ಚಾಮರಾಜನಗರ: ಕಾಡಾನೆಯೊಂದು ಆಸ್ಪತ್ರೆಗೆ ಹೊರಟ ಆಂಬುಲೆನ್ಸ್ ಅಡ್ಡಗಟ್ಟಿ ತೊಂದರೆಯುಂಟು ಮಾಡಿದ ಘಟನೆ ಚಾಮರಾಜನಗರದಲ್ಲಿ ನಡೆದಿದೆ.
ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಪೊನ್ನಾಚಿ ಗ್ರಾಮದ ಕನಕ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಈ ಹಿನ್ನೆಲೆ ಮಧ್ಯ ರಾತ್ರಿ ಕನಕ ಮತ್ತು ಪೋಷಕರು ಆಂಬುಲೆನ್ಸ್ ನಲ್ಲಿ ಆಸ್ಪತ್ರೆಗೆ ಹೊರಟಿದ್ದಾರೆ. ಈ ವೇಳೆ ರಸ್ತೆಯಲ್ಲಿ ಕಾಡಾನೆಯೊಂದು ನಿಂತಿದೆ. ಇದನ್ನೂ ಓದಿ: ದೇವೇಗೌಡರ ಜನ್ಮದಿನಕ್ಕೆ ಶುಭಕೋರಿದ ಮೋದಿ
ಕಿರಿದಾದ ರಸ್ತೆಯಲ್ಲಿ ವಾಹನಕ್ಕೆ ಜಾಗ ಬಿಡದೇ ಕಾಡಾನೆ ನಿಂತಿತ್ತು. ಆಂಬುಲೆನ್ಸ್‌ನಲ್ಲಿದ್ದವರು ಆನೆಗೆ ಟಾರ್ಚ್‍ಲೈಟ್ ಬಿಟ್ಟು ಓಡಿಸುವ ಪ್ರಯತ್ನ ಮಾಡಿದರು. ಈ ವೇಳೆ ಆಂಬುಲೆನ್ಸ್ ಕಡೆಗೆ ಕಾಡಾನೆ ಓಡಿಬಂದಿದೆ.
ಕೂಡಲೇ ಆಂಬುಲೆನ್ಸ್ ಚಾಲಕ ಹಿಂದಕ್ಕೆ ಚಲಿಸಿದ್ದಾನೆ. ನಂತರ ಕಾಡಾನೆ ಬೇರೆ ದಾರಿಯಲ್ಲಿ ತೆರಳಿದೆ.
ಮುಂಬೈ: ಪ್ರೇಮಿಗಳಿಬ್ಬರು ಏನೇ ಬಂದರೂ ಜೀವನಪೂರ್ತಿ ಸುಖವಾಗಿ ಬಾಳೋಣ ಎಂದು ಪರಸ್ಪರ ಭರವಸೆಗಳನ್ನು ನೀಡುತ್ತಾ, ಹಲವಾರು ಆಸೆ, ಆಕಾಂಕ್ಷೆಗಳನ್ನು ಕಟ್ಟಿಕೊಂಡಿದ್ದರು. ಆದರೆ ಇದೀಗ ಈ ಪ್ರೇಮಿಗಳ ಕನಸನ್ನು ಹುಲಿಯೊಂದು ಭಗ್ನಗೊಳಿಸಿದೆ.
ಹೌದು, ಪ್ರೇಮಿಗಳಿಬ್ಬರು ಕಾಡೋಂದರ ಪೊದೆಯಲ್ಲಿ ಏಕಾಂತದಲ್ಲಿದ್ದ ವೇಳೆ ಹುಲಿಯೊಂದು ಹಿಂದಿನಿಂದ ಬಂದು ದಾಳಿ ನಡೆಸಿದ ಪರಿಣಾಮ ಯುವಕ ಸಾವನ್ನಪ್ಪಿದ್ದು, ಯುವತಿ ಓಡಿ ಹೋಗಿ ಅದೃಷ್ಟವಶಾತ್ ಪ್ರಾಣವನ್ನು ಉಳಿಸಿಕೊಂಡಿರುವ ಘಟನೆ ಮಹಾರಾಷ್ಟ್ರದ ನಾಗುರದ ವಾತ್ಸಾ ಅರಣ್ಯದಲ್ಲಿ ನಡೆದಿದೆ. ಇದನ್ನೂ ಓದಿ: ಟ್ವಿಟ್ಟರ್‌ಗೆ ಎಲಾನ್ ಮಸ್ಕ್ ತಾತ್ಕಾಲಿಕ CEO?
ಮೃತನನ್ನು ಚೋಪ್ (ಕೋರೆಗಾಂವ್) ನಿವಾಸಿ ಅಜಿತ್ ಸೋಮೇಶ್ವರ ನಾಕಾಡೆ (21) ಎಂದು ಗುರುತಿಸಲಾಗಿದೆ. ಮಂಗಳವಾರ ಸಂಜೆ ಅಜಿತ್ ತನ್ನ ಪ್ರಿಯತಮೆಯೊಂದಿಗೆ ಕಾಡಿಗೆ ತೆರಳಿದ್ದಾಗ ಈ ಘಟನೆ ಸಂಭವಿಸಿದೆ. ನಂತರ ಈ ಕುರಿತಂತೆ ಗ್ರಾಮಸ್ಥರಿಂದ ಮಾಹಿತಿ ಪಡೆದ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಯುವಕನ ಶವವನ್ನು ಪತ್ತೆ ಹಚ್ಚಿದ್ದಾರೆ. ಯುವಕನ ಮುಖ ಮತ್ತು ಬೆನ್ನಿನ ಭಾಗವನ್ನು ಹುಲಿ ಸಂಪೂರ್ಣವಾಗಿ ತಿಂದು ಹಾಕಿದ್ದು, ಇದೀಗ ಅರಣ್ಯಾಧಿಕಾರಿಗಳು ಆತನ ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಇನ್ನೂ ಘಟನೆಯಲ್ಲಿ ಯುವತಿಗೂ ಕೂಡ ಗಂಭೀರ ಗಾಯಗೊಂಡಿದ್ದು, ಇದೀಗೆ ಆಕೆಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇದನ್ನೂ ಓದಿ: ಸಾವಿರ ಟ್ವಿಟ್ಟರ್ ಉದ್ಯೋಗಿಗಳನ್ನು ವಜಾಗೊಳಿಸಲು ಮಸ್ಕ್ ಯೋಜನೆ
ನಗರದಿಂದ ಹೊರಗಡೆ 12 ಕಿ.ಮೀ ದೂರದಲ್ಲಿರುವ ಈ ಕಾಡಿನಲ್ಲಿ ಹುಲಿ ಇರುವುದು ಗ್ರಾಮಸ್ಥರಿಗೆ ಮೊದಲೇ ಗೊತ್ತಿದ್ದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಬೋರ್ಡ್‍ಗಳನ್ನು ಸಹ ಹಾಕಲಾಗಿತ್ತು. ಆದರೂ ಅಜಿತ್ ತನ್ನ ವಾಹನವನ್ನು ನಿಲ್ಲಿಸಿ ಹುಡುಗಿಯನ್ನು ಕಾಡಿನ ಪ್ರದೇಶದಲ್ಲಿ ಕರೆದೊಯ್ದು, ನಂತರ ಪೊದೆಯೊಂದರಲ್ಲಿ ಏಕಾಂತದಲ್ಲಿದ್ದಾಗ ಏಕಾಏಕಿ ಹುಲಿ ಹಿಂದಿನಿಂದ ಬಂದು ದಾಳಿ ಮಾಡಿದೆ. ಈ ವೇಳೆ ಹುಲಿ ಬಾಯಿಗೆ ಯುವಕ ಸಿಕ್ಕಿ ಸಾವನ್ನಪ್ಪಿದ್ದಾನೆ.
ಭಾನುವಾರ ಸುರಿದ ಭಾರೀ ಮಳೆಗೆ ಕಾಫಿ ತೋಟದಲ್ಲಿ ಹಾದು ಹೋಗಿರುವ ವಿದ್ಯುತ್ ತಂತಿಗೆ ಮರದ ಕೊಂಬೆ ಮುರಿದು ಬಿದ್ದ ಪರಿಣಾಮ ವಿದ್ಯುತ್ ಕಂಬವು ಸಹಿತ ಮುರಿದು ಬಿದ್ದಿದೆ. ಈ ವೇಳೆ ವಿದ್ಯುತ್ ತಂತಿಗೆ ಕಾಡಾನೆ ಸ್ಪರ್ಶಿಸಿದ್ದು ಆನೆಯು ಸ್ಥಳದಲ್ಲೇ ಸಾವನ್ನಪ್ಪಿದೆ. ಇದನ್ನೂ ಓದಿ: 2 ವರ್ಷಗಳ ಬಳಿಕದ ದಾಖಲೆ – ಅಕ್ಷಯ ತೃತೀಯದಂದು ಭರ್ಜರಿ ಸೇಲ್
ಸ್ಥಳೀಯ ತೋಟದಲ್ಲಿ ಕಾರ್ಮಿಕರು ಕೆಲಸ ಮಾಡುತ್ತಿರುವ ಸಂದರ್ಭದಲ್ಲಿ ದುರ್ವಾಸನೆ ಬಂದಿದ್ದು ಕಾಫಿ ತೋಟದಲ್ಲಿ ಪರಿಶೀಲಿಸಿದಾಗ ಕಾಡಾನೆಯ ಮೃತದೇಹ ಪತ್ತೆಯಾಗಿದೆ. ಕೂಡಲೇ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿದೆ.
ಈ ಹಿನ್ನೆಲೆಯಲ್ಲಿ ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳಾದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಿ ಎನ್ ಎನ್ ಮೂರ್ತಿ, ಡಿ ಸಿ ಎಫ್ ಪೂವಯ್ಯ, ಎ ಸಿ ಎಫ್ ನೆಹರೂ, ಪಶುವೈದ್ಯಾದಿಕಾರಿ ಡಾ ಚೆಟ್ಟಿಯಪ್ಪ, ಕುಶಾಲನಗರ ವಲಯ ಅರಣ್ಯ ಅಧಿಕಾರಿ ಶಿವರಾಮ್, ಉಪವಲಯ ಅರಣ್ಯಾಧಿಕಾರಿ ಕೂಡಕಂಡಿ ಸುಬ್ರಾಯ, ಕನ್ನಂಡ ರಂಜನ್ ಭೇಟಿ ನೀಡಿ ಪರಿಶೀಲಿನೆ ನಡೆಸಿದ್ದಾರೆ.
ಚಿಕ್ಕಮಗಳೂರು: ಈ ಅರಣ್ಯವನ್ನ ಪುರದಮ್ಮ ಹಾಗೂ ರೇವಣಸಿದ್ದೇಶ್ವರ ದೇವರು ಕಾಯುತ್ತಿದ್ದಾರೆ. ಈ ಅರಣ್ಯಕ್ಕೆ ಯಾರಾದರೂ ಬೆಂಕಿ ಹಾಕಿದರೆ ಅವರ ಜೀವನ ಸರ್ವನಾಶವಾಗಲಿದೆ ಎಂದು ಸ್ಥಳಿಯರೇ ಅರಣ್ಯ ರಕ್ಷಣೆಗೆ ಮುಂದಾಗಿ, ಅರಣ್ಯದಲ್ಲಿ ಬ್ಯಾನರ್ ಹಾಕಿರುವ ಅಪರೂಪದ ಘಟನೆಗೆ ತಾಲೂಕಿನ ಸಿಂದಿಗೆರೆ ಮೀಸಲು ಅರಣ್ಯ ವಿಭಾಗ ಸಾಕ್ಷಿಯಾಗಿದೆ.
ಈಗಾಗಲೇ ಕಾಡನ್ನ ಬೆಂಕಿಯಿಂದ ರಕ್ಷಿಸಲು ಅರಣ್ಯ ಇಲಾಖೆ ಸಾಕಷ್ಟು ಕ್ರಮಗಳನ್ನ ಕೈಗೊಂಡಿದೆ. ಆದರೂ, ನಾನಾ ರೀತಿಯ ಮೂಢನಂಬಿಕೆಗಳಿಂದ ಅರಣ್ಯಕ್ಕೆ ಕಿಡಿಗೇಡಿಗಳು ಬೆಂಕಿ ಹಾಕುತ್ತಿದ್ದಾರೆ. ಹಾಗಾಗಿ ಸಿಂದಿಗೆರೆ ಮೀಸಲು ಅರಣ್ಯ ವ್ಯಾಪ್ತಿಯ ದೇವಗೊಂಡನಹಳ್ಳಿ, ಕರಡಿಗವಿಮಠ, ಸಿಂದಿಗೆರೆ, ಎಸ್.ಬಿದರೆ, ಭೂಚೇನಹಳ್ಳಿ ಕಾವಲ್‍ನ ಹಲವು ಕಡೆಗಳಲ್ಲಿ ಈ ರೀತಿಯ ಬ್ಯಾನರ್ ಹಾಕಿ, ಕಿಡಿಗೇಡಿಗಳಿಗೆ ಭಯ ಹುಟ್ಟಿಸಿದ್ದಾರೆ.
ಅರಣ್ಯ ಅಧಿಕಾರಿಗಳು, ಕೇಸ್‍ಗೆಲ್ಲಾ ಹೆದರದವರು ದೇವರಿಗದರೂ ಹೆದರಿ ಬೆಂಕಿ ಹಾಕುವುದನ್ನ ನಿಲ್ಲಿಸಲಿ ಎಂದು ಈ ರೀತಿಯ ಬ್ಯಾನರ್ ಹಾಕಿದ್ದಾರೆ. ಈಗಾಗಲೇ ಅರಣ್ಯಕ್ಕೆ ಬೆಂಕಿ ಬೀಳುವುದನ್ನ ನಿಯಂತ್ರಿಸಲು ಅರಣ್ಯ ಇಲಾಖೆ ಹಲವು ಯೋಜನೆಗಳನ್ನ ಜಾರಿಗೆ ತಂದಿದೆ. ಇಲಾಖಾ ವ್ಯಾಪ್ತಿಯ ಜೊತೆ ಸಾರ್ವಜನಿಕರಿಗೆ ಜಾಗೃತಿಯನ್ನೂ ಮೂಡಿಸಿದ್ದಾರೆ. ಆದರೂ, ಕಿಡಿಗೇಡಿಗಳ ಕೃತ್ಯಕ್ಕೆ ಹಾಗೂ ಮೂಡನಂಬಿಕೆಗೆ ಅರಣ್ಯ ಬಲಿಯಾಗುತ್ತಿದೆ. ಹಾಗಾಗಿ, ಸಿಂದಿಗೆರೆ ಗ್ರಾಮದ ಜನ ಅರಣ್ಯ ರಕ್ಷಣೆ ದೇವರ ಮೊರೆ ಹೋಗಿದ್ದಾರೆ.
ಇತ್ತೀಚೆಗೆ ಅರಣ್ಯ ಇಲಾಖೆ ಬೆಂಕಿ ಅವಘಡಗಳನ್ನ ನಿಯಂತ್ರಿಸಲು ಡ್ರೋಣ್ ಮೊರೆ ಹೋಗಿತ್ತು. ಸೂಕ್ಷ್ಮ ಪ್ರದೇಶದಲ್ಲಿ ಡ್ರೋನ್ ಹಾರಿಸಿ ಕಾಡಿಗೆ ಬೆಂಕಿ ಹಾಕುವವರ ಮೇಲೆ ನಿಗಾ ವಹಿಸಿತ್ತು. ಆದರೂ ಸಿಂದಿಗೆರೆ ಮೀಸಲು ಅರಣ್ಯ ವ್ಯಾಪ್ತಿಯಲ್ಲಿ ಪ್ರತಿ ಬಾರಿ ಕಿಡಿಗೇಡಿಗಳ ಕೃತ್ಯಕ್ಕೆ ಕಾಡಿಗೆ ಬೆಂಕಿ ಹಾಕುವ ಪ್ರಕರಣಗಳು ಅಲ್ಲಲ್ಲಿ ಕಂಡು ಬರುತ್ತಿದ್ದವು. ಹಾಗಾಗಿ ಸ್ಥಳಿಯರು ಈ ಹೊಸ ದಾರಿಯ ಮೂಲಕ ಅರಣ್ಯ ರಕ್ಷಣೆಗೆ ಮುಂದಾಗಿದ್ದಾರೆ.
ನಿಡಗುಂದಿ ತಾಲೂಕಿನ ಗೊಳಸಂಗಿ ಗ್ರಾಮದ ನಿವಾಸಿಯಾಗಿದ್ದ ಈರಪ್ಪ ಗುರುವಾರ ಮಧ್ಯಾಹ್ನ ಕೃಷ್ಣಾ ನದಿ ಸೇತುವೆ ಮೇಲೆ ತನ್ನ ಬೈಕ್ ನಿಲ್ಲಿಸಿದ್ದಾರೆ. ಬೈಕ್‍ನಲ್ಲಿ ಮೊಬೈಲ್ ಹಾಗೂ ಹಗ್ಗವನ್ನಿಟ್ಟು ತನ್ನ ಅರಣ್ಯ ಇಲಾಖೆಯ ಸಮವಸ್ತ್ರ ಸಹಿತ ಸೇತುವೆ ಮೇಲಿಂದ ನದಿಗೆ ಹಾರಿರಬಹುದು ಎಂದು ಶಂಕೆ ವ್ಯಕ್ತವಾಗಿದೆ.
ಮುಂಬೈ: ಅರಣ್ಯ ಅಧಿಕಾರಿಯೊಬ್ಬರಿಗೆ ಪುಣೆಯಿಂದ ಕೊಲ್ಲಾಪುರಕ್ಕೆ ವರ್ಗಾವಣೆಯಾಗಿತ್ತು. ಅಧಿಕಾರ ವಹಿಸಿಕೊಳ್ಳವ ಶುಭ ಸಂದರ್ಭದಲ್ಲಿ ಪರಿಸರ ಜಾಗೃತಿ ಮೂಡಿಸಲು 249 ಕಿ.ಮೀ ಸೈಕಲ್ ತುಳಿದು ಎಲ್ಲೆಡೆ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಮಹಾರಾಷ್ಟ್ರದ ಅರಣ್ಯ ಅಧಿಕಾರಿ ನಾನಾ ಸಾಹೇಬ್ ಲಾಡ್ಕತ್, ಬಿರು ಬಿಸಿಲ ನಡುವೆ ಕೆಲ ಘಟ್ಟ ಪ್ರದೇಶಗಳನ್ನು ದಾಟಿ 17 ಗಂಟೆಗಳ ನಂತರ ಕೊಲ್ಲಾಪುರ ತಲುಪಿದ್ದಾರೆ. ಈ ವೇಳೆ 12 ಗಂಟೆಗಳ ಕಾಲ ಸೈಕಲ್ ತುಳಿದಿದ್ದಾರೆ. ಇದನ್ನೂ ಓದಿ: ಕ್ರಿಶ್ಚಿಯನ್ ವರ, ಮುಸ್ಲಿಂ ವಧು ಹಿಂದೂ ಸಂಪ್ರದಾಯದಂತೆ ಮದುವೆ
ಲಾಡ್ಕತ್ ಸಹ್ಯಾದ್ರಿ ಹುಲಿ ಸಂರಕ್ಷಿತಾರಣ್ಯದ ಸಂರಕ್ಷಣಾಧಿಕಾರಿ ಮತ್ತು ಕ್ಷೇತ್ರ ನಿರ್ದೇಶಕ ಹುದ್ದೆ ಸ್ವೀಕರಿಸಿದ್ದಾರೆ. ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆಯ ಸಂದೇಶ ನೀಡುವುದು ಸ್ಲೈಕ್ಲಿಂಗ್ ಹಿಂದಿನ ಉದ್ದೇಶ ಎಂದು ಲಾಡ್ಕತ್ ಹೇಳಿದರು.
ಬಿಸಿಲಿನ ತೀವ್ರತೆ ಹೆಚ್ಚಳದಿಂದ ಸ್ವಲ್ಪ ವಿರಾಮದ ಅಗತ್ಯವಿತ್ತು. ಪುಣೆ ಮತ್ತು ಸಾತರ ಜಿಲ್ಲೆ ನಡುವಿನ ಕಾಂಬಟ್ಕಿ ಘಟ್ಟ ಪ್ರದೇಶದಲ್ಲಿ ತೆರಳುವುದು ಸವಾಲಿನಿಂದ ಕೂಡಿತ್ತು. ಆದರೆ ಹೇಗೋ ಅದನ್ನು ನಿರ್ವಹಿಸಿದೆ. ಸ್ಲೈಕ್ಲಿಂಗ್ ನನ್ನ ಹವ್ಯಾಸವಾಗಿದೆ. ಆರಂಭದಲ್ಲಿ ದಿನವೊಂದರಲ್ಲಿ 60 ಕಿಲೋ ಮೀಟರ್ ದಾಟಿರಲಿಲ್ಲ. ಆದರೆ ಕೊಲ್ಲಾಪುರಕ್ಕೆ ವರ್ಗಾವಣೆಯಾದಾಗ ಅಲ್ಲಿಗೆ ಒಂದು ದಿನದಲ್ಲಿಯೇ ಸೈಕಲ್ ನಲ್ಲಿಯೇ ಹೋಗಬೇಕೆಂದು ನಿರ್ಧರಿಸಿದ್ದೆ ಎಂದು ಖಾಸಗಿ ವಾಹಿನಿಗೆ ಹೇಳಿದ್ದಾರೆ.
ಚಿತ್ರದುರ್ಗ: ಕಿಡಿಗೇಡಿಗಳು ಬೆಂಕಿ ಹಾಕಿರುವ ಹಿನ್ನೆಲೆಯಲ್ಲಿ ನಿನ್ನೆ ತಡರಾತ್ರಿ ನಗರದ ಜೋಗಿಮಟ್ಟಿ ಗಿರಿಧಾಮವು ಹೊತ್ತಿ ಉರಿದಿದೆ.
ಒಣಹುಲ್ಲಿಗೆ ಬೆಂಕಿ ತಗುಲಿದ ಪರಿಣಾಮ ಜೋಗಿಮಟ್ಟಿ ಅರಣ್ಯಧಾಮದಲ್ಲಿದ್ದ ಅಪಾರ ಔಷಧಿ ಸಸಿಗಳು, ಗಿಡಮೂಲಿಕೆಗಳು ಹಾಗೂ ಕೆಲ ಬೆಲೆಬಾಳುವ ಗಿಡಮರಗಳು ಸರ್ವನಾಶವಾಗಿವೆ. ಹೀಗಾಗಿ ಕೋಟೆನಾಡಿನ ಪರಿಸರವಾದಿಗಳು ಕಿಡಿಗೇಡಿಗಳ ದುಷ್ಕೃತ್ಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ವೇಳೆ ಕಾಡಿಗೆ ಬೆಂಕಿ ಬಿದ್ದಿರುವ ವಿಚಾರ ತಿಳಿದ ಅಗ್ನಿಶಾಮಕದಳವು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಲು ಹರಸಾಹಸಪಟ್ಟಿದ್ದಾರೆ. ಕ್ಷಣಾರ್ಧದಲ್ಲೇ ಆಡುಮಲ್ಲೇಶ್ವರ ರಸ್ತೆಯ ಸದ್ಗುರು ಸೇವಾಶ್ರಮದವರೆಗೆ ವ್ಯಾಪಿಸಿದ್ದ ಬೆಂಕಿಯನ್ನು ನಂದಿಸುವಲ್ಲಿ ಸಿಬ್ಬಂದಿ ಯಶಸ್ವಿಯಾಗಿದ್ದು, ಅದೃಷ್ಟವಶಾತ್ ಭಾರೀ ಅನಾಹುತ ತಪ್ಪಿದೆ. ಇದನ್ನೂ ಓದಿ: ನಿಶ್ಚಿತಾರ್ಥ ಮಾಡಿಕೊಂಡ ಸಂಜನಾ ಸಹೋದರಿ ನಿಕ್ಕಿ ಗಲ್ರಾನಿ
ಸೂಕ್ತ ಸಮಯಕ್ಕೆ ಸರಿಯಾಗಿ ಸ್ಥಳಕ್ಕೆ ಧಾವಿಸಿ, ಬೆಂಕಿಯನ್ನು ನಂದಿಸಿದ ಅಗ್ನಿಶಾಮಕದಳದ ಸಿಬ್ಬಂದಿಯು ಕಾರ್ಯಪ್ರವೃತ್ತರಾಗದಿದ್ದರೆ ಆಶ್ರಮ ಸೇರಿದಂತೆ ಸಮೀಪದಲ್ಲಿದ್ದ ಕ್ಯಾಂಟೀನ್ ಸಹ ಬೆಂಕಿಗೆ ಆಹುತಿಯಾಗುವ ಆತಂಕ ಎದುರಾಗಿತ್ತು. ಇಷ್ಟೆಲ್ಲಾ ಅವಾಂತರ ನಡೆದರೂ ಸಹ ಯಾವೊಬ್ಬ ಅರಣ್ಯ ಇಲಾಖೆಯ ಮೇಲಾಧಿಕಾರಿಗಳು ಸ್ಥಳಕ್ಕೆ ಧಾವಿಸದೇ ಕೇವಲ ಡಿ ದರ್ಜೆಯ ನೌಕರರು ಮಾತ್ರ ಬೆಂಕಿ ನಂದಿಸಲು ಮುಂದಾಗಿದ್ದರು. ಘಟನೆಯು ಅಧಿಕಾರಿಗಳ ನಿರ್ಲಕ್ಷಕ್ಕೆ ಹಿಡಿದ ಕೈಗನ್ನಡಿಯಾಗಿತ್ತು.
ಚಿಕ್ಕಮಗಳೂರು: ಅರಣ್ಯ ಪ್ರದೇಶದಲ್ಲಿ ಮರಿ ಜೊತೆ ಇದ್ದ ಆನೆ ಮೇಲೆ ಜೆಸಿಬಿ ಚಾಲಕ ಜೆಸಿಬಿಯಲ್ಲಿ ಹೆದರಿಸಿ ಹಿಂದೆ ಓಡಿಸಿರುವ ಘಟನೆ ಜಿಲ್ಲೆಯ ತಣಿಗೇಬೈಲು ಅರಣ್ಯ ಪ್ರದೇಶದಲ್ಲಿ ನಡೆದಿದೆ.
ಅರಣ್ಯಪ್ರದೇಶದಲ್ಲಿ ಸ್ವಚ್ಛಂದವಾಗಿ ವಿಹರಿಸುತ್ತಿದ್ದ ಮೂಕಪ್ರಾಣಿಗಳ ಮೇಲೆ ಜೆಸಿಬಿಯಲ್ಲಿ ದೌರ್ಜನ್ಯ ಎಸಗಿದ ಜೆಸಿಬಿ ಸಿಬ್ಬಂದಿಯೇ ಅದನ್ನು ವೀಡಿಯೋ ಮಾಡಿ ವಿಕೃತಿ ಮೆರೆದಿದ್ದಾರೆ. ಇದೀಗ ವೀಡಿಯೋ ವೈರಲ್ ಆಗಿದ್ದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ಅಭಯಾರಣ್ಯದಲ್ಲಿ ಯಂತ್ರಗಳ ಮೂಲಕ ಕೆಲಸ ಮಾಡುವುದಕ್ಕೆ ಆರಂಭದಿಂದಲೂ ಇಲಾಖೆ ಮೇಲೆ ಅಸಮಾಧಾನವಿದೆ. ಈ ಮಧ್ಯೆ ಅರಣ್ಯದಲ್ಲಿನ ರಸ್ತೆಯನ್ನು ಅಭಿವೃದ್ದಿಪಡಿಸಲು ಖಾಸಗಿ ವ್ಯಕ್ತಿಗಳಿಗೆ ಟೆಂಡರ್ ಮೂಲಕ ಕೆಲಸವನ್ನು ನೀಡಲಾಗಿದೆ. ಇದನ್ನೂ ಓದಿ:ಚುನಾವಣೆವರೆಗೆ ಸುಮ್ಮನಿದ್ದು, ಪೆಟ್ರೋಲ್, ಡಿಸೇಲ್, ಗ್ಯಾಸ್ ಬೆಲೆ ಏರಿಕೆ ಮಾಡಿದ್ದಾರೆ: ಡಿಕೆಶಿ
ಗುತ್ತಿಗೆದಾರರು ಅಭಯಾರಣ್ಯದೊಳಗೆ ಜೆಸಿಬಿಯನ್ನು ಬಳಸಿ ರಸ್ತೆ ಅಭಿವೃದ್ಧಿಪಡಿಸುತ್ತಿರುವುದು ಕೂಡ ಪರಿಸರವಾದಿಗಳ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ತಣಿಗೇಬೈಲು ಪ್ರದೇಶದಲ್ಲಿ ರಸ್ತೆಯನ್ನು ಅಭಿವೃದ್ಧಿ ಕಾಮಗಾರಿ ನಡೆಯುವ ವೇಳೆ ಕಾಡಾನೆಗಳ ಹಿಂಡು ಎದುರಾಗಿದೆ. ಈ ವೇಳೆ ವನ್ಯಜೀವಿಗಳ ಸುಗಮ ಸಂಚಾರಕ್ಕೆ ಅವಕಾಶ ನೀಡದೆ. ಮೂಕಪ್ರಾಣಿಗಳಿಗೆ ಜೆಸಿಬಿಯಿಂದ ಹೆದರಿಸಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಜೆಸಿಬಿಯನ್ನು ಕಂಡ ಕಾಡಾನೆ ತನ್ನ ಮರಿಯ ರಕ್ಷಣೆಗೆ ಮುಂದಾಗಿದ್ದು, ಈ ವೇಳೆ ಜೆಸಿಬಿ ಚಾಲಕ ಆನೆಗೆ ಜೆಸಿಬಿಯಿಂದ ಹೆದರಿಸಿದ್ದಾನೆ. ಮರಿ ಇದ್ದ ಕಾರಣ ಆನೆ ಕೂಡ ಜೆಸಿಬಿಗೆ ಬೆದರಿ ಹಿಂದೆ ಹೋಗಿದೆ. ಅರಣ್ಯದಲ್ಲಿ ಮೂಕಪ್ರಾಣಿಗಳ ಮೇಲೆ ಹೀಗೆ ಯಂತ್ರಗಳಿಂದ ದೌರ್ಜನ್ಯ ಎಸಗಿ ವೀಡಿಯೋ ಮಾಡಿ ವಿಕೃತಿ ಮೆರೆದಿರೋದು ಜೆಸಿಬಿ ಚಾಲಕನ ವಿರುದ್ಧ ಸಾರ್ವಜನಿಕರು, ಪರಿಸರವಾದಿಗಳು ತೀವ್ರ ಆಕ್ರೋಶ ಹೊರಹಾಕಿದ್ದು, ತಡವಾಗಿ ಎಚ್ಚೆತ್ತ ಅರಣ್ಯ ಇಲಾಖೆ ಜೆಸಿಬಿ ಚಾಲಕನ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಇದನ್ನೂ ಓದಿ:ಇದೆ ಮೊದಲ ಬಾರಿ ಬಿಡಿಎ ಬ್ರೋಕರ್‌ಗಳ ಮನೆ ಮೇಲೆ ಎಸಿಬಿ ದಾಳಿ
ಅಭಯಾರಣ್ಯದೊಳಗೆ ವನ್ಯಜೀವಿಗಳು ಮುಕ್ತವಾಗಿ ಸಂಚರಿಸಲು ಅವಕಾಶ ಇರಬೇಕು. ಅವುಗಳಿಗೆ ಯಾವುದೇ ತೊಂದರೆಯಾಗಬಾರದು. ಈ ನಿಟ್ಟಿನಲ್ಲಿ ಅಭಯಾರಣ್ಯದ ವ್ಯಾಪ್ತಿಯೊಳಗೆ ಯಾವುದೇ ಕೆಲಸ ಮಾಡುವಾಗ ಅರಣ್ಯ ಇಲಾಖೆ ಸಾಕಷ್ಟು ಮುನ್ನೆಚ್ಚರಿಕಾ ಕ್ರಮಗಳನ್ನ ಕೈಗೊಳ್ಳಬೇಕು. ಅರಣ್ಯದಲ್ಲಿ ಜೆಸಿಬಿ ಸೇರಿದಂತೆ ಯಂತ್ರಗಳ ಬಳಕೆಯನ್ನು ಆದಷ್ಟು ಕಡಿಮೆ ಮಾಡಿ ಕಾರ್ಮಿಕರಿಂದಲೇ ಕೆಲಸ ಮಾಡಿಸಲು ಅರಣ್ಯ ಇಲಾಖೆ ಮುಂದಾಗಬೇಕೆಂದು ಜನಸಾಮಾನ್ಯರು ಹಾಗೂ ಪರಿಸರವಾದಿಗಳು ಆಗ್ರಹಿಸಿದ್ದಾರೆ.
ಚಿಕ್ಕಮಗಳೂರು: ವೃದ್ಧನೊಬ್ಬ ಮೀಸಲು ಅರಣ್ಯಕ್ಕೆ ಬೆಂಕಿ ಹಚ್ಚುವಾಗಲೇ ಅರಣ್ಯ ಇಲಾಖೆ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿರುವ ಘಟನೆ ತಾಲೂಕಿನ ಸಿಂದಿಗೆರೆ ಗ್ರಾಮದಲ್ಲಿ ನಡೆದಿದೆ.
ಬಂಧಿತನನ್ನು ಸುಮಾರು 60 ವರ್ಷದ ಬಸವೇಗೌಡ ಎಂದು ಗುರುತಿಸಲಾಗಿದೆ. ವೃದ್ಧನನ್ನು ಬಂಧಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಯಾಕೆ ಅರಣ್ಯಕ್ಕೆ ಬೆಂಕಿ ಹಚ್ಚುತ್ತಿದ್ದೀಯಾ ಎಂದು ಪ್ರಶ್ನಿಸಿದ್ದಾರೆ. ಈ ವೇಳೆ ವೃದ್ಧನ ಉತ್ತರ ಕೇಳಿದ ಅಧಿಕಾರಿಗಳೇ ಶಾಕ್ ಆಗಿದ್ದಾರೆ.
ವೃದ್ಧ ನಿಸಿದ ಉತ್ತರವೇನು..?
ಬೇರೆ ಯಾರದರೂ ಬೆಂಕಿ ನೀಡಿದರೆ ಬೆಂಕಿ ನನ್ನ ಹೊಲಕ್ಕೂ ಬರಬಹುದು. ಅದಕ್ಕೆ ನಾನೇ ನನ್ನ ಹೊಲಕ್ಕೆ ಬೆಂಕಿ ಬಾರದಿರಲಿ ಎಂದು ಬೆಂಕಿ ನೀಡಿದ್ದೇನೆ ಎಂದು ಒಪ್ಪಿಕೊಂಡಿದ್ದಾರೆ. ವೃದ್ಧನ ಮಾತು ಕೇಳಿದ ಅರಣ್ಯ ಅಧಿಕಾರಿಗಳು ಆತನಿಗೆ ಭಾರೀ ಪ್ರಮಾಣದಲ್ಲಿ ದಂಡ ಹಾಕಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಜಿಲ್ಲೆಯಲ್ಲಿ ಈಗಾಗಲೇ ಅಲ್ಲಲ್ಲಿ ಬೆಂಕಿ ಬೀಳುತ್ತಿದ್ದು, ನೂರಾರು ಎಕರೆ ಅರಣ್ಯ ಪ್ರದೇಶ ಸುಟ್ಟು ಕರಕಲಾಗಿದೆ. ಪ್ರಾಣಿ-ಪಕ್ಷಿಗಳು ಸಾವನ್ನಪ್ಪಿವೆ. ಹೀಗಾಗಿ, ಅರಣ್ಯ ಇಲಾಖೆ ಅಧಿಕಾರಿಗಳು ಬೆಂಕಿಯಿಂದ ಕಾಡನ್ನ ರಕ್ಷಿಸಲು ಹರಸಾಹಸ ಪಡುತ್ತಿದ್ದಾರೆ. ಅಧಿಕಾರಿಗಳು ಈಗಾಗಲೇ ಫೈರ್ ಲೈನ್, ಸ್ಥಳಿಯರಿಗೆ ಅರಣ್ಯದ ಬಗ್ಗೆ ಮಾಹಿತಿ, ಬೀದಿನಾಟಕ, ಕರಪತ್ರ, ಭಿತ್ತಿಪತ್ರಗಳ ಮೂಲಕ ಕಾಡಿನ ಮಹತ್ವ ಸಾರುತ್ತ ಕಾಡನ್ನು ರಕ್ಷಿಸಲು ಮುಂದಾಗಿದ್ದಾರೆ. ಸ್ಥಳೀಯರಲ್ಲಿ ಮನವಿ ಮಾಡುತ್ತಿದ್ದಾರೆ. ಆದರೆ ಹಳ್ಳಿಗಳಲ್ಲಿ ಕೆಲವರ ಅಜ್ಞಾನದಿಂದ ಈ ರೀತಿಯ ಘಟನೆಗಳು ನಡೆಯುತ್ತಲೇ ಇವೆ. ಇದನ್ನೂ ಓದಿ: ನಾನೇನು ಕಚ್ಚುವುದಿಲ್ಲ, ಮತ್ತೇಕೆ ನಿಮಗೆ ಭಯ? – ಪುಟೀನ್‍ಗೆ ವ್ಯಂಗ್ಯ ಮಾಡಿದ ಉಕ್ರೇನ್ ಅಧ್ಯಕ್ಷ
ಬಂಧಿತ ಬಸವೇಗೌಡ ಬೆಂಕಿ ನೀಡಿದ್ದರಿಂದ ಸುಮಾರು 10 ಎಕರೆಯಷ್ಟು ಅರಣ್ಯ ಸುಟ್ಟು ಹೋಗಿದೆ. ಅಪರೂಪದ ಸಸ್ಯ ಸಂಪತ್ತು ಕೂಡ ನಾಶವಾಗಿದೆ. ಬಯಲುಸೀಮೆ ಭಾಗದಲ್ಲಿ ದನ-ಕುರಿಗಳನ್ನು ಸಾಕುವವರ ಸಂಖ್ಯೆಯೂ ಹೆಚ್ಚಿದೆ. ಅರಣ್ಯ ಬೆಂಕಿ ನೀಡಿದರೆ ಮಳೆ ಬಂದ ಕೂಡಲೇ ಹುಲ್ಲು ಹುಲುಸಾಗಿ ಬೆಳೆಯುತ್ತೆ ಎಂದು ಕೆಲ ಸ್ಥಳಿಯರೇ ಅರಣ್ಯ ಬೆಂಕಿ ಕೊಡುತ್ತಾರೆ. ಇದನ್ನೂ ಓದಿ: ಗಡಿಗಳಲ್ಲಿ ಹೆಣ್ಮಕ್ಕಳ ಮೇಲೆ ಸೈನಿಕರಿಂದ ಹಲ್ಲೆ – ಕರಾಳತೆ ಬಿಚ್ಚಿಟ್ಟ ವಿದ್ಯಾರ್ಥಿನಿಯರು
ಅರಣ್ಯಕ್ಕೆ ಬೆಂಕಿ ಕೊಡುವುದು ತುಂಬಾ ಸುಲಭ. ಅದರಿಂದ ಆಗುವ ಆನಾಹುತ, ಅದನ್ನ ಆರಿಸಲು ಎಷ್ಟು ಕಷ್ಟ ಎಂಬುದರ ಅರಿವು ಅವರಿಗೆ ಇರುವುದಿಲ್ಲ. ಹೀಗಾಗಿ, ಅಧಿಕಾರಿಗಳು ಕೂಡ ಸ್ಥಳೀಯರಲ್ಲಿ ಅರಣ್ಯಕ್ಕೆ ಬೆಂಕಿ ಕೊಡಬೇಡಿ ಎಂದು ಮನವಿ ಮಾಡಿದ್ದಾರೆ. ಈ ಕಾರ್ಯಚರಣೆಯಲ್ಲಿ ವಲಯ ಅರಣ್ಯಾಧಿಕಾರಿ ಸ್ವಾತಿ, ಉಪವಲಯ ಅರಣ್ಯಾಧಿಕಾರಿ ಪ್ರದೀಪ್, ಅರಣ್ಯ ರಕ್ಷಕ ಆದರ್ಶ್ ಹಾಗೂ ಅರಣ್ಯ ವೀಕ್ಷಕ ಗಿರೀಶ್ ಪಾಲ್ಗೊಂಡಿದ್ದರು.
ಚಿಕ್ಕಮಗಳೂರು: ಗುಡ್ಡಕ್ಕೆ ಬೆಂಕಿ ತಗುಲಿ ಹತ್ತಾರು ಎಕರೆ ಅರಣ್ಯ ಪ್ರದೇಶ ಬೆಂಕಿಗಾಹುತಿಯಾಗಿರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸಮೀಪದ ದೇವನಗೂಲ್ ಎಂಬ ಅರಣ್ಯ ಪ್ರದೇಶದಲ್ಲಿ ನಡೆದಿದೆ.
ಕಿಡಿಗೇಡಿಗಳು ಅರಣ್ಯಕ್ಕೆ ಬೆಂಕಿ ಹಚ್ಚಿರುವ ಶಂಕೆ ವ್ಯಕ್ತವಾಗಿದೆ. ಮಳೆಗಾಲದಲ್ಲಿ ಕೊಟ್ಟಿಗೆಹಾರ ಸುತ್ತಮುತ್ತ ಭಾರೀ ಮಳೆ ಸುರಿದಿತ್ತು. ಈಗ ಅಷ್ಟೇ ಪ್ರಮಾಣದ ರಣಬಿಸಿಲು ಕೂಡಾ ಇದೆ. ಭಾರೀ ಬಿಸಿಲಿಗೆ ಬೆಟ್ಟಗುಡ್ಡಗಳೆಲ್ಲಾ ಒಣಗಿ ನಿಂತಿದೆ. ಕಿಡಿ ಬೆಂಕಿ ಸಿಕ್ಕರೂ ಇಡೀ ಕಾಡೇ ಹೊತ್ತಿ ಉರಿಯುವ ಸ್ಥಿತಿಯಲ್ಲಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಕೂಡ ಕಾಡನ್ನು ರಕ್ಷಿಸಲು ಹರಸಾಹಸ ಪಡುತ್ತಿದ್ದಾರೆ. ಇದನ್ನೂ ಓದಿ:ವೆಲ್ ಕಮ್ ಬ್ಯಾಕ್! ನಿಮ್ಮ ಕುಟುಂಬಗಳು ನಿಮಗಾಗಿ ಉಸಿರು ಬಿಗಿಹಿಡಿದು ಕಾಯುತ್ತಿವೆ: ಸ್ಮೃತಿ ಇರಾನಿ
ಫೈರ್ ಲೈನ್, ಸ್ಥಳಿಯರಿಗೆ ಅರಣ್ಯದ ಬಗ್ಗೆ ಮಾಹಿತಿ, ಬೀದಿನಾಟಕ, ಕರಪತ್ರ, ಭಿತ್ತಿಪತ್ರಗಳ ಮೂಲಕ ಕಾಡಿನ ಮಹತ್ವ ಸಾರುತ್ತ ಕಾಡನ್ನು ರಕ್ಷಿಸಲು ಮುಂದಾಗಿದ್ದಾರೆ. ಆದರೆ, ಕಿಡಿಗೇಡಿಗಳು ಬೆಂಕಿ ಹಚ್ಚಿದ ಪರಿಣಾಮ ದೇವನಗೂಲ್ ಸಮೀಪ ಹತ್ತಾರು ಎಕರೆ ಅರಣ್ಯ ಸಂಪೂರ್ಣ ಸುಟ್ಟು ಕರಕಲಾಗಿದೆ. ದಟ್ಟ ಕಾನನದ ಈ ಭಾಗದಲ್ಲಿ ಅಪಾರ ಪ್ರಮಾಣದ ಅಪರೂಪದ ಸಸ್ಯ ಸಂಪತ್ತು ಕೂಡ ಇದೆ. ಆದರೆ, ಬೆಂಕಿಯ ಕೆನ್ನಾಲಿಗೆ ಹತ್ತಾರು ಎಕರೆ ಅರಣ್ಯ ಸಂಪೂರ್ಣ ಸುಟ್ಟು ಕರಕಲಾಗಿರುವುದರಿಂದ ಅಪರೂಪದ ಸಸ್ಯ ಸಂಪತ್ತು ಕೂಡ ನಾಶವಾಗಿದೆ.
ವಿಷಯ ತಿಳಿದ ಕೂಡಲೇ ಅರಣ್ಯ ಪ್ರದೇಶಕ್ಕೆ ದೌಡಾಯಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸ ಪಟ್ಟಿದ್ದಾರೆ. ವಿಷಯ ತಿಳಿದ ಕೂಡಲೇ ಅಗ್ನಿಶಾಮಕ ಸಿಬ್ಬಂದಿಗಳು ಕೂಡ ಸ್ಥಳಕ್ಕಾಗಮಿಸಿ ಬೆಂಕಿಯನ್ನ ನಂದಿಸಿದ್ದಾರೆ. ಅರಣ್ಯ ಅಧಿಕಾರಿಗಳು ಮರದ ಟೊಂಗೆಗಳ ಮೂಲಕ ಬೆಂಕಿಯನ್ನು ನಂದಿಸಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳ ಸಮಯಪ್ರಜ್ಞೆಯಿಂದ ಅರಣ್ಯದ ಜೊತೆ ಸಾವಿರಾರು ಜೀವಸಂಕುಲ ಕೂಡ ಅಪಾಯದಿಂದ ಪಾರಾಗಿವೆ.
ಮೂಡಿಗೆರೆ ಸಂಪೂರ್ಣ ಮಲೆನಾಡದರೂ ಮಾರ್ಚ್-ಏಪ್ರಿಲ್ ಬಿರುಬಿಸಲು ಕಾಲ. ಈ ವೇಳೆ ಅರಣ್ಯ ಅಧಿಕಾರಿಗಳು ಕಾಡನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಪಾಡುತ್ತಾರೆ. ಸ್ವಲ್ಪ ಎಚ್ಚರ ತಪ್ಪಿದರೂ ದೊಡ್ಡ ಅನಾಹುತ ಕಟ್ಟಿಟ್ಟಬುತ್ತಿ. ಜಿಲ್ಲೆಯ ಅರಣ್ಯ ಇಲಾಖೆ ಕೂಡ ಕಾಡನ್ನ ರಕ್ಷಿಸಲು ಸಕಲ ಸಿದ್ಧತೆ ಮಾಡಿಕೊಂಡಿದೆ. ಇದನ್ನೂ ಓದಿ: ಪುಟಿನ್‍ನನ್ನು ಬಂಧಿಸಿದವರಿಗೆ 7.5 ಕೋಟಿ – ರಷ್ಯನ್ ಉದ್ಯಮಿ ಘೋಷಣೆ!
ಆದರೂ ಕೂಡ ಕೆಲ ಕಿಡಿಗೇಡಿಗಳಿಂದ ಪ್ರತಿ ವರ್ಷ ಅಲ್ಲಲ್ಲೇ ಅರಣ್ಯಕ್ಕೆ ಬೆಂಕಿ ಬಿದ್ದು ನೂರಾರು ಎಕರೆ ಅರಣ್ಯ ಸಂಪೂರ್ಣ ನಾಶವಾಗುತ್ತಿದೆ. ಜನಸಾಮಾನ್ಯರಲ್ಲಿ ಅರಣ್ಯದ ಮಹತ್ವದ ಅರಿವಾಗುವವರೆಗೂ ಈ ಅನಾಹುತ ತಪ್ಪಿದ್ದಲ್ಲ. ಅರಣ್ಯಕ್ಕೆ ಬೆಂಕಿ ಬಿದ್ದಿರುವ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಸ್ಥಳೀಯರು ಕೂಡ ಬೆಂಕಿ ನಂದಿಸಲು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸಾಥ್ ನೀಡಿದ್ದಾರೆ.