Tag: forest

  • ಉರುಳಿಗೆ ಸಿಲುಕಿ ನರಳಾಟ: ಚಿರತೆ ನೋಡಲು ಮುಗಿಬಿದ್ದ ಜನ

    ಉರುಳಿಗೆ ಸಿಲುಕಿ ನರಳಾಟ: ಚಿರತೆ ನೋಡಲು ಮುಗಿಬಿದ್ದ ಜನ

    ಚಿಕ್ಕಮಗಳೂರು:  5 ವರ್ಷದ ಚಿರತೆಯೊಂದು ಚಿಕ್ಕಮಗಳೂರು ತಾಲೂಕಿನ ಬಸರವಳ್ಳಿ ಗ್ರಾಮದಲ್ಲಿ ಉರುಳಿಗೆ ಬಿದ್ದಿದೆ

    ಗ್ರಾಮಸ್ಥರು ಪ್ರಾಣಿ ಬೇಟೆಗಾಗಿ ಕಾಫಿ ತೋಟದಲ್ಲಿ ಉರುಳನ್ನು ಹಾಕಿದ್ದರು. ಈ ಉರುಳಿಗೆ ಚಿರತೆ ಬಿದ್ದಿತ್ತು. ಚಿರತೆಯ ಒಂದು ಕಾಲು ಉರುಳಿನಲ್ಲಿ ಸಿಕ್ಕಿಕೊಂಡ ಕಾರಣ ನರಳಾಡುತಿತ್ತು.

    ಉರುಳಿಗೆ ಬಿದ್ದ ಸುದ್ದಿ ತಿಳಿಯುತ್ತಿದ್ದಂತೆ ತಂಡೋಪತಂಡವಾಗಿ ಜನರು ಬಸರವಳ್ಳಿ ಗ್ರಾಮಕ್ಕೆ ಆಗಮಿಸಿದ್ದರು. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಬಂದು ಚಿರತೆಯನ್ನು ರಕ್ಷಣೆ ಮಾಡಿದ್ದಾರೆ. ನಂತರ ಅದನ್ನು ಭದ್ರಾ ಅಭಯಾರಣ್ಯಕ್ಕೆ ಬಿಡಲಾಗಿದೆ.

    ಉರುಳು ಹಾಕಿದವರ ವಿರುದ್ಧ ಅರಣ್ಯಾಧಿಕಾರಿಗಳ ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ತಡೆಗೋಡೆಗೆ ಡಿಕ್ಕಿಯಾಗಿ ಅರಣ್ಯ ಪ್ರದೇಶಕ್ಕೆ ನುಗ್ಗಿದ ಖಾಸಗಿ ಬಸ್- ಇಬ್ಬರ ಕೈ ಕಟ್

    ತಡೆಗೋಡೆಗೆ ಡಿಕ್ಕಿಯಾಗಿ ಅರಣ್ಯ ಪ್ರದೇಶಕ್ಕೆ ನುಗ್ಗಿದ ಖಾಸಗಿ ಬಸ್- ಇಬ್ಬರ ಕೈ ಕಟ್

    ರಾಮನಗರ: ದೇವರ ಸನ್ನಿಧಿಗೆ ಪೂಜೆಗೆಂದು ಹೊರಟಿದ್ದ ಭಕ್ತಾದಿಗಳಿದ್ದ ಖಾಸಗಿ ಬಸ್‍ವೊಂದು ಚಾಲಕನ ನಿಯಂತ್ರಣ ತಪ್ಪಿ ತಡೆಗೋಡೆಗೆ ಡಿಕ್ಕಿ ಹೊಡೆದು ಬಳಿಕ ಅರಣ್ಯ ಪ್ರದೇಶದ ಒಳಗೆ ನುಗ್ಗಿದ ಘಟನೆ ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಸಂಗಮ ಬಳಿ ನಡೆದಿದೆ.

    ಸಂಗಮ ಸಮೀಪದ ಮಡಿವಾಳದ ಶಿವನಾಂಕರೇಶ್ವರ ದೇವಾಲಯಕ್ಕೆ ಚಾಮರಾಜನಗರದಿಂದ 50ಕ್ಕೂ ಹೆಚ್ಚು ಮಂದಿ ಹೊರಟಿದ್ದರು. ಮಡಿವಾಳ ಸಮೀಪದ ಸಂಗಮದ ಮೊದಲ ತಿರುವಿನಲ್ಲಿ ಬಸ್ ಚಾಲಕನ ನಿಯಂತ್ರಣ ಕಳೆದುಕೊಂಡಿದೆ. ಪರಿಣಾಮ ತಡೆಗೋಡೆಗೆ ಡಿಕ್ಕಿ ಹೊಡೆದು ಅರಣ್ಯ ಪ್ರದೇಶದ ಒಳಗೆ ನುಗ್ಗಿ ಮರವೊಂದಕ್ಕೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಇಬ್ಬರಿಗೆ ಕೈ ಮುರಿದಿದ್ದು 20ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ.

    ಗಾಯಾಳುಗಳನ್ನು ಕನಕಪುರ ತಾಲೂಕು ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ರವಾನಿಸಲಾಗಿದೆ. ಘಟನೆ ಸಂಬಂಧ ಸಾತನೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ನೀರಿಗಾಗಿ ಅರಣ್ಯದಿಂದ ನಾಡಿಗೆ ಬಂದ ಸಿಂಹದ ಮರಿ ಬಾವಿಗೆ ಬಿತ್ತು: ವಿಡಿಯೋ ನೋಡಿ

    ನೀರಿಗಾಗಿ ಅರಣ್ಯದಿಂದ ನಾಡಿಗೆ ಬಂದ ಸಿಂಹದ ಮರಿ ಬಾವಿಗೆ ಬಿತ್ತು: ವಿಡಿಯೋ ನೋಡಿ

    ಗಾಂಧಿನಗರ: ಇತ್ತೀಚಿಗೆ ಕಾಡು ಪ್ರಾಣಿಗಳು ಕಾಡಿನಲ್ಲಿ ಆಹಾರ ಇಲ್ಲದೆ ಇರುವುದರಿಂದ ನಾಡಿನ ಕಡೆ ಬರುವುದು ಸಾಮಾನ್ಯವಾಗಿದೆ. ಆದ್ರೆ ಗುಜರಾತಿನಲ್ಲಿ ಸಿಂಹದ ಮರಿಯೊಂದು ಆಹಾರಕ್ಕಾಗಿ ಅರಣ್ಯದಿಂದ ನಾಡಿನ ಕಡೆಗೆ ಬರುವಾಗ ಕಾಲುಜಾರಿ ಬಾವಿಯೊಳಗೆ ಬಿದ್ದಿರುವ ವಿಡಿಯೋವೊಂದು ವೈರಲ್ ಆಗಿದೆ.

    ಹೌದು, ಗುಜರಾತ್‍ದ ಅಮರಾಪುರ ಹಳ್ಳಿಯ ಗಿರ್ ಅರಣ್ಯದ ಸಮೀಪದಲ್ಲೇ ಇರುವ 80 ಅಡಿ ಹೊಂದಿರುವ ಕೊಳವೆ ಬಾವಿಯೊಳಗೆ ನೀರಿಗಾಗಿ ಇಣುಕುವಾಗ ಕಾಲು ಜಾರಿ ಒಳಗೆ ಬಿದ್ದಿದೆ.

    ಜನರು ನೀರು ತರಲು ಬಂದಾಗ ಬಾವಿಯೊಳಗೆ ಸಿಂಹದ ಮರಿ ಬಿದ್ದಿರುವುದನ್ನು ನೋಡಿದ್ದಾರೆ. ಸಿಂಹದ ಮರಿ ದಾರಿ ತಪ್ಪಿ ಗೊತ್ತಿಲ್ಲದೇ ನೀರಿನೊಳಗೆ ಹಾರಿರಬಹುದು ಎಂದು ತಿಳಿದುಕೊಂಡು ಕೂಡಲೇ ಹಳ್ಳಿ ಜನ ಅರಣ್ಯ ಸಿಬ್ಬಂದಿಗೆ ಮಾಹಿತಿ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಸಿಬ್ಬಂದಿ ಸಿಂಹದ ಮರಿಯನ್ನು ಸುರಕ್ಷಿತವಾಗಿ ರಕ್ಷಿಸಿ ಮೇಲಕ್ಕೆ ಎತ್ತಿದ್ದಾರೆ.

  • ದೇವಾಲಯದ ಪ್ರವೇಶಕ್ಕೆ ನಿರ್ಬಂಧ: ಅರಣ್ಯಾಧಿಕಾರಿಗಳ ಜೊತೆ ಜನ್ರ ತಳ್ಳಾಟ, ನೂಕಾಟ- ವಿಡಿಯೋ

    ದೇವಾಲಯದ ಪ್ರವೇಶಕ್ಕೆ ನಿರ್ಬಂಧ: ಅರಣ್ಯಾಧಿಕಾರಿಗಳ ಜೊತೆ ಜನ್ರ ತಳ್ಳಾಟ, ನೂಕಾಟ- ವಿಡಿಯೋ

    ಚಾಮರಾಜನಗರ: ಅರಣ್ಯದಲ್ಲಿರುವ ದೇವಸ್ಥಾನಕ್ಕೆ ಸಾರ್ವಜನಿಕರಿಗೆ ನಿರ್ಬಂಧ ಹೇರಿದ್ದಕ್ಕೆ ಅರಣ್ಯ ಅಧಿಕಾರಿಗಳು ಮತ್ತು ಸಾರ್ಜನಿಕರ ಮಧ್ಯೆ ತಳ್ಳಾಟ ನೂಕಾಟ ನಡೆದ ಘಟನೆ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನಲ್ಲಿ ನಡೆದಿದೆ.

    ಗುಂಡ್ಲುಪೇಟೆ ತಾಲೂಕಿನ ಮದ್ದೂರು ಅರಣ್ಯ ಚೆಕ್ ಪೋಸ್ಟ್ ನಲ್ಲಿ ಈ ಘಟನೆ ನಡೆದಿದ್ದು, ಸುಮಾರು ಎರಡು ಗಂಟೆಗಳ ಕಾಲ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಾರ್ವಜನಿಕರ ನಡುವೆ ಮಾತಿನ ಚಕಮಕಿ ನಡೆದಿದೆ.

    ಸೋಮವಾರದಂದು ಅರಣ್ಯದ ಅಕ್ಕ ಪಕ್ಕದ ಹೊಂಗಳ್ಳಿ, ಹಳ್ಳದ ಮಾದಳ್ಳಿ ಹಾಗೂ ಅಕ್ಕನಪುರದ ಗ್ರಾಮಸ್ಥರು ಕಾಡಿನೊಳಗೆ ಇರುವ ದೇವಸ್ಥಾನದಲ್ಲಿ ಜಾತ್ರೆ ನಡೆಸಲು ಮುಂದಾಗಿದ್ದರು. ಆದರೆ ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಬಂಡಿಪುರ ರಾಷ್ಟ್ರೀಯ ಉದ್ಯಾನವನದ ಕಲ್ಕೆರೆ ಅರಣ್ಯ ವ್ಯಾಪ್ತಿಯಲ್ಲಿರುವ ಐನೋರಾ ಮಾರಿಗುಡಿ ದೇವಸ್ಥಾನಕ್ಕೆ ಸಾರ್ವಜನಿಕರ ಪ್ರವೇಶವನ್ನು ಅರಣ್ಯ ಅಧಿಕಾರಿಗಳು ನಿರ್ಬಂಧಿಸಿದ್ದರು.

    ನಿರ್ಬಂಧಿಸಿದ್ದನ್ನು ಪ್ರಶ್ನಿಸಿ ಸುಮಾರು ಒಂದುವರೆ ಸಾವಿರ ಮಂದಿ ಅರಣ್ಯಾಧಿಕರಿಗಳ ಜೊತೆ ಮಾತಿನ ಚಕಮಕಿ ನಡೆಸಿದ್ದರು. ಅಲ್ಲದೇ ಚೆಕ್ ಪೋಸ್ಟ್ ನ್ನು ಮುರಿದು ಆಕ್ರೋಶ ವ್ಯಕ್ತಪಡಿಸಿದ್ದರು.

    ಈ ವೇಳೆ ಅಧಿಕಾರಿಗಳು ಹಾಗೂ ಸಾರ್ವಜನಿಕರ ನಡುವೆ ತಳ್ಳಾಟ ನೂಕಾಟ ಜರುಗಿತು. ಇದರಿಂದ ಕರ್ನಾಟಕ ಹಾಗೂ ಕೇರಳ ಸಂಚಾರ ಸುಮಾರು ಎರಡು ಗಂಟೆಗಳ ಕಾಲ ಅಸ್ತವ್ಯಸ್ತಗೊಂಡಿತ್ತು.

    https://youtu.be/iBVBJcf47Ig

  • ಉತ್ತರ ಕನ್ನಡ ಜಿಲ್ಲೆಯ ಕಾಳಿ ಹುಲಿ ರಕ್ಷಿತಾರಣ್ಯದಲ್ಲಿ ಅಪರೂಪದ ಕಪ್ಪೆ ಪತ್ತೆ

    ಉತ್ತರ ಕನ್ನಡ ಜಿಲ್ಲೆಯ ಕಾಳಿ ಹುಲಿ ರಕ್ಷಿತಾರಣ್ಯದಲ್ಲಿ ಅಪರೂಪದ ಕಪ್ಪೆ ಪತ್ತೆ

    ಕಾರವಾರ: ಮಳೆ ಶುರುವಾಗ್ತಿದ್ದಂತೆ ಕಪ್ಪೆಗಳು ವಟಗುಟ್ಟುವುದು ಸರ್ವೆ ಸಾಮಾನ್ಯ. ಉತ್ತರ ಕನ್ನಡ ಜಿಲ್ಲೆಯ ಕಾಳಿ ಹುಲಿ ರಕ್ಷಿತಾರಣ್ಯದಲ್ಲಿ ಅಪರೂಪದ ಕಪ್ಪೆ ಪತ್ತೆಯಾಗಿದೆ.

    ಮೀನಕ್ಕಿಯಂತೆ ಶಬ್ದ ಮಾಡೋದು ಇದರ ವಿಶೇಷ. ಹಸಿರು ಬಣ್ಣ, ನೀಲಿ ಬಣ್ಣದ ಎರಡು ಗಾಳಿ ಚೀಲ ಹೊಂದಿರೋದು ಇದರ ವಿಶೇಷತೆ. ವಿಶ್ವದ ಅಳಿವಿನಂಚಿಲ್ಲಿರುವ ಕಪ್ಪೆ ಜಾತಿ ಇದಾಗಿದ್ದು, ಕರಾವಳಿ ಚಿಮ್ಮುವ ಕಪ್ಪೆ ಎಂದು ನಾಮಕರಣ ಮಾಡಲಾಗಿದೆ.

    ಅಣಶಿ ಉಪವಲಯ ಅರಣ್ಯಾಧಿಕಾರಿ ಸಿಆರ್ ನಾಯಕ್ ಮೊದಲ ಬಾರಿಗೆ ಈ ಕಪ್ಪೆಯನ್ನು ಪತ್ತೆ ಹಚ್ಚಿಸಿದ್ದರು.

  • ಚಿಕ್ಕಮಗಳೂರು: ಬೆಂಕಿಗಾಹುತಿಯಾದ ಮೆರುತಿ ಗುಡ್ಡದ ವಿಶೇಷತೆ ಏನ್ ಗೊತ್ತಾ..?

    ಚಿಕ್ಕಮಗಳೂರು: ಬೆಂಕಿಗಾಹುತಿಯಾದ ಮೆರುತಿ ಗುಡ್ಡದ ವಿಶೇಷತೆ ಏನ್ ಗೊತ್ತಾ..?

    ಚಿಕ್ಕಮಗಳೂರು: ಈ ಬಾರಿಯ ಭೀಕರ ಬರಗಾಲದಿಂದ ರಾಜ್ಯಾದ್ಯಂತ ಸಾವಿರಾರು ಎಕರೆ ಅರಣ್ಯ ಬೆಂಕಿಗಾಹುತಿಯಾಗಿದೆ. ಅರಣ್ಯಕ್ಕೆ ಬೆಂಕಿ ಬಿದ್ದಾಗೆಲ್ಲಾ ಸ್ಥಳಿಯರು ಮಾಹಿತಿ ನೀಡಿದ್ರು ಅರಣ್ಯ ಅಧಿಕಾರಿಗಳು ಸರಿಯಾದ ಸಮಯಕ್ಕೆ ಸ್ಥಳಕ್ಕೆ ಬರೋದಿಲ್ಲ ಅನ್ನೋದು ರಾಜ್ಯದ ಜನರ ಆರೋಪ. ಅದೇ ರೀತಿ, ರಾಜ್ಯದ ಅತಿ ಎತ್ತರದ ಶಿಖರಗಳಲ್ಲಿ ಒಂದಾದ ಚಿಕ್ಕಮಗಳೂರಿನ ಮೆರುತಿ ಗುಡ್ಡಕ್ಕೂ ಬೆಂಕಿ ಬಿದ್ದು ಮುನ್ನೂರು ಎಕರೆಗೂ ಅಧಿಕ ಅರಣ್ಯ ನಾಶವಾದ್ರು ಅಧಿಕಾರಿಗಳು ಸ್ಥಳಕ್ಕೆ ಬಂದಿಲ್ಲ ಎಂದು ಸ್ಥಳೀಯರು ಹೇಳುತ್ತಿದ್ದಾರೆ.

    ಸಮುದ್ರಮಟ್ಟದಿಂದ 5700 ಅಡಿ ಎತ್ತರದಲ್ಲಿರೋ ಈ ಗುಡ್ಡಕ್ಕೆ ರಾಜ್ಯದಲ್ಲಿ ಏಳನೇ ಸ್ಥಾನವಿದೆ. ಪಿರಮಿಡ್ ಆಕಾರದಲ್ಲಿರೋ ಈ ಗುಡ್ಡ ಲಕ್ಷಾಂತರ ಪ್ರವಾಸಿ ಪ್ರಿಯರಗೂ ಇಷ್ಟವಾಗಿತ್ತು. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಹಾಗೂ ಕೊಪ್ಪ ತಾಲೂಕಿನ ವ್ಯಾಪ್ತಿಗೆ ಬರೋ ಈ ಗುಡ್ಡ ಎರಡೂ ತಾಲೂಕಿನ ಅರಣ್ಯ ಇಲಾಖೆಯ ವ್ಯಾಪ್ತಿಗೆ ಬರಲಿದೆ. ಆದ್ರೆ ಗುರುವಾರ ರಾತ್ರಿ 9 ಗಂಟೆ ಸುಮಾರಿಗೆ ಬೆಂಕಿ ಬಿದ್ದಿದ್ದು, ಮುನ್ನೂರು ಎಕರೆಗೂ ಅಧಿಕ ಅರಣ್ಯ ನಾಶವಾಗಿದೆ. ಆದರೆ ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಬಾರದಿರೋದು ಮಾತ್ರ ದುರಂತ ಎಂದು ಸ್ಥಳಿಯರು ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಈ ಗುಡ್ಡ ಉಡುಪಿಯ ಕೊಬ್ರಿ ಹಾಗೂ ಹೊರನಾಡಿಗೂ ಕಾಣುವಷ್ಟು ಎತ್ತರದಲ್ಲಿದೆ. ಈ ಗುಡ್ಡಕ್ಕೆ ಪ್ರತಿ ವರ್ಷ ಬೆಂಕಿ ಬೀಳುತ್ತೆ. ಆದರೆ ಯಾವಾಗ ಮಾಹಿತಿ ನೀಡಿದ್ರು ಅರಣ್ಯ ಇಲಾಖೆಯ ಸಿಬ್ಬಂದಿ ಸರಿಯಾದ ಸಮಯಕ್ಕೆ ಬರೋದಿಲ್ಲ ಅನ್ನೋದು ಸ್ಥಳಿಯರ ಆರೋಪ. ಗುಡ್ಡಕ್ಕೆ ಬೆಂಕಿ ಬಿದ್ದಿದ್ರಿಂದ ನೂರಾರು ಪ್ರಾಣಿ ಪಕ್ಷಿಗಳು ಬೆಂಕಿಗಾಹುತಿಯಾಗಿವೆ. ಚಿಕ್ಕಮಗಳೂರಿನ ಸೌಂದರ್ಯವನ್ನ ಹೆಚ್ಚಿಸೋದ್ರಲ್ಲಿ ಈ ಗುಡ್ಡ ಪ್ರಮುಖ ಪಾತ್ರ ವಹಿಸಿತ್ತು. ಕೊಪ್ಪ, ಶೃಂಗೇರಿ, ಹೊರನಾಡು, ಕಳಸಕ್ಕೆ ಭೇಟಿ ನೀಡೋ ಪ್ರವಾಸಿಗ್ರು ಪಿರಮಿಡ್ ಆಕಾರದ ಈ ಬೆಟ್ಟವನ್ನ ನೋಡಿ ಆನಂದಿಸುತ್ತಿದ್ದರು.

  • ಕೊಡಗಿನ ಆನೆಕಾಡು ಅರಣ್ಯಕ್ಕೆ ಕಾಡ್ಗಿಚ್ಚು, 70 ಎಕರೆಗೂ ಹೆಚ್ಚು ಅರಣ್ಯ ನಾಶ

    ಕೊಡಗಿನ ಆನೆಕಾಡು ಅರಣ್ಯಕ್ಕೆ ಕಾಡ್ಗಿಚ್ಚು, 70 ಎಕರೆಗೂ ಹೆಚ್ಚು ಅರಣ್ಯ ನಾಶ

    ಕೊಡಗು: ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಆನೆಕಾಡು ಅರಣ್ಯ ಪ್ರದೇಶಕ್ಕೆ ಬೆಂಕಿ ಬಿದ್ದಿದ್ದು, ಸುಮಾರು 70 ಎಕರೆಗೂ ಹೆಚ್ಚು ಅರಣ್ಯ ಪ್ರದೇಶ ಬೆಂಕಿಗೆ ಆಹುತಿಯಾಗಿದೆ.

    ಕುಶಾಲನಗರ ಬಳಿಯ 7ನೇ ಹೊಸಕೋಟೆ ಕಲ್ಲೂರು ಗ್ರಾಮದ ಆನೆಕಾಡು ಅರಣ್ಯ ವ್ಯಾಪ್ತಿಯಲ್ಲಿ ಇಂದು ಬೆಳಿಗ್ಗೆ ಕಾಡ್ಗಿಚ್ಚು ಕಾಣಿಸಿಕೊಂಡಿತ್ತು. ಕಾಡಿನ ಸುತ್ತಮುತ್ತಲಿನ ರೈತರು ಕ್ಷಣಕಾಲ ಆತಂಕಕ್ಕೆ ಒಳಗಾಗಿದ್ದು, ಕಾಡಿನ ಸುತ್ತಮುತ್ತ ಒಣಗಿದ ಕುರುಚಲು ಗಿಡಗಳು, ಮರಗಳು ಒಣಗಿ ನಿಂತಿದ್ದರಿಂದ ಬೆಂಕಿ ರಭಸದಿಂದ ಹೊತ್ತಿ ಉರಿಯ ತೊಡಗಿದೆ.

    ಸ್ಥಳಕ್ಕೆ 60ಕ್ಕೂ ಅಧಿಕ ಅಗ್ನಿಶಾಮಕ ಸಿಬ್ಬಂದಿಗಳು ಆಗಮಿಸಿದ್ದು, ಬೆಂಕಿ ನಂದಿಸುವ ಕಾರ್ಯಚರಣೆಯಲ್ಲಿ ತೊಡಗಿದ್ದಾರೆ. ಈ ಬಾರಿ ಮಳೆಯಾಗದ ಕಾರಣ ಸಾಕಷ್ಟು ಮರಗಳು ಒಣಗಿದ್ದರಿಂದ ಬೆಂಕಿಯ ತೀವ್ರತೆ ಹೆಚ್ಚಾಗಿದೆ.