ವಾಷಿಂಗ್ಟನ್: ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಭೀಕರ ಕಾಡ್ಗಿಚ್ಚು (California Wildfire) ಸಂಭವಿಸಿದೆ. ಭಾರಿ ಗಾಳಿ ಕಾರಣ ಬೆಂಕಿ ವೇಗವಾಗಿ ಹಬ್ಬುತ್ತಿದೆ ಎಂದು ವರದಿಗಳು ತಿಳಿಸಿವೆ.
ಬೆಂಗಳೂರು : ಹೆಚ್‌ಎಂಟಿ ಜಾಗವನ್ನು (HMT Land) ಅರಣ್ಯ ಭೂಮಿ (Forest Land) ಎಂದು ಪರಿಗಣಿಸಿ ರಾಜ್ಯ ಸರ್ಕಾರ ವಶಪಡಿಸಿಕೊಳ್ಳಲು ಮುಂದಾಗಿದೆ. ಇದಕ್ಕೆ ಅವಕಾಶ ನೀಡುವುದಿಲ್ಲ ಎಂದು ಕೇಂದ್ರ ಬೃಹತ್ ಕೈಗಾರಿಕಾ ಸಚಿವ ಕುಮಾರಸ್ವಾಮಿ (HD Kumaraswamy) ಅರಣ್ಯ ಸಚಿವ ಈಶ್ವರ್ ಖಂಡ್ರೆ (Eshwar Khandre) ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ಹೆಚ್‌ಎಂಟಿ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹೆಚ್‌ಎಂಟಿಗೆ ಸೇರಿದ ಸುಮಾರು 590 ಎಕರೆ ಜಾಗದಲ್ಲಿ ಕಟ್ಟಡ ನಿರ್ಮಾಣ ಮಾಡದ ಸುಮಾರು 290 ಎಕರೆ ಜಾಗವನ್ನು ವಶಪಡಿಸಿಕೊಳ್ಳಲು ಸರ್ಕಾರ ಮುಂದಾಗಿದೆ. ಇದು ಅರಣ್ಯ ಇಲಾಖೆಯ ಜಾಗ ಎಂದು ವಶಪಡಿಸಿಕೊಳ್ಳಬೇಕು ಎಂದು ಈಶ್ವರ್ ಖಂಡ್ರೆ ಅವರು ಅಧಿಕಾರಿಗಳಿಗೆ ಟಿಪ್ಪಣಿ ಬರೆದಿದ್ದಾರೆ. ನನ್ನ ಮೇಲಿನ ದ್ವೇಷಕ್ಕೆ ಹೀಗೆ ಮಾಡುವುದು ಸರಿಯಲ್ಲ ಅಂತ ಕಿಡಿಕಾರಿದರು.
ಹೆಚ್‌ಎಂಟಿಗೆ ಈ ಜಮೀನನ್ನು ಸರ್ಕಾರ ಪುಕ್ಕಟ್ಟೆಯಾಗಿ ಕೊಟ್ಟಿಲ್ಲ. ಇದಕ್ಕೆ ಹಣ ಪಡೆದಿದೆ. ಇದಲ್ಲದೆ ಅರಣ್ಯ ಇಲಾಖೆ ಕೂಡಾ ಹಿಂದೆ ಜಮೀನು ಖರೀದಿಗೆ ಒಪ್ಪಿಗೆ ಕೊಟ್ಟಿತ್ತು. ಈಗ ಯಾಕೆ ಏಕಾಏಕಿಯಾಗಿ ಖಾಲಿ ಜಾಗ ವಶಪಡಿಸಿಕೊಳ್ಳಲು ಮುಂದಾಗಿದ್ದೀರಿ? ಯಾರಿಗೆ ಹಂಚಲು ಈ ಆದೇಶ ಮಾಡಿದ್ದೀರಾ ಅಂತ ಈಶ್ವರ್ ಖಂಡ್ರೆಗೆ ಪ್ರಶ್ನೆ ಮಾಡಿದರು.
1963 ರಲ್ಲಿ ಖರೀದಿ ವೇಳೆ ಆದ ಎಲ್ಲಾ ದಾಖಲಾತಿಗಳು ಹೆಚ್‌ಎಂಟಿ ಬಳಿ ಇವೆ. ಎಚ್‌ಎಂಟಿ, ಇಸ್ರೋದವರು NOC ಕೇಳಿದ್ರೆ ಕೊಡುತ್ತಿಲ್ಲ. ಆದರೆ ಖಾಸಗಿ ಸಂಸ್ಥೆ ಪ್ರೆಸ್ಟೀಜ್ ಕಂಪನಿ ಕೇಳಿದ ಕೂಡಲೇ ಎನ್‌ಒಸಿ ಕೊಡುತ್ತಾರೆ. ಇದರಲ್ಲಿ ಬ್ರ್ಯಾಂಡ್ ಬೆಂಗಳೂರು ಮಾಡುವವರ ಕೈವಾಡ ಇದೆಯಾ ಅಂತ ಪರೋಕ್ಷವಾಗಿ ಡಿಕೆ ಶಿವಕುಮಾರ್ (DK Shivakumar) ವಿರುದ್ಧ ಕಿಡಿಕಾರಿದರು.
ಕುಮಾರಸ್ವಾಮಿ ಮೇಲೆ ಇರುವ ದ್ವೇಷಕ್ಕೆ ರಾಜ್ಯವನ್ನು ಈಶ್ವರ್ ಖಂಡ್ರೆ ಹಾಳು ಮಾಡಿಕೊಳ್ಳೋದು ಬೇಡ. ನನಗೆ ಲಾಟರಿ ಸಿಸ್ಟಮ್ ನಲ್ಲಿ ದೇವರು ಅಧಿಕಾರ ಕೊಟ್ಟಿದ್ದಾರೆ. ಇದರಲ್ಲಿ ನಾಲ್ಕು ಒಳ್ಳೆ ಕೆಲಸ ಮಾಡಬೇಕು ಅಂತ ಇದ್ದೇನೆ. ಇದರಲ್ಲಿ ರಾಜಕೀಯ ಮಾಡಬೇಡಿ. ಹೆಚ್‌ಎಂಟಿ ಜಾಗ ಧರ್ಮಕ್ಕೆ ಕೊಟ್ಟಿಲ್ಲ. ಈಶ್ವರ್ ಖಂಡ್ರೆ ಎಲ್ಲಾ ದಾಖಲಾತಿ ತರಿಸಿಕೊಂಡು ಓದಬೇಕು ಅಂತ ಕಿಡಿಕಾರಿದರು. ಇದನ್ನೂ ಓದಿ: Tungabhadra Dam| ಗೇಟ್ ಕೊಚ್ಚಿ ಹೋದ ಪ್ರಕರಣದ ತನಿಖೆಯಾಗಲಿ: ಹೆಚ್‌ಡಿಕೆ ಆಗ್ರಹ
ಹೆಚ್‌ಎಂಟಿ ಸೇರಿ ಸರ್ಕಾರಿ ಸ್ವಾಮ್ಯದ ಕಾರ್ಖಾನೆ, ಕೈಗಾರಿಕೆಗಳನ್ನು ಅಭಿವೃದ್ಧಿ ಮಾಡಲು ಮುಂದಾಗಿದ್ದೇನೆ. ಇದಕ್ಕೆ ನೀವು ರಾಜಕೀಯ ಮಾಡುವುದು ಬೇಡ ಅಂತ ಕಿಡಿಕಾರಿದರು. ಯಾವುದೇ ಕಾರಣಕ್ಕೂ ಹೆಚ್‌ಎಂಟಿ ಜಾಗವನ್ನು ಬಿಟ್ಟು ಕೊಡುವ ಪ್ರಶ್ನೆಯೇ ಇಲ್ಲ ಅಂತ ಈಶ್ವರ್ ಖಂಡ್ರೆಗೆ ಸವಾಲ್ ಹಾಕಿದರು.
ತಿರುವನಂತಪುರಂ: ಪತಿ ಮಹಾಶಯನೊಬ್ಬ ತನ್ನ ಪತ್ನಿಯನ್ನು ಕಾಡಿಗೆ ಕರೆದುಕೊಂಡು ಹೋಗಿ ಗಂಭೀರವಾಗಿ ಗಾಯಗೊಳಿಸಿ ಬಳಿಕ ಆಕೆಯನ್ನು ಅಲ್ಲಿಯೇ ಬಿಟ್ಟು ಎಸ್ಕೇಪ್ ಆಗಿರುವ ಅಮಾನುಷ ಘಟನೆಯೊಂದು ಕೆರಳದಲ್ಲಿ (Kerala) ನಡೆದಿದೆ.
ತಿರುವನಂತಪುರಂನ ಪಲೋಡ್ ಬಳಿ ಪತಿ ತನ್ನ ಪತ್ನಿಯ ಮೇಲೆ ಈ ದುಷ್ಕೃತ್ಯ ಎಸಗಿದ್ದಾನೆ. ಸದ್ಯ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಮೈಲಮೂಡಿನ ಗಿರಿಜಾ ಶಿನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇತ್ತ ಪತಿ ಪಾಳೋಡ್ ಪಾಚ ಮೂಲದ ಸೋಜಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಪ್ರಕರಣದ ವಿವರ: ಕಳೆದ ಒಂದೂವರೆ ವರ್ಷದಿಂದ ಗಿರಿಜಾ ಹಾಗೂ ಸೋಜಿ ಪ್ರತ್ಯೇಕವಾಗಿದ್ದರು. ಇದೀಗ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಆರೋಪಿ ಸೋಜಿ ತನ್ನ ಪತ್ನಿಯನ್ನು ಸಂಪರ್ಕಿಸಿದ್ದಾನೆ. ಅಲ್ಲದೇ ಈ ಬಗ್ಗೆ ಇಬ್ಬರು ಕುಳಿತು ಮಾತಾಡೋಣ ಎಂದು ಪತ್ನಿಯನ್ನು ಕರೆದಿದ್ದಾನೆ. ಪತಿಯ ಮಾತು ನಂಬಿದ್ದ ಗಿರಿಜಾ ಪತಿ ಹೇಳಿದ ಸ್ಥಳಕ್ಕೆ ಬಂದಿದ್ದಾಳೆ. ಇದನ್ನೂ ಓದಿ: ಆಟೋದಲ್ಲಿ ಬಂದು ಅಂಜಲಿ ಕೊಲೆಗೈದು ಹಂತಕ ಎಸ್ಕೇಪ್- ಸಿಸಿಟಿವಿಯಲ್ಲಿ ದೃಶ್ಯ ಸೆರೆ
ಈ ವೇಳೆ ಸೋಜಿ ನಿನ್ನ ಜೊತೆ ಮಾತಾಡೋಕೆ ತುಂಬಾ ಇದೆ ಎಂದು ಆಕೆಯನ್ನು ಪಕ್ಕದ ಕಾಡಿಗೆ ಕರೆದುಕೊಂಡು ಹೋಗಿದ್ದಾನೆ. ಹೀಗೆ ಕರೆದೊಯ್ದವನೇ ಬಚ್ಚಿಟ್ಟಿದ್ದ ಸುತ್ತಿಗೆಯನ್ನು ತೆಗೆದುಕೊಂಡು ಬಂದು ಮೊದಲು ಪತ್ನಿಯ ಎರಡೂ ಮೊಣಕಾಲುಗಳಿಗೆ ಹಲ್ಲೆ ಮಾಡಿದ್ದಾನೆ. ಬಳಿಕ ಹರಿತವಾದ ಮಚ್ಚಿನಿಂದ ಮಾರಣಾಂತಿಕವಾಗಿ ಹಲ್ಲೆ ಮಾಡಿ, ಆಕೆಯನ್ನು ಕಾಡಿನಲ್ಲಿಯೇ ಬಿಟ್ಟು ಪರಾರಿಯಾಗಿದ್ದಾನೆ.
ಇತ್ತ ಕಾಡಿಗೆ ಕಟ್ಟಿಗೆ ಸಂಗ್ರಹಿಸಲು ಬಂದ ಸ್ಥಳಿಯರಿಗೆ ಗಿರಿಜಾ ಚೀರಾಟ- ಕಿರುಚಾಟ ಕೇಳಿದೆ. ಕೂಡಲೇ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಗಿರಿಜಾಳನ್ನು ತಿರುವನಂತಪುರಂ ಮೆಡಿಕಲ್ ಕಾಲೇಜ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಗಿರಿಜಾ ಕಾಲುಗಳು ಮತ್ತು ತಲೆಗೆ ಗಂಭೀರ ಗಾಯಗಳಾಗಿವೆ.
ಪ್ರಕರಣ ಸಂಬಂಧ ತಲೆಮರೆಸಿಕೊಂಡಿರುವ ಆರೋಪಿ ಸೋಜಿಯನ್ನು ಪಾಂಗೋಡು ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸಿದ್ದಾರೆ. ಪತ್ನಿಯ ಮೇಲಿನ ಈ ಕ್ರೂರ ದಾಳಿಗೆ ಕಾರಣವೇನು ಎಂಬುದು ಸ್ಪಷ್ಟವಾಗಿಲ್ಲ. ವಿಚಾರಣೆ ಬಳಿಕವಷ್ಟೇ ಸ್ಪಷ್ಟನೆ ಸಿಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಚಿಕ್ಕಮಗಳೂರು: ಕರ್ನಾಟಕದ ಅತ್ಯಂತ ಎತ್ತರದ ಪ್ರದೇಶ ಹಾಗೂ ಸುಪ್ರಸಿದ್ಧ ಪ್ರವಾಸಿ ತಾಣವಾದ ಮುಳ್ಳಯ್ಯನಗಿರಿ (Mullayanagiri) ಗುಡ್ಡದ ತಪ್ಪಲಿನಲ್ಲಿ ಕಾಡ್ಗಿಚ್ಚು (Fire) ಹಬ್ಬಿದ್ದು, ನೂರಾರು ಎಕರೆ ಅರಣ್ಯ (Forest) ಸುಟ್ಟು ಕರಕಲಾಗಿದೆ.
ಮುಳ್ಳಯ್ಯನಗಿರಿ ಸಮೀಪದ ಬೈರೇಗುಡ್ಡ ಎಂಬಲ್ಲಿ ಕಾಡಿಗೆ ಬೆಂಕಿ ಬಿದ್ದಿದ್ದು, ನೂರಾರು ಎಕರೆ ಅರಣ್ಯ ಸುಟ್ಟು ಬೂದಿಯಾಗಿದೆ. ಬೈರೇಗುಡ್ಡ ಸಮೀಪ ಹೊತ್ತಿದ ಕಾಡ್ಗಿಚ್ಚು ಕವಿಕಲ್ ಗಂಡಿ ಅರಣ್ಯದವರೆಗೂ ಗುಡ್ಡದಿಂದ ಗುಡ್ಡಕ್ಕೆ ವ್ಯಾಪಿಸಿದೆ. ಕಾಡ್ಗಿಚ್ಚಿನ ಸ್ಥಳಕ್ಕೆ ಹೋಗಲಾರದೇ ಅರಣ್ಯಾಧಿಕಾರಿಗಳು ಪರದಾಡುವಂತಾಗಿದೆ. ಬೈರೇಗುಡ್ಡ ಅತ್ಯಂತ ಎತ್ತರ, ಅರಣ್ಯ ಹಾಗೂ ಇಳಿಜಾರಿನ ಪ್ರದೇಶವಾಗಿದೆ. ಮುಳ್ಳಯ್ಯನಗಿರಿಯಲ್ಲಿ ಬೀಸುವ ಭಾರೀ ಗಾಳಿಗೆ ಬೆಂಕಿಯ ಕೆನ್ನಾಲಿಗೆ ಹೆಚ್ಚಿದ್ದರಿಂದ ಅರಣ್ಯ ಪ್ರದೇಶ ಸುಟ್ಟು ಕರಕಲಾಗಿದೆ. ಇದನ್ನೂ ಓದಿ: ಲೋಕಸಮರಕ್ಕೆ ಭರ್ಜರಿ ತಾಲೀಮು – ಬಿಜೆಪಿಗೆ 10 ಕ್ಷೇತ್ರಗಳದ್ದೇ ತಲೆನೋವು
ಅರಣ್ಯಾಧಿಕಾರಿಗಳು ಸ್ಥಳದಲ್ಲೇ ಇದ್ದರೂ ಕೂಡ ಬೆಂಕಿಯನ್ನ ನಂದಿಸಲು ಸಾಧ್ಯವಾಗಿಲ್ಲ. ಅತ್ಯಂತ ಎತ್ತರ ಹಾಗೂ ಇಳಿಜಾರಿನ ಪ್ರದೇಶದ ಬೈರೇಗುಡ್ಡದ ಬಳಿ ಹೋಗಲು ಕಷ್ಟಸಾಧ್ಯ. ಬಿಸಿಲ ಝಳಕ್ಕೆ ಸಂಪೂರ್ಣ ಒಣಗಿ ನಿಂತಿರುವ ಅರಣ್ಯ ಯಾವ ಪ್ರಮಾಣದಲ್ಲಿ ಹೊತ್ತಿ ಉರಿಯುತ್ತದೆ ಎಂದು ಊಹಿಸುವುದು ಕಷ್ಟ. ಹಾಗಾಗಿ, ಅರಣ್ಯಾಧಿಕಾರಿಗಳು ಕೂಡ ಬೆಂಕಿ ನಂದಿಸಲು ಹೋರಾಡುತ್ತಿದ್ದಾರೆ. ಅರಣ್ಯಕ್ಕೆ ಸ್ಥಳೀಯರೇ ಬೆಂಕಿ ಕೊಟ್ಟಿರಬಹುದು ಎಂದು ಶಂಕಿಸಲಾಗಿದೆ. ಇದನ್ನೂ ಓದಿ: ಪ್ರಧಾನಿಯಿಂದ ಭಾನುವಾರ ದೇಶದ ಅತಿ ಉದ್ದದ ತೂಗುಸೇತುವೆ ʻಸುದರ್ಶನ ಸೇತುʼ ಲೋಕಾರ್ಪಣೆ
ಹಾಸನ: ಕಾಡಾನೆಯನ್ನು (Elephant) ಟ್ರ್ಯಾಕ್ ಮಾಡುತ್ತಿದ್ದ ವೇಳೆ ಕಾಫಿ ತೋಟದೊಳಗೆ ಅರಣ್ಯ ಇಲಾಖೆಯ (Forest Department) ಇಟಿಎಫ್ ಸಿಬ್ಬಂದಿಯನ್ನು ಒಂಟಿಸಲಗವೊಂದು ಹಿಮ್ಮೆಟ್ಟಿಸಿದ ಘಟನೆ ಸಕಲೇಶಪುರ (Sakleshpur) ತಾಲ್ಲೂಕಿನ, ಯಡೇಹಳ್ಳಿ ಗ್ರಾಮದಲ್ಲಿ ನಡೆದಿದೆ.
ಆನೆ ಕಾರ್ಯಪಡೆ ಸಿಬ್ಬಂದಿ ಕಾಡಾನೆಗಳ ಚಲನವಲನ ಗಮನಿಸುತ್ತಿದ್ದ ವೇಳೆ ಕರಡಿ ಹೆಸರಿನ ಒಂಟಿಸಲಗ ಘೀಳಿಡುತ್ತಾ ಇಟಿಎಫ್ ಸಿಬ್ಬಂದಿಯನ್ನು ಅಟ್ಟಿಸಿಕೊಂಡು ಹೋಗಿದೆ.
ಇನ್ನೊಂದೆಡೆ ಬೇಲೂರು (Beluru) ತಾಲೂಕಿನ ಮತ್ತಾವರ ಗ್ರಾಮದಲ್ಲಿ ವಸಂತ್ ಎಂಬುವವರನ್ನು ಬಲಿ ಪಡೆದಿದ್ದ ನರಹಂತಕ ಸೀಗೆ ಹೆಸರಿನ ಕಾಡಾನೆ ಸೆರೆಗೆ ಅರಣ್ಯ ಇಲಾಖೆ ಸಿದ್ಧತೆ ನಡೆಸಿದೆ. ಈಗಾಗಲೇ ಅರಣ್ಯ ಇಲಾಖೆ ಆರ್‌ಆರ್‌ಟಿ ಹಾಗೂ ಇಟಿಎಫ್ ಸಿಬ್ಬಂದಿ ಕಾಡಾನೆ ಚಲನವಲನ ಗಮನಿಸುತ್ತಿದ್ದು, ಮಂಗಳವಾರದಿಂದ ಕಾಡಾನೆ ಸೆರೆ ಕಾರ್ಯಾಚರಣೆ ಮುಂದುವರೆಯಲಿದೆ.
ಶನಿವಾರದಿಂದ ಕಾಡಾನೆ ಸೆರೆ ಕಾರ್ಯಾಚರಣೆ ಆರಂಭಗೊಂಡಿದ್ದು, ಭಾನುವಾರ ಮತ್ತು ಇಂದು ಎರಡು ದಿನ ಅರಣ್ಯ ಇಲಾಖೆ ಬಿಡುವು ನೀಡಿದ್ದು ಉಪಟಳ ನೀಡುತ್ತಿರುವ ಪುಂಡಾನೆಗಳನ್ನು ಸೆರೆ ಹಿಡಿಯಲು ಇಟಿಎಫ್ ಸಿಬ್ಬಂದಿ ಕಾರ್ಯತಂತ್ರ ರೂಪಿಸುತ್ತಿದ್ದಾರೆ.
ಬೆಂಗಳೂರು: ಸಂಸದ ಪ್ರತಾಪ್ ಸಿಂಹರ ವಿರುದ್ಧ ಸೇಡು ತೀರಿಸಿಕೊಳ್ಳಲು ಸಿಎಂ ಸಿದ್ದರಾಮಯ್ಯ (Siddaramaiah) ಅವರೇ ಪ್ಲ್ಯಾನ್ ಮಾಡಿ ವಿಕ್ರಂ ಸಿಂಹರನ್ನ ಬಂಧನ ಮಾಡಿಸಿದ್ದಾರೆ ಅಂತ ಮಾಜಿ ಸಿಎಂ ಕುಮಾರಸ್ವಾಮಿ (HD Kumaraswamy) ಗಂಭೀರ ಆರೋಪ ಮಾಡಿದ್ದಾರೆ.
ಜೆ.ಪಿ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜಾಗ ಯಾರದ್ದೋ ಮರ ಕಡಿದದ್ದು ಯಾರೋ. ಆದ್ರೆ ಬಂಧನ ಆಗಿದ್ದು ಸಂಸದ ಪ್ರತಾಪ್ ಸಿಂಹ (Pratap Simha) ಸಹೋದರ ವಿಕ್ರಂ ಸಿಂಹ (Vikram Simha). ವಿರೋಧಿಗಳ ಧ್ವನಿ ಅಡಗಿಸೋಕೆ ಕಾಂಗ್ರೆಸ್ ಅಧಿಕಾರ ದುರ್ಬಳಕೆ ಮಾಡಿಕೊಂಡಿದೆ ಅಂತ ಕುಮಾರಸ್ವಾಮಿ, ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ್ದಾರೆ. ಇದನ್ನೂ ಓದಿ: ಆಪ್ ಸರ್ಕಾರದ ಬಹುನಿರೀಕ್ಷಿತ ಮೊಹಲ್ಲಾ ಕ್ಲಿನಿಕ್‌ಗಳಲ್ಲಿ ಅಕ್ರಮ – ಸಿಬಿಐ ತನಿಖೆಗೆ ಆದೇಶ
ಪ್ರತಾಪ್ ಸಿಂಹ ಸಹೋದರನ ಮೇಲೆ ಕೇಸ್ ಹಾಕಿ ಜೈಲಿಗೆ ಹಾಕಿದ್ದಾರೆ. ಇದರ ಸತ್ಯಾಸತ್ಯತೆ ಏನಿದೆ? ಕಾಂಗ್ರೆಸ್ ಅವರು ವಿರೋಧಿಗಳ ಧ್ವನಿ ಅಡಗಿಸೋಕೆ ಅಧಿಕಾರ ದುರ್ಬಳಕೆ ಮಾಡಿಕೊಳ್ತಿದ್ದಾರೆ. 5 ಜನ ಅರಣ್ಯಾಧಿಕಾರಿಗಳನ್ನ (Forest Officers) ಅಮಾನತು ಮಾಡಿದ್ದಾರೆ. ಅಮಾನತುಗೊಳಿಸಲು ಕಾರಣವೇನು? ಹೇಳಿ ಅಂತ ಪ್ರಶ್ನೆ ಮಾಡಿದ್ರು. ಬೇಲೂರಿನ ಒಂದು ಗ್ರಾಮದಲ್ಲಿ ಪೂರ್ವ ಅನುಮತಿ ಇಲ್ಲದೇ ಮರ ಕಡಿದಿರೋ ಹಿನ್ನೆಲೆಯಲ್ಲಿ ವರದಿ ಹೋಗಿದೆ. ವರದಿಯಲ್ಲಿ ಸರ್ಕಾರದ ಭೂಮಿಯಲ್ಲಿ ಕಟ್ಟಿರೋ ಮನೆಗಳ ಸಕ್ರಮೀಕರಣ ಮಾಡೋಕೆ ಮನೆಗಳ ಬಗ್ಗೆ ವರದಿ ತಹಶಿಲ್ದಾರರಿಗೆ ಕೊಟ್ಟಿದ್ದರು. 40 ಎಕರೆ ಭೂಮಿಯನ್ನ 16 ಜನಕ್ಕೆ ಹಕ್ಕುಪತ್ರಗಳನ್ನ ಕೊಟ್ಟಿದ್ದಾರೆ. ಉಳಿದ 4 ಎಕರೆ 12 ಗುಂಟೆ ಗೋಮಾಳ ಆಗಿದೆ. 16ನೇ ವ್ಯಕ್ತಿ ರಾಕೇಶ್ ಶೆಟ್ಟಿಗೆ ಸರ್ಕಾರದಿಂದಲೇ 4 ಎಕರೆ ಭೂಮಿ ಕೊಟ್ಟಿದ್ದಾರೆ. ಅವರ ಮಗಳು ಜಯಮ್ಮ ವಿಕ್ರಮ ಸಿಂಹಗೆ ಶುಂಠಿ ಬೆಳೆಯೋಕೆ ಲೀಸ್ ಕೊಟ್ಟಿದ್ದಾರೆ .ಲೀಸ್ ಪ್ರಾರಂಭ ಆಗೋದು 2024 ಜನವರಿಯಿಂದ. ಜಯಮ್ಮ ಮತ್ತು ರವಿ ಅನ್ನೋರು ಈ ಮಧ್ಯೆ ಮರ ಕಡಿದಿದ್ದಾರೆ. ಇದಕ್ಕೆ ವಿಕ್ರಂ ಸಿಂಹ ಕಾರಣ ಅಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಮರಗಳ್ಳತನ ಕೇಸ್; ಸಂಸದ ಪ್ರತಾಪ್ ಸಿಂಹ ಸಹೋದರನಿಗೆ ಜಾಮೀನು ಮಂಜೂರು
ಪ್ರಕರಣದ A1 ಜಯಮ್ಮ, A2 ರಾಕೇಶ್ ಶೆಟ್ಟಿ, A3 ಇರಲಿಲ್ಲ. ಅಲ್ಲಿರೋ ಒಬ್ಬ ಪುಡಾರಿ ಸಿಎಂಗೆ ಮಾಹಿತಿ ಕೊಟ್ಟು ಪ್ರತಾಪ್ ಸಿಂಹಗೆ ಪಾಠ ಕಲಿಸೋಕೆ ಅಂತ ಸಿಎಂಗೆ ತಲೆ ತಿಂದ. ಆಗ ಸಿಎಂ ಅಧಿಕಾರಿಗಳಿಗೆ ಕರೆ ಮಾಡಿ ಬೀಟೆ ಮರ ಕಡಿದು ಅ ಜಾಗದಲ್ಲಿ ಹಾಕುವಂತೆ ಹೇಳಿದ್ದರು ಎಂದು ಸಿಎಂ ಮೇಲೆ ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದರು. ಬೇಕಿದ್ದರೇ ಸಿಎಂ ಫೋನ್‌ಕಾಲ್ ಲೀಸ್ಟ್ ತೆಗೆಯಿರಿ ಸತ್ಯ ಗೊತ್ತಾಗುತ್ತದೆ. ಎ1, ಎ2ಗೆ ಅರಣ್ಯಾಧಿಕಾರಿಗಳೇ ಬೇಲ್ ಕೊಟ್ಟರು. ಆದರೆ ವಿಕ್ರಂ ಸಿಂಹರ ಬಂಧನ ಮಾಡಿದರು. ಎ1, ಎ2ಗೆ ಕಚೇರಿಯಲ್ಲಿ ಬೇಲ್ ಕೊಟ್ಟು ಇವರನ್ನು ಯಾಕೆ ಅರೆಸ್ಟ್ ಮಾಡಿದಿರಿ? ಎಂದು ಸರ್ಕಾರಕ್ಕೆ ಮ್ಯಾಜಿಸ್ಟ್ರೇಟ್ ಉಗಿದರು ಆಗ ಕೋರ್ಟ್ ಬೇಲ್ ಕೊಟ್ಟರು. ಲೀಸ್ ಅಷ್ಟೇ ವಿಕ್ರಂ ತೆಗೆದುಕೊಂಡಿದ್ದ. ಮರ ಕಡಿದಿದ್ದು ಜಯಮ್ಮ ಮತ್ತು ರವಿ ಆದರೆ ಬೀಟೆ ಮರ ಇಲ್ಲಿ ತಂದು ಹಾಕಿ ಅಂದಿದ್ದು ಸರ್ಕಾರ. ಸಿಎಂ ಅವರೇ ಮರ ಕಡಿದು ಹಾಕಿ ಅಂತ ಹೇಳಿ ಬೀಟೆ ಮರ ಹಾಕಿಸಿದ್ದಾರೆ. ಬೀಟೆ ಮರವನ್ನ ಗೆಂಡೆಕೆರೆಯಿಂದ ಕಟ್ ಮಾಡಿಕೊಂಡು ಬಂದು ಇಲ್ಲಿ ಹಾಕಿದ್ದಾರೆ. ಪ್ರತಾಪ್ ಸಿಂಹನ ತಮ್ಮ ಮರ ಕಡಿದಿಲ್ಲ ಆದರೂ ಪ್ರತಾಪ್ ಸಿಂಹನ ಹೆದರಿಸೋಕೆ ಹೀಗೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಮಂಡ್ಯದಲ್ಲಿ ಪರಿಷತ್ ಸದಸ್ಯರೊಬ್ಬರು ಮರ ಕಡಿದರು. ಅವರ ಮೇಲೆ ಯಾಕೆ ಕ್ರಮ ಆಗಿಲ್ಲ? ಸಿಎಂ, ಗೃಹ ಸಚಿವರೇ ಇದಕ್ಕೆ ಉತ್ತರ ಕೊಡಿ. ಅಮಾನತು ಆಗಿರೋ ಡಿಎಫ್ಓ ದಲಿತ ಸಮುದಾಯ ವ್ಯಕ್ತಿ. ಯಾಕೆ ಅಧಿಕಾರಿ ಅಮಾನತು ಮಾಡಿದ್ರಿ? ಪ್ರಾಮಾಣಿಕ ದಲಿತ ಅಧಿಕಾರಿ. ಅವನ ಮೇಲೆ ಯಾಕೆ ಕ್ರಮ ಆಯ್ತು? ಹಾಸನಕ್ಕೆ ಯಾರ ಶಿಫಾರಸು ಮಾಡಿ ಅವನನ್ನ ಹಾಕಿದ್ರಿ? ಆತನನ್ನ ಹಾಸನಕ್ಕೆ ವರ್ಗಾವಣೆ ಮಾಡಿಸಲು ಯಾವ ಎಂಎಲ್ಎ ಕುಳಿತಿದ್ದ? ಎಷ್ಟು ಹಣ ಎಂಎಲ್ಎ ತೆಗೆದುಕೊಂಡ? ಯಶವಂತಪುರದಲ್ಲಿ ಹಣದ ವ್ಯವಹಾರ ಆಗಿದೆ. ಹಾಸನಕ್ಕೆ ಡಿಎಫ್ಓ ನೇಮಕದಲ್ಲಿ ಶಾಸಕ ಹಣ ಪಡೆದಿದ್ದಾನೆ ಎಂದು ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ. ಇದನ್ನೂ ಓದಿ: ಜೈಲು ಸೇರಿರುವ ಸಂಜಯ್ ಸಿಂಗ್‍ಗೆ ಎಂಪಿಯಾಗಿ ಮುಂದುವರಿಸಲು ಆಪ್ ನಿರ್ಧಾರ
ಶಾಸಕರೇ ಹಣ ಡಿಮ್ಯಾಂಡ್ ಮಾಡಿ ಪಡೆದಿದ್ದಾನೆ. ಹಣ ಪಡೆದು ಡಿಎಫ್ಓ ಹಾಸನಕ್ಕೆ ನೇಮಕ ಮಾಡಿದ್ದಾರೆ. ಪಾಪ ಅವನು ಹಣಕೊಟ್ಟು ಈಗ ಅಮಾನತು ಆಗಿದ್ದಾನೆ. ವಿಕ್ರಂ ಸಿಂಹ ತಪ್ಪು ಮಾಡದೇ ಹೋದರು ಅರೆಸ್ಟ್ ಮಾಡುತ್ತೀರಾ? ಸಿಎಂ ಅವರೇ ಬೀಟೆ ಮರ ಕಟ್‌ಮಾಡಿ ಅಲ್ಲಿ ಹಾಕಿ ಅಂತ ಹೇಳಿದ್ದಾರೆ. ನನಗೆ ಅಧಿಕಾರಿಗಳೇ ಮಾಹಿತಿ ಕೊಟ್ಟಿದ್ದಾರೆ. ಬೇಕಿದ್ದರೆ ಕಾಲ್ ಲೀಸ್ಟ್ ತೆಗೆಸಿ. ಬೇಕಿದ್ರೆ ನಾಗಮೋಹನ್ ದಾಸ್ ಕಮಿಟಿಗೆ ತನಿಖೆ ಮಾಡಲು ಹೇಳಿ ಅಥವಾ ಹೊಸ ಆಯೋಗ ರಚಿಸಿ ಎನಿಖೆ ನಡೆಸಿ ಎಂದರು. ಹಾಸನದ ಶಾಸಕರು ಯಾರು ಇದ್ದಾರೆ ಯಾರು ಹಾಸನದಲ್ಲಿ ವರ್ಗಾವಣೆ ನೋಡಿಕೊಳ್ತಿದ್ದಾರೆ? ಅವರೇ ಇದನ್ನ ಮಾಡಿದ್ದಾರೆ. ಅವರೇ ಡಿಎಫ್ಓ ನಿಂದ ಹಣ ಪಡೆದಿದ್ದಾರೆ ಎಂದು ಹೆಸರು ಹೇಳದೇ ಶಿವಲಿಂಗೇಗೌಡ ಮೇಲೆ ಕುಮಾರಸ್ವಾಮಿ ಆರೋಪಿಸಿದರು. ಇದನ್ನೂ ಓದಿ: ಸಿದ್ದರಾಮಯ್ಯ, ಡಿಕೆಶಿ ನಾಯಕತ್ವದಲ್ಲಿ ಕರ್ನಾಟಕ ಕಾಂಗ್ರೆಸ್ ಅಂತ್ಯವಾಗುತ್ತೆ: ಹೆಚ್‌ಡಿಡಿ ಭವಿಷ್ಯ
ಚಿಕ್ಕಮಗಳೂರು: ಬೆಂಗಳೂರಿನ ಬಹುರಾಷ್ಟ್ರೀಯ ಸಾಫ್ಟ್‌ವೇರ್ ಕಂಪನಿಯಲ್ಲಿ ಉದ್ಯೋಗಿಯಾಗಿದ್ದ ಆತ ಕೆಲಸ (Job) ಕಳ್ಕೊಂಡಿದ್ದ. ಕಂಪನಿ ಮುಂಗಡ ಸಂಬಳ (Salary) ನೀಡಿ ನಿಮ್ಮ ಸೇವೆ ತೃಪ್ತಿದಾಯಕವಾಗಿದೆ ಎಂದಿತ್ತು. ಮನಸ್ಸಿಗೆ ಬೇಜಾರು ಮಾಡಿಕೊಂಡು ತನ್ನ ಹೋಂಡಾ ಹಾರ್ನೆಟ್ ಬೈಕಿನಲ್ಲಿ ಕಾಫಿನಾಡಿಗೆ ಪ್ರವಾಸ ಬಂದಿದ್ದ. ರಾಣಿಝರಿ ಜಲಪಾತದ (Rani Jhari Falls) ಬಳಿ ಬೈಕ್, ಕೋಟ್, ಚಪ್ಪಲಿ, ಟೀಶರ್ಟ್ ಬಿಚ್ಚಿಟ್ಟು 3 ದಿನದಿಂದ ನಾಪತ್ತೆಯಾಗಿದ್ದ. ಯಾರ ಸಂಪರ್ಕಕ್ಕೂ ಸಿಕ್ಕಿರಲಿಲ್ಲ. ಮನೆಯವರು, ಪೊಲೀಸರು, ಸ್ಥಳೀಯರು ಹುಡುಕಾಡಿದರೂ ಸುಳಿವಿರಲಿಲ್ಲ. ಆದರೆ ಈಗ ಆತನ ಶವ ಪ್ರಪಾತದಲ್ಲಿ ಪತ್ತೆಯಾಗಿದೆ.
ಬೆಂಗಳೂರು ಮೂಲದ 30 ವರ್ಷದ ಟೆಕ್ಕಿ ಭರತ್ ಇತ್ತೀಚಿಗೆ ಕೆಲಸ ಕಳೆದುಕೊಂಡಿದ್ದ. ಸಂಸ್ಥೆ 3 ತಿಂಗಳ ಮುಂಗಡ ಸಂಬಳ ನೀಡಿ ಸೇವೆಯಿಂದ ಮುಕ್ತಿಗೊಳಿಸಿತ್ತು. ಕೆಲಸ ಕಳೆದುಕೊಂಡಿದ್ದ ಆತ ಬೈಕ್ ಏರಿ ನೇರವಾಗಿ ಬಂದಿದ್ದು ಮೂಡಿಗೆರೆ ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣ ರಾಣಿ ಝರಿ ಇರುವ ಜಾಗಕ್ಕೆ.
ಮಗ ಮನೆಗೂ ಬಂದಿಲ್ಲ, ಸಂಪರ್ಕಕ್ಕೂ ಸಿಕ್ಕಿಲ್ಲ ಎಂದು ಮನೆಯವರು ಹುಡುಕಿಕೊಂಡು ಬಂದಿದ್ದರು. ಬಾಳೂರು ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು. ರಾಣಿ ಝರಿ ಬಳಿಯ ಸುಮಾರು 3 ಸಾವಿರ ಅಡಿ ಎತ್ತರದ ಬೆಟ್ಟದಿಂದ ಭರತ್ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಿ ಹುಡುಕಾಟ ಆರಂಭವಾಗಿತ್ತು. ಅರಣ್ಯ ಇಲಾಖೆ, ಪೊಲೀಸ್, ಧರ್ಮಸ್ಥಳ ವಿಪತ್ತು ನಿರ್ವಹಣ ತಂಡ, ಬಣಕಲ್ ಸಮಾಜ ಸೇವಕ ಆರೀಫ್ ಮತ್ತು ಸ್ಥಳಿಯರು ಏಳು ಡ್ರೋನ್ ಕ್ಯಾಮರಾ ಬಳಸಿ ಹುಡುಕಾಡಿದ್ದು ಯುವಕ ಶವ ಪ್ರಪಾತದಲ್ಲಿ ಪತ್ತೆಯಾಗಿದೆ.
ಶೋಧ ಕಾರ್ಯ ನಡೆಸುತ್ತಿದ್ದ 25 ಜನರ ತಂಡ ಬೆಳ್ತಂಗಡಿಯ ಮೈದಾಡಿ ಕಡೆಯಿಂದ ಬೆಟ್ಟವನ್ನು ಇಳಿದು ಅರಣ್ಯದಲ್ಲಿ ಶವವನ್ನ ಪತ್ತೆ ಹಚ್ಚಿದ್ದಾರೆ. ಸುಮಾರು 4 ಸಾವಿರ ಅಡಿಯಿಂದ ಯುವಕ ಕೆಳಗೆ ಬಿದ್ದಿದ್ದು, ಆತನ ದೇಹ ಛಿದ್ರವಾಗಿದ್ದು, ಕೊಳೆತುಹೋಗಿದೆ. ಮೃತದೇಹ ವ್ಯೂ ಪಾಯಿಂಟ್ ನೇರವಾಗಿರುವ ಪ್ರಪಾತದಲ್ಲಿಯೇ ಪತ್ತೆಯಾಗಿದ್ದು, ಭರತ್ ವ್ಯೂ ಪಾಯಿಂಟ್ ಬಳಿಯಿಂದಲೇ ಕೆಳಗೆ ಹಾರಿ ಆತ್ಮಹತ್ಯೆಗೆ ಶರಣಾಗಿರಬಹುದು ಎಂದು ಅಂದಾಜಿಸಲಾಗಿದೆ.
ಭರತ್ ಆತ್ಮಹತ್ಯೆ ಮಾಡಿಕೊಂಡಿದ್ದಾನೋ ಅಥವಾ ಸಾವಿನ ಸುತ್ತ ಅನುಮಾನದ ಹುತ್ತ ಇದೆಯೋ ಗೊತ್ತಿಲ್ಲ. ಪೊಲೀಸರಾಗಲಿ ಅಥವಾ ಕುಟುಂಬಸ್ಥರಾಗಲಿ ಭರತ್ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಅಧಿಕೃತವಾಗಿ ಹೇಳಿಲ್ಲ.
– ಕರ್ನಾಟಕ ಮಾತ್ರವಲ್ಲ ಹೊರ ರಾಜ್ಯಗಳಲ್ಲೂ ಅರ್ಜುನನ ಸಾಹಸ ಮರೆಯುವಂತಿಲ್ಲ
– 4 ಜನರನ್ನು ತಿಂದಿದ್ದ ಹುಲಿಯನ್ನು ಸೆರೆ ಹಿಡಿದು ಪ್ರಶಸ್ತಿ ಗೆದ್ದುದ್ದು ಇದೇ ಅರ್ಜುನ
ಮೈಸೂರು/ಬೆಂಗಳೂರು: ಮೈಸೂರು ದಸರಾ (Mysuru Dasara) ಮಹೋತ್ಸವದಲ್ಲಿ 8 ಬಾರಿ ಅಂಬಾರಿ ಹೊತ್ತಿದ್ದ ಕ್ಯಾಪ್ಟನ್ ಅರ್ಜುನನ (Arjuna Elephant) ಹಠಾತ್ ನಿಧನಕ್ಕೆ ನಾಡಿನ ಜನರು ಕಂಬನಿ ಮಿಡಿದಿದ್ದಾರೆ. ಪುಂಡಾನೆಗಳಿಗೆ ರೇಡಿಯೋ ಕಾಲರ್ ಅಳವಡಿಕೆಯ ಕಾರ್ಯಾಚರಣೆಯಲ್ಲಿ ತೊಡಗಿದ್ದ ಅರ್ಜುನ ತನ್ನೊಂದಿಗೆ ತೆರಳಿದ್ದ ಹಲವರ ಜೀವ ಉಳಿಸಿ ತನ್ನ ಪ್ರಾಣವನ್ನೇ ತ್ಯಾಗ ಮಾಡಿದೆ. ಕರ್ನಾಟಕ ಮಾತ್ರವಲ್ಲದೇ ಹೊರ ರಾಜ್ಯಗಳಲ್ಲೂ ಶೌರ್ಯ, ಸಾಹಸಕ್ಕೆ ಹೆಸರು ವಾಸಿಯಾಗಿದ್ದ ಅರ್ಜುನ, ಸಾಯುವ ಕೊನೇ ಕ್ಷಣದಲ್ಲೂ ತನ್ನ ಪ್ರಾಣ ತ್ಯಾಗ ಮಾಡಿ ಹಲವರ ಜೀವ ಉಳಿಸಿರುವುದು ಸುಳ್ಳಲ್ಲ.
2012 ರಿಂದ ಮೈಸೂರು ದಸರಾ ಉತ್ಸವದಲ್ಲಿ ಪಾಲ್ಗೊಳ್ಳುತ್ತಿರುವ ಅರ್ಜುನ 8 ಬಾರಿ ಅಂಬಾರಿ ಹೊತ್ತು ಸೈ ಎನಿಸಿಕೊಂಡಿದ್ದ. ಆದ್ರೆ ಅರ್ಜುನನ ವಯಸ್ಸು 60 ವರ್ಷ ದಾಟಿದ ನಂತರ ಅಂಬಾರಿ ಹೊರುವ ಜವಾಬ್ದಾರಿಯನ್ನು ಅಭಿಮನ್ಯುವಿಗೆ ಬಿಟ್ಟುಕೊಟ್ಟು ನಂತರ ನಿಶಾನಿ ಆನೆಯಾಗಿ ಗಜಪಡೆಯನ್ನು ಮುನ್ನಡೆಸಲು ಮುಂದಾಯಿತು. ಇದನ್ನೂ ಓದಿ: ನಡೆದು ಹೋಯ್ತಾ ಮಹಾ ಪ್ರಮಾದ – ಗುರಿ ತಪ್ಪಿ ಬಿದ್ದ ಗುಂಡೇಟಿನಿಂದ ಅರ್ಜುನ ಸಾವು?
ಬಲದಲ್ಲಿ ಭೀಮ – ಸಾಹಸಕ್ಕೆ ನಿಸ್ಸೀಮ:
1968ರಲ್ಲಿ ಕಾಕನ ಕೋಟೆ ಅರಣ್ಯ ಪ್ರದೇಶದಲ್ಲಿ ಸೆರೆ ಹಿಡಿದಾಗ ಅರ್ಜುನನಿಗೆ ಇನ್ನೂ 10 ವರ್ಷವೂ ದಾಟಿರಲಿಲ್ಲ. ಆರಂಭದಲ್ಲಿ ಉಗ್ರ ಕೋಪಕ್ಕೆ ಹೆಸರು ವಾಸಿಯಾಗಿದ್ದ ಅರ್ಜುನ ನಂತರ ಮಾವುತರು, ಕವಾಡಿಗಳ ಜೊತೆ ಹೊಂದಿಕೊಂಡು ಶೌರ್ಯ ಸಾಹಸಕ್ಕೂ ಹೆಸರುವಾಸಿಯಾಯಿತು. 2010ರಲ್ಲಿ 4,541 ಕೆಜಿ ತೂಕವಿದ್ದ ಅರ್ಜುನ 2016ರ ದಸರಾ ಜಂಬೂ ಸವಾರಿ ವೇಳೆಗೆ 5,870 ಕೆಜಿಗೆ ಹೆಚ್ಚಿಸಿಕೊಂಡು ಬಲಭೀಮನಾದ. ಆದ್ದರಿಂದಲೇ ಪುಂಡಾನೆ ಸೆರೆ, ಹುಲಿ ಸೆರೆ ಕಾರ್ಯಾಚರಣೆ ವೇಳೆ ಅರ್ಜುನನನ್ನು ನಿರಂತರವಾಗಿ ಬಳಸಿಕೊಳ್ಳಲಾಗುತ್ತಿತ್ತು.
90ರ ದಶಕದಲ್ಲಿಯೇ ಅರ್ಜುನ ದಸರಾ ಗಜಪಡೆಯ ಭಾಗವಾಗಿದ್ದ. 1997ರಲ್ಲಿ ದ್ರೋಣ ಆನೆ ವಿದ್ಯುತ್ ಅವಘಡದಿಂದ ಮೃತಪಟ್ಟಾಗ ಅಂಬಾರಿ ಆನೆಯ ಸ್ಥಾನಕ್ಕೆ ಅರ್ಜುನನೇ ಮೊದಲ ಆಯ್ಕೆಯಾಗಿದ್ದ. ಆದ್ರೆ ಅದೇ ಸಂದರ್ಭದಲ್ಲಿ ದಸರೆಗೆ ಬಂದ ಸಂಗಾತಿ ಆನೆಯ ಕವಾಡಿಗನನ್ನು ಬಲಿಪಡೆದ ಕಾರಣಕ್ಕೆ ಒಂದಷ್ಟು ವರ್ಷಗಳವರೆಗೆ ಅರ್ಜುನನನ್ನು ಜಂಬೂಸವಾರಿಯಿಂದಲೇ ಹೊರಗಿಡಲಾಗಿತ್ತು. ಈ ಅವಘಡ ನಡೆಯದೇ ಇದ್ದಿದ್ದರೇ ಅರ್ಜುನ 20 ವರ್ಷಗಳಿಗೂ ಹೆಚ್ಚು ಕಾಲ ಅಂಬಾರಿ ಹೊತ್ತ ಇತಿಹಾಸವಿರುತ್ತಿತ್ತು.
ದಸರಾ ಹೊರತು ಪಡಿಸಿ ಇತರೆ ದಿನಗಳಲ್ಲಿ ಬಳ್ಳೆ ಆನೆ ಶಿಬಿರದಲ್ಲಿ ವಾಸ್ತವ್ಯ ಹೂಡುವ ಅರ್ಜುನ ಎಲ್ಲಿಯೇ ಹುಲಿ ಸೆರೆ, ಪುಂಡಾನೆ ಸೆರೆ ಕಾರ್ಯಾಚರಣೆ ಇರಲಿ ಅಲ್ಲಿಗೆ ರೆಡಿಯಾಗಿರುತ್ತಿದ್ದ. ಪಶ್ಚಿಮ ಬಂಗಾಳ, ಮಧ್ಯಪ್ರದೇಶ ಮತ್ತು ಒರಿಸ್ಸಾಗಳಲ್ಲಿಲ್ಲೂ ಪುಂಡಾನೆಗಳನ್ನ ಸೆರೆಹಿಡಿಯಲು ಬಳಸಿಕೊಂಡಿರುವುದು ಅರ್ಜುನನ ಶೌರ್ಯಕ್ಕೆ ಸಾಕ್ಷಿಯಾಗಿದೆ. ಇದನ್ನೂ ಓದಿ: ಮೈಸೂರಿಗೆ ಕಳುಹಿಸಿಕೊಡಿ ಇಲ್ಲವೇ ಅರ್ಜುನನ ಜೊತೆ ನಮ್ಮನ್ನೂ ಮಣ್ಣು ಮಾಡಿ: ಗೋಳಾಡಿದ ಮಾವುತ
2019ರಲ್ಲಿ ನಾಲ್ಕು ಜನರನ್ನು ತಿಂದಿದ್ದ ಹುಲಿಯನ್ನು ಸೆರೆ ಹಿಡಿಯಲು ಅರ್ಜುನನನ್ನ ಬಳಸಿಕೊಳ್ಳಲಾಗಿತ್ತು. ಅಂದು ಸತತ ಮೂರು ದಿನ ಕಾರ್ಯಾಚರಣೆ ನಡೆಸಿ ಹುಲಿಯ ಹೆಜ್ಜೆಗುರುತುಗಳನ್ನ ಆಧರಿಸಿ ಹುಲಿಯನ್ನು ಸೆರೆಹಿಡಿಯಲಾಗಿತ್ತು. ಇದಕ್ಕೆ ಮೆಚ್ಚಿ ಸರ್ಕಾರ ಅರ್ಜುನ ಮತ್ತು ಮಾವುತ ವಿನುಗೆ ಪ್ರಶಸ್ತಿ ಪತ್ರ ನೀಡಿ ಗೌರವಿಸಿತ್ತು. ಇದೀಗ ಅಂತಹದ್ದೇ ಕಾರ್ಯಾಚರಣೆ ವೇಳೆ ಅರ್ಜುನ ವೀರಣ ಮರಣ ಹೊಂದಿದ್ದಾನೆ.
ಚಿಕ್ಕಬಳ್ಳಾಪುರ : ಜಿಲ್ಲೆಯ ಚಿಂತಾಮಣಿ (Chintamani) ತಾಲೂಕಿನ ಸೂಲದೇನಹಳ್ಳಿ ಗ್ರಾಮದ ಮನೆಯೊಂದರ ಮೇಲೆ ಪೊಲೀಸರು ದಾಳಿ (Police Raid) ಮಾಡಿ ಹುಲಿ ಉಗುರನ್ನು (Tiger Claw) ವಶಪಡಿಸಿಕೊಂಡಿದ್ದಾರೆ.
ಪತ್ತೆಯಾದ ವಸ್ತುವನ್ನು ಪೊಲೀಸರು ಅರಣ್ಯಾಧಿಕಾರಿಗಳ ವಶಕ್ಕೆ ನೀಡಿದ್ದಾರೆ. ಚಿಂತಾಮಣಿ ವಲಯ ಅರಣ್ಯಾಧಿಕಾರಿ ಚಂದನ್ ಈಗ ಪ್ರಕರಣ ದಾಖಲಿಸಲು ಮುಂದಾಗಿದ್ದಾರೆ. ಪರಾರಿಯಾಗಿರುವ ನವೀನ್‌ಗಾಗಿ ಅರಣ್ಯಾಧಿಕಾರಿಗಳು ಹುಡುಕಾಟ ನಡೆಸುತ್ತಿದ್ದಾರೆ.
ಬೀದರ್: ಅಕ್ರಮ ಆಸ್ತಿ ಗಳಿಕೆ ಆರೋಪ ಹಿನ್ನೆಲೆಯಲ್ಲಿ ಗಡಿ ಜಿಲ್ಲೆ ಬೀದರ್‌ನಲ್ಲಿ (Bidar) ಲೋಕಾಯುಕ್ತ ಪೊಲೀಸರು (Lokayukta Police)ದಾಳಿ ಮಾಡಿ ಬೆಳ್ಳಂಬೆಳಗ್ಗೆ ಭ್ರಷ್ಟ ಅಧಿಕಾರಿಗೆ ಶಾಕ್ ನೀಡಿದ್ದಾರೆ.
ಬೀದರ್ ನಗರದ ಕೆಇಬಿ ರಸ್ತೆಯಲ್ಲಿರುವ ಅರಣ್ಯ ಇಲಾಖೆಯ (Forest Department) ಆರ್‌ಎಫ್‌ಓ ಬಸವರಾಜ್ ಕಚೇರಿ ಮೇಲೆ ದಾಳಿ ಮಾಡಲಾಗಿದೆ. ಒಂದು ವರ್ಷದಿಂದ ಬೀದರ್ ಅರಣ್ಯ ಇಲಾಖೆಯ ಕೇಂದ್ರ ಕಚೇರಿಯಲ್ಲಿ ಆರ್‌ಎಫ್‌ಒ (RFO) ಆಗಿ ಕಾರ್ಯನಿರ್ವಸುತ್ತಿರುವ ಬಸವರಾಜ ಮೇಲೆ ಅಕ್ರಮ ಆಸ್ತಿಗಳಿಕೆ (Disproportionate Assets) ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ದಾಳಿ ನಡೆದಿದೆ. ಇದನ್ನೂ ಓದಿ: ಬಿಜೆಪಿ ಆಪರೇಷನ್ ಕಮಲದ ಕನಸು ನನಸಾಗಲ್ಲ: ಜಮೀರ್
ಅರಣ್ಯ ಇಲಾಖೆಯ ಕಚೇರಿಯಲ್ಲಿ ಲೋಕಾಯುಕ್ತ ಪೊಲೀಸರು ದಾಳಿ ಮಾಡಿ ಪರಿಶೀಲನೆ ಮಾಡುತ್ತಿದ್ದು ಕಲಬುರಗಿಯ ನಿವಾಸದ ಮೇಲೂ ದಾಳಿ ಮಾಡಲಾಗಿದೆ. ಲೋಕಾಯುಕ್ತ ಎಸ್ಪಿ ಕರ್ನೂಲ್ ಮಾರ್ಗದರ್ಶನದಲ್ಲಿ ದಾಳಿ ಮಾಡಲಾಗಿದ್ದು ಲೋಕಾಯುಕ್ತ ಪೊಲೀಸರಿಂದ ಪರಿಶೀಲನೆ ಮುಂದುವರಿದಿದೆ.