Tag: Foreign Currency

  • ಅಫ್ಘಾನ್‌ನಲ್ಲಿ ವಿದೇಶಿ ಕರೆನ್ಸಿ ಬಳಕೆ ನಿಷೇಧಿಸಿದ ತಾಲಿಬಾನ್‌

    ಅಫ್ಘಾನ್‌ನಲ್ಲಿ ವಿದೇಶಿ ಕರೆನ್ಸಿ ಬಳಕೆ ನಿಷೇಧಿಸಿದ ತಾಲಿಬಾನ್‌

    ಕಾಬೂಲ್: ಅಫ್ಘಾನಿಸ್ತಾನದಲ್ಲಿ ವಿದೇಶಿ ಕರೆನ್ಸಿಗಳನ್ನು ಬಳಸುವುದನ್ನು ನಿಷೇಧಿಸಿ ತಾಲಿಬಾನ್‌ ಆದೇಶ ಹೊರಡಿಸಿದೆ. ಈಗಾಗಲೇ ದುರ್ಬಲಗೊಂಡಿರುವ ಆರ್ಥಿಕ ಪರಿಸ್ಥಿತಿಯು ಈ ಆದೇಶದಿಂದ ಮತ್ತಷ್ಟು ಕುಂಠಿತಗೊಳ್ಳುವ ಸಾಧ್ಯತೆ ಇದೆ.

    ಭಯೋತ್ಪಾದಕರ ಗುಂಪು ಆಗಸ್ಟ್‌ನಲ್ಲಿ ಅಫ್ಘಾನಿಸ್ತಾನದಲ್ಲಿ ಅಧಿಕಾರ ವಶಪಡಿಸಿಕೊಂಡಾಗಿನಿಂದ ಅಫ್ಘಾನ್‌ ರಾಷ್ಟ್ರೀಯ ಕರೆನ್ಸಿಯು ಮೌಲ್ಯ ಕಳೆದುಕೊಂಡಿದೆ.

    ಅಫ್ಘಾನ್‌ ದೇಶದ ಆರ್ಥಿಕತೆಯು ಕ್ಷೀಣಿಸುತ್ತಿರುವಾಗ ಬ್ಯಾಂಕ್‌ಗಳು ನಗದು ಕೊರತೆಯನ್ನು ಎದುರಿಸುತ್ತಿವೆ. ಅಂತಾರಾಷ್ಟ್ರೀಯ ಸಮುದಾಯವು ತಾಲಿಬಾನ್‌ ಆಡಳಿತವನ್ನು ಸರ್ಕಾರವೆಂದು ಪರಿಗಣಿಸಲು ನಿರಾಕರಿಸಿದೆ. ಇದನ್ನೂ ಓದಿ: 5-11 ವಯಸ್ಸಿನ ಮಕ್ಕಳಿಗೆ ಫೈಜರ್‌ ಲಸಿಕೆ ನೀಡಲು ಅಮೆರಿಕ ಅನುಮೋದನೆ

    ಇನ್ಮುಂದೆ ಯಾರಾದರೂ ವಿದೇಶಿ ಕರೆನ್ಸಿಯನ್ನು ದೇಶೀಯ ವ್ಯವಹಾರಕ್ಕೆ ಬಳಸಿದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ತಾಲಿಬಾನ್‌ ವಕ್ತಾರ ಜಬೀವುಲ್ಲಾ ಮುಜಾಹಿದ್‌ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

    ದೇಶದ ಆರ್ಥಿಕ ಪರಿಸ್ಥಿತಿ ಮತ್ತು ರಾಷ್ಟ್ರದ ಹಿತಾಸಕ್ತಿಗಾಗಿ ಪ್ರತಿ ವ್ಯವಹಾರದಲ್ಲೂ ಅಫ್ಘಾನಿ ಕರೆನ್ಸಿ ಬಳಸುವ ಅಗತ್ಯತೆ ಇದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: ಅವನು ಇನ್ನೂ ನನ್ನ ಮಡಿಲಲ್ಲಿ, ಆಲೋಚನೆಗಳಲ್ಲಿ ಶಾಶ್ವತವಾಗಿದ್ದಾನೆ: ರಾಘವೇಂದ್ರ ರಾಜ್‍ಕುಮಾರ್

    ದೇಶದ ಎಲ್ಲಾ ನಾಗರಿಕರು, ಅಂಗಡಿಯವರು, ವ್ಯಾಪಾರಿಗಳು, ಉದ್ಯಮಿಗಳು ಅಫ್ಘಾನಿ ಕರೆನ್ಸಿಯನ್ನೇ ವ್ಯವಹಾರಕ್ಕೆ ಬಳಸಬೇಕು. ವಿದೇಶಿ ಕರೆನ್ಸಿ ಬಳಕೆ ನಿಲ್ಲಿಸಬೇಕು ಎಂದು ಸೂಚನೆ ನೀಡಲಾಗಿದೆ.

  • ಚಿಕ್ಕತಿರುಪತಿಯ ಹುಂಡಿಯಲ್ಲಿ 63 ಲಕ್ಷ ನಗದು, ಬೆಳ್ಳಿ, ಬಂಗಾರ, ವಿದೇಶಿ ಕರೆನ್ಸಿ ಪತ್ತೆ

    ಚಿಕ್ಕತಿರುಪತಿಯ ಹುಂಡಿಯಲ್ಲಿ 63 ಲಕ್ಷ ನಗದು, ಬೆಳ್ಳಿ, ಬಂಗಾರ, ವಿದೇಶಿ ಕರೆನ್ಸಿ ಪತ್ತೆ

    ಕೋಲಾರ: ಜಿಲ್ಲೆಯ ಮಾಲೂರು ತಾಲೂಕಿನ ಚಿಕ್ಕತಿರುಪತಿ ಗ್ರಾಮದಲ್ಲಿರುವ ಶ್ರೀಪ್ರಸನ್ನ ವೆಂಕಟೇಶ್ವರಸ್ವಾಮಿ ದೇಗುಲದ ಹುಂಡಿ ಎಣಿಕೆ ಕಾರ್ಯ ನಡೆದಿದೆ.

    ಈ ವೇಳೆ ಬೆಳ್ಳಿ, ಬಂಗಾರ, ನಗದು ಸೇರಿದಂತೆ ವಿದೇಶಿ ಕರೆನ್ಸಿ ಹುಂಡಿಯಲ್ಲಿ ಪತ್ತೆಯಾಗಿದೆ. 64 ಗ್ರಾಂ ಬಂಗಾರ, 327 ಗ್ರಾಂ ಬೆಳ್ಳಿ ಆಭರಣಗಳು ಕೂಡ ಸಂಗ್ರಹವಾಗಿವೆ. ಈ ಪ್ರಸನ್ನ ವೆಂಕಟರಮಣ ಸ್ವಾಮಿ ದೇವಸ್ಥಾನ ಮುಜರಾಯಿ ಇಲಾಖೆ ವ್ಯಾಪ್ತಿಗೆ ಒಳಪಡುತ್ತದೆ.

    ಮೂರು ತಿಂಗಳಲ್ಲಿ 63,97,964 ಲಕ್ಷ ರೂಪಾಯಿ ಹಣ ಸಂಗ್ರಹವಾಗಿದೆ. ಹುಂಡಿ ಎಣಿಕೆಯ ವೇಳೆ ಮುಜರಾಯಿ ತಹಶೀಲ್ದಾರ್ ನಾಗವೇಣಿ ಉಪಸ್ಥಿತರಿದ್ದರು.

     

  • 5.48 ಲಕ್ಷ ರೂ. ಮೌಲ್ಯದ ವಿದೇಶಿ ಕರೆನ್ಸಿ ಸಾಗಾಟ- ಮಂಗ್ಳೂರಿನಲ್ಲಿ ಓರ್ವ ವಶಕ್ಕೆ

    5.48 ಲಕ್ಷ ರೂ. ಮೌಲ್ಯದ ವಿದೇಶಿ ಕರೆನ್ಸಿ ಸಾಗಾಟ- ಮಂಗ್ಳೂರಿನಲ್ಲಿ ಓರ್ವ ವಶಕ್ಕೆ

    ಮಂಗಳೂರು: 5.48 ಲಕ್ಷ ರೂ. ಮೌಲ್ಯದ ವಿದೇಶಿ ಕರೆನ್ಸಿ ಸಾಗಿಸುತ್ತಿದ್ದ ಪ್ರಯಾಣಿಕನೋರ್ವನನ್ನು ಮಂಗಳೂರು ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

    ಕೇರಳ ಮೂಲದ ಸಾಹುಲ್ ಹಮೀದ್ ವಿದೇಶಿ ಕರೆನ್ಸಿ ಸಾಗಿಸುತ್ತಿದ್ದ ವ್ಯಕ್ತಿ. ದುಬೈಗೆ ತೆರಳಲು ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿದ್ದ ಸಾಹುಲ್ ಹಮೀದ್‍ನನ್ನು ಸಿಐಎಸ್‍ಎಫ್ ಸಿಬ್ಬಂದಿ ತಪಾಸಣೆ ನಡೆಸುತ್ತಿದ್ದರು. ಈ ವೇಳೆ 5.48 ಲಕ್ಷ ರೂ. ಮೌಲ್ಯದ ಬೇರೆ ಬೇರೆ ದೇಶಗಳ ಕರೆನ್ಸಿ ಸಿಕ್ಕಿವೆ.

    ಸಾಹುಲ್ ಹಮೀದ್ ಹ್ಯಾಂಡ್ ಬ್ಯಾಗ್‍ನಲ್ಲಿದ್ದ ಅಮೆರಿಕನ್ ಡಾಲರ್, ಚೀನಾ, ಮಲೇಷ್ಯಾ, ಟರ್ಕಿ ದೇಶಗಳ ಒಟ್ಟು 5.48 ಲಕ್ಷ ರೂಪಾಯಿ ಮೌಲ್ಯದ ವಿದೇಶಿ ಕರೆನ್ಸಿಗಳು ಪತ್ತೆಯಾಗಿವೆ. ಸಿಐಎಸ್‍ಎಫ್ ಸಿಬ್ಬಂದಿ ಆತನನ್ನು ಕಸ್ಟಮ್ಸ್ ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ. ಸಾಹುಲ್ ಹಮೀದ್ ವಿದೇಶಿ ಕರೆನ್ಸಿ ಸಾಗಾಟ ಜಾಲದಲ್ಲಿ ಭಾಗಿಯಾಗಿದ್ದಾನೆ ಎಂಬ ಶಂಕೆ ವ್ಯಕ್ತಪಡಿಸಿರುವ ಕಸ್ಟಮ್ಸ್ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ.

  • ಹುಂಡಿಯಲ್ಲಿ ವಿದೇಶಿ ಕರೆನ್ಸಿ, ನಿಷೇಧಿತ ನೋಟುಗಳು ಪತ್ತೆ

    ಹುಂಡಿಯಲ್ಲಿ ವಿದೇಶಿ ಕರೆನ್ಸಿ, ನಿಷೇಧಿತ ನೋಟುಗಳು ಪತ್ತೆ

    ಚಿಕ್ಕಬಳ್ಳಾಪುರ: ಜಿಲ್ಲೆಯ ಐತಿಹಾಸಿಕ ಪುರಾತನ ಪ್ರಸಿದ್ಧ ವಿದುರಾಶ್ವತ್ಥ ಗ್ರಾಮದ ಅಶ್ವತ್ಥ ನಾರಾಯಣಸ್ವಾಮಿ ದೇಗುಲದ ಹುಂಡಿ ಎಣಿಕೆ ಕಾರ್ಯದ ವೇಳೆ ವಿದೇಶಿ ಕರೆನ್ಸಿ ಅಮೆರಿಕನ್ ಡಾಲರ್ ಸೇರಿದಂತೆ ನಿಷೇಧಿತ 100 ರೂ. ಮೌಲ್ಯದ ನೋಟುಗಳು ಪತ್ತೆಯಾಗಿವೆ.

    ಕಳೆದ 3 ತಿಂಗಳಿಂದ ಹುಂಡಿಯಲ್ಲಿ ಸಂಗ್ರಹವಾದ ಹಣವನ್ನು ಎಣಿಕೆ ಮಾಡಲಾಗಿದ್ದು, ಒಟ್ಟು 15 ಲಕ್ಷದ 71 ಸಾವಿರ ರೂ. ಸಂಗ್ರಹವಾಗಿದೆ. ಹುಂಡಿಯಲ್ಲಿ 7 ಅಮೆರಿಕನ್ ಡಾಲರ್ ನೋಟುಗಳು ಹಾಗೂ 24 ನಿಷೇಧಿತ 100 ರೂ. ನೋಟುಗಳು ಸೇರಿದಂತೆ 3 ಅಮೆರಿಕನ್ ಡಾಲರ್ ನಾಣ್ಯಗಳು ಪತ್ತೆಯಾಗಿವೆ.

    3 ತಿಂಗಳಿಗೊಮ್ಮ ಹುಂಡಿ ಎಣಿಕೆ ಕಾರ್ಯ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಎರಡು ತಿಂಗಳಿಗೊಮ್ಮೆ ಹಣ ಎಣಿಕೆ ಕಾರ್ಯ ಮಾಡಲು ಚಿಂತಿಸಿದ್ದೇವೆ ಎಂದು ಪ್ರಭಾರ ಕಾರ್ಯನಿರ್ವಾಹಕಾಧಿಕಾರಿ ಶ್ರೀನಿವಾಸ್ ತಿಳಿಸಿದರು.

    ಹುಂಡಿಯಲ್ಲಿ ಭಕ್ತರೊಬ್ಬರು ಅಶ್ವತ್ಥನಾರಾಯಣ, ಅಶ್ವತ್ಥನಾರಾಯಣ ಎಂದು ಅಶ್ವತ್ಥನಾರಾಯಣ ನಾಮ ಜಪವನ್ನು ಸಾವಿರಾರು ಬಾರಿ ಬರೆದು ಹುಂಡಿಗೆ ಆ ಪುಸ್ತಕವನ್ನು ಅರ್ಪನೆ ಮಾಡಿದ್ದರು. ಮತ್ತೊಬ್ಬ ಭಕ್ತ ತಮ್ಮ ಸಂಬಂಧಿಯೊಬ್ಬರು ಬ್ರಾಹ್ಮಣ ಸಂಘದ ಅಧ್ಯಕ್ಷರಾಗಲಿ ಎಂದು ದೇವರಿಗೆ ಹರಕೆ ಬರೆದು ಹುಂಡಿಗೆ ಹಾಕಿದ್ದರು.

  • ದೇವರ ಹುಂಡಿಯಲ್ಲಿ ವಿದೇಶಿ ಕರೆನ್ಸಿ ಹಾಗೂ ನಿಷೇಧಿತ ನೋಟು ಪತ್ತೆ

    ದೇವರ ಹುಂಡಿಯಲ್ಲಿ ವಿದೇಶಿ ಕರೆನ್ಸಿ ಹಾಗೂ ನಿಷೇಧಿತ ನೋಟು ಪತ್ತೆ

    ಚಿಕ್ಕಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಶ್ರೀ ಘಾಟಿ ಸುಬ್ರಹಣ್ಯ ಕ್ಷೇತ್ರದ ಹುಂಡಿ ಎಣಿಕೆ ಕಾರ್ಯ ಇಂದು ನಡೆದಿದ್ದು, 28,18,831 ರೂ. ಹಣ ಸಂಗ್ರಹವಾಗಿದೆ.

    ಪ್ರತಿ ತಿಂಗಳು ದೇವಾಲಯದ ಹುಂಡಿ ಎಣಿಕೆ ಕಾರ್ಯ ನಡೆಯಲಿದ್ದು ಏಪ್ರಿಲ್ ತಿಂಗಳ ಹುಂಡಿ ಎಣಿಕೆ ಕಾರ್ಯ ಇಂದು ನಡೆಯಿತು. ಏಪ್ರಿಲ್ ತಿಂಗಳಲ್ಲಿ ಹೆಚ್ಚಿನ ರಜಾ ದಿನಗಳಿದ್ದ ಕಾರಣ ದೇವಾಲಯಕ್ಕೆ ಭಕ್ತರು ಸಹ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಹೋಗಿದ್ದು, ಅತಿ ಹೆಚ್ಚಿನ ಹಣ ಸಂಗ್ರಹವಾಗಿದೆ.

    ಹುಂಡಿಯಲ್ಲಿ ಬ್ಯಾನ್ ಆಗಿದ್ದ 500 ಮುಖಬೆಲೆಯ 23 ನೋಟುಗಳು ಹಾಗೂ ಅಮೇರಿಕ, ಮಲೇಷ್ಯಾ ಕರೆನ್ಸಿ ಪತ್ತೆಯಾಗಿವೆ. ಇದಲ್ಲದೆ 2 ಗ್ರಾಂ ಬಂಗಾರ ಹಾಗೂ 1 ಕೆಜಿ 250 ಗ್ರಾಂ ಬೆಳ್ಳಿ ಅಭರಣಗಳು ಸಹ ಸಂಗ್ರಹವಾಗಿವೆ. ಈ ಬಾರಿ ಹುಂಡಿ ಎಣಿಕೆ ಕಾರ್ಯದಲ್ಲಿ ಭಕ್ತರು ಸಹ ಭಾಗವಹಿಸಿದ್ದರು. ವಿಡಿಯೋ ಚಿತ್ರೀಕರಣದೊಂದಿಗೆ ಎಣಿಕೆ ಕಾರ್ಯ ನಡೆಸಲಾಗಿದೆ.