Tag: Foreign Birds

  • ಗದಗ | ಮಾಗಡಿ ಕೆರೆಯಲ್ಲಿ ಕಣ್ಮನ ಸೆಳೆಯುತ್ತಿದೆ ವಿದೇಶಿ ಬಾನಾಡಿಗಳು

    ಗದಗ | ಮಾಗಡಿ ಕೆರೆಯಲ್ಲಿ ಕಣ್ಮನ ಸೆಳೆಯುತ್ತಿದೆ ವಿದೇಶಿ ಬಾನಾಡಿಗಳು

    ಗದಗ: ಜಿಲ್ಲೆಯ ಶಿರಹಟ್ಟಿ ತಾಲೂಕಿನ ಮಾಗಡಿ ಕೆರೆಯಲ್ಲಿ ವಿದೇಶಿ ಬಾನಾಡಿಗಳ ಕಲರವ ಕಣ್ಮನ ಸೆಳೆಯುವಂತಿದೆ. ವರ್ಷದಿಂದ ವರ್ಷಕ್ಕೆ ಹೆಚ್ಚು ಪಕ್ಷಿಗಳು ಲಗ್ಗೆ ಇಡುತ್ತಿವೆ.

    ವಿಶೇಷ ಹಾಗೂ ಅಪರೂಪದ ಪಕ್ಷಿಯಾದ ಗ್ರೇಲ್ಯಾಗ್ ಹೆಬ್ಬಾತು ಎಂಬ ಪಕ್ಷಿ ಕೂಡ ಈ ಕೆರೆಗೆ ಆಗಮಿಸಿದೆ. ಚಳಿಗಾಲ ಬರುತ್ತಿದ್ದಂತೆ ಸಾವಿರಾರು ಕಿ.ಮೀ ದೂರದಿಂದ ಗದಗ ಜಿಲ್ಲೆಯ ಮಾಗಡಿ ಕೆರೆಗೆ ಅನೇಕ ಪಕ್ಷಿಗಳು ಬರುತ್ತವೆ. ಸಂತಾನೋತ್ಪತ್ತಿಗಾಗಿ ಇಲ್ಲಿಗೆ ಬರುವುದು ಮೂಲ ಕಾರಣ ಎನ್ನಲಾಗುತ್ತಿದೆ.ಇದನ್ನೂ ಓದಿ:60 ಅಡಿ ಬಾವಿಗೆ ಬಿದ್ದರೂ ಬಚಾವ್ ಆದ 94ರ ವೃದ್ಧೆ!

    ಮಾಗಡಿ ಕೆರೆಯು ಒಟ್ಟು 134 ಎಕರೆ ವಿಸ್ತೀರ್ಣ ಹೊಂದಿದ್ದು, ಇಲ್ಲಿಗೆ 130ಕ್ಕೂ ಹೆಚ್ಚು ಜಾತಿಯ ಹಕ್ಕಿಗಳು ವಿವಿಧ ದೇಶಗಳಿಂದ ವಲಸೆ ಬರುವುದಾಗಿ ಪಕ್ಷಿ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಮಂಗೋಲಿಯಾ, ಪಾಕಿಸ್ತಾನ, ಬಾಂಗ್ಲಾದೇಶ, ನೇಪಾಳ, ಸೈಬೇರಿಯಾ, ಮಲೇಷಿಯಾ, ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್, ಲಡಾಖ್, ಟಿಬೆಟ್, ರಷ್ಯಾ, ಬ್ರೆಜಿಲ್, ಬರ್ಮಾ ಸೇರಿದಂತೆ ಅನೇಕ ದೇಶಗಳಿಂದ ಸಹಸ್ರಾರು ಪಕ್ಷಿಗಳು ಇಲ್ಲಿ ಬಂದು ಸೇರುತ್ತಿವೆ.

    ಗೀರು ತಲೆಯ ಬಾತುಕೋಳಿ (ಬಾರ್ ಹೆಡೆಡ್ ಗೂಸ್) ಹಂಸಗಳ ಜಾತಿಗೆ ಸೇರಿದ ಪೇಂಟೆಡ್ ಸ್ಟಾರ್ಕ್, ಬಾರ್ ಹೆಡೆಡ್ ಗೂಜ್, ಪಟ್ಟೆ ತಲೆ ಹೆಬ್ಬಾತು ಪಕ್ಷಿಗಳು, ಬ್ರಾಹ್ಮೀಣಿ ಡಕ್, ವೈಟ್ ಬಿಸ್, ಬ್ಲಾಕ್ ಬಿಸ್, ಬ್ಲಾಕ್ ನೆಕ್ಕಡ್, ಲೀಟಲ್ ಕಾರ್ಮೊರಂಟ್, ಬ್ಲಾಕ್ ಐಬಿಸ್, ಪೈಂಟೆಡ್ ಸ್ಟಾರ್ಕ್ ಹಾಗೂ ಸ್ಪೂನ್ ಬಿಲ್ ಮತ್ತು ಕೇಳದ ನಾರ್ದನ್ ಶೆಲ್ವರ್, ಲಿಟ್ಲ ಕಾರ್ಪೋರಲ್ಸ್, ಅಟಲ್ರಿಂಗ್ ಪ್ಲೋವರ್, ಲೊಮನ್ ಡೇಲ್, ವುಡ್ ಸ್ಟಾಂಡ್, ಪೈಪರ್, ಗ್ರಿವನ್ ಟೇಲ್, ಬ್ಲಾಕ್ ಡ್ರಾಂಗೋ, ರೆಡ್ ಢ್ರೋಟ್ ಮತ್ತು ಪೆಡ್ಡಿ ಪ್ರೀಪೆಟ್ ಹೀಗೆ ಅನೇಕ ಜಾತಿಯ ಪಕ್ಷಿಗಳು ಕೆರೆಯಲ್ಲಿ ಕಾಣಸಿಗುತ್ತವೆ. ಕೃಷಿ ಪ್ರದೇಶ ಇರುವುದರಿಂದ ಧಾನ್ಯಗಳು ಇಲ್ಲಿ ಯಥೇಚ್ಚವಾಗಿ ದೊರೆಯುತ್ತವೆ.

    ಸುಮಾರು 4 ರಿಂದ 5 ಸಾವಿರ ಪಕ್ಷಿಗಳು ಈಗಾಗಲೇ ಮಾಗಡಿ ಕೆರೆಗೆ ಬಂದಿವೆ. ಸೂರ್ಯೋದಯ ಆಗುತ್ತಿದ್ದಂತೆ ಚಿಲಿಪಿಲಿ, ಕಲರವ ಮೂಲಕ ಕೆರೆಗೆ ಆಗಮಿಸುತ್ತವೆ. ಸೂರ್ಯಾಸ್ತದ ನಂತರ ಅಲ್ಲಿಂದ ಅಕ್ಕಪಕ್ಕದ ಗುಡ್ಡಗಾಡು ಪ್ರದೇಶ, ಅರಣ್ಯ ಪ್ರದೇಶ, ಹುಲ್ಲುಗಾವಲು ಪ್ರದೇಶಕ್ಕೆ ಹೋಗುತ್ತವೆ. ಅರಣ್ಯ ಇಲಾಖೆಯವರು ಈ ವರ್ಷ ಇನ್ನೂ ಹೆಚ್ಚಿನ ಪಕ್ಷಿಗಳು ಬರಬಹುದು ಎನ್ನುವ ನಿರೀಕ್ಷೆಯಲ್ಲಿದ್ದಾರೆ.

    ಮಾಗಡಿ ಪಕ್ಷಿಧಾಮವು ರಾಮ್ಸಾರ್ ವೆಟ್ಲ್ಯಾಂಡ್ ಸ್ಥಾನಮಾನವನ್ನು ಪಡೆದುಕೊಂಡಿದೆ. ಈ ವಿದೇಶಿ ಬಾನಾಡಿಗಳನ್ನು ನೋಡಲು ರಾಜ್ಯದ ನಾನಾ ಭಾಗಗಳಿಂದ ಶಾಲಾ- ಕಾಲೇಜು ವಿದ್ಯಾರ್ಥಿಗಳು, ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು, ಪಕ್ಷಿ ಪ್ರೇಮಿಗಳು ಸಾಕಷ್ಟು ಜನ ಬರುತ್ತಾರೆ. ಆದರೆ ಈ ಕುರಿತು ಮಾಹಿತಿ ಹಾಗೂ ನಾಮಫಲಕ ಇಲ್ಲದೆ ಇರುವುದು ಪಕ್ಷಿ ಪ್ರೇಮಿಗಳಿಗೆ ಬೇಸರ ತಂದಿದೆ.

    ಕಳೆದ ವರ್ಷ ಸ್ವಚ್ಛತೆ ಇಲ್ಲದಿರುವುದರಿಂದ ಕೆರೆಯಲ್ಲಿಯೇ ಅನೇಕ ವಿದೇಶಿ ಪಕ್ಷಿಗಳು ಸಾವನ್ನಪ್ಪಿದ್ದವು. ಇದಕ್ಕೆ ಕಲುಷಿತ ನೀರು ಕಾರಣ ಎನ್ನುವುದು ತಿಳಿದು ಬಂದಿತ್ತು. ಜೀವ ವೈವಿಧ್ಯತೆಗೆ ಹೆಸರುವಾಸಿಯಾಗಿರುವ ತಾಣವು ಅವ್ಯವಸ್ಥೆಯ ಆಗರವಾಗಿರುವುದು ಸ್ಥಳೀಯ ಆಡಳಿತ ಮಂಡಳಿ, ಪರಿಸರ ಹಾಗೂ ಅರಣ್ಯ ಇಲಾಖೆ, ಜಿಲ್ಲಾಡಳಿತದ ಬೇಜವಾಬ್ದಾರಿಗೆ ಹಿಡಿದ ಕೈಗನ್ನಡಿಯಾಗಿದೆ. ಒಟ್ಟಿನಲ್ಲಿ ಜಿಲ್ಲಾಡಳಿತ ಹಾಗೂ ಇಲಾಖೆಗಳು ಕೆರೆ ಅಭಿವೃದ್ಧಿಪಡಿಸುವ ಮೂಲಕ ವಿದೇಶಿ ಬಾನಾಡಿಗಳು ಹಾಗೂ ಪ್ರವಾಸಿಗರನ್ನು ಕೈಬಿಸಿಕರೆಯುವ ಕಾರ್ಯ ಮಾಡಬೇಕಿದೆ.ಇದನ್ನೂ ಓದಿ: UI ಚಿತ್ರ ‘ಸೂಪರ್’ ಸಿನಿಮಾದ ಮುಂದುವರೆದ ಭಾಗನಾ?- ಉಪೇಂದ್ರ ಹೇಳೋದೇನು?

  • ಮಸ್ಕಿ ಮಾರಲದಿನ್ನಿ ಜಲಾಶಯಕ್ಕೆ ವಲಸೆ ಬಂದ ವಿದೇಶಿ ಪಕ್ಷಿಗಳು

    ಮಸ್ಕಿ ಮಾರಲದಿನ್ನಿ ಜಲಾಶಯಕ್ಕೆ ವಲಸೆ ಬಂದ ವಿದೇಶಿ ಪಕ್ಷಿಗಳು

    ರಾಯಚೂರು: ಜಿಲ್ಲೆಯ ಮಸ್ಕಿ ತಾಲೂಕಿನ ಮಾರಲದಿನ್ನಿ ಜಲಾಶಯಕ್ಕೆ ಆಹಾರ ಅರಸಿ ವಿದೇಶಿ ಪಕ್ಷಿಗಳು ಸಾವಿರಾರು ಸಂಖ್ಯೆಯಲ್ಲಿ ವಲಸೆ ಬಂದಿವೆ.

    20 ರಿಂದ 25 ಜಾತಿಯ ಪಕ್ಷಿಗಳು ಜಲಾಶಯದ ಹಿನ್ನಿರಿನಲ್ಲಿ ಕಲರವ ಸೃಷ್ಟಿಸಿವೆ. ಪ್ರತಿವರ್ಷ ಈ ವೇಳೆಯಲ್ಲಿ ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಮಾಗಡಿ ಕೆರೆಯಲ್ಲಿ ಕಾಣಿಸಿಕೊಳ್ಳುತ್ತಿದ್ದ ಈ ಪಕ್ಷಿಗಳು ಈ ವರ್ಷ ರಾಯಚೂರಿನಲ್ಲಿ ಪ್ರತ್ಯಕ್ಷವಾಗಿವೆ.

    Foreign Birds

    ಏಷಿಯನ್ ಓಪನ್ ಬಿಲ್, ಶೆಲ್‍ಡಕ್, ಬ್ಲಾಕ್ ವಿಂಗೆಡ್, ಸ್ತಿಲ್ಟ್ ಬ್ಲಾಕ್, ಸ್ಟಾರ್ಟ್ ಜಾತಿಯ ಪಕ್ಷಿಗಳು ಇಲ್ಲಿ ಕಾಣಸಿಗುತ್ತವೆ. ಮುಂಗೋಲಿಯಾ, ಟಿಬೆಟ್, ಚೀನಾ ಮೂಲದ ಪಕ್ಷಿಗಳು ಬೇಸಿಗೆ ಸಮಯದಲ್ಲಿ ಭಾರತಕ್ಕೆ ವಲಸೆ ಬರುತ್ತವೆ. ಇದರಲ್ಲಿ ಬಾರ್ ಹೆಡೆಡ್ ಗೂಸ್ ಪಕ್ಷಿ 20 ಸಾವಿರ ಅಡಿ ಎತ್ತರದಲ್ಲಿ ಹಾರಬಲ್ಲ ವಿಶಿಷ್ಟ ಜಾತಿಯ ಪಕ್ಷಿಯಾಗಿದೆ. ಇದನ್ನೂ ಓದಿ: ಬೈಕ್ ಅಪಘಾತ – ಟಿಎಂಸಿ ನಾಯಕ ಮದನ್ ಮಿತ್ರಾಗೆ ಗಾಯ

    ಮಾರ್ಚ್ ಅಂತ್ಯದವರೆಗೆ ಇಲ್ಲೇ ಇರುವ ಈ ಪಕ್ಷಿಗಳು ಆಹಾರಕ್ಕಾಗಿ 20 ಕಿ.ಮೀವರೆಗೆ ಹಾರಿ ಶೇಂಗಾ, ಕಡಲೆ, ಅಲಸಂದೆ ಹಾಗೂ ಕೆರೆ ಕುಂಟೆಗಳಲ್ಲಿ ಹುಲ್ಲಿನ ಚಿಗುರು ತಿನ್ನುತ್ತವೆ. ಸಾವಿರಾರು ಸಂಖ್ಯೆಯಲ್ಲಿ ಪಕ್ಷಿಗಳು ವಲಸೆ ಬಂದಿರುವುದು ನೋಡುಗರ ಕಣ್ಮನ ಸೆಳೆಯುತ್ತಿವೆ. ಇದನ್ನೂ ಓದಿ: IPS ರವಿ ಚೆನ್ನಣ್ಣವರ್ ವರ್ಗ ಆದೇಶಕ್ಕೆ ಬ್ರೇಕ್

  • ಉತ್ತರ ಕರ್ನಾಟಕದಲ್ಲಿದೆ ರಂಗನತಿಟ್ಟುನಷ್ಟೇ ಪ್ರಸಿದ್ಧವಾದ ಪಕ್ಷಿಧಾಮ

    ಉತ್ತರ ಕರ್ನಾಟಕದಲ್ಲಿದೆ ರಂಗನತಿಟ್ಟುನಷ್ಟೇ ಪ್ರಸಿದ್ಧವಾದ ಪಕ್ಷಿಧಾಮ

    ಗದಗ: ಬಹಳಷ್ಟು ಜನರಿಗೆ ಪಕ್ಷಿಧಾಮ ಎಂದಾಕ್ಷಣ ರಂಗನತಿಟ್ಟು ಹಾಗೂ ಬೆಂಗಳೂರಿನ ಬೆಳ್ಳುರು ಕೆರೆ ನೆನಪಾಗುತ್ತದೆ. ಈಗ ಅದರಷ್ಟೇ ಪ್ರಸಿದ್ಧಿಯಾದ ಪಕ್ಷಿಧಾಮವೊಂದು ಉತ್ತರ ಕರ್ನಾಟಕದಲ್ಲಿದೆ. ಪ್ರತಿ ವರ್ಷ ಚಳಿಗಾಲದಲ್ಲಿ ವಿದೇಶಿ ಬಾನಾಡಿಗಳ ದಂಡು ಇಲ್ಲಿ ಲಗ್ಗೆ ಇಡುತ್ತವೆ.

    ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ಮಾಗಡಿ ಗ್ರಾಮದ ಐತಿಹಾಸಿಕ ಕೆರೆ. ಸುಮಾರು 231 ಎಕರೆ ವಿಸ್ತೀರ್ಣ ಹೊಂದಿರುವ ಈ ಮಾಗಡಿ ಕೆರೆ, ವಿದೇಶಿ ಪಕ್ಷಿಗಳ ಆಗಮನದಿಂದ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಇಲ್ಲಿ ದೇಶ-ವಿದೇಶಿಯ ಹಕ್ಕಿಗಳು ಚಳಿಗಾಲದ ಸಮಯದಲ್ಲಿ ಪ್ರತಿ ವರ್ಷ ಅವುಗಳ ಸಂತತಿಗಾಗಿ ಇಲ್ಲಿ ಲಗ್ಗೆ ಇಡುತ್ತವೆ.

    ಮಂಗೊಲಿಯಾ, ಆಸ್ಟ್ರೇಲಿಯಾ, ಜಪಾನ್, ಪಾಕಿಸ್ತಾನದ ಲಡಾಕ್ ಹೀಗೆ ಅನೇಕ ದೇಶದ ಪಕ್ಷಿಗಳು ಇಲ್ಲಿಗೆ ಆಗಮಿಸುತ್ತವೆ. ಬಾರ್ ಹಡೆಡ್ ಗೂಸ್, ಬ್ರಾಮಿಣಿ ಡೆಕ್, ಬ್ಲಾಕ್ ಐಬಿಸ್, ಇಟಲ್ ಗಿಬ್ಸ್, ರೆಡ್ ಥಾರ್ಟ, ಪಾಂಟೆಡ್ ಸ್ಪಾರ್ಕ್ ಸೇರಿದಂತೆ ಅನೇಕ ಜಾತಿಯ ಪಕ್ಷಿಗಳು ಇಲ್ಲಿಗೆ ಆಗಮಿಸುತ್ತವೆ. ಈ ಪಕ್ಷಿಗಳ ಹಾರಾಟ, ಕೂಗಾಟ, ಅಂದ, ಚೆಂದ ನೋಡಲು ಎರಡು ಕಣ್ಣುಗಳು ಸಾಲದು. ಇದರಿಂದ ನಮಗೆ ತುಂಬಾನೆ ಸಂತೋಷವಾಗುತ್ತೆ. ಜಿಲ್ಲಾಡಳಿತ ಈ ಕೆರೆಯನ್ನು ಇನ್ನಷ್ಟು ಅಭಿವೃದ್ಧಿಪಡಿಸಬೇಕು ಎಂದು ಪಕ್ಷಿ ವೀಕ್ಷಕರು ಹೇಳುತ್ತಾರೆ.

    ಸುಮಾರು ಮೂರು ತಿಂಗಳ ಕಾಲ ಈ ಮಾಗಡಿ ಕೆರೆಯಲ್ಲಿ ಪಕ್ಷಿಗಳು ವಾಸವಿದ್ದು, ನೋಡುಗರ ಕಣ್ಮನ ಸೆಳೆಯುತ್ತಿವೆ. ಈ ವಿದೇಶಿ ಪಕ್ಷಿಗಳು ಕತ್ತಲಾಗುತ್ತಿದ್ದಂತೆಯೇ ಆಹಾರಕ್ಕಾಗಿ ಪಕ್ಕದ ಜಮೀನುಗಳಿಗೆ ಹೋಗುತ್ತವೆ. ರಾತ್ರಿ ಹೊತ್ತು ಆಹಾರಕ್ಕೆ ಹೋದರೆ ಮತ್ತೆ ಮುಂಜಾವು ಸಮಯ ಚಿಲಿ-ಪಿಲಿಗುಟ್ಟುತ್ತಾ ಕೆರೆಗೆ ಮರಳುತ್ತವೆ. ಈ ವಿದೇಶಿ ಬಾನಾಡಿಗಳು ಹಿಂಡು-ಹಿಂಡಾಗಿ ಬಂದು ಈ ಕೆರೆಯಲ್ಲಿ ಕುಳಿತುಕೊಳ್ಳುವ ದೃಶ್ಯ ನಯನ ಮನೋಹರವಾಗಿದೆ.

    ಈ ಬಾನಾಡಿಗಳ ಹಾರಾಟ, ಕೂಗಾಟ ಇವುಗಳ ಕಲರವ ನೋಡಲು ಎರಡು ಕಣ್ಣು ಸಾಲದು. ಆದರೆ ಇಂತಹ ಪ್ರವಾಸಿ ತಾಣದಲ್ಲಿ ಪ್ರವಾಸೋದ್ಯಮ ಇಲಾಖೆ ಯಾವುದೇ ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಂಡಿಲ್ಲ. ಕೆರೆ ಹೂಳೆತ್ತುವುದು, ವಾಚ್ ಟವರ್, ಗಾರ್ಡನ್, ಕೂಡಲು ಬೆಂಚು, ಕುಡಿಯುವ ನೀರು, ವಾಹನ ಸೌಕರ್ಯ ಹೀಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಗ್ರಾಮಸ್ಥರು ಹೇಳಿದ್ದಾರೆ.

    ಈ ಪಕ್ಷಿಗಳನ್ನು ನೋಡಲು ನಿತ್ಯವೂ ಪ್ರವಾಸಿಗರು, ಪಕ್ಷಿ ಪ್ರಿಯರು ಇಲ್ಲಿಗೆ ಆಗಮಿಸುತ್ತಿದ್ದಾರೆ. ಮನುಷ್ಯ ದೇಶ ಬಿಟ್ಟು ಹೊಗಬೇಕಾದರೆ, ಅನೇಕ ಕಾನೂನು ಪ್ರಕ್ರಿಯೆಗಳಿವೆ. ಆದರೆ ಈ ವಿದೇಶಿ ಅತಿಥಿಗಳಿಗೆ ಯಾವ ಕಾನೂನು ಅಡ್ಡಿಬರಲ್ಲ. ಹೀಗೆ ನೈಸರ್ಗಿಕವಾಗಿ ಪಕ್ಷಿಧಾಮವಾಗಿರುವ ಈ ಕೆರೆ ಇನ್ನಷ್ಟು ಕಾಯಕಲ್ಪ ಕಾಣಬೇಕಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv