Tag: forest

  • ಕಾಡಿನಲ್ಲಿ ಚಿತೆಗೆ ಹಾರಿ ವ್ಯಕ್ತಿ ಆತ್ಮಹತ್ಯೆ – ಯಲ್ಲಾಪುರದಲ್ಲೊಂದು ವಿಚಿತ್ರ ಘಟನೆ

    ಕಾಡಿನಲ್ಲಿ ಚಿತೆಗೆ ಹಾರಿ ವ್ಯಕ್ತಿ ಆತ್ಮಹತ್ಯೆ – ಯಲ್ಲಾಪುರದಲ್ಲೊಂದು ವಿಚಿತ್ರ ಘಟನೆ

    ಕಾರವಾರ: ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ರೀತಿ ನೋಡಿದರೆ ಎಂತವರೂ ಬೆಚ್ಚಿ ಬೀಳಲೇ ಬೇಕು.

    ಹೌದು ಹಲವು ವರ್ಷಗಳಿಂದ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದ ಯಲ್ಲಾಪುರದ ಕೊಂಕಣ ಕೊಪ್ಪದ ಶಿವರಾಮ ರಾಮಕೃಷ್ಣ ಹೆಗಡೆ (60) ಎಂಬುವವರು ತಮ್ಮ ಬಹು ದಿನದ ರೋಗದಿಂದ ಜಿಗುಪ್ಸೆಗೊಂಡಿದ್ದರು. ತಾನು ಸಾಯಬೇಕು ಎಂದು ಸತತ ಎರಡು ತಿಂಗಳಿಂದ ಆಹಾರ ಸೇವನೆ ಬಿಟ್ಟಿದ್ದರು. ನಂತರ ಇವರು ಮನೆಯ ಹತ್ತಿರದ ಕಾಡಿನಲ್ಲಿ ಮರದ ಕಟ್ಟಿಗೆಗಳನ್ನು ಒಟ್ಟುಮಾಡಿ ಚಿತೆಯನ್ನು ಉರಿಸಿ ಅದಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಮನೆಯಲ್ಲಿ ರಾಮಕೃಷ್ಣ ಹೆಗಡೆ ಕಾಣದಿದ್ದಾಗ ಕುಟುಂಬಸ್ಥರು ಹುಡುಕಿದ್ದಾರೆ. ಈತನ ಮನೆಯ ಸ್ವಲ್ಪ ದೂರದಲ್ಲೇ ಕಾಡಿನಲ್ಲಿ ಈತನ ಬಟ್ಟೆಗಳು ಕಾಣಿಸಿದ್ದು, ಅಲ್ಲಿಯೇ ಉರಿದು ಆರಿಹೋದ ಚಿತೆಯೂ ಕಂಡಿದೆ. ಅಲ್ಲಿ ದೇಹದ ಮೂಳೆಗಳು ಸಿಕ್ಕ ಕಾರಣ ಈತನೇ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಎಂದು ಗುರುತು ಪತ್ತೆ ಹಚ್ಚಲಾಗಿದೆ. ಘಟನೆ ಸಂಬಂಧ ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ತಾನು ಸಾಕಿದ್ದ ಎರಡು 2 ಆನೆಗಳಿಗೆ ಇಡೀ ಆಸ್ತಿಯನ್ನೇ ಬರೆದ

    ತಾನು ಸಾಕಿದ್ದ ಎರಡು 2 ಆನೆಗಳಿಗೆ ಇಡೀ ಆಸ್ತಿಯನ್ನೇ ಬರೆದ

    – ರೌಡಿಗಳಿಂದ ಮಾಲೀಕನ ಪ್ರಾಣ ಉಳಿಸಿದ್ದ ಆನೆ
    – ನಾನು ಇಲ್ಲದಿದ್ದಾಗ ಹಸಿವಿನಿಂದ ಬಳಲಬಾರದು

    ಪಾಟ್ನಾ: ಇತ್ತೀಚೆಗೆ ಕೇರಳದಲ್ಲಿ ಪಟಾಕಿ ತುಂಬಿದ್ದ ಪೈನಾಪಲ್ ಹಣ್ಣು ತಿಂದು ಗರ್ಭಿಣಿ ಆನೆಯೊಂದು ಸಾವನ್ನಪ್ಪಿತ್ತು. ಆದರೆ ಬಿಹಾರದ ಪ್ರಾಣಿ ಪ್ರೇಮಿಯೊಬ್ಬರು ತಮ್ಮ ಸಂಪೂರ್ಣ ಆಸ್ತಿಯನ್ನು ತಾವು ಸಾಕಿದ್ದ ಎರಡು ಆನೆಗಳಿಗೆ ಕೊಟ್ಟಿದ್ದಾರೆ.

    ಪಾಟ್ನಾದ ಮೊಹಮ್ಮದ್ ಅಖ್ತರ್ ಇಮಾಮ್ (50) ತಾವು ಸಾಕಿರುವ 20 ಮತ್ತು 15 ವರ್ಷ ವಯಸ್ಸಿನ ಎರಡು ಆನೆಗಳಿಗೆ ಕೋಟ್ಯಂತರ ಬೆಲೆ ಬಾಳುವ ಜಮೀನನ್ನು ಕೊಟ್ಟಿದ್ದಾರೆ. ಅಲ್ಲದೇ ಅಖ್ತರ್ ಮೋತಿ ಮತ್ತು ರಾಣಿ ಎಂಬ ಹೆಸರಿನ ತನ್ನ ಎರಡು ಆನೆಗಳೊಂದಿಗೆ ವಾಸಿಸುತ್ತಿದ್ದಾರೆ.

    “ಕುಟುಂಬ ಪರಂಪರೆಯಾಗಿ ಈ ಎರಡು ಆನೆಗಳು ನನಗೆ ಸಿಕ್ಕಿವೆ. ಮೋತಿ ಮತ್ತು ರಾಣಿ ನನ್ನ ಮಕ್ಕಳಂತೆ. ನನ್ನ ಬಾಲ್ಯದಿಂದಲೂ ನಾನು ಅವರೊಂದಿಗೆ ವಾಸಿಸುತ್ತಿದ್ದೇನೆ. ಇಬ್ಬರು ನನ್ನ ಕುಟುಂಬ ಸದಸ್ಯರು. ನಾನು ಜೀವಂತವಾಗಿರದಿದ್ದಾಗ ಎರಡು ಆನೆಗಳು ಹಸಿವಿನಿಂದ ಬಳಲುವಂತಾಗಬಾರದು. ಹೀಗಾಗಿ ನನ್ನ 6.25 ಎಕರೆ ಭೂಮಿಯನ್ನು ಎರಡು ಆನೆಗಳಿಗೆ ವಿಲ್ ಬರೆದಿದ್ದೇನೆ” ಎಂದು ಅಖ್ತರ್ ತಿಳಿಸಿದರು.

    ಎರಡು ಆನೆಗಳಲ್ಲಿ ಮೋತಿ ನನ್ನ ಜೀವವನ್ನು ಉಳಿಸಿದ್ದಾನೆ. ಮೋತಿ ಭೋಜಪುರ ಜಿಲ್ಲೆಯ ಶಹಪುರ್ ಪ್ರದೇಶಕ್ಕೆ ಮಾವುತನ ಜೊತೆಗೆ ಹೋಗಿದ್ದನು. ಅಲ್ಲಿ ಅವನು ಅನಾರೋಗ್ಯಕ್ಕೆ ಒಳಗಾಗಿದ್ದ. ಆತನಿಗೆ ಚಿಕಿತ್ಸೆ ನೀಡಲು ನಾನು ಅಲ್ಲಿಗೆ ಹೋದೆ. ಒಂದು ದಿನ ನಾನು ಅಲ್ಲಿ ನಿದ್ದೆ ಮಾಡುವಾಗ ಮೋತಿ ಜೋರಾಗಿ ಕೂಗಿಕೊಂಡ. ತಾನು ತಕ್ಷಣ ಎಚ್ಚರಕೊಂಡೆ, ಆಗ ಯಾರೋ ರೌಡಿಗಳು ನನ್ನನ್ನು ಕೊಲೆ ಮಾಡಲು ಯತ್ನಿಸಿದ್ದರು. ಆಗ ನನ್ನ ಜೀವವನ್ನು ಉಳಿಸಿಕೊಳ್ಳಲು ಓಡಿ ಹೋಗಿದ್ದೆ ಎಂದು ಅಖ್ತರ್ ನಡೆದ ಘಟನೆಯ ಬಗ್ಗೆ ವಿವರಿಸಿದರು.

    ನನ್ನ ಸ್ವಂತ ಕುಟುಂಬ ಸದಸ್ಯರು ಪ್ರಾಣಿ ಕಳ್ಳಸಾಗಾಣಿಕೆದಾರರೊಂದಿಗೆ ಕೈಜೋಡಿಸಿದ್ದಾರೆ. ಈ ಆನೆಗಳನ್ನು ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದಾರೆ. ಅಷ್ಟೇ ಅಲ್ಲದೇ ಎರಡು ಆನೆಗಳಿಗೆ ನನ್ನ ಆಸ್ತಿಯನ್ನು ಬರೆದಿರುವುದರಿಂದ ನನ್ನ ಕುಟುಂಬ ಸದಸ್ಯರಿಂದ ನನಗೆ ಜೀವ ಭಯವಿದೆ ಎಂದು ಅಖ್ತರ್ ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅಖ್ತರ್ ವನ್ಯಜೀವಿ ವಾರ್ಡನ್ ಮತ್ತು ಪಾಟ್ನಾ ಪೊಲೀಸ್ ಮುಖ್ಯಸ್ಥರಿಗೆ ಈ ಬಗ್ಗೆ ಪತ್ರ ಬರೆದಿದ್ದಾರೆ.

    ಸರ್ಕಾರ ಆನೆಯನ್ನು ರಕ್ಷಿಸಬೇಕು. ಇಲ್ಲವಾದರೆ ಮುಂದೆ ನಾವು ಆನೆಗಳು ಇದ್ದವು ಎಂದು ಪುಸ್ತಕಗಳಲ್ಲಿ ಮಾತ್ರ ನೋಡಬೇಕಾಗುತ್ತದೆ. ಆನೆಗಳು ಆಹಾರವನ್ನು ಹುಡುಕಿಕೊಡು ಗ್ರಾಮಗಳಿಗೆ ಬರುತ್ತವೆ. ಹೀಗಾಗಿ ನಾವು ಕಾಡನ್ನ ಉಳಿಸಬೇಕು ಎಂದು ಸರ್ಕಾರದ ಬಳಿ ಅಖ್ತರ್ ಮನವಿ ಮಾಡಿದರು.

  • ರಾತ್ರಿ ವೇಳೆ ಸಾಕು ಪ್ರಾಣಿಗಳನ್ನ ಬೇಟೆಯಾಡ್ತಿದ್ದ ಚಿರತೆ ಸೆರೆ

    ರಾತ್ರಿ ವೇಳೆ ಸಾಕು ಪ್ರಾಣಿಗಳನ್ನ ಬೇಟೆಯಾಡ್ತಿದ್ದ ಚಿರತೆ ಸೆರೆ

    ವಿಜಯಪುರ: ರಾತ್ರಿ ವೇಳೆ ಸಾಕು ಪ್ರಾಣಿಗಳನ್ನ ಬೇಟೆಯಾಡುವ ಮೂಲಕ ಜಿಲ್ಲೆಯ ಜನರ ನಿದ್ದೆ ಕೆಡಿಸಿದ್ದ ಚಿರತೆ ಕೊನೆಗೂ ಬೋನಿ ಬಿದ್ದಿದೆ.

    ಜಿಲ್ಲೆಯ ಬಬಲೇಶ್ವರ ತಾಲೂಕಿನ ದೇವರಗೆಣ್ಣೂರು ಗ್ರಾಮದ ಹೊರವಲಯದಲ್ಲಿ ಚಿರತೆ ಬಲೆಗೆ ಬಿದ್ದಿದೆ. ಕಳೆದ ಒಂದು ವಾರದಿಂದ ಬಬಲೇಶ್ವರ ತಾಲೂಕಿನ ಬಬಲಾದಿ, ದೇವರಗೆಣ್ಣೂರು, ಗುಣದಾಳ ಸೇರಿದಂತೆ ಸುತ್ತಮುತ್ತಲ ಹಳ್ಳಿಗಳಲ್ಲಿ ಈ ಚಿರತೆಯ ಹಾವಳಿ ಹೆಚ್ಚಾಗಿತ್ತು.

    ಅಷ್ಟೇ ಅಲ್ಲದೇ ರಾತ್ರಿ ಹೊತ್ತು ಎಮ್ಮೆ, ಮೇಕೆ, ಸಾಕು ಪ್ರಾಣಿಗಳ ಬೇಟೆಯಾಡುವ ಮೂಲಕ ಜನರ ನೆಮ್ಮದಿ ಹಾಗೂ ನಿದ್ದೆ ಕೆಡಿಸಿತ್ತು. ಹೀಗಾಗಿ ಅರಣ್ಯ ಇಲಾಖೆಯವರು ಕಳೆದ ನಾಲ್ಕು ದಿನಗಳಿಂದ ಕಾರ್ಯಾಚರಣೆ ನಡೆಸುತ್ತಿದ್ದರು. ಪರಿಣಾಮ ಕೊನೆಗೂ ಚಿರತೆ ಸೆರೆ ಸಿಕ್ಕಿದೆ.

    ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಚಿರಾಂಕ ವನ್ಯಜೀವಿ ಪ್ರದೇಶದಿಂದ ಚಿರತೆ ಬಂದಿರುವ ಶಂಕೆ ವ್ಯಕ್ತವಾಗಿದೆ. ಲಾಕ್‍ಡೌನ್ ವೇಳೆ ಜನ, ವಾಹನ ಸಂಚಾರ ಕಡಿಮೆಯಾಗಿದ್ದರಿಂದ ಕೃಷ್ಣಾ ನದಿ ದಾಟಿ ಬಂದಿರುವ ಶಂಕೆ ವ್ಯಕ್ತವಾಗಿದೆ.

  • ತಮಿಳುನಾಡಿನಿಂದ ಕರ್ನಾಟಕ ಪ್ರವೇಶಿಸುವರಿಗೆ ನಿರ್ಬಂಧ – ಕಾಡುದಾರಿಗಳು ಸಂಪೂರ್ಣ ಬಂದ್

    ತಮಿಳುನಾಡಿನಿಂದ ಕರ್ನಾಟಕ ಪ್ರವೇಶಿಸುವರಿಗೆ ನಿರ್ಬಂಧ – ಕಾಡುದಾರಿಗಳು ಸಂಪೂರ್ಣ ಬಂದ್

    ಚಾಮರಾಜನಗರ: ಕೊರೊನಾ ಪ್ರಕರಣಗಳ ಹೈ ರಿಸ್ಕ್ ರಾಜ್ಯಗಳಲ್ಲಿ ಒಂದಾದ ತಮಿಳುನಾಡಿನಿಂದ ಕರ್ನಾಟಕಕ್ಕೆ ಬರುವ ಪ್ರಯಾಣಿಕರಿಗೆ ಪ್ರವೇಶ ನಿಷೇಧ ಹೇರಿರುವುದರಿಂದ ತಮಿಳರು ಗಡಿಭಾಗದಲ್ಲಿ ಕಾಡಿನ ಅಡ್ಡದಾರಿಗಳ ಮೂಲಕ ನುಸುಳುತ್ತಿದ್ದರು. ಇದೀಗ ಕಾಡುದಾರಿಗಳನ್ನು ಸಂಪೂರ್ಣ ಬಂದ್ ಮಾಡಲಾಗಿದೆ.

    ಕಾಡುಗಳ್ಳ ವೀರಪ್ಪನ್ ಕಾರ್ಯಕ್ಷೇತ್ರವಾದ ಮಹದೇಶ್ವರಬೆಟ್ಟ ಅರಣ್ಯದಲ್ಲಿ ಪಾಲಾರ್ ಹಳ್ಳ ದಾಟಿ ಬರುತ್ತಿದ್ದರು. ಹಾಗೆಯೇ ಮಹದೇಶ್ವರ ಬೆಟ್ಟದ ಸುತ್ತಮುತ್ತಲ ನಿವಾಸಿಗಳು ಸಹ ಕಾಡುದಾರಿಗಳ ಮೂಲಕ ತಮಿಳುನಾಡಿಗೆ ಹೋಗಿ ಬರುತ್ತಿದ್ದರು. ಪಾಲಾರ್ ನದಿಯ ಪಕ್ಕದಲ್ಲೇ ಚೆಕ್‍ಪೋಸ್ಟ್ ಇದ್ದರೂ ಪೊಲೀಸರ ಕಣ್ಣು ತಪ್ಪಿಸಿ ಓಡಾಟ ನಡೆಸುತ್ತಿದ್ದರು. ಈಗ ಕಾಡುದಾರಿಗಳಿಗೆ ಅಡ್ಡಲಾಗಿ ಮುಳ್ಳುಬೇಲಿ ಹಾಕಲಾಗಿದೆ. ಅಲ್ಲದೇ ಪೊಲೀಸ್, ಅರಣ್ಯ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ.

    ಪಾಲಾರ್, ಹೂಗ್ಯಂ, ಜಲ್ಲಿಪಾಳ್ಯ, ಗಾಜನೂರು, ಗರಿಕೆಕಂಡಿ ರಸ್ತೆ ಸಂಪೂರ್ಣ ಬಂದ್ ಮಾಡಲಾಗಿದ್ದು, ಈ ಮೂಲಕ ತಮಿಳುನಾಡಿನಿಂದ ಕರ್ನಾಟಕ ಪ್ರವೇಶಿಸುವರಿಗೆ ನಿರ್ಬಂಧ ಹೇರಲಾಗಿದೆ. ಅರಣ್ಯ ಇಲಾಖೆಯಿಂದ ಗಸ್ತು, ಆಯಕಟ್ಟಿನ ಸ್ಥಳಗಳಲ್ಲಿ ಅರಣ್ಯ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ. ಅಷ್ಟೇ ಅಲ್ಲದೇ ಚಾಮರಾಜನಗರದ ಮಲೆ ಮಹದೇಶ್ವರ ವನ್ಯಜೀವಿ ವಿಭಾಗದಿಂದ ಬಿಗಿ ಕ್ರಮ ಕೈಗೊಳ್ಳಲಾಗಿದೆ

    ಕೊರೊನಾ ಸೋಂಕಿತ ಸಂಖ್ಯೆಯಲ್ಲಿ ದೇಶದಲ್ಲಿ ತಮಿಳುನಾಡು ಎರಡನೇ ಸ್ಥಾನದಲ್ಲಿದೆ. ಅಲ್ಲದೇ ತಮಿಳಿಗರು ಕಾಡಿನ ಕಳ್ಳದಾರಿಗಳ ಮೂಲಕ ಬಂದು ಕೊರೊನಾತಂಕ ಉಂಟುಮಾಡುತ್ತಿದ್ದರು. ಇದೀಗ ಕಳ್ಳದಾರಿ ಮೂಲಕ ಬರುತ್ತಿದ್ದವರಿಗೆ ಕಡಿವಾಣ ಹಾಕಲಾಗಿದೆ.

  • ಚಾಮರಾಜನಗರಕ್ಕೆ ವೀರಪ್ಪನ್ ಕಾರ್ಯಕ್ಷೇತ್ರದಿಂದ ನುಸುಳಿ ಬರ್ತಿರೋ ತಮಿಳರು

    ಚಾಮರಾಜನಗರಕ್ಕೆ ವೀರಪ್ಪನ್ ಕಾರ್ಯಕ್ಷೇತ್ರದಿಂದ ನುಸುಳಿ ಬರ್ತಿರೋ ತಮಿಳರು

    ಚಾಮರಾಜನಗರ: ಕೊರೊನಾ ಪ್ರಕರಣಗಳ ಹೈ ರಿಸ್ಕ್ ರಾಜ್ಯಗಳಲ್ಲಿ ಒಂದಾದ ತಮಿಳುನಾಡಿನಿಂದ ಕರ್ನಾಟಕಕ್ಕೆ ಬರುವ ಪ್ರಯಾಣಿಕರಿಗೆ ಪ್ರವೇಶ ನಿಷೇಧ ಹೇರಿರುವುದರಿಂದ ತಮಿಳರು ಗಡಿಭಾಗದಲ್ಲಿ ಕಾಡಿನ ಅಡ್ಡದಾರಿಗಳ ಮೂಲಕ ನುಸುಳುತ್ತಿದ್ದಾರೆ.

    ಕಾಡುಗಳ್ಳ ವೀರಪ್ಪನ್ ಕಾರ್ಯಕ್ಷೇತ್ರವಾದ ಮಹದೇಶ್ವರಬೆಟ್ಟ ಅರಣ್ಯದಲ್ಲಿ ಪಾಲಾರ್ ಹಳ್ಳ ದಾಟಿ ಬರತೊಡಗಿದ್ದಾರೆ. ಹಾಗೆಯೇ ಮಹದೇಶ್ವರ ಬೆಟ್ಟದ ಸುತ್ತಮುತ್ತಲ ನಿವಾಸಿಗಳು ಸಹ ಕಾಡುದಾರಿಗಳ ಮೂಲಕ ತಮಿಳುನಾಡಿಗೆ ಹೋಗಿ ಬರುತ್ತಿದ್ದಾರೆ. ಪಾಲಾರ್ ನದಿಯ ಪಕ್ಕದಲ್ಲೇ ಚೆಕ್‍ಪೋಸ್ಟ್ ಇದ್ದರೂ ಪೊಲೀಸರ ಕಣ್ಣು ತಪ್ಪಿಸಿ ಓಡಾಟ ನಡೆಸಲಾಗುತ್ತಿದೆ. ವ್ಯಾಪಾರ, ವಹಿವಾಟು, ಆಸ್ಪತ್ರೆ ಮೊದಲಾದ ಕೆಲಸಗಳಿಗೆ ಕಾಡುದಾರಿಗಳ ಮೂಲಕ ನುಸುಳುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

    ಈ ಬಗ್ಗೆ ಪ್ರತಿಕ್ರಿಯಿಸಿರುವ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ, ಅಕ್ರಮ ನುಸುವಳಿಕೆ ತಡೆಗಟ್ಟಲು ನಿರಂತರವಾಗಿ ಗಸ್ತು ನಡೆಸಲು ಅರಣ್ಯ ಇಲಾಖೆಗೆ ಸೂಚಿಸಲಾಗಿದೆ. ಅಡ್ಡದಾರಿಗಳ ಮೂಲಕ ಬರುವುದನ್ನು ತಡೆಗಟ್ಟಲು ಪೊಲೀಸ್, ಕಂದಾಯ ಹಾಗೂ ಅರಣ್ಯ ಇಲಾಖೆ ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದ್ದಾರೆ. ಯಾರೇ ಹೊಸಬರು ಬಂದರೂ ತಕ್ಷಣ ಮಾಹಿತಿ ನೀಡುವಂತೆ ಗ್ರಾಮ ಕಾರ್ಯಪಡೆಗಳಿಗೂ ಸೂಚಿಸಲಾಗಿದ್ದು, ಅಂತರಾಜ್ಯಗಳಿಂದ ಬರುವವರನ್ನು ಕಡ್ಡಾಯವಾಗಿ ಕ್ವಾರಂಟೈನ್‍ಗೆ ಒಳಪಡಿಸಲಾಗುವುದು ಎಂದು ತಿಳಿಸಿದ್ದಾರೆ.

    ಇದೇ ವಿಷಯಕ್ಕೆ ಪ್ರತಿಕ್ರಿಯಿಸಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆನಂದಕುಮಾರ್ ತಮಿಳುನಾಡಿನಿಂದ ಬರಲು ಅನುಮತಿ ನೀಡದ ಹಿನ್ನೆಲೆಯಲ್ಲಿ ಕೆಲವರು ಕಾಡುದಾರಿಗಳ ಮೂಲಕ ಬರುತ್ತಿರುವ ಬಗ್ಗೆ ಮಾಹಿತಿ ಇದೆ. ಹೀಗೆ ಅನುಮತಿ ಇಲ್ಲದೆ ಅಡ್ಡದಾರಿಗಳ ಮೂಲಕ ಬಂದಿರುವವರನ್ನು ಕ್ವಾರಂಟೈನ್‍ಗೆ ಒಳಪಡಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

  • ಕೊಡಗಿನಲ್ಲಿ ಹುಲಿ ಪ್ರತ್ಯಕ್ಷ – ಸ್ಥಳೀಯರು ಆತಂಕ

    ಕೊಡಗಿನಲ್ಲಿ ಹುಲಿ ಪ್ರತ್ಯಕ್ಷ – ಸ್ಥಳೀಯರು ಆತಂಕ

    ಮಡಿಕೇರಿ: ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಆನೆ ಚೌಕೂರು ಗೇಟ್ ಬಳಿ ಹುಲಿ ಪ್ರತ್ಯಕ್ಷವಾಗಿದ್ದು, ಸ್ಥಳೀಯರು ಆತಂಕಗೊಂಡಿದ್ದಾರೆ.

    ಹುಲಿಯೊಂದು ಆನೆ ಚೌಕೂರು ಗೇಟ್ ಬಳಿ ಪ್ರತ್ಯಕ್ಷವಾಗಿದೆ. ಜೊತೆಗೆ ಮೂರು ಮರಿಗಳೊಂದಿಗೆ ಹುಲಿ ಇದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಹುಲಿಯ ವಿಡಿಯೋವನ್ನು ಸ್ಥಳೀಯರೊಬ್ಬರು ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದಾರೆ.

    ನಾಗರಹೊಳೆ ರಾಷ್ಟ್ರೀಯ ಹುಲಿ ಸಂರಕ್ಷಣಾ ಸ್ಥಳದಿಂದ ಬಂದಿವೆ ಎನ್ನಲಾಗಿದೆ. ಇದೀಗ ಜನರು ಹುಲಿ ಕಂಡು ಆತಂಕಗೊಂಡಿದ್ದಾರೆ. ಸ್ಥಳೀಯರು ತಕ್ಷಣ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಫೋನ್ ಮಾಡಿ ಮಾಹಿತಿ ತಿಳಿಸಿದ್ದಾರೆ. ಮಾಹಿತಿ ತಿಳಿದು ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ.

  • ಮಲಗಿದ್ದ ಮಗುವನ್ನ ಹೊತ್ತೊಯ್ದು ತಿಂದ ಚಿರತೆ – ಅರ್ಧ ದೇಹ ಪತ್ತೆ

    ಮಲಗಿದ್ದ ಮಗುವನ್ನ ಹೊತ್ತೊಯ್ದು ತಿಂದ ಚಿರತೆ – ಅರ್ಧ ದೇಹ ಪತ್ತೆ

    ರಾಮನಗರ: ಪೋಷಕರ ಬಳಿ ಮಲಗಿದ್ದ ಮಗುವನ್ನು ಚಿರತೆಯೊಂದು ಹೊತ್ತೊಯ್ದು ಅರ್ಧ ಚಿಂದು ಸಾಯಿಸಿರುವ ಅಮಾನವೀಯ ಘಟನೆ ಜಿಲ್ಲೆಯ ಮಾಗಡಿ ತಾಲೂಕಿನ ಕದಿರಯ್ಯನಪಾಳ್ಯದಲ್ಲಿ ನಡೆದಿದೆ.

    ಮೂರು ವರ್ಷದ ಹೇಮಂತ್‍ನನ್ನು ಚಿರತೆ ತಿಂದು ಸಾಯಿಸಿದೆ. ಹೇಮಂತ್ ತನ್ನ ತಾತನ ಮನೆಗೆ ಬಂದಿದ್ದ ಸಂದರ್ಭದಲ್ಲಿ ಇಂದು ನಸುಕಿನ ಜಾವ ಸುಮಾರು 2 ಗಂಟೆಗೆ ಈ ಘಟನೆ ನಡೆದಿದೆ. ಮನೆ ಸಮೀಪದ ಕಾಡಿನಲ್ಲಿ ಮಗುವನ್ನು ತಿಂದು ಹೋಗಿದೆ. ಇದೀಗ ಮಗುವಿನ ಅರ್ಧ ದೇಹ ಪತ್ತೆಯಾಗಿದೆ.

    ಮೃತ ಹೇಮಂತ್ ದೊಡ್ಡೇರಿ ಗ್ರಾಮದ ಚಂದ್ರಶೇಖರ್ ಮತ್ತು ಮಂಗಳ ದಂಪತಿಯ ಮಗುವಾಗಿದೆ. ಶುಕ್ರವಾರ ರಾತ್ರಿ ಮನೆಯಲ್ಲಿ ಹೇಮಂತ್ ತಂದೆ-ತಾಯಿಯ ಜೊತೆ ಮಲಗಿದ್ದನು. ಆದರೆ ಪೋಷಕರು ಸೆಕೆ ಹೆಚ್ಚಾಗಿದ್ದರಿಂದ ಬಾಗಿಲನ್ನ ತೆಗೆದು ಮಲಗಿದ್ದರು. ಈ ವೇಳೆ ಬಂದ ಚಿರತೆ ಮಲಗಿದ್ದ ಮಗುವನ್ನ ಹೊತ್ತೊಯ್ದಿದೆ.

    ಮಾಹಿತಿ ತಿಳಿದು ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸರು ದೌಡಾಯಿಸಿದ್ದಾರೆ. ಬಳಿಕ ಮಗುವಿಗಾಗಿ ಹುಡುಕಾಟ ಶುರುಮಾಡಿದ್ದಾರೆ. ಆದರೆ ಮಗುವಿನ ಅರ್ಧ ದೇಹ ಮನೆ ಬಳಿ ಇರುವ ಕಾಡಿನಲ್ಲಿ ಪತ್ತೆಯಾಗಿದೆ.

    ಮಾಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಸ್ಥಳದಲ್ಲಿ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

  • ಕಾಡಿನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಕೊಳೆತ ಇಬ್ಬರ ಶವ ಪತ್ತೆ

    ಕಾಡಿನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಕೊಳೆತ ಇಬ್ಬರ ಶವ ಪತ್ತೆ

    – ಮದ್ವೆಯಾಗಿದ್ರೂ ಇಬ್ಬರಿಗೂ ಸಂಬಂಧ
    – ಕಾಡಿನಲ್ಲಿ ಮೃತದೇಹ ತಿಂದಿರೋ ಪ್ರಾಣಿಗಳು

    ಹೈದರಾಬಾದ್: ನಾಪತ್ತೆಯಾಗಿದ್ದ 27 ದಿನಗಳ ನಂತರ ಮಹಿಳೆ ಮತ್ತು ಆಕೆಯ ಪ್ರಿಯತಮನ ಮೃತದೇಹಗಳು ತೆಲಂಗಾಣದ ವಿಕರಾಬಾದ್ ಜಿಲ್ಲೆಯ ಅನಂತಗಿರಿಯಲ್ಲಿರುವ ಕಾಡಿನ ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿವೆ.

    ಮೃತರನ್ನು ಶಿವಲೀಲಾ (23) ಮತ್ತು ಮಹೇಂದರ್ (26) ಎಂದು ಗುರುತಿಸಲಾಗಿದೆ. ಸರ್ಕಾರ ಕೊರೊನಾ ಲಾಕ್‍ಡೌನ್ ಸಡಿಲಿಕೆ ಮಾಡಿದ ಹಿನ್ನೆಲೆಯಲ್ಲಿ ಶುಕ್ರವಾರ ಕೆಲವರು ಕಾಡಿನೊಳಗೆ ಹೋಗಿದ್ದಾಗ ಈ ಘಟನೆ ಬೆಳಕಿಗೆ ಬಂದಿದೆ. ತಕ್ಷಣ ಗ್ರಾಮಸ್ಥರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

    ಮಾಹಿತಿ ತಿಳಿದ ತಕ್ಷಣ ಪೊಲೀಸರು ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿದ್ದಾರೆ. ಮೃತರ ಅಸ್ಥಿಪಂಜರದ ಅವಶೇಷಗಳು ಮಾತ್ರ ಪತ್ತೆಯಾಗಿದೆ. ಕಾಡಿನಲ್ಲಿ ಮೃತಪಟ್ಟಿರುವ ಕಾರಣ ಮೃತದೇಹವನ್ನು ಪ್ರಾಣಿಗಳು ತಿಂದಿವೆ. ಮೃತದೇಹಗಳ ಬಳಿ ಪರ್ಸ್ ಮತ್ತು ಬೈಕ್ ಪತ್ತೆಯಾಗಿದೆ. ಬೈಕ್ ನಂಬರ್ ಸಹಾಯದಿಂದ ತನಿಖಾ ಅಧಿಕಾರಿಗಳು ಮೃತ ವ್ಯಕ್ತಿಯನ್ನು ಮಹೇಂದರ್ ಅಂತ ಗುರುತಿಸಿದ್ದಾರೆ ಎಂದು ವಿಕರಾಬಾದ್ ಪೊಲೀಸರು ತಿಳಿಸಿದ್ದಾರೆ.

    ಏಪ್ರಿಲ್ ಮೊದಲ ವಾರದಲ್ಲಿ ಮಹೇಂದರ್ ನಾಪತ್ತೆಯಾಗಿದ್ದು, ಆತ ಹೋಗುವಾಗ ಬೈಕ್ ಕೂಡ ತೆಗೆದುಕೊಂಡು ಹೋಗಿದ್ದನು ಎಂದು ಕುಟುಂಬದವರು ಪೊಲೀಸರಿಗೆ ತಿಳಿಸಿದ್ದಾರೆ. ಇನ್ನೂ ಮಹಿಳೆಯನ್ನು ಕೋಟ್ಪಲ್ಲಿಯ ಶಿವಲೀಲಾ ಎಂದು ಗುರುತಿಸಲಾಗಿದೆ. ಈಕೆ ಕೂಲಿ ಕೆಲಸ ಮಾಡುತ್ತಿದ್ದಳು. ಈಕೆಯೂ ಏಪ್ರಿಲ್‍ನಿಂದ ನಾಪತ್ತೆಯಾಗಿದ್ದು, ಕುಟುಂಬದವರು ಏಪ್ರಿಲ್ 6 ರಂದು ನಾಪತ್ತೆಯ ದೂರನ್ನು ದಾಖಲಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಮೃತರಿಬ್ಬರು ಸಂಬಂಧದಲ್ಲಿದ್ದರು ಎಂದು ಪೊಲೀಸರು ಶಂಕಿಸಿದ್ದಾರೆ. ಮೃತ ಶಿವಲೀಲಾ ಮದುವೆಯಾಗಿ ಐದು ವರ್ಷಗಳಾಗಿದೆ. ಮಹೇಂದರ್ ಮದುವೆಯಾಗಿ ಮಕ್ಕಳು ಕೂಡ ಇದ್ದಾವೆ. ಆದರೆ ಸುಮಾರು ಎರಡು ವರ್ಷಗಳ ಹಿಂದೆ ಕಟ್ಟಣ ನಿರ್ಮಾಣ ಕೆಲಸ ಮಾಡುವಾಗ ಇಬ್ಬರಿಗೂ ಪರಿಯಚವಾಗಿದೆ ಎಂದು ತಿಳಿದುಬಂದಿದೆ.

    ನಾಪತ್ತೆ ದೂರ ದಾಖಲಿಸಿದ ನಂತರ ಪೊಲೀಸ್ ಅಧಿಕಾರಿಗಳು ಅವರ ಮೊಬೈಲ್ ಫೋನ್ ಟ್ರೇಸ್ ಮಾಡುವ ಮೂಲಕ ಪತ್ತೆಹಚ್ಚಲು ಪ್ರಯತ್ನಿಸಿದ್ದಾರೆ. ಆದರೆ ಅದು ಸಾಧ್ಯವಾಗಿಲ್ಲ. ಹೀಗಾಗಿ ತನಿಖೆಯ ಅಧಿಕಾರಿಗಳು ಪತ್ತೆಹಚ್ಚುವುದನ್ನು ತಪ್ಪಿಸಲು ತಮ್ಮ ಸಿಮ್ ಕಾರ್ಡ್‍ಗಳನ್ನು ನಾಶಪಡಿಸಿರಬಹುದೆಂದು ಶಂಕಿಸಿದ್ದರು.

    ಏಪ್ರಿಲ್ 6 ರಂದು ದಂಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ಥಳದಲ್ಲಿ ಹಾಲು ಮತ್ತು ಬಿಸ್ಕೆಟ್‍ ಪತ್ತೆಯಾಗಿದ್ದು, ಅವುಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ. ಸದ್ಯಕ್ಕೆ ಈ ಕುರಿತು ತನಿಖೆ ನಡೆಯುತ್ತಿದೆ. ಆದರೆ ಇನ್ನೂ ಇವರಿಬ್ಬರ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

  • ಕಾಡಿಗೆ ಬೆಂಕಿಯಿಟ್ಟು ಬೇಟೆಯಾಡುತ್ತಿದ್ದ ಖದೀಮರ ಬಂಧನ

    ಕಾಡಿಗೆ ಬೆಂಕಿಯಿಟ್ಟು ಬೇಟೆಯಾಡುತ್ತಿದ್ದ ಖದೀಮರ ಬಂಧನ

    ಚಾಮರಾಜನಗರ: ಕಾಡಿಗೆ ಬೆಂಕಿಯಿಟ್ಟು ಬೇಟೆಯಾಡುತ್ತಿದ್ದ ನಾಲ್ವರು ಖದೀಮರನ್ನು ಕಾವೇರಿ ವನ್ಯಧಾಮದ ಕೊತ್ತನೂರು ವಲಯದಲ್ಲಿ ಬಂಧಿಸಲಾಗಿದೆ.

    ಕೊಳ್ಳೇಗಾಲ ತಾಲೂಕಿನ ಜಾಗೇರಿ ಗ್ರಾಮದ ವಿನ್ಸೆಂಟ್, ಸಗಾಯ್ ರಾಜ್, ಚಾರ್ಲಿಸ್ ಸವರಿನಾಥನ್ ಹಾಗೂ ಜ್ಞಾನಪ್ರಕಾಶ್ ಬಂಧಿತ ಬೇಟೆಗಾರರು. ಕಾಡಿಗೆ ಬೆಂಕಿಯಿಟ್ಟು ಅರಣ್ಯ ಇಲಾಖೆ ಸಿಬ್ಬಂದಿಗಳ ಗಮನ ಬೇರೆಡೆಗೆ ಸೆಳೆದು ಬೇಟೆಯಾಡುತ್ತಿದ್ದರು ಎನ್ನಲಾಗಿದ್ದು, ಈ ಹಿಂದೆಯೂ ಬೇಟೆಯಾಡಿ ಇವರು ಸಿಕ್ಕಿಬಿದ್ದಿದ್ದರು ಎಂದು ಡಿಎಫ್‍ಒ ಡಾ.ಎಸ್. ರಮೇಶ್ ತಿಳಿಸಿದ್ದಾರೆ.

    ಬಂಧಿತರಿಂದ ನಾಡಬಂದೂಕು, ಮದ್ದುಗುಂಡು, ಚಾಕುಗಳು, ಸಾಂಬಾರ ಪದಾರ್ಥಗಳು, ಬೇಟೆಯಾಡಿರುವ ಟಿಟ್ಟುಬ ಪಕ್ಷಿ ಯನ್ನು ವಶಪಡಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

    ಲಾಕ್‍ಡೌನ್ ಎಫೆಕ್ಟ್‍ನಿಂದ ಕಳ್ಳ ಬೇಟೆಗಾರರ ಕರಾಮತ್ತು ಹೆಚ್ಚಾಗುತ್ತಿದ್ದು ಅರಣ್ಯ ಇಲಾಖೆ ಥಂಡ ಆಗಿದೆ. ಜಿಲ್ಲೆಯಲ್ಲಿ ಈ ವರ್ಷ ಕಾವೇರಿ ವನ್ಯಜೀವಿ ಧಾಮದಲ್ಲಿ ಮಾತ್ರ ಪದೇಪದೆ ಬೆಂಕಿ ಬೀಳುತ್ತಿರುವುದು ಅರಣ್ಯ ಇಲಾಖೆಗೆ ಮತ್ತಷ್ಟು ತಲೆನೋವು ತರಿಸಿದೆ. ಎಷ್ಟು ಎಕ್ರೆ ಕಾಡು ಸುಟ್ಟಿದೆ ಎಂಬ ಮಾಹಿತಿ ನೀಡುವುದರಲ್ಲಿ ಹಾಗೂ ಜನರಿಗೆ ಜಾಗೃತಿ ಮೂಡಿಸುವಲ್ಲಿ ಕಾವೇರಿ ವನ್ಯಧಾಮದ ಅಧಿಕಾರಿ ವರ್ಗ ತಲೆ ಕೆಡಿಸಿಕೊಂಡಿದ್ದಾರೆ.

  • ಕೊರೊನಾ ಭೀತಿಯ ನಡುವೆಯೂ ಮರಕಳ್ಳತನ – ಕಳ್ಳರಿಗೆ ಲಾಠಿ ಏಟು

    ಕೊರೊನಾ ಭೀತಿಯ ನಡುವೆಯೂ ಮರಕಳ್ಳತನ – ಕಳ್ಳರಿಗೆ ಲಾಠಿ ಏಟು

    ಶಿವಮೊಗ್ಗ: ಕೊರೊನಾ ವೈರಸ್ ಭೀತಿಗೆ ಈಡಿ ರಾಷ್ಟ್ರವೇ ತತ್ತರಿಸಿ ಹೋಗಿದೆ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿಯವರು ಕೊರೊನಾ ವೈರಸ್ ತಡೆಗಟ್ಟಲು 21 ದಿನಗಳ ಕಾಲ ಮನೆಯಲ್ಲೇ ಇರುವಂತೆ ಮನವಿ ಮಾಡಿಕೊಂಡಿದ್ದಾರೆ.

    ಪ್ರಧಾನಿ ಅವರ ಈ ಆದೇಶವನ್ನೇ ಬಂಡವಾಳ ಮಾಡಿಕೊಂಡ ಕೆಲ ಖದೀಮರು, ಲಾಕ್‍ಡೌನ್ ಇದೆ ಎಂದು ಕಾಡಿನತ್ತ ಯಾರೂ ಸಹ ತಲೆ ಹಾಕುವುದಿಲ್ಲ. ಇದೇ ಸಮಯದಲ್ಲಿ ಬೆಲೆ ಬಾಳುವ ಮರಗಳಿಗೆ ಕೊಡಲಿ ಹಾಕಿ ಮರಗಳ್ಳತನಕ್ಕೆ ಪ್ರಯತ್ನಿಸಿರುವ ಘಟನೆ ಶಿವಮೊಗ್ಗದ ಶೆಟ್ಟಿಹಳ್ಳಿ ಅರಣ್ಯ ಪ್ರದೇಶದಲ್ಲಿ ನಡೆದಿದೆ.

    ಈ ವೇಳೆ ಅರಣ್ಯ ಪ್ರದೇಶಕ್ಕೆ ಭೇಟಿ ನೀಡಿದ್ದ ಅರಣ್ಯ ರಕ್ಷಕನ ಮೇಲೆ ಮರಗಳ್ಳರಾದ ರಾಜೇಂದ್ರ, ಮುರುಗೇಶ, ವಿರೇಂದ್ರ ಹಾಗೂ ಬಲರಾಮ್ ಸೇರಿ ಹಲ್ಲೆಗೆ ಮುಂದಾಗಿದ್ದಾರೆ. ಈ ಖದೀಮರು ಲಕ್ಷಾಂತರ ರೂ. ಬೆಲೆ ಬಾಳುವ ಮರಗಳಾದ ಸಾಗುವಾನಿ, ಬೀಟೆ ಸೇರಿದಂತೆ ಇತರೆ ಮರಗಳನ್ನು ಕಳ್ಳತನ ಮಾಡಿ ಶಿವಮೊಗ್ಗ ಮೂಲದ ಹಬೀಬ್ ಎಂಬುವನಿಗೆ ಮಾರಾಟಕ್ಕೆ ಯತ್ನಿಸಿದ್ದರು.

    ಸದ್ಯ ಮೂವರು ಮರಗಳ್ಳರನ್ನು ವಶಕ್ಕೆ ಪಡೆದ ಅರಣ್ಯ ಸಿಬ್ಬಂದಿ ಬಂಧಿತರನ್ನು ಶಿವಮೊಗ್ಗ ವನ್ಯಜೀವಿ ವಲಯದ ಡಿಎಫ್‍ಒ ನಾಗರಾಜ್ ಮುಂದೆ ನಿಲ್ಲಿಸಿದ್ದಾರೆ. ಡಿಎಫ್‍ಒ ನಾಗರಾಜ್ ಮರಗಳ್ಳರಿಗೆ ಕರ್ಫ್ಯೂ ಇದ್ದರೂ ಮನೆಯಿಂದ ಹೊರ ಬಂದು ಮರಗಳ್ಳತನ ಮಾಡುತ್ತೀರಾ ಎಂದು ಸಖತ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಮೂವರಿಗೂ ಲಾಠಿ ರುಚಿ ತೋರಿಸಿದ್ದಾರೆ. ಅಲ್ಲದೇ ಮೂವರನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮತ್ತೊರ್ವ ಪರಾರಿಯಾಗಿದ್ದು, ಆತನ ಪತ್ತೆಗೂ ಬಲೆ ಬೀಸಿದ್ದಾರೆ.