Tag: Foreign Students

  • ವಿದೇಶಿ ವಿದ್ಯಾರ್ಥಿಗಳಿಗೆ ಹಾರ್ವರ್ಡ್ ವಿವಿಯಲ್ಲಿ ಸಿಗಲ್ಲ ಅವಕಾಶ

    ವಿದೇಶಿ ವಿದ್ಯಾರ್ಥಿಗಳಿಗೆ ಹಾರ್ವರ್ಡ್ ವಿವಿಯಲ್ಲಿ ಸಿಗಲ್ಲ ಅವಕಾಶ

    ವಾಷಿಂಗ್ಟನ್: ಅಮೆರಿಕದ (America) ಪ್ರತಿಷ್ಠಿತ ಹಾರ್ವಡ್ ವಿವಿಗೆ (Harvard University) ವಿದೇಶಿ ವಿದ್ಯಾರ್ಥಿಗಳ ನೋಂದಣಿಯನ್ನು ಟ್ರಂಪ್ ಸರ್ಕಾರ (Trump Government) ನಿಷೇಧಿಸಿದ್ದು, ಅಂತಾರಾಷ್ಟ್ರೀಯ ವೀಸಾ ಹೊಂದಿರುವ ವಿದ್ಯಾರ್ಥಿಗಳು ತಕ್ಷಣವೇ ಬೇರೆ ಕಡೆ ವರ್ಗ ಆಗುವಂತೆ ಎಚ್ಚರಿಸಿದೆ.ಇದನ್ನೂ ಓದಿ: ಮ್ಯಾಥ್ಯೂ ಫೋರ್ಡ್ ಸ್ಫೋಟಕ ಫಿಫ್ಟಿ – ಎಬಿಡಿ ವಿಶ್ವದಾಖಲೆ ಸರಿಗಟ್ಟಿದ ವಿಂಡೀಸ್‌ ಬ್ಯಾಟರ್

    ವಿದೇಶಿ ವಿದ್ಯಾರ್ಥಿಗಳು ಕಾನೂನುಬಾಹಿರ ಮತ್ತು ಹಿಂಸಾತ್ಮಕ ಚಟುವಟಿಕೆಗಳ ನಡೆಸುತ್ತಿದ್ದಾರೆ. ಈ ಬಗ್ಗೆ ಏ.30ರ ಒಳಗೆ ಮಾಹಿತಿ ನೀಡುವಂತೆ ಗೃಹ ಇಲಾಖೆ ಹೇಳಿತ್ತು. ಡೆಡ್‌ಲೈನ್ ಮುಗಿದ ಕಾರಣ ಈಗ ಈ ಕ್ರಮ ತೆಗೆದುಕೊಂಡಿದೆ. ಅಲ್ಲದೆ, ವಿವಿಗೆ ಕೊಡಲಾಗುತ್ತಿದ್ದ 2.7 ಮಿಲಿಯನ್ ಡಾಲರ್‌ಗೂ ಅಧಿಕ ಅನುದಾನವನ್ನು ರದ್ದು ಪಡಿಸಿದೆ ಎಂದು ತಿಳಿಸಿದ್ದಾರೆ.

    ಹಾರ್ವರ್ಡ್ ವಿವಿ ಎಡಪಂಥೀಯ ಸಿದ್ಧಾಂತ ಬೆಂಬಲಿಸುತ್ತದೆ ಎಂಬ ಕಾರಣಕ್ಕೆ ಟ್ರಂಪ್ ಈ ರೀತಿ ನಡೆದುಕೊಳುತ್ತಿದ್ದಾರೆ ಎನ್ನಲಾಗುತ್ತಿದ್ದು, ಮತ್ತೊಂದು ಕಡೆ, ಮೇಡ್ ಇನ್ ಅಮೆರಿಕ ಭರಾಟೆಯಲ್ಲಿ ವಿದೇಶಗಳ ಮೇಲೆ ಅಧ್ಯಕ್ಷ ಟ್ರಂಪ್ ವಕ್ರಗಣ್ಣು ಬೀರಿದ್ದಾರೆ. ಜೊತೆಗೆ ಭಾರತ ಸೇರಿದಂತೆ ವಿದೇಶಗಳಿಂದ ರಫ್ತಾಗುವ ಐಫೋನ್‌ಗಳ ಮೇಲೆ ಶೇ.25ರಷ್ಟು ತೆರಿಗೆ ವಿಧಿಸುವುದಾಗಿ ಟ್ರಂಪ್ ಹೇಳಿದ್ದಾರೆ.ಇದನ್ನೂ ಓದಿ:ಮೇ 30ಕ್ಕೆ ಮೋದಿ ಕಾನ್ಪುರ ಭೇಟಿ – ಪಹಲ್ಗಾಮ್‌ನಲ್ಲಿ ಉಗ್ರ ಗುಂಡೇಟಿಗೆ ಬಲಿಯಾದ ಶುಭಂ ದ್ವಿವೇದಿ ಕುಟುಂಬಸ್ಥರ ಭೇಟಿ ಸಾಧ್ಯತೆ

  • ಮಹಾಮಾರಿ ಕೊರೊನಾ ಭೀತಿ- ಮಣಿಪಾಲ ವಿವಿಗೆ 15 ದಿನ ರಜೆ

    ಮಹಾಮಾರಿ ಕೊರೊನಾ ಭೀತಿ- ಮಣಿಪಾಲ ವಿವಿಗೆ 15 ದಿನ ರಜೆ

    ಉಡುಪಿ: ಕರೊನಾ ವೈರಸ್ ಭೀತಿ ಹಿನ್ನೆಲೆ ರಾಜ್ಯ ಸರ್ಕಾರ ಒಂದು ವಾರ ಹೈ ಅಲರ್ಟ್ ಘೋಷಿಸಿದೆ. ಇದೀಗ ಜಿಲ್ಲೆಯ ಮಣಿಪಾಲ ವಿಶ್ವವಿದ್ಯಾಲಯ ವಿದ್ಯಾರ್ಥಿಗಳಿಗೆ ಎರಡು ವಾರಗಳ ಕಾಲ ರಜೆ ಘೋಷಿಸಿದೆ.

    ವಿವಿಯ ಸಾವಿರಾರು ವಿದ್ಯಾರ್ಥಿಗಳು ವಿದೇಶದ ಸಂಪರ್ಕ ಹೊಂದಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಈ ಆದೇಶವನ್ನು ಹೊರಡಿಸಿದೆ. ಹೊರ ರಾಜ್ಯದ ವಿದ್ಯಾರ್ಥಿಗಳು ಮಣಿಪಾಲದಿಂದ ತಮ್ಮ ರಾಜ್ಯಗಳಿಗೆ ತೆರಳಿದ್ದು, ವಿದೇಶದ ವಿದ್ಯಾರ್ಥಿಗಳು ಮಣಿಪಾಲದಲ್ಲೇ ಉಳಿದುಕೊಳ್ಳುವ ಸೂಚನೆಯನ್ನು ವಿವಿ ಕೊಟ್ಟಿದೆ. ಇಂಗ್ಲಿಷ್ ಮಾತನಾಡುವ ಐವತ್ನಾಲ್ಕು ದೇಶದ ವಿದ್ಯಾರ್ಥಿಗಳು ಶಿಕ್ಷಣವನ್ನು ಅರಸಿ ಮಣಿಪಾಲಕ್ಕೆ ಬಂದಿದ್ದಾರೆ. ವಿಶ್ವದ ಒಟ್ಟು 60 ದೇಶಗಳ ವಿದ್ಯಾರ್ಥಿಗಳು ಮಣಿಪಾಲದ ಮಾಹೆ ವಿವಿಯಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಅಲ್ಲದೆ ಗುಜರಾತ್, ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತು ಈಶಾನ್ಯ ರಾಜ್ಯಗಳ ಸಾವಿರಾರು ವಿದ್ಯಾರ್ಥಿಗಳು ಇಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ.

    ಎಂಐಟಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಹೊರರಾಜ್ಯದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಮೆಡಿಕಲ್ ಮತ್ತು ನರ್ಸಿಂಗ್ ವಿದ್ಯಾರ್ಥಿಗಳು ಕೂಡ ಸಾಕಷ್ಟು ಜನ ಇದ್ದಾರೆ. ಮಣಿಪಾಲ ವಿವಿಯ ವಿದ್ಯಾರ್ಥಿಗಳು ಇಂಟರ್ನ್‍ಶಿಪ್, ಪೇಪರ್ ಪ್ರಸೆಂಟೇಷನ್ ಗಾಗಿ ವಿದೇಶ ಪ್ರವಾಸ ಮಾಡುತ್ತಿರುತ್ತಾರೆ. ವಿದೇಶಿ ವಿದ್ಯಾರ್ಥಿಗಳು ವರ್ಷಕ್ಕೆ ಎರಡು ಬಾರಿ ತಮ್ಮ ದೇಶಗಳಿಗೆ ತೆರಳುತ್ತಾರೆ. ಕಾನ್ವೊಕೇಷನ್, ವಾರ್ಷಿಕೋತ್ಸವ ಸಂದರ್ಭದಲ್ಲಿ ವಿದ್ಯಾರ್ಥಿಗಳ ಹೆತ್ತವರು ವಿದೇಶದಿಂದ ಮಣಿಪಾಲಕ್ಕೆ ಆಗಮಿಸುತ್ತಾರೆ. ಹೀಗಾಗಿ ವಿವಿ ಎಚ್ಚರಿಕೆ ಕ್ರಮ ವಹಿಸಿದೆ.

    ವಿದೇಶದಿಂದ ಬರುವ ವಿದ್ಯಾರ್ಥಿಗಳಿಗೆ ಮತ್ತು ಅವರ ಸಂಬಂಧಿಕರಿಗೆ ರಜೆಯಲ್ಲಿ ವಿದೇಶ ಪ್ರವಾಸ ಮಾಡುವುದಕ್ಕೆ ವಿವಿ ತಡೆಯೊಡ್ಡಿದೆ. ಹದಿನೈದು ದಿನಗಳ ಕಾಲ ರಜೆ ನೀಡಿದ್ದು, ಹೊರ ರಾಜ್ಯದ ವಿದ್ಯಾರ್ಥಿಗಳನ್ನು ತಮ್ಮ ರಾಜ್ಯಗಳಿಗೆ ವಾಪಸ್ ಕಳುಹಿಸಿದೆ. ಕರೊನಾ ವೈರಸ್ ಹತೋಟಿಗೆ ಬಂದ ನಂತರ ಅಂದರೆ ಮಾರ್ಚ್ ಮೂವತ್ತರ ನಂತರ ವಾಪಸ್ ಮಣಿಪಾಲಕ್ಕೆ ಬರುವಂತೆ ಆದೇಶ ಹೊರಡಿಸಿದೆ. ಮಣಿಪಾಲ ವಿವಿಯ ಎಲ್ಲ ಬ್ರಾಂಚ್ ಗಳಿಗೂ ಈ ಕುರಿತು ಸುತ್ತೋಲೆ ಹೊರಡಿಸಲಾಗಿದೆ.

    ವಿದ್ಯಾರ್ಥಿನಿಲಯ, ತರಗತಿ, ಜಿಮ್, ಕ್ಯಾಂಟೀನ್ ಮುಂತಾದ ಸ್ಥಳಗಳಲ್ಲಿ ಸಾವಿರಾರು ವಿದ್ಯಾರ್ಥಿಗಳು ಸೇರುವುದರಿಂದ ಆರೋಗ್ಯ ಸಮಸ್ಯೆ ಬಾಧಿಸದಿರಲಿ ಎಂಬ ಉದ್ದೇಶದಿಂದ ವಿವಿ ಈ ಕ್ರಮ ವಹಿಸಿ, ರಜೆ ಘೋಷಿಸಿದೆ.

  • ವಿದ್ಯಾಭ್ಯಾಸ ಮುಗಿದ್ರೂ ಮೈಸೂರಲ್ಲಿ ಉಳಿಯಲು ವಿದೇಶಿ ವಿದ್ಯಾರ್ಥಿಗಳು ಮಾಡಿದ್ದ ಕಳ್ಳ ಮಾರ್ಗ ಬಯಲು

    ವಿದ್ಯಾಭ್ಯಾಸ ಮುಗಿದ್ರೂ ಮೈಸೂರಲ್ಲಿ ಉಳಿಯಲು ವಿದೇಶಿ ವಿದ್ಯಾರ್ಥಿಗಳು ಮಾಡಿದ್ದ ಕಳ್ಳ ಮಾರ್ಗ ಬಯಲು

    ಮೈಸೂರು: ನಗರದಲ್ಲಿ ದೇಶದ ಆಂತರಿಕ ಭದ್ರತೆಯನ್ನೆ ಅಪಾಯಕ್ಕೆ ತಂದ್ದೊಡುವ ದಂಧೆ ನಡೆಯುತ್ತಿದೆ. ಪೊಲೀಸರ ಮುಂಜಾಗ್ರತಾ ಕ್ರಮದಿಂದ ವೀಸಾ ಅವಧಿ ವಿಸ್ತರಣಾ ದಂಧೆ ಬಯಲಾಗಿದೆ.

    ವಿದ್ಯಾಭ್ಯಾಸಕ್ಕೆ ಬರುವ ವಿದೇಶಿ ವಿದ್ಯಾರ್ಥಿಗಳು ಅವಧಿ ಮುಗಿದ ಮೇಲೆಯೂ ಮೈಸೂರಿನಲ್ಲಿ ನೆಲೆಸಲು ಕಳ್ಳ ಮಾರ್ಗ ಹಿಡಿದಿದ್ದಾರೆ. ನಕಲಿ ಕೋರ್ಸ್ ಗೆ ಸೇರ್ಪಡೆ ಆಗಿ ಪ್ರವೇಶಾತಿ ದಾಖಲೆಯನ್ನು ಪೊಲೀಸ್ ಇಲಾಖೆಗೆ ಸಲ್ಲಿಸಿ ಸಲೀಸಾಗಿ ತಮ್ಮ ವೀಸಾ ಅವಧಿಯನ್ನು ವಿಸ್ತರಣೆ ಮಾಡಿಕೊಳ್ಳುತ್ತಿದ್ದಾರೆ. ಈ ಮೂಲಕ ಅನೇಕ ವರ್ಷಗಳಿಂದ ಅಕ್ರಮವಾಗಿ ಮೈಸೂರಿನಲ್ಲಿ ಅನೇಕರು ವಾಸವಾಗಿದ್ದಾರೆ.

    ಮೈಸೂರು ನಗರದಲ್ಲೇ 100ಕ್ಕೂ ಹೆಚ್ಚು ವಿದೇಶಿಗರು ಈ ರೀತಿ ಪೊಲೀಸ್ ಇಲಾಖೆಯನ್ನು ಯಾಮಾರಿಸಿ ಅಕ್ರಮವಾಗಿ ನೆಲೆಸಿದ್ದಾರೆ. ವಿದೇಶಿಗರಿಗೆ ಈ ರೀತಿ ಡಿಪ್ಲೋಮಾ ಕೋರ್ಸಿನ ನಕಲಿ ಪ್ರವೇಶಾತಿ ನೀಡಿರುವುದು ಮೈಸೂರಿನ ಕೆ.ಆರ್. ಮೊಹಲ್ಲಾದಲ್ಲಿನ ಶ್ರೀಕಾಂತ ಮಹಿಳಾ ಪ್ರಥಮ ದರ್ಜೆ ಕಾಲೇಜು ಪ್ರಿನ್ಸಿಪಲ್ ಚಂದ್ರಬಾಬುನಾಯ್ಡು.

    ನಕಲಿ ದಾಖಲೆ ಸೃಷ್ಠಿಸಿ ಹಾಗೂ ಅಕ್ರಮ ವಾಸದ ಆರೋಪದ ಮೇಲೆ ವಿದೇಶಿ ವಿದ್ಯಾರ್ಥಿಗಳ ಮೇಲೆ ಕೇಸ್ ದಾಖಲಾಗಿದೆ ವಿದೇಶಿ ವಿದ್ಯಾರ್ಥಿಗಳಿಗೆ ನಕಲಿ ಪ್ರವೇಶಾತಿ ಪತ್ರ ನೀಡಿದ್ದ ಶ್ರೀಕಾಂತ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಮೇಲೆ ಎಫ್‍ಐಆರ್ ದಾಖಲಾಗಿದೆ. ಎಫ್‍ಐಆರ್ ದಾಖಲಾಗುತ್ತಿದ್ದಂತೆಯೇ ಕಾಲೇಜಿನ ಪ್ರಾಂಶುಪಾಲ ಚಂದ್ರಬಾಬು ನಾಯ್ಡು ಕಚೇರಿಗೆ ಬೀಗ ಹಾಕಿ ಪರಾರಿಯಾಗಿದ್ದಾನೆ.