್ಲ. ಸಂಪುಟ ವಿಸ್ತರಣೆಯಲ್ಲಿ 5 ಸ್ಥಾನಗಳನ್ನು ಉತ್ತರ ಕರ್ನಾಟಕಕ್ಕೆ ನೀಡಿ ತಾರತಮ್ಯವನ್ನು ಸ್ವಲ್ಪ ಕಡಿಮೆ ಮಾಡಿದ್ದಾರೆ ಎಂದರು.

    ಇದೇ ವೇಳೆ ರಮೇಶ್ ಜಾರಕಿಹೊಳಿ ಸಂಪುಟದಿಂದ ಕೈಬಿಟ್ಟ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ರಮೇಶ್ ಜಾರಕಿಹೊಳಿ ನನಗೆ ಆತ್ಮೀಯ ಸ್ನೇಹಿತ, ಅವರು ನಮ್ಮ ಜೊತೆಗೆ ಇರುತ್ತಾರೆ. ಅವರೊಂದಿಗೆ ಮಾತನಾಡುತ್ತೇನೆ. ಮಾಜಿ ಸಿಎಂ ಯಡಿಯೂರಪ್ಪ ಅವರು 6 ತಿಂಗಳಿನಿಂದ ಕನಸು ಕಾಣುತ್ತಿದ್ದಾರೆ. ಆದರೆ ಅದು ನಡೆಯಲು ಸಾಧ್ಯವಿಲ್ಲ ಎಂದರು. ಕಳೆದ ಬಾರಿ ಸಚಿವ ಸ್ಥಾನ ಸಿಗದಿದ್ದಕ್ಕೆ ನಾನು ಸೆಕೆಂಡ್ ಕ್ಲಾಸ್ ಸಿಟಿಜನ್ ನಾನು ಅಲ್ಲ ಎಂಬ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆಗೆ ನೀಡಲು ಎಂ.ಬಿ ಪಾಟೀಲ್ ನಿರಾಕರಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಯಡಿಯೂರಪ್ಪ ವಿರುದ್ಧ ಸ್ಪರ್ಧೆಗೆ ನಾನು ಸಿದ್ಧ: ವರ್ತೂರ್ ಪ್ರಕಾಶ್

    ಯಡಿಯೂರಪ್ಪ ವಿರುದ್ಧ ಸ್ಪರ್ಧೆಗೆ ನಾನು ಸಿದ್ಧ: ವರ್ತೂರ್ ಪ್ರಕಾಶ್

    ರಾಯಚೂರು: ಉತ್ತರ ಕರ್ನಾಟಕದಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಎಲ್ಲೇ ಸ್ಪರ್ಧಿಸಿದರೂ ಅವರ ವಿರುದ್ಧ ಎದುರಾಳಿಯಾಗಿ ಸ್ಪರ್ಧಿಸುತ್ತೇನೆ ಎಂದು ಕೋಲಾರದ ಪಕ್ಷೇತರ ಶಾಸಕ ವರ್ತೂರ್ ಪ್ರಕಾಶ್ ಹೇಳಿದ್ದಾರೆ.

    ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ತನಗೆ ಟಿಕೆಟ್ ಕೊಡಿಸುವುದಾಗಿ ಸಿಎಂ ಸಿದ್ದರಾಮಯ್ಯ ಅವರು ಆಶ್ವಾಸನೆಯನ್ನು ನೀಡಿದ್ದಾರೆ ಎಂದು ಶಾಸಕ ವರ್ತೂರ್ ಪ್ರಕಾಶ ಹೇಳಿದ್ದಾರೆ.

    ರಾಯಚೂರಿನಲ್ಲಿ ಈ ಕುರಿತು ಮಾತನಾಡಿದ ಶಾಸಕ ಪ್ರಕಾಶ್, ಯಡಿಯೂರಪ್ಪನವರು ಯಾವುದೇ ಕ್ಷೇತ್ರದಲ್ಲಿ ಸ್ಪರ್ಧಿಸಿದರು ಅಲ್ಲಿ ಲಿಂಗಾಯತ ಮತಗಳ 50 ಸಾವಿರದಿಂದ ಶುರವಾಗುತ್ತದೆ. ನಮ್ಮ ಅಹಿಂದ ಸಮುದಾಯದ ಮತಗಳು 75%ರಷ್ಟಿದ್ದು ಅದರಿಂದ ನಮ್ಮ ಗೆಲುವು ಸುಲಭಸಾಧ್ಯ ಎಂದು ತಿಳಿಸಿದರು.

    ಇದೇ ಸಂದರ್ಭದಲ್ಲಿ ಮುಂದಿನ ಅವಧಿಗೂ ರಾಜ್ಯದಲ್ಲಿ ಸಿದ್ದರಾಮಯ್ಯ ಅವರೆ ಸಿಎಂ ಆಗಬೇಕು. ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟಕ್ಕೂ ಸಿದ್ದರಾಮಯ್ಯನವರಿಗೂ ಯಾವ ಸಂಬಂಧವಿಲ್ಲ. ಬುದ್ಧಿವಂತ ಸಮಾಜದವರು ತಾವೇ ಬೀದಿಗಿಳಿದು ಹೋರಾಟ ನಡೆಸಿದ್ದಾರೆ ಎಂದರು.

    ರಾಜ್ಯ ಸರ್ಕಾರ ರೈತರ ಸಾಲಮನ್ನಾ ಮಾಡಿರುವುದನ್ನ ಲಾಲಿಪಪ್‍ಗೆ ಹೋಲಿಸಿರುವ ಕೇಂದ್ರ ಸಚಿವ ಜಾವೇಡಕರ್ ಗೆ ಸವಾಲು ಎಸೆದ ಶಾಸಕರು, ಕೇಂದ್ರ ಸರ್ಕಾರ ರಾಷ್ಟ್ರೀಕೃತ ಬ್ಯಾಂಕ್‍ಗಳ ಸಾಲಮನ್ನಾ ಮಾಡಿ ಬಿರಿಯಾನಿ ಕೊಡಿಸಲಿ ಅಂತ ಹೇಳಿದರು.