Tag: forest department officials

  • ವೃದ್ದೆಯನ್ನು ಕೊಂದ ಸಲಗವನ್ನು ಕಾಡಿಗಟ್ಟಿದ ಅರಣ್ಯ ಇಲಾಖೆ ಸಿಬ್ಬಂದಿ

    ವೃದ್ದೆಯನ್ನು ಕೊಂದ ಸಲಗವನ್ನು ಕಾಡಿಗಟ್ಟಿದ ಅರಣ್ಯ ಇಲಾಖೆ ಸಿಬ್ಬಂದಿ

    ಮಡಿಕೇರಿ: ವೃದ್ದೆಯನ್ನು ಕೊಂದ ಕಾಡಾನೆಯ ಚಲನವಲನವನ್ನು ಕಂಡುಹಿಡಿದು, ಅರಣ್ಯ ಇಲಾಖೆಯ ಸಿಬ್ಬಂದಿ ಛಲ ಬಿಡದೇ ಕಾಡಿಗೆ ಅಟ್ಟಿರುವ ಘಟನೆ ಕೊಡಗು (Kodagu) ಜಿಲ್ಲೆಯ ವಿರಾಜಪೇಟೆ (Virajpete) ತಾಲ್ಲೂಕಿನ ಕೋಟೆ (Kote) ಗ್ರಾಮದಲ್ಲಿ ನಡೆದಿದೆ.

    ಆ.30 ರಂದು ಬೆಳಗ್ಗೆ ಕಾಡಾನೆಯೊಂದು ವೃದ್ದೆಯ ಮೇಲೆ ದಾಳಿ ನಡೆಸಿತ್ತು. ಹತ್ಯೆ ಮಾಡಿದ ಕಾಡಾನೆಯನ್ನು ಪತ್ತೆ ಹಚ್ಚುವಂತೆ ಅರಣ್ಯ ಇಲಾಖೆಯ ಅಧಿಕಾರಿಗಳು (Forest Department Officials) ಸಿಬ್ಬಂದಿಗೆ ಸೂಚನೆ ನೀಡಿದ್ದರು. ಸಿಬ್ಬಂದಿ ಕೈಗೆ ಸಿಗದೇ ಕಾಡಾನೆ ಸುತ್ತಾಡಿಸಿತ್ತು ಆದರೆ ಕಾರ್ಯಾಚರಣೆ ತಂಡದವರು ಛಲ ಬಿಡದೇ ಆನೆಯನ್ನು ಹುಡುಕಲು ಪ್ರಯತ್ನ ಪಟ್ಟಿದ್ದರು.ಇದನ್ನೂ ಓದಿ: ರಾಯಚೂರಲ್ಲಿ ಡೆತ್‌ನೋಟ್ ಬರೆದಿಟ್ಟು ಬಿಎ ವಿದ್ಯಾರ್ಥಿ ನೇಣಿಗೆ ಶರಣು

    ಅರಣ್ಯ ಇಲಾಖೆಯ ಸಿಬ್ಬಂದಿ ಹಾಗೂ ಆನೆ ಕಾರ್ಯಪಡೆ ಆರ್‌ಆರ್‌ಟಿ (RRT) ತಂಡದ ಸಿಬ್ಬಂದಿ ಬಾಡಗ ಬಾಣಂಗಾಲ ಹುಂಡಿ ಭಾಗದ ಕಾಫಿ ತೋಟಗಳಲ್ಲಿ ಕಾರ್ಯಾಚರಣೆ ನಡೆಸಿದರು. ಮಹಿಳೆಯನ್ನು ಹತ್ಯೆಗೈದ ಕಾಡಾನೆಯ ಚಲನವಲನವನ್ನು ಕಂಡುಹಿಡಿದು, ಕೊನೆಗೂ ಸಿಬ್ಬಂದಿ ಸೇರಿ ಚನ್ನಂಗಿ ಅರಣ್ಯಕ್ಕೆ ಅಟ್ಟಿದ್ದಾರೆ.

    ಈ ಕಾಡಾನೆಯು ಕಳೆದ ಮೂರು ತಿಂಗಳಿನಿಂದ ಇದೇ ವಸತಿ ಭಾಗದ ಸುತ್ತಲೂ ಸುತ್ತಾಡುತ್ತಿದ್ದು, ಹಿಂಸೆ ನೀಡುತ್ತಿತ್ತು. ಕಾಡಾನೆಯು ಹಿಂದಿರುಗಿ ಬರಬಹುದು ಎಂಬ ಭಯದಲ್ಲಿ ಕೂಡಲೇ ಸ್ಥಳಾಂತರಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.ಇದನ್ನೂ ಓದಿ: ಪತಂಜಲಿ ಸಸ್ಯಾಹಾರಿ ಹರ್ಬಲ್ ಟೂತ್ ಪೌಡರ್‌ನಲ್ಲಿ ಮಾಂಸಾಹಾರಿ ಅಂಶ – ದೆಹಲಿ ಹೈಕೋರ್ಟ್‌ಗೆ ಅರ್ಜಿ

  • ನಾಯಿ ಹಿಡಿಯಲು ಹೋಗಿ ಬೋನಿನಲ್ಲಿ ಲಾಕ್ ಆಯ್ತು ಚಿರತೆ!

    ನಾಯಿ ಹಿಡಿಯಲು ಹೋಗಿ ಬೋನಿನಲ್ಲಿ ಲಾಕ್ ಆಯ್ತು ಚಿರತೆ!

    ಕಾರವಾರ: ಆಹಾರ ಅರಸಿ ಬಂದಿದ್ದ ಚಿರತೆ ಬೋನಿನಲ್ಲಿ ಇದ್ದ ನಾಯಿ ಹಿಡಿಯಲು ಹೋಗಿ ಬೋನಿನಲ್ಲೇ ಬಂಧಿಯಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಕಿಮಾನಿ ಗ್ರಾಮದಲ್ಲಿ ನಡೆದಿದೆ.

    ರಾತ್ರಿ ನಾಯಿ ಹಿಡಿಯಲು ಬಂದಿದ್ದ ಚಿರತೆಯನ್ನು ನಾಯಿ ಬೋನಿನೊಳಗೆ ಹೋದದ್ದನ್ನ ಗಮನಿಸಿದ ಮನೆಯ ಮಾಲೀಕರು ತಕ್ಷಣ ಬೋನನ್ನು ಲಾಕ್ ಮಾಡಿದ್ದಾರೆ. ಅದೃಷ್ಟವಶಾತ್ ಬೋನಿನಲ್ಲಿ ಇದ್ದ ನಾಯಿ ತಪ್ಪಿಸಿಕೊಂಡಿದ್ದು, ಮನೆಯವರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ:  ಮುನ್ಸೂಚನೆ ನೀಡದೆ ದೇವಸ್ಥಾನಗಳನ್ನು ಏಕಾಏಕಿ ತೆರವುಗೊಳಿಸುತ್ತಿರುವುದು ಖಂಡನೀಯ: ಎಸ್‍ಡಿಪಿಐ

    ತಕ್ಷಣ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದು, ಚಿರತೆ ರಕ್ಷಣೆ ಮಾಡಲು ಕಾರ್ಯಾಚರಣೆ ಪ್ರಾರಂಭಿಸಿದ್ದು, ಬೋನಿನ ಸಮೇತ ಚಿರತೆಯನ್ನು ಸೆರೆಹಿಡಿದು ಕುಮಟಾದ ಸ್ಥಳೀಯ ಕಾಡಿನಲ್ಲಿ ಬಿಟ್ಟಿದ್ದಾರೆ. ಇದನ್ನೂ ಓದಿ:  ಔರದ್‍ನಲ್ಲಿ ಭೀಕರ ರಸ್ತೆ ಅಪಘಾತ – ಸ್ಥಳದಲ್ಲೇ ಇಬ್ಬರು ಸಾವು

     

  • ಸಕ್ಕರೆ ನಾಡಲ್ಲಿ ಕಾಡಾನೆಗಳ ಅಬ್ಬರ – ತೈಲೂರು ಕೆರೆಯಲ್ಲಿ ಬೀಡುಬಿಟ್ಟ ಗಜ ಪಡೆ

    ಸಕ್ಕರೆ ನಾಡಲ್ಲಿ ಕಾಡಾನೆಗಳ ಅಬ್ಬರ – ತೈಲೂರು ಕೆರೆಯಲ್ಲಿ ಬೀಡುಬಿಟ್ಟ ಗಜ ಪಡೆ

    ಮಂಡ್ಯ: ಸಕ್ಕರೆ ನಾಡಲ್ಲಿ ಕಾಡಾನೆಗಳ ಅಬ್ಬರ ಶುರವಾಗಿದ್ದು, ಸುಮಾರು ಆರು ಆನೆಗಳು ಕಾಡಿನಿಂದ ನಾಡಿಗೆ ಬಂದು ತೈಲೂರು ಕೆರೆಯಲ್ಲಿ ಬೀಡು ಬಿಟ್ಟಿವೆ.

    ಜಿಲ್ಲೆಯ ಮದ್ದೂರು ತಾಲೂಕಿನ ತೈಲೂರು ಕೆರೆಯಲ್ಲಿ ಆನೆಗಡು ಬೀಡುಬಿಟ್ಟು, ನೀರಿನಲ್ಲಿ ಸ್ವಚ್ಛಂದವಾಗಿ ವಿಹರಿಸುತ್ತಿವೆ. ಎರಡು ಮರಿಯಾನೆ ಹಾಗೂ ನಾಲ್ಕು ದೊಡ್ಡ ಆನೆಗಳು ಕೆರೆಯ ನೀರಿನಲ್ಲಿ ಓಡಾಡುತ್ತಿವೆ. ಆನೆಗಳು ಎರಡು ದಿನಗಳ ಹಿಂದೆ ಮದ್ದೂರಿನ ಬ್ಯಾಡರಹಳ್ಳಿ ಮತ್ತು ಚಂದಳ್ಳಿಯಲ್ಲಿ ತೋಟಗಳಿಗೆ ನುಗ್ಗಿ ಬೆಳೆ ನಾಶ ಮಾಡಿದ್ದವು. ಇದೀಗ ಆನೆಗಳು ಕೆರೆಯಲ್ಲಿ ಬೀಡುಬಿಟ್ಟಿವೆ. ಮುತ್ತತ್ತಿ ಅರಣ್ಯ ಪ್ರದೇಶದಿಂದ ಆನೆಗಳು ಬಂದಿರಬಹುದು ಎಂದು ಹೇಳಲಾಗುತ್ತಿದೆ.

    ಆನೆಗಳು ಕೆರೆಯಲ್ಲಿರುವ ವಿಚಾರ ತಿಳಿದು ಜನರು ಕುತೂಹಲದಿಂದ ಕೆರೆಯ ಬಳಿ ಜಮಾಯಿಸಿದ್ದಾರೆ. ಆನೆಗಳಿಂದ ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಿದ್ದು, ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಆಗಮಿಸಿದ್ದಾರೆ.

  • ಮರ ಕಡಿಯುವಾಗ ಕೈಕೊಟ್ಟ ಮಿಷನ್- ಆಂಬುಲೆನ್ಸ್ ನಲ್ಲೇ 1 ಗಂಟೆ ನರಳಾಡಿದ ಗರ್ಭಿಣಿ

    ಮರ ಕಡಿಯುವಾಗ ಕೈಕೊಟ್ಟ ಮಿಷನ್- ಆಂಬುಲೆನ್ಸ್ ನಲ್ಲೇ 1 ಗಂಟೆ ನರಳಾಡಿದ ಗರ್ಭಿಣಿ

    ಬೀದರ್: ಮರ ಕಡಿಯುವಾಗ ಮಿಷನ್ ಕೈಕೊಟ್ಟಿದ್ದರಿಂದ ಸುಮಾರು 1 ಗಂಟೆಗಳ ಕಾಲ ಗರ್ಭಿಣಿ ಆಂಬುಲೆನ್ಸ್ ನಲ್ಲೇ ನರಳಾಟ ಅನುಭವಿಸಿರುವ ಘಟನೆ ಬೀದರ್ ತಾಲೂಕಿನ ಕೌಠೌ ಗ್ರಾಮದ ಬಳಿ ನಡೆದಿದೆ.

    ಕೌಠೌ ಗ್ರಾಮದ ಬಳಿ ಇರುವ ರಾಜ್ಯ ಹೆದ್ದಾರಿಯಲ್ಲಿ ಈ ಘಟನೆ ನಡೆದಿದ್ದು, ಅರಣ್ಯ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಒಂದು ಗಂಟೆಗಳ ಕಾಲ ಆಂಬುಲೇನ್ಸ್ ನಲ್ಲಿ ಗರ್ಭಿಣಿಯ ನರಳಾಟ ಅನುಭವಿಸುವ ಪರಿಸ್ಥಿತಿ ಉಂಟಾಗಿದೆ.

    ಅರಣ್ಯ ಇಲಾಖೆಯ ಅಧಿಕಾರಿಗಳು ಮರ ಕಡಿಯುವ ಮುನ್ನ ಮುನ್ನೆಚ್ಚರಿಕೆಯಾಗಿ ಜೆಸಿಬಿ ತರದೆ ಮರ ಕಡಿಯಲು ಹೋಗಿದ್ದಾರೆ. ಆದರೆ ಮರ ಕಡಿಯುತ್ತಿದ್ದಂತೆ ಮಿಷನ್ ಕೈಕೊಟ್ಟಿದೆ. ಇದರಿಂದ ಮರ ರಸ್ತೆಗೆ ಅಡ್ಡಲಾಗಿ ಬಿದ್ದಿದೆ. ಅದೇ ಮಾರ್ಗವಾಗಿ ಗರ್ಭಿಣಿಯೊಬ್ಬರು ಆಂಬುಲೆನ್ಸ್ ನಲ್ಲಿ ಹೆರಿಗೆಗಾಗಿ ಬೀದರ್ ಜಿಲ್ಲಾಸ್ಪತ್ರೆಗೆ ಹೋಗುತ್ತಿದ್ದರು. ಆದರೆ ಅರಣ್ಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ಅರ್ಧ ಕಿಲೋಮೀಟರ್ ದೂರದ ವರೆಗೆ ಟ್ರಾಫಿಕ್ ಜಾಮ್ ಆಗಿದ್ದು, ಗರ್ಭಿಣಿ ನರಳಾಟ ಅನುಭವಿಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

    ಗರ್ಭಿಣಿಯ ನರಳಾಟ ನೋಡಿ ಸಾರ್ವಜನಿಕರು ಅರಣ್ಯ ಇಲಾಖೆಯ ಸಿಬ್ಬಂದಿಗಳ ಜೊತೆ ಕೈ ಜೋಡಿಸಿ ರಸ್ತೆಯಲ್ಲಿದ್ದ ಮರವನ್ನು ಪಕಕ್ಕೆ ಸರಿಸಿ ಆಂಬುಲೆನ್ಸ್ ಗೆ ದಾರಿ ಮಾಡಿಕೊಟ್ಟು ಮಾನವೀಯತೆ ಮರೆದಿದ್ದಾರೆ. ನಂತರ ಅರಣ್ಯ ಇಲಾಖೆಯ ಅಧಿಕಾರಿಗಳು  ಜೆಸಿಬಿ ತರಿಸಿ ರಸ್ತೆ ಕ್ಲೀನ್ ಮಾಡಿದ್ದಾರೆ.