Tag: Former CM HD Kumaraswamy

  • ಡ್ರಗ್ಸ್ ಮಾಫಿಯಾ- ಕುಮಾರಸ್ವಾಮಿ ಹೊಸ ಬಾಂಬ್

    ಡ್ರಗ್ಸ್ ಮಾಫಿಯಾ- ಕುಮಾರಸ್ವಾಮಿ ಹೊಸ ಬಾಂಬ್

    – ಡ್ರಗ್ಸ್ ದಂಧೆಯಲ್ಲಿ ರಾಜಕಾರಣಿಗಳು, ಅಧಿಕಾರಿಗಳು ಶಾಮೀಲು

    ಬೆಂಗಳೂರು: ಡ್ರಗ್ಸ್ ದಂಧೆಯಲ್ಲಿ ರಾಜಕಾರಣಿಗಳು ಮಾತ್ರವಲ್ಲ, ಅಧಿಕಾರಿಗಳೂ ಕೂಡ ಭಾಗಿಯಾಗಿದ್ದಾರೆ. ಆದ್ದರಿಂದ ಈ ಕುರಿತು ಸೂಕ್ತ ತನಿಖೆ ಆಗಬೇಕು ಎಂದು ಮಾಜಿ ಸಿಎಂ ಎಚ್‍ಡಿ ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.

    ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಎಚ್‍ಡಿಕೆ, ತುರುವೇಕೆರೆಯಲ್ಲಿ ಕ್ರಿಕೆಟ್ ಬೆಟ್ಟಿಂಗ್, ಡ್ಯಾನ್ಸ್ ಬಾರ್ ಗಳ ಹಣದಿಂದ ನಮ್ಮ ಸರ್ಕಾರ ತೆಗೆಯಲು ಬಳಸಿದ್ದರು ಎಂದು ನಾನು ಹೇಳಿದ್ದೆ. ನಾನು ಮೈತ್ರಿ ಸರ್ಕಾರದ ಸಿಎಂ ಆದ ಬಳಿಕ ಕ್ರಿಕೆಟ್ ಬೆಟ್ಟಿಂಗ್ ಹಾಗೂ ಡ್ರಾನ್ಸ್ ಬಾರ್ ಸೇರಿದಂತೆ ಅಕ್ರಮ ದಂಧೆಗಳನ್ನು ಮುಚ್ಚಬೇಕು, ಕ್ರಮ ಆಗಬೇಕು ಎಂದು ಸೂಚನೆ ಕೊಟ್ಟಿದೆ. ನನ್ನ ಆದೇಶದ ಮೇರೆಗೆ ಹಲವು ಪ್ರದೇಶಗಳಲ್ಲಿ ರೇಡ್ ಆಗಿತ್ತು. ಆ ವೇಳೆ ರೇಡ್ ಆದ ಕೂಡಲೇ ಕ್ರಿಮಿನಲ್ ಹಿನ್ನೆಲೆ ಹೊಂದಿದ್ದ ವ್ಯಕ್ತಿ ಅಂದು ಶ್ರೀಲಂಕಾಗೆ ಓಡಿ ಹೋಗಿದ್ದ.

    ವಿಧಾನಸೌಧದಲ್ಲಿ ನಾನು ಆ ಕ್ರಿಮಿನಲ್ ಹಿನ್ನೆಲೆ ಹೊಂದಿದ್ದ ವ್ಯಕ್ತಿಯ ಫೋಟೋವನ್ನು ತೋರಿಸಿದ್ದೇನೆ. ಆ ಬಳಿಕ ಆತ ಜಾಮೀನು ಪಡೆದು ವಾಪಸ್ ಆಗಿದ್ದ. ಆತನೇ ಮುಂಬೈಗೆ ಹಾರಿ ಹೋದ ಶಾಸಕರೊಂದಿಗೆ ಇದ್ದ, ಆ ವಿಡಿಯೋ ಎಲ್ಲರ ಬಳಿಯೂ ಇದೆ ಎಂದರು.

    ನನಗೆ ಮದ, ಅಧಿಕಾರದ ಮತ್ತು ಬಂದಿಲ್ಲ. ವಿಶ್ವನಾಥ್ ಬಗ್ಗೆ ಚರ್ಚೆ ಮಾಡಿದರೆ ನನ್ನ ಬಗ್ಗೆ ನಾನೇ ಡಿ ಗ್ರೇಡ್ ಮಾಡಿಕೊಂಡಂತೆ. ಆ ವ್ಯಕ್ತಿಯ ನಡವಳಿಕೆ, ಅಭಿರುಚಿ ನನಗೆ ಗೊತ್ತಿದೆ. ಅವತ್ತೇ ನಾನು ಹೇಳಿದ್ದೆ, ನಾನು ಅವತ್ತು ಮತ್ತಿನಲ್ಲಿ ಮಲಗಿರಲಿಲ್ಲ. 25 ಸಾವಿರ ಕೋಟಿ ರೂ. ಸಂಗ್ರಹಿಸಿ ರೈತರ ಸಾಲ ಮನ್ನಾ ಮಾಡಿದ್ದೆ. ಕೈಗಾರಿಕಾ ಕ್ಲಸ್ಟರ್ ಗೆ ಚಾಲನೆ ನೀಡಿದ್ದೆ. ಇಂದು ಮೋದಿ ಅವರು ಆತ್ಮ ನಿರ್ಭರ ಭಾರತ ಎಂದು ಮಾಡುತ್ತಿದ್ದಾರೆ. ನಾನು ಕಡಿಮೆ ಅವಧಿಗೆ ರಾಜ್ಯದ ಮುಖ್ಯಮಂತ್ರಿ ಆಗಿದ್ದರೂ, ಕಳ್ಳ ಭಟ್ಟಿ, ಲಾಟರಿ, ಸಾರಾಯಿ ನಿಲ್ಲಿಸಿದ್ದೇನೆ. ರಾಜ್ಯಕ್ಕೆ ನನ್ನ ಕೊಡುಗೆ ಅಪಾರವಿದೆ ಎಂದು ತಿಳಿಸಿದರು.

    ಡಾನ್ಸ್ ಬಾರ್, ನೈಟ್ ಬಾರ್ ಗಳಲ್ಲಿ ಡ್ರಗ್ ದಂಧೆಯ ಮೂಲವಿದೆ. ಲಿ ಮೆರಿಡಿಯನ್ ಹೋಟೆಲ್ ನಲ್ಲಿ ಬೆಳಗ್ಗೆ 4 ವರಗೆ ಪಾರ್ಟಿ ನಡೆಯುತ್ತಿತ್ತು. ವಿಠ್ಠಲ್ ಮಲ್ಯ ರೋಡ್ ನಲ್ಲಿ ಮೈಕ್ರೋ ಬ್ರೆವರೀಸ್ ಹೊಟೇಲ್ ಹಿಂದೆಯೂ ಪಾರ್ಟಿಗಳು ನಡೆಯುತ್ತಿತ್ತು. ಇಲ್ಲಿ ಬಂಡವಾಳ ಹೂಡಿಕೆ ಮಾಡಿರುವವರು ಯಾರು? ಈ ಬಗ್ಗೆ ಸರ್ಕಾರ ತನಿಖೆ ಮಾಡಲಿ. ಸರ್ಕಾರದಲ್ಲಿ ಇರುವವರು ಡ್ರಗ್ಸ್ ದಂಧೆಯಲ್ಲಿ ತುಂಬಾ ಜನರಿದ್ದಾರೆ. ಪ್ರಕರಣದ ತಾರ್ಕಿಕ ಅಂತ್ಯ ಕಾಣಬೇಕಾದರೆ ಸೂಕ್ತ ತನಿಖೆ ಆಗಬೇಕು. ಸರಿಯಾದ ತನಿಖೆ ಆಗದೇ ಹೋದರೆ ಈ ಪ್ರಕರಣವೂ ಕೋಲ್ಡ್ ಸ್ಟೋರೇಜ್‍ಗೆ ಹೋಗುತ್ತೆ ಎಂದು ಎಚ್ಚರಿಸಿದರು.

    ಸದ್ಯ ಕೇವಲ ಕೆಲ ನಟ-ನಟಿಯರ ಮೇಲೆ ದಾಳಿ ಆಗಿದೆ. ಅವರು ಮಾತ್ರ ಡ್ರಗ್ಸ್ ದಂಧೆಯಲ್ಲಿದ್ದಾರಾ? ಇನ್ನೂ ಅನೇಕ ಜನ ಇದ್ದಾರೆ. ಈ ಬಗ್ಗೆ ತನಿಖೆ ಆಗಬೇಕು. ರಾಜಕಾರಣಿಗಳು ಮಾತ್ರವಲ್ಲ ಅಧಿಕಾರಿಗಳು ದಂಧೆಯಲ್ಲಿದ್ದಾರೆ ಎಂದು ಆರೋಪಿಸಿದರು.

    ಡ್ರಗ್ಸ್ ಬಗ್ಗೆ ಸದನಲ್ಲಿ ಚರ್ಚೆ ಮಾಡುವುದಿಲ್ಲ. ಇದರಿಂದ ಯಾವುದೇ ಪ್ರಯೋಜನವಿಲ್ಲ. ಜನರ ಪರವಾದ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡುತ್ತೇವೆ. ಡಿಜೆ ಹಳ್ಳಿ ಗಲಭೆ ಬಗ್ಗೆ ಚರ್ಚೆ ಮಾಡಿ ಪ್ರಯೋಜನವೂ ಇಲ್ಲ. ಶಾಸಕರೇ ಏಕೆ ಆಯ್ತು ಅಂತ ಹೇಳಿದ್ದಾರೆ. ಈ ಪ್ರಕರಣದ ಮ್ಯಾಜಿಸ್ಟ್ರೇಟ್ ತನಿಖೆ ಅಂತ ಹೇಳಿದ್ದಾರೆ, ಆದರೆ ತನಿಖೆ ಎಲ್ಲಿಗೆ ಬಂತು. ಕಾಂಗ್ರೆಸ್ ಪಕ್ಷದವರೇ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಜಗತ್ ಜಾಹೀರಾಗಿದೆ. ಈ ಬಗ್ಗೆ ಕಾಂಗ್ರೆಸ್ ನಾಯಕರು ಏನು ಹೇಳುತ್ತಾರೆ. ಆದ್ದರಿಂದ ಸದನದಲ್ಲಿ ಈ ಬಗ್ಗೆ ಚರ್ಚೆ ಮಾಡಿ ಏನು ಪ್ರಯೋಜನ. ಸರ್ಕಾರ ಹೋಗುತ್ತಿರುವ ಮಾರ್ಗ ನೋಡಿದ್ರೆ ದೇವರೆ ಸರ್ಕಾರವನ್ನು ಕಾಪಾಬೇಕು. ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದಂತೆ ದೇವರೆ ಕಾಪಾಡಬೇಕು ಅಷ್ಟೇ ಎಂದರು.

  • ಕಾಂಗ್ರೆಸ್ ಮೈತ್ರಿ ಸರ್ಕಾರವನ್ನ ಬೀಳಿಸಿತ್ತೋ, ಡ್ರಗ್ ಮಾಫಿಯಾ ಬೀಳಿಸಿತೋ- ಸಿಟಿ ರವಿ ವ್ಯಂಗ್ಯ

    ಕಾಂಗ್ರೆಸ್ ಮೈತ್ರಿ ಸರ್ಕಾರವನ್ನ ಬೀಳಿಸಿತ್ತೋ, ಡ್ರಗ್ ಮಾಫಿಯಾ ಬೀಳಿಸಿತೋ- ಸಿಟಿ ರವಿ ವ್ಯಂಗ್ಯ

    – ಎಚ್‍ಡಿಕೆ ವಿರುದ್ಧ ಸಚಿವ ಸಿಟಿ ರವಿ ಟ್ವೀಟ್ ವಾಗ್ದಾಳಿ

    ಬೆಂಗಳೂರು: ಡ್ರಗ್ ಮಾಫಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಆಡಳಿತ ರೂಢ ಸರ್ಕಾರದ ಸಚಿವರು ಹಾಗೂ ಮಾಜಿ ಸಿಎಂ ಎಚ್‍ಡಿ ಕುಮಾರಸ್ವಾಮಿ ಅವರ ನಡುವಿನ ಕೆಸರೆರಚಾಟ ಮುಂದುವರಿದಿದೆ.

    ಕುಮಾರಸ್ವಾಮಿ ಅವರೊಂದಿಗೆ ಟ್ವೀಟ್ ಸಚಿವ ಸುಧಾಕರ್ ನಿನ್ನೆ ಟ್ವೀಟ್ ವಾರ್ ನಡೆಸಿದರೆ, ಇಂದು ಸಚಿವ ಸಿ.ಟಿ. ರವಿ ಮಾಜಿ ಸಿಎಂ ವಿರುದ್ಧ ಟ್ವೀಟ್ ವಾಗ್ದಾಳಿ ಮಾಡಿದ್ದಾರೆ. ಡ್ರಗ್ ಮಾಫಿಯಾ ಮೈತ್ರಿ ಸರ್ಕಾರವನ್ನು ಉರುಳಿಸಿತ್ತು ಎಂಬ ಎಚ್‍ಡಿಕೆ ಅವರ ಹೇಳಿಕೆಗೆ ಸಚಿವ ಸಿಟಿ ರವಿ ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ: ಯಾವ್ಯಾವ ನಾಯಕರಿಗೆ, ಏನೇನೂ ಸೇವೆ ಮಾಡಿ 15 ವರ್ಷದಲ್ಲಿ 2 ಬಾರಿ ಸಿಎಂ ಆದ್ರಿ: ಸುಧಾಕರ್

    ಟ್ವೀಟ್ ಮಾಡಿ ತಿರುಗೇಟು ನೀಡಿರುವ ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ ಅವರು, Odd day ಕಾಂಗ್ರೇಸ್ ನನ್ನ ಸರಕಾರವನ್ನು ಬೀಳಿಸಿತು. ಅನ್ನುವ ತಾವು EvenDay ಡ್ರಗ್ ಮಾಫಿಯಾ ನನ್ನ ಸರಕಾರವನ್ನು ಬೀಳಿಸಿತು ಅನ್ನುತ್ತೀರಿ. ಯಾವುದು ಸತ್ಯ- ಯಾವುದು ಮಿಥ್ಯ? ಭಗವಂತನೇ ಬಲ್ಲ ಈ ನಾಲಿಗೆಯ ಪರಿಯ! ಎಂದು ಹೇಳುವ ಮೂಲಕ ಎಚ್‍ಡಿಕೆ ಕಾಲೆಳೆದಿದ್ದಾರೆ. ಇದನ್ನೂ ಓದಿ: ಸಚಿವ ಸಿಟಿ ರವಿ ಅಧಿಕಾರದ ಮದದ ಮತ್ತಿನಲ್ಲಿ ತೇಲುತ್ತಿದ್ದಾರೆ: ಎಚ್‍ಡಿಕೆ

    ಅಲ್ಲದೇ, ನೀವೇ ಮುಖ್ಯಮಂತ್ರಿಯ ಸ್ಥಾನದಲ್ಲಿ ಕುಳಿತಿದ್ದಾಗ ಡ್ರಗ್ ಮಾಫಿಯಾ ನಿಮ್ಮ ಸರ್ಕಾರವನ್ನು ಬೀಳಿಸುವಷ್ಟು ಪ್ರಬಲವಾಗಿತ್ತೆ ಕುಮಾರಸ್ವಾಮಿಯವರೇ? ಒಂದು ಮಾಫಿಯಾವನ್ನು ಬಗ್ಗುಬಡಿಯದಷ್ಟು ದುರ್ಬಲವಾಗಿತ್ತೆ ತಮ್ಮ ಸರ್ಕಾರ ಮಾಜಿ ಮುಖ್ಯಮಂತ್ರಿಗಳೇ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ರಾತ್ರೋರಾತ್ರಿ ವಿಮಾನ ಬದಲಿಸಿ ಓಡಾಡಿ ಬಂದವರು ನನ್ನ ಬಗ್ಗೆ ಮಾತನಾಡ್ತಿದ್ದಾರೆ- ಸುಧಾಕರ್‌ಗೆ ಎಚ್‍ಡಿಕೆ ಟಾಂಗ್

  • ಸಚಿವ ಸಿಟಿ ರವಿ ಅಧಿಕಾರದ ಮದದ ಮತ್ತಿನಲ್ಲಿ ತೇಲುತ್ತಿದ್ದಾರೆ: ಎಚ್‍ಡಿಕೆ

    ಸಚಿವ ಸಿಟಿ ರವಿ ಅಧಿಕಾರದ ಮದದ ಮತ್ತಿನಲ್ಲಿ ತೇಲುತ್ತಿದ್ದಾರೆ: ಎಚ್‍ಡಿಕೆ

    ಬೆಂಗಳೂರು: ಪ್ರವಾಸೋದ್ಯಮ ಸಚಿವ ಸಿ.ಟಿ. ರವಿಯವರು ಅಧಿಕಾರದ ಮದದ ಮತ್ತಿನಲ್ಲಿ ತೇಲುತ್ತಿದ್ದಾರೆ. ಹೀಗಾಗಿ ಅವರು ಮೊದಲು ತುರ್ತಾಗಿ ಪರೀಕ್ಷೆಗೆ ಒಳಗಾಗುವುದು ಒಳಿತು ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.

    ಸಿಟಿ ರವಿ ಅವರ ‘ಮತ್ತಿನ’ ಆರೋಪಕ್ಕೆ ಟ್ವಿಟ್ಟರ್ ನಲ್ಲಿ ತಿರುಗೇಟು ನೀಡಿರುವ ಎಚ್‍ಡಿಕೆ, ಪ್ರವಾಸೋದ್ಯಮ ಸಚಿವ ಸಿ.ಟಿ. ರವಿಯವರು ಅಧಿಕಾರದ ಮದದ ಮತ್ತಿನಲ್ಲಿ ತೇಲುತ್ತಿದ್ದಾರೆ. ಹೀಗಾಗಿ ಅವರು ಮೊದಲು ತುರ್ತಾಗಿ ಪರೀಕ್ಷೆಗೆ ಒಳಗಾಗುವುದು ಒಳಿತು. ನಾನು ಅಧಿಕಾರದಲ್ಲಿ ಇರಲಿ, ಇಲ್ಲದಿರಲಿ ಸಮಚಿತ್ತದಲ್ಲಿ ಇರುತ್ತೇನೆ. ಅಧಿಕಾರದ ಅಮಲು ಕೆಲವರಿಗೆ ಮಾತ್ರ ತೆವಲು ಎಂದರು ಕಿಡಿಕಾರಿದ್ದಾರೆ.

    ನಾನು ಮುಖ್ಯಮಂತ್ರಿ ಆಗಿದ್ದಾಗ ಕ್ರಿಕೆಟ್ ಬೆಟ್ಟಿಂಗ್, ಮಾದಕ ದ್ರವ್ಯ, ಮೀಟರ್ ಬಡ್ಡಿ ಹತ್ತಿಕ್ಕಲು ವಿಶೇಷ ತಂಡ ರಚಿಸಿದ್ದೆ. ಇದರಿಂದ ಕನಲಿ ಹೋಗಿದ್ದ ದಂಧೆಕೋರರು ಶ್ರೀಲಂಕಾ ಹಾಗೂ ಮುಂಬೈಗೆ ಹಾರಿ ಹೋಗಿದ್ದರು. ಆಮೇಲೆ ಶಾಸಕರನ್ನು ಮುಂಬೈಗೆ ಕರೆದೊಯ್ಯುವಾಗ ಶಾಸಕರ ಜೊತೆ ಕಂಪನಿ ಕೊಟ್ಟಿದ್ದರು ಎಂದು ಆರೋಪಿಸಿದ್ದಾರೆ.

    ಸಿ.ಟಿ. ರವಿ ಬೇರೆಯವರ ಬಗ್ಗೆ ಮಾತನಾಡಿದಂತೆ ನನ್ನ ಬಗ್ಗೆ ಮಾತನಾಡಿದರೆ ನಾನು ಸುಮ್ಮನಿರಲ್ಲ. ಅಧಿಕಾರದಲ್ಲಿ ಇರುವ ಸಚಿವರು ಮಾತಿನಲ್ಲಿ ನಿಗಾ ಇಡುವುದು ಒಳಿತು. ಕ್ರಿಕೆಟ್ ಬೆಟ್ಟಿಂಗ್, ಮಾಫಿಯಾ ಬಳಸಿಕೊಂಡೇ ನಮ್ಮ ಸರಕಾರದಲ್ಲಿದ್ದ ಶಾಸಕರನ್ನು ಬಿಜೆಪಿಯವರು ಬುಕ್ ಮಾಡಿಕೊಂಡಿದ್ದರು ಎಂಬುದು ಗುಟ್ಟಾಗಿ ಉಳಿದಿಲ್ಲ ಎಂದು ಮತ್ತೆ ತಮ್ಮ ಆರೋಪವನ್ನು ಪುನರುಚ್ಚರಿಸಿದರು.

    ಕೆಲ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರನ್ನು ಎರಡು ಗಂಟೆಗೊಂದು ವಿಶೇಷ ವಿಮಾನದ ಮೂಲಕ ಕರೆದುಕೊಂಡು ಹೋದಾಗ ಯಾರು ಜೊತೆಯಲ್ಲಿ ಇದ್ದರು ಎಂಬುದು ಇಡೀ ನಾಡಿಗೆ ಗೊತ್ತಿದೆ. ಶಾಸಕರನ್ನು ಖರೀದಿ ಮಾಡಿ, ಕ್ರಿಕೆಟ್ ಬೆಟ್ಟಿಂಗ್, ಡ್ರಗ್ ಮಾಫಿಯಾದ ಪಾಪದ ಹಣವನ್ನು ಚೆಲ್ಲಿ ಸರ್ಕಾರ ಉಳಿಸಿಕೊಳ್ಳುವ ವ್ಯಕ್ತಿ ನಾನಲ್ಲ. ಅಂತಹ ಕುಕೃತ್ಯಕ್ಕೆ ಇಳಿಯುವ ಜಾಯಮಾನ ನನ್ನದಾಗಿದ್ದರೆ ನನ್ನ ಸರ್ಕಾರವನ್ನು ಅಲುಗಾಡಿಸಲು ಸಾಧ್ಯವಿರಲಿಲ್ಲ ಎಂದಿದ್ದಾರೆ.

    ಖಜಾನೆಗೆ 25 ಸಾವಿರ ಕೋಟಿ ಹಣವನ್ನು ಸಂಗ್ರಹಿಸಿ ರೈತರ ಸಾಲ ಮನ್ನಾ ಮಾಡಿದ ಮುಖ್ಯಮಂತ್ರಿ ನಾನು. ಹೀಗಾಗಿ ಲೂಟಿ ಮಾಡಿದವರು ಅಧಿಕಾರದ ಅಮಲಿನಲ್ಲಿ ತೇಲಾಡುವಾಗ ಬಾಯಿಗೆ ಬಂದಂತೆ ಮಾತನಾಡುತ್ತಿರುವುದನ್ನು ಕೇಳಿಸಿಕೊಳ್ಳಬೇಕಾಗಿಲ್ಲ. ವಾಮಮಾರ್ಗದ ಮೂಲಕ ಅಧಿಕಾರಕ್ಕೆ ಬಂದ ಈ ಸರ್ಕಾರಕ್ಕೆ ಪ್ರಕೃತಿಯು ಸಹಕರಿಸುತ್ತಿಲ್ಲ. ಜನರ ದುಃಖ ದುಮ್ಮಾನಗಳಿಗೆ ಸ್ಪಂದಿಸಲು ಪ್ರಾಮಾಣಿಕ ಪ್ರಯತ್ನ ಮಾಡಿ. ಅದು ಬಿಟ್ಟು ಬಾಯಿ ಚಪಲಕ್ಕೆ ಮಾತನಾಡುವ ಅಧಿಕಾರದ ಅಮಲು ಬಹಳ ಕಾಲ ಉಳಿಯುವುದಿಲ್ಲ ಎಂದು ಎಚ್ಚರಿಸಿದ್ದಾರೆ.

    ಗಿಳಿಯೋದಿ ಫಲವೇನು, ಬೆಕ್ಕು ಬಹುದ ಹೇಳಲರಿಯದು. ಜಗವೆಲ್ಲವ ಕಾಬ ಕಣ್ಣು ತನ್ನ ಕೊಂಬ ಕೊಲ್ಲೆಯ ಕಾಣಲರಿಯದು. ಇದಿರ ಗುಣವ ಬಲ್ಲವೆಂಬರು, ತಮ್ಮ ಗುಣವನರಿಯರು, ಕೂಡಲಸಂಗಮದೇವಾ ಎಂದು ಎಚ್‍ಡಿಕೆ ಟ್ವೀಟ್ ಮಾಡಿದ್ದಾರೆ.

    ಇಂದು ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಸಿಟಿ ರವಿ ಅವರು, ಕುಮಾರಸ್ವಾಮಿ ಅವರ ಆರೋಪಿಗಳಿಗೆ ತಿರುಗೇಟು ನೀಡಿದ್ದರು. ಕುಮಾರಸ್ವಾಮಿ ಅವರನ್ನು ಮೊದಲು ತಪಾಸಣೆ ಮಾಡಬೇಕು. ಅವರು ಮತ್ತಿನಲ್ಲಿ ಹೇಳಿದ್ದಾರಾ? ಅಥವಾ ಸರಿಯಾಗಿದ್ದಾಗಿ ಆ ಹೇಳಿಕೆ ಕೊಟ್ಟಿದ್ದಾರಾ ಟೆಸ್ಟ್ ಮಾಡಿಸಬೇಕು. ಅವರ ಸಂಪುಟದ ಸಚಿವರೇ ರಾಜೀನಾಮೆ ಕೊಟ್ಟಿದ್ದು. ಕುಮಾರಸ್ವಾಮಿ ಕಾಲದ ಇಂಟಲಿಜೆನ್ಸ್ ದುರ್ಬಲವಾಗಿತ್ತಾ? ಅಧಿಕಾರದಲ್ಲಿದ್ದಾಗ ಏಕೆ ಡ್ರಗ್ ಮಾಫಿಯಾ ಕಡಿವಾಣಕ್ಕೆ ಕೈ ಹಾಕಿಲ್ಲ. ರಾಜಕೀಯ ಪ್ರಚಾರದ ಗೀಳಿಗೆ ಕುಮಾರಸ್ವಾಮಿ ಸರ್ಕಾರ ವಿರುದ್ಧ ಆರೋಪ ಮಾಡುತ್ತಿದ್ದಾರೆ ಎಂದಿದ್ದರು.