Tag: forester

  • ಕೊಡಗಿನಲ್ಲಿ ಕಾಡಾನೆ ದಾಳಿಗೆ ಕಾರ್ಮಿಕ ಬಲಿ

    ಕೊಡಗಿನಲ್ಲಿ ಕಾಡಾನೆ ದಾಳಿಗೆ ಕಾರ್ಮಿಕ ಬಲಿ

    ಮಡಿಕೇರಿ: ಕಾಡಾನೆ ದಾಳಿಗೆ ಕಾರ್ಮಿಕನೊಬ್ಬ ಮೃತಪಟ್ಟಿರುವ ಘಟನೆ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ವಾಲ್ನೂರು ಗ್ರಾಮದಲ್ಲಿ ಇಂದು ನಡೆದಿದೆ.

    ತಿರುಚ್ಚನಪಳ್ಳಿಯ ಏಳುಮಲೈ(50) ಮೃತರಾಗಿದ್ದಾರೆ. ತಮಿಳುನಾಡು ಮೂಲದವರಾಗಿದ್ದು, ಪ್ರಭುಗಣಪತಿ ಅವರ ತೋಟದಲ್ಲಿ ಕೆಲಸ ಮಾಡುತ್ತಿದ್ದರು. ಇಂದು ಬೆಳಗ್ಗೆ ಲೈನ್ ಮನೆಯ ಬಳಿಯ ಹೊಳೆಗೆ ತೆರಳಿದ್ದ ಸಂದರ್ಭ ಏಕಾಏಕಿ ಕಾಡಾನೆ ದಾಳಿ ನಡೆಸಿದೆ. ಆನೆ ತೀವ್ರವಾಗಿ ಘಾಸಿಗೊಳಿಸಿ ಸ್ಥಳದಲ್ಲೇ ಕೂಲಿ ಕಾರ್ಮಿಕನನ್ನು ಕೊಂದು ಹಾಕಿದೆ.

    ಕಳೆದ ಒಂದು ವಾರದಿಂದ ಹಲಸಿನ ಹಣ್ಣನ್ನು ತಿನ್ನಲು ಹಿಂಡು ಹಿಂಡು ಕಾಡಾನೆಗಳು ಈ ಭಾಗದಲ್ಲಿ ಲಗ್ಗೆ ಇಡುತ್ತಿವೆ. ಗ್ರಾಮದಲ್ಲಿ ಆತಂಕ ಮೂಡಿದ್ದು, ಕಾರ್ಮಿಕ ಸಂಘಟನೆಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿವೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಏಳುಮಲೈ ಅವರ ಮೃತದೇಹವನ್ನು ತಿರುಚ್ಚನಪಳ್ಳಿಗೆ ಕೊಂಡೊಯ್ಯುವುದಾಗಿ ಕುಟುಂಬ ವರ್ಗ ತಿಳಿಸಿದೆ.

  • ಜೀಪ್ ಬಿಟ್ಟು ಓಡಿ ಹೋದ ಅರಣ್ಯಾಧಿಕಾರಿ..!

    ಜೀಪ್ ಬಿಟ್ಟು ಓಡಿ ಹೋದ ಅರಣ್ಯಾಧಿಕಾರಿ..!

    ಮೈಸೂರು: ರೈತರ ಪ್ರತಿಭಟನೆಗೆ ಹೆದರಿ ಜೀಪ್ ಬಿಟ್ಟು ಅರಣ್ಯಾಧಿಕಾರಿ ಓಡಿ ಹೋಗಿರುವ ಘಟನೆ ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆ ತಾಲೂಕಿನ ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಮೇಟಿಗುಪ್ಪೆ ವಲಯದಲ್ಲಿ ನಡೆದಿದೆ.

    ಮೇಟಿಗುಪ್ಪೆ ವ್ಯಾಪ್ತಿಯಲ್ಲಿ ಹುಲಿ ಕಾಟ ಹೆಚ್ಚಾಗಿದ್ದು, ಹುಲಿ ಹತ್ತಾರು ಹಸುಗಳ ತಿಂದು ಕೊಂದು ಹಾಕಿದೆ. ಹೀಗಾಗಿ ಗ್ರಾಮಸ್ಥರು ಪ್ರತಿಭಟನೆ ಆರಂಭಿಸಿದ್ದರು. ಈ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ಎ.ಸಿ.ಎಫ್ ಕೇಶವಗೌಡ ತಮ್ಮ ಸಿಬ್ಬಂದಿಯ ಜೊತೆ ಬಂದಿದ್ದಾರೆ.

    ಈ ವೇಳೆ ಸ್ಥಳದಲ್ಲೇ ಪರಿಹಾರ ಘೋಷಣೆ ಆಗಬೇಕು. ಹುಲಿ ಹಿಡಿಯುವ ಕಾರ್ಯಾಚರಣೆ ಆರಂಭಿಸಬೇಕು ಎಂದು ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ. ಇದಕ್ಕೆ ಅಧಿಕಾರಿ ನೀಡಿದ ಉತ್ತರದಿಂದ ಜನರು ಸಮಾಧಾನಗೊಂಡಿಲ್ಲ. ಬಳಿಕ ಗ್ರಾಮಸ್ಥರು ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡು ಅಧಿಕಾರಿಯ ಜೀಪಿಗೆ ಅಡ್ಡ ಕುಳಿತ್ತಿದ್ದಾರೆ. ಹೀಗಾಗಿ ಅಧಿಕಾರಿ ಗ್ರಾಮಸ್ಥರ ಮನವೊಲಿಸಲು ಮುಂದಾಗಿದ್ದಾರೆ. ಆದರೆ ಅದು ಸಾಧ್ಯವಾಗದೇ ಕೊನೆಗೆ ಅರಣ್ಯಾಧಿಕಾರಿ ತಮ್ಮ ಜೀಪನ್ನು ಅಲ್ಲೆ ಬಿಟ್ಟು ಅಲ್ಲಿಂದ ಓಡಿಹೋಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪತ್ನಿಯ ಮೇಲೆ ಡೀಸೆಲ್ ಸುರಿದು ಕೊಲೆಗೆ ಯತ್ನಿಸಿದ ಅರಣ್ಯಾಧಿಕಾರಿ!

    ಪತ್ನಿಯ ಮೇಲೆ ಡೀಸೆಲ್ ಸುರಿದು ಕೊಲೆಗೆ ಯತ್ನಿಸಿದ ಅರಣ್ಯಾಧಿಕಾರಿ!

    ರಾಯಚೂರು: ರಾಯಚೂರಿನ ಲಿಂಗಸೂಗೂರಿನ ಉಪವಲಯ ಅರಣ್ಯಾಧಿಕಾರಿಯೊಬ್ಬ ಮನೆಯವರ ಮಾತು ಕೇಳಿ ಪತ್ನಿ ಮೇಲೆ ಡೀಸೆಲ್ ಸುರಿದು ಕೊಲೆ ಮಾಡಲು ಯತ್ನಿಸಿದ ಘಟನೆ ನಡೆದಿದೆ.

    ಅಧಿಕಾರಿ ಸಂಗಮೇಶ್ ಪಾಟೀಲ್ ಲಿಂಗಸುಗೂರಿನ ತನ್ನ ಮನೆಯಲ್ಲಿ ಪತ್ನಿಯ ಮೇಲೆಯೇ ಡೀಸೆಲ್ ಸುರಿದು ಕೊಲೆ ಮಾಡಲು ಯತ್ನಿಸಿದ್ದಾನೆ. 11 ತಿಂಗಳ ಹಿಂದೆ ಅಧಿಕಾರಿ ಮತ್ತು ಶ್ವೇತಾ ಇಬ್ಬರು ಮದುವೆಯಾಗಿದ್ದರು. ಮದುವೆಯಾಗಿದ್ದಾಗಿನಿಂದ ಅಧಿಕಾರಿ ಪತ್ನಿ ಶ್ವೇತಾ ಪಾಟೀಲ್ ಜೊತೆ ಸಂಸಾರ ಮಾಡದೇ ಪ್ರತಿನಿತ್ಯ ಜಗಳವಾಡುತ್ತಿದ್ದನು. ಕೊನೆಗೆ ಒಂದು ದಿನ ಡೀಸೆಲ್ ಸುರಿದು ಕೊಲೆ ಯತ್ನಿಸಿದ್ದಾನೆ ಅಂತ ಪತ್ನಿ ಶ್ವೇತಾ ಲಿಂಗಸಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

    ಸದ್ಯಕ್ಕೆ ಶ್ವೇತಾ ಪಾಟೀಲ್ ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದು, ಲಿಂಗಸುಗೂರು ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಚಿತ್ರದುರ್ಗದಲ್ಲಿ ಸರ್ಕಾರಿ ಸಸಿಗಳನ್ನು ಮಾರಿ ಅರಣ್ಯಾಧಿಕಾರಿ ಅಕ್ರಮ!

    ಚಿತ್ರದುರ್ಗದಲ್ಲಿ ಸರ್ಕಾರಿ ಸಸಿಗಳನ್ನು ಮಾರಿ ಅರಣ್ಯಾಧಿಕಾರಿ ಅಕ್ರಮ!

    ಚಿತ್ರದುರ್ಗ: ಕಾಡು ಬೆಳೆಸಲು ಎಂದು ಸರ್ಕಾರ ಕೊಟ್ಟಿದ್ದ ಸಸಿಗಳನ್ನು ಅರಣ್ಯಾಧಿಕಾರಿಯೊಬ್ಬರು ಅಕ್ರಮವಾಗಿ ಮಾರಾಟ ಮಾಡುತ್ತಿದ್ದಾರೆ ಎಂಬ ಆರೋಪ ಕೋಟೆನಾಡಿನಲ್ಲಿ ಕೇಳಿ ಬರುತ್ತಿದೆ.

    ಚಿತ್ರದುರ್ಗದ ಆರ್‍ಎಫ್‍ಒ ಅಫ್ರಿನ್ ಎಂಬವರು ಸರ್ಕಾರ ನೀಡಿರುವ ಸಸಿಗಳನ್ನು ಖಾಸಗಿಯವರಿಗೆ ಮಾರಾಟ ಮಾಡಿ ಕಾಸು ಮಾಡಿಕೊಳ್ಳುತ್ತಿದ್ದಾರೆ ಎಂದು ಅವರ ವಿರುದ್ಧ ಅಕ್ರಮ ಆರೋಪ ಕೇಳಿಬಂದಿದೆ. ಅರಣ್ಯ ಇಲಾಖೆ ನರ್ಸರಿಗಳಲ್ಲಿ ಬೆಳೆಸಿದ ಎತ್ತರದ ಗಿಡಗಳನ್ನು ಸಂರಕ್ಷಿತ ಅರಣ್ಯ ಪ್ರದೇಶಗಳು ಹಾಗೂ ರಸ್ತೆ ಬದಿಗಳಲ್ಲಿ ನೆಡುತ್ತಿದ್ದಾರೆ. ಅಲ್ಲದೇ ಅಗತ್ಯವಿದ್ದಾಗ ಖಾಸಗಿ ನರ್ಸರಿಗಳಿಂದಲೂ ಸಸಿಗಳನ್ನ ಖರೀದಿಸಿ ಸಸಿಗಳನ್ನು ನೆಡಲಾಗುತ್ತದೆ.

    ಹೊಳಲ್ಕೆರೆ ವಲಯದ ಆರ್ ಎಫ್ ಒ ಅಫ್ರಿನ್ ಮಾತ್ರ ಗಿಡಗಳನ್ನ ಖಾಸಗಿಯವರಿಗೆ ಮಾರಾಟ ಮಾಡುತ್ತಿದ್ದಾರೆ. ನರ್ಸರಿಯಲ್ಲಿ ಖಾಸಗಿ ವಾಹನಕ್ಕೆ ಗಿಡಗಳನ್ನ ತುಂಬಿಸಿಕೊಳ್ಳುತ್ತಿರುವುದನ್ನು ಅರಣ್ಯ ಇಲಾಖೆ ಗಮನಿಸಿದ್ದು, ಬಳಿಕ ಅದನ್ನು ಹಿರಿಯ ಅಧಿಕಾರಿಗಳಿಗೆ ತಿಳಿಸಲಾಗಿದೆ.

    ಇಲಾಖೆಯ ಎಸಿಎಫ್ ಶ್ರೀನಿವಾಸ್, ನರ್ಸರಿಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ವಾಹನದ ಜೊತೆಗೆ ಸಸಿಗಳನ್ನು ಜಪ್ತಿ ಮಾಡಿ ಆರ್‍ಎಫ್‍ಒ ಅಫ್ರಿನ್ ವಿರುದ್ಧ ಮೇಲಾಧಿಕಾರಿಗಳಿಗೆ ಮುಂದಿನ ಕ್ರಮಕ್ಕಾಗಿ ಶಿಫಾರಸ್ಸು ಮಾಡಿದ್ದಾರೆ.