Tag: foreign

  • ಸ್ವಿಟ್ಜರ್ಲ್ಯಾಂಡ್‌ಗೆ ತೆರಳಲು ಬಿಎಸ್‍ವೈ ಭರ್ಜರಿ ತಯಾರಿ

    ಸ್ವಿಟ್ಜರ್ಲ್ಯಾಂಡ್‌ಗೆ ತೆರಳಲು ಬಿಎಸ್‍ವೈ ಭರ್ಜರಿ ತಯಾರಿ

    ಬೆಂಗಳೂರು: ಮುಖ್ಯಮಂತ್ರಿಯಾದ ಬಳಿಕ ಮೊದಲ ಬಾರಿಗೆ ಬಿ.ಎಸ್ ಯಡಿಯೂರಪ್ಪ ಅವರು ವಿದೇಶ ಪ್ರವಾಸಕ್ಕೆ ಹೊರಟು ನಿಂತಿದ್ದಾರೆ.

    ಜನವರಿ ತಿಂಗಳಲ್ಲಿ ಸಿಎಂ ವರು ಕೇಂದ್ರ ಸರ್ಕಾರದ ಅಧಿಕೃತ ಆಹ್ವಾನದ ಮೇರೆಗೆ ಸ್ವಿಟ್ಜರ್ಲ್ಯಾಂಡ್ ದೇಶಕ್ಕೆ 5 ದಿನಗಳ ಕಾಲ ಪ್ರವಾಸ ಹೊರಡುತ್ತಿದ್ದಾರೆ. ಸಿಎಂ, ಸರ್ಕಾರಿ ಕೆಲಸದ ನಿಮಿತ್ತ ಜನವರಿ 21ರಿಂದ 25ರವರೆಗೆ 5 ದಿನಗಳ ಕಾಲ ಸ್ವಿಟ್ಜರ್ಲ್ಯಾಂಡ್ ಪ್ರವಾಸಕ್ಕೆ ತೆರಳುತ್ತಿದ್ದಾರೆ.

    ಜನವರಿ ತಿಂಗಳಿನಲ್ಲಿ ಹೇಳಿ ಕೇಳಿ ಚಳಿ ಹೆಚ್ಚು ಇರಲಿದೆ. ಅದರಲ್ಲೂ ಈ ಸಮಯದಲ್ಲಿ ಸ್ವಿಟ್ಜರ್ಲ್ಯಾಂಡ್ ನಲ್ಲಿ ತಾಪಮಾನ 2 ರಿಂದ 7 ಡಿಗ್ರಿ ಸೆಲ್ಸಿಯಸ್ ನಷ್ಟು ಇದೆ. ಹಾಗಾಗಿ ಸಿಎಂ ಯಡಿಯೂರಪ್ಪ ಸ್ವಿಟ್ಜರ್ಲ್ಯಾಂಡ್ ಚಳಿ ತಡೆದುಕೊಳ್ಳಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಇದಕ್ಕಾಗಿ ಬೆಚ್ಚನೆಯ ಉಡುಪುಗಳನ್ನು ತರಿಸಿಕೊಂಡಿದ್ದಾರೆ. ತಲೆಗೆ ಬೆಚ್ಚನೆಯ ಟೋಪಿ, ಸ್ವೆಟರ್, ಜಾಕೆಟ್, ಕೈ ಕಾಲುಗಳಿಗೆ ಗ್ಲೌಸ್ ಗಳನ್ನು ಸಿಎಂಗಾಗಿ ಖರೀದಿಸಲಾಗಿದೆ.

    ಸ್ವಿಟ್ಜರ್ಲ್ಯಾಂಡ್ ನ ಡಾವೋಸ್ ನಲ್ಲಿ ವಿಶ್ವ ಆರ್ಥಿಕ ವೇದಿಕೆ ವಾರ್ಷಿಕ ಸಭೆ ನಡೆಯಲಿದೆ. ಕೇಂದ್ರ ಸರ್ಕಾರದ ಸಚಿವರ ಜೊತೆಯಲ್ಲಿ ಮೂರು ರಾಜ್ಯಗಳ ಮುಖ್ಯಮಂತ್ರಿಗಳನ್ನು ಸಭೆಗೆ ಆಹ್ವಾನಿಸಲಾಗಿದೆ. 100ಕ್ಕೂ ಹೆಚ್ಚು ಕಂಪನಿಗಳ ಸಿಇಒಗಳು ಕೂಡ ಭಾಗವಹಿಸಲಿದ್ದಾರೆ. ಸಭೆಗೆ ಮಧ್ಯಪ್ರದೇಶ, ಪಂಜಾಬ್ ಮತ್ತು ಕರ್ನಾಟಕ ರಾಜ್ಯಗಳ ಮುಖ್ಯಮಂತ್ರಿಗಳನ್ನು ಆಹ್ವಾನಿಸಲಾಗಿದೆ.

    ಅಪರೂಪಕ್ಕೆ ವಿದೇಶ ಪ್ರವಾಸ:
    ಮುಖ್ಯಮಂತ್ರಿ ಯಡಿಯೂರಪ್ಪರಿಗೆ ವಿದೇಶ ಪ್ರವಾಸ ಅಂದ್ರೆ ಅಷ್ಟಕ್ಕಷ್ಟೇ. ಇದೂವರೆಗೆ 2-3 ಬಾರಿ ಮಾತ್ರ ಯಡಿಯೂರಪ್ಪ ವಿದೇಶ ಪ್ರವಾಸ ಮಾಡಿದ್ದಾರೆ ಅಷ್ಟೇ. 2011ರ ಜುಲೈ ತಿಂಗಳಲ್ಲಿ ಮುಖ್ಯಮಂತ್ರಿ ಆಗಿದ್ದಾಗ 6 ದಿನಗಳ ಕಾಲ ಯಡಿಯೂರಪ್ಪ ಮಾರಿಷಸ್ ದೇಶಕ್ಕೆ ಪ್ರಯಾಣ ಮಾಡಿದ್ದರು. ಮಕ್ಕಳು, ಮೊಮ್ಮಕ್ಕಳ ಜೊತೆ ಯಡಿಯೂರಪ್ಪ ಮಾರಿಷಸ್ ನಲ್ಲಿ ಕಳೆದು ಬಂದಿದ್ದರು.

  • ಮೈಸೂರು ಹುಡ್ಗಿ ಕೈ ಹಿಡಿದ ನೆದರ್‌ಲ್ಯಾಂಡ್ ಹುಡ್ಗ

    ಮೈಸೂರು ಹುಡ್ಗಿ ಕೈ ಹಿಡಿದ ನೆದರ್‌ಲ್ಯಾಂಡ್ ಹುಡ್ಗ

    ಮೈಸೂರು: ನೆದರ್‌ಲ್ಯಾಂಡ್ ಹುಡುಗ ಹಾಗೂ ಮೈಸೂರು ಹುಡುಗಿ ನಡುವೆ ಪ್ರೀತಿ ಹುಟ್ಟಿದ್ದು, ಈ ಪ್ರೀತಿಗೆ ದೇಶ, ಭಾಷೆ, ಸಂಸ್ಕೃತಿ, ಜಾತಿ ಯಾವುದು ಅಡ್ಡಿಯಾಗಿಲ್ಲ. ಹೀಗಾಗಿ ಇವರು ಇಂದು ಮೈಸೂರಿನಲ್ಲಿ ಹಿಂದೂ ಸಂಪ್ರದಾಯದಂತೆ ಸಪ್ತಪದಿ ತುಳಿದರು.

    ಮೈಸೂರಿನ ವಕೀಲರಾದ ಸುಮನಾ ಮತ್ತು ರಾಮರವೀಂದ್ರ ಅವರ ಪುತ್ರಿ ಅನು, ನೆದರ್‌ಲ್ಯಾಂಡ್ ನ ರೆನೆ ವ್ಯಾನ್ ಬೋರ್ಗೆಟ್ ಅವರನ್ನು ಇಂದು ಮದುವೆಯಾದರು. ನೆದರ್‌ಲ್ಯಾಂಡ್‌ಗೆ ಎಲ್‌ಎಲ್‌ಎಂ(ಲ್ಯಾಟಿನ್ ಲೆಗಮ್ ಮ್ಯಾಜಿಸ್ಟರ್) ವ್ಯಾಸಂಗಕ್ಕೆ ತೆರಳಿದ್ದ ಅನು ಅಲ್ಲಿ ಪರಿಚಯವಾದ ರೆನೆ ಅವರನ್ನು ಪ್ರೀತಿಸಿ ಇಂದು ತಮ್ಮ ಪೋಷಕರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

    ಅನು ತಮ್ಮ ಪ್ರೀತಿ ಶುರುವಾದ ಮೇಲೆ ಪ್ರಿಯಕರ ರೆನೆ ವ್ಯಾನ್ ಗೆ ಕನ್ನಡ ಮಾತಾಡುವುದನ್ನು ಕಲಿಸಿದ್ದಾರೆ. ರೆನೆ ಒಂದೆರಡು ಕನ್ನಡ ವ್ಯಾಕ್ಯಗಳನ್ನು ಮಾತಾಡುತ್ತಾರೆ. ರೆನೆ ಅವರ ಪೋಷಕರು ಕೂಡ ಒಂದೆರಡು ಪದ ಕನ್ನಡ ಕಲಿತಿದ್ದಾರೆ. ಹೀಗಾಗಿ ವಿದೇಶಿ ನೆಂಟರು ಕನ್ನಡ ಕಲಿತು ಕನ್ನಡದಲ್ಲೆ ಮಾತಾಡುತ್ತಿದ್ದ ದೃಶ್ಯಗಳು ಮದುವೆ ಮನೆಯಲ್ಲಿ ಕಂಡು ಬಂತು.

    ಈ ಮದುವೆಯಲ್ಲಿ ಲಿಂಗ ತಾರತಮ್ಯ ಸಾರುವ ಸಂಪ್ರದಾಯ ದೂರವಿಟ್ಟು ಪೂಜೆಗಳ ನಡೆಸಲಾಯಿತು. ಭತ್ತ ಕುಟ್ಟುವುದು, ಮೆಹೆಂದಿ ಶಾಸ್ತ್ರ, ಹೋಳಿ, ಅರಿಶಿನ ಹಚ್ಚುವ ಶಾಸ್ತ್ರ, ಗೌರಿ ಪೂಜೆ ಹೀಗೆ ಹಲವು ಸಂಪ್ರದಾಯದೊಂದಿಗೆ ಮದುವೆ ನಡೆಯಿತು. ಪೋಲ್ಯಾಂಡ್, ಅಮೆರಿಕಾ, ಸ್ಪೇನ್, ಜರ್ಮನಿ, ನೆದರ್‌ಲ್ಯಾಂಡ್ ಮುಂತಾದ ದೇಶಗಳಿಂದ ಬಂದಿದ್ದ 40 ಜನರು ಈ ಆಚರಣೆಗಳನ್ನು ಬೆರಗು ಗಣ್ಣಿನಿಂದ ನೋಡುತ್ತಿದ್ದರು.

  • ಜೀವಿತಾವಧಿಯಲ್ಲಿ 5 ಬಾರಿ ವಿಮಾನ ಪ್ರಯಾಣ – ಸರಳತೆಗೆ ಮತ್ತೊಂದು ಹೆಸರೇ ‘ನಡೆದಾಡುವ ದೇವರು’

    ಜೀವಿತಾವಧಿಯಲ್ಲಿ 5 ಬಾರಿ ವಿಮಾನ ಪ್ರಯಾಣ – ಸರಳತೆಗೆ ಮತ್ತೊಂದು ಹೆಸರೇ ‘ನಡೆದಾಡುವ ದೇವರು’

    ತುಮಕೂರು: ಸಿದ್ದಗಂಗಾ ಶ್ರೀಗಳು ವಿಮಾನ ಪ್ರಯಾಣಕ್ಕೆ ಒಲ್ಲೆ ಎಂದು ಹೇಳುತ್ತಿದ್ದರು. ಹೀಗಾಗಿ ತಮ್ಮ ಜೀವಿತಾವಧಿಯಲ್ಲಿ ಒಂದು ಬಾರಿಯೂ ವಿದೇಶ ಪ್ರವಾಸ ಕೈಗೊಂಡಿರಲಿಲ್ಲ.

    ಶ್ರೀಗಳು ಸನ್ಯಾಸ ದೀಕ್ಷೆ ಪಡೆದು ಸುಮಾರು 89 ವರ್ಷಗಳ ಕಾಲ ಕಳೆದಿದ್ದಾರೆ. ಶ್ರೀಗಳು ಎಷ್ಟು ಸರಳವಾಗಿದ್ದರು ಎಂದರೆ ತಮಗೆ ಗ್ರಾಮೀಣ ಜನರ ಒಡನಾಟವೇ ಸಾಕೆಂದು ಮಠ, ಹಳ್ಳಿ ಕಡೆ ಹೆಚ್ಚಾಗಿ ಪ್ರಯಾಣಿಸುತ್ತಿದ್ದರು. ವಿದೇಶದಲ್ಲಿದ್ದ ಭಕ್ತರು ಎಷ್ಟೇ ಕರೆದರೂ ಶ್ರೀಗಳು ವಿಮಾನ ಪ್ರಯಾಣಕ್ಕೆ ಹಿಂದೇಟು ಹಾಕುತ್ತಿದ್ದರು.

    ಶ್ರೀಗಳು ಧಾರ್ಮಿಕ ಕಾರ್ಯಕ್ರಮಗಳ ಸಲುವಾಗಿ ದೆಹಲಿ, ಮುಂಬೈ ಮತ್ತು ಚೆನ್ನೈನಂತಹ ನಗರಗಳಿಗೆ ಹೋಗಿದ್ದಾರೆ. ಆದರೆ ವಿದೇಶ ಪ್ರಯಾಣ ಎಂದೂ ಮಾಡಲಿಲ್ಲ. ಅವರು 20ನೇ ಶತಮಾನದ ಆರಂಭದಲ್ಲಿ ಎತ್ತಿನಗಾಡಿ, ಕುದುರೆದಾರೋಟು, ರೈಲಿನಲಷ್ಟೇ ಪ್ರಯಾಣಿಸುತ್ತಿದ್ದರು. 70ರ ದಶಕದ ನಂತರ ಶ್ರೀಗಳು ಕಾರು, ವಿಮಾನ, ಹೆಲಿಕಾಪ್ಟರ್ ನನ್ನು ಹತ್ತಿದ್ದರು.

    ಐದು ಬಾರಿ ಮಾತ್ರ ವಿಮಾನ ಪ್ರಯಾಣ!
    ಶ್ರೀಗಳು ತಮ್ಮ ಜೀವಿತಾವಧಿಯಲ್ಲಿ ಕೇವಲ ಐದಾರು ಬಾರಿ ಮಾತ್ರ ವಾಯು ಮಾರ್ಗದಲ್ಲಿ ಸಂಚರಿಸಿದ್ದರು. ಒಮ್ಮೆ ಮೈಸೂರು ದಸರಾ ಉತ್ಸವದ ಉದ್ಘಾಟನೆಗೆ ಹೆಲಿಕಾಪ್ಟರ್ ನಲ್ಲಿ ಹೋಗಿದ್ದರು. ಬಳಿಕ ದಾವಣಗೆರೆಗೆ ಹೋಗಿದ್ದರು. ನವದೆಹಲಿಯ ಸುತ್ತೂರು ಮಠದ ಕಾರ್ಯಕ್ರಮ ನಡೆಯುತ್ತಿತ್ತು. ಕಾರ್ಯಕ್ರಮದಲ್ಲಿ ಭಾಗವಹಿಸಲು ವಿಮಾನದಲ್ಲಿ ಹೋಗಿದ್ದರು. ಕೊನೆಯದಾಗಿ ಶ್ರೀಗಳು ಚಿಕಿತ್ಸೆಗಾಗಿ ಏರ್ ಆಂಬುಲೆನ್ಸ್ ನಲ್ಲಿ ಚೆನ್ನೈಗೆ ಹೋಗಿ ಬಂದಿದ್ದರು. ಇದು ಬಿಟ್ಟು ಬೇರೆ ಎಲ್ಲೂ ಶ್ರೀಗಳು ವಿಮಾನ ಪ್ರಯಾಣ ಮಾಡಲಿಲ್ಲ.

    ದೂರದ ಬೀದರ್ ಗೆ ಹೋಗಬೇಕಾದರೂ ಅವರು ಕಾರಿನಲ್ಲಿ ಹೋಗುತ್ತಿದ್ದರು. ಅಷ್ಟು ಸರಳ ಜೀವನವನ್ನು ಶ್ರೀಗಳು ನಡೆಸುತ್ತಿದ್ದರು. ಶ್ರೀಗಳು ಕಾರಿನಲ್ಲೂ ಯಾವುದೇ ಬೆಂಗಾವಲು ಪಡೆಯಿಲ್ಲದೆ, ಕಾರಿಗೆ ನಾಮಫಲಕವನ್ನು ಹಾಕಿಕೊಳ್ಳದೇ ಸಂಚರಿಸುತ್ತಿದ್ದರು. ಶ್ರೀಗಳು ಮಠ ತೊರೆದು ಬೇರೆ ಕಡೆಗೆ ತೆರಳಿದರೂ ನಿತ್ಯದ ಇಷ್ಟಲಿಂಗ ಪೂಜೆಯನ್ನು ಮಾತ್ರ ತಪ್ಪಿಸುತ್ತಿರಲಿಲ್ಲ. ಅನಾರೋಗ್ಯದಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದರೂ ಇಷ್ಟಲಿಂಗ ಪೂಜೆ ಮಾಡುತ್ತಿದ್ದರು.

    https://www.youtube.com/watch?v=WTHN3QhN8Zg

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಗಂಡ ಫಾರಿನ್‍ನಲ್ಲಿ, ಹೆಂಡ್ತಿ ಪಕ್ಕದ್ಮನೆಯವನ ತೆಕ್ಕೆಯಲ್ಲಿ!

    ಗಂಡ ಫಾರಿನ್‍ನಲ್ಲಿ, ಹೆಂಡ್ತಿ ಪಕ್ಕದ್ಮನೆಯವನ ತೆಕ್ಕೆಯಲ್ಲಿ!

    – ಸಿಟ್ಟಿಗೆದ್ದವ ಪತ್ನಿ ಮಕ್ಕಳ ಕೊಂದು ತಾನೂ ಸತ್ತ!

    ಕಪುರ್ತಲ (ಪಂಜಾಬ್): ವಿದೇಶದಿಂದ ವಾಪಸ್ಸಾದ ಐದು ಗಂಟೆಯಲ್ಲೇ ಪತಿರಾಯನೊಬ್ಬ ಬೆಂಕಿ ಹಚ್ಚಿ ಪತ್ನಿ ಹಾಗೂ ಮಕ್ಕಳನ್ನು ಸಾಯಿಸಿ, ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾಲಸಂಘಿಯಾನ್ ನಲ್ಲಿ ನಡೆದಿದೆ. ಪತ್ನಿಗಿದ್ದ ಅಕ್ರಮ ಸಂಬಂಧವೇ ಘಟನೆಗೆ ಕಾರಣ ಎನ್ನಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

    ಘಟನೆಗೆ ಕಾರಣವೇನು?:
    ಜಲಂಧರ್ ನ ಕಪುರ್ತಲ ಜಿಲ್ಲೆಯ ಆಲಂಗೀರ್ ಮೊಹಲ್ಲಾದ ಕುಲ್ವಿಂದರ್ ಸಿಂಗ್ ಗೆ ಮನ್‍ದೀಪ್ ಕೌರ್ ಜೊತೆ ವಿವಾಹವಾಗಿತ್ತು. ಈ ದಾಂಪತ್ಯಕ್ಕೆ ಸಾಕ್ಷಿಯಾಗಿ ಇಬ್ಬರು ಮಕ್ಕಳು ಕೂಡಾ ಹುಟ್ಟಿದ್ದರು. ಆದರೆ ಗಂಡ ವಿದೇಶಕ್ಕೆ ತೆರಳಿದ್ದ ವೇಳೆ ಅದೇ ನಗರದ ಗುರುಪ್ರೀತ್ ಸಿಂಗ್ ಅಲಿಯಾಸ್ ಸನ್ನಿ ಎಂಬಾತನ ಜೊತೆ ಪತ್ನಿಗೆ ಲವ್ವಿ ಡವ್ವಿ ಶುರುವಾಗಿದೆ. ಇವರಿಬ್ಬರ ಪ್ರಣಯದಾಟ ಮೊಬೈಲಿನಲ್ಲಿ ಸೆರೆಯಾಗಿದೆ. ಅಲ್ಲದೆ ಈ ವೀಡಿಯೋ ಮಾಡಿದವರು ಇದನ್ನು ಪರಸ್ಪರ ಹಂಚಿಕೊಂಡಿದ್ದರು.

    ಜೋರ್ಡಾನ್ ನಲ್ಲಿದ್ದ ಕುಲ್ವಿಂದರ್ ಗೆ ಯಾರೋ ಫೋನ್ ಮಾಡಿ ನಿಮ್ಮ ಪತ್ನಿ ಅಕ್ರಮ ಸಂಬಂಧವಿಟ್ಟುಕೊಂಡಿದ್ದಾಳೆ. ಇದರ ವೀಡಿಯೋ ಕೂಡಾ ಇದೆ. ಇದನ್ನೇ ಮುಂದಿಟ್ಟುಕೊಂಡು ಸನ್ನಿ, ಆತನ ತಾಯಿ ಹಾಗೂ ಇನ್ನಿಬ್ಬರು ನಿಮ್ಮ ಪತ್ನಿಯನ್ನು ಬ್ಲ್ಯಾಕ್ ಮೇಲ್ ಮಾಡ್ತಿದ್ದಾರೆ ಎಂದು ತಿಳಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ರೊಚ್ಚಿಗೆದ್ದ ಪತಿ ಯಾರಿಗೂ ಮಾಹಿತಿ ನೀಡದೇ ವಿದೇಶದಿಂದ ಬುಧವಾರ ವಾಪಸ್ಸಾಗಿದ್ದಾನೆ. ರಾತ್ರಿ 11 ಗಂಟೆಗೆ ಮನೆಗೆ ವಾಪಸ್ಸಾದ ವೇಳೆಯೇ ಈ ವಿಚಾರದಲ್ಲಿ ಪತಿ ಪತ್ನಿ ಇಬ್ಬರ ನಡುವೆ ಜಗಳ ಶುರುವಾಗಿದೆ. ಇದು ಪತ್ನಿ ಹಾಗೂ ಮಕ್ಕಳ ಕೊಲೆಯಲ್ಲಿ ಅಂತ್ಯವಾಗಿದೆ.

    ಪೊಲೀಸರು ಹೇಳಿದ್ದೇನು?:
    ಘಟನೆ ಬಗ್ಗೆ ವಿವರ ನೀಡಿದ ಪೊಲೀಸರು, ಗುರುವಾರ ಬೆಳಗಿನ ಜಾವ 4 ಗಂಟೆಯ ಸುಮಾರಿಗೆ ಕುಲ್ವಿಂದರ್ ಈ ಕೃತ್ಯವೆಸಗಿದ್ದಾನೆ. ಕುಲ್ವಿಂದರ್ ಹಾಗೂ 5 ವರ್ಷದ ಪುತ್ರ ಸ್ಥಳದಲ್ಲೇ ಸಾವನ್ನಪ್ಪಿದರೆ, 8 ವರ್ಷದ ಪುತ್ರಿ ಕಪುರ್ತಲ ಆಸ್ಪತ್ರೆಯಲ್ಲಿ ಸಾವನ್ನಪಿದ್ದಾಳೆ. ಪತ್ನಿಯನ್ನು ಜಲಂಧರ್ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಪೊಲೀಸರ ಮುಂದೆ ಹೇಳಿಕೆ ನೀಡಿದ ಕೆಲವೇ ಹೊತ್ತಿನಲ್ಲಿ ಮನ್‍ದೀಪ್ ಕೂಡಾ ಸಾವನ್ನಪ್ಪಿದ್ದಾಳೆ ಎಂದು ತಿಳಿಸಿದ್ದಾರೆ.

    ಅಶ್ಲೀಲ ವೀಡಿಯೋ ಮುಂದಿಟ್ಟುಕೊಂಡು ಸನ್ನಿ ಮತ್ತೆ ಸೆಕ್ಸ್ ಗೆ ಸಹಕರಿಸುವಂತೆ ಆಹ್ವಾನಿಸಿದ್ದಾನೆ. ಈ ವಿಷಯವನ್ನು ನಾನು ನನ್ನ ಪತಿಗೆ ತಿಳಿಸಿದಾಗ ಅವರು ಸಿಟ್ಟಾಗಿದ್ದಾರೆ. ಇದಾದ ಬಳಿಕ ನಾವೆಲ್ಲಾ ಮಲಗಿದ್ದೆವು. ಈ ವೇಳೆ ನನ್ನ ಪತಿ ಕುಲ್ವಿಂದರ್ ನಮ್ಮ ಮೇಲೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾರೆ. ಜೊತೆಗೆ ತಮಗೂ ಬೆಂಕಿ ಹಚ್ಚಿಕೊಂಡಿದ್ದಾರೆ ಎಂದು ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ಮನ್‍ದೀಪ್ ಕೌರ್ ತಿಳಿಸಿದ್ದಾಳೆ.

    ಪಕ್ಕದ ಕೊಠಡಿಯಲ್ಲೇ ಮಲಗಿದ್ದ ಕುಲ್ವಿಂದರ್ ಸೋದರಿ ಜಸ್ವಿಂದರ್ ಕೌರ್ ಗೆ ಎಲ್ಲರ ಅರಚಾಟ, ನರಳಾಟ ಕೇಳಿಸಿದೆ. ಇವರ ರಕ್ಷಣೆಗೆ ಮುಂದಾಗಿದ್ದ ಜಸ್ವಿಂದರ್ ಗೂ ಸುಟ್ಟ ಗಾಯಗಳಾಗಿವೆ. ಪ್ರಾಥಮಿಕ ಚಿಕಿತ್ಸೆ ಬಳಿಕ ಡಿಸ್ಚಾರ್ಜ್ ಮಾಡಲಾಗಿದೆ ಎಂದು ಜಲಂಧರ್ ಆಸ್ಪತ್ರೆಯ ಮೆಡಿಕಲ್ ಅಧೀಕ್ಷಕ ಎಂ.ಎಸ್.ಬಾವಾ ಹೇಳಿದ್ದಾರೆ.

    ಹಲವು ವರ್ಷಗಳಿಂದ ಜೋರ್ಡಾನ್ ನಲ್ಲಿದ್ದ ಕುಲ್ವಿಂದರ್ ಬುಧವಾರ ರಾತ್ರಿ ಊರಿಗೆ ವಾಪಸ್ಸಾಗಿದ್ದ. ಈ ವೇಳೆ ಪತ್ನಿ ಸ್ಥಳೀಯ ಯುವಕನೊಬ್ಬ ತನ್ನನ್ನು ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾನೆ. ಸಹಕರಿಸದಿದ್ದರೆ ಅಶ್ಲೀಲ ವೀಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕುವುದಾಗಿ ಬೆದರಿಕೆಯೊಡ್ಡುತ್ತಿದ್ದಾನೆ ಎಂದು ತಿಳಿಸಿದ್ದಾಳೆ. ಇದನ್ನು ಕೇಳಿ ಪತಿ ಸಿಟ್ಟಿಗೆದ್ದಿದ್ದಾನೆ ಎಂದು ಎಸ್‍ಪಿ ಜಗಜಿತ್ ಸಿಂಗ್ ಸರೋಯಾ ಹೇಳಿದ್ದಾರೆ.

    ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ಸನ್ನಿ, ಸನ್ನಿಯ ತಾಯಿ ಸತ್ಯ ದೇವಿ, ಸ್ನೇಹಿತರಾದ ಬಲ್ಕರ್ ಸಿಂಗ್ ಹಾಗೂ ತೀರ್ಥ ಸಿಂಗ್ ವಿರುದ್ಧ ದೂರು ದಾಖಲಾಗಿದೆ. ಸದ್ಯ ಪೊಲೀಸರು ಸನ್ನಿ ಹಾಗೂ ಆತನ ಸ್ನೇಹಿತ ಬಲ್ಕರ್ ಸಿಂಗ್ ನನ್ನು ಬಂಧಿಸಿದ್ದಾರೆ. ಈ ವೀಡಿಯೋವನ್ನು ಶೂಟ್ ಮಾಡಿದ್ದು ಸನ್ನಿಯ ತಾಯಿ ಎನ್ನಲಾಗಿದ್ದು, ಈ ವೀಡಿಯೋ ಮುಂದಿಟ್ಟುಕೊಂಡೇ ಆಕೆ ಹಣಕ್ಕಾಗಿ ಬ್ಲ್ಯಾಕ್ ಮಾಡುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನಿಬ್ಬರ ಬಂಧನಕ್ಕಾಗಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews

  • ಸೊಸೆಗೆ ಕಿರುಕುಳ ನೀಡಿ ಗೊತ್ತಿಲ್ಲದೆ ಗರ್ಭಪಾತ: ಗಂಡ, ಅತ್ತೆ, ಮಾವ, ನಾದಿನಿ ವಿರುದ್ಧ ದೂರು

    ಸೊಸೆಗೆ ಕಿರುಕುಳ ನೀಡಿ ಗೊತ್ತಿಲ್ಲದೆ ಗರ್ಭಪಾತ: ಗಂಡ, ಅತ್ತೆ, ಮಾವ, ನಾದಿನಿ ವಿರುದ್ಧ ದೂರು

    ಉಡುಪಿ: ಆತ ಆಕೆಯನ್ನ ಮದುವೆಯಾಗಿ ದುಡಿಮೆಗೆಂದು ವಿದೇಶಕ್ಕೆ ಹಾರಿದ್ದ. ತನ್ನ ಹೊಟ್ಟೆಯಲ್ಲೇ ಗಂಡನ ಪ್ರೀತಿ ಬೆಳೆಯುತ್ತಿದ್ದು ಆ ಮಗುವಿನಲ್ಲಿ ತನ್ನ ಗಂಡನನ್ನು ನೋಡಲು ಆಕೆ ಹಾತೊರೆಯುತ್ತಿದ್ದಳು. ಆದರೆ ರಾಕ್ಷಸ ರೂಪಿ ಗಂಡನ ಮನೆಯವರು ಆಕೆಯನ್ನು ನೆಮ್ಮದಿಯಿಂದ ಇರಲು ಬಿಡಲಿಲ್ಲ.

    ಈಗ ಹೆಂಡತಿಗೆ ಹಿಂಸೆ ನೀಡುತ್ತಿದ್ದ ಗಂಡ, ಮಾವ, ಅತ್ತೆ ಸಹಿತ ಆರು ಮಂದಿ ಆರೋಪಿಗಳ ವಿರುದ್ಧ ಉಡುಪಿಯ ನಗರ ಮಹಿಳಾ ಠಾಣೆಯಲ್ಲಿ ಕೇಸು ದಾಖಲಾಗಿದೆ. ಗಂಡನ ಮನೆಯವರ ಹಿಂಸೆ ತಾಳಲಾರದೇ ಮಹಿಳೆ ತವರು ಮನೆ ಸೇರಿದ್ದಾಳೆ.

    ಏನಿದು ಪ್ರಕರಣ?
    ಮಂಗಳೂರಿನ ಮಾರ್ನಮಿಕಟ್ಟೆ ಡೈಮಂಡ್ ಸಿಟಿ ಫ್ಲಾಟ್ ನಿವಾಸಿ ಝಿಯಾನಾ ಸಲೀಂ ಚಿಸ್ಪಿ(23) ಚಿತ್ರ ಹಿಂಸೆಗೊಳಗಾದ ಮಹಿಳೆ. 2017 ಜುಲೈ 18 ರಂದು ಝಿಯಾನಾ ಶೇಖ್ ನೂರುದ್ದೀನ್ ಮಹಮ್ಮದ್ ಸಲೀಂ ಚಿಸ್ಪಿ ಎಂಬಾತನೊಂದಿಗೆ ಮದುವೆಯಾಗಿತ್ತು. ಮಂಗಳೂರಿನ ಕಾಂತಿ ಚರ್ಚ್ ಸಭಾಂಗಣದಲ್ಲಿ ಮದುವೆಯಾಗಿದ್ದು, ಮದುವೆಯ ವೇಳೆ ಅವರಿಗೆ ಲಕ್ಷಾಂತರ ಮೌಲ್ಯದ ಚಿನ್ನಾಭರಣಗಳನ್ನು ಕೂಡಾ ಹಾಕಿದ್ದಾರೆ.

     

    ಮದುವೆಯ ಬಳಿಕ ಗಂಡ ಹೆಂಡತಿ ಒಳ್ಳೆಯ ರೀತಿಯಲ್ಲಿದ್ದರು. ಮನೆಯವರು ಕೂಡಾ ಒಳ್ಳೆಯ ರೀತಿಯಲ್ಲಿ ನೋಡಿಕೊಂಡಿರುತ್ತಾರೆ. ಆದರೆ ಗಂಡ ಹೊರ ದೇಶಕ್ಕೆ ಹೋದ ನಂತರ ಆರೋಪಿಗಳಾದ ಮಾವ, ಅತ್ತೆ, ನಾದಿನಿ ಹಾಗೂ ಗಂಡ ಸೇರಿಕೊಂಡು ಝಿಯಾನಾ ಅವರಿಗೆ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಿದ್ದರು.

    40 ದಿನಗಳ ಗರ್ಭಿಣಿಯಾದಾಗ ಆಕೆಗೆ ತಿಳಿಯದಂತೆ ಆರೋಪಿಗಳು ವೈದ್ಯರು ಬರೆದುಕೊಟ್ಟ ಮಾತ್ರೆಯ ಜೊತೆಗೆ ಗರ್ಭಪಾತ ಮಾತ್ರೆಯನ್ನು ಸೇರಿಸಿ ಗರ್ಭಪಾತವಾಗುವಂತೆ ಮಾಡಿಸಿದ್ದಾರೆ. ಝಿಯಾನಾ ಇಷ್ಟೆಲ್ಲಾ ಆದ ಮೇಲೆ ಈಗ ಮಂಗಳೂರಿನಲ್ಲಿರುವ ಪೋಷಕರ ಮನೆಗೆ ಹೋಗಿದ್ದಾರೆ.

    ಗಂಡ ಶೇಖ್ ನೂರುದ್ದೀನ್ ಮಹಮ್ಮದ್ ಸಲೀಂ ಚಿಸ್ಪಿ, ತಾಹಿರಾ ಬಾನು, ಸಯೀದಾ, ಆಲಿಶಾ, ಸುನೈನಾ, ಗಫೂರ್ ಅಬ್ದುಲ್ ಜಬ್ಬರ್, ಅಜೀಜುನ್ನೀಸಾ ವಿರುದ್ಧ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಮಂಗಳೂರು: ಬಿಜೆಪಿ ಸಭೆಯಲ್ಲಿ ಪಾಲ್ಗೊಂಡಿದ್ದಕ್ಕೆ ಮುಸ್ಲಿಂ ಮುಖಂಡನಿಗೆ ಧಮ್ಕಿ

    ಮಂಗಳೂರು: ಬಿಜೆಪಿ ಸಭೆಯಲ್ಲಿ ಪಾಲ್ಗೊಂಡಿದ್ದಕ್ಕೆ ಮುಸ್ಲಿಂ ಮುಖಂಡನಿಗೆ ಧಮ್ಕಿ

    ಮಂಗಳೂರು: ಸಚಿವ ಯು.ಟಿ.ಖಾದರ್ ಕ್ಷೇತ್ರವನ್ನು ಈ ಬಾರಿ ಪಡೆದೇ ಪಡೆಯಬೇಕೆನ್ನುವ ನಿಟ್ಟಿನಲ್ಲಿ ಬಿಜೆಪಿ ಚಾಣಾಕ್ಷ ನಡೆಯನ್ನಿಟ್ಟಿದೆ. ಇದಕ್ಕೆ ಉದಾಹರಣೆಯೆಂಬಂತೆ ಯುಟಿ ಖಾದರ್ ಸ್ಪರ್ಧಿಸುವ ಮಂಗಳೂರು ಕ್ಷೇತ್ರದಲ್ಲಿ(ಉಳ್ಳಾಲ) ಬಿಜೆಪಿ ಅಲ್ಪ ಸಂಖ್ಯಾತ ಮೋರ್ಚಾ, ಮುಡಿಪು ಸಮೀಪದ ಬೋಳಿಯಾರ್‍ನಲ್ಲಿ ಮುಸ್ಲಿಂ ಧರ್ಮಗುರುಗಳ ಸಭೆಯನ್ನು ಆಯೋಜಿಸಿದೆ.

    ಈ ಸಭೆಯಲ್ಲಿ ನೂರಾರು ಮುಸ್ಲಿಂ ಧರ್ಮಗುರುಗಳು ಭಾಗಿಯಾಗಿದ್ದು ಮಸ್ಲಿಂ ಮತವನ್ನು ಬಿಜೆಪಿ ಸೆಳೆಯಲು ಈ ಮೂಲಕ ಪ್ರಯತ್ನಿಸುತ್ತಿದೆ ಎಂದು ರಾಜಕೀಯ ಲೆಕ್ಕಾಚಾರ ಆರಂಭಗೊಂಡಿದೆ.

    ಈ ನಡುವೆ ಈ ಸಭೆಯಲ್ಲಿ ಭಾಗಿಯಾಗಿದ್ದ ಧರ್ಮಗುರು ಎ.ಬಿ.ಹನೀಫ್ ಎಂಬವರಿಗೆ ವಿದೇಶದಿಂದ ಬೆದರಿಕೆ ಕರೆಯೊಂದು ಬಂದಿದ್ದು, ಇಂತಹ ಬಿಜೆಪಿ ಸಭೆಯಲ್ಲಿ ಇನ್ನು ಭಾಗವಹಿಸಿದರೆ ಎಚ್ಚರಿಕೆ ಎಂದು ಧಮ್ಕಿ ಹಾಕಲಾಗಿದೆ.

    ಈ ಬಗ್ಗೆ ಕೋಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣವೂ ದಾಖಲಾಗದೆ.

  • 5000 ರೂ.ಗೆ ಓಕೆ ಆಗಿತ್ತು, 10 ಸಾವಿರ ಕೇಳಿದ್ದಕ್ಕೆ ಕೊಂದೆ ಬಿಟ್ಟ!

    ಬೆಂಗಳೂರು: ನಗರದ ಕೊತ್ತನೂರಿನ ತಿಮ್ಮೇಗೌಡ ಲೇಔಟ್‍ನಲ್ಲಿ ವಿದೇಶಿ ಮಹಿಳೆಯನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಬುಧವಾರ ಮಧ್ಯರಾತ್ರಿ ಗಂಟೆಗೆ ನಡೆದಿದೆ.

    ಹಿಮಾಚಲ ಪ್ರದೇಶದ ಮೂಲದ ಇಶಾನ್ ಕೊಲೆಗೈದ ಆರೋಪಿಯಾಗಿದ್ದು, ನಕಾಯಕಿ ಪ್ಲೋರೆನ್ಸ್ (25) ಕೊಲೆಯಾದ ಉಗಾಂಡ ಮೂಲದ ಮಹಿಳೆ.

    ಏನಿದು ಪ್ರಕರಣ?: ನಕಾಯಕಿ ವಿದ್ಯಾಭ್ಯಾಸಕ್ಕಾಗಿ ಬೆಂಗಳೂರಿಗೆ ಬಂದಿದ್ದಳು. ಪ್ಲೋರೆನ್ಸ್ ನಗರದ ತಿಮ್ಮೇಗೌಡ ಲೇಔಟ್‍ನಲ್ಲಿ ವನಜಮ್ಮ ಎಂಬುವರ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಳು. ಇಶಾನ್ ಕೂಡ ಉದ್ಯೋಗ ಅರಸಿ ಬೆಂಗಳೂರಿಗೆ ಬಂದಿದ್ದ.

    ಇಶಾನ್ ಬುಧವಾರ ರಾತ್ರಿ ನಕಾಯಕಿ ಪ್ಲೋರೆನ್ಸ್‍ಳನ್ನು 5000 ರೂ. ಒಪ್ಪಂದ ಮಾಡಿಕೊಂಡು ಎಂಜಿ ರೋಡ್‍ನಿಂದ ಪಿಕ್ ಮಾಡಿದ್ದಾನೆ. ಒಪ್ಪಂದಂತೆ ಇಬ್ರೂ ಪ್ಲೋರೆನ್ಸ್ ವಾಸವಿದ್ದ ಮನೆಗೆ ಬಂದಿದ್ದಾರೆ. ಈ ವೇಳೆಯಲ್ಲಿ ನಕಾಯಕಿ 10 ಸಾವಿರ ನೀಡುವಂತೆ ಬೇಡಿಕೆ ಇಟ್ಟಿದ್ದಾಳೆ. ಇಶಾನ್ ಹಣ ಕೊಡದೇ ಇದ್ದಾಗ ಚಾಕುವಿನಿಂದ ಅವನ ಹಲ್ಲೆ ನಡೆಸಿದ್ದಾಳೆ. ಒಬ್ಬರ ಮೇಲೆ ಒಬ್ಬರು ಹಲ್ಲೆಗೆ ಪ್ರತಿ ಹಲ್ಲೆ ನಡೆಸುವಾಗ ಗಾಬರಿಗೊಂಡ ಇಶಾನ್ ಅದೇ ಚಾಕುವಿನಿಂದ ಪ್ಲೋರೆನ್ಸ್ ಳನ್ನು ಕೊಲೆ ಮಾಡಿದ್ದಾನೆ.

    ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಇಶಾನ್‍ನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಸ್ಥಳಕ್ಕೆ ಬೆರಳಚ್ಚು ತಂತ್ರಜ್ಞರು ಮತ್ತು ಶ್ವಾನದಳ ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ. ಕೊತ್ತನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಕೊಲೆ ಪ್ರಕರಣ ಹಿನ್ನೆಲೆಯಲ್ಲಿ ತನಿಖೆಗೆ ತೆರಳಿದ್ದ ಇನ್ಸ್ ಪೆಕ್ಟರ್ ಅಂಜನ್ ಕುಮಾರ್ ಮೇಲೆ ಉಗಾಂಡ ಮೂಲದ ಜನರು ಹಲ್ಲೆ ನಡೆಸಿದ್ದಾರೆಂದು ತಿಳಿದುಬಂದಿದೆ.