Tag: forest elephant

  • Shivamogga | ಕಾಡಾನೆ ದಾಳಿಗೆ ಕೃಷಿ ಕಾರ್ಮಿಕ ಬಲಿ

    Shivamogga | ಕಾಡಾನೆ ದಾಳಿಗೆ ಕೃಷಿ ಕಾರ್ಮಿಕ ಬಲಿ

    ಶಿವಮೊಗ್ಗ: ಕಾಡಾನೆ ದಾಳಿಗೆ (Elephant Attack) ಕೃಷಿ ಕಾರ್ಮಿಕ ಮೃತಪಟ್ಟ ಘಟನೆ ಶಿವಮೊಗ್ಗ (Shivamogga) ನಗರ ಸಮೀಪದ ಆಲದೇವರ ಹೊಸೂರು ಬಳಿ ಸಂಭವಿಸಿದೆ. ಮೃತ ಕಾರ್ಮಿಕನನ್ನು ಹನುಮಂತಪ್ಪ ಎಂದು ಗುರುತಿಸಲಾಗಿದೆ.

    ಮೃತ ಹನುಮಂತಪ್ಪ ಜಮೀನಿಗೆ ಹೋಗಿ ಮನೆಗೆ ಮರಳುವಾಗ ಘಟನೆ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಇನ್ನೂ ಈ ಕುರಿತು ಪ್ರತಿಕ್ರಿಯೆ ನೀಡಿರುವ ಅರಣ್ಯ ಇಲಾಖೆ ವನ್ಯಜೀವಿ ವಿಭಾಗದ ಡಿಎಫ್‌ಒ ಪ್ರಸನ್ನ ಕೃಷ್ಣ ಪಟಗಾರ್‌, ತೋಟಕ್ಕೆ ಕೂಲಿ ಕೆಲಸಕ್ಕೆ ಹೋಗಿ ಮನೆಗೆ ಹಿಂತಿರುಗುವಾಗ ಆನೆ ದಾಳಿಯಾಗಿದೆ ಎಂದು ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ ಎಂದು ತಿಳಿಸಿದ್ದಾರೆ.

    ಹನುಮಂತಪ್ಪ ಅವರು ಸಂಪತ್‌ ಕುಮಾರ್‌ ಎಂಬುವವರ ತೋಟದ ಮನೆಯಲ್ಲಿ ವಾಸವಾಗಿದ್ದರು. ಆಶ್ಫಾಕ್‌ ಅಹಮದ್‌ ಖಾನ್‌ ಎಂಬುವವರ ತೋಟದಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಇವರು ಮೂಲತಃ ಗದಗ ಜಿಲ್ಲೆಯ ಲಕ್ಷ್ಮೇಶ್ವರದವರು. ಹನುಂತಪ್ಪಗೆ ಪತ್ನಿ, ನಾಲ್ವರು ಮಕ್ಕಳು ಇದ್ದಾರೆ.

  • ಬೆಳೆಗಳಿಗೆ ನೀರು ಹಾಯಿಸಲು ಹೋದ ರೈತರ ಮೇಲೆ ಕಾಡಾನೆ ದಾಳಿ

    ಬೆಳೆಗಳಿಗೆ ನೀರು ಹಾಯಿಸಲು ಹೋದ ರೈತರ ಮೇಲೆ ಕಾಡಾನೆ ದಾಳಿ

    ಮೈಸೂರು: ಬೆಳೆಗಳಿಗೆ ನೀರು ಹಾಯಿಸಲು ಹೋದ ರೈತರ ಮೇಲೆ ಕಾಡಾನೆಯೊಂದು ದಾಳಿ ಮಾಡಿದ ಘಟನೆ ಎಚ್.ಡಿ.ಕೋಟೆ ತಾಲೂಕಿನ ಅಣ್ಣೂರು ಹೊಸಳ್ಳಿಯಲ್ಲಿ ನಡೆದಿದೆ.

    ರವೀಂದ್ರ (55), ರವಿ (45) ಗಾಯಗೊಂಡ ರೈತರು. ಆನೆಯು ಕಳೆದ ರಾತ್ರಿ ಜಮೀನಿನಲ್ಲಿ ಬೆಳೆಗಳಿಗೆ ನೀರಾಯಿಸುತ್ತಿದ್ದಾಗ ದಾಳಿ ನಡೆಸಿದೆ. ಈ ವೇಳೆ ಕಾಡಾನೆ ದಾಳಿಯಿಂದ ರೈತ ರವೀಂದ್ರ ಚೀರಾಟವನ್ನು ಆಲಿಸಿ ಟಾರ್ಚ್ ಬೆಳಕು ನೀಡುತ್ತಿದ್ದಂತೆಯೇ ಆನೆಯು ಸ್ಥಳದಿಂದ ಪಾರಾಗಿದೆ. ಇದನ್ನೂ ಓದಿ: ಕೋರ್ಟ್ ತೀರ್ಪು ಬರೋವರೆಗೂ ಪರೀಕ್ಷೆ ಮುಂದೂಡಿ – ಹಿಜಬ್ ಹೋರಾಟಗಾರ್ತಿಯರು

    ಆನೆ ದಾಳಿಯಿಂದ ಗಾಯಗೊಂಡಿದ್ದ ರೈತರನ್ನು ಗ್ರಾಮಸ್ಥರು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅರಣ್ಯ ಅಧಿಕಾರಿಗಳು ಆಸ್ಪತ್ರೆಗೆ ಆಗಮಿಸಿ ಗಾಯಾಳುಗಳ ಯೋಗಕ್ಷೇಮ ವಿಚಾರಿಸಿದ್ದಾರೆ.

  • ರೈಲಿಗೆ ಸಿಲುಕಿ ತಾಯಿ, ಮರಿಯಾನೆ ಸಾವು

    ರೈಲಿಗೆ ಸಿಲುಕಿ ತಾಯಿ, ಮರಿಯಾನೆ ಸಾವು

    ಮಂಗಳೂರು: ರೈಲು ಡಿಕ್ಕಿ ಹೊಡೆದ ಪರಿಣಾಮ ಕಾಡಾನೆ ಮತ್ತು ಮರಿ ಆನೆ ದುರ್ಮರಣಕ್ಕೀಡಾದ ಘಟನೆ ಶಿರಾಡಿಘಾಟ್‍ನ ಎಡಕುಮರಿ ಸಮೀಪದಲ್ಲಿ ನಡೆದಿದೆ.

    ಮಂಗಳೂರು-ಬೆಂಗಳೂರು ರೈಲು ಮಾರ್ಗವು ಕಾಡಿನ ಮಧ್ಯದಲ್ಲಿಯೇ ಹಾದು ಹೋಗಿದ್ದು, ಸುಬ್ರಹ್ಮಣ್ಯ ರೋಡ್ ಹಾಗೂ ಸಕಲೇಶಪುರ ಮಧ್ಯದಲ್ಲಿರುವ ಎಡಕುಮರಿ ಸಮೀಪದಲ್ಲಿ ಈ ಘಟನೆ ನಡೆದಿದೆ. ತಾಯಿ ಆನೆ ಹಾಗೂ ಅದರ ಮರಿ ರೈಲು ಹಳಿ ದಾಟುತ್ತಿದ್ದ ವೇಳೆ ರೈಲಿಗೆ ಸಿಲುಕಿ, ಸ್ಥಳದಲ್ಲಿಯೇ ಮೃತಪಟ್ಟಿವೆ.

    ಎಂದಿನಂತೆ ಸೋಮವಾರ ರೈಲ್ವೆ ಸಿಬ್ಬಂದಿ ಹಳಿಗಳ ಪರಿಶೀಲನೆ ನಡೆಸುವ ವೇಳೆ ಆನೆಗಳ ಮೃತ ದೇಹ ಪತ್ತೆಯಾಗಿದೆ. ಈ ಕುರಿತು ಮಾಹಿತಿ ಪಡೆದ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ರೈಲ್ವೇ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಭಾನುವಾರ ತಡರಾತ್ರಿಯೇ ಘಟನೆ ನಡೆದಿದ್ದು, ರಾತ್ರಿ ಮಂಜಿನ ವಾತಾವರಣದಿಂದ ಲೊಕೊ ಪೈಲೆಟ್ ಗೆ (ರೈಲು ಚಾಲಕ) ಆನೆಗಳು ಹಳಿ ದಾಟುತ್ತಿರುವುದು ಕಾಣಿಸಿರಲಿಲ್ಲ. ಹೀಗಾಗಿ ಈ ದುರ್ಘಟನೆ ನಡೆದಿದೆ ಎಂದು ತಿಳಿಸಿದ್ದಾರೆ.