Tag: foreign

  • ಬೆಂಗ್ಳೂರು ಮಾತ್ರವಲ್ಲ ವಿದೇಶಗಳ ಶಾಲೆಗಳಿಗೂ ಹುಸಿ ಬಾಂಬ್ ಬೆದರಿಕೆ

    ಬೆಂಗ್ಳೂರು ಮಾತ್ರವಲ್ಲ ವಿದೇಶಗಳ ಶಾಲೆಗಳಿಗೂ ಹುಸಿ ಬಾಂಬ್ ಬೆದರಿಕೆ

    – Beeble.com ಇ-ಮೇಲ್ ಮೂಲಕ ಬೆದರಿಕೆ

    – ಬೆಂಗಳೂರಿನ 48 ಪೊಲೀಸ್ ಠಾಣೆಗಳಲ್ಲಿ ಪ್ರತ್ಯೇಕವಾಗಿ 48 ಎಫ್‌ಐಆರ್

    ಬೆಂಗಳೂರು: ಸಿಲಿಕಾನ್ ಸಿಟಿಯ ಪ್ರತಿಷ್ಠಿತ ಶಾಲೆಗಳಿಗೆ ಬಂದ ಹುಸಿ ಬಾಂಬ್ ಬೆದರಿಕೆ (Bomb Threat) ಇ-ಮೇಲ್ (E-Mail) ಪ್ರಕರಣ ಪೊಲೀಸರಿಗೆ ತಲೆ ಬಿಸಿ ಉಂಟುಮಾಡಿದೆ. ಬೇರೆ ಬೇರೆ ದೇಶಗಳಲ್ಲೂ ಇದೇ ಥರನಾಗಿ ಬೆದರಿಕೆಯೊಡ್ಡಿದ್ದು, ದುಷ್ಕರ್ಮಿಗಳನ್ನ ಸೆರೆಹಿಡಿಯಲು ಬಲೆ ಬೀಸಿದ್ದಾರೆ.

    ಶುಕ್ರವಾರ ಇಡೀ ದಿನ ರಾಜ್ಯದ ಎಲ್ಲಾ ಜನರ ಬಾಯಲ್ಲೂ ಶಾಲೆಗಳಿಗೆ ಬಂದಿದ್ದು ಬಾಂಬ್ ಬೆದರಿಕೆ ಇ-ಮೇಲ್‌ನದ್ದೇ ಮಾತು. ಪೋಷಕರಂತೂ ಇನ್ನೂ ಗಾಬರಿಯಿಂದ ಹೊರಬಂದಿಲ್ಲ. ಈ ನಡುವೆ ಇಮೇಲ್ ಜಾಡು ಹಿಡಿದು ಹೊರಟ ಪೊಲೀಸರಿಗೆ ದೂರದ ಸೈಪ್ರಸ್ (Cyprus) ದೇಶದ ಕಡೆ ಶಂಕೆ ತೋರಿಸುತ್ತಿದೆ. ದುಷ್ಕರ್ಮಿಗಳು `Beeble.comʼ  ಮೂಲಕ ಮೇಲ್ ಮಾಡಿದ್ದಾರೆ. ಆದ್ರೆ ನಿಖರವಾಗಿ ಯಾರು ಮೇಲ್ ಮಾಡಿದ್ದಾರೆ ಎಂಬ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಹೀಗಾಗಿ ಐಪಿ ಅಡ್ರೆಸ್ ನೀಡುವಂತೆ ಸೈಪ್ರಸ್‌ನಲ್ಲಿರುವ ಬೀಬಲ್.ಕಾಮ್‌ಗೆ ಪೊಲೀಸ್ ಇಲಾಖೆ ಪತ್ರ ಬರೆದಿದೆ. ಇದನ್ನೂ ಓದಿ: ನ್ಯೂಯಾರ್ಕ್‌ನಲ್ಲೂ ಯೋಗಿ ಸರ್ಕಾರದ ಬುಲ್ಡೋಜರ್ ದಾಳಿ – ಕಟ್ಟಡಗಳು ಧ್ವಂಸ

    ಈ ಬೆದರಿಕೆ ಇಮೇಲ್‌ಗಳು ಕೇವಲ ಬೆಂಗಳೂರಿಗಷ್ಟೇ ಸೀಮಿತವಾಗಿಲ್ಲ. ಕಳೆದ ಒಂದೂವರೆ ತಿಂಗಳಲ್ಲಿ ಮಲೇಷ್ಯಾ, ಜರ್ಮನಿ, ಟ್ರಿನಿಡಾಡ್ ದೇಶಗಳ ನೂರಾರು ಶಾಲೆಗಳಿಗೆ ಇದೇ ರೀತಿಯ ಬಾಂಬ್ ಬೆದರಿಕೆ ಸಂದೇಶಗಳನ್ನ ಕಳುಹಿಸಲಾಗಿತ್ತು. ಯಾರು? ಎಲ್ಲಿಂದ? ಯಾವ ಐಪಿ ಅಡ್ರೆಸ್‌ನಿಂದ ಮೇಲ್ ಮಾಡಿದ್ದಾರೆ? ಎಂದು ಆ ದೇಶಗಳಲ್ಲಿ ಇನ್ನೂ ತನಿಖೆ ನಡೆಯುತ್ತಿದೆ. ಇದನ್ನೂ ಓದಿ: ಇಂದು ಸಂಜೆ ಹೈದರಾಬಾದ್‌ಗೆ ತೆರಳಲಿದ್ದಾರೆ ಟ್ರಬಲ್‌ ಶೂಟರ್‌ ಡಿಕೆಶಿ

    ಬೆಂಗಳೂರಲ್ಲಿ ಈಗಾಗಲೆ 3ನೇ ಬಾರಿಗೆ ಈ ರೀತಿಯ ಮೇಲ್ ಬಂದಿದ್ದು, ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿ ಕೇಂದ್ರ ಸರ್ಕಾರದ ಮೂಲಕ ಬೆದರಿಕೆ ಸಂದೇಶ ಬಂದಿದ್ದ ದೇಶಗಳ ಜೊತೆ ಮಾತುಕತೆ ನಡೆಸಿ, ತನಿಖೆಯ ಮಾಹಿತಿ ಪಡೆದುಕೊಳ್ಳಲು ತಯಾರಿ ನಡೆಸಿದೆ. ಈ ಬಾರಿ ದುಷ್ಕರ್ಮಿಗಳನ್ನ ಪತ್ತೆ ಹಚ್ಚಲು ಪೊಲೀಸರು ಶ್ರಮಹಾಕುತ್ತಿದ್ದಾರೆ. ಇದನ್ನೂ ಓದಿ: ಆನೇಕಲ್‌ನಲ್ಲಿ ತಡರಾತ್ರಿ ಗುಪ್ತಚರ ಇಲಾಖೆಯಿಂದ ದಂಪತಿ ವಿಚಾರಣೆ

    ಶುಕ್ರವಾರ ಘಟನೆ ಸಂಬಂಧ ಬೆಂಗಳೂರು ಒಂದರಲ್ಲೇ 48 ಪೊಲೀಸ್ ಠಾಣೆಗಳಲ್ಲಿ ಪ್ರತ್ಯೇಕವಾಗಿ 48 ಎಫ್‌ಐಆರ್‌ಗಳು ದಾಖಲಾಗಿವೆ. ಎಲ್ಲವನ್ನೂ ಕ್ರೂಢೀಕರಿಸಿ ನಂತರ ಒಟ್ಟಿಗೆ ತನಿಖೆ ನಡೆಸಲಾಗುತ್ತದೆ. ಇದನ್ನೂ ಓದಿ: ಕ್ರಿಕೆಟ್ ಫ್ಯಾನ್ಸ್‌ಗೆ ಗುಡ್‌ನ್ಯೂಸ್ – ಭಾನುವಾರ ರಾತ್ರಿ 11:45ರ ವರೆಗೂ ಮೆಟ್ರೋ ವಿಸ್ತರಣೆ

  • ‘ಉತ್ತರಕಾಂಡ’ ಟೀಸರ್ ಕಾರ್ಯಕ್ರಮಕ್ಕೆ ರಮ್ಯಾ ಗೈರು: ಎಲ್ಲಿದ್ದಾರೆ ಮೋಹಕತಾರೆ?

    ‘ಉತ್ತರಕಾಂಡ’ ಟೀಸರ್ ಕಾರ್ಯಕ್ರಮಕ್ಕೆ ರಮ್ಯಾ ಗೈರು: ಎಲ್ಲಿದ್ದಾರೆ ಮೋಹಕತಾರೆ?

    ಡಾಲಿ ಧನಂಜಯ್ (Dolly Dhananjay) ಹುಟ್ಟು ಹಬ್ಬದ ದಿನದಂದು ಉತ್ತರಕಾಂಡ (Uttarkanda) ಸಿನಿಮಾ ಟೀಮ್ ಟೀಸರ್ ರಿಲೀಸ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಅಂದಿನ ಕಾರ್ಯಕ್ರಮಕ್ಕೆ ಚಿತ್ರದ ನಾಯಕಿಯಾಗಿರುವ ರಮ್ಯಾ (Ramya) ಗೈರಾಗಿದ್ದರು. ಉತ್ತರಕಾಂಡ ಸಿನಿಮಾದ ಮುಹೂರ್ತ ಕಾರ್ಯಕ್ರಮಕ್ಕೆ ಆಗಮಿಸಿದ್ದ ರಮ್ಯಾ, ಟೀಸರ್ ಬಿಡುಗಡೆ ಕಾರ್ಯಕ್ರಮಕ್ಕೆ ಏಕೆ ಬರಲಿಲ್ಲ ಎನ್ನುವ ಪ್ರಶ್ನೆ ಮೂಡಿತ್ತು.

    ಉತ್ತರಕಾಂಡ ಸಿನಿಮಾದ ಕೆಲಸ ದೃಶ್ಯಗಳು ಚಿತ್ರೀಕರಣವಾಗಿದ್ದರೂ, ಆ ಶೂಟಿಂಗ್ ನಲ್ಲಿ ಮತ್ತೋರ್ವ ನಾಯಕಿ ಸಪ್ತಮಿ ಗೌಡ (Saptami Gowda) ಮಾತ್ರ ಭಾಗಿಯಾಗಿದ್ದಾರೆ. ಹಾಗಾಗಿ ರಮ್ಯಾ ಈ ಸಿನಿಮಾದಿಂದ ಹಿಂದೆ ಸರಿದಿದ್ದಾರೆ ಎನ್ನುವ ಚರ್ಚೆ ಕೂಡ ಶುರುವಾಗಿತ್ತು. ಸಿನಿಮಾದಿಂದ ಹೊರ ಬಂದ ಕಾರಣದಿಂದಾಗಿ ಅವರು ಕಾರ್ಯಕ್ರಮಕ್ಕೆ ಬರಲಿಲ್ಲ ಎನ್ನುವ ಮಾತೂ ಕೇಳಿ ಬಂದಿತ್ತು. ಆದರೆ, ಅಸಲಿ ಕಾರಣವೇ ಬೇರೆ ಇದೆ.  ಇದನ್ನೂ ಓದಿ:ಕುಟುಂಬದೊಂದಿಗೆ ವರಮಹಾಲಕ್ಷ್ಮಿ ಹಬ್ಬ ಆಚರಿಸಿದ ನಿಖಿಲ್

    ರಮ್ಯಾ ಸದ್ಯ ವಿದೇಶಿ ಪ್ರವಾಸದಲ್ಲಿ ಬ್ಯುಸಿಯಾಗಿದ್ದಾರೆ. ಅದರಲ್ಲೂ ಫ್ರೆಂಡ್ಸ್ ಜೊತೆ ಸಮುದ್ರದ ಆಟದಲ್ಲಿ ವೇಳೆ ಕಳೆಯುತ್ತಿದ್ದಾರೆ. ಆ ವಿಡಿಯೋ ಮತ್ತು ಫೋಟೋಗಳನ್ನು ಅವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಟೀಸರ್ ಕಾರ್ಯಕ್ರಮಕ್ಕೆ ಗೈರಾಗಿದ್ದಕ್ಕೆ ಕಾರಣ ತಾವು ವಿದೇಶದಲ್ಲಿ ಇರುವುದೇ ಆಗಿದೆ ಎನ್ನುವುದನ್ನು ಸ್ಪಷ್ಟ ಪಡಿಸಿದ್ದಾರೆ.

     

    ಉತ್ತರಕಾಂಡ ಸಿನಿಮಾದ ಟೀಸರ್ ಮೊನ್ನೆಯಷ್ಟೇ ರಿಲೀಸ್ ಆಗಿದ್ದರೂ, ಆ ಟೀಸರ್ ನಲ್ಲಿ ನಾಯಕಿಯರು ಇರುವ ಕುರುಹು ಬಿಟ್ಟುಕೊಟ್ಟಿಲ್ಲ. ಆದರೆ, ಸಪ್ತಮಿ ಗೌಡ ಶೂಟಿಂಗ ನಲ್ಲಿ ಭಾಗಿಯಾಗಿದ್ದ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಧನಂಜಯ್ ಅವರಿಗೆ ವಿಶ್ ಮಾಡಿದ್ದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಗೃಹಪ್ರವೇಶವಾದ ಐದೇ ದಿನಕ್ಕೆ ಅದೇ ಮನೆಯಲ್ಲಿ ಯುವತಿ ಆತ್ಮಹತ್ಯೆ!

    ಗೃಹಪ್ರವೇಶವಾದ ಐದೇ ದಿನಕ್ಕೆ ಅದೇ ಮನೆಯಲ್ಲಿ ಯುವತಿ ಆತ್ಮಹತ್ಯೆ!

    ಮಂಗಳೂರು: ವಿದೇಶ (Foreign) ದಲ್ಲಿ ಉದ್ಯೋಗದಲ್ಲಿದ್ದ ಯುವತಿಯೊಬ್ಬಳು ಡೆತ್ ನೋಟ್ (Death Note) ಬರೆದಿಟ್ಟು ನೇಣಿಗೆ ಶರಣಾದ ಘಟನೆ ಮಂಗಳವಾರ ನಡೆದಿದೆ.

    ಯುವತಿಯನ್ನು ಅಶ್ವಿನಿ ಬಂಗೇರ(25) (Ashwini Bangera Suicide) ಎಂದು ಗುರುತಿಸಲಾಗಿದ್ದು, ಈಕೆ ಮಂಗಳೂರು ಹೊರವಲಯದ ಕುಂಪಲ ಚಿತ್ರಾಂಜಲಿ ನಗರದ ನಿವಾಸಿ. ಅಶ್ವಿನಿ ವಿದೇಶದಲ್ಲಿ ಉದ್ಯೋಗದಲ್ಲಿದ್ದು, ಒಂದೂವರೆ ತಿಂಗಳ ಹಿಂದೆ ಊರಿಗೆ ಬಂದಿದ್ದಳು. ಇದನ್ನೂ ಓದಿ: ಮುಂಬೈನಲ್ಲಿ ಡೆಡ್ಲಿ ಮರ್ಡರ್ – ಗೆಳತಿಯನ್ನು ಕೊಂದು ಕುಕ್ಕರ್‌ನಲ್ಲಿ ಕುದಿಸಿದ ಪ್ರಿಯತಮ

    ಕುಂಪಲದಲ್ಲಿ ಸಂಗೀತ ಎಂಬವರಿಂದ ಅಶ್ವಿನಿ ಮನೆಯೊಂದನ್ನ ಖರೀದಿಸಿದ್ದಳು. ಜೂ.3 ರಂದು ಗೃಹ ಪ್ರವೇಶ (House Warming) ಮಾಡಿ ತಾಯಿ ದೇವಕಿ, ದೊಡ್ಡಮ್ಮನ ಇಬ್ಬರು ಗಂಡು ಮಕ್ಕಳೊಂದಿಗೆ ನೆಲೆಸಿದ್ದಳು. ಗೃಹ ಪ್ರವೇಶವಾದ ಐದೇ ದಿನದದಲ್ಲಿ ಅದೇ ಮನೆ ಕೋಣೆಯೊಳಗೆ ಅಶ್ವಿನಿ ನೇಣಿಗೆ ಶರಣಾಗಿದ್ದಾಳೆ.

    ಇದೀಗ ಅಶ್ವಿನಿ ಖಿನ್ನತೆಗೊಳಗಾಗಿ ಆತ್ಮ ಹತ್ಯೆಗೈದಿರುವ ಶಂಕೆ ವ್ಯಕ್ತವಾಗಿದೆ. ಸದ್ಯ ಅಶ್ವಿನಿ ಬರೆದ 24 ಪುಟಗಳ ಡೆತ್‍ನೋಟ್ ಪೊಲೀಸರಿಗೆ ದೊರೆತಿದೆ. ಡೆತ್ ನೋಟಿನಲ್ಲಿ ತಾನು ಮನೆ ಖರೀದಿಸಿ ಮೋಸ ಹೋಗಿರುವ ಬಗ್ಗೆ ಉಲ್ಲೇಖ ಮಾಡಿದ್ದಾಳೆ. ಬ್ಯಾಂಕ್ ಅಧಿಕಾರಿಗಳು ಬಂದು ಪೀಡಿಸುತ್ತಿರುವ ಬಗ್ಗೆ ತಿಳಿಸಿದ್ದಾಳೆ.

    ಮೃತದೇಹವನ್ನ ಉಳ್ಳಾಲ ಪೊಲೀಸರು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಈ ಸಂಬಂಧ ಉಳ್ಳಾಲ ಪೊಲೀಸ್ ಠಾಣೆ (Ullala Police Station) ಯಲ್ಲಿ ಪ್ರಕರಣ ದಾಖಲಾಗಿದೆ.

  • ಫಾರಿನ್ ಯುನಿವರ್ಸಿಟಿಯಲ್ಲಿ ಪಿ.ಎಚ್.ಡಿ ಮಾಡಲು ಹೋಗಿ 75 ಲಕ್ಷ ಕಳ್ಕೊಂಡ ಮಹಿಳೆ

    ಫಾರಿನ್ ಯುನಿವರ್ಸಿಟಿಯಲ್ಲಿ ಪಿ.ಎಚ್.ಡಿ ಮಾಡಲು ಹೋಗಿ 75 ಲಕ್ಷ ಕಳ್ಕೊಂಡ ಮಹಿಳೆ

    ಚಿಕ್ಕಮಗಳೂರು: ಫಾರಿನ್ ಪಿ.ಎಚ್.ಡಿ. ಸರ್ಟಿಫಿಕೇಟ್ ಹಿಂದೆ ಬಿದ್ದು ಮಹಿಳೆಯೊಬ್ಬಳು ನಾಲ್ಕು ವರ್ಷದಲ್ಲಿ 75 ಲಕ್ಷ ಹಣ ಕಳೆದುಕೊಂಡು ವಂಚನೆಗೊಳಗಾಗಿದ್ದಾರೆ.

    ಕಳೆದ ನಾಲ್ಕು ವರ್ಷಗಳ ಹಿಂದೆ ನಗರದ ಸಾಫ್ಟ್‌ವೇರ್ ಇಂಜಿನಿಯರ್ ಮಹಿಳೆಯೊಬ್ಬರು ಆನ್‍ಲೈನ್‍ನಲ್ಲಿ ನೆಸ್ಟರ್ ಎಂಬ ಯುನಿವರ್ಸಿಟಿಯನ್ನು ಹುಡುಕಿ, ಫಾರ್ಮೆಟ್ ಪೇಪರ್ಸ್ ಎಲ್ಲಾ ಫಿಲ್ ಮಾಡಿ ಕಳಿಸಿದ್ದರು. 2018 ರಿಂದಲೂ ಆಗಾಗ್ಗೆ ನೆಸ್ಟರ್ ಯುನಿವರ್ಸಿಟಿ ಎಂದು ಹೇಳಿ ಕರೆ ಮಾಡಿದಾಗಲೆಲ್ಲಾ ಸುಮಾರು 4 ವರ್ಷದಿಂದಲೂ ಮಹಿಳೆ ಹಣ ಕಳುಹಿಸಿದ್ದಾರೆ. ಇದೀಗ ಆ ಹಣ ಒಟ್ಟು 75 ಲಕ್ಷ ರೂಪಾಯಿ ಆಗಿದೆ. ಇದನ್ನೂ ಓದಿ: ತಪ್ಪಾದ ಇಂಜೆಕ್ಷನ್ ನೀಡಿದ್ದರಿಂದ ಮಹಿಳೆ ಸಾವು – ನರ್ಸ್‌ ವಿರುದ್ಧ ಕುಟುಂಬಸ್ಥರ ಆಕ್ರೋಶ

    ನಾಲ್ಕು ವರ್ಷಗಳ ಬಳಿಕ 75 ಲಕ್ಷ ಹಣ ಹಾಕಿದ್ದರೂ ಕೋರ್ಸ್ ಮುಗಿದಿಲ್ಲ ಎಂದಾಗ ಯೂನಿವರ್ಸಿಟಿ ಅವರು ಒಂದು ಪಿ.ಎಚ್.ಡಿ. ಸರ್ಟಿಫಿಕೇಟ್ ಕಳಿಸಿದ್ದಾರೆ. ಆದರೆ ಈ ಸರ್ಟಿಫಿಕೇಟ್ ಫೇಕ್ ಎಂದು ಮಹಿಳೆಗೆ ಮತ್ತೊಬ್ಬರು ತಿಳಿಸಿದ್ದಾರೆ. ಆಗ ಆಕೆಗೆ ತಾನು ಮೋಸ ಹೋಗಿದ್ದು, ಅಸಲಿಗೆ ಆ ಯುನಿವರ್ಸಿಟಿಯೇ ಇರಲಿಲ್ಲ ಎಂಬ ವಿಚಾರ ಗೊತ್ತಾಗಿದೆ.

    ಮಹಿಳೆ ಮಾಡಿರುವ ಎಲ್ಲಾ ವ್ಯವಹಾರ ಕೂಡ ಬ್ಯಾಂಕ್ ಮೂಲಕ ಆಗಿದ್ದು, ಹಣವನ್ನು ಯಾರ ಖಾತೆಗೆ ಹಾಕಿದ್ದಾಳೋ ಎಂಬುವುದು ತಿಳಿದು ಬಂದಿಲ್ಲ. ಇದೀಗ ಪಿ.ಎಚ್.ಡಿ. ಸರ್ಟಿಫಿಕೇಟ್‍ಗಾಗಿ ನಾಲ್ಕು ವರ್ಷದಲ್ಲಿ 75 ಲಕ್ಷ ಹಣ ಕಳೆದುಕೊಂಡು ಫೇಕ್ ಸರ್ಟಿಫಿಕೇಟ್ ಸಿಕ್ಕ ಮೇಲೆ ತಾನು ಮೋಸ ಹೋಗಿದ್ದೇನೆ ಎಂದು ಮಹಿಳೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಇದನ್ನೂ ಓದಿ: ಮಸ್ಕ್‌ ತೆಕ್ಕೆಗೆ ಟ್ವಿಟ್ಟರ್‌ – ಸಿಇಒ ಪರಾಗ್‌ ಅಗರ್‌ವಾಲ್‌ ಸೇರಿದಂತೆ ಪ್ರಮುಖರು ವಜಾ

    ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು, ಸಿಐಡಿ, ಬೆಂಗಳೂರು ಸೈಬರ್ ಜೊತೆ ಜಿಲ್ಲಾ ಪೊಲೀಸರು ಸಂಪರ್ಕದಲ್ಲಿದ್ದು ತನಿಖೆ ನಡೆಸುತ್ತಿದ್ದಾರೆ. ತನಿಖೆ ವೇಳೆ ಫಾರಿನ್ ಯೂನಿವರ್ಸಿಟಿಯೇ ಇಲ್ಲ. ಈ ಯುನಿವರ್ಸಿಟಿಯಲ್ಲಿ ಪಿ.ಎಚ್.ಡಿ. ಮಾಡಿದರೆ ನಿಮಗೆ ಫಾರಿನ್ ಹೋಗಲು ಅನುಕೂಲವಾಗುತ್ತದೆ ಎಂದು ನಂಬಿಸಿ ಈ ರೀತಿ ಯಾಮಾರಿಸಿದ್ದಾರೆ ಎಂದು ಮಹಿಳೆಗೆ ತಿಳಿಸಿದ್ದಾರೆ. ಸದ್ಯ ಈ ಸಂಬಂಧ ಪೊಲೀಸರು ತನಿಖೆಯನ್ನು ಮತ್ತಷ್ಟು ತೀವ್ರಗೊಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಸೌದಿಯಲ್ಲಿ ಪತ್ನಿ ಮೋಜು – ತುಮಕೂರಿನಲ್ಲಿ ಮೂವರು ಮಕ್ಕಳೊಂದಿಗೆ ಪತಿ ಆತ್ಮಹತ್ಯೆ

    ಸೌದಿಯಲ್ಲಿ ಪತ್ನಿ ಮೋಜು – ತುಮಕೂರಿನಲ್ಲಿ ಮೂವರು ಮಕ್ಕಳೊಂದಿಗೆ ಪತಿ ಆತ್ಮಹತ್ಯೆ

    – ಸಮೀವುಲ್ಲಾ ಸಾವು, ಜೀವನ್ಮರಣ ಹೋರಾಟದಲ್ಲಿ ಮಕ್ಕಳು

    ತುಮಕೂರು: ಮೂರು ಮಕ್ಕಳ ತಾಯಿ ವಿದೇಶಕ್ಕೆ ಹಾರಿ ಮೋಜು-ಮಸ್ತಿ ಮಾಡುತ್ತಿದ್ದರಿಂದ ಇತ್ತ ಪತಿ ಹಾಗೂ ಮಕ್ಕಳು ಆತ್ಮಹತ್ಯೆಗೆ ಶರಣಾಗಿದ್ದು, ಮಕ್ಕಳು ಸಾವು-ಬದುಕಿನ ಮಧ್ಯೆ ಹೋರಾಟ ನಡೆಸುತ್ತಿರುವ ಘಟನೆ ತುಮಕೂರು ಜಿಲ್ಲೆಯಲ್ಲಿ ನಡೆದಿದೆ.

    ಹೌದು. ಹೆಂಡತಿಯ ವರ್ತನೆಯಿಂದ ಬೇಸತ್ತು ಸಮೀವುಲ್ಲಾ ತನ್ನ ಮೂವರು ಮಕ್ಕಳ ಜೊತೆ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಪತಿ ಸಮೀವುಲ್ಲಾ ಅವರು ತುಮಕೂರಿನಲ್ಲಿ ಪೇಯಿಂಟ್ ಕೆಲಸ ಮಾಡಿಕೊಂಡಿದ್ದಾರೆ. ಇತ್ತ ಪತ್ನಿ ಮನೆಯಲ್ಲಿಯೇ ವಾಸವಿದ್ದಳು. ಆದರೆ ಅದೇಕೋ ಈಕೆಗೆ ದುಡಿಯುವ ಮನಸ್ಸಾಯ್ತೋ ಗೊತ್ತಿಲ್ಲ. ತನ್ನ ಅಕ್ಕನ ಜೊತೆ ಸೌದಿಗೆ ಹಾರಿದ್ದಾಳೆ.

    ತನ್ನ ಕುಟುಂಬಕ್ಕೆ ತಿಂಗಳಿಗೊಮ್ಮೆ 10 ಸಾವಿರ ಹಣವೂ ಕಳಿಸುತ್ತಿದ್ದಳಂತೆ. ಆದರೆ ಕ್ರಮೇಣ ಹಣ ಕಳುಹಿಸುವುದನ್ನು ನಿಲ್ಲಿಸಿದ್ದಾಳೆ. ದುಡಿಮೆಗೆಂದು ಹೋದ ಸಾಹೇರಾ ಬಾನು, ಹುಕ್ಕಾ ಬಾರ್ ಡ್ಯಾನ್ಸ್ ಅಂತಾ ಮೋಜು ಮಸ್ತಿಗೆ ಇಳಿದಿದ್ದಾಳೆ. ಈ ಬಗ್ಗೆ ಅಲ್ಲಿಂದಲೇ ತನ್ನ ಪತಿ ಸಮೀವುಲ್ಲಾಗೆ ವೀಡಿಯೋ ಕಾಲ್ ಮಾಡಿ ತೋರಿಸುತ್ತಿದ್ದಳಂತೆ. ಅಲ್ಲದೆ ನಾನು ವಾಪಸ್ ಬರಲ್ಲ ಇಲ್ಲೇ ಇರುತ್ತೇನೆ, ಇಲ್ಲೆ ಚೆನ್ನಾಗಿದೆ ಅಂತಾ ಹೇಳಿ ಪತಿಗೆ ರೇಗಿಸುತ್ತಿದ್ದಳಂತೆ. ಜೊತೆಗೆ ಪ್ರಿಯಕರನೊಂದಿಗೂ ಕೂಡ ವೀಡಿಯೋ ಕಾಲ್ ಮಾಡುತ್ತಿದ್ದಳು ಎನ್ನಲಾಗಿದೆ. ಇದನ್ನೂ ಓದಿ: ಬಿಜೆಪಿ ಹೈಕಮಾಂಡ್ ಅಂಗಳ ತಲುಪಿದ `ಸಿಎಂ ಬದಲಾವಣೆ’ ವರದಿ

    ಯಾವಾಗ ಸಾಹೇರಾ ಬಾನು ತನ್ನ ಮೋಜು-ಮಸ್ತಿಯಲ್ಲಿ ಬಿದ್ದು ಸೌದಿಯಲ್ಲಿ ಸೆಟ್ಲ್ ಆದ್ಲೋ, ಇತ್ತ ಸಮೀವುಲ್ಲಾ ಕುಟುಂಬ ನಲುಗಿದೆ. ತನ್ನ ಮೂವರು ಮಕ್ಕಳೊಂದಿಗೆ ಸಮೀವುಲ್ಲಾ ಪಡಬಾರದ ಕಷ್ಟ ಪಟ್ಟಿದ್ದಾರೆ. ತಾನೇ ದುಡಿದು ಮಕ್ಕಳನ್ನ ನೋಡಿಕೊಳ್ಳುವ ಪರಿಸ್ಥಿತಿ ಬಂದಿದೆ. ಪ್ರತಿದಿನ ಕೂಡ ಸಮೀವುಲ್ಲಾ ಪತ್ನಿಗೆ ವೀಡಿಯೋ ಕಾಲ್ ಮಾಡಿದಾಗ ವಾಪಸ್ ತುಮಕೂರಿಗೆ ಬಂದು ಬಿಡು ಅಂತಾ ಗೋಗರೆದಿದ್ದಾರೆ. ಸಾಲದ್ದಕ್ಕೆ ಮಕ್ಕಳು ಕೂಡ ತಾಯಿಗೆ ಬಾ ಅಮ್ಮ ಅಂತಾ ಕರೆದಿದ್ದಾರೆ. ಆದರೂ ನವರಂಗಿ ನಾಟಕದ ಸಾಹೇರ ಬಾನು ಮನಸ್ಸು ಕರಗಿಲ್ಲ.

    ಇಬ್ಬರು ಗಂಡು ಮಕ್ಕಳು ಹಾಗೂ ಓರ್ವ ಹೆಣ್ಣು ಮಗಳೊಂದಿಗೆ ಸಮೀವುಲ್ಲಾ ತುಮಕೂರಿನ ಪುರೋಸ್ ಕಾಲೋನಿಯಲ್ಲಿ ವಾಸವಿದ್ದರು. ಪತ್ನಿ ಸೌದಿಗೆ ಹೋದ ಕಾರಣಕ್ಕೆ ಕಳೆದ ಆಗಸ್ಟ್ 13 ರಂದು ಮನೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಯತ್ನಿಸಿದ್ದಾರೆ. ಮಕ್ಕಳ ಸಮೇತ ಸಮೀವುಲ್ಲಾ ಆತ್ಮಹತ್ಯೆ ಮಾಡಿಕೊಂಡಿದ್ದು, ತುಮಕೂರಿನ ಜಿಲ್ಲಾಸ್ಪತ್ರೆಗೆ ಸಂಬಂಧಿಕರು ದಾಖಲಿಸಿದ್ದಾರೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆಗಸ್ಟ್ 15ಕ್ಕೆ ಸಮೀವುಲ್ಲಾ ಸಾವನ್ನಪ್ಪಿದ್ದು, ಸದ್ಯ ಮೂವರು ಮಕ್ಕಳು ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ.

    ಮಕ್ಕಳು ವಿಷ ಕುಡಿಯುವ ಮುನ್ನ ತನ್ನ ತಾಯಿಗೆ ಕಳುಹಿಸಿರುವ ಆ ವಾಯ್ಸ್ ರೆಕಾರ್ಡ್‍ಗಳು ಎಂಥವರನ್ನೂ ಮೌನವಾಗಿಸುತ್ತೆ. ಇವತ್ತು ಒಂದು ದಿನ ಮಾತನಾಡು ಅಮ್ಮ ಇಂದು ಕೊನೆದಿನ, ನಾವು ನಾಲ್ಕು ಮಂದಿ ಸಾಯುತ್ತಿದ್ದೇವೆ ಎಂದು ಮಕ್ಕಳು ಹೇಳಿರುವುದನ್ನು ಕೇಳಿಸಿಕೊಂಡರೆ ಹೃದಯ ಚುರುಕ್ ಅನ್ನುತ್ತೆ. ಮಕ್ಕಳು ಅಳುವ ವಾಯ್ಸ್‍ಗೂ ತಾಯಿಯ ಹೃದಯ ಕರಗಲಿಲ್ಲ. ಅಲ್ಲದೆ ಗಂಡ ಸತ್ತು ಮಕ್ಕಳ ಸ್ಥಿತಿ ಚಿಂತಾಜನಕವಾಗಿದ್ರೂ ಕರಗದ ಸಾಹೇರಾ ಭಾನು ವಿರುದ್ಧ ಮೋಯಿದ್ದಿನ್ ಕುಟುಂಬಸ್ಥರು ಹರಿಹಾಯ್ದಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಉಕ್ರೇನ್‍ನಿಂದ ಬಂದ ವೈದ್ಯಕೀಯ ವಿದ್ಯಾರ್ಥಿಗಳು ಇಂಟರ್ನ್‌ಶಿಪ್ ಮಾಡಬಹುದು: ಎನ್‍ಎಂಸಿ

    ನವದೆಹಲಿ: ಉಕ್ರೇನ್‍ನಿಂದ ಬಂದಿರುವ ವಿದೇಶಿ ವೈದ್ಯಕೀಯ ಪದವೀದರರು (Foreign Medical Graduates) ಭಾರತದಲ್ಲಿ ಇಂಟರ್ನ್‌ಶಿಪ್ (internships) ಪೂರ್ಣಗೊಳಿಸಲು ಅವಕಾಶ ನೀಡುವುದಾಗಿ  ನ್ಯಾಷನಲ್‌ ಮೆಡಿಕಲ್‌ ಕಮಿಷನ್‌  (NMC) ತಿಳಿಸಿದೆ.

    ಭಾರತದಲ್ಲಿ ಇಂಟರ್ನ್‌ಶಿಪ್ ಪೂರ್ಣಗೊಳಿಸಲು ಅರ್ಜಿ ಸಲ್ಲಿಸ ಬಹುದಾಗಿದೆ. ಅಭ್ಯರ್ಥಿಗಳು ವಿದೇಶಿ ವೈದ್ಯಕೀಯ ಪದವಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಆಗ ರಾಜ್ಯ ವೈದ್ಯಕೀಯ ಕೌನ್ಸಿಲ್‍ಗಳು ಪರಿಗಣಿಸುತ್ತದೆ. ಕೊರೊನಾ, ಯುದ್ಧ ಮುಂತಾದ ಕಾರಣಗಳಿಂದ ಇಂಟರ್ನ್‌ಶಿಪ್ ಪೂರ್ಣಗೊಳಿಸಲು ಸಾಧ್ಯವಾಗದೇ ಇರುವ ಕೆಲವು ವಿದೇಶಿ ವೈದ್ಯಕೀಯ ಪದವೀದರರು ಇದ್ದಾರೆ. ಅಂತಹ ವಿದ್ಯಾರ್ಥಿಗಳು ಇಂಟರ್ನ್‌ಶಿಪ್‍ನ್ನು ಭಾರತದಲ್ಲಿ ಪೂರ್ಣಗೊಳಿಸಲು ಕೋರಿ ಸಲ್ಲಿಸಿರುವ ಅರ್ಜಿಯನ್ನು ಪರಿಗಣಿಸಲಾಗುವುದು. ಇದಕ್ಕೆ ಯಾವುದೇ ಶುಲ್ಕ ವಿಧಿಸುವುದಿಲ್ಲ ಎಂದು ಎನ್‌ಎಂಸಿ ತಿಳಿಸಿದೆ. ಇದನ್ನೂ ಓದಿ: ನಾನು ಕೀವ್‍ನಲ್ಲಿದ್ದೇನೆ, ತಪ್ಪಿಸಿಕೊಂಡು ಹೋಗಿಲ್ಲ: ಉಕ್ರೇನ್ ಅಧ್ಯಕ್ಷ

    ನೂರಾರು ವೈದ್ಯಕೀಯ ವಿದ್ಯಾರ್ಥಿಗಳು ತಮ್ಮ ಕೋರ್ಸ್‍ನ್ನು ಸ್ಥಳೀಯವಾಗಿ ಖಾಸಗಿ ಕಾಲೇಜುಗಳಲ್ಲಿ ಪೂರ್ಣಗೊಳಿಸಲು ಸಹಕಾರಿಯಾಗಲಿದೆ. ರಾಷ್ಟೀಯ ಪರೀಕ್ಷಾ ಮಂಡಳಿ ನಡೆಸುವ ವಿದೇಶಿ ವೈದ್ಯಕೀಯ ಅರ್ಹತಾ ಪರೀಕ್ಷೆ(ಎಫ್‍ಎಂಜಿಇ)ಯನ್ನು ಅಭ್ಯರ್ಥಿಗಳು ಪೂರ್ಣಗೊಳಿಸಿರುವುದನ್ನು ರಾಜ್ಯ ವೈದ್ಯಕೀಯ ಕೌನ್ಸಿಲ್‍ಗಳು ಖಾತರಿ ಪಡಿಸಿಕೊಳ್ಳಬೇಕು. ಅಭ್ಯರ್ಥಿಯು ಎಲ್ಲಾ ಮಾನದಂಡಗಳನ್ನು ಪೂರ್ಣಗೊಳಿಸಿದ್ದರೆ 12 ತಿಂಗಳ ಇಂಟರ್ನ್‌ಶಿಪ್ ಅಥವಾ ಉಳಿದ ಅವಧಿಯನ್ನು ಪೂರ್ಣಗೊಳಿಸಲು ಅವಕಾಶ ನೀಡಬೇಕು ಎಂದು ಎನ್‍ಎಂಸಿ ಹೇಳಿದೆ. ಇದನ್ನೂ ಓದಿ: ನಾನೇನು ಕಚ್ಚುವುದಿಲ್ಲ, ಮತ್ತೇಕೆ ನಿಮಗೆ ಭಯ? – ಪುಟಿನ್‍ಗೆ ವ್ಯಂಗ್ಯ ಮಾಡಿದ ಉಕ್ರೇನ್ ಅಧ್ಯಕ್ಷ

  • ವಿದೇಶದಿಂದ ಬೆಂಗಳೂರಿಗೆ ಬರುವವರಿಗೆ ಕೋವಿಡ್ ನೆಗೆಟಿವ್ ವರದಿ ಕಡ್ಡಾಯ

    ವಿದೇಶದಿಂದ ಬೆಂಗಳೂರಿಗೆ ಬರುವವರಿಗೆ ಕೋವಿಡ್ ನೆಗೆಟಿವ್ ವರದಿ ಕಡ್ಡಾಯ

    ಬೆಂಗಳೂರು: ವಿದೇಶಗಳಿಂದ ಇಲ್ಲಿಗೆ ಬರುವ ಪ್ರಯಾಣಿಕರು ಕಡ್ಡಾಯವಾಗಿ ಕೋವಿಡ್ ಪರೀಕ್ಷೆಯ ನೆಗೆಟಿವ್ ವರದಿ ಹಾಗೂ ಲಸಿಕೆ ಪಡೆದಿರುವ ಬಗ್ಗೆ ಪ್ರಮಾಣಪತ್ರ ಹೊಂದಿರಬೇಕು ಎಂದು ಆರೋಗ್ಯ ಇಲಾಖೆ ಸೂಚಿಸಿದೆ.

    ಕೆಲ ದೇಶಗಳಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ವರದಿಯಾಗುತ್ತಿರುವುದರಿಂದ ವಿದೇಶಿ ಪ್ರಯಾಣಿಕರಿಗೆ ಇಲಾಖೆಯು ಪರಿಷ್ಕೃತ ಮಾರ್ಗಸೂಚಿಯನ್ನು ಹೊರಡಿಸಿದೆ. ಇಂಗ್ಲೆಂಡ್, ಯುರೋಪ್, ಮಧ್ಯಪ್ರಾಚ್ಯ, ದಕ್ಷಿಣ ಆಫ್ರಿಕಾ, ಬ್ರೆಜಿಲ್, ಬಾಂಗ್ಲಾದೇಶ, ಬೋಟ್ಸವಾನಾ, ಚೀನಾ, ಮಾರಿಷಸ್, ನ್ಯೂಜಿಲೆಂಡ್, ಜಿಂಬಾಬ್ವೆ ದೇಶಗಳಿಂದ ಬರುವವರು ಸೋಂಕಿತರಾಗಿಲ್ಲ ಎನ್ನುವುದರ ಬಗ್ಗೆ ಆರ್‍ಟಿ-ಪಿಸಿಆರ್ ಪರೀಕ್ಷಾ ವರದಿ ಹೊಂದಿರಬೇಕು. ಆ ವರದಿಯು ಪ್ರಯಾಣದ ಮೊದಲಿನ 72 ಗಂಟೆಗಳ ಅವಧಿಯದ್ದಾಗಿರಬೇಕು. ಕೋವಿಡ್ ರೂಪಾಂತರ ತಳಿಗಳು ಪತ್ತೆ ಮತ್ತು ಸೋಂಕು ಹೆಚ್ಚುತ್ತಿರುವುದರಿಂದ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಇಲಾಖೆ ತಿಳಿಸಿದೆ.

    ಪ್ರಯಾಣಕ್ಕೂ ಮೊದಲು ಸೇವಾಸಿಂಧು ಪೋರ್ಟಲ್‍ನಲ್ಲಿ ಸೋಂಕಿತರಾಗಿಲ್ಲ ಎನ್ನುವುದರ ಬಗ್ಗೆ ಪರೀಕ್ಷಾ ವರದಿಯನ್ನು ಅಪ್‍ಲೋಡ್ ಮಾಡಬೇಕು. ಪ್ರಯಾಣಿಕರ ಗಂಟಲು ದ್ರವ ಮಾದರಿಯನ್ನು ರಾಜ್ಯದ ಎಲ್ಲ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ, ಬಂದರುಗಳ ಪ್ರವೇಶದ್ವಾರದ ಬಳಿ ಪಡೆಯಬೇಕು ಎಂದು ಹೇಳಲಾಗಿದೆ. ಇದನ್ನೂ ಓದಿ: ರಾಜ್ಯದಲ್ಲಿ 282 ಕೇಸ್ – 15 ಮಂದಿಯಲ್ಲಿ ಕಾಣಿಸಿಕೊಂಡ AY 12 ಪ್ರಭೇದ

    ಲಸಿಕೆ ಪ್ರಮಾಣಪತ್ರದ ವಿಚಾರವಾಗಿ ದೇಶದೊಂದಿಗೆ ಒಪ್ಪಂದ ಮಾಡಿಕೊಂಡಿರುವ ಬ್ರಿಟನ್, ಫ್ರಾನ್ಸ್, ಜರ್ಮನಿ, ನೇಪಾಳ, ಬೆಲಾರಸ್, ಲೆಬನಾನ್, ಅರ್ಮೇನಿಯಾ, ಉಕ್ರೇನ್, ಬೆಲ್ಜಿಯಂ, ಹಂಗೇರಿ ಹಾಗೂ ಸರ್ಬಿಯಾ ದೇಶದಿಂದ ಇಲ್ಲಿಗೆ ಬಂದವರಿಗೆ ಪರೀಕ್ಷೆ ಇಲ್ಲದೆಯೇ ತೆರಳಲು ಅವಕಾಶ ಇರಲಿದೆ. ಆದರೆ ಅವರು 14 ದಿನಗಳು ಮನೆಯಲ್ಲಿಯೇ ನಿಗಾ ವ್ಯವಸ್ಥೆಗೆ ಒಳಪಡಬೇಕು ಎಂದು ಸೂಚಿಸಲಾಗಿದೆ.

  • ವಿದೇಶದಲ್ಲಿ ಮೆಡಿಕಲ್ ಓದುತ್ತಿದ್ದ ಬೀದರ್ ಯುವಕ ಕಿಡ್ನಾಪ್ ಶಂಕೆ

    ವಿದೇಶದಲ್ಲಿ ಮೆಡಿಕಲ್ ಓದುತ್ತಿದ್ದ ಬೀದರ್ ಯುವಕ ಕಿಡ್ನಾಪ್ ಶಂಕೆ

    – ಕಿಡ್ನಾಪ್ ಮಾಡಿ ಹಣಕ್ಕೆ ಬೇಡಿಕೆ?
    – ತನಿಖೆಯಿಂದ ಯುವಕ ಬಚಾವ್?

    ಬೀದರ್: ವೈದ್ಯಕೀಯ ಶಿಕ್ಷಣವನ್ನು ಉಕ್ರೇನ್ ದೇಶದಲ್ಲಿ ಓದುತ್ತಿದ್ದ ಬೀದರ್ ಯುವಕ ಅಪಹರಣವಾಗಿರುವ ಘಟನೆ ನಡೆದಿದೆ.

    ಅಪರಣವಾದ ಯುವಕನನ್ನು ಅಜಯ್ ರಾಠೋಡ್ ಆಗಿದ್ದಾನೆ. ಹುಲ್ಯಾಳ ತಾಂಡಾದ 21 ವರ್ಷದ ಅಜಯ್ ರಾಠೋಡ್ ಡಿಸೆಂಬರ್ 14ರಂದು ವೈದ್ಯಕೀಯ ಶಿಕ್ಷಣಕ್ಕಾಗಿ ಉಕ್ರೇನ್ ದೇಶಕ್ಕೆ ಹೋಗಿದ್ದ, ಜನವರಿ 16ರಂದು ಅಜಯ್‍ನನ್ನು ದುಷ್ಕರ್ಮಿಗಳು ಅಪಹರಿಸಿದ್ದಾರೆ ಎಂದು ತಿಳಿದು ಬಂದಿದೆ.

    ಹುಲ್ಯಾಳ ತಾಂಡದಲ್ಲಿರುವ ಆತನ ಸಂಬಂಧಿಕರಿಗೆ ಫೋನ್ ಮಾಡಿ 1 ಕೋಟಿ ರೂ. ನೀಡುವಂತೆ ಬೆದರಿಕೆ ಕರೆ ಒಡ್ಡಿದ್ದರು. ದುಷ್ಕರ್ಮಿಗಳು ಆ ಬಳಿಕ ಅಜಯ್‍ನನ್ನು ಕಿರ್ಗಿಸ್ತಾನ್‍ಗೆ ಕರೆದುಕೊಂಡು ಹೋಗಿ 1 ಕೋಟಿ ನೀಡದಿದ್ದಲ್ಲಿ ಅಫ್ಘಾನಿನಿಸ್ತಾನ ಗಡಿಯಲ್ಲಿ ಬಿಸಾಕುವ ಬೆದರಿಕೆ ಕರೆ ಮಾಡುವುದರ ಜೊತೆಗೆ ಆತನ ಕೈ-ಕಾಲುಗಳನ್ನ ಕಟ್ಟಿ ಹಾಕಿರುವ ಫೋಟೋ ಕಳಿಸಿದ್ದರು. ಈ ಬಗ್ಗೆ ಯುವಕನ ಸಂಬಂಧಿಕರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾಗೇಶ್ ಡಿ.ಎಲ್ ಅವರ ಗಮನಕ್ಕೆ ತಂದಿದ್ದಾರೆ.

    ನಂತರ ಜಿಲ್ಲಾ ಪೊಲೀಸರು, ಭಾರತ ರಾಯಭಾರಿ ಕಚೇರಿ ಅಧಿಕಾರಿಗಳ ಸಹಕಾರದಿಂದ ಉಕ್ರೇನ್ ರಾಯಭಾರಿ ಕಚೇರಿಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಸಂಕಷ್ಟದಲ್ಲಿದ್ದ ಯುವಕನನ್ನು ರಕ್ಷಿಸಲಾಗಿದೆ. ಕೆಲವೇ ದಿನಗಳಲ್ಲಿ ಅಜಯ್ ಭಾರತಕ್ಕೆ ಮರಳಲಿದ್ದಾನೆ ಎಂದು ಅಧಿಕಾರಿಗಳು ಸಂಬಂಧಿಕರಿಗೆ ತಿಳಿಸಿದ್ದಾರೆ.

  • ಒಂದೇ ಭಾರತ್ ಮಿಷನ್ ಅಡಿ 5 ಲಕ್ಷಕ್ಕೂ ಹೆಚ್ಚು ಮಂದಿ ಸ್ವದೇಶಕ್ಕೆ ವಾಪಸ್: ಕೇಂದ್ರ ಸರ್ಕಾರ

    ಒಂದೇ ಭಾರತ್ ಮಿಷನ್ ಅಡಿ 5 ಲಕ್ಷಕ್ಕೂ ಹೆಚ್ಚು ಮಂದಿ ಸ್ವದೇಶಕ್ಕೆ ವಾಪಸ್: ಕೇಂದ್ರ ಸರ್ಕಾರ

    ನವದೆಹಲಿ: ವಿದೇಶಗಳಲ್ಲಿ ಕೊರೊನಾ ಸೋಂಕು ಉಲ್ಬಣ ಹಿನ್ನೆಲೆ ಸ್ವದೇಶಕ್ಕೆ ಭಾರತೀಯರನ್ನು ಕರೆ ತರಲು ಆರಂಭಿಸಿದ ಒಂದೇ ಭಾರತ್ ಮಿಷನ್ ಕಾರ್ಯಚರಣೆ ಮೂಲಕ ಐದು ಲಕ್ಷ ಮಂದಿ ಭಾರತಕ್ಕೆ ವಾಪಸ್ ಆಗಿದ್ದಾರೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

    860 ಏರ್ ಇಂಡಿಯಾ ವಿಮಾನಗಳು, 1,256 ಚಾರ್ಟರ್ಡ್ ವಿಮಾನಗಳು ಮತ್ತು ಎಂಟು ನೌಕಾ ಹಡಗುಗಳು ಮೂಲಕ 137 ದೇಶಗಳಿಂದ 5.03 ಲಕ್ಷ ಭಾರತೀಯರನ್ನು ಸ್ವದೇಶಕ್ಕೆ ಕರೆತರಲಾಗಿದೆ. ಈ ಕಾರ್ಯಾಚರಣೆಯಲ್ಲಿ ವೃದ್ದರು, ಆರೋಗ್ಯ ಸಂಬಂಧಿ ತೊಂದರೆಗೆ ಒಳಗಾದವರು, ಮಹಿಳೆಯರು ಮಕ್ಕಳು, ವಿದ್ಯಾರ್ಥಿಗಳು, ನಿರುದ್ಯೋಗಿಗಳು ಹಾಗೂ ವೀಸಾ ಅವಧಿ ಮುಗಿದ ವ್ಯಕ್ತಿಗಳಿಗೆ ಆದ್ಯತೆ ನೀಡಲಾಗಿದೆ.

    ಮೇ 7ರಿಂದ 15ರವರೆಗೆ ಮೊದಲ ಹಂತ, ಮೇ 17ರಿಂದ 22ರವರೆಗೆ ಎರಡನೇ ಹಂತದಲ್ಲಿ ಕಾರ್ಯಚರಣೆ ಮಾಡಲಾಗಿತ್ತು ಬಳಿಕ ಎರಡನೇ ಹಂತವನ್ನು ಜೂನ್ 10 ರವರೆಗೆ ವಿಸ್ತರಿಸಿತಲಾಗಿತ್ತು. ವಿದೇಶಗಳಲ್ಲಿನ ಭಾರತೀಯ ಬೇಡಿಕೆ ಹಿನ್ನೆಲೆ ಜೂನ್ 11ರಿಂದ ಜುಲೈ 2ರವರೆಗೆ ಮೂರನೇ ಹಂತದಲ್ಲಿ ಭಾರತೀಯರನ್ನು ವಾಪಸ್ ಕರೆತರಲಾಗಿದೆ.

    ಕೇರಳಕ್ಕೆ ಅತಿ ಹೆಚ್ಚು ಮಂದಿ ವಿದೇಶದಿಂದ ವಾಪಸ್ ಆಗಲಿದ್ದಾರೆ. ಇದನ್ನು ಬಿಟ್ಟರೆ ಉತ್ತರ ಪ್ರದೇಶ, ಬಿಹಾರ್, ಕರ್ನಾಟಕ, ಪಶ್ಚಿಮ ಬಂಗಾಳ, ತಮಿಳುನಾಡು, ಉತ್ತರ ಪ್ರದೇಶ, ಆಂಧ್ರಪ್ರದೇಶದಕ್ಕೆ ಹೆಚ್ಚು ಮಂದಿ ವಾಪಸ್ ಆಗಲಿದ್ದಾರೆ.

  • ಇಂದಿನಿಂದ ವಿಮಾನ ಸಂಚಾರ ಶುರು- ಬೆಂಗ್ಳೂರಿಂದ 215 ವಿಮಾನಗಳ ಓಡಾಟ

    ಇಂದಿನಿಂದ ವಿಮಾನ ಸಂಚಾರ ಶುರು- ಬೆಂಗ್ಳೂರಿಂದ 215 ವಿಮಾನಗಳ ಓಡಾಟ

    – ಮತ್ತೆ ಕೊರೊನಾ ಹೆಚ್ಚಳದ ತೀವ್ರ ಆತಂಕ

    ಬೆಂಗಳೂರು: ಎರಡು ತಿಂಗಳಿಂದ ಬಂದ್ ಆಗಿದ್ದ ವಿಮಾನ ಸೇವೆಗೆ ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್ ಕೊಟ್ಟಿದೆ. ಇಂದಿನಿಂದ ಆಗಸದಲ್ಲಿ ವಿಮಾನಗಳ ಹಾರಾಟ ಶುರುವಾಗಿಲಿದೆ. ಜೊತೆಗೆ ಕೊರೊನಾ ವೈರಸ್ ಭಯವೂ ಸಹ ಶುರುವಾಗಲಿದೆ.

    ಹೌದು. ವಿದೇಶದಿಂದ ಹಿಂದಿರುಗಿ ಬಂದವರಿಂದಲೇ ನಮ್ಮ ದೇಶಕ್ಕೆ ಮಾತ್ರವಲ್ಲ ನಮ್ಮ ರಾಜ್ಯಕ್ಕೂ ಹಾಗೂ ಬೆಂಗಳೂರಿಗೂ ಮೊದಲಿಗೆ ಕೊರೊನಾ ಪಾಸಿಟಿವ್ ಬಂದಿದ್ದು. ಆಗ ಕೊರೊನಾ ಕೇಕೆಗೆ ಬ್ರೇಕ್ ಹಾಕಲು ಕೇಂದ್ರ ಸರ್ಕಾರ ಲಾಕ್ ಡೌನ್ ಮಾಡಿ ವಿಮಾನ ಸೇವೆಗೆ ಬ್ರೇಕ್ ಹಾಕಿತ್ತು. ಈಗ ದೇಶದಲ್ಲಿ ಮಾತ್ರವಲ್ಲ ನಮ್ಮ ರಾಜ್ಯದಲ್ಲೂ ಕೊರೊನಾ ವೈರಸ್ ರಣಭೀಕರತೆ ಸೃಷ್ಟಿ ಮಾಡಿದೆ.

    ಕಳೆದ ವಾರ ಏರ್ ಲಿಫ್ಟ್ ಮೂಲಕ ವಿದೇಶದಲ್ಲಿ ನೆಲೆಸಿದ್ದ ಅನಿವಾಸಿ ಭಾರತೀಯರನ್ನ ಕರೆಸಿಕೊಂಡಿದೆ. ಇದರಲ್ಲಿ ಬೆಂಗಳೂರಿಗೆ ಆಗಮಿಸಿದ ಇಬ್ಬರಿಗೆ ಕೊರೊನಾ ಪಾಸಿಟಿವ್ ಇರೋದು ದೃಢಪಟ್ಟಿದೆ. ಈಗ ಇಂದಿನಿಂದ ಡೊಮೆಸ್ಟಿಕ್ ಏರ್ ಲೈನ್ಸ್ ಶುರುವಾಗ್ತಿರೋದು ಬೆಂಗಳೂರಿಗೆ ಕೊರೊನಾ ಕಂಟಕವಾಗೋ ಸಾಧ್ಯತೆಗಳು ದಟ್ಟವಾಗಿದೆ. ಲಾಕ್ ಡೌನ್ ಸಡಿಲಿಕೆ ಮಾಡಿದ್ರಿಂದ ಬೇರೆ ರಾಜ್ಯದಿಂದ ಬಂದವರಿಂದ ಗ್ರೀನ್ ಝೋನ್ ನಲ್ಲಿದ್ದ ಎಷ್ಟೋ ಜಿಲ್ಲೆಗಳಿಗೆ ಕೊರೊನಾ ವ್ಯಾಪಿಸಿರೋದು ನಮ್ಮ ಕಣ್ಮುಂದೆಯೇ ಇದೆ. ಈ ಕೇಸ್ ಗಳ ಸಂಖ್ಯೆ ಇನ್ನೂ ಹೆಚ್ಚಾಗೋ ಸಾಧ್ಯತೆಗಳು ಸಹ ಅಲ್ಲಗೆಳೆಯುವಂತಿಲ್ಲ.

    ಈ ಬೆನ್ನಲ್ಲೇ ವಿಮಾನಯಾನ ಶುರುವಾಗ್ತಿರೋದು ಬೆಂಗಳೂರಿಗೆ ಕೊರೊನಾ ವೈರಸ್ ಕೇಕೆ ಹೆಚ್ಚು ಮಾಡೋ ಸಾಧ್ಯತೆಗಳಿವೆ. ಇಂದಿನಿಂದ ಜೂನ್ 30ರವರೆಗೂ ವಿಮಾನಗಳ ಹಾರಾಟಕ್ಕೆ ಮೊದಲ ಹಂತದ ಅನುಮತಿ ನೀಡಲಾಗಿದೆ. ಬೆಂಗಳೂರಿಗೆ ಪ್ರತಿನಿತ್ಯ 215 ವಿಮಾನಗಳು ನಿರ್ಗಮನ ಮತ್ತು ಆಗಮನವಾಗಲಿವೆ. ಪ್ರತಿ 10 ನಿಮಿಷಕ್ಕೆ ಒಂದರಂತೆ ವಿಮಾನಗಳು ಟೆಕ್ ಆಫ್ ಆಗಲಿದೆ. ನಾಗರಿಕ ವಿಮಾನಯಾನ ಸಚಿವಾಲಯದ ನಿರ್ದೇಶನಕ್ಕೆ ಅನುಗುಣವಾಗಿ ವಿಮಾನಗಳ ವೇಳಾಪಟ್ಟಿ ಪ್ರಕಟಿಸಲಾಗಿದೆ.

    ವಿಮಾನಯಾನ ಮಾಡೋ ಪ್ರಯಾಣಿಕರಿಗೂ ನಿಯಮಗಳನ್ನ ಪಾಲನೆ ಮಾಡುವಂತೆ ಸೂಚಿಸಲಾಗಿದೆ. ವಿಮಾನಗಳ ಹಾರಾಟಕ್ಕೆ, ವಿಮಾನ ಪ್ರಯಾಣಿಕರಿಗೆ ನಿಯಮಗಳೇನು ಗೊತ್ತಾ..?
    * ವಿಮಾನಗಳ ಮೂಲಕ ರಾಜ್ಯಕ್ಕೆ ಬರೋರಿಗೆ ಕಡ್ಡಾಯ ಕ್ವಾರಂಟೈನ್.
    * ಬೇರೆ ರಾಜ್ಯಗಳಿಂದ ನಮ್ಮ ರಾಜ್ಯದವರು ವಾಪಸಾದರೆ ಕಡ್ಡಾಯ ಕ್ವಾರಂಟೈನ್.
    * ಮಹಾರಾಷ್ಟ್ರ, ಗುಜರಾತ್, ತಮಿಳುನಾಡು, ಮಧ್ಯಪ್ರದೇಶ, ದೆಹಲಿ, ರಾಜಸ್ಥಾನ ರಾಜ್ಯಗಳಿಂದ ಬರೋರಿಗೆ 7 ದಿನ ಕಡ್ಡಾಯ ಸಾಂಸ್ಥಿಕ ಕ್ವಾರಂಟೈನ್ ಮತ್ತು 7 ದಿನ ಕಡ್ಡಾಯ ಹೋಂ ಕ್ವಾರಂಟೈನ್.
    * ಉಳಿದ ರಾಜ್ಯಗಳಿಂದ ಬರೋರಿಗೆ 14 ದಿನ ಕಡ್ಡಾಯ ಹೋಂ ಕ್ವಾರಂಟೈನ್.

    * ಸ್ವತ: ಪ್ರಯಾಣಿಕರೇ ಹೊಟೇಲ್ ವೆಚ್ಚ ಭರಿಸಬೇಕು.
    * ಬ್ಯುಸಿನೆಸ್ ಉದ್ದೇಶಕ್ಕೆ ಬರೋರು ಕೊರೊನಾ ನೆಗೆಟಿವ್ ರಿಪೋರ್ಟ್ ಸಲ್ಲಿಸಿದರೆ ಮಾತ್ರ ಪ್ರವೇಶ.
    * ಪ್ರಯಾಣಕ್ಕೂ ಎರಡು ದಿನಗಳ ಮುಂಚೆ ರಿಪೋರ್ಟ್ ಸಲ್ಲಿಸಬೇಕು.
    * ರಾಜ್ಯದೊಳಗೆ ಯಾರೇ ಬಂದರೂ ಸೇವಾಸಿಂಧು ಮೂಲಕ ಪಡೆದಿರುವ ಇ-ಪಾಸ್ ಸಲ್ಲಿಸತಕ್ಕದ್ದು.

    ಇಷ್ಟೇ ಅಲ್ಲದೇ ಗುಜರಾತ್, ಮಧ್ಯಪ್ರದೇಶ, ಮಹಾರಾಷ್ಟ್ರ, ತಮಿಳುನಾಡು, ದೆಹಲಿ ಮತ್ತು ರಾಜಸ್ಥಾನಗಳಿಂದ ಬರೋ ಗರ್ಭಿಣಿಯರು, 10 ವರ್ಷ ಕೆಳಗಿನ ಮಕ್ಕಳು, 80 ವರ್ಷ ಮೇಲ್ಪಟ್ಟ ವೃದ್ಧರು, ಗಂಭೀರ ಕಾಯಿಲೆಯವರಿಗೆ 14 ದಿನಗಳ ಕಾಲ ಹೋಂ ಕ್ವಾರಂಟೈನ್ ಇರಲಿದೆ. ಈ ವರ್ಗದ ಜನರಿಗೆ ಸಾಂಸ್ಥಿಕ ಕ್ವಾರಂಟೈನ್ ಇರೋದಿಲ್ಲ. ಆದರೆ ಈ ವರ್ಗದ ಜನ ಹೋಂ ಕ್ವಾರಂಟೈನ್ ನಲ್ಲಿ ತಮ್ಮೊಂದಿಗೆ ಸರಕಾರ ನಿಗದಿ ಪಡಿಸಿದ ಸಹಾಯಕ ಒಬ್ಬರನ್ನು ಜೊತೆಗಿಟ್ಟುಕೊಳ್ಳಬೇಕು. ಈ ಆರು ರಾಜ್ಯಗಳು ಬಿಟ್ಟು ಉಳಿದ ರಾಜ್ಯಗಳಿಂದ ಬರೋ ಎಲ್ಲರಿಗೂ 14 ದಿನ ಹೋಂ ಕ್ವಾರಂಟೈನ್ ಎಂದು ನಿಯಮ ಮಾಡಲಾಗಿದೆ.

    ಒಟ್ಟಿನಲ್ಲಿ ಇಂದಿನಿಂದ ವಿಮಾನಯಾನ ಶುರುವಾಗ್ತಿದ್ದು ಬೇರೆ ರಾಜ್ಯದಿಂದ ಬರುವವರು ನಮ್ಮ ರಾಜ್ಯಕ್ಕೆ ಕೊರೊನಾ ತರದೇ ಇದ್ದರೆ ಸಾಕು. ಇಲ್ಲವಾದರೆ ನಮ್ಮ ರಾಜ್ಯವೂ ಸಹ ಡೇಂಜರ್ ಸ್ಟೇಟ್ ಆಗೋದ್ರಲ್ಲಿ ಅನುಮಾನವೇ ಇಲ್ಲ.