ಚೆನ್ನೈ: ಕರಡಿ ದಾಳಿಯಿಂದ ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ತಮಿಳುನಾಡಿನ (Tamil Nadu) ತೆಂಕಶಿ ಜಿಲ್ಲೆಯಲ್ಲಿ (Tenkasi district) ನಡೆದಿದೆ.
ಮಸಾಲಾ ಪೊಟ್ಟಣಗಳನ್ನು ಹೊತ್ತುಕೊಂಡು ದ್ವಿಚಕ್ರ ವಾಹನದಲ್ಲಿ ಶಿವಶೈಲಂನಿಂದ ಪೇಠನ್‍ಪಿಳ್ಳೈಗೆ ಅರಣ್ಯ ಪ್ರದೇಶದ ಮಧ್ಯೆ ತೆರಳುತ್ತಿದ್ದ ವೇಳೆ ಕರುತಿಲಿಂಗಪುರದ ವೈಗುಂಡಮಣಿ ಅವರ ಮೇಲೆ ಕರಡಿ ದಾಳಿ ನಡೆಸಿದೆ. ಇದ್ದಕ್ಕಿದ್ದಂತೆ ಪೊದೆಯಿಂದ ಜಿಗಿದ ಕರಡಿ, ಏಕಾಏಕಿ ವ್ಯಕ್ತಿ ಮೇಲೆ ದಾಳಿ ನಡೆಸಿದೆ. ಅಲ್ಲದೇ ವ್ಯಕ್ತಿಯನ್ನು ಕೆಳಗೆ ಮಲಗಿಸಿಕೊಂಡು ಕಚ್ಚಲು ಪ್ರಾರಂಭಿಸಿದೆ. ಇದನ್ನೂ ಓದಿ: ಅಂಬೇಡ್ಕರ್ ಪ್ರತಿಮೆ ಧ್ವಂಸ – ಮಹಿಳೆಯರ ಮೇಲೆ ಪೊಲೀಸರಿಂದ ಲಾಠಿ ಚಾರ್ಜ್
ಈ ವೇಳೆ ಅರಣ್ಯ ಪ್ರದೇಶದಲ್ಲಿಯೇ ಸಂಚರಿಸುತ್ತಿದ್ದ ಗ್ರಾಮಸ್ಥರು ವ್ಯಕ್ತಿಯನ್ನು ರಕ್ಷಿಸಲು ಕರಡಿ ಮೇಲೆ ಕಲ್ಲು ಎಸೆದಿದ್ದಾರೆ. ಹೀಗಾಗಿದ್ದರೂ ಕರಡಿ ಒಂದು ಚೂರು ಕೂಡ ಕದಲಲಿಲ್ಲ. ನಂತರ ಇನ್ನಷ್ಟು ಜನ ಸೇರುತ್ತಿದ್ದಂತೆಯೇ ಗಾಬರಿಗೊಂಡ ಕರಡಿ ಜನರ ಗುಂಪಿನ ಮಧ್ಯೆ ಓಡುತ್ತಾ ನಾಗೇಂದ್ರನ್ ಮತ್ತು ಸೈಲೇಂದ್ರ ಎಂಬ ಇಬ್ಬರ ಮೇಲೆ ದಾಳಿ ನಡೆಸಿ ಗಂಭೀರವಾಗಿ ಗಾಯಗೊಳಿಸಿದೆ.
ಹೈದರಾಬಾದ್: ಟಾಲಿವುಡ್ ಯಂಗ್ ರೆಬೆಲ್ ಸ್ಟಾರ್ ಪ್ರಭಾಸ್ ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ನೀಡುವ ಮೂಲಕ ಟಾಲಿವುಡ್‍ನಲ್ಲಿ ಸಖತ್ ಹವಾ ಕ್ರಿಯೇಟ್ ಮಾಡುತ್ತಿದ್ದಾರೆ. ಅದೇ ರೀತಿ ಸಹಾಯ ಮಾಡುವ ತಮ್ಮ ಮನೋಭಾವದಿಂದಲೂ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇತ್ತೀಚೆಗೆ ತಮ್ಮ ಜಿಮ್ ಟ್ರೇನರ್‌ಗೆ ಭರ್ಜರಿ ಉಡುಗೊರೆ ನೀಡಿದ್ದರು. ಇದೀಗ ಅರಣ್ಯವನ್ನೇ ದತ್ತು ಪಡೆದುಕೊಂಡಿದ್ದಾರೆ.
ಸಾಮಾನ್ಯವಾಗಿ ಸಿನಿಮಾ ನಟರು ಆನೆ, ಸಿಂಹ, ಹುಲಿಗಳನ್ನು ದತ್ತು ಪಡೆದುಕೊಳ್ಳುತ್ತಾರೆ. ಆದರೆ ಬಾಹುಬಲಿ ಖ್ಯಾತಿಯ ಪ್ರಭಾಸ್, ಇಡೀ ಅರಣ್ಯವನ್ನೇ ದತ್ತುಪಡೆದಿದ್ದಾರೆ. ಹೈದರಾಬಾದ್ ಬಳಿಯ ಬರೋಬ್ಬರಿ 1,650 ಎಕರೆ ಕಾಜಿಪಲ್ಲಿ ಮೀಸಲು ಅರಣ್ಯವನ್ನು ದತ್ತು ಪಡೆದುಕೊಂಡಿದ್ದು, ಅಭಿವೃದ್ಧಿಪಡಿಸುವ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ.
ಅಲ್ಲದೇ ಮೀಸಲು ಅಭಿವೃದ್ಧಿಗಾಗಿ ಅರಣ್ಯ ಅಧಿಕಾರಿಗಳಿಗೆ 2 ಕೋಟಿ ರೂ. ಹಣವನ್ನೂ ಕೂಡ ನೀಡಿದ್ದಾರೆ. ಈ ವೇಳೆ ತೆಲಂಗಾಣದ ಅರಣ್ಯ ಸಚಿವ ಅಲೋಲಾ ಇಂದ್ರ ಕರಣ್ ರೆಡ್ಡಿ ಮತ್ತು ರಾಜ್ಯಸಭಾ ಸಂಸದ ಜೋಗಿನಪಲ್ಲಿ ಸಂತೋಷ್ ಕುಮಾರ್ ಉಪಸ್ಥಿತರಿದ್ದರು. ಇದೇ ವೇಳೆ ರಾಜಕೀಯ ಮುಖಂಡರ ಜೊತೆ ನಗರ ಅರಣ್ಯ ಉದ್ಯಾನಕ್ಕಾಗಿ ಪ್ರಭಾಸ್ ಅಡಿಗಲ್ಲು ಕಾರ್ಯಕ್ರಮ ನೆರವೇರಿಸಿದ್ದಾರೆ.
Our Darling #Prabhas and @MPsantoshtrs along with Forest Minister laid foundation Stone at Khazipally, Hyderabad and Adopts 1650 Acres to make an Urban Park & develop the forest area. 👏🙏 #GreenIndiaChallenge 🌲💚 pic.twitter.com/MXEo0F0Jrr
ನಟ ಪ್ರಭಾಸ್ ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಅಪ್ಲೋಡ್ ಮಾಡುವ ಮೂಲಕ ಮಾಹಿತಿ ನೀಡಿದ್ದಾರೆ. “ನಾನು ಹೈದರಾಬಾದ್ ಬಳಿಯ 1,650 ಎಕರೆ ಕಾಜಿಪಲ್ಲಿ ಮೀಸಲು ಅರಣ್ಯ ಪ್ರದೇಶವನ್ನು ದತ್ತು ಪಡೆದುಕೊಂಡು ಅಭಿವೃದ್ಧಿಪಡಿಸಲು ಮುಂದಾಗಿದ್ದೇನೆ” ಎಂದು ತಿಳಿಸಿದ್ದಾರೆ.
This forest will turn into an Urban Eco Park, that will be named after his father Shri UVS Raju garu.
Much appreciations to him for his #Bahubali gesture towards sustainable environment.
ರಾಜ್ಯಸಭಾ ಸಂಸದ ಸಂತೋಷ್ ಕುಮಾರ್ ಅವರ ಬೆಂಬಲಕ್ಕೆ ಮತ್ತು ಈ ಅವಕಾಶವನ್ನು ನೀಡಿದ ತೆಲಂಗಾಣ ಸರ್ಕಾರ ಹಾಗೂ ಅರಣ್ಯ ಇಲಾಖೆಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಜೊತೆಗೆ ಗ್ರೀನ್ ಇಂಡಿಯಾ ಚಾಲೆಂಜ್ ಎಂಬ ಹ್ಯಾಷ್‍ಟ್ಯಾಗ್ ಮೂಲಕ ಜನರಿಗೂ ಸಸಿ ನೆಡುವ, ಹಸಿರು ಸಂರಕ್ಷಿಸುವ ಸವಾಲು ಹಾಕಿದ್ದಾರೆ.
I've taken the initiative to adopt and develop 1650 acres of Kazipalli Reserve Forest. Having always been a nature lover, I believe this would create an additional lung space for the city. 🌱 #Prabhas#GreenIndiaChallengepic.twitter.com/Lo2sqFYh8l
ಕಾಜಿಪಲ್ಲಿ ಮೀಸಲು ಅರಣ್ಯ ಅಲ್ಲಿನ ಔಷಧ ಸಂಪತ್ತಿಗಾಗಿ ಖ್ಯಾತಿ ಪಡೆದುಕೊಂಡಿದೆ. ಇಲ್ಲಿ ಶೀಘ್ರದಲ್ಲಿಯೇ 1,650 ಎಕರೆ ಭೂಮಿಯಲ್ಲಿ ಪರಿಸರ ಸ್ನೇಹಿ ಪಾರ್ಕ್ ನಿರ್ಮಾಣವಾಗಲಿದೆ. ಈ ಅರಣ್ಯ ಪ್ರದೇಶದಲ್ಲಿ ಅಧಿಕ ಸಸಿಗಳನ್ನು ನೆಟ್ಟು, ಅಲ್ಲಲ್ಲಿ ಕೊಳಗಳನ್ನು ನಿರ್ಮಿಸಿ, ವನ್ಯಪ್ರಾಣಿಗಳು ಓಡಾಡುವಂತೆ ವ್ಯವಸ್ಥೆ ಕಲ್ಪಿಸುವ ಐಡಿಯಾವನ್ನು ಹಾಕಿಕೊಂಡಿದ್ದಾರೆ. ಆ ಮೂಲಕ ಈ ಅರಣ್ಯದಿಂದ ನಗರದ ಪರಿಸರವೂ ಉತ್ತಮವಾಗಲಿದೆ ಎಂಬುದು ಪ್ರಭಾಸ್ ನಂಬಿಕೆ ಆಗಿದೆ.
ರಾಮನಗರ: ಬನ್ನೇರುಘಟ್ಟ ರಾಷ್ಟ್ರೀಯ ಅರಣ್ಯ ವ್ಯಾಪ್ತಿಯಲ್ಲಿನ ಕನಕಪುರ ತಾಲೂಕಿನ ಬುಡಗಯ್ಯನದೊಡ್ಡಿ ಅರಣ್ಯ ಪ್ರದೇಶದಲ್ಲಿ ಆದಿವಾಸಿಗಳ ಶೆಡ್ ಗಳನ್ನು ತೆರವುಗೊಳಿಸಲಾಗಿದೆ.
2006ರ ಅರಣ್ಯ ಕಾಯ್ದೆಯಡಿ ಕಳೆದ ಮೂರು ತಿಂಗಳಿನಿಂದ ಅರಣ್ಯದಲ್ಲಿ ಶೆಡ್ ಗಳನ್ನು ಹಾಕಿಕೊಂಡು ಪ್ರತಿಭಟನೆ ನಡೆಸುತ್ತಿದ್ದರು. ಆದಿವಾಸಿಗಳ 76 ಕ್ಕೂ ಹೆಚ್ಚು ಶೆಡ್ ಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ತೆರವುಗೊಳಿಸಿದ್ದಾರೆ. ಅರಣ್ಯ ಪ್ರದೇಶದಲ್ಲಿ ಬುಡುಗಯ್ಯನ ದೊಡ್ಡಿ ಗ್ರಾಮದ ಇರುಳಿಗ ಬುಡಕಟ್ಟು ಸಮುದಾಯದವರು ಕಳೆದ ಮೂರು ತಿಂಗಳಿನಿಂದ ಹಕ್ಕುಪತ್ರಗಳಿಗಾಗಿ ಹೋರಾಟ ನಡೆಸುತ್ತಿದ್ದರು.
ಹಕ್ಕುಪತ್ರ ಸಿಗುವ ತನಕ ಅರಣ್ಯ ಬಿಟ್ಟು ಹೊರಬರವುದಿಲ್ಲವೆಂದು ಅರಣ್ಯದಲ್ಲಿಯೇ ಶೆಡ್ ಗಳನ್ನು ಕಟ್ಟಿಕೊಂಡು ವಾಸ ಮಾಡುತ್ತಿದ್ದರು. ಕೊರೊನಾ ವೈರಸ್ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಪ್ರತಿಭಟನೆ ಕೈ ಬಿಟ್ಟಿದ್ದ ಆದಿವಾಸಿಗಳು ಶೆಡ್ ಗಳಲ್ಲಿ ವಾಸವಾಗಿದ್ದರು. ಬುಧವಾರ ಬೆಳಗ್ಗೆ 100 ಜನ ಸಿಬ್ಬಂದಿ ಜೊತೆ ಹೋಗಿ ಶೆಡ್ ಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ತೆರವುಗೊಳಿಸಿದ್ದಾರೆ.
ಕಳೆದ ಮೂರು ತಿಂಗಳಿನಿಂದ ಸುಮ್ಮನಿದ್ದ ಅರಣ್ಯ ಇಲಾಖೆ ಅಧಿಕಾರಿ ಏಕಾಏಕಿ ಅರಣ್ಯ ಇಲಾಖೆ ಅಧಿಕಾರಿಗಳು ಶೆಡ್ ಗಳನ್ನು ತೆರವುಗೊಳಿಸಿ, ಧ್ವಂಸಗೊಳಿಸಿರುವುದು ಇರುಳಿಗರ ಆಕ್ರೋಶಕ್ಕೆ ಕಾರಣವಾಗಿದೆ.
ಕರ್ನೂಲ್: ಮದುವೆಯಾಗು ಎಂದಿದ್ದಕ್ಕೆ ಗರ್ಭಿಣಿಯನ್ನ ಆಕೆಯ ಪ್ರಿಯತಮ ಕತ್ತು ಹಿಸುಕಿ ಕೊಲೆ ಮಾಡಿರೋ ಆಘಾತಕಾರಿ ಘಟನೆಯೊಂದು ನಡೆದಿರುವ ಬಗ್ಗೆ ಬೆಳಕಿಗೆ ಬಂದಿದೆ.
ಈ ಘಟನೆ ಡೋನ್ ಮಂಡಲ್ ನ ಎರಗುಂಟ್ಲಾದಲ್ಲಿ ನವೆಂಬರ್ 20ರಂದು ನಡೆದಿದೆ. ಮೃತ ಗರ್ಭಿಣಿಯನ್ನು ರಮಿಜಬಿ ಎಂದು ಗುರುತಿಸಲಾಗಿದ್ದು, ಈಕೆಯ ತಾಯಿ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ.
ಏನಿದು ಪ್ರಕರಣ?: ಮೃತ ರಮಿಜಬಿಗೆ ಈ ಹಿಂದೆ ಮದುವೆಯಾಗಿದ್ದು, ತನ್ನ ಗಂಡನಿಂದ ವಿಚ್ಛೇದನ ಪಡೆದು, ಮಗ ಅಖಿಲ್ ಕುಮಾರ್ ಜೊತೆ ತಂದೆ-ತಾಯಿಯೊಂದಿಗೆ ವಾಸವಾಗಿದ್ದರು. ತವರು ಮನೆಯಲ್ಲಿ ವಾಸವಾಗಿದ್ದ ರಮಿಜಬಿಗೆ ಸ್ಥಳೀಯ ಬಟ್ಟೆ ಅಂಗಡಿಯಲ್ಲಿ ಕೆಲಸ ದೊರೆತಿತ್ತು. ಅಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಅಂಗಡಿ ಮಾಲೀಕನ ಮಗ ಶೇಖ್ ರಶೀದ್(22) ಜೊತೆ ಪ್ರೇಮಾಂಕುರವಾಗಿತ್ತು.
ಕೆಲ ದಿನಗಳ ಬಳಿಕ ಅಂಗಡಿ ಮಾಲೀಕನ ಮಗ ಹಾಗೂ ನಾನು ಪ್ರೀತಿಸಿದ್ದು, ಆದ್ರೆ ಇದೀಗ ಆತ ತನನ್ನನ್ನು ಮದುವೆಯಾಗಲು ನಿರಾಕರಿಸುತ್ತಿದ್ದಾನೆ ಎಂದು ಆರೋಪಿಸಿ ಮಹಿಳೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆದ್ರೆ ಹಿರಿಯರು ಮಧ್ಯಪ್ರವೇಶಿಸಿ ಪೊಲೀಸ್ ಕೇಸ್ ಇಲ್ಲದೆ ಮಾತುಕತೆ ಮೂಲಕ ಬಗೆಹರಿಸಿದ್ರು.
ಹಿರಿಯರ ಜೊತೆ ಮಾತುಕತೆ ನಡೆಸಿದ ಬಳಿಕ ರಶೀದ್ ಆಕೆಯ ಜೊತೆ ಸಂಬಂಧ ಮುಂದುವರೆಸಿದ್ದ. ಪರಿಣಾಮ ರಮಿಜಬಿ ಗರ್ಭಿಣಿಯಾದ್ರು. ತಾನು ಗರ್ಭಿಣಿ ಎಂಬ ವಿಚಾರ ತಿಳಿಯುತ್ತಿದ್ದಂತೆಯೇ ಮಹಿಳೆ ಮತ್ತೆ ರಶೀದ್ ಜೊತೆ ಮದುವೆಯ ಪ್ರಸ್ತಾಪ ಮಾಡಿದ್ದರು. ಇದನ್ನೇ ಉಪಾಯವಾಗಿ ಬಳಸಿಕೊಂಡ ರಶೀದ್, ನಾವಿಬ್ಬರು ಖಂಡಿತವಾಗಿ ಚೆನ್ನಾಗಿ ಜೀವನ ನಡೆಸೋಣ. ಹೊಸ ಜೀವನ ಆರಂಭಿಸೋಣ ಅಂತೆಲ್ಲಾ ಪೀಠಿಕೆ ಹಾಕಿ ಕಳೆದ ತಿಂಗಳ 20ರಂದು ಆಕೆಯನ್ನು ಎರಗುಂಟ್ಲಾದ ಅರಣ್ಯ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಬಳಿಕ ಶವವನ್ನು ಅಲ್ಲೇ ಹೂತು ಹಾಕಿದ್ದಾನೆ.
ಇತ್ತ ಮಗಳು ಕಾಣದಿರುವುದರಿಂದ ಆತಂಕಗೊಂಡ ತಾಯಿ, ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪೊಲೀಸರು ತನಿಖೆ ಆರಂಭಿಸಿ, ರಶೀದ್‍ನನ್ನು ಕರೆಸಿ ವಿಚಾರಣೆ ನಡೆಸಿದಾಗ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.
ಆರೋಪಿ ತಪ್ಪೊಪ್ಪಿಕೊಂಡ ಒಂದು ವಾರದ ಹಿಂದೆ ಕೊಲೆ ನಡೆದಿದ್ದು, ಪೊಲೀಸರು ಸ್ಥಳಕ್ಕೆ ತೆರಳಿ ಮೃತದೇಹ ಹೊರತೆಗೆದು ಅಲ್ಲೇ ಶವಪರೀಕ್ಷೆ ಮಾಡಿಸಿದ್ದಾರೆ. ಬಳಿಕ ಶವವನ್ನು ಅಂತ್ಯಸಂಸ್ಕಾರಕ್ಕಾಗಿ ಮಹಿಳೆ ಹೆತ್ತವರಾದ ಲಕ್ಷ್ಮೀ ದೇವಿ ಹಾಗೂ ಮಲ್ಲೇಶ್ ದಂಪತಿಗೆ ಹಸ್ತಾಂತರಿಸಿದ್ದಾರೆ.
ಚಿತ್ರಕೂಟ: ಮಧ್ಯ ಪ್ರದೇಶ ರಾಜ್ಯದ ಚಿತ್ರಕೂಟ ಜಿಲ್ಲೆಯ ಮಾನಿಕಪುರ ಬಳಿಯ ಸುವರಗಢ ಗ್ರಾಮದ ಅರಣ್ಯ ಪ್ರದೇಶದಲ್ಲಿ ಅರೆ ನಗ್ನ ಸ್ಥಿತಿಯಲ್ಲಿ ಇಬ್ಬರು ಯುವತಿಯರ ಶವ ಪತ್ತೆಯಾಗಿದೆ.
ಇಬ್ಬರು ಯುವತಿಯರ ಶವವು ಅರನಗ್ನ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ದುಷ್ಕರ್ಮಿಗಳು ಯುವತಿಯರನ್ನು ಅತ್ಯಾಚಾರಗೈದು ನಂತರ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ದುಷ್ಕರ್ಮಿಗಳು ಯುವತಿಯರ ಮುಖವನ್ನು ಕಲ್ಲಿನಿಂದ ಜಜ್ಜಿ ವಿರೂಪಗೊಳಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಯುವತಿಯರ ಮುಖ ಸಂಪೂರ್ಣ ವಿಕಾರವಾಗಿದ್ದರಿಂದ ಇಬ್ಬರ ಬಗ್ಗೆ ಮಾಹಿತಿಗಳು ಲಭ್ಯವಾಗಿಲ್ಲ. ಘಟನಾ ಸ್ಥಳಕ್ಕೆ ಡಿಐಜಿ ಜ್ಞಾನೇಶ್ವರ ತಿವಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಅರಣ್ಯ ಪ್ರದೇಶದ ಸುತ್ತಲಿನ ಗ್ರಾಮಸ್ಥರ ವಿಚಾರಣೆ ನಡೆಸುತ್ತಿದ್ದಾರೆ.
ಯುವತಿಯರ ಶವ ಪತ್ತೆಯಾದ ಸ್ಥಳದಿಂದ ಸಮೀಪದಲ್ಲಿಯೇ ಚಾಕು ಸಹ ಪತ್ತೆಯಾಗಿದೆ. ಆರೋಪಿಗಳ ಬಗ್ಗೆ ಈಗಾಗಲೇ ಸುಳಿವು ದೊರಕಿದ್ದು, ತನಿಖೆ ಚುರುಕುಗೊಂಡಿದೆ. ತನಿಖೆಯನ್ನು ಶೀಘ್ರವೇ ಪೂರ್ಣಗೊಳಿಸುವಂತೆ ಆದೇಶಿಸಲಾಗಿದೆ ಎಂದು ಜ್ಞಾನೇಶ್ವರ ತಿವಾರಿ ತಿಳಿಸಿದ್ದಾರೆ.