Tag: foreign woman

  • ಆಯುರ್ವೇದ ಮಸಾಜ್‌ಗೆ ಬಂದಾಗ ಬಲವಂತದ ಸೆಕ್ಸ್‌: ದೂರು ಸಲ್ಲಿಸಿದ ವಿದೇಶಿ ಯುವತಿ

    ಆಯುರ್ವೇದ ಮಸಾಜ್‌ಗೆ ಬಂದಾಗ ಬಲವಂತದ ಸೆಕ್ಸ್‌: ದೂರು ಸಲ್ಲಿಸಿದ ವಿದೇಶಿ ಯುವತಿ

    ಮಾನಂತವಾಡಿ: ವಯನಾಡಿನ ತಿರುನೆಲ್ಲಿಯಲ್ಲಿ ಪ್ರವಾಸಕ್ಕೆ ಬಂದಿದ್ದ ವಿದೇಶಿ ಮಹಿಳೆ (Foreign woman molested in Kerala) ಮೇಲೆ ರೆಸಾರ್ಟ್ ಉದ್ಯೋಗಿಯೊಬ್ಬ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ದೂರು ದಾಖಲಾಗಿದೆ.

    ನೆದರ್‌ಲ್ಯಾಂಡ್‌ನ ಮಹಿಳೆಗೆ ಕಿರುಕುಳ ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ವಯನಾಡ್‌ಗೆ ಭೇಟಿ ನೀಡಲು ಬಂದಿದ್ದ 25 ವರ್ಷದ ಯುವತಿ ಮೇಲೆ ಈ ಲೈಂಗಿಕ ದೌರ್ಜನ್ಯ ನಡೆಸಲಾಗಿದೆ. ಆಯುರ್ವೇದ ಮಸಾಜ್‌ (Ayurveda Massage) ವೇಳೆ ಬಲವಂತವಾಗಿ ಸೆಕ್ಸ್‌ಗೆ ಒತ್ತಾಯಿಸಿದ್ದಾರೆ ಹಾಗೂ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಯುವತಿ ದೂರಿನಲ್ಲಿ ಹೇಳಿದ್ದಾಳೆ.

    ಕಳೆದ ಡಿಸೆಂಬರ್‌ನಲ್ಲಿ ಆನ್‌ಲೈನ್ ಬುಕಿಂಗ್ ಮಾಡಿದ ಬಳಿಕ ಮಹಿಳೆ ತಿರುನೆಲ್ಲಿಯ ರೆಸಾರ್ಟ್‌ಗೆ ತಲುಪಿದ್ದರು. ಬಳಿಕ ಆಯುರ್ವೇದ ಮಸಾಜ್‌ಗೆ ಮುಂದಾದರು. ಈ ವೇಳೆ ಈ ಘಟನೆ ನಡೆದಿದೆ ಎನ್ನಲಾಗಿದೆ. ಆದರೆ ಭಾರತ ಪ್ರವಾಸ ಮುಗಿಸಿ ನೆದರ್‌ಲ್ಯಾಂಡ್‌ಗೆ ಮರಳಿದ ಬಳಿಕ ಆಕೆ ದೂರು ನೀಡಿದ್ದಾಳೆ. ಕೇರಳ ಎಡಿಜಿಪಿಗೆ ಜೂನ್‌ 14ರಂದು ಇ-ಮೇಲ್ ಮೂಲಕ ದೂರು ಲಭಿಸಿತ್ತು. ಇದನ್ನೂ ಓದಿ: ಪರಪ್ಪನ ಅಗ್ರಹಾರ ಜೈಲಿನ `ಡಿ’ ಬ್ಯಾರಕ್‌ನಲ್ಲಿ ದಿನ ಕಳೆದ ಪವಿತ್ರಾಗೌಡ!

    ಭಾರತದಲ್ಲಿ ದೂರು ದಾಖಲಿಸುವ ವಿಧಾನ ತಿಳಿಯದ ಕಾರಣ ದೂರು ದಾಖಲಿಸಲು ವಿಳಂಬವಾಗಿರೋದಾಗಿ ಮಹಿಳೆ ಹೇಳಿದ್ದಾರೆ. ಆದರೆ, ದೂರು ಸ್ವೀಕರಿಸಿ ವಾರ ಕಳೆದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ವಿವಿಧ ಸಂಘಟನೆಗಳು ಆರೋಪಿಸಿವೆ. ಇದನ್ನೂ ಓದಿ: ಆದಿಯೋಗಿ ಸನ್ನಿಧಿಯಲ್ಲಿ KGF ನಟಿ ಶ್ರೀನಿಧಿ ಶೆಟ್ಟಿ ಯೋಗ ಪ್ರದರ್ಶನ – ಸೈನಿಕರೂ ಭಾಗಿ

    ಆದರೆ ವಿಚಾರಣೆಯಲ್ಲಿ ವಿಳಂಬ ಮಾಡಿಲ್ಲ ಎಂದು ಪೊಲೀಸರು ಸ್ಪಷ್ಟನೆ ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿದ್ದರೂ ಯುವತಿ ಸಲ್ಲಿಸಿರುವ ದೂರಿನಲ್ಲಿ ಸಂಪೂರ್ಣ ಮಾಹಿತಿ ಇಲ್ಲದ ಕಾರಣ ಇತರೆ ಕಾನೂನು ಪ್ರಕ್ರಿಯೆ ಮುಂದುವರಿಸಲು ಸಾಧ್ಯವಾಗುತ್ತಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

  • ಹೋಟೆಲ್‌ ರೂಮಿನಲ್ಲಿ ವಿದೇಶಿ ಮಹಿಳೆ ಶವವಾಗಿ ಪತ್ತೆ

    ಹೋಟೆಲ್‌ ರೂಮಿನಲ್ಲಿ ವಿದೇಶಿ ಮಹಿಳೆ ಶವವಾಗಿ ಪತ್ತೆ

    ಬೆಂಗಳೂರು: ನಗರದ ಹೋಟೆಲ್‌ವೊಂದರಲ್ಲಿ 37 ವರ್ಷದ ಉಜ್ಬೇಕಿಸ್ತಾನ್ ಮಹಿಳೆಯ ನಿಗೂಢ ಸಾವು ಪ್ರಕರಣದ ತನಿಖೆಯನ್ನು ಬೆಂಗಳೂರು ಪೊಲೀಸರು ನಡೆಸುತ್ತಿದ್ದಾರೆ. ಬೆಂಗಳೂರಿನ ಶೇಷಾದ್ರಿಪುರಂನಲ್ಲಿರುವ (Sheshadripuram Bengaluru) ಖಾಸಗಿ ಹೋಟೆಲ್‌ನಲ್ಲಿ ಜರೀನಾ ಎಂಬ ಮಹಿಳೆ ಶವವಾಗಿ ಪತ್ತೆಯಾಗಿದ್ದಾರೆ.

    ಇವರು ನಾಲ್ಕು ದಿನಗಳ ಹಿಂದೆ ಪ್ರವಾಸಿ ವೀಸಾದಲ್ಲಿ ಬೆಂಗಳೂರಿಗೆ ಬಂದಿದ್ದರು. ಹೀಗೆ ಬಂದವರು ಖಾಸಗಿ ಹೋಟೆಲ್‌ನಲ್ಲಿ ರೂಂ ಬುಕ್‌ ಮಾಡಿದ್ದರು. ಆದರೆ ರೂಮಿನಿಂದ ಹೊರಬರದೇ ಇರುವುದನ್ನು ಗಮನಿಸಿದ ಹೋಟೆಲ್ ಸಿಬ್ಬಂದಿ ಬುಧವಾರ ಸಂಜೆ 4.30 ರ ಸುಮಾರಿಗೆ ಎರಡನೇ ಮಹಡಿಯಲ್ಲಿರುವ ಜರೀನಾ ಅವರಿದ್ದ ಕೊಠಡಿ ಬಾಗಿಲು ಬಡಿದಿದ್ದರು. ಈ ವೇಳೆ ಯಾವುದೇ ಪ್ರತಿಕ್ರಿಯೆ ಸಿಗದಿದ್ದರಿಂದ ಮಾಸ್ಟರ್ ಕೀ ಮೂಲಕ ಡೋರ್‌ ಅನ್ಲಾಕ್ ಮಾಡಲಾಯಿತು. ಈ ವೇಳೆ ಜರೀನಾ ಶವವಾಗಿ ಪತ್ತೆಯಾದರು ಎಂದು ಪೊಲೀಸರು ತಿಳಿಸಿದ್ದಾರೆ.

    ಶವವಾಗಿ ಪತ್ತೆಯಾಗುತ್ತಿದ್ದಂತೆಯೇ ಕೂಡಲೇ ಹೋಟೆಲ್ ಮ್ಯಾನೇಜರ್ ದೂರು ದಾಖಲಿಸಿದ್ದು, ಪೊಲೀಸರು ನಿಗೂಢ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸದ್ಯ ಈ ಕುರಿತು ತನಿಖೆ ನಡೆಯುತ್ತಿದೆ. ಪ್ರಾಥಮಿಕ ಸಾಕ್ಷ್ಯವು ಕೊಲೆ ಎಂದು ಸೂಚಿಸುತ್ತದೆ. ಜರೀನಾ ಅವರನ್ನು ಕೊಚ್ಚಿ ಕೊಲೆ ಮಾಡಲಾಗಿದೆ ಎಂದು ಶಂಕಿಸಲಾಗಿದೆ. ಸದ್ಯ ಜರೀನಾ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಬೌರಿಂಗ್ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಇದನ್ನೂ ಓದಿ: ಒಂದು ತಿಂಗಳಿಂದ ರಾಜಧಾನಿ ಗಡಿಯಲ್ಲಿ ಪ್ರತಿಭಟನೆ; ಇಂದು ದೆಹಲಿಯಲ್ಲಿ ರೈತರ ಮಹಾಪಂಚಾಯತ್‌ ಸಭೆ

    ಫೋರೆನ್ಸಿಕ್ ಸೈನ್ಸ್ ಲ್ಯಾಬೊರೇಟರಿ (ಎಫ್‌ಎಸ್‌ಎಲ್) ತಂಡವು ಹೋಟೆಲ್‌ಗೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದೆ. ಯಾರಾದರೂ ಜರೀನಾ ಅವರ ಕೋಣೆಗೆ ಭೇಟಿ ನೀಡಿದ್ದಾರೆಯೇ ಎಂದು ತಿಳಿಯಲು ಹೋಟೆಲ್‌ನಲ್ಲಿರುವ ಸಿಸಿಟಿವಿಯನ್ನು ಪರಿಶೀಲಿಸಲಾಗುತ್ತಿದೆ. ಈ ಸಂಬಂಧ ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲು

  • ಆಟೋರಾಜನ ಕೈಹಿಡಿದ ಬೆಲ್ಜಿಯಂ ಕನ್ಯೆ – ಹಿಂದೂ ಸಂಪ್ರದಾಯದಂತೆ ಅದ್ದೂರಿ ಮದುವೆ

    ಆಟೋರಾಜನ ಕೈಹಿಡಿದ ಬೆಲ್ಜಿಯಂ ಕನ್ಯೆ – ಹಿಂದೂ ಸಂಪ್ರದಾಯದಂತೆ ಅದ್ದೂರಿ ಮದುವೆ

    ಬಳ್ಳಾರಿ: ಎತ್ತಣ ಮಾಮರ ಎತ್ತಣ ಕೋಗಿಲೆ? ಎತ್ತಣಿಂದೆತ್ತ ಸಂಬಂಧವಯ್ಯ ಎಂಬ ಅಲ್ಲಮ ಪ್ರಭು ಅವರ ವಚನ ಇದೆ. ಇದಕ್ಕೆ ಸಾಕ್ಷಿ ಎಂಬಂತೆ ಬೆಲ್ಜಿಯಂ (Belgium) ಕನ್ಯೆ, ವಿಶ್ವವಿಖ್ಯಾತ ಹಂಪಿಯ (Hampi) ಯುವಕ ಇಬ್ಬರು ಪರಸ್ಪರ ಪ್ರೀತಿಸಿ ಮದುವೆ ಆಗಿದ್ದಾರೆ.

    ಹೌದು, ಹಂಪಿಯ ನಿವಾಸಿ ಅನಂತರಾಜು ಹಾಗೂ ಬೆಲ್ಜಿಯಂ ದೇಶದ ಕೆಮಿಲ್ ಇಬ್ಬರು ಪರಸ್ಪರ ಪ್ರೀತಿಸಿ ಕುಟುಂಬಸ್ಥರ ಒಪ್ಪಿಗೆ ಮೇರೆಗೆ ಸಪ್ತಪದಿ ತುಳಿದಿದ್ದಾರೆ. ಬುಧವಾರ ಎಂಗೇಜ್ ಮೆಂಟ್ ಮಾಡಿಕೊಂಡಿದ್ದ ಈ ಜೋಡಿ, ಇಂದು ಮುಂಜಾನೆ 8:30 ರಿಂದ 9:30ರ ಕುಂಭ ಶುಭ ಮುಹೂರ್ತದಲ್ಲಿ ಹಂಪಿಯ ವಿರೂಪಾಕ್ಷೇಶ್ವರನ ಸನ್ನಧಿಯಲ್ಲಿ ಉಭಯ ಕುಟುಂಬಸ್ಥರ ಸಮಕ್ಷಮದಲ್ಲಿ ಪ್ರೇಮಿಗಳು ಮದುವೆಯಾಗಿದ್ದಾರೆ. ಇದನ್ನೂ ಓದಿ: ಪದವಿ ಕಾಲೇಜು, ವಿಶ್ವವಿದ್ಯಾಲಯಗಳಲ್ಲಿ ಧ್ಯಾನ – ಯುಜಿಸಿಯಿಂದ ಪತ್ರ

    ಅನಂತರಾಜು ಆಟೋ ಚಾಲಕ ಹಾಗೂ ಹಂಪಿ ಮಾರ್ಗದರ್ಶಿಯಾಗಿ ವಿಜಯನಗರದ ಗತವೈಭವವನ್ನು ಪ್ರವಾಸಿಗರಿಗೆ ವಿವರಿಸುತ್ತಾರೆ. ಕೆಮಿಲ್ ಬೆಲ್ಜಿಯಂನಲ್ಲಿ ಸೋಷಿಯಲ್ ವರ್ಕರ್ ಆಗಿದ್ದಾರೆ. ಕಳೆದ ನಾಲ್ಕೈದು ವರ್ಷದ ಹಿಂದೆ ಜೀಪ್ ಫಿಲಿಪ್ಪೆ ಕುಟುಂಬ ಸಮೇತ ಹಂಪಿ ಗತವೈಭವ ಅರಿಯಲು ಬಂದಿದ್ದರು. ಜೀಪ್ ಫಿಲಿಪ್ಪೆ ಪರಿವಾರಕ್ಕೆ ಹಂಪಿಯಲ್ಲಿ ಆಟೋ ಚಾಲಕ ಅನಂತರಾಜುವಿನ ಪರಿಚಯ ಆಗುತ್ತದೆ. ಅನಂತರಾಜು ಪ್ರಾಮಾಣಿಕ ಆಟೋ ಚಾಲಕ ಎನ್ನುವುದರೊಂದಿಗೆ ಉತ್ತಮ ಮಾರ್ಗದರ್ಶಕರಾಗಿಯೂ ಅವರ ಮನಗೆದ್ದಿದ್ದಾನೆ. ಜೀಪ್ ಫಿಲಿಪ್ಪೆ ಅವರ ತೃತೀಯ ಸುಪುತ್ರಿ ಕೆಮಿಲ್ ಹಂಪಿಯ ನಿಸರ್ಗದ ಸೊಬಗಿಗೆ ಮನಸೋತಿದ್ದಾರೆ. ದಿನ ಕಳೆದಂತೆ ಕೆಮಿಲ್ ಅವರ ಪರಿವಾರದೊಂದಿಗೆ ನಿರಂತರ ಸಂಪರ್ಕದಲ್ಲಿದ್ದ ಮಾರ್ಗದರ್ಶಕ ಅನಂತರಾಜುವಿನ ಮೇಲೆ ಯುವತಿ ಕೆಮಿಲ್‍ಗೆ ಪ್ರೇಮ ಅರಳಿದೆ. ಈ ಮಧ್ಯೆ ಇಬ್ಬರೂ ಬೇರೆ ಬೇರೆ ದೇಶದಲ್ಲಿದ್ದರೂ ಪ್ರೀತಿ ಮಾತ್ರ ಕಡಿಮೆ ಆಗಿರಲಿಲ್ಲ. ಇದೀಗ ಇಂದು ಮದುವೆ ಆಗಿ ಎಲ್ಲರ ಗಮನ ಸೆಳೆದಿದ್ದಾರೆ.

    ಮೂರು ವರ್ಷದ ಹಿಂದೆಯೇ ಪ್ರೇಮ ವಿವಾಹವಾಗಬೇಕಿದ್ದ ಜೋಡಿಗೆ ಕೊರೊನಾ ಮಹಾಮಾರಿ ತಡೆಯೊಡ್ಡಿತ್ತು. ಕೆಮಿಲ್ ಕುಟುಂಬದವರಿಗೆ ಮಗಳ ವಿವಾಹವನ್ನು ಬೆಲ್ಜಿಯಂ ದೇಶದಲ್ಲಿ ಅದ್ದೂರಿ ವೈಭವದೊಂದಿಗೆ ಮಾಡಬೇಕೆಂಬ ಮನಸ್ಸಿದ್ದರೂ, ಹಿಂದೂ ಸಂಪ್ರದಾಯದಂತೆ ಹಂಪಿ ಶ್ರೀ ವಿರೂಪಾಕ್ಷೇಶ್ವರ ದೇವಸ್ಥಾನದಲ್ಲಿ ಸರಳವಾಗಿ ವಿವಾಹ ಮಾಡಿಕೊಳ್ಳಬೇಕೆಂಬ ಯುವಕನ ಆಸೆಗೆ ಸಹಮತ ಸೂಚಿಸಿ, ಕೆಮಿಲ್ ಕುಟುಂಬಸ್ಥರು 50ಕ್ಕೂ ಅಧಿಕ ಜನ ಬೆಲ್ಜಿಯಂ ದೇಶದಿಂದ ಆಗಮಿಸಿ ಅಳಿಯ ಅನಂತರಾಜು, ಪುತ್ರಿ ಕೆಮಿಲ್‍ಗೆ ಆಶೀರ್ವದಿಸಿದ್ದಾರೆ. ಇದನ್ನೂ ಓದಿ: ಆಟೋ ಚಾಲಕನ ಕುಟುಂಬಕ್ಕೆ ಸರ್ಕಾರದಿಂದ ಸೂಕ್ತ ಪರಿಹಾರ: ಸುನೀಲ್ ಕುಮಾರ್

    ಒಟ್ಟಾರೆ ಹಣೆ ಬರಹ ಕೂಡಿ ಬಂದರೆ ಹಡೆದ ತಾಯಿಗೂ ಕೇಳಬೇಕಿಲ್ಲ ಎಂಬ ಹಾಗೇ, ವಿದೇಶದಿಂದ ಬಂದು ಹಂಪಿಯ ಯುವಕನಿಗೆ ಮಗಳ ಇಚ್ಚೆಯಂತೆ ಕೆಮಿಲ್‍ಳನ್ನು ಪೋಷಕರು ಧಾರೆ ಎರೆದು ಕೊಟ್ಟಿದ್ದಾರೆ. ಪ್ರೇಮಿಗಳ ಮದುವೆಗೆ ಆಗಮಿಸಿದ್ದ ನೂರಾರು ಜನ ಗ್ರಾಮಸ್ಥರು ಅಕ್ಷತೆ ಹಾಕಿ ನವ ಜೋಡಿಗೆ ಹರಸಿದ್ದಾರೆ. ವಿಶೇಷವೆಂದರೆ ಕೆಮಿಲ್ ಕುಟುಂಬಸ್ಥರು ಭಾರತೀಯ ಸಂಪ್ರದಾಯದಂತೆ ಸೀರೆ ಉಟ್ಟು, ಹಣೆಗೆ ಕುಂಕುಮ ಇಟ್ಟು, ಕೈಗೆ ಬಳೆ ತೊಟ್ಟು ಎಲ್ಲರ ಗಮನ ಸೆಳೆದರು.

    Live Tv
    [brid partner=56869869 player=32851 video=960834 autoplay=true]

  • ಗೋ ಬ್ಯಾಕ್ ಇಂಡಿಯಾ, ನೀವು ನಮ್ಮ ದೇಶ ಹಾಳು ಮಾಡ್ತಿದ್ದೀರಾ – ಭಾರತೀಯ ಮಹಿಳೆಯರ ಮೇಲೆ ವಿದೇಶಿ ಮಹಿಳೆಯಿಂದ ಹಲ್ಲೆ

    ಗೋ ಬ್ಯಾಕ್ ಇಂಡಿಯಾ, ನೀವು ನಮ್ಮ ದೇಶ ಹಾಳು ಮಾಡ್ತಿದ್ದೀರಾ – ಭಾರತೀಯ ಮಹಿಳೆಯರ ಮೇಲೆ ವಿದೇಶಿ ಮಹಿಳೆಯಿಂದ ಹಲ್ಲೆ

    ವಾಷಿಂಗ್ಟನ್: ಭಾರತೀಯ ಮಹಿಳೆಯರ ಮೇಲೆ ವಿದೇಶಿ ಮಹಿಳೆಯೊಬ್ಬಳು ಹಲ್ಲೆ ಮಾಡಿರುವ ಘಟನೆ ಟೆಕ್ಸಾಸ್‍ನ ಪ್ಲಾನೊದಲ್ಲಿನ ಸಿಕ್ಸ್ಟಿ ವೈನ್ಸ್ ರೆಸ್ಟೋರೆಂಟ್‍ನ ಹೊರಗೆ ನಡೆದಿದೆ. ಭಾರತೀಯ ಮಹಿಳೆಯರ ಮೇಲೆ ಜನಾಂಗೀಯ ಟೀಕೆಗಳನ್ನು ಮಾಡುತ್ತಿರುವ ಅಮೆರಿಕನ್ ಮಹಿಳೆಯ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ಐದೂವರೆ ನಿಮಿಷವಿರುವ ವೀಡಿಯೋದಲ್ಲಿ, ಅಮೆರಿಕನ್ ಮಹಿಳೆ, ಭಾರತೀಯ ಮಹಿಳೆಯೊಬ್ಬರ ಮುಖಕ್ಕೆ ಹೊಡೆಯುತ್ತಿರುವ ದೃಶ್ಯ ಇದೆ. ಅಲ್ಲದೇ ಇನ್ನಿಬ್ಬರು ಭಾರತೀಯ ಮಹಿಳೆಯರ ಫೋನ್‍ಗಳನ್ನು ಕಸಿದುಕೊಂಡು, ನಿಮ್ಮನ್ನು ಶೂಟ್ ಮಾಡುವುದಾಗಿ ಬೆದರಿಕೆಯೊಡ್ಡಿಕೆಯೊಡ್ಡಿದ್ದಾಳೆ. ‘ಕಪ್ಪು ಜನರಾದ ನೀವು ನಮ್ಮ ದೇಶವನ್ನು ಹಾಳು ಮಾಡಿತ್ತಿದ್ದೀರಾ ಎಂದು ಅವಾಚ್ಯ ಶಬ್ಧಗಳಿಂದ ನಿಂದಿಸಿರುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ. ಇದನ್ನೂ ಓದಿ: ಸಲ್ಮಾನ್ ನೆಚ್ಚಿನ ಹಿರಿಯ ನಿರ್ದೇಶಕ ಸಾವನ್ ಕುಮಾರ್ ನಿಧನ: ಬಿಟೌನ್ ಕಂಬನಿ

    ಆರೋಪಿ ಮಹಿಳೆಯನ್ನು ಎಸ್ಮೆರಾಲ್ಡಾ ಅಪ್ಟನ್ ಎಂದು ಗುರುತಿಸಲಾಗಿದ್ದು, ಗುರುವಾರ ಪೊಲೀಸರು ಆಕೆಯನ್ನು ಬಂಧಿಸಿ, ಹಲ್ಲೆ ಮತ್ತು ಜೀವ ಬೆದರಿಕೆಗಳ ಆರೋಪದಡಿ ಪ್ರಕರಣ ದಾಖಲಿಸಿದ್ದಾರೆ. 10,000 ಡಾಲರ್ (7,98 ಲಕ್ಷ ರೂಪಾಯಿ) ಮೌಲ್ಯದ ಬಾಂಡ್ ಇರಿಸಬೇಕು ಎಂದು ಷರತ್ತು ವಿಧಿಸಲಾಗಿದೆ. ಸದ್ಯ ಈ ಸಂಬಂಧ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಅನಾರೋಗ್ಯದಿಂದ ಪತ್ನಿ ಸಾವು – ಮನನೊಂದು ಬೆಂಕಿ ಹಚ್ಚಿಕೊಂಡು ಪತಿ ಆತ್ಮಹತ್ಯೆ

    ಮಹಿಳೆಯೊಬ್ಬರು ಸೋಶಿಯಲ್ ಮೀಡಿಯಾದಲ್ಲಿ ಈ ವೀಡಿಯೋವನ್ನು ಹಂಚಿಕೊಂಡಿದ್ದು, ಸ್ನೇಹಿತರೊಂದಿಗೆ ಡಿನ್ನರ್‍ಗಾಗಿ ಹೋಗಿದ್ದೆವು. ನಾವು ಸಿಕ್ಸ್ಟಿ ವೈನ್ಸ್ ರೆಸ್ಟೋರೆಂಟ್‍ನಿಂದ ಕಾರು ಪಾರ್ಕಿಂಗ್ ಸ್ಥಳಕ್ಕೆ ಹೋಗುತ್ತಿರುವಾಗ ಕುಡಿದ ಅಮಲಿನಲ್ಲಿದ್ದ ಮಹಿಳೆ ದ್ವೇಷಪೂರಿತ ಜನಾಂಗೀಯ ನಿಂದನೆಯೊಂದಿಗೆ ನಮ್ಮ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿದ್ದಾಳೆ ಎಂದು ಆರೋಪಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕ್ಯಾಬ್ ಚಾಲಕನಿಗೆ ಚಾಕುವಿನಿಂದ ಇರಿದ ವಿದೇಶಿ ಮಹಿಳೆ

    ಕ್ಯಾಬ್ ಚಾಲಕನಿಗೆ ಚಾಕುವಿನಿಂದ ಇರಿದ ವಿದೇಶಿ ಮಹಿಳೆ

    ಚಂಡೀಗಢ: ಕ್ಯಾಬ್ ಚಾಲಕನಿಗೆ ಮಹಿಳೆಯೊಬ್ಬಳು ಚಾಕುವಿನಿಂದ ಇರಿದ ಘಟನೆ ಗುರುಗ್ರಾಮದಲ್ಲಿ ನಡೆದಿದ್ದು, ಇದೀಗ ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ.

    ಮಹಿಳೆ ಬುರ್ಕಾ ಧರಿಸಿ ಬೆಳಗ್ಗೆ 11 ಗಂಟೆ ಸುಮಾರಿಗೆ ಗುರುಗ್ರಾಮದ ಸೈಬರ್ ಸಿಟಿ ಪ್ರದೇಶದಿಂದ ಕ್ಯಾಬ್ ಹತ್ತಿದ್ದಾಳೆ. ನಂತರ ಚಾಲಕನಿಗೆ ಚಾಕುವಿನಿಂದ ಇರಿದು ಪರಾರಿಯಾಗಲು ಯತ್ನಿಸಿದ್ದಾಳೆ. ಆದರೆ ಮಹಿಳೆಯನ್ನು ಪಿಸಿಆರ್ ಪೊಲೀಸರು ಹಿಂಬಾಲಿಸಿ ಬಂಧಿಸಿದ್ದಾರೆ. ಇದನ್ನೂ ಓದಿ: ಹಿಜಬ್‍ಗಾಗಿ ಪಟ್ಟು ಹಿಡಿದ ವಿದ್ಯಾರ್ಥಿನಿಯರ ಮನವೊಲಿಸಿದ ಅಧಿಕಾರಿಗಳು

    ನಂತರ ಆಕೆಯನ್ನು ವಿಚಾರಣೆ ನಡೆಸಿದ ವೇಳೆ ಮಹಿಳೆಗೆ 30 ವರ್ಷದವಳಾಗಿದ್ದು, ಈಜಿಪ್ಟ್ ಮೂಲದವಳಾಗಿದ್ದಾಳೆ ಎಂಬ ಸತ್ಯ ಬಹಿರಂಗಗೊಂಡಿದೆ ಮತ್ತು ಮಹಿಳೆ ಮಾನಸಿಕ ಅಸ್ವಸ್ಥೆಯಾಗಿದ್ದು, ಆಕೆಯ ಹೇಳಿಕೆಯನ್ನು ದಾಖಲಿಸಿಕೊಳ್ಳಲು ಅನುವಾದಕರನ್ನು ಕರೆಸಲಾಗಿತ್ತು. ಮಹಿಳೆ ಹೇಳಿಕೆ ದಾಖಲಿಸಿಕೊಂಡ ಬಳಿಕ ಘಟನೆಯ ಹಿಂದಿನ ಕಾರಣ ತಿಳಿದುಬಂದಿದೆ. ಸದ್ಯ ಕ್ಯಾಬ್ ಚಾಲಕನನ್ನು ಸ್ಥಳೀಯ ಗುರುಗ್ರಾಮ್‍ನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇದನ್ನೂ ಓದಿ: ಸೆಲ್ಫಿ ತೆಗೆದುಕೊಳ್ಳಲು ಹೋಗಿ ರೈಲಿಗೆ ಡಿಕ್ಕಿ – ನಾಲ್ವರ ಸಾವು

  • ಮಹಿಳೆಯ ಗುಪ್ತಾಂಗದಲ್ಲಿ 8.31 ಕೋಟಿ ಮೌಲ್ಯದ ಕೊಕೇನ್ ಪತ್ತೆ

    ಮಹಿಳೆಯ ಗುಪ್ತಾಂಗದಲ್ಲಿ 8.31 ಕೋಟಿ ಮೌಲ್ಯದ ಕೊಕೇನ್ ಪತ್ತೆ

    – ದಂಗಾದ ಕಸ್ಟಮ್ಸ್ ಅಧಿಕಾರಿಗಳು

    ಬೆಂಗಳೂರು: ಕಸ್ಟಮ್ಸ್ ಅಧಿಕಾರಿಗಳು ಇತಿಹಾಸದಲ್ಲೇ ಇಂಥ ಪ್ರಕರಣವನ್ನ ನೋಡಿರಲಿಲ್ಲ. ಯಾಕೆಂದರೆ ಮಹಿಳೆಯೊಬ್ಬಳು ತನ್ನ ಗುಪ್ತಾಂಗದಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದ ಡ್ರಗ್ಸ್ ಸಾಗಿಸಲು ಹೋಗಿ ಸಿಕ್ಕಿಬಿದ್ದಿದ್ದಾಳೆ.

    ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 8.31 ಕೋಟಿ ಮೌಲ್ಯದ ಮಾದಕ ವಸ್ತುಗಳನ್ನ ಮಹಿಳೆಯೊಬ್ಬಳ ಗುಪ್ತಾಂಗದಿಂದ ವಶಪಡಿಸಿಕೊಳ್ಳಲಾಗಿದೆ. ಗುಟೇಮಾಲಾ ದೇಶದ ಮಹಿಳೆಯ ಗುಪ್ತಾಂಗದಲ್ಲಿದ್ದ ಡ್ರಗ್ಸ್ ಕಂಡು ಕಸ್ಟಮ್ಸ್ ಅಧಿಕಾರಿಗಳೇ ದಂಗಾಗಿ ಹೋಗಿದ್ದಾರೆ.

    ಹರ್ರೆರಾ ವ್ಯಾಲೆಂಜುಲಾ ಡಿ ಲೋಪೆಜ್ ಸಿಲ್ವಿಯಾ ಗ್ವಾಡಾಲುಪೆ ಬಂಧಿತ ವಿದೇಶಿ ಮಹಿಳೆ. ಈಕೆ 150 ಕೊಕೇನ್ ಮಾತ್ರೆಗಳನ್ನು ಟ್ಯೂಬ್ ರೀತಿ ಮಾಡಿ ಗಪ್ತಾಂಗದಲ್ಲಿ ಇಟ್ಟುಕೊಂಡಿದ್ದಳು. ಇಥಿಯೋಪಿಯ ಏರ್ ಲೈನ್ಸ್ ET690 ಮೂಲಕ ಅಡಿಸ್ ಅಬಾಬದಿಂದ ಬೆಂಗಳೂರಿಗೆ ಬಂದಿದ್ದಳು. ಕೆಂಪೇಗೌಡ ಇಂಟರ್ ನ್ಯಾಷನಲ್ ಏರ್‌ಪೋರ್ಟ್‌ನಲ್ಲಿ ಕಸ್ಟಮ್ಸ್ ಅಧಿಕಾರಿಗಳ ತಪಾಸಣೆ ವೇಳೆ ಕೊಕೇನ್ ಪತ್ತೆಯಾಗಿದೆ.

    ಸಣ್ಣ ಸಣ್ಣ ಮಾತ್ರೆಗಳ ರೀತಿಯಲ್ಲಿ ಅದಕ್ಕೆ ಪ್ಲಾಸ್ಟಿಕ್ ರೀತಿಯ ವಸ್ತುವಿನಿಂದ ಕವರ್ ಮಾಡಿ, ಕೊಕೇನ್ ಶೇಖರಣೆ ಮಾಡಿಟ್ಟುಕೊಂಡಿದ್ದಳು. 1.385 ಗ್ರಾಂ ಕೊಕೇನ್ ಮಹಿಳೆಯ ಗುಪ್ತಾಂಗದಲ್ಲಿ ಪತ್ತೆಯಾಗಿದ್ದು, NDPS ACT ಅಡಿ ಈ ವಿದೇಶಿ ಮಹಿಳೆಯ ಬಂಧನವಾಗಿದೆ.

    ಅಂದಹಾಗೆ ಮಹಿಳೆಯೊಬ್ಬಳು ದೇಹದೊಳಗೆ ಇಷ್ಟೊಂದು ದೊಡ್ಡ ಪ್ರಮಾಣದ ಡ್ರಗ್ಸ್ ಬಚ್ಚಿಟ್ಟುಕೊಂಡು ಸಿಕ್ಕಿಬಿದ್ದಿರೋದು ಇದೇ ಮೊದಲು. ಈಕೆ ವಿಮಾನ ಏರುವ ಮುಂಚೆಯಿಂದ ಅಂದರೆ ಸುಮಾರು ಎರಡು ದಿನಗಳಿಂದ ತನ್ನ ಗುಪ್ತಾಂಗದಲ್ಲೇ ಕೊಕೇನ್ ಇಟ್ಟುಕೊಂಡಿದ್ದಳು. ಸದ್ಯ ಈಕೆಯನ್ನ ಬಂಧಿಸಿ ಕಸ್ಟಮ್ಸ್ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.

  • ಆಟೋ ಕುಬೇರನ ಕೋಟಿ ಆಸ್ತಿಯ ರಹಸ್ಯ ಕೊನೆಗೂ ಬಯಲು!

    ಆಟೋ ಕುಬೇರನ ಕೋಟಿ ಆಸ್ತಿಯ ರಹಸ್ಯ ಕೊನೆಗೂ ಬಯಲು!

    ಬೆಂಗಳೂರು: ನಗರದ ಆಟೋ ಚಾಲಕನ ಮನೆ ಮೇಲಿನ ಐಟಿ ರೇಡ್ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ವಿಚಾರಣೆ ವೇಳೆ ಸುಬ್ರಮಣಿಯ ಇಂಟ್ರೆಸ್ಟಿಂಗ್ ಕಹಾನಿ ಬಯಲಾಗಿದೆ.

    ಏಪ್ರಿಲ್ 16ರಂದು ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಆಟೋ ಡ್ರೈವರ್ ಮನೆ ಮೇಲೆ ದಾಳಿ ನಡೆಸಿದ್ದರು. ಈ ವೇಳೆ ಕೋಟ್ಯಂತರ ರೂ. ಮೌಲ್ಯದ ಆಸ್ತಿ ಪತ್ರ, ದಾಖಲೆಗಳು ಲಭ್ಯವಾಗಿತ್ತು. ಸದ್ಯ ಈ ಆಸ್ತಿಗಳ ವಿವರ ಒಟ್ಟು 1 ಕೋಟಿ 60 ಲಕ್ಷ ಎಂದು ಅಂದಾಜಿಸಲಾಗಿತ್ತು. ತನಿಖೆಯ ವೇಳೆ ಇಷ್ಟೊಂದು ಸಂಪತ್ತಿಗೆ ಅಮೆರಿಕ ಮಹಿಳೆ ಕಾರಣ ಎನ್ನುವುದು ತನಿಖೆಯ ವೇಳೆ ಬೆಳಕಿಗೆ ಬಂದಿದೆ.

    ರೋಚಕ ಕಥೆ:
    ಸುಬ್ರಮಣಿ ಕಳೆದ ಎಂಟು ವರ್ಷಗಳ ಹಿಂದೆ ಆಟೋ ಓಡಿಸಿಕೊಂಡಿದ್ದು, ವೈಟ್ ಫೀಲ್ಡ್ ಬಳಿ ಬಾಡಿಗೆ ಮನೆಯಲ್ಲಿ ವಾಸವಿದ್ದನು. ಒಂದು ದಿನ ವಿದೇಶಿ ಮಹಿಳೆ  ವೈಟ್ ಫೀಲ್ಡ್ ಗೆ ಬಂದಿಳಿದಿದ್ದರು. ಈ ವೇಳೆ ಆಟೋ ಓಡಿಸುತ್ತಿದ್ದ ಸುಬ್ರಮಣಿ ಅವರನ್ನು ತನ್ನ ಆಟೋದಲ್ಲಿ ವಿಲ್ಲಾಗೆ ಕರೆದುಕೊಂಡು ಬಂದಿದ್ದಾನೆ. ಈ ವೇಳೆ ಚಾಲಕ ಸುಬ್ರಮಣಿ ತನ್ನ ಮಾತು, ನಡುವಳಿಕೆಯಿಂದ ಮಹಿಳೆಯ ಮನಗೆದ್ದಿದ್ದನು.

    ಇದಾದ ನಂತರ ಮಹಿಳೆಯ ಎಲ್ಲ ಕೆಲಸಗಳಿಗೂ ಇದೇ ಸುಬ್ರಮಣಿಯನ್ನು ಕರೆದುಕೊಂಡು ಹೋಗುತ್ತಿದ್ದರು. ಏಕಾಂಗಿಯಾಗಿದ್ದ ವಿದೇಶಿ ಮಹಿಳೆಗೆ 80 ವರ್ಷ ವಯಸ್ಸಾಗಿರಬಹದು ಎಂದು ಸ್ಥಳೀಯರಿಂದ ಮಾಹಿತಿ ಲಭಿಸಿದೆ. ಈಗಲೂ ಎರಡು ಆಟೋಗಳನ್ನ ಬಾಡಿಗೆಗೆ ನೀಡಿರುವ ಸುಬ್ರಮಣಿ ಎರಡು ಕಾರುಗಳು ಹೊಂದಿದ್ದು, ಒಂದು ಕಾರು ಸ್ವಂತಕ್ಕೆ ಮತ್ತೊಂದು ಕಾರು ಬಾಡಿಗೆಗೆ ಬಿಟ್ಟಿದ್ದಾನೆ.

    ಆಟೋ ಚಾಲಕ ಸುಬ್ರಮಣಿ ಮತ್ತು ವಿದೇಶಿ ಮಹಿಳೆ 2013ರಲ್ಲಿ ವಿಲ್ಲಾ ಬಾಡಿಗೆಗೆ ಎಂದು ಬಂದಿದ್ದರು. ಸುಮಾರು ಎರಡು ವರ್ಷಗಳ ಕಾಲ ತಿಂಗಳಿಗೆ 30 ಸಾವಿರ ಬಾಡಿಗೆ ಕಟ್ಟುತ್ತಿದ್ದರು. ನಂತರ 2015ರಲ್ಲಿ ವಿಲ್ಲಾ ಖರೀದಿಗೆ ಇಬ್ಬರು ಮುಂದಾಗಿದ್ದಾರೆ. ಆ ವೇಳೆ 1 ಕೋಟಿ 60 ಲಕ್ಷಕ್ಕೆ ವಿಲ್ಲಾ ಖರೀದಿ ಮಾಡಿದ್ದಾರೆ. ಪ್ರತಿಹಂತದಲ್ಲೂ ಹತ್ತು ಲಕ್ಷದ ಚೆಕ್‍ಗಳ ಮೂಲಕ ಹಣ ನೀಡಿದ್ದಾರೆ. ಸುಬ್ರಮಣಿ ಮೊದಲಿಗೆ ಆಟೋ ಓಡಿಸುತ್ತಿದ್ದನು. ಈಗ ಫೈನಾನ್ಸ್ ವ್ಯವಹಾರ ಮಾಡುತ್ತಿದ್ದಾನೆ ಎಂದು ತಿಳಿದು ಬಂದಿದೆ.

    ವಿದೇಶಿ ಮಹಿಳೆ ಮದುವೆಯಾಗಿಲ್ಲ ಒಂಟಿಯಾಗಿದ್ದಾರೆ. ಅವರೇ ಹಣ ಕೊಟ್ಟು ವಿಲ್ಲಾ ಖರೀದಿ ಮಾಡಿದ್ದರು. ಮೊದಲ ಹಂತದಲ್ಲಿ ಸುಬ್ರಮಣಿ ವಾಸವಾಗಿದ್ದು, ಎರಡನೇ ಹಂತದಲ್ಲಿ ವಿದೇಶಿ ಮಹಿಳೆ ವಾಸವಾಗಿದ್ದಾರೆ. ವಿದೇಶಿ ಮಹಿಳೆ ಹೊರಗಡೆ ಓಡಾಡುವುದು ತುಂಬಾ ಕಡಿಮೆ. ಹೀಗಾಗಿ ಸುಬ್ರಮಣಿ ಎಲ್ಲ ವ್ಯವಹಾರವನ್ನು ನೋಡಿಕೊಳ್ಳುತ್ತಿದ್ದ ಎನ್ನುವ ಮಾಹಿತಿ ತಿಳಿದು ಬಂದಿದೆ.

    ಏಪ್ರಿಲ್ 16ರಂದು ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ದಾಳಿ ಮಾಡಿದ್ದು, ಸದ್ಯಕ್ಕೆ ವಿಲ್ಲಾ ಖರೀದಿ ಮಾಡಿದ್ದು ಯಾವಾಗ? ಎಷ್ಟು ಹಣಕ್ಕೆ ಖರೀದಿ ಮಾಡಿದ್ರು, ನಗದು ಅಥವಾ ಚೆಕ್ ಮೂಲಕ ಹಣ ನೀಡಿದ್ರಾ? ಅನ್ನೋದರ ಬಗ್ಗೆ ವಿವರಣೆ ನೀಡುವಂತೆ ಐಟಿ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ.

  • ಆಟೋ ಡ್ರೈವರ್ ಮನೆ ಮೇಲೆ ಐಟಿ ದಾಳಿ – ಬೆಳಕಿಗೆ ಬಂತು ಸ್ಫೋಟಕ ಮಾಹಿತಿ

    ಆಟೋ ಡ್ರೈವರ್ ಮನೆ ಮೇಲೆ ಐಟಿ ದಾಳಿ – ಬೆಳಕಿಗೆ ಬಂತು ಸ್ಫೋಟಕ ಮಾಹಿತಿ

    ಬೆಂಗಳೂರು: ಏಪ್ರಿಲ್ 16ರಂದು ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಆಟೋ ಡ್ರೈವರ್ ಮನೆ ಮೇಲೆ ದಾಳಿ ನಡೆಸಿದ್ದರು. ಸುಮಾರು 4 ತಾಸುಗಳ ಕಾಲ ದಾಳಿಯನ್ನ ಮಾಡಿದ್ದ ಬಳಿಕ ಸ್ಫೋಟಕ ಮಾಹಿತಿ ಬೆಳಕಿಗೆ ಬಂದಿದೆ.

    ವೈಟ್ ಫೀಲ್ಡ್ ನಿವಾಸಿ ಸುಬ್ರಮಣಿ ಮನೆಯ ಮೇಲೆ ಐಟಿ ದಾಳಿ ನಡೆದಿತ್ತು. ಈ ವೇಳೆ ಈತ ವಿದೇಶಿ ಮೂಲದ ಮಹಿಳೆಗೆ ಬೇನಾಮಿಯಾಗಿದ್ದನು ಎಂಬುದು ಸ್ಪಷ್ಟವಾಗಿದೆ. ವಿದೇಶಿ ಮಹಿಳೆಯೊಬ್ಬರಿಗೆ ಸುಬ್ರಮಣಿ ಬೇನಾಮಿಯಾಗಿದ್ದಾರೆ ಎಂದು ಐಟಿ ಇಲಾಖೆಗೆ ದೂರು ಹೋಗಿತ್ತು. ಈ ಹಿನ್ನೆಲೆಯಲ್ಲಿ ಸುಬ್ರಮಣಿ ವಿಲ್ಲಾ ಖರೀದಿ ಕುರಿತು ಅಧಿಕಾರಿಗಳು ಐಟಿ ಕಾಯ್ದೆ 21(1) ಅಡಿ ಮಾಹಿತಿ ಕೇಳಿದ್ದರು. ಅದಕ್ಕೆ ಸುಬ್ರಮಣಿ ಸರಿಯಾದ ದಾಖಲೆ ನೀಡಿದ್ದಾರೆ ಎಂದು ಪಬ್ಲಿಕ್ ಟಿವಿಗೆ ಐಟಿ ಇಲಾಖೆಯ ಮೂಲಗಳಿಂದ ಮಾಹಿತಿ ತಿಳಿದು ಬಂದಿದೆ.

    ವಿದೇಶಿ ಮಹಿಳೆ:
    ಆಟೋ ಚಾಲಕ ಸುಬ್ರಮಣಿಗೆ ವಿದೇಶಿ ಮೂಲದ ಮಹಿಳೆಯ ಪರಿಚಯವಾಗಿತ್ತು. ಇತ್ತ ವಿದೇಶಿ ಮಹಿಳೆ ಭಾರತದಲ್ಲಿ ಆಸ್ತಿ ಖರೀದಿ ಮಾಡುವ ಉದ್ದೇಶವನ್ನು ಹೊಂದಿದ್ದರು. ಆಗ ಈತ ನನಗೆ ರಾಜಕೀಯ ನಾಯಕರು ಪರಿಚಯ ಇದ್ದಾರೆ. ನನ್ನ ಮೇಲೆ ಐಟಿ ಅಧಿಕಾರಿ ದಾಳಿ ಮಾಡಲ್ಲ ಎಂದು ಮಹಿಳೆಗೆ ನಂಬಿಸಿರಬಹುದು ಎಂದು ಅನುಮಾನು ವ್ಯಕ್ತವಾಗಿದೆ. ನಂತರ ಮಹಿಳೆ ಆಟೋ ಚಾಲಕನ ಹೆಸರಿನಲ್ಲಿ ಆಸ್ತಿ ಖರೀದಿ ಮಾಡಿದ್ದಾಳೆ. ವಿದೇಶದಿಂದ ಆಕೆ ಬ್ಯಾಂಕ್ ಮೂಲಕ ಹಣ ವರ್ಗಾವಣೆ ಮಾಡಿದ್ದಾಳೆ ಎಂದು ತಿಳಿದು ಬಂದಿದೆ. ಮಹಿಳೆ ಕಳುಹಿಸಿದ ಹಣದಿಂದ ಸುಬ್ರಮಣಿ ವಿಲ್ಲಾ ಖರೀದಿ ಮಾಡಿದ್ದಾನೆ ಎಂದು ತನಿಖೆಯಲ್ಲಿ ತಿಳಿದು ಬಂದಿದೆ.

    ಐಟಿ ದಾಳಿ:
    ಸುಬ್ರಮಣಿ ಲಕ್ಸುರಿ ವಿಲ್ಲಾ ಮೇಲೆ ರೇಡ್ ಮಾಡಿರುವ ಅಧಿಕಾರಿಗಳು ಮಹತ್ವದ ದಾಖಲೆಗಳನ್ನ ವಶಕ್ಕೆ ಪಡೆದು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಕೋಟ್ಯಂತರ ರೂ. ಮೌಲ್ಯದ ಆಸ್ತಿ ಪತ್ರ, ದಾಖಲೆಗಳು ಲಭ್ಯವಾಗಿವೆ. ಸದ್ಯ ಈ ಆಸ್ತಿಗಳ ವಿವರ ಒಟ್ಟು 1 ಕೋಟಿ 60 ಲಕ್ಷ ಎಂದು ಅಂದಾಜಿಸಲಾಗಿದೆ. ಇನ್ನೂ ಈ ಖತರ್ನಾಕ್ ಸುಬ್ರಮಣಿ ಎಂಎಲ್‍ಎ ಅರವಿಂದ್ ಲಿಂಬಾಳಿಯ ಆಪ್ತ ಎನ್ನಲಾಗಿತ್ತು. ಅದಕ್ಕೆ ಪೂರಕ ಎಂಬಂತೆ ಈತ ಅವರ ಜೊತೆ ಇರುವ ಫೋಟೋಗಳು ಹರಿದಾಡುತ್ತಿವೆ.

    ಆಟೋ ಡ್ರೈವರ್ ಗೂ ನನಗೂ ಸಂಬಂಧವಿಲ್ಲ. ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ನನ್ನ ಜೊತೆ ಫೋಟೋ ತೆಗೆಸಿಕೊಂಡಿರುವುದು ಬಿಟ್ಟರೆ ಅವರು ನಮ್ಮ ಕಾರ್ಯಕರ್ತರಲ್ಲ ಎಂದು ಬಿಜೆಪಿ ಶಾಸಕ ಅರವಿಂದ್ ಲಿಂಬಾವಳಿ ಸ್ಪಷ್ಟಪಡಿಸಿದ್ದಾರೆ.

    ದಾಳಿ ಬಳಿಕ ಸುಬ್ರಮಣಿಗೆ ಐಟಿ ಅಧಿಕಾರಿಗಳು ನೋಟಿಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ತಿಳಿಸಿದ್ದಾರೆ. ಸಿಕ್ಕಿರುವ ದಾಖಲೆಗಳಿಗೆ ಉತ್ತರ ನೀಡುವಂತೆ ಸೂಚಿಸಿದ್ದಾರೆ.

  • ಮಸಾಜ್ ಮಾಡುವಾಗ ಆಂಟಿಯನ್ನೇ ರೇಪ್ ಮಾಡಿದ ಯುವಕ

    ಮಸಾಜ್ ಮಾಡುವಾಗ ಆಂಟಿಯನ್ನೇ ರೇಪ್ ಮಾಡಿದ ಯುವಕ

    ಚಂಡೀಗಢ: 28 ವರ್ಷದ ಮಸಾಜ್ ಮಾಡುವ ಯುವಕ 54 ವರ್ಷದ ವಿದೇಶಿ ಮಹಿಳೆಯನ್ನು ಅತ್ಯಾಚಾರ ಮಾಡಿರುವ ಘಟನೆ ಹರಿಯಾಣದ ಐಟಿ ಪಾರ್ಕ್ ನಲ್ಲಿರುವ ಪಂಚತಾರಾ ಹೋಟೆಲ್ ನಲ್ಲಿ ನಡೆದಿದೆ.

    ಸಂತ್ರಸ್ತೆ ಡಿಸೆಂಬರ್ 27 ರಂದು ಪೊಲೀಸರಿಗೆ ಈ ಬಗ್ಗೆ ದೂರು ಕೊಟ್ಟಿದ್ದು, ತಾನು ಪಾದದ ಮಸಾಜ್ ಮಾಡಿಸಿಕೊಳ್ಳುವಾಗ ಸ್ಪಾದಲ್ಲಿ ಅತ್ಯಾಚಾರ ಮಾಡಿದ್ದಾನೆ ಎಂದು ದೂರಿದ್ದಾರೆ. ಸದ್ಯಕ್ಕೆ ಆರೋಪಿ ತಲೆ ಮರೆಸಿಕೊಂಡಿದ್ದು, ಆತನು ಉತ್ತರ ಪ್ರದೇಶದ ಬಿಜ್ನೋರ್ ನಿವಾಸಿ ಅಂತ ತಿಳಿದು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ವಿದೇಶಿ ಮಹಿಳೆ ಡಿಸೆಂಬರ್ 19 ರಂದು ತನ್ನ ಪಾಟ್ನರ್ ಜೊತೆ ಪ್ರವಾಸಿ ವೀಸಾದಲ್ಲಿ ಚಂಡೀಗಢಕ್ಕೆ ಬಂದಿದ್ದರು. ಬಳಿಕ ಚಂಡೀಗಢದ ಐಟಿ-ಪಾರ್ಕ್ ನ ಸ್ಟಾರ್ ಹೋಟೆಲೊಂದರಲ್ಲಿ ತಂಗಿದ್ದರು. ಮಹಿಳೆ ಅಲ್ಲಿನ ಸ್ಪಾದಲ್ಲಿ ಮಸಾಜ್ ಗೆಂದು ಹೋಗಿದ್ದಾಗ ಆರೋಪಿ ಅಸಭ್ಯವಾಗಿ ಮುಟ್ಟಿ, ನನ್ನ ಜೊತೆ ಕೆಟ್ಟದ್ದಾಗಿ ವರ್ತಿಸಿ ಅತ್ಯಾಚಾರ ಎಸಗಿದ್ದಾನೆ ಎಂದು ಸಂತ್ರಸ್ತೆ ತಿಳಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.

    ಅದೇ ದಿನ ಮಹಿಳೆ ಹೋಟೆಲ್ ಆಡಳಿತ ಮಂಡಳಿಗೆ ಈ ಬಗ್ಗೆ ತಿಳಿಸಿದ್ದಾರೆ. ಆದರೆ ಡಿಸೆಂಬರ್ 27 ರಂದು ಶಿಮ್ಲಾದ ಪ್ರವಾಸಕ್ಕೆ ಹೋಗಿ ಅಲ್ಲಿಂದ ವಾಪಸ್ ಬಂದ ಬಳಿಕ ಪೊಲೀಸ್ ಠಾಣೆಗೆ ಬಂದು ದೂರನ್ನು ದಾಖಲಿಸಿದ್ದಾರೆ. ಅದೇ ದಿನ ಹೋಟೆಲ್ ಆಡಳಿತ ಮಂಡಳಿ ಆರೋಪಿಯನ್ನು ಕೆಲಸದಿಂದ ವಜಾ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಸಂತ್ರಸ್ತೆ ಸ್ಥಳೀಯ ಸಂಪ್ರದಾಯಗಳ ಬಗ್ಗೆ ತಿಳಿದುಕೊಳ್ಳಲು ಭಾರತಕ್ಕೆ ಭೇಟಿ ಕೊಡುತ್ತಿದ್ದರು. ಸದ್ಯಕ್ಕೆ ಆರೋಪಿ ತಲೆ ಮರೆಸಿಕೊಂಡಿದ್ದು, ಆತನಿಗಾಗಿ ಶೋಧಕಾರ್ಯ ನಡೆಯುತ್ತಿದೆ. ಸಂತ್ರಸ್ತೆಗೆ ಈಗಾಗಲೇ ವೈದ್ಯಕೀಯ ಪರೀಕ್ಷೆಯನ್ನು ಮಾಡಿಸಲಾಗಿದೆ. ಅಷ್ಟೇ ಅಲ್ಲದೇ ಸಂತ್ರಸ್ತೆಯ ಹೇಳಿಕೆಯನ್ನು ಮಾಜಿಸ್ಟ್ರೇಟ್ ಅವರು ರೆಕಾರ್ಡ್ ಮಾಡಿಕೊಂಡಿದ್ದಾರೆ ಎಂದು ಹಿರಿಯ ಪೊಲೀಸ್ ಅಧೀಕ್ಷಕ ನೀಲಾಂಬರಿ ಜಗ್ದಾಲೆ ತಿಳಿಸಿದ್ದಾರೆ.

    ಐಟಿ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 376 (ಅತ್ಯಾಚಾರ) ಅಡಿಯಲ್ಲಿ ಈ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • 28 ವರ್ಷಗಳ ಬಳಿಕ ಸತ್ಯ ತಿಳಿದು ತಂದೆ-ತಾಯಿಯನ್ನ ಹುಡುಕಲು ಸ್ವೀಡನ್ ನಿಂದ ಭಾರತಕ್ಕೆ ಬಂದ ಮಹಿಳೆ

    28 ವರ್ಷಗಳ ಬಳಿಕ ಸತ್ಯ ತಿಳಿದು ತಂದೆ-ತಾಯಿಯನ್ನ ಹುಡುಕಲು ಸ್ವೀಡನ್ ನಿಂದ ಭಾರತಕ್ಕೆ ಬಂದ ಮಹಿಳೆ

    ಬೆಂಗಳೂರು: ವಿದೇಶಿ ಮಹಿಳೆಯೊಬ್ಬರು ತನ್ನ ಸ್ವಂತ ತಂದೆ-ತಾಯಿಯನ್ನ ಹುಡುಕಲು ಭಾರತಕ್ಕೆ ಬಂದಿದ್ದಾರೆ.

    ವಿದೇಶಿ ಮಹಿಳೆ ಸೋನಿ 2 ವರ್ಷದ ಮಗುವಾಗಿದ್ದಾಗ ಹುಬ್ಬಳ್ಳಿಯಲ್ಲಿ ತನ್ನ ಪೋಷಕರಿಂದ ತಪ್ಪಿಸಿಕೊಂಡಿದ್ದರು. ಅಳುತ್ತಿದ್ದ ಮಗುವನ್ನ ಕಂಡ ಬೆಂಗಳೂರಿನ ಮಾತೃಚಾಯ ಅನಾಥಾಶ್ರಮದವರು ಕರೆದುಕೊಂಡು ಹೋಗಿ ಸಾಕಿದ್ದು, ಎರಡು ವರ್ಷಗಳ ಕಾಲ ಪೋಷಿಸಿದ್ದಾರೆ. ನಂತರ ಸ್ವೀಡನ್ ಮೂಲದ ದಂಪತಿ ಈಕೆಯನ್ನು ದತ್ತು ಪಡೆದಿದ್ದು, ಸ್ವೀಡನ್‍ಗೆ ಕರೆದುಕೊಂಡು ಹೋಗಿದ್ದಾರೆ.

    ಸೋನಿ ಕಳೆದ 28 ವರ್ಷಗಳ ಕಾಲ ಅವರ ಪೋಷಣೆಯಲ್ಲಿದ್ದು, ಅವರು ಸೋನಿಗೆ ಮದುವೆ ಕೂಡ ಮಾಡಿದ್ದಾರೆ. ಆದರೆ ಸೋನಿಗೆ ತನ್ನ ನಿಜವಾದ ತಂದೆ-ತಾಯಿ ಇವರಲ್ಲ, ಅವರು ಭಾರತದಲ್ಲಿದ್ದಾರೆ ಎಂದು ತಿಳಿದಿದೆ.

    28 ವರ್ಷಗಳ ಬಳಿಕ ಸತ್ಯ ತಿಳಿದ ಸೋನಿ, ಅಪ್ಪ ಅಮ್ಮನನ್ನ ನೋಡಬೇಕೆಂಬ ಆಸೆಯಿಂದ ಭಾರತಕ್ಕೆ ಬಂದಿದ್ದು, ಹೆತ್ತ ತಂದೆತಾಯಿಯ ಹುಟುಕಾಟದಲ್ಲಿದ್ದಾರೆ. ಐಶ್ವರ್ಯ ಅಂತಸ್ತು ಎಲ್ಲಾ ಇದ್ದರು ಸೋನಿಯ ಹೆತ್ತ ತಂದೆ-ತಾಯಿ ಯಾರು ಅಂತಾ ಗೊತ್ತಿಲ್ಲದೇ ಪ್ರತಿದಿನ ನೋವಲ್ಲೇ ಕಾಲ ಕಳೆಯುತ್ತಿದ್ದಾರೆ.