Tag: forest

  • ನರಮಾಂಸ ಭಕ್ಷಣೆ ಸಾಮಾನ್ಯ ಸಂಸ್ಕೃತಿಯಾಗಿತ್ತಾ? ವಿಶ್ವದಲ್ಲೇ ಅತ್ಯಂತ ಡೇಂಜರಸ್‌ ಕಮ್ಯೂನಿಟಿಗಳ ಬಗ್ಗೆ ನಿಮ್ಗೆ ಗೊತ್ತಾ? 

    ನರಮಾಂಸ ಭಕ್ಷಣೆ ಸಾಮಾನ್ಯ ಸಂಸ್ಕೃತಿಯಾಗಿತ್ತಾ? ವಿಶ್ವದಲ್ಲೇ ಅತ್ಯಂತ ಡೇಂಜರಸ್‌ ಕಮ್ಯೂನಿಟಿಗಳ ಬಗ್ಗೆ ನಿಮ್ಗೆ ಗೊತ್ತಾ? 

    ಆದಿವಾಸಿ ಸಮುದಾಯಗಳಿಗೆ (Dangerous Tribes) ನೂರಾರು ವರ್ಷಗಳ ಇತಿಹಾಸವಿದೆ, ಈ ಸಮುದಾಯಗಳ ಒಂದೊಂದು ಕಥೆಗಳೂ ರೋಚಕ. ಭಾರತವೂ ಸೇರಿದಂತೆ ವಿಶ್ವದ 90ಕ್ಕೂ ಹೆಚ್ಚು ದೇಶಗಳಲ್ಲಿ ವಿವಿಧ ಆದಿವಾಸಿ ಸಮುದಾಯಗಳು ಜೀವಿಸುತ್ತಿದ್ದು, ಸುಮಾರು 40 ಕೋಟಿಯಷ್ಟು ಜನಸಂಖ್ಯೆ ಹೊಂದಿದೆ ಎಂದು ಅಂದಾಜಿಸಲಾಗಿದೆ. 

    ವಿಶ್ವದಲ್ಲಿ ಅನೇಕ ಬುಡಕಟ್ಟು ಸಮುದಾಯಗಳ  ಬಗ್ಗೆ ಕೇಳಿರುತ್ತೇವೆ. ಯೈಫೊ, ಕೊರೊವೂ,  ಸೂರಿ ಅಥವಾ ಸುರಮಾ, ಯಾನೋಮಾಮಿ, ಮೋಕನ್‌, ಅಯೋರಿಯೋ, ಹವಾಯ್‌ ಹೀಗೆ ಅನೇಕ ಸಮುದಾಯಗಳ ಬಗ್ಗೆ ಕೇಳಿರುತ್ತೇವೆ. ಆದ್ರೆ ಇವುಗಳಲ್ಲಿ ವಿಚಿತ್ರ ಆಚರಣೆಯನ್ನು ಹೊಂದಿರುವ ಸಮಯದಾಯವೆಂದರೆ ಕ್ಯಾನಿಬಲ್ಸ್‌ (Cannibals). ಅಂದರೆ ನರಮಾಂಸ ಭಕ್ಷಣೆ ಮಾಡುವವರು. ಸಹಜ ಜೀವನ ನಡೆಸುವವರಿಗೆ ಇದು ವಿಚಿತ್ರವೆನಿಸಿದರೂ ಅನೇಕ ಶತಮಾನಗಳ ಹಿಂದೆ ಇದು ಸಾಮಾನ್ಯ ಸಂಸ್ಕೃತಿಯೇ ಆಗಿತ್ತು ಎಂದು ಹೇಳಲಾಗುತ್ತಿದೆ. 

    ಹೌದು. ನರಮಾಂಸ ಭಕ್ಷಣೆ ಮಾಡುವ ಕ್ಯಾನಿಬಲ್ಸ್‌ ಅಥವಾ ಕ್ಯಾನಿಬೇಲಿಸ್‌ ಬುಡಕಟ್ಟು ಸಮುದಾಯ ಮೊದಲು ಹುಟ್ಟಿಕೊಂಡದ್ದು ವೆಸ್ಟ್‌ಇಂಡೀಸ್‌ನ ಅರಣ್ಯಪ್ರದೇಶದಲ್ಲಿ. ಇವರು ನರಮಾಂಸ ಭಕ್ಷಣೆ ಮಾಡುತ್ತಿದ್ದರು. ಇದನ್ನು ಆಂತ್ರೊಪೊಫೆಜಿ ಎಂದೂ ಕರೆಯುತ್ತಾರೆ. ಆರಂಭದಲ್ಲಿ ಪ್ರಾಣಿಗಳನ್ನು ಬೇಟೆಯಾಡಿ ಕೊಂದು ತಿನ್ನುತ್ತಿದ್ದ ಈ ಸಮುದಾಯ ಕ್ರಮೇಣ ಮನುಷ್ಯರನ್ನು ಬೇಟೆಯಾಡಿ ತಿನ್ನಲು ಪ್ರಾರಂಭಿಸಿತು. ಆ ನಂತರ ಲೈಬೀರಿಯಾ ಹಾಗೂ ಕಾಂಗೋ ದೇಶಗಳಲ್ಲಿ ಹುಟ್ಟಿಕೊಂಡ ಕೊರೊವೈ, ಮಲೇಶಿಯಾ, ಇಂಡೋನೇಷ್ಯಾದಲ್ಲಿ ಹುಟ್ಟಿಕೊಂಡ ಕೆಲ ಸಮುದಾಯಗಳು ತಮ್ಮ ಸಾಂಪ್ರದಾಯಿಕ ಆಚರಣೆಯಾಗಿ ನರಮಾಂಸ ಭಕ್ಷಣೆ ಮಾಡಲು ಮಾಡಿದವು. ಪುರಾಣಗಳಲ್ಲೂ ನರಮಾಂಸಭಕ್ಷಕರ ಬಗ್ಗೆ ಅನೇಕ ಕಥೆಗಳನ್ನ ಕೇಳಿರುತ್ತೇವೆ. ಸಿನಿಮಾಗಳಲ್ಲೂ ನರಮಾಂಸ ಭಕ್ಷಕರ ಕಥೆಯನ್ನು ತೆರೆಗೆ ತಂದಿರುವುದು ವಿಶೇಷ. 

    ಬರಗಾಲದ ಆಹಾರ: 

    1609-1610ರ ಸಮಯದಲ್ಲಿ ಉತ್ತರ ಡಕೋಟಾದ ನಾಡಾದ ಜೇಮ್ಸ್‌ಟೌನ್‌ ನಗರ ಬರಗಾಲ ಆವರಿಸಿತ್ತು. ಊಟ, ನೀರು ಸಿಗದೇ ಜನ ಹಸಿವಿನಿಂದ ಬಳಲುತ್ತಿದ್ದರು. ಈ ಸಂದರ್ಭದಲ್ಲಿ ಕೆಲವರು ವಲಸೆ ಹೋದರು. ಇನ್ನೂ ಕೆಲವರು ನರಮಾಂಸ ಭಕ್ಷಣೆ ಆಶ್ರಯಿಸಿದರು. ಆದ್ರೆ ಸುಮಾರು 15,000 ವರ್ಷಗಳ ಹಿಂದೆಯೇ ಕ್ಯಾನಿಬಲ್ಸ್‌ ಹುಟ್ಟಿಕೊಂಡಿತ್ತು. ಅವರಲ್ಲಿ ನರಮಾಂಸಭಕ್ಷಣೆ ಸಾಮಾನ್ಯ ಸಂಸ್ಕೃತಿಯಾಗಿತ್ತು ಎಂದುಇತ್ತೀಚಿನ ಸಂಶೋಧನೆಗಳು ಹೇಳಿವೆ. ಸಹಜ ಜೀವನ ನಡೆಸುವ ಮನುಷ್ಯರು ಸತ್ತವರನ್ನ ಬೀಳ್ಕೋಡುವ (ಅಂತ್ಯಕ್ರಿಯೆ) ಆಚರಣೆಗಳು ಕಾಲದಿಂದ ಕಾಲಕ್ಕೆ ನಡೆದುಕೊಂಡು ಬಂದಿವೆ. ಆದ್ರೆ ಕ್ಯಾನಿಬಲ್ಸ್‌ಗೆ ಸೇರಿದ ಕೆಲವು ಸಮುದಾಯಗಳು ಮನುಷ್ಯರನ್ನು ಹೂಳುವುದಿಲ್ಲ. ಬದಲಾಗಿ ತಾವೇ ತಿನ್ನುತ್ತಾರೆ, ಅಲ್ಲದೇ ಮನುಷ್ಯರನ್ನು ಕೊಂದು ತಿನ್ನುವ ಸಂಸ್ಕತಿಯೂ ಇವರಲ್ಲಿದೆ. 

    ಉತ್ತರ ಯುರೋಪಿನಾದ್ಯಂತ ನರಭಕ್ಷಕತೆ ಸಾಮಾನ್ಯ ಸಂಸ್ಕೃತಿಯಾಗಿತ್ತು ಅನ್ನೋದಕ್ಕೆ ಇತ್ತೀಚೆಗೆ ಪತ್ತೆಮಾಡಲಾಗಿರುವ ಪ್ರಾಚೀನ ಶಿಲಾಯುಗದ ಅವೇಶಗಳು ಸಾಕ್ಷಿಯಾಗಿವೆ. ಈ ಅವಶೇಷಗಳ ಅಧ್ಯಯನದ ನಂತರ 15,000 ವರ್ಷಗಳ ಹಿಂದೆ ಯುರೋಪ್‌ನ ಉತ್ತರ ಹಾಗೂ ವಾಯುವ್ಯ ಭಾಗದಲ್ಲಿ ಈ ಸಂಸ್ಕೃತಿ ಅಲ್ಪಾವಧಿವರೆಗೆ ಚಾಲ್ತಿಯಲ್ಲಿತ್ತು. ಇದನ್ನು ಮ್ಯಾಗ್ಡಲೇನಿಯನ್ ಕಲ್ಚರ್‌ಎಂದೂ ಕರೆಯಲಾಗುತ್ತಿತ್ತು ಎಂದು ಉಲ್ಲೇಖಿಸಲಾಗಿದೆ. ಅಲ್ಲದೇ ನರಮಾಂಸ ಭಕ್ಷಕರು ಬಳಸುತ್ತಿದ್ದ ಕಲ್ಲು, ಮೂಳೆ, ಮತ್ತು ತಮ್ಮ ಸಂಸ್ಕೃತಿಯ ಕಲಾಕೃತಿಗಳು ಪತ್ತೆಯಾಗಿವೆ. ಇಂಡೋನೇಷ್ಯಾದ ಚೆಡ್ಡಾರ್ ಗಾರ್ಜ್‌ನಲ್ಲಿರುವ ಗುಹೆಯೊಂದರಲ್ಲಿ ಅನೇಕ ಕುರುಹುಗಳು ಪತ್ತೆಯಾಗಿದ್ದು, ಇದು ಮ್ಯಾಗ್ಡಲೇನಿಯನ್ ಸಂಸ್ಕೃತಿ ಎಂದು ಪುರಾತತ್ವಶಾಸ್ತ್ರಜ್ಞ ವಿಲಿಯಂ ಮಾರ್ಷ್ ಖಚಿತಪಡಿಸಿದ್ದಾರೆ. ಈ ಮ್ಯಾಗ್ಡಲೇನಿಯನ್ ಸಂಸ್ಕೃತಿ ಎಂದರೇನು? ವಿಶ್ವದಲ್ಲಿ ಅತೀ ಭಯಾನಕ ಸ್ವಭಾವವುಳ್ಳ ಆದಿವಾಸಿ ಸಮುದಾಯಗಳು ಯಾವುವು ಎಂಬುದನ್ನು ಇಲ್ಲಿ ತಿಳಿಯಬಹುದು. 

    1. ಯೈಫೊ ಬುಡಕಟ್ಟು: 

     ಒಸೆನ್ಯಾದ ಪಾಪುವಾ ನ್ಯೂಗಿನಿಯಲ್ಲಿರುವ ಯೈಫೋ ಬುಡಕಟ್ಟು ಸಮುದಾಯ 1988ರಲ್ಲಿ ಆಧುನಿಕ ಜಗತ್ತಿನ ಸಂಪರ್ಕಕ್ಕೆ ಬಂದರು. ಬ್ರಿಟಿಷ್ ಬರಹಗಾರ ಬೆನೆಡಿಕ್ಟ್ ಅಲೆನ್ ಎಂಬಾತ ಈ ಸಮುದಾಯದ ಕೆಲವು ಮುಖಂಡರನ್ನು ಭೇಟಿಯಾಗಿ ಈ ಕುರಿತು ಬರೆದಿದ್ದ. ಈ ಸಮುದಾಯವು ಸಾಮಾನ್ಯವಾಗಿ ಹೊರಗಿನ ಪ್ರಪಂಚದವರೊಂದಿಗೆ ಹೊಂದಿಕೊಳ್ಳುವುದಿಲ್ಲ. ಒಂದು ವೇಳೆ ತಾವು ಗುರುತಿಸಿಕೊಂಡ ಸೂಕ್ಷ್ಮ ಪ್ರದೇಶಗಳಿಗೆ ಪ್ರವೇಶಿಸಿದ್ರೆ ಬಿಲ್ಲು ಬಾಣಗಳನ್ನ ಬಿಟ್ಟು ಕೊಲ್ಲುತ್ತಿದ್ದರು ಎಂದು ತಮ್ಮ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ. 

    1. ಕೊರೊವೈ ಬುಡಕಟ್ಟು: 

    ಕೊರೊವೈ ಎಂಬುದು ಪಪುವಾದ ಆಗ್ನೇಯ ಪಶ್ಚಿಮ ಕಾಡಿನಲ್ಲಿ ಕಂಡುಬಂದಿದ್ದ ಸಮುದಾಯ. ಈ ಸಮುದಾಯವು ನರಭಕ್ಷಕತೆಯನ್ನು ಅವಲಂಬಿಸಿತ್ತು. ಮೊದಲು ಪ್ರಾಣಿಗಳನ್ನು ಕೊಂದು ತಿನ್ನುತ್ತಿದ್ದ ಈ ಸಮುದಾಯ ನಂತರ ಮನುಷ್ಯರ ಮೃತದೇಹವನ್ನು ಆಶ್ರಯಿಸಲು ಮುಂದಾಯಿತು. ಆದ್ರೆ ಕಳೆದ ಕೆಲವು ವರ್ಷಗಳಿಂದ ಆಧುನಿಕ ಸಮುದಾಯದ ಪರಿಚಯದ ನಂತರ ನರಭಕ್ಷಕತೆಯನ್ನು ತ್ಯಜಿಸಿದೆ. ಆದರೂ ಈ ಸಮುದಾಯವನ್ನು ಅತ್ಯಂತ ಅಪಾಯಕಾರಿ ಎಂದು ಗುರುತಿಸಲಾಗಿದೆ. 

    1. ಸೂರಿ ಜನರು: 

    ನೈರುತ್ಯ ಇಥಿಯೋಫಿಯಾದಲ್ಲಿ ನೆಲೆಗೊಂಡಿರುವ ಸೂರಿ ಅಥವಾ ಸುರಮಾ ಜನರು ಇನ್ನೂ ಪುರಾತನ ಜೀವನ ವಿಧಾನಗಳನ್ನು ಪಟ್ಟುಬಿಡದೇ ಅನುಸರಿಸುತ್ತಾರೆ. ಈ ಬುಡಕಟ್ಟು ಹೊರಗಿನವರಿಗೆ ತಮ್ಮ ಜೀವನ ಕ್ರಮಗಳ ಬಗ್ಗೆ ಸುಳಿವನ್ನೂ ಬಿಟ್ಟುಕೊಟ್ಟಿಲ್ಲ. ಆದ್ರೆ ಇಲ್ಲಿ ಕೆಲವು ಹಿಂಸಾತ್ಮಕ ಆಚರಣೆಗಳು ನಡೆಯುತ್ತವೆ ಎಂದು ಹೇಳಲಾಗಿದೆ. 

    1. ಯಾನೋಮಾಮಿ ಬುಡಕಟ್ಟು: 

    ವೆನೆಜುವೆಲಾ ಮತ್ತು ಬ್ರೆಜಿಲ್ ನಡುವಿನ ದಟ್ಟ ಅಮೆಜಾನ್‌ ಕಾಡಿನಲ್ಲಿ ನೆಲೆಸಿರುವ ಯಾನೋಮಾಮಿ ಸಮುದಾಯದ ಜನರ ಭಯಾನಕ ಬುಡಕಟ್ಟು ಸಮುದಾಯಗಳಲ್ಲಿ ಒಂದು. ಈ ಸಮುದಾಯಕ್ಕೆ ನಾಗರೀಕತೆಯ ಪರಿಚಯವಾಗಿದ್ದರೂ, ಇಂದಿಗೂ ಹಿಂಸಾಚಾರ ಮುಂದುವರಿಸಿದೆ. ಇಲ್ಲಿನ ಜನ ಹೊರಗಿನ ಪ್ರಪಂಚದಿಂದ ದೂರ ಉಳಿಯಲು ಬಯಸುತ್ತಾರೆ. 

    1. ಕೊರುಬೊ/ ಡಿಸ್ಲಾಲಾ ಬುಡಕಟ್ಟು: 

    ಡಿಸ್ಲಾಲಾ ಎಂದು ಕರೆಯಲ್ಪಡುವ ಕೊರುಬೊ ಬ್ರೆಜಿಲ್‌ನಲ್ಲಿರುವ ಉಗ್ರ ಬುಡಕಟ್ಟು ಎಂದೇ ಗುರುತಿಸಿಕೊಂಡಿದೆ.  ಈ ಹಿಂದೆ ಬ್ರೆಜಿಲ್‌ ಸರ್ಕಾರವು ಅವರನ್ನು ಸಂಪರ್ಕಿಸಿದರೂ ಅದು ಸಾಧ್ಯವಾಗಲಿಲ್ಲ. ಅಮೆಜಾನ್ ಜಲಾನಯನ ಪ್ರದೇಶವನ್ನು ಪ್ರವೇಶಿಸಲು ಧೈರ್ಯಮಾಡಿದ ಒಂದೆರಡು ಸರ್ಕಾರಿ ನೌಕರರನ್ನು ಡಿಸ್ಲಾಲಾಗಳು ಭೀಕರವಾಗಿ ಹತ್ಯೆಗೈದಿದ್ದರು. 

    1. ಮಾಶ್ಕೊಪೈರೋ: 

    ಆಧುನಿಕ ಮಾನವ ಜಗತ್ತಿನ ಸಂಪರ್ಕವೇ ಇಲ್ಲದ ಸಮುದಾಯ ಇದು. ಇತ್ತೀಚೆಗೆ ಪೆರುವಿನಲ್ಲಿ ಕಾಣಿಸಿಕೊಂಡಿದೆ. ಈ ಸಮುದಾಯವನ್ನು ಕುಜರೆನೋ ಎಂದೂ ಸಹ ಕರೆಯುತ್ತಾರೆ. ಈ ಸಮುದಾಯದ  ಜನ ಹೊರಗಿನವರನ್ನು ಕಂಡರೆ ಹತ್ಯೆ ಮಾಡುತ್ತಾರೆ. ಆದ್ದರಿಂದ ಪೆರುವಿನ ಕಾಡುಗಳಿಗೆ ಪ್ರವೇಶ ಮಾಡುವ ಮುನ್ನ ಎಚ್ಚರ ವಹಿಸುವಂತೆ ಸ್ಥಳೀಯ ಸರ್ಕಾರಗಳು ಸೂಚನೆ ನೀಡಿವೆ. 

    1. ಮೋಕನ್ ಬುಡಕಟ್ಟು – ಸಮುದ್ರ ಜಿಪ್ಸಿ

    ಮೊಕನ್ ಬುಡಕಟ್ಟು ಸಮುದಾಯ  ಬರ್ಮಾ ಮತ್ತು ಥೈಲ್ಯಾಂಡ್ ಗಳಲ್ಲಿ ಕಂಡುಬರುತ್ತವೆ. ಇವು ಸರ್ಕಾರದಿಂದ ಪೋಷಿತವಾದರೂ ಅಳಿವಿನ ಅಂಚಿನಲ್ಲಿರುವ ಸಮುದಾಯವೆಂದು ಗುರುತಿಸಿಕೊಂಡಿದೆ. ಅವರು ತಮ್ಮ ಬಹುತೇಕ ಜೀವನವನ್ನು ನೀರಿನಲ್ಲಿ ಸಂಚಾರ ಮಾಡುತ್ತಲೇ ಕಳೆಯುತ್ತಾರೆ. ಆದ್ದರಿಂದ ಅವರನ್ನು ಸಮುದ್ರಜೀವಿಗಳು ಎಂತಲೂ ಕರೆಯುತ್ತಾರೆ.  ಒಂದು ಕಾಲದಲ್ಲಿ ನರಭಕ್ಷಕ ಸಮುದಾಯ ಎಂದೇ ಕುಖ್ಯಾತಿ ಪಡೆದಿದ್ದ ಈ ಸಮುದಾಯ ಇಂದು ಶಾಂತಿಯುತವಾಗಿ ನೆಲೆಸಿದೆ. 

    1. ಅಯೋರಿಯೋ ಬುಡಕಟ್ಟು – ಬೇಟೆಗಾರ-ಸಂಗ್ರಹಕಾರರು

    ಪರಾಗ್ವೆ ಮತ್ತು ಬೊಲಿವಿಯಾದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಾಸಿಸುವ ಅಯೋರಿಯೋ ಜನರು ಶತಮಾನ ಕಳೆದರೂ ನಾಗರಿಕ ಜಗತ್ತಿನ ಸಂಪರ್ಕಕ್ಕೆ ಬಂದಿರಲಿಲ್ಲ. ಬೇಟೆಗಾರ ಪ್ರೌವೃತ್ತಿಯನ್ನೇ ಜೀವನವಾಗಿಸಿಕೊಂಡಿದ್ದ ಈ ಸಮುದಾಯ ಅರಣ್ಯನಾಶದಿಂದ ನಗರ ಪ್ರದೇಶಗಳತ್ತ ಬರಲು ಪ್ರಾರಂಭಿಸಿತು. ಆದ್ರೆ ಈ ಸಮುದಾಯ ನಗರ ಪ್ರದೇಶಗಳತ್ತ ಮುಖಮಾಡುತ್ತಿದ್ದ ಸಂದರ್ಭದಲ್ಲಿ ಅಲ್ಲಲ್ಲಿ ಚದುರಿಹೋಯಿತು. ಕೆಲವರು ಕಾಡಾನೆಗಳಿಂದ ದಾಳಿಗೆ ತುತ್ತಾದರು. ಇಂದು ಅಳಿವಿನ ಅಂಚಿನಲ್ಲಿರುವ ಸಮುದಾಯವೆಂದು ಗುರುತಿಸಿಕೊಂಡಿದೆ. ಸಾಮಾನ್ಯವಾಗಿ ನಗರದಲ್ಲಿ ನೆಲೆಸಿರುವವರು ಸಹಜ ಜೀವನಕ್ಕೆ ಮರಳಿದರೂ ಕಾಡಿನಲ್ಲೇ ಉಳಿದುಕೊಂಡಿರುವ ಕೆಲವರು ನರಮಾಂಸಭಕ್ಷಣೆ ಹಾಗೂ ಪ್ರಾಣಿಗಳನ್ನ ಕೊಂದು ತಿನ್ನುವ ಜೀವನ ಕಳೆಯುತ್ತಿದ್ದಾರೆ ಎಂದು ಹೇಳಲಾಗಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸುವ್ವಿ ರಾಗ ಕೇಳಿದಿರಾ, ಕಾಡಿನ ರೈತನ ನೋಡಿದಿರಾ..? – ಈಗ ಕೇಳಿ ಮಧುರಕಂಠದ ʻಐಯೋರʼ ಗಾನ

    ಸುವ್ವಿ ರಾಗ ಕೇಳಿದಿರಾ, ಕಾಡಿನ ರೈತನ ನೋಡಿದಿರಾ..? – ಈಗ ಕೇಳಿ ಮಧುರಕಂಠದ ʻಐಯೋರʼ ಗಾನ

    ಪಕ್ಷಿಗಳ (Birds) ಸಮೂಹ ಕಾಣುತ್ತಿದ್ದರೆ, ಅವುಗಳ ಚಿಲಿಪಿಲಿ ಸದ್ದನು ಕೇಳುತ್ತಿದ್ದರೆ ಮನಸ್ಸು ಪ್ರಫುಲ್ಲಗೊಳ್ಳುತ್ತದೆ. ತಾನೂ ರೆಕ್ಕೆಬಿಚ್ಚಿ ನೀಲಮೇಘಗಳಲ್ಲಿ ಹಾರಬೇಕು ಎಂದೆನಿಸುತ್ತದೆ. ನೆನಪಿದೆಯಾ ಅಂದು ನಾವು ಪುಟ್ಟ ಮಕ್ಕಳಿದ್ದಾಗ ಪಕ್ಷಿಯ ಚಿತ್ರ ಬರೆಯಲು ಹೇಳಿದ್ರೆ ಚೂಪಾದ ಕೊಕ್ಕು, ದುಂಡಗಿನ ಕಣ್ಣು, ಕೆಂಪನೆಯ ಮುಂಗುರುಳು… ಹೀಗೆ ನಮಗೆ ಇಷ್ಟ ಬಂದ ಆಕಾರ ನೀಡುತ್ತಾ ಅವುಗಳನ್ನ ನಮ್ಮ ಪುಟಗಳಲ್ಲಿ ಹಾರಿಸುತ್ತಿದ್ದ ನೆನಪು ನಿನ್ನೆ ಮೊನ್ನೆಯದೋ ಎಂದೇ ಭಾಸವಾಗುತ್ತಿದೆ. ಆದ್ರೆ ನಗರಗಳು ಬೆಳೆದಂತೆ ಪಕ್ಷಿಗಳು ಮಾಯವಾಗುತ್ತಿವೆ. ಮೃಗಾಲಯ, ಕಾಡುಗಳಲ್ಲಿ ಪ್ರವಾಸಕ್ಕೆ ಹೋಗಿ ಹಕ್ಕಿಗಳನ್ನು ಕಣ್ತುಂಬಿಕೊಳ್ಳಬೇಕಿದೆ.

    ಸಾಮಾನ್ಯವಾಗಿ ಪಕ್ಷಿ ವೀಕ್ಷಣೆಗೆ ಮುಂಜಾನೆ 6 ರಿಂದ 10 ಅಥವಾ ಸಂಜೆ 4 ರಿಂದ 6 ಗಂಟೆಯ ಸಮಯ ಸೂಕ್ತವೆಂದು ಪಕ್ಷಿ ತಜ್ಞರು ಹೇಳುತ್ತಾರೆ. ಬನ್ನಿ ಹಾಗಿದ್ರೆ ಪಕ್ಷಿ ತಜ್ಞರು ಏನು ಹೇಳಿದ್ದಾರೆ.. ಅವುಗಳ ಸುತ್ತ ಒಂದು ಸುತ್ತು ಹಾಕೋಣ…

    ಸುಂದರ ಸುವ್ವಿ ಹಕ್ಕಿ:
    ಸುವ್ವಿ ಹಕ್ಕಿ ಗುಬ್ಬಚ್ಚಿಗಿಂತಲೂ ಸಣ್ಣದಾದ ಪಕ್ಷಿ, ಪ್ರಿನಿಯಾ ಸೊಸಿಯಾಲಿಸ್ ಎಂಬುದು ವೈಜ್ಞಾನಿಕ ಹೆಸೆರು. ಗುಬ್ಬಚ್ಚಿಗಿಂತ ಚಿಕ್ಕದಾದ ಹಕ್ಕಿ. ನೆತ್ತಿ, ಕತ್ತಿನ ಹಿಂಭಾಗ, ರೆಕ್ಕೆ, ಬಾಲದ ಮೇಲ್ಬಾಗದಲ್ಲಿ ಕಡು ಬೂದು ಮಿಶ್ರಿತ ಪಾಚಿ ಬಣ್ಣವಿರುತ್ತದೆ. ಉದ್ದ ಬಾಲ ಅದರ ಅಂಚು ಕಪ್ಪು-ಬಿಳಿ; ನೀಳವಾದ ಕಾಲುಗಳು ಹಾಗೂ ಚಿಕ್ಕದಾದ ಕಪ್ಪು ಕೊಕ್ಕು ಇರುತ್ತದೆ.

    ನೀಳವಾದ ಕಾಲುಗಳು ಗುಲಾಬಿ ಬಣ್ಣದಿಂದ ಕಂಡುಬರುತ್ತದೆ. ಇದರ ಚಿಕ್ಕದಾದ ಕೊಕ್ಕು ಕಪ್ಪಾಗಿರುತ್ತದೆ. ಕುರುಚಲು ಕಾಡು, ಹೂದೋಟ ಮುಂತಾದ ಕಡೆ ಪೊದೆ, ಜೊಂಡು, ವಾಟೆಗಳಲ್ಲಿ ವಾಸಿಸುತ್ತವೆ. ಸಂತಾನೋತ್ಪತ್ತಿ ಸಮಯದಲ್ಲಿ ದೊಡ್ದ ಎಲೆಗಳನ್ನ ಹೆಣೆದು ಮಧ್ಯದಲ್ಲಿ ಹತ್ತಿ, ನಾರು ಇತ್ಯಾದಿಗಳಿಂದ ಬಟ್ಟಲಿನಾಕಾರದ ಗೂಡನ್ನು ಕಟ್ಟುತ್ತವೆ. ಮಾರ್ಚ್ ತಿಂಗಳಿಂದ ಸೆಪ್ಟೆಂಬರ್ ತಿಂಗಳೊಳಗೆ 3 ರಿಂದ 4 ಕೆಂಪು ಮೊಟ್ಟೆಗಳಿಗೆ ಕಾವು ಕೊಟ್ಟು ಮರಿ ಮಾಡಡುತ್ತದೆ.

    ಕಾಡಿನ ರೈತ ಮಂಗಟ್ಟೆ (Hornbill):
    ಒಮ್ಮೆ ನೋಡಿದ್ರೆ ಮೆರಯುವುದೇ ಇಲ್ಲ ಅಂತಹ ಹಕ್ಕಿ ಇದು. ಮಂಗಟ್ಟೆ ಹಕ್ಕಿಗಳು ಕೀಟ, ಸಣ್ಣ-ದೊಡ್ಡ ಜೀವಿಗಳನ್ನು ತಿನ್ನುತ್ತದೆಯಾದರೂ ಫಲಾಹಾರಿ ಹಕ್ಕಿಗಳು. ಇವು ಹಣ್ಣುತಿಂದು ಕಾಡಿನ ದೂರದೂರದವರೆಗೂ ಹೋಗಿ ವಿಸರ್ಜಿಸುವುದರಿಂದ ಕಾಡಿನ ಬೆಳವಣಿಗೆಗೆ ಮತ್ತು ಮರಗಳ ಹರವು ವಿಸ್ತಾರವಾಗಲು ನೆರವಾಗುತ್ತದೆ. ಆದ್ದರಿಂದಲೇ ಅನೇಕರು ಇದನ್ನೂ ಕಾಡಿನ ರೈತ ಎಂದೂ ಕರೆಯುತ್ತಾರೆ.

    ಇನ್ನೂ ಇದರ ಸಂತಾನೋತ್ಪತ್ತಿಯ ವಿಶಿಷ್ಟ ಕ್ರಮ ಆಶ್ಚರ್ಯವನ್ನು ತರುತ್ತದೆ. ಹಳೆಯ, ದೊಡ್ಡ ಮರಗಳ ಪೊಟರೆ ಇದರ ಗೂಡು. ಹೆಣ್ಣು ಹಕ್ಕಿ ಇದರ ಒಳಗೆ ಹೋಗಿ ಕೂತ ನಂತರ ಗಂಡು ಹೊರಗಿನಿಂದ ಗೂಡಿನ ಬಾಯನ್ನು ಸಣ್ಣ ಕಿಂಡಿಯೊಂದನ್ನ ಬಿಟ್ಟು ಪೂರ್ತಿ ಮುಚ್ಚಿಬಿಡುತ್ತದೆ. ಒಳಗೆ ಮೊಟ್ಟೆಗಳು ಮರಿಯಾಗಿ ಅವು ತುಸು ಬೆಳೆಯುವವರೆಗೂ ಗಂಡು, ಹೆಣ್ಣು ಹಾಗೂ ಮರಿಗಳಿಗೆ ಆಹಾರವನ್ನ ತಂದು ಒದಗಿಸುತ್ತದೆ. ಮರಿಗಳು ತುಸು ದೊಡ್ಡವಾದನಂತರ ಹೆಣ್ಣು ಗೂಡಿನ ʻಬಾಗಿಲನ್ನುʼ ಒಡೆದುಕೊಂಡು, ಹೊರಬರುತ್ತದೆ. ಮರಿಗಳು ತಮ್ಮ ಮಲದಿಂದ ಮತ್ತೆ ಗೂಡಿನ ಬಾಯಿಯನ್ನು ಒಂದು ಸಣ್ಣ ರಂದ್ರದಷ್ಟು ಬಿಟ್ಟು ಉಳಿದಂತೆ ಮುಚ್ಚಿಬಿಡುತ್ತವೆ. ಆನಂತರ ಗಂಡು ಹೆಣ್ಣು ಎರಡೂ ಸೇರಿ ಮರಿಗಳಿಗೆ ಆಹಾರ ಒದಗಿಸುತ್ತದೆ.

    ದಾಸಮಂಗಟ್ಟೆ: ಇದು ಹದ್ದಿಗಿಂತ ದೊಡ್ಡದಾಗಿದ್ದು, ರಣಹದ್ದಿಗಿಂತ ಚಿಕ್ಕದಾದ ಬೃಹತ್‌ ಪಕ್ಷಿ. ಇದರ ತಲೆ, ಕತ್ತು, ಕೊಕ್ಕು ಹಳದಿ ಬಣ್ಣದಿಂದ ಕೂಡಿರುತ್ತದೆ. ಇದರ ಕಣ್ಣಿನ ಭಾಗದಲ್ಲಿ ಅಗಲವಾದ ಅಡ್ಡ ಕಪ್ಪು ಪಟ್ಟಿಯನ್ನ ಕಾಣಬಹುದು. ನೆತ್ತಿಯಿಂದ ಕೊಕ್ಕಿನ ಮಧ್ಯದವರೆಗೆ ಹಳದಿ ಟೋಪಿ ಕಂಡುಬರುತ್ತದೆ. ಕತ್ತಿನ ತಳಭಾಗ ಮತ್ತು ದೇಹ ಹಾಗೂ ರೆಕ್ಕೆ ಕಪ್ಪು ಬಣ್ಣದ್ದಾಗಿರುತ್ತದೆ. ಇದರ ಹೊಟ್ಟೆ ಮತ್ತು ಬಾಲ ಬಿಳಿಯಾಗಿರುತ್ತದೆ. ಬಾಲದ ಮೇಲೆ ಅಗಲವಾದ ಕಪ್ಪು ಪಟ್ಟಿಯನ್ನ ಕಾಣಬಹುದು. ಅಲ್ಲದೆ ಕಪ್ಪು ರೆಕ್ಕೆಯ ಮೇಲೆ ಅಗಲವಾದ ಬಿಳಿ ಪಟ್ಟಿ ಹಾಗೂ ಬಾಲದ ಮೇಲಿನ ಪಟ್ಟಿಗಳು ಹಾರುವಾಗ ಸ್ಪಷ್ಟವಾಗಿ ಗೋಚರಿಸುತ್ತವೆ. ಇವುಗಳು ಹೆಚ್ಚಾಗಿ ನಿತ್ಯಹರಿದ್ವರ್ಣ, ತೇವ ಪರ್ಣಪಾತಿ ಕಾಡುಗಳಾದ ಉತ್ತರ ಕನ್ನಡ, ದಕ್ಷಿಣ ಕನ್ನಡ, ಕೊಡಗು, ದಾಂಡೇಲಿ, ಅಣಶಿ, ಕುದುರೆಮುಖ, ಮೂಕಾಂಬಿಕಾ ಅರಣ್ಯಗಳಲ್ಲಿ ಕಾಣಬಹುದು. ಸಂತಾನೋತ್ಪತ್ತಿ ಸಮಯದಲ್ಲಿ ಮರದ ಪೊಟ್ಟರೆಗಳಲ್ಲಿ ಗೂಡು ನಿರ್ಮಿಸಿ ಫೆಬ್ರುವರಿ ತಿಂಗಳಿಂದ ಏಪ್ರಿಲ್ ತಿಂಗಳೊಳಗೆ 2 ಮೊಟ್ಟೆಗಳಿಗೆ ಜನ್ಮ ನೀಡುತ್ತವೆ.

    ಕರ್ನಾಟಕದಲ್ಲಿ ದಾಸ ಮಂಗಟ್ಟೆಹಕ್ಕಿ, ಮಲಬಾರ್ ಮಂಗಟ್ಟೆ ಹಾಗೂ ಸಾಮಾನ್ಯ ಮಂಗಟ್ಟೆ ಹಕ್ಕಿಗಳನ್ನು ನೋಡಬಹುದು. ದುರದೃಷ್ಟವಶಾತ್‌ ಈ ಮಂಗಟ್ಟೆ ಪಕ್ಷಿಗಳಿಂದು ಅಳಿವಿನ ಅಂಚಿನಲ್ಲಿದೆ.

    ಕೆನ್ನೀಲಿ ಬಕ:
    ಸುಮಾರು 90 ಸೆಂ.ಮೀ. ಎತ್ತರದ, ಬೂದು ಬಕ ಪಕ್ಷಿಯಷ್ಟಿರುವ ಈ ಹಕ್ಕಿಯ ಮೇಲ್ಭಾಗದ ಮೈ ನೀಲಿ ಬೂದು ಬಣ್ಣವಾಗಿದ್ದು, ಉದ್ದನೆಯ ಕೊಕ್ಕು, ಕೆನ್ನೆಯಿಂದ ಹೊರಚಾಚುವ ಕರೀಬಣ್ಣದ ಉದ್ದನೆಯ ಪುಕ್ಕ, ಕತ್ತು ಹಾಗೂ ತಲೆಯು ಇಟ್ಟಿಗೆಯ ಬಣ್ಣ ಹೊಂದಿದ್ದು, ಕತ್ತಿನ ಕೆಳಗೆ ಕಪ್ಪು ಹಾಗೂ ತಿಳಿ ಕಂದು ಬಣ್ಣವಿರುತ್ತದೆ. ಸೂರ್ಯನ ಪ್ರಕಾಶದಲ್ಲಿ ನೇರಳೆ ಬಣ್ಣ ಕಾಣುತ್ತದೆ. ಪಕ್ಷಿ ಪ್ರೇಮಿಗಳ ಕಣ್ಣಿಗೆ ಹಬ್ಬವನ್ನುಂಟುಮಾಡುತ್ತದೆ.

    ಭಾರತದ ಎಲ್ಲಾ ಭಾಗಗಳಲ್ಲಿ, ಶ್ರೀಲಂಕಾದಲ್ಲಿ ಸ್ಥಳೀಕವಾಗಿಯೂ ಪ್ರಾದೇಶಿಕ ವಲಸೆ ಹಕ್ಕಿಗಳಾಗಿಯೂ ಇವು ಕಂಡುಬರುತ್ತವೆ. ಏಕಾಂಗಿಗಳಾಗಿ ನೀರಿನ ಝರಿಗಳ ಬಳಿ, ನೀರಿನ ಮಡುವುಗಳ ಹತ್ತಿರ ಇವು ಕಾಣಿಸಿಕೊಳ್ಳುತ್ತವೆ. ಮೀನು, ಕಪ್ಪೆ, ಹಾವು ಇದರ ಆಹಾರ. ಜೂನ್-ಮಾರ್ಚ್ ತಿಂಗಳ ಮಧ್ಯೆ ಮರಿ ಮಾಡುತ್ತವೆ. ಈ ಹಕ್ಕಿಗಳು ತಮ್ಮ ಜಾತಿಗೆ ಸೇರಿದ ಹಕ್ಕಿಗಳಿರುವ ಕಾಲೋನಿಗಳಲ್ಲಿಯೇ ಸಾಮಾನ್ಯವಾಗಿ ಮರಿ ಮಾಡುತ್ತವೆ. ಗಿಡಗಳಲ್ಲಿ, ಜೊಂಡು ಹುಲ್ಲಿನ ಹಾಸಿನ ಮೇಲೆ ಕಡ್ಡಿಗಳಿಂದ ಗೂಡನ್ನು ಕಟ್ಟಿ, ನೀಲಿ-ಹಸಿರು ಮಿಶ್ರ ಬಣ್ಣದ 3-5 ಮೊಟ್ಟೆಗಳನ್ನು ಇಡುತ್ತವೆ.

    ಸೌಂದರ್ಯಕ್ಕೆ ಮತ್ತೊಂದು ಹೆಸರು ಬಾಲದಂಡೆಯ ಹಕ್ಕಿ (Asian Paradise):
    ಕಣ್ಣಿಗೆ ಸುಂದರ ನೋಟ ಬೀರುವ ಹಕ್ಕಿಗಳನ್ನು ಪಟ್ಟಿ ಮಾಡುತ್ತಾ ಹೋದ್ರೆ ಅವುಗಳಲ್ಲಿ ಪ್ರಮುಖವಾದುದು ಬಾಲದಂಡೆಯ ಹಕ್ಕಿ. ಅದರ ಬಾಲವೇ ಅದಕ್ಕೇ ಸೌಂದರ್ಯ. ಛಾಯಾಗ್ರಾಹಕನೂ ಇದರ ಫೋಟೋ ಕ್ಲಿಕ್ಕಿಸಬೇಕೆಂದರೆ ಹರಸಾಹಸ ಮಾಡಲೇಬೇಕು. ಏಕೆಂದರೆ ಇದರ ಬಾಲ ಪೂರ್ಣ ನೋಡಿಕೊಂಡು ಫೋಟೋ ಕ್ಲಿಕ್ಕಿಸುವಷ್ಟರಲ್ಲೇ ಸರ್ರನೆ ಹಾರಿಬಿಡುತ್ತೆ.

    ಗಂಡು ರಾಜಹಕ್ಕಿಗೆ ಕಡು ನೀಲಿಗಪ್ಪು ತಲೆ, ಜುಟ್ಟು, ಗಲ್ಲ, ಹೊಳೆಯುವ ಬಿಳಿದೇಹ, ರೆಕ್ಕೆಯಲ್ಲಿ ಅಲ್ಲಲ್ಲಿ ಕಪ್ಪು ಗರಿಗಳು. ಮೊದಲೇ ತಿಳಿಸಿದಂತೆ ಒಂದೂವರೆ ಅಡಿ ಉದ್ದದ ಬಿಳಿ ರಿಬ್ಬನ್ ತರಹದ ಬಾಲ. ಇದರಲ್ಲಿ ಮತ್ತೊಂದು ಒಳಪ್ರಭೇದವಿದೆ. ಈ ಪ್ರಭೇದದಲ್ಲಿ ಬಿಳಿದೇಹದ ಬದಲು ಕೆಂಗಂದು ದೇಹ ಮತ್ತು ಕೆಂಗಂದು ರಿಬ್ಬನ್ ಬಾಲ ಇರುತ್ತದೆ. ವರ್ಷದಿಂದ ವರ್ಷಕ್ಕೆ ಇದರ ಬಾಲ ಬೆಳೆಯುತ್ತಾ ಹೋಗುತ್ತದೆ, 3 ವರ್ಷಗಳ ನಂತರ ಒಂದು ಅಡಿ ಮೀರುತ್ತದೆ. ಜೊತೆಗೆ ಬಾಲ್ಯದ ಕೆಂಪು ಬಿಳಿಯತ್ತ ಹೊರಳುತ್ತದೆ. ಕೆಂಗಂದು ಮತ್ತು ಬಿಳಿ ಮಿಶ್ರಿತ ರಾಜಹಕ್ಕಿಯನ್ನು ನಾವು ಕೆಲವೊಮ್ಮೆ ಕಂಡರೆ ಅದನ್ನು ಟ್ರಾನಿಯೆಂಟ್‌ ಫೇಸ್‌ ಎಂದು ತಿಳಿಯಬೇಕು. ಹೀಗೆ ಅಚ್ಚ ಬಿಳಿದೇಹ ಹೊಂದಿದ ರಾಜಹಕ್ಕಿಯನ್ನು ಹಿಂದಿಯಲ್ಲಿ ದೂದ್‍ರಾಜ ಎಂದು ಹೇಳುತ್ತಾರೆ.

    ಈ ಪಕ್ಷಿ ಬೇಸಿಗೆಯಲ್ಲಿ ಮೇಲುಕೋಟೆ, ಬಂಡೀಪುರ, ನಂದಿಬೆಟ್ಟ, ಸಾವನ ದುರ್ಗ, ದೇವರಾಯನ ದುರ್ಗ, ಬನ್ನೇರುಘಟ್ಟ, ಮುತ್ತತ್ತಿಯಂಥಾ ಕಾಡುಗಳಲ್ಲಿ ಕಾಣಸಿಗುತ್ತವೆ. ಚಳಿಗಾಲದಲ್ಲಿ ದಕ್ಷಿಣಭಾರತದ ಅನೇಕ ಜಾಗಗಳಲ್ಲಿ ಚದುರಿ ಹೋಗುತ್ತವೆ. ಮರಗಳು ದಟ್ಟವಿರುವ, ವಿವಿಧ ಬೆಳೆಗಳಿಂದ ಕೂಡಿದ ತೋಟ, ಬಿದುರು ಕಾಡುಗಳೆಂದರೆ ಇವಕ್ಕೆ ಬಲು ಪ್ರಿಯ.

    ಮಧುರ ಕಂಠ:
    ನಮ್ಮ ಅತಿ ಸುಂದರ ಹಕ್ಕಿಗಳಲ್ಲಿ ಈ ಮಧುರಕಂಠವೂ ಒಂದು. ಹೆಸರಿಗೆ ತಕ್ಕಂತೆ ಇದು ಶ್ರಾವ್ಯವಾಗಿ ಹಾಡುತ್ತದೆ. ಇಂಗ್ಲಿಷಿನಲ್ಲಿ ಇದನ್ನು ಐಯೋರ ಎಂಬ ಇಂಪಾದ ಹೆಸರಿನಿಂದಲೇ ಕರೆಯುತ್ತಾರೆ.

    ದಕ್ಷಿಣ ಏಷ್ಯಾದಲ್ಲಿ ಎರಡು ಜಗತ್ತಿನಲ್ಲಿ 4 ಬಗೆಯ ಮಧುರಕಂಠಗಳು ಕಂಡುಬರುತ್ತವೆ. ಎಲ್ಲವೂ ಹಸಿರು, ಹಳದಿ, ಬಿಳಿ ಹಾಗೂ ಕಪ್ಪು ವರ್ಣಗಳ ಸಂಯೋಜನೆಯ ಹಕ್ಕಿಗಳೇ. ಗಂಡು ಹೆಣ್ಣಿನ ವರ್ಣ ಸಂಯೋಜನೆ ಬೇರೆ ಬೇರೆ. ಮರಿ ಮಾಡುವ ಕಾಲದಲ್ಲಿ ಗಂಡು ಹಕ್ಕಿ ಕಪ್ಪು ಟೋಪಿಯನ್ನು ಮೆರೆಸುತ್ತದೆ. ಇದರ ಪ್ರೇಮಯಾಚನಾ ಪ್ರಸಂಗ ಪ್ರಸಿದ್ಧವಾದದ್ದು. ಎಲೆಗಳ ನಡುವೆ ನುಸುಳಿ ಕೀಟಗಳನ್ನು ಹೆಕ್ಕಿಕೊಳ್ಳುವುದು ಇದರ ಆಹಾರ ಸಂಪಾದನೆಯ ಕ್ರಮ. ಕಂಬಳಿ ಹುಳುಗಳೂ ಇದರ ಆಹಾರ ಕ್ರಮವಾಗಿದೆ.

    ದಕ್ಷಿಣ ಭಾರತದಲ್ಲಿ ಕಂಡುರುವುದು ಸಾಮಾನ್ಯ ಮಧುರಕಂಠ. ಉತ್ತರ-ಪಶ್ಚಿಮ ಭಾರತದಲ್ಲಿ ಮಾರ್ಷಲ್ ಮಧುರಕಂಠ ಕಂಡುಬರುತ್ತದೆ. ದಕ್ಷಿಣ ಭಾರತದಲ್ಲಿಯೂ ಮಾರ್ಷಲ್ಸ್ ಕಂಡುಬರುತ್ತದೆ. ಇದರ ಬಾಲದಿಂದಲೇ ಇದನ್ನು ಗುರುತಿಸಬಹುದು ಎಂದು ಪಕ್ಷಿ ತಜ್ಞರು ಹೇಳುತ್ತಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_title” view=”carousel” /]

  • ಬಂಡೀಪುರಕ್ಕೆ ಮೋದಿ ಬಂದು ಹೋದ ನಂತ್ರ ಹೆಚ್ಚಾಯ್ತು ಪ್ರವಾಸಿಗರ ಸಂಖ್ಯೆ, ಹರಿದು ಬಂತು ಆದಾಯ

    ಬಂಡೀಪುರಕ್ಕೆ ಮೋದಿ ಬಂದು ಹೋದ ನಂತ್ರ ಹೆಚ್ಚಾಯ್ತು ಪ್ರವಾಸಿಗರ ಸಂಖ್ಯೆ, ಹರಿದು ಬಂತು ಆದಾಯ

    ಚಾಮರಾಜನಗರ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ (Bandipur TigerReserve Forest) ಬಂದು ಹೋದ ಬಳಿಕ ಹೊರರಾಜ್ಯಗಳಿಂದಲೂ ಪ್ರವಾಸಿಗರು ಲಗ್ಗೆಯಿಡುತ್ತಿದ್ದಾರೆ. ಪ್ರವಾಸಿಗರ (Tourists) ಆಗಮನದಿಂದ ಅರಣ್ಯ ಇಲಾಖೆಗೆ ಆದಾಯವೂ ಹರಿದುಬರುತ್ತಿದೆ.

    ಹೌದು. ಚಾಮರಾಜನಗರ (Chamarajanagar) ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ರಾಷ್ಟ್ರೀಯ ಹುಲಿ ಸಂರಕ್ಷಿತಾರಣ್ಯವಾಗಿ ಇತ್ತೀಚೆಗಷ್ಟೇ 50 ವರ್ಷ ಪೂರೈಸಿತು. 50 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಕಳೆದ ಏಪ್ರಿಲ್ 9 ರಂದು ಪ್ರಧಾನಿ ನರೇಂದ್ರ ಮೋದಿ ಬಂಡೀಪುರಕ್ಕೆ ಭೇಟಿ ನೀಡಿ ಎರಡು ತಾಸುಗಳ ಕಾಲ ಸಫಾರಿ ನಡೆಸಿದ್ದರು. ಇದನ್ನೂ ಓದಿ: ಮಾದಪ್ಪನ ಕ್ಷೇತ್ರದ ಆನೆ ಉಮಾಮಹೇಶ್ವರಿಗೆ 5 ಲಕ್ಷ ರೂ. ಆರೋಗ್ಯ ವಿಮೆ

    ಪ್ರಧಾನಿ ಮೋದಿ ಅವರು ಬಂದು ಹೋದ ದಿನದಿಂದ ಬಂಡೀಪುರಕ್ಕೆ ಬರುವವರ ಸಂಖ್ಯೆ ಹೆಚ್ಚಾಗಿದೆ. ಪ್ರತಿದಿನ 2 ಸಾವಿರ ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ. ವಾರಾಂತ್ಯದಲ್ಲಿ ಸಫಾರಿಗಾಗಿ ಬರುವವರ ಸಂಖ್ಯೆ ಇನ್ನೂ ಹೆಚ್ಚಿದೆ. ಇದರಿಂದ ಪ್ರತಿದಿನ 7 ಲಕ್ಷಕ್ಕೂ ಹೆಚ್ಚು ಆದಾಯ ಅರಣ್ಯ ಇಲಾಖೆಗೆ ಹರಿದು ಬರುತ್ತಿದೆ. ಬಂಡೀಪುರದಲ್ಲಿ 31 ಸಫಾರಿ (Safari) ಜೀಪ್‌ ಓಡಿಸಲು ಅವಕಾಶವಿದೆ. ಆದ್ರೆ ಇದುವರೆಗೆ ಅರಣ್ಯ ಇಲಾಖೆ 26 ಜೀಪ್​ಗಳನ್ನಷ್ಟೇ ಬಳಸುತ್ತಿತ್ತು. ಇದರೊಂದಿಗೆ 2‌ ಜೀಪ್‌ ಮತ್ತು 2 ಹೆಚ್ಚುವರಿ ಸಫಾರಿ ಬಸ್‌ಗಳನ್ನ ಹೊಸದಾಗಿ ತರಿಸಲಾಗಿದ್ದು, ಪ್ರವಾಸಿಗರಿಗೆ ಸಾಕಷ್ಟು ಅನುಕೂಲವಾಗಿದೆ. ಇದನ್ನೂ ಓದಿ: ಅನ್ನಭಾಗ್ಯಕ್ಕೆ ಮತ್ತಷ್ಟು ಸಂಕಷ್ಟ- ರಾಜ್ಯಗಳು ಹೇಳಿದ್ದೇನು?

    ಇನ್ನೂ ಮೋದಿ ಭೇಟಿ ಬಳಿಕ ಆದಾಯ ಕೂಡ ಡಬಲ್ ಆಗ್ತಿದೆ. ಪ್ರಧಾನಿ ಮೋದಿ 50 ವರ್ಷದ ಸಂಭ್ರಮಕ್ಕೆ ಸಾಕ್ಷಿಯಾಗುವ ಜೊತೆಗೆ ದೇಶದ ವಿವಿಧ ರಾಜ್ಯದ ಗಣ್ಯರಿಗೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶವನ್ನ ಪರಿಚಯಿಸಿದ್ದರು. ಪ್ರಧಾನಿ ಮೋದಿ ಅವರು ಪ್ರವಾಸ ಮಾಡಿದ್ದನ್ನ ಟಿವಿಯಲ್ಲಿ ನೋಡಿದ್ವಿ, ಆದ್ದರಿಂದ ನಾವೂ ಸಫಾರಿ ಹೋಗೋಣ ಅಂತಾ ಬಂದಿದ್ದೇವೆ ಎಂದು ಪುಣೆ ಪ್ರವಾಸಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ ಪ್ರಧಾನಿ ಮೋದಿ ಬಂದು ಹೋದ ನಂತರ ವಿವಿಧ ರಾಜ್ಯಗಳಿಂದ ಬರುವವರ ಸಂಖ್ಯೆ ಹೆಚ್ಚಾಗಿದೆ.

    ಅಲ್ಲದೇ, ಹುಲಿ ವಾಸಕ್ಕೆ ದೇಶದ 2ನೇ ಅತ್ಯುತ್ತಮ ಅರಣ್ಯ ಪ್ರದೇಶವೆಂಬ ಹೆಮ್ಮೆಯೂ ಬಂಡೀಪುರಕ್ಕೆ ಇದ್ದು, ಈ ಹಿನ್ನೆಲೆಯಲ್ಲೂ ಪ್ರವಾಸಿಗರು‌ ಲಗ್ಗೆಯಿಡುತ್ತಿದ್ದಾರೆ.

  • 5, 6 ವರ್ಷದ ಬಾಲಕಿಯರ ಮೇಲೆ ಸಂಬಂಧಿಕನಿಂದಲೇ ರೇಪ್‌ – ಆರೋಪಿ ಎಸ್ಕೇಪ್‌

    ಲಕ್ನೋ: ಮದುವೆ ಸಮಾರಂಭವೊಂದರಲ್ಲಿ (Marriage Party) ಇಬ್ಬರು ಬಾಲಕಿಯರ ಮೇಲೆ ಅಪರಿಚಿತ ವ್ಯಕ್ತಿಯೊಬ್ಬ ಅತ್ಯಾಚಾರ ಎಸಗಿರುವ ಘಟನೆ ಲಕ್ನೋದ ಬಿಜ್ನೋರ್ ಗ್ರಾಮದಲ್ಲಿ ನಡೆದಿದೆ.

    ಶೆರ್ಕೋಟ್ ಪೊಲೀಸ್ ಠಾಣಾ (Sherkot police station) ವ್ಯಾಪ್ತಿಯಲ್ಲಿ ಶನಿವಾರ ರಾತ್ರಿ ʻಬರಾತ್‌ʼ ಮದುವೆ ಪಾರ್ಟಿಗೆ ತೆರಳಿದ್ದ ಬಾಲಕಿಯರ ಮೇಲೆ ಅತ್ಯಾಚಾರ ನಡೆದಿದ್ದು, ಸಂತ್ರರನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: ಮಣಿಪುರ ಮತ್ತೆ ಧಗ ಧಗ – ಅಮಿತ್‌ ಶಾ ಭೇಟಿಗೆ ಮುನ್ನ ಮತ್ತೊಂದು ಅಟ್ಯಾಕ್‌, ಐವರ ಸಾವು

    ಲಕ್ನೋದ ಶೆರ್ಕೋಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ಮದುವೆ ಪಾರ್ಟಿಯಲ್ಲಿ ಇಬ್ಬರು ಬಾಲಕಿಯರು ಡಿಜೆ ನುಡಿಸುವುದನ್ನ ಆನಂದಿಸುತ್ತಿದ್ದರು, ಇದ್ದಕ್ಕಿದ್ದಂತೆ ಕಣ್ಮರೆಯಾಗಿಬಿಟ್ಟರು. ತಕ್ಷಣ ಸ್ಥಳೀಯರೆಲ್ಲಾ ಬಾಲಕಿಯರನ್ನ ಹುಡುಕಲು ಪ್ರಾರಂಭಿಸಿದರು. ನಂತರ ಪಾರ್ಟಿ ನಡೆಯುತ್ತಿದ್ದ ಸ್ಥಳದಿಂದ ಸ್ವಲ್ಪ ದೂರದಲ್ಲೇ ಇದ್ದ ಕಾಡಿನಲ್ಲಿ ಅರೆಪ್ರಜ್ಞಾ ಸ್ಥಿತಿಯಲ್ಲಿ ಬಿದ್ದಿರುವುದು ಕಂಡುಬಂದಿತು. ಬಾಲಕಿಯರನ್ನು ಪತ್ತೆಹಚ್ಚಿದ ಪೊಲೀಸರು ತಕ್ಷಣವೇ ಅವರನ್ನ ಆಸ್ಪತ್ರೆಗೆ ದಾಖಲಿಸಿದರು. ಇದನ್ನೂ ಓದಿ: ಕುಡಿಯುವ ನೀರಿನ ಘಟಕದಲ್ಲಿ ಮೋರಿ ನೀರು ಪೂರೈಕೆ- ಜನರ ಆರೋಗ್ಯದಲ್ಲಿ ಏರುಪೇರು

    CRIME COURT

    ಈ ಕುರಿತು ಪ್ರತಿಕ್ರಿಯಿಸಿರುವ ಎಸ್ಪಿ ನೀರಜ್‌ ಕುಮಾರ್‌ ಜದೌನ್‌, ಸಂತ್ರಸ್ತ ಬಾಲಕಿಯರಲ್ಲಿ ಒಬ್ಬರಿಗೆ 6 ವರ್ಷ ಮತ್ತೊಬ್ಬರಿಗೆ 5 ವರ್ಷ ತುಂಬಿದೆ. ಮಕ್ಕಳನ್ನು ಅವರ ಸಂಬಂಧಿಕನೊಬ್ಬ ಅಪಹರಿಸಿ ಅತ್ಯಾಚಾರವೆಸಗಿದ್ದಾನೆ. ಆರೋಪಿ ವಿರುದ್ಧ ಐಪಿಸಿ ಸೆಕ್ಷನ್‌ ಮತ್ತು ಪೋಕ್ಸೊ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಿ ನಾಪತ್ತೆಯಾಗಿದ್ದು, ಶೋಧ ಕಾರ್ಯ ಮುಂದುವರಿದಿದೆ ಎಂದು ತಿಳಿಸಿದ್ದಾರೆ.

  • ಪಶ್ವಿಮ ಘಟ್ಟದಲ್ಲಿ ರಿಯಲ್ ಎಸ್ಟೇಟ್‍ಗಾಗಿ ಕಾಡಿಗೆ ಬೆಂಕಿ

    ಪಶ್ವಿಮ ಘಟ್ಟದಲ್ಲಿ ರಿಯಲ್ ಎಸ್ಟೇಟ್‍ಗಾಗಿ ಕಾಡಿಗೆ ಬೆಂಕಿ

    – ಸರ್ಕಾರ ನಿರ್ಲಕ್ಸ್ಯ ತೋರ್ತಿದೆ ಎಂದ ಪರಿಸರವಾದಿ
    – ಕ್ರಮ ಕೈಗೊಳ್ತೇವೆ ಎಂದು ಸಿಎಂ ಸ್ಪಷ್ಟನೆ

    ಶಿವಮೊಗ್ಗ: ರಿಯಲ್ ಎಸ್ಟೇಟ್ ಉದ್ಯಮ (Real Estate Business) ದ ವ್ಯಾಮೋಹಕ್ಕೆ ಅರಣ್ಯ ಪ್ರದೇಶ (Forest Area) ಒತ್ತುವರಿ ಆಗುವುದರ ಜೊತೆಗೆ ಕೆಲವು ಕಿಡಿಗೇಡಿಗಳು ಅರಣ್ಯಕ್ಕೂ ಬೆಂಕಿ ಇಡುತ್ತಿದ್ದಾರೆ. ಬೆಂಕಿಯ ಕೆನ್ನಾಲಿಗೆಗೆ ಅರಣ್ಯ ಪ್ರದೇಶ, ವನ್ಯಜೀವಿಗಳು ಭಸ್ಮವಾಗುತ್ತಿವೆ. ಆದರೂ ಸರ್ಕಾರ ಮಾತ್ರ ಇದರ ವಿರುದ್ಧ ಯಾವ ಕ್ರಮ ಕೈಗೊಳ್ಳಲು ಮುಂದಾಗುತ್ತಿಲ್ಲ.

    ಹೌದು. 2016ರಲ್ಲಿ ಆಸ್ಟ್ರೇಲಿಯಾ ಸಿಡ್ನಿ ಕಾಡಿಗೆ ಬೆಂಕಿ ಬಿದ್ದಾಗ ನಮ್ಮೆಲ್ಲರ ಮನ ಮಿಡಿದಿತ್ತು. ಆದರೆ ಈಗ ಅದೇ ಪರಿಸ್ಥಿತಿ ಕರ್ನಾಟಕದ ಪಶ್ಚಿಮ ಘಟ್ಟದ ಮಡಿಲಿನ, ಮಲೆನಾಡು ಜಿಲ್ಲೆ ಶಿವಮೊಗ್ಗದ ಶೆಟ್ಟಿಹಳ್ಳಿ ಅಭಯಾರಣ್ಯಕ್ಕೆ ಬಂದೊದಗಿದೆ. ಅರಣ್ಯ ಪ್ರದೇಶದ ಮೇಲೆ ರಿಯಲ್ ಎಸ್ಟೇಟ್ ದಂಧೆಕೋರರ ಕಣ್ಣು ಬಿದ್ದಿದ್ದು, ಮಾನವ ನಿರ್ಮಿತ ಬೆಂಕಿಗೆ ಕಾಡು ಪ್ರಾಣಿಗಳು ಬೆಂದು ಹೋಗ್ತಿವೆ. ಆದರೂ ಸರ್ಕಾರ ಮಾತ್ರ ಕಣ್ಮುಚ್ಚಿ ಕುಳಿತಿದೆ. ವನ್ಯ ಜೀವಿಗಳ ಕಣ್ಣೀರು ಭೂಮಿಗೂ ಬೀಳದೇ ಬೆಂಕಿಯಲ್ಲಿ ಆವಿಯಾಗುತ್ತಿದೆ. ಇದನ್ನೂ ಓದಿ: ಆಜಾನ್ ಹೇಳಿಕೆ ವಿರುದ್ಧ ಎಷ್ಟೇ ಪ್ರತಿರೋಧ ಬಂದ್ರೂ ನಾನು ಜನ ಸಾಮಾನ್ಯನ ನೋವು ಹೇಳೋನೆ: ಈಶ್ವರಪ್ಪ

    ಕಳೆದ ಹತ್ತು ದಿನಗಳಲ್ಲಿ ಶಿವಮೊಗ್ಗದ ಶೆಟ್ಟಿಹಳ್ಳಿ (ShettyHalli Shivamogga) ಅಭಯಾರಣ್ಯದಲ್ಲಿ 50ಕ್ಕೂ ಅಧಿಕ ಜಾಗಗಳಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ. ಇದರಿಂದ ಪಶ್ಚಿಮ ಘಟ್ಟಗಳಲ್ಲಿ ಅಸಂಖ್ಯ ವನ್ಯಜೀವಿಗಳ ನೆಲೆ ನಾಶವಾಗಿದೆ. ಕೆಲ ವನ್ಯ ಜೀವಿಗಳು ದಿಕ್ಕು ತೋಚದೆ ನಾಡಿಗೆ ಲಗ್ಗೆ ಇಟ್ಟಿವೆ. ಅರಣ್ಯ ಇಲಾಖೆಯ ನಿಯಂತ್ರಣಕ್ಕೆ ಸಿಗದ ಮಾನವ ನಿರ್ಮಿತ ಕಾಡಿನ ಬೆಂಕಿ, ಬೇಸಿಗೆಯ ಬಿಸಿಲಿಗೆ ಇನ್ನಷು ಅಬ್ಬರಿಸಿ ಉರಿಯುತ್ತಿದೆ. ಸಿಬ್ಬಂದಿಗೆ ಸರಿಯಾದ ಉಪಕರಣಗಳನ್ನು ನೀಡದೇ, ಮಾನವ ನಿರ್ಮಿತ ಕಾಡಿನ ಬೆಂಕಿ ಕುರಿತು ಸರ್ಕಾರ ನಿಗಾ ವಹಿಸದೇ ಚುನಾವಣೆ ವಿಚಾರದಲ್ಲಿ ಮಗ್ನವಾಗಿದೆ. ಈ ಕೃತ್ಯದ ಇದರ ಹಿಂದೆ ರಿಯಲ್ ಎಸ್ಟೇಟ್‍ನ ದಂಧೆ ಅಡಗಿದೆ ಎಂದು ಪರಿಸರವಾದಿ ಅಖಿಲೇಶ್ ಚಿಪ್ಲಿ ಆರೋಪಿಸಿದ್ದಾರೆ.

    ಇನ್ನು ಪಶ್ಚಿಮ ಘಟ್ಟ ಭಾಗದಲ್ಲಿ ಭಾರೀ ಕಾಡ್ಗಿಚ್ಚು ವಿಚಾರ ಸಿಎಂ ಪ್ರತಿಕ್ರಿಯಿಸಿ ಈಗಾಗಲೇ ಡಿಸಿ ಜೊತೆ ಸಭೆ ಮಾಡಿದ್ದು, ಬೆಂಕಿ ಬೀಳದಂತೆ ತಡೆಯಲು ಕ್ರಮ ಕೈಗೊಳ್ಳಲಾಗಿದೆ. ಸಾಂಪ್ರದಾಯಿಕ ಕಾರಣದಿಂದ ಅಲ್ಲಲ್ಲಿ ಬೆಂಕಿ ಬೀಳ್ತಿದೆ. ಬೆಂಕಿ ನಂದಿಸುವ ಬದಲು ಬೆಂಕಿ ಬೀಳದಂತೆ ಕ್ರಮ ಕೈಗೊಳ್ಳುತ್ತೇವೆ. ಅರಣ್ಯ ಇಲಾಖೆಗೆ ಬೆಂಕಿ ನಂದಿಸಲು ಹೆಲಿಕಾಪ್ಟರ್ ಬಳಕೆ ಬಗ್ಗೆ ಇನ್ನೂ ನಿರ್ಧಾರ ಕೈಗೊಂಡಿಲ್ಲ ಎಂದಿದ್ದಾರೆ.

    ಒಟ್ಟಾರೆ ಒಂದೆಡೆ ಕಾಡು ಬೆಳೆಸಿ ನಾಡು ಉಳಿಸಿ ಅಂತಾ ಬೊಬ್ಬೆ ಹೊಡೆಯುವ ಸರ್ಕಾರ ತನ್ನ ದಿವ್ಯ ನಿರ್ಲಕ್ಷ್ಯವನ್ನು ಪಕ್ಕಕ್ಕಿಟ್ಟು ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಕೆಲಸ ಮಾಡಬೇಕಿದೆ. ಇದನ್ನೂ ಓದಿ: 2024ಕ್ಕೆ ಕಾಂಗ್ರೆಸ್ ಕಚೇರಿಯಲ್ಲಿ ದೀಪ‌ ಹಚ್ಚುವುದಕ್ಕೂ ಯಾರೂ ಸಿಗುವುದಿಲ್ಲ: ಕಾರಜೋಳ

  • ಚಾರ್ಮಾಡಿ ಘಾಟಿಯಲ್ಲಿ ಬೆಂಕಿ – ಹತ್ತಾರು ಎಕರೆ ಅರಣ್ಯ ಅಗ್ನಿಗಾಹುತಿ

    ಚಾರ್ಮಾಡಿ ಘಾಟಿಯಲ್ಲಿ ಬೆಂಕಿ – ಹತ್ತಾರು ಎಕರೆ ಅರಣ್ಯ ಅಗ್ನಿಗಾಹುತಿ

    ಚಿಕ್ಕಮಗಳೂರು: ಆಕಸ್ಮಿಕ ಬೆಂಕಿ ಬಿದ್ದು ಹತ್ತಾರು ಎಕರೆ ಅರಣ್ಯ (Forest) ಬೆಂಕಿಗಾಹುತಿಯಾಗಿರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸಮೀಪದ ಚಾರ್ಮಾಡಿ ಘಾಟಿಯಲ್ಲಿ (Charmadi Ghat) ನಡೆದಿದೆ.

    ಚಾರ್ಮಾಡಿ ಘಾಟಿಯ ಆಲೆಖಾನ್ ಹೊರಟ್ಟಿ ಸಮೀಪದ ಮಲಯಮಾರುತ ಸಮೀಪದ ಬಳಿ ಗುಡ್ಡಕ್ಕೆ ಆಕಸ್ಮಿಕ ಬೆಂಕಿ (Fire) ಬಿದ್ದು ಹತ್ತಾರು ಎಕರೆ ಅರಣ್ಯ ಸುಟ್ಟುಕರಕಾಲಾಗಿದೆ. ಅರಣ್ಯ ಪ್ರದೇಶಕ್ಕೆ ಬೆಂಕಿ ಬೀಳುತ್ತಿದ್ದಂತೆ ಎಚ್ಚೆತ್ತುಕೊಂಡ ಅರಣ್ಯ ಇಲಾಖೆ ಸಿಬ್ಬಂದಿ ಕೂಡಲೇ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಂದಿಸಿದ್ದಾರೆ.

    ಅರಣ್ಯಕ್ಕೆ ಆಕಸ್ಮಿಕವಾಗಿ ಬೆಂಕಿ ಬಿತ್ತೋ ಅಥವಾ ಯಾರಾದರೂ ಬೆಂಕಿ ಹಾಕಿದ್ದಾರೋ ತಿಳಿದಿಲ್ಲ. ಆದರೆ ಗಾಳಿ ಹಾಗೂ ಬಿಸಿಲಿನ ಝಳಕ್ಕೆ ಒಣಗಿದ್ದ ಗುಡ್ಡದ ಮರಗಿಡಗಳು ಹಾಗೂ ಹುಲ್ಲು ಹೊತ್ತಿ ಉರಿದಿದೆ. ಬೇಸಿಗೆಯಾದ್ದರಿಂದ ಬಿಸಿಲ ಧಗೆಗೆ ಬೆಂಕಿಯ ಜ್ವಾಲೆ ಹೆಚ್ಚಿದ್ದರಿಂದ ಅರಣ್ಯ ಅಧಿಕಾರಿಗಳು ಹಾಗೂ ಅಗ್ನಿಶಾಮಕ ಸಿಬ್ಬಂದಿಗಳು ಬೆಂಕಿಯನ್ನು ನಂದಿಸಲು ಹರಸಾಹಸಪಟ್ಟಿದ್ದಾರೆ. ಇದನ್ನೂ ಓದಿ: ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶ ಶುಕ್ಲಾ ವಿರುದ್ಧ ಭ್ರಷ್ಟಾಚಾರ ಕೇಸ್ ದಾಖಲಿಸಿದ ಸಿಬಿಐ

    ಕಾರ್ಯಾಚರಣೆಯಲ್ಲಿ ಉಪವಲಯ ಅರಣ್ಯಾಧಿಕಾರಿ ಬಸವರಾಜು, ಅರಣ್ಯ ರಕ್ಷಕ ಪರಮೇಶ್, ಅಭಿಷೇಕ್, ಸಿಬ್ಬಂದಿ ದಿನೇಶ್, ವೀರಪ್ಪಗೌಡ ಇದ್ದರು.

    ಚಾರ್ಮಾಡಿ ಘಾಟಿ ದಟ್ಟ ಕಾನನದ ಬೆಟ್ಟಗುಡ್ಡಗಳಿಂದ ಕೂಡಿರುವ ಪ್ರದೇಶ. ಇಲ್ಲಿ ಗುಡ್ಡದ ತುದಿ ಅಥವಾ ಗುಡ್ಡದಲ್ಲಿ ಬೆಂಕಿ ಬಿದ್ದರೆ ನಂದಿಸುವುದು ಬಹಳ ಕಷ್ಟ. ಸ್ಥಳಕ್ಕೆ ಹೋಗುವಷ್ಟರಲ್ಲಿ ನೂರಾರು ಎಕರೆ ಅರಣ್ಯ ಸುಟ್ಟು ಕರಕಲಾಗುತ್ತದೆ. ಹಾಗಾಗಿ ಅರಣ್ಯ ಇಲಾಖೆ ಸಿಬ್ಬಂದಿ ಕೂಡ ಚಾಮಾಡಿಘಾಟಿಯನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಪಾಡುತ್ತಾರೆ. ಆದರೂ ಕೆಲವೊಮ್ಮೆ ಅಲ್ಲಲ್ಲಿ ಬೆಂಕಿ ಬಿದ್ದು ಅರಣ್ಯ ನಾಶವಾಗುತ್ತಿದೆ.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಕೇರಳದಿಂದ ಕಸ ತಂದು ಕೊಡಗಿನ ಅರಣ್ಯ ಪ್ರದೇಶದಲ್ಲಿ ಸುರಿಯುತ್ತಿದ್ದ ಇಬ್ಬರ ಬಂಧನ

    ಕೇರಳದಿಂದ ಕಸ ತಂದು ಕೊಡಗಿನ ಅರಣ್ಯ ಪ್ರದೇಶದಲ್ಲಿ ಸುರಿಯುತ್ತಿದ್ದ ಇಬ್ಬರ ಬಂಧನ

    ಮಡಿಕೇರಿ: ಕೇರಳದಿಂದ (Kerala) ಕಸ ತಂದು ಇಲ್ಲಿಯ ಮಾಕುಟ್ಟ ಸಮೀಪದ ಅರಣ್ಯ (Forest) ಪ್ರದೇಶದಲ್ಲಿ ಸುರಿಯುತ್ತಿದ್ದ ಇಬ್ಬರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ.

    ಬಂಧಿತರನ್ನು ಪೆಂಚಾಳಯ್ಯ ಹಾಗೂ ಶೀನ ಎಂದು ಗುರುತಿಸಲಾಗಿದೆ. ಆರೋಪಿಗಳಿಬ್ಬರು ಆಂಧ್ರಪ್ರದೇಶದಿಂದ ಸರಕುಗಳನ್ನು ಕೇರಳಕ್ಕೆ ಸಾಗಿಸಿ ವಾಪಸ್ ಬರುತ್ತಿದ್ದ ಖಾಲಿ ವಾಹನದಲ್ಲಿ 15 ಮೂಟೆ ಕಸವನ್ನು ತೆಗೆದುಕೊಂಡು ಬಂದು ಇಲ್ಲಿನ ಕೂಟುಹೊಳೆ ಸೇತುವೆ ಸಮೀಪ ಕಸದ ಮೂಟೆಗಳನ್ನು (Garbage) ಎಸೆಯುತ್ತಿದ್ದರು. ಈ ವೇಳೆ ಬ್ರಹ್ಮಗಿರಿ ವನ್ಯಜೀವಿ ವಲಯ ಹಾಗೂ ಮಾಕುಟ್ಟ ಪ್ರಾದೇಶಿಕ ವಲಯದ ಅರಣ್ಯ ಅಧಿಕಾರಿಗಳ ತಂಡ ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿದೆ. ಇದನ್ನೂ ಓದಿ: ರಾಜೀವ್ ಗಾಂಧಿ, ಇಂದಿರಾ ಗಾಂಧಿ ಹತ್ಯೆ ಆಕಸ್ಮಿಕವಷ್ಟೇ: ಉತ್ತರಾಖಂಡ ಸಚಿವ

    ಬ್ರಹ್ಮಗಿರಿ ವನ್ಯಜೀವಿ ವಲಯದ ವಲಯ ಅರಣ್ಯ ಅಧಿಕಾರಿ ಡ್ಯಾನ್ಸಿ ದೇಚಮ್ಮ, ಉಪ ವಲಯ ಅರಣ್ಯ ಸಂರಕ್ಷಣಾ ಅಧಿಕಾರಿ ಲೋಕೇಶ್, ಸಿಬ್ಬಂದಿಯಾದ ಸ್ವಾಮಿ, ಸುಬ್ಬಯ್ಯ, ಮಾಕುಟ್ಟ ಪ್ರಾದೇಶಿಕ ವಲಯದ ವಲಯ ಅರಣ್ಯಾಧಿಕಾರಿ ಸುಹಾನಾ, ಉಪ ವಲಯ ಅರಣ್ಯ ಸಂರಕ್ಷಣಾ ಅಧಿಕಾರಿ ಚಂದ್ರಶೇಖರ, ಸಿಬ್ಬಂದಿ ಶಜಿ, ರೋಷನ್ ಇದ್ದರು. ಇದನ್ನೂ ಓದಿ: ಕರ್ನಾಟಕಕ್ಕೆ ಗಿಫ್ಟ್‌ : ಭದ್ರಾ ಮೇಲ್ದಂಡೆ ಇನ್ನು ಮುಂದೆ ರಾಷ್ಟ್ರೀಯ ಯೋಜನೆ – 5,300 ಕೋಟಿ ರೂ. ಅನುದಾನ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ದೇವಿ ಕನಸಲ್ಲಿ ಬಂದು ನಿಧಿ ತೋರಿಸಿದ್ಲು ಅಂತಾ ಅರಣ್ಯದಲ್ಲಿ ಬಾವಿ ತೋಡಿ ನಿಧಿ ಹುಡುಕ್ತಿದ್ದ ನಾಲ್ವರು ಅರೆಸ್ಟ್‌

    ದೇವಿ ಕನಸಲ್ಲಿ ಬಂದು ನಿಧಿ ತೋರಿಸಿದ್ಲು ಅಂತಾ ಅರಣ್ಯದಲ್ಲಿ ಬಾವಿ ತೋಡಿ ನಿಧಿ ಹುಡುಕ್ತಿದ್ದ ನಾಲ್ವರು ಅರೆಸ್ಟ್‌

    ಕಾರವಾರ: ದೇವಿ ಕನಸಿನಲ್ಲಿ ಬಂದು ನಿಧಿ ತೋರಿಸಿದಳು ಎಂದು ಕಾರವಾರ (Karwar) ತಾಲ್ಲೂಕಿನ ಶಿರವಾಡದಲ್ಲಿ ಕಾದಿಟ್ಟ ಅರಣ್ಯ ಪ್ರದೇಶದಲ್ಲಿ ನಿಧಿ (Treasure) ಶೋಧನೆಗಾಗಿ 15 ಅಡಿಗೂ ಹೆಚ್ಚು ಆಳವಾದ ಬಾವಿ (Well) ತೋಡಿದ ನಾಲ್ವರು ಆರೋಪಿಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ. ಕೃತ್ಯಕ್ಕೆ ಬಳಸಿದ ಬೈಕ್, ಮೊಬೈಲ್ ಫೋನ್‌ಗಳು, ಪಿಕಾಸಿ ಸೇರಿದಂತೆ ವಿವಿಧ ಪರಿಕರಗಳನ್ನು ಜಪ್ತಿ ಮಾಡಿದ್ದಾರೆ.

    ಶಿರವಾಡದಲ್ಲಿ ನೆಲೆಸಿರುವ ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನ ಹಿದಾಯತ್ ಅಬ್ದುಲ್ ಗನಿ (43), ಶಿರವಾಡದ ರುಸ್ತುಂ ರಜಾಕ್ ಸಾಬ್ ಪಠಾಣ್ (55), ಉತ್ತರ ಪ್ರದೇಶದ ಗೋರಖ್‌ ಪುರದ ಹರ್ಷದ್ ಅಲಿ ಹೈದರ್ ಅಲಿ ಅನ್ಸಾರ್ (21) ಹಾಗೂ ಶಿರವಾಡದ ಸರಫ್‌ರಾಜ್ ಅಬೀಬ್ ಉಲ್ಲಾ ಸಲ್ಮಾನಿ (25) ಬಂಧಿತರು. ಇದನ್ನೂ ಓದಿ: ನಮಗೆ ಜೀವ ನೀಡುವುದೂ ಗೊತ್ತು.. ಜೀವ ತೆಗೆಯುವುದೂ ಗೊತ್ತು – ಪ್ರಜ್ಞಾ ಸಿಂಗ್‌ ಪ್ರಚೋದನಕಾರಿ ಭಾಷಣ

    ಕಾಡಿನ ನಡುವೆ ಇರುವ ದೊಡ್ಡ ಬಂಡೆಗೆ ಪೂಜೆ ಸಲ್ಲಿಸಿದ್ದ ಆರೋಪಿಗಳು, ಅದರ ಸಮೀಪದಲ್ಲೇ 15 ಕ್ಕೂ ಹೆಚ್ಚು ಅಡಿಗಳ ಬಾವಿಯನ್ನು ತೋಡಿದ್ದಾರೆ. ಕೃತ್ಯದಲ್ಲಿ ತೊಡಗಿದ್ದಾಗಲೇ ಅರಣ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ದಾಳಿ ಮಾಡಿದ್ದರಿಂದ ಆರೋಪಿಗಳು ಅಲ್ಲೇ ಸಿಕ್ಕಿಬಿದ್ದರು. ಅಲ್ಲಿದ್ದ ಕಲ್ಲುಗಳಿಗೆ ಅರಿಶಿನ-ಕುಂಕುಮ ಹಚ್ಚಿ, ನಿಂಬೆಹಣ್ಣಿನ ಹಾರ ಹಾಕಿ ಆರತಿ ಮಾಡಿದ್ದೂ ಕಂಡುಬಂದಿದೆ.

    ಕೃತ್ಯದ ಪ್ರಮುಖ ಆರೋಪಿ ಹಿದಾಯತ್ ಅಬ್ದುಲ್ ಗನಿಯನ್ನು ಅರಣ್ಯಾಧಿಕಾರಿಗಳು ಕಾದಿಟ್ಟ ಅರಣ್ಯದಲ್ಲಿ ಬಾವಿ ತೋಡಿರುವ ಕುರಿತು ವಿಚಾರಣೆಗೆ ಒಳಪಡಿಸಿದಾಗ, ಕಳೆದ ಅಮಾವಾಸ್ಯೆಯ ದಿನ ರಾತ್ರಿ ನಮಗೆ ಶಿರಸಿಯ ಮಾರಿಕಾಂಬೆ ಕನಸಿನಲ್ಲಿ ಬಂದು ಇಲ್ಲಿ ಪೂಜೆ ಸಲ್ಲಿಸಲು ತಿಳಿಸಿದ್ದಾಳೆ. ಹಾಗಾಗಿ ನಾವು ಬಾವಿ ತೋಡುತ್ತಿದ್ದೇವೆ. ನಾವು ಯಾವುದೇ ಮರವನ್ನೂ ಕತ್ತರಿಸಿಲ್ಲ ಎಂದು ಸಮಜಾಯಿಸಿ ನೀಡಿದ್ದ. ನಂತರ ತನಿಖೆ ವೇಳೆ ತಾವು ನಿಧಿಗಾಗಿ ಶೋಧ ನಡೆಸಿದ್ದಾಗಿ ಒಪ್ಪಿಕೊಂಡಿದ್ದಾರೆ. ಇದನ್ನೂ ಓದಿ: ವಿಧಾನಸೌಧ ಮುಂಭಾಗದಲ್ಲೇ ಬಿಯರ್ ಪಾರ್ಟಿ – ನಾಲ್ವರು ಯುವಕರೊಂದಿಗೆ ಇಬ್ಬರು ಯುವತಿಯರ ಮೋಜು ಮಸ್ತಿ

    ಕಾರ್ಯಾಚರಣೆಯಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಪ್ರಶಾಂತ ಕುಮಾರ ಕೆ.ಸಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಜಯೇಶ ಅವರ ಮಾರ್ಗದರ್ಶನದಲ್ಲಿ ವಲಯ ಅರಣ್ಯಾಧಿಕಾರಿ ರಾಘವೇಂದ್ರ ನಾಯ್ಕ, ಉಪ ವಲಯ ಅರಣ್ಯಾಧಿಕಾರಿಗಳಾದ ರೂಪಾ ಥಾಮ್ಸೆ, ನವೀನ ಶೆಟ್ಟಿ, ಅರಣ್ಯ ರಕ್ಷಕರಾದ ವೀಣಾ ದೇವಾಡಿಗ, ಸಂಜೀವ ಅಸ್ನೋಟಿಕರ್, ಅರಣ್ಯ ವೀಕ್ಷಕರಾದ ಮಧುಕರ ಗುನಗಿ, ದೇವಿದಾಸ ಗುನಗಿ, ಶಶಿಕಾಂತ ಗುನಗಿ ಹಾಗೂ ಸಿಬ್ಬಂದಿ ಶಶಿಕಾಂತ ಗೋವೇಕರ್ ಭಾಗವಹಿಸಿದ್ದು, ಆರೋಪಿಗಳ ವಿರುದ್ಧ 1963ರ ಅರಣ್ಯ ಕಾಯ್ದೆಯ ಅಡಿ ಪ್ರಕರಣ ದಾಖಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಮಾಜಿ ಸಚಿವ ಎಸ್.ಎಸ್ ಮಲ್ಲಿಕಾರ್ಜುನ್ ಫಾರ್ಮ್ ಹೌಸ್ ಮೇಲೆ ದಾಳಿ – ವನ್ಯಜೀವಿಗಳು ಪತ್ತೆ

    ಮಾಜಿ ಸಚಿವ ಎಸ್.ಎಸ್ ಮಲ್ಲಿಕಾರ್ಜುನ್ ಫಾರ್ಮ್ ಹೌಸ್ ಮೇಲೆ ದಾಳಿ – ವನ್ಯಜೀವಿಗಳು ಪತ್ತೆ

    ದಾವಣಗೆರೆ: ಕಾಂಗ್ರೆಸ್‍ನ (Congress) ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ (S.S Mallikarjun) ಅವರ ದಾವಣಗೆರೆಯ ಕಲ್ಲೇಶ್ವರ ಮಿಲ್ ಹಿಂಭಾಗದ ಫಾರ್ಮ್‍ಹೌಸ್ (Farmhouse) ಮೇಲೆ ಸಿಸಿಬಿ (CCB) ಪೊಲೀಸರು ಹಾಗೂ ಅರಣ್ಯ ಇಲಾಖೆ (Forest Department) ಸಿಬ್ಬಂದಿ ದಾಳಿ ನಡೆಸಿದ್ದಾರೆ.

    ದಾಳಿ ವೇಳೆ ಫಾರ್ಮ್‍ಹೌಸ್‍ನಲ್ಲಿ ಸಾಕುತ್ತಿದ್ದ ವನ್ಯಜೀವಿಗಳು ಪತ್ತೆಯಾಗಿವೆ. ಬೆಂಗಳೂರಿನ ಹೆಬ್ಬಾಳದಲ್ಲಿ ಕಳೆದ ಡಿ.18 ರಂದು ಜಿಂಕೆ ಚರ್ಮ, ಕೊಂಬು, ಮೂಳೆ ಮಾರಾಟ ಮಾಡಲು ಬಂದಿದ್ದ ಸೆಂಥಿಲ್ ಎಂಬ ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದ ಸಿಸಿಬಿ ಪೊಲೀಸರು ಆತನ ವಿಚಾರಣೆಗೆ ಒಳಪಡಿಸಿದ್ದರು. ಈ ವೇಳೆ ದಾವಣಗೆರೆಯಿಂದ ಚರ್ಮ ತಂದಿರುವುದಾಗಿ ಆತ ಬಾಯ್ಬಿಟ್ಟಿದ್ದ. ಈ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದಾಗ ಜೀವಂತ ವನ್ಯಪ್ರಾಣಿಗಳು ಸಿಕ್ಕಿವೆ ಎಂದು ಆಪ್ತ ಮೂಲಗಳಿಂದ ವರದಿಯಾಗಿದೆ. ಇದನ್ನೂ ಓದಿ: ನಿಷೇಧಿತ ಕೋಳಿ ಜೂಜಾಟ – ಬಿಜೆಪಿ ಮುಖಂಡನ ವಿರುದ್ಧ ಎಫ್‌ಐಆರ್‌

    ಫಾರ್ಮ್ ಹೌಸ್‍ನಲ್ಲಿ ಏಳು ಚುಕ್ಕೆ ಜಿಂಕೆಗಳು, 10 ಕೃಷ್ಣಮೃಗಗಳು, ಏಳು ಕಾಡುಹಂದಿಗಳು, ಮೂರು ಮುಂಗುಸಿಗಳು, ಎರಡು ನರಿಗಳು ಸಿಕ್ಕಿವೆ. ಅವುಗಳನ್ನು ರಕ್ಷಿಸಿ ಅರಣ್ಯ ಇಲಾಖೆಗೆ ಹಸ್ತಾಂತರಿಸಲಾಗಿದೆ. ಮಲ್ಲಿಕಾರ್ಜುನ್ ಫಾರ್ಮ್ ಹೌಸ್‍ನಲ್ಲಿ ಜಿಂಕೆ ಸಾಕಲಾಗಿತ್ತು. ಆದರೆ ಇವುಗಳನ್ನು ನೋಡಿಕೊಳ್ಳುತ್ತಿದ್ದ ವ್ಯಕ್ತಿ ಕಾನೂನು ಬಾಹಿರವಾಗಿ ಪ್ರಾಣಿಗಳ ಚರ್ಮ, ಕೊಂಬು ಮಾರಾಟ ಮಾಡಿದ್ದಾನೆ ಎಂಬ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಸಾಕು ತಂದೆಯ ವಚನ ಪಾಲಿಸಲು ಮುಂದಾಗಿ ಸಿಎಂ ಗೊಂದಲದಲ್ಲಿದ್ದಾರೆ – ಬಿಎಸ್‍ವೈ ವಿರುದ್ಧ ಯತ್ನಾಳ್ ಪರೋಕ್ಷ ವಾಗ್ದಾಳಿ

    ದಾಳಿ ವೇಳೆ ಬಳಿಕ ಪರವಾನಗಿ ಪಡೆದು ಸಾಕುತ್ತಿದ್ದ ನಾಲ್ಕೈದು ಜಿಂಕೆಗಳು ಮರಿ ಹಾಕಿದ್ದರಿಂದ ಇವುಗಳ ಸಂಖ್ಯೆ ಈಗ ಹೆಚ್ಚಾಗಿದೆ. ಕಾನೂನು ಪ್ರಕಾರವೇ ನಾವು ಸಾಕಲಾಗಿದೆ ಎಂದು ಎಸ್.ಎಸ್ ಮಲ್ಲಿಕಾರ್ಜುನ್‌ ಆಪ್ತರು ಮಾಹಿತಿ ನೀಡಿದ್ದಾರೆ. ವನ್ಯಜೀವಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಕ್ರಮಕ್ಕೆ ಮುಂದಾಗಿದ್ದು, ಶೀಘ್ರವೇ ವಿಶೇಷ ತನಿಖಾಧಿಕಾರಿ ನೇಮಿಸಿ ಪ್ರಕರಣದ ತನಿಖೆ ಆರಂಭಿಸುವುದಾಗಿ ಅರಣ್ಯ ಇಲಾಖೆ ಸ್ಪಷ್ಟಪಡಿಸಿದೆ.

    Live Tv
    [brid partner=56869869 player=32851 video=960834 autoplay=true]

  • ಜೀವಂತ ಕುರಿ ನುಂಗಿದ ಹೆಬ್ಬಾವು ಸೆರೆ – ಹೆಗಲ ಮೇಲೆ ಹೊತ್ತೊಯ್ದ ಗ್ರಾಮಸ್ಥರು

    ಜೀವಂತ ಕುರಿ ನುಂಗಿದ ಹೆಬ್ಬಾವು ಸೆರೆ – ಹೆಗಲ ಮೇಲೆ ಹೊತ್ತೊಯ್ದ ಗ್ರಾಮಸ್ಥರು

    ಬೀದರ್: ಜೀವಂತ ಕುರಿ ನುಂಗಿ ಬಿಲಾ ಸೇರಿದ್ದ ಹೆಬ್ಬಾವನ್ನು (Python) ಹೊರ ತೆಗೆದು ಗ್ರಾಮಸ್ಥರು ಹೆಗಲ ಮೇಲೆ ಹೊತ್ತೊಯ್ದ ಘಟನೆ ಬೀದರ್ (Bidar) ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಘಾಟ್ ಹಿಪ್ಪರಗಾ ಗ್ರಾಮದಲ್ಲಿ ನಡೆದಿದೆ.

    ಘಾಟ್ ಹಿಪ್ಪರಗಾ ಗ್ರಾಮದ ವ್ಯಾಪ್ತಿಯಲ್ಲಿನ ಜಮೀನಿನಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪ್ರತಕ್ಷವಾಗಿದ್ದು, ಗ್ರಾಮದ ರಾಜಕುಮಾರ್ ರೊಡ್ಡೆ ಎಂಬವರಿಗೆ ಸೇರಿದ ಕುರಿಯನ್ನು ನುಂಗಿ ಹೆಬ್ಬಾವು ಒಂದು ಬಿಲಾ ಸೇರಿತ್ತು. ಬಾರಿ ಗಾತ್ರದ ಹೆಬ್ಬಾವು ನೋಡಿ ಆತಂಕಗೊಂಡ ಗ್ರಾಮಸ್ಥರು ಅರಣ್ಯ ಅಧಿಕಾರಿಗಳಿಗೆ ವಿಷಯ ತಿಳಿಸಿದ್ದರು. ಈ ಸುದ್ದಿ ತಿಳಿದು ಗ್ರಾಮಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳ ತಂಡ ಭೇಟಿ ನೀಡಿತು. ಇದನ್ನೂ ಓದಿ: ನಾಯಿ ಮರಿಗಳನ್ನು ಕೊಂದು ವೀಡಿಯೋ ಇನ್‌ಸ್ಟಾಗ್ರಾಮ್‌ನಲ್ಲಿ ಅಪ್ಲೋಡ್ ಮಾಡ್ದ – ವ್ಯಕ್ತಿ ಅರೆಸ್ಟ್

    ಉರಗ ತಜ್ಞ ಅಶೋಕ್ ಶೆಟ್ಟಿ ಅವರ ಸಹಾಯದೊಂದಿಗೆ ಸುಮಾರು 12 ಅಡಿಗೂ ಅಧಿಕ ಉದ್ದವಿರುವ ಬೃಹತ್ ಗಾತ್ರದ ಹೆಬ್ಬಾವು ರಕ್ಷಣೆ ಮಾಡಿ, ಅರಣ್ಯ ಇಲಾಖೆ ಅಧಿಕಾರಿಗಳು ಅರಣ್ಯ ಪ್ರದೇಶಕ್ಕೆ ಹೆಬ್ಬಾವನ್ನು ಹೋಗಿ ಬಿಟ್ಟು ಬಂದಿದ್ದಾರೆ. ಇದನ್ನೂ ಓದಿ: ಕೆಸಿಆರ್, ಕವಿತಾರ ಬಗ್ಗೆ ಮಾತಾಡಿದ್ರೆ ನಾಲಿಗೆ ಕತ್ತರಿಸುತ್ತೇನೆ – ಅರವಿಂದ್ ವಿರುದ್ಧ ಎಂಎಲ್‍ಸಿ ಶಂಬಿಪುರ ಕಿಡಿ

    Live Tv
    [brid partner=56869869 player=32851 video=960834 autoplay=true]