Tag: foreigners

  • ವಿದೇಶಿಗರ ಕ್ವಾರಂಟೈನ್‍ಗೆ ಸಿದ್ಧತೆ, ಹಳ್ಳಿಗೂ ಕೊರೊನಾ ವ್ಯಾಪಿಸುವ ಭಯ- ಗ್ರಾಮಸ್ಥರ ವಿರೋಧ

    ವಿದೇಶಿಗರ ಕ್ವಾರಂಟೈನ್‍ಗೆ ಸಿದ್ಧತೆ, ಹಳ್ಳಿಗೂ ಕೊರೊನಾ ವ್ಯಾಪಿಸುವ ಭಯ- ಗ್ರಾಮಸ್ಥರ ವಿರೋಧ

    ಬೆಂಗಳೂರು: ವಿದೇಶಿಗರನ್ನು ಗ್ರಾಮದ ಸರ್ಕಾರಿ ಶಾಲೆ ಹಾಗೂ ವಸತಿ ಶಾಲೆಗಳಲ್ಲಿ ಕ್ವಾರಂಟೈನ್ ಮಾಡಲು ಸಿದ್ಧತೆ ನಡೆಸಿದ್ದು, ಇದಕ್ಕೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ.

    ವಿದೇಶದಿಂದ ಬರುವ ಭಾರತ ಮೂಲದ ಜನರನ್ನು ಕ್ವಾರಂಟೈನ್ ಮಾಡಲು ಸರ್ಕಾರಿ ಶಾಲೆ ಹಾಗೂ ವಸತಿ ಶಾಲೆಗಳಲ್ಲಿ ವ್ಯವಸ್ಥೆ ಮಾಡಲಾಗಿದೆ. ಅಧಿಕಾರಿಗಳ ಸೂಚನೆಯಂತೆ ಬೆಂಗಳೂರು ಹೊರವಲಯದ ನೆಲಮಂಗಲ ವಿಧಾನಸಭಾ ಕ್ಷೇತ್ರದ ಸೋಲೂರು ಹೋಬಳಿಯ ನರಸಾಪುರ ಹಾಗೂ ಬಾಣವಾಡಿ ಗ್ರಾಮಗಳಲ್ಲಿ ಈಗಾಗಲೇ ಸಿದ್ಧತೆ ನಡೆಸಲಾಗಿದೆ. ಆದರೆ ಇದಕ್ಕೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

    ಕ್ವಾರಂಟೈನ್ ಕೇಂದ್ರ ಸಿದ್ಧತೆ ಮಾಡಲು ಬಂದ ಅಧಿಕಾರಿಗಳಿಗೆ ಗ್ರಾಮಸ್ಥರು ತಡೆಯೊಡ್ಡಿದ್ದಾರೆ. ನಮ್ಮ ಗ್ರಾಮಗಳಲ್ಲಿ ಮಕ್ಕಳಿದ್ದಾರೆ. ಸ್ವಾಮಿ ನಾವು ಹಳ್ಳಿ ಜನರು ಯಾಕೆ ಇಲ್ಲಿ ಕ್ವಾಂರಟೈನ್ ಹೋಮ್ ಮಾಡುತ್ತೀರಾ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಳ್ಳಿಗಳಿಗೆ ಇನ್ನೂ ಕೊರೊನಾ ಕಾಲಿಟ್ಟಿಲ್ಲ, ಹೀಗೆ ಹಳ್ಳಿಗಳಲ್ಲಿ ಕ್ವಾರಂಟೈನ್ ಮಾಡಿದರೆ ಇಲ್ಲಿಗೂ ಮಹಾಮಾರಿ ವ್ಯಾಪಿಸುತ್ತದೆ ಎಂದು ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದಾರೆ.

    ನಮ್ಮನ್ನು ನೆಮ್ಮದಿಯಿಂದ ಇರಲು ಬಿಡಿ ಎಂದು ಜನರ ಮನವಿ ಮಾಡಿದ್ದು, ವಿದೇಶಿ ಜನರ ಕ್ವಾರಂಟೈನ್‍ಗೆ ಬೇರೆ ವ್ಯವಸ್ಥೆ ಮಾಡಿಕೊಳ್ಳಿ ಎಂದು ಹಳ್ಳಿಗಾಡಿನ ಜನರ ವಿರೋಧ ಮಾಡುತ್ತಿದ್ದಾರೆ. ಅಲ್ಲದೆ ಹೀಗೆ ಮಾಡುವುದರಿಂದ ಹಳ್ಳಿ ಹಳ್ಳಿಗೆ ಕರೊನಾ ವ್ಯಾಪಿಸುತ್ತದೆ ಎಂದು ವಿರೋಧಿಸುತ್ತಿದ್ದಾರೆ.

  • ಮಸೀದಿಯಲ್ಲಿ ಅಡಗಿಕೊಂಡಿದ್ದ ಪ್ರೊಫೆಸರ್ ಸೇರಿದಂತೆ 30 ಮಂದಿ ತಬ್ಲಿಘಿಗಳು ಅರೆಸ್ಟ್

    ಮಸೀದಿಯಲ್ಲಿ ಅಡಗಿಕೊಂಡಿದ್ದ ಪ್ರೊಫೆಸರ್ ಸೇರಿದಂತೆ 30 ಮಂದಿ ತಬ್ಲಿಘಿಗಳು ಅರೆಸ್ಟ್

    – ದೆಹಲಿ ಸಭೆಗೆ ಹಾಜರಾಗಿದ್ದ ಆರೋಪಿಗಳು
    – ಬಂಧಿತರಲ್ಲಿ 16 ವಿದೇಶಿಯರು

    ಲಕ್ನೋ: ದೆಹಲಿಯಲ್ಲಿ ಕಳೆದ ತಿಂಗಳು ನಡೆದ ತಬ್ಲಿಘಿ ಜಮಾತ್ ಕಾರ್ಯಕ್ರಮಕ್ಕೆ ಹೋಗಿ ಮಸೀದಿಯಲ್ಲಿ ಬಚ್ಚಿಟ್ಟುಕೊಂಡಿದ್ದ ಅಲಹಾಬಾದ್ ವಿಶ್ವವಿದ್ಯಾಲಯದ ಪ್ರೊಫೆಸರ್, 16 ವಿದೇಶಿಯರನ್ನು ಸೇರಿದಂತೆ ಒಟ್ಟು 30 ಮಂದಿಯನ್ನು ಉತ್ತರ ಪ್ರದೇಶದ ಪೊಲೀಸರು ಬಂಧಿಸಿದ್ದಾರೆ.

    ತಬ್ಲಿಘಿ ಜಮಾತ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಪ್ರೊಫೆಸರ್ ಮೊಹಮ್ಮದ್ ಶಾಹಿದ್, ಲಾಕ್‍ಡೌನ್ ಘೋಷಿಸಿದ ನಂತರವೂ ಪ್ರಯಾಗರಾಜ್‍ನ ಮಸೀದಿಯಲ್ಲಿ ತಮ್ಮ `ಅಕ್ರಮ’ ವಾಸ್ತವ್ಯವನ್ನು ಏರ್ಪಡಿಸಿದ್ದರು. ಈ ಮೂಲಕ ವಿದೇಶಿಗರಿಗೆ ಉದ್ದೇಶಪೂರ್ವಕವಾಗಿ ಸಹಾಯ ಮಾಡಿದ್ದರು. ಹೀಗಾಗಿ ಅವರನ್ನು ಪ್ರಯಾಗರಾಜ್ ಪೊಲೀಸರು ಬಂಧಿಸಿ ಜೈಲಿಗೆ ಅಟ್ಟಿದ್ದಾರೆ.

    ತಬ್ಲಿಘಿ ಕಾರ್ಯಕ್ರಮಕ್ಕೆ ಹಾಜರಾದ ಜಮಾತಿಗಳ ಉಪಸ್ಥಿತಿಯನ್ನು ಜಿಲ್ಲಾಡಳಿತಕ್ಕೆ ತಿಳಿಸಿಲ್ಲ ಎಂಬ ಆರೋಪ ಪ್ರೊ. ಮೊಹಮ್ಮದ್ ಶಾಹಿದ್ ಮೇಲಿದೆ. ಬಂಧಿತ 16 ವಿದೇಶಿ ಪ್ರಜೆಗಳಲ್ಲಿ ಒಂಬತ್ತು ಮಂದಿ ಥೈಲ್ಯಾಂಡ್ ಮೂಲದವರು ಮತ್ತು ಆರು ಜನರು ಇಂಡೋನೇಷ್ಯಾದವರು ಎಂಬ ಮಾಹಿತಿ ಪೊಲೀಸರಿಗೆ ಲಭಿಸಿದೆ. ಅಷ್ಟೇ ಅಲ್ಲದೆ ಬಂಧಿತ ಆರೋಪಿಗಳಲ್ಲಿ ಕೇರಳ ಮತ್ತು ಪಶ್ಚಿಮ ಬಂಗಾಳದ ತಲಾ ಒಬ್ಬರಿದ್ದಾರೆ.

    ಪೊಲೀಸ್ ಮೂಲಗಳ ಪ್ರಕಾರ, ಎಲ್ಲಾ ಜಮಾತಿಗಳು ಶಹಗಂಜ್‍ನ ಅಬ್ದುಲ್ಲಾ ಮಸೀದಿ ಮತ್ತು ಪ್ರಯಾಗರಾಜ್‍ನ ಕರೇಲಿ ಪ್ರದೇಶದ ಹೇರಾ ಮಸೀದಿಯೊಳಗೆ ಅಡಗಿಕೊಂಡಿದ್ದರು. ಹೆಚ್ಚಿನ ತನಿಖೆಯಲ್ಲಿ ಎಲ್ಲಾ ವಿದೇಶಿಯರು, ವಿಶೇಷವಾಗಿ ಇಂಡೋನೇಷಿಯನ್ನರು ಪ್ರವಾಸಿ ವೀಸಾ ಪಡೆದು ಭಾರತಕ್ಕೆ ಭೇಟಿ ನೀಡಿದ್ದರೂ ಧಾರ್ಮಿಕ ಉಪದೇಶದಲ್ಲಿ ತೊಡಗಿದ್ದಾರೆ ಎಂದು ತಿಳಿದುಬಂದಿದೆ.

    ಆರೋಪಿಗಳಿಗೆ ಪ್ರಯಾಗರಾಜ್‍ಗೆ ಭೇಟಿ ನೀಡಲು ಅನುಮತಿ ಇರಲಿಲ್ಲ. ಆದರೂ ಅವರು ನಗರಕ್ಕೆ ಭೇಟಿ ನೀಡಿದ್ದಷ್ಟೇ ಅಲ್ಲದೆ ಮಸೀದಿಯಲ್ಲಿ ಅಡಗಿಕೊಂಡಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

    ಈ ಸಂಬಂಧ ಶಹಗಂಜ್ ಪೊಲೀಸ್ ಠಾಣೆಯಲ್ಲಿ ಎಲ್ಲಾ ವಿದೇಶಿಯರು ಮತ್ತು ಪ್ರೊಫೆಸರ್ ಶಾಹಿದ್ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದೆ. ಈವರೆಗೆ ಪ್ರಯಾಗರಾಜ್‍ನಲ್ಲಿ ಕೇವಲ ಒಂದು ಕೋವಿಡ್-19 ಸೋಂಕಿತರಿದ್ದು, ಚಿಕಿತ್ಸೆಯ ನಂತರ ರೋಗಿಯನ್ನು ಡಿಸ್ಚಾರ್ಜ್ ಮಾಡಲಾಗಿದೆ. ಆದರೆ ಉತ್ತರ ಪ್ರದೇಶದಲ್ಲಿ ಶೇಕಡಾ 79ರಷ್ಟು ಕೊರೊನಾ ವೈರಸ್ ರೋಗಿಗಳು ತಬ್ಲಿಘಿ ಜಮಾತ್‍ಗೆ ಸಂಬಂಧಿಸಿದವರೇ ಆಗಿದ್ದಾರೆ.

  • ತಡರಾತ್ರಿ ವಿದೇಶದಿಂದ ಬಂದ 6 ಮಂದಿ ಆಸ್ಪತ್ರೆಗೆ ದಾಖಲು

    ತಡರಾತ್ರಿ ವಿದೇಶದಿಂದ ಬಂದ 6 ಮಂದಿ ಆಸ್ಪತ್ರೆಗೆ ದಾಖಲು

    ಬೆಂಗಳೂರು: ಮಂಗಳವಾರ ತಡರಾತ್ರಿಯಿಂದ ಇಂದು ಮಧ್ಯಾಹ್ನದವರೆಗೂ ವಿದೇಶದಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ 285 ಪ್ರಯಾಣಿಕರಲ್ಲಿ 6 ಮಂದಿಗೆ ಶಂಕಿತ ಕೊರೊನಾ ಸೋಂಕಿತ ಲಕ್ಷಣಗಳು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಪ್ರಯಾಣಿಕರನ್ನು ರಾಜೀವ್ ಗಾಂಧಿ ಎದೆರೋಗ ಆಸ್ಪತ್ರೆಗೆ ರವಾನಿಸಲಾಗಿದೆ.

    ಏರ್ ಪೋರ್ಟಿಗೆ ವಿದೇಶಗಳಿಂದ ಆಗಮಿಸುವ ಎಲ್ಲಾ ಪ್ರಯಾಣಿಕರನ್ನು ವಿಮಾನ ನಿಲ್ದಾಣದಿಂದ ಬಿಎಂಟಿಸಿ ಬಸ್ ಗಳ ಮೂಲಕ ನೇರವಾಗಿ ದೇವನಹಳ್ಳಿಯ ಆಕಾಶ್ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಕರೆತಂದು ತಪಾಸಣೆಗೆ ಒಳಪಡಿಸಲಾಗುತ್ತದೆ. ಹೀಗಾಗಿ ತಡರಾತ್ರಿ ಏರ್ ಫ್ರಾನ್ಸ್ ವಿಮಾನದಲ್ಲಿ ಬಂದ 119 ಮಂದಿಯಲ್ಲಿ ಮೂವರಿಗೆ ಶಂಕಿತ ಕೊರೊನಾ ಸೋಂಕಿತ ಲಕ್ಷಣಗಳು ಕಂಡುಬಂದಿದ್ದವು.

    ಹೀಗಾಗಿ ತಡರಾತ್ರಿ ಏರ್ ಫ್ರಾನ್ಸ್ ವಿಮಾನದಲ್ಲಿ ಬಂದ 119 ಮಂದಿಯಲ್ಲಿ ಮೂವರಿಗೆ ಶಂಕಿತ ಕೋರೋನಾ ಸೋಂಕಿತ ಲಕ್ಷಣಗಳು ಕಂಡುಬಂದಿದ್ದವು. ತದನಂತರ ಬಂದ ಜರ್ಮನಿಯಿಂದ ಹಾಗೂ ದುಬೈ ವಿಮಾನದಲ್ಲಿ ಮತ್ತೆ ಮೂವರಿಗೆ ಶಂಕಿತ ಕೋರೋನಾ ಸೋಂಕಿನ ಲಕ್ಷಣಗಳು ಕಂಡುಬಂದಿವೆ. ಹೀಗಾಗಿ ಇಂದು ಒಟ್ಟು 6 ಮಂದಿಯನ್ನ ಶಂಕಿತ ಪ್ರಕರಣಗಳ ಎ ಕ್ಯಾಟೆಗೆರಿ ಅಂತ ಪರಿಗಣಿಸಿ ರಾಜೀವ್ ಗಾಂಧಿ ಆಸ್ಪತ್ರೆಗೆ ಕಳುಹಿಸಲಾಗಿದೆ.

    ಒಟ್ಟಾರೆ 285 ಮಂದಿಯಲ್ಲಿ 6 ಮಂದಿ ಎ ಕ್ಯಾಟಿಗೆರಿಯವರಾಗಿದ್ದು ಅಂದ್ರೆ ಶಂಕಿತ ಪ್ರಕರಣಗಾಳಾಗಿದ್ದು, 05 ಮಂದಿ ಯನ್ನ ಬಿ ಕ್ಯಾಟಗೆರಿಯಲ್ಲಿ ವಿಂಗಡನೆ ಮಾಡಿ ಅವರನ್ನ ಬೆಂಗಳೂರಿನ ಈಸ್ಟ್ ಪಾಯಿಂಟ್ ಆಸ್ಪತ್ರೆಗೆ ಕಳುಹಿಸಲಾಗಿದೆ. ಉಳಿದ 274 ಮಂದಿ ಪ್ರಯಾಣಿರನ್ನ ಬಿಡಗುಗಡೆ ಮಾಡಿ ಮನೆಗಳಿಗೆ ಕಳುಹಿಸಲಾಗಿದ್ದು, ಹೋಂ ಕ್ವಾರಂಟೈನ್ ನಲ್ಲಿರಲು ಸೂಚಿಸಲಾಗಿದೆ.

    ಈ ಸಂಬಂಧ ಆಕಾಶ್ ಆಸ್ಪತ್ರೆಯಲ್ಲಿನ ಸೌಲಭ್ಯಗಳ ಬಗ್ಗೆ ಸಂಪೂರ್ಣ ಪರಿಶೀಲನೆ ನಡೆಸಿ ಮಾಧ್ಯಮಗಳೊಂದಿಗೆ ಮಾತನಾಡಿದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಧಿಕಾರಿ ರವೀಂದ್ರ, ಗ್ರಾಮಾಂತರ ಜಿಲ್ಲೆಯಲ್ಲಿ ಇದುವರೆಗೂ ಯಾವುದೇ ಪಾಸಿಟಿವ್ ಕೇಸ್ ಪತ್ತೆಯಾಗಿಲ್ಲ, ಆದರೆ ಏರ್ ಪೋರ್ಟ್ ಇರುವ ಕಾರಣ ವಿದೇಶಗಳಿಂದ ಆಗಮಿಸುವ ಎಲ್ಲಾ ಪ್ರಯಾಣಿಕರನ್ನ ತಪಾಸಣೆಗೆ ಒಳಪಡಿಸಲಾಗುತ್ತಿದೆ.

    ಎಲ್ಲಾ ಮುಂಜಾಗ್ರತಾ ಕ್ರಮಗಳನ್ನ ಕೈಗೊಳ್ಳಲಾಗುತ್ತಿದ್ದು ಸಾರ್ವಜನಿಕರು ಯಾವುದೇ ರೀತಿಯ ಆತಂಕಪಡಬೇಡಿ ಅಂತ ಮನವಿ ಮಾಡಿದರು. ಆಕಾಶ್ ಆಸ್ಪತ್ರೆಯ ತಪಾಸಣೆ ಕೇಂದ್ರದಲ್ಲಿ ಇದುವರೆಗೂ 406 ಮಂದಿಯನ್ನ ತಪಾಸಣೆಗೆ ಒಳಪಡಸಲಾಗಿದ್ದು, ತಪಾಸಣೆಗೆ ಒಳಪಡುವ ಪ್ರಯಾಣಿಕರಿಗೆ ಎಲ್ಲಾ ರೀತಿಯ ಸೌಲಭ್ಯಗಳನ್ನ ಒದಗಿಸಲಾಗುತ್ತಿದೆ ಎಂದರು.

  • ಕೇರಳದ ಬೀದಿ ನಾಯಿಯನ್ನು ಸ್ವಿಟ್ಜರ್ಲ್ಯಾಂಡ್‌ಗೆ ಕರ್ಕೊಂಡು  ಹೋಗ್ತಿದ್ದಾರೆ ವಿದೇಶಿಗರು

    ಕೇರಳದ ಬೀದಿ ನಾಯಿಯನ್ನು ಸ್ವಿಟ್ಜರ್ಲ್ಯಾಂಡ್‌ಗೆ ಕರ್ಕೊಂಡು ಹೋಗ್ತಿದ್ದಾರೆ ವಿದೇಶಿಗರು

    ತಿರುವನಂತಪುರಂ: ಕೇರಳದ ಮುನ್ನಾರಿನಲ್ಲಿ ನೋಡಿದ ಬೀದಿ ನಾಯಿಯನ್ನು ವಿದೇಶಿಗರು ತಮ್ಮ ಜೊತೆ ಸ್ವಿಟ್ಜರ್ಲ್ಯಾಂಡ್‌ಗೆ ಕರೆದುಕೊಂಡು ಹೋಗಲಿದ್ದಾರೆ.

    ಜಾನ್ ಹಾಗೂ ಎಲನ್ ಸ್ವಿಟ್ಜರ್ಲ್ಯಾಂಡ್‌ ದೇಶದಲ್ಲಿ ವಾಸಿಸುತ್ತಾರೆ. ಜಾನ್ ಹಾಗೂ ಎಲನ್ ಈ ನಾಯಿಯನ್ನು ನೋಡಿದ್ದು, ಇಬ್ಬರಿಗೂ ಅದು ಇಷ್ಟವಾಗಿದೆ. ಅಲ್ಲದೆ ಎಷ್ಟು ದಿನ ಮುನ್ನಾರಿನಲ್ಲಿ ಇರುತ್ತೇವೋ ಅಷ್ಟು ದಿನ ಈ ನಾಯಿಯನ್ನು ಚೆನ್ನಾಗಿ ನೋಡಿಕೊಳ್ಳೋಣ ಎಂದು ನಿರ್ಧರಿಸಿದ್ದಾರೆ.

    ಮೂರು ದಿನಗಳ ಕಾಲ ನಾಯಿಯನ್ನು ನೋಡಿಕೊಂಡ ಬಳಿಕ ಇಬ್ಬರಿಗೂ ಅದರ ಮೇಲೆ ಪ್ರೀತಿ ಆಗಿದೆ. ಹಾಗಾಗಿ ಇಬ್ಬರು ಆ ನಾಯಿಯನ್ನು ದತ್ತು ಪಡೆದು ತಮ್ಮ ಜೊತೆ ಸ್ವಿಟ್ಜರ್ಲ್ಯಾಂಡ್‌ಗೆ ಕರೆದುಕೊಂಡು ಹೋಗಲು ಮುಂದಾಗಿದ್ದಾರೆ.

    ಜಾನ್ ಹಾಗೂ ಎಲನ್ ಈ ನಾಯಿಗೆ ‘ನೇನಿ’ ಎಂದು ಹೆಸರಿಟ್ಟಿದ್ದಾರೆ. ಅಲ್ಲದೆ ಅದಕ್ಕೆ ಪ್ರತಿನಿತ್ಯ ಸ್ನಾನ ಮಾಡಿಸಿ ಊಟವನ್ನು ತಿನ್ನಿಸುತ್ತಾರೆ. ಅಷ್ಟೇ ಅಲ್ಲದೆ ನಾಯಿಯನ್ನು ಗುರುತಿಸಲು ಜಾನ್ ಹಾಗೂ ಎಲನ್ ಅದಕ್ಕೆ ಮೈಕ್ರೋಚಿಪ್ ಕೂಡ ಹಾಕಿದ್ದಾರೆ.

    ಸದ್ಯ ನಾಯಿಯನ್ನು ಕರೆದುಕೊಂಡು ಹೋಗಲು ಬೇಕಾದ ದಾಖಲೆಗಳನ್ನು ಜಾನ್ ಹಾಗೂ ಎಲನ್ ಸಿದ್ಧಪಡಿಸುತ್ತಿದ್ದಾರೆ. ಅಲ್ಲದೆ ನೇನಿಯ ಕೆಲವು ವೈದ್ಯಕೀಯ ಪರೀಕ್ಷೆಗಳು ನಡೆಯಲಿದೆ. ವೈದ್ಯಕೀಯ ಪರೀಕ್ಷೆ ನಡೆದ ನಂತರ ಜಾನ್ ಹಾಗೂ ಎಲನ್ ‘ನೇನಿ’ಯನ್ನು ಸ್ವಿಟ್ಜರ್ಲ್ಯಾಂಡ್‌ಗೆ ಕರೆದುಕೊಂಡು ಹೋಗಲಿದ್ದಾರೆ.

  • ಮೈಸೂರಿನಲ್ಲಿ ಗೋಪೂಜೆ ಮಾಡಿ ಸಂಕ್ರಾಂತಿ ಆಚರಿಸಿದ ವಿದೇಶಿಗರು

    ಮೈಸೂರಿನಲ್ಲಿ ಗೋಪೂಜೆ ಮಾಡಿ ಸಂಕ್ರಾಂತಿ ಆಚರಿಸಿದ ವಿದೇಶಿಗರು

    ಮೈಸೂರು: ಇಂದು ರಾಜ್ಯದೆಲ್ಲೆಡೆ ಸಡಗರ ಸಂಭ್ರಮದಿಂದ ಸಂಕ್ರಾಂತಿ ಹಬ್ಬವನ್ನು ಆಚರಿಸಲಾಗುತ್ತಿದೆ. ಅದರಲ್ಲೂ ಸಾಂಸ್ಕೃತಿಕ ನಗರಿಯಲ್ಲಿ ನಡೆದ ಮಕರ ಸಂಕ್ರಾಂತಿ ಸಂಭ್ರಮದಲ್ಲಿ ವಿದೇಶಿಗರು ಭಾಗಿಯಾಗಿದ್ದು ವಿಶೇಷವಾಗಿತ್ತು.

    ಮೈಸೂರಿನ ಕೋಟೆ ಆಂಜನೇಯ ಸ್ವಾಮಿ ದೇವಾಲಯದ ಮುಂಭಾಗ ಗೋಪೂಜೆ ಮಾಡುವ ಮೂಲಕ ಸಂಕ್ರಾಂತಿ ಆಚರಿಸಲಾಯಿತು. ವಿದೇಶಿಗರು ಭಾರತೀಯ ಸಂಪ್ರದಾಯದಂತೆ ಗೋಪೂಜೆ ಮಾಡಿ ಗೋಮಾತೆ ನಮಿಸಿದ್ದು ವಿಶೇಷವಾಗಿತ್ತು. ಇದೇ ವೇಳೆ ಗೋವುಗಳಿಗೆ ಪೂಜೆ ಮಾಡಿ ಫಲತಾಂಬುಲ ಕೂಡ ನೀಡಿದರು. ಜೊತೆಗೆ ಭತ್ತದ ರಾಶಿ, ನೇಗಿಲು, ಎತ್ತಿನ ಗಾಡಿ ಪರಿಕರಗಳಿಗೂ ಪೂಜೆ ಸಲ್ಲಿಸಿದರು.

    ಭಾರತೀಯ ಗೋಪರಿವಾರ ಸಂಘ ಹಾಗೂ ಹನುಮ ಜಯಂತೋತ್ಸವ ಸಮಿತಿಯಿಂದ ಈ ಕಾರ್ಯಕ್ರಮ ನಡೆದಿದ್ದು, ಕಾರ್ಯಕ್ರಮದಲ್ಲಿ ಭಾಗಿಯಾಗಿ ವಿದೇಶಿಗರು ಸಂತಸ ವ್ಯಕ್ತಪಡಿಸಿದರು.

  • ವಿದೇಶಿಯರ ಮೋಜಿ ಮಸ್ತಿಗಾಗಿ ಆನೆಗೊಂದಿಯಲ್ಲಿ ಅನಧಿಕೃತ ರೆಸಾರ್ಟ್ ಆರಂಭ

    ವಿದೇಶಿಯರ ಮೋಜಿ ಮಸ್ತಿಗಾಗಿ ಆನೆಗೊಂದಿಯಲ್ಲಿ ಅನಧಿಕೃತ ರೆಸಾರ್ಟ್ ಆರಂಭ

    ಕೊಪ್ಪಳ: ಜಿಲ್ಲಾಡಳಿತದ ವಿರೋಧದ ನಡುವೆಯೂ ಗಂಗಾವತಿ ತಾಲೂಕಿನ ಆನೆಗೊಂದಿ ಭಾಗದಲ್ಲಿ ಅನಧಿಕೃತ ರೆಸಾರ್ಟ್ ಸಂಖ್ಯೆ ಹೆಚ್ಚುತ್ತಿದ್ದು, ಹೊಸ ವರ್ಷಕ್ಕಾಗಿ ಬರೋಬ್ಬರಿ 13 ರೆಸಾರ್ಟ್‍ಗಳು ವಹಿವಾಟು ನಡೆಸಲು ಸಜ್ಜಾಗಿವೆ.

    ವಿದೇಶಿಗರ ಮೋಜಿ ಮಸ್ತಿಗಾಗಿ ರೂಪುಗೊಂಡ ತಾಲೂಕಿನ ವಿರುಪಾಪುರಗಡ್ಡಿ ರೆಸಾರ್ಟ್‍ಗಳು ವೀಕೆಂಡ್ ಪ್ರಿಯರಿಗೆ ಮಸ್ತ್ ಜಾಗವಾಗಿದೆ. ಗಡ್ಡಿಯೊಂದರಲ್ಲಿ 33 ರೆಸಾರ್ಟ್‍ಗಳು ವೀಕೆಂಡ್ ಗೆ ಅತಿಥ್ಯ ನೀಡುತ್ತಿವೆ. ಇತ್ತೀಚಿಗೆ ಸಂಭವಿಸಿದ ಪ್ರವಾಹ ಪರಿಸ್ಥಿತಿ ಸಂದರ್ಭದಲ್ಲಿ ರೆಸಾರ್ಟ್‍ಗಳಿಗೆ ಕಡಿವಾಣ ಹಾಕಲು ಜಿಲ್ಲಾಡಳಿತ ಕಸರತ್ತು ನಡೆಸಿದರೂ ಸ್ಥಳೀಯ ಅಧಿಕಾರಿಗಳ ಅಸಹಕಾರದಿಂದ ಪ್ರಯೋಜನವಾಗಿಲ್ಲ. ರೆಸಾರ್ಟ್ ಕತೆ ಮುಗಿತು ಎನ್ನುವಷ್ಟರಲ್ಲಿ ಗಡ್ಡಿ ಹೊರಭಾಗದಲ್ಲಿ ರೆಸಾರ್ಟ್‍ಗಳು ನಿರ್ಮಾಣಗೊಂಡಿದ್ದು, ಹೊರ ಜಿಲ್ಲೆ ಉದ್ಯಮಿಗಳು ಕಾಲಿಟ್ಟಿದ್ದಾರೆ. ಪಟ್ಟಾ ಭೂಮಾಲೀಕರಿಗೆ ಸೀಮಿತವಾಗಿದ್ದ ಮೋಜು ಮಸ್ತಿ ಜಾಗಕ್ಕೀಗ ಹೊರಗಿನವರು ಲಗ್ಗೆ ಹಾಕಿದ್ದು, ಪೈಪೋಟಿ ವಹಿವಾಟುವಿಗೆ ಹಳೇ ಉದ್ಯಮಿಗಳು ಸುಸ್ತಾಗಿದ್ದಾರೆ.

    ಸಣಾಪುರ, ಹನುಮನಹಳ್ಳಿ, ಆನೆಗೊಂದಿ, ಜಂಗ್ಲಿ, ಅಂಜನಾದ್ರಿ ಬೆಟ್ಟ, ಚಿಕ್ಕರಾಂಪುರ ಬಳಿ ಅನಧಿಕೃತ ರೆಸಾರ್ಟ್‍ಗಳು ತಲೆ ಎತ್ತಿದ್ದು, ಬಳ್ಳಾರಿ, ರಾಯಚೂರು ಮತ್ತು ಗೋವಾ ಮೂಲದ ಉದ್ಯಮಿಗಳು ಗುತ್ತಿಗೆ ಆಧಾರದಡಿ ಜಾಗ ಪಡೆದು ರೆಸಾರ್ಟ್ ನಿರ್ಮಿಸುತ್ತಿದ್ದಾರೆ. ರೆಸಾರ್ಟ್‍ಗಳಿಂದ ಸರ್ಕಾರಕ್ಕೆ ನಯಾಪೈಸೆ ಆದಾಯವಿಲ್ಲ. ಹಂಪಿ ಪ್ರಾಧಿಕಾರ ಮತ್ತು ಕಂದಾಯ ಇಲಾಖೆ ಅನುಮತಿ ಬೇಕಿಲ್ಲ. ಹೀಗಾಗಿ ಅನಧಿಕೃತ ರೆಸಾರ್ಟ್‍ಗಳಿಗೆ ಕಡಿವಾಣವಿಲ್ಲದಂತಾಗಿದ್ದು, ಮೋಜು ಮಸ್ತಿಗೆ ತಡೆಯಬೇಕಿದ್ದ ಪೊಲೀಸರು ಆಸಕ್ತಿವಹಿಸುತ್ತಿಲ್ಲ. ಪಟ್ಟಾ ಭೂಮಿಯೊಂದಿಗೆ ಸರ್ಕಾರಿ ಭೂಮಿ ಒತ್ತುವರಿಯಾಗಿದ್ದರೂ ಕೇಳುವರಿಲ್ಲ. ಉತ್ಸವದ ವೇದಿಕೆ ಕೂಗಳತೆಯಲ್ಲಿ ರೆಸಾರ್ಟ್ ನಿರ್ಮಾಣವಾಗಿದ್ದರೂ ತಾಲೂಕು ಆಡಳಿತದ ಗಮನಕ್ಕಿಲ್ಲ.

    ರೆಸಾರ್ಟ್‍ಗಳನ್ನು ಅರಣ್ಯ ಭೂಮಿಯಲ್ಲಿ ನಿರ್ಮಿಸಿದ್ದು, ಬೃಹತ್ ಕಲ್ಲು ಬಂಡೆಗಳಿಗೆ ಹೊಂದಿಕೊಂಡು ನಿರ್ಮಿಸಿದ್ದರೂ ಅರಣ್ಯ ಇಲಾಖೆ ಗಮನಹರಿಸಿಲ್ಲ. ವಿಎನ್‍ಸಿ ಕಾಲುವೆ ನೀರನ್ನು ರೆಸಾರ್ಟಿನತ್ತ ಬರುವ ರೀತಿಯಲ್ಲಿ ಸೋರಿಕೆ ವ್ಯವಸ್ಥೆ ಮಾಡಿದ್ದರೂ ನೀರಾವರಿ ಇಲಾಖೆ ನೋಡುತ್ತಿಲ್ಲ. ಅರಣ್ಯ ಒತ್ತುವರಿಯಾಗಿರುವುದು ರೆಸಾರ್ಟ್‍ಗಳಿಂದ ಗೊತ್ತಾದರೂ ಕ್ರಮ ಕೈಗೊಳ್ಳದಿರುವುದು ಅನುಮಾನಕ್ಕೆ ಕಾರಣವಾಗಿದೆ. ಪೈಪೋಟಿ ಉದ್ಯಮಿ ಹಿನ್ನೆಲೆಯಲ್ಲಿ ಬಹುತೇಕ ರೆಸಾರ್ಟ್‍ಗಳು ಗುತ್ತಿಗೆ ಆಧಾರದಡಿ ನಡೆಯುತ್ತಿದ್ದು, ಮಾಲೀಕರು ಮೆಟ್ರೋಪಾಲಿಟಿನ್ ಸಿಟಿ ಸೇರಿದ್ದಾರೆ. ಹೊರಗಿನಿಂದ ಬಂದ ವಹಿವಾಟುಗಾರರಿಗೆ ಸ್ಥಳೀಯ ನೈಸರ್ಗಿಕ ಸಂಪನ್ಮೂಲ ಹಾಳು ಮಾಡುತ್ತಿದ್ದು, ಮೋಜು ಮಸ್ತಿ ಹೆಸರಿನಲ್ಲಿ ಸಂಸ್ಕೃತಿ ನಾಶ ಮಾಡುತ್ತಿದ್ದಾರೆ.

  • ಬಿಜೆಪಿ ಶಾಸಕರ ಆಪ್ತನ ಮಗನ ವಿರುದ್ಧ ಕೇಸ್ ದಾಖಲಿಸಲು ಖಾಕಿ ಹಿಂದೇಟು

    ಬಿಜೆಪಿ ಶಾಸಕರ ಆಪ್ತನ ಮಗನ ವಿರುದ್ಧ ಕೇಸ್ ದಾಖಲಿಸಲು ಖಾಕಿ ಹಿಂದೇಟು

    – ಪೊಲೀಸರ ಮೇಲೆ ಒತ್ತಡ ಹೇರಿದ್ರಾ ಶಾಸಕರು?
    – ವಿದೇಶಿಗರ ಬ್ಯಾಗ್ ಎಗರಿಸುತ್ತಿದ್ದ 16ರ ಪೋರ

    ಕೊಪ್ಪಳ: ವಿದೇಶಿಗರ ಬ್ಯಾಗ್ ಕದ್ದು ಓಡುತ್ತಿದ್ದ ಚೈಲ್ಡ್ ಗ್ಯಾಂಗ್ ಅನ್ನು ಹಿಡಿದ ಸ್ಥಳೀಯರು ವಿಡಿಯೋ ಮಾಡಿದ ಘಟನೆ ಗಂಗಾವತಿ ತಾಲೂಕಿನಲ್ಲಿ ನಡೆದಿದೆ. ಆದರೆ ಮೂವರ ಕಳ್ಳರ ಪೈಕಿ ಓರ್ವ ಬಿಜೆಪಿಯ ಪ್ರಮುಖ ಮುಖಂಡರೊಬ್ಬರ ಮಗನಾಗಿದ್ದಾನೆ.

    ಗಂಗಾವತಿ ತಾಲೂಕಿನ ಸಣಾಪುರದಲ್ಲಿ ಘಟನೆ ನೆಡದಿದೆ. ಆದರೆ ಸೂಕ್ತ ಸಾಕ್ಷಿಗಳಿದ್ದರೂ ಪೊಲೀಸರು ಶಾಸಕ ಪರಣ್ಣ ಮುನವಳ್ಳಿ ಆಪ್ತ, ಸ್ಥಳೀಯ ಬಿಜೆಪಿ ಮುಖಂಡ ದೇವಪ್ಪ ಕಾಮದೊಡ್ಡಿ ಅವರ ಮಗನ ವಿರುದ್ಧ ಪ್ರಕರಣ ದಾಖಲಿಸಲು ಹಿಂದೇಟು ಹಾಕುತ್ತಿದ್ದಾರೆ. ಈ ವಿಚಾರವಾಗಿ ಭಾರೀ ಟೀಕೆ ವ್ಯಕ್ತವಾಗಿದೆ.

    ಸಣಾಪುರ ಇದು ವಿದೇಶಿಗರ ನೆಚ್ಚಿನ ತಾಣ. ಇಲ್ಲಿ ತುಂಗಭದ್ರಾ ಎಡದಂಡೆಯ ಕಾಲುವೆ ನೀರಿನಿಂದ ಬೃಹತ್ ಕೆರೆ ನಿರ್ಮಾಣವಾಗಿದೆ. ಹಾಗಾಗಿ ಕೆರೆಯಲ್ಲಿ ಈಜಲು ಸಾಕಷ್ಟು ಸಂಖ್ಯೆಯಲ್ಲಿ ವಿದೇಶಿ ಪ್ರವಾಸಿಗರು ಬರುತ್ತಾರೆ. ಹೀಗೆ ಬರುವ ವಿದೇಶಿಯರು ತಮ್ಮ ಬ್ಯಾಗ್‍ಗಳನ್ನು ಕೆರೆಯ ದಂಡೆ ಮೇಲೆ ಇಟ್ಟು ಈಜಲು ಹೊಗುತ್ತಾರೆ. ಈ ವೇಳೆ ಚೈಲ್ಡ್ ಗ್ಯಾಂಗ್ ತಮ್ಮ ಕೈಚಳಕ ತೊರಿಸಿ, ಬ್ಯಾಗ್‍ಗಳನ್ನು ಪರಾರಿಯಾಗುತ್ತಿದ್ದರು.

    ಚೈಲ್ಡ್ ಗ್ಯಾಂಗ್‍ನ ಈ ಕೃತ್ಯದಿಂದಾಗಿ ಸಣಾಪುರ ಪ್ರವಾಸಿ ತಾಣಕ್ಕೆ ಕೆಟ್ಟ ಹೆಸರು ಬರುತ್ತಿದೆ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದರು. ಜೊತೆಗೆ ಕಳ್ಳರನ್ನು ಹಿಡಿಯಲು ಮುಂದಾಗಿದ್ದರು. ಕೆಲ ದಿನಗಳ ಹಿಂದಷ್ಟೇ ಚೈಲ್ಡ್ ಗ್ಯಾಂಗ್ ವಿದೇಶಿ ಪ್ರವಾಸಿಗರ ಗ್ಯಾಗ್ ಕದ್ದು ಓಡುತ್ತಿದ್ದಾಗ ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದಿತ್ತು. ಸ್ಥಳೀಯರು ಕಳ್ಳ ಹುಡುಗರನ್ನು ಹಿಡಿದು ಥಳಿಸಿ ಬುದ್ಧಿ ಹೇಳಿದ್ದಾರೆ. ಅಷ್ಟೇ ಅಲ್ಲದೆ ತಮ್ಮ ಕಳ್ಳರ ವಿಳಾಸ ಪಡೆಯುತ್ತಿರುವ ದೃಶ್ಯವನ್ನು ತಮ್ಮ ಮೊಬೈಲ್‍ನಲ್ಲಿ ಸೆರೆ ಹಿಡಿದು ಪೊಲೀಸರಿಗೆ ನೀಡಿದ್ದಾರೆ.

    ಕಳ್ಳತನದ ವಿಡಿಯೋ ತಮ್ಮ ಕೈಗೆ ಸಿಕ್ಕಿದ್ದರೂ ಗಂಗಾವತಿ ಗ್ರಾಮೀಣ ಠಾಣೆಯ ಪೊಲೀಸರು ಯಾವುದೇ ಪ್ರಕರಣ ದಾಖಲಿಸಿಕೊಂಡಿಲ್ಲ. ಆಪ್ತನ ಮಗನೇ ಕಳ್ಳತನ ಮಾಡಿರುವುದರಿಂದ ಶಾಸಕರು ಪ್ರಕರಣ ದಾಖಲಿಸದಂತೆ ಪೊಲೀಸರ ಮೇಲೆ ಒತ್ತಡ ಹಾಕಿದ್ದಾರಾ ಎನ್ನುವ ಅನುಮಾನಗಳು ಸಾರ್ವಜನಿಕರಲ್ಲಿ ಮೂಡಿವೆ.

  • ವೇಶ್ಯಾವಾಟಿಕೆಯ ಸ್ಪಾ ಸೆಂಟರ್‌ಗಳ ಮೇಲೆ ದಾಳಿ- ವಿದೇಶಿಗರು ಸೇರಿ 35 ಜನರ ಬಂಧನ

    ವೇಶ್ಯಾವಾಟಿಕೆಯ ಸ್ಪಾ ಸೆಂಟರ್‌ಗಳ ಮೇಲೆ ದಾಳಿ- ವಿದೇಶಿಗರು ಸೇರಿ 35 ಜನರ ಬಂಧನ

    ನೊಯ್ಡಾ: ವೇಶ್ಯಾವಾಟಿಕೆ ನಡೆಸುತ್ತಿದ್ದ 14 ಸ್ಪಾ ಸೆಂಟರ್ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿ 25 ಮಹಿಳೆಯರೂ ಸೇರಿದಂತೆ ಒಟ್ಟು 35 ಜನರನ್ನು ನೊ0ಯ್ಡಾ ಪೊಲೀಸರು ಬಂಧಿಸಿದ್ದಾರೆ. ಬಂಧಿತರಲ್ಲಿ ಬಹುತೇಕರು ಥೈಲ್ಯಾಂಡ್‍ನವರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ದಾಳಿಯಲ್ಲಿ 25 ಮಹಿಳೆಯರು ಹಾಗೂ 10 ಪುರುಷರು ಸೇರಿದಂತೆ ಒಟ್ಟು 35 ಜನರನ್ನು ಬಂಧಿಸಲಾಗಿದ್ದು, ಒಂದು ಲಕ್ಷ ರೂ. ನಗದು, ಬೀಯರ್, ಕಾಂಡೋಮ್‍ಗಳು ಸೇರಿದಂತೆ ವಿವಿಧ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. 14 ಸ್ಪಾ ಸೆಂಟರ್ ಗಳ ಪೈಕಿ ಮೂರು ಸೆಂಟರ್ ನಲ್ಲಿ ಸೆಕ್ಸ್ ರ್ಯಾಕೆಟ್ ದಂಧೆ ನಡೆಸಲಾಗುತ್ತಿತ್ತು. ಉಳಿದ 11 ಸೆಂಟರ್ ಗಳು ನಿಯಮಗಳನ್ನು ಉಲ್ಲಂಘಿಸಿವೆ.

    ಹಿರಿಯ ಎಸ್‍ಪಿ ವೈಭವ್ ಕೃಷ್ಣಾ ಅವರ ನೇತೃತ್ವದಲ್ಲಿ ಮಹಿಳಾ ಪೇದೆಗಳು ಸೇರಿದಂತೆ ಪೊಲೀಸರು ಸಂಜೆ ಸೆಕ್ಟರ್ 18ರ ಕಮರ್ಶಿಯಲ್ ಹಬ್ ಬಳಿಯ 14 ಸ್ಪಾ ಸೆಂಟರ್ ಮೇಲೆ ದಾಳಿ ನಡೆಸಲಾಗಿತ್ತು. 14 ಜನ ಪೊಲೀಸರ ತಂಡದಲ್ಲಿ 7 ಸರ್ಕಲ್ ಇನ್ಸ್‍ಪೆಕ್ಟರ್, 8 ಸ್ಟೇಷನ್ ಹೌಸ್ ಅಧಿಕಾರಿಗಳು, 30 ಸಬ್ ಇನ್ಸ್‍ಪೆಕ್ಟರ್ಸ್ ಹಾಗೂ ಪೇದೆಗಳನ್ನೊಳಗೊಂಡ ತಂಡ ಕಾರ್ಯಾಚರಣೆ ನಡೆಸಿದೆ ಎಂದು ಗೌತಮ ಬುದ್ಧ ನಗರದ ಎಸ್‍ಪಿ ವಿನೀತ್ ಜೈಸ್ವಾಲ್ ತಿಳಿಸಿದ್ದಾರೆ.

  • ಬೆಂಗ್ಳೂರಲ್ಲಿ  ಗೆಳೆಯನನ್ನು ಅಟ್ಟಾಡಿಸಿಕೊಂಡು ಗೂಸ ಕೊಟ್ಟ ಯುವತಿ

    ಬೆಂಗ್ಳೂರಲ್ಲಿ ಗೆಳೆಯನನ್ನು ಅಟ್ಟಾಡಿಸಿಕೊಂಡು ಗೂಸ ಕೊಟ್ಟ ಯುವತಿ

    ಬೆಂಗಳೂರು: ರಸ್ತೆಯಲ್ಲಿ ವಿದೇಶಿ ಪ್ರೇಮಿಗಳಿಬ್ಬರು ರಂಪಾಟ ಮಾಡುತ್ತ, ಗೆಳೆಯನನ್ನು ಅಟ್ಟಾಡಿಸಿಕೊಂಡು ಯುವತಿ ಹೊಡೆದು ಹೈಡ್ರಾಮ ಮಾಡಿರುವ ಘಟನೆ ಸಿಲಿಕಾನ್ ಸಿಟಿಯ ರೇಸ್ ಕೋರ್ಸ್ ರಸ್ತೆಯಲ್ಲಿ ಇಂದು ನಡೆದಿದೆ.

    ವಿದೇಶಿ ಪ್ರೇಮಿಗಳ ಬೀದಿ ಗುದ್ದಾಟಕ್ಕೆ ಮೂಕ ಪ್ರೇಕ್ಷಕರಾದ ಜನ ನೋಡುತ್ತ ನಿಂತಿದ್ದರು. ಯುವತಿ ಕಾಲಿನಿಂದ ಒದ್ದರೂ, ಬಾಟಲಿಯಿಂದ ಹೊಡೆದರೂ ಯುವಕ ಮಾತ್ರ ಸುಮ್ಮನೆ ನಿಂತಿದ್ದ. ಇದನ್ನು ನೋಡಿ ಜನರು ಏನಪ್ಪ ಹಿಂಗೆ ಗುದ್ದಾಡುತ್ತಾ ಇದ್ದಾರೆ ಅಂತ ದಂಗಾಗಿ ನೋಡುತ್ತ ನಿಂತಿದ್ದರು.

    ರಸ್ತೆಯಲ್ಲಿ ಜಗಳವಾಡುತ್ತ ಇಂತಿದ್ದ ಯುವತಿಗೆ ಯುವಕ ಮನವೊಲಿಸಲು ಪ್ರಯತ್ನ ಮಾಡಿದ್ದಾನೆ. ಆದ್ರೆ ಯುವತಿ ಮಾತ್ರ ರೊಚ್ಚಿಗೆದ್ದು ಆತನಿಗೆ ಹೊಡೆದಿದ್ದಕ್ಕೆ, ಕೊನೆಗೆ ಅಲ್ಲಿಂದ ಓಡಿ ಹೋಗಿ ಯುವಕ ಪರಾರಿಯಾಗಿದ್ದಾನೆ.

    https://www.youtube.com/watch?v=KLJXfREX9rc

  • ಹಂಪಿಯಲ್ಲಿ ಹರಕೆ ತೀರಿಸಿದ ವಿದೇಶಿಗರು

    ಹಂಪಿಯಲ್ಲಿ ಹರಕೆ ತೀರಿಸಿದ ವಿದೇಶಿಗರು

    ಬಳ್ಳಾರಿ: ಮೂವರು ವಿದೇಶಿಗರು ಹಿಂದೂ ದೇವರನ್ನು ನಂಬಿ ವಿಶ್ವಪ್ರಸಿದ್ಧ ಹಂಪಿಯ ಶ್ರೀ ವಿರುಪಾಕ್ಷೇಶ್ವರ ದೇವಸ್ಥಾನಕ್ಕೆ ಇಂದು ಆಗಮಿಸಿ ತಮ್ಮ ಹರಕೆ ತೀರಿಸಿದ್ದಾರೆ.

    ಫ್ರಾನ್ಸ್ ದೇಶದಿಂದ ಪ್ರವಾಸಕ್ಕೆ ಆಗಮಿಸಿರುವ ಉಂಬೆರ್ಟೋ, ಜೀನ್ ಲುಕಾಸ್ ಮತ್ತು ಜೀನ್ ಎನ್ನುವ ಮೂವರು ವಿದೇಶಿಗರು ಇಂದು ಅತ್ಯಂತ ಶ್ರದ್ಧಾಭಕ್ತಿಯಿಂದ ಹಿಂದೂ ಸಂಪ್ರದಾಯದಂತೆ ಶ್ವೇತವಸ್ತ್ರ ಧರಿಸಿ, ತುಂಗಭದ್ರ ನದಿಯಲ್ಲಿ ಸ್ನಾನ ಮಾಡಿ ಶ್ರೀ ವಿರುಪಾಕ್ಷನ ದರ್ಶನ ಪಡೆದಿದ್ದಾರೆ. ಶ್ರೀ ವಿರುಪಾಕ್ಷನಿಗೆ ತಾವು ಅಂದುಕೊಂಡಿದ್ದ ಹರಕೆ ತೀರಿಸಲು 20 ಸಾವಿರ ಮೌಲ್ಯದ ಬೆಳ್ಳಿ ನಾಗಪ್ಪ ಹಾಗೂ ಎರಡು ಹಿತ್ತಾಳೆ ದೀಪಗಳನ್ನು ದೇವಸ್ಥಾನಕ್ಕೆ ಸಲ್ಲಿಸಿದ್ದಾರೆ.

    ಈ ವೇಳೆ ದೇವಸ್ಥಾನದ ಅರ್ಚಕರಾದ ಶೇಷುಸ್ವಾಮಿ, ಪ್ರಶಾಂತ ಪೂಜಾರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಹರಕೆ ಕಾಣಿಕೆ ವಸ್ತುಗಳನ್ನು ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಬಿ. ಶ್ರೀನಿವಾಸ್ ದೇವಸ್ಥಾನದ ಪರವಾಗಿ ಸ್ವೀಕರಿಸಿದರು.

    ತಾವು ಅಂದುಕೊಂಡಿದ್ದು ಜರುಗಲಿ ಎಂದು ತಮ್ಮ ಸ್ನೇಹಿತರು ಹೇಳಿದಂತೆ ಶ್ರೀ ವಿರುಪಾಕ್ಷನಿಗೆ ನಾವು ಹರಕೆ ತೀರಿಸಿದ್ದೇವೆ. ನಾವು ಹಿಂದೂ ಸಂಪ್ರದಾಯವನ್ನು ಗೌರವಿಸುತ್ತೇವೆ. ನಾವು ಪುಟ್ಟಪರ್ತಿ ಸಾಯಿಬಾಬಾ ಭಕ್ತರು. ಪ್ರತಿವರ್ಷವೂ ಭಾರತಕ್ಕೆ ಬರುತ್ತೇವೆ. ಹಾಗೆಯೇ ಈ ವರ್ಷವು ಬಂದು ಹಂಪಿಯ ಲಕ್ಷಾಂತರ ಭಕ್ತರಂತೆ ನಾವು ಹರಕೆ ತೀರಿಸಿದ್ದೇವೆ ಎಂದು ವಿದೇಶಿ ಭಕ್ತರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv