ನಿವೇದಿತಾ ಗೌಡ (Niveditha Gowda) ಸದಾ ವಿದೇಶಿ ಪ್ರವಾಸದಲ್ಲಿರುತ್ತಾರೆ. ಅಲ್ಲಿಂದಲೇ ರೀಲ್ಸ್ ಶೇರ್ ಮಾಡುತ್ತಾರೆ. ಹೆಚ್ಚು ಆಡಂಬರದ ಬದುಕು ಸವಿಯುತ್ತಾರೆ. ಆದರೆ ಸಿನಿಮಾದಲ್ಲೂ ನಿವೇದಿತಾ ಹೆಚ್ಚು ಸಕ್ರಿಯವಾಗಿಲ್ಲ. ಬೇರೆ ಆದಾಯವೂ ಕಾಣುವುದಿಲ್ಲ. ಇಷ್ಟಾದ್ಮೇಲೂ ನಿವೇದಿತಾ ಇಷ್ಟೊಂದು ಅದ್ಧೂರಿ ಜೀವನವನ್ನ ಹೇಗೆ ಮಾಡುತ್ತಾರೆ ಎಂಬ ಪ್ರಶ್ನೆ ಕೇಳಿಬರುತ್ತಿದೆ. ಇದೇ ಪ್ರಶ್ನೆಗಳು ಅವರು ವಿದೇಶದಿಂದ ರೀಲ್ಸ್ ಪೋಸ್ಟ್ ಮಾಡ್ದಾಗ ಕಾಮೆಂಟ್ಸ್ನಲ್ಲಿ ಕೇಳಿಬರುತ್ತೆ. ಆ ಕುತೂಹಲಕ್ಕೀಗ ನಿವೇದಿತಾ ಗೌಡ ತೆರೆ ಎಳೆದಿದ್ದಾರೆ.

ತಿಂಗಳಿಗೊಂದು ವಿದೇಶ ಪ್ರವಾಸ ಮಾಡಲು ನಿಮಗೆ ಹಣ ಎಲ್ಲಿಂದ ಬರುತ್ತೆ ಅನ್ನೋ ಪ್ರಶ್ನೆಗೆ ಇದೀಗ ನಿವೇದಿತಾ ಗೌಡ ಉತ್ತರ ಕೊಟ್ಟಿದ್ದಾರೆ. `ನನ್ನ ಹಣವನ್ನ ನಾನೇ ಸಂಪಾದಿಸುತ್ತೇನೆ, ನಾನು ಯಾರಿಂದಲೂ ಹಣ ತೆಗೆದುಕೊಳ್ಳೋದಿಲ್ಲ. ನನಗೆ ತೃಪ್ತಿಯಾಗುವಷ್ಟು ಹಣ ಸೋಶಿಯಲ್ ಮೀಡಿಯಾದಿಂದ ಬರುತ್ತಿದೆ. ಅದೇ ನನ್ನ ಆದಾಯದ ಮೂಲ’ ಎಂದು ಹೇಳುವ ಮೂಲಕ ತಮ್ಮ ಕಾಸ್ಟ್ಲಿ ಲೈಫ್‌ಸ್ಟೈಲ್ ಗುಟ್ಟು ಬಿಚ್ಚಿಟ್ಟಿದ್ದಾರೆ. ಇದನ್ನೂ ಓದಿ: ಎರಡನೇ ಮದುವೆ ಬಗ್ಗೆ ಮೌನ ಮುರಿದ ನಿವೇದಿತಾ ಗೌಡ
ಹಣ ಎಲ್ಲಿಂದ ಬರುತ್ತೆ ಅನ್ನೋದಕ್ಕೆ ನಿವೇದಿತಾ ಮಾತು
ನನ್ನ ಹಣವನ್ನು ನಾನೇ ಸಂಪಾದಿಸುತ್ತೇನೆ. ನಾನು ಯಾರ ಹಂಗಿನಲ್ಲೂ ಬದುಕುತ್ತಿಲ್ಲ. ನಾನು ಪ್ರವಾಸಕ್ಕೆ ಹೋಗುವಾಗ ಅಪ್ಪ-ಅಮ್ಮ ಹಣ ಬೇಕಾ ಅಂತ ಕೇಳ್ತಾರೆ. ಆದರೂ ನಾನು ತೆಗೆದುಕೊಳ್ಳುವುದಿಲ್ಲ. ದೇವರ ದಯೆಯಿಂದ ಹಿಂದಿನಿಂದಲೂ ನನ್ನ ಹಣವನ್ನು ನಾನೇ ಸಂಪಾದಿಸುತ್ತಿದ್ದೇನೆ. ಇಂಡಿಪೆಂಡೆಂಟ್ ಆಗಿ ಬದುಕುತ್ತಿದ್ದೇನೆ. ನನಗೆ ಯಾರ ಮೇಲೂ ಡಿಪೆಂಡ್ ಆಗುವುದು ಇಷ್ಟವಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಆದಾಯ ಚೆನ್ನಾಗಿದೆ. ಬಂದ ಕೂಡಲೇ ಟ್ರಿಪ್‌ಗೆ ಹೋಗುತ್ತೇನೆ. ನಾನು ಹಣವನ್ನ ಕೂಡಿಡಲು ಇಷ್ಟಪಡುವುದಿಲ್ಲ. ವಾಸ್ತವದಲ್ಲಿ ಬದುಕುತ್ತೇನೆ. ನನಗೆ ಒಳ್ಳೆ ಬಟ್ಟೆ ಹಾಕಿಕೊಳ್ಳುವುದು, ಒಳ್ಳೊಳ್ಳೆ ಶೂ ಧರಿಸುವುದು ಹಾಗೂ ಚೆನ್ನಾಗಿ ಕಾಣಬೇಕೆನ್ನುವುದು ಇಷ್ಟ. ಪ್ರವಾಸವೂ ನನ್ನಿಷ್ಟದ ಅಭ್ಯಾಸ. ನಾನು ಹೇರ್‌ವಾಶ್‌ಗೂ ವಾರಕ್ಕೆರಡು ದಿನ ಸಲೂನ್‌ಗೆ ಹೋಗುತ್ತೇನೆ ಅನ್ನೋದು ನಿಜ. ಆದರೆ ಹಿಂದೆಯೂ, ಈಗಲೂ ನಾನು ನನ್ನ ವೈಯಕ್ತಿಕ ಖರ್ಚಿಗಾಗಿ ಯಾರ ಮೇಲೂ ಡಿಪೆಂಡ್ ಆಗಿಲ್ಲ. ಬ್ರ್ಯಾಂಡ್‌ಗಳನ್ನು ಪ್ರಮೋಟ್ ಮಾಡ್ತೀನಿ, ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಇದ್ದೀನಿ. ಅಲ್ಲಿಂದಲೇ ಸಾಕಷ್ಟು ಹಣ ನನಗೆ ಬರುತ್ತೆ. ಅದರಿಂದಲೇ ನಾನು ವೈಭೋಗದ ಜೀವನ ನಡೆಸುತ್ತಿದ್ದೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಎಷ್ಟೇ ಕೆಟ್ಟ ಕಾಮೆಂಟ್ಸ್ ಬಂದ್ರೂ ಡೋಂಟ್ ಕೇರ್ ಎಂದ ನಿವೇದಿತಾ ಗೌಡ






























